Dina Bhavishya : ಭಾನುವಾರವಾದರೂ ಈ ರಾಶಿಯವರಿಗೆ ಬಾಸ್‌ಗಳ ಕಿರಿಕಿರಿ ತಪ್ಪಲ್ಲ! Vistara News

ಪ್ರಮುಖ ಸುದ್ದಿ

Dina Bhavishya : ಭಾನುವಾರವಾದರೂ ಈ ರಾಶಿಯವರಿಗೆ ಬಾಸ್‌ಗಳ ಕಿರಿಕಿರಿ ತಪ್ಪಲ್ಲ!

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಭಾನುವಾರ ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಮೇಷ ರಾಶಿಯವರಿಗೆ ಇಂದು ಖರ್ಚು ಹೆಚ್ಚಾದರೂ, ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಸಿಂಹ ರಾಶಿಯವರಿಗೆ ಆರ್ಥಿಕವಾಗಿ ಪ್ರಗತಿ ಇರಲಿದೆ. ತುಲಾ ರಾಶಿಯವರು ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಮಾಡುವುದು ಒಳಿತಲ್ಲ. ಕುಂಭ ರಾಶಿಯವರ ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಇದರ ನಡುವೆಯೂ ಕೆಲ ರಾಶಿಗಳಿಗೆ ಕೆಲಸದ ಜಾಗದಲ್ಲಿ ಹಿರಿಯ ಅಧಿಕಾರಿಗಳ ಕಿರಿಕಿರಿ ಇರಲಿದೆ. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (23-07-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಪಂಚಮಿ 11:44 ವಾರ: ಭಾನುವಾರ
ನಕ್ಷತ್ರ: ಉತ್ತರಾ 19:45 ಯೋಗ: ಪರಿಘ 14:14
ಕರಣ: ಬಾಲವ 11:44 ಇಂದಿನ ವಿಶೇಷ: ರಾಷ್ಟ್ರೀಯ ಪ್ರಸಾರ ದಿನ, ಪೋಷಕರ ದಿನ
ಅಮೃತ ಕಾಲ: ಬೆಳಗ್ಗೆ 09:46 ರಿಂದ 11:34ರ ವರೆಗೆ  

ಸೂರ್ಯೋದಯ : 05:47 ಸೂರ್ಯಾಸ್ತ : 07:12

ರಾಹುಕಾಲ : ಸಾಯಂಕಾಲ 4.30 ರಿಂದ 6.00
ಗುಳಿಕಕಾಲ: ಸಾಯಂಕಾಲ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉತ್ಸಾಹದ ವಾತಾವರಣ ಇರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಬಂಧು ಮಿತ್ರರಿಂದ ಸಹಕಾರ. ಆರ್ಥಿಕ ಪ್ರಗತಿ ಸಾಧಾರಣ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಿ ಕಾರ್ಯದಲ್ಲಿ ಯಶಸ್ಸು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಮನೆಯಲ್ಲಿ ಪರಸ್ಪರ ಸಹಕಾರ ಸಿಗುವುದು, ಉತ್ಸಾಹದ ದಿನವಿದು.
ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆಕರ್ಷಕ ವ್ಯಕ್ತಿತ್ವ ಹೊಂದಿರುವ ನೀವು ಇಂದು ಇತರರನ್ನು ಆಕರ್ಷಿಸುವಿರಿ. ಆರ್ಥಿಕ ಪ್ರಗತಿ ಸಾಧಾರಣವಿದ್ದರೂ ಸಮರ್ಥವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಪ್ರಗತಿ. ಮಡದಿಯ ಪ್ರೀತಿಗೆ ಸೋಲುವಿರಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗದ ಭರವಸೆ. ಆರ್ಥಿಕ ಪ್ರಗತಿ. ಪರಿಶ್ರಮಕ್ಕೆ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಮನೆಯಲ್ಲಿ ಪರಸ್ಪರರ ಮಧ್ಯೆ ಕಲಹದಿಂದ ವಾತಾವರಣ ಹದಗೆಡಬಹುದು. ಕೆಲಸದಲ್ಲಿ ಹಿರಿಯರಿಂದ ಒತ್ತಡ, ಎಚ್ಚರಿಕೆ ವಹಿಸಿ. ಆರ್ಥಿಕ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಬೇಡ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಉತ್ತಮ. ಮನೆಯಲ್ಲಿ ಸಂತೋಷದ ದಿನ.
ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ಮಾಡುವರು. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ ಯಶ ಸಿಗುವುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟು ಮಾಡಬಹುದು. ಉದಾಸಿನತೆ ಮಾಡುವುದು ಬೇಡ. ಆಶಾವಾದಿಗಳಾಗಿರಿ ಕುಲದೇವರನ್ನು ಸ್ಮರಿಸಿ .ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ದೇವರಿಗೆ ಯಾವ ನೈವೇದ್ಯ ಅರ್ಪಿಸಬೇಕು? ಈ ವಿಡಿಯೋ ನೋಡಿ.
Horoscope Today

ಮಕರ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಒತ್ತಡ ಉಂಟಾಗುವ ಸಾಧ್ಯತೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡವನ್ನು ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕು ಮಾತುಗಳಿಗೆ ಧ್ವನಿಯಾಗಬೇಡಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 3

ಇದನ್ನೂ ಓದಿ : Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

Horoscope Today

ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಆರ್ಥಿಕ ನಷ್ಟ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

ಬುರ್ಖಾ ಫ್ಯಾಷನ್ ಶೋಗೆ (Fashion Show ) ಬಳಸುವ ವಸ್ತುವಲ್ಲ ಎಂದು ಜಮಿಯತ್ ಉಲಮಾದ ಪ್ರತಿನಿಧಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ಕಾಲೇಜಿನ ಅಧಿಕಾರಿಗಳಿಂದ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

VISTARANEWS.COM


on

Fashion Show
Koo

ಲಖನೌ : ಫ್ಯಾಶನ್ ಶೋ (Fashion Show) ಎಂದ ಮೇಲೆ ಸಾಂಪ್ರದಾಯಿಕ ದಿರಸುಗಳನ್ನು ಮಾಡರ್ನ್ ಟಚ್​ ಕೊಡುವುದು ಮಾಮೂಲಿ. ಇದರ ಜತೆಗೆ ಔಟ್​ಫಿಟ್ ವಿಚಾರದಲ್ಲಿ ಹಲವಾರು ಪ್ರಯೋಗಗಳನ್ನೂ ಮಾಡಲಾಗುತ್ತದೆ. ಅದು ವಿಭಿನ್ನ ಕ್ಷೇತ್ರ. ಸೃಜನಶೀಲತೆಗೆ ಅಲ್ಲಿ ವಿಶಾಲ ವ್ಯಾಪ್ತಿಯಿದೆ. ಆದರೆ ಕೆಲವು ಮೂಲಭೂತವಾದಿಗಳು ಫ್ಯಾಶನ್ ಶೋ ಕುರಿತು ಅಪಸ್ವರ ಎತ್ತುತ್ತಲೇ ಇರುತ್ತಾರೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶೋ ಒಂದರಲ್ಲಿ ಬುರ್ಖಾ ಧರಿಸಿದ್ದಕ್ಕೆ ಮುಸ್ಲಿ ಮುಖಂಡರೊಬ್ಬರು ತಗಾದೆ ತೆಗೆದಿದ್ದು, ಕ್ಷಮೆ ಕೋರುವಂತೆ ಆಯೋಜಕರಿಗೆ ಒತ್ತಡ ಹೇರಿದ್ದಾರೆ.

ಮುಝಫ್ಫರ್ ನಗರದ ಕಾಲೇಜೊಂದರಲ್ಲಿ ಬುರ್ಖಾ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲು ಕೆಲವು ವಿದ್ಯಾರ್ಥಿಗಳು ಮುಂದಾಗಿದ್ದರು. ಮಕ್ಕಳ ಬುದ್ಧಿವಂತಿಕೆ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಸಂಘಟನೆಯೊಂದು ಸಂಸ್ಥೆಯ ಅಧಿಕಾರಿಗಳಿಂದ ಕ್ಷಮೆಯಾಚಿಸುವಂತೆ ಒತ್ತಡ ತಂದಿದ್ದಾರೆ.

ಜಮಿಯತ್ ಉಲಮಾದ ಪ್ರತಿನಿಧಿಯೊಬ್ಬರು ಬುರ್ಖಾ ಬಟ್ಟೆಯ ತುಂಡು ಅಥವಾ ಫ್ಯಾಷನ್ ಶೋಗೆ ಬಳಸಲು ಉದ್ದೇಶಿಸಿರುವ ವಸ್ತುವಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ಬುರ್ಖಾ ಹಾಕಿದ್ರೂ ತಪ್ಪು ತೆಗೆದ್ರೂ ತಪ್ಪು ಎಂಬ ಗೊಂದಲದ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಮಕ್ಕಳ ಪರವಾಗಿ ನಿಂತಿದೆ. ಪಾತಿನಿಧ್ಯದ ರೂಪವಾಗಿರುವ ಫ್ಯಾಶನ್ ಶೋಗೆ ಎಲ್ಲರ ಬೆಂಬಲ ಇದೆ ಎಂದು ಹೇಳಿಕೊಂಡಿದೆ.

ಮುಜಾಫರ್ ನಗರದ ಶ್ರೀ ರಾಮ್ ಕಾಲೇಜಿನಲ್ಲಿ ಭಾನುವಾರ ನಡೆದ ಫ್ಯಾಷನ್ ಶೋನ ವೀಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಫ್ಯಾಷನ್ ಸ್ಪ್ಲಾಶ್ ಎಂದು ಕರೆಯಲ್ಪಡುವ ಮೂರು ದಿನಗಳ ಈವೆಂಟ್ ಬಗ್ಗೆ ಮುಸ್ಲಿಂ ನಾಯಕರು ಆಕ್ಷೇಪ ಮಾಡಿದ್ದಾರೆ.

ಕ್ಷಮೆಯಾಚಿಸಬೇಕು’

ವೀಡಿಯೊ ವೈರಲ್ ಆದ ನಂತರ ಪ್ರತಿಕ್ರಿಯಿಸಿದ ಜಮಿಯತ್ ಉಲಮಾದ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಖಾಸ್ಮಿ, ಕಾಲೇಜು ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಕ್ಷಮೆಯಾಚಿಸದಿದ್ದರೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

“ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಬುರ್ಖಾ ಫ್ಯಾಷನ್ ನ ವಸ್ತುವಲ್ಲ, ಅದನ್ನು ಹೆಣ್ಣು ಮಕ್ಕಳ ಮೈ ಮುಚ್ಚಲು ಬಳಸಲಾಗುತ್ತದೆ. ಇದು ಮುಸ್ಲಿಂ ಮಹಿಳೆಯರ ಘನತೆ ಮತ್ತು ಗೌರವದ ಸಂಕೇತವಾಗಿದೆ. ಬುರ್ಖಾವನ್ನು ಧರಿಸುವುದರಿಂದ ಮಹಿಳೆಯರು ತಪ್ಪು ಉದ್ದೇಶಗಳನ್ನು ಹೊಂದಿರುವ ಪುರುಷರ ನೋಟದಿಂದ ಪಾರಾಗಬಹುದು! ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದು ಮತ್ತು ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಕಾಲೇಜು ಅಧಿಕಾರಿಗಳಿಗೆ ಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

“ಕಾಲೇಜಿನ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅವರು ಕ್ಷಮೆಯಾಚಿಸದಿದ್ದರೆ, ನಾವು ಕಾನೂನು ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅವರು ಮತ್ತೆ ಯಾವುದೇ ಧರ್ಮದ ಅನುಯಾಯಿಗಳಿಗೆ ಈ ರೀತಿ ಮಾಡಬಾರದು” ಎಂದು ಮೌಲಾನಾ ಹೇಳಿದ್ದಾರೆ.

‘ವೈವಿಧ್ಯತೆಯಲ್ಲಿ ಏಕತೆ’

ಈ ಕಾರ್ಯಕ್ರಮದಲ್ಲಿ ಎಲ್ಲಾ ರೀತಿಯ ಬಟ್ಟೆಗಳನ್ನು ಪ್ರತಿನಿಧಿಸಲಾಗುತ್ತಿದೆ ಅವರಲ್ಲಿ ಒಬ್ಬರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಬುರ್ಖಾಗಳನ್ನು ವಿನ್ಯಾಸಗೊಳಿಸಲು ನಿರ್ಧರಿಸಿದರು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಯೊಬ್ಬರು, “ಪ್ರತಿಯೊಬ್ಬರೂ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಹೊಸ ಮಾರ್ಗಗಳ ಬಗ್ಗೆ ಯೋಚಿಸಲು ಪ್ರಯತ್ನಿಸುತ್ತಿದ್ದರು. ಎಲ್ಲಾ ರೀತಿಯ ಉಡುಪುಗಳನ್ನು ಪ್ರದರ್ಶಿಸಲಾಗುತ್ತಿತ್ತು ಮತ್ತು ನಮ್ಮ ಸ್ನೇಹಿತರೊಬ್ಬರು ಬುರ್ಖಾಗಳಿಗೂ ಪ್ರಾತಿನಿಧ್ಯ ನೀಡುವ ಆಲೋಚನೆ ವ್ಯಕ್ತಪಡಿಸಿದರು. ನಮ್ಮ ಉಡುಗೆ ಶೈಲಿಗೆ ಪ್ರಾತಿನಿಧ್ಯ ನೀಡುವುದು ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿತ್ತು. ಮುಸ್ಲಿಂ ಹುಡುಗಿಯರು ಯಾವುದರಲ್ಲೂ ಹಿಂದೆ ಬೀಳದಂತೆ ನೋಡಿಕೊಳ್ಳಲು ನಾವು ಬಯಸಿದ್ದೇವೆ.

ವಿದ್ಯಾರ್ಥಿನಿ ಬುಶ್ರಾ ಖಾನ್ ಎಂಬುವರು ಪ್ರತಿಕ್ರಿಯಿಸಿ, “ಇದನ್ನು ಮಾಡಲು ಯಾರೂ ನಮ್ಮನ್ನು ಒತ್ತಾಯಿಸಲಿಲ್ಲ , ನಾವು ಬಯಸಿದ್ದರಿಂದ ನಾವು ಅದನ್ನು ಮಾಡಿದ್ದೇವೆ. ನಾವು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ವಿನ್ಯಾಸಗಳನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ.

ಸೃಜನಶೀಲತೆಗೆ ವೇದಿಕೆ’

ಶ್ರೀ ರಾಮ್ ಗ್ರೂಪ್ ಆಫ್ ಕಾಲೇಜುಗಳ ಮಾಧ್ಯಮ ಸಂಯೋಜಕ ರವಿ ಗೌತಮ್, “ಮೌಲಾನಾ ಅವರ ಅಭಿಪ್ರಾಯಗಳು ಅವರಿಗೆ ಸೀಮಿತ. ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮದು ಶಿಕ್ಷಣ ಸಂಸ್ಥೆಯಾಗಿದ್ದು, ಧರ್ಮವನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಫ್ಯಾಷನ್ ವಿನ್ಯಾಸವನ್ನು ಅಧ್ಯಯನ ಮಾಡುವ ಹುಡುಗಿಯರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರ ಸೃಜನಶೀಲತೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೆವು ಎಂದು ಹೇಳಿದ್ದಾರೆ.

“ಹುಡುಗಿಯರು ಯಾವುದೇ ರೀತಿಯಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸಲಿಲ್ಲ ಮತ್ತು ವಾಸ್ತವವಾಗಿ, ತಮ್ಮ ಸಂಪ್ರದಾಯಗಳನ್ನು ಪ್ರದರ್ಶಿಸಿದ್ದಾರೆ. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸುವುದನ್ನು ನಾವು ನಿಲ್ಲಿಸಿದ್ದರೆ ನಾವು ಕೆಲಸದಲ್ಲಿ ನಾವು ವಿಫಲರಾಗುತ್ತಿದ್ದೆವು. ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ಗೌತಮ್ ಹೇಳಿದ್ದಾರೆ.

Continue Reading

ಕರ್ನಾಟಕ

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Road Accident : ಗದಗ ಜಿಲ್ಲೆಯ ಗಜೇಂದ್ರ ಗಡದಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. ಸೋದರನ ನಿಶ್ಚಿತಾರ್ಥ ಮುಗಿಸಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

Gadaga accident two bike riders dead
ಹಸನಸಾಬ್ ಹುಸೇನಸಾಬ್ ಖಾನಗೌಡರ್ ಮತ್ತು ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ
Koo

ಗದಗ: ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ (KSRTC Bus) ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು (Two riders dead) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ತಮ್ಮ ಸೋದರನ ಮದುವೆಯ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ ಖುಷಿಯಲ್ಲಿದ್ದ ಅವರು ರಸ್ತೆ ಮಧ್ಯೆ ಹೆಣವಾಗಿದ್ದಾರೆ.

ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ(28), ಹಸನಸಾಬ್ ಹುಸೇನಸಾಬ್ ಖಾನಗೌಡರ್ (25) ಮೃತಪಟ್ಟ ದುರ್ದೈವಿಗಳು. ಇವರು ಕೊಪ್ಪಳ ಜಿ.ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದವರಾಗಿದ್ದು, ರೋಣ ತಾಲೂಕಿನ ಸವಡಿ ಗ್ರಾಮದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು.

ಇವರ ಸಹೋದರ ವಿವಾಹ ನಿಶ್ಚಿತಾರ್ಥ ರೋಣದ ಬಳಿ ನಡೆದಿತ್ತು. ಸಹೋದರನ ನಿಶ್ಚಿತಾರ್ಥ ಮಗಿಸಿಕೊಂಡು ವಾಪಸ್ ಬರುವ ವೇಳೆ ದುರ್ಘಟನೆ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. KSRTC ಬಸ್ ಸಿಂಧನೂರಿನಿಂದ ಗಜೇಂದ್ರಗಡಕ್ಕೆ ಬರುತ್ತಿತ್ತು.

ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಮೃತ್ಯು

ವಿಜಯಪುರ: ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ವೇಗವಾಗಿ ಧಾವಿಸಿ ಬಂದ ಬೈಕ್ ಡಿಕ್ಕಿಯಾಗಿ (Bike Rams into tractor) ಸವಾರರಿಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ (Bike riders dead) ದಾರುಣ ಘಟನೆ (Road Accident) ವಿಜಯಪುರ ಜಿಲ್ಲೆಯ (Vijayapura news) ತಾಳಿಕೋಟಿ ತಾಲೂಕಿನ ದೇವರಹುಲಗಬಾಳ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ತಾಳಿಕೋಟಿ ಮುದ್ದೇಬಿಹಾಳ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮದವರಾದ ಹುಸೇನಸಾಬ ಇನಾಂದಾರ್ (30), ಮೈಬುಸಾಬ ನದಾಫ್ (33) ಎಂದು ಗುರುತಿಸಲಾಗಿದೆ.

vijaypura accident

ಕಬ್ಬು ತುಂಬಿಕೊಂಡು ಬಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಅತಿ ವೇಗದಲ್ಲಿ ಬಂದ ಬೈಕ್‌ ಡಿಕ್ಕಿಯಾಗಿದೆ. ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ತಾಳಿಕೋಟೆಯಿಂದ ಮುದ್ದೇಬಿಹಾಳ ಕಡೆಗೆ ಹೊರಟಿದ್ದ ಬೈಕ್ ಸವಾರರಿಗೆ ಹೇಗೆ ನಿಯಂತ್ರಣ ತಪ್ಪಿತೋ, ಬೈಕ್‌ ಯಾಕೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತೋ ಸ್ಪಷ್ಟತೆ ಇಲ್ಲ. ತಾಳಿಕೋಟಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಬರ್ತ್‌ಡೇ ದಿನವೇ ಡೆತ್‌ಡೇ; ಸ್ನೇಹಿತರಿಬ್ಬರ ಪ್ರಾಣ ತೆಗೆದ ಬಸ್‌!

Continue Reading

ದೇಶ

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

Anju Love Story: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಪಾಕಿಸ್ತಾನದ ಗೆಳೆಯನ್ನು ಮದುವೆಯಾಗಲು ರಾಜಸ್ಥಾನದ ಅಂಜು ಕಳೆದ ಜುಲೈನಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದು, ಭಾರೀ ಸುದ್ದಿಯಾಗಿತ್ತು.

VISTARANEWS.COM


on

Anju who went to Pakistan for to marry her lover, returns to India
Koo

ನವದೆಹಲಿ: ಕೆಲವು ದಿನಗಳ ಹಿಂದೆ ಪಾಕಿಸ್ತಾನ-ಭಾರತ ಗಡಿಗಳಾಚೆಗಿನ ಪ್ರೇಮ ಪ್ರಕರಣಗಳು ಸದ್ದು ಮಾಡಿದ್ದವು. ಈ ಪೈಕಿ ಅಂಜು (Anju Love Story) ಪ್ರಕರಣ ಭಾರೀ ಸದ್ದು ಮಾಡಿತ್ತು. ಫೇಸ್‌ಬುಕ್‌ನಲ್ಲಿ (Facebook Friend) ಪರಿಚಯನಾಗಿದ್ದ ಗೆಳೆಯನನ್ನು ಮದುವೆಯಾಗುವುದಕ್ಕಾಗಿ ರಾಜಸ್ಥಾನ ಮೂಲದ ಅಂಜು, ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ (Pakistan) ಹೋಗಿದ್ದಳು. ಅಲ್ಲದೇ, ಪಾಕ್ ಪ್ರಜೆಯನ್ನು ನಸ್ರುಲ್ಲಾ (Pak national Nasrullah) ಅವರನ್ನು ಮದುವೆಯಾಗಿ, ತನ್ನ ಹೆಸರನ್ನು ಫಾತಿಮಾ (Fatima) ಎಂದು ಬದಲಿಸಿಕೊಂಡಿದ್ದಳು. ಈಗ ಅದೇ ಫಾತಿಮಾ ಅಕಾ ಅಂಜು ಮತ್ತೆ ಪಾಕಿಸ್ತಾನ ತೊರೆದು ಭಾರತಕ್ಕೆ ವಾಪಸ್ಸಾಗಿದ್ದಾಳೆ!(Viral News)

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಫೇಸ್‌ಬುಕ್ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿದ್ದ 34 ವರ್ಷದ ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಬಂದ ವಾಪಸ್ ಬಂದಿದ್ದಾಳೆ. ಈ ವೇಳೆ, ತನಿಖಾ ಸಂಸ್ಥೆಗಳು ಅನೇಕ ಸುತ್ತಿನ ವಿಚಾರಣೆ ನಡೆಸಿದ ಬಳಿಕವಷ್ಟೇ ಆಕೆಗೆ ತನ್ನ ಮನೆಗೆ ಹೋಗಲು ಅವಕಾಶ ಕಲ್ಪಿಸಲಾಯಿತು. ಅವಳನ್ನು ಈಗ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಆಕೆ ದಿಲ್ಲಿಗೆ ತೆರಳಲಿದ್ದಾಳೆ ಎಂದು ಹೇಳಲಾಗುತ್ತಿದೆ.

ಜುಲೈನಿಂದ ಅಂಜು ಅಕಾ ಫಾತಿಮಾ ಅವರು ಫೇಸ್‌ಬುಕ್ ಮೂಲಕ ಭೇಟಿಯಾದ ತನ್ನ ಪತಿ ನಸ್ರುಲ್ಲಾ ಅವರೊಂದಿಗೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಳು. 34 ವರ್ಷದ ಮಹಿಳೆ ಅಂಜು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಳೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೇ ಆಕೆ ತನ್ನ ಹೆಸರನ್ನು ಅಂಜು ಬದಲಾಗಿ ಫಾತಿಮಾ ಎಂದು ಬದಲಿಸಿಕೊಂಡಿದ್ದಾಳೆ ಎಂದು ವರದಿಯಲ್ಲಿ ತಿಳಿಸಿದ್ದವು.

ರಾಜಸ್ಥಾನ ಮೂಲದ ಅಂಜು, ನಸ್ರುಲ್ಲಾಳನ್ನು ಪೇಶಾವರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸ್ಥಳೀಯ ನ್ಯಾಯಾಲಯದಲ್ಲಿ ತನ್ನ ಗಂಡನ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ವಿವಾಹವಾಗಿದ್ದಳು.

ಭಾರತಕ್ಕೆ ಹಿಂದಿರುಗುವ ಪ್ರಕ್ರಿಯೆ ನಡೆಯುತ್ತಿರುವುದರಿಂದ, ತಮ್ಮ ಕುಟುಂಬ ಮತ್ತು ಮಕ್ಕಳಿಗೆ ತೊಂದರೆ ನೀಡದಂತೆ ಮಾಧ್ಯಮಗಳಿಗೆ ಮನವಿ ಮಾಡಿದರು ಮತ್ತು ಮುಂದಿನ ಕೆಲವು ದಿನಗಳಲ್ಲಿ ಪಾಕಿಸ್ತಾನಕ್ಕೆ ವಾಪಸ್ ಹೋಗುವ ಯೋಜನೆಗಳಿವೆ. ನಾನು ಸಂತೋಷವಾಗಿದ್ದೇನೆ ಎಂದು ಅಂಜು ಮಾಧ್ಯಮಗಳಿಗೆ ತಿಳಿಸಿದ್ದಾಳೆ.

ಉತ್ತರ ಪ್ರದೇಶದಲ್ಲಿ ಜನಿಸಿದ್ದ ಅಂಜು ಅವರು ರಾಜಸ್ಥಾನದ ಭಿವಡಿಯ ಅರವಿಂದ್ ಎಂಬುವರನ್ನು ವಿವಾಹವಾಗಿದ್ದರು. ಈ ದಂಪತಿಗೆ 15 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ. ಜುಲೈ ತಿಂಗಳಲ್ಲಿ ಅಂಜು ತಾನು ಜೈಪುರಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಬಳಿಕ ಆಕೆ ಪಾಕಿಸ್ತಾನದಲ್ಲಿರುವುದು ಮಾಧ್ಯಮಗಳ ಮೂಲಕ ತಿಳಿಯಿತು ಎಂದು ಅರವಿಂದ್ ತಿಳಿಸಿದ್ದರು. ಅಂಜು ಕಾನೂನು ಬದ್ಧವಾಗಿಯೇ ವಾಘಾ-ಅಟ್ಟಾರಿ ಗಡಿ ಮೂಲಕವೇ ಪಾಕಿಸ್ತಾನಕ್ಕೆ ಹೋಗಿದ್ದಳು.

ಈ ಸುದ್ದಿಯನ್ನೂ ಓದಿ: Anju Love Story: ತಪ್ಪಾಗಿದೆ, ಭಾರತಕ್ಕೆ ಬರುವೆ; ನಸ್ರುಲ್ಲಾನಿಗಾಗಿ ಪಾಕ್‌ಗೆ ಹೋದ ಅಂಜು ಯುಟರ್ನ್

Continue Reading

ಕರ್ನಾಟಕ

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Road accident : ವಿಜಯಪುರದ ತಾಳಿಕೋಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.

VISTARANEWS.COM


on

vijaypura accident
ತಾಳಿಕೋಟೆ ಅಪಘಾತದಲ್ಲಿಸಂಪೂರ್ಣ ನಜ್ಜಗುಜ್ಜಾಗಿರುವ ಬೈಕ್‌
Koo

ವಿಜಯಪುರ: ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ವೇಗವಾಗಿ ಧಾವಿಸಿ ಬಂದ ಬೈಕ್ ಡಿಕ್ಕಿಯಾಗಿ (Bike Rams into tractor) ಸವಾರರಿಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ (Bike riders dead) ದಾರುಣ ಘಟನೆ (Road Accident) ವಿಜಯಪುರ ಜಿಲ್ಲೆಯ (Vijayapura news) ತಾಳಿಕೋಟಿ ತಾಲೂಕಿನ ದೇವರಹುಲಗಬಾಳ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ತಾಳಿಕೋಟಿ ಮುದ್ದೇಬಿಹಾಳ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮದವರಾದ ಹುಸೇನಸಾಬ ಇನಾಂದಾರ್ (30), ಮೈಬುಸಾಬ ನದಾಫ್ (33) ಎಂದು ಗುರುತಿಸಲಾಗಿದೆ.

ಕಬ್ಬು ತುಂಬಿಕೊಂಡು ಬಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಅತಿ ವೇಗದಲ್ಲಿ ಬಂದ ಬೈಕ್‌ ಡಿಕ್ಕಿಯಾಗಿದೆ. ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ತಾಳಿಕೋಟೆಯಿಂದ ಮುದ್ದೇಬಿಹಾಳ ಕಡೆಗೆ ಹೊರಟಿದ್ದ ಬೈಕ್ ಸವಾರರಿಗೆ ಹೇಗೆ ನಿಯಂತ್ರಣ ತಪ್ಪಿತೋ, ಬೈಕ್‌ ಯಾಕೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತೋ ಸ್ಪಷ್ಟತೆ ಇಲ್ಲ. ತಾಳಿಕೋಟಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಬರ್ತ್‌ಡೇ ದಿನವೇ ಡೆತ್‌ಡೇ; ಸ್ನೇಹಿತರಿಬ್ಬರ ಪ್ರಾಣ ತೆಗೆದ ಬಸ್‌!

KSRTC ಬಸ್‌ ಮತ್ತು ಬೈಕ್‌ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು

ಗದಗ: ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ(28), ಹಸನಸಾಬ್ ಹುಸೇನಸಾಬ್ ಖಾನಗೌಡರ್ (25) ಮೃತಪಟ್ಟ ದುರ್ದೈವಿಗಳು. ಇವರು ಕೊಪ್ಪಳ ಜಿ.ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದವರಾಗಿದ್ದು, ರೋಣ ತಾಲೂಕಿನ ಸವಡಿ ಗ್ರಾಮದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು.

ಸಹೋದರನ ನಿಶ್ಚಿತಾರ್ಥ ಮಗಿಸಿಕೊಂಡು ವಾಪಸ್ ಬರುವ ವೇಳೆ ದುರ್ಘಟನೆ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement
Fashion Show
ದೇಶ6 mins ago

Fashion Show : ಏಕತೆಗೆ ಧಕ್ಕೆ; ಫ್ಯಾಶನ್​ ಶೋದಲ್ಲಿ ಬುರ್ಖಾ ಹಾಕಿದ್ದಕ್ಕೆ ಮುಸ್ಲಿಂ ನಾಯಕನ ಆಕ್ಷೇಪ!

kalpamrutha cold pressed oil production unit inaugurated
ತುಮಕೂರು6 mins ago

ಕಲ್ಪಾಮೃತ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕಕ್ಕೆ ಚಾಲನೆ

Gadaga accident two bike riders dead
ಕರ್ನಾಟಕ7 mins ago

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Anju who went to Pakistan for to marry her lover, returns to India
ದೇಶ9 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ22 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ33 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ38 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್50 mins ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ59 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ1 hour ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌