ವಿದೇಶ
Rangoli Record : 26,000 ಐಸ್‌ಕ್ರೀಮ್ ಕಡ್ಡಿ ಬಳಸಿ ರಂಗೋಲಿ; ಸಿಂಗಾಪುರ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ
ಸಿಂಗಾಪುರದಲ್ಲಿರುವ ಭಾರತೀಯ ಅಮ್ಮ ಮಗಳ ಜೋಡಿಯೊಂದು 26,000 ಐಸ್‌ಕ್ರೀಂ ಕಡ್ಡಿಗಳಿಂದ ರಂಗೋಲಿ ಬರೆದು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ (Rangoli Record) ದಾಖಲೆ ಬರೆದಿದ್ದಾರೆ.
ಸಿಂಗಾಪುರ: ಸಿಂಗಾಪುರದಲ್ಲಿ ಭಾರತೀಯ ಕುಟುಂಬವೊಂದು ರಂಗೋಲಿ ಮೂಲಕವೇ ಸಿಂಗಾಪುರ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ (Rangoli Record) ಹೆಸರು ಬರೆದಿದೆ. ಕಸವೆಂದು ಎಸೆಯುವ ಐಸ್‌ಕ್ರೀಂ ಕಡ್ಡಿಗಳನ್ನೇ ಬಳಸಿಕೊಂಡು ಅಮ್ಮ-ಮಗಳು ರಂಗೋಲಿ ತಯಾರಿಸಿದ್ದು, ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸುಧಾ ರವಿ ಮತ್ತು ಅವರ ಮಗಳು ರಕ್ಷಿತ ಈ ರೀತಿಯ ದಾಖಲೆ ಬರೆದವರು. ಸಿಂಗಾಪುರದಲ್ಲಿ ಭಾರತೀಯ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪೊಂಗಲ್ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ಜೋಡಿ ಆರು ಮೀಟರ್ ಅಗಲ ಹಾಗೂ ಆರು ಮೀಟರ್ ಉದ್ದದಷ್ಟು ದೊಡ್ಡ ರಂಗೋಲಿ ಬರೆದಿದ್ದಾರೆ. ಬರೋಬ್ಬರಿ 26,000 ಐಸ್‌ಕ್ರೀಂ ಕಡ್ಡಿಗಳನ್ನು ಬಳಸಿಕೊಂಡು ಈ ರಂಗೋಲಿ ಬರೆಯಲಾಗಿದೆ. ತಮಿಳಿನ ಪ್ರಸಿದ್ಧ ಸಾಹಿತಿಗಳಾದ ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಚಿತ್ರಗಳನ್ನೇ ಈ ರಂಗೋಲಿಯಲ್ಲಿ ಬರೆಯಲಾಗಿದೆ. ಈ ರಂಗೋಲಿ ಬರೆಯುವುದಕ್ಕೆ ಅಮ್ಮ ಮಗಳಿಗೆ ಒಟ್ಟು ಒಂದು ತಿಂಗಳ ಸಮಯ ಬೇಕಾಗಿದೆ.
ಇದನ್ನೂ ಓದಿ: Rishab Shetty | ರಂಗೋಲಿಯಲ್ಲಿ ಅರಳಿದ ಕಾಂತಾರ; ಪಂಜುರ್ಲಿ ವೇಷ ಕಟ್ಟಿರುವ ರಿಷಬ್ ಶೆಟ್ಟಿ
ಈ ರಂಗೋಲಿ ಬರೆದಿದ್ದ ಜೋಡಿ ಕಾರ್ಯಕ್ರಮಕ್ಕೆ ಬಂದಿದ್ದವರನ್ನು ತಮ್ಮತ್ತ ಸೆಳೆಯಲೆಂದು ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಕಾವ್ಯಗಳ ಸಂಗೀತ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದೆ. ಅದ್ಭುತವಾದ ಕಲೆಯನ್ನು ನೆಲದ ಮೇಲೆ ರೂಪಿಸಿದ ಈ ಜೋಡಿಯ ಹೆಸರು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.
ಅಂದ ಹಾಗೆ ಸುಧಾ ರವಿ ಅವರು ಈ ರೀತಿ ರಂಗೋಲಿ ಮೂಲಕ ಗಮನ ಸೆಳೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ, 2016ರಲ್ಲಿ ಸುಧಾ ಅವರು 3,200 ಚದರ ಅಡಿಯಷ್ಟು ದೊಡ್ಡ ರಂಗೋಲಿಯನ್ನು ಬರೆಯುವ ಮೂಲಕ ದಾಖಲೆ ಬರೆದಿದ್ದರು.
ಪ್ರಮುಖ ಸುದ್ದಿ
Conversion In Pakistan: ಪಾಕ್‌ನಲ್ಲಿ 81 ಹಿಂದು ಹೆಣ್ಣುಮಕ್ಕಳ ಮತಾಂತರ; ಸಂಘಟನೆಗಳಿಂದ ಪ್ರತಿಭಟನೆ
Conversion In Pakistan: ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ಮೂಲಭೂತವಾದಿಗಳ ದೌರ್ಜನ್ಯವು ಎಗ್ಗಿಲ್ಲದೆ ನಡೆಯುತ್ತಿದೆ. ಬಾಲಕಿಯರು ಸೇರಿ ಹಿಂದು ಹೆಣ್ಣುಮಕ್ಕಳ ಮತಾಂತರ ಖಂಡಿಸಿ ಹಿಂದುಗಳು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದಶಕಗಳಿಂದಲೂ ದೌರ್ಜನ್ಯ ನಡೆಯುತ್ತಿದೆ. ಹಿಂದುಗಳ ಮೇಲೆ ಹಲ್ಲೆ, ದೇವಸ್ಥಾನಗಳ ಮೇಲೆ ದಾಳಿ, ಹಿಂದು ಬಾಲಕಿಯರ ಮೇಲೆ ಅತ್ಯಾಚಾರ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ, ಅನಾಚಾರ ನಡೆಯುತ್ತದೆ. ಕ್ರೈಸ್ತರು ಹಾಗೂ ಸಿಖ್ಖರ ಮೇಲೂ ಇಂತಹ ದಾಳಿಗಳು ನಡೆಯುತ್ತಿವೆ. ಅದರಲ್ಲೂ, ಹಿಂದು ಬಾಲಕಿಯರನ್ನು ಬಲವಂತವಾಗಿ ಇಸ್ಲಾಂಗೆ (Conversion In Pakistan) ಮತಾಂತರಗೊಳಿಸುವ ಅನಿಷ್ಟ ಪದ್ಧತಿ ಮುಂದುವರಿದಿದ್ದು, ಇದನ್ನು ಖಂಡಿಸಿ ಹಿಂದುಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಬಲವಂತದ ಮತಾಂತರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾಚಿ ಪ್ರೆಸ್ ಕ್ಲಬ್ ಮುಂಭಾಗದಲ್ಲಿ ಹಾಗೂ ಸಿಂಧ್ ಅಸೆಂಬ್ಲಿ ಕಟ್ಟಡದ ಎದುರು ಮಾರ್ಚ್ 30ರಂದು ಹಿಂದುಗಳು, ಹಿಂದು ಸಂಘಟನೆಯಾದ ಪಾಕಿಸ್ತಾನ ದಾರಾವರ್ ಇತ್ತೇಹಾದ್ (PDI) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರಾಗಿರುವ ಹಿಂದು ಬಾಲಕಿಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರಗೊಳಿಸುವುದಲ್ಲದೆ, ಮದುವೆಯಾಗುತ್ತಿರುವ ಪ್ರಕರಣಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.
“ಪಾಕಿಸ್ತಾನದಲ್ಲಿ ಸಿಂಧಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಅದರಲ್ಲೂ, ಗ್ರಾಮೀಣ ಭಾಗದ ಹಿಂದು ಬಾಲಕಿಯರನ್ನು ಮತಾಂತರ ಮಾಡುತ್ತಿರುವುದು ಖಂಡನೀಯವಾಗಿದೆ. 12-13 ವರ್ಷದ ಬಾಲಕಿಯರನ್ನು ಅಪಹರಿಸಿ, ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಹಾಗೆಯೇ, ವೃದ್ಧರ ಜತೆ ಅವರ ಮದುವೆ ಮಾಡಲಾಗುತ್ತಿದೆ. ಮೂಲಭೂತವಾದಿಗಳ ಹಿಂಸಾಚಾರಕ್ಕೆ ಹಿಂದು ಬಾಲಕಿಯರು ಬಲಿಯಾಗುತ್ತಿದ್ದಾರೆ” ಎಂದು ಪಿಡಿಐ ಮುಖಂಡರೊಬ್ಬರು ಹೇಳಿದ್ದಾರೆ.
ಪ್ರತಿಭಟನೆಯ ವಿಡಿಯೊ ಇಲ್ಲಿದೆ
ನೂರಾರು ಪೊಲೀಸರ ನಿಯೋಜನೆ ಮಧ್ಯೆಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಹಿಂದು ಬಾಲಕಿಯರು ಹಾಗೂ ಮಹಿಳೆಯರ ಮತಾಂತರವನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು. ಹಿಂದು ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಒದಗಿಸಬೇಕು. ಸಿಂಧ್ ಪ್ರಾಂತ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
81 ಹೆಣ್ಣುಮಕ್ಕಳ ಮತಾಂತರ
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮತಾಂತರದ ಕುರಿತು ಮಾನವ ಹಕ್ಕುಗಳ ಮೇಲೆ ನಿಗಾ ಇರಿಸುವ ಸಂಸ್ಥೆಯೊಂದು ವರದಿ ಬಿಡುಗಡೆ ಮಾಡಿದ್ದು, 2022ರಲ್ಲಿ ಪಾಕಿಸ್ತಾನದಲ್ಲಿ 81 ಬಾಲಕಿಯರು ಹಾಗೂ ಹೆಣ್ಣುಮಕ್ಕಳನ್ನು ಮತಾಂತರಗೊಳಿಸಲಾಗಿದೆ ಎಂದು ತಿಳಿಸಿದೆ. ಇವರಲ್ಲಿ ಶೇ.23ರಷ್ಟು ಹೆಣ್ಣುಮಕ್ಕಳು 14ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗೆಯೇ, ಶೇ.36ರಷ್ಟು ಹೆಣ್ಣುಮಕ್ಕಳು 14-18 ವರ್ಷದವರಾಗಿದ್ದಾರೆ ಎಂದು ವರದಿ ನೀಡಿದೆ. ಪಾಕಿಸ್ತಾನದಲ್ಲಿ 75 ಲಕ್ಷ ಹಿಂದುಗಳು ವಾಸಿಸುತ್ತಿದ್ದಾರೆ. ನೆರೆ ರಾಷ್ಟ್ರದಲ್ಲಿ ಶೇ.96ರಷ್ಟು ಜನ ಮುಸ್ಲಿಮರಾಗಿದ್ದು, ಹಿಂದುಗಳ ಪ್ರಮಾಣ ಶೇ.2.1ರಷ್ಟಿದೆ. ಶೇ.1.6ರಷ್ಟಿರುವ ಕ್ರೈಸ್ತರು ಕೂಡ ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ಇವರ ಮೇಲೂ ದೌರ್ಜನ್ಯಗಳು ಸಾಮಾನ್ಯ ಎಂಬಂತಾಗಿದೆ. ಇವರಿಗಿಂತ ಕಡಿಮೆ ಇರುವ ಸಿಖ್ಖರ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್ರೇಪ್ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು
ತಂತ್ರಜ್ಞಾನ
Viral News : ಚಾಟ್‌ಜಿಪಿಟಿ ಬಗ್ಗೆ ಪಾಠ ಮಾಡಿ ಮೂರೇ ತಿಂಗಳಲ್ಲಿ 28 ಲಕ್ಷ ರೂ. ದುಡಿದ!
ಜಾಟ್‌ಜಿಪಿಟಿ ಬಗ್ಗೆ ಅರ್ಥ ಮಾಡಿಸುವುದಕ್ಕೆ, ಅದನ್ನು ಕಲಿಸುವುದಕ್ಕೆಂದೇ ಯವಕನೊಬ್ಬ ಕೋರ್ಸ್ ನಡೆಸುತ್ತಿದ್ದಾನೆ. ಅದರಿಂದ ಆತನಿಗೆ ಮೂರೇ ತಿಂಗಳಲ್ಲಿ 28 ಲಕ್ಷ ರೂ. ಲಾಭ ಬಂದಿರುವುದಾಗಿಯೂ (Viral News) ವರದಿಯಾಗಿದೆ.
ಬೆಂಗಳೂರು: ಚಾಟ್‌ಜಿಪಿಟಿ (ChatGPT) ಬಗ್ಗೆ ಇತ್ತೀಚಿನ ದಿನಗಳಲ್ಲಿ ನೀವು ಕೇಳಿರುತ್ತೀರಿ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ(ಎಐ) ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ತಾಂತ್ರಿಕ ಕ್ಷೇತ್ರದಲ್ಲಿ ಸಮಸ್ಯೆ ಉಂಟು ಮಾಡಬಹುದು ಎನ್ನಲಾಗಿದ್ದ ಈ ಎಐ ಇದೀಗ ಯುವಕನೊಬ್ಬನಿಗೆ ಬದುಕನ್ನೂ ಕಟ್ಟಿಕೊಟ್ಟಿದೆ. ಈ ಎಐ ಅನ್ನೇ ನಂಬಿಕೊಂಡು ಯುವಕನೊಬ್ಬ ಕೇವಲ ಮೂರು ತಿಂಗಳುಗಳಲ್ಲಿ ಬರೋಬ್ಬರಿ 28 ಲಕ್ಷ ರೂ. ಲಾಭ (Viral News) ಗಳಿಸಿಕೊಂಡಿದ್ದಾನೆ.
ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಲ್ಯಾನ್ಸ್ ಜಂಕ್(23) ಹೆಸರಿನ ವ್ಯಕ್ತಿ ಚಾಟ್‌ಜಿಪಿಟಿಯನ್ನೇ ತನ್ನ ಆದಾಯ ಮೂಲವಾಗಿಸಿಕೊಂಡಿದ್ದಾರೆ. ಚಾಟ್‌ಜಿಪಿಟಿಯನ್ನು ಹಲವರು ಸರಾಗವಾಗಿ ಬಳಕೆ ಮಾಡುತ್ತಿದ್ದರೆ, ಇನ್ನೂ ಹಲವರು ಬಳಸಲಾಗದೆ ಒದ್ದಾಡುತ್ತಿದ್ದದ್ದನ್ನು ಲ್ಯಾನ್ಸ್ ಗಮನಿಸಿದ್ದಾರೆ. ಅದಕ್ಕಾಗಿ ಜನರಿಗೆ ಚಾಟ್‌ಜಿಪಿಟಿ ಬಗ್ಗೆ ತಿಳಿಸುವುದಕ್ಕೆಂದೇ ಉಡೆಮಿ ಆಪ್‌ನಲ್ಲಿ ಕೋರ್ಸ್ ಒಂದನ್ನು ಆರಂಭಿಸಿದ್ದಾರೆ. “ಚಾಟ್‌ಜಿಪಿಟಿ ಮಾಸ್ಟರ್‌ಕ್ಲಾಸ್: ಎ ಕಂಪ್ಲೀಟ್ ಚಾಟ್‌ಜಿಪಿಟಿ ಗೈಡ್ ಫಾರ್ ಬಿಗಿನರ್ಸ್” ಹೆಸರಿನಲ್ಲಿ ಕೋರ್ಸ್ ಆರಂಭಿಸಿದ್ದು, ಕೋರ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 15,000 ಮಂದಿ ಕೋರ್ಸ್ ಸೇರಿಕೊಂಡಿದ್ದಾರೆ. ಅದರಿಂದಾಗಿ ಒಟ್ಟಾರೆಯಾಗಿ 35,000 ಡಾಲರ್ ಅಂದರೆ 28 ಲಕ್ಷ ರೂ. ಲಾಭವನ್ನೂ ಗಳಿಸಿದ್ದಾರೆ.
“ಜನರು ಚಾಟ್‌ಜಿಪಿಟಿ ಬಗ್ಗೆ ಭಯ ಪಟ್ಟಿರುವುದು ನನಗೆ ಗೊತ್ತಾಯಿತು. ಆ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ನಾನು ಮಾಡಿದೆ. ನಾನೇನು ಚಾಟ್‌ಜಿಪಿಟಿ ಬಗ್ಗೆ ಬೇರೆ ಕಡೆ ತರಬೇತಿ ಪಡೆದಿಲ್ಲ. ನಾನಾಗೇ ನಾನು ಪ್ರಯತ್ನಗಳನ್ನು ಮಾಡಿ ಅನುಭವ ಪಡೆದೆ” ಎಂದು ಹೇಳಿದ್ದಾರೆ ಲ್ಯಾನ್ಸ್.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಜಂಕ್ ಒಟ್ಟಾರೆಯಾಗಿ ಏಳು ಗಂಟೆಗಳ ಕೋರ್ಸ್ ಅನ್ನು ಕೊಡುತ್ತಿದ್ದಾರೆ. ಅದಕ್ಕೆಂದೇ ಒಟ್ಟು 50 ತಜ್ಞರಿಂದ ವಿಡಿಯೊಗಳನ್ನು ಮಾಡಿಸಿಕೊಂಡಿದ್ದಾರೆ. ಆ ವಿಡಿಯೊಗಳನ್ನು ಮಾಡುವುದಕ್ಕೆಂದೇ ಜಂಕ್ ಅವರಿಗೆ ಮೂರು ವಾರಗಳು ತಗುಲಿವೆ. ಒಬ್ಬ ವಿದ್ಯಾರ್ಥಿಗೆ 20 ಡಾಲರ್‌ನಂತೆ ಶುಲ್ಕ ವಿಧಿಸಲಾಗುತ್ತಿದೆ. ಅಮೆರಿಕ, ಭಾರತ, ಜಪಾನ್, ಕೆನಡಾ ಸೇರಿ ಹಲವಾರು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಈ ಕೋರ್ಸ್ ಸೇರಿಕೊಂಡಿರುವುದಾಗಿ ಹೇಳಲಾಗಿದೆ.
ವಿದೇಶ
Donald Trump : ರಹಸ್ಯ ಮುಚ್ಚಿಡುವುದಕ್ಕೆ ಪೋರ್ನ್ ಸ್ಟಾರ್‌ಗೆ ಹಣ ಸುರಿದಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಲೈಂಗಿಕ ಹಗರಣ ಮುಚ್ಚಿ ಹಾಕುವುದಕ್ಕೆಂದು ಪೋರ್ನ್ ಸ್ಟಾರ್‌ಗೆ ಭಾರೀ ಹಣ ನೀಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಯಾವಾಗಲೂ ಸುದ್ದಿಯಲ್ಲಿರುವಂತಹ ವ್ಯಕ್ತಿ. ಇದೀಗ ಅವರ ಬಗ್ಗೆ ದೊಡ್ಡ ಆರೋಪವೊಂದು ಕೇಳಿಬಂದಿದೆ. ತಮ್ಮ ಲೈಂಗಿಕ ಸಂಬಂಧವನ್ನು ಮುಚ್ಚಿಡುವುದಕ್ಕೆಂದು ಟ್ರಂಪ್ ಪೋರ್ನ್ ಸ್ಟಾರ್ ಒಬ್ಬರಿಗೆ ಭಾರೀ ಹಣ ಕೊಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಈ ಬಗ್ಗೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯೆಲ್ ಅವರೇ ಆರೋಪ ಮಾಡಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಗೂ ಮೊದಲು ಟ್ರಂಪ್ ಅವರು ತಮ್ಮ ಹಗರಣವನ್ನು ಮುಚ್ಚಿಡುವುದಕ್ಕೆಂದು ನನಗೆ ಹಣ ನೀಡಿದ್ದರು ಎಂದು ಆಕೆ ಹೇಳಿಕೊಂಡಿದ್ದಾರೆ. ಸ್ಟೆಫೈನ್ ಗ್ರೆಗೊರಿ ಕ್ಲಿಫೋರ್ಡ್ ಎನ್ನುವ ಅಧಿಕೃತ ಹೆಸರಿರುವ ಈ ನಟಿ 2006ರಲ್ಲಿ ಟ್ರಂಪ್ ಅವರನ್ನು ಗೋಲ್ಫ್ ಟೂರ್ನಮೆಂಟ್‌ನಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಟ್ರಂಪ್ ಅವರೊಂದಗಿನ ಲೈಂಗಿಕ ಸಂಬಂಧ ಅತ್ಯಂತ ಕೆಟ್ಟದರಲ್ಲಿ ಒಂದಾಗಿತ್ತು ಎಂದು ಆಕೆ ಹೇಳಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಸುದ್ದಿ ಮಾಡದಿರುವಂತೆ ಮುಚ್ಚಿ ಹಾಕುವುದಕ್ಕೆ ಟ್ರಂಪ್ ಹಣ ಕೊಟ್ಟಿದ್ದರು ಎಂದು ಆಕೆ ಹೇಳಿದ್ದಾರೆ. ಟ್ರಂಪ್ ಅವರ ವಕೀಲರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದು, ಟ್ರಂಪ್ ಅವರು ಸ್ಟಾರ್ಮಿ ಅವರಿಗೆ ಕೊಡುವುದಕ್ಕೆಂದು 1,30,000 ಡಾಲರ್ ವ್ಯವಸ್ಥೆ ಮಾಡಿಸಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಸ್ಟಾರ್ಮಿ ಅವರು ಹೈ ಸ್ಕೂಲ್‌ನಲ್ಲಿಯೇ ಸ್ಟ್ರಿಪ್ ಕ್ಲಬ್‌ನಲ್ಲಿ ಕೆಲಸ ಆರಂಭಿಸಿದವರು. ನಾಲ್ಕು ಮದುವೆ ಆಗಿರುವ ಅವರಿಗೆ ಒಬ್ಬಳು ಮಗಳಿದ್ದಾಳೆ. ಅವರು ಕೊನೆಯದಾಗಿ ಕಳೆದ ವರ್ಷ ಪೋರ್ನ್ ಸ್ಟಾರ್ ಬ್ಯಾರೆಟ್ ಬ್ಲೇಡ್ ಅವರನ್ನು ಮದುವೆಯಾದರು.
ದೇಶ
Amit Kshatriya: ಚಂದ್ರನಿಂದ ಮಂಗಳನ ಅಂಗಳಕ್ಕೆ ನಾಸಾ ಯೋಜನೆ; ಭಾರತ ಮೂಲದ ಅಮಿತ್ ಮುಖ್ಯಸ್ಥ
Amit Kshatriya: ಭಾರತ ಮೂಲದವರಾದ ಅಮಿತ್ ಕ್ಷತ್ರಿಯ ಅವರು ನಾಸಾದ ಚಂದ್ರನಿಂದ ಮಂಗಳನ ಅಂಗಳಕ್ಕೆ ಗಗನಯಾನ ಯೋಜನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅವರು ಇಡೀ ಯೋಜನೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ವಾಷಿಂಗ್ಟನ್: ಚಂದ್ರನ ಅಂಗಳದಿಂದ ಮಂಗಳನ ಅಂಗಳಕ್ಕೆ ಮಾನವಸಹಿತ ಗಗನಯಾನ ಕೈಗೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ರೂಪಿಸಿರುವ ಯೋಜನೆಯ (Moon to Mars Programme) ಮುಖ್ಯಸ್ಥರಾಗಿ ಭಾರತ ಮೂಲದ ಸಾಫ್ಟ್‌ವೇರ್ ಹಾಗೂ ರೋಬೊಟಿಕ್ ಎಂಜಿನಿಯರ್ ಅಮಿತ್ ಕ್ಷತ್ರಿಯ (Amit Kshatriya) ನೇಮಕಗೊಂಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಿತ್ ಕ್ಷತ್ರಿಯ ಅವರನ್ನು ನೇಮಿಸಿ ನಾಸಾ ಆದೇಶ ಹೊರಡಿಸಿದೆ.
ನಾಸಾದ ಸಾಮಾನ್ಯ ಪರಿಶೋಧನೆ ವ್ಯವಸ್ಥೆಗಳ ಅಭಿವೃದ್ಧಿ ವಿಭಾಗದ ಪ್ರಭಾರ ಉಪ ಸಹಾಯಕ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಕ್ಷತ್ರಿಯ ಅವರನ್ನು ಉನ್ನತ ಹುದ್ದೆಗೆ ನೇಮಿಸಲಾಗಿದೆ. ಮನುಕುಲದ ಒಳಿತಿಗಾಗಿ ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಮೂನ್ ಟೂ ಮಾರ್ಸ್ ಯೋಜನೆಯು ಹೊಂದಿದೆ. ಹಾಗಾಗಿ, ಅಮಿತ್ ಕ್ಷತ್ರಿಯ ಅವರ ಕಾರ್ಯಕ್ಷಮತೆ, ಚಾಣಾಕ್ಷತೆಯನ್ನು ಗಮನಿಸಿ ನಾಸಾ ನೇಮಕ ಮಾಡಿದೆ ಎಂದು ತಿಳಿದುಬಂದಿದೆ. ಮಾನವ ಸಹಿತ ಗಗನಯಾನವನ್ನು ಮೊದಲು ಚಂದ್ರನ ಅಂಗಳಕ್ಕೆ ಕೈಗೊಂಡು, ಅಲ್ಲಿಯೇ ಸುದೀರ್ಘವಾಗಿ ನೆಲೆಸಿ, ಬಳಿಕ ಚಂದ್ರನ ಅಂಗಳಕ್ಕೆ ಗಗನಯಾನ ಕೈಗೊಳ್ಳುವುದು ಯೋಜನೆಯ ಗುರಿಯಾಗಿದೆ.
ಯಾರಿದು ಅಮಿತ್ ಕ್ಷತ್ರಿಯ?
ಭಾರತ ಮೂಲದ ಅಮಿತ್ ಕ್ಷತ್ರಿಯ ಅವರು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಟೆಕ್ಸಾಸ್ ವಿವಿಯಿಂದ ಗಣಿತದಲ್ಲಿ ಎಂಎ ಪದವಿ ಗಳಿಸಿದ್ದಾರೆ. ಭಾರತ ಮೂಲದ ದಂಪತಿಗೆ ಜನಿಸಿರುವ ಅಮಿತ್ ಕ್ಷತ್ರಿಯ, 2003ರಲ್ಲಿ ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ, ರೋಬೊಟಿಕ್ಸ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. 2014ರಿಂದ 2017ರ ಅವಧಿಯಲ್ಲಿ ಸ್ಪೇಸ್ ಸ್ಟೇಷನ್‌ನ ಫ್ಲೈಟ್ ಡೈರೆಕ್ಟರ್ ಆಗಿ, 2017ರಿಂದ 2021ರವರೆಗೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನ ಡೆಪ್ಯುಟಿ, ಕಾರ್ಯಕಾರಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಅವರಿಗೆ ನಾಸಾ ಯೋಜನೆಯ ಮಹೋನ್ನತ ಉದ್ದೆ ಲಭಿಸಿದೆ.
ಭಾರತ ಮೂಲದವರೇ ಚೀಫ್ ಟೆಕ್ನಾಲಜಿಸ್ಟ್
ಕೆಲ ತಿಂಗಳ ಹಿಂದಷ್ಟೇ ಏರೋಸ್ಪೇಸ್ ತಜ್ಞರಾಗಿರುವ ಭಾರತ ಮೂಲದ ಎ ಸಿ ಚರಾನಿಯಾ (AC Charania) ಅವರು ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಚೀಫ್ ಟೆಕ್ನಾಲಜಿಸ್ಟ್ (NASA Chief Technologist) ಆಗಿ ನೇಮಕಗೊಂಡಿದ್ದಾರೆ. ನಾಸಾದ ಟೆಕ್ನಾಲಜಿ, ಪಾಲಿಸಿ ಮತ್ತು ಸ್ಟ್ರಾಟರ್ಜಿ ವ್ಯಾಪ್ತಿಯಲ್ಲಿ ಚರಾನಿಯಾ ಅವರು ಕೆಲಸ ಮಾಡಲಿದ್ದಾರೆಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಎಸಿ ಚರಾನಿಯಾ ಅವರು ಆರು ಮಿಷನ್ ನಿರ್ದೇಶನಾಲಯಗಳಾದ್ಯಂತ ಮಿಷನ್ ಅಗತ್ಯತೆಗಳೊಂದಿಗೆ ನಾಸಾದ ಏಜೆನ್ಸಿಯಾದ್ಯಂತ ತಂತ್ರಜ್ಞಾನ ಹೂಡಿಕೆಗಳನ್ನು ಒಟ್ಟುಗೂಡಿಸಲಿದ್ದಾರೆ. ಇತರ ಫೆಡರಲ್ ಏಜೆನ್ಸಿಗಳು, ಖಾಸಗಿ ವಲಯ ಮತ್ತು ಬಾಹ್ಯ ಮಧ್ಯಸ್ಥಗಾರರೊಂದಿಗೆ ತಂತ್ರಜ್ಞಾನ ಸಹಯೋಗದ ಮೇಲ್ವಿಚಾರಣೆ ಹೊಣೆಯನ್ನು ನಿರ್ವಹಿಸುತ್ತಾರೆ ಎಂದು ಹೇಳಿತ್ತು.
ಇದನ್ನೂ ಓದಿ: NASA Chief Technologist | ಇಂಡಿಯನ್- ಅಮೆರಿಕನ್ ಎ ಸಿ ಚರಾನಿಯಾ ಈಗ ನಾಸಾದ ಚೀಫ್ ಟೆಕ್ನಾಲಜಿಸ್ಟ್
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ20 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ10 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ11 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ13 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್