ನವೀಕರಿಸಬಹುದಾದ ಇಂಧನ; ಗುರಿ ತಲುಪಲು ಭಾರತಕ್ಕೆ ಬೇಕಿದೆ ಭಾರಿ ಹೂಡಿಕೆ - Vistara News

ಪರಿಸರ

ನವೀಕರಿಸಬಹುದಾದ ಇಂಧನ; ಗುರಿ ತಲುಪಲು ಭಾರತಕ್ಕೆ ಬೇಕಿದೆ ಭಾರಿ ಹೂಡಿಕೆ

2030ರ ವೇಳೆಗೆ, ಪವನಶಕ್ತಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಸಾಮರ್ಥ್ಯನ್ನು 500 ಗಿಗಾವ್ಯಾಟ್‌ಗಳಿಗೆ ಹೆಚ್ಚಿಸಿಕೊಳ್ಳಲು 17,45,733 ಲಕ್ಷ ಕೋಟಿ ರೂ.ಗಳ ಹೂಡಿಕೆ ಅಗತ್ಯವಿದೆ.

VISTARANEWS.COM


on

renewable energy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತಕ್ಕೆ ನವೀಕರಿಸಬಹುದಾದ ಇಂಧನ ಬಳಕೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ತನ್ನ ಗುರಿಯನ್ನು ಮುಟ್ಟಲು ಇನ್ನೂ 17,45,733 ಲಕ್ಷ ಕೋಟಿ ರೂ. ಹೂಡಿಕೆಯ ಅಗತ್ಯವಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

೨೦೩೦ರ ವೇಳೆಗೆ, ಪವನಶಕ್ತಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ೫೦೦ ಗಿಗಾವ್ಯಾಟ್‌ಗಳಿಗೆ ಹೆಚ್ಚಿಸಿಕೊಳ್ಳಬೇಕೆಂಬುದು ಭಾರತದ ಗುರಿ. ಆದರೆ ಈ ಗುರಿ ಸಾಧನೆಗೆ ಇನ್ನೂ ಬೃಹತ್‌ ಪ್ರಮಾಣದಲ್ಲಿ, ಸುಮಾರು 17,45,733 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಅಗತ್ಯವಿದೆ ಎಂದು ಸಂಶೋಧನಾ ಸಂಸ್ಥೆ ಬ್ಲೂಮ್‌ಬರ್ಗ್‌ ಎನ್‌ಇಎಫ್‌ನ ವರದಿ ವಿವರಿಸಿದೆ.

ಕಳೆದ ನವೆಂಬರ್‌ನಲ್ಲಿ ನಡೆದ ಗ್ಲಾಸ್ಗೋ ಹವಾಮಾನ ಶೃಂಗದಲ್ಲಿ, ೨೦೩೦ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳ ಕುರಿತಾದ ಭಾರತದ ಬದ್ಧತೆಯೇನು ಎಂಬುದನ್ನು ಪ್ರಧಾನಮಂತ್ರಿ ಮೋದಿ ಅವರು ಸ್ಪಷ್ಟ ಮಾತುಗಳಲ್ಲಿ ಉಚ್ಚರಿಸಿದ್ದರು.

ಭಾರತ ಈಗ ಹೊರಸೂಸುತ್ತಿರುವ ಇಂಗಾಲದ ಪ್ರಮಾಣದಲ್ಲಿ ೧೦ ಕೋಟಿ ಟನ್‌ಗಳಷ್ಟನ್ನು ೨೦೩೦ರ ವೇಳೆಗೆ ಕಡಿಮೆ ಮಾಡಲಿದೆ. ಮಾತ್ರವಲ್ಲ, ದೇಶದ ಆರ್ಥಿಕತೆಯಲ್ಲಿರುವ, ಇಂಗಾಲ ಹೊರಸೂಸುವಂಥ ಅನಿವಾರ್ಯತೆಯನ್ನು ಶೇ. ೪೫ರಷ್ಟು ಕಡಿತ ಮಾಡಿ, ೨೦೦೫ಕ್ಕಿಂತ ಹಿಂದಿನ ಮಟ್ಟ ತಲುಪಲಿದೆ ಹಾಗೂ ೨೦೭೦ರ ವೇಳೆಗೆ ಭಾರತ ಹೊರಸೂಸುವ ಇಂಗಾಲದ ಪ್ರಮಾಣ ಶೂನ್ಯಕ್ಕಿಳಿಯಲಿದೆ ಎಂದು ಪ್ರಧಾನಿ ಮೋದಿ ಈ ಶೃಂಗಸಭೆಯಲ್ಲಿ ಹೇಳಿದ್ದರು. ಈ ಮಹತ್ವಾಕಾಂಕ್ಷೆಯ ಯೋಜನೆಗೆ ನಿಧಿ ಒದಗಿಸುವಂತೆಯೂ ಅವರು ಮುಂದುವರಿದ ರಾಷ್ಟ್ರಗಳನ್ನು ಕೋರಿದ್ದರು.

ಭಾರತ ಈಗಾಗಲೇ ೧೬೫ ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯಕ್ಕೆ ಅವಕಾಶ ಮಾಡಿಕೊಂಡಿದೆ. ೨೦೩೦ರ ವೇಳೆಗೆ ಈಗಾಗಲೇ ಇರುವ ಬೇಡಿಕೆಯ ಶೇ. ೫೩ರಷ್ಟು ಕಲ್ಲಿದ್ದಲು ಬೇಡಿಕೆಯನ್ನು ಕಡಿತ ಮಾಡುವ, ಜತೆಗೆ ಪವನ ಮತ್ತು ಸೌರ ಶಕ್ತಿಯ ಬಳಕೆಯನ್ನು ಶೇ.೫೧ಕ್ಕೇರಿಸುವ ಮುನ್ನೋಟವನ್ನು ಕೇಂದ್ರ ವಿದ್ಯುತ್‌ ಪ್ರಾಧಿಕಾರ ನೀಡಿದೆ. ಆದರೆ ಇದಕ್ಕಾಗಿ ಕಾರ್ಪೊರೇಟ್‌ ವಲಯದಿಂದ ಬೃಹತ್‌ ಪ್ರಮಾಣದಲ್ಲಿ ಹೂಡಿಕೆಯ ಅಗತ್ಯವಿದೆ.

“ಈವರೆಗೆ ಭಾರತದಲ್ಲಿನ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ನಾನಾ ಹೂಡಿಕೆದಾರರಿಂದ ಹಣ ಹರಿದು ಬರುತ್ತಿತ್ತು. ಆದರೆ ಈ ಮಾರುಕಟ್ಟೆ ವಿಸ್ತಾರವಾಗುತ್ತಿರುವಂತೆಯೇ, ಇದರ ಅಗತ್ಯ ಮತ್ತು ಅಪಾಯಗಳೂ ನಾನಾ ರೀತಿಯಲ್ಲಿ ಎದುರಾಗುತ್ತಿವೆ. ಹಾಗಾಗಿ ವಿಶ್ವದ ಇತರ ಮಾರುಕಟ್ಟೆಗಳಿಂದಲೂ ಹಣ ಹರಿದುಬರುವುದು ಅಗತ್ಯವಾಗಿದೆʼʼ ಎಂದು ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಶಂತನು ಜೈಸ್ವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಕ್ಷೇತ್ರದಲ್ಲಿ ಹಣ ಹೂಡಿಕೆಗೆ ಇರುವ ತೊಡಕುಗಳು ಹಲವು ರೀತಿಯವು. ಶಾಸನಾತ್ಮಕ ಅಡೆ-ತಡೆಗಳು, ಭೂಮಿ ಸ್ವಾಧೀನ ಪ್ರಕ್ರಿಯೆಯ ತೊಡಕುಗಳು, ಹಣದುಬ್ಬರ, ಬಡ್ಡಿದರದ ಏರಿಳಿತ, ಡಾಲರ್‌ ಎದುರಿಗೆ ಕುಸಿಯುತ್ತಿರುವ ರೂಪಾಯಿ, ಬ್ಯಾಂಕಿಂಗ್‌ ಕಾನೂನುಗಳಂಥ ಹಲವಾರು ವಿಷಯಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ೨೦೧೪ರಿಂದ ಈವರೆಗೆ ನವೀಕೃತ ಇಂಧನ ಮೂಲದ ಯೋಜನೆಗಳಲ್ಲಿ ೭೫ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ.

ಇದನ್ನೂ ಓದಿ | ರಾಜ್ಯದಲ್ಲಿ ಸೋಲಾರ್‌ ಘಟಕ ಸ್ಥಾಪನೆಗೆ ₹52,000 ಕೋಟಿ ಹೂಡಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

ಊಟಿಗೆ ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಇಲ್ಲಿ ಪ್ರತಿಯೊಂದು ತಿಂಗಳೂ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಊಟಿಗೆ ಪ್ರವಾಸ (Ooty Tour) ಹೊರಡುವ ಯೋಜನೆ ಮಾಡಬಹುದು. ಊಟಿಯ ಅದ್ಭುತಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

By

Ooty Tour
Koo

ಬೇಸಿಗೆಯ ಬಿಸಿಲಿನ ಕಣ್ತಪ್ಪಿಸಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು ಎನ್ನುವ ಆಸೆ ಮನದಲ್ಲಿ ಮೂಡಿದಾಗ ಕೂಡಲೇ ನೆನಪುಗುವುದು ದಕ್ಷಿಣ ಭಾರತದ (southern India) ಸುಪ್ರಸಿದ್ಧ ಪ್ರವಾಸಿ ತಾಣ ಊಟಿ (Ooty Tour). ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ( Nilgiri Hills) ನೆಲೆಯಾಗಿರುವ ಸುಂದರವಾದ ಗಿರಿಧಾಮ ಪ್ರದೇಶವಾಗಿರುವ ಊಟಿಯಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರದೇಶಗಳಿವೆ. ಪ್ರಶಾಂತವಾದ ಭೂದೃಶ್ಯಗಳು, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಹೊಂದಿದೆ.

ಪ್ರವಾಸ ಪ್ರಿಯರಿಗಾಗಿ ಊಟಿ ಏನನ್ನಾದರೂ ನೀಡುತ್ತದೆ. ಅದು ಪ್ರಕೃತಿಯ ಪ್ರೀತಿ, ಸಾಹಸದ ಪ್ರಜ್ಞೆ ಅಥವಾ ಶಾಂತಿ ಮತ್ತು ಶಾಂತತೆಯ ಹಂಬಲವನ್ನು ತಣಿಸುತ್ತದೆ. ಪ್ರತಿ ಋತುವಿಗೂ ತನ್ನದೇ ಆದ ವಿಶೇಷತೆಯನ್ನು ಒದಗಿಸುತ್ತದೆ. ವರ್ಷವಿಡೀ ಬೇಸಿಗೆಯು ಬಹುವರ್ಣದ ಹೂವುಗಳನ್ನು ತರುತ್ತದೆ. ಮಳೆಗಾಲ ಬಂದೊಡನೆ ಎಲ್ಲವನ್ನೂ ಮಂಜಿನಿಂದ ಆವರಿಸುವಂತೆ ಮಾಡುತ್ತದೆ. ಶರತ್ಕಾಲದಲ್ಲಿ ಉಲ್ಲಾಸಕರವಾದ ಗಾಳಿ ಮತ್ತು ಚಳಿಗಾಲದ ತಂಪು ಅಪ್ಪುಗೆಯನ್ನು ಮರೆಯಲಾಗದು.

ಗಿರಿಧಾಮಗಳ ರಾಣಿ ಎಂದೂ ಕರೆಯಲಾಗುವ ಊಟಿಗೆ ವರ್ಷಪೂರ್ತಿ ಭೇಟಿ ಮಾಡಬಹುದು. ಪ್ರತಿ ಋತುವಿನಲ್ಲಿ ಇದು ತನ್ನದೇ ಆದ ವೈಭವವನ್ನು ತೊಂಬಿಕೊಂಡು ತನುಮನಕ್ಕೆ ಸಂತೋಷವನ್ನು ಉಣಬಡಿಸುತ್ತದೆ. ನಿಖರವಾಗಿ ಯಾವಾಗ ಹೋಗಬೇಕೆಂದು ತಿಳಿಯುವುದು ಖಂಡಿತವಾಗಿಯೂ ನಮ್ಮ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ. ಊಟಿಯಲ್ಲಿ ಪ್ರತಿ ಸೀಸನ್ ಏನು ವಿಶೇಷ ಎಂಬ ಮಾಹಿತಿ ಇಲ್ಲಿದೆ.


ಬೇಸಿಗೆಯ ವೈಭವ; ಮಾರ್ಚ್‌ನಿಂದ ಜೂನ್

ಊಟಿಗೆ ಪ್ರವಾಸ ಹೋಗಲು ಅತ್ಯಂತ ಜನಪ್ರಿಯ ಸಮಯವೆಂದರೆ ಬೇಸಿಗೆಯ ತಿಂಗಳು. ಮಾರ್ಚ್‌ನಿಂದ ಜೂನ್‌ವರೆಗೆ ಹಗಲಿನ ತಾಪಮಾನವು ಇಲ್ಲಿ 15 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇದು ಬಿಸಿಯಾದ ಬಯಲು ಪ್ರದೇಶಗಳಿಗೆ ಹೋಲಿಸಿದರೆ ಇದು ತುಂಬಾ ಆರಾಮದಾಯಕವಾಗಿದೆ. ಈ ಅವಧಿಯಲ್ಲಿ ಹವಾಮಾನವು ತಂಪಾಗಿರುತ್ತದೆ. ಇದು ಹಸಿರು ಕಣಿವೆಗಳು, ಹೂಬಿಡುವ ಹೂವುಗಳು ಮತ್ತು ಬೀಳುವ ಕ್ಯಾಸ್ಕೇಡ್‌ಗಳನ್ನು ಅನ್ವೇಷಿಸಲು ಸೂಕ್ತವಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ, ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಅದ್ಭುತವಾದ ಪುಷ್ಪ ಪ್ರದರ್ಶನವನ್ನು ನಡೆಸಲಾಗುತ್ತದೆ.


ಮಾನ್ಸೂನ್‌ ಮ್ಯಾಜಿಕ್ -ಜುಲೈನಿಂದ ಸೆಪ್ಟೆಂಬರ್

ಒಮ್ಮೆ ಮಳೆ ಬಂದರೆ ಮತ್ತೆ ಎಲ್ಲವೂ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ಬಾರಿ ಹೆಚ್ಚು ತೀವ್ರವಾಗಿ ಇಡೀ ಪ್ರದೇಶವು ಸೊಂಪಾದ ಸಸ್ಯಗಳಿಂದ ಆವೃತವಾಗಿದೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಇಡೀ ಪಟ್ಟಣವು ದಟ್ಟವಾದ ಎಲೆಗಳ ಅಡಿಯಲ್ಲಿ ಕಣ್ಮರೆಯಾಗುತ್ತದೆ. ಈ ತಿಂಗಳುಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ, ಊಟಿಯ ಮೇಲೆ ಮಧ್ಯಮ ಅಥವಾ ಭಾರೀ ಮಳೆ ಬೀಳುತ್ತದೆ. ಇದು ಸುತ್ತಲಿನ ಎಲ್ಲವನ್ನೂ ರಿಫ್ರೆಶ್ ಮಾಡಿದಂತೆ ಭಾಸವಾಗುತ್ತದೆ. ಬೇಸಿಗೆಯ ಶಾಖದ ಅನಂತರ ಮತ್ತೊಮ್ಮೆ ಜೀವಂತ ತಳೆದಂತೆ ಕಾಣುತ್ತದೆ. ಮಳೆಯ ಕಾರಣದಿಂದ ಹೊರಾಂಗಣ ಚಟುವಟಿಕೆಗಳು ಸೀಮಿತವಾಗಿರಬಹುದು. ಆದರೆ ಮಂಜಿನಿಂದ ಆವೃತವಾದ ಪರ್ವತಗಳ ಮೂಲಕ ಹರಿಯುವ ತೊರೆಗಳ ಸೌಂದರ್ಯ ಇಮ್ಮಡಿಯಾಗುತ್ತದೆ.


ಶರತ್ಕಾಲದ ಅದ್ಭುತ- ಅಕ್ಟೋಬರ್‌ನಿಂದ ನವೆಂಬರ್

ಮಳೆಗಾಲ ಅವಧಿ ಮುಗಿದ ಅನಂತರ, ಶರತ್ಕಾಲದಲ್ಲಿ ಆಕಾಶವು ಮತ್ತೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಚಳಿಗಾಲ ಪ್ರಾರಂಭವಾಗುವವರೆಗೆ ಪ್ರಶಾಂತ ಪರಿಸರ ಮನಸ್ಸಿಗೆ ಹಿತ ನೀಡುತ್ತದೆ. ಈ ಸಮಯದಲ್ಲಿ ತಾಪಮಾನವು 10 ಡಿಗ್ರಿಯಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೀಗಾಗಿ ಇದು ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಟ್ರೆಕ್ಕಿಂಗ್, ಬೋಟಿಂಗ್, ದೃಶ್ಯವೀಕ್ಷಣೆ ನಡೆಸಲು ಸೂಕ್ತ ಸಮಯವಾಗಿರುತ್ತದೆ. ಹವಾಮಾನವು ಸಾಕಷ್ಟು ಸ್ನೇಹಪರವಾಗಿರುತ್ತದೆ. ಛಾಯಾಗ್ರಹಣಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭದಲ್ಲಿ ಊಟಿ ಮಾರಿಯಮ್ಮನ್ ದೇವಾಲಯದ ಉತ್ಸವವನ್ನು ಕಣ್ತುಂಬಿಕೊಳ್ಳಲು ಮರೆಯಬೇಡಿ.


ಚಳಿಗಾಲದ ವಂಡರ್ ಲ್ಯಾಂಡ್ (ಡಿಸೆಂಬರ್‌ನಿಂದ ಫೆಬ್ರವರಿ)

ಚಳಿಗಾಲದಲ್ಲಿ ರಾತ್ರಿಯ ಸಮಯದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಸುಮಾರು 5 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿಯುತ್ತದೆ. ಮುಂಜಾನೆಯು ಸಾಮಾನ್ಯವಾಗಿ ಮಂಜಿನಿಂದ ಕೂಡಿರುತ್ತದೆ. ಆದರೆ ಇಡೀ ದಿನ ತಂಪಾಗಿರುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ಸಾಕಷ್ಟು ಬಿಸಿಲು ಸಿಗುತ್ತದೆ. ಆದರೂ ಪ್ರದೇಶದ ಸುತ್ತಲಿನ ದಟ್ಟವಾದ ಕಾಡುಗಳಿಂದಾಗಿ ಸೂರ್ಯನ ಬೆಳಕು ಅಷ್ಟೇನೂ ನೆಲದ ಮಟ್ಟವನ್ನು ತಲುಪುವುದಿಲ್ಲ, ಆದ್ದರಿಂದ ಚಹಾ ತೋಟಗಳ ಸುತ್ತಲೂ ಮಾಂತ್ರಿಕ ಸ್ಪರ್ಶ ನೀಡಿದಂತೆ ಭಾಸವಾಗುತ್ತದೆ. ಸಾಹಸಿಗಳು ನೀಲಗಿರಿಯ ಅತೀ ಎತ್ತರದ ಪ್ರದೇಶವಾದ ದೊಡ್ಡಬೆಟ್ಟ ಶಿಖರದಲ್ಲಿ ಚಾರಣಕ್ಕೆ ಹೋಗಬಹುದು ಅಥವಾ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಕೀಟಗಳನ್ನು ಮುದುಮಲೈ ವನ್ಯಜೀವಿ ಅಭಯಾರಣ್ಯದಲ್ಲಿ ಅನ್ವೇಷಿಸಬಹುದು. ಜನವರಿಯಲ್ಲಿ ಇಲ್ಲಿ ವಾರ್ಷಿಕ ಚಹಾ ಪ್ರವಾಸೋದ್ಯಮ ಉತ್ಸವ ನಡೆಯುತ್ತದೆ. ಇಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ಆನಂದಿಸಬಹುದು, ವಿವಿಧ ಮಾದರಿಯ ಚಹಾಗಳನ್ನು ಸವಿಯಬಹುದು.

Continue Reading

ಕರ್ನಾಟಕ

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 (Climate Plan) ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021 ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

VISTARANEWS.COM


on

By

Climate Plan
Koo

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Continue Reading

ಪ್ರವಾಸ

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಪ್ರವಾಸದ ಯೋಜನೆ ಕೆಲವೊಮ್ಮೆ ಜೇಬಿಗೆ ಕತ್ತರಿ ಹಾಕುತ್ತದೆ ಎನ್ನುವ ಭಯವಿರುತ್ತದೆ. ಆದರೆ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಜನೆ ಮಾಡಿದರೆ ಇಲ್ಲಿ ಜೇಬಿಗೆ ಭಾರವಾಗದ ಹಲವು ತಾಣಗಳಿವೆ. ಆದರೆ ಸ್ವಲ್ಪ ಬುದ್ದಿವಂತಿಕೆ ತೋರಬೇಕು ಅಷ್ಟೇ. ಕನ್ಯಾಕುಮಾರಿಯ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kanyakumari Tour
Koo

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿನ ಕೆಲವೊಂದು ಸಂಗತಿಗಳನ್ನು ಮಿಸ್ ಮಾಡಿಕೊಳ್ಳದಿರಿ. ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವ ಎರಡಕ್ಕೂ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕು.


ಕನ್ಯಾಕುಮಾರಿ ನಗರವು ಐಷಾರಾಮಿ ಹಾಟ್‌ಸ್ಪಾಟ್ ಎಂಬ ಖ್ಯಾತಿಯನ್ನು ಪಡೆದಿದ್ದರೂ ಇಲ್ಲಿ ನಿಮ್ಮ ಬಜೆಟ್ ಮೀರದ ಹಾಗೆ ಪ್ರವಾಸ ಮಾಡಲು ಹಲವು ಆಯ್ಕೆಗಳನ್ನೂ ನೀಡುತ್ತದೆ. ಕೆಲವು ಯೋಜನೆ ಮತ್ತು ಸ್ಥಳೀಯರ ಸಲಹೆ ಪಡೆದರೆ ಬಜೆಟ್ ಮೀರದ ಹಾಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು. ಜೀವನದಲ್ಲಿ ಅತ್ಯಂತ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸೂರ್ಯೋದಯ – ಸೂರ್ಯಾಸ್ತ

ಕನ್ಯಾಕುಮಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಇಲ್ಲಿನ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರಬ್ಬಿ ಸಮುದ್ರ (Arabian Sea), ಬಂಗಾಳ ಕೊಲ್ಲಿ (Bay of Bengal) ಮತ್ತು ಹಿಂದೂ ಮಹಾಸಾಗರದ (Indian Ocean) ಭೇಟಿಯ ಸ್ಥಳದಲ್ಲಿ ಅತ್ಯಂತ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿ ಕೊಳ್ಳಬಹದು. ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ; ತೀರದ ಪಕ್ಕದಲ್ಲಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಬಹುದು.

ಐಕಾನಿಕ್ ಹೆಗ್ಗುರುತು

ಕನ್ಯಾಕುಮಾರಿಯು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುವ ಅನೇಕ ಪ್ರಸಿದ್ಧ ತಾಣಗಳನ್ನು ಹೊಂದಿದೆ. ಹೆಚ್ಚಿನ ಸ್ಥಳಗಳು ಕಡಿಮೆ ಪ್ರವೇಶ ಶುಲ್ಕವನ್ನು ಹೊಂದಿವೆ ಅಥವಾ ಉಚಿತ ಪ್ರವೇಶವನ್ನು ನೀಡುತ್ತವೆ.
ಹಿಂದೂ ಸಂತ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೋರಿಯಲ್‌ ಗೆ ಹೋಗಲು ದೋಣಿಯಲ್ಲಿ ತೆರಳಬೇಕು. ಈಲ್ಲಿ ಅದ್ಭುತವಾದ ನೋಟಗಳಲ್ಲದೆ, ಧ್ಯಾನ ಮಂದಿರಕ್ಕೂ ಭೇಟಿ ನೀಡಬಹುದು.

ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರನ್ನು ಗೌರವಿಸುವ ತಿರುವಳ್ಳುವರ್ ಪ್ರತಿಮೆ ಕನ್ಯಾಕುಮಾರಿ ಕರಾವಳಿಯ ಹೊರವಲಯದಲ್ಲಿದೆ. ಈ ಬೃಹತ್ ರಚನೆಯು ನಿಮ್ಮ ಬಜೆಟ್ ಅನ್ನು ಮೀರಿಸುವುದಿಲ್ಲ. ಅಲ್ಲದೇ ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.


ಪ್ರಕೃತಿಯ ನಡುವೆ ಸುಂದರ ಸಮಯ

ಕನ್ಯಾಕುಮಾರಿಯಲ್ಲಿ ಸುಂದರವಾದ ಪ್ರಕೃತಿಕ ತಾಣಗಳಿಗೆ ಕೊರತೆಯಿಲ್ಲ, ಆದ್ದರಿಂದ ಪ್ರಕೃತಿ ಪ್ರಿಯರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ಪ್ರದೇಶವು ಸುಂದರವಾದ ಕಡಲತೀರಗಳಿಂದ ಹಿಡಿದು ಸೊಂಪಾದ ಭೂದೃಶ್ಯಗಳವರೆಗೆ ಎಲ್ಲವನ್ನೂ ನೀಡುತ್ತದೆ.

ಕನ್ಯಾಕುಮಾರಿ ಬೀಚ್ ನಲ್ಲಿ ಸೂರ್ಯನ ಸ್ನಾನ ಅಥವಾ ಸಮುದ್ರದಲ್ಲಿ ಈಜಲು ಕೆಲವು ಗಂಟೆಗಳ ಕಾಲ ಕಳೆಯಬಹುದು. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ನೋಡುತ್ತಾ ಧ್ಯಾನ ಮಗ್ನರಾಗಿ ಕುಳಿತುಕೊಳ್ಳಬಹುದು. ಕನ್ಯಾಕುಮಾರಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸುಚಿಂದ್ರಂ ದೇವಸ್ಥಾನದ ಕೊಳ ಪ್ರಶಾಂತ ವಾತಾವರಣದ ಮಧ್ಯ ಇದೆ. ಪುರಾತನ ದೇವಾಲಯಗಳಿಂದ ಆವೃತವಾಗಿದೆ. ಇದು ಸುಮ್ಮನೆ ನಡಿಗೆ, ಧ್ಯಾನಕ್ಕಾಗಿ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ವೈಭವದ ಸಾಂಸ್ಕೃತಿಕ ಪರಂಪರೆ

ಕನ್ಯಾಕುಮಾರಿ ನಗರವು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡುತ್ತದೆ. ಕನ್ಯಾಕುಮಾರಿ ಅಮ್ಮನ್ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರನ್ನು ಆಹ್ವಾನಿಸುತ್ತದೆ. ದೇವಾಲಯದ ಎತ್ತರದ ಗೋಪುರ, ಸಂಕೀರ್ಣವಾದ ಕೆತ್ತಿದ ಕಂಬಗಳು ಈ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಗಳು, ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಇದನ್ನೂ ಓದಿ: Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

ಸ್ಥಳೀಯ ಖಾದ್ಯ ರುಚಿ

ಬಜೆಟ್ ಸ್ನೇಹಿ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ಇಲ್ಲಿ ಖರೀದಿ ಮಾಡಬಹುದು, ಜೊತೆಗೆ ಸ್ಥಳೀಯ ತಿನಿಸುಗಳು, ಸಮುದ್ರಾಹಾರ ತಿಂಡಿಗಳು, ಬಾಳೆಹಣ್ಣು ಚಿಪ್ಸ್, ತೆಂಗಿನಕಾಯಿ ಸಿಹಿತಿಂಡಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.

Continue Reading

ಕೃಷಿ

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Cocoa Price: ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. 2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು. ಇದೀಗ ಬೆಲೆ ಬರೋಬರಿ 320 ರೂ. ಅಂದರೆ 800% ಹೆಚ್ಚಳವಾಗಿದೆ. ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

VISTARANEWS.COM


on

Cocoa Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.

2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.

ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!

ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.

ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಧಾರಣೆ ಏರಿಕೆಗೆ ಕಾರಣ ಏನು?

ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.

ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ

ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.

ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ

ಕೋಕೋ ಧಾರಣೆ ಮಿಂಚಿ‌ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.

Continue Reading
Advertisement
Narendra Modi
ಪ್ರಮುಖ ಸುದ್ದಿ5 mins ago

Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Viral Video
ವೈರಲ್ ನ್ಯೂಸ್14 mins ago

Viral Video: 25 ವರ್ಷಗಳ ಹಿಂದೆ ಬಿಬಿಸಿ ನ್ಯೂಸ್ ಥೀಮ್ ಟ್ಯೂನ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತೇ?

Chaya Singh
ಕರ್ನಾಟಕ21 mins ago

Chaya Singh: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ಕದ್ದಿದ್ದ ಮನೆಕೆಲಸದಾಕೆ ಬಂಧನ

former MLC Arun Shahapur latest Statement
ಬೆಂಗಳೂರು21 mins ago

Bengaluru News: ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ; ಅರುಣ್ ಶಹಾಪುರ ಆರೋಪ

HD Revanna Released first reaction after release will be acquitted of all charges
ರಾಜಕೀಯ36 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

Income Tax office
ಪ್ರಮುಖ ಸುದ್ದಿ37 mins ago

Income Tax Office : ಆದಾಯ ತೆರಿಗೆ ಕಚೇರಿಯಲ್ಲಿ ಬೆಂಕಿ ಅವಘಡ; ಒಂದು ಸಾವು; ಇಲ್ಲಿದೆ ವಿಡಿಯೊ

Billboard Collapse
ಪ್ರಮುಖ ಸುದ್ದಿ58 mins ago

Billboard Collapse : 14 ಸಾವಿಗೆ ಕಾರಣವಾದ ಹೋರ್ಡಿಂಗ್ ಕಂಪನಿ ಮಾಲೀಕನ ಮೇಲಿದೆ ಅತ್ಯಾಚಾರ ಸೇರಿದಂತೆ 20ಕ್ಕೂ ಹೆಚ್ಚು ಕೇಸ್​ಗಳು

Stabbing Case
ಕರ್ನಾಟಕ60 mins ago

Stabbing Case: ಕುಡಿದ ಅಮಲಿನಲ್ಲಿ ಭುಜ ತಗುಲಿದ್ದಕ್ಕೆ ಕಿರಿಕ್; ವ್ಯಕ್ತಿಗೆ ಚೂರಿಯಿಂದ ಮನಸೋ ಇಚ್ಛೆ ಇರಿದ ಯುವಕರು

Ooty Tour
ಪ್ರವಾಸ1 hour ago

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

WhatsApp Update
ತಂತ್ರಜ್ಞಾನ1 hour ago

WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್‌ ಏನೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Released first reaction after release will be acquitted of all charges
ರಾಜಕೀಯ36 mins ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20246 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ7 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು8 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ15 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ1 day ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ1 day ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ1 day ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ1 day ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

ಟ್ರೆಂಡಿಂಗ್‌