Viral News: ಸಾಯುವ ಮುನ್ನ 33 ವರ್ಷದ ಗರ್ಲ್‌ಫ್ರೆಂಡ್‌ಗೆ 900 ಕೋಟಿ ರೂ. ಆಸ್ತಿ ಬರೆದಿಟ್ಟ ಮಾಜಿ ಪ್ರಧಾನಿ! - Vistara News

ವಿದೇಶ

Viral News: ಸಾಯುವ ಮುನ್ನ 33 ವರ್ಷದ ಗರ್ಲ್‌ಫ್ರೆಂಡ್‌ಗೆ 900 ಕೋಟಿ ರೂ. ಆಸ್ತಿ ಬರೆದಿಟ್ಟ ಮಾಜಿ ಪ್ರಧಾನಿ!

Viral News: ಉದ್ಯಮಿಯಾಗಿದ್ದ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಮೂರು ಬಾರಿ ಇಟಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಗರ್ಲ್‌ಫ್ರೆಂಡ್‌ ಜತೆಗೆ ಮಕ್ಕಳು, ಸಹೋದರನಿಗೂ ಆಸ್ತಿ ಬರೆದಿಟ್ಟಿದ್ದಾರೆ.

VISTARANEWS.COM


on

Silvio Berlusconi And Marta Fascina
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರೋಮ್‌: ಹೆಚ್ಚು ಆಸ್ತಿ ಮಾಡಿರುವವರು ಸೇರಿ ಯಾರೇ ಆಗಲಿ, ತಾವು ಅಗಲಿದ ನಂತರ ತಮ್ಮ ಆಸ್ತಿಯನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ ಸೇರಲಿ ಎಂದು ವಿಲ್‌ ಬರೆದಿಡುತ್ತಾರೆ. ಅದರಂತೆ, ಅವರ ಕಾಲಾನಂತರ ಮಕ್ಕಳೋ, ಮೊಮ್ಮಕ್ಕಳೋ ಆಸ್ತಿಯನ್ನು ಅನುಭವಿಸುತ್ತಾರೆ. ಇನ್ನು ಮಕ್ಕಳಿರದವರು ಸಂಬಂಧಿಕರಿಗೋ, ಅನಾಥಾಶ್ರಮಕ್ಕೋ ಆಸ್ತಿಯನ್ನು ಬರೆದಿಡುತ್ತಾರೆ. ಆದರೆ, ಕೆಳೆದ ತಿಂಗಳು ಮೃತಪಟ್ಟ ಇಟಲಿ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (Silvio Berlusconi) ಅವರು ಸಾಯುವ ಮೊದಲು ತಮ್ಮ ಗರ್ಲ್‌ಫ್ರೆಂಡ್‌ಗೆ 905 ಕೋಟಿ ರೂ. ಮೌಲ್ಯದ (100 ದಶಲಕ್ಷ ಯುರೋ) (Viral News) ಆಸ್ತಿಯನ್ನು ಬರೆದಿಟ್ಟಿದ್ದಾರೆ.

ಮಾರ್ಟಾ ಫೆಸಿನಾ (33) ಅವರು ಸಿಲ್ವಿಯೋ ಬೆರ್ಲುಸ್ಕೋನಿ ಅವರ ಗರ್ಲ್‌ಫ್ರೆಂಡ್‌ ಆಗಿದ್ದರು. ಇಬ್ಬರೂ ಒಟ್ಟಿಗೆ ತಿರುಗಾಡುವ, ಜತೆಗೇ ಊಟ ಮಾಡುವ ಫೋಟೊಗಳು ವೈರಲ್‌ ಆಗಿದ್ದವು. ಮೂರು ಬಾರಿ ಪ್ರಧಾನಿಯಾಗಿದ್ದ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಕಳೆದ ತಿಂಗಳು ಮೃತಪಟ್ಟಿದ್ದು, ಸಾಯುವ ಮುನ್ನ ಅವರು ಗೆಳತಿಗೆ 905 ಕೋಟಿ ರೂ. ಮೌಲ್ಯದ ಆಸ್ತಿ ಸೇರಬೇಕೆಂದು ವಿಲ್‌ನಲ್ಲಿ ಬರೆದಿದ್ದಾರೆ. ಅಂದಹಾಗೆ, ಸಿಲ್ವಿಯೋ ಬೆರ್ಲುಸ್ಕೋನಿ ಒಟ್ಟು ಆಸ್ತಿಯ ಮೌಲ್ಯ 6 ಶತಕೋಟಿ ಯುರೋ ಎಂದು ತಿಳಿದುಬಂದಿದೆ.

ಸಿಲ್ವಿಯೋ ಬೆರ್ಲುಸ್ಕೋನಿ ಹಾಗೂ ಮಾರ್ಟಾ ಫೆಸಿನಾ ಅವರು ಮದುವೆಯಾಗಿರಲಿಲ್ಲ. ಇವರಿಬ್ಬರೂ ಪ್ರೀತಿಯ ಬಲೆಯಲ್ಲಿ ಸಿಲುಕಿರುವ ಕುರಿತು 2020ರ ಮಾರ್ಚ್‌ನಲ್ಲಿ ಸುದ್ದಿಯಾಗಿತ್ತು. ಸಿಲ್ವಿಯೋ ಬೆರ್ಲುಸ್ಕೋನಿ ಅವರು ಫೆಸಿನಾ ಅವರನ್ನು ಮದುವೆಯಾಗದಿದ್ದರೂ ಹೆಂಡತಿ ಎಂದೇ ಭಾವಿಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ನೂರಾರು ಕೋಟಿ ರೂಪಾಯಿಯನ್ನು ಆಸ್ತಿ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಫೆಸಿನಾ ಅವರು ಇಟಲಿ ಕೆಳಮನೆಯ ಸದಸ್ಯೆಯೂ ಆಗಿದ್ದರು.

ಸಿಲ್ವಿಯೋ ಬೆರ್ಲುಸ್ಕೋನಿ ಅವರು ದೊಡ್ಡ ಉದ್ಯಮಿಯಾಗಿದ್ದರು. ಹಾಗಾಗಿ, ಗರ್ಲ್‌ಫ್ರೆಂಡ್‌ ಜತೆಗೆ ಅವರ ಕುಟುಂಬಸ್ಥರಿಗೂ ಆಸ್ತಿ ಬರೆದಿದ್ದಾರೆ. ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯುರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ ಶೇ.53ರಷ್ಟು ಶೇರ್‌ಗಳನ್ನು ನೀಡಿದ್ದಾರೆ. ಸಿಲ್ವಿಯೋ ಬೆರ್ಲುಸ್ಕೋನಿ ಅವರು ಜೂನ್‌ 12ರಂದು ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಹೆಂಡತಿಯರು ಇದ್ದರು. ಇಬ್ಬರಿಗೂ ವಿಚ್ಛೇದನ ನೀಡಿದ್ದ ಸಿಲ್ವಿಯೋ ಬೆರ್ಲುಸ್ಕೋನಿ, ಫೆಸಿನಾ ಪ್ರೀತಿಯ ಬಲೆಗೆ ಬಿದ್ದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

ಮಾಲ್ಡೀವ್ಸ್‌ಗೆ ಉಚಿತ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಚೀನಾ ಸಹಿ

Maldives: ಮಾಲ್ಡೀವ್ಸ್ ಜತೆಗೆ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ಚೀನಾ ಸೋಮವಾರ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ.

VISTARANEWS.COM


on

china military
Koo

ಮಾಲೆ: ಭಾರತ ಮತ್ತು ಮಾಲ್ಡೀವ್ಸ್‌ (Maldives) ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು, ಇದೀಗ ಮಾಲ್ಡೀವ್ಸ್ ಜತೆಗೆ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ಚೀನಾ ಸೋಮವಾರ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ತಮ್ಮ ದ್ವೀಪ ರಾಷ್ಟ್ರದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಗುಂಪನ್ನು ಹಿಂತೆಗೆದುಕೊಳ್ಳಲು ಗಡುವು ನಿಗದಿಪಡಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.

ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಕಚೇರಿಯ ಉಪ ನಿರ್ದೇಶಕ ಮೇಜರ್ ಜನರಲ್ ಜಾಂಗ್ ಬೌಕುನ್ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು. ಮೌಮೂನ್ ಮತ್ತು ಮೇಜರ್ ಜನರಲ್ ಬಾವೊಕುನ್ “ಮಾಲ್ಡೀವ್ಸ್ ಗಣರಾಜ್ಯಕ್ಕೆ ಉಚಿತವಾಗಿ ಚೀನಾದ ಮಿಲಿಟರಿ ನೆರವು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲಿದೆ” ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ತಿಳಿಸಿದೆ. ಈ ರಕ್ಷಣಾ ಸಹಕಾರ ಒಪ್ಪಂದದ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.

ಇದರ ಜತೆಗೆ ಚೀನಾ 12 ಪರಿಸರ ಸ್ನೇಹಿ ಆಂಬ್ಯುಲೆನ್ಸ್‌ಗಳನ್ನು ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಆರೋಗ್ಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ, ಮಾಲ್ಡೀವ್ಸ್‌ನ ಚೀನಾದ ರಾಯಭಾರಿ ವಾಂಗ್ ಲಿಕ್ಸಿನ್ ಈ ಆಂಬ್ಯುಲೆನ್ಸ್‌ಗಳನ್ನು ಹಸ್ತಾಂತರಿಸುವ ಪತ್ರವನ್ನು ನೀಡಿದರು.

ಚೀನಾದ ಸಂಶೋಧನಾ ಹಡಗು ಕ್ಸಿಯಾಂಗ್ ಯಾಂಗ್ ಹಾಂಗ್ 03ಕ್ಕೆ ಮಾಲೆ ಪ್ರವೇಶಿಸಲು ಅನುಮತಿ ನೀಡಿದ ಕೆಲವು ದಿನಗಳ ನಂತರ ಚೀನಾದ ಮಿಲಿಟರಿ ನಿಯೋಗ ಮತ್ತು ಮಾಲ್ಡೀವ್ಸ್‌ನ ಭೇಟಿ ನಡೆಯಿತು. ಜನವರಿ 5ರಂದು ಶ್ರೀಲಂಕಾ ಅದೇ ಹಡಗಿನ ಪ್ರವೇಶವನ್ನು ನಿರಾಕರಿಸಿತ್ತು.

ಈ ಮಧ್ಯೆ ಚೀನಾ ಪರ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಅಧ್ಯಕ್ಷ ಮುಯಿಝು ಅವರು ತಮ್ಮ ದೇಶದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಗುಂಪನ್ನು ಹಿಂತೆಗೆದುಕೊಳ್ಳಲು ಮಾರ್ಚ್ 10ರ ಗಡುವನ್ನು ನಿಗದಿಪಡಿಸಿದ್ದಾರೆ. ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ಕುರಿತಾದ ಬಿಕ್ಕಟ್ಟನ್ನು ಪರಿಹರಿಸಲು ರಚಿಸಲಾದ ಉನ್ನತ ಮಟ್ಟದ ಕೋರ್ ಗುಂಪಿನ ಸಭೆಗಳ ನಂತರ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿ, ಮೇ 10ರೊಳಗೆ ಭಾರತವು ತನ್ನ ಎಲ್ಲ ಮಿಲಿಟರಿ ಸಿಬ್ಬಂದಿಯನ್ನು ಎರಡು ಹಂತಗಳಲ್ಲಿ ಹಿಂಪಡೆಯಲಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ: Boycott Maldives: ಮಾಲ್ಡೀವ್ಸ್‌ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?

ಕಳೆದ ವರ್ಷ ನವೆಂಬರ್‌ನಲ್ಲಿ ಮುಯಿಝು ಅಧಿಕಾರಕ್ಕೆ ಬಂದಾಗಿನಿಂದ ಉಭಯ ದೇಶಗಳ ನಡುವಿನ ಸಂಬಂಧಗಲ್ಲಿ ಬಿರುಕು ಮೂಡಲಾರಂಭಿಸಿವೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮುಯಿಝು ಅವರು ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ಹೊರಹಾಕುವ ತಮ್ಮ ಚುನಾವಣಾ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ಹೇಳಿದ್ದರು. ಮಾತ್ರವಲ್ಲ ಕೆಲವು ದಿನಗಳ ಹಿಂದೆ ಲಕ್ಷದ್ವೀಪದ ವಿರುದ್ಧ ಮಾಲ್ಡೀವ್ಸ್‌ ಹೇಳಿಕೆ ನೀಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

Continue Reading

ವಿದೇಶ

Missile Attack: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು

Missile Attack: ಲೆಬನಾನ್‌ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ ಇಸ್ರೇಲ್‌ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ತೋಟಕ್ಕೆ ಅಪ್ಪಳಿಸಿದ್ದು, ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ.

VISTARANEWS.COM


on

Missile Attack
Koo

ಜೆರುಸಲೇಂ: ಲೆಬನಾನ್‌ನಿಂದ (Lebanon) ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ (ಮಾರ್ಚ್‌ 4) ಇಸ್ರೇಲ್‌ನ ಉತ್ತರದ ಗಡಿ ಮಾರ್ಗಲಿಯಟ್ (Margaliot) ಬಳಿಯ ತೋಟಕ್ಕೆ ಅಪ್ಪಳಿಸಿದ್ದು, ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. ಈ ಮೂವರು ಕೇರಳ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ (Missile Attack).

ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್‌ (Patnibin Maxwell) ಎಂದು ಗುರುತಿಸಲಾಗಿದೆ. ಅವರ ಮೃತದೇಹವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಉತ್ತರ ಇಸ್ರೇಲ್‌ನ ಗೆಲಿಲಿ ಪ್ರದೇಶದ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ)ನ ಮಾರ್ಗಲಿಯಟ್‌ ತೋಟಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ರಕ್ಷಣಾ ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಈ ಕ್ಷಿಪಣಿ ದಾಳಿಯಿಂದ ಇತರ ಇಬ್ಬರು ಕೇರಳಿಗರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಜಾರ್ಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ-ಸ್ವಲ್ಪ ಗಾಯಗೊಂಡ ಮೆಲ್ವಿನ್ ಅವರನ್ನು ಉತ್ತರ ಇಸ್ರೇಲ್‌ನ ಸಫೆಡ್‌ನ ಜಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.

ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಹಮಾಸ್ ಅನ್ನು ಬೆಂಬಲಿಸಿ ಅಕ್ಟೋಬರ್ 8ರಿಂದ ಉತ್ತರ ಇಸ್ರೇಲ್ ಮೇಲೆ ಪ್ರತಿದಿನ ರಾಕೆಟ್‌, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿರುವ ಲೆಬನಾನ್‌ನ ಶಿಯಾ ಹಿಜ್ಬುಲ್ಲಾ ಬಣವು ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ. ʼʼದಾಳಿಯಲ್ಲಿ ಒಟ್ಟು ಏಳು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ ಮತ್ತು ಅವರನ್ನು ಆಂಬ್ಯುಲೆನ್ಸ್ ಮತ್ತು ಇಸ್ರೇಲ್ ವಾಯುಪಡೆಯ ಹೆಲಿಕಾಫ್ಟರ್‌ಗಳಲ್ಲಿ ಬೀಲಿನ್ಸನ್, ರಂಬಾಮ್ ಮತ್ತು ಜಿವ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ಪ್ರತಿದಾಳಿ

ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆ (Israel Defence Forces), ʼʼಫಿರಂಗಿಗಳಿಂದ ಪ್ರತಿದಾಳಿ ನಡೆಸಿದ್ದೇವೆ. ದಕ್ಷಿಣ ಲೆಬನಾನ್ ಪಟ್ಟಣ ಚಿಹಿನೆಯಲ್ಲಿನ ಹಿಜ್ಬುಲ್ಲಾ ಕಾಂಪೌಂಡ್ ಮತ್ತು ಐಟಾ ಅಶ್-ಶಾಬ್‌ನಲ್ಲಿನ ಹಿಜ್ಬುಲ್ಲಾಗೆ ಸೇರಿದ ಮತ್ತೊಂದು ಸ್ಥಳದ ಮೇಲೆ ದಾಳಿ ನಡೆಸಿದ್ದೇವೆʼʼ ಎಂದು ಹೇಳಿದೆ.

ಇದನ್ನೂ ಓದಿ: Israel Palestine War: ಗಾಜಾದಲ್ಲಿ ರಕ್ತದೋಕುಳಿ; ಆಹಾರಕ್ಕಾಗಿ ಬಂದವರ ಮೇಲೆ ದಾಳಿ; ಕನಿಷ್ಠ 104 ಮಂದಿ ಸಾವು

ತೀವ್ರ ಸಂಘರ್ಷ

ಹಮಾಸ್‌ಗೆ ಬೆಂಬಲ ಸೂಚಿಸಲು ಹಿಜ್ಬುಲ್ಲಾ ಬಣವು ಅಕ್ಟೋಬರ್ 8ರಿಂದ ಇಸ್ರೇಲ್‌ನ ಉತ್ತರದ ಭಾಗ ಮತ್ತು ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಈ ಸಂಘರ್ಷದಲ್ಲಿ ಇದುವರೆಗೆ ಇಸ್ರೇಲ್‌ನ 7 ನಾಗರಿಕರು ಮತ್ತು 10 ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಇತ್ತೀಚೆಗೆ ಇಸ್ರೇಲ್‌ ಪಡೆಯಿಂದ ತಮ್ಮ ಗುಂಪಿನ 229 ಸದಸ್ಯರು ಹತ್ಯೆಗೀಡಾಗಿದ್ದಾರೆ. ಲೆಬನಾನ್‌ ಮಾತ್ರವಲ್ಲ ಸಿರಿಯಾದಲ್ಲಿಯೂ ಈ ಹತ್ಯೆ ನಡೆದಿದೆ ಎಂದು ಹೆಜ್ಬುಲ್ಲಾ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

3 ಕೋಟಿ ರೂ. ಕೇಳಿ ಪಾಕ್‌ನಿಂದಲೇ ನೋಟಿಸ್‌ ಕಳುಹಿಸಿದ ಸೀಮಾ ಹೈದರ್‌ ಮೊದಲ ಪತಿ!

ನಾಲ್ವರು ಮಕ್ಕಳನ್ನು ಕಟ್ಟಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌, ಪ್ರಿಯತಮನಾದ ಸಚಿನ್‌ ಮೀನಾ ಜತೆ ಖುಷಿಯಾಗಿದ್ದಾರೆ. ಆದರೆ, ಇವರ ಮೊದಲ ಪತಿಯು ನೋಟಿಸ್‌ ಕಳುಹಿಸಿದ್ದಾನೆ. ಇದು ಈಗ ಅವರಿಗೆ ಹೊಸ ಸಂಕಷ್ಟ ತಂದಿದೆ.

VISTARANEWS.COM


on

Seema Haider Sachin Meena
Koo

ನವದೆಹಲಿ: ಆನ್‌ಲೈನ್‌ ಪಬ್ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ (Sachin Meena) ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಚಿನ್‌ ಮೀನಾ ಜತೆ ಇರುವ ಸೀಮಾ ಹೈದರ್‌ (Seema Haider) ಎಂಬ ಮಹಿಳೆಗೆ‌ ಈಗ ಭಾರಿ ಸಂಕಷ್ಟ ಎದುರಾಗಿದೆ. ಸೀಮಾ ಹೈದರ್‌ ಮೊದಲ ಪತಿ ಗುಲಾಂ ಹೈದರ್‌ (Ghulam Haider) ಎಂಬಾತನು ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಸೇರಿ 3 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪಾಕಿಸ್ತಾನದಿಂದಲೇ (Pakistan) ನೋಟಿಸ್‌ ಕಳುಹಿಸಿದ್ದಾನೆ.

ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ ಹಾಗೂ ಆಕೆಯ ಜತೆಗಿರುವ ಸಚಿನ್‌ ಮೀನಾ ಸೇರಿ ನನಗೆ ಮೂರು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬುದಾಗಿ ಗುಲಾಂ ಹೈದರ್‌ ಎಂಬಾತನು ವಕೀಲರೊಬ್ಬರ ಮೂಲಕ ಸೀಮಾ ಹೈದರ್‌ ನಿವಾಸಕ್ಕೆ ನೋಟಿಸ್‌ ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ನಾಲ್ವರು ಮಕ್ಕಳನ್ನು ಕರೆದುಕೊಂಡು ಪ್ರಿಯತಮನಿಗಾಗಿ ಭಾರತಕ್ಕೆ ಬಂದಿದ್ದಕ್ಕೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಿದ್ದಾನೆ. ಹಾಗಾಗಿ, ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.

ಸಚಿನ್‌-ಸೀಮಾ ಮಸ್ತ್‌ ಡಾನ್ಸ್

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ.

ಇದನ್ನೂ ಓದಿ: Seema Haider: ತಿರಂಗಾ ಹಾರಿಸಿ ಭಾರತ್‌ ಮಾತಾ ಕಿ ಜೈ ಎಂದ ಪಾಕಿಸ್ತಾನದ ಸೀಮಾ ಹೈದರ್! ವಿಡಿಯೊ ವೈರಲ್

ತೀವ್ರ ವಿಚಾರಣೆ ಬಳಿಕ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಅವರು ಒಟ್ಟಿಗೆ ವಾಸಿಸಲು ಅನುಮತಿ ನೀಡಲಾಗಿದೆ. ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮೂಲಕವೇ ದೇಶದ ಗಮನ ಸೆಳೆದಿದ್ದಾರೆ. ಇವರ ಪ್ರೇಮ ಪ್ರಕರಣವು ದೇಶಾದ್ಯಂತ ಸುದ್ದಿಯಾಗುವ ಜತೆಗೆ, ಇವರ ವಿಡಿಯೊಗಳು ಕೂಡ ವೈರಲ್‌ ಆಗುತ್ತಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮೊದಲ ಜಯ

Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ, ಭಾರತೀಯ ಮೂಲದ ನಿಕ್ಕಿ ಹ್ಯಾಲಿ ವಾಷಿಂಗ್ಟನ್‌ ಡಿಸಿಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಜಯ ಗಳಿಸಿದ್ದಾರೆ.

VISTARANEWS.COM


on

nikki and trump
Koo

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (United States presidential election) ಸದ್ಯ ವಿಶ್ವದ ಕುತೂಹಲ ಕೆರಳಿಸಿದೆ. ನವೆಂಬರ್‌ 5ರಂದು ಚುನಾವಣೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದ ಚಟುವಟಿಕೆ ಬಿರುಸುಗೊಂಡಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ ರಿಪಬ್ಲಿಕನ್ ಪಕ್ಷದ ಪ್ರಬಲ ಸ್ಪರ್ಧಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ (Nikki Haley) ಅವರು ವಾಷಿಂಗ್ಟನ್‌ ಡಿಸಿಯ ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಿರುದ್ಧ ಗೆಲುವು ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಇದು ನಿಕ್ಕಿ ಅವರ ಮೊದಲ ಗೆಲುವು. ಸೂಪರ್ ಮಂಗಳವಾರ (Super Tuesday)ಕ್ಕೆ ಸ್ವಲ್ಪ ಮುಂಚಿತವಾಗಿ ಅವರ ಗೆಲುವು ಈ ಅತ್ಯಂತ ಪ್ರಮುಖ ಎಂದು ವಿಶ್ಲೇಷಿಸಲಾಗುತ್ತಿದೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಉಳಿದುಕೊಂಡಿರುವ ಏಕೈಕ ಸ್ಪರ್ಧಿ ನಿಕ್ಕಿ ಹ್ಯಾಲೆ, ಶೇ 62.9 ಮತಗಳನ್ನು ಪಡೆದರು. ಟ್ರಂಪ್ ಶೇ. 33.2 ಮತ ಗಳಿಸಿದರು. ಈ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನಿಕ್ಕಿ ಅವರ ವಕ್ತಾರ ಒಲಿವಿಯಾ ಪೆರೆಜ್-ಕ್ಯೂಬಾಸ್, “ರಿಪಬ್ಲಿಕನ್‌ ಪಕ್ಷದವರು ಡೊನಾಲ್ಡ್ ಟ್ರಂಪ್ ಮತ್ತು ಅವರ ಎಲ್ಲ ಅವ್ಯವಸ್ಥೆಯನ್ನು ತಿರಸ್ಕರಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆʼʼ ಎಂದು ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿ ನಗರ ಪ್ರದೇಶವಾಗಿದ್ದು ಹೆಚ್ಚಿನ ಪ್ರಮಾಣದ ನಾಗರಿಕರು ಶಿಕ್ಷಣ ಹೊಂದಿದವರು. ಇಲ್ಲಿ ನಿಕ್ಕಿ ಪ್ರಾಬಲ್ಯ ಹೊಂದಿದ್ದರೆ ಟ್ರಂಪ್ ಅವರ ಪ್ರಭಾವ ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿದೆ. ರಾಜಧಾನಿಯಲ್ಲಿ ಟ್ರಂಪ್ ಮುಖಭಂಗ ಅನುಭವಿಸುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ನಡೆದ ಕೊನೆಯ ಸ್ಪರ್ಧಾತ್ಮಕ ರಿಪಬ್ಲಿಕನ್ ನಾಮನಿರ್ದೇಶನ ಸ್ಪರ್ಧೆಯಲ್ಲಿ ಅವರು ಶೇ. 14ಕ್ಕಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರು. ನಾಳೆ (ಮಾರ್ಚ್‌ 5) ಅಮೆರಿಕದ ಒಂದು ಭಾಗವಾದ 15 ರಾಜ್ಯಗಳಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಮತದಾನ ನಡೆಯಲಿದೆ.

ದಕ್ಷಿಣ ಕೆರೊಲಿನಾದಲ್ಲಿ ಸೋತಿದ್ದ ನಿಕ್ಕಿ

ಇತ್ತೀಚೆಗೆ ದಕ್ಷಿಣ ಕೆರೊಲಿನಾದಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆಯ ಸ್ಪರ್ಧೆಯಲ್ಲಿ 51 ವರ್ಷದ ನಿಕ್ಕಿ ಹ್ಯಾಲೆ ಅವರನ್ನು 77 ವರ್ಷದ ಟ್ರಂಪ್‌ ಸೋಲಿಸಿದ್ದರು. ಟ್ರಂಪ್‌ ಕೆಲವು ದಿನಗಳ ಹಿಂದೆ ನೆವಡಾ ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ವಿಜಯ ಸಾಧಿಸಿದ್ದರು. ನೆವಡಾದಲ್ಲಿ ನಡೆದ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಸ್ಪರ್ಧಿಸಿರಲಿಲ್ಲ.

ಗವರ್ನರ್‌ ಮತ್ತು ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಜಿದ್ದಾಜಿದ್ದಿನ ಹೋರಾಟದಲ್ಲಿ ಟ್ರಂಪ್‌ ವಿರುದ್ಧ ಸೋಲೊಪ್ಪಿಕೊಂಡಿದ್ದರು. ಆದರೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಮತ್ತೆ ಹೋರಾಟದ ಸೂಚನೆ ನೀಡಿದ್ದರು. ಅದರಂತೆ ಈ ಬಾರಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ: Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಭಾರತೀಯ ಮೂಲದ ನಿಕ್ಕಿ ಹ್ಯಾಲೆ ವಿರುದ್ಧ ಗೆದ್ದ ಟ್ರಂಪ್‌

ನಿಕ್ಕಿ ಅವರ ತಂದೆ-ತಾಯಿ ಭಾರತೀಯ ಮೂಲದವರು. ಪಂಜಾಬ್‌ನ ಅಮೃತ್‌ಸರದ ಸಿಖ್‌ ಕುಟುಂಬದವರಾದ ಇವರು ಅನೇಕ ವರ್ಷಗಳ ಹಿಂದೆ ಕೆಲಡಾಕ್ಕೆ ವಲಸೆ ಹೋಗಿ ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು. ವಿಶೇಷ ಎಂದರೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಸ್ಪರ್ಧಿಸಿದ್ದರು. ಆದರೆ ಇತ್ತೀಚೆಗೆ ರೇಸ್‌ನಿಂದ ಹೊರಗೆ ಬಂದು ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Sedition Case Mandya
ಮಂಡ್ಯ10 mins ago

Sedition Case : ಪಾಕಿಸ್ತಾನ್‌ ಮುರ್ದಾಬಾದ್‌ ಬದಲು ಜಿಂದಾಬಾದ್‌ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!

Couple
ದೇಶ41 mins ago

ಹೆಣ್ಣುಮಕ್ಕಳನ್ನು ‘ಡಾರ್ಲಿಂಗ್‌’ ಎಂದು ಕರೆಯುವುದೂ ಇನ್ನು ಲೈಂಗಿಕ ಕಿರುಕುಳ; ಹುಡುಗರೇ ಹುಷಾರ್!

china military
ವಿದೇಶ43 mins ago

ಮಾಲ್ಡೀವ್ಸ್‌ಗೆ ಉಚಿತ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಚೀನಾ ಸಹಿ

Rameshwarm Cafe
ಪ್ರಮುಖ ಸುದ್ದಿ45 mins ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ

NIA Raid
ಕರ್ನಾಟಕ48 mins ago

NIA Raid: ಬೆಂಗಳೂರು ಜೈಲಿನಲ್ಲಿ ಉಗ್ರ ದಾಳಿಗೆ ಸ್ಕೆಚ್; 7 ರಾಜ್ಯಗಳಲ್ಲಿ ಎನ್‌ಐಎ ದಾಳಿ

Missile Attack
ವಿದೇಶ1 hour ago

Missile Attack: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು

Raja Marga Column Beena das2
ಸ್ಫೂರ್ತಿ ಕತೆ3 hours ago

Raja Marga Column : ಕ್ರಾಂತಿ ಸಿಂಹಿಣಿ ಬೀನಾ ದಾಸ್! ಅನಾಥ ಶವದ ಪರ್ಸಲ್ಲಿತ್ತು ಸುಭಾಸ್ ಚಿತ್ರ!

Best Ways To Clean Fruits
ಆಹಾರ/ಅಡುಗೆ4 hours ago

Best Ways To Clean Fruits: ಹಣ್ಣುಗಳನ್ನು ತಿನ್ನುವ ಮೊದಲು ನೀವು ಈ ವಿಧಾನದಲ್ಲಿ ತೊಳೆದುಕೊಂಡಿದ್ದೀರಾ?

Sunny weather across the karnataka
ಮಳೆ4 hours ago

Karnataka Weather: ರಾಜ್ಯಾದ್ಯಂತ ಇಂದು ಬಿಸಿಲಿನ ವಾತಾವರಣ

Supreme Court On Udhayanidhi Stalin
ದೇಶ5 hours ago

ವಿಸ್ತಾರ ಸಂಪಾದಕೀಯ: ‘ಅಧರ್ಮ’ ಹೇಳಿಕೆಯ ಸ್ಟಾಲಿನ್‌ಗೆ ಸುಪ್ರೀಂ ಚಾಟಿ; ಇನ್ನಾದರೂ ಬುದ್ಧಿ ಬರಲಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ17 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ21 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌