Viral News: ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂ., ಗಿನ್ನಿಸ್‌ ದಾಖಲೆ ಬರೆದ ಐಸ್‌ಕ್ರೀಂನಲ್ಲಿ ಅಂಥಾದ್ದೇನಿದೆ? - Vistara News

ವಿದೇಶ

Viral News: ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂ., ಗಿನ್ನಿಸ್‌ ದಾಖಲೆ ಬರೆದ ಐಸ್‌ಕ್ರೀಂನಲ್ಲಿ ಅಂಥಾದ್ದೇನಿದೆ?

Viral News: ಒಂದು ಐಸ್‌ಕ್ರೀಂ ಬೆಲೆ ಐನೂರು ಎಂದರೆ ಓಕೆ, ಸಾವಿರ ಎಂದರೂ ಕೊಡಬಹುದು. ಆದರೆ ಜಪಾನ್‌ನಲ್ಲಿ ತಯಾರಿಸಿದ ಈ ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂ. ಎಂದರೆ ಮಂಡೆ ಬಿಸಿಯಾಗದೆ ಇರುತ್ತದೆಯೇ?

VISTARANEWS.COM


on

World's most expensive ice cream costs over ₹5 lakh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೋಕಿಯೊ: ಮೈ ಜತೆಗೆ ಮನಸ್ಸು ಕೂಡ ತಣ್ಣಗಾಗಲಿ, ನಾಲಗೆ ಮೇಲಿನ ರುಚಿಗ್ರಂಥಿಗಳು ಚುರುಕಾಗಲಿ ಎಂದು ಐಸ್‌ಕ್ರೀಂ ತಿನ್ನುತ್ತೇವೆ. ಕೆಲವೊಮ್ಮೆ ನೂರಾರು, ನಾಲ್ಕೈದು ಜನ ಹೋದರೆ ಸಾವಿರಾರು ರೂಪಾಯಿ ವ್ಯಯಿಸುತ್ತೇವೆ. ಆದರೆ, ಜಪಾನ್‌ನಲ್ಲಿ ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂಪಾಯಿ ಎಂದು ಕೇಳಿದರೇನೇ ನಮ್ಮ ಮಂಡೆ (Viral News) ‘ಬಿಸಿ’ಯಾಗುತ್ತದೆ. ಹೌದು, ನೀವು ಓದಿದ್ದು ಸರಿಯಾಗಿದೆ, ಜಪಾನ್‌ನಲ್ಲಿ ತಯಾರಿಸಿರುವ ವಿಶೇಷ ಐಸ್‌ಕ್ರೀಂ ಬೆಲೆ 5 ಲಕ್ಷ ರೂ. ಆಗಿದೆ.

ಜಪಾನ್‌ನ ಐಸ್‌ಕ್ರೀಂ ಬ್ರ್ಯಾಂಡ್‌ ಕಂಪನಿಯಾದ ಸೆಲ್ಲಾಟೊ ತಯಾರಿಸಿದ ಬ್ಯಾಕುಯಾ (Byakuya) ಎಂಬ ಐಸ್‌ಕ್ರೀಂ ಬೆಲೆ 5 ಲಕ್ಷ ರೂಪಾಯಿ ಆಗಿದ್ದು, ಇದು ಜಗತ್ತಿನಲ್ಲೇ ದುಬಾರಿ ಐಸ್‌ಕ್ರೀಂ ಎಂಬ ಖ್ಯಾತಿಗೆ ಭಾಜನವಾಗಿದೆ. ಹಾಗೆಯೇ, ಗಿನ್ನಿಸ್‌ ವಿಶ್ವ ದಾಖಲೆಯನ್ನೂ ಬರೆದಿದೆ.

ಇದರಲ್ಲೇನಿದೆ ವಿಶೇಷ?

ಇಟಲಿಯಲ್ಲಿ ಬೆಳೆಯುವ ವಿಶೇಷ, ವಿರಳ ‘ಬಿಳಿ ಅಣಬೆ’ಯಿಂದ ಈ ಐಸ್‌ಕ್ರೀಂಅನ್ನು ತಯಾರಿಸಲಾಗಿದೆ. ಬಿಳಿ ಅಣಬೆಯು ಒಂದು ಕೆ.ಜಿಗೆ 12 ಲಕ್ಷ ರೂ. ಆಗಿದೆ. ಇದನ್ನು ಬಳಸಿ ಐಸ್‌ಕ್ರೀಂ ತಯಾರಿಸಲಾಗಿದೆ. ಇನ್ನು ಪರ್ಮಿಜಿಯಾನೋ ರೆಗ್ಗಿಯಾನೋ, ಸೇಕ್‌ ಲೀಸ್‌ ಸೇರಿ ಹಲವು ದುಬಾರಿ ಉತ್ಪನ್ನಗಳನ್ನು ಬಳಸಿ ಐಸ್‌ಕ್ರೀಂ ತಯಾರಿಸಲಾಗಿದೆ.

ಹೀಗಿದೆ ನೋಡಿ ದುಬಾರಿ ಐಸ್‌ಕ್ರೀಂ

ಇದನ್ನೂ ಓದಿ: Viral News : ಏರ್‌ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್‌! ವೈರಲ್‌ ಆಯ್ತು ಸುದ್ದಿ

ಒಂದೂವರೆ ವರ್ಷದಿಂದ ತಯಾರು

ದುಬಾರಿ ಬೆಲೆಯ, ವಿಶೇಷ ಐಸ್‌ಕ್ರೀಂ ತಯಾರಿಸಲು ಜಪಾನ್‌ ಕಂಪನಿಯು ಒಂದೂವರೆ ವರ್ಷ ತೆಗೆದುಕೊಂಡಿದೆ. “ಒಂದೂವರೆ ವರ್ಷದ ಶ್ರಮದಿಂದಾಗಿ ಐಸ್‌ಕ್ರೀಂ ಸಿದ್ಧಗೊಂಡಿದೆ. ಹಲವು ಬಾರಿ ರುಚಿ ಸರಿ ಹೊಂದದಿದ್ದರೆ, ಸಣ್ಣದಾಗಿಯೂ ದೋಷ ಕಂಡುಬಂದರೆ ಮತ್ತೆ ಐಸ್‌ಕ್ರೀಂ ತಯಾರಿಸಲಾಗಿದೆ. ಇದೇ ಕಾರಣದಿಂದಾಗಿಯೇ ಇದು ದುಬಾರಿ ಎನಿಸಿದೆ” ಎಂಬುದಾಗಿ ಸೆಲ್ಲಾಟೊ ಕಂಪನಿ ವಕ್ತಾರ ತಿಳಿಸಿದ್ದಾರೆ. ಅಂದಹಾಗೆ, ಇಷ್ಟೊಂದು ಬೆಲೆ ಕೊಟ್ಟು ಯಾರು ಐಸ್‌ಕ್ರೀಂ ತಿನ್ನುತ್ತಾರೆ ಎಂಬುದೇ ಈಗ ಎಲ್ಲರ ಪ್ರಶ್ನೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Shocking News: ಎಚ್‌ಐವಿ ಪಾಸಿಟಿವ್‌ ವಿಚಾರ ಮುಚ್ಚಿಟ್ಟ ಲೈಂಗಿಕ ಕಾರ್ಯಕರ್ತೆ; 211 ಮಂದಿಗೆ ಎದುರಾಯ್ತು ಸಂಕಷ್ಟ

Shocking News: ಅಮೆರಿಕದ ಓಹಿಯೋ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಲೈಂಗಿಕ ಕಾರ್ಯಕರ್ತೆಯೊಬ್ಬಳು ತಾನು ಎಚ್ಐವಿ ಪಾಸಿಟಿವ್ ಪೀಡಿತೆ ಎಂದು ತಿಳಿದಿದ್ದರೂ 200ಕ್ಕೂ ಹೆಚ್ಚು ಗ್ರಾಹಕರೊಂದಿಗೆ ಒಡನಾಟ ನಡೆಸಿದ್ದರಿಂದ ಅವರೆಲ್ಲ ಎಚ್ಐವಿ ಪರೀಕ್ಷೆಗೆ ಒಳಗಾಗಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 30 ವರ್ಷದ ಲೈಂಗಿಕ ಕಾರ್ಯಕರ್ತೆ ಲಿಂಡಾ ಲೆಸೆಸೆಸ್ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

VISTARANEWS.COM


on

Shocking News
Koo

ವಾಷಿಂಗ್ಟನ್‌: ಅಮೆರಿಕದ ಓಹಿಯೋ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು (Shocking News), ಲೈಂಗಿಕ ಕಾರ್ಯಕರ್ತೆಯೊಬ್ಬಳು ತಾನು ಎಚ್ಐವಿ ಪಾಸಿಟಿವ್ (HIV positive) ಪೀಡಿತೆ ಎಂದು ತಿಳಿದಿದ್ದರೂ 200ಕ್ಕೂ ಹೆಚ್ಚು ಗ್ರಾಹಕರೊಂದಿಗೆ ಒಡನಾಟ ನಡೆಸಿದ್ದರಿಂದ ಅವರೆಲ್ಲ ಎಚ್ಐವಿ ಪರೀಕ್ಷೆಗೆ ಒಳಗಾಗಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ʼʼ30 ವರ್ಷದ ಲೈಂಗಿಕ ಕಾರ್ಯಕರ್ತೆ ಲಿಂಡಾ ಲೆಸೆಸೆಸ್ (Linda Leccesse)ಗೆ ತನಗೆ ಮಾರಣಾಂತಿಕ ಎಚ್ಐವಿ ವೈರಸ್‌ ತಗುಲಿದೆ ಎನ್ನುವ ವಿಚಾರ ಮೊದಲೇ ತಿಳಿಸಿತ್ತು. ಆದರೆ ಅದನ್ನು ಮುಚ್ಚಿಟ್ಟು ಆಕೆ ಸುಮಾರು 211 ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿದ್ದಾಳೆ. ಆಕೆಯೊಂದಿಗೆ ಈ ʼಅಪಾಯಕಾರಿ ವ್ಯವಹಾರʼದಲ್ಲಿ ತೊಡಗಿಸಿಕೊಂಡವರು ಕೂಡಲೇ ಪರಕ್ಷೆ ಮಾಡಿಸಿಕೊಳ್ಳಿʼʼ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

2022ರ ಜನವರಿಯಲ್ಲಿ ಲಿಂಡಾ ಪರೀಕ್ಷೆ ಮಾಡಿಕೊಂಡಲಾಗಲೇ ಎಚ್‌ಐವಿ ಪಾಸಿಟಿವ್‌ ವರದಿ ಬಂದಿತ್ತು. ಆದರೂ ಆಕೆ ಸುಮಾರು ಎರಡು ವರ್ಷಗಳ ಕಾಲ ವಿವಿಧ ರಾಜ್ಯಗಳಲ್ಲಿ ಹಲವು ಗ್ರಾಹಕರ ಸಂಪರ್ಕಕ್ಕೆ ಬಂದಿದ್ದಾಳೆ. ಈಕೆ ಪಶ್ಚಿಮ ವರ್ಜೀನಿಯಾ ಗಡಿಯ ಸಮೀಪವಿರುವ ಆಗ್ನೇಯ ಓಹಿಯೋದ ಸಣ್ಣ ನಗರವಾದ ಮಾರಿಯೆಟ್ಟಾದ ಮಾರ್ಕೆಟ್ ಸ್ಟ್ರೀಟ್‌ನಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದಾಳೆ. ಅದಾಗ್ಯೂ ಸಂಭಾವ್ಯ ಸೋಂಕಿತ ವ್ಯಕ್ತಿಗಳು ಪೂರ್ವ ಕರಾವಳಿಯಾದ್ಯಂತ ಹರಡಿರುವ ಸಾಧ್ಯತೆ ಇದೆ.

“ಲಿಂಡಾಳ ಗ್ರಾಹಕರು ಫ್ಲೋರಿಡಾದಿಂದ ಪೂರ್ವ ಕರಾವಳಿಯವರೆಗೆ ಹಂಚಿ ಹೋಗಿದ್ದಾರೆ. ಅವರನ್ನೆಲ್ಲ ಪತ್ತೆ ಮಾಡುವುದು ಕಷ್ಟಸಾಧ್ಯವಾದರೂ ಸ್ಥಳೀಯರನ್ನು ಸಂಪರ್ಕಿಸಲು ಯತ್ನಿಸುತ್ತೇವೆ. ಅವರಿಗೆ ವೈದ್ಯಕೀಯ ಪರೀಕ್ಷೆಯ ಸಲಹೆ ನೀಡುತ್ತೇವೆ” ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ಕಚೇರಿಯ ಮುಖ್ಯಸ್ಥ ಮಾರ್ಕ್ ವಾರ್ಡನ್ ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಈಗಾಗಲೇ ಲಿಂಡಾಳ ಗ್ರಾಹಕರ ಪತ್ತೆ ಕಾರ್ಯ ಆರಂಭವಾಗಿದೆ.

ಲಿಂಡಾ ಜತೆಗೆ ಒಡನಾಟ ಹೊಂದಿದ್ದ ವ್ಯಕ್ತಿಗಳ ಬಗ್ಗೆ ತಿಳಿದಿದ್ದರೂ ಅವರ ಮಾಹಿತಿ ಹಂಚಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದು ಹಗರಣವಲ್ಲ. ಸಾರ್ವಜನಿಕ ಆರೋಗ್ಯ ಜಾಗೃತಿ ಎಂದು ಅವರು ಹೇಳಿದ್ದಾರೆ. ನಾವು ಮಾಹಿತಿಯನ್ನು ಸಂಪೂರ್ಣ ಗೌಪ್ಯದಲ್ಲಿ ಇಡುತ್ತೇವೆ ಎಂದೂ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೇ 13ರಂದು ಮಾರ್ಕೆಟ್ ಸ್ಟ್ರೀಟ್‌ನಿಂದ ಲಿಂಡಾ ಲೆಸೆಸೆಸ್‌ನನ್ನು ಬಂಧಿಸಲಾಗಿತ್ತು. ಬಳಿಕ ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪೊಲೀಸರಿಗೆ ಆಕೆ ಎಚ್‌ಐವಿ ಪೀಡಿತೆ ಎಂದು ತಿಳಿದು ಬಂದಿತ್ತು. ಅಲ್ಲದೆ ಆಕೆ ತನಗೆ ಈ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆಯೇ ಅರಿವಿತ್ತು ಎಂದು ತಿಳಿಸಿದ್ದಳು.

ಇದನ್ನೂ ಓದಿ: Murder Case : ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಸುಲಿಗೆ ಮಾಡಿ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ

ಅಶ್ಲೀಲ ವಿಡಿಯೊ ನೋಡಿ ಅಕ್ಕನನ್ನೇ ಗರ್ಭಿಣಿ ಮಾಡಿದ ಬಾಲಕ!

ಮುಂಬೈ: ಮಹಾರಾಷ್ಟ್ರದಲ್ಲಿ 13 ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿ 15 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಬಾಲಕನು ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ ಪರಿಣಾಮ, ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ. ಮೂರು ತಿಂಗಳು ಗರ್ಭಿಣಿಯಾಗಿರುವ ಬಾಲಕಿಯನ್ನು ಪೋಷಕರು ಮುಂಬೈನಲ್ಲಿರುವ ವಾಶಿ ಜನರಲ್‌ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ, ಗರ್ಭಪಾತ ಮಾಡಿಸಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ದೇಶ

AAP Funds: ನಿಯಮ ಉಲ್ಲಂಘಿಸಿ ಬೇರೆ ದೇಶಗಳಿಂದ ಆಪ್‌ 7 ಕೋಟಿ ರೂ. ದೇಣಿಗೆ ಸ್ವೀಕಾರ; ಇ.ಡಿ ಸ್ಫೋಟಕ ಮಾಹಿತಿ!

AAP Funds: 2014ರಿಂದ 2022ರ ಅವಧಿಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬೇರೆ ದೇಶಗಳಿಂದ 7.08 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಆದರೆ, ಇಷ್ಟು ಹಣ ಸ್ವೀಕರಿಸಲು ಆಪ್‌ ಎಫ್‌ಸಿಆರ್‌ಎ ನಿಯಮಗಳನ್ನು ಪಾಲಿಸಿಲ್ಲ. ಪಕ್ಷಕ್ಕೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳಿಂದ ನಿಯಮಗಳನ್ನು ಪಾಲಿಸದೆಯೇ ದೇಣಿಗೆ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಇ.ಡಿ ಮಾಹಿತಿ ನೀಡಿದೆ.

VISTARANEWS.COM


on

AAP Funds
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಗೆ (AAP) 2014ರಿಂದ 2022ರ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ 7.08 ಕೋಟಿ ರೂ. ದೇಣಿಗೆ (AAP Funds) ಹರಿದುಬಂದಿದೆ. ಆದರೆ, ದೇಣಿಗೆ ಸ್ವೀಕರಿಸುವಾಗ ಆಮ್‌ ಆದ್ಮಿ ಪಕ್ಷವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳನ್ನು ಉಲ್ಲಂಘಿಸಿದೆ” ಎಂದು ಜಾರಿ ನಿರ್ದೇಶನಾಲಯವು (E.D) ಮಾಹಿತಿ ನೀಡಿದೆ. ಇದು ಈಗ ಪಕ್ಷ ಹಾಗೂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಹೊಸ ಸಂಕಷ್ಟ ತಂದಿದೆ.

ವಿದೇಶಿ ದೇಣಿಗೆ ನಿಯಮಗಳನ್ನು ಆಪ್‌ ಪಾಲಿಸದ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “2014ರಿಂದ 2022ರ ಅವಧಿಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬೇರೆ ದೇಶಗಳಿಂದ 7.08 ಕೋಟಿ ರೂ. ದೇಣಿಗೆ ಹರಿದುಬಂದಿದೆ. ಆದರೆ, ಇಷ್ಟು ಹಣ ಸ್ವೀಕರಿಸಲು ಆಪ್‌ ಎಫ್‌ಸಿಆರ್‌ಎ ನಿಯಮಗಳನ್ನು ಪಾಲಿಸಿಲ್ಲ. ಪಕ್ಷಕ್ಕೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಸೌದಿ ಅರೇಬಿಯಾ, ಕುವೈತ್‌, ಒಮಾನ್‌ ಸೇರಿ ಹಲವು ದೇಶಗಳಿಂದ ಆಪ್‌ ನಿಯಮ ಉಲ್ಲಂಘಿಸಿ ದೇಣಿಗೆ ಸ್ವೀಕರಿಸಿದೆ” ಎಂದು ತಿಳಿಸಿದ್ದಾರೆ.

2021ರಲ್ಲೇ ವಿಚಾರಣೆ ನಡೆದಿತ್ತು

ವಿದೇಶಗಳಿಂದ ದೇಣಿಗೆ ಪಡೆಯುವಾಗ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೇ 2021ರ ಸೆಪ್ಟೆಂಬರ್‌ನಲ್ಲಿ ಆಪ್‌ ನಾಯಕ ಪಂಕಜ್‌ ಕುಮಾರ್‌ ಅವರ ವಿಚಾರಣೆ ನಡೆಸಲಾಗಿತ್ತು. ಈಗ, ಆಪ್‌ಗೆ ದೇಣಿಗೆ ನೀಡಿದವರ ಕುರಿತು ತಪ್ಪು ಮಾಹಿತಿ ನೀಡಲಾಗಿದೆ. ದೇಣಿಗೆ ನೀಡಿದವರ ಮಾಹಿತಿಯನ್ನು ಮರೆಮಾಚಲಾಗಿದೆ ಎಂಬುದು ಸೇರಿ ಹಲವು ಆರೋಪಗಳನ್ನು ಇ.ಡಿ ಮಾಡಿದೆ. ಇದರ ಕುರಿತು ಕೇಂದ್ರ ಗೃಹ ಸಚಿವಾಲಯವು ಯಾವ ತೀರ್ಮಾನ ತೆಗೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.

ದೆಹಲಿ ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾಗಿದ್ದರು. ಅವರೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಜೂನ್‌ 2ರಂದು ಮತ್ತೆ ಜೈಲು ಸೇರಲಿದ್ದಾರೆ. ಆಪ್‌ನ ಹಲವು ಸಚಿವರು ಈಗಾಗಲೇ ಜೈಲಿನಲ್ಲಿದ್ದಾರೆ. ಇನ್ನು ರಾಜ್ಯಸಭೆಯ ಆಪ್‌ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಕಾರಣ ಅರವಿಂದ್‌ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಆಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಉದ್ಯಮಿಗಳಿಂದ 200 ಕೋಟಿ ರೂ. ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌, ಆಮ್‌ ಆದ್ಮಿ ಪಕ್ಷಕ್ಕೆ 60 ಕೋಟಿ ರೂ.ಗಳನ್ನು ದೇಣಿಗೆ ನೀಡಿರುವುದಾಗಿ 2022ರಲ್ಲಿ ಹೇಳಿದ್ದ. ಸುಕೇಶ್‌ ಚಂದ್ರಶೇಖರ್‌ ಬಿಜೆಪಿಯ ವಕ್ತಾರನಂತೆ ಮಾತನಾಡುತ್ತಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಆ ಪಕ್ಷ ಸೇರಬಹುದು ಎಂದು ಆಮ್‌ ಆದ್ಮಿ ಈ ಹಿಂದೆ ಟೀಕಿಸಿತ್ತು.

ಇದನ್ನೂ ಓದಿ: Arvind Kejriwal: “ತಾಕತ್‌ ಇದ್ರೆ ಅರೆಸ್ಟ್‌ ಮಾಡಿ…”; ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಓಪನ್‌ ಚಾಲೆಂಜ್‌

Continue Reading

ದೇಶ

Ebrahim Raisi: ಇಬ್ರಾಹಿಂ ರೈಸಿ ನಿಧನದಿಂದ ಭಾರತದಲ್ಲಿ ಚಿನ್ನ, ಪೆಟ್ರೋಲ್‌ ಬೆಲೆ ಏರಿಕೆ? ಹೀಗಿದೆ ವಿಶ್ವ ಮಾರುಕಟ್ಟೆ ಸ್ಥಿತಿ-ಗತಿ

Ebrahim Raisi: ಇಬ್ರಾಹಿಂ ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಂತೂ ಹೆಚ್ಚಿನ ಆತಂಕ ಎದುರಾಗಿದೆ. ಜಾಗತಿಕ ರಾಜಕೀಯ ಹಾಗೂ ಹಣಕಾಸು ಸ್ಥಿತಿಯ ಮೇಲೆ ಇಬ್ರಾಹಿಂ ರೈಸಿ ಸಾವು ಪರಿಣಾಮ ಬೀರಿದೆ. ಇಬ್ರಾಹಿಂ ರೈಸಿ ನಿಧನದಿಂದಾಗಿ ಪ್ರಮುಖ ತೈಲೋತ್ಪಾದಿತ ದೇಶಗಳ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭಾರತದಲ್ಲೂ ಬೆಲೆಯೇರಿಕೆ ನಿಶ್ಚಿತ ಎಂದು ಹೇಳಲಾಗುತ್ತಿದೆ.

VISTARANEWS.COM


on

Ebrahim Raisi
Koo

ಟೆಹ್ರಾನ್:‌ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ (ಮೇ 19) ಅಜರ್‌ಬೈಜಾನ್‌ನ (Azerbaijan) ಗುಡ್ಡಗಾಡು ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದಾರೆ. ಹಂಗಾಮಿ ಅಧ್ಯಕ್ಷರನ್ನಾಗಿ ಮೊಹಮ್ಮದ್‌ ಮೊಖ್‌ಬೈರ್‌ (Mohammad Mokhber) ಅವರನ್ನು ನೇಮಿಸಲಾಗಿದೆ. ಇಬ್ರಾಹಿಂ ರೈಸಿ (Ebrahim Raisi) ನಿಧನದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 5 ದಿನ ಶೋಕಾಚರಣೆ ಘೋಷಿಸಲಾಗಿದೆ. ಭಾರತದಲ್ಲೂ ಒಂದು ದಿನ ಶೋಕಾರಣೆ ಘೋಷಿಸಲಾಗಿದೆ. ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಹೌದು, ಇರಾನ್‌ ಅಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಬಂಗಾರದ ಬೆಲೆ ಜಾಸ್ತಿಯಾಗಿದೆ. ಕೆಲವೇ ದಿನಗಳಲ್ಲಿ ತೈಲ ಹಾಗೂ ಷೇರು ಮಾರುಕಟ್ಟೆ ಮೇಲೆಯೂ ಇದರ ಪರಿಣಾಮ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಚಿನ್ನದ ಬೆಲೆ ಶೇ.1ರಷ್ಟು ಏರಿಕೆ

ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ ಚಿನ್ನದ ಬೆಲೆಯು ಶೇ.1ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ಗೆ (Ounce) (ಒಂದು ಔನ್ಸ್‌ ಎಂದರೆ 28.3 ಗ್ರಾಂ) 2,438.44 ಡಾಲರ್‌ ಆಗಿದೆ. ಬೆಳ್ಳಿಯ ಬೆಲೆಯೂ ಕಳೆದ 11 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೆ, ಖಂಡಿತವಾಗಿಯೂ ಭಾರತದಲ್ಲಿ ಚಿನ್ನದ ಬೆಲೆಯೇರಿಕೆ ಆಗಲಿದೆ. ಈಗಾಗಲೇ ಭಾರತದಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಈಗ ಮತ್ತಷ್ಟು ಏರಿಕೆಯಾಗುವ ಭೀತಿ ಉಂಟಾಗಿದೆ.

ತೈಲ ಮಾರುಕಟ್ಟೆ ಗತಿ ಏನು?

ಇಬ್ರಾಹಿಂ ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಂತೂ ಹೆಚ್ಚಿನ ಆತಂಕ ಎದುರಾಗಿದೆ. ಜಾಗತಿಕ ರಾಜಕೀಯ ಹಾಗೂ ಹಣಕಾಸು ಸ್ಥಿತಿಯ ಮೇಲೆ ಇಬ್ರಾಹಿಂ ರೈಸಿ ಸಾವು ಪರಿಣಾಮ ಬೀರಿದೆ. ಇಬ್ರಾಹಿಂ ರೈಸಿ ನಿಧನದಿಂದಾಗಿ ಪ್ರಮುಖ ತೈಲೋತ್ಪಾದಿತ ದೇಶಗಳ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಸೌದಿ ಅರೇಬಿಯಾ ದೊರೆಯು ಜಪಾನ್‌ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇರಾನ್‌ನಲ್ಲಿಯೂ ಅಧ್ಯಕ್ಷರ ಬದಲಾವಣೆಯಿಂದಾಗಿ ತೈಲದ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ.

crude oil

ಹೀಗೆ, ತೈಲ ಉತ್ಪಾದಿಸುವ ದೇಶಗಳಲ್ಲಿ ರಾಜಕೀಯ ಸ್ಥಿತ್ಯಂತರಗಳ ಬದಲಾವಣೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲದ ಬೆಲೆಯು ಏರಿಕೆಯಾಗಲಿದೆ. ಇನ್ನು ಉತ್ಪಾದನೆ ಕಡಿಮೆಯಾಗಿ, ಬೇಡಿಕೆ ಜಾಸ್ತಿಯಾದರೆ ಕಚ್ಚಾತೈಲದ ಬೆಲೆಯು ಗಗನಕ್ಕೇರಲಿದೆ. ಇದರಿಂದ ಸಹಜವಾಗಿಯೇ ಭಾರತದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಇನ್ನಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿನ್ನ, ಇಂಧನದ ಜತೆಗೆ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

Continue Reading

ವಿದೇಶ

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಇರಾನ್ ಅಧ್ಯಕ್ಷರ ಸಾವು ವಿಶ್ವದಲ್ಲೇ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ವಿಮಾನ, ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ರಾಜಕೀಯ ನಾಯಕರ ಸಾವು ಇದೇ ಮೊದಲಲ್ಲ. ವಿಶ್ವದ ಹತ್ತು ಪ್ರಮುಖ ನಾಯಕರು ಈ ರೀತಿಯ ದುರಂತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Air Crashes
Koo

ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್‌ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.


ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)

ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.

ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)

ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.


ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)

ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.

ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)

ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.


ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)

ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.


ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)

ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.

ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)

ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?


ಕಾಂಗ್ರೆಸ್‌ ನಾಯಕ ಮಾಧವರಾವ್ ಸಿಂಧಿಯಾ (2001)

ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)

ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್‌ ರಾಜಶೇಖರ್‌ ರೆಡ್ಡಿ ಅವರೂ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

Continue Reading
Advertisement
jain monk samadhi sena chikkodi sallekhana
ಚಿಕ್ಕೋಡಿ39 seconds ago

Sallekhana: ಸಲ್ಲೇಖನ ವ್ರತ ಸ್ವೀಕರಿಸಿ ಸಮಾಧಿಸೇನ ಮುನಿ ಜಿನೈಕ್ಯ

Viral Video
ವೈರಲ್ ನ್ಯೂಸ್7 mins ago

Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Prashant Kishor
Lok Sabha Election 202413 mins ago

Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Cannes 2024 Sonam Kapoor dubs this outfit the best at Cannes this year
ಬಾಲಿವುಡ್32 mins ago

Cannes 2024: ಇವರ ಫ್ಯಾಷನ್‌ ಮುಂದೆ ಐಶ್ವರ್ಯಾ ರೈ, ಕಿಯಾರಾನೂ ಇಲ್ಲ! ಸೋನಮ್ ಹೊಗಳಿದ್ದು ಯಾರನ್ನ?

cisf soldier death raichur
ಕ್ರೈಂ50 mins ago

Soldier death: ಬಂದೂಕು ಆಕಸ್ಮಿಕವಾಗಿ ಸಿಡಿದು CISF ಯೋಧ ಸಾವು

Viral Video
ವೈರಲ್ ನ್ಯೂಸ್57 mins ago

Viral Video: ಈಜುಕೊಳದಲ್ಲಿ ಭೀಕರ ದುರಂತ; ಸ್ಟಂಟ್‌ ಮಾಡಲು ಹೋಗಿ ಯುವಕನ ಪ್ರಾಣಕ್ಕೆ ಕುತ್ತು-ವಿಡಿಯೋ ನೋಡಿ

T20 World Cup 2024
ಕ್ರಿಕೆಟ್58 mins ago

T20 World Cup 2024: ಆಸ್ಟ್ರೇಲಿಯಾ ತಂಡ ಸೇರಿದ ಸ್ಫೋಟಕ ಬ್ಯಾಟರ್​ ಫ್ರೇಸರ್-ಮೆಕ್‌ಗುರ್ಕ್​

Crime News
ದೇಶ1 hour ago

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

missing case davanagere
ಕ್ರೈಂ2 hours ago

Missing case: ಒಂದೇ ಕುಟುಂಬದ ಮೂವರು ನಿಗೂಢ ನಾಪತ್ತೆ

Star Kids with Sanskrit Names From Yami Gautam to Priyanka Chopra
ಬಾಲಿವುಡ್2 hours ago

Star Kids with Sanskrit Names: ಮಕ್ಕಳಿಗೆ ಸಂಸ್ಕೃತ ಮೂಲದ ಹೆಸರನ್ನೇ ಇಟ್ಟ ಸ್ಟಾರ್ಸ್‌ಗಳಿವರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌