Viral News : 14 ಕೋಟಿ ರೂ. ಮೌಲ್ಯದ 45 ವೈನ್‌ ಬಾಟಲ್‌ ಕದ್ದಿದ್ದ ಜೋಡಿಗೆ ಜೈಲು ಶಿಕ್ಷೆ - Vistara News

ವಿದೇಶ

Viral News : 14 ಕೋಟಿ ರೂ. ಮೌಲ್ಯದ 45 ವೈನ್‌ ಬಾಟಲ್‌ ಕದ್ದಿದ್ದ ಜೋಡಿಗೆ ಜೈಲು ಶಿಕ್ಷೆ

ಎರಡು ವರ್ಷಗಳ ಹಿಂದೆ ಸ್ಟಾರ್‌ ಹೋಟೆಲ್‌ನಲ್ಲಿ ಬರೋಬ್ಬರಿ 14 ಕೋಟಿ ರೂ. ಮೌಲ್ಯದ 45 ವೈನ್‌ ಬಾಟಲ್‌ಗಳನ್ನು ಕದ್ದಿದ್ದ ಜೋಡಿಗೆ ಸ್ಪೇನ್‌ನ ನ್ಯಾಯಾಲಯ ಈಗ ಜೈಲು ಶಿಕ್ಷೆ ವಿಧಿಸಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಎರಡು ವರ್ಷಗಳ ಹಿಂದೆ ಸ್ಟಾರ್‌ ಹೋಟೆಲ್‌ನಲ್ಲಿ 14 ಕೋಟಿ ರೂ. ಮೌಲ್ಯದ 45 ವೈನ್‌ ಬಾಟಲ್‌ಗಳನ್ನು ಕದ್ದು, ಸಿಕ್ಕಿಬಿದ್ದಿದ್ದ ಜೋಡಿಗೆ ಸ್ಪೇನ್‌ನ ನ್ಯಾಯಾಲಯ ಈಗ ಶಿಕ್ಷೆ ವಿಧಿಸಿದೆ. ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿರುವುದಾಗಿ ನ್ಯಾಯಾಲಯ ಸೋಮವಾರ (Viral News) ಆದೇಶಿಸಿದೆ.

ಇದನ್ನೂ ಓದಿ: Rishab Shetty: ಮಗಳು ರಾದ್ಯಾ ಜನುಮದಿನದಂದು ಸ್ಪೆಷಲ್‌ ವಿಡಿಯೊ ಹಂಚಿಕೊಂಡ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ
ಮೆಕ್ಸಿಕೊ ನಾಗರಿಕಳಾಗಿರುವ ಪ್ರಿಸ್ಸಿಲಾ ಗುವೇರಾ(28) ಮತ್ತು ಆಕೆಯ ಪ್ರಿಯತಮ ಕಾನ್ಸ್ಟಾಂಟಿನ್ ಡುಮಿಟ್ರು(49) 2021ರ ಅಕ್ಟೋಬರ್‌ನಲ್ಲಿ ಮಿಚೆಲಿನ್‌ ಸ್ಟಾರ್‌ ರೆಸ್ಟೋರೆಂಟ್‌ಗೆ ತೆರಳಿದ್ದರು. ಅಲ್ಲಿ ರೂಮ್ ಬುಕ್‌ ಮಾಡಿಕೊಂಡಿದ್ದ ಅವರು ಮಧ್ಯರಾತ್ರಿ ಸಿಬ್ಬಂದಿಯನ್ನು ವಂಚಿಸಿ 45 ವೈನ್‌ ಬಾಟಲ್‌ಗಳನ್ನು ಕದ್ದಿದ್ದರು. ಆ ಬಾಟಲ್‌ಗಳ ಒಟ್ಟು ಮೌಲ್ಯ 14 ಕೋಟಿ ರೂ. ಎಂದು ಹೇಳಲಾಗಿತ್ತು.‌


ವೈನ್‌ ಬಾಟಲ್‌ಗಳನ್ನು ಕದಿಯಲೆಂದೇ ಈ ಜೋಡಿ ಒಟ್ಟು 14 ಕೋರ್ಸ್‌ಗಳನ್ನು ಆರ್ಡರ್‌ ಮಾಡಿತ್ತು. ಅದಲ್ಲದೆ ಮಧ್ಯ ರಾತ್ರಿ 2 ಗಂಟೆಗೆ ರಿಸೆಪ್ಶನಿಸ್ಟ್‌ ಬಳಿ ಹೋಗಿ ಡೆಸರ್ಟ್‌ ಮಾಡಿಕೊಡಿ ಎಂದು ಕೇಳಿತ್ತು. ಅಲ್ಲಿದ್ದ ಸಿಬ್ಬಂದಿ ಡೆಸರ್ಟ್‌ ಮಾಡಲು ಹೋದಾಗ ವೈನ್‌ ಇರುವ ಕೋಣೆಯ ಕೀ ಕದ್ದು, ಕಳ್ಳತನ ಮಾಡಿತ್ತು. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಕಳ್ಳರನ್ನು ಸುಲಭವಾಗಿ ಪತ್ತೆ ಹಚ್ಚಿ, ಬಂಧಿಸಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Viral Video : ಕೆಲಸ ಹೋದ ಬೇಜಾರಲ್ಲಿ ಯುವತಿ ಮಾಡಿದ ಕ್ರಿಯೇಟಿವ್​ ವಿಡಿಯೊಗೆ ಬಂತು ಸಿಕ್ಕಾಪಟ್ಟೆ ಆಫರ್​ಗಳು!

Job layoff : ಯುವತಿ ವಿಡಿಯೊ ನೋಡಿದ ಆಕೆಯನ್ನು ಕೆಲಸದಿಂದ ತೆಗೆದ ಕಂಪನಿಯೇ ಮತ್ತೆ ಕೆಲಸಕ್ಕೆ ಕರೆದಿದೆ!

VISTARANEWS.COM


on

Job layoff
Koo

ಬೆಂಗಳೂರು : ಮಾರ್ಕೆಂಟಿಂಗ್​ ಕ್ಷೇತ್ರದಲ್ಲಿ ಸವಾಲು ಜಾಸ್ತಿ. ಕೆಲಸವೂ ಹೆಚ್ಚು ಅತಂತ್ರ. ಅಂತೆಯೇ ಯುವತಿಯೊಬ್ಬಳು ಕಂಪನಿಯೊಂದರಲ್ಲಿ ಕೆಲಸ ಕಳೆದುಕೊಂಡಿದ್ದಳು. ಆ ಬೇಜಾರಿನಲ್ಲಿ ಆಕೆ ಮಾಡಿದ ವಿಡಿಯೊಗೆ ಸಾವಿರಾರು ಜಾಬ್​ ಆಫರ್​​ಗಳು ಬಂದ ಪ್ರಸಂಗವೊಂದು ನಡೆದಿದೆ. ಇದು ನಡೆದಿರುವುದು ಸ್ಪೇನ್​ನಲ್ಲಿ. ಆಕೆಯ ಹೆಸರು ಮರ್ತಾ ಪೋರ್ಟೊ . ಲಿಂಕ್ಡ್ಇನ್​ನಲ್ಲಿ ಆಕೆ ಪೋಸ್ಟ್​ ಮಾಡಿದ 1 ನಿಮಿಷ, 42 ಸೆಕೆಂಡುಗಳ ಸುದೀರ್ಘ ವೀಡಿಯೊಗೆ (Viral Video) ಸಿಕ್ಕಾಪಟ್ಟೆ ಆಫರ್​ಗಳು ಬಂದಿವೆ.

ಇಲ್ಲಿದೆ ಮಾರ್ತಾ ಮಾಡಿದ ವಿಡಿಯೊ

ಕೆಲಸವನ್ನು ಕಳೆದುಕೊಂಡ ತನ್ನನ್ನು ಪರಿಚಯಿಸಲು ರೆಸ್ಯೂಮ್ ಅನ್ನು ಮಾಡುವ ಬದಲ, ಮ್ಯಾಡ್ರಿಡ್ ಮೂಲದ ಮಾರ್ಕೆಟಿಂಗ್ ಮ್ಯಾನೇಜರ್ ಮಾರ್ತಾ ಪೋರ್ಟೊ ತನ್ನ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದರು. ಸ್ವತಃ ಮಾರ್ಕೆಟಿಂಗ್ ಮಾಡುವ ಮೂಲಕ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು. ಹೀಗಾಗಿ ಅವರು ಹಲವಾರು ಆಫರ್​ಗಳನ್ನು ಪಡೆದುಕೊಂಡಿದ್ದಾರೆ.

ಪೋರ್ಟೋ ವಿಡಿಯೋ ವೈರಲ್ ಆಗಿದ್ದು, ಲಿಂಕ್ಡ್ಇನ್ನಲ್ಲಿ 60,000 ಕ್ಕೂ ಹೆಚ್ಚು ಲೈಕ್​​ಗಳು ಬಂದಿವೆ ಮತ್ತು ನೂರಾರು ಉದ್ಯೋಗದಾತರ ಗಮನ ಸೆಳೆದಿದೆ. ಪೋರ್ಟೊ ಅವರು ಈಗ ಕಂಪನಿಗಳಿಂದ ಇಂಟರ್​ವ್ಯೂ ಕರೆಗಳಿಂದ ಬ್ಯುಸಿಯಾಗಿದ್ದಾರೆ. ಲಿಂಕ್ಡ್​ಇನ್​ 5,000 ಕ್ಕೂ ಹೆಚ್ಚು ಸಂಪರ್ಕ ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹಳೆ ಕಂಪನಿಯಿಂದಲೇ ಕರೆ

ನನ್ನ ನೆಟ್​ವರ್ಕ್​​ನಿಂದ 100 ಅಥವಾ ಗರಿಷ್ಠ 200 ಲೈಕ್​ಗಳು ಬರಬಹುದು ಎಂದು ನಾನು ಭಾವಿಸಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಆಗಿದ್ದೇ ಬೇರೆ. ನನ್ನನ್ನೇ ಬೇಡ ಎಂದು ಹೇಳಿ ಮನೆಗೆ ಕಳುಹಿಸಿದ್ದ ಹಳೆ ಕಂಪನಿಯೂ ಕೆಲಸಕ್ಕೆ ಕರೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

ಅಕ್ಟೋಬರ್​​ನಲ್ಲಿ ಫಿನ್ಟೆಕ್ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಪೋರ್ಟೊ ಹಲವಾರು ಕೆಸಲಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಅವರಿಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ವಿಡಿಯೊ ಮಾಡಲು ಮುಂದಾದರು. ಅದರ ಪರಿಣಾಮವಾಗಿ ಹಲವಾರು ಆಯ್ಕೆಗಳು ಸಿಕ್ಕಿವೆ.

ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

ಬೆಂಗಳೂರು: ಕೆಲವೊಮ್ಮೆ ವೈದ್ಯರು ಮಾಡುವ ಸಣ್ಣದೊಂದು ಎಡವಟ್ಟು, ನಿರ್ಲಕ್ಷ್ಯ ರೋಗಿಯ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವೊಮ್ಮೆ ಪ್ರಾಣವನ್ನೇ ಕಸಿದು ಬಿಡುತ್ತದೆ. ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ದಂತ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಮೃತಪಟ್ಟಿದ್ದ. ಇದೀಗ ದೂರದ ಅರ್ಜೆಂಟೀನಾದಲ್ಲಿ ವೈದ್ಯರ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ದಾಖಲಾದ ವ್ಯಕ್ತಿಯ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ್ದಾರೆ (Viral News).

ಘಟನೆಯ ವಿವರ
41 ವರ್ಷದ ಜಾರ್ಜ್ ಬೇಸೆಟೊ ತೊಂದರೆಗೆ ಸಿಲುಕಿದವರು. ಅವರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಿಯಾಜ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಫೆಬ್ರವರಿ 28ರಂದು ಶಸ್ತ್ರ ಚಿಕಿತ್ಸೆಯ ದಿನ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ 29ಕ್ಕೆ ಮುಂದೂಡಲಾಗಿತ್ತು. ʼʼಶಸ್ತ್ರಚಿಕಿತ್ಸೆಯ ದಿನದಂದು ಆಸ್ಪತ್ರೆಯ ಸಿಬ್ಬಂದಿ ಏನನ್ನೂ ಕೇಳದೆ ಅಥವಾ ಹೆಲ್ತ್​​​​ ಚಾರ್ಟ್ ಅನ್ನು ಕೂಡ ಪರಿಶೀಲಿಸದೆ ಆಪರೇಷನ್​​​ ಮಾಡಲು ಕರೆದುಕೊಂಡು ಹೋಗಿದ್ದರುʼʼ ಎಂದು ಜಾರ್ಜ್ ಬೇಸೆಟೊ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಎಚ್ಚರಗೊಂಡ ಜಾರ್ಜ್ ಬೇಸೆಟೊ ಬಳಿ ಸಂತಾನಶಕ್ತಿ ಹರಣ ಚಿಕಿತ್ಸೆಯ ಬಗ್ಗೆ ವೈದ್ಯರು ತಿಳಿಸಿದ್ದರು. ಇದರಿಂದ ಜಾರ್ಜ್ ಬೇಸೆಟೊ ಶಾಕ್‌ಗೆ ಒಳಗಾಗಿದ್ದರು. ನಂತರ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಸದ್ಯ ವೈದ್ಯರ ಈ ಎಡವಟ್ಟಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಜಾರ್ಜ್ ಅವರ ವಕೀಲ ಡಿಯಾಗೋ ಲ್ಯಾರೆ ಮಾತನಾಡಿ, ”ವೈದ್ಯರ ಈ ಮಟ್ಟದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಜಾರ್ಜ್ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದರೂ, ಕೂಡ ಅವರು ಹೊಸ ಸಂಬಂಧದಲ್ಲಿದ್ದಾರೆ ಮತ್ತು ಭವಿಷ್ಯದಲ್ಲಿ ಮತ್ತೊಂದು ಮಗು ಹೊಂದಲು ಯೋಜನೆಯನ್ನು ಹಾಕಿಕೊಂಡಿದ್ದರು” ಎಂದು ಹೇಳಿದ್ದಾರೆ. ಜಾರ್ಜ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

Continue Reading

ದೇಶ

ಅಣ್ವಸ್ತ್ರ ಸಾಗಣೆ; ಚೀನಾದಿಂದ ಪಾಕ್‌ಗೆ ಹೊರಟಿದ್ದ ಹಡಗನ್ನು ಮುಂಬೈನಲ್ಲಿ ತಡೆದ ಅಧಿಕಾರಿಗಳು!

ಚೀನಾದಿಂದ ಪಾಕಿಸ್ತಾನಕ್ಕೆ ಹೊರಟಿದ್ದ ಹಡಗನ್ನು ಕಸ್ಟಮ್ಸ್‌ ಅಧಿಕಾರಿಗಳು ಮುಂಬೈ ಬಂದರಿನಲ್ಲಿಯೇ ತಡೆದಿದ್ದಾರೆ. ಇದರಲ್ಲಿ ಅಣ್ವಸ್ತ್ರ ಹಾಗೂ ಕ್ಷಿಪಣಿ ತಯಾರಿಕೆಗೆ ಬಳಸುವ ಮಷೀನ್‌ ಕೂಡ ಸಿಕ್ಕಿದೆ ಎನ್ನಲಾಗಿದೆ.

VISTARANEWS.COM


on

Ship
Koo

ಮುಂಬೈ: ಚೀನಾದಿಂದ ಪಾಕಿಸ್ತಾನಕ್ಕೆ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳನ್ನು (Nuclear and Ballistic Missiles) ತಯಾರಿಸಲು ಬಳಸುವ ಕಚ್ಚಾ ವಸ್ತು ಇದೆ ಎಂಬ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳುತ್ತಿದ್ದ ಹಡಗನ್ನು ಭಾರತದ ಭದ್ರತಾ ಏಜೆನ್ಸಿ ಅಧಿಕಾರಿಗಳು (Indian Security Agencies) ಮುಂಬೈನಲ್ಲಿಯೇ ತಡೆದಿದ್ದಾರೆ. ಮುಂಬೈನ ನ್ಹಾವಾ ಶೆವಾ (Nhava Sheva Port) ಬಂದರಿನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಮರ್ಚಂಟ್‌ ಹಡಗನ್ನು ತಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಲ್ಟಾ ಧ್ವಜ ಇರುವ, ಸಿಎಂಎ ಸಿಜಿಎಂ ಅಟ್ಟಿಲಾ ಎಂಬ ಮರ್ಚಂಟ್‌ ಹಡಗನ್ನು ಮುಂಬೈನಲ್ಲಿ ತಡೆ ಹಿಡಿಯಲಾಗಿದೆ. ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್‌ ಅಧಿಕಾರಿಗಳು, ಹಡಗನ್ನು ಮುಂಬೈ ಬಂದರಿನಲ್ಲಿಯೇ ತಡೆದಿದ್ದಾರೆ. ಹಡಗನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಕನ್ಸೈನ್‌ಮೆಂಟ್‌ನಲ್ಲಿ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (CNC) ಮಷೀನ್‌ ಲಭ್ಯವಾಗಿದೆ. ಈ ಮಷೀನ್‌ಅನ್ನು ಇಟಲಿಯಲ್ಲಿ ತಯಾರಿಸಲಾಗಿದೆ. ಇದು ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆಯಾಗಿದೆ ಎಂದು ತಿಳಿದುಬಂದಿದೆ.

ಏನಿದು ಸಿಎನ್‌ಸಿ ಮಷೀನ್?‌

ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ಅನ್ನು ಅಣ್ವಸ್ತ್ರ, ಕ್ಷಿಪಣಿ ಸೇರಿ ಹತ್ತಾರು ಬಗೆಯ ಭಯಾನಕ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತದೆ. ಉತ್ತರ ಕೊರಿಯಾ ಕೂಡ ಅಣ್ವಸ್ತ್ರ ತಯಾರಿಕೆಗೆ ಇದೇ ಮಷೀನ್‌ಅನ್ನು ಬಳಸಿತ್ತು. ಈಗ ಪಾಕಿಸ್ತಾನವು ಕೂಡ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ತಯಾರಿಕೆಗಾಗಿ ಈ ಮಷೀನ್‌ಅನ್ನು ಚೀನಾದಿಂದ ತರಿಸಿಕೊಳ್ಳಲು ಮುಂದಾಗಿತ್ತು. ಜನವರಿ 23ರಂದೇ ಚೀನಾದಿಂದ ಹೊರಟ ಕಾರ್ಗೋ ಹಡಗು, ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ತಲುಪುವುದಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚೀನಾವನ್ನು ಕೈಬಿಟ್ಟು ಭಾರತಕ್ಕೆ ಮಹತ್ವದ ಗುತ್ತಿಗೆ ಕೊಟ್ಟ ಶ್ರೀಲಂಕಾ; ರಾಜತಾಂತ್ರಿಕ ಮುನ್ನಡೆ

ಅಮೆರಿಕ ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹಣಕಾಸು ನೆರವು ಸ್ಥಗಿತವಾದ ಬಳಿಕ ಪಾಕಿಸ್ತಾನವು ಅಣ್ವಸ್ತ್ರ, ಕ್ಷಿಪಣಿ ಸೇರಿ ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಚೀನಾದ ನೆರವಿನೊಂದಿಗೆ ಸಿಎನ್‌ಸಿ ಮಷೀನ್‌ಗಳನ್ನು ತರಿಸಿಕೊಂಡು, ಅಣ್ವಸ್ತ್ರ, ಕ್ಷಿಪಣಿಗಳನ್ನು ತಯಾರಿಸುವುದು ನೆರೆ ರಾಷ್ಟ್ರದ ಕುತಂತ್ರವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ಭಾರತದ ಕಸ್ಟಮ್ಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನಷ್ಟು ಸ್ಫೋಟಕ ಮಾಹಿತಿಯನ್ನು ಕೂಡ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

ಆರ್‌ಎಸ್‌ಎಸ್‌ನ ರುದ್ರೇಶ್‌ ಹತ್ಯೆ; ದಕ್ಷಿಣ ಆಫ್ರಿಕಾದಲ್ಲಿ ಆರೋಪಿ ಮೊಹಮ್ಮದ್‌ ಗೌಸ್‌ ಬಂಧನ

ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಆರ್.‌ ರುದ್ರೇಶ್‌ ಅವರ ಹತ್ಯೆಯ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಎನ್‌ಐಎ ಸಫಲವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಹತ್ಯೆಯ ಆರೋಪಿಯನ್ನು ಬಂಧಿಸಲಾಗಿದೆ.

VISTARANEWS.COM


on

RSS Worker R Rudresh
ಹತ್ಯೆಗೀಡಾದ ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್.‌ ಷʻ
Koo

ಬೆಂಗಳೂರು/ಕೇಪ್‌ಟೌನ್:‌ 2016ರಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆಯ (RSS Worker Rudresh Murder Case) ಪ್ರಕರಣವನ್ನು ಭೇದಿಸುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ರುದ್ರೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್‌ ಮೊಹಮ್ಮದ್‌ ಗೌಸ್‌ ನಿಯಾಜಿಯನ್ನು (Mohammed Gaus Niyazi) ಎನ್‌ಐಎ ಅಧಿಕಾರಿಗಳು ದಕ್ಷಿಣ ಆಫ್ರಿಕಾದಲ್ಲಿ (South Africa) ಬಂಧಿಸಿದ್ದಾರೆ. ಇದು ಪ್ರಕರಣದಲ್ಲಿ ಎನ್‌ಐಎಗೆ ಸಿಕ್ಕ ಮಹತ್ವದ ಮುನ್ನಡೆ ಎಂದೇ ಹೇಳಲಾಗುತ್ತಿದೆ.

2014ರ ಮುಂಬೈ ಗಲಭೆಯ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್‌ ಗೌಸ್‌ ನಿಯಾಜಿಯು ರುದ್ರೇಶ್‌ ಹತ್ಯೆ ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದ. ಆದರೆ, ಈತನ ಪತ್ತೆಗೆ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳವು (Gujarat ATC) ನಿರಂತರವಾಗಿ ಪ್ರಯತ್ನಿಸಿತ್ತು. ಎಟಿಎಸ್‌ ಸತತ ಪ್ರಯತ್ನದ ಫಲವಾಗಿ ಮೊಹಮ್ಮದ್‌ ಗೌಸ್‌ ನಿಯಾಜಿಯು ದಕ್ಷಿಣ ಆಫ್ರಿಕಾದಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಿತ್ತು.

ಮೊಹಮ್ಮದ್‌ ಗೌಸ್‌ ನಿಯಾಜಿ

ಮೊಹಮ್ಮದ್‌ ಗೌಸ್‌ ನಿಯಾಜಿಯನ್ನು ಪತ್ತೆಹಚ್ಚಿದ್ದ ಎಟಿಎಸ್‌, ಈ ಕುರಿತು ಎನ್‌ಐಎಗೆ ಮಹತ್ವದ ಸುಳಿವು ನೀಡಿತ್ತು. ಇದಾದ ಬಳಿಕ, ಎನ್‌ಐಎ ಅಧಿಕಾರಿಗಳು ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ಮೊಹಮ್ಮದ್‌ ಗೌಸ್‌ ನಿಯಾಜಿಯ ಕುರಿತು ಮಾಹಿತಿ ಒದಗಿಸಿತ್ತು. ಈಗ ದಕ್ಷಿಣ ಆಫ್ರಿಕಾ ಅಧಿಕಾರಿಗಳ ನೆರವಿನಿಂದ ಎನ್‌ಐಎ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು.

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (PFI) ಪ್ರಮುಖ ನಾಯಕನಾಗಿರುವ ಮೊಹಮ್ಮದ್‌ ಗೌಸ್‌ ನಿಯಾಜಿಯು ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಕೂಡ ಎನಿಸಿದ್ದಾನೆ. ಈತನನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಎನ್‌ಐಎ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಮೊದಲು ಈತನನ್ನು ಮುಂಬೈಗೆ ಕರೆದುಕೊಂಡು ಬಂದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮೊಹಮ್ಮದ್‌ ಗೌಸ್‌ ನಿಯಾಜಿಯು ಪಿಎಫ್‌ಐನ ದಕ್ಷಿಣ ಭಾರತದ ಮುಖ್ಯಸ್ಥನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Sedition case: ಪಾಕ್‌ ಪರ ಘೋಷಣೆ ವಿವಾದ; ಬೀದಿಗಿಳಿದ ಜೆಡಿಎಸ್‌; ಬಂಧನಕ್ಕೆ ಪಟ್ಟು

ಏನಿದು ಪ್ರಕರಣ?

ಆರ್‌ಎಸ್‌ಎಸ್‌ ಮುಖಂಡ ಆರ್.‌ ರುದ್ರೇಶ್‌ ಅವರನ್ನು 2016ರ ಅಕ್ಟೋಬರ್‌ 16ರಂದು ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇಬ್ಬರು ದುಷ್ಕರ್ಮಿಗಳು ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿ ರುದ್ರೇಶ್‌ ಮೇಲೆ ದಾಳಿ ನಡೆಸಿ, ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2016ರಲ್ಲಿಯೇ ಪಾಶಾ, ಅಹ್ಮದ್‌, ಸಾದಿಕ್‌, ಮುಜೀಬ್‌ ಉಲ್ಲಾ, ಷರೀಫ್‌ ಸೇರಿ ಪಿಎಫ್‌ಐನ ಹಲವು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾದ ಬಳಿಕ ಎನ್‌ಐಎ ತನಿಖೆಗೆ ವಹಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Azam Cheema: 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಅಜಮ್‌ ಚೀಮಾ ಸಾವು

Azam Cheema: ಲಷ್ಕರ್‌-ಎ-ತೊಯ್ಬಾ (Lashkar-e-Taiba) ನಾಯಕ, 2008ರ ಮುಂಬೈಯ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಅಜಮ್‌ ಚೀಮಾ ಪಾಕಿಸ್ತಾನದ ಫೈಸಲಾಬಾದ್‌ ನಗರದಲ್ಲಿ ಸಾವನ್ನಪ್ಪಿದ್ದಾನೆ.

VISTARANEWS.COM


on

mumbai attack
Koo

ನವದೆಹಲಿ: ಲಷ್ಕರ್‌-ಎ-ತೊಯ್ಬಾ (Lashkar-e-Taiba) ನಾಯಕ, 2008ರ ಮುಂಬೈಯ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಅಜಮ್‌ ಚೀಮಾ (Azam Cheema) ಪಾಕಿಸ್ತಾನದ ಫೈಸಲಾಬಾದ್‌ ನಗರದಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 2006ರ ಮುಂಬೈ ರೈಲು ಸ್ಫೋಟದ ಮಾಸ್ಟರ್‌ ಮೈಂಡ್‌ ಕೂಡ ಆಗಿದ್ದ ಅಜಮ್‌ ಚೀಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆತನಿಗೆ 70 ವರ್ಷ ವಯಸ್ಸಾಗಿತ್ತು.

ಕ್ರೂರ ಕೃತ್ಯ ಒಂದೆರಡಲ್ಲ

ಅಜಮ್‌ ಚೀಮಾ 2008ರಲ್ಲಿ ಬಹವಾಲ್‌ಪುರದಲ್ಲಿ ಲಷ್ಕರ್‌ ಕಮಾಂಡರ್‌ ಆಗಿದ್ದ. ಆಗ ಅವನನ್ನು ಝಕಿ-ಉರ್‌-ರೆಹಮಾನ್‌-ಲಖ್ವಿಯ ಕಾರ್ಯಾಚರಣೆಯ ಸಲಹೆಗಾರನನ್ನಾಗಿ ನೇಮಿಸಲಾಗಿತ್ತು. ಆ ವರ್ಷ ಮುಂಬೈಯ ತಾಜ್‌ ಹೋಟೆಲ್‌ ಮೇಲೆ ನಡೆದ ದಾಳಿಯ ಸಂಚು ರೂಪಿಸುವಲ್ಲಿ ಈತ ಪ್ರಧಾನ ಪಾತ್ರ ವಹಿಸಿದ್ದ. ಆ ದಾಳಿಯಲ್ಲಿ ಸುಮಾರು 175 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಅಮೆರಿಕನ್ನರೂ ಸೇರಿದ್ದರು. ಹೀಗಾಗಿ ಭಯೋತ್ಪಾದಕರಿಗೆ ತರಬೇತಿ ನೀಡಿದ್ದಕ್ಕಾಗಿ ಈತ ಅಮೆರಿಕಗೂ ಬೇಕಾಗಿದ್ದ ವ್ಯಕ್ತಿಯಾಗಿದ್ದ.

ಇನ್ನು 2006ರಲ್ಲಿ ಮುಂಬೈಯಲ್ಲಿ ನಡೆದ ರೈಲು ಬಾಂಬ್‌ ಸ್ಫೋಟ ಪ್ರಕರಣಕ್ಕೂ ಈತನೇ ಮುಖ್ಯ ಸೂತ್ರಧಾರ ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 188 ಮಂದಿ ಮೃತಪಟ್ಟು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈತನನ್ನು ಭೂಪಟ ತಜ್ಞ ಎಂದೇ ಕರೆಯಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದ ಈತ ಸದಾ 6 ಮಂದಿ ಅಂಗರಕ್ಷಕರೊಂದಿಗೆ ಓಡಾಡುತ್ತಿದ್ದ. ಭಯೋತ್ಪಾದಕರಿಗೆ ನಕ್ಷೆಯಲ್ಲಿ ಭಾರತದ ಪ್ರಮುಖ ಸ್ಥಳಗಳನ್ನು ನೋಡಲು ಕಲಿಸಿದ್ದ ಈತ ಸ್ಯಾಟ್‌ಲೈಟ್‌ ಫೋನ್‌ ಮೂಲಕ ಪಾಕಿಸ್ತಾನದಲ್ಲಿಯೇ ಕುಳಿತು ಉಗ್ರರಿಗೆ ಸೂಚನೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರ ಪೈಕಿ ಒಬ್ಬೊಬ್ಬರೇ ಸಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪಾಕ್‌ ನೆಲದಲ್ಲಿ ಲಷ್ಕರ್‌ ಭಯೋತ್ಪಾದಕರು ನಿಗೂಡವಾಗಿ ಸಾವನ್ನಪ್ಪಿದ್ದರು. ಇದು ಪಾಕಿಸ್ತಾನದ ತಲೆ ನೋವಿಗೆ ಕಾರಣವಾಗಿದೆ. ಈ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದೂ ಅದು ಆರೋಪಿಸಿದೆ. ಆದರೆ ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಚೀಮಾ ಅಂತ್ಯಕ್ರಿಯೆಯನ್ನು ಫೈಸಲಾಬಾದ್‌ನ ಮಲ್ಖಾನ್‌ವಾಲಾದಲ್ಲಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

ಪಾಕಿಸ್ತಾನದಲ್ಲೇ 306 ಉಗ್ರ ದಾಳಿ; 693 ಮಂದಿ ಸಾವು!

ʼಉಗ್ರರ ಸ್ವರ್ಗ’ ಎನಿಸಿರುವ ಪಾಕಿಸ್ತಾನದಲ್ಲಿ ಉಗ್ರ ಕೃತ್ಯಗಳು ಹೆಚ್ಚಾಗತೊಡಗಿವೆ. 2023ರಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಶೇ. 17ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 306 ಉಗ್ರ ದಾಳಿಗಳು ನಡೆದಿದ್ದು, 693 ಜನರು ಮೃತಪಟ್ಟಿದ್ದಾರೆ. ಒಟ್ಟು ಉಗ್ರ ಚಟುವಟಿಕೆಗಳ ಪೈಕಿ ನಿಷೇಧಿತ ಸಂಘಟನೆಗಳಾದ ಪಾಕಿಸ್ತಾನಿ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಖೋರಾಸನ್, ಬಲೂಚಿಸ್ತಾನ್ ಲಿಬರೇಷನ್ ಆರ್ಮಿ‌ಗಳಿಂದ ಶೇ. 82ರಷ್ಟು ಕೊಡುಗೆ ಇದೆ ಎಂದು ವರದಿಯೊಂದು ತಿಳಿಸಿದೆ. 23 ಆತ್ಮಹತ್ಯಾ ಬಾಂಬ್ ದಾಳಿಗಳು ಸೇರಿದಂತೆ ಒಟ್ಟು 306 ಭಯೋತ್ಪಾದಕ ದಾಳಿಗಳಲ್ಲಿ 330 ಭದ್ರತಾ ಸಿಬ್ಬಂದಿ, 260 ನಾಗರಿಕರು ಮತ್ತು 103 ಉಗ್ರಗಾಮಿಗಳು ಮೃತರಾಗಿದ್ದಾರೆ. 1,124 ಮಂದಿ ಗಾಯಗೊಂಡಿದ್ದಾರೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Murder Case Son kills Mother
ಕ್ರೈಂ1 min ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ12 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ19 mins ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು48 mins ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ50 mins ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Elephant Attack New
ಕೊಡಗು1 hour ago

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Yuva Rajkumar And Shiva Rajkumar Dance Together obbane shiva song
ಸ್ಯಾಂಡಲ್ ವುಡ್1 hour ago

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

Team India
ಕ್ರೀಡೆ1 hour ago

WTC Ranking : ಭಾರತ ತಂಡವೀಗ ನಂಬರ್​ 1

BY Vijayendra
ಬೆಂಗಳೂರು2 hours ago

BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

Encounter In Kanker
ದೇಶ2 hours ago

Encounter In Kanker: ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ಎನ್‌ಕೌಂಟರ್‌; ಕಾನ್ಸ್‌ಟೇಬಲ್‌ ಹುತಾತ್ಮ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ10 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌