Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ! Vistara News

ವಿದೇಶ

Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!

Great auction: ಮೆಗಾ ಹರಾಜೊಂದರಲ್ಲಿ(Great auction) ಅಮೆರಿಕಾದ 10,000 ಡಾಲರ್‌ ಮುಖ ಬೆಲೆಯ ಹಳೆಯ ನೋಟೊಂದು ದಾಖಲೆಯ ಮೊತ್ತಕ್ಕೆ ಹರಾಜಾಗಿದೆ.

VISTARANEWS.COM


on

dollar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮೆರಿಕಾ: ಅತೀ ಅಪರೂಪದ ಅಮೆರಿಕಾದ 10 ಸಾವಿರ ಡಾಲರ್‌(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 8 ಲಕ್ಷ ರೂ.) ಮುಖ ಬೆಲೆಯ ನೋಟೊಂದು ಹರಾಜಿನಲ್ಲಿ 480,000 ಡಾಲರ್‌(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.9 ಕೋಟಿ ರೂ.)ಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಡಲ್ಲಾಸ್‌ ಮೂಲದ ಹರಾಜು ಕಂಪೆನಿ ಹೆರಿಟೇಜ್‌ ಆಕ್ಷನ್ಸ್‌(Heritage Auctions) ಭಾರೀ ಮೊತ್ತಕ್ಕೆ ಈ ನೋಟನ್ನು ಖರೀದಿಸಿದೆ. ಪೇಪರ್ ಮನಿ ಗ್ಯಾರಂಟಿ(PMG) ಈ ನೋಟನ್ನು ಪ್ರಮಾಣೀಕರಿಸಿದೆ.

1934ರಲ್ಲಿ ಫೆಡರಲ್‌ ರಿಸರ್ವ್‌ ಈ ನೋಟನ್ನು ವಿಶಿಷ್ಟ ಕಾಗದ ಬಳಸಿ ತಯಾರಿಸಿತ್ತು. ಈ ನೋಟಿನಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಖಜಾನೆ ಕಾರ್ಯದರ್ಶಿ ಸಾಲ್ಮನ್ ಪಿ. ಚೇಸ್ ಅವರ ಚಿತ್ರವಿದೆ. ಈ ನೋಟು ಮಹಾ ಆರ್ಥಿಕ ಹಿಂಜರಿತ ಕಾಲಕ್ಕೆ(Great Depression)ಸೇರಿದ್ದು ಎನ್ನುವುದು ವಿಶೇಷ.

ಹೆರಿಟೇಜ್‌ ಆಕ್ಷನ್ಸ್‌ ಕಂಪೆನಿಯ ಉಪಾಧ್ಯಕ್ಷ ಡಸ್ಟಿನ್‌ ಜಾನ್‌ಸ್ಟನ್‌ ಮಾತನಾಡಿ, “ದೊಡ್ಡ ಮುಖಬೆಲೆಯ ನೋಟುಗಳು ಯಾವಾಗಲೂ ಎಲ್ಲಾ ಹಂತದ ಸಂಗ್ರಾಹಕರ ಗಮನ ಸೆಳೆಯುತ್ತವೆ” ಎಂದಿದ್ದಾರೆ. ಸದ್ಯ ಈ ನೋಟು ಆಕರ್ಷಣೆಯ ಕೇಂದ್ರಬಿಂದು ಆಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

1934ರ 10,000 ಡಾಲರ್ ನೋಟು ಈ ಹಿಂದೆ 2020ರ ಸೆಪ್ಟೆಂಬರ್ ನಲ್ಲಿ 384,000 ಡಾಲರ್‌(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗಿತ್ತು ಎಂದು ಹರಾಜು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಆದಾಗ್ಯೂ, ಹೆರಿಟೇಜ್ ಆಕ್ಷನ್ಸ್ ಪ್ರಕಾರ, ಹರಾಜು ಮಾಡಲಾದ ಈ ನಿರ್ದಿಷ್ಟ ನೋಟು ಎಂದಿಗೂ ಚಲಾವಣೆಯಲ್ಲಿರಲಿಲ್ಲ.

ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?

ಬ್ಯಾಂಕ್‌ಗಳ ವ್ಯವಹಾರಗಳಿಗೆ ಬಳಕೆ

ಮ್ಯೂಸಿಯಂ ಆಫ್ ಅಮೆರಿಕನ್ ಫೈನಾನ್ಸ್ ಪ್ರಕಾರ, 10,000 ಡಾಲರ್ ನೋಟು, ಸಾರ್ವಜನಿಕವಾಗಿ ಚಲಾವಣೆಯಾದ ಅತಿ ಹೆಚ್ಚು ಮೌಲ್ಯದ ಯುಎಸ್ ಕರೆನ್ಸಿಯಾಗಿದೆ. ವುಡ್ರೊ ವಿಲ್ಸನ್ ಅವರ ಭಾವಚಿತ್ರವನ್ನು ಹೊಂದಿರುವ 100,000 ಡಾಲರ್ ನೋಟು ಅನ್ನು ಮುದ್ರಿಸಲಾಗಿದ್ದರೂ, ಇದು ದೈನಂದಿನ ವಹಿವಾಟುಗಳಲ್ಲಿ ಬಳಸುವ ಬದಲು ಫೆಡರಲ್ ರಿಸರ್ವ್ ಬ್ಯಾಂಕ್‌ಗಳ ನಡುವೆ ಹಣವನ್ನು ವರ್ಗಾಯಿಸುವ ಉದ್ದೇಶ ಹೊಂದಿತ್ತು. 100 ಡಾಲರ್‌ ನೋಟು 1969ರಿಂದೀಚೆಗೆ ಅಮೆರಿಕದಲ್ಲಿ ಮುದ್ರಿಸಲಾದ ಅತಿ ದೊಡ್ಡ ನೋಟು ಎನಿಸಿಕೊಂಡಿದೆ. ಬಳಕೆಯ ಕೊರತೆಯಿಂದಾಗಿ 1969ರಲ್ಲಿ 500 ಡಾಲರ್‌ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮುದ್ರಣಗಳನ್ನು ನಿಲ್ಲಿಸಲಾಗಿತ್ತು.

ಭಾರೀ ಮೊತ್ತಕ್ಕೆ ಮಾರಾಟವಾದ ಚಿನ್ನದ ನಾಣ್ಯ

ಇದೇ ವೇಳೆ ಅಪರೂಪದ 1899ರ 20 ಡಾಲರ್‌ ಚಿನ್ನದ ನಾಣ್ಯ ಗುರುವಾರ ನಡೆದ ಹರಾಜಿನಲ್ಲಿ ಇದು 468,000 ( ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.89 ಕೋಟಿ ರೂ.) ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ರೀತಿಯ 84 ನಾಣ್ಯಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಕೇವಲ 30 ನಾಣ್ಯಗಳು ಮಾತ್ರ ಇನ್ನೂ ಚಲಾವಣೆಯಲ್ಲಿವೆ ಎಂದು ಹರಾಜು ಸಂಸ್ಥೆ ತಿಳಿಸಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

Viral Video: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ತುಂಬಿದ ಸಭೆಯಲ್ಲಿ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್‌ ಆಗಿದೆ. ಈ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

kim
Koo

ಉತ್ತರ ಕೊರಿಯಾ: ಉತ್ತರ ಕೊರಿಯಾ (North Korea)ದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್(Kim Jong Un) ಹೆಚ್ಚು ಮಕ್ಕಳನ್ನು ಹೆರುವಂತೆ ಮಹಿಳೆಯರಲ್ಲಿ ಮನವಿ ಮಾಡಿ ಕಣ್ಣೀರು ಸುರಿಸಿದ್ದಾರೆ. ಭಾನುವಾರ (ಡಿಸೆಂಬರ್‌ 3) ನಡೆದ ತಾಯಂದಿರ ರಾಷ್ಟ್ರೀಯ ಸಭೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕಿಮ್​ ಜಾಂಗ್​ ಉನ್ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್ ಆಗುತ್ತಿದೆ (Viral Video).

ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣವು ಕುಸಿಯುತ್ತಿದೆ. ಆದ್ದರಿಂದ ‘ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸುವ’ ಪ್ರಯತ್ನದ ಭಾಗವಾಗಿ ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಕಿಮ್ ಕರೆ ನೀಡಿದ್ದಾರೆ. ಬಳಿಕ ಅವರು ಭಾವುಕರಾಗಿದ್ದಾರೆ. ಬಿಳಿ ಕರವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಳ್ಳುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ ಸಭೆಯಲ್ಲಿದ್ದ ಅನೇಕ ಮಹಿಳೆಯರು ಕೂಡ ಭಾವುಕರಾಗಿದ್ದಾರೆ. “ಜನನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮಕ್ಕಳ ಆರೈಕೆ, ಉತ್ತಮ ಶಿಕ್ಷಣವನ್ನು ಒದಗಿಸಲು ವಾವೆಲ್ಲ ಒಂದಾಗಿ ಕಾರ್ಯ ನಿರ್ವಹಿಸಬೇಕು. ಸಮಸ್ಯೆ ಪರಿಹಾರಕ್ಕೆ ತಾಯಂದಿರೊಂದಿಗೆ ನಾವೆಲ್ಲ ಕೈ ಜೋಡಿಸೋಣʼʼ ಎಂದು ಕಿಮ್ ಹೇಳಿದ್ದಾರೆ.

ಕಾರಣವೇನು?

ವಿಶ್ವಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಉತ್ತರ ಕೊರಿಯಾದಲ್ಲಿ ಜನನ ಪ್ರಮಾಣ ಕುಸಿತ ಕಂಡಿದೆ. 2023ರ ವೇಳೆಗೆ ಇಲ್ಲಿ ಜನಿಸುವ ಸರಾಸರಿ ಮಕ್ಕಳ ಸಂಖ್ಯೆ 1.8ರಷ್ಟಿದೆ. ಸ್ಪರ್ಧಾತ್ಮಕ ಶಾಲಾ ಮಾರುಕಟ್ಟೆ, ದುರ್ಬಲ ಮಕ್ಕಳ ಆರೈಕೆ, ಪುರುಷ ಕೇಂದ್ರಿತ ಕಾರ್ಪೊರೇಟ್ ಸಂಸ್ಕೃತಿ ಇತ್ಯಾದಿ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

1970-80ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ನಿಧಾನಗೊಳಿಸಲು ಉತ್ತರ ಕೊರಿಯಾ ಜನನ ನಿಯಂತ್ರಣ ಯೋಜನೆಗಳನ್ನು ಜಾರಿಗೆ ತಂದಿತ್ತು. ಈ ಮಧ್ಯೆ 1990ರ ದಶಕದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಕ್ಷಾಮದ ಪರಿಣಾಮ ಲಕ್ಷಾಂತರ ಮಂದಿ ಅಸುನೀಗಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಿಧ ಕೊಡುಗೆಗಳ ಘೋಷಣೆ

ಇದೀಗ ಜನಸಂಖ್ಯೆ ಹೆಚ್ಚಿಸಲು ನಿರ್ಧರಿಸಿರುವ ಉತ್ತರ ಕೊರಿಯಾ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಇಂತಹ ಕುಟುಂಬಗಳಿಗೆ ಉಚಿತ ವಸತಿ ವ್ಯವಸ್ಥೆ, ಸಬ್ಸಿಡಿ, ಉಚಿತ ಆಹಾರ, ಔಷಧ ಮತ್ತು ಗೃಹೋಪಯೋಗಿ ವಸ್ತುಗಳ ಪೂರೈಕೆ ಮತ್ತು ಈ ವರ್ಷ ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳು ಸೇರಿದಂತೆ ಹಲವು ಕೊಡುಗೆಗಳನ್ನು ಪರಿಚಯಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

ಹ್ಯುಂಡೈ ಇನ್‌ಸ್ಟಿಟ್ಯೂಟ್‌ ವರದಿ ಪ್ರಕಾರ, ಉತ್ತರ ಕೊರಿಯಾದಲ್ಲಿ 2034ರಿಂದ ಜನಸಂಖ್ಯೆ ತೀವ್ರವಾಗಿ ಕುಗ್ಗುವ ಸಾಧ್ಯತೆ ಇದೆ. 2070ರ ವೇಳೆಗೆ ಇಲ್ಲಿನ ಜನಸಂಖ್ಯೆ 23.7 ಮಿಲಿಯನ್‌ (23,700,000)ಗೆ ಕುಸಿಯುವ ಅಂದಾಜಿದೆ ಎಂದು ಹೇಳಿದೆ. ಈ ಮಧ್ಯೆ ಪುರುಷ ಪ್ರಧಾನ ವ್ಯವಸ್ಥೆಯಿಂದಾಗಿ ಉತ್ತರ ಕೊರಿಯಾದಲ್ಲಿ ಮಹಿಳೆಯರ ವಿರುದ್ಧ ಕೌಟುಂಬಿಕ ಹಿಂಸಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಅದು ವರದಿಯಾಗುವುದಿಲ್ಲ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಕ್ರಿಕೆಟ್

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Danish Kaneria: ರಾಹುಲ್‌ ಗಾಂಧಿ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅವರೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

danish
Koo

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Cricket World Cup 2023)ಗೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ನವೆಂಬರ್​ 19ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಫೈನಲ್‌ ಪಂದ್ಯ ವೀಕ್ಷಣೆಗೆ ಪ್ರಧಾನಮಂತ್ರಿ ನರೆಂದ್ರ ಮೋದಿ (Narendra Modi) ಸ್ಟೇಡಿಯಮ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಮೋದಿ ʼಪನೌತಿʼ (ದುರದೃಷ್ಟದ ವ್ಯಕ್ತಿ). ಇದರಿಂದಲೇ ಭಾರತ ಸೋಲು ಕಂಡಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಲೇವಡಿ ಮಾಡಿದ್ದರು. ಇದೀಗ ಈ ಚರ್ಚೆಗೆ ಪಾಕಿಸ್ತಾನದ ಮಾಜಿ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ಎಂಟ್ರಿ ಕೊಟ್ಟಿದ್ದು, ಹೆಸರು ಹೇಳದೆ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾನಿಶ್ ಕನೇರಿಯಾ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ದಾನಿಶ್ ಕನೇರಿಯಾ “ಪನೌತಿ ಕೌನ್?” (ಈಗ ಯಾರು ದುರದೃಷ್ಟವಂತರು?) ಎಂದು ಪ್ರಶ್ನಿಸಿದ್ದಾರೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರು ರಾಹುಲ್‌ ಗಾಂಧಿಯ ಕಾಲೆಳೆದಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಮಾಜಿ ಕ್ರಿಕೆಟಿಗ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೂ ಬಹುತೇಕರು ಇದು ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಊಹಿಸಿದ್ದಾರೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ಗದ್ದುಗೆಗೆ ಏರಿದ್ದೊಂದೇ ಕೈ ಪಡೆಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಕೊಟ್ಟ ಯಶಸ್ಸು.

ರಾಹುಲ್‌ ಗಾಂಧಿ ಹೇಳಿದ್ದೇನು?

ರಾಜಸ್ಥಾನದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಭಾರತ ತಂಡ ಸೋತಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಪನೌತಿʼ (ದುರದೃಷ್ಟದ ವ್ಯಕ್ತಿ) ಎಂದು ಕರೆದಿದ್ದರು. ಮೋದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದರಿಂದ ಪಂದ್ಯವನ್ನು ಭಾರತ ತಂಡ ಸೋತಿತು ಎಂದು ಆರೋಪಿಸಿದ್ದರು. 

ಈ ಮಧ್ಯೆ ಬಿಜೆಪಿ ನಾಯಕ ಸಿ.ಟಿ.ರವಿ ಕೂಡ ರಾಹುಲ್ ಗಾಂಧಿ ಹೇಳಿಕೆಗೆತಿರುಗೇಟು ನೀಡಿದ್ದಾರೆ. ‘ಅತಿ ದೊಡ್ಡ ಪನೌತಿ ಯಾರು?’ ಎಂದು ಪ್ರಶ್ನಿಸಿದ್ದಾರೆ. ಅವರು ಒಂದು ಹೆಜ್ಜು ಮುಂದೆ ಹೋಗಿ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಿದ್ದರು. ಸದ್ಯ ದಾನಿಶ್ ಕನೇರಿಯಾ ಪೋಸ್ಟ್‌ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

ಯಾರು ಈ ದಾನಿಶ್ ಕನೇರಿಯಾ?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ 2000 ಮತ್ತು 2010ರ ನಡುವೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ ಆಡಿದ್ದಾರೆ. ಗೂಗ್ಲಿ ಬೌಲಿಂಗ್ ಮಾಡಬಲ್ಲ ಬಲಗೈ ಲೆಗ್ ಸ್ಪಿನ್ನರ್ ಆಗಿದ್ದ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 34.79 ಸರಾಸರಿಯಲ್ಲಿ 261 ವಿಕೆಟ್‌ ಪಡೆದುಕೊಂಡಿದ್ದಾರೆ. ಜತೆಗೆ 18 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಸೋದರ ಸಂಬಂಧಿ ಅನಿಲ್ ದಳಪತ್ ನಂತರ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಎರಡನೇ ಹಿಂದೂ ಮತ್ತು ಒಟ್ಟಾರೆಯಾಗಿ ಏಳನೇ ಮುಸ್ಲಿಮೇತರ ಆಟಗಾರರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

Viral video: ಭಾರತ ವಶಪಡಿಸಿಕೊಂಡು ಮೋದಿಗೆ ಬೇಡಿ ಬಿಗಿಯುವೆ! ಪಾಕ್‌ ಸೇನಾಧಿಕಾರಿಯ ಬಡಾಯಿ!

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ.

VISTARANEWS.COM


on

viral video pak military officer
Koo

ಕರಾಚಿ: ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ನಾಲಿಗೆ ಹರಿಬಿಟ್ಟು ಮಂದಿಯ ಮುಂದೆ ಚಪ್ಪಾಳೆ ಗಿಟ್ಟಿಸಿಕೊಂಡ ಪಾಕಿಸ್ತಾನದ ಸೇನಾಧಿಕಾರಿಯೊಬ್ಬ (Pakistan military) ಆನ್‌ಲೈನ್‌ನಲ್ಲಿ ಭರ್ಜರಿ ಟ್ರೋಲ್‌ (Viral video) ಆಗುತ್ತಿದ್ದಾನೆ.

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಕ್ರಿಕೆಟಿಗರು ಭಾರತದ ವಿರುದ್ಧ ಅಬ್ಬರದ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಕಡೆಗೆ ತಮ್ಮ ನಾಲಿಗೆ ತಾವೇ ಕಚ್ಚಿಕೊಳ್ಳುವುದೂ ಸಾಮಾನ್ಯ. ಇದೂ ಕೂಡ ಅಂಥದೇ ಘಟನೆ. ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಒಂದಷ್ಟು ಜನರ ಗುಂಪಿನ ನಡುವೆ “ಭಾರತವನ್ನು ವಶಪಡಿಸಿಕೊಳ್ಳುತ್ತೇವೆ, ಪ್ರಧಾನಿ ನರೇಂದ್ರ ಮೋದಿಯನ್ನು (PM Narendra Modi) ಬಂಧಿಸುತ್ತೇವೆ ಎಂದೆಲ್ಲಾ ಹೇಳಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವುದನ್ನೇ ರೂಢಿ ಮಾಡಿಕೊಂಡಿರುವ ಪಾಕ್‌ ಸೈನ್ಯಕ್ಕೆ ಸೇರಿದ ಅಧಿಕಾರಿಯೊಬ್ಬ ಹೀಗೆ ಮಾಡಿದ್ದಾನೆ. ವಿಡಿಯೋದಲ್ಲಿ ಆತನ ದ್ವೇಷದ ಭಾಷಣ ದಾಖಲಾಗಿದೆ. ಭಾರತದ ಆಡಳಿತಗಾರ ಮೋದಿಯನ್ನು ನಾವು ಗುಲಾಮರನ್ನಾಗಿ ಮಾಡಿಕೊಳ್ಳುತ್ತೇವೆ. ಮೋದಿ ಕೈಗೆ ಸರಪಳಿ ಹಾಕಿ ಬಂಧಿಸುವುದನ್ನು ನಮ್ಮನ್ನು ಬಿಟ್ಟು ಬೇರೆ ಯಾರು ಬಯಸುತ್ತಾರೆ ಎಂದಿದ್ದಾನೆ. ನಂತರ ಪ್ಯಾಲೆಸ್ತೀನ್ ಅನ್ನು ಇಸ್ರೇಲ್‌ನಿಂದ ಬಿಡಿಸಿ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಹೇಳಿದ್ದಾನೆ.

ಈ ತಿಕ್ಕಲನ ಮಾತು ಕೇಳಿ ಅಲ್ಲಿದ್ದವರೇನೋ ಚಪ್ಪಾಳೆ ತಟ್ಟಿದ್ದಾರೆ, ನಿಜ. ಆದರೆ ಆನ್‌ಲೈನ್‌ನಲ್ಲಿ ಮಾತ್ರ ಆತ ಭರ್ಜರಿ ಟ್ರೋಲ್‌ಗೆ ಗುರಿಯಾಗಿದ್ದಾನೆ. ಪಾಕಿಸ್ತಾನದ ಸೈನ್ಯ ಈ ಹಿಂದೆ ಭಾರತದ ಎದುರು ಏಟು ತಿಂದ, ಅಪಮಾನಕ್ಕೊಳಗಾದ ಘಟನೆಗಳನ್ನು ನೆನಪಿಸಿ ಗೇಲಿ ಮಾಡಿದ್ದಾರೆ.

“ತಿನ್ನಲು ಏನೂ ಸಿಗದೇ ಅಕ್ಕ ಪಕ್ಕದ ದೇಶಗಳ ಮುಂದೆ ಭಿಕ್ಷೆ ಬೇಡುತ್ತಿದ್ದರೂ ಧಿಮಾಕಿನ ಮಾತಿಗೆ ಏನೂ ಕಡಿಮೆ ಇಲ್ಲ. ನಮ್ಮ ದೇಶಕ್ಕೆ ಬರುವ ಕನಸು ಕಾಣುವ ಮೊದಲು ನಿಮ್ಮ ದೇಶದ ಪ್ರಜೆಗಳಿಗೆ ಹೊಟ್ಟೆ ತುಂಬಾ ಊಟ ಹಾಕು” ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. “ಜನಗಳ ಮುಂದೆ ಭಾರತದ ಪ್ರಧಾನಿಯನ್ನು ಬಂಧಿಸುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುವ ಪಾಕ್‌ ಸೈನ್ಯದವರು ಕೊನೆಗೆ ಆ ದೇಶದ ಪ್ರಧಾನಿಗಳನ್ನೇ ಬಂಧಿಸುತ್ತಾರೆ. ಹಲವು ದಶಕಗಳಿಂದ ಇದು ನಡೆಯುತ್ತಲೇ ಇದೆ. ಇಮ್ರಾನ್ ಖಾನ್, ಪರ್ವೇಜ್‌ ಮುಷರ್ರಫ್‌, ನವಾಜ್ ಷರೀಫ್‌ ಅವರ ಗತಿ ನೋಡಿ” ಎಂದು ಇನ್ನು ಹಲವರು ಕಾಲೆಳೆದಿದ್ದಾರೆ.

“ಭಾರತದ ಪ್ರಧಾನಿಯನ್ನು ಬಂಧಿಸುವ ಯೋಚನೆ ಮಾಡುವ ಮುನ್ನ ಪಾಕಿಸ್ತಾನ 1971ರ ಯುದ್ಧವನ್ನು ನೆಪಿಸಿಕೊಳ್ಳಲಿ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸೈನಿಕರು ಶರಣಾಗಿದ್ದು ನಿಮ್ಮ ದೇಶದಿಂದಲೇ” ಎಂದು ಬಾಂಗ್ಲಾ ವಿಮೋಚನೆ ಸಂದರ್ಭದ ಫೋಟೋ ಜೊತೆಗೆ ಪೋಸ್ಟ್‌ ಮಾಡಿ ಆತನ ಜನ್ಮ ಜಾಲಾಡಿದ್ದಾರೆ. ಬಾಂಗ್ಲಾ ದೇಶ ವಿಮೋಚನೆಗಾಗಿ ನಡೆದ ಯುದ್ಧದ ಸಂದರ್ಭ ಭಾರತದ ಸೈನ್ಯದ ಮುಂದೆ 93 ಸಾವಿರ ಪಾಕಿಸ್ತಾನದ ಸೈನಿಕರು ಶರಣಾಗಿದ್ದರು.

Continue Reading

ದೇಶ

ಭಾರತದ ಹುಡುಗನನ್ನು ವರಿಸಲಿದ್ದಾಳೆ ಪಾಕಿಸ್ತಾನದ ಹುಡುಗಿ! ಸಿಕ್ತು 45 ದಿನಗಳ ವೀಸಾ

Pakistan Girl: ಪಾಕಿಸ್ತಾನದ ಜವಾರಿಯಾ ಖಾನುಮ್ ಅವರು ಕೋಲ್ಕೊತಾ ಮೂಲದ ಸಮಿರ್ ಖಾನ್ ಅವರನ್ನು ಮದುವೆಯಾಗಲಿದ್ದಾರೆ.

VISTARANEWS.COM


on

Pakistan girl will marry indian man in kolkata, West bengal
Koo

ನವದೆಹಲಿ: ಭಾರತದ ಅಂಜು (Anju Lover Story) ಮತ್ತು ಪಾಕಿಸ್ತಾನದ ಸೀಮಾ ಹೈದರ್ (Seem Haider) ಅವರ ಕ್ರಾಸ್‌ ಬಾರ್ಡರ್‌ ಲವ್ ಸ್ಟೋರಿಗಳ (Cross Border Love Story) ಮಧ್ಯೆ, ಪಾಕಿಸ್ತಾನ ಮತ್ತೊಬ್ಬ ಹುಡುಗಿಯೊಬ್ಬಳು (Pakistan Girl) ಭಾರತದ ಹುಡುಗನನ್ನು (Indian Boy) ಮದುವೆಯಾಗಲು ಮುಂದಾಗಿದ್ದಾಳೆ(Wedding). ಇದಕ್ಕಾಗಿ ಆಕೆಗೆ 45 ದಿನಗಳ ಭಾರತದ ವೀಸಾ (Indian Visa) ಕೂಡ ದೊರೆತಿದೆ. ಭಾರತದ ಹುಡುಗನನ್ನು ವರಿಸಲಿರುವ ಪಾಕಿಸ್ತಾನದ ವಧು ಜವಾರಿಯಾ ಖಾನುಮ್ ಅವರು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಬರಲಿದ್ದಾಳೆ(Viral News).

ಜವಾರಿಯಾ ಖಾನುಮ್ ಅವರು ಕೋಲ್ಕೊತಾ ಮೂಲದ ಸಮಿರ್ ಖಾನ್ ಅವರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರೂ ಈಗಾಗಲೇ ನಿಶ್ಛಿತಾರ್ಥ ಮಾಡಿಕೊಂಡಿದ್ದಾರೆ. ಮದುವೆಯಾಗಲಿರುವ ಜವಾರಿಯಾ ತಮ್ಮ ತಂದೆ ಜತೆಗೆ ಭಾರತಕ್ಕೆ ಬರಲಿದ್ದಾಳೆ. ವಾಘಾ ಗಡಿಯಲ್ಲಿ ಸಮಿರ್ ಖಾನ್ ಹಾಗೂ ಅವರ ತಂದೆ ಅಹ್ಮದ್ ಕಮಲ್ ಖಾನ್ ಯುಸಫ್‌ಜಾಯಿ ಅವರು, ಕರಾಚಿ ನಿವಾಸಿ ಅಜ್ಮತ್ ಇಸ್ಮಾಯಿಲ್ ಖಾನ್ ಮತ್ತು ಅವರ ಮಗಳು ಜವಾರಿಯಾ ಖಾನುಮ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ಸಮೀರ್ ಖಾನ್ ಮತ್ತು ಅವರ ತಂದೆ ಪ್ರಸ್ತುತ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಖಾಡಿಯನ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಇದ್ದಾರೆ. ಪಾಕಿಸ್ತಾನದಿಂದ ಆಗಮಿಸುವ ತಮ್ಮ ಇಬ್ಬರು ಅತಿಥಿಗಳಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಪಾಕಿಸ್ತಾನ ಮತ್ತು ಭಾರತ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಚೆನ್ನಾಗಿಲ್ಲ. ಅದೇ ಕಾರಣಕ್ಕಾಗಿ ಪಾಕಿಸ್ತಾನದ ಜವಾರಿಯಾಗೆ ವೀಸಾ ಸಿಗುವುದು ಭಾರೀ ಕಷ್ಟವಾಗಿತ್ತು. ಆದರೆ, ಪಂಜಾಬ್‌ನ ಖಾಡಿಯನ್ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಕ್ಬೂಲ್ ಅಹ್ಮದ್ ಖಾದಿಯಾನ್ ಅವರು, ಜವಾರಿಯಾ ಖಾನುಮ್ ಮತ್ತು ಅವರ ತಂದೆಗೆ ವೀಸಾ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರಿಗೂ ಭಾರತವು 45 ದಿನಗಳ ವೀಸಾವನ್ನು ದಯಪಾಲಿಸಿದೆ.

ಜವಾರಿಯಾ ಮತ್ತು ಸಮಿರ್ ಖಾನ್ ಮದುವೆಯು ಕೋಲ್ಕೊತಾದಲ್ಲಿ ನಡೆಯಲಿದೆ. ವಾಘಾ-ಅಟ್ಟಾರಿ ಗಡಿಗೆ ಜವಾರಿಯಾ ಖಾನುಮ್ ಮತ್ತು ಅವರ ತಂದೆ ಆಗಮಿಸುತ್ತಿದ್ದಂತೆ ಅವರನ್ನು ಅಮೃತಸರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಅವರು ಕೋಲ್ಕೊತಾಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಮಿರ್ ಮತ್ತು ಜವಾರಿಯಾ ಇಬ್ಬರು ಮದುವೆಯಾಗಲಿದ್ದಾರೆ. ಮದುವೆಯ ಬಳಿಕ ಜವಾರಿಯಾ ಅವರು ವೀಸಾ ಅವಧಿಯನ್ನು ವಿಸ್ತರಿಸುವಂತೆ ಮತ್ತೆ ಮನವಿ ಸಲ್ಲಿಸಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

Continue Reading
Advertisement
lidkar ambassador dolly dhananjay Officially
South Cinema4 mins ago

Dolly Dhananjay: ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

Government Job Vistara Exclusive and CM Siddaramaiah
ಉದ್ಯೋಗ8 mins ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

kim
ವಿದೇಶ26 mins ago

Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

narendra modi amit shah jp nadda
ದೇಶ39 mins ago

Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ

Vinay Gowda and sangeetha Bigg boss
ಬಿಗ್ ಬಾಸ್39 mins ago

BBK SEASON 10: ಪಾತ್ರದಿಂದ ಹೊರಗೆ ಬಂದ್ರೆ ಸಂಗೀತಾ ಟೀಮ್‌ಗೆ ʻಹುಚ್ಚೇಟುʼ ಕೊಡ್ತೀನಿ ಎಂದ ವಿನಯ್‌!

murder case in Bengaluru
ಕರ್ನಾಟಕ54 mins ago

Murder Case : ಸ್ನೇಹಿತನ ಹಣ ಕೊಡಿಸಿ ಕಿರಿಕ್ ಮಾಡಿಕೊಂಡು ಹೆಣವಾದ ಯುವಕ!

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

danish
ಕ್ರಿಕೆಟ್1 hour ago

Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Snehith Gowda Became Villain In Bigg Boss Kannada in rakshasa task
ಬಿಗ್ ಬಾಸ್1 hour ago

BBK SEASON 10: ನ್ಯಾಯವಾಗಿ ಆಡೋಕ್‌ ಬಂದಿಲ್ಲ ಅಂದ್ರೆ ಹೋಗ್ತಿರ್ಬೇಕು; ಸ್ನೇಹಿತ್‌ ವಿರುದ್ಧ ರಕ್ಕಸರು ಉರಿ ಉರಿ!

pranab mukherjee and rahul gandhi
ದೇಶ1 hour ago

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Government Job Vistara Exclusive and CM Siddaramaiah
ಉದ್ಯೋಗ8 mins ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 hour ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ8 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ16 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ17 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ17 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

ಟ್ರೆಂಡಿಂಗ್‌