Vistara Explainer: ಎತ್ತ ಸಾಗುತ್ತಿದೆ ಮಯನ್ಮಾರ್ ದಂಗೆ ಮತ್ತು ರೋಹಿಂಗ್ಯಾ ಬಿಕ್ಕಟ್ಟು? - Vistara News

EXPLAINER

Vistara Explainer: ಎತ್ತ ಸಾಗುತ್ತಿದೆ ಮಯನ್ಮಾರ್ ದಂಗೆ ಮತ್ತು ರೋಹಿಂಗ್ಯಾ ಬಿಕ್ಕಟ್ಟು?

Vsitara Explainer: ಇಡೀ ಜಗತ್ತು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಬಗ್ಗೆ ಚಿಂತಿತವಾಗಿದೆ. ಆದರೆ ಸದ್ದಿಲ್ಲದೆ, ನಮ್ಮ ನೆರೆಯ ಮಯನ್ಮಾರ್‌ನಲ್ಲಿ ಜನಾಂಗೀಯ ಕದನ ಸ್ಫೋಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಅಂತಾರಾಷ್ಟ್ರೀಯ ಸಮುದಾಯ ಇತ್ತ ಚಿತ್ತ ಹರಿಸುವುದೇ?

VISTARANEWS.COM


on

vistara explainer about Myanmar insurgency and Rohingya crisis on the rise
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Girish-Linganna

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಕಳೆದ ಶನಿವಾರ ಇಸ್ರೇಲಿ ಸೇನೆ ಉತ್ತರ ಗಾಜಾದ ಜಬಾಲಿಯಾದಲ್ಲಿನ (Israel-Palestine War) ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದ ಮೇಲೆ ನಡೆಸಿದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. ಅಲ್ಲಿನ ಸಾವಿರಾರು ನಾಗರಿಕರಲ್ಲಿ ಭೀತಿ ಮೂಡಿಸಿದೆ. ಆದರೆ ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯನ್ನು ಜಗತ್ತು ಪ್ರಶ್ನಿಸಿದೆ. ಅದೇ ದಿನ, ಇಸ್ರೇಲಿ ಸೇನೆಯ ವಾಯುದಾಳಿಯಲ್ಲಿ, ಜಬಾಲಿಯ ನಿರಾಶ್ರಿತ ಶಿಬಿರದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿ (UNRWA) ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗಾಗಿ ನಡೆಸುತ್ತಿರುವ ಅಲ್-ಫಖೌರಾ ಶಾಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಮತ್ತು ಉತ್ತರ ಗಾಜಾದಲ್ಲಿನ ತಾಲ್ ಅಜ಼್ ಜ಼ಾತಾರ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 50 ಪ್ಯಾಲೆಸ್ತೀನಿಯನ್ನರು ಸಾವಿಗೀಡಾದರು. ಈ ಘಟನೆಗಳಿಗೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆದರೆ, ಕಳೆದ ವಾರದ ಮಧ್ಯಭಾಗದಲ್ಲಿ ನೆರೆಯ ಮಯನ್ಮಾರ್(Myanmar) ದೇಶದ, ಚಿನ್ ಸ್ಟೇಟ್‌ನ ಪರ್ವತ ಪ್ರದೇಶದ ವುಯ್ಲು ಗ್ರಾಮದ ಶಾಲೆಯ ಬಳಿ ಮಿಲಿಟರಿ ಜೆಟ್ ಬಾಂಬ್ ದಾಳಿ(Military Jet bomb attack) ನಡೆಸಿದ ಪರಿಣಾಮವಾಗಿ ಹನ್ನೊಂದು ಜನರು ಸಾವನ್ನಪ್ಪಿದರು. ಅವರಲ್ಲಿ ಎಂಟು ಜನ ಏಳರಿಂದ ಹನ್ನೊಂದರ ಹರೆಯದ ಮಕ್ಕಳಾಗಿದ್ದರು. ಆದರೆ ಈ ಘಟನೆ ಯಾಕೋ ಜಗತ್ತಿನ ಗಮನಕ್ಕೇ ಬರಲಿಲ್ಲ.(Vistara Explainer)

ಈ ವರ್ಷದ ಅಕ್ಟೋಬರ್ ತಿಂಗಳ ಆರಂಭದಲ್ಲಿ, ಉತ್ತರ ಮಯನ್ಮಾರ್‌ನ ಕಚಿನ್ ಸ್ಟೇಟ್ ಪ್ರದೇಶದ ಲಾಯ್ಜಾ ಪಟ್ಟಣದ ಬಳಿ, ಚೀನಾ ಗಡಿಯ ಸಮೀಪ, ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಇರುವ ಶಿಬಿರದಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 29 ನಾಗರಿಕರನ್ನು ಮಿಲಿಟರಿ ದಾಳಿಯೊಂದರಲ್ಲಿ ಕೊಲೆಗೈಯಲಾಯಿತು. ಇದೂ ಜಗತ್ತಿನ ಗಮನದಿಂದ ದೂರವೇ ಉಳಿಯಿತು.

ಆಗ್ನೇಯ ಏಷ್ಯಾದ, 5.4 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಮಯನ್ಮಾರ್, ಈಗ ಆಂತರಿಕ ಯುದ್ಧದ ದಳ್ಳುರಿಗೆ ಸಿಲುಕಿ ನರಳುತ್ತಿದೆ. ಅಸಂಖ್ಯಾತ ಶಸ್ತ್ರಸಜ್ಜಿತ ಜನಾಂಗೀಯ ಗುಂಪುಗಳು ಮತ್ತು ಪ್ರಜಾಪ್ರಭುತ್ವ ಪರ ಗುಂಪುಗಳು 2021ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಜನಾದೇಶ ಹೊಂದಿದ್ದ ಸರ್ಕಾರವನ್ನು ಕಿತ್ತಸೆದಿದ್ದ ಮಿಲಿಟರಿ ಜುಂಟಾ ವಿರುದ್ಧ ಕದನಕ್ಕಿಳಿದಿವೆ. ಭಾರತದ ಮಿಜೋರಾಂ ರಾಜ್ಯದ ಜೌಖಾತರ್ ಪ್ರದೇಶಕ್ಕೆ ಸನಿಹದಲ್ಲಿರುವ ಚಿನ್ ಸ್ಟೇಟ್ ಮಿಲಿಟರಿ ಆಡಳಿತದ ವಿರುದ್ಧ ನಿರಂತರವಾಗಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಕಳೆದ ಮೂರು ವಾರಗಳಿಂದ ಮಿಲಿಟರಿ ಆಡಳಿತಕ್ಕೆ ದೇಶಾದ್ಯಂತ ವಿರೋಧಿ ಗುಂಪುಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಸೇನೆ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದ್ದರಿಂದ ಅದು ಮೇಲುಗೈ ಸಾಧಿಸಲು ಬಹುತೇಕ ವಾಯುಪಡೆಯ ಮೇಲೆ ಅವಲಂಬಿತವಾಗಿದೆ. ಚಿನ್ ಜನಾಂಗೀಯ ಗುಂಪು ಇತ್ತೀಚೆಗೆ ಗಡಿ ಪಟ್ಟಣವಾದ ರಿಖಾವ್ದರ್ ಅನ್ನು ವಶಪಡಿಸಿಕೊಂಡಿದೆ.

ಇತ್ತೀಚಿನ ವಾರಗಳಲ್ಲಿ, ಮಯನ್ಮಾರ್ ಆದ್ಯಂತ ಮಿಲಿಟರಿ ಆಡಳಿತ ಭಾರೀ ಪ್ರತಿರೋಧ ಎದುರಿಸಿದೆ. ಚೀನಾ ಗಡಿಯಾದ್ಯಂತ ಶಾನ್ ಸ್ಟೇಟ್ ಪ್ರದೇಶದಲ್ಲಿರುವ ಮೂರು ದೀರ್ಘಕಾಲೀನ ಜನಾಂಗೀಯ ಅಲ್ಪಸಂಖ್ಯಾತ ಶಸ್ತ್ರಸಜ್ಜಿತ ಗುಂಪುಗಳು ಮತ್ತು ದೇಶಾದ್ಯಂತ ಇರುವ ಪ್ರಜಾಪ್ರಭುತ್ವ ಪರ ಹೋರಾಟಗಾರರ ಕೂಟ ಸೇನೆ ಮತ್ತು ಪೊಲೀಸರನ್ನು ತಮ್ಮ ಪ್ರದೇಶಗಳಿಂದ ಹೊರಹಾಕುತ್ತಿವೆ. ಆಪರೇಶನ್ 1027 ಎಂಬ ರಹಸ್ಯ ಹೆಸರು ಹೊಂದಿರುವ ಹೊಸ ಆಕ್ರಮಣ ಅಕ್ಟೋಬರ್ 27ರಂದು ಆರಂಭಗೊಂಡಿತು. ಇದನ್ನು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿ, ಅರಾಕನ್ ಆರ್ಮಿ, ಹಾಗೂ ಟಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿಗಳನ್ನು ಒಳಗೊಂಡ ತ್ರೀ ಬ್ರದರ್‌ಹುಡ್ ಅಲಯನ್ಸ್ ಕೈಗೊಳ್ಳುತ್ತಿವೆ.

ಸೇನಾಡಳಿತಕ್ಕೆ ತೀವ್ರ ವಿರೋಧ

ಶಾನ್ ಸ್ಟೇಟ್‌ನಲ್ಲಿ ಮೂರು ಸಶಸ್ತ್ರ ಜನಾಂಗೀಯ ಗುಂಪುಗಳು ಸಾಧಿಸಿರುವ ಭಾರೀ ಯಶಸ್ಸು ಮಯನ್ಮಾರ್‌ನ ಇತರ ವಿರೋಧೀ ಪಡೆಗಳಿಗೆ ಇನ್ನಷ್ಟು ಧೈರ್ಯ ತುಂಬಿದೆ. ಮಯನ್ಮಾರ್ ಮಿಲಿಟರಿ ಆಡಳಿತ ತಾನು ಕಳೆದ ತಿಂಗಳ ಕೊನೆಯ ಭಾಗದಿಂದ ದಂಗೆ ವಿರೋಧಿ ಪಡೆಗಳಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದು, ಅವರು ಹಲವು ಗಡಿ ಪಟ್ಟಣಗಳು ಮತ್ತು ಬಹಳಷ್ಟು ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಎಂದು ಒಪ್ಪಿಕೊಂಡಿದೆ. ಮಯನ್ಮಾರ್ ಸೇನೆ ಭಾರತದ ಗಡಿಯಾದ್ಯಂತ ಬಹುತೇಕ ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡಿದೆ.

ಮಯನ್ಮಾರ್ ಪೂರ್ವದಲ್ಲಿ ಕಯಾ ಸ್ಟೇಟ್‌ನ ಕ್ರಾಂತಿಕಾರಿಗಳು, ಪಶ್ಚಿಮದಲ್ಲಿ ರಖಿನ್ ಸ್ಟೇಟ್ ಕ್ರಾಂತಿಕಾರಿಗಳು, ಮತ್ತು ವಿಶೇಷವಾಗಿ ಉತ್ತರದ ಶಾನ್ ಸ್ಟೇಟ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸೇನೆಯ ಮೇಲೆ ಭಾರೀ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಹೋರಾಟಗಾರರು ನೂರಾರು ಡ್ರೋನ್‌ಗಳನ್ನು ಬಳಸಿಕೊಂಡು, ಸೇನಾ ನೆಲೆಗಳ ಮೇಲೆ ಬಾಂಬ್‌ಗಳನ್ನು ಸುರಿಸುತ್ತಿದ್ದಾರೆ. ಮಿಲಿಟರಿ ಬೆಂಬಲಿತ ಮಯನ್ಮಾರ್ ಅಧ್ಯಕ್ಷ ವಿನ್ ಮೀಂಟ್ ಅವರು, ಒಂದು ವೇಳೆ ಸರ್ಕಾರ ಏನಾದರೂ ಗಲಭೆ ಪೀಡಿತ ಶಾನ್ ಸ್ಟೇಟ್ ಪ್ರದೇಶದಲ್ಲಿ ಹಿಡಿತ ಬಿಗಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ದೇಶ ವಿಭಜನೆಗೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆ ಕಳವಳ

ಇಸ್ರೇಲ್ – ಹಮಾಸ್ ಯುದ್ಧದ ರೀತಿಯಲ್ಲೇ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮಯನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಮಯನ್ಮಾರ್ ಅಂತರ್ಯುದ್ಧದಲ್ಲಿ ಬಹುತೇಕ ಇಪ್ಪತ್ತು ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಮಕ್ಕಳೂ ಸೇರಿದಂತೆ 75 ನಾಗರಿಕರು ಸಾವಿಗೀಡಾಗಿದ್ದಾರೆ. ಗುಟೆರೆಸ್ ಎಲ್ಲ ಯುದ್ಧದಲ್ಲಿ ಭಾಗವಹಿಸುವವರಿಗೂ ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಮಡವ್ ಎಂದು ಕರೆಯಲಾಗುವ ಮಯನ್ಮಾರ್ ಸೇನೆ ಕ್ಷಿಪ್ರ ಕ್ರಾಂತಿ ನಡೆಸಿ, ಫೆಬ್ರವರಿ 1, 2021ರಂದು ನಾಗರಿಕ ನಾಯಕಿ ಆ್ಯಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದ ಬಳಿಕ, ಮಯನ್ಮಾರ್‌ನಲ್ಲಿ ವ್ಯಾಪಕ ಹಿಂಸಾಚಾರ ಆರಂಭಗೊಂಡಿತು.

2021ರ ದಂಗೆ, ಕಳೆದ ಹತ್ತು ವರ್ಷಗಳಿಂದ ಮಿಲಿಟರಿ ಮತ್ತು ನಾಗರಿಕ ಸರ್ಕಾರದ ನಡುವೆ ನಡೆಯುತ್ತಿದ್ದ ಅಧಿಕಾರದ ಸ್ಪರ್ಧೆಗೆ ಅಂತ್ಯ ಹಾಡಿತು. ಅವೆರಡೂ 2008ರಲ್ಲಿ ಮಿಲಿಟರಿ ರಚಿಸಿದ ಸಂವಿಧಾನದಡಿ ಅಧಿಕಾರ ಹಂಚಿಕೊಂಡಿದ್ದವು. ಈ ಸಂವಿಧಾನ, ಮಯನ್ಮಾರ್ ಸೇನೆಗೆ ಸಂಸತ್ತಿನಲ್ಲಿ ಕಾಲು ಭಾಗ ಸದಸ್ಯತ್ವವನ್ನು, ಪ್ರಮುಖ ಸಚಿವಾಲಯಗಳ ನಿಯಂತ್ರಣ, ಸಂವಿಧಾನ ತಿದ್ದುಪಡಿಗಳ ಮೇಲೆ ವಿಟೋ ಅಧಿಕಾರ ನೀಡಿತ್ತು ಮತ್ತು ಆ್ಯಂಗ್ ಸಾನ್ ಸೂಕಿ ಅವರಿಗಿದ್ದ ವಿದೇಶೀ ಕುಟುಂಬ ಸಂಬಂಧದ ಕಾರಣದಿಂದ ಅವರಿಗೆ ಅಧ್ಯಕ್ಷರಾಗುವ ಅಧಿಕಾರವನ್ನು ನಿರಾಕರಿಸಿತ್ತು.

ಮಯನ್ಮಾರ್ ಮಿಲಿಟರಿ ಜುಂಟಾ ನವೆಂಬರ್ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಯ ಆರೋಪಿಸಿ, ತಾನು ನಡೆಸಿದ ಕ್ಷಿಪ್ರ ಕ್ರಾಂತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಸೇನೆಯ ಆರೋಪಗಳನ್ನು ಚುನಾವಣಾ ಆಯೋಗ ಮತ್ತು ಅಂತಾರಾಷ್ಟ್ರೀಯ ವೀಕ್ಷಕರು ನಿರಾಕರಿಸಿ, ಚುನಾವಣೆ ಮುಕ್ತವಾಗಿ, ನ್ಯಾಯಯುತವಾಗಿ ನಡೆದಿತ್ತು ಎಂದಿದ್ದರು. ಅಂತಾರಾಷ್ಟ್ರೀಯ ಸಮುದಾಯ ಸೇನಾ ಕ್ರಾಂತಿಯನ್ನು ಖಂಡಿಸಿ, ಸೇನೆಯ ಮೇಲೆ ನಿರ್ಬಂಧಗಳನ್ನು ಹೇರಿ, ಚೀನಾ ಮತ್ತು ರಷ್ಯಾಗಳಂತಹ ಮಿತ್ರರಾಷ್ಟ್ರಗಳಿಗೆ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನೆರವಾಗುವಂತೆ ಕೋರಿತ್ತು.

ಈ ದಂಗೆಗೆ ಪ್ರತಿಕ್ರಿಯೆಯಾಗಿ, ಮಯನ್ಮಾರ್ ನಾಗರಿಕರು ಬೃಹತ್ ಕ್ರಾಂತಿಯನ್ನೇ ಆರಂಭಿಸಿದರು. ಅವರು ತಮ್ಮ ಚುನಾಯಿತ ಸರ್ಕಾರದ ಮರುಸ್ಥಾಪನೆಯಾಗಬೇಕು ಮತ್ತು ಮಾನವ ಹಕ್ಕುಗಳು ಲಭ್ಯವಾಗಬೇಕು ಎಂದು ಆಗ್ರಹಿಸತೊಡಗಿದರು. ಈ ಹೋರಾಟದಲ್ಲಿ ಜನಾಂಗೀಯ ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಮತ್ತು ನಾಗರಿಕ ಸೇವಾ ಉದ್ಯೋಗಿಗಳು ಸೇರಿದಂತೆ, ಎಲ್ಲಾ ಸ್ತರಗಳ ಜನರೂ ಭಾಗಿಯಾಗಿ, ಶಾಂತಿಯುತ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸತೊಡಗಿದರು. ಆದರೆ ಮಯನ್ಮಾರ್ ಸೇನೆ ಇದಕ್ಕೆ ಭಾರೀ ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಿ, ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಿ, ಮಾನವ ಹಕ್ಕುಗಳನ್ನು ದಮನಿಸಲು ಆರಂಭಿಸಿತು.

ಮಿಲಿಟರಿ ಜುಂಟಾ ಪ್ರತಿಭಟನಾಕಾರರನ್ನು ಚದುರಿಸಲು ಮಾರಣಾಂತಿಕ ಪ್ರಹಾರ ನಡೆಸಿದ ಪರಿಣಾಮವಾಗಿ, ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಮಹಿಳೆಯರು, ಮಕ್ಕಳು, ವೈದ್ಯರು, ಪತ್ರಕರ್ತರು, ವೈದ್ಯರು, ಶಿಕ್ಷಕರು ಮತ್ತು ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರನ್ನು ವಶಪಡಿಸಿಕೊಂಡು, ಅವರಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು. ಮಯನ್ಮಾರ್ ಸೇನೆ ಜನಾಂಗೀಯ ಸಶಸ್ತ್ರ ಸಂಘಟನೆಗಳನ್ನು ಗುರಿಯಾಗಿಸಿ ಅವರ ಮೇಲೆ ವಾಯುದಾಳಿ, ಭೂ ಕಾರ್ಯಾಚರಣೆ ಮತ್ತು ವ್ಯಾಪಕ ಸ್ಥಳಾಂತರಗಳನ್ನು ನಡೆಸತೊಡಗಿತು. ಇದು ಭಾರೀ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು.

ಈ ಎಲ್ಲ ಕ್ರೌರ್ಯಗಳ ಹೊರತಾಗಿಯೂ, ನಾಗರಿಕ ಪ್ರತಿರೋಧ ಮುಂದುವರಿದಿದೆ. ಆಡಳಿತದಿಂದ ಕಿತ್ತು ಹಾಕಲ್ಪಟ್ಟ ಜನಪ್ರತಿನಿಧಿಗಳು, ವಿವಿಧ ಗುಂಪುಗಳು, ಸಂಘಟನೆಗಳ ಪ್ರತಿನಿಧಿಗಳು ಜೊತೆಯಾಗಿ, ನ್ಯಾಷನಲ್ ಯುನಿಟಿ ಗವರ್ನಮೆಂಟ್ (ಎನ್‌ಯುಜಿ) ಎಂಬ ಪರ್ಯಾಯ ಸರ್ಕಾರವನ್ನು ಸ್ಥಾಪಿಸಿದರು. ಸೇನಾ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಅವರು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಎಂಬ ಗೆರಿಲ್ಲಾ ಸೇನೆಯನ್ನು ಸ್ಥಾಪಿಸಿ, ಮಿಲಿಟರಿಯ ದಮನಕಾರಿ ನೀತಿಯ ವಿರುದ್ಧ ಹೋರಾಟ ಆರಂಭಿಸಿದರು. ಎನ್‌ಯುಜಿ ಮಯನ್ಮಾರ್ ನಾಗರಿಕರನ್ನು ರಕ್ಷಿಸಲು, ಶಾಂತಿ ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದೆ.

ಮಯನ್ಮಾರ್ ಆಂತರಿಕ ದಳ್ಳುರಿಯನ್ನು ಎದುರಿಸುತ್ತಿರುವಾಗಲೇ, ರೊಹಿಂಗ್ಯಾದ ಜನಾಂಗೀಯ ಅಲ್ಪಸಂಖ್ಯಾತರಿಗೆ, ಅದರಲ್ಲೂ ಪ್ರಮುಖವಾಗಿ ಮುಸ್ಲಿಮರಿಗೆ ಕಿರುಕುಳ ಮುಂದುವರಿಯುತ್ತಿದೆ. ಮುಖ್ಯವಾಗಿ ರಖಿನ್ ಸ್ಟೇಟ್‌ನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳು ಅಪಾರ ತಾರತಮ್ಯಗಳನ್ನು ಎದುರಿಸಿದ್ದು, ಅವರಿಗೆ ಪೌರತ್ವ ನಿರಾಕರಿಸಿ, ಮೂಲಭೂತ ಹಕ್ಕುಗಳಿಂದಲೂ ವಂಚಿಸಲಾಗಿದೆ. ಹಿಂಸಾಚಾರ ಮತ್ತು ಮಿಲಿಟರಿ ಆಕ್ರಮಣ ಅಪಾರ ಸಂಖ್ಯೆಯಲ್ಲಿ ರೊಹಿಂಗ್ಯನ್ನರು ನೆರೆ ರಾಷ್ಟ್ರಗಳಲ್ಲಿ ಆಶ್ರಯ ಕೋರುವಂತೆ ಮಾಡಿದೆ. ಹೆಚ್ಚಿನ ಸಂಖ್ಯೆಯ ರೊಹಿಂಗ್ಯನ್ನರು ಬಾಂಗ್ಲಾದೇಶ ಮತ್ತು ಭಾರತದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮಯನ್ಮಾರ್‌ನಲ್ಲಿ ಚೀನಾ ಕಿತಾಪತಿ

ಮಯನ್ಮಾರ್‌ನ ರಾಜಕೀಯ ಚಿತ್ರಣದಲ್ಲಿ ಅದರ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾ ಮಹತ್ವದ ಪಾತ್ರ ವಹಿಸಿದೆ. ಚೀನಾ ಸಾರ್ವಜನಿಕವಾಗಿ ಮಯನ್ಮಾರ್‌ನಲ್ಲಿ ಸ್ಥಿರತೆಗಾಗಿ ಕರೆ ನೀಡಿದರೂ, ಅದು ಸೇನಾ ದಂಗೆಯನ್ನು ಖಂಡಿಸದಿರುವುದಕ್ಕೆ ಮತ್ತು ಮಿಲಿಟರಿ ಆಡಳಿತದೊಡನೆ ವ್ಯವಹಾರ ಮುಂದುವರಿಸಿರುವುದಕ್ಕೆ ವ್ಯಾಪಕ ಟೀಕೆ ಎದುರಿಸಿದೆ. ಚೀನಾದ ನಡೆಯ ಹಿಂದೆ, ಮೂಲ ಸೌಕರ್ಯ ನಿರ್ಮಾಣ ಯೋಜನೆಗಳು, ಪ್ರಮುಖ ವ್ಯಾಪಾರ ಮಾರ್ಗದ ಮೇಲಿನ ನಿಯಂತ್ರಣ ಸೇರಿದಂತೆ ಚೀನಾದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿವೆ ಎಂದು ಹಲವರು ಆರೋಪಿಸಿದ್ದಾರೆ. ದಂಗೆಗೆ ಚೀನಾ ಬೆಂಬಲ ನೀಡಿರುವುದು ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಡನೆ ಚೀನಾದ ಸಂಬಂಧವನ್ನು ಹಾಳುಗೆಡವಿದೆ.

ಕಳೆದ ವಾರ ಭಾರತ ಅನಿರೀಕ್ಷಿತವಾಗಿ ಮಯನ್ಮಾರ್ ಸೇನೆಗೆ ನೆರವು ನೀಡಲು ಮುಂದೆ ಬಂತು. ಭಾರತ 46 ಮಯನ್ಮಾರ್ ಸೈನಿಕರಿಗೆ ಮಿಜೋರಾಂ ಒಳಗೆ ಪ್ರವೇಶಿಸಲು ಅನುಮತಿ ನೀಡಿತು. ಈ ಸೈನಿಕರು ಮಿಜೋರಾಂ ಗಡಿಯಾಚೆ ಪ್ರಜಾಪ್ರಭುತ್ವ ಪರ ಹೋರಾಟಗಾರರು ಚಿನ್ ಸ್ಟೇಟ್‌ನಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದಾಗ ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಹುಶಃ ಭಾರತ ಇದೇ ಮೊದಲ ಬಾರಿಗೆ ಅವರದೇ ನೆಲದಲ್ಲಿ ಹೋರಾಡುತ್ತಿದ್ದ ಇನ್ನೊಂದು ದೇಶದ ಸೈನಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿತ್ತು. ಇದು ಬಹುಶಃ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮಯನ್ಮಾರ್ ಮಿಲಿಟರಿ ಆಡಳಿತದೊಡನೆ ಸಹಕರಿಸಲು ಸಿದ್ಧವಾಗಿದೆ ಎಂಬ ಸಂಕೇತವೂ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರ್ ನೆರೆ ರಾಷ್ಟ್ರವಾಗಿ, ಭಾರತ ಅಲ್ಲಿನ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ರಾದೇಶಿಕ ಸ್ಥಿರತೆಗಾಗಿ ಆಗ್ರಹಿಸಿದೆ. ಭಾರತ ಇದಕ್ಕೆ ಒಂದು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಕರೆ ನೀಡಿದ್ದು, ಅದಕ್ಕಾಗಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು, ಹಿಂಸಾಚಾರ ಕೊನೆಯಾಗಬೇಕು ಎಂದಿದೆ. ಅದರಲ್ಲೂ ಭಾರತದ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಿಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸ್ಥಳೀಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಫೆಬ್ರವರಿ 2021ರ ಕ್ಷಿಪ್ರ ದಂಗೆಯ ಬಳಿಕ 40,000ಕ್ಕೂ ಹೆಚ್ಚು ಚಿನ್ ನಿರಾಶ್ರಿತರು ಮಿಜೋರಾಂ ಪ್ರವೇಶಿಸಿರುವುದರಿಂದ, ಮಯನ್ಮಾರ್ ದಂಗೆಯ ಕಹಿ ಅನುಭವ ಭಾರತವನ್ನೂ ತಟ್ಟತೊಡಗಿದೆ.

ಅದರೊಡನೆ, ಭಾರತ ಮತ್ತು ಮಯನ್ಮಾರ್ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕೆ ಎದುರಾಗಿರುವ ಅಡಚಣೆ, ಗಡಿಯಾಚೆಗಿನ ವ್ಯಾಪಾರ ವಹಿವಾಟು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ಕಾಳಜಿ ಗಡಿ ವ್ಯವಹಾರವನ್ನು ಮೀರಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಹತ್ವವನ್ನು ಸಾರುತ್ತಿದೆ.

ಮಯನ್ಮಾರ್ ಬಿಕ್ಕಟ್ಟು ಹಲವು ಆಯಾಮಗಳನ್ನು ಹೊಂದಿದ್ದು, ಪ್ರಸ್ತುತ ಕ್ರಾಂತಿ, ದಮನಕಾರಿ ಆಡಳಿತ, ರೊಹಿಂಗ್ಯನ್ ಅಲ್ಪಸಂಖ್ಯಾತರ ಪಾಡು, ಮತ್ತು ಪ್ರಾದೇಶಿಕ ಶಕ್ತಿಯಾಗಿರುವ ಚೀನಾದ ಮಧ್ಯಪ್ರವೇಶಗಳು ಅದರಲ್ಲಿ ಪ್ರಮುಖವಾಗಿವೆ. ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಈ ಸವಾಲುಗಳನ್ನು ಎದುರಿಸಲು ಜೊತೆಯಾಗಿ ಕಾರ್ಯಾಚರಿಸಿ, ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಿ, ಮಾನವ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು. ಅದರೊಡನೆ, ರೊಹಿಂಗ್ಯನ್ನರ ಪರಿಸ್ಥಿತಿಯೆಡೆಗೂ ಗಮನ ಹರಿಸಿ, ಅವರ ದಮನವನ್ನು ಕೊನೆಗಾಣಿಸಿ, ಅವರಿಗೂ ಹಕ್ಕುಗಳು ಮತ್ತು ಸುರಕ್ಷತೆಯನ್ನು ಒದಗಿಸಬೇಕು. ಈ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸುವ ಮೂಲಕ, ಮಯನ್ಮಾರ್ ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಂತಿಯುತ, ಸ್ಥಿರ ಭವಿಷ್ಯ ಒದಗಿಸಲು ಸಾಧ್ಯ.

ಈ ಸುದ್ದಿಯನ್ನೂ ಓದಿ: Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

ವಿಸ್ತಾರ Explainer: Elon Musk: ಮೆದುಳಿಗೆ ಚಿಪ್‌ ಅಳವಡಿಸಿದ ವ್ಯಕ್ತಿ ಯೋಚನೆಯ ಮೂಲಕವೇ ಮೌಸ್‌ ಅಲ್ಲಾಡಿಸಿದ! ಏನಿದು ಎಲಾನ್‌ ಮಸ್ಕ್‌ ಪ್ರಯೋಗ?

Elon Musk: ‌ ಕಳೆದ ತಿಂಗಳು ‌ನ್ಯೂರಾಲಿಂಕ್ ಕಂಪನಿಯು ʼಮಾನವ ಪ್ರಯೋಗʼಕ್ಕೆ ಅನುಮೋದನೆ ಪಡೆದ ನಂತರ ಮೊದಲ ವ್ಯಕ್ತಿಗೆ ಮೆದುಳಿನ ಚಿಪ್ ಅನ್ನು ಯಶಸ್ವಿಯಾಗಿ ಅಳವಡಿಸಿತು.

VISTARANEWS.COM


on

elon musk neuralink
Koo

ಹೊಸದಿಲ್ಲಿ: ‘ನ್ಯೂರಾಲಿಂಕ್ (Neuralink) ಬ್ರೈನ್ ಚಿಪ್‌ (Brain Chip) ಅಳವಡಿಸಿದ ಮೊದಲ ವ್ಯಕ್ತಿ ಇದೀಗ ಯೋಚನೆಯಿಂದಲೇ ಕಂಪ್ಯೂಟರ್‌ ಪರದೆಯ ಮೇಲಿನ ಕರ್ಸರ್‌ ಅನ್ನು ಚಲಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆʼ ಎಂದು ಟೆಕ್‌ ದೈತ್ಯ ಎಲಾನ್‌ ಮಸ್ಕ್‌ (Elon Musk) ಹೇಳಿದ್ದಾರೆ.

ಇದು ನಿಜವಾಗಿದ್ದರೆ, ಇದೊಂದು ಐತಿಹಾಸಿಕ ತಂತ್ರಜ್ಞಾನ ಬೆಳವಣಿಗೆ ಎನಿಸಲಿದೆ. ಈ ಪ್ರಯೋಗವನ್ನು ಮುಂದುವರಿಸಿ ಮನುಷ್ಯನ ನರರೋಗಗಳನ್ನು ನಿವಾರಿಸುವ, ಮಾನವ ಮೆದುಳು- ಕಂಪ್ಯೂಟರ್‌ ಸುಲಲಿತ ಸಂಪರ್ಕವನ್ನು ಸಾಧ್ಯವಾಗಿಸುವ ಕನಸನ್ನು ಎಲಾನ್‌ ಮಸ್ಕ್‌ ಹೊಂದಿದ್ದಾನೆ.

“ಮೆದುಳಿನ ಚಿಪ್‌ ಅಳವಡಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಈಗ ಪೂರ್ಣ ಚೇತರಿಸಿಕೊಂಡಿದ್ದಾನೆ. ನಿರೀಕ್ಷಿತ ನರಚಲನೆ ಪರಿಣಾಮಗಳನ್ನು ತೋರಿಸಿದ್ದಾನೆ. ಕೇವಲ ಯೋಚಿಸುವ ಮೂಲಕ ಪರದೆಯಲ್ಲಿ ಮೌಸ್ ಅನ್ನು ಚಲಿಸಲು ಆತನಿಂದ ಸಾಧ್ಯವಾಗಿದೆ” ಎಂದು ನ್ಯೂರಾಲಿಂಕ್‌ ಸ್ಟಾರ್ಟಪ್‌ನ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ.

“ಈ ವ್ಯಕ್ತಿಯು ಸಾಧಿಸಿದ ಮೌಸ್ ಬಟನ್ ಕ್ಲಿಕ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದು ನ್ಯೂರಾಲಿಂಕ್‌ನ ಪ್ರಸ್ತುತ ಗುರಿಯಾಗಿದೆ” ಎಂದು ಮಸ್ಕ್ ಹೇಳಿದ್ದಾರೆ. ಕಳೆದ ತಿಂಗಳು ಕಂಪನಿಯು ʼಮಾನವ ಪ್ರಯೋಗʼಕ್ಕೆ ಅನುಮೋದನೆ ಪಡೆದ ನಂತರ ಮೊದಲ ವ್ಯಕ್ತಿಗೆ ಮೆದುಳಿನ ಚಿಪ್ ಅನ್ನು ಯಶಸ್ವಿಯಾಗಿ ಅಳವಡಿಸಿತು. ವ್ಯಕ್ತಿಯ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ಬನ್ನಿ, ನ್ಯೂರಾಲಿಂಕ್‌ ಹಾಗೂ ಅದು ನಡೆಸುತ್ತಿರುವ ಪ್ರಯೋಗದ ವಿವರಗಳನ್ನು ಇಲ್ಲಿ ನೋಡೋಣ.

ನ್ಯೂರಾಲಿಂಕ್ ಎಂದರೇನು?

2016ರಲ್ಲಿ ಎಲೋನ್ ಮಸ್ಕ್ ಸ್ಥಾಪಿಸಿದ ನ್ಯೂರಾಲಿಂಕ್ ಒಂದು ನ್ಯೂರೋಟೆಕ್ನಾಲಜಿ ಕಂಪನಿ. ʼನ್ಯೂರಾಲಿಂಕ್ʼ ಮಾನವನ ಮೆದುಳಿನಲ್ಲಿ ಅಳವಡಿಸಬಹುದಾದ ಒಂದು ಚಿಕ್ಕ ಕಂಪ್ಯೂಟರ್ ಚಿಪ್‌. ನ್ಯೂರಾಲಿಂಕ್‌ನ ಆರಂಭಿಕ ಪ್ರಯೋಗವೆಂದರೆ ʼಟೆಲಿಪತಿʼ. ಇದು ಬಳಕೆದಾರರು ತಮ್ಮ ಮನಸ್ಸಿನಿಂದಲೇ ನೇರವಾಗಿ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತವೆ.

ನಮ್ಮ ದೇಹವನ್ನು ನಿಯಂತ್ರಿಸಲು ನಮ್ಮ ಮಿದುಳುಗಳು ವಿದ್ಯುತ್ ಸಂಕೇತಗಳನ್ನು ಬಳಸುವಂತೆಯೇ, ನ್ಯೂರಾಲಿಂಕ್‌ ಮೆದುಳಿನ ಚಿಪ್ ನಮ್ಮ ಆಲೋಚನೆಗಳು ಮತ್ತು ಡಿಜಿಟಲ್ ಪ್ರಪಂಚದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಜನವರಿಯಲ್ಲಿ ಎಲಾನ್ ಮಸ್ಕ್ ಮೊದಲ ಮಾನವನಿಗೆ ಚಿಪ್‌ನ ಯಶಸ್ವಿ ಅಳವಡಿಕೆಯಾಯಿತು ಎಂದು ಘೋಷಿಸಿದರು. ಕಂಪನಿಯು ಸೆಪ್ಟೆಂಬರ್‌ನಲ್ಲಿ ಮಾನವ ಪ್ರಯೋಗಕ್ಕೆ ಅನುಮೋದನೆಯನ್ನು ಪಡೆದುಕೊಂಡಿತ್ತು.

Raja Marga Column Elon Musk Chip Market

ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವುದು ಏಕೆ?

ʼದಿ ಲಿಂಕ್ʼ ಎಂದು ಕರೆಯಲ್ಪಡುವ ಇದು ಮೆದುಳು ಮತ್ತು ಕಂಪ್ಯೂಟರ್ ನಡುವಿನ ತಡೆರಹಿತ ಸಂವಹನವನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ. ನಮ್ಮ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ವಿಸ್ತರಿಸಬಹುದು ಮತ್ತು ಮಿತಿಗಳನ್ನು ಮೀರಬಹುದು ಎಂದು ಎಲಾನ್‌ ಮಸ್ಕ್‌ ನಂಬುತ್ತಾರೆ. ಇದು ನಮ್ಮ ಬುದ್ಧಿವಂತಿಕೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುವಂತಿದೆ. ವಿಷಯಗಳನ್ನು ವೇಗವಾಗಿ ಕಲಿಯಲು, ಮಾಹಿತಿಯನ್ನು ತ್ವರಿತವಾಗಿ ದಕ್ಕಿಸಿಕೊಳ್ಳಲು, ಮಾತಿನ ಅಗತ್ಯವಿಲ್ಲದೇ ನಮ್ಮ ಆಲೋಚನೆಗಳನ್ನು ಮಾತ್ರ ಬಳಸಿಕೊಂಡು ಇತರರೊಂದಿಗೆ ಸಂವಹನ ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ನ್ಯೂರಾಲಿಂಕ್‌ ಮೂಲಕ ಭವಿಷ್ಯದಲ್ಲಿ ನಮ್ಮ ಮೆದುಳಿನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು, ಮಾನವರು ಮತ್ತು ತಂತ್ರಜ್ಞಾನದ ನಡುವೆ ಇನ್ನಷ್ಟು ಗಾಢ ಸಹಜೀವನ ನಡೆಸಬಹುದು ಎಂಬುದು ಎಲಾನ್‌ ಮಸ್ಕ್‌ ಕನಸು.

ಇದು ನರವೈಜ್ಞಾನಿಕ ಸಮಸ್ಯೆ, ನರವ್ಯೂಹದ ಅಸ್ವಸ್ಥತೆ, ಮೆದುಳಿನ ಕಾರ್ಯಾಚರಣೆಯ ಸಮಸ್ಯೆಗಳನ್ನು ಹೊಂದಿದ ವ್ಯಕ್ತಿಗಳನ್ನು ಗುಣಪಡಿಸುವ ಚಿಂತನೆಯನ್ನೂ ಹೊಂದಿದೆ. ಎಲೆಕ್ಟ್ರಾನಿಕ್ ಸಾಧನಗಳ ಸಂಪರ್ಕದ ಮೂಲಕ ಮೆದುಳಿನ ನಿಯಂತ್ರಣವನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ನರಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತದೆ.

ಕಂಪನಿ $5 ಶತಕೋಟಿ ಮೌಲ್ಯ ಹೊಂದಿದೆ. ಪ್ರಯೋಗದ ಸುರಕ್ಷತಾ ಕ್ರಮಗಳ ಬಗ್ಗೆ ವಿಜ್ಞಾನಿಗಳಲ್ಲಿ ಕಳವಳವಿದೆ.

ಇದನ್ನೂ ಓದಿ: Elon Musk: ಭಾರತಕ್ಕೆ ವಿಶ್ವಸಂಸ್ಥೆ ಕಾಯಂ ಸ್ಥಾನ ನೀಡಿ; ಎಲಾನ್‌ ಮಸ್ಕ್‌ ಆಗ್ರಹ

Continue Reading

EXPLAINER

Kamal Nath: ‘ಇಂದಿರಾ ಗಾಂಧಿ 3ನೇ ಪುತ್ರ’ ಕಮಲ್‌ ನಾಥ್‌ಗೇಕೆ ಕಾಂಗ್ರೆಸ್‌ ಮೇಲೆ ಮುನಿಸು?

Kamal Nath: ಸುಮಾರು 45 ವರ್ಷ ಕಾಂಗ್ರೆಸ್‌ನಲ್ಲೇ ಇರುವ ಕಮಲ್‌ ನಾಥ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟಕ್ಕೂ, ಅವರು ಕಾಂಗ್ರೆಸ್‌ ಜತೆ ಮುನಿಸಿಕೊಂಡಿರುವುದೇಕೆ?

VISTARANEWS.COM


on

Kamal Nath
Koo

ನವದೆಹಲಿ: ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್‌ (Kamal Nath) ಅವರು ಶನಿವಾರ (ಫೆಬ್ರವರಿ 17) ದೆಹಲಿಗೆ ತೆರಳಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಅವರು ಕಾಂಗ್ರೆಸ್‌ (Congress) ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ ಜತೆಗಿನ ಮುನಿಸಿನಿಂದ ಬೇಸತ್ತಿರುವ ಅವರು ಬಿಜೆಪಿ (BJP) ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಕಮಲ್ ನಾಥ್‌ ಅವರು ಕಾಂಗ್ರೆಸ್‌ ಜತೆ ಮುನಿಸಿಕೊಂಡಿರುವುದೇಕೆ? ಪಕ್ಷದ ಜತೆ ಅವರ ನಂಟು ಹೇಗಿತ್ತು? ಯಾವ ಕಾರಣಕ್ಕಾಗಿ ಅವರು ಸಿಟ್ಟಾಗಿದ್ದಾರೆ ಎಂಬ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರಾಜ್ಯಸಭೆ ಚುನಾವಣೆಗಾಗಿ ಮುನಿಸು?

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಿಂದ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್‌ನಾಥ್‌ ಅವರು ಪಕ್ಷದ ನಾಯಕರ ಜತೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಆಪ್ತ ಅಶೋಕ್‌ ಸಿಂಗ್‌ ಅವರಿಗೆ ರಾಜ್ಯಸಭೆ ಟಿಕೆಟ್‌ ನೀಡಿದ ಕಾರಣ ಕಮಲ್‌ನಾಥ್‌ ಸಿಂಗ್‌ ಅವರು ನಾಯಕರ ಜತೆ ಮುನಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದಿರಾ ಗಾಂಧಿ ತೃತೀಯ ಪುತ್ರ ಎಂದೇ ಖ್ಯಾತಿ

ಕಮಲ್‌ ನಾಥ್‌ ಅವರು ಸುಮಾರು 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಶಾಸಕನಿಂದ ಮುಖ್ಯಮಂತ್ರಿ ಗಾದಿವರೆಗೆ ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲೂ, ಇಂದಿರಾ ಗಾಂಧಿ ಅವರಿಗೆ ಅತ್ಯಾಪ್ತರಾಗಿದ್ದ ಕಮಲ್‌ನಾಥ್‌ ಅವರು, ಇಂದಿರಾ ಗಾಂಧಿಯವರ ತೃತೀಯ ಸುಪುತ್ರ ಎಂದೇ ಖ್ಯಾತರಾಗಿದ್ದರು. ಹಾಗಾಗಿ, ಅವರು ಕಾಂಗ್ರೆಸ್‌ ಪಕ್ಷವನ್ನು ತೊರೆಯಲಿಕ್ಕಿಲ್ಲ ಎಂಬುದು ಕಾಂಗ್ರೆಸ್‌ ನಾಯಕರದ್ದೇ ಅಂದಾಜಾಗಿದೆ.

ಬಿಜೆಪಿ ಸೇರ್ಪಡೆ ನಿಶ್ಚಿತ ಎಂಬ ಚರ್ಚೆ ಏಕೆ?

ಕಮಲ್‌ನಾಥ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಇದಕ್ಕೂ ಮೊದಲು ವದಂತಿಗಳು ಹರಡಿದ್ದವು. ಈಗ, ಬಿಜೆಪಿ ವಕ್ತಾರ ನರೇಂದ್ರ ಸಲುಜಾ ಅವರು ಕಮಲ್‌ನಾಥ್‌ ಹಾಗೂ ನಕುಲ್‌ನಾಥ್‌ ಅವರ ಜತೆಗಿನ ಫೋಟೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಜೈ ಶ್ರೀರಾಮ್”‌ ಎಂದು ಬರೆದುಕೊಂಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ 77 ವರ್ಷದ ಕಮಲ್‌ನಾಥ್‌ ಅವರು ದೆಹಲಿಗೆ ಆಗಮಿಸಿದ್ದು, ಅವರು ಬಿಜೆಪಿ ಸೇರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಕಮಲ್‌ನಾಥ್‌ ಹೇಳುವುದೇನು?

ದೆಹಲಿಯಲ್ಲಿ ಬೀಡು ಬಿಟ್ಟಿರುವ, ಎರಡು ದಿನದಲ್ಲೇ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕಮಲ್‌ನಾಥ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. “ನಾನೇನಾದರೂ ಅಂತಹ ತೀರ್ಮಾನ ತೆಗೆದುಕೊಂಡರೆ (ಬಿಜೆಪಿ ಸೇರುವ) ಮೊದಲು ನಿಮಗೇ ಹೇಳುತ್ತೇನೆ” ಎಂದು ಮಾಧ್ಯಮದವರ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Kamal Nath: ದೆಹಲಿಗೆ ಆಗಮಿಸಿದ ಕಮಲ್‌ನಾಥ್;‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ?

ವಿಧಾನಸಭೆ ಚುನಾವಣೆ ಸೋಲು ಕಾರಣ?

ಭಾರಿ ಆಡಳಿತ ವಿರೋಧಿ ಅಲೆಯ ನಡುವೆಯೂ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ಇದರ ಹೊಣೆಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಕಮಲ್‌ನಾಥ್‌ ಅವರೊಬ್ಬರ ಮೇಲೆಯೇ ಹೊರಿಸಿದೆ. ಇದು ಕೂಡ ಕಮಲ್‌ನಾಥ್‌ ಅವರು ಮುನಿಸಿಕೊಳ್ಳಲು ಕಾರಣ ಎನ್ನಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

Electoral Bonds: ಚುನಾವಣಾ ಬಾಂಡ್‌ ಯೋಜನೆ ರದ್ದು ಏಕೆ? ಸುಪ್ರೀಂ ಹೇಳಿದ್ದೇನು?

Electoral Bonds: ಕೇಂದ್ರ ಸರ್ಕಾರ ಜಾರಿಗೊಳಿಸಿದ ಚುನಾವಣಾ ಬಾಂಡ್‌ ಯೋಜನೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಏಕೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

Supreme Court
Koo

ನವದೆಹಲಿ: ಚುನಾವಣಾ ಬಾಂಡ್‌ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಬಾಂಡ್‌ ಯೋಜನೆಯನ್ನು (Electoral Bonds) ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿದ್ದು, ಕೇಂದ್ರ ಸರ್ಕಾರಕ್ಕೆ (Central Government) ಭಾರಿ ಹಿನ್ನಡೆಯಾದಂತಾಗಿದೆ. ಹಾಗಾದರೆ, ಏನಿದು ಚುನಾವಣೆ ಬಾಂಡ್‌ ಯೋಜನೆ? ಇದನ್ನು ರದ್ದುಗೊಳಿಸಲು ಕಾರಣಗಳೇನು? ಸುಪ್ರೀಂ ಕೋರ್ಟ್‌ ಹೇಳಿದ್ದೇನು ಎಂಬುದರ ಮಾಹಿತಿಯನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

ಯೋಜನೆಯಲ್ಲಿರುವುದು ಏನೇನು?

 • ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು
 • ದೇಣಿಗೆ ನೀಡುವವರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ
 • ದೇಣಿಗೆ ನೀಡುವವರಿಗೆ ತೆರಿಗೆ ಪಾವತಿಸುವುದರಿಂದ ವಿನಾಯಿತಿ
 • 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್‌ ಖರೀದಿಸಿ ದೇಣಿಗೆ ನೀಡಬಹುದು


ಸುಪ್ರೀಂ ಕೋರ್ಟ್‌ ಹೇಳಿದ್ದೇನು?

 • ಚುನಾವಣಾ ಬಾಂಡ್‌ ಯೋಜನೆಯು ಅಸಾಂವಿಧಾನಿಕವಾಗಿದೆ
 • ಯೋಜನೆಯಿಂದ ಜನರಿಗೆ ನೀಡಿದ ಮಾಹಿತಿ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ
 • ಕಂಪನಿಗಳ ಕಾಯ್ದೆಯನ್ನು ರದ್ದುಗೊಳಿಸಿದ್ದು ಕೂಡ ಅಸಾಂವಿಧಾನಿಕ
 • ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ ಮೊತ್ತವನ್ನು ಬಹಿರಂಗಪಡಿಸಬೇಕು
 • ಈಗಾಗಲೇ ಬಾಂಡ್‌ ನೀಡಿದವರು ಕೇಳಿದರೆ ರಾಜಕೀಯ ಪಕ್ಷಗಳು ಅವರಿಗೆ ಬಾಂಡ್‌ ಮೊತ್ತವನ್ನು ಹಿಂತಿರುಗಿಸಬೇಕು
 • ಕೊಡು-ಕೊಳ್ಳುವ ವ್ಯವಹಾರಕ್ಕೆ ಚುನಾವಣೆ ಬಾಂಡ್‌ ಯೋಜನೆ ದಾರಿಯಾಗುತ್ತದೆ
 • ಚುನಾವಣಾ ಬಾಂಡ್‌ ಯೋಜನೆಯ ಉದ್ದೇಶವು ಕಪ್ಪು ಹಣವನ್ನು ನಿರ್ಬಂಧಿಸುವುದಾಗಿಲ್ಲ
 • ಇನ್ನು ಮುಂದೆ ಎಸ್‌ಬಿಐ ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು
 • ಮೂರು ವಾರದಲ್ಲಿ ಚುನಾವಣಾ ಆಯೋಗವು ಎಸ್‌ಬಿಐನಿಂದ ಬಾಂಡ್‌ ಸಂಗ್ರಹ ಕುರಿತು ಮಾಹಿತಿ ಸಂಗ್ರಹಿಸಬೇಕು
 • 2024ರ ಮಾರ್ಚ್‌ 31ರೊಳಗೆ ಚುನಾವಣಾ ಆಯೋಗವು ಎಸ್‌ಬಿಐ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು

ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್‌ ಯೋಜನೆ ಅಸಾಂವಿಧಾನಿಕ; ಸುಪ್ರೀಂ ತೀರ್ಪು, ಕೇಂದ್ರಕ್ಕೆ ಹಿನ್ನಡೆ

ಯೋಜನೆ ಜಾರಿಯಾಗಿದ್ದು ಯಾವಾಗ?

ಚುನಾವಣಾ ಬಾಂಡ್‌ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್‌ ಯೋಜನೆ ಜಾರಿಗೊಳಿಸಲಾಯಿತು.

ಬಿಜೆಪಿಗೆ ಹೆಚ್ಚು ದೇಣಿಗೆ

ಚುನಾವಣಾ ಬಾಂಡ್‌ ಯೋಜನೆ ಜಾರಿಯಾದ ಬಳಿಕ ಬಿಜೆಪಿಗೆ ಹೆಚ್ಚುಗೆ ದೇಣಿಗೆ ಸಂದಾಯವಾಗಿದೆ. ಆಡಳಿತಾರೂಢ ಪಕ್ಷವಾದ ಕಾರಣ ಹೆಚ್ಚು ದೇಣಿಗೆ ಸಂಗ್ರಹಿಸಿದೆ. 2022-23ನೇ ಸಾಲಿನಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕವೇ ಸುಮಾರು 1,300 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಇದು ಕಾಂಗ್ರೆಸ್‌ಗಿಂತ ಎಂಟು ಪಟ್ಟು ಹೆಚ್ಚಿನ ಮೊತ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ರೈತರ ಪ್ರತಿಭಟನೆ ಏಕೆ? ‘ಸ್ವಾಮಿನಾಥನ್‌’ ವರದಿಯನ್ನು ಯುಪಿಎ ತಿರಸ್ಕರಿಸಿದ್ದೇಕೆ?

Farmers Protest: ದೆಹಲಿಯಲ್ಲಿ ರೈತರು ಏಕೆ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ? ಸ್ವಾಮಿನಾಥನ್‌ ಆಯೋಗದ ವರದಿಯನ್ನು ಯುಪಿಎ ಸರ್ಕಾರ ತಿರಸ್ಕರಿಸಿದ್ದೇಕೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

VISTARANEWS.COM


on

Farmers Protest
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯತ್ತ ಸಾವಿರಾರು ರೈತರು ಲಗ್ಗೆ ಇಡುತ್ತಿದ್ದಾರೆ. ಉತ್ತರ ಪ್ರದೇಶ, ಪಂಜಾಬ್‌ ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ಪ್ರತಿಭಟನೆ (Farmers Protest) ನಡೆಸುತ್ತಿದ್ದಾರೆ. ರೈತರು ದೆಹಲಿ ಪ್ರವೇಶಿಸಬಾರದು ಎಂದು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ರೈತರು ಕೂಡ ಪಟ್ಟು ಸಡಿಲಿಸುತ್ತಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು, ಎಂ.ಎಸ್.ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಏನಿದು ಸ್ವಾಮಿನಾಥನ್‌ (Swaminathan Committee) ವರದಿ? ಶಿಫಾರಸುಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಸ್ವಾಮಿನಾಥನ್‌ ಆಯೋಗ?

ರೈತರ ಸಮಸ್ಯೆಗಳನ್ನು ಬಗೆಹರಿಸುವುದು, ಅವರ ಆದಾಯ ಹೆಚ್ಚಿಸುವುದು, ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿ ಹಲವು ಕಾರಣಗಳಿಗಾಗಿ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಎಂ.ಎಸ್.ಸ್ವಾಮಿನಾಥನ್‌ ಆಯೋಗವನ್ನು ರಚಿಸಲಾಗಿತ್ತು. ಸ್ವಾಮಿನಾಥನ್‌ ನೇತೃತ್ವದ ಆಯೋಗವು ರೈತರ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, 2004ರಿಂದ 2006ರ ಅವಧಿಯಲ್ಲಿ ಯುಪಿಎ ಸರ್ಕಾರಕ್ಕೆ ಹಲವು ಬಾರಿ ಶಿಫಾರಸುಗಳನ್ನು, ವರದಿಗಳನ್ನು ಸಲ್ಲಿಸಿದೆ.

ವರದಿಯ ಶಿಫಾರಸುಗಳೇನು?

ಸ್ವಾಮಿನಾಥನ್‌ ಆಯೋಗದ ವರದಿಗಳಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಪ್ರಮುಖ ಶಿಫಾರಸಾಗಿದೆ. ಆಯೋಗದ ವರದಿ ಪ್ರಕಾರ, ರೈತರ ಬೆಳೆಗಳಿಗೆ ವೆಚ್ಚವಾದ ಒಟ್ಟು ಹಣದಲ್ಲಿ ಶೇ.50ಕ್ಕಿಂತ ಹೆಚ್ಚಿನ ಹಣವನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ನೀಡಬೇಕು ಎಂಬುದು ಶಿಫಾರಸಿನ ಪ್ರಮುಖ ಅಂಶವಾಗಿದೆ. ಆದರೆ, 2010ರಲ್ಲಿ ಯುಪಿಎ ಸರ್ಕಾರವು ಸ್ವಾಮಿನಾಥನ್‌ ಆಯೋಗದ ವರದಿಯನ್ನು ತಿರಸ್ಕರಿಸಿತು.

ಒಂದು ಬೆಳೆ ಬೆಳೆಯಲು ಉಂಟಾದ ಖರ್ಚಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ನೀಡುವುದು ಔಚಿತ್ಯವಲ್ಲ. ಇದರಿಂದ ಆರ್ಥಿಕ ಹೊರೆ ಹಾಗೂ ಕೃಷಿ ಉತ್ಪನ್ನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆಗಿನ ಕೇಂದ್ರ ಸರ್ಕಾರವು ವರದಿಯನ್ನು ತಿರಸ್ಕರಿಸಿತು ಎಂದು ತಿಳಿದುಬಂದಿದೆ. ಈಗ ವರದಿಯ ಜಾರಿಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಶ್ರುವಾಯು ಪ್ರಯೋಗ

ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಮತ್ತಿತರ ಕಡೆಯ ರೈತರು 25 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್‌ ಮೂಲಕ ಆಗಮಿಸುತ್ತಿರುವುದನ್ನು ತಡೆಯಲು ಶಂಭು ಗಡಿಯಲ್ಲಿ ಅಶ್ರು ವಾಯು ಪ್ರಯೋಗಿಸಲಾಗಿದೆ. ರೈತರ ಮೇಲೆ ಪೊಲೀಸರು ಟಿಯರ್‌ ಗ್ಯಾಸ್‌ ಬಳಸಿದ್ದಾರೆ. ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಶಂಭು ಗಡಿಯ ದೃಶ್ಯಾವಳಿಗಳಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ರೈತರನ್ನು ಚದುರಿಸಲು ಡ್ರೋನ್‌ಗಳಿಂದ ಹೊಗೆ ಬಾಂಬ್‌ಗಳನ್ನು (smoke bombs) ಎಸೆಯುತ್ತಿರುವುದು ಕಂಡು ಬಂದಿದೆ. ಸುಮಾರು 200 ರೈತ ಸಂಘಟನೆಗಳು ಕರೆ ನೀಡಿದ ಈ ದೆಹಲಿ ಚಲೋ ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷ ರೈತರು ಪಾಲ್ಗೊಂಡಿದ್ದಾರೆ.

Delhi Farmers Protest 1

ಇದನ್ನೂ ಓದಿ: Delhi Farmers Protest: 6 ತಿಂಗಳ ಪಡಿತರ ತೆಗೆದುಕೊಂಡು ಪ್ರತಿಭಟನೆಗೆ ಹೊರಟ ರೈತರು

ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹರಿಯಾಣದ ಅಧಿಕಾರಿಗಳು ಪಂಜಾಬ್‌ನೊಂದಿಗೆ ರಾಜ್ಯದ ಗಡಿಯನ್ನು ಭದ್ರಪಡಿಸಿದ್ದಾರೆ. ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್ ಬಳಸಿ ರಸ್ತೆ ತಡೆಯಲಾಗಿದೆ. ಪ್ರತಿಭಟನಾಕಾರರನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
police constable
ಉದ್ಯೋಗ46 seconds ago

Job Alert: ಫೆ. 25ರಂದು ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆ; ಪ್ರವೇಶ ಪತ್ರ ಹೀಗೆ ಡೌನ್‌ಲೋಡ್‌ ಮಾಡಿ

pralhad joshi
ಕರ್ನಾಟಕ4 mins ago

Ram Mandir: ಅಯೋಧ್ಯೆ ಯಾತ್ರಿಕರಿಗೆ ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಿ: ಪ್ರಲ್ಹಾದ್‌ ಜೋಶಿ ಆಗ್ರಹ

Narendra Modi
ದೇಶ5 mins ago

Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

BY Vijayendra calls on BJP workers to make 100 votes 200 Attack on CM Siddaramaiah
ರಾಜಕೀಯ8 mins ago

BY Vijayendra: 100 ಮತವನ್ನು 200 ಮಾಡಿ; ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಟಾಸ್ಕ್‌; ಸಿಎಂ ವಿರುದ್ಧ ವಾಗ್ದಾಳಿ

R Ashwin
ಪ್ರಮುಖ ಸುದ್ದಿ9 mins ago

R Ashwin : ಕ್ರಿಕೆಟ್​ ದಂತಕತೆಗಳ ಎಲೈಟ್​ ಪಟ್ಟಿ ಸೇರಿದ ಆರ್​ ಅಶ್ವಿನ್​; ಏನಿದು ಸಾಧನೆ?

Elderly woman dies after road Accident Five seriously injured
ಕ್ರೈಂ25 mins ago

Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

R Ashwin
ಪ್ರಮುಖ ಸುದ್ದಿ32 mins ago

R Ashwin : ಈ ಸಾಧನೆ ಮಾಡಿದ ಮೊಟ್ಟ ಮೊದಲ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದ ರವಿಚಂದ್ರನ್ ಅಶ್ವಿನ್​

Shah Rukh Khan Friend BREAKS Silence on Rumour of Him Dating
ಸಿನಿಮಾ37 mins ago

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Namma Metro
ಬೆಂಗಳೂರು1 hour ago

Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

Talibans
ವಿದೇಶ1 hour ago

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು23 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌