ವಿದೇಶ
Ship Fire Incident : 3000 ಹೊಸ ಕಾರುಗಳು ಭಸ್ಮ; ಘಟನೆ ನಡೆದಿದ್ದು ನೀರಿನಲ್ಲಿ!
ಜರ್ಮನಿಯಿಂದ ಈಜಿಪ್ಟ್‌ಗೆ ಮೂರು ಸಾವಿರ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸರಕು ಹಡಗಿಗೆ ನೆದರ್ಲೆಂಡ್‌ನ ಕರಾವಳಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು(Ship Fire Incident), ಭಾರತ ಮೂಲದ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾನೆ.
ನೆದರ್ಲೆಂಡ್: ಜರ್ಮನಿಯಿಂದ ಈಜಿಪ್ಟ್‌ಗೆ ಕಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸರಕು ಹಡಗಿಗೆ ನೆದರ್ಲೆಂಡ್ ಕರಾವಳಿಯಲ್ಲಿ ಬೆಂಕಿ (Ship Fire Incident) ಹತ್ತಿಕೊಂಡಿದೆ. ಇದರಿಂದಾಗಿ ಹಡಗಿನಲ್ಲಿದ್ದ ಭಾರತ ಮೂಲದ ಸಿಬ್ಬಂದಿಯೊಬ್ಬ ಸಾವನ್ನಪ್ಪಿದ್ದಾನೆ. ಉಳಿದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.
ಹಡಗಿನಲ್ಲಿ ಒಟ್ಟಾರೆಯಾಗಿ ಮೂರು ಸಾವಿರ ಕಾರುಗಳನ್ನು ಹೊತ್ತೊಯ್ಯಲಾಗುತ್ತಿತ್ತು. ಅದರಲ್ಲಿ 25 ಎಲೆಕ್ಟ್ರಿಕ್ ಕಾರುಗಳೂ ಇದ್ದು, ಅದರಲ್ಲಿ ಒಂದರಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ನೆದರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ನೀಡಿದೆ. “ಸರಕು ಹಡಗಿನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಗ್ಗೆ ದುಃಖಿತರಾಗಿದ್ದೇವೆ. ಒಬ್ಬ ಭಾರತ ಮೂಲದ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಇನ್ನೂ ಕೆಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ನಾವು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತರ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಸಹಾಯ ಮಾಡುತ್ತೇವೆ” ಎಂದು ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
ಹಡಗಿನಲ್ಲಿ ಒಟ್ಟು 23 ಸಿಬ್ಬಂದಿಯಿದ್ದು ಅದರಲ್ಲಿ ಏಳು ಸಿಬ್ಬಂದಿ ಬೆಂಕಿ ಕಂಡ ತಕ್ಷಣ ಭಯದಿಂದ ಸಮುದ್ರಕ್ಕೆ ಹಾರಿದ್ದಾರೆ. ಅವರನ್ನು ಹತ್ತಿರದಲ್ಲಿದ್ದ ಹಡಗುಗಳು ರಕ್ಷಿಸಿವೆ. ಬಾಕಿಯುಳಿದ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮುಖಾಂತರ ರಕ್ಷಣೆ ಮಾಡಲಾಗಿದೆ.
ಸದ್ಯ ಹಡಗಿನ ಬೆಂಕಿಯನ್ನು ನಂಗಿಸಲು ಎಲ್ಲ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ನೀರನ್ನು ಹಾಯಿಸಲಾಗುತ್ತಿದೆ. ಆದರೆ ಹಡಗಿಗೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಇಳಿಸುವುದು ಅಪಾಯವಾಗಿರುವುದರಿಂದ ಅಂತಹ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಂಗಿಸಲು ದಿನಗಳು ಅಥವಾ ವಾರಗಳೇ ಬೇಕಾಗಬಹುದು ಎಂದು ಹೇಳಲಾಗಿದೆ.
ಹಡಗು ಡಚ್ ದ್ವೀಪದ ಉತ್ತರಕ್ಕೆ 27 ಕಿ.ಮೀ. ದೂರದಲ್ಲಿ ಮುಳುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಅಮಲ್ಯಾಂಡ್‌ಗೆ ಸಮೀಪದಲ್ಲೇ ಮುಳುಗಲಿದೆ. ಇದು ವಿಶ್ವಾದ್ಯಂತದ ವಲಸೆ ಹಕ್ಕಿಗಳಿಗೆ ಪ್ರಮುಖವಾದ ಪ್ರದೇಶವಾಗಿದೆ.
ದೇಶ
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
UNGA Speech: 78ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಪಾಲ್ಗೊಂಡು ದೇಶದ ವಾದವನ್ನು ಮಂಡಿಸಿದರು.
ವಿಶ್ವ ಸಂಸ್ಥೆ: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು(Respect for territorial integrity), ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಷೇರಿದಂತೆ ಅನೇಕ ವಿಷಯಗಳನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ (External affairs minister S Jaishankar) ಅವರು, ಮಂಗಳವಾ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ”ನಮಸ್ತೆ, ನಾನು ಭಾರತದಿಂದ ಬಂದಿದ್ದೇನೆ(Bharat)” ಎಂದು ಮಾತು ಆರಂಭಿಸಿದ ಜೈ ಶಂಕರ್ ಅವರು, ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು. ಇದೇ ವೇಳೆ, ಪರೋಕ್ಷವಾಗಿ ಕೆನಡಾಕ್ಕೆ ಕುಟುಕಿದ ಜೈ ಶಂಕರ್ ಅವರು, ಭಯೋತ್ಪಾದನೆಯ ಪ್ರತಿಕ್ರಿಯೆಯು ರಾಜಕೀಯ ಅನುಕೂಲಕ್ಕಾಗಿ ನಿರ್ಧರಿಸಬಾರದು ಎಂದು ಹೇಳಿದರು(UNGA Speech).
ಲಸಿಕೆ ವರ್ಣಭೇದ ನೀತಿಯಂತಹ ಅನ್ಯಾಯವನ್ನು ಮರುಕಳಿಸಲು ನಾವು ಎಂದಿಗೂ ಅವಕಾಶವನ್ನು ನೀಡಬಾರದು. ಹವಾಮಾನ ಕ್ರಿಯೆಯು ಸಹ ಐತಿಹಾಸಿಕ ಜವಾಬ್ದಾರಿಗಳ ತಪ್ಪಿಸಿಕೊಳ್ಳುವಿಕೆಗೆ ಸಾಕ್ಷಿಯಾಗಲು ಸಾಧ್ಯವಿಲ್ಲ. ಆಹಾರ ಮತ್ತು ಶಕ್ತಿಯನ್ನು ಅಗತ್ಯವಿರುವವರಿಂದ ಶ್ರೀಮಂತರಿಗೆ ಸಾಗಿಸಲು ಮಾರುಕಟ್ಟೆಯ ಶಕ್ತಿಯನ್ನು ಬಳಸಬಾರದು ಎಂದು ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಹೇಳಿದರು.
ರಾಜಕೀಯ ಅನುಕೂಲವು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸೆಗೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತದೆ ಎಂದು ನಾವು ಪರಿಗಣಿಸಬಾರದು. ಅದೇ ರೀತಿ, ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಒಳ್ಳೆಯದು ಎಂದು ಭಾರತೀಯ ವಿದೇಶಾಂಗ ಸಚಿವರು ಹೇಳಿದರು.
78 ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರ ಭಾಷಣವು ಗಮನ ಸೆಳೆಯಿತು. ನ್ಯಾಯಯುತ, ಸಮಾನ ಮತ್ತು ಪ್ರಜಾಪ್ರಭುತ್ವದ ವಿಶ್ವ ಕ್ರಮಕ್ಕಾಗಿ ಕರೆ ನೀಡಿದರು. ನಮ್ಮ ಚರ್ಚೆಗಳಲ್ಲಿ, ನಾವು ಸಾಮಾನ್ಯವಾಗಿ ನಿಯಮಾಧಾರಿತ ಆದೇಶದ ಪ್ರಚಾರವನ್ನು ಪ್ರತಿಪಾದಿಸುತ್ತೇವೆ. ಕಾಲಕಾಲಕ್ಕೆ, ಯುಎನ್ ಚಾರ್ಟರ್ಗೆ ಗೌರವವನ್ನು ಸಹ ಒಳಗೊಂಡಿರುತ್ತದೆ. ಆದರೆ ಎಲ್ಲಾ ಚರ್ಚೆಗಾಗಿ, ಇನ್ನೂ ಕೆಲವು ರಾಷ್ಟ್ರಗಳು ಕಾರ್ಯಸೂಚಿಯನ್ನು ರೂಪಿಸುತ್ತವೆ ಮತ್ತು ರೂಢಿಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತವೆ. ಇದು ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್ ಮಾತು
ಮಹಿಳಾ ಮಸೂದೆ ಪ್ರಸ್ತಾಪ
ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆಯೂ ವಿದೇಶಾಂಗ ಸಚಿವರು ಮಾತನಾಡಿದರು. “ನಮ್ಮ ಇತ್ತೀಚಿನ ಸಮರ್ಥನೆಯು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಶಾಸನ ಮಾಡಿದ್ದೇವೆ. ಪ್ರಜಾಪ್ರಭುತ್ವದ ಪ್ರಾಚೀನ ಸಂಪ್ರದಾಯಗಳು ಆಳವಾದ ಆಧುನಿಕ ಬೇರುಗಳನ್ನು ಹೊಂದಿರುವ ಸಮಾಜ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಪರಿಣಾಮವಾಗಿ, ನಮ್ಮ ಆಲೋಚನೆಗಳು, ವಿಧಾನಗಳು ಮತ್ತು ಕಾರ್ಯಗಳು ಹೆಚ್ಚು ಆಧಾರವಾಗಿವೆ ಮತ್ತು ಅಧಿಕೃತವಾಗಿವೆ ಎಂದು ಸಚಿವರು ಪ್ರತಿಪಾದಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Kashmir Dispute: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಅಮೆರಿಕ ರಾಯಭಾರಿ ರಹಸ್ಯ ಭೇಟಿ! ಭಾರತಕ್ಕೆ ಶೀಘ್ರ ಸಿಗುತ್ತಾ ಸಿಹಿ ಸುದ್ದಿ?
Kashmir Dispute: ಪಾಕ್ ಆಕ್ರಮಿತ ಪ್ರದೇಶದ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಕ್ಕೆ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರಿ ಭೇಟಿ ನೀಡಿರುವ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ನವದೆಹಲಿ: ಭಾರತ-ಪಾಕಿಸ್ತಾನ (India and Pakistan) ನಡುವಿನ ಕಾಶ್ಮೀರ ವಿವಾದ (Kashmir Dispute) ಬಗೆಹರಿಸಲು ಅಮೆರಿಕ (America) ಮಧ್ಯಸ್ಥಿಕೆಗೆ ಮುಂದಾಗಿದೆಯಾ? ಇಂಥದೊಂದು ಅನುಮಾನ ಮೂಡಲು ಕಾರಣವಿದೆ. ಜಿ20 ಶೃಂಗಸಭೆ (G20 Summit) ನಡೆಯುತ್ತಿರುವಾಗಲೇ ಅಮೆರಿಕನ್ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದರೆ, ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೇವಿಡ್ ಬ್ಲೋಮ್ (David Blome) ಅವರು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಪ್ರದೇಶದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ (Gilgit-Baltistan) ರಹಸ್ಯ ಭೇಟಿ ನೀಡಿದ್ದರು. ಈ ಕಾರಣಕ್ಕಾಗಿಯೇ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti) ಅವರು ಮಾತ್ರ, ಪಾಕಿಸ್ತಾನ ಮತ್ತು ಭಾರತಗಳು ತಮ್ಮ ನಡುವಿನ ಈ ಸಮಸ್ಯೆಯವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರಿಗೆ ಪ್ರತಿಕ್ರಿಯಿಸುವುದು ನನ್ನ ಕೆಲಸವಲ್ಲ. ಆದರೆ, ಅವರು ಆಗಲೇ ಅಲ್ಲಿದ್ದರು. ಜಿ20 ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನಿಯೋಗದ ಭಾಗವವಾಗಿ ನಾವಿದ್ದೇವೆ ಎಂದು ಅಮೆರಿಕದ ರಾಯಭಾರಿ 20 ನೇ ಭಾರತ-ಅಮೆರಿಕ ಆರ್ಥಿಕ ಶೃಂಗದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಾಶ್ಮೀರ ವಿಷಯದ ಬಗ್ಗೆ ಅಮೆರಿಕದ ಹೊಂದಿರುವ ನಿಲುವನ್ನು ರಾಯಭಾರಿ ಗಾರ್ಸೆಟ್ಟಿ ಅವರು ಪುನರುಚ್ಚಾರ ಮಾಡಿದರು. ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಯ ಮೂಲಕ ಪರಿಹರಿಸಬೇಕಾದ ದ್ವಿಪಕ್ಷೀಯ ವಿಷಯವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಹರಿಸಬೇಕಾದ ಸಮಸ್ಯೆಯಾಗಿದೆ ಮತ್ತು ಅಮೆರಿಕ ಸೇರಿದಂತೆ ಮೂರನೇ ವ್ಯಕ್ತಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಎರಿಕ್ ಗಾರ್ಸೆಟ್ಟಿ ಅವರು ಹೇಳಿದರು.
ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಇತ್ತೀಚೆಗೆ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಖಾಸಗಿ ಭೇಟಿ ನೀಡಿದ್ದರು. ಈ ಘಟನೆಯೇ ಗಾರ್ಸೆಟ್ಟಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರೇರಣೆಯಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನವನ್ನು ನವದೆಹಲಿಯು, ಅವಿಭಜಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಅವಿಭಾಜ್ಯ ಅಂಗ ಎಂದು ಪರಿಗಣಿಸುತ್ತದೆ.
ಈ ಸುದ್ದಿಯನ್ನೂ ಓದಿ: G 20 Meeting: ಚೀನಾ ಮತ್ತೆ ಉದ್ಧಟತನ; ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿಕೆ, ಜಿ-20 ಸಭೆ ಬಹಿಷ್ಕಾರ
ಭೇಟಿಯ ವೇಳೆ ಪಾಕಿಸ್ತಾನದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಗಿಲ್ಗಿಟ್-ಬಾಲ್ಟಿಸ್ತಾನದ ಅನೇಕ ಮನರಂಜನೆಯ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಅವರು ಗಿಲ್ಗಿಟ್-ಬಾಲ್ಟಿಸ್ತಾನ್ ಅಸೆಂಬ್ಲಿಯ ಡೆಪ್ಯುಟಿ ಸ್ಪೀಕರ್ ಸಾದಿಯಾ ಡ್ಯಾನಿಶ್ ಮತ್ತು ಅಸೆಂಬ್ಲಿ ಸದಸ್ಯೆ ರಾಣಿ ಸನಮ್ ಫರ್ಯಾದ್ ಅವರೊಂದಿಗೆ ಸಭೆ ನಡೆಸಿದರು.
ಅಮೆರಿಕದ ರಾಜತಾಂತ್ರಿಕರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2002ರ ಅಕ್ಟೋಬರ್‌ನಲ್ಲಿ ಡೊನಾಲ್ಡ್ ಬ್ಲೋಮ್ ಅವರು ಮುಜಫರಾಬಾದ್‌ಗೆ ಭೇಟಿ ನೀಡಿ, ಪಾಕ್‌ನಿಂದ ನೇಮಕವಾಗಿರುವ ತನ್ವೀರ್ ಇಲ್ಯಾಸ್ ಅವರನ್ನು ಭೇಟಿ ಮಾಡಿದ್ದರು. 2005ರ ಭೂಕಂಪದಲ್ಲಿ ಮೃತಪಟ್ಟ ಜನರಿಗೆ ಈ ವೇಳೆ ಬ್ಲೋಮ್ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅಲ್ಲದೇ, ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯನ್ನು ದೃಢಪಡಿಸಿದ್ದರು.
ವಿದೇಶ
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
Great auction: ಮೆಗಾ ಹರಾಜೊಂದರಲ್ಲಿ(Great auction) ಅಮೆರಿಕಾದ 10,000 ಡಾಲರ್ ಮುಖ ಬೆಲೆಯ ಹಳೆಯ ನೋಟೊಂದು ದಾಖಲೆಯ ಮೊತ್ತಕ್ಕೆ ಹರಾಜಾಗಿದೆ.
ಅಮೆರಿಕಾ: ಅತೀ ಅಪರೂಪದ ಅಮೆರಿಕಾದ 10 ಸಾವಿರ ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 8 ಲಕ್ಷ ರೂ.) ಮುಖ ಬೆಲೆಯ ನೋಟೊಂದು ಹರಾಜಿನಲ್ಲಿ 480,000 ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.9 ಕೋಟಿ ರೂ.)ಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ. ಡಲ್ಲಾಸ್ ಮೂಲದ ಹರಾಜು ಕಂಪೆನಿ ಹೆರಿಟೇಜ್ ಆಕ್ಷನ್ಸ್(Heritage Auctions) ಭಾರೀ ಮೊತ್ತಕ್ಕೆ ಈ ನೋಟನ್ನು ಖರೀದಿಸಿದೆ. ಪೇಪರ್ ಮನಿ ಗ್ಯಾರಂಟಿ(PMG) ಈ ನೋಟನ್ನು ಪ್ರಮಾಣೀಕರಿಸಿದೆ.
1934ರಲ್ಲಿ ಫೆಡರಲ್ ರಿಸರ್ವ್ ಈ ನೋಟನ್ನು ವಿಶಿಷ್ಟ ಕಾಗದ ಬಳಸಿ ತಯಾರಿಸಿತ್ತು. ಈ ನೋಟಿನಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಖಜಾನೆ ಕಾರ್ಯದರ್ಶಿ ಸಾಲ್ಮನ್ ಪಿ. ಚೇಸ್ ಅವರ ಚಿತ್ರವಿದೆ. ಈ ನೋಟು ಮಹಾ ಆರ್ಥಿಕ ಹಿಂಜರಿತ ಕಾಲಕ್ಕೆ(Great Depression)ಸೇರಿದ್ದು ಎನ್ನುವುದು ವಿಶೇಷ.
ಹೆರಿಟೇಜ್ ಆಕ್ಷನ್ಸ್ ಕಂಪೆನಿಯ ಉಪಾಧ್ಯಕ್ಷ ಡಸ್ಟಿನ್ ಜಾನ್‌ಸ್ಟನ್ ಮಾತನಾಡಿ, “ದೊಡ್ಡ ಮುಖಬೆಲೆಯ ನೋಟುಗಳು ಯಾವಾಗಲೂ ಎಲ್ಲಾ ಹಂತದ ಸಂಗ್ರಾಹಕರ ಗಮನ ಸೆಳೆಯುತ್ತವೆ” ಎಂದಿದ್ದಾರೆ. ಸದ್ಯ ಈ ನೋಟು ಆಕರ್ಷಣೆಯ ಕೇಂದ್ರಬಿಂದು ಆಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
1934ರ 10,000 ಡಾಲರ್ ನೋಟು ಈ ಹಿಂದೆ 2020ರ ಸೆಪ್ಟೆಂಬರ್ ನಲ್ಲಿ 384,000 ಡಾಲರ್(ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗಿತ್ತು ಎಂದು ಹರಾಜು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಆದಾಗ್ಯೂ, ಹೆರಿಟೇಜ್ ಆಕ್ಷನ್ಸ್ ಪ್ರಕಾರ, ಹರಾಜು ಮಾಡಲಾದ ಈ ನಿರ್ದಿಷ್ಟ ನೋಟು ಎಂದಿಗೂ ಚಲಾವಣೆಯಲ್ಲಿರಲಿಲ್ಲ.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಬ್ಯಾಂಕ್‌ಗಳ ವ್ಯವಹಾರಗಳಿಗೆ ಬಳಕೆ
ಮ್ಯೂಸಿಯಂ ಆಫ್ ಅಮೆರಿಕನ್ ಫೈನಾನ್ಸ್ ಪ್ರಕಾರ, 10,000 ಡಾಲರ್ ನೋಟು, ಸಾರ್ವಜನಿಕವಾಗಿ ಚಲಾವಣೆಯಾದ ಅತಿ ಹೆಚ್ಚು ಮೌಲ್ಯದ ಯುಎಸ್ ಕರೆನ್ಸಿಯಾಗಿದೆ. ವುಡ್ರೊ ವಿಲ್ಸನ್ ಅವರ ಭಾವಚಿತ್ರವನ್ನು ಹೊಂದಿರುವ 100,000 ಡಾಲರ್ ನೋಟು ಅನ್ನು ಮುದ್ರಿಸಲಾಗಿದ್ದರೂ, ಇದು ದೈನಂದಿನ ವಹಿವಾಟುಗಳಲ್ಲಿ ಬಳಸುವ ಬದಲು ಫೆಡರಲ್ ರಿಸರ್ವ್ ಬ್ಯಾಂಕ್‌ಗಳ ನಡುವೆ ಹಣವನ್ನು ವರ್ಗಾಯಿಸುವ ಉದ್ದೇಶ ಹೊಂದಿತ್ತು. 100 ಡಾಲರ್ ನೋಟು 1969ರಿಂದೀಚೆಗೆ ಅಮೆರಿಕದಲ್ಲಿ ಮುದ್ರಿಸಲಾದ ಅತಿ ದೊಡ್ಡ ನೋಟು ಎನಿಸಿಕೊಂಡಿದೆ. ಬಳಕೆಯ ಕೊರತೆಯಿಂದಾಗಿ 1969ರಲ್ಲಿ 500 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಮುದ್ರಣಗಳನ್ನು ನಿಲ್ಲಿಸಲಾಗಿತ್ತು.
ಭಾರೀ ಮೊತ್ತಕ್ಕೆ ಮಾರಾಟವಾದ ಚಿನ್ನದ ನಾಣ್ಯ
ಇದೇ ವೇಳೆ ಅಪರೂಪದ 1899ರ 20 ಡಾಲರ್ ಚಿನ್ನದ ನಾಣ್ಯ ಗುರುವಾರ ನಡೆದ ಹರಾಜಿನಲ್ಲಿ ಇದು 468,000 ( ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3.89 ಕೋಟಿ ರೂ.) ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ರೀತಿಯ 84 ನಾಣ್ಯಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಕೇವಲ 30 ನಾಣ್ಯಗಳು ಮಾತ್ರ ಇನ್ನೂ ಚಲಾವಣೆಯಲ್ಲಿವೆ ಎಂದು ಹರಾಜು ಸಂಸ್ಥೆ ತಿಳಿಸಿದೆ.
ಗ್ಯಾಜೆಟ್ಸ್
ChatGPT: ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ
ChatGPT: ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಚಾಟ್‌ಜಿಪಿಟಿ ಹೊಸ ಸಾಧ್ಯತೆಯನ್ನು ಕಂಡುಕೊಂಡಿದೆ. ಬಳಕೆದಾರರು ಈಗ ಚಾಟ್‌ಜಿಪಿಟಿಯೊಂದಿಗೆ ಧ್ವನಿ ಮೂಲಕ ಸಂಭಾಷಣೆಯನ್ನು ನಡೆಸಬಹುದು.
ನವದೆಹಲಿ: ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್ಎಐ (OpenAI) ತನ್ನ ಜನರೇಟಿವ್ ಕೃತಕ ಬುದ್ಧಿಮತ್ತೆ (Generative AI) ಆಧರಿತ ಚಾಟ್‌ಬಾಟ್ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಿದೆ. ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಿರುವ ಚಾಟ್ ಜಿಪಿಟಿ, ಬಳಕೆದಾರರಿಗೆ ಐದು ವಿಭಿನ್ನ ಧ್ವನಿಗಳಲ್ಲಿ ಉತ್ತರಗಳನ್ನು ನೀಡಲು ಮತ್ತು ಅವರು ಸಲ್ಲಿಸುವ ಚಿತ್ರಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ ಎಂದು ಕಂಪನಿಯು ಹೇಳಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿರುವ ಓಪನ್ಎಐ, ಚಾಟ್‌ಜಿಪಿಟಿ ಈಗ ನೋಡುತ್ತದೆ, ಕೇಳುತ್ತದೆ ಮತ್ತು ಮಾತನಾಡುತ್ತದೆ. ಮುಂದಿನ ಎರಡು ವಾರಗಳಲ್ಲಿ ಪ್ಲಸ್ ಬಳಕೆದಾರರು ಚಾಟ್‌ಜಿಪಿಟಿ ಜತೆ ಇಮೇಜ್ ಸಂಭಾಷಣೆ ಜತೆಗೆ ಧ್ವನಿ ಸಂಭಾಷಣೆ ಕೂಡ ನಡೆಸಬಹುದು ಎಂದು ಹೇಳಿದೆ.
Use your voice to engage in a back-and-forth conversation with ChatGPT. Speak with it on the go, request a bedtime story, or settle a dinner table debate.
— OpenAI (@OpenAI) September 25, 2023
Sound on 🔊 pic.twitter.com/3tuWzX0wtS
ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳು ನಿಮಗೆ ಧ್ವನಿ ಸಂಭಾಷಣೆ ನಡೆಸಲು ಅಥವಾ ಚಾಟ್‌ಜಿಪಿಟಿಗೆ ನೀವು ಏನು ಮಾತನಾಡುತ್ತಿರುವಿರಿ ಎಂಬುದನ್ನು ತೋರಿಸಲು ಅನುಮತಿಸುವ ಮೂಲಕ ಹೊಸ, ಹೆಚ್ಚು ಅರ್ಥಗರ್ಭಿತ ಇಂಟರ್ಫೇಸ್ ಅನ್ನು ಒದಗಿಸುತ್ತವೆ ಎಂದು ಸ್ಯಾಮ್ ಆಲ್ಟ್‌ಮ್ಯಾನ್ ನೇತೃತ್ವದ ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಈ ಸುದ್ದಿಯನ್ನೂ ಓದಿ: ChatGPT: 3 ವರ್ಷವಾದ್ರೂ 17 ವೈದ್ಯರಿಗೆ ಗೊತ್ತಾಗದ ಬಾಲಕನ ಹಲ್ಲು ನೋವಿನ ಕಾರಣ ಪತ್ತೆ ಹಚ್ಚಿದ ಚಾಟ್‌ಜಿಪಿಟಿ!
ಐದು ವಿಭಿನ್ನ ಧ್ವನಿಗಳಲ್ಲಿ ಚಾಟ್‌ಜಾಪಿಟಿಯು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಧ್ವನಿಯನ್ನು ಆಯ್ಕೆ ಮಾಡಬಹುದಾಗಿದೆ. ಪ್ರತಿ ವಿಭಿನ್ನ ಧ್ವನಿಯನ್ನು ರಚಿಸಲು ವೃತ್ತಿಪರ ಧ್ವನಿ ನಟರ ಸಹಾಯವನ್ನು ಪಡೆದಿದೆ. ಹಾಗೆಯೇ ಮಾತನಾಡುವ ಪದಗಳನ್ನು ಪಠ್ಯಕ್ಕೆ ನಕಲಿಸಲು ಕಂಪನಿಯ ಸ್ವಾಮ್ಯದ ವಿಸ್ಪರ್ ಸ್ಪೀಚ್ ಗುರುತಿಸುವಿಕೆ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಓಪನ್ ಎಐ ಹೇಳಿದೆ.
ಚಾಟ್‌ಜಿಪಿಟಿಯ ಹೊಸ ಧ್ವನಿ ಸಾಮರ್ಥ್ಯಗಳು ಹೊಸ ಪಠ್ಯದಿಂದ ಭಾಷಣದ ಮಾದರಿಯಿಂದ ಚಾಲಿತವಾಗಿದೆ. ಓಪನ್ಎಐ ಹೇಳಿಕೊಳ್ಳುವ ಪ್ರಕಾರ, ಪಠ್ಯ ಮತ್ತು ಕೆಲವು ಸೆಕೆಂಡುಗಳ ಮಾತಿನ ಮಾದರಿಗಳಿಂದ ಮಾನವ ತರಹದ ಆಡಿಯೊವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ತಾಂತ್ರಿಕ ವ್ಯವಸ್ಥೆಯು ಇದು ಅನೇಕ “ಸೃಜನಶೀಲ ಮತ್ತು ಪ್ರವೇಶಿಸುವಿಕೆ-ಕೇಂದ್ರಿತ ಅಪ್ಲಿಕೇಶನ್‌ಗಳಿಗೆ” ಬಾಗಿಲು ತೆರೆಯಲಿದೆ ಎಂದು ಓಪನ್ಎಐ ಅಭಿಪ್ರಾಯಪಟ್ಟಿದೆ.
-
Live News22 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ13 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ5 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema15 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ16 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್12 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ12 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್16 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ