ವಿದೇಶ
Man Of Wives | 15 ಹೆಂಡತಿಯರ ಮುದ್ದಿನ ಗಂಡ, 107 ಮಕ್ಕಳ ಪ್ರೀತಿಯ ಅಪ್ಪ ಈ ಭೂಪ!
ಮನೆಯಲ್ಲಿ ಮೊದಲಿನಂತೆ ಹತ್ತಿಪ್ಪತ್ತು ಜನ ಬಿಡಿ, ಗಂಡ-ಹೆಂಡತಿ ಒಟ್ಟಿಗೆ ಇರಲು ಹರಸಾಹಸ ಪಡುವ ಕಾಲಘಟ್ಟ ಇದು. ಇಂತಹ ಪರಿಸ್ಥಿತಿಯಲ್ಲಿ ಆಫ್ರಿಕಾದಲ್ಲಿ ವ್ಯಕ್ತಿಯೊಬ್ಬ (Man Of Wives) 15 ಮಹಿಳೆಯರನ್ನು ಮದುವೆಯಾಗಿ, ಅವರೆಲ್ಲರ ಜತೆ ಒಟ್ಟಿಗೆ ಸಂತಸದಿಂದ ಜೀವನ ಸಾಗಿಸುತ್ತಿದ್ದಾರೆ.
ನೈರೋಬಿ: ಮೊದಲೆಲ್ಲ ಹತ್ತಿಪ್ಪತ್ತು ಜನ ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಅದನ್ನು “ಅವಿಭಕ್ತ ಕುಟುಂಬ” ಎನ್ನುತ್ತಿದ್ದರು. ಈಗ ತಂದೆ-ತಾಯಿ, ಮಗ ಹಾಗೂ ಆತನ ಪತ್ನಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ ಅದನ್ನೇ ಅವಿಭಕ್ತ ಕುಟುಂಬ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಅದೂ ಬಿಡಿ, ಗಂಡ-ಹೆಂಡತಿ ಒಟ್ಟಿಗೆ ಇರಲೂ ಹರಸಾಹಸ ಪಡುವ ಕಾಲಘಟ್ಟ ಇದು. ಇಂತಹ ಪರಿಸ್ಥಿತಿಯಲ್ಲಿ ಆಫ್ರಿಕಾದಲ್ಲಿ ವ್ಯಕ್ತಿಯೊಬ್ಬ (Man Of Wives) ೧೫ ಪತ್ನಿಯರು ಹಾಗೂ ೧೦೭ ಮಕ್ಕಳ ಜತೆ ಖುಷಿ ಖುಷಿಯಾಗಿದ್ದಾರೆ. ವ್ಯಕ್ತಿ, ಆತನ ಪತ್ನಿಯರು, ೧೦೭ ಮಕ್ಕಳು ಒಟ್ಟಿಗೆ ಸಂತಸದಿಂದ ವಾಸಿಸುತ್ತಿದ್ದಾರೆ.
ಕೀನ್ಯಾದ ಪಶ್ಚಿಮ ಭಾಗದ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಡೇವಿಡ್ ಸಕಾಯೊ ಕಲುಹಾನಾ (David Sakayo Kaluhana) ಎಂಬ ವ್ಯಕ್ತಿಗೆ ಕಿಂಗ್ ಸೋಲೊಮನ್ ಅವರೇ ಸ್ಫೂರ್ತಿಯಂತೆ. ಕಿಂಗ್ ಸೋಲೊಮನ್ ಅವರಿಗೆ ೭೦೦ ಪತ್ನಿಯರಿದ್ದರು ಎಂಬುದನ್ನೇ ಆದರ್ಶವಾಗಿಟ್ಟುಕೊಂಡ ಡೇವಿಡ್, ಅದರಂತೆ ೧೫ ಮಹಿಳೆಯರನ್ನು ಮದುವೆಯಾಗಿದ್ದಾರೆ. ಹಾಗೆಯೇ, ಎಲ್ಲ ಪತ್ನಿಯರ ಜತೆ ಒಂದೇ ಕಡೆ ವಾಸಿಸುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇನ್ನೂ ನೀಗಿಲ್ಲ “ಮದುವೆ ದಾಹ”
ಹೀಗೆ ಸಾಲು ಸಾಲು ಮದುವೆ, ನೂರಾರು ಮಕ್ಕಳಾದರೂ ಡೇವಿಡ್‌ಗೆ ಮದುವೆಯಾಗುವ “ದಾಹ” ಮಾತ್ರ ನೀಗಿಲ್ಲ. “ನನಗೆ ಕಿಂಗ್ ಸೋಲೊಮೊನ್ ಅವರೇ ಸ್ಫೂರ್ತಿ. ಹಾಗಾಗಿ, ಇನ್ನೂ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವ ಇಚ್ಛೆಯಿದೆ. ಇದಕ್ಕೆ ನನ್ನ ಪತ್ನಿಯರದ್ದೂ ಒಪ್ಪಿಗೆ ಇದೆ. ನಾನೂ ಕಿಂಗ್ ಸೋಲೊಮೊನ್ ರೀತಿಯೇ” ಎಂದು ಹೆಮ್ಮೆಯಿಂದ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪತ್ನಿಯರು ಹೇಳುವುದೇನು?
ಪತಿಯ “ಮದುವೆ ಚಾಳಿ”ಯಿಂದ ಆತನ ಪತ್ನಿಯರೂ ಬೇಸರಗೊಂಡಿಲ್ಲ, ಮೂಗು ಮುರಿದಿಲ್ಲ. “ನಾವಿಬ್ಬರೂ ೧೯೯೮ರಲ್ಲಿಯೇ ಮದುವೆಯಾಗಿದ್ದೇವೆ. ನನ್ನ ಪತಿಯು ಎಷ್ಟು ಮದುವೆಯಾದರೂ ನನಗೆ ಬೇಸರವಿಲ್ಲ. ಅವರು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಪತ್ನಿ ಜೆಸ್ಸಿಕಾ. ಮತ್ತೊಬ್ಬ ಪತ್ನಿ ರೋಸ್ ಪ್ರತಿಕ್ರಿಯಿಸುತ್ತ, “ನಾವು ಉತ್ತಮ ಜೀವನ ಸಾಗಿಸುತ್ತಿದ್ದೇವೆ. ಪ್ರತಿಯೊಬ್ಬರೂ ಆತ್ಮೀಯವಾಗಿ ಇದ್ದೇವೆ” ಎಂದಿದ್ದಾರೆ.
ಒಟ್ಟಿನಲ್ಲಿ, “ಎರಡು ಜಡೆ ಒಂದೆಡೆ ಸೇರುವುದಿಲ್ಲ” ಎಂಬ ಮಾತಿರುವ ಮಧ್ಯೆಯೇ ಹತ್ತಾರು ಜಡೆಗಳನ್ನು ಒಗ್ಗೂಡಿಸಿ, ಎಲ್ಲರನ್ನೂ ಪ್ರೀತಿಸಿ, ನೂರಾರು ಮಕ್ಕಳನ್ನು ಮಾಡಿಕೊಂಡು, ಈಗಲೂ ಜಡೆಗಳ ಹಿಂದೆ ಸುತ್ತಾಡುವ ವ್ಯಕ್ತಿಯ “ಕಸುವು”, ಈತನನ್ನು ಈಗಲೂ ಪ್ರೀತಿಸುವ ೧೫ ಪತ್ನಿಯರ “ಹೃದಯ ವೈಶಾಲ್ಯ”ವನ್ನು ಮೆಚ್ಚಲೇಬೇಕು.
ಇದನ್ನೂ ಓದಿ | Marriage Invitation | ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್ ವೈರಲ್
ಪ್ರಮುಖ ಸುದ್ದಿ
New Country: ಕೇವಲ 15 ಲಕ್ಷ ರೂ.ನಲ್ಲಿ ರೆಡಿ ಆಯ್ತು ಹೊಸ ದೇಶ, ಹೆಸರು ಸ್ಲೋಜಾಮ್‌ಸ್ತಾನ!
New Country: ಅಮೆರಿಕದ ಪ್ರವಾಸಿಗ ತನ್ನದೇ ಆದ ಸ್ವಂತ ರಾಷ್ಟ್ರ ನಿರ್ಮಾಣ ಮಾಡಿದ್ದಾನೆ. ಅದು ಕೇವಲ ಹದಿನೈದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನಷ್ಟೇ.
ನವದೆಹಲಿ: ರೇಪ್ ಆರೋಪ ಹೊತ್ತು ದೇಶ ಪಲಾಯನ ಮಾಡಿದ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ಕರಾವಳಿಯಲ್ಲಿ ಕೈಲಾಸ ಎಂಬ ತನ್ನದೇ ಆದ ಸ್ವಂತ ದೇಶ ನಿರ್ಮಾಣ ಮಾಡಿದ್ದು ಭಾರತೀಯರಿಗೆ ಗೊತ್ತೇ ಇರುತ್ತದೆ. ಅದೇ ರೀತಿ, ಅಮೆರಿಕ ವ್ಯಕ್ತಿಯೊಬ್ಬ ಸ್ವಂತ ದೇಶವನ್ನು (New Country) ಸೃಷ್ಟಿಸಿಕೊಂಡಿದ್ದಾನೆ. ವೃತ್ತಿಯಿಂದ ಡಿಜೆ ಆಗಿರುವ ಆರ್ ಡಬ್ ವಿಲಿಯಮ್ಸ್(R Dub Williams), ತಮ್ಮ ಪ್ರದರ್ಶನಕ್ಕೆ ಸ್ಲೋ ಜಾಮ್ಸ್ ಎಂದು ಹೆಸರಿಟ್ಟಿದ್ದಾರೆ. ಈಗ ಅದೇ ಹೆಸರನ್ನು ತಮ್ಮ ದೇಶಕ್ಕೆ ಇಟ್ಟಿದ್ದಾರೆ(Viral News). ಅಂದರೆ, ವಿಲಿಯಮ್ಸ್ ಅವರ ದೇಶದ ಹೆಸರು ಸ್ಲೋಜಾಮ್‌ಸ್ತಾನ (Slowjamastan).
ಸಿಎನ್ಎನ್ ಟ್ರಾವೆಲ್ಲರ್ ಜತೆ ಮಾತನಾಡಿರುವ ವಿಲಿಯಮ್ಸ್, ನನಗೆ ಪ್ರವಾಸ ಮಾಡಲು ಈಗ ದೇಶಗಳೇ ಉಳಿದಿಲ್ಲ. ಹಾಗಾಗಿ, ನನ್ನದೇ ಆದ ಸ್ವಂತ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆ ಗುರುತಿಸಿರುವ 193 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳನ್ನು ಈ ಮಿಲಿಯಮ್ಸ್ ಭೇಟಿ ನೀಡಿದ್ದಾರೆ. ತಮ್ಮ ಈ ಪ್ರವಾಸದ ಪಟ್ಟಿಯಲ್ಲಿ ತುರ್ಕಮೇನಿಸ್ತಾನ ಕೊನೆಯ ರಾಷ್ಟ್ರವಾಗಿದ್ದು, ಶೀಘ್ರವೇ ಆ ರಾಷ್ಟ್ರಕ್ಕೂ ಅವರ ಭೇಟಿ ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಅವರು 194ನೇ ರಾಷ್ಟ್ರವಾಗಿ ತಮ್ಮದೇ ಸ್ವಂತ ದೇಶವನ್ನು ನಿರ್ಮಾಣ ಮಾಡಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಮರಳುಗಾಡಿನಲ್ಲಿ 11.07 ಎಕರೆ ಭೂಮಿಯನ್ನು ಖರೀದಿಸಿ ವಿಲಿಯಮ್ಸ್ ಅದಕ್ಕೆ ತಾವು ನಡೆಸಿಕೊಡುವ ಶೋ ಹೆಸರನ್ನೇ ಇಟ್ಟಿದ್ದಾರೆ. ಸ್ಲೋಜಾಮ್‌ಸ್ತಾನ್ ಸುಲ್ತಾನ್ ಆಗಿರುವ ವಿಲಿಯಮ್ಸ್, 2021 ಡಿಸೆಂಬರ್ 1ರಂದ ಅಮೆರಿಕದಿಂದ ಪ್ರತ್ಯೇಕಗೊಂಡ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ. ದುಬ್ಲಾಂಡಿಯಾ, ಸ್ಲೋಜಾಮ್‌ಸ್ತಾನ್ ರಾಷ್ಟ್ರದ ರಾಜಧಾನಿಯಾಗಿದೆ. ಅಲ್ಲಿಂದಲೇ ಲೈವ್ ಮೂಲಕ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: Swami Nithyananda: ʼಕೈಲಾಸʼದಿಂದ ವಿಶ್ವಸಂಸ್ಥೆಗೆ ಬಂದ ನಿತ್ಯಾನಂದನ ಪ್ರತಿನಿಧಿ ಯಾರೀಕೆ?
ಈ ಹೊಸ ರಾಷ್ಟ್ರವು ತನ್ನದೇ ಪಾಸ್‌ಪೋರ್ಟ್, ಸ್ವಂತ ಧ್ವಜ, ಸ್ವಂತ ಕರೆನ್ಸ್, ರಾಷ್ಟ್ರಗೀತೆ ಸೇರಿದಂತೆ ಸಾರ್ವಭೌಮ ರಾಷ್ಟ್ರಕ್ಕಿರುವ ಎಲ್ಲ ಸಂಗತಿಗಳನ್ನು ಒಳಗೊಂಡಿದೆ. ಸಿಎನ್ಎನ್ ಟ್ರಾವಲರ್ ವರದಿಯ ಪ್ರಕಾರ, ಸದ್ಯ 500 ನೋಂದಾಯಿತ ನಾಗರಿಕರಿದ್ದರು, ನೋಂದಣಿಗೆ ಇನ್ನೂ 4500 ಜನರು ಕಾಯ್ದು ಕುಳಿತಿದ್ದಾರೆ. ಅಂದ ಹಾಗೆ, ಹೊಸ ದೇಶ ನಿರ್ಮಾಣಕ್ಕೆ ವಿಲಿಯಮ್ಸ್ ಕೇವಲ 15 ಲಕ್ಷ ವೆಚ್ಚವಾಗಿದೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ತಂತ್ರಜ್ಞಾನ
Instagram: ನಿಮ್ಮ ಮಕ್ಕಳು ಇನ್‌ಸ್ಟಾ ಯೂಸ್ ಮಾಡ್ತಾ ಇದ್ದಾರಾ? ಈ ಜಾಲತಾಣದಲ್ಲೇ ಮಕ್ಕಳ ಲೈಂಗಿಕ ಶೋಷಣೆ ಜಾಲ ಸಕ್ರಿಯ!
ಜನಪ್ರಿಯ ಫೋಟೋ ಷೇರಿಂಗ್ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ಮಕ್ಕಳ ಬಳಕೆಗೆ ಯೋಗ್ಯವಲ್ಲ. ಈ ಜಾಲದಲ್ಲಿ ಶಿಶುಪೀಡನೆ ಜಾಲ ಸಕ್ರಿಯವಾಗಿದೆ ಎನ್ನುತ್ತಿವೆ ಸಂಶೋಧನಾ ವರದಿಗಳು.
ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಫೋಟೋ ಷೇರಿಂಗ್ ವೇದಿಕೆಯಾಗಿರುವ ಇನ್‌ಸ್ಟಾಗ್ರಾಮ್ (Instagram) ಬಳಕೆದಾರರಿಗೆ ಇದು ಶಾಕಿಂಗ್ ಸುದ್ದಿ. ಯಾಕೆಂದರೆ, ಈ ತಾಣವನ್ನು ಶಿಶು ಪೀಡನೆ ಜಾಲವು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ(pedophile networks), ದೌರ್ಜನ್ಯಕ್ಕಾಗಿ ಬಳಸಿಕೊಳ್ಳುತ್ತಿದೆ. ಅಂದರೆ, ಇನ್‌ಸ್ಟಾಗ್ರಾಮ್ ಮೂಲಕವೇ ಮಕ್ಕಳ ಲೈಂಗಿಕ ಕಂಟೆಂಟ್ ಪ್ರಮೋಟ್ ಮತ್ತು ಮಾರಾಟ ಮಾಡುವುದನ್ನು ಮಾಡಲಾಗುತ್ತಿದೆ ಎಂದು ಅಮೆರಿಕದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾಲಯ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ತಯಾರಿಸಿದ ವರದಿಯಲ್ಲಿ ತಿಳಿಸಲಾಗಿದೆ(Child Sex Abuse Networks).
ಅಪ್ರಾಪ್ತ ವಯಸ್ಕರು ನಿರ್ವಹಿಸುತ್ತಿರುವ ಖಾತೆಗಳ ದೊಡ್ಡ ನೆಟ್‌ವರ್ಕ್‌ಗಳು ಸ್ವಯಂ-ರಚಿಸಿದ ಮಕ್ಕಳ ಲೈಂಗಿಕ ಶೋಷಣೆಯ ವಸ್ತುಗಳನ್ನು ಮಾರಾಟಕ್ಕಾಗಿ ಬಹಿರಂಗವಾಗಿ ಜಾಹೀರಾತು ಮಾಡುತ್ತಿವೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಸೈಬರ್ ನೀತಿ ಕೇಂದ್ರದ ಸಂಶೋಧಕರು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್ ಪ್ರಸ್ತುತ ಈ ಶಿಶುಪೀಡನೆ ಜಾಲಗಳಿಗೆ ಪ್ರಮುಖ ವೇದಿಕೆಯಾಗಿದೆ. ಶಿಫಾರಸು ಅಲ್ಗಾರಿದಮ್‌ಗಳು ಮತ್ತು ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸಲು ಸಹಾಯ ಮಾಡುವ ನೇರ ಸಂದೇಶ ಕಳುಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ತಿಳಿಸಿದೆ.
ನಿರ್ದಿಷ್ಟವಾಗಿ ಮಕ್ಕಳನ್ನು ಉಲ್ಲೇಖಿಸುವ ಲೈಂಗಿಕವಾಗಿ ಸ್ಪಷ್ಟವಾದ ಕೀವರ್ಡ್‌ಗಳ ಸರಳ ಹುಡುಕಾಟವು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯವನ್ನು ತೋರಿಸುವ ವಿಷಯವನ್ನು ಜಾಹೀರಾತು ಮಾಡಲು ಈ ಪದಗಳನ್ನು ಬಳಸುವ ಖಾತೆಗಳಿಗೆ ಕಾರಣವಾಗುತ್ತದೆ. ಈ ಪ್ರೊಫೈಲ್‌ಗಳು ಮಕ್ಕಳ ಪ್ರೊಫೈಲ್‌ಗಳೆಂದು ಹೇಳಿಕೊಳ್ಳುತ್ತವೆ. ಜತೆಗೆ ಲೈಂಗಿಕ ರಹಸ್ಯ ಹೆಸರುಗಳನ್ನು ಒಳಗೊಂಡಿರುತ್ತವೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್ ಸೇರಿ ಐವರ ಸೆರೆ
ಅಲ್ಲದೇ ಈ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಲೈಂಗಿಕ ಪ್ರಚೋದನಕಾರಿ ವಿಡಿಯೋಗಳು ಇರುವುದನ್ನು ಸ್ಟ್ಯಾನ್‌ಫೋರ್ಡ್ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಒಂದು ನಿರ್ದಿಷ್ಟ ದರದಲ್ಲಿ ಮಕ್ಕಳನ್ನು ಮುಖತಃ ಭೇಟಿಯಾಗಲು ಅವಕಾಶವನ್ನೂ ಕಲ್ಪಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಇನ್‍ಸ್ಟಾಗ್ರಾಮ್ ಒಡೆತನವನ್ನು ಹೊಂದಿರುವ ಮೆಟಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿ
Donald Trump: ಟ್ರಂಪ್ ವಿರುದ್ಧ ಮತ್ತೊಂದು ಕೇಸ್! ಅಮೆರಿಕ ಅಧ್ಯಕ್ಷ ಎಲೆಕ್ಷನ್ ಸ್ಪರ್ಧಿಸುವ ಆಸೆ ಠುಸ್
Donald Trump: ಪೋರ್ನ್ ತಾರೆ ಜತೆಗಿನ ಸಂಬಂಧವನ್ನು ಮರೆ ಮಾಚಲು ಲಂಚ ನೀಡಿದ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕ ಸರ್ಕಾರ ಮತ್ತೊಂದ ಕೇಸ್ ದಾಖಲಿಸಿದೆ.
ವಾಷಿಂಗ್ಟನ್: ಅಧ್ಯಕ್ಷ ಸ್ಥಾನದಿಂದ ಕೆಳಗಿಳದ ಬಳಿಕವೂ ಅಮೆರಿಕ ರಹಸ್ಯ ದಾಖಲೆಗಳನ್ನು (Secret Documents) ನಿರ್ವಹಣೆ ಮಾಡಿದ ಆರೋಪವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಹೊರಿಸಲಾಗಿದೆ. ಈ ವಿಷಯವನ್ನು ಟ್ರಂಪ್ ಅವರೇ ಖಚಿತಪಡಿಸಿದ್ದಾರೆ. ಅಲ್ಲದೇ, ಇಂಥ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಹಾಲಿ ಅಥವಾ ಮಾಜಿ ಅಧ್ಯಕ್ಷರಾಗಿದ್ದಾರೆ ಟ್ರಂಪ್ ಅವರು. 2024ರ ಅಧ್ಯಕ್ಷೀಯ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸಲು ಮುಂದಾಗಿರುವ ಟ್ರಂಪ್ ಅವರಿಗೆ ಈ ಆರೋಪವು ಕಾನೂನು ತೊಡಕಾಗುವ ಎಲ್ಲ ಸಾಧ್ಯತೆಗಳಿವೆ(US presidential election 2024).
ಭ್ರಷ್ಟ ಬೈಡೆನ್ ಆಡಳಿತವು ನನ್ನನ್ನು ದೋಷಾರೋಪಣೆಗೆ ಒಳಪಡಿಸಲಾಗಿದೆ ಎಂದು ನನ್ನ ವಕೀಲರಿಗೆ ತಿಳಿಸಿದೆ ಎಂದು ಟ್ರಂಪ್ ತಮ್ಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದುಕೊಂಡಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಹಾಲಿ ಅಥವಾ ಮಾಜಿ ಕಮಾಂಡರ್ ಚೀಫ್ ಒಬ್ಬರು ಇಂಥ ಫೆಡರಲ್ ಆರೋಪಗಳನ್ನು ಎದುರಿಸುವಂತಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.
ಟ್ರಂಪ್ ಅವರಿಕೆ ಖಚಿತಪಡಿಸಲು ಈ ಕುರಿತು ನ್ಯಾಯಾಂಗ ಇಲಾಖೆಯಿಂದ ತಕ್ಷಣದ ದೃಢೀಕರಣವಿಲ್ಲ, ಆದಾಗ್ಯೂ ದಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲವು ಅಮೆರಿಕದ ಮಾಧ್ಯಮಗಳು ಟ್ರಂಪ್ ಅವರನ್ನು ನಿಜವಾಗಿಯೂ ದೋಷಾರೋಪಣೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿರುವ ಟ್ರಂಪ್, ಮಿಯಾಮಿಯಲ್ಲಿ ಫೆಡರಲ್ ಕೋರ್ಟ್‌ಹೌಸ್‌ಗೆ ಬರುವಂತೆ ತಿಳಿಸಲಾಗಿದೆ ಎಂದು ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 2020ರಲ್ಲಿ ಡೊನಾಲ್ಡ್ ಟ್ರಂಪ್ ಕುಟುಂಬ ಭಾರತಕ್ಕೆ ಬಂದಾಗ ಅವರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ವ್ಯಯಿಸಿದ್ದೆಷ್ಟು?!
ಟ್ರಂಪ್ ಅವರು ಈಗಾಗಲೇ ಅಪರಾಧದ ಆರೋಪಕ್ಕೆ ಒಳಗಾದ ಮೊದಲ ಮಾಜಿ ಅಥವಾ ಹಾಲಿ ಅಧ್ಯಕ್ಷರಾಗಿದ್ದಾರೆ. ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ ಪೋರ್ನ್ ತಾರೆಯೊಬ್ಬರಿಗೆ ಅವರು ತಮ್ಮೊಂದಿಗೆ ಸಂಬಂಧ ಹೊಂದಿದ್ದರು ಎಂಬುದನ್ನ ಮರೆ ಮಾಚಲು ಆಕೆಗೆ ಹಣ ಪಾವತಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೆ, ಈ ಹೊಸ ಪ್ರಕರಣದಲ್ಲಿ ಟ್ರಂಪ್ ಅವರ ವಿರುದ್ಧ ನಿರ್ದಿಷ್ಟವಾಗಿ ಯಾವ ಕೇಸಿನಲ್ಲಿ ಆರೋಪ ಹೊರಿಸಲಾಗಿದೆ ಎಂಬುದು ಇನ್ನ ಗೊತ್ತಾಗಿಲ್ಲ.
ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
ವಿಸ್ತಾರ TOP 10 NEWS: ಆಗಸ್ಟ್‌ನಲ್ಲಿ ಗ್ಯಾರಂಟಿ ಜಾರಿಗೆ ಸಿದ್ಧ, ಬಿಜೆಪಿ ಅವಲೋಕನ ಸಭೆಯಲ್ಲಿ ಯುದ್ಧ ಹಾಗೂ ಮತ್ತಷ್ಟು ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Congress Guarantee: ಆ. 1ರಂದು ಫ್ರೀ ಕರೆಂಟ್, ಆ.18ರಂದು ಮನೆಯೊಡತಿಗೆ 2000 ರೂ. ಯೋಜನೆಗೆ ಚಾಲನೆ
ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ಸೇವಾ ಸಿಂಧುಗೆ ʼಗ್ಯಾರಂಟಿʼ ಲೋಡ್ ಆತಂಕ: ಕೋಟ್ಯಂತರ ಜನರ ಅರ್ಜಿ ಭಾರ ತಡೆಯಬಲ್ಲದೇ?
2. Textbook Revision: ʼಕೇಸರಿʼ ಪಠ್ಯಕ್ಕೆ ರೆಡ್ ಸಿಗ್ನಲ್!: ಪಠ್ಯ ಪರಿಷ್ಕರಣೆ ಶತಃಸಿದ್ಧ ಎಂದ ಶಿಕ್ಷಣ ಸಚಿವ
ಬಿಜೆಪಿ ಅವಧಿಯಲ್ಲಿ ಕೈಗೊಂಡ ಪಠ್ಯಪುಸ್ತಕ ಪರಿಷ್ಕರಣೆಯನ್ನು ಬದಲಾವಣೆ ಮಾಡುವುದು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!
3. BJP Karnataka: ನಿಮ್ಮ ತಪ್ಪಿನಿಂದ ನಾವು ಬಲಿಯಾದೆವು: ಬಿಜೆಪಿ ಅವಲೋಕನ ಸಭೆಯಲ್ಲಿ ನಾಯಕರ ವಿರುದ್ಧ ಅಸಮಾಧಾನ ಸ್ಫೋಟ
ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮೊದಲ ಬಾರಿಗೆ ನಡೆಸಿದ ಅವಲೋಕನ ಸಭೆಯಲ್ಲಿ, ಪರಾಜಿತ ಅಭ್ಯರ್ಥಿಗಳು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಶಾಸಕರಿಗೆ ಬೆಳಗ್ಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಂಜೆ ಅವಲೋಕನ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆಗಳು ನಡೆದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Bengaluru Rain: ಡಿಕೆಶಿ ಅಪಾರ್ಟ್‌ಮೆಂಟ್ ಆದರೂ ಬುಲ್ಡೋಜರ್ ಪಕ್ಕಾ: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಮಾತು
ಬೆಂಗಳೂರಿನಲ್ಲಿ ಮಳೆ ಸುರಿದಾಗ ಹಾನಿಯಾಗುವ ಹಾಗೂ ಲೇಔಟ್‌ಗಳಿಗೆ ನೀರು ನುಗ್ಗುವ ಪ್ರದೇಶಗಳಿಗೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಯಮಲೂರು, ದೊಮ್ಮಲೂರು, ಬೆಳಂದೂರು ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಬೆಂಗಳೂರು ಮೆಟ್ರೊ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಜತೆಗೆ ವೀಕ್ಷಣೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Monsoon 2023: ‘ಲೇಟ್ ಲತೀಫ್’ ಮಳೆರಾಯ! ಒಂದು ವಾರ ತಡವಾಗಿ ಕೇರಳಕ್ಕೆ ಬಂದ
ವಾಡಿಕೆಗಿಂತ ಒಂದು ವಾರ ತಡವಾಗಿ ಮುಂಗಾರು (Monsoon 2023) ಕೇರಳಕ್ಕೆ (Kerala) ಕಾಲಿಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ಕ್ಕೆ ಮುಂಗಾರು ಮಾರುತಗಳು ಕೇರಳದ ಕರಾವಳಿಗೆ ಅಪ್ಪಳಿಸುತ್ತಿದ್ದವು. ಆದರೆ, ಈ ಬಾರಿ ಒಂದು ವಾರ ತಡವಾಗಿದೆ. ಇದರಿಂದ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಹವಾಮಾನ ಸಂಸ್ಥೆ (India Meteorological Department – IMD), ನೈಋತ್ಯ ಮಾನ್ಸೂನ್ ಜೂನ್ 1ರ ಬದಲಿಗೆ ಇಂದು ಅಂದರೆ ಜೂನ್ 8ರಂದು ಕೇರಳದಲ್ಲಿ ಆರಂಭವಾಗಿದೆ ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ವಿಸ್ತಾರ ಸಂಪಾದಕೀಯ: ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ ಸ್ವಾಗತಾರ್ಹ
ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ, ಸದ್ಯಕ್ಕೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡುವ (ಶೇ.6.50) ನಿರ್ಧಾರವನ್ನು ಆರ್‌ಬಿಐ ಪ್ರಕಟಿಸಿದೆ. ಈ ಮೂಲಕ ಆರ್‌ಬಿಐ ಸಾಲಗಾರರ ಆತಂಕವನ್ನು ದೂರ ಮಾಡಿದೆ. ಸತತ ಆರು ಬಾರಿಯಿಂದ ಆರ್‌ಬಿಐ ರೆಪೊ ದರ ಏರಿಸುತ್ತಲೇ ಬಂದಿದೆ. 2022ರ ಮೇ ತಿಂಗಳಿನಿಂದ ರೆಪೊ ದರ ಏರಿಕೆ ಆರಂಭವಾಗಿತ್ತು. ಇದರಿಂದಾಗಿ ಬಡ್ಡಿ ದರ ಏರಿಕೆಗೂ ಕಾರಣವಾಗಿತ್ತು. ಹೀಗಾಗಿ ಮುಖ್ಯವಾಗಿ ಗೃಹ ಸಾಲ, ವಾಹನ ಸಾಲಗಾರರ ಮೇಲೆ ಭಾರಿ ಬಡ್ಡಿ ಹೊರೆ ಬೀಳುವಂತಾಗಿತ್ತು. ಈ ಬಾರಿಯೂ ರೆಪೊ ದರ ಏರಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿತ್ತು. ಆದರೆ ಆರ್‌ಬಿಐ ನಿರ್ಧಾರದಿಂದಾಗಿ ಜನ ತುಸು ನಿರಾಳವಾಗುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Sam Altman: ಚಾಟ್‌ಜಿಪಿಟಿ ಬಗ್ಗೆಯೂ ಮೋದಿ ಬಳಿ ಉತ್ತರವಿದೆ; ಭೇಟಿ ಬಳಿಕ ಓಪನ್‌ಎಐ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?
ಚಾಟ್‌ಜಿಪಿಟಿಯ ಮಾತೃಸಂಸ್ಥೆಯಾದ ಓಪನ್‌ಎಐ (OpenAI) ಸಿಇಒ ಸ್ಯಾಮ್ ಅಲ್ಟ್‌ಮನ್ (Sam Altman) ಅವರು ಭಾರತ ಪ್ರವಾಸದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಭೇಟಿ, ಚರ್ಚೆಯ ವಿಷಯಗಳನ್ನು ಹರಡಿರುವ ಅವರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಅಳವಡಿಕೆ, ಕಾನೂನು ನಿಯಂತ್ರಣ ಸೇರಿ ಹಲವು ವಿಚಾರ ತಿಳಿಸಿದ್ದಾರೆ. ಹಾಗೆಯೇ, “ನರೇಂದ್ರ ಮೋದಿ ಅವರ ಉತ್ಸಾಹ ಅತ್ಯದ್ಭುತ” ಎಂದು ಬಣ್ಣಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Viral News : ಮೆರವಣಿಗೆಯಲ್ಲಿ ಕಾಣಿಸಿತು ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ!
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರನ್ನು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದವರೇ ಕೊಂದ ವಿಚಾರ ಎಲ್ಲರಿಗೂ ತಿಳಿದಿರುವುದು. ಆ ದಿನದಂದು ಪೂರ್ತಿ ದೇಶ ಕಣ್ಣೀರು ಹಾಕಿತ್ತು. ಆದರೆ ಆ ಕೃತ್ಯವನ್ನು ಕೆಲವರು ಮಾತ್ರ ಸಂಭ್ರಮಿಸಿದ್ದರು. ಇದೀಗ ಆ ಕೊಲೆಯನ್ನೇ ತಮ್ಮ ಹೆಮ್ಮೆ ಎನ್ನುವಂತೆ ಕೆನಡಾದಲ್ಲಿರುವ ಖಲಿಸ್ತಾನಿಗಳು (Viral News) ಪ್ರದರ್ಶಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. WTC Final 2023: 87 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್-ಹೆಡ್ ಜೋಡಿ
ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು 87 ವರ್ಷಗಳ ಹಿಂದಿನ ಜತೆಯಾಟದ ದಾಖಲೆಯೊಂದನ್ನು ಮುರಿದಿದ್ದಾರೆ. ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 469 ರನ್ ಗಳಿಸಿ ಸವಾಲೊಡ್ಡಿದೆ. ದ್ವಿತೀಯ ದಿನವಾದ ಗುರುವಾರ ಆಟ ಮುಂದುವರಿಸಿದ ವೇಳೆ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು ದಾಖಲೆಯ ಜತೆಯಾಟವೊಂದನ್ನು ನಿರ್ಮಿಸಿದರು. ಈ ಮೂಲಕ 87 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು. ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ ಓವಲ್ ಮೈದಾನದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಆಟಗಾರರಾಗಿ ಮೂಡಿಬಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Mumbai Murder Case: ತನ್ನ ಲಿವ್ ಇನ್ ಸಂಗಾತಿಯನ್ನು ತುಣುಕುಗಳಾಗಿ ಕತ್ತರಿಸಿ, ಕುಕ್ಕರ್‌ನಲ್ಲಿ ಕುದಿಸಿದ ಮುಂಬೈ ವ್ಯಕ್ತಿ
ಶ್ರದ್ಧಾ ವಾಳ್ಕರ್ ರೀತಿಯ ಪ್ರಕರಣವೊಂದು ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ತನ್ನ ಲೈವ್ ಇನ್ ಸಂಗಾತಿಯನ್ನು (Live-in-Partner) ತುಣುಕುಗಳಾಗಿ ಕತ್ತರಿಸಿ, ಕೆಲವು ತುಣುಕುಗಳ್ನು ಕುಕ್ಕರ್‌ನಲ್ಲಿ (Cooker) ಬೇಯಿಸಿದ ಭೀಭೀತ್ಸ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮರ ಕತ್ತರಿಸುವ ಕಟ್ಟರ್ (Tree Cutter) ಬಳಸಿ, ತನ್ನ ಸಂಗಾತಿಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ24 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್‌ಬಿಐ ಮಹತ್ವದ ಘೋಷಣೆ
-
South Cinema22 hours ago
Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…