Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆ; ಐಬಿಪಿಎಸ್‌ನಿಂದ ಮತ್ತೆ ನೇಮಕ; complete details - Vistara News

ಉದ್ಯೋಗ

Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆ; ಐಬಿಪಿಎಸ್‌ನಿಂದ ಮತ್ತೆ ನೇಮಕ; complete details

Banking Recruitment 2024: ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 4455 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ.

VISTARANEWS.COM


on

Banking Recruitment 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

-ಆರ್‌ ಕೆ ಬಾಲಚಂದ್ರ, ಬ್ಯಾಂಕಿಂಗ್, ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು, ವೃತ್ತಿ ಮಾರ್ಗದರ್ಶಕರು
ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ದೇಶದ (Banking Recruitment 2024) ಹನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ 20,566ಕ್ಕೂ ಹೆಚ್ಚಿನ ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಂತಾಗಿದೆ. ಪದವೀಧರ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಈಗ ಮತ್ತೊಂದು ಸುತ್ತಿನ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಬಾರಿ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 4455 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಎಂದಿನಂತೆ, ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 657, ಪರಿಶಿಷ್ಟ ಪಂಗಡಕ್ಕೆ 332, ಹಿಂದುಳಿದ ವರ್ಗದವರಿಗೆ 1185, ಆರ್ಥಿಕವಾಗಿ ಹಿಂದುಳಿದ ವರ್ಗ ದವರಿಗೆ 435 ಹಾಗೂ ಸಾಮಾನ್ಯ ವರ್ಗದವರಿಗೆ 1,846 ಹುದ್ದೆಗಳನ್ನು ಮೀಸಲಿಡಲಾಗಿದೆ.

ಆಗಸ್ಟ್ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆನ್ಲೈ ನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಆಗಸ್ಟ್ 21, 2024 ಕೊನೆ ದಿನ.

ಯಾವ ಬ್ಯಾಂಕ್, ಎಷ್ಟು ಹುದ್ದೆ?

ಕೆನರಾ ಬ್ಯಾಂಕ್ 750, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ 360, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2000, ಬ್ಯಾಂಕ್ ಆಫ್ ಇಂಡಿಯಾ 885 ಪಂಜಾಬ್ ನ್ಯಾಷನಲ್ ಬ್ಯಾಂಕ್ 200, ಇಂಡಿಯನ್ ಒವರಸೀಸ್ ಬ್ಯಾಂಕ್ 260,ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ಅರ್ಜಿ ಸಲ್ಲಿಸಲು ಹಾಗೂ ನೋಂದಣಿಗೆ ಈ ಲಿಂಕ್‌ಗಳನ್ನು ನೋಡಬಹುದು: www.ibps.in ಮತ್ತು https://www.ibps.in/index.php/management-trainees-xiv/

ಶೈಕ್ಷಣಿಕ ಅರ್ಹತೆ: (21.08.2024ಕ್ಕೆ ಅನ್ವಯಿಸುವಂತೆ)

ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

ವಯೋಮಿತಿ: 01.08.2024 ಕನಿಷ್ಠ 20 ವರ್ಷ ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.08.1994 ಕ್ಕಿಂತ ಮುಂಚಿತವಾಗಿ ಮತ್ತು 01.08.2004ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ , ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ: ₹850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹175. ನೋಂದಣಿ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ/ಇಂಟಿಮೇಷನ್ ಶುಲ್ಕಗಳನ್ನು ಹಾಗೂ ಆನ್‌ಲೈನ್ ಪಾವತಿಗಾಗಿ ಬ್ಯಾಂಕ್ ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ.

ಶುಲ್ಕ ಪಾವತಿ: ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ, ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಭಾರತ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ಕೆನೆ ಪದ ರಹಿತ (Non creamy layer) ಷರತ್ತಿನೊಂದಿಗೆ ಇತ್ತೀಚಿನ ಒಬಿಸಿ ಪ್ರಮಾಣಪತ್ರವನ್ನು ಹೊಂದಿರಬೇಕು.

ಪರೀಕ್ಷಾ ಪ್ರಕ್ರಿಯೆ: ಇದೇ ಅಕ್ಟೋಬರ್‌ನಲ್ಲಿ ಪೂರ್ವಭಾವಿ ಪರೀಕ್ಷೆ, ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುಲಿವೆ. ಸಂದರ್ಶನ 2025ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. ರಾಜ್ಯದ 10 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವ ಭಾವಿ ಪರೀಕ್ಷೆ ಮತ್ತು 5 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ 55 ಹುದ್ದೆ; ಹೀಗೆ ಅಪ್ಲೈ ಮಾಡಿ

ಪರೀಕ್ಷಾ ಕೇಂದ್ರಗಳು

ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್): ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿ- ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಮುಖ್ಯ ಪರೀಕ್ಷೆ: ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು

ಪೂರ್ವ ಭಾವಿ ಪರೀಕ್ಷೆಗೆ ತರಬೇತಿ: ಐಬಿಪಿಎಸ್ ವತಿಯಿಂದ ಎಸ್.ಸಿ/ಎಸ್.ಟಿ/ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳು, ಮಾಜಿ ಸೈನಿಕರು, ಅಂಗವಿಕಲ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಕೋರಿಕೆ ಸಲ್ಲಿಸಬೇಕು.  ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ಉಚಿತ ಪರೀಕ್ಷಾ ತರಬೇತಿಯನ್ನೂ ಸೆಪ್ಟೆಂಬರ್ ತಿಂಗಳಲ್ಲಿ ನೀಡಲಾಗುತ್ತದೆ. ತರಬೇತಿ ಸ್ಥಳದ ಖರ್ಚು ವೆಚ್ಚ ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

ಕ್ರೆಡಿಟ್ ಇತಿಹಾಸ

(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸ (Credit History) ಹೊಂದಿರಬೇಕು. ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ (CIBIL)ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.

(ii) ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು CIBIL ಸ್ಥಿತಿ ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ (NOC)ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ 391 ಹುದ್ದೆ; ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಗಮನಿಸಿ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು CIBIL ಸ್ಥಿತಿಯನ್ನು ಒದಗಿಸುವ ಅಗತ್ಯ ವಿಲ್ಲ.

ಅರ್ಜಿ ಸಲ್ಲಿಸುವಾಗ ಗಮನಿಸಿ:

  • ಅಭ್ಯರ್ಥಿ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಆನ್ಲೈನ್ ಅರ್ಜಿ ನಮೂನೆಯಲ್ಲಿ ಬ್ಯಾಂಕ್ ಆದ್ಯ ತೆಯ ಆದೇಶವನ್ನು ಅಳವಡಿಸಲಾಗಿದೆ.
  • ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್‌ಗಳ ಆದ್ಯತೆಯ ಕ್ರಮವನ್ನು ಅಗತ್ಯ ವಾಗಿ ಸೂಚಿಸಬೇಕು.
  • ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ.
  • ಒಮ್ಮೆ ನೀವು ಆಯ್ಕೆಯಾದರೆ ನಂತರದ ದಿನಗಳಲ್ಲಿ ಬ್ಯಾಂಕ್/ಸ್ಥಳ ಬದಲಾವಣೆಗಾಗಿ ಸಲ್ಲಿಸುವ ವಿನಂತಿಯನ್ನು ಪರಿಗಣಿಸಲಾ ಗುವುದಿಲ್ಲ.
  • ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್ ಮೆಂಟ್ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿಸಲ್ಲಿಸುವಾಗ ಬಹಳ ಎಚ್ಚರಿಕೆ ವಹಿಸುವುದು ಒಳಿತು.

ಆಫೀಸರ್ಸ ಆಯ್ಕೆಗೆ ಮೂರು ಹಂತಗಳ ಪರೀಕ್ಷೆ

ನೇಮಕಾತಿ ಪ್ರಕ್ರಿಯೆ

ಪೂರ್ವ ಭಾವಿ ಪರೀಕ್ಷೆ

ಪೂರ್ವ ಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕು. ಆದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ . ಪೂರ್ವ ಭಾವಿ ಪರೀಕ್ಷೆ ಒಂದು ಗಂಟೆ ಅವಧಿಯದ್ದು (ಪ್ರತಿ ಪತ್ರಿಕೆಗೂ 20 ನಿಮಿಷಗಳು). 100 ಅಂಕಗಳಿರುತ್ತವೆ (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿ) ಇದರಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.

ಮುಖ್ಯ ಪರೀಕ್ಷೆ ವಿವರಗಳು

ಕ್ರ. ಸಂವಿಷಯ ಹಾಗೂ ಪತ್ರಿಕೆಪ್ರಶ್ನೆಗಳುಅಂಕಗಳುಅವಧಿ
Iರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್456060 ನಿಮಿಷಗಳು
IIಜನರಲ್/ಎಕಾನಮಿ/ಬ್ಯಾಂಕಿಂಗ್ ಅವೇರ್ನೆ ಸ್404035 ನಿಮಿಷಗಳು
IIIಇಂಗ್ಲಿಷ್ ಭಾಷೆ354040 ನಿಮಿಷಗಳು
IVಡೇಟಾಅನಾಲಿಸಿಸ್ಆ್ಯಂಡ್ ಇಂಟರ್ ಪ್ರಿಟೇಷನ್356045 ನಿಮಿಷಗಳು
 ಒಟ್ಟು1552003 ಗಂಟೆಗಳು
Vಪತ್ರ ಬರವಣಿಗೆ ಮತ್ತು ಪ್ರಬಂಧ022530 ನಿಮಿಷಗಳು

ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕ ವನ್ನು ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಗೆ ಉತ್ತರ ಗುರುತಿಸಲಾಗಿಲ್ಲದಿದ್ದರೆ ಅಂಕ ಕಳೆಯುವುದಿಲ್ಲ. ಮುಖ್ಯ ಪರೀಕ್ಷೆ ಮುಗಿಯುತ್ತಿದ್ದಂತೆ ಇಂಗ್ಲಿಷ್ ಭಾಷೆಗೆ (Letter Writing & Essay- with two questions) ಸಂಬಂಧಿಸಿದಂತೆ 25 ಅಂಕಗಳಿಗೆ ಡಿಸ್ಸ್ಕ್ರಿಟಿವ್ ಟೆಸ್ಟ್ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರ ಬರೆಯಬೇಕು. ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯಕ್ಕೆ ಸಂಬಂಧಿಸಿದಂತೆ ವೈಶಿಷ್ಟಗಳನ್ನು ಗುರುತಿಸುವುದು ಇದರ ಕಾರ್ಯ ವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯವನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಆ. 16 ಕೊನೆಯ ದಿನ

ನೆನಪಿಡಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ .

ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತ ಸಂದರ್ಶನಕ್ಕೆ ಅರ್ಹರಾಗುತ್ತಾರೆ.

ಹಂತ-III ಸಂದರ್ಶನ.

ಆಯ್ಕೆ ಪಟ್ಟಿ: ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಸಂದರ್ಶನಕ್ಕೆ ನಿಗದಿ ಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಶೇ 40 (SC/ST/OBC/PWBD ಅಭ್ಯರ್ಥಿಗಳಿಗೆ ಶೇ 35).

ಪರೀಕ್ಷೆ ಕುರಿತು ಇನ್ನಷ್ಟು ವಿವರಗಳಿಗಾಗಿ www.ibps.in ಮತ್ತುhttps://www.ibps.in/index.php/management-trainees-xiv/ ಜಾಲ ತಾಣ ನೋಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು ರತನ್‌ ಟಾಟಾ!

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ರತನ್‌ ಟಾಟಾ ಮಿಸ್‌ ಮಾಡಿದ್ದರು. ಬೀದಿ ನಾಯಿಗಳ ಅವರ ಕಾಳಜಿಗೆ ಇಡೀ ಲಂಡನ್‌ ಜನತೆ ತಲೆಬಾಗಿತ್ತು.

VISTARANEWS.COM


on

Ratan Tata missed england's royal honour to take care of sick dogs

ಭಾರತದ ಅತಿ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ (Ratan Tata) ಅವರ ಮಾನವೀಯ ಗುಣಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಮಾಡಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂ. ದಾನ ಮಾಡಿದ್ದು.. ಹೀಗೆ ನೂರಾರು ಉದಾಹರಣೆಗಳು ದೊರೆಯುತ್ತವೆ. ಅದಕ್ಕೆ ಇನ್ನೊಂದು ಪುರಾವೆಯು ಇಲ್ಲಿದೆ.

ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರು ಇಂಗ್ಲೆಂಡಿಗೆ ಆಮಂತ್ರಿಸಿದ್ದರು. ಅದು ರಾಯಲ್ ಮನೆತನದ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ರಾಜಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಅತಿ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣವನ್ನು ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡಿದ್ದರು.

ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ನಿಯುಕ್ತ ಆದವರು ಖ್ಯಾತ ಉದ್ಯಮಿಗಳು ಮತ್ತು ಅಂಕಣಕಾರರಾದ ಸುಹೇಲ್ ಸೇಥ ಅವರು. ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆಯನ್ನೂ ಮಾಡಿದ್ದರು.

ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭ ಆಯಿತು. ಸುಹೇಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು! ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಕಾಲ್ ಕನೆಕ್ಟ್ ಆಯಿತು. ಅಂದು ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು.

ಅವರು ಹೇಳುತ್ತಾ ಹೋದರು. “ಸುಹೇಲ್ ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂಥಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್‌ಗೆ ಬರಲು ಸಾಧ್ಯ ಇಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು” ಎಂದರು.

ಸುಹೇಲ್ ಅವರಿಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವರು “ರತನ್ ಜಿ. ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ. ಇಂಗ್ಲಿಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.

ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ನಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಅಂದು ಫೋನ್ ಇಟ್ಟರು. ಸುಹೇಲ್ ಅವರಿಗೆ ಈಗ ನಿಜವಾಗಿ ಉಭಯ ಸಂಕಟ ಆರಂಭ ಆಯಿತು. ಅವರು ಮರುದಿನವೇ ಮುಂಜಾನೆ ಬಕಿಂಗ್ ಹ್ಯಾಮ್ ಅರಮನೆಗೆ ಹೋದಾಗ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು.

ಅವರು ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಹೇಳಿದ್ದನ್ನು ಪ್ರೀತಿಯಿಂದ ಹೇಳಿದರು. ಅದೇ ಕಾರಣವನ್ನು ಕೂಡ ನಿವೇದನೆ ಮಾಡಿಕೊಂಡರು. ಒಮ್ಮೆ ಚಾರ್ಲ್ಸ್ ಹಣೆಯ ಮೇಲೆ ನೆರಿಗೆಗಳು ಕಂಡುಬಂದವು. ತಕ್ಷಣ ಅವರ ಮೊದಲ ಉದ್ಗಾರ – That’s the man!

“ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ” ಎಂದು ಚಾರ್ಲ್ಸ್ ಹೇಳಿದರು. ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮವು ಮುಂದೆ ನಡೆಯಲೇ ಇಲ್ಲ!

ಟಾಟಾ ಒಮ್ಮೆ ತಮ್ಮ ಎರಡು ನಾಯಿಗಳ ಬಗ್ಗೆ ಮಾಡಿದ ಟ್ವೀಟ್ ಹೀಗಿದೆ – Tito and Tango seek nothing in return for their affection other than a little love and attention. I miss them terribly when I am away!

ಯಾರೂ ಸುಖಾಸುಮ್ಮನೆ ದೊಡ್ಡವರು ಆಗುವುದಿಲ್ಲ! ಅವೆರಡೂ ರತನ್ ಟಾಟಾ ಸಾಕಿದ ಬೀದಿ ನಾಯಿಗಳು ಆಗಿದ್ದವು!

ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಪ್ರತಿ ಉದ್ಯೋಗಿಯನ್ನೂ ಅವರು ಅದೇ ಮಾನವೀಯ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ಅನೇಕರು ಹೇಳಿದ್ದಾರೆ. ಅಂದ ಹಾಗೆ ರತನ್ ಟಾಟಾ ಈವರೆಗೆ ಮದುವೆ ಆಗಿಲ್ಲ! ನಾನು ನಾಲ್ಕು ಬಾರಿ ಮದುವೆಯ ಹೊಸ್ತಿಲಿನ ತನಕ ಬಂದು ಭಯದಿಂದ ಹಿಂದೆ ಹೋಗಿದ್ದೆ ಎಂದವರು ತಮಾಷೆಗೆ ಹೇಳಿದ್ದಾರೆ!

Continue Reading

ದೇಶ

Ratan Tata : ರತನ್‌ ಟಾಟಾ ಕಂಪನಿ ಸೇರಿದ್ದು ಸಾಮಾನ್ಯ ಉದ್ಯೋಗಿಯಾಗಿ! ಉದ್ಯಮ ರಂಗದ ಗುರು ಆಗಿದ್ದೇಗೆ?

Ratan Tata : ತಮ್ಮ ಸಂಪತ್ತಿನ ಬಹುಪಾಲನ್ನು ಆಗಲೇ ದಾನ ಮಾಡಿರುವ ರತನ್‌ ಟಾಟಾ ಅವರು ತಮ್ಮದೇ ಕಂಪನಿಯನ್ನು ಸೇರಿದ್ದು ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಎನ್ನುವುದು ಅವರ ದೊಡ್ಡಸ್ತಿಕೆ.

VISTARANEWS.COM


on

Ratan Tata joined the company as an ordinary employee but Why is he the guru of the industry

ಭಾರತದ ಮಹೋನ್ನತ ಬಿಸಿನೆಸ್ ಮ್ಯಾಗ್ನೆಟ್ ರತನ್ ಟಾಟಾ ಪ್ರಧಾನಮಂತ್ರಿಗಳ ಕೊರೊನಾ ತುರ್ತು ಪರಿಹಾರ ನಿಧಿಗೆ 1500 ಕೋಟಿ ರೂಪಾಯಿ ಕೊಡುಗೆ ನೀಡಿದಾಗ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟಿದ್ದರು! (ಇದು ಎಷ್ಟೋ ರಾಷ್ಟ್ರಗಳ ವಾರ್ಷಿಕ ಬಜೆಟ್‌ಗಿಂತಲೂ ಅಧಿಕ!). ಎಷ್ಟೋ ಸಿರಿವಂತರು ಹೃದಯವಂತರು ಆಗಿರುವುದಿಲ್ಲ. ಆದರೆ ರತನ್ ಟಾಟಾ ಅದಕ್ಕೊಂದು ಅಪವಾದ. ಅವರು ತಮ್ಮ ಸಂಪತ್ತಿನ 60-65% ಭಾಗವನ್ನು ಈಗಾಗಲೇ ದಾನ ಮಾಡಿಯಾಗಿದೆ! ಬೇರೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಿ ಎಸ್ ಆರ್ ಯೋಜನೆಗಳನ್ನು ರೂಪಿಸಲು ಕೂಡ ರತನ್ ಟಾಟಾ ಮಾದರಿಯಾಗಿ ನಿಂತಿದ್ದರು.

ಟಾಟಾ ಕಂಪೆನಿಗೆ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಸೇರಿದರು!

1937 ರಲ್ಲಿ ಸೂರತ್ ನಗರದಲ್ಲಿ ಜನಿಸಿದ ರತನ್ ಟಾಟಾ ವಿದೇಶಗಳಲ್ಲೇ ಹೆಚ್ಚು ಶಿಕ್ಷಣ ಪಡೆದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಕೆ. 1961 ರಲ್ಲಿ ಟಾಟಾ ಕಂಪನಿಯನ್ನು ಒಬ್ಬ ಸಾಮಾನ್ಯವಾದ ಉದ್ಯೋಗಿಯಾಗಿ ಸೇರಿದ ಅವರು ತಮ್ಮ ಕಾರ್ಯಕ್ಷಮತೆ, ಶಿಸ್ತು ಮತ್ತು ದಕ್ಷತೆಯಿಂದ ಎಲ್ಲರ ಮನಗೆದ್ದರು. 1991 ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಭೀಷ್ಮ ಜೆ. ಆರ್. ಡಿ. ಟಾಟಾ ಅವರು ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗುವಾಗ ತನ್ನ ಉತ್ತರಾಧಿಕಾರಿಯಾಗಿ ರತನ್ ಟಾಟಾ ಅವರನ್ನು ನೇಮಕ ಮಾಡಿದರು.

ಇದು ಟಾಟಾ ವಿವಿಧ ಕಂಪನಿಗಳ ಮುಖ್ಯಸ್ಥರ ಅಸಾಮಾಧಾನಕ್ಕೆ ಕಾರಣವಾಯಿತು. ಆದರೆ ರತನ್ ಟಾಟಾ ಇದಕ್ಕೆಲ್ಲ ಸೊಪ್ಪು ಹಾಕುವವರೇ ಅಲ್ಲ! ಎಲ್ಲ ಟಾಟಾ ಸಂಸ್ಥೆಗಳನ್ನು ಒಗ್ಗೂಡಿಸಿ ಟಾಟಾ ಸಮೂಹ ಸಂಸ್ಥೆಯಾಗಿ ರೂಪಿಸಿದ್ದು ಅವರ ಜಾಣ ನಡೆಯಾಗಿತ್ತು. ಹಿರಿಯ ತಲೆಗಳನ್ನು ನಿವೃತ್ತಿ ಮಾಡಿ ಹೊಸಬರಿಗೆ ಅವಕಾಶ ನೀಡಿದರು. ಹೊಸ ಆವಿಷ್ಕಾರ, ನಾವೀನ್ಯತೆ, ಜಾಗತಿಕ ದೃಷ್ಟಿಕೋನ, ಆರ್ಥಿಕ ಶಿಸ್ತು, ಪರಿಣಾಮಕಾರಿ ನಿರ್ಧಾರ, ಉತ್ತರದಾಯಿತ್ವ, ಜವಾಬ್ದಾರಿಗಳ ಹಂಚಿಕೆ ಇವುಗಳಿಗೆ ಆದ್ಯತೆ ನೀಡಿದರು. ಆರ್ಥಿಕ ಶಿಸ್ತು ಅವರಲ್ಲಿ ಎದ್ದುಕಾಣುವ ಗುಣ. ತನ್ನ ಉದ್ಯೋಗಿಗಳನ್ನು ತುಂಬಾ ಚೆನ್ನಾಗಿ ವಿಶ್ವಾಸಕ್ಕೆ ತೆಗೆದುಕೊಂಡರು. ಪರಿಣಾಮವಾಗಿ ಅವರ 21 ವರ್ಷಗಳ ಅಧಿಕಾರದ ಅವಧಿಯಲ್ಲಿ ಟಾಟಾ ಸಂಸ್ಥೆಯ ಆದಾಯವು 40 ಪಟ್ಟು ಅಧಿಕವಾಯಿತು! ಲಾಭವು 50 ಪಟ್ಟು ಅಧಿಕವಾಯಿತು! ರತನ್ ಟಾಟಾ ಅವರ ಅವಧಿಯನ್ನು ಭಾರತೀಯ ಉದ್ಯಮ ರಂಗದ ಸುವರ್ಣ ಯುಗ ಎಂದು ಕರೆಯಲಾಯಿತು.

ಟಾಟಾ ಜಗದಗಲ ಬೆಳೆಯಿತು!

ಟಾಟಾ ಸಂಸ್ಥೆಗಳು 100ಕ್ಕೂ ಅಧಿಕ ದೇಶಗಳಲ್ಲಿ ಸ್ಥಾಪನೆಯಾದವು. ಗುಂಡು ಪಿನ್‌ನಿಂದ ಆರಂಭಿಸಿ ಟ್ರಕ್‌ಗಳವರೆಗೆ, ಉಪ್ಪಿನಿಂದ ಆರಂಭಿಸಿ ವಿಮಾನದವರೆಗೆ, ಕೈ ಗಡಿಯಾರದಿಂದ ಆರಂಭಿಸಿ ಚಿನ್ನದ ಮಳಿಗೆಗಳವರೆಗೆ, ಹೋಟೆಲ್ ಉದ್ಯಮದಿಂದ ಆರಂಭ ಮಾಡಿ ನ್ಯಾನೋ ಕಾರುಗಳವರೆಗೆ ಉದ್ಯಮವನ್ನು ವಿಸ್ತಾರ ಮಾಡಿದ ಕೀರ್ತಿಯು ಅವರಿಗೆ ಸಲ್ಲುತ್ತದೆ! ನಷ್ಟದಲ್ಲಿ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ವಹಿಸಿಕೊಂಡು ಭಾರಿ ಲಾಭಕ್ಕೆ ಪರಿವರ್ತನೆ ಮಾಡಿದ ಕೀರ್ತಿ ಟಾಟಾ ಅವರಿಗೆ ಸಲ್ಲುತ್ತದೆ. ಅದೇ ರೀತಿಯಲ್ಲಿ ಬೆಳೆಯುತ್ತಿರುವ ಹಲವು ಉದ್ಯಮಿಗಳಿಗೆ ಅವರು ತಮ್ಮ ಗೆಲುವಿನ ಗುಟ್ಟನ್ನು ಯಾವ ಮುಚ್ಚುಮರೆ ಮಾಡುವುದರಲ್ಲಿ ಟಾಟಾ ಇಂದು ಉದ್ಯಮರಂಗದ ಗುರು ಎಂದು ಕೂಡ ಕರೆಸಿಕೊಂಡಿದ್ದರು.

ಕೊಟ್ಟ ಮಾತಿನಂತೆ ನಡೆದುಕೊಂಡರು ರತನ್ ಟಾಟಾ

75ನೆಯ ವಯಸ್ಸಿನಲ್ಲಿ ಅವರು ತಾವು ಕೊಟ್ಟ ಮಾತಿನಂತೆ ಸೇವಾ ನಿವೃತ್ತಿಯನ್ನು ಘೋಷಿಸಿ ತನ್ನ ಉತ್ತರಾಧಿಕಾರಿಯನ್ನು ನೇಮಿಸಿದರು. ಆದರೆ ಆಡಳಿತ ಮಂಡಳಿ, ಶೇರ್ ಹೋಲ್ಡರ್ಸ್, ಸಹಯೋಗಿ ಸಂಸ್ಥೆಗಳು ಅವರ ಮೇಲೆ ಪೂರ್ತಿ ಭರವಸೆ ಇಟ್ಟು ಅವರನ್ನೇ ಟಾಟಾ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳ ‌ಹೆಡ್ ಆಗಿ ಮುಂದುವರಿಸಿಕೊಂಡು ಬಂದಿದ್ದರು. ಸಂಸ್ಥೆಗಳ ಲಾಭದ 51% ಗಿಂತ ಅಧಿಕ ಪಾಲನ್ನು ಅವರು ಟಾಟಾ ಸಮಾಜಸೇವಾ ಟ್ರಸ್ಟ್ ಗಳಿಗೆ ಹಂಚಿಕೆ ಮಾಡುತ್ತಿದ್ದರು. ಕೇವಲ 1% ಗಿಂತ ಕಡಿಮೆ ಲಾಭವನ್ನು ಪಡೆಯುತ್ತಿದ್ದರು. ಅವರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಈಗಾಗಲೇ ದೊರೆತಿದ್ದು ಭಾರತರತ್ನ ಮಾತ್ರ ಬಾಕಿಯಿದೆ!

ನೊಂದವರ, ಬಡವರ ಬಗ್ಗೆ ಕಾಳಜಿ ಅವರಿಗೆ ರಕ್ತದಲ್ಲೇ ಬಂದಿದ್ದು ಜಗತ್ತಿನ ಅತೀ ಕಡಿಮೆ ಬೆಲೆಯ ಟಾಟಾ ನ್ಯಾನೋ ಬಡವರ ಕಾರು( ಬೆಲೆ ಕೇವಲ ಒಂದು ಲಕ್ಷ ರೂಪಾಯಿ) ರೂಪಿಸಿದ ಕೀರ್ತಿ ಅವರದ್ದು! ಬೀದಿ ನಾಯಿಗಳನ್ನು ಪೋಷಣೆ ಮಾಡುವುದರಲ್ಲಿ ಕೂಡ ಅವರು ಮಾದರಿ ಆಗಿದ್ದರು. ಒಮ್ಮೆ ತನ್ನ ಬೀದಿನಾಯಿಗಳ ಅನಾರೋಗ್ಯದ ಕಾರಣಕ್ಕೆ ಇಂಗ್ಲೆಂಡ್ ಅರಮನೆಯ ಅದ್ದೂರಿ ಸನ್ಮಾನ ನಿರಾಕರಿಸಿ ಅವರು ಭಾರೀ ಸುದ್ದಿಯಾಗಿದ್ದರು.

ರತನ್ ಟಾಟಾ ಎಲ್ಲರಂತಲ್ಲ!

ಸಂಪೂರ್ಣ ಸಸ್ಯಾಹಾರಿ ಆದ, ಮದ್ಯಪಾನದಿಂದ ಗಾವುದ ದೂರ ಇರುವ, ನಾಚಿಕೆ ಸ್ವಭಾವದ, ಹೆಚ್ಚು ಏಕಾಂತವನ್ನು ಬಯಸುವ, ಸಾಮಾಜಿಕ ಕಾರ್ಯಕ್ರಮಗಳಿಗೆ ಕಡಿಮೆ ಬರುವ, ಪ್ರಚಾರದಿಂದ ದೂರ ಇರುವ, ಪಿಯಾನೋ ನುಡಿಸುವ, ಹಳೆ ಹಿಂದಿ ಸಿನಿಮಾ ಗೀತೆಗಳನ್ನು ಗುನುಗುವ, ಸರಳವಾಗಿ ಬದುಕುತ್ತಿರುವ, ಬೀದಿ ನಾಯಿಗಳನ್ನು ಪೋಷಿಸುವ, ತುಂಬಾ ಓದುವ ಅಭ್ಯಾಸವಿರುವ ರತನ್ ಟಾಟಾ ತಮ್ಮ 86ನೇ ವಯಸ್ಸಿಗೆ ವಿದಾಯ ಹೇಳಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬೇರೆಲ್ಲ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವೇತನ ಕಡಿತ ಮಾಡಿದ್ದರೆ ಟಾಟಾ ಕಂಪೆನಿಯು ಪೂರ್ಣ ವೇತನ ಕೊಟ್ಟು ಮಾದರಿ ಆಗಿತ್ತು. ತನ್ನ ಜೀವನದಲ್ಲಿ 4 ಹುಡುಗಿಯರನ್ನು ಪ್ರೀತಿ ಮಾಡಿದ್ದೆ ಎಂದು ಹೇಳಿಕೊಳ್ಳುವ ಅವರಿನ್ನೂ ಮದುವೆಯಾಗದೇ ಏಕಾಂಗಿಯಾಗಿ ಜೀವಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಅಸುನೀಗಿದ್ದಾರೆ. ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

VISTARANEWS.COM


on

Ratan Tata

ಬೆಂಗಳೂರು: ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ ಸಮೂಹದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಅವರ ನಿಧನದಿಂದ ನಿರ್ವಾತ ಸೃಷ್ಟಿಯಾಗಿದೆ. ಅವರ ಭೌತಿಕ ಅನುಪಸ್ಥಿತಿಯು ಭಾರತಕ್ಕೂ ಕರ್ನಾಟಕಕ್ಕೂ ಬಹುದೊಡ್ಡ ನಷ್ಟ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಎಂ.ಬಿ ಅಲ್ಲಿಂದಲೇ ತಮ್ಮ ಶೋಕ ಸಂದೇಶ ಕಳಿಸಿದ್ದು, ಉದ್ಯಮ ಲೋಕದ ದಿಗ್ಗಜನ‌ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು.

ಜಮ್ಷೆಡ್ಜಿ ಟಾಟಾ ಮತ್ತು ಜೆ ಆರ್ ಡಿ ಟಾಟಾ ತಮ್ಮ ವೈವಿಧ್ಯಮಯ ಉದ್ಯಮಗಳ ಮೂಲಕ ಆಧುನಿಕ ಭಾರತವನ್ನು ಕಟ್ಟಿದರು. ಇವರ ಬಳಿಕ ಎರಡು ದಶಕಗಳ ಕಾಲ‌ ಟಾಟಾ ಸಮೂಹದ ಚುಕ್ಕಾಣಿ ಹಿಡಿದಿದ್ದ ರತನ್ ಟಾಟಾ ಅವರು, ತಮ್ಮ ಸಮೂಹವನ್ನು ಜಾಗತಿಕ ಸ್ತರದಲ್ಲಿ ವಿಸ್ತರಿಸಿದರು ಎಂದು ಸಚಿವ ಎಂ.ಬಿ ಪಾಟೀಲ್‌ ಸ್ಮರಿಸಿದ್ದರು.

ಟಾಟಾ ಸಮೂಹವು ಕರ್ನಾಟಕದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದು, ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿದೆ. ರತನ್ ಟಾಟಾ ಕೂಡ ಉದ್ಯಮಶೀಲತೆಯನ್ನು ಉನ್ನತ ಮಟ್ಟದ ಮೌಲ್ಯಗಳ ಜತೆ ಪ್ರತಿನಿಧಿಸುತ್ತಿದ್ದರು. ಅವರು ಸದಾ ದೇಶ ಮತ್ತು ಸಮಾಜದ ಹಿತವನ್ನು ಕೂಡ ಪರಿಗಣಿಸುತ್ತಿದ್ದರು. ಇದರೊಂದಿಗೆ ಅವರು ಟಾಟಾ ಪರಂಪರೆಯ ವಾರಸುದಾರರಾಗಿದ್ದರು ಎಂದು ಅವರು ಅಗಲಿದ ಉದ್ಯಮಿಯ ಗುಣಗಾನ ಮಾಡಿದ್ದಾರೆ.

ಉದ್ಯಮಿ ರತನ್ ಟಾಟಾ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂತಾಪ ಸೂಚಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Ratan Tata: ರತನ್ ಟಾಟಾ ಯಾಕೆ ಮದ್ವೆ ಆಗಲಿಲ್ಲ! ತಮ್ಮ ಪ್ರೀತಿಯ ಕತೆ ಬಗ್ಗೆ ಹೇಳಿದ್ದೇನು?

Ratan Tata: ರತನ್ ಟಾಟಾ ಅವರು ಅವಿವಾಹಿತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅವರು ಆಲ್ಮೋಸ್ಟ್ ಮದುವೆಯಾಗಿರುವ ಕತೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಹ್ಯೂಮನ್ಸ್ ಆಫ್ ಬಾಂಬೆಗೆ (Humans of Bombay) ನೀಡಿದ ಸಂದರ್ಶನದಲ್ಲಿ ತಮ್ಮ ಆಲ್ಮೋಸ್ಟ್ ಮದುವೆ (Marriage) ಹಾಗೂ ಪ್ರೀತಿಯ (Love) ಕತೆಯನ್ನು ರತನ್ ಟಾಟಾ ಬಿಚ್ಚಿಟ್ಟಿದ್ದರು.

VISTARANEWS.COM


on

Why Ratan Tata didn't get married

ನವದೆಹಲಿ/ಮುಂಬೈ: ಭಾರತದ ಪ್ರಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ನ (Tata Sons) ಮಾಜಿ ಚೇರ್ಮನ್ ರತನ್ ಟಾಟಾ (Ratan Tata) ಅವರು ತಮ್ಮ ಸರಳತೆ ಹಾಗೂ ಧರ್ಮದರ್ಶಿ ಕೆಲಸಗಳಿಂದಾಗಿ ಮನ್ನಣೆ ಗಳಿಸಿದ್ದರು. ತೀವ್ರ ಅನಾರೋಗ್ಯದಿಂದ ರತನ್‌ ಟಾಟಾ ಮುಂಬೈನಲ್ಲಿ ನಿಧನ (ಅ.9) ಹೊಂದಿದ್ದಾರೆ. ಕೈಗಾರಿಕ ಉದ್ಯಮದಲ್ಲಿ ರತ್ನದಂತಿದ್ದ ರತನ್‌ ಟಾಟಾ ಅಗಲಿಕೆಗೆ ಕೋಟ್ಯಂತರ ಹೃದಯಗಳು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ರತನ್‌ ಸರಳತೆಗೆ ಹೆಸರುವಾಸಿಯಾದವರು. ರತನ್ ಟಾಟಾ ಅವರು ಅವಿವಾಹಿತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅವರು ಆಲ್ಮೋಸ್ಟ್ ಮದುವೆಯಾಗಿರುವ ಕತೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಹ್ಯೂಮನ್ಸ್ ಆಫ್ ಬಾಂಬೆಗೆ (Humans of Bombay) ನೀಡಿದ ಸಂದರ್ಶನದಲ್ಲಿ ತಮ್ಮ ಆಲ್ಮೋಸ್ಟ್ ಮದುವೆ (Marriage) ಹಾಗೂ ಪ್ರೀತಿಯ (Love) ಕತೆಯನ್ನು ರತನ್ ಟಾಟಾ ಬಿಚ್ಚಿಟ್ಟಿದ್ದರು.

ಲಾಸ್ ಏಂಜಲೀಸ್‌ನಲ್ಲಿ ನಾನು ಆಲ್ಮೋಸ್ಟ್ ಮದುವೆಯಾಗಿದ್ದೆ! ಆದರೆ ನನ್ನ ಅಜ್ಜಿಯೊಂದಿಗೆ ನಾನು ತಕ್ಷಣಕ್ಕೆ ಭಾರತಕ್ಕೆ ಹಿಂತಿರುಗಿದ್ದರಿಂದ ಆ ಮದುವೆಯು ಮುಂದುವರಿಯುವುದನ್ನು ಸಾಧ್ಯವಾಗಲಿಲ್ಲ. ನಾನು ಮದುವೆಯಾಗಲು ಇಚ್ಛಿಸಿದ ವ್ಯಕ್ತಿ ಸ್ವಲ್ಪ ಸಮಯದ ನಂತರ ನನ್ನೊಂದಿಗೆ ಭಾರತಕ್ಕೆ ಬರಬೇಕಾಗಿತ್ತು ಎಂದು ಅವರು ಸಂದರ್ಶನದಲ್ಲಿ ಹೇಳಿದರು.

1962ರಲ್ಲಿ ಭಾರತ-ಚೀನಾ ಯುದ್ಧವು ಪ್ರಾರಂಭವಾದ ನಂತರ ಅವರ ಸಂಗಾತಿಯು ಭಾರತಕ್ಕೆ ಭೇಟಿ ನೀಡಲು ಆಕೆಯ ಪೋಷಕರು ಅನುಮತಿಸದ ಕಾರಣ ಸಂಬಂಧವು ಮುರಿದುಬಿತ್ತು ಎಂದು ರತನ್ ಟಾಟ್ ಹೇಳಿಕೊಂಡಿದ್ದರು. ಹಾಗಾಗಿ, ನಮ್ಮೊಂದಿಗೆ ಆಲ್ಮೋಸ್ಟ್ ಮದುವೆ ಎಂಬುದಷ್ಟು ಉಳಿಯಿತು ಎಂದು ಹೇಳಿಕೊಂಡಿದ್ದರು.

ಆ ಸಂಬಂಧ ಬಳಿಕ ನಾನು, ನನ್ನ ಹೆಂಡತಿ ಎಂದು ಕರೆಯುವಂಥ ಯಾವುದೇ ವ್ಯಕ್ತಿ ನನಗೆ ದೊರೆಯಲಿಲ್ಲ. ಆ ಬಳಿಕ ನನ್ನ ಜೀವನವೇ ಒಂದು ಸಂಘರ್ಷಕ್ಕೆ ಸಿಲುಕಿಕೊಂಡಿತು. ನಾನು ನಿರಂತರವಾಗಿ ಕೆಲಸ ಮಾಡುತ್ತಾ, ಪ್ರಯಾಣ ಮಾಡುತ್ತಿದ್ದೆ. ಹಾಗಾಗಿ, ನನಗಾಗಿ ಅಂತ ಸಮಯ ತುಂಬಾ ಕಡಿಮೆ ಉಳಿಯುತ್ತಿತ್ತು. ಇಂದು, ನಾನು ನನ್ನ ಕಳೆದ ಹೋದ ದಿನಗಳ ಬಗ್ಗೆ ಯೋಚಿಸಿದರೆ, ನನಗೇನೂ ಆ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಒಂದು ಕ್ಷಣಕ್ಕೆ ಆ ರೀತಿ ನನಗೆ ಅನ್ನಿಸುವುದಿಲ್ಲ ಎಂದು ರತನ್ ಟಾಟಾ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Latest3 hours ago

ಇನ್ನು ಮುಂದೆ ಒಳಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ: ಸಿಎಂ ಸಿದ್ದರಾಮಯ್ಯ ಘೋಷಣೆ

Latest3 hours ago

29 ವರ್ಷಗಳ ‘ನೋ ಕಿಸ್ ಪಾಲಿಸಿ’ ಮುರಿದ ಕಾಜೋಲ್: ಆ ಒಂದು ದೃಶ್ಯಕ್ಕಾಗಿ ಕಟ್ಟುನಿಟ್ಟಿನ ನಿಯಮ ಬದಿಗಿಟ್ಟಿದ್ದೇಕೆ?

Latest3 hours ago

ಒಳ ಮೀಸಲಾತಿ ಹಂಚಿಕೆ: ಎಡಗೈ, ಬಲಗೈ ಜಾತಿಗಳಿಗೆ ತಲಾ ಶೇ. 5.25 ಸ್ಪೃಶ್ಯ ಜಾತಿಗೆ ಶೇ.4.5 ಹಂಚಿಕೆ; ಸಚಿವ ಸಂಪುಟ ಮಹತ್ವದ ನಿರ್ಧಾರ

Latest3 hours ago

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಚಿನ್ ಅವರದ್ದೇ ಸಿಕ್ಸರ್! ತೆಂಡೂಲ್ಕರ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ?

Latest4 hours ago

ಇಂಜಿನಿಯರಿಂಗ್‌ ಶುಲ್ಕ: ಅಂತಿಮ ನಿರ್ಧಾರ ಮಾಡಿಲ್ಲ: ಸಚಿವ ಡಾ. ಎಂ.ಸಿ. ಸುಧಾಕರ್‌

Latest4 hours ago

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್: ಒಪ್ಪಂದಕ್ಕೆ ಸಹಿ

Latest4 hours ago

ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಆರೋಗ್ಯ ಸ್ಥಿತಿ ಗಂಭೀರ?; ಕೃತಕ ಕಾಲು,ಸೀಳು ತುಟಿ, ಒಡೆದ ಮುಖ…

bigbreaking4 hours ago

ಬಿಜೆಪಿಗೆ ಸೇರಿದ ಎಎಪಿ ದಿಗ್ಗಜ ರಾಘವ್ ಚಡ್ಡಾ: ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್! ಪಕ್ಷಾಂತರಕ್ಕೆ ಕೊಟ್ಟ ಕಾರಣವೇನು?

Latest5 hours ago

ಒಳಮೀಸಲಾತಿ ನೀಡುವ ಬದಲು ಗೊಂದಲ ಸೃಷ್ಟಿಸುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

Latest5 hours ago

ಬಿಜೆಪಿ ನಾಯಕನ ಮಗನಿಗೆ ಹೈಕೋರ್ಟ್ ಬಿಸಿ: ಮದುವೆಯಾಗದೆ ಮಗು ನೀಡಿದ ಲವರ್‌ಗೆ ಮಾಸಿಕ 75 ಸಾವಿರ ರೂ. ಜೀವನಾಂಶ ದಂಡ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌