Viral video: ಯುವಕರ ಸಾಹಸದಿಂದ ಶಾರ್ಕ್‌ ಕೊನೆಗೂ ಸಮುದ್ರ ಸೇರಿತು; ಇಂಟರೆಸ್ಟಿಂಗ್‌ ಸ್ಟೋರಿ ಇದು - Vistara News

ವಿದೇಶ

Viral video: ಯುವಕರ ಸಾಹಸದಿಂದ ಶಾರ್ಕ್‌ ಕೊನೆಗೂ ಸಮುದ್ರ ಸೇರಿತು; ಇಂಟರೆಸ್ಟಿಂಗ್‌ ಸ್ಟೋರಿ ಇದು

Viral video: ಸಮುದ್ರದ ಅಂಚಿಗೆ ಬಂದು ಮರಳಿ ಹೋಗಲಾಗದೆ ಒದ್ದಾಡುತ್ತಿದ್ದ ಬೃಹತ್‌ ಗ್ರಾತದ ಶಾರ್ಕ್‌ ಅನ್ನು ಯುವಕರ ಗುಂಪೊಂದು ರಕ್ಷಿಸಿದ ವಿಡಿಯೊ ವೈರಲ್‌ ಆಗಿದೆ. ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಫ್ಲೋರಿಡಾ: ಮಾನವೀಯತೆ ಎನ್ನುವುದು ಇನ್ನೂ ಜೀವಂತವಿದೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಫ್ಲೋರಿಡಾದ (Florida) ಪೆನ್ಸಾಕೋಲ ಬೀಚ್‌ನಲ್ಲಿ ಕಂಡುಬಂದ ಈ ದೃಶ್ಯ ಸದ್ಯ ವೈರಲ್‌ ಆಗಿದೆ. ಸಮುದ್ರದ ದಡದ ಅಂಚಿಗೆ ಬಂದು ಒದ್ದಾಡುತ್ತಿದ್ದ ಬೃಹತ್‌ ಗಾತ್ರದ ಶಾರ್ಕ್‌ (shark) ಅನ್ನು ಒಂದಷ್ಟು ಜನರ ಗುಂಪು ಸಾಹಸ ಮಾಡಿ ಮತ್ತೆ ಸಮುದ್ರಕ್ಕೆ ಸೇರಿಸಿದ್ದಾರೆ. ಸಾಕಷ್ಟು ನೀರು ಸಿಗದೆ ಪರಿತಪಿಸುತ್ತಿದ್ದ ಆ ಶಾರ್ಕ್‌ ಕೊನೆಗೂ ಬದುಕಿದೆಯಾ ಬಡ ಜೀವ ಎನ್ನುವಂತೆ ಸಮುದ್ರದ ಒಳಗೆ ಹೊರಟು ಹೋಗಿದೆ. ಈ ಸಾಹಸ(adventurous)ಮೆರೆದ ವ್ಯಕ್ತಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಸಾಕಷ್ಟು ಪ್ರವಾಸಿಗರು ಆಗಮಿಸಿದ್ದ ಬೀಚ್‌ಗೆ ಬಂದಿದ್ದ ಬೃಹತ್‌ ಶಾರ್ಕ್‌ ಬಳಿಕ ಸಮುದ್ರದ ಒಳಗೆ ಹೋಗಲು ಪರದಾಡುತ್ತಿತ್ತು. ಇದನ್ನು ನೋಡಿದ ಪ್ರವಾಸಿಗರು ಆರಂಭದಲ್ಲಿ ಗಾಬರಿಯಿಂದ ಹಿಂದೆ ಸರಿದರೂ ಬಳಿಕ ಗುಂಪುಗೂಡಿ ಶಾರ್ಕ್‌ ರಕ್ಷಣೆಗೆ ಮುಂದಾದರು.

ಸುಲಭವಾಗಿರಲಿಲ್ಲ ರಕ್ಷಣಾ ಕಾರ್ಯಾಚರಣೆ

ಮೊದಲು ಶಾರ್ಕ್‌ನ ಬಾಲ ಹಿಡಿದು ಅದನ್ನು ಸಮುದ್ರದೊಳಗೆ ಬಿಡುವ ಯೋಜನೆಯನ್ನು ಮಾಡಲಾಗಿತ್ತು. ಆದರೆ ಇದರಿಂದ ವಿಚಲಿತವಾದ ಶಾರ್ಕ್‌ ಮೈ ಕೊಡವಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ ಮಂದಿ ಹಿಂದೆ ಸರಿದರು. ಬಳಿಕ ಶಾರ್ಕ್‌ 3,4 ಸಲ ಬಾಲ ಕೊಡವಿತು. ಇದರಿಂದ ವ್ಯಕ್ತಿಯೊಬ್ಬರು ಸಮುದ್ರದೊಳಗೆ ಬಿದ್ದು ಬಿಟ್ಟರು. ಅದರ ಮೈಯನ್ನು ಸ್ವಲ್ಪವೂ ಸರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಎಲ್ಲರೂ ಹಿಂದೆ ಸರಿಯಲು ಆರಂಭಿಸಿದರು. ಆದರೆ ಪಟ್ಟು ಬಿಡದ ಯುವಕನೋರ್ವ ಮತ್ತೆ ಅದರ ಬಾಲ ಹಿಡಿದು ಸಮುದ್ರದೊಳಗೆ ತಳ್ಳುವ ಪ್ರಯತ್ನ ನಡೆಸಿದ. ಅದಾಗಲೇ ಶಾರ್ಕ್‌ ಹೆಚ್ಚಿನ ನೀರು ಇರುವ ಪ್ರದೇಶಕ್ಕೆ ತಲುಪಿದ್ದರಿಂದ ಆ ಯುವಕನ ಪ್ರಯತ್ನ ಫಲಿಸಿತು. ಅದಕ್ಕೆ ಬ್ಯಾಲೆನ್ಸ್‌ ಸಿಗುವವರೆಗೂ ಪ್ರಯತ್ನ ಮುಂದುವರಿಸಲಾಯಿತು. ಬಳಿಕ ಶಾರ್ಕ್‌ ಸಮುದ್ರದ ಆಳಕ್ಕೆ ಈಜಿಕೊಂಡು ಹೋಯಿತು.

ಸದ್ಯ ಈ ವೈರಲ್‌ ವಿಡಿಯೊವನ್ನು 4೦ ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಇಷ್ಟಪಟ್ಟಿದ್ದಾರೆ. ಬೀಚ್‌ಗೆ ಆಗಮಿಸಿದ್ದ ಟೀನಾ ಎನ್ನುವ ಯುವತಿ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಣ ನಡೆಸಿದ್ದರು. ಅವರ ಪತಿಯೂ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದರು. ಟೀನಾ ಈ ವಿಡಿಯೊವನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ನಂತರ ಈ ವಿಡಿಯೊವನ್ನು Insider Paper ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಾವಿರಾರು ಮಂದಿ ವೀಕ್ಷಿಸಿದ್ದರು.

ಇದನ್ನೂ ಓದಿ: Viral News: ಶಾಲೆ ತೊರೆದು 37 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದ ಆಟೋ ಡ್ರೈವರ್‌!

ಮಾದರಿ ನಡೆ

ಈ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದು ಮಾದರಿ ನಡೆ ಎಂದು ಹಲವರು ಹೇಳಿದ್ದಾರೆ. ಈ ರೀತಿಯ ಕೆಲಸ ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ರಕ್ಷಣೆಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ನೆಟ್ಟಿಗರು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Maldives: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್‌ ಸರ್ಕಾರ ಇಸ್ರೇಲ್‌ ಪಾಸ್‌ಪೋರ್ಟ್‌ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್‌ ಇದೀಗ ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ.

VISTARANEWS.COM


on

Maldives
Koo

ನವದೆಹಲಿ: ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್‌ (Maldives) ಸರ್ಕಾರ ಇಸ್ರೇಲ್‌ (Israel) ಪಾಸ್‌ಪೋರ್ಟ್‌ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್‌ ಇದೀಗ ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ. ಭಾರತದ ವಿವಿಧ ಪ್ರವಾಸೋದ್ಯಮ ಸ್ಥಳಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮಾಲ್ಡೀವ್ಸ್‌ ತನ್ನಲ್ಲಿರುವ ಮನಮೋಹಕ ಬೀಚ್‌ಗಳಿಗೆ ಹೆಸರುವಾಸಿ. ಹೀಗಾಗಿ ಈ ದ್ವೀಪ ರಾಷ್ಟ್ರಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೀಗ ಮಾಲ್ಡೀವ್ಸ್‌ ಸರ್ಕಾರ ಇಸ್ರೇಲಿಗರನ್ನು ನಿಷೇಧಿಸಿದ್ದು, ಇದಕ್ಕೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಠಕ್ಕರ್‌ ನೀಡಿದೆ. ಲಕ್ಷ ದ್ವೀಪ, ಗೋವಾ, ಕೇರಳ ಮುಂತಾದೆಡೆಗಳ ಸುಂದರ ಕಡಲ ತೀರಗಳ ಫೋಟೊವನ್ನು ಹಂಚಿಕೊಂಡಿದೆ.

ʼʼಮಾಲ್ಡೀವ್ಸ್‌ ಇನ್ನು ಮುಂದೆ ಇಸ್ರೇಲಿಗರನ್ನು ಸ್ವಾಗತಿಸುವುದಿಲ್ಲ. ಹೀಗಾಗಿ ಇಸ್ರೇಲಿ ಪ್ರವಾಸಿಗರು, ಆತ್ಮೀಯವಾಗಿ ಸ್ವಾಗತಿಸುವ, ಅತ್ಯುತ್ತಮ ಆತಿಥ್ಯ ನೀಡುವ ಸುಂದರ ಮತ್ತು ಅದ್ಭುತ ಕಡಲ ತೀರಗಳಿರುವ ಭಾರತಕ್ಕೆ ಭೇಟಿ ನೀಡಿ. ಲಕ್ಷ ದ್ವೀಪ, ಗೋವಾ, ಅಂಡಾಮಾನ್‌ & ನಿಕೋಬಾರ್‌ ಮತ್ತು ಕೇರಳದ ಸುಂದರ ಕಡಲ ತೀರಗಳನ್ನು ಸಂದರ್ಶಿಸಿʼʼ ಎಂದು ರಾಯಭಾರ ಕಚೇರಿ ಪ್ರವಾಸಿಗರಿಗೆ ಶಿಫಾರಸ್ಸು ಮಾಡಿದೆ.

ಇಸ್ರೇಲಿ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳು ಮಾಲ್ಡೀವ್ಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವ ನಿರ್ಧಾರವನ್ನು ಮಾಲ್ಡೀವ್ಸ್ ಭಾನುವಾರ (ಜೂನ್‌ 2) ಪ್ರಕಟಿಸಿದೆ. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯಲ್ಲಿ ಮಾತನಾಡಿದ ಸಚಿವ ಅಲಿ ಇಹ್ಸಾನ್ ಈ ನಿರ್ಧಾರವನ್ನು ಪ್ರಕಟಿಸಿದರು. ಇಸ್ರೇಲ್‌ ಪಾಸ್‌ಪೋರ್ಟ್‌ ಹೊಂದಿರುವವರು ಮಾಲ್ಡೀವ್ಸ್‌ ಪ್ರವೇಶಿಸುವುದನ್ನು ತಡೆಯಲು ಅಗತ್ಯವಾದ ಕಾನೂನುಗಳನ್ನು ಜಾರಿಗೆ ಸರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಮೇಲ್ವಿಚಾರಣೆಯನ್ನು ನಡೆಸಲು ಉಪಸಮಿತಿ ರಚಿಸಲೂ ನಿರ್ಧರಿಸಲಾಗಿದೆ.

ಭಾರತವನ್ನು ಕೆಣಕಿ ಪೆಟ್ಟುತಿಂದ ಮಾಲ್ಡೀವ್ಸ್‌

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಆಾಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಇದನ್ನೂ ಓದಿ: Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

ಭಾರತೀಯರ ಭೇಟಿ ಕುಸಿತ

ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ ಬಾಯ್ಕಾಟ್‌ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ. ಇದೀಗ ಮತ್ತೆ ದ್ವೀಪ ರಾಷ್ಟ್ರಕ್ಕೆ ಮತ್ತೊಂದು ಸುತ್ತಿನ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಲಾಗುತ್ತಿದೆ.

Continue Reading

ದೇಶ

Nishant Agarwal: ಬ್ರಹ್ಮೋಸ್‌ ಕ್ಷಿಪಣಿ ಕುರಿತು ಪಾಕ್‌ಗೆ ಮಾಹಿತಿ; ಮಾಜಿ ಎಂಜಿನಿಯರ್‌ ನಿಶಾಂತ್‌ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ!

Nishant Agarwal: ಬ್ರಹ್ಮೋಸ್‌ ಏರೋಸ್ಪೇಸ್‌ನ ರಹಸ್ಯ ಮಾಹಿತಿ ಸೋರಿಕೆ ಪ್ರಕರಣವು 2018ರಲ್ಲಿ ಬಹಿರಂಗವಾಗಿತ್ತು. ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡುವ ನೇಹಾ ಶರ್ಮಾ ಹಾಗೂ ಪೂಜಾ ರಂಜನ್‌ ಅವರ ಫೇಸ್‌ಬುಕ್‌ ಖಾತೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಇಸ್ಲಾಮಾಬಾದ್‌ ಮೂಲಕ ಫೇಸ್‌ಬುಕ್‌ ಖಾತೆಗಳನ್ನು ನಿರ್ವಹಿಲಾಗುತ್ತಿತ್ತು. ಇವರಿಬ್ಬರ ಜತೆಗೆ ನಿಶಾಂತ್‌ ಅಗರ್ವಾಲ್‌ ನಿರಂತರವಾಗಿ ಸಂಪರ್ಕ ಇರುವ ಕುರಿತು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿತ್ತು.

VISTARANEWS.COM


on

Nishant Agarwal
Koo

ನವದೆಹಲಿ: ಭಾರತದ ಬ್ರಹ್ಮೋಸ್‌ ಕ್ಷಿಪಣಿಯ ಕುರಿತು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ರಹ್ಮೋಸ್‌ ಏರೋಸ್ಪೇಸ್‌ನ (Brahmos Aerospace) ಮಾಜಿ ಎಂಜಿನಿಯರ್‌ ನಿಶಾಂತ್‌ ಅಗರ್ವಾಲ್‌ಗೆ (Nishant Agarwal) ನಾಗ್ಪುರ ನ್ಯಾಯಾಲಯವು (Nagpur Court) ಜೀವಾವಧಿ ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ನಿಶಾಂತ್‌ ಅಗರ್ವಾಲ್‌ ಅವರು ರಹಸ್ಯ ಮಾಹಿತಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಭೂಮಿ, ಸಮುದ್ರ ಹಾಗೂ ಆಗಸದಿಂದಲೇ ವೈರಿಗಳನ್ನು ಹೊಡೆದುರುಳಿಸುವ ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಬ್ರಹ್ಮೋಸ್‌ ಏರೋಸ್ಪೇಸ್‌ ಅಭಿವೃದ್ಧಿಪಡಿಸಿದ್ದು, ಇದರ ಕುರಿತು ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದ ಆರೋಪದಲ್ಲಿ ನಿಶಾಂತ್‌ ಅಗರ್ವಾಲ್‌ನನ್ನು 2018ರಲ್ಲಿಯೇ ಬಂಧಿಸಲಾಗಿತ್ತು. ಬ್ರಹ್ಮೋಸ್‌ ಏರೋಸ್ಪೇಸ್‌ನಲ್ಲಿ ನಿಶಾಂತ್‌ ಅಗರ್ವಾಲ್‌ ಸೀನಿಯರ್‌ ಸಿಸ್ಟಮ್‌ ಎಂಜಿನಿಯರ್‌ ಆಗಿದ್ದರು. ಆಫೀಶಿಯಲ್‌ ಸೀಕ್ರೆಟ್ಸ್‌ ಆ್ಯಕ್ಟ್‌ ಅಡಿಯಲ್ಲಿ ನಿಶಾಂತ್‌ ಅಗರ್ವಾಲ್‌ಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?

ಬ್ರಹ್ಮೋಸ್‌ ಏರೋಸ್ಪೇಸ್‌ನ ರಹಸ್ಯ ಮಾಹಿತಿ ಸೋರಿಕೆ ಪ್ರಕರಣವು 2018ರಲ್ಲಿ ಬಹಿರಂಗವಾಗಿತ್ತು. ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡುವ ನೇಹಾ ಶರ್ಮಾ ಹಾಗೂ ಪೂಜಾ ರಂಜನ್‌ ಅವರ ಫೇಸ್‌ಬುಕ್‌ ಖಾತೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಇಸ್ಲಾಮಾಬಾದ್‌ ಮೂಲಕ ಫೇಸ್‌ಬುಕ್‌ ಖಾತೆಗಳನ್ನು ನಿರ್ವಹಿಲಾಗುತ್ತಿತ್ತು. ಇವರಿಬ್ಬರ ಜತೆಗೆ ನಿಶಾಂತ್‌ ಅಗರ್ವಾಲ್‌ ನಿರಂತರವಾಗಿ ಸಂಪರ್ಕ ಇರುವ ಕುರಿತು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿತ್ತು. ಇದರ ಕುರಿತು ತನಿಖೆ ನಡೆಸಿದಾಗ ನಿಶಾಂತ್‌ ಅಗರ್ವಾಲ್‌ ಕೃತ್ಯವು ಬಯಲಾಗಿತ್ತು.

ಡಿಆರ್‌ಡಿಒ ನೀಡುವ ಯಂಗ್‌ ಸೈಂಟಿಸ್ಟ್‌ ಅವಾರ್ಡ್‌ಗೆ ನಿಶಾಂತ್‌ ಅಗರ್ವಾಲ್‌ ಪಾತ್ರನಾಗಿದ್ದ. ಕುರುಕ್ಷೇತ್ರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಓದಿದ್ದ ಈತ ವೃತ್ತಿಯಲ್ಲೂ ನೈಪುಣ್ಯತೆ ಹೊಂದಿದ್ದ. ಇದೇ ಕಾರಣಕ್ಕಾಗಿ ಬ್ರಹ್ಮೋಸ್‌ ಏರೋಸ್ಪೇಸ್‌ನಲ್ಲಿ ಸೀನಿಯರ್‌ ಸಿಸ್ಟಮ್‌ ಎಂಜಿನಿಯರ್‌ ಆಗಿ ಭಡ್ತಿ ಹೊಂದಿದ್ದ. ಆದರೆ, 2018ರಲ್ಲಿ ಈತನ ದೇಶದ್ರೋಹದ ಕೃತ್ಯವು ಬಯಲಾಗುತ್ತಲೇ ಸಹೋದ್ಯೋಗಿಗಳು ಸೇರಿ ಎಲ್ಲರೂ ಶಾಕ್‌ಗೀಡಾಗಿದ್ದರು. ಕಳೆದ ಏಪ್ರಿಲ್‌ನಲ್ಲಷ್ಟೇ ಈತ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ.

ಇದನ್ನೂ ಓದಿ: Chhota Rajan: ಹೊಟೇಲ್‌ ಉದ್ಯಮಿ ಹತ್ಯೆ ಕೇಸ್‌; ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Continue Reading

ವಿದೇಶ

Pakistan Army: ಪಾಕಿಸ್ತಾನ ಸೇನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳಾ ಬ್ರಿಗೇಡಿಯರ್ ಆಗಿ ಇತಿಹಾಸ ಬರೆದ ಡಾ. ಹೆಲೆನ್ ಮೇರಿ

Pakistan Army: ಪಾಕಿಸ್ತಾನ ಸೈನ್ಯದ ಮೆಡಿಕಲ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹೆಲೆನ್ ಮೇರಿ ರಾಬರ್ಟ್ಸ್ ಅವರು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಬ್ರಿಗೇಡಿಯರ್ ಶ್ರೇಣಿಯನ್ನು ಅಲಂಕರಿಸಿದ ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ಹೆಲೆನ್ ಅವರನ್ನು ಅಭಿನಂದಿಸಿದ್ದಾರೆ.

VISTARANEWS.COM


on

Pakistan Army
Koo

ಇಸ್ಲಾಮಾಬಾದ್‌: ಪಾಕಿಸ್ತಾನ ಸೈನ್ಯ (Pakistan Army)ದ ಮೆಡಿಕಲ್ ಕಾರ್ಪ್ಸ್‌ (Medical Corps)ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹೆಲೆನ್ ಮೇರಿ ರಾಬರ್ಟ್ಸ್ (Dr Helen Mary Roberts) ಅವರು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಬ್ರಿಗೇಡಿಯರ್ ಶ್ರೇಣಿಯನ್ನು ಅಲಂಕರಿಸಿದ ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಯ್ಕೆ ಮಂಡಳಿಯಿಂದ ಬ್ರಿಗೇಡಿಯರ್ ಮತ್ತು ಪೂರ್ಣ ಕರ್ನಲ್‌ಗಳಾಗಿ ಬಡ್ತಿ ಪಡೆದ ಪಾಕಿಸ್ತಾನ ಸೇನಾ ಅಧಿಕಾರಿಗಳ ಪೈಕಿ ಡಾ.ಹೆಲೆನ್ ಮೇರಿ ರಾಬರ್ಟ್ಸ್ ಕೂಡ ಸೇರಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ಹೆಲೆನ್ ಅವರನ್ನು ಅಭಿನಂದಿಸಿದ್ದಾರೆ. ʼʼಇಡೀ ದೇಶವು ಅವರ ಬಗ್ಗೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅವರಂತಹ ಸಾವಿರಾರು ಶ್ರಮಜೀವಿ ಮಹಿಳೆಯರ ಬಗ್ಗೆ ಹೆಮ್ಮೆ ಪಡುತ್ತದೆʼʼ ಎಂದು ಹೇಳಿದ್ದಾರೆ.

ಅಭಿನಂದನೆ

“ಪಾಕಿಸ್ತಾನ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ಅಲ್ಪಸಂಖ್ಯಾತ ಮೂಲದ ಮೊದಲ ಮಹಿಳೆ ಎಂಬ ಗೌರವವನ್ನು ಪಡೆದ ಬ್ರಿಗೇಡಿಯರ್ ಹೆಲೆನ್ ಮೇರಿ ರಾಬರ್ಟ್ಸ್ ಅವರನ್ನು ನಾನು ಮತ್ತು ರಾಷ್ಟ್ರವು ಅಭಿನಂದಿಸುತ್ತದೆ” ಎಂದು ಅವರು ತಿಳಿಸಿದರು. ಪಾಕಿಸ್ತಾನದ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ಇವರು ಸಾಬೀತುಪಡಿಸಿದ್ದಾರೆ ಎಂದೂ ಶೆಹಬಾಜ್ ಷರೀಫ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಬ್ರಿಗೇಡಿಯರ್ ಡಾ.ಹೆಲೆನ್ ಹಿರಿಯ ರೋಗಶಾಸ್ತ್ರಜ್ಞರಾಗಿದ್ದು, 26 ವರ್ಷಗಳಿಂದ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ವರ್ಷ ರಾವಲ್ಪಿಂಡಿಯ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದೇಶದ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪಾತ್ರವನ್ನು ಶ್ಲಾಘಿಸಿದ್ದರು.

ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) “ಅರ್ಹತೆ ಮತ್ತು ರಾಷ್ಟ್ರೀಯ ಪ್ರಾತಿನಿಧ್ಯದ ಮತ್ತೊಂದು ಜೀವಂತ ಉದಾಹರಣೆ” ಎಂದು ಉಲ್ಲೇಖಿಸಿದೆ. ಬ್ರಿಗೇಡಿಯರ್ ಡಾ.ಹೆಲೆನ್ ಮೇರಿ ರಾಬರ್ಟ್ಸ್ ಅವರ ಬಡ್ತಿಗಿಂತ ಮೊದಲು, ಮೇಜರ್ ಜನರಲ್ ನಿಗರ್ ಜೋಹರ್ ಅವರು 2020ರಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದರು. ಆ ಮೂಲಕ ಪುರುಷ ಪ್ರಾಬಲ್ಯದ ಪಾಕಿಸ್ತಾನ ಸೇನೆಯಲ್ಲಿ ಲಿಂಗ ಅಸಮಾನತೆಯನ್ನು ತೊಡೆದು ಹಾಕಿದ್ದರು. ನಿಗರ್ ಜೋಹರ್ ಅವರನ್ನು ಸೈನ್ಯದ ಮೊದಲ ಮಹಿಳಾ ಸರ್ಜನ್ ಜನರಲ್ ಆಗಿ ನೇಮಿಸಲಾಗಿತ್ತು.

ಇದನ್ನೂ ಓದಿ: Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

ಜನಸಂಖ್ಯೆಯ ಅಂಕಿ-ಅಂಶ

2021ರಲ್ಲಿ ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಶೇ. 96.47ರಷ್ಟು ಮುಸ್ಲಿಮರು, ಶೇ. 2.14ರಷ್ಟು ಹಿಂದೂಗಳು, ಶೇ. 1.27ರಷ್ಟು ಕ್ರಿಶ್ಚಿಯನ್ನರು, ಶೇ. 0.09ರಷ್ಟು ಅಹ್ಮದಿ ಮುಸ್ಲಿಮರು ಮತ್ತು ಶೇ. 0.02ರಷ್ಟು ಇತರರು ಇದ್ದಾರೆ.

Continue Reading

ವಿದೇಶ

Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

Rupert Murdoch:ಜೂನ್ 1 ರಂದು ರೂಪರ್ಟ್ ಮುರ್ಡೋಕ್ ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

VISTARANEWS.COM


on

Rupert Murdoch
Koo

ಅಮೆರಿಕ: ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ರೂಪರ್ಟ್ ಮುರ್ಡೋಕ್(Rupert Murdoch) ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ರಷ್ಯಾ(Russia) ಮೂಲದ 67 ವರ್ಷದ ಎಲೆನಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯ(California)ದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಬ್ಬರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಬಹುತೇಕರು ಇದು ಸುಳ್ಳು ಸುದ್ದಿ ಎಂದೇ ನಂಬಿದ್ದರು. ಆದರೆ ಇದೀಗ ಜೂನ್ 1ರಂದು ಈ ಜೋಡಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ನೂತನ ದಂಪತಿಯ ಸಂಬಂಧವು ಪ್ರಾರಂಭವಾಯಿತು. 1991 ರಲ್ಲಿ ಮಾಸ್ಕೋದಿಂದ ಅಮೆರಿಕಗೆ ವಲಸೆ ಬಂದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞ ಝುಕೋವಾ ಅವರು ಹಿಂದೆ ಬಿಲಿಯನೇರ್ ಇಂಧನ ಹೂಡಿಕೆದಾರ ಅಲೆಕ್ಸಾಂಡರ್ ಝುಕೋವ್ ಅವರನ್ನು ವಿವಾಹವಾಗಿದ್ದರು. ಆಗಾಗ ಇಬ್ಬರು ಕೆಲವು ಪ್ರಸಿದ್ಧ ಹೋಟೆಲ್‌ಗಳು, ಹಾಲಿಡೆ ಡೆಸ್ಟಿನೇಷನ್‌ಗಳಲ್ಲಿ ಕಂಡುಬಂದಿದ್ದರು.

ಆರು ಮಕ್ಕಳನ್ನು ಹೊಂದಿರುವ ರೂಪರ್ಟ್ ಮುರ್ಡೋಕ್ ಮೊದಲಿಗೆ ಆಸ್ಟ್ರೇಲಿಯನ್ ಫ್ಲೈಟ್ ನಲ್ಲಿ ಪರಿಚಾರಿಕೆಯಾಗಿದ್ದ ಪೆಟ್ರಿಷಿಯಾ ಜೊತೆ ಮದುವೆಯಾಗಿದ್ದು, 1960ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಅನ್ನಾ ಎಂಬ ವರದಿಗಾರ್ತಿಯನ್ನು ರೂಪರ್ಟ್ ಮುರ್ಡೂಕ್ ಮದುವೆ ಮಾಡಿಕೊಂಡಿದ್ದು ಅವರೊಂದಿಗೆ ಸುಧೀರ್ಘ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ 1999 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮುರ್ಡೂಕ್ ಅವರ ಮೂರನೇ ಮದುವೆ 2013ರಲ್ಲಿ ಮುರಿದು ಬಿದ್ದಿತ್ತು. ಮಾಡೆಲ್ ಜೆರ್ರಿ ಜೊತೆ ನಾಲ್ಕನೇ ಬಾರಿಗೆ ಮದುವೆಯಾಗಿದ್ದ ರೂಪರ್ಟ್ ಮುರ್ಡೋಕ್ ಬಳಿಕ ವಿಚ್ಛೇದನ ಪಡೆದುಕೊಂಡಿದ್ದು, ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ನಂತಹ ಬಹುದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ಈಗ ಐದನೇ ಮದುವೆ ಮಾಡಿಕೊಂಡಿದ್ದಾರೆ.

ಯಾರು ಈ ರೂಪರ್ಟ್ ಮುರ್ಡೋಕ್?

ರೂಪರ್ಟ್ ಮುರ್ಡೋಕ್ ದಿ ವಿಲ್ ಸ್ಟ್ರೀಟ್ ಜರ್ನಲ್, ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಪ್ರಸಿದ್ಧ ಸುದ್ದಿ ಮಾಧ್ಯಮಗಳ ಒಡೆಯರಾಗಿದ್ದರು. ಇವರು ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 2022ರಲ್ಲಿ 31ನೇ ಸ್ಥಾನ ಪಡೆದಿದ್ದರು. ರೂಬರ್ಟ್ ಮುರ್ಡೋಕ್ ಅವರ ನಿವ್ವಳ ಆಸ್ತಿ ಮೌಲ್ಯವು 21.7 ಬಿಲಿಯನ್ ಡಾಲರ್ ಆಗಿದೆ. ಆಸ್ಟ್ರೇಲಿಯಾದಲ್ಲಿ 1952 ರಲ್ಲಿ ತನ್ನ ತಂದೆಯಿಂದ ವಾರ್ತಾಪತ್ರಿಕೆಯನ್ನು ಪಡೆದ ಮುರ್ಡೋಕ್ ತನ್ನ ಸಾಮ್ರಾಜ್ಯವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ಗೂ ವಿಸ್ತರಿಸಿದ್ದರು. ಮುರ್ಡೋಕ್ 1996ರಲ್ಲಿ ಫಾಕ್ಸ್ ನ್ಯೂಸ್ ಚಾನೆಲ್ ಅನ್ನು ಸ್ಥಾಪಿಸಿದರು. ಬಳಿಕ ಫಾಕ್ಸ್ ನ್ಯೂಸ್ ಸಂಸ್ಥೆ ದೊಡ್ಡ ಜಾಲವಾಗಿ ಹರಡಿತು. ಫಾಕ್ಸ್ ನ್ಯೂಸ್‌ನ ಪೋಷಕ ಕಂಪನಿ ಮತ್ತು ನ್ಯೂಸ್ ಕಾರ್ಪೊರೇಷನ್‌ನ ಹುದ್ದೆಗಳಿಂದ ಅವರು ನಿವೃತ್ತಿ ಪಡೆದರು. ಬಳಿಕ ಅವರ ಪುತ್ರ ಲಾಚ್ಲಾನ್ ಮುರ್ಡೋಕ್, ಆಧುನಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:Lok Sabha Election 2024: ವಿಜಯೋತ್ಸವಕ್ಕೆ ಬಿಜೆಪಿ ಪ್ಲ್ಯಾನ್‌ ಹೇಗಿದೆ? ಈಗಿನಿಂದಲೇ ಶುರು ಭರ್ಜರಿ ತಯಾರಿ

Continue Reading
Advertisement
Anna Lezhneva
ರಾಜಕೀಯ1 hour ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ1 hour ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ1 hour ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ1 hour ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Election Results 2024
ಪ್ರಮುಖ ಸುದ್ದಿ1 hour ago

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Assault Case
ಕರ್ನಾಟಕ2 hours ago

Assault Case: ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲ್ವಾರ್‌ನಿಂದ ಹಲ್ಲೆ; ಸುರಪುರದಲ್ಲಿ ರಾಜುಗೌಡ ಅಳಿಯನ ಕಾರಿನ ಮೇಲೆ ಕಲ್ಲೆಸೆತ

Narendra Modi Election
ದೇಶ2 hours ago

Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

Karnataka Election Results 2024
ಕರ್ನಾಟಕ2 hours ago

Karnataka Election Results 2024: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರ್ತಿರಲಿಲ್ಲ: ಎಚ್‌ಡಿಕೆ

Novak Djokovic
ಕ್ರೀಡೆ2 hours ago

Novak Djokovic: ಫ್ರೆಂಚ್ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್

Election Results 2024
Lok Sabha Election 20243 hours ago

Election Results 2024: ತ.ನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಪ್ರಮಾಣ ಶೇ. 3.57ರಿಂದ 11.04ಕ್ಕೆ ಜಿಗಿತ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ17 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌