Women's Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ! - Vistara News

ಪರಿಸರ

Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

ಕೃಷಿ ಹಾಗೂ ಗಾರ್ಡನಿಂಗ್‌ನಲ್ಲಿ ಆಸಕ್ತಿಯಿರುವ ಮಂದಿ ನೀವಾದರೆ ನಿಮಗೊಂದು ಆಸಕ್ತಿದಾಯಕ ಕತೆ ಇಲ್ಲಿದೆ. 26 ವರ್ಷದ ಹೈದರಾಬಾದ್‌ ಮೂಲದ ಮಹಿಳೆಯೊಬ್ಬರ (Women’s Day) ಹೊಸ ಆವಿಷ್ಕಾರದ ಕತೆಯಿದು.

VISTARANEWS.COM


on

Womens Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷಿ ಹಾಗೂ ಗಾರ್ಡನಿಂಗ್‌ನಲ್ಲಿ ಆಸಕ್ತಿಯಿರುವ ಮಂದಿ ನೀವಾದರೆ ನಿಮಗೊಂದು ಆಸಕ್ತಿದಾಯಕ ಕತೆ ಇಲ್ಲಿದೆ. 26 ವರ್ಷದ ಹೈದರಾಬಾದ್‌ ಮೂಲದ ಮಹಿಳೆಯೊಬ್ಬರ (Women’s Day) ಹೊಸ ಆವಿಷ್ಕಾರದ ಕತೆಯಿದು. ಅಷ್ಟೇ ಅಲ್ಲ, ನಿತ್ಯವೂ ಭೂಮಿ ಮೇಲೆ ರಾಶಿ ಕಸ ಸುರಿಯುವ ಎಲ್ಲರೂ ತಿಳಿದುಕೊಳ್ಳಬೇಕಾದ ಕತೆಯಿದು. ಎಲ್ಲರೂ ಪರಿಸರದ ಬಗ್ಗೆ, ನಾವಿರುವ ಸುತ್ತಮುತ್ತಲ ಪ್ರದೇಶದ ಬಗ್ಗೆಯಾದರೂ ಕೊಂಚ ಆಸಕ್ತಿ ವಹಿಸಿ ಕಸದ ವಿಲೇವಾರಿಯ ಬಗ್ಗೆ ಪಾವನಿ ಲೊಲ್ಲಾರಿಂದ ಪ್ರೇರಣೆ ಪಡೆಯಬೇಕಿದೆ.

Pavani Lolla

ನಿತ್ಯವೂ ನಾವು ಸುರಿದ ಒಂದಿಷ್ಟು ಕಸ ಮಣ್ಣಲ್ಲಿ ಮಣ್ಣಾಗಿ ಹೋಗುತ್ತವೆ. ಇನ್ನೊಂದಿಷ್ಟು ಕಸ ಹಾಗೆಯೇ ವರ್ಷಾನುಗಟ್ಟಲೆ ಕರಗದೆ ಉಳಿಯುತ್ತವೆ. ತ್ಯಾಜ್ಯಗಳ ವಿಲೇವಾರಿಯ ಬಗ್ಗೆ ನಾವು ಅಷ್ಟಾಗಿ ಗಮನ ಹರಿಸುವುದೇ ಇಲ್ಲ. ನಮ್ಮ ಮನೆಯ ಕಸವನ್ನೂ ನಾವು ಸಮರ್ಪಕವಾಗಿ ಬಳಕೆ ಮಾಡುವುದಿಲ್ಲ. ಜೈವಿಕ ತ್ಯಾಜ್ಯಗಳನ್ನು ನಾವು ಸಮರ್ಪಕವಾಗಿ ಬಳಕೆ ಮಾಡಿದರೆ, ನಮ್ಮದೇ ಮನೆಯ ಗಿಡಗಳಿಗೆ ಆಹಾರ ನೀಡಬಹುದು. ಅವುಗಳಲ್ಲಿ ಹೂವರಳಿ ನಳನಳಿಸುವುದನ್ನು ನೋಡಬಹುದು.

ಹೌದು. ಮೇಲ್ನೋಟಕ್ಕೆ ಸಣ್ಣ ವಿಚಾರವಾಗಿ ಕಂಡರೂ, ಇದು ಸದ್ಯದ ಅಗತ್ಯ ಕೂಡಾ. ಮನೆಯ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಬದಲಾಯಿಸಲು ಸಾಮಾನ್ಯವಾಗಿ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ, ಈಕೆ ಕಂಡು ಹಿಡಿದ ʻವಪ್ರಾʼ ಎಂಬ ವಾಸನೆ ರಹಿತ ಜೈವಿಕ ಗೊಬ್ಬರ ಯಂತ್ರದ ಮೂಲಕ ನೀವು ಒಂದೇ ವಾರದಲ್ಲಿ ನಿಮ್ಮ ಮನೆಯ ಕಿಚನ್‌ನ ಜೈವಿಕ ಕಸವನ್ನು ನಿಮ್ಮದೇ ಮನೆಯ ಗಿಡಗಳಿಗೆ ಗೊಬ್ಬರವನ್ನಾಗಿ ಪರಿವರ್ತಿಸಬಹುದು!

ಹೈದರಾಬಾದ್‌ನ ವಿಜ್ಞಾನ ಭಾರತಿ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಸಂದರ್ಭ ಪಾವವಿ ಲೊಲ್ಲ ಅಲ್ಲಿನ ಇಕೋ ಕ್ಲಬ್‌ನ ಸದಸ್ಯರಾಗಿದ್ದರಂತೆ. ಅಲ್ಲಿನ ವಿದ್ಯಾರ್ಥಿಗಳ ಈ ಕ್ಲಬ್‌ ಮೂಲಕ ಸುತ್ತಮುತ್ತಲ ಪ್ರದೇಶಗಳಲ್ಲಿ ಕಸ ವಿಲೇವಾರಿ, ಸ್ವಚ್ಛತೆ ಅಭಿಯಾನ, ಪರಿಸರ ಸಂರಕ್ಷಣೆ ಇತ್ಯಾದಿಗಳ ಕಾಳಜಿ ವಹಿಸುತ್ತಿತ್ತು. ಇದೇ ಸಂದರ್ಭ ಹತ್ತಿರದ ಹಳ್ಳಿಯೊಂದರಲ್ಲಿ, ನಮ್ಮ ಮನೆಯ ಕಸದ ವಿಲೇವಾರಿ ಹೇಗೆ ಎಂಬ ವಿಚಾರದ ಬಗ್ಗೆ ಹಳ್ಳಿಗರಿಗೆ ಅರಿವು ಮೂಡಿಸುವ ಸಂದರ್ಭ ಮನೆಯಲ್ಲೇ ಸುಲಭವಾಗಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರವನ್ನು ನಾವೇ ಏಕೆ ಮಾಡಬಾರದು ಎಂಬ ಯೋಚನೆ ಪಾವನಿ ಅವರಿಗೆ ಬಂತಂತೆ. ಅಂತಿಮ ವರ್ಷದ ಪದವಿ ಸಂದರ್ಭ ಆಕೆಗೆ ಈ ಯೋಚನೆ ಇನ್ನೂ ಬಲವಾಯಿತಂತೆ. ಹಳ್ಳಿಗಳಿಗೆ ಭೇಟಿ ಕೊಟ್ಟಾಗಲೆಲ್ಲ ಅಲ್ಲಿನ ಮನೆಗಳ ಅಷ್ಟೂ ಜೈವಿಕ ತ್ಯಾಜ್ಯಗಳು, ಅಲ್ಲೇ ಪಕ್ಕದಲ್ಲಿ ರಾಶಿ ಗುಡ್ಡೆ ಹಾಕಿ, ತ್ಯಾಜ್ಯವಾಗಿಯೇ ಇರುವುದನ್ನು ಕಂಡ ಪಾವನಿ ಅವರಿಗೆ, ಈ ಸಮಸ್ಯೆಗೆ ಉತ್ತರ ಹುಡುಕಲೇ ಬೇಕು ಎಂಬ ಯೋಚನೆ ಬಲವಾಯಿತಂತೆ.

Kitchen waste

ಹೀಗೊಂದು ಯೋಚನೆ ತಲೆಯಲ್ಲಿ ಹುಟ್ಟಿದ ಮೇಲೆ ಪಾವನಿ ಹಿಂದೆ ಮುಂದೆ ನೋಡಲಿಲ್ಲ. ತನ್ನ ಕನಸಿನ ಯಂತ್ರ ಕಂಡು ಹಿಡಿದೇ ಬಿಟ್ಟರು. 2020ರಲ್ಲಿ ತಾನು ಕಂಡು ಹಿಡಿದ ಈ ಯಂತ್ರವನ್ನು ಮನೆಮನೆಗೂ ತಲುಪಿಸುವ ಉದ್ದೇಶದಿಂದ ತನ್ನಿಬ್ಬರು ಗೆಳೆಯರಾದ ಮಹೇಶ್‌ ಯು ಹಾಗೂ ಸಿದ್ಧೇಶ್‌ ಸಾಕೋರೆ ಜೊತೆಗೆ ಸೇರಿ ಫ್ಯೂಚರ್‌ ಸ್ಟೆಪ್ಸ್‌ ಎಂಬ ಸಂಸ್ಥೆಯನ್ನೂ ಕಟ್ಟಿದರು. ಆ ಮೂಲಕ ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಈ ಯಂತ್ರವನ್ನು ರವಾನಿಸಿದ್ದಾರೆ. ಈಗಾಗಲೇ ಇಂತಹ ಆರು ಸಾವಿರ ಯಂತ್ರಗಳನ್ನು ಇವರು ಮಾರಾಟ ಮಾಡಿದ್ದಾರೆ.

ಈಕೆ ಹೇಳುವಂತೆ, ಶೇ. 60ರಷ್ಟು ಕಸವೆಲ್ಲವೂ ಮನೆಗಳಿಂದ ಹೊರಬೀಳುವ ಜೈವಿಕ ತ್ಯಾಜ್ಯವೇ ಆಗಿದೆ. ಇವೆಲ್ಲವೂ ಯಾವ ಉಪಯೋಗಕ್ಕೂ ಬರದೆ,ಕೊನೆಗೆ ಇದರಿಂದ ಮಿಥೇನ್‌ ಗ್ಯಾಸ್‌ ಉತ್ಪಾದನೆಯಾಗಿ ಅದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಇನ್ನೊಂದೆಡೆ, ನಗರಗಳಲ್ಲಿ ಬಹಳ ಮಂದಿ ತಮ್ಮ ಟೆರೇಸ್‌ ಗಾರ್ಡನ್‌ಗೆ ಅಥವಾ ಉದ್ಯಾನಗಳಿಗೆ ಗೊಬ್ಬರಗಳನ್ನು ಖರೀದಿಸಬೇಕಾಗುತ್ತದೆ. ಬಹಳಷ್ಟು ಮಂದಿ ತಮ್ಮ ಮನೆಗಳಲ್ಲಿ ತಮ್ಮದೇ ತ್ಯಾಜ್ಯಗಳಿಂದ ಗೊಬ್ಬರ ಮಾಡಬೇಕು ಎಂದುಕೊಂಡರೂ ಅವರ ಕೈಯಲ್ಲಿ ಸಾಧ್ಯವಾಗುವುದಿಲ್ಲ. ಕಾರಣ ಇದರ ಕಷ್ಟದಾಯಕ ಪ್ರಕ್ರಿಯೆ. ಸುಮಾರು 50-60 ದಿನಗಳ ದೀರ್ಘ ಕಾಲ ಇವು ತೆಗೆದುಕೊಳ್ಳುವುದರಿಂದ ಸಾಕಷ್ಟು ಮಂದಿ ಕೈಚೆಲ್ಲುತ್ತಾರೆ. ಇವೆಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಬೇಗನೆ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವಂತೆ ಏನಾದರೂ ಯಂತ್ರವನ್ನು ಕಂಡುಹಿಡಿಯಲೇಬೇಕು ಅನಿಸಿತು ಎನ್ನುತ್ತಾರೆ.

ಈಕೆಯ ಈ ಯಂತ್ರ ಪ್ರತಿನಿತ್ಯವೂ ಒಂದು ಕೆಜಿ ಕಸದ ಸಾಮರ್ಥ್ಯ ಹೊಂದಿದೆ. ಬಾಲ್ಕನಿಗಳಲ್ಲಿ ಗಾರ್ಡನ್‌ ಇಟ್ಟುಕೊಂಡಿರುವವರಿಗೆ ಹೇಳಿ ಮಾಡಿಸಿದ್ದು. ಇದೊಂದು ಕಸದ ತೊಟ್ಟಿಯ ಹಾಗೆ. ಜೈವಿಕವಾದ ಯಾವುದೇ ಕಸವನ್ನು ಇದಕ್ಕೆ ಹಾಕಬಹುದು. 3,500 ರೂಪಾಯಿಗಳ ಈ ಯಂತ್ರವನ್ನು ನೀವು ಖರೀದಿಸಿದರೆ ಅದರ ಜೊತೆಗೆ ಒಂದು ಗ್ರೀನ್‌ ಮಿಕ್ಸ್‌ ಪೌಡರನ್ನೂ ಪಡೆಯಬಹುದು. ಒಂದು ತಿಂಗಳಲ್ಲಿ 30 ಕೆಜಿ ವಾಸನೆ ರಹಿತ ಗೊಬ್ಬರವನ್ನು ಇದರ ಮೂಲಕ ತಯಾರಿಸಬಹುದು ಎನ್ನುತ್ತಾರೆ.

ಇದನ್ನೂ ಓದಿ: Cooking Tips: ಪಾಸ್ತಾ, ಮ್ಯಾಕ್ರೋನಿ ಬೇಯಿಸುವಾಗ ಅಂಟುತ್ತವೆಯೋ? ಹಾಗಾದರೆ ಇಲ್ಲಿವೆ ಟಿಪ್ಸ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Most Expensive Insect: ಈ ಕೀಟ ನಿಮ್ಮ ಬಳಿ ಇದ್ದರೆ 75 ಲಕ್ಷ ರೂ. ಸಿಗಬಹುದು!

ವಿಶ್ವದಲ್ಲಿ ಅತ್ಯಂತ ಬೆಲೆಬಾಳುವ (Most Expensive Insect) ಕೀಟವೊಂದಿದೆ ಎಂದು ಕೇಳಿದರೆ ಆಶ್ಚರ್ಯವಾಗಬಹುದು. ಆದರೆ ಇದರ ಬೆಲೆ ಕೇಳಿದರೆ ಎಲ್ಲರೂ ದಂಗಾಗುವುದು ಖಚಿತ. ಅಂತಹ ವಿಶೇಷ ಏನಿದೆ ಈ ಕೀಟದಲ್ಲಿ, ಇದು ಎಲ್ಲಿರುತ್ತೆ, ಹೇಗಿರುತ್ತೆ ಎಂದು ತಿಳಿಯುವ ಕುತೂಹಲ ಈಗಾಗಲೇ ಮನದಲ್ಲಿ ಮೂಡಿರಬಹುದು. ಆ ಕೀಟದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Most Expensive Insect
Koo

ಒಂದೇ ಒಂದು ಪುಟ್ಟ ಕೀಟದ ಬೆಲೆ (Most Expensive Insect) ಬರೋಬ್ಬರಿ 75 ಲಕ್ಷ ರೂ. ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಹೌದು ಇದು ವಿಶ್ವದ (world) ಅತ್ಯಂತ ಬೆಲೆಬಾಳುವ ಕೀಟಗಳಲ್ಲಿ ಒಂದು. ಇದನ್ನು ‘ಸ್ಟಾಗ್ ಬೀಟಲ್’ (stag beetle) ಅಥವಾ ಸಾರಂಗ ಜೀರುಂಡೆ ಎಂದು ಕರೆಯುತ್ತಾರೆ. ಈ ಕೀಟ ಇಷ್ಟು ದುಬಾರಿ ಯಾಕೆಂದರೆ ಅದರ ಕುರಿತಾದ ವಿಶೇಷ ನಂಬಿಕೆಯಿಂದ.

ಸಾರಂಗ ಜೀರುಂಡೆಯ ವಿಶೇಷ ಏನೆಂದರೆ ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾರಂಗ ಜೀರುಂಡೆಗಳು ತುಂಬಾ ದುಬಾರಿಯಾಗಿವೆ. ಸಾರಂಗ ಜೀರುಂಡೆಯನ್ನು ಹೊಂದಿದ್ದರೆ ಬಹುಬೇಗನೆ ಶ್ರೀಮಂತಿಕೆ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದೇ ಕೆಲವರು ನಂಬುತ್ತಾರೆ.

ಸೈಂಟಿಫಿಕ್ ಡೇಟಾ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಈ ಕೀಟಗಳು ಅರಣ್ಯ ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು ರೂಪಿಸುತ್ತವೆ. ಅವುಗಳ ವಿಸ್ತರಿಸಿದ ದವಡೆಗಳು ಪುರುಷ ಜಾತಿಯಲ್ಲಿ ಬಹುರೂಪತೆಗೆ ಹೆಸರುವಾಸಿಯಾಗಿದೆ.


ಎಲ್ಲಿ ಕಾಣಬಹುದು?

ಸಾರಂಗ ಜೀರುಂಡೆಗಳು ಶೀತ ತಾಪಮಾನದಿಂದ ದೂರವಿರುತ್ತವೆ. ಅವುಗಳು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸ್ವಭಾವತಃ ಕಾಡುಪ್ರದೇಶಗಳಲ್ಲಿ ಕಾಣಸಿಗುತ್ತವೆ. ಆದರೆ ಅವುಗಳನ್ನು ಕೆಲವೊಂದು ಉದ್ಯಾನವನಗಳಲ್ಲಿ ಕಾಣಬಹುದು. ಸತ್ತ ಮರ, ಮುಳ್ಳುಗಿಡಗಳು ಮತ್ತು ಸಾಂಪ್ರದಾಯಿಕ ತೋಟಗಳು ಅವುಗಳ ಆಶ್ರಯತಾಣವಾಗಿರುತ್ತದೆ.

ಏನು ತಿನ್ನುತ್ತದೆ?

ಸಾರಂಗ ಜೀರುಂಡೆಗಳಿಗೆ ಮುಖ್ಯ ಆಹಾರ ಮೂಲವೆಂದರೆ ಸಿಹಿ ದ್ರವಗಳು. ಉದಾಹರಣೆಗೆ ಮರದ ರಸ ಮತ್ತು ಕೊಳೆಯುತ್ತಿರುವ ಹಣ್ಣಿನ ರಸ. ಅದರ ಪ್ರಾಥಮಿಕ ಶಕ್ತಿಯ ಮೂಲವೆಂದರೆ ಅದು ಲಾರ್ವಾಗಳಾಗಿದ್ದಾಗ ಸಂಗ್ರಹಿಸಿದ ಶಕ್ತಿಯೇ ಆಗಿರುತ್ತದೆ. ಸಾರಂಗ ಜೀರುಂಡೆಗಳು ಆರೋಗ್ಯಕರ ಸಸ್ಯಗಳಿಗೆ ಏನೂ ಮಾಡುವುದಿಲ್ಲ. ಯಾಕೆಂದರೆ ಅವು ಸತ್ತ ಮರವನ್ನು ಮಾತ್ರ ತಿನ್ನುತ್ತವೆ.


ಇದನ್ನೂ ಓದಿ: Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

ಆಯಸ್ಸು

ಲಂಡನ್‌ನಲ್ಲಿರುವ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಈ ಕೀಟಗಳು ಸಾಮಾನ್ಯವಾಗಿ 2 ರಿಂದ 6 ಗ್ರಾಂ ತೂಕವಿರುತ್ತವೆ. ಸರಾಸರಿ 3 ರಿಂದ 7 ವರ್ಷಗಳವರೆಗೆ ಬದುಕುತ್ತವೆ. ಹೆಣ್ಣು 30- 50 ಮಿಮೀ ಉದ್ದವಿದ್ದರೆ, ಗಂಡು 35- 75 ಮಿಮೀ ಉದ್ದವಿರುತ್ತದೆ.

ಕೊಂಬನ್ನು ಹೋಲುವ ಗಂಡು ಸಾರಂಗ ಜೀರುಂಡೆಯ ವೈಶಿಷ್ಟ್ರ್ಯವೆಂದರೆ ಅದರ ದವಡೆಗಳು. ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಸಾರಂಗ ಜೀರುಂಡೆಗಳು ತಮ್ಮ ವಿಶಿಷ್ಟವಾದ ಕೊಂಬಿನಂತಹ ದವಡೆಗಳನ್ನು ಬಳಸಿಕೊಂಡು ಹೆಣ್ಣು ಸಂಗಾತಿಯಾಗುವ ಅವಕಾಶಕ್ಕಾಗಿ ಪರಸ್ಪರ ಸ್ಪರ್ಧಿಸುತ್ತವೆ.

Continue Reading

ತುಮಕೂರು

Shira News: ಶಿರಾದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಟಿ.ಬಿ.ಜಯಚಂದ್ರ ಚಾಲನೆ

Shira News: ಶಿರಾ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶನಿವಾರ ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಶಿರಾ ಶಾಸಕ ಟಿ.ಬಿ. ಜಯಚಂದ್ರ ಚಾಲನೆ ನೀಡಿದರು.

VISTARANEWS.COM


on

Vanamahotsava Programme at Shira
Koo

ಶಿರಾ: ಅರಣ್ಯ ಇಲಾಖೆಯ ವತಿಯಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಶನಿವಾರ (Shira News) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ವ್ಯಾಪಕವಾಗಬೇಕು ಎಂದು ತಿಳಿಸಿದರು.

ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಹೇಳಿದರು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

ಗಿಡ ಮರಗಳು ಮಾನವನ ಜೀವನಾಡಿಗಳು. ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವುದರ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು. ಪರಿಸರ ಅಸಮತೋಲನ ತಪ್ಪಿಸಲು ಹೆಚ್ಚು ಗಿಡಮರಗಳನ್ನು ಬೆಳೆಸಿ, ಕಾಡುಗಳನ್ನು ಸಂರಕ್ಷಿಸಿದರೆ ಮಾತ್ರ ಭವಿಷ್ಯದಲ್ಲಿ ಎಲ್ಲರೂ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೇಯ ಜೆ. ಗಾದ, ಆರ್‌ಎಫ್‌ಒ ನವನೀತ್, ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾಗರಾಜ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.

Continue Reading

ಪರಿಸರ

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Cheetah Safari: ಬೆಂಗಳೂರಿನಲ್ಲೇ ಇರುವ, ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ ಆರಂಭಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Cheetah Safari
Koo

ಬೆಂಗಳೂರು ಆಧುನಿಕ ಪ್ರವಾಸಿಗರ ಸ್ವರ್ಗ. ಇಲ್ಲೇ ಸುತ್ತಾಡಿದರೂ ಮುಗಿಯದಷ್ಟು ಸ್ಥಳಗಳಿವೆ. ಎಲ್ಲ ಬಗೆಯ ಪ್ರವಾಸಿಗರಿಗೂ ಖುಷಿಯಿಂದ ಕಾಲ ಕಳೆಯಬಹುದಾದಂತಹ ಜಾಗಗಳಿವೆ. ಇಂತಹ ಜಾಗಗಳ ಪೈಕಿ ಮಕ್ಕಳಾದಿಯಾಗಿ ಮುದುಕರವರೆಗೂ ನೋಡಬಹುದಾದ ತಾಣ ಎಂದರೆ ಅದು ಬನ್ನೇರುಘಟ್ಟ. ಬೆಂಗಳೂರಿನಲ್ಲೇ ಇರುವ ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ (Cheetah Safari) ಆರಂಭಿಸಿದೆ.

Cheetah

ದಕ್ಷಿಣ ಭಾರತದಲ್ಲೇ ಮೊದಲು

ದಕ್ಷಿಣ ಭಾರತದಲ್ಲೇ ಇದು ಮೊದಲನೆಯದಾಗಿದ್ದು, ನಮ್ಮ ಬಾರತದ ಅತ್ಯಂತ ದೊಡ್ಡ ಚಿರತೆ ಸಫಾರಿ ಇದಾಗಿದೆ. 20 ಹೆಕ್ಟೇರ್‌ ಕಾಡಿನಲ್ಲಿ ಈ ಸಫಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಇದರಲ್ಲಿ ಚಿರತೆ ವೀಕ್ಷಣೆಯ ಸಾಧ್ಯತೆ ಅತ್ಯಂತ ಹೆಚ್ಚಿದೆ. ರಕ್ಷಣೆಗಾಗಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಬನ್ನೇರುಘಟ್ಟ ವನ್ಯಜೀವಿಧಾಮ ಕೈಗೊಂಡಿದ್ದು, ಸುರಕ್ಷತಾ ಬೇಲಿಗಳನ್ನು ಎಲ್ಲಡೆ ಹಾಕಲಾಗಿದೆ. ಹಾಗೂ ಯಾವುದೇ ತೊಂದರೆಯಾಗದಂತೆ ಸಫಾರಿಯನ್ನು ಮಾಡಿ ಬರಲು ಅನುಕೂಲಕರ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಬೆಂಗಳೂರಿನ ಹೊರವಲಯಗಳಲ್ಲಿ ಅನೇಕ ಕಡೆ, ಚಿರತೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಚಿರತೆಗಳನ್ನು ಅವುಗಳ ಆವಾಸ ಸ್ಥಾನದಲ್ಲೇ ನೋಡುವ ರೋಮಾಂಚನ ವನ್ಯಜೀವಿ ಪ್ರಿಯರಿಗಷ್ಟೇ ಗೊತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಚಿರತೆಗಳ ದರ್ಶನಕ್ಕಾಗಿಯೇ ವಿಶೇಷವಾಗಿ ಈ ಸಫಾರಿ ಆಯೋಜಿಸಲಾಗಿದೆ. ತುಂಬ ಹತ್ತಿರದಿಂದ ಚಿರತೆಗಳನ್ನು ಕಾಣುವ ಸೌಭಾಗ್ಯ ಈ ಸಫಾರಿಯಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಇದನ್ನು ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಚಿರತೆ ಸಂತತಿ ಹೇರಳ

ಬನ್ನೇರುಘಟ್ಟದ ಈ ಭಾಗದಲ್ಲಿ ಚಿರತೆಗಳ ಸಂತತಿ ಹೇರಳಾಗಿದ್ದು, ಹಲವು ವರ್ಷಗಳಿಂದ ಇದು ಸಮತೋಲನವನ್ನು ಕಾಯ್ದುಕೊಂಡಿದೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಿಗೆ ದಾಳಿ ಮಾಡುತ್ತಿದ್ದ ಚಿರತೆಗಳನ್ನು ರಕ್ಷಿಸಿ ಇಲ್ಲಿಗೆ ತರಲಾಗಿದ್ದು ಈ ಸಂಖ್ಯೆ ಇದೀಗ ವೃದ್ಧಿಸಿದೆ. ಹಾಗೂ ಬನ್ನೇರುಘಟ್ಟದ ಈ ವ್ಯಾಪ್ತಿಯ ನೈಸರ್ಗಿಕ ಪರಿಸರದಲ್ಲಿ ಓಡಾಡಿಕೊಂಡಿದ್ದು, ತಮ್ಮ ಎಂದಿನ ಶೈಲಿಯ ಬದುಕನ್ನು ಕಾಣುತ್ತಿವೆ. ಹೀಗಾಗಿ, ಅವುಗಳ ನೈಸರ್ಗಿಕವಾದ ಸಹಜ ಬದುಕನ್ನು ಹತ್ತಿರದಿಂದ ಕಾಣಲು ಈ ಸಫಾರಿ ಅತ್ಯಂತ ಸೂಕ್ತವಾದ ಮಾಧ್ಯಮವಾಗಿದೆ.
ಬನ್ನೇರುಘಟ್ಟದಲ್ಲಿ ಮೃಗಾಲಯವೂ ಇದ್ದು, ಅಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಬಹುದಾದರೂ, ಈ ಸಫಾರಿಯಲ್ಲಿ, ಅವುಗಳ ನೈಸರ್ಗಿಕ ಪರಿಸರದಲ್ಲೇ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನದ ಇನ್ನೊಂದು ಬಹುಮುಖ್ಯ ವಿಶೇಷತೆ ಎಂದರೆ ಇಲ್ಲಿನ ಚಿಟ್ಟೆ ಪಾರ್ಕ್‌. ಸುಮಾರು 7.5 ಎಕರೆ ಪ್ರದೇಶದವನ್ನು ಚಿಟ್ಟೆ ಪಾರ್ಕ್‌ ಆಗಿ ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿ ನಾನಾ ಬಗೆಯ ಚಿಟ್ಟೆಗಳನ್ನು ವೀಕ್ಷಿಸಬಹುದು. ಬನ್ನೇರುಘಟ್ಟದಲ್ಲಿಯೇ ರಾತ್ರಿ ಕಳೆಯಬೇಕೆಂದರೆ, ಇಲ್ಲಿ ಟೆಂಟೆಡ್‌ ಕಾಟೇಜ್‌, ಹಟ್‌ಗಳ ಸೌಲಭ್ಯಗಳೂ ಇವೆ. ಸದ್ಯದಲ್ಲೇ ಬನ್ನೇರುಘಟ್ಟದ ಜೀವವೈವಿಧ್ಯದ ವಿಶೇಷ ವೀಕ್ಷಣೆಗಾಗಿ ಸ್ಕೈವಾಕ್‌ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರತಿ ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮುಚ್ಚಿರುತ್ತದೆ. ಇದನ್ನು ಹೊರತುಪಡಿಸಿ ಪ್ರತಿದಿನ 9.30ರಿಂದ ಸಂಜೆ 5ರವರೆಗೆ ಪ್ರವಾಸಿಗರಿಗಾಗಿ ಇದು ತೆರೆದಿರುತ್ತದೆ.

Continue Reading

ಕರ್ನಾಟಕ

Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

Eshwar Khandre: ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜುಲೈ 3ನೇ ವಾರದಲ್ಲಿ ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

VISTARANEWS.COM


on

Quick start for online ticketing for trekking says minister Eshwar Khandre
Koo

ಮಂಗಳೂರು: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Eshwar Khandre) ತಿಳಿಸಿದ್ದಾರೆ.

ಮಂಗಳೂರಿನ ಪಡೀಲ್‌ನಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾವುದೇ ಚಾರಣ ಪಥಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಕಾರಣ ಚಾರಣಿಗರು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಾಗಿರುತ್ತದೆ, ಜತೆಗೆ ಇಲ್ಲಿನ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ ಹೀಗಾಗಿ ಆಗಸ್ಟ್‌ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ಹೇಳಿದರು.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಈಗಾಗಲೇ ರಾಜ್ಯದ ಹಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದು, ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಆದೇ ರೀತಿ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಕೊಡಚಾದ್ರಿ, ಕುರಿಂಜಲ್, ಕಂಗಡಿಕಲ್, ನರಸಿಂಹ ಪರ್ವತಗಳಲ್ಲಿ ಅರಣ್ಯ ಇಲಾಖೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಇದಲ್ಲದೆ ಎತ್ತಿನಭುಜ ಸೇರಿದಂತೆ ಕೆಲವು ಕಡೆಗಳಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲ ಚಾರಣ ಪಥಗಳಿಗೂ ಒಂದೇ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಚಾರಣಿಗರ ಸಂಖ್ಯೆಗೆ ಮಿತಿ

ಕೆಲವು ಪ್ರವಾಸಿ ಸಂಸ್ಥೆಗಳು (ಟೂರ್ ಆಪರೇಟರ್‌ಗಳು) ಚಾರಣಪಥಗಳ ಬಗ್ಗೆ ಯುವಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮವಾಗಿ ಚಾರಣಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅತ್ಯಗತ್ಯ ಎಂದು ಹೇಳಿದರು.

ಪ್ರತಿಯೊಂದು ಚಾರಣ ಪಥದಲ್ಲೂ ಅದರ ವಿಸ್ತಾರ, ಅಲ್ಲಿರುವ ಗೈಡ್ ಮತ್ತು ಇತರ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗುವುದು. ಯಾವುದೇ ಚಾರಣಪಥದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಚಾರಣಿಗರಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಮೂರನೇ ವ್ಯಕ್ತಿ ತಪಾಸಣೆ

ಒಂದೊಮ್ಮೆ ಯಾವುದೇ ಚಾರಣ ಪಥದಲ್ಲಿ ಹೆಚ್ಚಿನ ಸಂಖ್ಯೆಯ ಚಾರಣಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂದು ದೂರು ಬಂದರೆ, ಈ ಬಗ್ಗೆ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

ಒಂದೇ ವೆಬ್‌ಸೈಟ್‌ನಲ್ಲಿ ವಿವಿಧ ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ಇರುವ ಕಾರಣ, ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ವಿವರಿಸಿದರು.

Continue Reading
Advertisement
Ninagagi Kannada Serial entry by Pooja Gandhi
ಕಿರುತೆರೆ31 mins ago

Ninagagi Kannada Serial: ಕಿರುತೆರೆಗೆ ಎಂಟ್ರಿ ಕೊಟ್ಟ ಮಳೆ ಹುಡುಗಿ ಪೂಜಾ ಗಾಂಧಿ!

Cauvery Dispute
ರಾಜಕೀಯ32 mins ago

Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

haveri News
ಹಾವೇರಿ34 mins ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಕರ್ನಾಟಕ52 mins ago

Wakf Board Scam: ವಾಲ್ಮೀಕಿ ನಿಗಮದ ಬಳಿಕ ವಕ್ಫ್ ಬೋರ್ಡ್‌ನಲ್ಲಿ ಹಗರಣ ಬೆಳಕಿಗೆ; ಮಾಜಿ ಸಿಇಒ ವಿರುದ್ಧ ಎಫ್‌ಐಆರ್!

Bhavana Ramanna hoovu foundation Varna Spardhe Bharathanatya Competition
ಸಿನಿಮಾ1 hour ago

Bhavana Ramanna: ನಟಿ ಭಾವನ ಸಂಸ್ಥೆಯಿಂದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ; ಪ್ರಥಮ ಬಹುಮಾನಕ್ಕಿದೆ ಒಂದು ಲಕ್ಷ ರೂ.

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ; ಆಭರಣ ಕೊಳ್ಳುವ ಮುನ್ನ ದರ ಗಮನಿಸಿ

Chandan Shetty talk about Nivedita other marriage
ಸ್ಯಾಂಡಲ್ ವುಡ್2 hours ago

Chandan Shetty: ನಿವೇದಿತಾ ಇನ್ನೊಂದು ಮದುವೆ ಆದ್ರೆ ಓಕೆ ನಾ? ಚಂದನ್‌ ಶೆಟ್ಟಿ ಹೇಳಿದ್ದೇನು?

Valmiki Corporation Scam
ಕರ್ನಾಟಕ2 hours ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರಗೆ ಮುಂದುವರೆದ ಇಡಿ ಡ್ರಿಲ್

Donald Trump Assassination Bid
ವಿದೇಶ2 hours ago

Donald Trump Assassination Bid: ಟ್ರಂಪ್ ಹತ್ಯೆಗೆ ಯತ್ನಿಸಿದವನನ್ನು ಸ್ನೈಪರ್ ರೈಫಲ್‌‌ನಿಂದ ಹೊಡೆದುರುಳಿಸಿದ ಕಮಾಂಡೊ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ19 hours ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ24 hours ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ1 day ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ5 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ5 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ5 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ6 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ6 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

ಟ್ರೆಂಡಿಂಗ್‌