Ramadan 2023: ರಂಜಾನ್‌ ವೇಳೆ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿದ ಮುಸ್ಲಿಂ ಮುಖಂಡರು - Vistara News

ಕರ್ನಾಟಕ

Ramadan 2023: ರಂಜಾನ್‌ ವೇಳೆ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿದ ಮುಸ್ಲಿಂ ಮುಖಂಡರು

Ramadan 2023: ರಂಜಾನ್‌ ಮಾಸದಲ್ಲಿ ಮಸೀದಿಗಳಲ್ಲಿ ಲೌಡ್‌ ಸ್ಪೀಕರ್‌ ಮೂಲಕ ಆಝಾನ್‌ಗೆ ಅನುಮತಿ ನೀಡುವಂತೆ ಮುಸ್ಲಿಂ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಪತ್ರದೊಂದಿಗೆ ಕೋರಿದ್ದಾರೆ.

VISTARANEWS.COM


on

Muslim leaders seek permission to use loudspeakers in mosques during Ramzan
ಮನವಿ ಪತ್ರ ಸಲ್ಲಿಸಿದ ಮುಸ್ಲಿಂ ಮುಖಂಡರು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ನೀಡುವಂತೆ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ. ಮುಸ್ಲಿಮರಿಗೆ ರಂಜಾನ್ ಮಾಸವು (Ramadan 2023) ಬಹಳ ಪವಿತ್ರ ಮಾಸವಾಗಿರುತ್ತದೆ. ಈ ಸಮಯದಲ್ಲಿ ಶಾಂತಿ, ಸಹಬಾಳ್ವೆ, ದಾನ-ಧರ್ಮ ಉಪವಾಸದೊಂದಿಗೆ ಕಟ್ಟುನಿಟ್ಟಾಗಿ ಪ್ರಾರ್ಥನೆಗಳು ನಡೆಯುತ್ತವೆ. ಹೀಗಾಗಿ ನಮಗೆ ಲೌಡ್‌ ಸ್ಪೀಕರ್‌ ಬಳಕೆಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ.

ಇದರ ಜತೆಗೆ ಮುಸಲ್ಮಾನರಿಗೆ ಆಝಾನ್ ಕೂಡ ರಂಜಾನ್ ಆಚರಣೆಯ ಒಂದು ಭಾಗವಾಗಿರುತ್ತದೆ. ಹೀಗಿರುವಾಗ ರಂಜಾನ್ ಉಪವಾಸ ನಡೆಯುವ ಒಂದು ತಿಂಗಳ ಕಾಲ ಬೆಳಗಿನ ಆಝಾನ್‌ ಅನ್ನು ಧ್ವನಿವರ್ಧಕದ ಮೂಲಕ ಹೇಳಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಕೋರಲಾಗಿದೆ.

ಇದನ್ನೂ ಓದಿ: CM Basavaraja Bommai : 2 ಗಂಟೆ ಬಂದ್‌ ಎಲ್ಲಾದರೂ ಕೇಳಿದ್ದೀರಾ? ಅದ್ಯಾವ ಸೀಮೆಯ ಬಂದ್‌?; ಸಿಎಂ ಬೊಮ್ಮಾಯಿ ವ್ಯಂಗ್ಯ

ವಿಶೇಷ ಸಂದರ್ಭಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ, ಕ್ರೀಡಾಕೂಟಗಳಿಗೆ ರಾತ್ರಿ ಹಾಗೂ ಮುಂಜಾನೆ ಧ್ವನಿವರ್ಧಕವನ್ನು ಬಳಸಲು ಅನುಮತಿ ನೀಡಲಾಗುತ್ತದೆ. ಇದೇ ರೀತಿ ಮುಸಲ್ಮಾನರ ಪವಿತ್ರ ರಂಜಾನ್ ಮಾಸದಲ್ಲಿ ಬೆಳಗಿನ ಜಾವ 5ರಿಂದ 5.30ರ ಒಳಗೆ ಗರಿಷ್ಠ 5 ನಿಮಿಷಗಳ ಕಾಲ ಧ್ವನಿವರ್ಧಕದ ಮೂಲಕ ಆಝಾನ್‌ ನೀಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.‌

ಬೆಂಗಳೂರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿದ್ದು, ಅವರು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಇದೀಗ ಅವರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಜನತಾ ಪಕ್ಷ ಘೋಷಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಕ್ಷ, ಈ ಘೋಷಣೆಯ ನೋಟಿಸ್‌ ಅನ್ನು ಬೆಂಗಳೂರಿನಲ್ಲಿ ವಿವಿಧೆಡೆ ಅಂಟಿಸಲು ಮುಂದಾಗಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಜನತಾ ಪಕ್ಷ (Janata Party) ಘೋಷಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಕ್ಷ, ಈ ಘೋಷಣೆಯ ನೋಟಿಸ್‌ ಅನ್ನು ಬೆಂಗಳೂರಿನಲ್ಲಿ ವಿವಿಧಡೆ ಅಂಟಿಸಲು ಮುಂದಾಗಿದೆ. ರೆಡ್ಡಿ ಪೆಟ್ರೋಲ್‌ ಬಂಕ್‌ನಿಂದ ಶಿವಾನಂದ ಸರ್ಕಲ್‌, ಚಾಲುಕ್ಯ ಸರ್ಕಲ್‌, ಎಂ.ಎಸ್‌.ಬಿಲ್ಡಿಂಗ್‌, ಕೆ.ಆರ್‌.ಸರ್ಕಲ್‌, ಫ್ರೀಡಂ ಪಾರ್ಕ್‌, ಮೌರ್ಯ ಸರ್ಕಲ್‌, ಆನಂದದರಾವ್‌ ಸರ್ಕಲ್‌ವರೆಗೆ ನೋಟಿಸ್‌ ಅಂಟಿಸಲಿದೆ.

ಪ್ರಕಟಣೆಯಲ್ಲಿ ಏನಿದೆ?

ಮಹಿಳೆಯರ ಮೇಲಿನ ಲೈಂಗಿಕ-ಮಾನಸಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಹಗರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಹಗರಣ ದೇಶಾದ್ಯಂತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಇದರಿಂದಾಗಿ ಹಾಸನ ಜಿಲ್ಲೆಯ, ಕರ್ನಾಟಕ ರಾಜ್ಯದ ಸಮಸ್ತ ಕನ್ನಡಿಗರ ಘನತೆಗೆ ಧಕ್ಕೆ ಉಂಟಾಗಿದೆ. ಪ್ರಭಾವಿ ಕುಟುಂಬದ ಹಾಗೂ ಜನಪ್ರತಿನಿಧಿಯೇ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವುದು ನಿಜಕ್ಕೂ ನಾಚಿಗೆಗೇಡಿನ ವಿಷಯ. ಪ್ರಕರಣದ ಸತ್ಯಾಸತ್ಯತೆ ಏನೇ ಇದ್ದರೂ, ಆರೋಪಿಯಾದವರು ತನಿಖೆಯನ್ನು ಎದುರಿಸಿದ ತಾನು ನಿರಪರಾಧಿ ಎನ್ನುವುದನ್ನು ನಿರೂಪಿಸಬೇಕು. ಜವಾಬ್ದಾರಿಯುತ ಸಂಸದ ಹುದ್ದೆಯಲ್ಲಿರುವ ವ್ಯಕ್ತಿಯೇ ತಲೆಮರೆಸಿಕೊಂಡಿರುವುದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ.

ಕನ್ನಡಿಗರ, ಕರ್ನಾಟಕದ ಘನತೆಯನ್ನು ಮುಖ್ಯವಾಗಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ರಾಷ್ಟ್ರದ ಪ್ರಜ್ಞಾವಂತ ರಾಜಕೀಯ ಪಕ್ಷವಾದ ನಮ್ಮ ಜನತಾ ಪಕ್ಷದ ವತಿಯಿಂದ ಈ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಸಹಿತ ಸನ್ಮಾನವನ್ನು ಘೋಷಿಸುತ್ತಿದ್ದೇವೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

36 ಸೆಕೆಂಡ್‌‌ಗಳ ಮತ್ತೊಂದು ಆಡಿಯೊ ಬಾಂಬ್

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಅಶ್ಲೀಲ ವಿಡಿಯೊ ಹರಿಬಿಟ್ಟವರ ಬಗ್ಗೆ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದಿದ್ದ ವಕೀಲ ದೇವರಾಜೇಗೌಡ, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ್ದಾರೆ. ಇದರಿಂದ ಪ್ರಜ್ವಲ್‌ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡ, ಹಾಸನ ಪೆನ್‌ಡ್ರೈವ್‌ ಪ್ರಕರಣದ ಹಿಂದಿನ ಕಥಾನಾಯಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಎಂದು ಗಂಭೀರ ಆರೋಪ ಮಾಡಿದ್ದರು. ನಂತರ ಇದಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸಾಕ್ಷ್ಯ ನೀಡುವುದಾಗಿ ಹೇಳಿದ್ದರು. ಇದೀಗ ಪ್ರಕರಣದ ಬಗ್ಗೆ ಮಂಡ್ಯ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಜತೆ ಮಾತುಕತೆಯ ಆಡಿಯೊವನ್ನು ಹರಿಬಿಟ್ಟಿದ್ದಾರೆ. ಒಟ್ಟು ಮೂರು ಆಡಿಯೊಗಳನ್ನು ದೇವರಾಜೇಗೌಡ ರಿಲೀಸ್‌ ಮಾಡಿದ್ದು, ಇದರಲ್ಲಿ ಹನಿಟ್ರ್ಯಾಪ್‌ ಮಾಡಿದ್ದರು ಎನ್ನಲಾಗಿದ್ದ ಮಹಿಳೆಯ ಗಂಡ ಮೋಹನ್‌ ಜತೆಗಿನ ಮಾತುಕತೆಯ ವಿಡಿಯೊ ಒಂದು ಇದ್ದು, ಉಳಿದೆರಡು ಆಡಿಯೊಗಳು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಜತೆ ಮಾತನಾಡಿರುವುದಾಗಿದೆ.

ಆಡಿಯೊದಲ್ಲಿ ಏನಿದೆ?

ಆಡಿಯೊದಲ್ಲಿ ಮೊದಲಿಗೆ ನನ್ನನ್ನು ಭೇಟಿ ಆಗಿದ್ದೆ ಎಂದು ದೇವರಾಜೇಗೌಡ ಹೇಳಿರುವುದು ಯಾಕೆ ಎಂದು ಡಿಕೆಶಿ ತಮ್ಮ ಬಳಿ ಕೇಳಿರುವುದಾಗಿ ಮಾಜಿ ಸಂಸದ ಶಿವರಾಮೇಗೌಡ ಹೇಳುತ್ತಾರೆ. ಈ ವೇಳೆ ವಕೀಲ ದೇವರಾಜೇಗೌಡ, ನಮಗೆ ಏನಾದರೂ ಎಸ್‌ಐಟಿಯವರು ನೋಟಿಸ್‌ ಕೊಡತ್ತಾರಾ ಎಂದು ಪ್ರಶ್ನಿಸಿದ್ದಾರೆ. ಆಗ ಕೊಡ್ತಾರೆ, ಕೊಡ್ತಾರೆ ಎಂದ ಶಿವರಾಮೇಗೌಡ, ಎಸ್‌ಐಟಿ ಅಧಿಕಾರಿಗಳ ಮುಂದೆ ಡಿಕೆ ಬಗ್ಗೆ ನೀನು ಚಕಾರ ಎತ್ತಬೇಡ. ನಾನು ಇವತ್ತಿನಿಂದ ಅಲ್ಲ, ಬಹಳ ವರ್ಷಗಳಿಂದ ರೇವಣ್ಣ ಕುಟುಂಬದ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳು ಎಂದು ಶಿವರಾಮೇಗೌಡ ಕಿವಿಮಾತು ಹೇಳಿದ್ದಾರೆ.

ಮತ್ತೊಂದು ಆಡಿಯೊದಲ್ಲಿ ತಮಗೆ ಹನಿಟ್ರ್ಯಾಪ್‌ ಮಾಡಿದ್ದರು ಎನ್ನಲಾದ ಮಹಿಳೆಯ ಗಂಡ ಮೋಹನ್‌ ಎಂಬುವವರ ಜತೆ ದೇವರಾಜೇಗೌಡ ಮಾತನಾಡಿದ್ದಾರೆ. ನಿಮ್ಮ ಹೆಂಡತಿ, ಅವರ ಜತೆ ಸೇರಿಕೊಂಡು ನನ್ನನ್ನು ಹನಿಟ್ರ್ಯಾಪ್‌ ಮಾಡಿದ್ದಾಳೆ, ಅವಳ ಜತೆ ಡಿವೋರ್ಸ್‌ ಆಗಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ಮನೆಯಿಂದ ಆಚೆ ಹಾಕಿ, ಹಾಸನದಲ್ಲಿ ನಮ್ಮ ಆಸ್ತಿಯನ್ನು ಅವಳ ಹೆಸರಿಗೆ ಮಾಡಿಕೊಂಡಿದ್ದಾಳೆ. ನಾನು ಹೇಗೋ ಜೀವನ ಮಾಡಿಕೊಂಡಿದ್ದೇನೆ ಎಂದು ಮೋಹನ್‌ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna case: ಪ್ರಜ್ವಲ್‌ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್‌ ಲಿಸ್ಟ್‌ನಲ್ಲಿ ಸಂಸದ!

Continue Reading

ಚಿತ್ರದುರ್ಗ

Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Food Poisoning : ರಾತ್ರಿ ಮದುವೆ ಊಟ ಮಾಡಿದವರಿಗೆ ಏಕಾಏಕಿ ವಾಂತಿ, ಭೇದಿಯಾಗಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ. ಘಟನೆಯಿಂದಾಗಿ ಆಸ್ಪತ್ರೆಗಳು ಹೌಸ್‌ಫುಲ್‌ ಆಗಿವೆ.

VISTARANEWS.COM


on

By

Food Poisoning
Koo

ಚಿತ್ರದುರ್ಗ: ಮದುವೆ ಮನೆಯಲ್ಲಿ ಸಿದ್ಧಪಡಿಸಲಾಗಿದ್ದ ಊಟ ಮಾಡಿದ (Food Poisoning) ನೂರಾರು ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಶುಕ್ರವಾರ (ಮೇ 10) ಹೆಬ್ಬಾಳ ಗ್ರಾಮದಲ್ಲಿ ಕಾಲ್ಗೆರೆ ಗ್ರಾಮದ ಸಣ್ಣರುದ್ರಪ್ಪ ಎಂಬುವರ ಮಗಳ ಮದುವೆ ಸಮಾರಂಭ ನಡೆದಿತ್ತು. ಹೆಬ್ಬಾಳು ಮಠದಲ್ಲಿ ಆಯೋಜಿಸಿದ್ದ ಮದುವೆಗೆ ಬಂದಿದ್ದ ಸಂಬಂಧಿಕರು, ನೆಂಟರು, ಸ್ನೇಹಿತರು ಭರ್ಜರಿ ಮದುವೆ ಊಟವನ್ನು ಸವಿದಿದ್ದರು. ಮದುವೆ ಊಟ ಮಾಡಿದವರಲ್ಲಿ ಸಂಜೆ ವೇಳೆ ಎಲ್ಲರೂ ವಾಂತಿ, ಭೇದಿ ಜತೆಗೆ ಸುಸ್ತು ಕಾಣಿಸಿಕೊಂಡಿದೆ.

ಅನಾರೋಗ್ಯ ಸಮಸ್ಯೆಗಳಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಏಕಾಏಕಿ ನೂರು ಮಂದಿ ಆಸ್ಪತ್ರೆಗೆ ಸೇರಿದ ಕಾರಣಕ್ಕೆ ಚಿಕಿತ್ಸೆಗಾಗಿ ಪರದಾಡಿದ ಘಟನೆ ನಡೆದಿದೆ. ಮದುವೆ ಊಟದಲ್ಲಿ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಅಸ್ವಸ್ಥರಿಗೆ ಭರಮಸಾಗರ, ದಾವಣಗೆರೆ ಸರಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಾಶತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: Murder case : ತಡರಾತ್ರಿ ಹರಿದ ನೆತ್ತರು; ಕತ್ತು ಸೀಳಿ ಯುವಕನ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಬಿಡಿ ಹಗಲಿನಲ್ಲೇ ಮಹಿಳೆಯರು, ಯುವತಿಯರು, ಮಕ್ಕಳು ಓಡಾಡಲು ಭಯಪಡುವಂತಾಗಿದೆ. ಇದಕ್ಕೆ ಲೇಟೆಸ್ಟ್‌ ಉದದಾಹರಣೆ ಈ ಘಟನೆ. ಹಾಡ ಹಗಲೇ ರಸ್ತೆಯ ಪಕ್ಕ ನಿಂತಿದ್ದ ಯುವತಿಗೆ ಇಬ್ಬರು ಮುಸ್ಲಿಂ ಯುವಕರು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ ಘಟನೆ ನಡೆದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ರಸ್ತೆ ಬದಿಯಲ್ಲಿ ಸ್ಕೂಟಿ‌ ನಿಲ್ಲಿಸಿಕೊಂಡು ನಿಂತಿದ್ದ ಯುವತಿ ಬಳಿಗೆ ಬಂದ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರು ಹಿಂದಿಯಲ್ಲಿ ನಿಂದಿಸಿದ್ದಾರೆ. ಇದು ಬಿ.ಟಿ.ಎಂ‌. ಲೇ ಔಟ್‌ನಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ರಸ್ತೆಯ ಪಕ್ಕ ಸ್ಕೂಟಿ ನಿಲ್ಲಿಸಿ ಯುವತಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಅಲ್ಲಿಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು, ʼʼಕುಡಿದ ನಶೆಯಲ್ಲಿ ರೋಡ್ ಶೋ ಮಾಡುತ್ತೀಯಾ?ʼʼ ಎಂದು ಬೈದಿದ್ದಾರೆ. ಯುವಕರ ಅವಾಚ್ಯ ನಿಂದನೆಯಿಂದ ಒಂದು ಕ್ಷಣ ಗಾಬರಿಗೊಳಗಾದ ಯುವತಿ ಬಳಿಕ ಅವರನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರನ್ನೇ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಪುಂಡರು ಅಶ್ಲೀಲ ಪದಗಳಿಂದ ಯುವತಿಯನ್ನು ಹಿಂದಿಯಲ್ಲಿ ನಿಂದಿಸಿದ್ದಾರೆ. ಹೀಗೆ ಯುವಕರು ಕೆಲಕಾಲ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗೆ ಅನುಚಿತವಾಗಿ ವರ್ತಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ನಡುಬೀದಿಯಲ್ಲಿ ಲೈಂಗಿಕ ಕಿರುಕುಳ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲೇ ಬಿಹಾರ ಮೂಲದ ದಂಪತಿಗೆ ಲೈಂಗಿಕ ಕಿರುಕುಳದ ಕರಾಳ ಅನುಭವ ಆಗಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ್ದಾರೆ. ನಗರದಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಸೇರ್ಪಡೆ. ರಾತ್ರಿ ಸಮಯದಲ್ಲಿ ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ಒಂದು ವಾರದ ಹಿಂದೆ 10:30ರ ಸುಮಾರಿಗೆ ನಡೆದ ಘಟನೆ ಇದು.

ಜತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ದಂಪತಿ ಬಿಹಾರ ಮೂಲದವರಾಗಿದ್ದು, ಈ ದಂಪತಿಗೆ ನಿನ್ನೆ ರಾತ್ರಿ ಕರಾಳ ಅನುಭವವಾಗಿದೆ. ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ. ಹೀಗಾಗಿ ಸದ್ಯ ಬೆಂಗಳೂರಿಗರು ಒಬ್ಬರೇ ಓಡಾಡಲು ಭಯಪಡುವಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Gold Rate Today:ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,725ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,800 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,250 ಮತ್ತು ₹6,72,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,755 ಆಗಿದ್ದರೆ, ಎಂಟು ಗ್ರಾಂ ಬೆಲೆ ₹54,040 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹67,550 ಮತ್ತು ₹6,75,500 ವೆಚ್ಚವಾಗಲಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹30 ಹಾಗೂ ₹33 ಇಳಿಕೆಯಾಗಿವೆ. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ವ್ಯಾಪಾರ ಏರಿಕೆ ಆಗಿದ್ದು, ಹೀಗಾಗಿ ನಿನ್ನೆ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,725ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,800 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,250 ಮತ್ತು ₹6,72,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹6,755 ಆಗಿದ್ದರೆ, ಎಂಟು ಗ್ರಾಂ ಬೆಲೆ ₹54,040 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹67,550 ಮತ್ತು ₹6,75,500 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹87.10, ಎಂಟು ಗ್ರಾಂ ₹696.80 ಮತ್ತು 10 ಗ್ರಾಂ ₹871ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,710 ಮತ್ತು 1 ಕಿಲೋಗ್ರಾಂಗೆ ₹87,100 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ. ನಿನ್ನೆಗೆ ಹೋಲಿಸಿದರೆ ಈ ದರ ಕೊಂಚ ಏರಿಕೆ ಕಂಡಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,40073,510
ಮುಂಬಯಿ67,25073,360
ಬೆಂಗಳೂರು67,25073,360
ಚೆನ್ನೈ67,50072,640

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

Continue Reading

ಕರ್ನಾಟಕ

Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ

Heavy Rain: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರವನ್ನೇ ಸೃಷ್ಟಿಸಿದೆ. ಶುಕ್ರವಾರ ಸುರಿದ ಭಾರೀ ಮಳೆಯಿಂದ ಹಾನಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲೆವೆಡೆ ರಸ್ತೆಗಳಲ್ಲೇ ನೀರು ಹರಿದು ಮುಂದಕ್ಕೆ ಚಲಿಸಲಾಗದೆ ವಾಹನ ಸವಾರರು ಪರದಾಡಿದರು. ವಿವಿಧೆಡೆಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಾಹನಗಳೂ ಜಖಂಗೊಂಡಿವೆ. ಜತೆಗೆ ಮೈಸೂರಿನ ಕೆಲವಡೆಡಯೂ ಹಾನಿ ಉಂಟಾಗಿದೆ.

VISTARANEWS.COM


on

Heavy Rain
Koo

ಬೆಂಗಳೂರು: ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಮತ್ತೆ ಬೆಂಗಳೂರಿಗೆ ಬಂದಿದೆ. ರಾಜಧಾನಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರವನ್ನೇ ಸೃಷ್ಟಿಸಿದೆ (Heavy Rain). ಶುಕ್ರವಾರ ಸುರಿದ ಭಾರೀ ಮಳೆಯಿಂದ ಹಾನಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕೆಲೆವೆಡೆ ರಸ್ತೆಗಳಲ್ಲೇ ನೀರು ಹರಿದು ಮುಂದಕ್ಕೆ ಚಲಿಸಲಾಗದೆ ವಾಹನ ಸವಾರರು ಪರದಾಡಿದರು. ವಿವಿಧೆಡೆಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಾಹನಗಳೂ ಜಖಂಗೊಂಡಿವೆ.

ಮನೆಯೊಳಗೆ ನುಗ್ಗಿದ ನೀರು

ಅರ್‌.ಅರ್. ನಗರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀ ದೇವಿನಗರದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ನಿವಾಸಿಗಳು ರಾತ್ರಿ ಇಡೀ ನಿದ್ದೆಗೆಟ್ಟು ಮನೆಯಿಂದ ನೀರು ಹೊರ ಹಾಕುವ ದೃಶ್ಯ ಕಂಡು ಬಂತು. ಇನ್ನು ಕೆಂಗೇರಿ ಟಿಟಿಎಂಸಿ ಕಾಂಪೌಂಡ್ ಕುಸಿದು ಬಿದ್ದಿದೆ. ಭಾರಿ ಮಳೆಯಿಂದಾಗಿ ಕಾಂಪೌಂಡ್ ವಾಲ್ ಕುಸಿದಿದ್ದು, ವಾಹನ ನಿಲುಗಡೆಯ ಪಾರ್ಕಿಂಗ್ ಸ್ಥಳ ಸಂಪೂರ್ಣ ಜಲಾವೃತವಾಗಿತ್ತು.

ಕಾರು, ಟಿಟಿ ವಾಹನ ಜಖಂ

ದೀಪಾಂಜಲಿ ನಗರದ ವ್ಯಾಪ್ತಿಯಲ್ಲಿಯಂತೂ ವರುಣ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಶುಕ್ರವಾರದ ಗಾಳಿ ಮಳೆಯ ರೌದ್ರಾವತಾರಕ್ಕೆ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವಿದ್ಯುತ್ ಕಂಬ ಧರೆಗುರುಳಿವೆ. ಜತೆಗೆ ಹೆಮ್ಮರವೊಂದು ಉರುಳಿ ಬಿದ್ದ ಕಾರಣ ಮನೆ ಮುಂದೆ ನಿಲ್ಲಿಸಿದ್ದ 2 ಕಾರು, ಒಂದು ಟಿಟಿ ಜಖಂಗೊಂಡಿದೆ. ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮಳೆ ಅವಾಂತರ ನೋಡಿದ ಜನರು ಕಂಗಾಲಾಗಿದ್ದಾರೆ. ನಾಗರಭಾವಿಯ ಗೋವಿಂದ ರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರಿನ ಮೇಲೆ ಮರದ ಬೃಹತ್ ಕೊಂಬೆ ಬಿದ್ದು ಹಾನಿಯಾಗಿದೆ.

ಪೆಟ್ರೋಲ್‌ ಬಂಕ್‌ ಜಲಾವೃತ

ಇತ್ತ ಆರ್‌.ಆರ್‌.ನಗರದಲ್ಲಿಯೂ ಮಳೆಯ ಅಬ್ಬರ ಕಂಡು ಬಂತು. ವರುಣಾರ್ಭಟಕ್ಕೆ ಇಲ್ಲಿನ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಜಲಾವೃತಗೊಂಡಿತ್ತು. ಪೆಟ್ರೋಲ್ ಟ್ಯಾಂಕ್ ಒಳಗಡೆಯೇ ನೀರು ನುಗ್ಗಿ ತೊಂದರೆ ಎದುರಾಗಿದೆ. ರಾತ್ರಿ ಸಂಪೂರ್ಣ ಜಲಾವೃತವಾಗಿದ್ದ ಪೆಟ್ರೋಲ್ ಬಂಕ್‌ ಅನ್ನು ಸದ್ಯ ಸಿಬ್ಬಂದಿ ಶುಚಿಗೊಳಿಸುತ್ತಿದ್ದಾರೆ. ಪೆಟ್ರೋಲ್ ಸಿಗದೆ ಬಂಕ್ ಬಳಿ ಬಂದು ವಾಹನ ಸವಾರರು ವಾಪಾಸ್ ಹೋಗುತ್ತಿದ್ದಾರೆ.

ಮೈಸೂರಿನಲ್ಲಿಯೂ ಹಾನಿ

ಮೈಸೂರಿನಲ್ಲಿಯೂ ಬಿರುಗಾಳಿ ಸಹಿತ ಸುರಿದ ಮಳೆ ವಿವಿಧೆಡೆ ಹಾನಿ ಉಂಟು ಮಾಡಿದೆ. ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದ ಬೃಹತ್ ಗಾತ್ರದ ಅರಳಿ ಮರ ಉರುಳಿ ನಾಲ್ಕು ಮನೆಗಳಿಗೆ ಹಾನಿಯಾಗಿವೆ. ಗ್ರಾಮದ ಸಿದ್ದರಾಜು, ಮೂಗಯ್ಯ, ಮಲ್ಲೇಶ್, ಚೆನ್ನೇಗೌಡ ಎಂಬುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದ್ದು, ಕುಟುಂಬಸ್ಥರು, ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನೂ ಕೆಲವು ದಿನ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather : ಬಿರುಗಾಳಿ ಸಹಿತ ಭಾರಿ ಮಳೆ; ಸಿಡಿಲು ಬಡಿದು ಮಹಿಳೆ ಸೇರಿ ಶ್ವಾನ ಸಾವು‌, ಮತ್ತೊಬ್ಬ ಗಂಭೀರ

Continue Reading
Advertisement
Prajwal Revanna Case
ಕರ್ನಾಟಕ9 mins ago

Prajwal Revanna Case: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ!

Food Poisoning
ಚಿತ್ರದುರ್ಗ23 mins ago

Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Gold Rate Today
ಕರ್ನಾಟಕ36 mins ago

Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

Heavy Rain
ಕರ್ನಾಟಕ47 mins ago

Heavy Rain: ಧಾರಾಕಾರ ಮಳೆಯಿಂದ ಮನೆಗೆ ನುಗ್ಗಿದ ನೀರು; ಮರ ಉರುಳಿ ವಾಹನಗಳು ಜಖಂ

Murder case in Bengaluru rural
ಬೆಂಗಳೂರು ಗ್ರಾಮಾಂತರ59 mins ago

Murder case : ತಡರಾತ್ರಿ ಹರಿದ ನೆತ್ತರು; ಕತ್ತು ಸೀಳಿ ಯುವಕನ ಬರ್ಬರ ಹತ್ಯೆ

Narendra Modi
ದೇಶ1 hour ago

Narendra Modi: “ದಿವ್ಯಾಂಗ ಸಹೋದರಿಯರಿಗೆ ವ್ಯವಸ್ಥೆ ಮಾಡಿ.. ಅಲ್ಲಿವರೆಗೆ ಭಾಷಣ ಮುಂದುವರೆಸಲ್ಲ”; ಪ್ರಧಾನಿ ಮೋದಿ ವಿಡಿಯೋ ವೈರಲ್

Prajwal Revanna Case
ಕರ್ನಾಟಕ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಎಸ್‌ಐಟಿಯ ವಿಶೇಷ ತಂಡ ರಚನೆ; ಶೀಘ್ರ ರೆಡ್‌ ಕಾರ್ನರ್ ನೋಟಿಸ್‌ ಜಾರಿ

K S Rajanna
ದೇಶ2 hours ago

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

Viral News
ಕ್ರೈಂ2 hours ago

ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಹಾವಳಿ; ಹಾಡ ಹಗಲೇ ಯುವತಿಗೆ ಅನ್ಯಕೋಮಿನ ಯುವಕರಿಂದ ಕಿರುಕುಳ

CAA
ದೇಶ3 hours ago

CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ21 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ23 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌