SEEB to give grace marks to class X students, know more hereSSLC Exam 2023 : ಆರಂಭಗೊಂಡ SSLC ಎಕ್ಸಾಂ; ಈ ವರ್ಷವೂ ಶೇ.10 ರಷ್ಟು ಗ್ರೇಸ್‌ ಮಾರ್ಕ್ಸ್ ಉಂಟು! Vistara News

ಶಿಕ್ಷಣ

SSLC Exam 2023 : ಆರಂಭಗೊಂಡ SSLC ಎಕ್ಸಾಂ; ಈ ವರ್ಷವೂ ಶೇ.10 ರಷ್ಟು ಗ್ರೇಸ್‌ ಮಾರ್ಕ್ಸ್ ಉಂಟು!

SSLC Exam 2023: ರಾಜ್ಯಾದ್ಯಂತ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಯಾವುದಾದರೂ ಮೂರು ವಿಷಯಗಳಿಗೆ ಮಾತ್ರ ಗರಿಷ್ಠ ಶೇ. 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಮಂಡಳಿಯು ತೀರ್ಮಾನಿಸಿದೆ.

VISTARANEWS.COM


on

SEEB to give grace marks to class X students, know more here
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಇಂದಿನಿಂದ (ಮಾರ್ಚ್‌ 31) ಆರಂಭಗೊಂಡಿದೆ, ಈ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಕೃಪಾಂಕ (ಗ್ರೇಸ್ ಮಾರ್ಕ್ಸ್) ದೊರೆಯಲಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಶನಿವಾರ ಆದೇಶ ಹೊರಡಿಸುವ ಸಾಧ್ಯತೆಗಳಿವೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5 ರಷ್ಟು ಕೃಪಾಂಕ ನೀಡಲಾಗುತ್ತದೆ ಎಂದು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಗರಿಷ್ಠ ಶೇಕಡ 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ಮಂಡಳಿಯು ತೀರ್ಮಾನಿಸಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯು ಈಗಾಗಲೇ ಅನುಮತಿ ನೀಡಿದ್ದು, ಆದೇಶ ಹೊರಬೀಳಬೇಕಾಗಿದೆ.

ಯಾವುದಾದರೂ ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದೆ. ತೇರ್ಗಡೆಗೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಲು ಅಗತ್ಯವಾದ ಅಂಕಗಳನ್ನು ಪಡೆದು, ಮೂರು ವಿಷಯದಲ್ಲಿ 25 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.

ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿವೆ. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಹೊಸಬರು 7,94,611 ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಜೆರಾಕ್ಸ್‌ ಸೆಂಟರ್‌ ಮತ್ತು ಸೈಬರ್‌ ಸೆಂಟರ್‌ಗಳನ್ನು ತೆರೆಯದಂತೆ ನೋಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇದನ್ನೂ ಓದಿ : SSLC Examination : ತಮಿಳುನಾಡು ಮೂಲದ ವಿದ್ಯಾರ್ಥಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಿದ ಹೈಕೋರ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job news: ಖರಗ್ಪುರ ಐಐಟಿ ಕ್ಯಾಂಪಸ್‌ನಲ್ಲಿ 6 ವಿದ್ಯಾರ್ಥಿಗಳಿಗೆ ಸಿಕ್ತು ಕೋಟಿ ರೂ. ಸಂಬಳದ ಆಫರ್‌!

Job news: 2023ರ ಪ್ಲೇಸ್‌ಮೆಂಟ್‌ ಅಧಿವೇಶನದ ಮೊದಲ ದಿನದಂದು ಖರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ದಾಖಲೆ ಬರೆದಿದೆ. ಪ್ರಿ-ಪ್ಲೇಸ್‌ಮೆಂಟ್‌ ಆಫರ್‌ಗಳು ಸೇರಿದಂತೆ 700ಕ್ಕೂ ಹೆಚ್ಚು ಉದ್ಯೋಗಾವಕಾಶ ಪಡೆದುಕೊಂಡಿದೆ.

VISTARANEWS.COM


on

iit
Koo

ಲಕ್ನೋ: 2023ರ ಪ್ಲೇಸ್‌ಮೆಂಟ್‌ ಅಧಿವೇಶನದ ಮೊದಲ ದಿನದಂದು ಖರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (Indian Institute of Technology-IIT) ದಾಖಲೆ ಬರೆದಿದೆ. ಪ್ರಿ-ಪ್ಲೇಸ್‌ಮೆಂಟ್‌ ಆಫರ್‌ಗಳು (PPOs) ಸೇರಿದಂತೆ 700ಕ್ಕೂ ಹೆಚ್ಚು ಉದ್ಯೋಗಾವಕಾಶ ಪಡೆದುಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ. 19ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಆಫರ್‌ಗಳನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ. ಆ ಪೈಕಿ ಆರು ವಿದ್ಯಾರ್ಥಿಗಳಿಗೆ ಮೊದಲ ದಿನದಂದು 1 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್‌ ಲಭಿಸಿದೆ ಎಂದು ಮೂಲಗಳು ತಿಳಿಸಿವೆ (Job news).

61ಕ್ಕೂ ಹೆಚ್ಚು ಕಂಪನಿಗಳು ಭಾಗಿ

“61ಕ್ಕೂ ಹೆಚ್ಚು ಕಂಪನಿಗಳು ನಮ್ಮ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿವೆ. ಮುಖ್ಯವಾಗಿ ಸಾಫ್ಟ್‌ವೇರ್‌, ಅನಾಲಿಟಿಕ್ಸ್, ಫೈನಾನ್ಸ್-ಬ್ಯಾಂಕಿಂಗ್, ಕನ್ಸಲ್ಟಿಂಗ್ ಮತ್ತು ಕೋರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಉದ್ಯೋಗ ಲಭಿಸಿದೆ. ಆ್ಯಪಲ್, ಆರ್ಥರ್ ಡಿ ಲಿಟಲ್, ಡಾ ವಿನ್ಸಿ, ಕ್ಯಾಪಿಟಲ್ ಒನ್, ಡಿಇ ಶಾ, ಎಕ್ಸ್ಎಲ್ ಸರ್ವೀಸಸ್, ಗ್ಲೀನ್, ಗೂಗಲ್, ಗ್ರಾವಿಟನ್, ಮೈಕ್ರೋಸಾಫ್ಟ್, ಮೆಕಿನ್ಸೆ, ಕ್ವಾಂಟ್ಬಾಕ್ಸ್, ಡಾಟಾ ಬ್ರಿಕ್ಸ್, ಸ್ಕ್ವೇರ್ ಪಾಯಿಂಟ್, ಟಿಎಸ್ಎಂ, ಪಾಲೊ ಆಲ್ಟೊ ಮತ್ತಿತರ ಕ್ಷೇತ್ರಗಳ ಕಂಪೆನಿಗಳು ಆಫರ್‌ ನೀಡಿವೆ. ಹೈಬ್ರಿಡ್ ಮೋಡ್‌ ವಿಧಾನದಲ್ಲಿ ಸಂಸ್ಥೆಗಳು ಸಂದರ್ಶನಗಳನ್ನು ನಡೆಸುತ್ತಿವೆʼʼ ಎಂದು ಸಂಸ್ಥೆ ತಿಳಿಸಿದೆ.

ವೃತ್ತಿ ಅಭಿವೃದ್ಧಿ ಕೇಂದ್ರ(ಸಿಡಿಸಿ)ದ ಅಧ್ಯಕ್ಷ ಪ್ರೊಫೆಸರ್ ರಾಜೀಬ್ ಮೈಟಿ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಲಭಿಸುವ ಅವಕಾಶಗಳ ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆʼʼ ಎಂದು ಹೇಳಿದ್ದಾರೆ.

ಸಿಡಿಸಿ ಈ ವರ್ಷ ಮೊದಲ ಬಾರಿಗೆ “ಅಕಾಡೆಮಿಯಾ ಇಂಡಸ್ಟ್ರಿ ಕಾನ್‌ಕ್ಲೇವ್‌ (Academia Industry Conclave (AIC) 2023” ಅನ್ನು ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಕಂಪನಿ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಖರಗ್ಪುರ ಐಐಟಿ ನಿರ್ದೇಶಕ ಪ್ರೊಫೆಸರ್ ವಿ.ಕೆ.ತಿವಾರಿ ಮಾತನಾಡಿ, “ಹೆಚ್ಚಿನ ಪ್ರಮುಖ ಕಂಪನಿಗಳು ಆಗಸ್ಟ್‌ನಲ್ಲಿ ಇಂಟರ್ನ್‌ಶಿಪ್‌ಗಾಗಿ ಕ್ಯಾಂಪಸ್‌ಗೆ ಭೇಟಿ ನೀಡಿದ್ದವು. 2023-24ರ ಪದವಿ ಬ್ಯಾಚ್‌ನ ವಿದ್ಯಾರ್ಥಿಗಳು ಈ ಪ್ಲೇಸ್‌ಮೆಂಟ್‌ ಡ್ರೈವ್ ಬಗ್ಗೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಜತೆಗೆ ಕಂಪೆನಿಗಳು ಈ ಸಂಸ್ಥೆಯ ಪ್ರತಿಭೆಯನ್ನು ಬಳಸಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

“ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ನೇಮಕಾತಿ ಪ್ರತಿಕ್ರಿಯೆ ಮೇಲೆ ಪ್ರಭಾವ ಬೀರಿದೆ. ಅದಾಗ್ಯೂ ನಮ್ಮಲ್ಲಿನ ವಿದ್ಯಾರ್ಥಿಗಳು ಮೊದಲ ದಿನವೇ 700ಕ್ಕೂ ಹೆಚ್ಚು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಅದರಲ್ಲೂ ಆರು ವಿದ್ಯಾರ್ಥಿಗಳಿಗೆ 1 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್‌ ಲಭಿಸಿದೆ. 19ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಆಫರ್‌ಗಳನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆʼʼ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸಾದವರಿಗೆ ಗೋಲ್ಡನ್‌ ಚಾನ್ಸ್‌; 540 ಫಾರೆಸ್ಟ್‌ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶಾದ್ಯಂತದ ಐಐಟಿಗಳು ತಮ್ಮ ಪ್ಲೇಸ್‌ಮೆಂಟ್‌ ಡ್ರೈವ್ ಅನ್ನು ಈಗಾಗಲೇ ಪ್ರಾರಂಭಿಸಿವೆ. ದೆಹಲಿ ಐಐಟಿಯ ಸುಮಾರು 480 ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಲಭಿಸಿದೆ. ಗುವಾಹಟಿ ಐಐಟಿ ತನ್ನ ಪ್ಲೇಸ್‌ಮೆಂಟ್‌ ಡ್ರೈವ್‌ನ ಮೊದಲ ದಿನದಂದು 59 ಕಂಪನಿಗಳಿಂದ 164 ಆಫರ್‌ಗಳನ್ನು ಸ್ವೀಕರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ತಂತ್ರಜ್ಞಾನ

Byju’s Debt: ಸಿಬ್ಬಂದಿ ಸಂಬಳಕ್ಕಾಗಿ ಮನೆ ಅಡವಿಟ್ಟ ಬೈಜೂಸ್ ಕಂಪನಿ ಮಾಲಿಕ!

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಕಲಿಕೆಯ ರಂಗದಲ್ಲಿ ಭಾರಿ ಯಶಸ್ಸು ಸಾಧಿಸಿದ್ದ ಕಂಪನಿ, ಕಳೆದ ಒಂದು ವರ್ಷದಲ್ಲಿ ಸಾಲದ ಹೊರೆಯಲ್ಲಿ (Byju’s Debt) ಮುಳುಗಿದೆ.

VISTARANEWS.COM


on

Layoffs: Another 1000 layoffs at Baijus
Koo

ಬೆಂಗಳೂರು: ತಂತ್ರಜ್ಞಾನ ಕಲಿಕೆ ವೇದಿಕೆ ಸ್ಟಾರ್ಟಪ್ (startup) ಬೈಜೂಸ್‌ನ (Byju’s) ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಹಣವನ್ನು ಸಂಗ್ರಹಿಸಲು ತಮ್ಮ ಮನೆ ಮತ್ತು ಅವರ ಕುಟುಂಬ ಸದಸ್ಯರ ಮನೆಗಳನ್ನು ಅಡವಿಟ್ಟಿದ್ದಾರೆ ಎಂದು ತಿಳಿದುಬಂದಿದೆ.‌ ಸದ್ಯ ಬೈಜೂಸ್‌ ಸಾಲದ ಸುಳಿಯಲ್ಲಿ (Byju’s Debt) ತತ್ತರಿಸುತ್ತಿದೆ.

ಅಡವಿಟ್ಟ ಆಸ್ತಿಗಳಲ್ಲಿ ಅವರ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇವೆ. $12 ಮಿಲಿಯ (₹100.07 ಕೋಟಿ) ಸಾಲಕ್ಕೆ ಅಡವಾಗಿ ಇವುಗಳನ್ನು ನೀಡಲಾಗಿದೆ. ಈ ಹಣವು Byju’s ಮಾಲೀಕತ್ವ ಹೊಂದಿರುವ ಕಂಪನಿಯಾದ ಥಿಂಕ್ ಅಂಡ್ ಲರ್ನ್ (Think and Learn) ಪ್ರೈವೇಟ್‌ನಲ್ಲಿರುವ 15,000 ಉದ್ಯೋಗಿಗಳಿಗೆ ಸಂಬಳ ಪಾವತಿಸಲು ರವೀಂದ್ರನ್‌ಗೆ ಸಹಾಯ ಮಾಡಲಿದೆ.

ಕಳೆದ ತಿಂಗಳು ಕಂಪನಿಯು (tech firm) 2022ರ ತನ್ನ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ವರದಿ ಮಾಡಿತ್ತು. 2022ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಅದರ ಪ್ರಮುಖ ಆನ್‌ಲೈನ್ ಶಿಕ್ಷಣ ವ್ಯವಹಾರದಲ್ಲಿ 6% ಅಂದರೆ 24 ಶತಕೋಟಿ ರೂಪಾಯಿ ನಷ್ಟವಾಗಿತ್ತು.

ಜಾರಿ ನಿರ್ದೇಶನಾಲಯ ಬಿಸಿ

ಕಳೆದ ತಿಂಗಳು, ಜಾರಿ ನಿರ್ದೇಶನಾಲಯವು (Enforcement Directorate) ಬೈಜು ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ₹9,362 ಕೋಟಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಮೇಲೆ, ಸರ್ಕಾರಕ್ಕೆ ಆದಾಯದ ನಷ್ಟವನ್ನು ಉಂಟುಮಾಡಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ರವೀಂದ್ರನ್ ಒಳಗೊಂಡಂತೆ ಥಿಂಕ್ ಅಂಡ್ ಲರ್ನ್ ಸಂಸ್ಥೆ “ಭಾರತದ ಹೊರಗೆ ಮಾಡಿದ ಮುಂಗಡ ಹಣ ವಿನಿಮಯದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ. ಭಾರತದ ಹೊರಗೆ ಮಾಡಿದ ರಫ್ತುಗಳ ಆದಾಯವನ್ನು ಅರಿತುಕೊಳ್ಳಲು ವಿಫಲವಾಗಿದ್ದು, ದಾಖಲೆಗಳನ್ನು ವಿಳಂಬಗೊಳಿಸುವ ಮೂಲಕ ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ” ಎಂದು ತನಿಖಾ ಸಂಸ್ಥೆ ಇಡಿ ಆರೋಪಿಸಿದೆ. ಕಂಪನಿಗೆ ಪಡೆದ ಹೂಡಿಕೆ (ಎಫ್‌ಡಿಐ), ಭಾರತದ ಹೊರಗೆ ಕಂಪನಿಯು ಮಾಡಿದ ಪಾವತಿಗಳ ಕುರಿತು ದಾಖಲೆಗಳನ್ನು ಸಲ್ಲಿಸಲು ಸಂಸ್ಥೆ ವಿಫಲವಾಗಿದೆ ಹಾಗೂ ಕಂಪನಿಗೆ ಸ್ವೀಕರಿಸಿದ ಎಫ್‌ಡಿಐಗೆ ಸಂಬಂಧಿಸಿದ ಷೇರುಗಳನ್ನು ಹಂಚಿಕೆ ಮಾಡಲು ವಿಫಲವಾಗಿದೆ.

ನೋಟೀಸ್‌ಗೆ ಪ್ರತಿಕ್ರಿಯಿಸಿರುವ ಬೈಜೂಸ್, “ನೋಟೀಸ್‌ನಲ್ಲಿ ಬಂದಿರುವ ಪ್ರಶ್ನೆಗಳು ಕೇವಲ ತಾಂತ್ರಿಕ ಸ್ವರೂಪದಲ್ಲಿವೆ. ಕಂಪನಿಯು ಎಲ್ಲಾ ಎಫ್‌ಡಿಐಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದೆ. ಕಾನೂನಿನ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಸ್ವೀಕರಿಸಲ್ಪಟ್ಟಿದೆ. ತೆರಿಗೆ ಪಾವತಿ ಮಾಡಿದೆ. ಎಫ್‌ಡಿಐ ಸಂಬಂಧಿತ ಷೇರುಗಳನ್ನು ನಿಗದಿತ ಸಮಯದೊಳಗೆ ವಿತರಿಸಿದೆ” ಎಂದು ಹೇಳಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಕಂಪನಿಯ ಆಡಿಟರ್‌ ಹಾಗೂ ಮೂವರು ಬೋರ್ಡ್‌ ಸದಸ್ಯರು ಸಂಸ್ಥೆ ತೊರೆದಿದ್ದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್‌ ಕಲಿಕೆಯ ರಂಗದಲ್ಲಿ ಭಾರಿ ಯಶಸ್ಸು ಸಾಧಿಸಿದ್ದ ಕಂಪನಿ, ಕಳೆದ ಒಂದು ವರ್ಷದಲ್ಲಿ ಸಾಲದ ಹೊರೆಯಲ್ಲಿ ಮುಳುಗಿದೆ. ಒಂದೆರಡು ತಿಂಗಳ ಹಿಂದೆ ಸುಮಾರು 400 ಸಿಬ್ಬಂದಿಯನ್ನು ಸಂಸ್ಥೆ ಉದ್ಯೋಗದಿಂದ ತೆಗೆದಿತ್ತು.

ಇದನ್ನೂ ಓದಿ: BYJU’s Debt: ಹೆಚ್ಚಿದ ಸಾಲದ ಸುಳಿ; ಬೈಜೂಸ್‌ ಅಂಗಸಂಸ್ಥೆ ಈಗ ಸಾಲ ಕೊಟ್ಟವರ ಪಾಲು!

Continue Reading

ಉದ್ಯೋಗ

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

Teachers Recruitment : ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪ್ರಸ್ತುತ ಖಾಲಿ ಇರುವ ಪೈಕಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

VISTARANEWS.COM


on

Physical Education Teacher
Koo

ಬೆಂಗಳೂರು: ಸತತ 15 ವರ್ಷದಿಂದ ನೇಮಕಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ (Recruitment of Physical Education Teachers) ಈ ಸರ್ಕಾರದ ಅವಧಿಯಲ್ಲಿ ಗುಡ್‌ ನ್ಯೂಸ್‌ ಸಿಗಲಿದೆಯೇ? ಹೌದು ಎನ್ನುತ್ತದೆ ಶಿಕ್ಷಣ ಸಚಿವರ ಉತ್ತರ! ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪ್ರಸ್ತುತ ಖಾಲಿ ಇರುವ ಪೈಕಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು (Teachers Recruitment) ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪದವೀಧರ ಕ್ಷೇತ್ರದ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ಶಿಕ್ಷಣ ಸಚಿವರು ಈ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Karnataka Live News : ಪಿಎಸ್‌ಐ ಪರೀಕ್ಷೆ ಮುಂದೂಡಿಕೆ; ಜ. 23ಕ್ಕೆ ಎಕ್ಸಾಂ ಎಂದ ಗೃಹ ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಸುಮಾರು 17 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಯವರು ಆರೋಪ ಮಾಡುತ್ತಿದ್ದಾರೆ. ಇದು ನಿಜವೇ ಎಂದು ಎಸ್‌.ವಿ. ಸಂಕನೂರ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ 2008ನೇ ಸಾಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ 2014-15ನೇ ಸಾಲಿಗೆ 148 ಹುದ್ದೆಗಳಿಗೆ ನೇಮಿಸಿಕೊಳ್ಳಲಾಗಿದೆ ಎಂದು ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 41913 ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ಮಂಜೂರಾದ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 6772 ಆಗಿದೆ. ಆದರೆ, ಕಾರ್ಯನಿರತ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು 4127 ಆಗಿದೆ. ಹೀಗಾಗಿ ಇದರಲ್ಲಿ 2120 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದು, ಆ ಇಲಾಖೆಯ ಸಮಾಲೋಚನೆಯಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪ್ರೌಢಶಾಲೆಯಲ್ಲಿ ನೇಮಕಕ್ಕೆ ಸಚಿವರು ಹೇಳಿದ್ದೇನು?

ಇನ್ನು ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 4844 ಸರ್ಕಾರಿ ಪ್ರೌಢ ಶಾಲೆಗಳು ಇವೆ. ಇದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಮಂಜೂರಾದ ಹುದ್ದೆ 5210 ಆಗಿದೆ. ರಾಜ್ಯ ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ 1 ಶಿಕ್ಷಕರ ಕಾರ್ಯನಿರತ ಹುದ್ದೆಗಳ ಸಂಖ್ಯೆ 3589 ಆಗಿದೆ.

ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ವೃಂದದ ದೈಹಿಕ ಶಿಕ್ಷಣ ಶಿಕ್ಷಕರ 200 ಹುದ್ದೆಗಳು ಸೇರಿ ಒಟ್ಟು 2500 ಶಿಕ್ಷಕರುಗಳ ಹುದ್ದೆಗಳನ್ನು 15000 ಪದವೀಧರ ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿರುತ್ತದೆ.

ಆದರೆ, ಸದರಿ 15000 ಹುದ್ದೆಗಳಲ್ಲಿ ಪ್ರೌಢಶಾಲಾ ಶಿಕ್ಷಕರುಗಳ ನೇಮಕಾತಿಗೆ 1648 ಹುದ್ದೆಗಳು ಮಾತ್ರ ಉಳಿದಿರುವ ಪ್ರಯುಕ್ತ ಪ್ರಸ್ತುತ ಸಾಲಿನಲ್ಲಿ 200 ದೈಹಿಕ ಶಿಕ್ಷಕರ ಹುದ್ದೆಯು ಸೇರಿದ್ದು ಒಟ್ಟು 2500 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿಯಿಂದ ತೆರವಾಗಿರುವ ದೈಹಿಕ ಶಿಕ್ಷಣ ಉಪನ್ಯಾಸಕರನ್ನು ಮಾಡಿಕೊಳ್ಳದಂತೆ ನೇಮಕಾತಿ ಆರ್ಥಿಕ ಇಲಾಖೆಯಿಂದ ಟಿಪ್ಪಣಿ ರೂಪದಲ್ಲಿ ಆದೇಶ ಬಂದಿದೆಯೇ? ಹಾಗಿದ್ದಲ್ಲಿ, ಈ ಕುರಿತು ಸರ್ಕಾರ ಕೈಗೊಂಡ ಕ್ರಮವೇನು? ಎಂದು ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: Belagavi Winter Session: ಸದನದಲ್ಲಿ ಮುಟ್ಟಿನ ಶುಚಿತ್ವ ಚರ್ಚೆ; ಜನವರಿಯಿಂದ ಶಾಲೆಗಳಿಗೆ ನ್ಯಾಪ್‌ಕಿನ್‌

ಇಲ್ಲಿ ಪಿಡಿಎಫ್‌ ಪ್ರತಿಯನ್ನು ಲಗತ್ತಿಸಿದ್ದು, ಡೌನ್‌ಲೋಡ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಪಡೆದುಕೊಳ್ಳಬಹುದು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದೈಹಿಕ ಶಿಕ್ಷಣ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಂತೆ ಆರ್ಥಿಕ ಇಲಾಖೆಯು ಯಾವುದೇ ನಿರ್ಬಂಧವನ್ನು ವಿಧಿಸಿರುವುದಿಲ್ಲ. ಆದರೆ, ಆರ್ಥಿಕ ಇಲಾಖೆಯು ದಿನಾಂಕ:14/06/2023ರಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆಗೆ ಪ್ರಸ್ತುತ ಇರುವ 120 ವಿದ್ಯಾರ್ಥಿಗಳ ಕಾರ್ಯಭಾರದ ಮಾನದಂಡವನ್ನು 500 ವಿದ್ಯಾರ್ಥಿಗಳಿಗೆ ಹೆಚ್ಚಿಸಲು ನಿರ್ಣಯಿಸುವಂತೆ ಆರ್ಥಿಕ ಇಲಾಖೆಯು ಸಲಹೆ ನೀಡಿದ್ದು, ಈ ಬಗ್ಗೆ ಸರ್ಕಾರದಲ್ಲಿ ಪರಿಶೀಲನೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.

Continue Reading

ಕರ್ನಾಟಕ

Vijayanagara News: ಹೊಸಪೇಟೆಯಲ್ಲಿ ವಿಸ್ತಾರ ನ್ಯೂಸ್‌ ಬೆಸ್ಟ್ ಟೀಚರ್‌ ಅವಾರ್ಡ್ ಕಾರ್ಯಕ್ರಮಕ್ಕೆ ಚಾಲನೆ

Vijayanagara News: ವಿಸ್ತಾರ ನ್ಯೂಸ್‌ ವತಿಯಿಂದ ಬೆಸ್ಟ್‌ ಟೀಚರ್‌ ಅವಾರ್ಡ್‌ ನೀಡುತ್ತಿರುವುದು ಸಂತಸದ ಸಂಗತಿ. ಇದು ಸಾಮಾಜಿಕ ಕಳಕಳಿಯ ಪ್ರತೀಕ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಶ್ಲಾಘಿಸಿದರು.

VISTARANEWS.COM


on

Vistara News Best Teacher Award 2023 programme inaugurated by Vijayanagara DC M.S. Diwakar at hosapete
ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ವಿಸ್ತಾರ ನ್ಯೂಸ್‌ ಬೆಸ್ಟ್ ಟೀಚರ್‌ ಅವಾರ್ಡ್ 2023 ಕಾರ್ಯಕ್ರಮವನ್ನು ವಿಜಯನಗರ ಡಿಸಿ ಎಂ.ಎಸ್. ದಿವಾಕರ್‌, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
Koo

ವಿಜಯನಗರ/ಕೊಪ್ಪಳ: ವಿಸ್ತಾರ ನ್ಯೂಸ್‌ ಬೆಸ್ಟ್ ಟೀಚರ್‌ ಅವಾರ್ಡ್ 2023 (Vistara News Best Teacher Award 2023) ರ ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ, ಕೊಪ್ಪಳ ತಾಲೂಕು ಭಾಗ್ಯನಗರದ ನ್ಯಾಷನಲ್ ಸ್ಕೂಲ್, ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆ ಮತ್ತು ಕೊಟ್ಟೂರು ತಾಲೂಕಿನ ಹಾರಕನಾಳದ ದ ಪ್ರಿಸ್ಟೀನ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಸ್ತಾರ ನ್ಯೂಸ್‌ ವತಿಯಿಂದ ಬೆಸ್ಟ್‌ ಟೀಚರ್‌ ಅವಾರ್ಡ್‌ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ. ಇದು ಸಾಮಾಜಿಕ ಕಳಕಳಿಯ ಪ್ರತೀಕ ಎಂದು ತಿಳಿಸಿದರು. ಶಿಕ್ಷಕರ ಹುದ್ದೆಯು ಅತ್ಯಂತ ಪವಿತ್ರ ಹಾಗೂ ಗೌರವಯುತವಾದದ್ದು ಎಂದು ಹೇಳಿದರು.

ಇದನ್ನೂ ಓದಿ: Masala Tea: ಚಳಿಗಾಲವೆಂದು ಅತಿಯಾಗಿ ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ತಮ್ಮ ತಂದೆಯವರು ಸಹ ಶಿಕ್ಷಕರಾಗಿದ್ದರು. ಈ ಕಾರ್ಯಕ್ರಮಕ್ಕೆ ಬರಲು ಅದೇ ಪ್ರೇರಣೆಯಾಗಿದೆ. ಶಿಕ್ಷಕರ ವೃತ್ತಿ ಗೌರವಯುತ ವೃತ್ತಿ. ಪ್ರತಿಯೊಬ್ಬ ವ್ಯಕ್ತಿಯ, ಸಾಧಕನ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಹಂತದಲ್ಲಿ ಗೌರಮ್ಮ ಎಂಬ ಶಿಕ್ಷಕರು ತಮಗೆ ಪ್ರೋತ್ಸಾಹ ಹಾಗೂ ಪ್ರೇರಣೆಯಾಗಿದ್ದರು ಎಂದು ತಮ್ಮ ಬಾಲ್ಯದಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು ಇದೇ ವೇಳೆ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೊಸಪೇಟೆಯ ಕೊಟ್ಟೂರು ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಸಾಧನೆ ಮಾಡಲು ಗುರು ಅಥವಾ ಶಿಕ್ಷಕರ ಮಾರ್ಗದರ್ಶನವಿರುತ್ತದೆ. ಅವರ ಪ್ರೇರಣೆ ಇರುತ್ತದೆ. ಸಾಧಕರ ಸಾಧನೆ ಹಿಂದೆ ಒಬ್ಬ ಗುರುವಿರುತ್ತಾನೆ. ಗುರುವಿಲ್ಲದೆ ಏನೂ ಇಲ್ಲ. ಅಂತಹ ಗುರುಗಳನ್ನು ಅಥವಾ ಶಿಕ್ಷಕರನ್ನು ಗುರುತಿಸಿ, ಗೌರವಿಸುತ್ತಿರುವ ವಿಸ್ತಾರ ನ್ಯೂಸ್‌ನ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ದಿಢೀರನೆ 40 ರೂ. ಏರಿಕೆ; ಇಷ್ಟಿದೆ ಇಂದಿನ ದರ

ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕಿನ ಭಾಗ್ಯನಗರದ ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕ ಪ್ರಹ್ಲಾದ ಅಗಳಿ ಮಾತನಾಡಿ, ಸಮಾಜದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧಕರು ಇದ್ದಾರೆ. ನಿಜವಾದ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ವಿಸ್ತಾರ ನ್ಯೂಸ್ ಮಾಡುತ್ತಿದೆ. ಖಾಸಗಿ ಶಾಲೆಯ ಶಿಕ್ಷಕರನ್ನೂ ಗುರುತಿಸಿ ಅವರಿಗೂ ಗೌರವ ಸಲ್ಲಿಸುತ್ತಿರುವುದಕ್ಕೆ ವಿಸ್ತಾರ ನ್ಯೂಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ.

ಪ್ರತಿವರ್ಷ 88 ಲಕ್ಷ ಜನ ಪದವೀಧರರಾಗುತ್ತಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯೂ ಸ್ಮರಣೀಯ ಸೇವೆ. ಶೈಕ್ಷಣಿಕ ಸಾಧನೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯೂ ಸಿಂಹಪಾಲು ಇದೆ. ಶಿಕ್ಷಣ ಪದ್ದತಿಯನ್ನು ಬದಲಾಯಿಸುವ ಹಕ್ಕನ್ನು ರಾಜಕಾರಣಿಗಳಿಗೆ ನೀಡದೆ ಅಧಿಕಾರಿಗಳಿಗೆ, ಆ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ನೀಡಬೇಕು ಎಂದು ತಿಳಿಸಿದರು.

ಉದ್ಯಮಿ ಶ್ರೀನಿವಾಸ ರೆಡ್ಡಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಗೆ ಆಯ್ಕೆಯಾದ ಕಾರಟಗಿ ತಾಲೂಕಿನ ಸೋಮನಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಕಂಠಿ, ಕುಷ್ಟಗಿ ತಾಲೂಕಿನ ಎಂ.ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ‌ ಸಹ ಶಿಕ್ಷಕ ರಾಜು ಬಿ. ರಾಠೋಡ, ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ರೋಟರಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗುರುಸ್ವಾಮಿ ಆರ್., ಯಲಬುರ್ಗಾ ತಾಲೂಕಿನ ಬುಕನಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶಂಕ್ರಪ್ಪ ಇಂಗಳದಾಳ, ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ ಶಿಕ್ಷಕಿ ನಾದಿರಾ ಬೇಗಂ, ಕೊಪ್ಪಳದ ಭಾಗ್ಯನಗರದ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್‌ನ ಮುಖ್ಯಗುರು ಕಲ್ಪನಾ ವಿಜಯಕುಮಾರ್, ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನಿರಂಜನ್ ಪಿ.ಜೆ., ಕೂಡ್ಲಿಗಿ ತಾಲೂಕಿನ ಗಜಾಪುರದ ಸಿಆರ್‌‌ಪಿ ಸಂದೀಪ್ ಬಿ., ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದ ಸರ್‌‌‌.ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯ ಮುಖ್ಯಗುರು ಜಾವಿದ್‌ ಜಿ. ಹಾಲಗಿ ಅವರಿಗೆ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌-2023 ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ 2023 ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಕಾರ್ಯಕ್ರಮದಲ್ಲಿ ಕಲಾವಿದ ಶ್ರೀ ಮಾರುತಿರಾವ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ವಿಜಯನಗರ ಜಿಲ್ಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ವಿಜಯನಗರ ಜಿಲ್ಲೆ ಇವರ ಸಹಕಾರದಲ್ಲಿ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂತು.

ಇದನ್ನೂ ಓದಿ: Actor Yash: ಸಿಹಿ ಸುದ್ದಿ ಕೊಟ್ಟೇ ಬಿಟ್ರು ರಾಕಿಂಗ್‌ ಸ್ಟಾರ್‌ ಯಶ್‌; ಟೈಟಲ್ ಅನೌನ್ಸ್‌ಗೆ ಮುಹೂರ್ತ ಫಿಕ್ಸ್!

ಈ ಸಂದರ್ಭದಲ್ಲಿ ಬಿಇಒ ಚನ್ನಬಸಪ್ಪ, ಹೊಳಲು ಗ್ರಾಮದ ಸರ್‌‌‌.ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯ ನಿರ್ದೇಶಕ ಎಂ.ಎಂ. ಹಾಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಸ್ತಾರ ನ್ಯೂಸ್‌ನ ಬಳ್ಳಾರಿ ಬ್ಯೂರೊ ಮುಖ್ಯಸ್ಥ ಶಶಿಧರ ಮೇಟಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರೀನಾ ನಂದನ್ ಹಾಗೂ ಕವಿತಾ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ನಿರೂಪಿಸಿದರು.

Continue Reading
Advertisement
Heavy Rain warning In karnataka
ಉಡುಪಿ42 mins ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ1 hour ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್1 hour ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Vistara News impact, Governmet to scrap 7 d rule of SCSP and TSP act
ಕರ್ನಾಟಕ8 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್8 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್8 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ8 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check9 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20239 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ13 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ13 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ19 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌