ಪತಿಯನ್ನು ಕೊಂದು ಮನೆಯಲ್ಲೇ ಸುಡಲು ಯತ್ನಿಸಿದ ಮಹಿಳೆ, ಪೊಲೀಸರು ಬರದಂತೆ ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕೊಟ್ಟ ಚಾಲಾಕಿ - Vistara News

ಕ್ರೈಂ

ಪತಿಯನ್ನು ಕೊಂದು ಮನೆಯಲ್ಲೇ ಸುಡಲು ಯತ್ನಿಸಿದ ಮಹಿಳೆ, ಪೊಲೀಸರು ಬರದಂತೆ ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕೊಟ್ಟ ಚಾಲಾಕಿ

ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆಯು ಮನೆಯಲ್ಲಿ ಗಂಡನನ್ನು ಕೊಂದಿದ್ದಾಳೆ. ಮನೆಯಲ್ಲಿ ಬೆಂಕಿ ಹಚ್ಚಿ ಶವವನ್ನು ಸುಡಲು ಯತ್ನಿಸಿದ್ದು, ಇದೇ ವೇಳೆ ಪೊಲೀಸರು ಆಗಮಿಸಿ ಮಹಿಳೆಯನ್ನು ಬಂಧಿಸಿದ್ದಾರೆ.

VISTARANEWS.COM


on

Man murders his own father in honnavar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಂಚಿ: ಜಾರ್ಖಂಡ್‌ನಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಂದು, ಮನೆಯಲ್ಲೇ ಸುಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲ, ಪೊಲೀಸರು ಬಾಗಿಲು ಮುರಿದು ಒಳಗೆ ಬರಬಾರದು ಎಂದು ಬಾಗಿಲಿಗೆ ವಿದ್ಯುತ್‌ ಸಂಪರ್ಕ ನೀಡಿದ್ದಾಳೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಜಮ್ಶೆಡ್‌ಪುರದ ಸುಭಾಷ್‌ ಕಾಲೋನಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಅಮರ್‌ನಾಥ್‌ ಸಿಂಗ್‌ ಹಾಗೂ ಮೀರಾ ಸಿಂಗ್ ಮಧ್ಯೆ ಇತ್ತೀಚೆಗೆ ಜಗಳ ಜಾಸ್ತಿಯಾಗಿತ್ತು. ಇಬ್ಬರೂ ಮಕ್ಕಳು ಓದು ಹಾಗೂ ಉದ್ಯೋಗದ ಕಾರಣದಿಂದಾಗಿ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನದಿಂದ ಹೊರಗೆ ಬಾರದ ಮೀರಾ, ಗಂಡನನ್ನು ಕೊಂದು ಹಾಕಿದ್ದಾಳೆ.

ಮನೆಯಲ್ಲಿಯೇ ಶವವನ್ನು ಸುಡಲು ಯತ್ನಿಸಿದ ಕಾರಣ ಅಕ್ಕ-ಪಕ್ಕದ ಮನೆಯವರಿಗೆ ದುರ್ವಾಸನೆ ಸಹಿಸಿಕೊಳ್ಳಲು ಆಗಿಲ್ಲ. ಹಾಗಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಮನೆಯ ಮೇಲೆ ಹತ್ತಿದ ಮಹಿಳೆಯು ದೊಣ್ಣೆ ಹಿಡಿದು ಹೆದರಿಸಿದ್ದಾಳೆ. ಹಾಗೆಯೇ, ಮನೆಯೊಳಗೆ ಪೊಲೀಸರು ಬರಬಾರದು ಎಂದು ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ.

ಪೊಲೀಸರು ಮನೆಯೊಳಗೆ ಪ್ರವೇಶಿಸಲು ಹೆಣಗಾಡಿದ್ದಾರೆ. ಕೊನೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಮನೆಯೊಳಗೆ ಹೋಗುವಷ್ಟರಲ್ಲಿ ಅಮರ್‌ನಾಥ್‌ ಸಿಂಗ್‌ ದೇಹ ಅರ್ಧ ಸುಟ್ಟಿತ್ತು. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

ಇದನ್ನೂ ಓದಿ: Holi tragedy : ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಜಗಳ, ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕನ ಕೊಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Viral Video: ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಮಾತಿದೆ. ತಮ್ಮ ಮಕ್ಕಳು ಹೇಗೇ ಇರಲಿ ತಾಯಿಯಾದವಳಿಗೆ ಆ ಮಗುವಷ್ಟು ಸುಂದರ ಈ ಪ್ರಪಂಚಲ್ಲಿ ಯಾರೂ ಇಲ್ಲ ಎಂಬಂತಹ ಭಾವ. ಆದರೆ ಇಲ್ಲೊಂದು ಘಟನೆ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಮಾನಸಿಕ ಅಸ್ವಸ್ಥ ಯುವಕನನ್ನು ಹೆತ್ತವರೇ ಹಾಡುಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ. ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿರುವ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿದೆ. ತಾಯಿ, ಚಿಕ್ಕಮ್ಮ ಮತ್ತು ತಂದೆ ಮೂವರು ಸೇರಿ ಮಾನಸಿಕ ಅಸ್ವಸ್ಥನಾದ ಯುವಕನನ್ನು ಹೊಡೆದು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ.

VISTARANEWS.COM


on

Viral Video
Koo


ಕರೀಂಗಂಜ್: ಪೋಷಕರು ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ ಎಂದು ಹೇಳುತ್ತಾರೆ. ಅಲ್ಲದೇ ಪೋಷಕರಿಗೆ ತಮ್ಮ ಮಕ್ಕಳು ಹೇಗೆ ಇದ್ದರು ಅದು ಚೆನ್ನ. ಮಕ್ಕಳಿಗೆ ಯಾವುದೇ ಸಂಕಟ ಬರದಂತೆ ನೋಡಿಕೊಳ್ಳುತ್ತಾರೆ. ವಿಶೇಷವಾಗಿ ಪೋಷಕರು ತಮ್ಮ ಮಕ್ಕಳು ವಿಕಲಚೇತನರು ಆಗಿದ್ದರೆ ಅವರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಅವರು ಬದುಕಿರುವ ತನಗೆ ಅವರ ರಕ್ಷಣೆ ಮಾಡುತ್ತಾರೆ. ಅಂತಹದರಲ್ಲಿ ಇಲ್ಲೊಂದು ಕುಟುಂಬ ಮಾನಸಿಕ ಅಸ್ವಸ್ಥನಾದ ಮಗನನ್ನು ತಮಗೆ ಹೊರೆಯಾದ ಎಂದು ಕೊಂದು ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮಾನಸಿಕ ಅಸ್ವಸ್ಥ ಯುವಕನನ್ನು ಪೋಷಕರು ಹಾಡಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೋಡುಗರು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಖುದ್ ಪುರಹುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಸುಹೈಲ್ ಅಹಮ್ಮದ್ ಚೌಧರಿ ಬಲಿಪಶುವಾಗಿದ್ದು, ತಾಯಿ ದಿಲುವಾರಾ ಬೇಗಂ, ಚಿಕ್ಕಮ್ಮ ಹಸ್ನಾ ಬೇಗಂ ಮತ್ತು ತಂದೆ ಅಬ್ದುಲ್ ಶಾಹಿದ್ ಎಂಬುವವರು ಆತನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ ಎನ್ನಲಾಗಿದೆ. ನಂತರ ಇಷ್ಟಕ್ಕೆ ಸುಮ್ಮನಾಗದ ಪೋಷಕರು ಅವನನ್ನು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.

ಕುಟುಂಬಕ್ಕೆ ಆತ ಹೊರೆಯಾದ ಕಾರಣ ಕುಟುಂಬವು ಈ ರೀತಿ ಯುವಕನನ್ನು ಕೊಂದಿದೆ ಮತ್ತು ಸಂತ್ರಸ್ತ ಸಣ್ಣ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಯುವಕನ ಶವ ಕೊಳದಲ್ಲಿ ತೇಲುತ್ತಿದ್ದ ಹಿನ್ನಲೆಯಲ್ಲಿ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೊಳದಿಂದ ಶವವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಅಧಿಕ ರಕ್ತಸ್ರಾವವಾಗಿದೆ. ಹಾಗೇ ಅವನ ಕೈಕಾಲಿನ ಮೂಳೆ ಮುರಿದಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇಂತಹ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Continue Reading

Latest

Sexual Abuse: ತನ್ನ ಸ್ನೇಹಿತನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಡ; ಇವನೆಂಥ ಗಂಡ!

Sexual Abuse: ಚೀನಾದಲ್ಲಿದ್ದಾಗ ಆಫ್ರಿಕನ್ ಯುವಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಒತ್ತಾಯಿಸಿದ್ದಾನೆ ಎಂದು ಆರೋಪಿಸಿ 40 ವರ್ಷದ ಮಹಿಳೆ ಪತಿಯ ವಿರುದ್ಧ ದೂರು ನೀಡಿದ ಘಟನೆ ಲಕ್ನೋದಲ್ಲಿ ನಡೆದಿದೆ. ಪತಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ, ಅಲ್ಲದೇ ಅಶ್ಲೀಲ ವಿಡಿಯೊವನ್ನು ನೋಡುವಂತೆ ಒತ್ತಾಯಿಸುವ ಮೂಲಕ ಕಿರುಕುಳ ನೀಡುತ್ತಿದ್ದ. ಮತ್ತು ಅವಳು ಅದನ್ನು ವಿರೋಧಿಸಿದಾಗ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಮಹಿಳೆ ದೂರು ನೀಡಿದ್ದಾಳೆ.

VISTARANEWS.COM


on

Sexual Abuse
Koo


ಲಕ್ನೋ: ಪತಿ ಪತ್ನಿಯ ಮಾನ ರಕ್ಷಣೆ ಮಾಡುವ ರಕ್ಷಕನಾಗಿರುತ್ತಾನೆ. ಯಾಕೆಂದರೆ ತನ್ನ ಪತ್ನಿಯನ್ನು ಕಾಮುಕರ ಕೆಟ್ಟ ದೃಷ್ಟಿಯಿಂದ ಕಾಪಾಡುವುದು ಅವನ ಜವಾಬ್ದಾರಿ ಎಂದು ನಮ್ಮ ಸಮಾಜ ಭಾವಿಸಿದೆ. ಪತ್ನಿ ಕೂಡ ತನ್ನ ಪತಿ ತನ್ನ ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಹೊಂದಿರುತ್ತಾಳೆ. ಅದನ್ನು ಉಳಿಸಿಕೊಳ್ಳುವುದು ಅವನ ಕರ್ತವ್ಯವಾಗಿದೆ. ಅಂತಹದರಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬಂತೆ ಇಲ್ಲೊಬ್ಬ ಪತಿ ತನ್ನ ಪತ್ನಿಗೆ ಪರಪುರುಷನೊಂದಿಗೆ ಲೈಂಗಿಕ (Sexual Abuse) ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ.

ಚೀನಾದಲ್ಲಿದ್ದಾಗ ತನ್ನ ಸ್ನೇಹಿತ ಆಫ್ರಿಕನ್ ಯುವಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಒತ್ತಾಯಿಸಿದ್ದಾನೆ ಎಂದು ಆರೋಪಿಸಿ 40 ವರ್ಷದ ಮಹಿಳೆ ಪತಿಯ ವಿರುದ್ಧ ದೂರು ನೀಡಿದ ಘಟನೆ ಲಕ್ನೋದ ನಾಕಾದಲ್ಲಿ ನಡೆದಿದೆ. ಪತಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ, ಅಲ್ಲದೇ ಅಶ್ಲೀಲ ವಿಡಿಯೊವನ್ನು ನೋಡುವಂತೆ ಒತ್ತಾಯಿಸುವ ಮೂಲಕ ಕಿರುಕುಳ ನೀಡುತ್ತಿದ್ದ. ಮತ್ತು ಅವಳು ಅದನ್ನು ವಿರೋಧಿಸಿದಾಗ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಮತ್ತು ಅವಳ ಬಳಿ ಇರುವ ಹಣವನ್ನು ಕದಿಯುತ್ತಿದ್ದ ಎಂದು ಆರೋಪಿಸಿ ಮಹಿಳೆ ತನ್ನ ಪತಿಯ ವಿರುದ್ಧ ನಾಕಾ ಪೊಲೀಸರಿಗೆ ನೀಡಿದ್ದಾಳೆ.

ಅಲ್ಲದೇ, ಮಹಿಳೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಕೋರಿದ್ದು ಅವರ ಸಹಾಯದಿಂದ ಆತನಿಂದ ತಪ್ಪಿಸಿಕೊಂಡು ಲಕ್ನೋಗೆ ಮರಳಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ರಾಯಭಾರ ಕಚೇರಿಯ ಸಲಹೆಯ ಮೇರೆಗೆ, ಆಕೆ ನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವರದಿ ಪ್ರಕಾರ, ಮಹಿಳೆ 2015 ರಲ್ಲಿ ಚೀನಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಗಂಜ್ ಮೂಲದ ವ್ಯಕ್ತಿಯನ್ನು ವಿವಾಹವಾದರು. ಮದುವೆಯಾದ ಮೊದಲ ವಾರದಲ್ಲೇ 15 ಲಕ್ಷ ರೂ.ಗಳ ವರದಕ್ಷಿಣೆ ನೀಡುವಂತೆ ಆಕೆಯ ಹೆತ್ತವರನ್ನು ಒತ್ತಾಯಿಸಿದ್ದಾನೆ. ನಂತರ ಆರಂಭದಲ್ಲಿ ಆತ ಏಕಾಂಗಿಯಾಗಿ ಚೀನಾಕ್ಕೆ ಮರಳಿದ್ದಾನೆ, ನಂತರ ಒಂದು ತಿಂಗಳ ನಂತರ ಮತ್ತೆ ಬಂದು ಆಕೆಗೆ ಹಿಂಸೆ ನೀಡಲು ಶುರುಮಾಡಿದ್ದಾನೆ.

ಇದನ್ನೂ ಓದಿ: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಆತ ಮತ್ತೆ ವರದಕ್ಷಿಣೆ ಬೇಕೆಂದು ಕಿರುಕುಳ ನೀಡಲು ಶುರುಮಾಡಿದ್ದಾನೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಲಕ್ನೋಗೆ ಹೋದಾಗ, ಪತಿ ಆಕೆಯ ವೀಸಾ, ವಿಮಾನ ಟಿಕೆಟ್ ಮತ್ತು 2 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾನೆ ಮತ್ತು ಮಹಿಳೆಯ 10ಲಕ್ಷ ರೂ ಮೌಲ್ಯದ ಆಭರಣಗಳನ್ನು ಕದ್ದಿದ್ದಾನೆ. ಅವಳು ಮಾರ್ಚ್ 4 ರಂದು ಅವನೊಂದಿಗೆ ಚೀನಾಕ್ಕೆ ಹೋಗಿದ್ದಾಳೆ. ಅಲ್ಲಿ ಆತನ ಹಿಂಸೆಯನ್ನು ಸಹಿಸಲಾರದೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಭಾರತಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.

Continue Reading

ಕರ್ನಾಟಕ

Woman Harassed: ರಸ್ತೆಯಲ್ಲಿ ಮಹಿಳೆಯನ್ನು ಹಗ್ ಮಾಡಿ ಕಿಸ್ ಕೊಟ್ಟಿದ್ದ ಕಾಮುಕ ಅರೆಸ್ಟ್

Woman Harassed: ಬೆಂಗಳೂರಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

VISTARANEWS.COM


on

Woman Harassed
Koo

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಹಗ್‌ ಮಾಡಿ, ಕಿಸ್‌ ಕೊಟ್ಟು ಪರಾರಿಯಾಗಿದ್ದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ನಡೆದಿದ್ದ ಘಟನೆಯ (Woman Harassed) ವಿಡಿಯೊ ಭಾರಿ ವೈರಲ್‌ ಆಗಿತ್ತು. ಇದರಿಂದ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕ್ಯಾಬ್ ಚಾಲಕ ಸುರೇಶ್(25) ಬಂಧಿತ ಆರೋಪಿ. ಕೋಣನಕುಂಟೆ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಡ್ರಾಪ್ ಮಾಡೋದಕ್ಕೆ ಬಂದಿದ್ದ ಆರೋಪಿ, ರಸ್ತೆ ಮೇಲೆ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದ. ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದರು. ಅವರ ಹಿಂದೆಯೇ ಓಡಿ ಹೋದ ದುರುಳ, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದ.

ಶುಕ್ರವಾರ ಬೆಳಗ್ಗೆ‌ ನಡೆದಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಡಿಸಿಪಿ ಲೊಕೇಶ್‌ ಅಮಾನತು ಮಾಡಿದ್ದಾರೆ.

ಇದನ್ನೂ ಓದಿ | K M Shivalinge Gowda: ಭಾಷಣದ ಭರದಲ್ಲಿ ಕಾಂಗ್ರೆಸ್‌ಗೇ ಬೈದ ಶಾಸಕ ಶಿವಲಿಂಗೇಗೌಡ! ವಿಡಿಯೊ ಇದೆ

Viral Video: ಕಾಲೇಜು ಕ್ಯಾಂಪಸ್‌ನಲ್ಲೇ ಲಿಪ್‌ ಕಿಸ್‌; ಯುವ ಜೋಡಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್‌ಗೆ ನೆಟ್ಟಿಗರು ಗರಂ

ಲಕ್ನೋ: ಕೋಟ್ಯಂತರ ವಿದ್ಯಾರ್ಥಿಗಳ ಜೀವನವನ್ನು ಬೆಳಗುವ, ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ದೇಗುಲಕ್ಕೆ ಹೋಲಿಸಲಾಗುತ್ತದೆ. ಇದೇ ಕಾರಣಕ್ಕೆ ಶಾಲೆ, ಕಾಲೇಜುಗಳನ್ನು ಈಗಲೂ ಅನೇಕರು ಗೌರವಿಸುತ್ತಾರೆ. ಆದರೆ ಕೆಲವರು ತಾವು ಶಿಕ್ಷಣ ಪಡೆಯಲು ಬಂದಿದ್ದೇವೆ ಎನ್ನುವುದನ್ನೂ ಮರೆತು ಕಾಲೇಜಿನಲ್ಲೇ ರೊಮ್ಯಾನ್ಸ್‌ ಮಾಡಲು ಮುಂದಾಗುತ್ತಾರೆ. ಸದ್ಯ ಅಂತಹದ್ದೊಂದು ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಯುವ ಜೋಡಿಯ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ (Viral Video).

ಯುವಕ ಮತ್ತು ಯುವತಿ ಕಾಲೇಜು ಕ್ಯಾಂಪಸ್‌ನಲ್ಲಿ ಮೈ ಮರೆತು ಲಿಪ್‌ ಕಿಸ್‌ ಮಾಡುವುದರಲ್ಲಿ ಮಗ್ನವಾಗಿದೆ. ಜತೆಗೆ ಯುವಕ ಆಕೆಯ ಬಟ್ಟೆಯನ್ನು ಮೇಲೆ ಸರಿಸಿ ಎಲ್ಲೆಲ್ಲೋ ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಯುವತಿಯೇ ಮುಂದೆ ಹೋಗಿ ಯುವಕನ ತುಟಿಯನ್ನು ಚುಂಚಿಸುತ್ತಾ ಮೈಮರೆಯುತ್ತಾಳೆ. ಈ ದೃಶ್ಯವನ್ನು ಮರೆಯಲ್ಲಿ ನಿಂತು ನೋಡುತ್ತಿದ್ದ ಕೆಲವು ವಿದ್ಯಾರ್ಥಿಗಳು ಸೆರೆ ಹಿಡಿದ್ದಾರೆ.

ಹಾಡಹಗಲೇ ಈ ಜೋಡಿ ರೊಮ್ಯಾನ್ಸ್‌ ಮಾಡುತ್ತ ಮೈಮರೆತಿರುವ ಘಟನೆ ನಡೆದಿದ್ದು ಉತ್ತರ ಪ್ರದೇಶದ ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ. ಕಳೆದ ವರ್ಷ ನಡೆದಿದೆ ಎನ್ನಲಾದ ಈ ವಿಡಿಯೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಜನಬ್‌ ಖಾನ್‌ ಎನ್ನುವವರು ಈ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಈಗಾಗಲೇ 1.5 ಲಕ್ಕಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ʼʼವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ವರ್ತನೆ ಗಮನಿಸಿ. ವಿದ್ಯಾರ್ಥಿಗಳು ಕಲಿಕೆಯ ಬದಲು ಅಶ್ಲೀಲತೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ. ಇದು ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾನಿಯಲವೊಂದರಲ್ಲಿ ಕಂಡು ಬಂದ ದೃಶ್ಯʼʼ ಎಂದು ಅವರು ಬರೆದುಕೊಂಡಿದ್ದಾರೆ.

1.33 ನಿಮಿಷಗಳ ಈ ವಿಡಿಯೊ ನೋಡಿ ಹಲವರು ಈ ವಿದ್ಯಾರ್ಥಿಗಳ ವರ್ತನೆಗೆ ಅಸಹ್ಯ ಪಟ್ಟುಕೊಂಡಿದ್ದಾರೆ. ಕೆಲವರಂತೂ ಛೀಮಾರಿ ಹಾಕಿದ್ದಾರೆ. ಬಹುತೇಕರು ಕಿಡಿ ಕಾರಿದ್ದಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದು ಎನ್ನುವ ಉದ್ದೇಶದಿಂದ ಬಹುತೇಕ ಪಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಅವರಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗುತ್ತಾರೆ. ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಮಕ್ಕಳು ಕಾಲೇಜಿಗೆ ಬಂದು ಹೀಗೆ ವರ್ತಿಸುತ್ತಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

ಇಂತಹ ವಿದ್ಯಾರ್ಥಿಗಳಿಗೆ ಕಠಿಣ ಸಜೆ ನೀಡಬೇಕು ಎಂದು ಇನ್ನು ಕೆಲವರು ಆಗ್ರಹಿಸಿದ್ದಾರೆ. ಅಷ್ಟು ತೀಟೆ ಇದ್ದರೆ ಲಾಡ್ಜ್‌ಗೆ ಹೋಗಲಿ ಎಂದು ಒಂದಷ್ಟು ಮಂದಿ ಬೈದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿದೆ.

Continue Reading

ವಿಜಯನಗರ

Road Accident : ಶಾಲಾ ಶಿಕ್ಷಕನ ಬಲಿ ಪಡೆದ ಸ್ಕೂಲ್‌ ವ್ಯಾನ್‌; ಒಂಟಿ ಸಲಗ ದಾಳಿಗೆ ವೃದ್ಧೆ ಸಾವು

Road Accident : ವಿಜಯನಗರದಲ್ಲಿ ಜವರಾಯನ ಅಟ್ಟಹಾಸಕ್ಕೆ ಶಾಲಾ ಶಿಕ್ಷಕರು ದಾರುಣವಾಗಿ ಮೃತಪಟ್ಟರೆ, ಇತ್ತ ಕೋಲಾರದಲ್ಲಿ ಒಂಟಿ ಸಲಗ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

VISTARANEWS.COM


on

By

Road Accident
Koo

ವಿಜಯನಗರ: ಬೈಕ್ ಹಾಗೂ ಶಾಲಾ ವಾಹನದ ಮಧ್ಯೆ ಅಪಘಾತ (Road Accident) ಸಂಭವಿಸಿದ್ದು, ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ಮುನಿಯಪ್ಪ (55) ಮೃತ ದುರ್ದೈವಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮುನಿಯಪ್ಪನವರು ಅಮ್ಮನಕೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮೂಲತಃ ಹರಪನಹಳ್ಳಿ ತಾಲೂಕಿನ ಉಂಚಳ್ಳಿ ಗ್ರಾಮದವದ ಮುನಿಯಪ್ಪ ಅವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಕೊಠಡಿ ನಿರೀಕ್ಷಕರಾಗಿ ಕರ್ಥವ್ಯಕ್ಕೆ ನಿಯೋಜನೆ ಆಗಿದ್ದರು.

ಕೂಡ್ಲಿಗಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಖಾಸಗಿ ಶಾಲಾ ವಾಹನ ಡಿಕ್ಕಿ ರಭಸಕ್ಕೆ ಹಾರಿ ಬಿದ್ದ ಮುನಿಯಪ್ಪ ಸ್ಥಳದಲ್ಲೇ ರಕ್ತಕಾರಿ ಮೃತಪಟ್ಟಿದ್ದಾರೆ. ಕೊಟ್ಟೂರು ತಾಲೂಕಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಶಿಕ್ಷಕ ಮುನಿಯಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

ಕೋಲಾರದಲ್ಲಿ ಕಾಡಾನೆ ದಾಳಿಗೆ ವೃದ್ಧೆ ಸಾವು

ಕೋಲಾರದ ‌ಗಡಿಯಲ್ಲಿ ಕಾಡಾನೆ ದಾಳಿಯಲ್ಲಿ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುರಿ ಮೇಯಿಸಲು ಹೋದಾಗ ಒಂಟಿ ಸಲಗವೊಂದುಉ ದಾಳಿ ಮಾಡಿತ್ತು. ನಿನ್ನೆ ಭಾನುವಾರ ಸಂಜೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚತ್ತಗುಟ್ಟಹಳ್ಳಿ ಗ್ರಾಮದ ಬಳಿ ಸಲಗ ದಾಳಿ ಮಾಡಿದೆ.

ಚತ್ತಗುಟ್ಟಹಳ್ಳಿಯ 70 ವರ್ಷದ ವೃದ್ಧೆ ರಾಧಮ್ಮ ಮೃತ ದುರ್ದೈವಿ. ರಾಧಮ್ಮ ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಾಳು ರಾಧಮ್ಮ ಅವರನ್ನು ಹೆಚ್ವಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Olympics 2024
ಪ್ರಮುಖ ಸುದ್ದಿ18 mins ago

Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಆ.6ರಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

karnataka weather Forecast
ಮಳೆ18 mins ago

Karnataka Weather : ಬೆಂಗಳೂರು ಜತೆಗೆ ಉತ್ತರ ಕನ್ನಡ ಜಿಲ್ಲೆಗೆ ಇಂದು ಭಾರಿ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ48 mins ago

Dina Bhavishya : ಈ ರಾಶಿಯವರು ಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ

Mashrafe Mortaza
ಪ್ರಮುಖ ಸುದ್ದಿ6 hours ago

Mashrafe Mortaza : ಕ್ರಿಕೆಟರ್ ಮುಶ್ರಫೆ ಮೊರ್ತಾಜಾ ಮನೆಗೆ ಬೆಂಕಿ ಹಚ್ಚಿದ ಬಾಂಗ್ಲಾದೇಶದ ಪ್ರತಿಭಟನಾಕಾರರು

Bangladesh Protest
ವಿದೇಶ6 hours ago

Bangladesh Protest: ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಶತ್ರು ಖಲೇದಾ ಜಿಯಾ ರಿಲೀಸ್‌ಗೆ ಆದೇಶ!

Women's T20 World Cup
ಪ್ರಮುಖ ಸುದ್ದಿ6 hours ago

Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

Bangladesh Protest
ವಿದೇಶ7 hours ago

Bangladesh Protest: ಶೇಖ್‌ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದಲ್ಲಿ 4 ಹಿಂದು ದೇಗುಲಗಳ ಧ್ವಂಸ; ಹಿಂದು ಕೌನ್ಸಿಲರ್‌ ಹತ್ಯೆ!

ಪ್ರಮುಖ ಸುದ್ದಿ8 hours ago

Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಪ್ರಮುಖ ಸುದ್ದಿ8 hours ago

Gowri Movie: ‘ಗೌರಿ’ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಕಿಚ್ಚ ಸುದೀಪ್

Bangladesh Protest
ದೇಶ8 hours ago

Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ2 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ5 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ5 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ5 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ7 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ7 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌