ಕ್ರೈಂ
10 ಅಡಿ ಸುರಂಗ ಕೊರೆದು ಮಳಿಗೆಯಲ್ಲಿ ಆಭರಣ ಕದ್ದರು, ಬಳಿಕ ಕ್ಷಮಾಪಣೆ ಪತ್ರ ಬರೆದಿಟ್ಟು ಹೋದರು
ಉತ್ತರ ಪ್ರದೇಶದ ಮೀರತ್‌ನಲ್ಲಿ ಕಳ್ಳರು ಚರಂಡಿ ಮೂಲಕ ಸುರಂಗ ಕೊರೆದು, ಆಭರಣ ಮಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಸಿನಿಮೀಯ ರೀತಿಯಲ್ಲಿ ನಡೆದ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಖನೌ: ಬ್ಯಾಂಕ್‌ಗಳ ಬಳಿ ನೂರಾರು ಅಡಿಗಳ ಸುರಂಗ ಕೊರೆದು, ತಿಂಗಳುಗಟ್ಟಲೆ ಪ್ಲಾನ್ ರೂಪಿಸಿ ಬ್ಯಾಂಕ್‌ಗಳಲ್ಲಿಯೋ, ಆಭರಣಗಳ ಮಳಿಗೆಗಳಲ್ಲಿಯೋ ಕೋಟ್ಯಂತರ ರೂಪಾಯಿ, ಆಭರಣಗಳನ್ನು ದೋಚುವುದನ್ನು ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನೋಡಿರುತ್ತೇವೆ. ಆದರೆ, ಇದೇ ಸಿನಿಮೀಯ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಕಳ್ಳರು ಚರಂಡಿ ಮೂಲಕ 10 ಅಡಿ ಸುರಂಗ ಕೊರೆದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಜ್ಯುವೆಲ್ಲರಿ ಶೋರೂಮ್ ಪಕ್ಕದ ಚರಂಡಿ ಮೂಲಕ ಕಳ್ಳರು ಸುರಂಗ ಅಗೆದಿದ್ದಾರೆ. ಇಟ್ಟಿಗೆಗಳನ್ನು ತೆಗೆದು, ಕೆಸರನ್ನು ಅಗೆದು ಸುರಂಗ ಕೊರೆದಿದ್ದಾರೆ. ಇದಾದ ಬಳಿಕ ರಾತ್ರೋರಾತ್ರಿ ಮಳಿಗೆ ಪ್ರವೇಶಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಆಭರಣ ಮಳಿಗೆಯ ಮಾಲೀಕರು ಬೆಳಗ್ಗೆ ಮಳಿಗೆ ತೆರೆದಾಗ, ಸುರಂಗ ಕೊರೆದು, ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ.
ವ್ಯಾಪಾರಿಗಳಿಂದ ಪ್ರತಿಭಟನೆ
ಚಿನ್ನದ ಮಳಿಗೆಗೆ ನುಗ್ಗಿ, ಆಭರಣ ದೋಚಿರುವುದು ಅಂಗಡಿ ಮಾಲೀಕರ ಗಮನಕ್ಕೆ ಬರುತ್ತಲೇ, ನಗರದಾದ್ಯಂತ ಸುದ್ದಿ ಹರಡುತ್ತಲೇ ಮೀರತ್ ಬುಲ್ಲಿಯನ್ ಟ್ರೇಟರ್ಸ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಕೂಡಲೇ ಕಳ್ಳರನ್ನು ಪತ್ತೆಹಚ್ಚಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳಿಗೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಲ್ಲದೆ, ಪ್ರಕರಣ ದಾಖಲಿಸಿದ್ದಾರೆ.
ಕ್ಷಮಾಪಣೆ ಪತ್ರ ಬರೆದಿಟ್ಟ ಕಳ್ಳರು
ವಾರಗಟ್ಟಲೆ ಪ್ಲಾನ್ ಮಾಡಿ, ಚರಂಡಿಯಲ್ಲಿ ಸುರಂಗ ಕೊರೆದ ಕಳ್ಳರು, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುವ ಮುನ್ನ ಕ್ಷಮಾಪಣೆ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾರೆ. “ನಾವು ನಿಮ್ಮ ಕ್ಷಮೆ ಕೇಳುತ್ತೇವೆ. ನಮಗೆ ಕಳ್ಳತನ ಮಾಡುವುದಷ್ಟೇ ಉದ್ದೇಶವಾಗಿತ್ತು. ಈ ಫ್ಲೋರ್ ತುಂಬ ಗಟ್ಟಿಯಾಗಿತ್ತು” ಎಂಬುದಾಗಿ ಪತ್ರದಲ್ಲಿ ಬರೆದಿದ್ದಾರೆ. ಆದಾಗ್ಯೂ, ಮಳಿಗೆಯಲ್ಲಿ ಎಷ್ಟು ರೂಪಾಯಿ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಮಾಹಿತಿ ನೀಡಿ ಎಂಬುದಾಗಿ ಮಳಿಗೆಯ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: Bike theft : ಉಳ್ಳಾಲದಲ್ಲಿ ಸರಣಿ ಬೈಕ್ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರಿಗಾಗಿ ಪೊಲೀಸರ ಹುಡುಕಾಟ!
ಕರ್ನಾಟಕ
Bellary News: ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದವನಿಗೆ ಮರಣ ದಂಡನೆ
Bellary News: 2017ರಲ್ಲಿ ನಡೆದಿದ್ದ ಐವರ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಹೈಕೋರ್ಟ್‌ನ ಧಾರವಾಡ ಪೀಠ ಎತ್ತಿ ಹಿಡಿದಿದೆ.
ಬಳ್ಳಾರಿ: ಪತ್ನಿ ಹಾಗೂ ಮಕ್ಕಳು ಸೇರಿ ಐವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನ ಧಾರವಾಡ ಪೀಠ ಎತ್ತಿ ಹಿಡಿದಿದೆ. ಪತ್ನಿಯ ಶೀಲ ಶಂಕಿಸಿ ಪತ್ನಿ,, ಪತ್ನಿಯ ತಂಗಿ, ಹೆತ್ತ ಮೂವರು ಮಕ್ಕಳು ಸೇರಿ ಒಟ್ಟು ಐವರನ್ನು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಪರಾಧಿಗೆ ಮರಣ ದಂಡನೆ ಶಿಕ್ಷೆ (Bellary News) ನೀಡಲಾಗಿದೆ.
ಜಿಲ್ಲೆಯ ಕಂಪ್ಲಿಯ ಚಪ್ಪರದಳ್ಳಿ ವಡ್ಡರ ತಿಪ್ಪೇಸ್ವಾಮಿ ಮನೆ ಬಳಿ 2017ರ ಫೆಬ್ರವರಿ 25 ರಂದು ಬೈಲೂರು ತಿಪ್ಪಯ್ಯ, ಐವರನ್ನು ಕೊಚ್ಚಿ ಕೊಲೆ ಮಾಡಿದ್ದ. ಪತ್ನಿ ಫಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ(8), ಪವಿತ್ರ(6) ಹತ್ಯೆಯಾಗಿದ್ದರು.
ಇದನ್ನೂ ಓದಿ | Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!
ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಹೀಗಾಗಿ ಧಾರವಾಡ ಹೈಕೋರ್ಟ್‍ನಲ್ಲಿ ಈತ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆದು ಬಳ್ಳಾರಿ ಸೆಷೆನ್ಸ್ ನ್ಯಾಯಾಲಯದ ತೀರ್ಪನ್ನೇ ಹೈಕೋರ್ಟ್‌ನ ಧಾರವಾಡ ಪೀಠ ಹಿಡಿದು ಮರಣ ದಂಡನೆ ಶಿಕ್ಷೆ ಖಚಿತಪಡಿಸಿದೆ.
ಕರ್ನಾಟಕ
Snake Bite: ವಿಷಪೂರಿತ ಹಾವು ಕಡಿದು ಯುವ ರೈತ ಸಾವು
Snake Bite: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಮಾವಿನಹಳ್ಳಿ ರಸ್ತೆಯ ತೋಟದ ಬಳಿ ಹಾವು ಕಚ್ಚಿ ರೈತ ಮೃತಪಟ್ಟಿದ್ದಾರೆ.
ವಿಜಯಪುರ: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿಷಪೂರಿತ ಹಾವು ಕಡಿದು ಯುವ ರೈತ ಮೃತ ಪಟ್ಟಿರುವ ಘಟನೆ (Snake Bite) ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿ ರಸ್ತೆಯ ತೆಗ್ಗಿಹಳ್ಳಿ ತೋಟದ ಬಳಿ ನಡೆದಿದೆ. ಮಾಳಪ್ಪ ರಾಮಣ್ಣ ಹೂಗಾರ (25) ಮೃತರು.
ಕೃಷಿ ಜಮೀನಿನಲ್ಲಿ ನೀರು ಹಾಯಿಸುವ ವೇಳೆ ಹಾವು ಕಚ್ಚಿದೆ. ಹೀಗಾಗಿ ಮಾಳಪ್ಪನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ನಂತರ ಹಾವನ್ನು ಗ್ರಾಮಸ್ಥರು ಕೊಂದು ಹಾಕಿದ್ದಾರೆ. ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Fraud Case: ಡೇಟಿಂಗ್ ಆ್ಯಪ್‌ನಲ್ಲಿ ಅನಿರುದ್ಧ್ ಆಗಿ ಬದಲಾದ ಮುದಾಸಿರ್; ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!
ಇಳಕಲ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬಾಗಲಕೋಟೆ: ಜಿಲ್ಲೆಯ ಇಳಕಲ್ ನಗರದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಬಸ್ ನಿಲ್ದಾಣದ ಮಿಲ್ಕ್ ಪಾರ್ಲರ್ ಹಿಂಭಾಗದಲ್ಲಿ ಸುಮಾರು 30 ವರ್ಷದ ಆಸುಪಾಸಿನ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯ ಜೇಬಲ್ಲಿ ಬಾಗಲಕೋಟೆ-ಇಳಕಲ್ ಬಸ್ ಟಿಕೆಟ್ ಪತ್ತೆಯಾಗಿದೆ. ಸ್ಥಳಕ್ಕೆ ಇಳಕಲ್ ಶಹರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಮಾಹಿತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕರ್ನಾಟಕ
Tumkur News: ಮೇಕೆಗೆ ಸೊಪ್ಪು ತರಲು ಹೋಗಿ ಅಣ್ಣ, ತಮ್ಮ ನೀರುಪಾಲು
Tumkur News: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಸಹೋದರರಿಬ್ಬರು ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿ ಅಣ್ಣ, ತಮ್ಮ ನೀರು ಪಾಲಾಗಿರುವ ಘಟನೆ (Tumkur News) ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ನಡೆದಿದೆ.
ದ್ವಾರನಕುಂಟೆ ಗ್ರಾಮದ ಸತೀಶ್ (25), ಪ್ರಸನ್ನ (29) ಮೃತ ದುರ್ದೈವಿಗಳು. ಬಾವಿ ದಡದಲ್ಲಿ ಮೇಕೆಗೆ ಸೊಪ್ಪು ಕೊಯ್ಯುವ ವೇಳೆ ಮೊದಲಿಗೆ ಅಣ್ಣ ಪ್ರಸನ್ನ ನೀರಿಗೆ ಜಾರಿ ಬಿದ್ದಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಬಾವಿಗೆ ಇಳಿದ ಸಹೋದರ ಸತೀಶ್ ಕೂಡ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಅಗ್ನಿಶಾಮಕದಳ ಸಿಬ್ಬಂದಿ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!
ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು
ಬಳ್ಳಾರಿ: ವಿದ್ಯುತ್ ತಂತಿ ಫಿಟ್ ಮಾಡಲು ಹೋಗಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕುರುಗೋಡು ಹೊರವಲಯದ ಜಮೀನಿನಲ್ಲಿ ನಡೆದಿದೆ. ಖಾಸಗಿ ಎಲೆಕ್ಟ್ರಿಷಿಯನ್ ತಿಮ್ಮಪ್ಪ (37) ಮೃತ ವ್ಯಕ್ತಿ.. ಜಮೀನಿನಲ್ಲಿ ಕಂಬಕ್ಕೆ ಜೋತು ಬಿದ್ದ ವಿದ್ಯುತ್ ಫಿಟ್ ಮಾಡಲು ಹೋಗಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ತಿಮ್ಮಪ್ಪ ಮೃತಪಟ್ಟಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ
Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!
Murder case: ತುಮಕೂರಲ್ಲಿ ಯುವತಿಯೊಬ್ಬಳ ಹತ್ಯೆಯಾಗಿದ್ದರೆ, ಹಾಸನದಲ್ಲಿ ಸಾಲದ ಕಂತು ಕಟ್ಟು ಎಂದಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಆನೇಕಲ್‌ನಲ್ಲಿ ಮಹಿಳೆಯನ್ನು ತುಂಡಾರಿಸಿದ್ದ ಹಂತಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು/ ಹಾಸನ: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದು ದುಷ್ಕರ್ಮಿಗಳು (murder case) ಪರಾರಿ ಆಗಿದ್ದಾರೆ. ತುಮಕೂರಿನ ವಿದ್ಯಾನಗರದಲ್ಲಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವೀಣಾ (23) ಮೃತ ದುರ್ದೈವಿ.
ವೀಣಾ ಮೂಲತಃ ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ನಿವಾಸಿ ಆಗಿದ್ದಾರೆ. ಇನ್‌ಕ್ಯಾಪ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವೀಣಾ, ವಿದ್ಯಾನಗರದಲ್ಲಿ ಸ್ನೇಹಿತೆಯರೊಂದಿಗೆ ವಾಸವಿದ್ದಳು. ಪ್ರಿಯಕರನಿಂದಲೇ ವೀಣಾ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹೊಸ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕನಿಗಾಗಿ ಬಲೆ ಬೀಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಹಾಸನದ ಚನ್ನರಾಯಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚೇತನ್ ಹಲ್ಲೆಗೊಳಗಾದವರು.
ಹೌಸಿಂಗ್ ಬೋರ್ಡ್ ನಿವಾಸಿಯಾದ ಚೇತನ್, ತನ್ನ ಸ್ನೇಹಿತ ಕಿರಣ್‌ಗೆ ಬಜಾಜ್ ಫೈನಾನ್ಸ್ ಕಾರ್ಡ್‌ನಿಂದ ಸಾಲಕ್ಕೆ ಟಿವಿಯನ್ನು ಕೊಡಿಸಿದ್ದರು. ತಿಂಗಳ ಕಂತಿನ ಸಾಲ ಕಟ್ಟುವಂತೆ ಚೇತನ್ ಹಲವಾರು ಬಾರಿ ಕಿರಣ‌್‌ಗೆ ಕೇಳಿಕೊಂಡರೂ ಸಾಲ ಕಟ್ಟದೇ ಬೆಂಗಳೂರಿಗೆ ಕಾಲ್ಕಿತ್ತಿದ್ದ.
ನಿನ್ನೆ ಶುಕ್ರವಾರ ಕಿರಣ್ ಮನೆಗೆ ಬಂದಿರುವ ವಿಚಾರ ತಿಳಿದ ಚೇತನ್ ಆತನ ಬಳಿ ಹೋಗಿದ್ದಾನೆ. ಮನೆಯಿಂದ ಹೊರಗೆ ಬರುವಂತೆ ಕರೆದಾಗ, ಬಾಗಿಲು ತೆರೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇತ್ತ ಕಿರಣ್ ತಂದೆ ಶಿವಣ್ಣ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚೇತನ್‌ಗೆ ಗಂಭೀರ ಸ್ವರೂಪವಾಗಿ ಗಾಯಗೊಂಡಿದ್ದು, ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಆಸ್ತಿಗಾಗಿ ಮನೆ ಮಾಲೀಕರನ್ನೇ ಹತ್ಯೆ ಮಾಡಿದ ಹಂತಕರು
ಆನೇಕಲ್‌ನಲ್ಲಿ ಕಳೆದ ಜೂನ್ 1ರಂದು ದೆಹಲಿ ಮಾದರಿಯಲ್ಲಿ ಮಹಿಳೆಯ ಹತ್ಯೆ ಮಾಡಲಾಗಿತ್ತು. ಗೀತಾ (54) ಎಂಬುವವರು ತಮ್ಮ ಮನೆಯ ಬಾಡಿಗೆದಾರರಿಂದಲೇ ಹತ್ಯೆಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರಿಗಾಗಿ ತಂಡವನ್ನು ರಚಿಸಿದ್ದರು. ಸದ್ಯ ಆರೋಪಿಗಳ ಪೈಕಿ ಬಿಹಾರ ಮೂಲದ ಇಂದಲ್ ಕುಮಾರ್ (21) ಎಂಬಾತನನ್ನು ಬಂಧಿಸಿದ್ದಾರೆ.
ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಇಂದಲ್ ಕುಮಾರ್ ಸೇರಿ 7 ಯುವಕರು, ಗೀತಾ ಅವರ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಈ ನಡುವೆ ಗೀತಾ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ಮಾಡಿದ್ದರು. ಪತ್ರಕ್ಕೆ ಸಹಿ ಹಾಕುವಂತೆ ಗೀತಾಳನ್ನು ಬಲವಂತ ಮಾಡಿದ್ದರು. ಒಪ್ಪದಿದ್ದಾಗ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ವಿಚಾರವು ತಿಳಿಯಬಾರೆಂದು ದೇಹವನ್ನು ತುಂಡರಿಸಿದ್ದರು. ಬಳಿಕ ತುಂಡಾರಿಸಿದ ಮೃತದೇಹ ಭಾಗಗಳನ್ನು ಪ್ಲ್ಯಾಸ್ಟಿಕ್ ಕವರ್‌ಗೆ ಎರಡು ದಿನ ಸಿಕ್ಕ ಸಿಕ್ಕ ಕಡೆ ಎಸೆದಿದ್ದರು.
ಹತ್ಯೆ ಮಾಡಿದ ನಂತರವೂ ಒಂದು ದಿನ ಕೆಲಸಕ್ಕೆ ತೆರಳಿದ್ದ ಕಿರಾತಕರು, ಶವದ ಮುಂದೆಯೇ ಊಟವನ್ನು ಮಾಡುತ್ತಿದ್ದರು. ಮೂರನೇ ದಿನ ಮನೆಯಲ್ಲಿ ಕಟ್ ಮಾಡಿದ್ದ ದೇಹದ ವಾಸನೆ ಹೆಚ್ಚಾಗುತ್ತಿದ್ದಂತೆ ಆತಂಕ ಹೆಚ್ಚಾಗಿತ್ತು. ಹೀಗಾಗಿ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ, 1 ಕಿ.ಮಿ ದೂರದಲ್ಲಿದ್ದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ತಲೆ ಹಾಗೂ ಕೈಯನ್ನು ಬಿಸಾಕಿ ಪರಾರಿ ಆಗಿದ್ದರು.
ಇದನ್ನೂ ಓದಿ:Contaminated Water: ಬಸರಿಹಾಳ, ಬಿಜಕಲ್ ಆಯ್ತು ಈಗ ಗಾವರಾಳದ 35 ಮಂದಿಗೆ ವಾಂತಿ, ಭೇದಿ; ತೀವ್ರ ಅಸ್ವಸ್ಥ
ಸದ್ಯ, ಆಸ್ತಿ ಅಲ್ಲದೆ ಬೇರೆ ಯಾವುದಾದರೂ ವಿಚಾರಕ್ಕೆ ಹತ್ಯೆ ನಡೆದಿದ್ಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್ ಸೇರಿ ಆರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ42 mins ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಅಂಕಣ23 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್20 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್20 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ16 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್18 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ16 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema17 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ