Dharmasthala Deepotsava | ಭೇದ ಸೃಷ್ಟಿಸದೇ ಏಕತೆ ಕಾಯ್ದುಕೊಳ್ಳಬೇಕು: ಡಾ.ವೀರೇಂದ್ರ ಹೆಗ್ಗಡೆ - Vistara News

ಕರ್ನಾಟಕ

Dharmasthala Deepotsava | ಭೇದ ಸೃಷ್ಟಿಸದೇ ಏಕತೆ ಕಾಯ್ದುಕೊಳ್ಳಬೇಕು: ಡಾ.ವೀರೇಂದ್ರ ಹೆಗ್ಗಡೆ

Dharmasthala Deepotsava | ಲಕ್ಷ ದೀಪೋತ್ಸವ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10ನೇ ವರ್ಷದ ಪಾದಯಾತ್ರೆಯು ಯಶಸ್ವಿಯಾಗಿದೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದಿವೆ.

VISTARANEWS.COM


on

Dharmasthala Deepotsava
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧರ್ಮಸ್ಥಳ (ದಕ್ಷಿಣ ಕನ್ನಡ): ಜಿಲ್ಲೆಯ ಬೆಳ್ತಂಗಡಿ ತಾಲೂಕು ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಲಕ್ಷ ದೀಪೋತ್ಸವಕ್ಕೆ ಬುಧವಾರ ತೆರೆಬಿದ್ದಿದೆ. ದೀಪೋತ್ಸವ ಅಂಗವಾಗಿ ನ.19ರಿಂದ 23ರವೆರೆಗೆ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದ್ದು, ಲಕ್ಷಾಂತರ ಭಕ್ತರು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

ಲಕ್ಷ ದೀಪೋತ್ಸವ ಪಾದಯಾತ್ರೆ ಸಮಾವೇಶ
ನ.೧೯ರಂದು ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 10ನೇ ವರ್ಷದ ಲಕ್ಷ ದೀಪೋತ್ಸವ ಪಾದಯಾತ್ರೆ ನೆರವೇರಿತು. ನಂತರ 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದ ಸಮಾವೇಶದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ದಿಕ್ಸೂಚಿ ಭಾಷಣ ಮಾಡಿ, ಭಕ್ತಿಯ ಆವೇಶದಲ್ಲಿ ಉಜಿರೆಯಿಂದ ಇಲ್ಲಿಯವರೆಗೆ ಉತ್ಸಾಹದ ನಡಿಗೆಯೊಂದಿಗೆ ಬಂದಿದ್ದೀರಿ. ನಿಮಗೆ ಅಭಿನಂದನೆ. ಭಗವದ್ಗೀತೆ ಸೇರಿ ಬೇರೆ ಬೇರೆ ಜ್ಞಾನಸಂಪನ್ಮೂಲಗಳ ಮೂಲಕ ಜೀವನದ ಎಲ್ಲ ಸಂದರ್ಭಗಳನ್ನು ಎದುರಿಸುವ ಶಕ್ತಿಯನ್ನು ನಿಮ್ಮದಾಗಿಸಿಕೊಳ್ಳಿ. ಈ ಶಕ್ತಿ ನಿಮ್ಮ ಜೀವನದ ಉದ್ದೇಶವನ್ನು ಸ್ಪಷ್ಟಗೊಳಿಸುತ್ತದೆ. ಆಗ ಗೆಲುವು ತಾನಾಗಿಯೇ ಒಲಿಯುತ್ತದೆ ಎಂದರು.

ಇದನ್ನೂ ಓದಿ | Dharmasthala Deepotsava | ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಗೆ ಭಕ್ತ ಸಾಗರ

ದೇವರೆಲ್ಲರೂ ಒಗ್ಗಟ್ಟಾಗಿ ವಿಶ್ವಾತ್ಮಕ ಚೈತನ್ಯವನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಭೇದಗಳನ್ನು ಸೃಷ್ಟಿಸದೇ ಈ ಸೃಷ್ಟಿಯಲ್ಲಿರುವ ಚೈತನ್ಯವನ್ನೇ ಮುಖ್ಯವಾಗಿಸಿಕೊಂಡು ಏಕತೆಯನ್ನು ಕಾಯ್ದುಕೊಳ್ಳಬೇಕು. ಭಾವೈಕ್ಯತೆಯನ್ನು ಉಳಿಸಿಕೊಂಡಾಗ ದೇವರ ಶಕ್ತಿ ಸೃಷ್ಟಿ ಚೈತನ್ಯದಲ್ಲಿ ಸಮ್ಮಿಳಿತಗೊಂಡು ನಮ್ಮೆಲ್ಲರ ಮೂಲಕ ಲೋಕಹಿತ ತೇಜಸ್ಸು ಹೆಚ್ಚಿಸುತ್ತದೆ. ಶ್ರೀ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸಹಬಾಳ್ವೆ, ಸಾಮರಸ್ಯ ಹಾಗೂ ಸಹಜೀವನಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದೇವೆ ಎಂದ ಅವರು, ಏಕತೆಯ ಸೂತ್ರವನ್ನು ಪ್ರತಿಯೊಬ್ಬರಲ್ಲೂ ಕಾಣುವುದೇ ಈ ಬಾರಿಯ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ನುಡಿದರು.

ಡಾ. ಹೇಮಾವತಿ.ವಿ.ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಹಾಗೂ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶರತ್ ಕೃಷ್ಣ ಪಡವೆಟ್ನಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ್ ಭಟ್ ನಾರಾವಿ ನಿರೂಪಿಸಿದರೆ, ಶಾಸಕ ಹರೀಶ್ ಪೂಂಜಾ ಸ್ವಾಗತಿಸಿದರು, ಧರ್ಮಸ್ಥಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ವಂದಿಸಿದರು.

(ವರದಿ: ತೇಜಶ್ವಿನಿ ಕಾಂತರಾಜ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ. | ಚಿತ್ರ: ಶಶಿಧರ.ವಿ.ನಾಯ್ಕ್)

ಮನಸೆಳೆದ ಬಾಲ ರಾಮಾಯಣ

Dharmasthala Deepotsava@ಬಾಲ ರಾಮಾಯಣ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಮೂರನೇ ದಿನದಂದು ಅಮೃತ ವರ್ಷಿಣಿ ಮಂಟಪದಲ್ಲಿ ಲಲಿತಕಲಾ ಗೋಷ್ಠಿ ಕಾರ್ಯಕ್ರಮದ ಭಾಗವಾಗಿ ನಡೆದ ಬಾಲ ರಾಮಾಯಣ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು. ಸ್ವಾತಿ ತಿರುನಾಳ್ ರಾಮೋವರ್ಮ ರಚಿಸಿರುವ ಕೃತಿಯ ಒಂದು ಭಾಗ ಭಾವಯಾಮಿ ರಘುರಾಮಮ್ ಆಗಿದ್ದು, ವಿದ್ವಾನ್ ಉನ್ನತ್ ಎಚ್.ಆರ್. ಅವರ ನಾಟ್ಯಕಲಾವಿಲಾಸ ತಂಡವು ಇದನ್ನು ನೃತ್ಯ ರೂಪಕದಲ್ಲಿ ತೋರಿಸುವಲ್ಲಿ ಯಶಸ್ವಿಯಾಯಿತು.

ಸಂಸ್ಕೃತಿ ಸಂಬಂಧಗಳ ಅರ್ಥಗಳನ್ನೇ ಮರೆತು ಬಿಟ್ಟಿರುವ ಇಂದಿನ ಯುವ ಪೀಳಿಗೆಗೆ ಸಂಬಂಧ, ಭಾವನೆಗಳ ಅರ್ಥವನ್ನು ರಾಮಾಯಣದ ಒಂದೊಂದು ಸನ್ನಿವೇಶವನ್ನು ನಮ್ಮ ಜೀವನದಲ್ಲಿ ಹೇಗೆ ರೂಢಿಸಿಕೊಳ್ಳಬೇಕು. ಅವರಲ್ಲಿರುವ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಂಡು, ಜೀವನದಲ್ಲಿ ಹೇಗೆ ರೂಢಿಸಿಕೊಳ್ಳಬೇಕು. ತಪ್ಪು ಮಾಡಿದ ವ್ಯಕ್ತಿಗೂ ಒಂದು ಅವಕಾಶವನ್ನು ನೀಡಬೇಕೆನ್ನುವ ಸಂದೇಶವನ್ನು ನೃತ್ಯ ರೂಪಕದ ಮುಖಾಂತರ ರಾಮಾಯಣದ ಸನ್ನಿವೇಶವನ್ನು ಕಟ್ಟಿಕೊಡಲಾಯಿತು.

6 ವರ್ಷದ ಮಕ್ಕಳಿಂದ ಹಿಡಿದು ೭೦ ವರ್ಷದವರೂ ಅಭಿನಯಿಸಿರುವುದು ಇದರ ವಿಶೇಷತೆ. ಆಂಜನೇಯ ಪಾತ್ರಧಾರಿಯ ನಟನೆ ಪ್ರೇಕ್ಷಕರನ್ನು ಆಕರ್ಷಿಸಿತು. ಹಿನ್ನೆಲೆ ಗಾಯನಕಾರರು ಅದ್ಭುತವಾದ ಸಂಗೀತದ ಮೂಲಕ
ವಿದುಷಿ ವಿಭಾಶ್ರೀ (ಗಾಯನ), ವಿದುಷಿ ಸಮೃದ್ಧ (ಕೊಳಲು), ವಿದುಷಿ ವಿಕ್ರಂ (ಮೃದಂಗ), ವಿನಯ್ ರಂಗಧೋಳ್ (ರಿಧಂಪ್ಯಾಡ್), ವಿದ್ವಾನ್ ತುಮಕೂರು ಯಶಸ್ವಿ (ವಯೋಲಿನ್) ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋದರು.

ಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಹೆಗ್ಗಡೆ ಮತ್ತು ಹೆಗ್ಗಡೆ ಕುಟುಂಬದ ಸದಸ್ಯರು ಹಾಗೂ ಸಾವಿರಾರು ಜನರು ಉಪಸ್ಥಿತರಿದ್ದರು.
(ವರದಿ- ಕಾರ್ತಿಕ ಹೆಗಡೆ, ಚಿತ್ರಗಳು- ಭಾರತಿ ಹೆಗಡೆ)

ಲಲಿತಕಲಾ ವೈವಿಧ್ಯ; ಭಾವ-ಯೋಗ-ಗಾನ ಮಾಧುರ್ಯ

ಲಕ್ಷ ದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ವೇದಿಕೆಯಲ್ಲಿ ಉಡುಪಿಯ ಭಾರ್ಗವಿ ಆರ್ಟ್ಸ್ ಆ್ಯಂಡ್ ಡಾನ್ಸ್ ಅಕಾಡೆಮಿಯ ತಂಡವು ನಡೆಸಿಕೊಟ್ಟ ಲಲಿತಕಲಾಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ‘ಭಾವ-ಯೋಗ-ಗಾನ’ದ ಝಲಕ್ ಪ್ರೇಕ್ಷಕರ ಗಮನ ಸೆಳೆಯಿತು.

ನೃತ್ಯದ ಜತೆ ಆಧ್ಯಾತ್ಮ, ಯೋಗ, ಗಾನ ಒಂದೇ ವೇದಿಕೆಯಲ್ಲಿ ಮೇಳೈಸಿ ಅಲ್ಲಿದ್ದ ಹಲವು ಕಲಾ ಆರಾಧಕರನ್ನು ಸೆಳೆಯಿತು. ನೃತ್ಯಕ್ಕೆ ಸಂಬಂಧಿಸಿದಂತೆ ಯಕ್ಷಗಾನ, ಕಥಕ್ಕಳಿ ಪ್ರಕಾರಗಳ ಅಭಿವ್ಯಕ್ತಿ ಇತ್ತು. ಯೋಗದ ವಿವಿಧ ಭಂಗಿಗಳ ಅನಾವರಣವಿತ್ತು. ಭಕ್ತಿಭಾವಗಳ ಕಾವ್ಯಾತ್ಮಕ ಸಾಲುಗಳೊಂದಿಗಿನ ಅಭಿನಯ ವೈಶಿಷ್ಟ್ಯ ರಂಜಿಸಿತು.

ಯಕ್ಷಗಾನ, ಕಥಕ್ಕಳಿ, ಕಾಳಿಂಗ ಮರ್ಧನ, ಶಿವ ತಾಂಡವ, ಕುಂಭ ನೃತ್ಯ, ನಟರಾಜ ನಮನ ಹೀಗೆ ವಿವಿಧ ರೀತಿಯ ನೃತ್ಯ ಪ್ರಸ್ತುತಿ ನಾಟ್ಯದ ಕುರಿತ ವಿವಿಧ ಆಯಾಮಗಳನ್ನು ಪರಿಚಯಿಸಿತು. ಸತತ 90 ನಿಮಿಷಗಳ ಕಾಲ ನಡೆದ ನೃತ್ಯವು ಎಲ್ಲರ ಗಮನ ಸೆಳೆಯಿತು.

ಆ್ಯಂಟಿ ಗ್ರ್ಯಾವಿಟಿ ನೃತ್ಯವು ಬಹಳ ಸೊಗಸಾಗಿ ಮೂಡಿಬಂತು. ಗುರುತ್ವಾಕರ್ಷಣೆ ಬಲದ ವಿರುದ್ಧವಾಗಿ ವೇದಿಕೆ ಮೇಲೆ ವಿವಿಧ ಭಂಗಿಗಳನ್ನು ಕಲಾವಿದರು ಪ್ರದರ್ಶಿಸಿದ್ದು ಮನಮೋಹಕವಾಗಿತ್ತು. ಕೃಷ್ಣ ಕಾಳಿಂಗ ಸರ್ಪವನ್ನು ವಧೆ ಮಾಡಿದ ದೃಶ್ಯವಂತೂ ಅಮೋಘವಾಗಿತ್ತು. ಕೈಯಲ್ಲಿ ದೀಪ ಹಿಡಿದುಕೊಂಡು ತಲೆಯ ಮೇಲೆ ಕುಂಭ ಹೊತ್ತು, ಕುಂಭಗಳ ಮೇಲೆ ನಿಂತು ವಿವಿಧ ರೀತಿಯ ಭಂಗಿಗಳನ್ನು ಪ್ರದರ್ಶಿಸಲಾಯಿತು. ಯಕ್ಷಗಾನದ ಜತೆ ಕಥಕ್ಕಳಿ, ಭರತ ನಾಟ್ಯ ಖುಷಿ ನೀಡಿದವು. ವೇದಿಕೆ ಮೇಲೆ ಚಿನ್ಮಯಿ ಭಟ್ ಹಾಡಿದ ‘ಸೋಜುಗಾದ ಸೂಜಿ ಮಲ್ಲಿಗೆ’ ಗೀತೆಯು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.

Dharmasthala Deepotsava@ ಭರತನಾಟ್ಯ

(ವರದಿ: ಐಶ್ವರ್ಯ ಕೋಣನ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ | ಚಿತ್ರಗಳು: ಗ್ಲೆನ್ ಮೋನಿಸ್)

ʼನಾಗಸ್ವರ ವಾದನ’ ಸೇವೆ

Dharmasthala Deepotsava@ನಾಗಸ್ವರ

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮೂರನೇ ದಿನದ ಲಕ್ಷ ದೀಪೋತ್ಸವದ ಪ್ರಯುಕ್ತ ಸೋಮವಾರ ಲಲಿತಾಕಲಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸೇಲಂನ ಮುನಿರತ್ನ ಹಾಗೂ ಚಿತ್ತೂರಿನ ಬಿ.ಎಂ ಶಂಕರಪ್ಪ ತಂಡದಿಂದ ‘ನಾಗಸ್ವರ ವಾದನ’ ನಡೆಯಿತು.

ಸತತ ಒಂದು ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಸೇಲಂನ ತಂಡದಿಂದ ಮುನಿರತ್ನ ಜತೆ ಶಂಕರ್, ತಿರುವೆಂಕಟ (ನಾಗಸ್ವರ), ಮಾದಲಿಂಗಮ್ ಹಾಗೂ ಮಾದೇಶ (ತವಿಲ್), ನಂತರ ಚಿತ್ತೂರು ತಂಡದಿಂದ ಬಿ.ಎಂ ಶಂಕರಪ್ಪ ಜತೆ ಸುಬ್ರಮಣ್ಯಮ್ (ತವಿಲ್), ಹೀರಪ್ಪ, ಸೋಮ್ನೇಶ್,ಮಂಜುನಾಥ (ನಾಗಸ್ವರ), ಸುಬ್ರಹ್ಮಣ್ಯಂ ಹಾಗೂ ಪರಂಧಾಮ (ಸ್ಯಾಕ್ಸೋಫೋನ್) ಸಾಥ್ ನೀಡಿದರು.

ಧರ್ಮಸ್ಥಳ ದೇವಸ್ಥಾನದ ನಾದಸ್ವರ ವಾದಕ ವಿದ್ವಾನ್ ಡಿ.ಅಣ್ಣು ದೇವಾಡಿಗ ಹಾಗೂ ಭಕ್ತಾಭಿಮಾನಿಗಳು ಭಾಗಿಯಾಗಿದ್ದರು. ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ‘ನಾಗಸ್ವರವಾದನ’ ಪ್ರದರ್ಶಿಸಿದ ಕಲಾವಿದರನ್ನು ಗೌರವಿಸಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುವೀರ್ ಜೈನ್ ವಂದಿಸಿದರು.

(ವರದಿ: ಕ್ರೀಷ್ಮಾ ಆರ್ನೋಜಿ, ದ್ವಿತೀಯ ವರ್ಷದ ಪತ್ರಿಕೋದ್ಯಮ, ಎಸ್.ಡಿ.ಎಂ ಸ್ನಾತಕೋತ್ತರ, ಕೇಂದ್ರ, ಉಜಿರೆ. | ಚಿತ್ರ ಕೃಪೆ: ಗ್ಲೆನ್)

ಕಲಾತ್ಮಕ ಸವಾಲೆಸೆದ `ಸಿರಿಯ’ ನವರಸಯಾನ

Dharmasthala Deepotsava@ ನವರಸಯಾನ

ಇದೇ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿ ವಾನಳ್ಳಿ ಅವರ ಏಕ ವ್ಯಕ್ತಿ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಸುಮಾರು ಒಂದೂವರೆ ಗಂಟೆ ವೇದಿಕೆಯ ಮೇಲೆ ಏಕಾಂಗಿಯಾಗಿ, ಸ್ಪಷ್ಟವಾಗಿ, ನಿರರ್ಗಳವಾಗಿ, ಗಟ್ಟಿಧ್ವನಿಯಲ್ಲಿ ಸಂಭಾಷಣೆಯ ಮೂಲಕ ಪ್ರೇಕ್ಷಕರಿಗೆ ನವರಸ ಉಣಬಡಿಸುತ್ತಿದ್ದ ಸಿರಿ ವಾನಳ್ಳಿ ಅವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇವರು ಆನಂದ ಭಾಮಿನಿ ಏಕವ್ಯಕ್ತಿ ನಾಟಕದಲ್ಲಿ ʼಸಾವಿತಿ’್ರ ಆಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. 19ನೇ ಶತಮಾನದ ʼಸಾವಿತ್ರಿ’ಯು ಪ್ರೇಮ ಎಂಬುದು ಬಂಧನವಾಗದೆ ಬಿಡುಗಡೆಯ ಆಯಾಮವಾಗಲು ಪ್ರೇಮಿಗಳಿಗೆ ಇರಬೇಕಾದ ಎಲ್ಲ ಆದರ್ಶಗಳನ್ನು ತನ್ನ ದೃಷ್ಟಿಕೋನದಲ್ಲಿ ಪ್ರಿಯಕರನ ಬಳಿ ಪ್ರಶ್ನಿಸುತ್ತಾ ಹೋಗುತ್ತಾಳೆ. ಆತನ ಪತ್ರವನ್ನು ಓದಿ ಅವನಿಗೆ ಪತ್ರವನ್ನು ಬರೆಯುತ್ತಾ, ಆಕೆ ಮೆಲುಕು ಹಾಕುವ ಸನ್ನಿವೇಶವೇ ಸುಂದರ ನಾಟಕವಾಗಿ ಹೊರಹೊಮ್ಮಿದೆ.

ಅನುಭವಗಳು, ಬೆಳವಣಿಗೆ, ಬದಲಾವಣೆ, ಹೆಣ್ತನದ ಘನತೆಯ ಸೂಕ್ಷ್ಮತೆಗಳು, ನೈಜ ಪ್ರೇಮದ ಸ್ವರೂಪಗಳು, ಯುದ್ಧದ ತಲ್ಲಣಗಳು, ಶಾಂತಿಯ ಮಹತ್ವ ಮತ್ತು ಆಕೆ ಕೇಳುವ ಪ್ರಶ್ನೆಗಳಿಗೆ ಆಕೆಯೇ ಉತ್ತರವಾಗಿ ಸ್ತ್ರೀತನದ ವಿವಿಧ ಆಯಾಮಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ರಂಗ ಸ್ವರೂಪವನ್ನು ಸುಧಾ ಆಡುಕಳ ನೀಡಿದ್ದಾರೆ.

ಸಿರಿ ವಾನಳ್ಳಿ ಅವರ ಅಭಿನಯ ವೇದಿಕೆಗೆ ಗಣೇಶ್ ಬೆಳಕು ಮತ್ತು ರಂಗ ನಿರ್ವಹಣೆಯನ್ನು ಮಾಡಿದರೆ, ಸಿದ್ಧಾಂತ ಮೈಸೂರು ಸಂಗೀತವನ್ನು ನೀಡಿದರು. ಈ ಸಂದರ್ಭಕ್ಕೆ ಸಾಕಷ್ಟು ಕಲಾಭಿಮಾನಿಗಳು ಸೇರಿದಂತೆ ನೂರಾರು ಜನರು ಸಾಕ್ಷಿಯಾದರು.

(ವರದಿ: ಪ್ರಸೀದ್ ಭಟ್, ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ, ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ. ಉಜಿರೆ.
ಚಿತ್ರ ಕೃಪೆ: ವಿವೇಕ್ ಸಿ. ಪಿ., ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ, ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ. ಉಜಿರೆ)

ಗಮನ ಸೆಳೆದ ಶಿವಶಕ್ತಿ ನೃತ್ಯ ರೂಪಕ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಳದ ಲಕ್ಷ ದೀಪೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಕ್ಷದೀಪೋತ್ಸವದ ವಸ್ತು ಪ್ರದರ್ಶನ ಮಂಟಪದಲ್ಲಿ ಬೆಂಗಳೂರಿನ ಮಹಾವೀರ ಲಲಿತಾ ಕಲಾ ಅಕಾಡೆಮಿ ನಾಗರಬಾವಿಯ ಕಲಾವಿದೆಯರು ನವರಸಗಳನ್ನು ನಾಟ್ಯ ಭಾವಗಳಲ್ಲಿ ಅಭಿನಯಿಸುವ ಮೂಲಕ ಕಲಾಭಿಮಾನಿಗಳ ಮನ ಗೆದ್ದರು.

ಬೆಂಗಳೂರಿನ ವಿದುಷಿ ತನುಜಾ ಜೈನ್ ಮತ್ತು ತಂಡ ಭಕ್ತಿ ಆಧಾರಿತ ನೃತ್ಯ ರೂಪಕ ‘ಶಿವಶಕ್ತಿ ‘ಯನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ನಾದಯೋಗ ಪ್ರಿಯನೆಂದು ಶಿವನನ್ನು ವರ್ಣಿಸುವ ನಟೇಶ ಕೌಸ್ತುಭ, ಹಂಸಧ್ವನಿ ರಾಗ, ಏಕತಾಳದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಆದಿಶಕ್ತಿಯ ಸ್ತುತಿಯಾದ ‘ಸರ್ವಮಂಗಳ ಮಾಂಗಲ್ಯೆ’ ಕಲಾಭಿಮಾನಿಗಳ ಚಪ್ಪಾಳೆಗೆ ಪಾತ್ರವಾಯಿತು. ವಿದುಷಿ ತನುಜಾ ಜೈನ್ ಪದವರ್ಣ ನೃತ್ಯ ಬಂಧದ ಉತ್ತರಾರ್ಧವನ್ನು ಮಾಧ್ಯಮ ಕಾಲದಲ್ಲಿ ವರ್ಣ ರಾಗಮಾಲಿಕೆ, ಆದಿ ತಾಳದಲ್ಲಿ ಪ್ರಸ್ತುತಪಡಿಸಿದರು. ಪೂರ್ವಿ ಕಲ್ಯಾಣಿ ರಾಗದಲ್ಲಿ ಶಿವ ತಾಂಡವ, ಪುರುಷ, ಸ್ತ್ರೀ ತತ್ವಗಳನ್ನು ಬಿಂಬಿಸುವ ಅರ್ಧನಾರೀಶ್ವರ ನೃತ್ಯ ಬಂಧ ಶಿವ ಮತ್ತು ಪ್ರಕೃತಿಯ ಆರಾಧನೆಯನ್ನು ಬಿಂಬಿಸುವ ನೃತ್ಯ ರೂಪಕವು ಮೂಡಿಬಂತು.

ಪುರಂದರ ದಾಸರ ಕೀರ್ತನೆ ‘ಚಂದ್ರಚೂಡ ಶಿವಶಂಕರ ಪಾರ್ವತಿ’ಯನ್ನು ಆದಿ ತಾಳದಲ್ಲಿ ಪ್ರದರ್ಶಿಸುವ ಮೂಲಕ ಕಲಾವಿದೆಯರು ಮನ್ಮಥ ದಹನ, ಸಮುದ್ರ ಮಥನ ಕಾಲದಲ್ಲಿ ರುದ್ರನು ವಿಷಕಂಠನಾಗುವುದು ಮುಂತಾದ ಶಿವ ಲೀಲೆಗಳನ್ನು ಪ್ರೇಕ್ಷಕರೆದುರು ನೃತ್ಯದಲ್ಲಿ ಚಿತ್ರಿಸಿದರು. ಶೀಘ್ರ ಗತಿಯ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಕಲಾ ತಂಡದ ಸಂಗೀತ ಗುರು ವಿನೂತ ಸುರೇಶ್‌ ಅವರ ನಿರೂಪಣೆ ರೂಪಕಕ್ಕೆ ಮೆರುಗು ನೀಡಿತು.

(ವರದಿ: ವಿವೇಕ್ ಸಿ ಪಿ, ದ್ವಿತೀಯ ವರ್ಷ, ಸ್ನಾತಕೋತ್ತರ ಕೇಂದ್ರ ಸಮೂಹ ಸಂವಹನ ವಿಭಾಗ, ಉಜಿರೆ ಮತ್ತು ಶ್ರವಣ್ ಕುಮಾರ್, ಎಸ್ ಡಿ ಎಂ ಪದವಿ ಕಾಲೇಜು, ಉಜಿರೆ. | ಚಿತ್ರಗಳು: ಆಶಿಶ್ ಜಿ ಯಾದವ್)

ಪ್ರಿಯ ಓದುಗರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆ, ನಾಗರಿಕ ಸಮಸ್ಯೆ ಇತ್ಯಾದಿ ಸಂಗತಿಗಳನ್ನು ಹೇಳಿಕೊಳ್ಳಲು ‘ವಿಸ್ತಾರʼದಲ್ಲಿ ನಿಮಗೆ ಮುಕ್ತ ಅವಕಾಶ ಇದೆ. ಸಾಂದರ್ಭಿಕ ಲೇಖನಗಳನ್ನೂ ನೀವು ಬರೆದು ಕಳುಹಿಸಬಹುದು. ಬರಹದ ಜತೆ ನಿಮ್ಮದೊಂದು ಫೋಟೊ ಕೂಡ ಇರಲಿ.
ನಮ್ಮ ಇಮೇಲ್‌ ವಿಳಾಸ: janasamparka@vistaranews.com

ಇದನ್ನೂ ಓದಿ | Sabarimala News | ಅಭಿಷೇಕ ಪ್ರಿಯ ಅಯ್ಯಪ್ಪ ಸ್ವಾಮಿಗೆ ನೆಯ್ಯಾಭಿಷೇಕ ಹೇಗೆ ನಡೆಯುತ್ತದೆ ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿವಮೊಗ್ಗ

Murder Case: ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಕೊಂದ ದುಷ್ಕರ್ಮಿಗಳು

Murder Case: ಶಿವಮೊಗ್ಗದಲ್ಲಿ ಹಲವು ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ 45 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

VISTARANEWS.COM


on

Crime Scene
Koo

ಶಿವಮೊಗ್ಗ: ನಗರದ ಬಾಪೂಜಿನಗರದ ಗಂಗಮ್ಮ ದೇವಾಲಯದ ಬಳಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಮೂವರು ದುಷ್ಕರ್ಮಿಗಳು, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಮೆಂಟಲ್ ಸೂರಿ ಅಲಿಯಾಸ್ ಸುರೇಶ್ (45) ಕೊಲೆಯಾದ ವ್ಯಕ್ತಿ. ಹಲವು ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಮೆಂಟಲ್ ಸೂರಿ ಭಾಗಿಯಾಗಿದ್ದ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳ ಸಹಾಯದಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

ಹೊಳಲ್ಕೆರೆ ಬಳಿ ಕಾರು ಪಲ್ಟಿ; ಶಿವಮೊಗ್ಗ ಮೂಲದ ವ್ಯಕ್ತಿ ಸಾವು, ಇನ್ನಿಬ್ಬರಿಗೆ ಗಾಯ

Road accident Car overturns near Holalkere Shivamogga man killed and two others injured

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಣಿವೆಯಲ್ಲಿ (Road Accident) ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.
ಮಂಜುನಾಥ (36) ಸ್ಥಳದಲ್ಲೇ ಮೃತಪಟ್ಟವರು. ಸತೀಶ್ ಹಾಗೂ ಸುಚೇತ ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂವರೂ ಶಿವಮೊಗ್ಗ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಇವರು ಬೆಂಗಳೂರಿನಿಂದ‌ ಶಿವಮೊಗ್ಗಕ್ಕೆ ಕಾರಲ್ಲಿ ಹೊರಟಿದ್ದರು. ಮೃತ ಮಂಜುನಾಥ್ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದರು. ವೀಕೆಂಡ್‌ ಹಿನ್ನೆಲೆಯಲ್ಲಿ ಊರಿನತ್ತ ಹೊರಟಿದ್ದರು ಎನ್ನಲಾಗಿದೆ. ಕಾರು ವೇಗವಾಗಿದ್ದ ಕಾರಣ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ ಪಲ್ಟಿ ಹೊಡೆದಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಮಂಜುನಾಥ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಭಾರಿ ಗಾಯಗಳಾಗಿವೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Continue Reading

ಚಿಕ್ಕಮಗಳೂರು

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ಪೀಠಾಧೀಶ್ವರರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮಸಭೆ ನೆವೇರಿತು.

VISTARANEWS.COM


on

ಹರಿಹರಪುರ ಧರ್ಮಸಭೆ
Koo

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ (Divyakshetra Hariharapura) ಬ್ರಹ್ಮೋತ್ಸವದ ಪ್ರಯುಕ್ತ ಎರಡನೇ ದಿನವಾದ ಶನಿವಾರ ಧರ್ಮಸಭೆ ಏರ್ಪಡಿಸಲಾಗಿತ್ತು. ಹರಿಹರಪುರದ ಪೀಠಾಧೀಶ್ವರರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದೊಡ್ಡಮಠ ಅರಕಲಗೂಡು ಹಾಗೂ ಬೆಂಗಳೂರಿನ ಶ್ರೀ ಸರ್ಪಭೂಷಣ ಮಠದ ಪೀಠಾಧಿಪತಿಗಳಾದ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಮಹಾಸ್ವಾಮಿ ಹಾಗೂ ಅರಕಲಗೂಡಿನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧಿಪತಿಗಳಾದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಅವರು ನಂದಾದೀಪವನ್ನು ಬೆಳಗುವ ಮುಖಾಂತರ ಚಾಲನೆ ನೀಡಿದರು.

ವೇದಿಕೆ ಮೇಲೆ ಸಾನಿಧ್ಯ ವಹಿಸಿದ್ದ ತ್ರಯಾಚಾರ್ಯರು ನಾವು ಮೂವರು ಯತಿಗಳು ದೇಹ ಮಾತ್ರ ಬೇರೆಯಾದರೂ ಆತ್ಮದಲ್ಲಿ ನಾವೆಲ್ಲರೂ ಒಬ್ಬರೇ ಆಗಿದ್ದೇವೆ. ನಮ್ಮೆಲ್ಲರ ಚಿಂತನೆ ಒಂದೇ ಆಗಿರುತ್ತದೆ. ಜಾತಿ ಭೇದವನ್ನು ಅಳಿಸಿ ಎಲ್ಲರನ್ನೂ ಒಂದಾಗಿ ಸಮಾನತೆಯಿಂದ ಕಾಣುತ್ತಾ, ಪರಸ್ಪರ ಪ್ರೀತಿ- ವಾತ್ಸಲ್ಯ- ಸ್ನೇಹ ಸೌಹಾರ್ದದಿಂದ ಬಾಳುವಂತಹ ಸದೃಢ ಸನಾತನ ಹಿಂದು ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಧ್ಯೇಯವಾಗಿದೆ ಎಂದು ಘೋಷಿಸಿದರು. ಜಗಜ್ಯೋತಿ ಬಸವಣ್ಣನವರು, ವಿಶ್ವಕರ್ಮ, ಆದಿ ಶಂಕರಾಚಾರ್ಯ ಭಗವತ್ಪಾದರು ಎಲ್ಲರೂ ಸಮಾನರು ಎಂಬ ಅಂಶದ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿದ್ದರು. ನಮ್ಮ ಅಭಿಪ್ರಾಯವೂ ಸಮಾನತೆಯ ಸಮಾಜದ ನಿರ್ಮಾಣವೇ ಆಗಿದೆ ಎಂದು ಘೋಷಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ಶ್ರೀಮಠದ ಆಡಳಿತಾಧಿಕಾರಿಗಳಾದ ಡಾ. ಬಿ.ಎಸ್. ರವಿಶಂಕ ಅವರು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳೊಂದಿಗೆ ತ್ರಯಾಚಾರ್ಯರನ್ನು ಹಾಗೂ ಆಗಮಿಸಿದ ಸಮಸ್ತರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕರಾವಳಿಯ ಪ್ರಸಿದ್ಧ ಕಹಳೆ ನ್ಯೂಸ್‌ನ ಶಾಮ್ ಸುದರ್ಶನ್ ಹಾಗೂ ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಕೊರ‍್ರಪಾಟಿ ಸಾಯಿರವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ, ಶಿಕ್ಷಣ ತಜ್ಞ, ನಟ ಕಲ್ಕಟ್ಟೆ ನಾಗರಾಜ್, ಖ್ಯಾತ ಕೃಷಿಕ ಕಳಸಾದ ಬಿ.ಕೆ. ಮಂಜಪ್ಪಯ್ಯ ಹಾಗೂ ಹರಿಹರಪುರ ಮಠದ ಆಸ್ಥಾನ ವಿಶ್ವಕರ್ಮರಾದ ನಾಗರಾಜ್ ಆಚಾರ್ ಅವರನ್ನು ತ್ರಯಾಚಾರ್ಯರು ಗೌರವಿಸಿ ಅನುಗ್ರಹಿಸಿ ಸನ್ಮಾನಿಸಿದರು.

Continue Reading

ಮಂಡ್ಯ

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Lok Sabha Election 2024: ಕೆ.ಆರ್.ನಗರದಲ್ಲಿ ನಡೆದ ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಸಭಾ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಕಾಂಗ್ರೆಸ್‌ಗೆ ಮತ ನೀಡಿ, ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

VISTARANEWS.COM


on

Prajadhwani 2 Lok Sabha election campaign meeting at KR Nagar
Koo

ಕೆ.ಆರ್.ನಗರ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ (Congress) ಮತ ನೀಡಿ, ನನ್ನನ್ನು ಗೆಲ್ಲಿಸಿ ಕಾಂಗ್ರೆಸ್‌ಗೆ ಶಕ್ತಿ ತುಂಬಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮನವಿ (Lok Sabha Election 2024) ಮಾಡಿದರು.

ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Money Guide: ಕುಟುಂಬಕ್ಕಾಗಿ ಆರೋಗ್ಯ ವಿಮೆ; ಖರೀದಿ ಮುನ್ನ ತಿಳಿದಿರಲಿ ಕೆಲವು ವಿಚಾರ

ನಾನು ಇದೇ ಲೋಕಸಭಾ ಕ್ಷೇತ್ರದ ನಾಗಮಂಗಲ ತಾಲೂಕು ಕನ್ನಘಟ್ಟ ಗ್ರಾಮದ ರೈತನ ಮಗ. ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ, ರಾಜಕಾರಣದಿಂದ ಒಂದು ರೂಪಾಯಿ ಹಣ ಮಾಡಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರ ಸಹಕಾರದಿಂದ, ಕೆ.ಆರ್.ನಗರದ ಅಭಿವೃದ್ಧಿಗೆ ಶಾಸಕ ರವಿಶಂಕರ್ ಜತೆಗೆ ನಾನು ಕೂಡ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: Apricot Benefits: ನಿಮಗೆ ಇಂತಹ ಸಮಸ್ಯೆಗಳಿವೆಯೇ?: ಹಾಗಾದರೆ ನಿತ್ಯವೂ ಆಪ್ರಿಕಾಟ್‌ ತಿನ್ನಿ!

ಸಭೆಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕ ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಉತ್ತರ ಕನ್ನಡ

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Sirsi News: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯನ್ನು ಖಂಡಿಸುತ್ತೇನೆ. ಅಮಾನವೀಯ, ಹೇಯ ಕೃತ್ಯವನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ವಿರೋಧಿಸಬೇಕಿದೆ. ಅವರ ಕುಟುಂಬದ ಜತೆ ಬಿಜೆಪಿ ಸದಾ ನಿಲ್ಲಲಿದೆ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

VISTARANEWS.COM


on

Uttara Kannada Lok Sabha Constituency BJP Candidate Vishweshwara Hegde Kageri latest Statement
Koo

ಶಿರಸಿ: ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ (Guarantee) ನೀಡಿದ್ದೇವೆ ಎಂದು ಹೇಳುತ್ತಾ ಇಂದು ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ (Sirsi News) ನಡೆಸಿದರು.

ಶಿರಸಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸಿ, ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮತ ಗಳಿಕೆ ಮತ್ತು ಅಧಿಕಾರದ ಆಸೆಯ ಮೂಲ ಉದ್ದೇಶದಿಂದ ಹಿಂದೂ ಸಮಾಜವನ್ನು ಬಲಿ ಕೊಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.‌

ಇದನ್ನೂ ಓದಿ: Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದನ್ನು ಬಿಟ್ಟು ಓಲೈಕೆಯ ರಾಜಕಾರಣಕ್ಕೆ ಬಹುಸಂಖ್ಯಾತರ ಭಾವನೆಯನ್ನು ಕಾಂಗ್ರೆಸ್ ಧಿಕ್ಕರಿಸುತ್ತಿದೆ ಎಂದ ಕಾಗೇರಿ, ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮತದಾರರು ಜಾಗೃತರಾಗಿ ಯೋಚಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ಹನುಮಾನ್ ಚಾಲೀಸ ಪಠಿಸಿದರೆ, ಜೈಶ್ರೀರಾಮ ಘೋಷಣೆ ಕೂಗಿದರೆ ಹಿಂದೂಗಳ ಮೇಲೆ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸುತ್ತದೆ. ನಮ್ಮ ಸನಾತನ ಧರ್ಮದ ಪವಿತ್ರ ಭಗವಾಧ್ವಜ ಹಾರಿಸಲು ಬಿಡುತ್ತಿಲ್ಲ. ನಮ್ಮ ರಾಜ್ಯದ ಪವಿತ್ರ ದೇಗುಲ ಎಂದು ಕರೆಯುವ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ಸುಮ್ಮನೆ ಕುಳಿತುಕೊಂಡಿದೆ. ಓಲೈಕೆಯ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಪರಮೇಶ್ವರ್‌ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ಹಣ, ಗ್ಯಾರಂಟಿ, ಜಾತಿ, ಧರ್ಮವನ್ನು ಒಡೆದು ಆಳುವ ಸ್ವಾರ್ಥದ ರಾಜಕಾರಣ ಕಾಂಗ್ರೆಸ್ ಮಾಡುತ್ತಿದ್ದು, ಅಲ್ಪಸಂಖ್ಯಾತರನ್ನು ದಾರಿತಪ್ಪಿಸುವ ಕೆಲಸಕ್ಕೆ ಕೈ ಹಾಕಿದೆ, ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹತ್ಯೆ ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕು ಎಂದು ವಿನಂತಿಸಿದರು.

Continue Reading
Advertisement
Crime Scene
ಶಿವಮೊಗ್ಗ4 mins ago

Murder Case: ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳಿಂದ ಹೊಡೆದು ಕೊಂದ ದುಷ್ಕರ್ಮಿಗಳು

SRH vs DC
ಕ್ರೀಡೆ24 mins ago

SRH vs DC: ವಿಸ್ಫೋಟಕ ಬ್ಯಾಟಿಂಗ್​ ಮೂಲಕ ದಾಖಲೆ ಬರೆದ ಸನ್​ರೈಸರ್ಸ್ ತಂಡ

Lok Sabha Election
Lok Sabha Election 202426 mins ago

Lok Sabha Election: ಕೇರಳದಲ್ಲಿ 2 ಲಕ್ಷಕ್ಕಿಂತ ಅಧಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲು

Viral Video
ವೈರಲ್ ನ್ಯೂಸ್38 mins ago

Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್

ಹರಿಹರಪುರ ಧರ್ಮಸಭೆ
ಚಿಕ್ಕಮಗಳೂರು39 mins ago

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

Kunwar Sarvesh Singh
ದೇಶ52 mins ago

Kunwar Sarvesh: ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ಹೃದಯಾಘಾತಕ್ಕೆ ಬಲಿ!

IPL 2024
ಕ್ರೀಡೆ1 hour ago

IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

Prajadhwani 2 Lok Sabha election campaign meeting at KR Nagar
ಮಂಡ್ಯ1 hour ago

Lok Sabha Election 2024: ನನ್ನನ್ನು ಗೆಲ್ಲಿಸಿ, ಕಾಂಗ್ರೆಸ್‌ಗೆ ಶಕ್ತಿ ತುಂಬಿ: ವೆಂಕಟರಮಣೇಗೌಡ ಮನವಿ

Uttara Kannada Lok Sabha Constituency BJP Candidate Vishweshwara Hegde Kageri latest Statement
ಉತ್ತರ ಕನ್ನಡ1 hour ago

Sirsi News: ಕಾಂಗ್ರೆಸ್ ಸರ್ಕಾರದ ಮತಾಂಧರ ಓಲೈಕೆಯೇ ನೇಹಾ ಹತ್ಯೆಗೆ ಕಾರಣ: ಕಾಗೇರಿ ಖಂಡನೆ

Narendra Modi
ಪ್ರಮುಖ ಸುದ್ದಿ1 hour ago

ಚಾಯ್‌ವಾಲಾ ಮೋದಿ ಐಐಟಿ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20246 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20247 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ9 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ10 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌