Ugadi 2024: ಯುಗಾದಿ ಭವಿಷ್ಯ; ಯಾವ ರಾಶಿಗೆ ಯಾವ ಫಲ? ಇಲ್ಲಿದೆ ಸಂಪೂರ್ಣ ವಿವರ - Vistara News

ಭವಿಷ್ಯ/ಧಾರ್ಮಿಕ

Ugadi 2024: ಯುಗಾದಿ ಭವಿಷ್ಯ; ಯಾವ ರಾಶಿಗೆ ಯಾವ ಫಲ? ಇಲ್ಲಿದೆ ಸಂಪೂರ್ಣ ವಿವರ

Ugadi 2024: ಹಬ್ಬಗಳಲ್ಲಿ ಶ್ರೇಷ್ಠವಾದ ಯುಗಾದಿ ಹಬ್ಬವನ್ನು ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬವು ಹೊಸ ಯುಗ, ವರ್ಷ ಮತ್ತು ಭವಿಷ್ಯದ ಆರಂಭವಾಗಿದೆ. ಯುಗದ ಆದಿ ಯುಗಾದಿ ಎಂದರೆ ಹೊಸ ವರ್ಷದ ಆರಂಭ ಎಂದರ್ಥ. ಹಾಗಾದರೆ ಈ ವರ್ಷ ಆಯಾ ರಾಶಿಯವರ ಭವಿಷ್ಯ ಹೇಗಿದೆ ಎನ್ನುವುದನ್ನು ನೋಡೋಣ.

VISTARANEWS.COM


on

Ugadi 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೀವನಕ್ಕೆ ಇನ್ನಷ್ಟು ಕಳೆ ತುಂಬಲು, ಉತ್ಸಾಹ ನೀಡಲು ಮತ್ತೆ ಯುಗಾದಿ ಹಬ್ಬ (Ugadi 2024) ಬಂದಿದೆ. ಇದು ಹಿಂದುಗಳ ಪಾಲಿನ ಹೊಸ ವರ್ಷವೂ ಹೌದು. ಶ್ರೇಷ್ಠವಾದ ಯುಗಾದಿಯನ್ನು ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಯುಗಾದಿ ಸಂದರ್ಭದಲ್ಲಿ ಆಯಾ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಬ್ರಹ್ಮಾಂಡ ಗುರೂಜಿ ಹೀಗೆ ವಿವರಿಸಿದ್ದಾರೆ.

ಮೇಷ

ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ತೀರಾ ಅಗತ್ಯವಿದ್ದರೆ ಮಾತ್ರ ಸಾಲ ಮಾಡಿ. ಗಮನಿಸಿ, ಈ ರಾಶಿಯವರಿಗೆ ಈ ವರ್ಷ ಅರ್ಧ ಸಿಹಿ, ಅರ್ಧ ಕಹಿಯ ಅನುಭವವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೇ ಬಳಿಕ ಗುರುಬಲ ಕೂಡಿ ಬರಲಿದೆ. ಸಾಧ್ಯವಾದಷ್ಟು ಕೆಂಪು ಮತ್ತು ಹಳದಿ ಬಟ್ಟೆಗಳನ್ನು ಬಳಸಿ.

ವೃಷಭ

ಈ ರಾಶಿಯವರು ಸುಬ್ರಹ್ಮಣ್ಯ, ಪದ್ಮಾವತಿ ಪ್ರಾರ್ಥನೆ ಮಾಡಿ. ಈ ವರ್ಷ ನಿಮ್ಮ ಮನದಲ್ಲಿ ಪ್ರೀತಿ ಹುಟ್ಟಲಿದೆ. ಅದೇ ರೀತಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ವಿದೇಶ ಪ್ರಯಾಣ ಉತ್ತಮ ಫಲಿತಾಂಶವನ್ನೇ ನೀಡಲಿದೆ. ನೀಲಿ, ಬಿಳಿ ಬಟ್ಟೆಗೆ ಆದ್ಯತೆ ನೀಡಿ. ಶನಿ ಸ್ಮರಣೆ ಮಾಡಿ. ಪ್ರಮೋಷನ್‌ ಸಿಗುವ ಸಾಧ್ಯತೆ ಇದೆ.

ಮಿಥುನ

ಇದ್ದಕ್ಕಿದ್ದಂತೆ ಜೀವನದಲ್ಲಿ ಏಳಿಗೆ ಕಂಡು ಬರಲಿದೆ. ಒಡಹುಟ್ಟಿದವರ ಜತೆಗೆ ಜಗಳವಾಗುವ ಸಾಧ್ಯತೆ ಇದೆ. ಕೋರ್ಟ್‌ ಕೇಸ್‌ನಲ್ಲಿ ನಿಮಗೆ ಗೆಲುವಾಗಲಿದೆ. ಉದ್ಯಮಿಗಳಿಗೆ ನಷ್ಟವಾಗಬಹುದು. ಮಕ್ಕಳು ದಾರಿ ತಪ್ಪುವ ಅವಕಾಶವಿದೆ. ಅವರ ಮೇಲೆ ಕಣ್ಣಿಡಿ. ಹೆಚ್ಚು ದುಡ್ಡು ಖರ್ಚು ಮಾಡಬೇಡಿ.

ಕಟಕ

ಈ ರಾಶಿಯವರಿಗೆ ಹೊಸ ಬಟ್ಟೆ ಉಡುಗೊರೆ ರೂಪದಲ್ಲಿ ಸಿಗಲಿದೆ. ನಿಮ್ಮ ಕುಟುಂಬಕ್ಕೆ ಮಾಟ ಮಂತ್ರ ಪ್ರಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ದೃಷ್ಟಿ ಬೀಳುವ ಅವಕಾಶವೂ ಇದೆ. ಕೆಟ್ಟ ಬುದ್ಧಿ ಬರುವ ಸಾಧ್ಯತೆ ಇದೆ. ಶನಿ ಶಾಂತಿ ಮಾಡಿಸಿ.

ಸಿಂಹ

ಸಿಂಹ ರಾಶಿಯವರಿಗೆ ಈ ಬಾರಿ ಅನಾರೋಗ್ಯ ಕಾಡಲಿದೆ. ವಿದ್ಯುತ್‌ ಉಪಕರಣಗಳಿಂದ ಆದಷ್ಟು ದೂರವಿರಿ. ರಾತ್ರಿ ಪ್ರಯಾಣ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಕೈಗೆ ಗಾಯಗಳಾಗುವ ಸಾಧ್ಯತೆ ಇದೆ. ಈ ಬಗ್ಗೆ ಗಮನ ಹರಿಸಿ. ಆಲಸ್ಯ ಹೆಚ್ಚಾಗಲಿದೆ.

ಕನ್ಯಾ

ಈ ರಾಶಿಯವರ ಕುಟುಂಬದಲ್ಲಿ ಘರ್ಷಣೆ ಕಂಡು ಬರಲಿದೆ. ಪೊಲೀಸ್‌ ಠಾಣೆಗೆ ಅಲೆದಾಡುವ ಸಾಧ್ಯತೆ ಉಂಟು. ಹಳೆ ಕೇಸ್‌ನಲ್ಲಿ ಜಯ ನಿಮ್ಮದೇ. ಗಂಡ-ಹೆಂಡತಿ ಮಧ್ಯೆ ಅನುಮಾನ ಕಾಡಬಹುದು. ನಿಮ್ಮ ಪ್ರೀತಿಗೆ ತಂದೆ-ತಾಯಿ ಅಡ್ಡಗಾಲು ಹಾಕಬಹುದು.

ತುಲಾ

ನಿಮ್ಮದೇ ಆದ ಮನೆ ಹೊಂದುವ ಸಾಧ್ಯತೆ ಇದೆ. ಕೋರ್ಟ್‌ಗೆ ಓಡಾಡುವ ಸಾಧ್ಯತೆ ಇದೆ. ಕುಟುಂಬ ಸಮಸ್ಯೆ ನಿವಾರಣೆಯಾಗಲಿದೆ. ತಲೆ, ಕಣ್ಣು, ಕಿವಿ ಬಗ್ಗೆ ಎಚ್ಚರಿಕೆ ವಹಿಸಿ. ಲಲಿತಾ ಸಹಸ್ರನಾಮಾರ್ಚನೆ ಮಾಡಿ.

ವೃಶ್ಚಿಕ

ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸಿ. ನಾಗ ದೋಷ ಕಂಡು ಬರುವ ಸಾಧ್ಯತೆ ಇದೆ. ಹುತ್ತಕ್ಕೆ ಹನ್ನೊಂದು ಬಾರಿ ಪ್ರದಕ್ಷಿಣೆ ಬಂದು ಮೊಟ್ಟೆ ಮತ್ತು ಲಿಂಬೆ ಹಣ್ಣನ್ನು ಹಾಕಿ ಹಿಂದುರುಗಿ ನೋಡದೆ ಬಂದು ಆಂಜನೇಯನಿಗೆ ನಮಸ್ಕಾರ ಮಾಡಿ. ಇದರಿಂದ ದೋಷವೆಲ್ಲ ನಿವಾರಣೆಯಾಗುತ್ತದೆ.

ಧನುಸ್ಸು

ಈ ರಾಶಿಯವರಿಗೆ ಶನಿ ಕಾಟ ತಪ್ಪಿದೆ. ಹೋಟೆಲ್‌ ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಮನೆ, ವಾಹನಕ್ಕೆ ಕಳ್ಳರ ಕಾಟ ಎದುರಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿ. ಸಾಲ ತೀರಲಿದೆ. ಶನಿ ನಿಮಗೆ ಸಹಾಯ ಮಾಡಲಿದ್ದಾನೆ. ಸಹೋದರರ ಸಹಕಾರ ಸಿಗಲಿದೆ. ಆಸ್ತಿ, ದುಡ್ಡು ಬರುವ ಸಾಧ್ಯತೆ ಇದೆ.

ಮಕರ

ಬೆಳಗ್ಗೆ ಬೇಗ ಏಳುವುದನ್ನು, ಆಗಾಗ ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ. ಶೌಚಾಲಯಕ್ಕೆ ಹೋಗುವಾಗ ಎಚ್ಚರಿಕೆ ವಹಿಸಿ. ಬೇರೆಯವರ ಮನೆಗೆ ಹೋದಾಗ ಮನಸ್ಸು ಚಂಚಲವಾಗಬಹುದು. ವಿದ್ಯಾರ್ಥಿಗಳಿಗೆ ಈ ಬಾರಿ ಯಶಸ್ಸು ಸುಲಭವಾಗಿ ದೊರೆಯದು. ಹೀಗಾಗಿ ಪಾಠದ ಕಡೆಗೆ ಗಮನ ಹರಿಸಿ. ಮಕ್ಕಳ ಬಗ್ಗೆ ಕಣ್ಣಿಡಿ.

ಕುಂಭ

ಸಂತಾನಕ್ಕೆ ಸಮಸ್ಯೆಯಾಗಲಿದೆ. ಸೆಪ್ಟಂಬರ್‌ 17ರೊಳಗೆ ಮದುವೆಯಾಗುವುದನ್ನು ತಪ್ಪಿಸಿ. ಇದಾದ ಬಳಿಕ ದೇವಸ್ಥಾನದಲ್ಲೇ ಮದುವೆಯಾಗಬೇಕು.

ಮೀನಾ

ಸಾಲವಾಗಿ ಹಣ ಕೊಟ್ಟಿದ್ದರೆ ಕೂಡಲೇ ವಸೂಲಿ ಮಾಡಿಕೊಳ್ಳಿ. ಶ್ರುಕದೋಷ ಇದ್ದರೆ ನಿವಾರಿಸಿ. ಉದ್ಯೋಗದಲ್ಲಿ ವರ್ಗಾವಣೆಯಾಗಲಿದೆ. ಗಣಪತಿಯನ್ನು ಸ್ಮರಣೆ ಮಾಡಿ.

ಇದನ್ನೂ ಓದಿ: Ugadi 2024: ಯುಗಾದಿ…ಹಿಂದೂಗಳಿಗೆ ಹೊಸ ವರ್ಷದ ಆದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಈ ದಿನ ನಿಮ್ಮನ್ನು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ; ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ತದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಶುಕ್ರವಾರವೂ ತುಲಾ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ವೃಷಭ ರಾಶಿಯವರು ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ಮಕರ ರಾಶಿಯವರು ಸಮಯ ವ್ಯರ್ಥ ಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (6-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ: ತದಿಗೆ 15:00 ವಾರ: ಶುಕ್ರವಾರ
ನಕ್ಷತ್ರ: ಹಸ್ತಾ 09:24 ಯೋಗ: ಶುಕ್ಲಾ 22:13
ಕರಣ: ಗರಜ 15:00 ಅಮೃತಕಾಲ: ಬೆಳಗಿನ ಜಾವ 05:20ರಿಂದ 07:08
ದಿನದ ವಿಶೇಷ: ಸರ್ಣಗೌರೀ ವ್ರತ, ರಾಷ್ಟ್ರೀಯ ಪುಸ್ತಕ ಓದುವ ದಿನ

ಸೂರ್ಯೋದಯ : 06:09   ಸೂರ್ಯಾಸ್ತ : 06:27

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಆಲೋಚಿಸಿ. ಆಪ್ತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಮನೆಯಲ್ಲಿ ಕಲಹಗಳಿಗೆ ಆಸ್ಪದ ಕೊಡಬೇಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಆಗಲಿದೆ .ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಅತಿರೇಕದಲ್ಲಿ ಮಾತನಾಡುವ ಮುನ್ನ ಯೋಚಿಸಿ. ತಿಳಿಯದೆ ನಿಮ್ಮ ಅಭಿಪ್ರಾಯಗಳು ಬೇರೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಹುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಸ್ನೇಹಿತರಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಕರಾತ್ಮಕ ಆಲೋಚನೆಗಳು ಪುಷ್ಟಿ ನೀಡುತ್ತದೆ. ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿ ಆಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ತಾಳ್ಮೆ ಇರಲಿ. ಅಗತ್ಯಕ್ಕಾಗಿ ಯಾರದಾದರೂ ಹಣದ ಸಹಾಯ ಬೇಡುವ ಸಾಧ್ಯತೆ, ಆಲೋಚಿಸಿ ಮುಂದುವರಿಯಿರಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ಇತರರು ನಿಮ್ಮ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸುವರು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗ, ಆರೋಗ್ಯ, ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ನಿಮ್ಮ ಒತ್ತಡವನ್ನು ಇತರರ ಮೇಲೆ ಹಾಕಿ ಕೋಪಗೊಳ್ಳುವುದು ಬೇಡ. ಸಮಾಧಾನದಿಂದ ವರ್ತಿಸಿ. ಆರ್ಥಿಕವಾಗಿ ಸಾಧಾರಣವಾಗಿರಲಿದೆ. ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಪ್ತರೊಂದಿಗೆ ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ಮನಸ್ಸಿನ ಒತ್ತಡ ಈ ಮೂಲಕ ಹೊರಹಾಕುವಿರಿ. ಆರೋಗ್ಯ ಮಧ್ಯಮವಾಗಿರಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಇರಲಿದೆ. ಕಾರ್ಯದಲ್ಲಿ ನಿಧಾನಗತಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಚುರುಕು ತನದಿಂದ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ ಇರಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ.ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮಕರ: ಸಮಯ ವ್ಯರ್ಥ ಮಾಡಿ ಕೊರಗುವುದು ಬೇಡ. ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಉತ್ತಮ ಆಲೋಚನೆಗಳು ಇರಲಿ. ಹಳೆಯ ನೆನಪುಗಳು ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ವಿನಾಕಾರಣ ಕುಟುಂಬದ ಸದಸ್ಯರೊಂದಿಗೆ ಕಲಹಗಳು ಸೃಷ್ಟಿ ಆಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅಧಿಕ ಶ್ರಮದಿಂದ ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ ಇದೆ, ಕಾಳಜಿ ಇರಲಿ. ಸಾಂಕ್ರಮಿಕ ರೋಗದ ಭಾದ್ಯತೆ, ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು. ಸ್ನೇಹಿತರ ಸಹಕಾರ ಸಿಗಲಿದೆ. ಸಂಗಾತಿಯೊಂದಿಗೆ ಮಾತು ಬೆಳೆಸುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮೀನ: ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದಲ್ಲಿ ಕಲಹಗಳಿಗೆ ಅವಕಾಶ ಮಾಡಿಕೊಡಬೇಡಿ. ಉದ್ಯೋಗದಲ್ಲಿ ಹೊಸ ಭರವಸೆ ಇರಲಿದೆ. ಮನಸ್ಸಿನ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆಯಿಂದ ತಂದುಕೊಳ್ಳಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ನಿಮ್ಮನ್ನು ದ್ವೇಷಿಸುತ್ತಿದ್ದವರೇ ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುತ್ತಾರೆ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ತುಲಾ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರಿಗೆ ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ.ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ವೃಷಭ ರಾಶಿಯವರು ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯ ಬೇಡಿಕೆ ಬರುವುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು.ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (5-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ: ಬಿದಿಗೆ 12:20 ವಾರ: ಗುರುವಾರ
ನಕ್ಷತ್ರ: ಉತ್ತರ ಪಾಲ್ಗುಣಿ 06:13 ಯೋಗ: ಶುಭ 21:06
ಕರಣ: ಕೌಲವ 12:20 ಅಮೃತಕಾಲ: ಮಧ್ಯರಾತ್ರಿ 02:37 ರಿಂದ 04:26ರವರೆಗೆ
ದಿನದ ವಿಶೇಷ: ಶಿಕ್ಷಕರ ದಿನ

ಸೂರ್ಯೋದಯ : 06:09   ಸೂರ್ಯಾಸ್ತ : 06:28

ರಾಹುಕಾಲ: ಮಧ್ಯಾಹ್ನ 01:50 ರಿಂದ 03:23
ಗುಳಿಕಕಾಲ: ಬೆಳಗ್ಗೆ 09:13 ರಿಂದ 10:46
ಯಮಗಂಡಕಾಲ: ಬೆಳಗ್ಗೆ 06:09 ರಿಂದ 07:41

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ.ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ ಸುದ್ದಿ ಸಿಗಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೇನಿಸುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಕುಟುಂಬದ ಆಪ್ತರಿಂದ ಆರ್ಥಿಕ ಸಹಾಯ ಬೇಡಿಕೆ ಬರುವುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಮನೋಬಲ ಹೆಚ್ಚಿಸಿಕೊಳ್ಳುವುದು ಅವಶ್ಯಕ. ಧೈರ್ಯ ಕಾಡಬಹುದು.ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಮಿಥುನ: ಸದಾ ಕಲ್ಪನೆಯಲ್ಲಿ ಕನಸುಗಳನ್ನು ಕಾಣುವುದು ವೃಥಾ ಕಾಲಹರಣ. ಆರ್ಥಿಕವಾಗಿ ಸಹಾಯ ಮಾಡಿ ನೀವು ಹಣಕಾಸಿನ ಸಮಸ್ಯೆಯಲ್ಲಿ ಸಿಲುಕುವುದು ಬೇಡ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯ ಉತ್ತಮ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 1

Horoscope Today

ಕಟಕ: ಕುಟುಂಬದ ಸದಸ್ಯರಿಂದ ಆರ್ಥಿಕ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಶುಭಫಲ. ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಆಪ್ತ ವ್ಯಕ್ತಿಗಳೊಂದಿಗೆ ಮಾತುಕತೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುವವು. ಆರೋಗ್ಯ ಪರಿಪೂರ್ಣ. ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ.ಕ್ಷೇತ್ರ ದರ್ಶನ ಆಧ್ಯಾತ್ಮಿಕ ಗುರುಗಳ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ಕಿರಿಕಿರಿಯಾಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ದೀರ್ಘಕಾಲದ ಕೆಲಸ ಕಾರ್ಯಗಳು ಇಂದು ಯಶಸ್ಸನ್ನು ತಂದು ಕೊಡಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಆಪ್ತರೊಂದಿಗೆ ಮಾತುಕತೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ, ಕುಟುಂಬದ ವಾತಾವರಣ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಕಿರಿಕಿರಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆತ್ಮವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ. ಸ್ನೇಹಿತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ಹಣಕಾಸು, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಪ್ರಗತಿ. ಈ ಹಿಂದೆ ನಿಮ್ಮನ್ನು ದ್ವೇಷಿಸುತ್ತಿದ್ದ ಜನರು ನಿಮ್ಮೊಂದಿಗೆ ಪ್ರೀತಿಯಿಂದ ವರ್ತಿಸುವ ಸಾಧ್ಯತೆ.ಉದ್ಯೋಗಿಗಳಿಗೆ ಶುಭಕಾಲ. ಆರೋಗ್ಯ ಪರಿಪೂರ್ಣ .ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಆರೋಗ್ಯದ ಕುರಿತು ಕಾಳಜಿ ಇರಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ವಿಜಯವನ್ನು ತಂದುಕೊಡುವ ಸಾಧ್ಯತೆ. ಹಣಕಾಸು, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಹಾದಿ ಅತ್ಯವಶ್ಯಕ. ಹಣಕಾಸು ವಿಷಯದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಮಿಶ್ರಫಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಆರೋಗ್ಯ ಉತ್ತಮ.ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕೀರ್ತಿ ಸಿಗುವುದು. ಶೀಘ್ರಕೋಪ ಅಪಾಯ ತರುವುದು.ಆರೋಗ್ಯ ಪರಿಪೂರ್ಣ.ಆರ್ಥಿಕ ಲಾಭ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ದುಂದುವೆಚ್ಚವನ್ನು ತಪ್ಪಿಸಿ.ಬುದ್ದಿವಂತಿಕೆಯಿಂದ ಕೆಲಸಮಾಡಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ. ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 9

Horoscope Today

ಮೀನ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಮಧ್ಯಮ. ಆರ್ಥಿಕವಾಗಿ ಪ್ರಗತಿ. ಸಂಗಾತಿ ಇಂದು ನಿಮ್ಮೊಂದಿಗೆ ಮುಖ್ಯ ವಿಷಯದ ಕುರಿತು ಚರ್ಚಿಸಬಹುದು. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಒತ್ತಡ ಇದ್ದರೂ ಸ್ನೇಹಿತರ ಜತೆ ಕಾಲ ಕಳೆಯುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಪಾಡ್ಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಬುಧವಾರ ಮಧ್ಯಾಹ್ನ 12:11ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಕಟಕ, ಕನ್ಯಾ, ವೃಶ್ಚಿಕ, ಧನಸ್ಸು, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಆರ್ಥಿಕವಾಗಿ ಬಲಿಷ್ಠತೆ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ ಇದೆ. ವೃಷಭ ರಾಶಿಯವರು ಪ್ರಯಾಣ ಮಾಡುವ ಸಾಧ್ಯತೆ ಇದೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (4-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ: ಪಾಡ್ಯ 09:46 ವಾರ: ಬುಧವಾರ
ನಕ್ಷತ್ರ: ಉತ್ತರ ಪಾಲ್ಗುಣಿ 30:13 ಯೋಗ: ಸಾಧ್ಯ 20:01
ಕರಣ: ಭವ 09:46 ಅಮೃತಕಾಲ: ರಾತ್ರಿ 10:07 ರಿಂದ 11:55
ದಿನದ ವಿಶೇಷ: ಚಂದ್ರ ದರ್ಶನ

ಸೂರ್ಯೋದಯ : 06:09   ಸೂರ್ಯಾಸ್ತ : 06:28

ರಾಹುಕಾಲ: ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರ್ಥಿಕವಾಗಿ ಬಲಿಷ್ಠತೆ ಇರಲಿದೆ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಹಳೆಯ ಸ್ನೇಹಿತರ ಜತೆ ಕಾಲ ಕಳೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಪ್ರಯಾಣ ಮಾಡುವ ಸಾಧ್ಯತೆ ಇದೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಒತ್ತಡ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ಇಂದಿನ ದಿವಸ ಗಾಬರಿಯಿಂದ ಇರುವ ಸಾಧ್ಯತೆ ಇದೆ. ಅವಘಡ ಸಂಭವ ನಿಧಾನವಾಗಿ ವಾಹನ ಚಾಲನೆ ಮಾಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಒತ್ತಡದ ಜೀವನಕ್ಕೆ ವಿಶ್ರಾಂತಿ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ಅಗತ್ಯ ವಸ್ತುಗಳ ಖರೀದಿ ಮಾಡುವಿರಿ. ಸಹದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಾನಸಿಕ ಆರೋಗ್ಯ ಸದೃಢವಾಗಿರಲಿದೆ. ಅತಿ ಅವಶ್ಯಕ ಕೆಲಸದ ಕಾರಣ ದೈಹಿಕ ಶ್ರಮವಾಗಲಿದೆ. ಉದ್ಯೋಗಿಗಳಿಗೆ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಕಲಹಗಳಿಗೆ ಧ್ವನಿ ಆಗುವುದು ಬೇಡ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ ಬೆಳೆಸುವಿರಿ. ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿನ ಹಿರಿಯರೊಂದಿಗೆ ವಾದಕ್ಕೆ ಇಳಿಯುವುದು ಬೇಡ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹರಟೆಯಿಂದ ಕಾಲ ಹರಣ ಮಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವುದು. ಸಕರಾತ್ಮಕ ಆಲೋಚನೆ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಉದ್ಯೋಗದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬ ಸದಸ್ಯರ ಮೇಲೆ ಕೋಪಗೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮಕರ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಪ್ರಯಾಣ ಮಾಡುವ ಸಾಧ್ಯತೆಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಪ್ರಮುಖ ಯೋಜನೆ ಕೈಗೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದೆ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಆತುರದ ಮಾತುಗಳು ಅಪಾಯ ತರುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಮೀನ: ಒತ್ತಡದ ಕೆಲಸದಿಂದ ಮುಕ್ತಿ ಸಿಗಲಿದೆ. ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಭವಿಷ್ಯ

Dina Bhavishya : ಈ ದಿನ ಒತ್ತಡಗಳು ದೂರಾಗಿ ಹರ್ಷದಿಂದ ಕಾಲ ಕಳೆಯುವಿರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷದ ಅಮವಾಸ್ಯೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮಂಗಳವಾರವೂ ಕನ್ಯಾರಾಶಿಯಲ್ಲೇ ನೆಲಸಲಿದ್ದು, ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಿರಿ. ಅನಗತ್ಯ ಮಾನಸಿಕ ಒತ್ತಡ ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಮಿಥುನ ರಾಶಿಯವರು ಅನಾವಶ್ಯಕ ವಿಚಾರಗಳಿಂದ ಮಾನಸಿಕವಾಗಿ ವಿಚಲಿತರಾಗುವುದು ಬೇಡ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (3-09-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ತಿಥಿ: ಅಮವಾಸ್ಯೆ 07:24 ವಾರ: ಮಂಗಳವಾರ
ನಕ್ಷತ್ರ: ಪೂರ್ವ ಪಾಲ್ಗುಣಿ 27:09 ಯೋಗ:ಸಿದ್ಧಿ 19:03
ಕರಣ: ನಾಗವಾನ್ 07:24 ಅಮೃತಕಾಲ: ರಾತ್ರಿ 08:01 ರಿಂದ 09:48
ದಿನದ ವಿಶೇಷ: ಮಂಗಳಗೌರೀ ವ್ರತ, ಸವಣೂರುರೇವಣ ಸಿದ್ಧೇಶ್ವರ ಜಲರಥ

ಸೂರ್ಯೋದಯ : 06:09   ಸೂರ್ಯಾಸ್ತ : 06:29

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನಿಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವಿರಿ. ಅನಗತ್ಯ ಮಾನಸಿಕ ಒತ್ತಡ ತಂದುಕೊಳ್ಳುವುದು ಬೇಡ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಉತ್ಸಾಹದಿಂದ ಕಾಲ ಕಳೆಯುವಿರಿ. ಯಾರಾದರೂ ಆರ್ಥಿಕ ಸಹಾಯವನ್ನು ಕೇಳಬಹುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ‌ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಅನಾವಶ್ಯಕ ವಿಚಾರಗಳಿಂದ ಮಾನಸಿಕವಾಗಿ ವಿಚಲಿತರಾಗುವುದು ಬೇಡ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಆರೋಗ್ಯ ಮಧ್ಯಮವಾಗಿರಲಿದೆ. ಹಣಕಾಸು ಪ್ರಗತಿ ಉತ್ತಮವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಉತ್ತಮ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅನೇಕ ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ. ಸಂಗಾತಿಯೊಂದಿಗೆ ಪ್ರಮುಖ ಯೋಜನೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಉತ್ತಮವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ವಿಚಲಿತರಾಗುವಂತೆ ಮಾಡಬಹುದು. ಕುಲ ದೇವರ ಆರಾಧನೆ, ಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ ಇದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಖರ್ಚು ಇರಲಿದೆ. ಜವಾಬ್ದಾರಿ ಹೆಚ್ಚಲಿದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ವಿವಾಹ ಅಪೇಕ್ಷಿತರಿಗೆ ಸುದ್ಧಿ ಸಿಗಲಿದೆ . ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸಿ. ಮಾನಸಿಕ ಒತ್ತಡದಿಂದ ದೂರವಿರಲು ಯೋಗ, ಪ್ರಾಣಾಯಾಮ, ಧ್ಯಾನ ಮಾಡಿ.ಆರ್ಥಿಕ ಸಹಾಯದ ಬೇಡುವಿರಿ. ಆಪ್ತರೊಂದಿಗೆ ಸಮಯ ಕಳೆಯಲು ಅವಕಾಶ ಇರಲಿದೆ. ಕುಟುಂಬದವರ ಸಹಕಾರ ಸಿಗಲಿದೆ. ಆರೋಗ್ಯ ಮಧ್ಯಮವಾಗಿರಲಿದೆ. ವ್ಯಾಪಾರ- ವ್ಯವಹಾರ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ಅನಿರೀಕ್ಷಿತ ಪ್ರಯಾಣ ಬೆಳೆಸಬೇಕಾಗಬಹುದು. ದೇಹದ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಒತ್ತಡದಿಂದ ಮನಸ್ಸಿನ ಹತೋಟಿ ತಪ್ಪುವ ಸಾಧ್ಯತೆ ಇದೆ. ತಾಳ್ಮೆ ಅವಶ್ಯಕ. ವ್ಯಾಪಾರ ವ್ಯವಹಾರದಲ್ಲಿ ಇಮ್ಮಡಿ ಲಾಭ ಇರಲಿದೆ. ಆರ್ಥಿಕವಾಗಿ ಬಲಿಷ್ಠ. ಆದಾಯದ ಮೂಲಗಳು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಆರೋಗ್ಯದ ಕಡೆಗೆ ಹೆಚ್ಚು ಗಮನ ಇರಲಿ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಕುಟುಂಬದ ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವಿರಿ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅನಿವಾರ್ಯ ಕಾರಣಗಳಿಂದ ಖರ್ಚು ಇರಲಿದೆ. ಆಪ್ತರೊಂದಿಗೆ ಸಮಯ ಕಳೆಯವಿರಿ. ಅನೇಕ ಭಿನ್ನಾಭಿಪ್ರಾಯಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು, ಮಾನಸಿಕ ಆರೋಗ್ಯಕ್ಕಾಗಿ ದತ್ತಾತ್ರೇಯ ಗುರುಗಳ ಆರಾಧನೆ ಮಾಡಿ. ಆರೋಗ್ಯ ಮಾಧ್ಯಮವಾಗಿರಲಿದೆ. ಕೌಟುಂಬಿಕವಾಗಿ ಉತ್ತಮ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಕೀರ್ತಿ ಸಿಗಲಿದೆ. ಅನಾವಶ್ಯಕವಾಗಿ ಒತ್ತಡಕ್ಕೆ ಒಳಗಾಗುವುದು ಬೇಡ. ಆರ್ಥಿಕ ಪ್ರಗತಿ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಆಪ್ತರಿಂದ ಉಡುಗೊರೆ ಸಿಗುವುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಬುದ್ಧಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ದೈಹಿಕ ಆರೋಗ್ಯ ಉತ್ತಮ, ಮಾನಸಿಕ ಆರೋಗ್ಯವಾಗಿ ಇರಲು ನೀವು ನಡೆದಿರುವ ಘಟನೆ ನೆನಪಿಸಿ ಕೊರಗುವುದು ಬೇಡ. ಸಂಗಾತಿಯ ಮಾತುಗಳು ಅಹಿತಕರ ಎನಿಸಬಹುದು. ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು. ಆಪ್ತರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
ಸಿನಿಮಾ28 mins ago

Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

Theft case
ಬೆಂಗಳೂರು ಗ್ರಾಮಾಂತರ1 hour ago

Theft Case : ಪ್ರೇಯಸಿಯ ಜತೆಗೆ ಹೈಫೈ ಲೈಫ್‌ ಎಂಜಾಯ್‌ ಮಾಡಲು ಮನೆಗಳ್ಳತನಕ್ಕೆ ಇಳಿದ ಪ್ರೇಮಖೈದಿ!

karnataka weather Forecast
ಮಳೆ3 hours ago

Karnataka Weather : ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಿನಲ್ಲಿ ಹೇಗೆ?

Dina Bhavishya
ಭವಿಷ್ಯ3 hours ago

Dina Bhavishya : ಈ ದಿನ ನಿಮ್ಮನ್ನು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ; ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭ

TA Sharavana
ಕರ್ನಾಟಕ14 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ15 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ16 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು17 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ19 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ20 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್6 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌