ವಿಶ್ವ ಪರಿಸರ ದಿನ: 'ಸಸಿ ನೆಡಿ, ಫೋಟೊ ಕಳುಹಿಸಿ' ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ - Vistara News

ಪರಿಸರ

ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ

ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ ಆರಂಭಿಸಿದ ‘ಸಸಿ ನೆಡಿ, ಫೋಟೊ ಕಳುಹಿಸಿ’ ಅಭಿಯಾನಕ್ಕೆ ಜನರಿಂದ ಭಾರಿ ಬೆಂಬಲ ಸಿಕ್ಕಿದೆ. ಸಸಿ ನೆಟ್ಟು, ಪರಿಸರ ಪ್ರಜ್ಞೆ ಮೆರೆದು, ಫೋಟೊ ಕಳುಹಿಸಿದ್ದಾರೆ. ಜನ ಕಳುಹಿಸಿದ ಪರಿಸರ ಕಾಳಜಿಯ ಫೋಟೊಗಳು ಇಲ್ಲಿವೆ.

VISTARANEWS.COM


on

World Environment Day Vistara Photo Campaign
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಸ್ತಾರ ನ್ಯೂಸ್‌ ಚಾನೆಲ್‌ ವೀಕ್ಷಕರು ಹಾಗೂ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಓದುಗರ ಸ್ಪಂದನೆಯೇ ಅಂಥದ್ದು. ವಿಧಾನಸಭೆ ಚುನಾವಣೆ ವೇಳೆ “ಮತ ಹಾಕಿ, ಫೋಟೊ ಕಳುಹಿಸಿ” ಎಂಬ ಅಭಿಯಾನ ಆರಂಭಿಸಿದ್ದೆವು. ಆಗ ವೀಕ್ಷಕರು ಹಾಗೂ ಓದುಗರು ಸಾವಿರಾರು ಫೋಟೊಗಳನ್ನು ಕಳುಹಿಸಿ ನಮ್ಮ ಅಭಿಯಾನಕ್ಕೆ ಬೆಂಬಲ ನೀಡಿದ್ದರು. ಈಗ ವಿಶ್ವ ಪರಿಸರ ದಿನ ಹಿನ್ನೆಲೆಯಲ್ಲಿ “ಸಸಿ ನೆಡಿ, ಫೋಟೊ ಕಳುಹಿಸಿ” ಅಭಿಯಾನ ಆರಂಭಿಸಿದ್ದೇವೆ. ಈಗಲೂ ಅಷ್ಟೇ, ಸಾವಿರಾರು ಪರಿಸರ ಪ್ರಿಯರು ಸಸಿ ನೆಟ್ಟಿರುವ ಫೋಟೊಗಳನ್ನು ಕಳುಹಿಸಿ ಉತ್ತಮ ಸ್ಪಂದನೆ ನೀಡಿದ್ದಾರೆ. ಪರಿಸರ ಕಾಳಜಿ ಮೆರೆದಿದ್ದಾರೆ. ಸಾವಿರಾರು ಫೋಟೊಗಳಲ್ಲಿ ಆಯ್ದ ಕೆಲವು ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್‌ ಅಭಿಯಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Chocolate industry: ಪಶ್ಚಿಮ ಆಫ್ರಿಕಾದ ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ.

VISTARANEWS.COM


on

By

Chocolate industry
Koo

ನವದೆಹಲಿ: ಚಾಕೊಲೇಟ್‌ನಲ್ಲಿ ಬಳಸುವ ಪ್ರಮುಖ ಸಾಮಗ್ರಿಯಾದ ಕೋಕೋ (cacao) ಮರಗಳಲ್ಲಿ ವೈರಸ್ (virus) ಕಾಣಿಸಿಕೊಂಡಿದ್ದು, ಇದು ಚಾಕೊಲೇಟ್ ಉತ್ಪಾದನೆ ಮೇಲೆ ಬಹುದೊಡ್ದ ಹೊಡೆತ ಬೀಳುವ ಸಾಧ್ಯತೆ ಇದೆ. ಇದರಿಂದ ಚಾಕೊಲೇಟ್‌ಗಳು ಮತ್ತಷ್ಟು ದುಬಾರಿಯಾಗಬಹುದು.

ಪ್ರಸ್ತುತ ಪಶ್ಚಿಮ ಆಫ್ರಿಕಾದ (West Africa) ಕೋಕೋ ಮರಗಳಲ್ಲಿ ವೈರಸ್ ಹರಡುತ್ತಿದ್ದು, ಇದು ಚಾಕೊಲೇಟ್ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮೀಲಿಬಗ್‌ (mealybugs) ವೈರಸ್ ಗಳಿಂದ ಚಿಗುರು ಊದಿಕೊಂಡಿದ್ದು, ಒಂದರಿಂದ ಇನ್ನೊಂದಕ್ಕೆ ವೇಗವಾಗಿ ಹರಡುತ್ತಿದೆ. ಇದು ಬಿಸಿ ವಾತಾವರಣದಲ್ಲಿ ಹೆಚ್ಚು ತೀವ್ರವಾಗಿ ಬೆಳೆಯುತ್ತಿದೆ.

ಈ ವೈರಸ್ ಭೂಮಿಯ ಮೇಲಿರುವ ಪರಿಸರ ವಿನಾಶಕಾರಿ ಜೀವಿ ಎನ್ನಲಾಗುತ್ತದೆ. ಇದು ಘಾನಾದಲ್ಲಿ 50,000 ಹೆಕ್ಟೇರ್ ಕೋಕೋ ಫಾರ್ಮ್‌ಗಳನ್ನು ನಾಶಪಡಿಸಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದಕ ದೇಶ. ಇದು ಜಾಗತಿಕ ಚಾಕೊಲೇಟ್ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಯುಎಸ್ ಮತ್ತು ಘಾನಾದ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ವೈರಸ್ ಹರಡುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಪಂಚದ ಚಾಕೊಲೇಟ್‌ಗಳನ್ನು ಉಳಿಸಲು ಹೊಸ ಮಾರ್ಗವನ್ನು ಈಗಾಗಲೇ ಕಂಡುಹಿಡಿದಿದ್ದರೂ ಇದು ಚಾಕೊಲೇಟ್ ನ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.


ಚಾಕೊಲೇಟ್ ಪೂರೈಕೆ ಮೇಲೆ ಪರಿಣಾಮ

ಪ್ರಪಂಚದ ಶೇ. 50ರಷ್ಟು ಚಾಕೊಲೇಟ್‌ಗಳು ಘಾನಾ ಮತ್ತು ಐವರಿ ಕೋಸ್ಟ್‌ನಿಂದ ಬರುತ್ತವೆ. ಈ ಪ್ರದೇಶಗಳಲ್ಲಿನ ಕೋಕೋ ಮರಗಳ ಚಿಗುರು ವೈರಸ್ ನಿಂದ ನಾಶವಾಗಿವೆ. ಕೊಲಂಬಿಯಾದಲ್ಲಿ ರೈತರು ಒಡೆದು ಸಿಪ್ಪೆ ಸುಲಿದಿದ್ದರೂ ಕೋಕೋ ಮರಗಳ ಎಲೆ, ಮೊಗ್ಗು ಮತ್ತು ಹೂವುಗಳನ್ನು ತಿನ್ನುವ ಮೀಲಿಬಗ್ಸ್ ಎಂದು ಕರೆಯಲ್ಪಡುವ ಸಣ್ಣ ಕೀಟಗಳಿಂದ ವೈರಸ್ ಹರಡುತ್ತದೆ. ಘಾನಾವು 254 ಮಿಲಿಯನ್ ಮರಗಳನ್ನು ಹೊಂದಿದೆ ಮತ್ತು ಐವರಿ ಕೋಸ್ಟ್‌ನಲ್ಲಿ ಶೇ. 20ರಷ್ಟು ಬೆಳೆ ಸೋಂಕಿಗೆ ಒಳಗಾಗಿದೆ.

ಚಾಕೊಲೇಟ್‌ ಹೇಗೆ ತಯಾರಿಸಲಾಗುತ್ತದೆ?

ಉಷ್ಣವಲಯದ ಹವಾಮಾನದಲ್ಲಿ ಬೆಳೆಯುವ ಕೋಕೋ ಬೀನ್ಸ್‌ನಿಂದ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಹುದುಗಿಸಿ, ಒಣಗಿಸಿ ಮತ್ತು ಹುರಿದು ಮಾಡಿದ ಪುಡಿಯನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಚಾಕೊಲೇಟ್ ತಯಾರಿಸಲಾಗುತ್ತದೆ.

2022ರಲ್ಲಿ ಐವರಿ ಕೋಸ್ಟ್ 2.2 ಮಿಲಿಯನ್ ಟನ್ ಕೋಕೋವನ್ನು ಉತ್ಪಾದಿಸಿತು ಮತ್ತು ಘಾನಾ 1.1 ಮಿಲಿಯನ್ ಉತ್ಪಾದಿಸಿತು. ಪ್ರಪಂಚದ ಅತಿದೊಡ್ಡ ಉತ್ಪಾದಕ ಇಂಡೋನೇಷ್ಯಾವು 2022 ರಲ್ಲಿ 6,67,000 ಟನ್‌ಗಳನ್ನು ಉತ್ಪಾದಿಸಿದೆ.

ಬೆಚ್ಚಗಿನ ತಾಪಮಾನವು ಮೀಲಿಬಗ್ ಗೆ ಹೆಚ್ಚು ಪೂರಕವಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಆರ್ಲಿಂಗ್ಟನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ತಜ್ಞರ ಪ್ರಕಾರ, ಈ ವೈರಸ್ ಪ್ರಪಂಚದ ಚಾಕೊಲೇಟ್ ಪೂರೈಕೆಗೆ ಅಪಾಯವನ್ನುಂಟು ಮಾಡುತ್ತದೆ.

ವೈರಸ್ ಅನ್ನು ನಿಲ್ಲಿಸಬಹುದೇ?

ಕೀಟನಾಶಕಗಳಿಂದ ಮೀಲಿಬಗ್‌ಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಸೋಂಕಿತ ಮರಗಳನ್ನು ಕಡಿಯುವುದು ಮತ್ತು ನಿರೋಧಕ ಮರಗಳನ್ನು ನೆಡುವುದು ಸುಲಭ ಮತ್ತು ಅಗ್ಗದ ಮಾರ್ಗವಾಗಿದೆ. ರೈತರು ಮರಗಳಿಗೆ ಲಸಿಕೆಯನ್ನೂ ನೀಡಬಹುದು. ಆದರೆ ಇದು ದುಬಾರಿಯಾಗಿರುವುದರಿಂದ ಇದು ಮರಗಳಿಂದ ಉತ್ಪತ್ತಿಯಾಗುವ ಕೋಕೋ ಮೇಲೆ ಪರಿಣಾಮವನ್ನು ಬೀರುತ್ತದೆ.

ದೂರದೂರ ಮರಗಳನ್ನು ನೆಡುವುದರಿಂದ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಆದರೆ ಇದು ಇನ್ನೂ ಪ್ರಯೋಗ ಹಂತದಲ್ಲಿದೆ. ಇದು ರೈತರಿಗೆ ತಮ್ಮ ಬೆಳೆಯನ್ನು ರಕ್ಷಿಸಲು ಸಹಾಯ ಮಾಡುವ ಸಾಧ್ಯತೆಯಿದೆ.


ಮೀಲಿಬಗ್‌ನಿಂದ ಮಾತ್ರ ತೊಂದರೆಯೇ?

ಈ ಹಿಂದೆ ಕಪ್ಪು ಪಾಡ್ ರೋಗವು ಚಾಕೊಲೇಟ್ ಉತ್ಪನ್ನಗಳ ಮೇಲೆ ಪರಿಣಾಮ ಬೀರಿತ್ತು. ಈ ರೋಗವು ಕೋಕೋ ಬೀಜಗಳನ್ನು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಇದು 2022 ರಲ್ಲಿ ವಿಶ್ವದ ವಾರ್ಷಿಕ ಕೋಕೋ ಬೆಳೆಗಳಲ್ಲಿ ಶೇ. 30ರಷ್ಟನ್ನು ನಾಶಪಡಿಸಿತು. ಈ ಪ್ರದೇಶದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ರೋಗವನ್ನು ಮತ್ತಷ್ಟು ಉಲ್ಬಣವಾಗಿತ್ತು. ಏಕೆಂದರೆ ಸೋಂಕು ತೇವಾಂಶವುಳ್ಳ ಸ್ಥಿತಿಯಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಹರಡುತ್ತದೆ.

Continue Reading

ಪರಿಸರ

Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಕಳೆದೆರಡು ವಾರದಲ್ಲಿ ಅಡಿಕೆಯ (Areca Price) ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.

VISTARANEWS.COM


on

Areca Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ನಿರ್ದಿಷ್ಟ ಪಕ್ಷ (Areca Price) ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ, ಷೇರು ಮಾರುಕಟ್ಟೆ ಏರುತ್ತದೆ. ಇನ್ನೊಂದು ನಿರ್ದಿಷ್ಟ ಪಕ್ಷ ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಷೇರು ಮಾರುಕಟ್ಟೆಯ ಏರಿಳತವೂ ತಲ್ಲಣವನ್ನೇ ಸೃಷ್ಟಿ ಮಾಡುತ್ತದೆ. ಆದರೆ, ಈ ಬಾರಿ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ಏರಿಳಿತವನ್ನು ಮೀರಿಸುವಂತೆ ಅಡಿಕೆ ದರ ಗೂಳಿಯ ಕುಣಿತವಾಗಿದೆ! ಕಳೆದೆರಡು ವಾರದಲ್ಲಿ ಅಡಿಕೆಯ ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ, ಮೂರು ತಿಂಗಳ ಹಿಂದೆ 53,000 ಇದ್ದ ಬೆಟ್ಟ ಅಡಿಕೆ ಧಾರಣೆ ಕಳೆದ ವಾರ 55,000 ರೂ. ದಾಟಿ, ಇವತ್ತು 56,333 ರೂ.ಗೆ ತಲುಪಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ.

Areca nuts image

ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ರಾಶಿ ಇಡಿ ಅಡಿಕೆ ಆವಕ ಬಾರೀ ಏರಿಕೆ ಕಂಡಿದೆ:
ದಿನಾಂಕ 17.04.2024: 3,907 ಕ್ವಿಂಟಾಲ್
ದಿನಾಂಕ 19.04.2024: 4,378 ಕ್ವಿಂಟಾಲ್
ದಿನಾಂಕ 22.04.2024: 4543 ಕ್ವಿಂಟಾಲ್
ದಿನಾಂಕ 23.04.2024: 17,474 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,800 ರೂ., ಬೆಟ್ಟೆ 56,300 ರೂ. ದಾಟಿದಾಗ ಸಹಜವಾಗಿಯೇ ಗೊರಬಲು 41 ಸಾವಿರದ ಸನಿಹ ತಲುಪಿದೆ. ಈ ಎಲ್ಲ ವೆರೈಟಿಗಳ ಧಾರಣೆಯ ಏರಿಕೆಯ ಹಿನ್ನೆಲೆಯಲ್ಲಿ ಸಿಪ್ಪೆ ಗೋಟು ದರವೂ ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ 20,000 ರೂ. ದಾಟುವ ನಿರೀಕ್ಷೆ ರೈತರದು. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ವ್ಯವಹಾರವೂ ಬಹಳ ಕಮ್ಮಿ. APMC ಒಳಗೆ ವ್ಯಾಪ್ತಿಗೆ ಬರದೆಯೇ ಸಿಪ್ಪೆ ಗೋಟು ವ್ಯವಹಾರ ನೆಡೆಯುತ್ತದೆ. ಅದನ್ನು APMC ವ್ಯಾಪ್ತಿಯ ಒಳಗೆ ಸಂಪೂರ್ಣ ತರಲು ಪ್ರಯತ್ನ ನೆಡೆಯುತ್ತಿಲ್ಲ.

Areca nut

ಚುನಾವಣೆ ಬಳಿಕ ಏನಾಗಲಿದೆ?

ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ದೊಡ್ಡ ಮಟ್ಟದ ಓಪನ್ ನಗದು ವ್ಯವಹಾರಕ್ಕೆ ಒಂದಿಷ್ಟು ಚುನಾವಣೆ ನೀತಿ ಸಂಹಿತೆ ನಿರ್ಬಂಧ ಇರುವುದರಿಂದ, ಎಲೆಕ್ಷನ್ ಮುಗಿದ ಮೇಲೆ ಅಡಿಕೆ ನಗದು ವ್ಯವಹಾರ ಇನ್ನಷ್ಟು ತೀವ್ರತೆ ಪಡೆದ ಮೇಲೆ ಧಾರಣೆ ಏರಿಕೆಯ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ಇದೆ.
ಏನೇ ಆದರೂ, ಅಡಿಕೆ ಮಾರುಕಟ್ಟೆಯ ಧಾರಣೆ ಸಂಪೂರ್ಣ ಲೆಕ್ಕಾಚಾರಕ್ಕೆ ಸಿಗುವಂಥದ್ದಲ್ಲ! ಅದೂ ಷೇರು ಮಾರುಕಟ್ಟೆಯ ರೀತಿ, ಯಾವಾಗ ಗೂಳಿ ಮುನ್ನುಗ್ಗುತ್ತದೆ, ಕರಡಿ ಕುಣಿಯುತ್ತದೆ ಗೊತ್ತಾಗುವುದಿಲ್ಲ.
ಅಡಿಕೆ ಧಾರಣೆಯ ಗೂಳಿ ನುಗ್ಗುವ ಸಮಯದಲ್ಲೇ ಕಾಳು ಮೆಣಸಿನ ಧಾರಣೆಯೂ ಏರು ಮುಖ ಕಾಣುತ್ತಿದೆ. ಕಾಳು ಮೆಣಸಿನ ದರ ಈಗ 57,000 ರೂ. ತಲುಪಿದೆ. ಒಟ್ಟಿನಲ್ಲಿ ಅಡಿಕೆ, ಕಾಳು ಮೆಣಸು ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ನಾಲ್ಕು ಜನ ಸೇರಿದಲ್ಲಿ, ರಾಜಕೀಯ ವಿಚಾರದೊಂದಿಗೆ ಅಡಿಕೆ ಧಾರಣೆಯ ಚರ್ಚೆಯೂ ಜೋರಾಗಿ ಸೌಂಡ್ ಮಾಡ್ತಾ ಇದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading

ಪರಿಸರ

Earth day 2024: ವಿಶ್ವ ಭೂಮಿ ದಿನವನ್ನು ಇಂದೇ ಆಚರಿಸುವ ಉದ್ದೇಶವೇನು?

Earth day 2024: ಎಲ್ಲರಲ್ಲೂ ಭೂಮಿ ಆರೋಗ್ಯದ ಬಗ್ಗೆ ಕಾಳಜಿಯನ್ನು ಉತ್ತೇಜಿಸುವ ಸಲುವಾಗಿ ವಿಶ್ವದಾದ್ಯಂತ ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನಲೆ, ಮುಖ್ಯ ಉದ್ದೇಶ ಏನು ಗೊತ್ತೇ? ಇಲ್ಲಿದೆ ಮಾಹಿತಿ.

VISTARANEWS.COM


on

By

Earth day 2024
Koo

ಪ್ರಾಕೃತಿಕ ವಿಕೋಪದ (Natural disaster) ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಹೀಗಾಗಿ ಪರಿಸರ ಸಂರಕ್ಷಣೆಗೆ (Environmental protection) ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಲೇ ಬೇಕಾದ ಅನಿವಾರ್ಯತೆ ಈಗ ಎಲ್ಲರಿಗೂ ಇದೆ. ಪರಿಸರ ಸಂರಕ್ಷಣೆಗಾಗಿ ನಡೆಸುವ ಕಾರ್ಯಗಳನ್ನು ಬೆಂಬಲಿಸಲು ವಿಶ್ವದಾದ್ಯಂತ (world) ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನು (Earth day 2024) ಆಚರಿಸಲಾಗುತ್ತದೆ.

1970ರಲ್ಲಿ ಅಮೆರಿಕ (US) ಕಾಲೇಜು ಕ್ಯಾಂಪಸ್‌ಗಳಲ್ಲಿ ಮೊದಲ ಬಾರಿಗೆ ವಿಶ್ವ ಭೂಮಿ ದಿನವನ್ನು ಆಚರಿಸಲಾಯಿತು. ವಿಶ್ವದ 192 ದೇಶಗಳಲ್ಲಿ ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’ ಎಂಬ ಜಾಗತಿಕ ಥೀಮ್‌ನೊಂದಿಗೆ ಈ ಬಾರಿ ಭೂಮಿ ದಿನವನ್ನು ಸೋಮವಾರ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ.

ಯಾರ ಕಲ್ಪನೆ?

ಜಾಗತಿಕವಾಗಿ ಗುರುತಿಸಲ್ಪಟ್ಟ ವಿಶ್ವ ಭೂಮಿ ದಿನವನ್ನು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. ಯುಎಸ್ ನ ವಿಸ್ಕಾನ್ಸಿನ್‌ನ ಜೂನಿಯರ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಅವರು ಮೊದಲ ಬಾರಿಗೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜು ಕ್ಯಾಂಪಸ್‌ಗಳಲ್ಲಿ ಈ ದಿನವನ್ನು ಆಚರಿಸಲು ಈ ಮೂಲಕ ವಿದ್ಯಾರ್ಥಿಗಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ತಮ್ಮ ಕಲ್ಪನೆಯನ್ನು ಘೋಷಿಸಿದರು. ಇದರಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಏಪ್ರಿಲ್ 22 ಅನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

ಯುನೈಟೆಡ್ ನೇಷನ್ಸ್ 2016 ರ ಏಪ್ರಿಲ್ 22 ಅನ್ನು ಪ್ಯಾರಿಸ್ ಒಪ್ಪಂದದ ದಿನವಾಗಿ ಘೋಷಿಸಿತ್ತು. ಈ ದಿನ ವಿಶ್ವದ 196 ರಾಷ್ಟ್ರಗಳ ನಾಯಕರು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಕಾನೂನುಬದ್ಧ ಒಪ್ಪಂದವನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡು ಸಹಿ ಮಾಡಿದರು.

ಈ ಒಪ್ಪಂದದ ಅಡಿಯಲ್ಲಿ ದೇಶಗಳು ಜಾಗತಿಕ ತಾಪಮಾನ ಏರಿಕೆಯನ್ನು 1.5 ° ಸೆಲ್ಸಿಯಸ್ ಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತವೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗಳು 2025ಕ್ಕಿಂತ ಮೊದಲು ಗರಿಷ್ಠ ಮಟ್ಟದಲ್ಲಿ ಮತ್ತು 2030 ರ ವೇಳೆಗೆ ಶೇ. 43ರಷ್ಟು ಕಡಿಮೆ ಮಾಡುವ ಯೋಜನೆಯನ್ನು ಹೊಂದಿದೆ.

ಭೂಮಿಯ ದಿನ ಹುಟ್ಟಿದ್ದು ಯಾವಾಗ?

ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಭಾರೀ ತೈಲ ಸೋರಿಕೆಯ ಕೆಲವು ತಿಂಗಳ ನಂತರ ಅಮೆರಿಕದಲ್ಲಿ ಭೂಮಿ ದಿನ ಹುಟ್ಟಿಕೊಂಡಿತು. ಅಮೆರಿಕದ ಸೆನೆಟರ್ ಗೇಲಾರ್ಡ್ ನೆಲ್ಸನ್ ಈ ಸಮಯದಲ್ಲಿ ವಾಯು ಮತ್ತು ನೀರಿನ ಮಾಲಿನ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಇದಕ್ಕಾಗಿ ಅವರು ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ನೇಮಿಸಿಕೊಂಡರು. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸಲು ಏಪ್ರಿಲ್ 22 ಅನ್ನು ವಿಶ್ವ ಭೂಮಿ ದಿನವನ್ನಾಗಿ ಆಯ್ಕೆ ಮಾಡಿಕೊಂಡರು.

Earthday.org ವೆಬ್‌ಸೈಟ್‌ನ ಪ್ರಕಾರ ಹೇಯ್ಸ್ ಅವರು 85 ಮಂದಿಯನ್ನು ಒಗ್ಗೂಡಿಸಿ ವಿಶ್ವದಾದ್ಯಂತ ಭೂಮಿ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉತ್ತೇಜನ ನೀಡಿದರು.


ಥೀಮ್ ಏನು?

ಭೂಮಿ ವರ್ಸಸ್ ಪ್ಲಾಸ್ಟಿಕ್ಸ್ ಎಂಬ ಸಂದೇಶದೊಂದಿಗೆ ಭೂಮಿಯಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಗ್ಗೂಡಬೇಕು ಎನ್ನುವ ಸಂದೇಶದೊಂದಿಗೆ ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಶೇ. 60ರಷ್ಟು ಕಡಿಮೆಯಾಗಬೇಕು ಎನ್ನುವ ಉದ್ದೇಶ ಇದು ಹೊಂದಿದೆ. 2040ರ ವೇಳೆಗೆ ಪ್ಲಾಸ್ಟಿಕ್‌ಗಳು ಮತ್ತು ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಭವಿಷ್ಯವನ್ನು ನಿರ್ಮಿಸುವುದು ಇದರ ಗುರಿಯಾಗಿದೆ.

Continue Reading

ವೈರಲ್ ನ್ಯೂಸ್

Ancient snake: ಭಾರತದಲ್ಲಿತ್ತು 1000 ಕಿಲೋ ತೂಕ, 50 ಅಡಿ ಉದ್ದದ ʼವಾಸುಕಿʼ ಹಾವು!

Ancient snake: 2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು.

VISTARANEWS.COM


on

Ancient snake vasuki indicus
Koo

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.

ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.

“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.

ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?

Continue Reading
Advertisement
Mohammad Shami
ಪ್ರಮುಖ ಸುದ್ದಿ36 mins ago

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Narendra modi
ಪ್ರಮುಖ ಸುದ್ದಿ1 hour ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Udupi Sri Krishna Temple
ಕರ್ನಾಟಕ1 hour ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ1 hour ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ2 hours ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Modi in Karnataka stay in Belagavi tomorrow and Huge gatherings at five places
Lok Sabha Election 20242 hours ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

BJP National President JP Nadda Election campaign in Surapura
ಕರ್ನಾಟಕ3 hours ago

Lok Sabha Election 2024: ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

deepfake
ತಂತ್ರಜ್ಞಾನ3 hours ago

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

Lok Sabha Election 2024 Bjp workers clash in Chikmagalur
Lok Sabha Election 20243 hours ago

Lok Sabha Election 2024: ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

lok sabha election
ಪ್ರಮುಖ ಸುದ್ದಿ3 hours ago

Lok Sabha Election : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ; ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ10 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202410 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202411 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ17 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌