World Sparrow Day: ಇಂದು ಗುಬ್ಬಚ್ಚಿಗಳ ದಿನ; ಈ ಪುಟ್ಟ ಹಕ್ಕಿಗಳನ್ನು ಉಳಿಸೋಣ - Vistara News

ಪರಿಸರ

World Sparrow Day: ಇಂದು ಗುಬ್ಬಚ್ಚಿಗಳ ದಿನ; ಈ ಪುಟ್ಟ ಹಕ್ಕಿಗಳನ್ನು ಉಳಿಸೋಣ

ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ (World Sparrow Day) ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ. ಇಷ್ಟೊಂದು ತೀವ್ರ ಪ್ರಮಾಣ ಕುಸಿಯುತ್ತಿರುವ ಈ ಗುಬ್ಬಿಗಳನ್ನು ನಮ್ಮ ಮುಂದಿನ ತಲೆಮಾರುಗಳು ನೋಡಬೇಡವೇ?

VISTARANEWS.COM


on

World Sparrow Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ಪ್ರಾಣಿಗಳು (World Sparrow Day) ಮಾನವರ ಜೊತೆಜೊತೆಗೇ ವಿಕಾಸ ಹೊಂದುತ್ತ ಬಂದಂಥವು. ಸೃಷ್ಟಿ ಪಥದಲ್ಲಿ ಅವುಗಳ ಉಗಮ, ವಿಕಾಸಗಳ ಹಾದಿ ಬೇರೆಯಾದರೂ ಮಾನವನೊಂದಿಗೆ ಅತ್ಯಂತ ನಿಕಟ ಸಂಬಂಧ ಇರಿಸಿಕೊಂಡಂಥವು. ಸಾವಿರಾರು ವರ್ಷಗಳಿಂದ ಎಷ್ಟು ಮನೆಯ ಮಕ್ಕಳು ಹಿಡಿಯುವುದಕ್ಕೆಂದು ಗುಬ್ಬಚ್ಚಿಗಳನ್ನು ಅಟ್ಟಿಸಿಕೊಂಡು ಹೋಗಿಲ್ಲ? ಮನೆಯ ಜಗುಲಿಯಲ್ಲಿ ನೇತಾಡಿಸಿದ್ದ ಫೋಟೋಗಳ ಹಿಂದೆ ಎಷ್ಟು ಮನೆಗಳಲ್ಲಿ ಗುಬ್ಬಿಗಳು ಮನೆ ಕಟ್ಟಿಕೊಂಡಿದ್ದಿಲ್ಲ? ಆದರೆ ಅವೆಲ್ಲ ಒಂದಾನೊಂದು ಕಾಲದ ಮಾತಾಯಿತು. ಈಗ ಮಕ್ಕಳಿಗೆ ಹಿಡಿಯುವುದಕ್ಕೆ, ಫೋಟೋಗಳ ಹಿಂದೆ ಗೂಡು ಕಟ್ಟುವುದಕ್ಕೆ ಗುಬ್ಬಿಗಳೇ ಕಾಣೆಯಾಗುತ್ತಿವೆ. ಹೀಗೆ ಕಾಣೆಯಾಗುತ್ತಿರುವ ಗುಬ್ಬಿಗಳನ್ನು ಉಳಿಸಬೇಕೆಂಬ ಅರಿವು ಮೂಡಿಸುವ ಉದ್ದೇಶ ಮಾರ್ಚ್‌ 20ರಂದು ಹಮ್ಮಿಕೊಂಡಿರುವ (World Sparrow Day) ʻವಿಶ್ವ ಗುಬ್ಬಚ್ಚಿಗಳ ದಿನʼದ್ದು.

House sparrow (Passer domesticus) in a perch by the water

ಪರಿಸರದಲ್ಲಿ ಗುಬ್ಬಿ ಪಾತ್ರ

ಇಡೀ ಪರಿಸರ ವ್ಯವಸ್ಥೆಯಲ್ಲಿ ಗುಬ್ಬಿಗಳ ಪಾತ್ರವೇನು ಎಂಬುದರಿಂದ ಹಿಡಿದು, ಈ ಮುದ್ದು ಹಕ್ಕಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳ ಉಳಿವಿಗಾಗಿ ಶ್ರಮಿಸುವ ಅಗತ್ಯದ ಬಗ್ಗೆಯೂ ಅರಿತುಕೊಳ್ಳುವ ದಿನವಿದು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ. ಇಷ್ಟೊಂದು ತೀವ್ರ ಪ್ರಮಾಣ ಕುಸಿಯುತ್ತಿರುವ ಈ ಗುಬ್ಬಿಗಳ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಗಳು ಇಲ್ಲಿವೆ.

House sparrow

ತೂಕ ಎಷ್ಟು?

ಚಿಂವ್‌ ಚಿಂವ್‌ ಗುಬ್ಬಿ ಎಂದೇ ಕರೆಸಿಕೊಳ್ಳುವ ಈ ಹಕ್ಕಿಗಳ ತೂಕ 26-32 ಗ್ರಾಂಗಳಷ್ಟೆ. 14-16 ಸೆಂ.ಮೀ.ಗಳಷ್ಟು ದೊಡ್ಡದಿರುವ ಇವು, ತಮ್ಮ ರೆಕ್ಕೆಗಳನ್ನು 25 ಸೆಂ.ಮೀ.ವರೆಗೂ ಬಿಡಿಸಬಲ್ಲವು. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಈ ಗುಬ್ಬಚ್ಚಿಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಕೆಲವು ಮಹಾನಗರಗಳಲ್ಲಿ ಇವುಗಳ ಸಂಖ್ಯೆ ಶೇ. 99ರಷ್ಟು ಕಾಣೆಯಾಗಿದೆ.

Sparrow Birds on Tree Branches

ಏಷ್ಯಾದ ಮೂಲ ನಿವಾಸಿ

ಏಷ್ಯಾ ಮತ್ತು ಯುರೋಪ್‌ ಖಂಡಗಳ ಮೂಲನಿವಾಸಿಗಳಿವು. ಅಲ್ಲಿಂದ ವಿಶ್ವದ ಬಹಳಷ್ಟು ದೇಶಗಳಿಗೆ ವಲಸೆ ಹೋದಂಥವು. ಏಷ್ಯಾ ಖಂಡದ ಭಾರತ, ನೇಪಾಳ, ಶ್ರೀಲಂಕಾ, ಭೂತಾನ್‌, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತವೆ. ಆದರೆ ಅಂಟಾರ್ಟಿಕಾದಂಥ ಅತೀವ ಚಳಿಯ ಭಾಗಗಳಲ್ಲಿ, ಜಪಾನ್‌, ಚೀನಾಗಳಲ್ಲೂ ಗುಬ್ಬಚ್ಚಿಗಳಿಲ್ಲ. ಹಾಗೆ ನೋಡಿದರೆ ಅಮೆರಿಕಾದ ವಲಸಿಗರ ಪೈಕಿ ಗುಬ್ಬಚ್ಚಿಗಳನ್ನೂ ಲೆಕ್ಕಕ್ಕೆ ಹಿಡಿಯಬಹುದು. ಬ್ರಿಟನ್‌ನಿಂದ ಉತ್ತರ ಅಮೆರಿಕಕ್ಕೆ 1851ರ ಹೊತ್ತಿಗೆ ವಲಸೆ ಹೋದಂಥವು ಇವು ಎಂದು ಹೇಳಲಾಗುತ್ತದೆ.

 Sparrow in water

ಇವು ಈಜಬಲ್ಲವು

ಈ ಹಕ್ಕಿಗಳು ತಮ್ಮ ಉಳಿವಿನ ಪ್ರಶ್ನೆ ಬಂದಾಗ ನೀರಲ್ಲಿ ಈಜಬಲ್ಲವು. ಅದರಲ್ಲೂ ಸಾವು-ಉಳಿವಿನ ಹೊತ್ತಿನಲ್ಲಿ, ನೀರಿನಾಳದಲ್ಲೂ ಸ್ವಲ್ಪ ದೂರದವರೆಗೆ ಈಜಲು ಸಾಧ್ಯವಾಗುವಂತೆ ಇವುಗಳ ದೇಹ ರಚನೆಗೊಂಡಿದೆ. ವಯಸ್ಕ ಹಕ್ಕಿಗಳು ಬಹುಪಾಲು ಸಸ್ಯಾಹಾರಿಗಳು. ಆದರೆ ಮರಿ ಗುಬ್ಬಚ್ಚಿಗಳು ಹುಳುಹುಪ್ಪಡಿಗಳನ್ನು ತಿನ್ನುತ್ತವೆ. ಬೆಳವಣಿಗೆಯ ಹಂತದಲ್ಲಿ ಅವುಗಳ ದೇಹಕ್ಕೆ ಅಗತ್ಯವಾದ ಸತ್ವಗಳಿಗಾಗಿ ಪಾಲಕ ಹಕ್ಕಿಗಳು ಮೊಟ್ಟೆಯೊಡೆದು ಬಂದ ಮರಿಗಳಿಗೆ ಕೀಟಗಳನ್ನು ತಿನ್ನಿಸುತ್ತವೆ. ಗುಬ್ಬಚ್ಚಿ ಮರಿಗಳನ್ನು ಅತಿ ಹೆಚ್ಚು ಬೇಟೆಯಾಡಿ ಸ್ವಾಹಾ ಮಾಡುವುದು ಬೆಕ್ಕುಗಳು. ಹಾಗಾಗಿ ಬೆಕ್ಕುಗಳು ತಲುಪಲಾರದಂಥ ಸಂದಿಗಳನ್ನೇ ಗುಬ್ಬಿಗಳು ಗೂಡು ಕಟ್ಟಲು ಹುಡುಕುತ್ತವೆ.

 Sparrow

10,000 ವರ್ಷಗಳ ಹಿಂದಿನದು

ನಿಸರ್ಗದ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳದ್ದು ಸುಮಾರು 10,000 ವರ್ಷಗಳ ದೀರ್ಘ ಅನುಭವ. ಇದರದ್ದು ಮಾನವನ ಜೊತೆಗಿನ ಸಂಬಂಧವೂ ಪ್ರಾಚೀನ ಕಾಲದ್ದು. ಆದರೆ ಕಳೆದ ಮೂರು ದಶಕಗಳಿಂದ ಇವುಗಳ ಸಂತತಿ ಅಳಿಯುತ್ತಿದೆ. ನಗರ ಪ್ರದೇಶಗಳಲ್ಲಂತೂ ಬಹುತೇಕ ಕಣ್ಮರೆಯೇ ಆಗಿಹೋಗಿವೆ. ಇದಕ್ಕೆ ಕಾರಣಗಳು ಹಲವಾರಿವೆ.

Mobile tower

ಮೊಬೈಲ್‌ ಟವರ್‌ನಿಂದ ಅಪಾಯ

ಆಧುನಿಕ ಮೂಲಸೌಕರ್ಯಗಳು ಹೆಚ್ಚೆಚ್ಚು ಅಭಿವೃದ್ಧಿ ಹೊಂದುತ್ತ ಹೋದಂತೆ ಮರಗಿಡಗಳು ನಾಶವಾದವು; ಮನೆಯ ಸುತ್ತ-ಮುತ್ತ ಗುಬ್ಬಚ್ಚಿಗಳ ನೆಲೆಗಳು ನಶಿಸಿದವು. ಮೊಬೈಲ್‌ ಟವರ್‌ಗಳ ತರಂಗಗಳು ಸಹ ಗುಬ್ಬಿಗಳ ನಾಶಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಕೀಟನಾಶಕಗಳ ಮಿತಿಮೀರಿದ ಬಳಕೆಯಿಂದಲೂ ಗುಬ್ಬಿಗಳು ಸಾಯುತ್ತಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪರಿಸರ

ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

Vistara Gramadani: ಯಾವ ಬ್ಯಾಂಕ್ ಕೂಡ TDS ಕಟ್ಟಿ (ವಿಸ್ತಾರ ಗ್ರಾಮ ದನಿ) ಅಂತ ಕೇಳಲ್ಲ. ಗಾಬರಿ ಬೇಡ. TDS ಅಂದ್ರೆ TAX Deducted at Source ಅಂತ. ಅಂದರೆ ಈಗಾಗಲೆ ನಿಮ್ಮ ಫಿಕ್ಸೆಡ್ ಡಿಪಾಸಿಟ್ (FD ಅಕೌಂಟ್) ಮೇಲೆ ಕೊಟ್ಟ ಒಟ್ಟು ಬಡ್ಡಿಯ ಮೇಲೆ 10% ಆದಾಯ ತೆರಿಗೆಯನ್ನು ನಿಮ್ಮ ಬಡ್ಡಿಯಿಂದ ಕಳೆದು, ಆದಾಯ ತೆರಿಗೆ ಇಲಾಖೆಗೆ ಕಟ್ಟಿರುತ್ತಾರೆ. ಅಡಿಕೆ ಬೆಳೆಗಾರರೂ ಇದಕ್ಕೆ ಹೊರತಲ್ಲ! ಹಾಗಾದರೆ ಹಣ ಕಟ್‌ ಆಗದ ಹಾಗೆ ಮಾಡಲು ಏನು ಮಾಡಬೇಕು? ಇಲ್ಲಿದೆ ಸರಳ ಮಾಹಿತಿ.

VISTARANEWS.COM


on

Arecanut Price
Koo
Aravinda Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಉಜಿರೆ ಸಮೀಪದ ಒಂದು ಹಳ್ಳಿಯಿಂದ ಮಂಜುನಾಥ್ ಎನ್ನುವವರು ಫೋನ್ ಮಾಡಿ “ನಾನು ಅಡಿಕೆ ಬೆಳೆಗಾರ, ನಿಮ್ಮ ಅಡಿಕೆ ಬೆಳೆಗಾರರ ವಾಟ್ಸಪ್ ಗ್ರೂಪ್‌ನಲ್ಲಿದ್ದೇನೆ. ನನಗೆ ನನ್ನ ಬ್ಯಾಂಕಿಂದ ಒಂದು ಇ-ಮೇಲ್‌ ಬಂದಿದೆ. ಅದರಲ್ಲಿ ₹ 6,200 TDS ಕಟ್ಟಬೇಕು ಅಂತ ಬಂದಿದೆ. ಎನು ಮಾಡುವುದು? ಈ TDS ಅಂದ್ರೆ ಎಂತ?” ಅಂದ್ರು. “ಮೊದಲನೆಯದಾಗಿ, ಯಾವ ಬ್ಯಾಂಕ್ ಕೂಡ TDS ಕಟ್ಟಿ ಅಂತ ಕೇಳಲ್ಲ. ಗಾಬರಿ ಬೇಡ. TDS ಅಂದ್ರೆ TAX Deducted at Source ಅಂತ. ಅಂದ್ರೆ ಈಗಾಗಲೆ ನಿಮ್ಮ ಫಿಕ್ಸೆಡ್ ಡಿಪೋಸಿಟ್ (FD ಅಕೌಂಟ್) ಮೇಲೆ ಕೊಟ್ಟ ಒಟ್ಟು ಬಡ್ಡಿಯ ಮೇಲೆ 10% ಆದಾಯ ತೆರಿಗೆಯನ್ನು ನಿಮ್ಮ ಬಡ್ಡಿಯಿಂದ ಕಳೆದು, ಆದಾಯ ತೆರಿಗೆ ಇಲಾಖೆಗೆ ಕಟ್ಟಿರುತ್ತಾರೆ. ನಿಮಗೆ ಬಂದಿರೋ ಮಾಹಿತಿ ಬಹುಶಃ (Vistara Gramadani) ಅದೇ ಇರಬೇಕು” ಅಂದೆ.

ನಾನೊಬ್ಬ ಕೃಷಿಕ, ತೆರಿಗೆ ಕಟ್ಟಬೇಕಾ?

“ಅಯ್ಯೋ, ನನ್ನಿಂದ ಯಾಕೆ ಆದಾಯ ತೆರಿಗೆ ತಗೊಂಡಿದಾರೆ? ನಾನೊಬ್ಬ ಕೃಷಿಕ. ಈ ರೀತಿ ನನಗೆ ಗೊತ್ತಿಲ್ಲದೆ ಟ್ಯಾಕ್ಸ್ ತಗೊಂಡಿದ್ದು ತಪ್ಪಲ್ವಾ? ಅದರಲ್ಲೂ ನನಗೆ ಕೃಷಿ ಇನ್‌ಕಮ್ ಬಿಟ್ಟು ಬೇರೆ ಆದಾಯ ಇಲ್ಲ. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ ಅಲ್ವಾ?” ಅಂದ್ರು. “ಹೌದು. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ. ಕೃಷಿಕರಾದವರಿಗೆ ಕೃಷಿಯೇತರ ಆದಾಯ ಇದ್ರೆ, ಅದೂ ತೆರಿಗೆ ಮಿತಿಗೆ ಒಳ ಪಡುವ ಆದಾಯಕ್ಕಿಂತ ಹೆಚ್ಚಿದ್ದರೆ ಮಾತ್ರ ತೆರಿಗೆ ಬರುತ್ತದೆ. ನಿಮ್ಮ FD ಬಡ್ಡಿ ಕೃಷಿಯೇತರ ಆದಾಯ ಆಗಿದೆ. FDಯ ಮೂಲ ಇನ್ವೆಸ್ಟ್‌ಮೆಂಟ್ ಹಣ ಕೃಷಿಯದ್ದಾದರೂ, ಅದಕ್ಕೆ ಬಂದ ಬಡ್ಡಿ ಕೃಷಿಯೇತರ ಆದಾಯವಾಗಿರುತ್ತದೆ. ಹಾಗಾಗಿ ಬ್ಯಾಂಕ್‌ನವರು FD ಬಡ್ಡಿಗೆ 10% ತೆರಿಗೆಯನ್ನು ಬ್ಯಾಂಕಿನಲ್ಲಿ ಮುರಿದುಕೊಂಡಿದ್ದಾರೆ. ಜೊತೆಗೆ, ಬುಹುಶಃ ನೀವು FD ಮಾಡುವಾಗ ಕೊಡಬೇಕಿದ್ದ ಫಾರಂ 15G/ ಅಥವಾ 15H ನ್ನು ಕೊಟ್ಟಿರುವುದಿಲ್ಲ. ಇದರಿಂದ ನಿಮ್ಮ ಬಡ್ಡಿ ಹಣದಲ್ಲಿ 6,200 ರೂಪಾಯಿಗಳು TDS ಕಟ್ಟಾಗಿದೆ. ಏನೂ ಸಮಸ್ಯೆ ಇಲ್ಲ, ಹತ್ತಿರದ ಟ್ಯಾಕ್ಸ್ ಕನ್ಸಲ್ಟೆಂಟ್ ಅಥವಾ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ಸ್ ಮಾಹಿತಿ ಇದ್ದವರ ಬಳಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಶನ್ ಮಾಡ್ಸಿ, 45 ದಿನಗಳ ಒಳಗೆ 6,200 ವಾಪಾಸ್ ಬರುತ್ತೆ”

ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ

ಭಾರತವು ತನ್ನ ಮೂಲಭೂತ ಆಹಾರದ ಅವಶ್ಯಕತೆಗಳಿಗಾಗಿ ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಈ ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಯೋಜನೆಗಳು, ನೀತಿಗಳು ಮತ್ತು ಇತರ ಕ್ರಮಗಳನ್ನು ಹೊಂದಿದೆ – ಅವುಗಳಲ್ಲಿ ಒಂದು ಕೃಷಿ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ. ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ.
ಕೃಷಿಯೇತರ ವ್ಯವಹಾರಗಳಿಂದ ಬರುವ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಅದಕ್ಕೂ ತೆರಿಗೆ ಇರುವುದಿಲ್ಲ. ಉದಾಹರಣೆಗೆ ದೊಡ್ಡ ಮೊತ್ತವನ್ನು ಫಿಕ್ಸಡ್ ಡೆಪೋಸಿಟ್ ಮಾಡಿ ಅದಕ್ಕೆ ವಾರ್ಷಿಕ 1.8 ಲಕ್ಷ ರೂಪಾಯಿ ಆದಾಯ ಬಂದಿದ್ದರೂ ಅದಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಯಾಕೆಂದರೆ, ಕೃಷಿಯೇತರ ಆದಾಯ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ. (2023-24 ಕ್ಕೆ ಆದಾಯ ಮೂಲ ವಿನಾಯಿತಿ ಮಿತಿ ₹.3.00 ಲಕ್ಷ)

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

ಫಾರಂ 15G ಮತ್ತು 15H ಅಂದರೇನು?

ಸೂಕ್ಷ್ಮ ಇರುವುದು ಇಲ್ಲಿ. ವಾರ್ಷಿಕ FD ಇಂಟ್ರೆಸ್ಟ್ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ, ಬ್ಯಾಂಕಿನಲ್ಲಿ FD ಮಾಡುವಾಗ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ ಎಂದು ಫಾರಂ 15G ಮತ್ತು 15H ನ್ನು ಭರ್ತಿ ಮಾಡಿ ಕೊಡಬೇಕು.
ಒಬ್ಬ ವ್ಯಕ್ತಿಯ ಬಡ್ಡಿ ಆದಾಯವು ವರ್ಷಕ್ಕೆ ರೂ. 10,000ಕ್ಕಿಂತ ಹೆಚ್ಚಿರುವಾಗ ಬ್ಯಾಂಕುಗಳು TDS ಅನ್ನು ಕಡಿತಗೊಳಿಸಬೇಕಾಗುತ್ತದೆ. ₹10,000 ಈ ಮಿತಿಯನ್ನು ನಿರ್ಧರಿಸಲು ಬ್ಯಾಂಕ್ ಎಲ್ಲಾ ಶಾಖೆಗಳಲ್ಲಿ ಹೊಂದಿರುವ ಠೇವಣಿಗಳನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ಅವನು/ಅವಳು ಬಡ್ಡಿ ಮೊತ್ತದ ಮೇಲೆ TDS ಕಡಿತಗೊಳಿಸದಂತೆ ವಿನಂತಿಸಲು ಬ್ಯಾಂಕ್‌ಗೆ ಫಾರ್ಮ್ 15G ಮತ್ತು ಫಾರ್ಮ್ 15H ಅನ್ನು ಸಲ್ಲಿಸಬಹುದು. ಈ ಫಾರಂ ಸಲ್ಲಿಸದಿದ್ದಲ್ಲಿ, ಬ್ಯಾಂಕುಗಳು ಸಹಜವಾಗಿ ಒಟ್ಟು ಬಡ್ಡಿಯಲ್ಲಿ 10% ಆದಾಯ ತೆರಿಗೆ ಎಂದು ಕಡಿತ ಮಾಡಿ, ತೆರಿಗೆಯನ್ನು ತೆರಿಗೆ ಇಲಾಖೆಗೆ ಕಟ್ಟುತ್ತದೆ. ಅದರ ಒಂದು ದಾಖಲಾತಿಯಾಗಿ TDS (ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್) ಬ್ಯಾಂಕಿನವರು ಕೊಡುತ್ತಾರೆ. (ಬ್ಯಾಂಕಿನವರು ಕೇಳಿದರೆ ಕೊಡ್ತಾರೆ. ಕೆಲವು ಬ್ಯಾಂಕ್‌ಗಳಲ್ಲಿ ಇ-ಮೇಲ್‌ ಮಾಡಿರ್ತಾರೆ).
TDS ಅನ್ನು ಬ್ಯಾಂಕಿನವರು ಕೊಡುವುದೂ ಬೇಕಾಗಿಲ್ಲ. PAN ನಂಬರ್‌ ಬಳಸಿ, Incomtax portalನಲ್ಲಿ ಇದನ್ನು ಪಡೆದು ಪರಿಶೀಲಿಸಬಹುದು.

ಉಜಿರೆ ರೈತರ ಹಣ ಕಡಿತ ಆಗಿದ್ದೇಕೆ?

ಈಗ ಅಡಿಕೆ ಬೆಳೆಗಾರ ಉಜಿರೆ ಮಂಜುನಾಥ್‌ ಅವರ ವಿಷಯಕ್ಕೆ ಬರೋಣ. ಅವರು FD ಮಾಡುವಾಗ ಫಾರ್ಮ್ 15G ಮತ್ತು ಫಾರ್ಮ್ 15H ಕೊಟ್ಟಿಲ್ಲದ ಕಾರಣ ₹ 6,200 TDS ಕಟ್ಟಾಗಿದೆ.
ಮಂಜುನಾಥ‌ರವರು ಆ 6,200ನ್ನು ಹಿಂಪಡೆಯಲು ಜುಲೈ 31ರ ಒಳಗೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್‌ನ್ನು (ITR) ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಕೃಷಿ ಆದಾಯ, ಕೃಷಿಯೇತರ (ಬಡ್ಡಿ) ಆದಾಯದ ಮಾಹಿತಿಗಳನ್ನು ITR ನಲ್ಲಿ ತೋರಿಸಬೇಕು. 45 ದಿನಗಳೊಳಗೆ ಬ್ಯಾಂಕ್ ಕಡಿತಗೊಳಿಸಿದ TDS ಮರು ಪಾವತಿಯಾಗಿ SB ಖಾತೆಗೆ ಜಮಾ ಆಗುತ್ತದೆ.
ITR ಸಲ್ಲಿಸುವಾಗ ಎಲ್ಲಾ SB ಖಾತೆಗಳ ಮಾಹಿತಿಯನ್ನು (ಅಕೌಂಟ್ ನಂಬರ್, IFSC ಕೋಡ್) ನಮೂದಿಸಬೇಕು. ಹಾಗಾಗಿ, ಇಂತಹ ಸಂದರ್ಭದಲ್ಲಿ, ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಷನ್ ಮಾಡಬೇಕು. ಎಷ್ಟೋ ಸಂದರ್ಭಗಳಲ್ಲಿ TDS ಕಡಿತಗೊಳಿಸಿದ ಮಾಹಿತಿ ತೆರಿಗೆದಾರನಿಗೆ ತಿಳಿಯದೇ ಹೋಗಬಹುದು. ಎಲ್ಲಾ ಬ್ಯಾಂಕುಗಳು TDS ಕಡಿತದ ಮಾಹಿತಿಯನ್ನು ಕೊಡುವುದಿಲ್ಲ (ಕೇಳಿದರೆ ಮಾತ್ರ ಕೊಡ್ತಾರೆ).

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

ಜಮೀನು, ಮನೆ ಮಾರಿದಾಗ?

ಇದಲ್ಲದೆ ಕೃಷಿ ಜಮೀನು, ಮನೆ ಮಾರಾಟ ಮಾಡುವಾಗ, ಮಾರಾಟದ ಬೆಲೆ ₹ 50 ಲಕ್ಷಕ್ಕಿಂತ ಹೆಚ್ಚಿದ್ದಾಗ, ಖರೀದಿಸುವವನು ಖರೀದಿ ಮೌಲ್ಯದ ಮೇಲೆ, ಸರಿ ಸುಮಾರು 0.75% (₹.37,500+)TDS ಕಟ್ಟಿರುತ್ತಾನೆ. ಇದೂ ಕೂಡ ತೆರಿಗೆ ಆದಾಯ ಮಿತಿಯ ಒಳಗೆ ಇದ್ದರೆ, ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಮಾಡುವುದರಿಂದ ಹಿಂಪಡೆಯಬಹುದಾಗಿರುತ್ತದೆ. ನಿಮ್ಮ ಯಾವುದೇ ಆದಾಯದಿಂದ ಟಿಡಿಎಸ್ ಕಡಿತಗೊಂಡಿದ್ದರೆ ನೀವು ತೆರಿಗೆ ಕ್ರೆಡಿಟ್ ಫಾರ್ಮ್ 26AS ಮೂಲಕ ಗಮನಿಸಬಹುದು . ಈ ಫಾರ್ಮ್ ಏಕೀಕೃತ TDS ಹೇಳಿಕೆಯಾಗಿದ್ದು ಅದು ಎಲ್ಲಾ PAN ಹೊಂದಿರುವವರಿಗೆ ಇನ್‌ಕಮ್ ಟ್ಯಾಕ್ಸ್ ಪೋರ್ಡಲ್‌ನಲ್ಲಿ ಲಭ್ಯವಿದೆ. ಹಾಗಾಗಿ ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಕೃಷಿ ಆದಾಯದ ಜೊತೆ, ಕೃಷಿಯೇತರ ಆದಾಯವೂ ಇದ್ದಲ್ಲಿ, ಮತ್ತು ಅದು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೂ, ರಿಟರ್ನ್ಸ್ ಸಲ್ಲಿಸಬೇಕು. ಕೃಷಿಯೇತರ ಆದಾಯ ಮೂಲ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಅಂದ ಹಾಗೆ, ITR ರಿಟರ್ನ್ಸ್ ಮಾಡಲು ಇನ್ನು 5 ದಿನಗಳು ಮಾತ್ರ ಬಾಕಿ ಇವೆ. ಕೊನೇಯ ದಿನಾಂಕ 31.07.2024.

Continue Reading

ಆರೋಗ್ಯ

Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

Mosquito Repellent Plants: ಸೊಳ್ಳೆಗಳನ್ನು ದೂರ ಮಾಡಲು ಎಂಥಾ ಸರ್ಕಸ್‌ ಮಾಡಿದರೂ ನಷ್ಟವಿಲ್ಲ ಎಂಬಂತಾಗಿದೆ ಈ ಮಳೆಗಾಲದಲ್ಲಿ. ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳನ್ನು ಓಡಿಸಬಹುದು. ಜೊತೆಗೆ, ಮನೆಯ ಒಳ-ಹೊರಗೆ ಕೆಲವು ಬಗೆಯ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ.

VISTARANEWS.COM


on

Mosquito Repellent Plants
Koo

ಮಳೆಗಾಲವೆಂದರೆ ಸೊಳ್ಳೆಗಳ (Mosquito Repellent Plants) ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ಮಲೇರಿಯ, ಡೆಂಗ್ಯೂ, ಜೀಕಾ ಮುಂತಾದ ವೈರಸ್‌ಗಳು ಭೀತಿ ಮೂಡಿಸುತ್ತಿವೆ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೂ, ಮನೆಯೆದುರಿನ ರಸ್ತೆಯಲ್ಲೋ ಚರಂಡಿಯಲ್ಲೋ ನೀರು ನಿಲ್ಲುತ್ತಿದ್ದರೆ ಎಷ್ಟೆಂದು ಒದ್ದಾಡುವುದಕ್ಕೆ ಸಾಧ್ಯ? ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಿದ್ದಾಗಿದೆ, ಆದರೂ ಬಾಗಿಲು ತೆರೆದಾಗ ನಮಗಿಂತ ಮೊದಲು ಸೊಳ್ಳೆಗಳು ನುಗ್ಗುತ್ತವೆ. ರಾತ್ರಿ ಮಲಗುವಾಗಲೂ ಪರದೆಯೊಳಗೇ ಮಲಗುತ್ತೇವೆ, ಹಗಲೆಲ್ಲ ಸೊಳ್ಳೆ ಪರದೆ ಸುತ್ತಿಕೊಂಡು ಓಡಾಡಲು ಸಾಧ್ಯವೇ?
ಈ ಕ್ರಮಗಳೆಲ್ಲ ಒಳ್ಳೆಯದೇ. ಅಗತ್ಯವಾಗಿ ಬೇಕಾಗಿದ್ದು ಸಹ ಹೌದು. ಜೊತೆಗೆ ಕೆಲವು ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್‌ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

citronella

ಸಿಟ್ರೋನೆಲ್ಲ

ಲೆಮೆನ್‌ಗ್ರಾಸ್‌, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಯನ್ನು ದೂರ ಅಟ್ಟುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಗಿಡದ ಸಾರವನ್ನು ಸ್ಪ್ರೇ, ಕ್ರೀಮ್‌, ಲೋಶನ್‌, ತೈಲ, ಮೋಂಬತ್ತಿಗಳು ಮುಂತಾದ ಹಲವು ರೀತಿಯ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದಕ್ಕಿರುವ ನಿಂಬೆಯ ಗಾಢವಾದ ಸುಗಂಧವೇ ಸೊಳ್ಳೆಯನ್ನು ದೂರ ಇರಿಸುತ್ತದೆ. ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲಾದರೂ ಸರಿ, ಬೆಳೆಸಿ. ಇದು ಹಲವು ಔಷಧೀಯ ಉಪಯೋಗಗಳನ್ನೂ ಹೊಂದಿದ್ದು, ಸೊಳ್ಳೆ ಬಾರದಂತೆ ತಡೆಯಲೂ ನೆರವಾಗುತ್ತದೆ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.

Lavender Fragrant Flowers

ಲಾವೆಂಡರ್

ಇದರ ಹೂವುಗಳು ನಿಮ್ಮ ಬಾಲ್ಕನಿ ಮತ್ತು ಮನೆಯೊಳಗಿನ ಜಾಗವನ್ನು ಸುಂದರಗೊಳಿಸುವುದು ಮಾತ್ರವಲ್ಲ, ಆಹ್ಲಾದಕರ ಪರಿಮಳವು ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಇದರ ಘಮ ಮನುಷ್ಯರಿಗೆ ಆಪ್ಯಾಯಮಾನವೇ ಹೊರತು ಸೊಳ್ಳೆ ಅಥವಾ ಇತರ ಕೀಟಗಳಿಗಲ್ಲ. ಬಿಸಿಲು ಬರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಯಬಹುದು. ಈ ಹೂವನ್ನು ಒಣಗಿಸಿ ಅದನ್ನು ಪುಟ್ಟ ಸ್ಯಾಶೆಗಳಲ್ಲಿ ತುಂಬಿ ಮನೆಯಲ್ಲೆಲ್ಲಾ ಇರಿಸಿಕೊಳ್ಳಬಹುದು. ಲ್ಯಾವೆಂಡರ್‌ ತೈಲವನ್ನೂ ಇತರ ಎಣ್ಣೆಯೊಂದಿಗೆ ಸೇರಿಸಿ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ.

Marigold
Lemon balm

ಮಾರಿಗೋಲ್ಡ್‌

ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು, ನವರಾತ್ರಿ-ದೀಪಾವಳಿಯ ಆಸುಪಾಸಿನಲ್ಲಿ ಇಡೀ ಗಿಡ ತುಂಬುವಷ್ಟು ಹೂ ಬಿಡುತ್ತವೆ. ಇವೂ ಸಹ ಸೊಳ್ಳೆ ಓಡಿಸುವಲ್ಲಿ ಸಹಕಾರ ನೀಡುವಂಥವು. ಬಾಲ್ಕನಿಯಲ್ಲಿ, ಬಾಗಿಲು-ಕಿಟಕಿಗಳ ಬಳಿ, ಅಂದರೆ ಸೊಳ್ಳೆ ಒಳ ಪ್ರದೇಶ ಮಾಡುವ ಜಾಗಗಳಲ್ಲಿ ಇದನ್ನು ಕುಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಉಪಾಯ. ಇದರ ಹೂವುಗಳನ್ನು ಗೊಂಚಲು ಮಾಡಿ, ಹೂದಾನಿಗಳಲ್ಲಿ ಮನೆಯೊಳಗೆ ಇರಿಸಿಕೊಳ್ಳಬಹುದು. ಹೂವನ್ನು ಒಣಗಿಸಿಟ್ಟುಕೊಂಡರೆ ಸೊಳ್ಳೆ ಓಡಿಸುವಲ್ಲಿ ಇನ್ನಷ್ಟು ನೆರವು ದೊರೆಯುತ್ತದೆ.

Basil
Lemon balm

ಬೆಸಿಲ್

ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.

Lemon balm
Lemon balm

ಲೆಮೆನ್‌ ಬಾಮ್‌

ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.

ಇದನ್ನೂ ಓದಿ: Head Massage Tips: ತಲೆಯ ಮಸಾಜ್‌ನಿಂದ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ! ಹಾಗಂತ ಬೇಕಾಬಿಟ್ಟಿ ಮಸಾಜ್‌ ಮಾಡಬೇಡಿ

Continue Reading

ತುಮಕೂರು

Shira News: ಶಿರಾದಲ್ಲಿ ʼಪರೋಪಕಾರಂʼ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಅಭಿಯಾನ

Shira News: ಶಿರಾ ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದ ಆವರಣದಲ್ಲಿ “ಪರೋಪಕಾರಂ” ಸೇವಾ ಸಂಸ್ಥೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಜರುಗಿತು.

VISTARANEWS.COM


on

Cleanliness programme in Shira Public Health Center premises
Koo

ಶಿರಾ: ಪ್ರತಿಯೊಬ್ಬರೂ ಮನೆ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆಯ ಪೌರಾಯುಕ್ತ ರುದ್ರೇಶ್ (Shira News) ತಿಳಿಸಿದರು.

ನಗರದ ಸಾರ್ವಜನಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭಾನುವಾರ “ಪರೋಪಕಾರಂ” ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯ ತನ್ನ ನಿತ್ಯ ಜೀವನ ನಿರ್ವಹಣೆಯ ಜತೆಗೆ ಸಮಾಜದಲ್ಲಿ ಇತರರಿಗೂ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪರೋಪಕಾರಂ ಸೇವಾ ಸಂಸ್ಥೆಯ ವತಿಯಿಂದ ಶಿರಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸ್ವಚ್ಛತೆ, ಜಲ, ಪರಿಸರ ಸಂರಕ್ಷಣೆಗಳಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ ಜಾರಿ ಸಾಧ್ಯತೆ

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಾಥ್‌ ಮಾತನಾಡಿ, ಎಲ್ಲರೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸ್ವಚ್ಛತೆ ಇರುವ ಕಡೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಿರಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಡಿ.ಎಂ. ಗೌಡ, ನಗರಸಭೆಯ ಸದಸ್ಯರಾದ ಉಮಾ ವಿಜಯರಾಜ್, ರಾಧಾಕೃಷ್ಣ, ಸಮಾಜ ಸೇವಕ ಡೈರಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಇತರರು ಪಾಲ್ಗೊಂಡಿದ್ದರು.

Continue Reading

ಪರಿಸರ

Most Expensive Insect: ಈ ಕೀಟ ನಿಮ್ಮ ಬಳಿ ಇದ್ದರೆ 75 ಲಕ್ಷ ರೂ. ಸಿಗಬಹುದು!

ವಿಶ್ವದಲ್ಲಿ ಅತ್ಯಂತ ಬೆಲೆಬಾಳುವ (Most Expensive Insect) ಕೀಟವೊಂದಿದೆ ಎಂದು ಕೇಳಿದರೆ ಆಶ್ಚರ್ಯವಾಗಬಹುದು. ಆದರೆ ಇದರ ಬೆಲೆ ಕೇಳಿದರೆ ಎಲ್ಲರೂ ದಂಗಾಗುವುದು ಖಚಿತ. ಅಂತಹ ವಿಶೇಷ ಏನಿದೆ ಈ ಕೀಟದಲ್ಲಿ, ಇದು ಎಲ್ಲಿರುತ್ತೆ, ಹೇಗಿರುತ್ತೆ ಎಂದು ತಿಳಿಯುವ ಕುತೂಹಲ ಈಗಾಗಲೇ ಮನದಲ್ಲಿ ಮೂಡಿರಬಹುದು. ಆ ಕೀಟದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Most Expensive Insect
Koo

ಒಂದೇ ಒಂದು ಪುಟ್ಟ ಕೀಟದ ಬೆಲೆ (Most Expensive Insect) ಬರೋಬ್ಬರಿ 75 ಲಕ್ಷ ರೂ. ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಹೌದು ಇದು ವಿಶ್ವದ (world) ಅತ್ಯಂತ ಬೆಲೆಬಾಳುವ ಕೀಟಗಳಲ್ಲಿ ಒಂದು. ಇದನ್ನು ‘ಸ್ಟಾಗ್ ಬೀಟಲ್’ (stag beetle) ಅಥವಾ ಸಾರಂಗ ಜೀರುಂಡೆ ಎಂದು ಕರೆಯುತ್ತಾರೆ. ಈ ಕೀಟ ಇಷ್ಟು ದುಬಾರಿ ಯಾಕೆಂದರೆ ಅದರ ಕುರಿತಾದ ವಿಶೇಷ ನಂಬಿಕೆಯಿಂದ.

ಸಾರಂಗ ಜೀರುಂಡೆಯ ವಿಶೇಷ ಏನೆಂದರೆ ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾರಂಗ ಜೀರುಂಡೆಗಳು ತುಂಬಾ ದುಬಾರಿಯಾಗಿವೆ. ಸಾರಂಗ ಜೀರುಂಡೆಯನ್ನು ಹೊಂದಿದ್ದರೆ ಬಹುಬೇಗನೆ ಶ್ರೀಮಂತಿಕೆ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದೇ ಕೆಲವರು ನಂಬುತ್ತಾರೆ.

ಸೈಂಟಿಫಿಕ್ ಡೇಟಾ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಈ ಕೀಟಗಳು ಅರಣ್ಯ ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು ರೂಪಿಸುತ್ತವೆ. ಅವುಗಳ ವಿಸ್ತರಿಸಿದ ದವಡೆಗಳು ಪುರುಷ ಜಾತಿಯಲ್ಲಿ ಬಹುರೂಪತೆಗೆ ಹೆಸರುವಾಸಿಯಾಗಿದೆ.


ಎಲ್ಲಿ ಕಾಣಬಹುದು?

ಸಾರಂಗ ಜೀರುಂಡೆಗಳು ಶೀತ ತಾಪಮಾನದಿಂದ ದೂರವಿರುತ್ತವೆ. ಅವುಗಳು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸ್ವಭಾವತಃ ಕಾಡುಪ್ರದೇಶಗಳಲ್ಲಿ ಕಾಣಸಿಗುತ್ತವೆ. ಆದರೆ ಅವುಗಳನ್ನು ಕೆಲವೊಂದು ಉದ್ಯಾನವನಗಳಲ್ಲಿ ಕಾಣಬಹುದು. ಸತ್ತ ಮರ, ಮುಳ್ಳುಗಿಡಗಳು ಮತ್ತು ಸಾಂಪ್ರದಾಯಿಕ ತೋಟಗಳು ಅವುಗಳ ಆಶ್ರಯತಾಣವಾಗಿರುತ್ತದೆ.

ಏನು ತಿನ್ನುತ್ತದೆ?

ಸಾರಂಗ ಜೀರುಂಡೆಗಳಿಗೆ ಮುಖ್ಯ ಆಹಾರ ಮೂಲವೆಂದರೆ ಸಿಹಿ ದ್ರವಗಳು. ಉದಾಹರಣೆಗೆ ಮರದ ರಸ ಮತ್ತು ಕೊಳೆಯುತ್ತಿರುವ ಹಣ್ಣಿನ ರಸ. ಅದರ ಪ್ರಾಥಮಿಕ ಶಕ್ತಿಯ ಮೂಲವೆಂದರೆ ಅದು ಲಾರ್ವಾಗಳಾಗಿದ್ದಾಗ ಸಂಗ್ರಹಿಸಿದ ಶಕ್ತಿಯೇ ಆಗಿರುತ್ತದೆ. ಸಾರಂಗ ಜೀರುಂಡೆಗಳು ಆರೋಗ್ಯಕರ ಸಸ್ಯಗಳಿಗೆ ಏನೂ ಮಾಡುವುದಿಲ್ಲ. ಯಾಕೆಂದರೆ ಅವು ಸತ್ತ ಮರವನ್ನು ಮಾತ್ರ ತಿನ್ನುತ್ತವೆ.


ಇದನ್ನೂ ಓದಿ: Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

ಆಯಸ್ಸು

ಲಂಡನ್‌ನಲ್ಲಿರುವ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಈ ಕೀಟಗಳು ಸಾಮಾನ್ಯವಾಗಿ 2 ರಿಂದ 6 ಗ್ರಾಂ ತೂಕವಿರುತ್ತವೆ. ಸರಾಸರಿ 3 ರಿಂದ 7 ವರ್ಷಗಳವರೆಗೆ ಬದುಕುತ್ತವೆ. ಹೆಣ್ಣು 30- 50 ಮಿಮೀ ಉದ್ದವಿದ್ದರೆ, ಗಂಡು 35- 75 ಮಿಮೀ ಉದ್ದವಿರುತ್ತದೆ.

ಕೊಂಬನ್ನು ಹೋಲುವ ಗಂಡು ಸಾರಂಗ ಜೀರುಂಡೆಯ ವೈಶಿಷ್ಟ್ರ್ಯವೆಂದರೆ ಅದರ ದವಡೆಗಳು. ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಸಾರಂಗ ಜೀರುಂಡೆಗಳು ತಮ್ಮ ವಿಶಿಷ್ಟವಾದ ಕೊಂಬಿನಂತಹ ದವಡೆಗಳನ್ನು ಬಳಸಿಕೊಂಡು ಹೆಣ್ಣು ಸಂಗಾತಿಯಾಗುವ ಅವಕಾಶಕ್ಕಾಗಿ ಪರಸ್ಪರ ಸ್ಪರ್ಧಿಸುತ್ತವೆ.

Continue Reading
Advertisement
Family Drama Film Review
ಸಿನಿಮಾ6 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ31 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ44 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ59 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌