CBSE Board Exam 2023: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆ ಇಂದಿನಿಂದ ಆರಂಭ - Vistara News

ಶಿಕ್ಷಣ

CBSE Board Exam 2023: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆ ಇಂದಿನಿಂದ ಆರಂಭ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಯನ್ನು (CBSE Board Exam 2023) ಫೆಬ್ರವರಿ 15 ರಿಂದ ಆರಂಭಿಸುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

CBSE Warns Schools Against Starting Academic Session Before April 1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಯನ್ನು (CBSE Board Exam 2023) ಇಂದಿನಿಂದ (ಫೆ.15) ಆರಂಭಿಸಲಿದೆ. 10ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಮಾರ್ಚ್ 21 ರವರಗೆ ನಡೆದರೆ, 12ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 5 ರವರೆಗೆ ನಡೆಸಲಾಗುತ್ತದೆ.

ಈ ಬೋರ್ಡ್‌ ಪರೀಕ್ಷೆಗಳನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಸಲಾಗುತ್ತದೆ. ಕೆಲವು ವಿಷಯಗಳ ಪರೀಕ್ಷೆಯು 12.30ಕ್ಕೆ ಮುಕ್ತಾಯವಾಗಲಿವೆ. ವಿದ್ಯಾರ್ಥಿಗಳು ಬೆಳಗ್ಗೆ 9.30ರ ವೇಳೆಗೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಪರೀಕ್ಷಾ ಕೇಂದ್ರದ ಗೇಟ್‌ನ ಬಾಗಿಲು ಹಾಕಲಾಗುತ್ತದೆ. ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಸಿಬಿಎಸ್‌ಇಯು ತಿಳಿಸಿದೆ.

10ನೇ ತರಗತಿಯ ಬೋರ್ಡ್‌ ಪರಿಕ್ಷೆಯು ಚಿತ್ರಕಲೆ, ರಾಯ್, ಗುರುಂಗ್, ತಮಾಂಗ್, ಶೇರ್ಪಾ ಮತ್ತು ಥಾಯ್ ಪತ್ರಿಕೆಗಳೊಂದಿಗೆ ಪ್ರಾರಂಭವಾಗುತ್ತದೆ. ಕೊನೆಯಲ್ಲಿ ಗಣಿತದ ಮೂಲ ಪತ್ರಿಕೆ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸಿಬಿಎಸ್‌ಇ12ನೇ ತರಗತಿಯ ಬೋರ್ಡ್‌ ಪರೀಕ್ಷೆಯು ಎಂಟರ್‌ಪ್ರೆನರ್‌ಶಿಪ್ ಪತ್ರಿಕೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಸೈಕಾಲಜಿ ಪತ್ರಿಕೆಯೊಂದಿಗೆ ಮುಕ್ತಾಯಗೊಳ್ಳಲಿದೆ.

10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆಯೇ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈಗಾಗಲೇ ಸಿಬಿಎಸ್‌ಇಯು ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರವೇ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಿಬಿಎಸ್‌ಇಯು ತಿಳಿಸಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಹಿ ಮಾಡಿದ ಪ್ರವೇಶ ಪತ್ರ, ಶಾಲೆಯ ಐಡಿಕಾರ್ಡ್‌ ಮತ್ತು ಯಾವುದಾದರೂ ಒಂದು ಐಡಿ ಕಾರ್ಡ್‌ ತೆಗೆದುಕೊಂಡು ಬರಬೇಕೆಂದು ಸಿಬಿಎಸ್‌ಇಯು ಸೂಚಿಸಿದ್ದು, ಸರಿಯಾದ ದಾಖಲೆಗಳಿಲ್ಲದೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಸಿದೆ.

ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. ಪರೀಕ್ಷೆ ಬರೆಯಲು ಅಗತ್ಯವಾಗಿರುವ ಪೆನ್ನು, ಕಲರ್‌ಪೆನ್ನು, ಪೆನ್ಸಿಲ್‌ ಇತ್ಯಾದಿಗಳನ್ನು ವಿದ್ಯಾರ್ಥಿಗಳೇ ತರಬೇಕೆಂದು ಸೂಚಿಸಲಾಗಿದೆ. ಪರೀಕ್ಷೆಯ ಕುರಿತು ಈಗಾಗಲೇ ಸಿಬಿಎಸ್‌ಇಯು ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದು, ಇದನ್ನು ನೋಡಿಕೊಂಡೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕೆಂದು ಸಿಬಿಎಸ್‌ಇಯು ಕೋರಿದೆ.

ಪರೀಕ್ಷೆಯ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: http://www.cbse.gov.in

ಇದನ್ನೂ ಓದಿ : SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್‌ ಶುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ

Tata Motors: ಟಾಟಾ ಮೋಟಾರ್ಸ್ ಸಂಸ್ಥೆಯು ಪುಣೆ, ಲಕ್ನೋ, ಜಮ್‌ಶೆಡ್‌ಪುರ, ಧಾರವಾಡ, ಸನಂದ್ ಮತ್ತು ಪಂತ್ ನಗರ ಸೇರಿದಂತೆ ಭಾರತದಾದ್ಯಂತ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ತಂತ್ರಜ್ಞರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ‘ವಿದ್ಯಾಧನ’ ಮತ್ತು ‘ಉತ್ಕರ್ಷ’ ಎಂಬ ಎರಡು ವಿಶೇಷ ಧನಸಹಾಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ಕಂಪನಿಯು ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಪ್ರಕ್ರಿಯೆ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Tata Motors launched two programs Vidyadhana and Utkarsha to facilitate higher education of technician children
Koo

ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ಸಂಸ್ಥೆಯು (Tata Motors) ಪುಣೆ, ಲಕ್ನೋ, ಜಮ್‌ಶೆಡ್‌ಪುರ, ಧಾರವಾಡ, ಸನಂದ್ ಮತ್ತು ಪಂತ್ ನಗರ ಸೇರಿದಂತೆ ಭಾರತದಾದ್ಯಂತ ಇರುವ ತಮ್ಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ತಂತ್ರಜ್ಞರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ‘ವಿದ್ಯಾಧನ’ ಮತ್ತು ‘ಉತ್ಕರ್ಷ’ ಎಂಬ ಎರಡು ವಿಶೇಷ ಧನಸಹಾಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ಕಂಪನಿಯು ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಪ್ರಕ್ರಿಯೆ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.

ʼವಿದ್ಯಾಧನʼ ಕಾರ್ಯಕ್ರಮದ ಅಡಿಯಲ್ಲಿ 10ನೇ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ರಿಯಾಯಿತಿ ದರದಲ್ಲಿ ಶಿಕ್ಷಣ ಸಾಲಗಳನ್ನು ಒದಗಿಸಲಾಗುತ್ತದೆ. ‘ಉತ್ಕರ್ಷ’ ಕಾರ್ಯಕ್ರಮದಲ್ಲಿ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳಿಗೆ ಹೆಚ್ಚುವರಿ ವಾರ್ಷಿಕ ವಿದ್ಯಾರ್ಥಿವೇತನ ಪ್ರಯೋಜನ ನೀಡಲಾಗುತ್ತದೆ.

ವಿದ್ಯಾಧನ ಮತ್ತು ಉತ್ಕರ್ಷ ಕಾರ್ಯಕ್ರಮ ಆರಂಭವನ್ನು ಘೋಷಿಸಿದ ಟಾಟಾ ಮೋಟಾರ್ಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಓ) ಸೀತಾರಾಮ್ ಕಂಡಿ ಮಾತನಾಡಿ, “ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸಲು ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ. ಈ ಕಾರ್ಯಕ್ರಮಗಳು ಸುಲಭವಾಗಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡುತ್ತದೆ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಾದಿಯನ್ನು ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಆ.3ರಂದು ‘ಬೌದ್ಧ ಸಾಹಿತ್ಯ-ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣ

ನಮ್ಮ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿಯುವ ತಂತ್ರಜ್ಞರ ಮಕ್ಕಳು ತಮ್ಮ ಸ್ವಂತ ಕನಸುಗಳನ್ನು ಮತ್ತು ಅವರ ಹೆತ್ತವರ ಕನಸುಗಳನ್ನು ಈ ಕಾರ್ಯಕ್ರಮಗಳ ಮುಖಾಂತರ ಈಡೇರಿಸಲಿದ್ದಾರೆ. ಇನ್ನು ನಮ್ಮ ತಂತ್ರಜ್ಞರ ಮಕ್ಕಳು 10 ಮತ್ತು 12 ನೇ ತರಗತಿ ನಂತರ ತಮ್ಮ ಆಯ್ಕೆಯ ಯಾವುದೇ ವಿಷಯದಲ್ಲಿ ಅಧ್ಯಯನ ಮಾಡಲು ಮುಂದಾಗಬಹುದು. ಪೋಷಕರು ಅದಕ್ಕೆ ಅಗತ್ಯವಿರುವ ಹಣಕಾಸಿನ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾದ ಅಗತ್ಯ ಇರುವುದಿಲ್ಲ. ಸೂಕ್ತ ರೀತಿಯ ಕ್ವಾಲಿಫಿಕೇಷನ್ ಮತ್ತು ಕೌಶಲ್ಯಗಳನ್ನು ಹೊಂದುವುದರ ಮೂಲಕ ಯಶಸ್ವಿಯಾಗಿ ವೃತ್ತಿ ರೂಪಿಸಲು ಮತ್ತು ಜೀವನವನ್ನು ನಿರ್ಮಿಸಲು ಅವರಿಗೆ ಈ ಕಾರ್ಯಕ್ರಮಗಳು ಉತ್ತಮ ಅವಕಾಶವಾಗಿದೆ” ಎಂದು ತಿಳಿಸಿದರು.

ವಿದ್ಯಾಧನ

‘ವಿದ್ಯಾಧನ’ ಎಂಬುದು ಶಿಕ್ಷಣ ಸಾಲ ಕಾರ್ಯಕ್ರಮವಾಗಿದ್ದು, ಅದು ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಪಡೆದು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಅರಿತುಕೊಳ್ಳಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅರ್ಹ ತಂತ್ರಜ್ಞರು ದೇಶೀಯ ಶಿಕ್ಷಣದ ಶುಲ್ಕದ 95% ವರೆಗೆ ಅಥವಾ ಅಂತಾರಾಷ್ಟ್ರೀಯ ಶಿಕ್ಷಣ ಶುಲ್ಕದ 85% ವರೆಗೆ ಕಟ್ಟುವ ಸಲುವಾಗಿ 7.5 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು. ಈ ಶಿಕ್ಷಣ ಸಾಲಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಿಂದ ಒದಗಿಸಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್ ಎಸ್‌ಬಿಐ ವಿಧಿಸುತ್ತಿರುವ ಬಡ್ಡಿದರದ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಹುಡುಗರಿಗೆ 50% ಕಡಿಮೆ ಬಡ್ಡಿದರ ಮತ್ತು ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳು 70% ಬಡ್ಡಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಯೋಜನ ಪಡೆಯಲು ವಿದ್ಯಾರ್ಥಿಯು ಕನಿಷ್ಠ 2 ವರ್ಷಗಳ ಅವಧಿಯುಳ್ಳ ಫುಲ್ ಟೈಮ್ ಪದವಿ ಕೋರ್ಸಿಗೆ ಅಥವಾ ಸ್ನಾತಕೋತ್ತರ ಕೋರ್ಸ್‌ಗೆ ದಾಖಲಾಗಿರಬೇಕು ಮತ್ತು ಆ ಸಂಸ್ಥೆಗಳು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜತೆ ಸಂಯೋಜಿತಗೊಂಡಿರಬೇಕು.

ಇದನ್ನೂ ಓದಿ: Namma Metro : ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ದೋಷ; ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವ್ಯತ್ಯಯ

ಉತ್ಕರ್ಷ ವಿದ್ಯಾರ್ಥಿವೇತನ

‘ಉತ್ಕರ್ಷʼ ಕಾರ್ಯಕ್ರಮವು 10ನೇ ಅಥವಾ 12ನೇ ತರಗತಿಯನ್ನು ಪೂರ್ಣಗೊಳಿಸಿದ ಹುಡುಗಿಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಪ್ರತೀ ವರ್ಷ ರೂ.25,000/- ವಿದ್ಯಾರ್ಥಿವೇತನ ಒದಗಿಸುವ ಕಾರ್ಯಕ್ರಮವಾಗಿದೆ. ಇದಕ್ಕೆ ಅರ್ಹತೆ ಪಡೆಯಲು ಅರ್ಜಿದಾರರು ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ಮತ್ತು ಭಾರತ ಅಥವಾ ವಿದೇಶದಲ್ಲಿರುವ ಮಾನ್ಯತೆ ಪಡೆದ ಎಐಸಿಟಿಇ- ಸಮಾನ ಸಂಸ್ಥೆಗಳು ಅಥವಾ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪಡೆದುಕೊಂಡಿರಬೇಕು.

Continue Reading

ಬೆಂಗಳೂರು

UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಮತ್ತಷ್ಟು ದಿನ ಅವಕಾಶ

UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತಷ್ಟು ದಿನ ಅವಕಾಶ ಕಲ್ಪಿಸಿದೆ.

VISTARANEWS.COM


on

By

UGCET 2024
Koo

ಬೆಂಗಳೂರು: ಯುಜಿಸಿಇಟಿ-24ರ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ನ್ಯಾಚುರೋಪಥಿ- ಯೋಗ, ಪಶು ವೈದ್ಯಕೀಯ ಇತ್ಯಾದಿ ಕೋರ್ಸುಗಳ ಪ್ರವೇಶಕ್ಕೆ ಆಪ್ಶನ್ (ಇಚ್ಛೆ) ಗಳನ್ನು (UGCET 2024) ದಾಖಲಿಸಲು ಮತ್ತಷ್ಟು ದಿನ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಈ ಮೊದಲು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಿದ್ದು ಅದು ಇವತ್ತಿಗೆ (ಜು.30) ಕೊನೆ ಆಗಬೇಕಿತ್ತು. ಅಭ್ಯರ್ಥಿಗಳ ಮನವಿ ಮೇರೆಗೆ ಮತ್ತೂ ಅವಕಾಶ ನೀಡಿದ್ದು ಅಭ್ಯರ್ಥಿಗಳು ಎಚ್ಚರಿಕೆಯಿಂದ ಇಚ್ಛೆಗಳನ್ನು ದಾಖಲು ಮಾಡಬೇಕು. ಮುಂದಿನ ಆದೇಶದ ವರೆಗೆ ಅವಕಾಶ ಕಲ್ಪಿಸಲಾಗದೆ. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ನು ದಾಖಲಿಸಲು ಈಗ ಅವಕಾಶ ನೀಡಲಾಗಿದೆ.

https://x.com/KEA_karnataka/status/1818210909929550110

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್‌ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಆಪ್ಶನ್‌ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ರಾಷ್ಟ್ರೀಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಚಟುವಟಿಕೆಗಳ ವಿವರ ಹೀಗಿದೆ
-ಜು.23ರಿಂದಲೇ Option Entry ಪೋರ್ಟಲ್‌ ತೆರೆಯಲಾಗಿದೆ. ಅಭ್ಯರ್ಥಿಗಳು ಆದ್ಯತಾ ಕ್ರಮದಲ್ಲಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಆಯ್ಕೆಗಳನ್ನು ದಾಖಲಿಸಲು 7 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದೀಗ ಮತ್ತಷ್ಟು ದಿನ ವಿಸ್ತರಣೆ ಆಗಿದೆ.

-ಇಚ್ಛೆ/ಆಯ್ಕೆಗಳನ್ನು ದಾಖಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದ 3 ದಿನಗಳ ನಂತರ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.

-ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಇಚ್ಛೆ-ಆಯ್ಕೆಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು/ಮಾರ್ಪಡಿಸಲು 3 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಈ ಮೇಲಿನ ಪ್ರಕ್ರಿಯೆ ಮುಕ್ತಾಯವಾದ 3 ದಿನಗಳ ನಂತರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

CUET UG Result 2024: ಸಿಯುಇಟಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

CUET UG Result 2024 : ಫಲಿತಾಂಶಗಳ ಜೊತೆಗೆ ಏಜೆನ್ಸಿ ಅಂತಿಮ ಉತ್ತರ ಕೀಯನ್ನು ಸಹ ಬಿಡುಗಡೆ ಮಾಡಿದೆ. ತಾತ್ಕಾಲಿಕ ಉತ್ತರ ಕೀ ವಿರುದ್ಧ ಅಭ್ಯರ್ಥಿಗಳು ಹಾಕಿದ ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಉತ್ತರ ಕೀಯನ್ನು ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿಯು ಸವಾಲುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ ಘೋಷಿಸಲಾಗಿದೆ.

VISTARANEWS.COM


on

CUET UG Result 2024
Koo

ಬೆಂಗಳೂರು: ಎನ್​​ಟಿಯ ಸಿಯುಇಟಿ ಯುಜಿ ಫಲಿತಾಂಶವನ್ನು (CUET UG Result 2024) ಪ್ರಕಟಿಸಿದೆ. ಪದವಿಪೂರ್ವ ಕೋರ್ಸ್​ಗಳಿಗೆ ಸೇರಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು cuetug.ntaonline.in ವೆಬ್​​ಸೈಟ್​ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು. ಸಿಯುಇಟಿ ಯುಜಿ ಫಲಿತಾಂಶಗಳನ್ನು exams.nta.ac.in/CUET-UG/ ನಲ್ಲಿ ಪರಿಶೀಲಿಸಬಹುದು.

ಸಿಯುಇಟಿ ಯುಜಿ ಪರೀಕ್ಷೆಯನ್ನು ಮೇ 15, 16, 17, 18, 21, 22, 24 ಮತ್ತು 29 ರಂದು ವಿದೇಶದ 26 ನಗರಗಳು ಸೇರಿದಂತೆ 379 ನಗರಗಳಲ್ಲಿರುವ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಒಟ್ಟು 13.48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜುಲೈ 19, 2024 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರಗಳನ್ನು ಜುಲೈ 7 ರಂದು ಬಿಡುಗಡೆ ಮಾಡಲಾಗಿತ್ತು. ಆಕ್ಷೇಪಣೆ ವಿಂಡೋವನ್ನು ಜುಲೈ 9, 2024 ರಂದು ಮುಚ್ಚಿದ್ದರು.

ಫಲಿತಾಂಶಗಳ ಜೊತೆಗೆ ಏಜೆನ್ಸಿ ಅಂತಿಮ ಉತ್ತರ ಕೀಯನ್ನು ಸಹ ಬಿಡುಗಡೆ ಮಾಡಿದೆ. ತಾತ್ಕಾಲಿಕ ಉತ್ತರ ಕೀ ವಿರುದ್ಧ ಅಭ್ಯರ್ಥಿಗಳು ಹಾಕಿದ ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಉತ್ತರ ಕೀಯನ್ನು ಸಿದ್ಧಪಡಿಸಲಾಗಿದೆ. ತಜ್ಞರ ಸಮಿತಿಯು ಸವಾಲುಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ ಘೋಷಿಸಲಾಗಿದೆ.

ಇದನ್ನೂ ಓದಿ: Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

ಎನ್​ಟಿಎ ಸಿಯುಇಟಿ ಯುಜಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.

  • · exams.nta.ac.in/CUET-UG/ ನಲ್ಲಿ ಸಿಯುಇಟಿ ಯುಜಿಯ ಅಧಿಕೃತ ವೆಬ್​​ಸೈಟ್​ಗೆ ಭೇಟಿ ನೀಡಬಹುದು.
  • · ಮುಖಪುಟದಲ್ಲಿ ಲಭ್ಯವಿರುವ ಸಿಯುಇಟಿ ಯುಜಿ ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • · ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  • · ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • · ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ಲೋಡ್ ಮಾಡಿ.
  • · ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.

ವಿವರಗಳಿಗಾಗಿ ಅಭ್ಯರ್ಥಿಗಳು ಸಿಯುಇಟಿ ಯುಜಿಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬಹುದು.

Continue Reading

ಪ್ರಮುಖ ಸುದ್ದಿ

UPSC Coaching : ನೈತಿಕತೆಯ ಪಾಲನೆ ವಿಚಾರದಲ್ಲಿ ಶ್ರೀರಾಮನಿಗಿಂತ ಅಕ್ಬರನೇ ಶ್ರೇಷ್ಠ ಎಂದ ಯುಪಿಎಸ್​ಸಿ ಬೋಧಕಿ ಶುಭ್ರಾ ರಂಜನ್; ಕೇಸ್​ ದಾಖಲಾದ ಬಳಿಕ ಕ್ಷಮೆ ಕೋರಿಕೆ

VISTARANEWS.COM


on

Koo

ನವದೆಹಲಿ: ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು ಹಿಂದೂ ದೇವರಾದ ರಾಮನಿಗೆ ಹೋಲಿಕೆ ಮಾಡಿದ್ದಲ್ಲದೆ, ನೈತಿಕತೆ ಪಾಲನೆ ವಿಚಾರದಲ್ಲಿ ರಾಮನಿಗಿಂತ (Lord Rama) ಅಕ್ಬರನೇ ಶ್ರೇಷ್ಠ ಎಂದು ಹೇಳಿರುವ ಯುಪಿಎಸ್​​ಸಿ ಟ್ಯುಟೋರಿಯಲ್ (UPSC Coaching) ಒಂದು ವಿವಾದ ಹುಟ್ಟು ಹಾಕಿದೆ. ಬಳಿಕ ಬೋಧನೆ ಮಾಡಿರುವ ಶಿಕ್ಷಕಿ ಶುಭ್ರಾ ರಂಜನ್ (Shubhra Ranjan) ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ರಂಜನ್ ಅವರು ಶ್ರೀರಾಮ ” ತನ್ನ ಅಪರಿಮಿತ ಶಕ್ತಿಯನ್ನು ಪ್ರದರ್ಶಿಸುವುದಿಲ್ಲ” ಎಂದು ಹೇಳಿದ್ದರು. ಇದು ನೆಟ್ಟಿಗರನ್ನು ಕೆರಳಿಸಿತ್ತು. ಶೈಕ್ಷಣಿಕ ಬೋಧನೆ ವೇಳೆ ಐತಿಹಾಸಿಕ ಮತ್ತು ಧಾರ್ಮಿಕ ವ್ಯಕ್ತಿಗಳ ನಡುವೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೆಳವಣಿಕೆ ಬಳಿಕ ಶುಭ್ರಾ ರಂಜನ್ ಕ್ಷಮೆಯಾಚಿಸಿದ್ದಾರೆ. ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ. “ಯಾರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಅದು ಆಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಉಪನ್ಯಾಸದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದು ವಿಡಿಯೋ ತರಗತಿಯ ಚರ್ಚೆಯ ಒಂದು ಸಣ್ಣ ಭಾಗ ಮಾತ್ರ ಎಂದು ಹೇಳಿದ್ದಾರೆ.

ಶ್ರೀ ರಾಮನ ರಾಜ್ಯವು ಆದರ್ಶ ರಾಜ್ಯ ಎಂದು ತಿಳಿಸಲು ನಾನು ಉದ್ದೇಶಿಸಿದ್ದೆ. ಸಂಪೂರ್ಣ ವೀಡಿಯೊ ಉಪನ್ಯಾಸವನ್ನು ನೋಡುವುದರಿಂದ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಈ ಚರ್ಚೆಯು ತುಲನಾತ್ಮಕ ಅಧ್ಯಯನದ ಭಾಗವಾಗಿದೆ.. ಅನಪೇಕ್ಷಿತ ತಪ್ಪು ವ್ಯಾಖ್ಯಾನ ಅಲ್ಲ ಎಂದು ಹೇಳಿದ್ದಾರೆ.

ಶುಭ್ರಾ ರಂಜನ್ ಹೇಳಿದ್ದೇನು?

ರಾಮನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶುಭ್ರಾ ರಂಜನ್. ಹಿಂದೂ ದೇವರ ಶಕ್ತಿಯನ್ನು “ಸಂಪ್ರದಾಯಗಳಿಂದ ನಿರ್ಬಂಧಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಚಕ್ರವರ್ತಿ ಅಕ್ಬರನನ್ನು ಹೋಲಿಕೆ ಮಾಡುತ್ತಾ ‘ಯಾರ ಅಧಿಕಾರವು ಸಂಪ್ರದಾಯಕ್ಕೆ ಮೀರಿದೆ ಅಥವಾ ಸೀಮಿತವಾಗಿದೆ?’ ಎಂದು ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಬಳಿಕ ಅವರೇ “ಅಕ್ಬರ್” ಎಂದು ಉತ್ತರಿಸಿದ್ದಾರೆ. ಅಲ್ಲದೆ, ರಾಮ ಧರ್ಮವೊಂದರ ಅಡಿಯಲ್ಲಿ ನೈತಿಕತೆಯನ್ನು ಪಾಲನೆ ಮಾಡಿದರೆ, ಅಕ್ಬರ್​ ತನ್ನದೇ ಆದ ನೈತಿಕತೆ ಹೊಂದಿದ್ದ ಎಂದು ಹೇಳಿದ್ದಾರೆ.

ಅಕ್ಬರ್ ತನ್ನದೇ ಆದ ಧರ್ಮ ಮತ್ತು ತನ್ನದೇ ಆದ ನೈತಿಕತೆ ಸ್ಥಾಪಿಸುವ ಗುರಿ ಹೊಂದಿದ್ದ ಎಂದು ರಂಜನ್ ವಿಡಿಯೊ ಕ್ಲಾಸ್​ನಲ್ಲಿ ವಿವರಿಸಿದ್ದಾರೆ. ರಂಜನ್ 1582 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಪ್ರತಿಪಾದಿಸಿದ ಸರ್ವ ಧರ್ಮ- ‘ದೀನ್-ಇ ಇಲಾಹಿ’. ಯನ್ನು ಉಲ್ಲೇಖಿಸುತ್ತಾರೆ. ಮುಂದುವರಿದ ಅವರು “ರಾಮ ನೈತಿಕತೆಯನ್ನು ವ್ಯಾಖ್ಯಾನಿಸುತ್ತಿಲ್ಲ” ಎಂದು ಮೊಘಲ್ ಚಕ್ರವರ್ತಿಗೆ ಹೋಲಿಸುತ್ತಾರೆ.

ಇದನ್ನು ಓದಿ: Income Tax : ವಿದೇಶ ಪ್ರಯಾಣಕ್ಕೆಹೊರಟವರೇ ಇಲ್ಲಿ ಕೇಳಿ; ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ ಎಂದಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ರಾಜಪ್ರಭುತ್ವದ ವ್ಯವಸ್ಥೆಯು ಹೇಗೆ ವಿಕಸನಗೊಂಡಿದೆ ಎಂಬುದನ್ನು ವಿವರಿಸಲು ಶುಭ್ರಾ ರಂಜನ್ ಹೋಲಿಕೆಗಳನ್ನು ಬಳಸುತ್ತಾರೆ. ಭಾರತದಲ್ಲಿ ರಾಜಪ್ರಭುತ್ವವು ‘ಸಂಪೂರ್ಣ’ ಅಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

“ರಾಜ ಕೂಡ ಧರ್ಮದ ಅಡಿಯಲ್ಲಿದ್ದ. ರಾಜಧರ್ಮ ಎತ್ತಿಹಿಡಿದಿದ್ದನು ” ಎಂದು ರಂಜನ್ ಹೇಳಿದ್ದಾರೆ.

ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಎಕ್ಸ್ ಬಳಕೆದಾರರೊಬ್ಬರು ಸೈಬರ್ ಪೊಲೀಸ್ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದು, ಶುಭ್ರಾ ರಂಜನ್ ಅವರು “ಧರ್ಮನಿಂದನೆ ಮತ್ತು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಎಕ್ಸ್ ಬಳಕೆದಾರರು ರಂಜನ್ ಅವರನ್ನು ಟೀಕಿಸಿದ್ದು, ಭಗವಾನ್ ರಾಮನನ್ನು ಅಕ್ಬರ್​ಗೆ ಹೋಲಿಸುವ ಮೂಲಕ ಯುಪಿಎಸ್​ಸಿ ಆಕಾಂಕ್ಷಿಗಳ ಮನಸ್ಸನ್ನು ಭ್ರಷ್ಟಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ .

ಕೆಲವು ನೆಟ್ಟಿಗರು ಶುಭ್ರಾ ಅವರನ್ನು ಬೆಂಬಲಿಸಿದ್ದಾರೆ. “ಅಕ್ಬರ್ ತನ್ನದೇ ಆದ ನೈತಿಕತೆ ವ್ಯಾಖ್ಯಾನಿಸುತ್ತಿದ್ದ. ಶ್ರೀ ರಾಮನು ನಿಜವಾಗಿ ನೈತಿಕತೆ ಅನುಸರಿಸುತ್ತಿದ್ದ. ಹೀಗಿರುವಾರ ಶ್ರೀ ರಾಮನನ್ನು ರಾಜನೆಂದು ವಿಶ್ಲೇಷಿಸುವುದರಲ್ಲಿ ಏನು ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.

Continue Reading
Advertisement
Infosys
ಕರ್ನಾಟಕ1 min ago

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Paris Olympics
ಕ್ರೀಡೆ22 mins ago

Paris Olympics: ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಮಣಿಕಾ ಬಾತ್ರಾ

Indians spend 15 billion hours waiting for customer service time in 2023 ServiceNow information
ದೇಶ38 mins ago

Servicenow: ಭಾರತೀಯರು ಗ್ರಾಹಕ ಸೇವೆ ಪಡೆಯಲು ವರ್ಷದಲ್ಲಿ 15 ಶತಕೋಟಿ ಗಂಟೆ ಕಳೆಯುತ್ತಾರೆ! ಅಧ್ಯಯನ ವರದಿ

Former MLA Rupali Nayka appeals to DC to resolve various issues under Karwara Ankola Assembly Constituency
ಉತ್ತರ ಕನ್ನಡ40 mins ago

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Kolluru bridge inundation by Krishna river flood Chalavadi Narayanaswamy visits the flood damaged area
ಮಳೆ41 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ನೆರೆ ಹಾನಿ ಪ್ರದೇಶಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ

Successful complex surgery at Fortis Hospital for a boy who had a hole in his intestine due to a road accident
ಕರ್ನಾಟಕ42 mins ago

Fortis Hospital: ರಸ್ತೆ ಅಪಘಾತದಿಂದ ಕರುಳಿನಲ್ಲಿ ರಂಧ್ರ; 10 ವರ್ಷದ ಬಾಲಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

New Rules
ದೇಶ44 mins ago

New Rules: ಕ್ರೆಡಿಟ್‌ ಕಾರ್ಡ್‌ನಿಂದ ಎಲ್‌ಪಿಜಿ ದರ; ನಾಳೆಯಿಂದ ಯಾವೆಲ್ಲ ನಿಯಮ, ದರ ಬದಲು? ಜೇಬಿಗೆ ಹೊರೆಯೇ?

Pakistani Labours
ವಿದೇಶ45 mins ago

Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

Star Monsoon gym fashion
ಫ್ಯಾಷನ್47 mins ago

Star Monsoon Gym Fashion: ನಟ ಕಾರ್ತಿಕ್‌ ಜಯರಾಮ್‌ ಮಾನ್ಸೂನ್‌ ಜಿಮ್‌ ಫ್ಯಾಷನ್‌ ಮಂತ್ರ ಹೀಗಿದೆ!

Crocodile Attack
Latest58 mins ago

Crocodile Attack: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌