Dina Bhavishya read your daily horoscope predictions for july 13, 2023Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನ Vistara News
Connect with us

ಉದ್ಯೋಗ

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನ

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಏಕಾದಶಿಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

horoscope today
Koo

ಇಂದು ಏಕಾದಶಿ. ಹುಣ್ಣಿಮೆ ಅಥವಾ ಅಮಾವಾಸ್ಯೆಯಿಂದ ಚಂದ್ರನ ಚಕ್ರದ ಹನ್ನೊಂದನೇ ದಿನವನ್ನು ಏಕಾದಶಿಯಾಗಿ ಆಚರಿಸಲಾಗುತ್ತದೆ. ಒಂದೊಂದು ಏಕಾದಶಿಗೆ ಒಂದೊಂದು ಹೆಸರಿಡಲಾಗಿದ್ದು, ಈ ಏಕಾದಶಿಯಂದು ವ್ರತಾಚರಣೆ ನಡೆಸಿದರೆ ಈ ಫಲ ದೊರೆಯಲಿದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಇಂದಿನ ಏಕಾದಶಿಯನ್ನು ಕಾಮಿಕಾ ಏಕಾದಶಿ (Kamika Ekadashi 2023) ಎಂದು ಕರೆಯಲಾಗುತ್ತಿದೆ. ಇಂದು ನೀವು ಉಪವಾಸ ವ್ರತ ಕೈಗೊಂಡರೆ ಬೇಡಿದ ವರಗಳೆಲ್ಲವೂ ಪ್ರಾಪ್ತಿಯಾಗುತ್ತವೆಯಂತೆ. ಈ ಮಹತ್ವದ ನಿಮ್ಮ ಇಂದಿನ ದಿನ ಹೇಗಿದೆ, ಭವಿಷ್ಯ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (13-07-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ:
ಏಕಾದಶಿ 18:24 ವಾರ: ಗುರುವಾರ
ನಕ್ಷತ್ರ: ಕೃತ್ತಿಕಾ 20:51 ಯೋಗ: ಶೂಲ 08:50
ಕರಣ: ಭವ 06:07 ಇಂದಿನ ವಿಶೇಷ: ಕಾಮಿಕಾ ಏಕಾದಶಿ
ಅಮೃತಕಾಲ: ಸಂಜೆ 06 ಗಂಟೆ 21 ನಿಮಿಷದಿಂದ ರಾತ್ರಿ 08 ಗಂಟೆ 02 ನಿಮಿಷದವರೆಗೆ.

ಸೂರ್ಯೋದಯ : 06:00 ಸೂರ್ಯಾಸ್ತ : 06:50

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ : ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ಯಾರಾದರೂ ನಿಮ್ಮ ಸಹಾಯ ಕೇಳಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರೇಮಿಗಳಿಗೆ ಇಂದು ಹೊಸ ಆಶಾಭಾವನೆ ಮೂಡಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಹಣಕಾಸು ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ : ನಿಮ್ಮ ಅಪಾರ ಆತ್ಮವಿಶ್ವಾಸ ಕೆಲಸದಲ್ಲಿ ಯಶಸ್ಸಿಗೆ ಕಾರಣವಾಗಿ, ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಇಂದು ನಿಮ್ಮ ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಆರೋಗ್ಯ ಪರಿಪೂರ್ಣ. ಹಣಕಾಸು ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಮಧ್ಯಮ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ : ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಹಣಕಾಸು ಯೋಜನೆಗಳ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಿರಬಹುದು. ಅವರ ಭಾವನೆಗಳಿಗೆ ಬೆಲೆ ನೀಡಿ. ಹಳೆಯ ಸ್ನೇಹಿತರ ಭೇಟಿ. ಆರೋಗ್ಯ ಕೊಂಚ ಹದಗೆಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ, ಕೌಟುಂಬಿಕ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅನಗತ್ಯ ಖರ್ಚಿನ ಹೊರತಾಗಿಯೂ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ಆಕರ್ಷಕ ವ್ಯಕ್ತಿತ್ವ ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ವಾಹನ ಚಾಲನೆ ಮಾಡುವಾಗ ಜಾಗ್ರತೆ ಅವಶ್ಯವಾಗಿ ವಹಿಸಿ. ಅಪಘಾತ ಸಂಭವ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ : ಭೂಮಿ ಸಂಬಂಧಿ ವ್ಯವಹಾರ ನಡೆಯುವ ಸಾಧ್ಯತೆ. ಅದು ನಿಮಗೆ ಲಾಭದಾಯಕವಾಗಲಿದೆ. ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಉದ್ಯೋಗಿಗಳಿಗೆ ಮಂದಗತಿಯ ಕೆಲಸದಿಂದಾಗಿ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆ. ಸಂಗಾತಿಯ ಮಾತುಗಳು ಹಿತವೆನಿಸುವುದು. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ : ಇಂದು ಒತ್ತಡ ಮುಕ್ತರಾಗಿರುವಿರಿ. ಹಣಕಾಸು ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಅನಿವಾರ್ಯ ಕಾರಣ ನೀವು ಖರ್ಚು ಮಾಡುವ ಸಾಧ್ಯತೆ. ಇದರಿಂದ ಮನಸ್ಸಿಗೆ ಕೊಂಚ ಬೇಸರ. ಉದ್ಯೋಗ ಆಕಾಂಕ್ಷಿಗಳಿಗೆ ಇಂದು ಅದೃಷ್ಟದ ದಿನ. ಅನಗತ್ಯ ವಿಷಯಗಳ ಬಗ್ಗೆ ಇಂದು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡವುದು ಬೇಡ. ಆರೋಗ್ಯ ಪರಿಪೂರ್ಣ. ಸಂಗಾತಿಯ ಮಾತುಗಳು ಅಹಿತವೆನಿಬಹುದು. ಕಲಹಗಳಿಗೆ ಆಸ್ಪದ ಕೊಡಬೇಡಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಪ್ರೇಮ ಪ್ರಕರಣ ಹದಗೆಡುವ ಸಾಧ್ಯತೆ. ಅನಿವಾರ್ಯ ಪ್ರಸಂಗಗಳಿಂದಾಗಿ ಪ್ರಯಾಣ ಮಾಡುವ ಸಾಧ್ಯತೆ. ಸಂಬಂಧಿಕರ ಹಸ್ತಕ್ಷೇಪ ದಾಂಪತ್ಯ ಜೀವನದಲ್ಲಿ ವೈರುತ್ವ ಮೂಡುವಂತೆ ಮಾಡಬಹುದು. ಅದಕ್ಕೆ ಅವಕಾಶ ಕೊಡಬೇಡಿ. ಆರೋಗ್ಯ ಪರಿಪೂರ್ಣ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಆರ್ಥಿಕ ಸ್ಥಿತಿ ಉತ್ತಮ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ : ಆಕರ್ಷಕ ವ್ಯಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪಾಲಕರು ಮತ್ತು ನಿಮ್ಮ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸಲು ತಮಗೆ ಸಾಧ್ಯವಾದುದ್ದನ್ನೆಲ್ಲ ಮಾಡುತ್ತಾರೆ. ಇಂದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಭವಿಷ್ಯದ ಹೂಡಿಕೆ ಬಗೆಗೆ ಆಲೋಚನೆ. ಆಪ್ತರ ಆಗಮನದಿಂದ ಕಾರ್ಯದಲ್ಲಿ ವಿಳಂಬ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು : ಹಣಕಾಸು ಹೂಡಿಕೆ ಬಗೆಗೆ ಆಲೋಚನೆ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಮನೆಯಲ್ಲಿನ ವ್ಯತಿರಿಕ್ತ ವಾತಾವರಣ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ. ಅದರಿಂದ ದೂರ ಇರಿ. ನಿಮ್ಮ ಆಪ್ತರೊಂದಿಗೆ ಸ್ವಂತ ವಿಷಯ ಹಂಚಿಕೊಳ್ಳುವ ಸಾಧ್ಯತೆ. ಆದರೆ ಗೌಪ್ಯ ವಿಷಯಗಳು ಗೌಪ್ಯವಾಗಿದ್ದರೆ ಚೆನ್ನ. ದೈಹಿಕ ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಯಾವ ಮಂತ್ರವನ್ನು ಹೇಗೆ ಜಪಿಸಿದರೆ ಫಲ ಸಿಗುತ್ತದೆ? ಈ ವಿಡಿಯೋ ನೋಡಿ.
Horoscope Today

ಮಕರ : ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಅತಿಥಿಗಳ ಆಗಮನ ಕೊಂಚ ಮಟ್ಟಿಗೆ ಸಮಾಧಾನ ತರಿಸಬಹುದು. ಉದ್ಯೋಗದ ಸ್ಥಳದಲ್ಲಿ ಮಾತಿನ ನಿಯಂತ್ರಣ ತಪ್ಪಿ ಅಪಾಯ ತಂದು ಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ : ನಿಮ್ಮ ಅಪಾರ ವಿಶ್ವಾಸ ನಿಮಗೆ ಯಶಸ್ಸು ತಂದುಕೊಡಲಿದೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಮನಸ್ಸಿಗೆ ನೋವುಂಟಾಗುವ ಸಾಧ್ಯತೆ. ನೀವು ಅತೀ ಉದಾರಿಯಾಗಿದ್ದಲ್ಲಿ ನಿಮ್ಮ ಹತ್ತಿರದವರು ಇದರ ಲಾಭ ಪಡೆಯಲಿದ್ದಾರೆ. ಸ್ನೇಹಿತರೊಬ್ಬರೊಂದಿಗೆ ಇಂದು ಸಮಯವನ್ನು ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : Vastu Tips : ಮನೆ ಮಂದಿಯ ಆರೋಗ್ಯ ಮತ್ತು ಸಂಪತ್ತು ವೃದ್ಧಿಗೆ ಕನ್ನಡಿ ಕಾರಣ!

Horoscope Today

ಮೀನ: ಹಗಲುಗನಸು ಕಾಣುತ್ತಾ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಆಪ್ತರೊಂದಿಗೆ ಅನಿವಾರ್ಯ ಕಾರಣದಿಂದ ಮುನಿಸಿಕೊಳ್ಳುವ ಸಾಧ್ಯತೆ. ಇದಕ್ಕೆ ಅವಕಾಶ ಮಾಡಿಕೊಡದೇ ನಿಮ್ಮ ಹಾಸ್ಯ ಮನೋಭಾವನೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಸಂಗಾತಿಯ ಮಾತುಗಳು ಹಿತವೆನಿಸುತ್ತದೆ. ಆರೋಗ್ಯ ಮಧ್ಯಮ. ಆರ್ಥಿಕ ಪ್ರಗತಿ ಸಾಧಾರಣ. ಕೌಟುಂಬಿಕವಾಗಿ ಶುಭ ಫಲ
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಉದ್ಯೋಗ

Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ

Indian Coast Guard: ಇಂಡಿಯನ್‌ ಕೋಸ್ಟ್‌ ಗಾರ್ಡ್‌(Indian Coast Guard)ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ ಲೈನ್‌ ಮೂಲಕ ಸೆಪ್ಟಂಬರ್‌ 27ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Edited by

coast guard
Koo

ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಇಂಡಿಯನ್‌ ಕೋಸ್ಟ್‌ ಗಾರ್ಡ್‌(Indian Coast Guard) ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನಾವಿಕ(General Duty) 260 ಮತ್ತು ನಾವಿಕ(Domestic Branch) 30 ಹುದ್ದೆಗಳಿವೆ. ಕಡಲ ತೀರದ ರಕ್ಷಣೆಯ ಮೂಲಕ ತಾಯಿ ನಾಡಿಗಾಗಿ ಸೇವೆ ಸಲ್ಲಿಸಲಿರುವ ಅಪೂರ್ವ ಅವಕಾಶ ಇದಾಗಿದೆ. ಈ ಹಿಂದೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನ ಎಂದು ಹೇಳಲಾಗಿತ್ತಾದರೂ ಇದೀಗ ಸಮಯಾವಕಾಶವನ್ನು ಸೆಪ್ಟಂಬರ್‌ 27ರವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಹತೆ

ನಾವಿಕ(Domestic Branch) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Council of Boards of School Education (COBSE) ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು +2 ಕೋರ್ಸ್‌ನಲ್ಲಿ ಗಣಿತ ಮತ್ತು ಭೌತಶಾಸ್ತ್ರ ವನ್ನು ಓದಿದವರು ನಾವಿಕ(General Duty) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಪ್ರಕಟಣೆ ತಿಳಿಸಿದೆ. ತಮ್ಮ ಹುದ್ದೆಯ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರುವುದು ಕಡ್ಡಾಯ.

ವೇತನದ ವಿವರ

ನಾವಿಕ(General Duty)-21700-69,100 ರೂ., ನಾವಿಕ(Domestic Branch)-21700-69,100 ರೂ. ವೇತನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೋಸ್ಟ್‌ ಗಾರ್ಡ್‌ ತನ್ನ ಸದಸ್ಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಹಸಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಒದಗಿಸಲಿದೆ.

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯಸ್ಸಿನಲ್ಲಿ ರಿಯಾಯಿತಿ ಇದೆ. ಎಸ್‌.ಸಿ. ಮತ್ತು ಎಸ್‌.ಟಿ. ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಅನ್ವಯವಾಗಲಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ವಿವಿಧ ಹಂತಗಳ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಆರಂಭದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದವರನ್ನು ಫಿಸಿಕಲ್‌ ಫಿಟ್ನೆಸ್‌ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ 1.6 ಕಿ.ಮೀ.ಯನ್ನು 7 ನಿಮಿಷಗಳಲ್ಲಿ ತಲುಪಬೇಕು ಮತ್ತು 20 ಸ್ಕ್ವಾಟ್‌ ಅಪ್ಸ್‌, 10 ಪುಶ್‌ ಅಪ್‌ ಮಾಡುವಂತಿರಬೇಕು. ಬಳಿಕ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೊನೆಯ ಹಂತದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸಂಬಂಧಿತ ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಕ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಎಸ್‌.ಸಿ. ಮತ್ತು ಎಸ್‌.ಟಿ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ನೆಟ್‌ ಬ್ಯಾಂಕಿಂಗ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ.

ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು

ಹೆಚ್ಚಿನ ಮಾಹಿತಿಗೆ ಇಂಡಿಯಾ ಕೋಸ್ಟ್‌ ಗಾರ್ಡ್ ವೆಬ್‌ ಸೈಟ್‌ ಕ್ಲಿಕ್‌ ಮಾಡಿ. ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

Continue Reading

ಉದ್ಯೋಗ

Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು

Job Alert : ಸರ್ಕಾರಿ ಉದ್ಯೋಗ (government job) ಹುಡುಕುವವರಿಗೆ ಗುಡ್‌ನ್ಯೂಸ್‌. ಬ್ಯಾಂಕ್‌‌ (bank) ಸೇರಿ ವಿವಿಧ ಕಡೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ (online) ಮೂಲಕ ಅರ್ಜಿ ಸಲ್ಲಿಸಬಹುದು.

VISTARANEWS.COM


on

Edited by

job alert
Koo

ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಸರ್ಕಾರಿ ಉದ್ಯೋಗಕ್ಕಿರುವ(Government job) ಬೇಡಿಕೆ ಕಡಿಮೆಯಾಗಿಲ್ಲ. ಅದಲ್ಲಿನ ಭದ್ರತೆ, ಇತರ ಸೌಲಭ್ಯಗಳ ಕಾರಣದಿಂದ ಇಂದಿಗೂ ಯುವ ಜನತೆ ಸರಕಾರಿ ಉದ್ಯೋಗದ ಕಡೆಗೆ ಗಮನ ಹರಿಸುತ್ತಿದೆ. ಅದಕ್ಕೆ ತಕ್ಕಂತೆ ಸದ್ಯ ವಿವಿಧ ಸರಕಾರಿ ಮೂಲಗಳು ಈ ವಾರ ಉದ್ಯೋಗ ಭರ್ತಿ ಮಾಡುವ ನಿಟ್ಟಿನಲ್ಲಿ ನೋಟಿಫಿಕೇಷನ್‌ ಹೊರಡಿಸಿದ್ದು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮಧ್ಯಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (MPPSC), ಐಡಿಬಿಐ(IDBI) ಬ್ಯಾಂಕ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಲಭ್ಯವಿರುವ ಉದ್ಯೋಗವಕಾಶಗಳ ಮಾಹಿತಿ ಇಲ್ಲಿದೆ.

MPPSCನಲ್ಲಿ 227 ಹುದ್ದೆ ಖಾಲಿ

ಪಿಸಿಎಸ್‌ (PCS)ಹುದ್ದೆಗಳನ್ನು ಭರ್ತಿ ಮಾಡಲು ಮಧ್ಯ ಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌-MPPSC ಈಗಾಗಲೇ ಕಾರ್ಯಾರಂಭಿಸಿದೆ. ಸೆಪ್ಟಂಬರ್‌ 22ರಂದು ನೋಟಿಫಿಕೇಷನ್‌ ಹೊರಡಿಸಿದ್ದು, ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ MPPSCನ ಅಧಿಕೃತ ವೆಬ್‌ ಸೈಟ್‌ mppsc.mp.gov.in. ಭೇಟಿ ನೀಡಿ. ಸೂಚನೆ ಪ್ರಕಾರ ಡಿಸೆಂಬರ್‌ 12ರಂದು ಪರೀಕ್ಷೆ ನಡೆಯಲಿದೆ. ಸುಮಾರು 227 PCS ಹುದ್ದೆಗಳನ್ನು ಭರ್ತಿ ಮಾಡುವುದಾಗಿ MPPSC ತಿಳಿಸಿದೆ. ಮಧ್ಯ ಪ್ರದೇಶದವರು ಮತ್ತು ಇತರ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

UPPSCಯಲ್ಲಿದೆ 2,240 ಹುದ್ದೆಗಳು

ಉತ್ತರ ಪ್ರದೇಶ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPPSC) ಸ್ಟಾಫ್‌ ನರ್ಸ್‌ ಹುದ್ದೆಗೆ ನೋಂದಣಿ ಮಾಡುವ ದಿನಾಂಕವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ಸೆಪ್ಟಂಬರ್‌ 29ರ ತನಕ ಪರೀಕ್ಷೆಗಾಗಿ ನೋಂದಣಿ ಮಾಡಬಹುದಾಗಿದೆ. ಒಟ್ಟು 2,240 ಸ್ಟಾಫ್‌ ನರ್ಸ್‌ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಅದರಲ್ಲಿ 2,069 ಮಹಿಳೆಯರು ಮತ್ತು 171 ಪುರುಷ ನರ್ಸ್‌ಗಳು ಸೇರಿದ್ದಾರೆ. ಅಭ್ಯರ್ಥಿಗಳು uppsc.up.nic.in. ಮೂಲಕ ನೋಂದಣಿ ಮಾಡಿಕೊಳ್ಳಬೇಕು.

BTSCಯಲ್ಲಿ ಖಾಲಿ ಇದೆ 1,279 ಟ್ರೇಡ್‌ ಇನ್‌ಸ್ಟ್ರಕ್ಟರ್ ಹುದ್ದೆ

ಬಿಹಾರ ಟೆಕ್ನಿಕಲ್‌ ಸರ್ವಿಸ್‌ ಕಮಿಷನ್‌(BTSC) ಖಾಲಿ ಇರುವ ಒಟ್ಟು 1,279 ಟ್ರೇಡ್‌ ಇನ್ಟ್ರಕ್ಟರ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್‌ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ ಸೈಟ್‌ btsc.bih.nic.in. ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಅಕ್ಟೋಬರ್‌ 18. ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಬೋಧನೆ ಮಾಡಲು ಇವರನ್ನು ನೇಮಿಸಲಾಗುವುದು. ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೋಮಾ ಓದಿರಬೇಕು.

ಇದನ್ನೂ ಓದಿ: Border Roads Organisation : ಗಡಿ ರಸ್ತೆಗಳ ಕಾರ್ಮಿಕರು ಮೃತಪಟ್ಟರೆ ಸರ್ಕಾರಿ ಸೌಲಭ್ಯಗಳು, ಕೇಂದ್ರ ಸರ್ಕಾರದ ಯೋಜನೆ

IDBI ಬ್ಯಾಂಕ್‌ನಲ್ಲಿ 600 ಹುದ್ದೆಗಳು

IDBI ಬ್ಯಾಂಕ್‌ ಜ್ಯೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌(Grade 0) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 600 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ idbibank.in.ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆಪ್ಟಂಬರ್‌ 30 ಹೆಸರು ನೋಂದಾಯಿಸಲು ಕೊನೆಯ ದಿನ. ಪರೀಕ್ಷೆ ಅಕ್ಟೋಬರ್‌ 20ರಂದು ನಡೆಯುವ ಸಾಧ್ಯತೆ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 20 ವರ್ಷ ದಾಟಿರಬೇಕು ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು.

Continue Reading

ಉದ್ಯೋಗ

Great Learning Survey: ಭಾರತದ ಐಟಿಯೇತರ ಕ್ಷೇತ್ರದಲ್ಲಿ ಡೇಟಾ ಸೈನ್ಸ್, ಅನಾಲಿಟಿಕ್ಸ್ ಉದ್ಯೋಗ ಹೆಚ್ಚಳ!

Great Learning Survey: ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ.

VISTARANEWS.COM


on

Edited by

Data Science
Koo

ಬೆಂಗಳೂರು, ಕರ್ನಾಟಕ: ವೃತ್ತಿಪರ ಮತ್ತು ಉನ್ನತ ಶಿಕ್ಷಣ ವಿಭಾಗದಲ್ಲಿ ಪ್ರಮುಖ ಜಾಗತಿಕ ಮುಂದಾಳಾದ ಗ್ರೇಟ್ ಲರ್ನಿಂಗ್(Great Learning), ಭಾರತದಲ್ಲಿ ಅನಾಲಿಟಿಕ್ಸ್ (analytics) ಮತ್ತು ಡೇಟಾ ಸೈನ್ಸ್ (Data Science) ಉದ್ಯೋಗಗಳು 2023ರ ವರದಿಯನ್ನು ಪ್ರಕಟಿಸಿದೆ. ಡೇಟಾ-ಚಾಲಿತ ನಿರ್ಧಾರಗಳು ಸಂಸ್ಥೆಗಳಿಗೆ ಯಾವಾಗಲೂ ಪ್ರಮುಖವಾಗಿದ್ದರೂ, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ನಲ್ಲಿರುವ ಒಟ್ಟಾರೆ ಉದ್ಯೋಗಗಳ ಸಂಖ್ಯೆ ಕಳೆದ 12 ತಿಂಗಳುಗಳಲ್ಲಿ ಕುಸಿತವನ್ನು ದಾಖಲಿಸಿದೆ. ಚಾಲ್ತಿಯಲ್ಲಿರುವ ಜಾಗತಿಕ ಸ್ಥೂಲ ಆರ್ಥಿಕ ಅನಿಶ್ಚಿತತೆಯನ್ನು ಒಳಗೊಂಡಂತೆ ಅಂಶಗಳ ಸಂಯೋಜನೆಯು, ವಿಶೇಷವಾಗಿ ಐಟಿ ಉದ್ಯಮದಲ್ಲಿ ಈ ಪಾತ್ರಗಳ ಮೇಲೆ ಪ್ರಭಾವ ಬೀರುತ್ತಿದೆ. ಈ ವಲಯದಲ್ಲಿ ಬದಲಾಗುತ್ತಿರುವ ಉದ್ಯೋಗಗಳ ಅವಕಾಶದ ಕುರಿತು ವರದಿಯು ದೃಷ್ಟಿಕೋನವನ್ನು ನೀಡುತ್ತದೆ ಮತ್ತು ಲಭ್ಯವಿರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ವೃತ್ತಿಪರರಿಗೆ ಸಹಾಯ ಮಾಡುತ್ತದೆ. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್‌ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ
.
ಈ ವರದಿಯನ್ನು ವಿವಿಧ ಉದ್ಯೋಗ ಸೈಟ್ ಗಳಿಂದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಗೆ ಸಂಬಂಧಿಸಿದ ಡೇಟಾವನ್ನು ಒಗ್ಗೂಡಿಸುವ ಎಐಎಂ ರಿಸರ್ಚ್ ನಿಂದ ಅಭಿವೃದ್ಧಿಪಡಿಸಲಾಗಿದೆ. 2023 ರಲ್ಲಿ ಬಿ ಎಫ್ ಎಸ್ ಐ ವಲಯ ಅತ್ಯಧಿಕ ಡೇಟಾ ಅನಾಲಿಟಿಕ್ಸ್ ಉದ್ಯೋಗದ ಪಾಲಿನ ಕುರಿತು ವರದಿ ಮಾಡಿದೆ

2023ರಲ್ಲಿ ಬಿ ಎಫ್ ಎಸ್ ಐ ವಲಯ ಭಾರತದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಏಕೈಕ-ಅತಿದೊಡ್ಡ ಪಾಲನ್ನು ಎಂದರೆ ಒಟ್ಟಾರೆಯಾಗಿ 1/3 ರಷ್ಟು ಉದ್ಯೋಗಗಳಿಗೆ ಸಾಕ್ಷಿಯಾಯಿತು. ಅಪಾಯ ನಿರ್ವಹಣೆ, ವಂಚನೆ ಪತ್ತೆ ಮತ್ತು ಗ್ರಾಹಕ ಸೇವೆಯಂತಹ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಎಐ/ಎಂಎಲ್ ಮತ್ತು ದೊಡ್ಡ ಡೇಟಾ ಅನಾಲಿಟಿಕ್ಸ್ ನಂತಹ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಈ ಬೆಳವಣಿಗೆ ದಾಖಲಿಸಲಾಗಿದೆ.

ಪ್ರತಿಯೊಂದು ಕಾರ್ಯದಲ್ಲಿ ಡೇಟಾ ಸೈನ್ಸ್ ಬಳಸುವುದರಿಂದ, ಹಣಕಾಸು ಸಂಸ್ಥೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತಿವೆ.

ಐಟಿ ಉದ್ಯೋಗಗಳ ಪಾಲು ಗಮನಾರ್ಹ ಇಳಿಕೆ

ಒಟ್ಟಾರೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಐಟಿ ವಲಯದ ಉದ್ಯೋಗಗಳ ಪಾಲು ಕಳೆದ ವರ್ಷದಿಂದ ಗಮನಾರ್ಹ ಇಳಿಕೆ ಕಂಡಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಐಟಿ ವಲಯದ ಕ್ಲಯಂಟ್ ಗಳಿರುವ ಯು ಎಸ್ ಎ ಮತ್ತು ಯುರೋಪ್‌ನಲ್ಲಿ, ಇದು ಜಾಗತಿಕ ಹಿಂಜರಿತದ ಪ್ರವೃತ್ತಿಗಳಿಗೆ ಕಾರಣವೆಂದು ಹೇಳಬಹುದು. ಹಾಗೆಯೇ, 2022 ಕ್ಕೆ ಹೋಲಿಸಿದರೆ ವಿದ್ಯುತ್ ಮತ್ತು ಗೃಹಬಳಕೆಯಲ್ಲಿನ ಉದ್ಯೋಗಗಳು ಒಟ್ಟಾರೆಯಾಗಿ ಶೇಕಡಾವಾರು ಕಡಿಮೆಯಾಗಿದೆ, ಆದರೆ ರೀಟೇಲ್ ಮತ್ತು ಸಿಪಿಜಿ ಹಾಗೂ ಫಾರ್ಮಾ ಮತ್ತು ಆರೋಗ್ಯ ಸೇವೆಗಳಲ್ಲಿ ಈ ವರ್ಷ ಏರಿಕೆಯಾಗಿದೆ.

ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳು ಈ ವರ್ಷದ ಉದ್ಯೋಗಗಳಲ್ಲಿ ಇನ್ನೂ ಹೆಚ್ಚಿನ ಪಾಲನ್ನು ಹೊಂದಿವೆ; 2022 ಕ್ಕೆ ಹೋಲಿಸಿದರೆ ದೇಶೀಯ ಐಟಿಯೇತರ ಸಂಸ್ಥೆಗಳು ಉದ್ಯೋಗಾವಕಾಶಗಳಲ್ಲಿ ಹೆಚ್ಚಿನ ಜಿಗಿತ ವರದಿ ಮಾಡಿದೆ

2023ರಲ್ಲಿ ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಗರಿಷ್ಠ ಅವಕಾಶಗಳು ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿವೆ, ಏಕೆಂದರೆ ಈ ಸಂಸ್ಥೆಗಳು ಸಾಮಾನ್ಯವಾಗಿ ದೊಡ್ಡ ಗ್ರಾಹಕರೊಂದಿಗೆ ಕೆಲಸ ಮಾಡುವುದರಿಂದ, ದೊಡ್ಡ ಪ್ರಮಾಣದ ಡೇಟಾ ನಿರ್ವಹಿಸುತ್ತವೆ. ಆದರೂ, ಮುಖ್ಯವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಕಠಿಣ ಆರ್ಥಿಕ ಸನ್ನಿವೇಶಗಳು ವಲಯದ ಮೇಲೆ ಪರಿಣಾಮ ಬೀರುವುದರಿಂದ ಡೇಟಾ ಉದ್ಯೋಗಗಳ ಪಾಲು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿ ಡೇಟಾ ಮತ್ತು ಅನಾಲಿಟಿಕ್ಸ್ ಉದ್ಯೋಗಾವಕಾಶಗಳು ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ ಶೇಕಡಾ 21 ಅಂಕಗಳಷ್ಟು (ಪಿಪಿ) ಕಡಿಮೆಯಾಗಿದೆ, ದೇಶೀಯ ಐಟಿ ಯೇತರ ಸಂಸ್ಥೆಗಳು ಮತ್ತು ದೇಶೀಯ ಐಟಿ ಮತ್ತು ಕೆಪಿಓ ಸಂಸ್ಥೆಗಳು ಕ್ರಮವಾಗಿ 20 ಪಿಪಿ ಮತ್ತು 8 ಪಿಪಿ ಯಷ್ಟು ಹೆಚ್ಚಾಗಿದೆ.

ಹಿರಿಯ ವೃತ್ತಿಪರರಿಗೆ ಉದ್ಯೋಗ ಕುಸಿತ

ಮಧ್ಯಮ ಹಂತದ ವೃತ್ತಿಪರರಿಗೆ ಲಭ್ಯವಿರುವ ಉದ್ಯೋಗಗಳು ಬೆಳೆಯುತ್ತಿರುವಾಗ, ಹಿರಿಯ ಹಂತದ ವೃತ್ತಿಪರರಿಗೆ ಮುಕ್ತ ಉದ್ಯೋಗಗಳಲ್ಲಿ ಕುಸಿತ ವರದಿಯಾಗಿದೆ. ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಸಂಖ್ಯೆಯನ್ನು ಪ್ರಾಥಮಿಕವಾಗಿ 2–5 ವರ್ಷಗಳು ಮತ್ತು 5–7 ವರ್ಷಗಳ ಅನುಭವದ ಆವರಣದಲ್ಲಿ ವೃತ್ತಿಪರರತ್ತ ಕೇಂದ್ರೀಕರಿಸಲಾಗಿದೆ. ಈ ಎರಡು ಮಾಜಿ ಕೆಲಸದ ವರ್ಗಗಳು ಐತಿಹಾಸಿಕವಾಗಿ ಮೆಚ್ಚಿನದ್ದಾಗಿದೆ, ಏಕೆಂದರೆ ಅವುಗಳ ಹೊಂದಾಣಿಕೆ ಮತ್ತು ಹೆಚ್ಚು ಹಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಸಂಸ್ಥೆಗಳಿಗೆ ಕಡಿಮೆ ವೆಚ್ಚ ಉಂಟಾಗುತ್ತದೆ. ಇದಲ್ಲದೇ, ಈ ಆವರಣದಲ್ಲಿ ಬರುವ ವೃತ್ತಿಪರರು ಸಂಬಂಧಿತ ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವವನ್ನು ಹೊಂದಿದ್ದಾರೆ, ಅವರಿಗೆ ಫ್ರೆಶರ್‌ಗಳ ಮೇಲೆ ಒಂದು ಹಂತ ಹೆಚ್ಚು ನೀಡುತ್ತದೆ. 2022 ರಲ್ಲಿ, 2–5 ವರ್ಷಗಳು ಮತ್ತು 5–7 ವರ್ಷಗಳ ಮಾಜಿ-ಕೆಲಸದ ಆವರಣಕ್ಕೆ ಉದ್ಯೋಗಗಳ ಪಾಲು ಒಂದೇ ಆಗಿತ್ತು. ಅಂದಿನಿಂದ ಎರಡೂ ಗುಂಪುಗಳಲ್ಲಿ ಸ್ಥಾನಗಳಲ್ಲಿ ಹೆಚ್ಚಳ ಕಂಡುಬಂದಿದೆ, 2-5 ವರ್ಷಗಳ ಅನುಭವದ ಆವರಣವು ಆರ್ಥಿಕ ಹಿಂಜರಿತದ ನಡುವೆ ವೆಚ್ಚ ಕಡಿತದ ಕ್ರಮಗಳ ಪರಿಣಾಮವಾಗಿ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಏರಿಕೆ (13 ಪಿಪಿ) ದಾಖಲಿಸಿದೆ.

ಹೆಚ್ಚುತ್ತಿರುವ ಸಂಸ್ಥೆಗಳ ಆದ್ಯತೆ

ಹೆಚ್ಚು ಅನುಭವೀ ವ್ಯಕ್ತಿಗಳಿಗೆ (7+ ವರ್ಷಗಳು) ಅವಕಾಶಗಳು ಕಡಿಮೆಯಾಗಿದೆ-ಕಠಿಣ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಹೊಸದಾಗಿ, ದುಬಾರಿ ನೇಮಕ ಮಾಡುವ ಬದಲು ಆಂತರಿಕವಾಗಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸಲು ಸಂಸ್ಥೆಗಳು ಆದ್ಯತೆ ನೀಡಿವೆ.

ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ತಜ್ಞರಿಗೆ 6-10 ಎಲ್ ಪಿ ಎ ವೇತನ ಶ್ರೇಣಿಯಲ್ಲಿ ಹೆಚ್ಚು ಸ್ಥಾನಗಳು ಲಭ್ಯವಿದೆ
6–10 ಎಲ್ ಪಿ ಎ ಮತ್ತು 10–15 ಎಲ್ ಪಿ ಎ ನಡುವಿನ ಆದಾಯ ವ್ಯಾಪ್ತಿಯಲ್ಲಿರುವ ಮುಕ್ತ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು 2023 ರಲ್ಲಿ ಎಲ್ಲಾ ಡೇಟಾ ಸಂಬಂಧಿತ ಉದ್ಯೋಗಗಳಲ್ಲಿ 60% ವರೆಗೆ ಇರುತ್ತವೆ. ಈ ಅಂಕಿಅಂಶವು 2-5 ಮತ್ತು 5-7 ವರ್ಷಗಳ ಅನುಭವ ಹೊಂದಿರುವವರಿಗೆ ಹೆಚ್ಚುತ್ತಿರುವ ಉದ್ಯೋಗಗಳ ಸಂಖ್ಯೆಗೆ ಅನುಗುಣವಾಗಿದೆ. ಈ ವರ್ಷ ಫ್ರೆಶರ್‌ಗಳು ಮತ್ತು ಹೆಚ್ಚು ಅನುಭವಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಉತ್ಸುಕರಾಗಿಲ್ಲ ಎನ್ನುವ ಅಂಶವನ್ನು ಮಾಹಿತಿಯು ಪುನರುಚ್ಚರಿಸುತ್ತದೆ.

ದೇಶದ ಟೆಕ್ ರಾಜಧಾನಿಯಾಗಿರುವ ಬೆಂಗಳೂರು 2022 ರಿಂದ ಸ್ವಲ್ಪ ಕುಸಿತದ ಹೊರತಾಗಿಯೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ. ದೆಹಲಿ ಎನ್ ಸಿ ಆರ್‍, ಹೈದರಾಬಾದ್ ಮತ್ತು ಚೆನ್ನೈನಂತಹ ಇತರ ಸ್ಥಳಗಳು ಇತರೆ ಪ್ರತಿಭಾ ಕೇಂದ್ರಗಳತ್ತ ವಲಸೆ ಹೋಗುವುದರಿಂದ ತಮ್ಮ ಪಾಲನ್ನು ಹೆಚ್ಚಿಸಿವೆ. ಬೆಂಗಳೂರು ನಿಧಾನವಾಗಿ ಸಂತೃಪ್ತ ಬಿಂದುವನ್ನು ತಲುಪುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೆನ್ನೈನ ಆಟೋಮೋಟಿವ್ ಮತ್ತು ಉತ್ಪಾದನಾ ವಲಯಗಳು ಮತ್ತು ಹೈದರಾಬಾದ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮ ವಲಯಗಳು ಡೇಟಾ ಚಾಲಿತ ವಿಧಾನಗಳನ್ನು ಅಳವಡಿಸಿಕೊಂಡಿರುವುದರಿಂದ, ಹೆಚ್ಚುವರಿಯಾಗಿ ಡೇಟಾ ಸೈನ್ಸ್ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿವೆ.

ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್

ಎಂಬಿಎ ಪದವಿ ಹೆಚ್ಚುತ್ತಿರುವ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಪೂರ್ವ ಅಗತ್ಯತೆಯಾಗಿದೆ, ಇದು ಕ್ಷೇತ್ರದ ಬಲವಾದ ವ್ಯಾಪಾರ ಏಕೀಕರಣವನ್ನು ಎತ್ತಿ ತೋರಿಸುತ್ತದೆ.

ಕಠಿಣ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕೈಗಾರಿಕೆಗಳಾದ್ಯಂತ ಫ್ರೆಶರ್‌ಗಳ ನೇಮಕಾತಿಯಲ್ಲಿನ ಕುಸಿತದಿಂದ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಡೇಟಾ ಸೈನ್ಸ್ ವಲಯದಲ್ಲಿ ಖಾಲಿ ಹುದ್ದೆಗಳಲ್ಲಿ ಇಳಿಕೆ ಕಂಡುಬಂದಿದೆ. ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದು ಅತ್ಯಧಿಕ ವೆಚ್ಚದ ವ್ಯವಹಾರವಾಗಿದೆ ಏಕೆಂದರೆ ಸಂಸ್ಥೆಗಳು ಅವರನ್ನು ಯೋಜನೆಗಳಲ್ಲಿ ನಿಯೋಜಿಸುವ ಮೊದಲು ತರಬೇತಿ ನೀಡಬೇಕಾಗುತ್ತದೆ. ಆದರೂ, ಈ ವರ್ಷ ಎಂಬಿಎ ಪದವೀಧರರಿಗೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಹೆಚ್ಚಿವೆ ಏಕೆಂದರೆ ಸಂಸ್ಥೆಗಳು ಅಸ್ತಿತ್ವದಲ್ಲಿರುವ ತಂಡಗಳನ್ನು ನಿರ್ವಹಿಸಲು ಕೇವಲ ಡೇಟಾ ಸೈನ್ಸ್ ಕೌಶಲ್ಯಗಳನ್ನು ಮಾತ್ರವಲ್ಲದೇ ವ್ಯವಸ್ಥಾಪಕ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸುತ್ತಿವೆ.

ಈ ಸುದ್ದಯನ್ನೂ ಓದಿ: Jio Institute: ಎಐ, ಡೇಟಾ ಸೈನ್ಸ್‌‌ನಲ್ಲಿ ಬೋಧಕರಿಗೆ ಕಾರ್ಯಕ್ರಮ; ಜಿಯೋ ಸಂಸ್ಥೆ ಜತೆ ಕೈಜೋಡಿಸಿದ ಎಐಸಿಟಿಇ

ಗ್ರೇಟ್ ಲರ್ನಿಂಗ್‌ನ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಹೀಗೆ ಹೇಳಿದ್ದಾರೆ, “ಭಾರತವು ಜಾಗತಿಕವಾಗಿ ವ್ಯಾಪಾರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬೃಹತ್ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದೆ ಮತ್ತು ಹೆಚ್ಚು ಪರಿಣಾಮಕಾರಿ ವ್ಯಾಪಾರ ಕಾರ್ಯಾಚರಣೆಗಳನ್ನು ಸಾಧಿಸಲು ಡೇಟಾ-ಚಾಲಿತ ನಿರ್ಧಾರಗಳನ್ನು ಅಳವಡಿಸಿಕೊಳ್ಳುವತ್ತ ಪ್ರಮುಖವಾಗಿ ಮುನ್ನಡೆದಿದೆ. ಈ ವರ್ಷದ ವರದಿಯು ಕೆಲವು ಅಚ್ಚರಿಗಳನ್ನು ಹುಟ್ಟುಹಾಕಿದೆ-ಆದರೆ ಒಮ್ಮೆ ಆರ್ಥಿಕತೆ ಮರುಕಳಿಸಿದರೆ, ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಮತ್ತಷ್ಟು ಬೆಳೆಯುತ್ತವೆಶಾಗೂ ಹೆಚ್ಚು ವಿಶಿಷ್ಟವಾದ ಉದ್ಯೋಗ ಪ್ರೊಫೈಲ್‌ಗಳನ್ನು ತೆರೆಯುತ್ತವೆ ಎಂದು ನಾವು ನಿರೀಕ್ಷಿಸಬಹುದು. ‘ಭಾರತದಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಗಳು 2023’ ವರದಿಯು ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ದೇಶದಲ್ಲಿ ಚಾಲ್ತಿಯಲ್ಲಿರುವ ಉದ್ಯೋಗ ಪ್ರವೃತ್ತಿಗಳ ಬಗ್ಗೆ ಆಳವಾದ ನೋಟವನ್ನು ನೀಡುವ ಮೂಲಕ ತಮ್ಮ ವೃತ್ತಿ ಗುರಿಗಳನ್ನು ಅನುಸರಿಸಲು ಮಾರ್ಗದರ್ಶನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

Continue Reading

ಉದ್ಯೋಗ

KSRTC Staff : ಹಬ್ಬದ ದಿನ ಕೆಲಸ ಮಾಡಿದ್ರೆ ಡಬಲ್‌ ಧಮಾಕಾ; ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್

Double Wages : ಇನ್ನು ಮುಂದೆ ರಾಷ್ಟ್ರೀಯ ರಜಾ ದಿನ ಹಾಗೂ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ (KSRTC Staff) ಹೆಚ್ಚುವರಿ ವೇತನ ಪಾವತಿ ಮಾಡಲಾಗುತ್ತದೆ. ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆದೇಶ ಹೊರಡಿಸಿದೆ.

VISTARANEWS.COM


on

Edited by

Ksrtc Driver Conductor
Koo

ಬೆಂಗಳೂರು: ಕೋವಿಡ್‌ ಸೋಂಕು, ಚಾಲಕರ ಸಾಲು ಸಾಲು ಮುಷ್ಕರದಿಂದ ನಷ್ಟವನ್ನು ಅನುಭವಿಸಿದ್ದ ಕೆಎಸ್‌ಆರ್‌ಟಿಸಿ ನಿಗಮವು (KSRTC Staff) ತನ್ನ ಸಿಬ್ಬಂದಿಗೆ ಗುಡ್‌ ನ್ಯೂಸ್‌ವೊಂದನ್ನು ನೀಡಿದೆ. ರಾಷ್ಟ್ರೀಯ ರಜಾ ದಿನ ಹಾಗೂ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಈ ಹಿಂದಿನಂತೆ ಹೆಚ್ಚುವರಿ ವೇತನ (Double Wages) ಪಾವತಿಸಲು ಮುಂದಾಗಿದೆ.

ಪ್ರಸ್ತುತ ‘ಶಕ್ತಿ ಯೋಜನೆʼಯಿಂದಾಗಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಹೀಗಾಗಿ ವಾಹನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಳೆದ ಜುಲೈ (2023) ರಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೋವಿಡ್ 19 ಪೂರ್ವದಲ್ಲಿದ್ದಂತೆ ಹೆಚ್ಚುವರಿ ವೇತನವನ್ನು (Double Wages) ಪಾವತಿಸುವಂತೆ ಆದೇಶ ಹೊರಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಿಗಮದ ಸಾರಿಗೆ ಆದಾಯ ಹಾಗೂ ಇತರೇ ಆದಾಯವು ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸವೇತನ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನವನ್ನು ಕಡಿತ ಮಾಡಲಾಗಿತ್ತು. ಸವೇತನದ ಬದಲಾಗಿ ಪರಿಹಾರ ರಜೆ ನೀಡಲು ನಿರ್ದೇಶನಗಳನ್ನು ನೀಡಲಾಗಿತ್ತು. ಆ ಬಳಿಕ ಜನದಟ್ಟಣೆ ಹೆಚ್ಚಿರುವ ಪೀಕ್ ಸೀಜನ್‌ಗಳಲ್ಲಿ ವಾಹನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್-2022 ರಿಂದ ಜೂನ್-2023 ರ ವರೆಗೆ ಮಾತ್ರ ಸವೇತನ ರಜೆ ಸೌಲಭ್ಯವನ್ನು ವಿಸ್ತರಿಸಲಾಗಿತ್ತು.

ಸದ್ಯ ಮೊದಲಿನಂತೆ ರಜೆ ಬದಲಾಗಿ ಸವೇತನ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಜತೆಗೆ ಆಯಾ ಡಿಪೋ ಮ್ಯಾನರೇಜರ್‌ಗಳು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಿಬ್ಬಂದಿಯನ್ನು ಕರ್ತವ್ಯದ ಮೇಲೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
viral news kannada
ಕ್ರಿಕೆಟ್4 mins ago

Kapil Dev Kidnap: ವಿಶ್ವಕಪ್​ ವಿಜೇತ ನಾಯಕ ಕಪಿಲ್ ದೇವ್​ ಕಿಡ್ನಾಪ್​; ವಿಡಿಯೊ ವೈರಲ್​

bangalore Bandh kuruburu deatained
ಕರ್ನಾಟಕ5 mins ago

Bangalore Bandh : ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್‌ ಪೊಲೀಸ್‌ ವಶಕ್ಕೆ

pakistan Team
ಕ್ರಿಕೆಟ್42 mins ago

Pakistan team: ಕೊನೆಗೂ ಬಗೆಹರಿದ ಪಾಕ್ ತಂಡದ​ ವೀಸಾ ಸಮಸ್ಯೆ; ಬುಧವಾರ ಭಾರತ ಪ್ರಯಾಣ

bus auto accident
ದಕ್ಷಿಣ ಕನ್ನಡ45 mins ago

Road Accident: ಆಟೋಗೆ ಶಾಲಾ ಬಸ್‌ ಡಿಕ್ಕಿ, ಐವರ ದುರ್ಮರಣ

home lizard
ಲೈಫ್‌ಸ್ಟೈಲ್1 hour ago

Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್!

healthy children food
Relationship2 hours ago

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

Reality Shows neads a break
ಅಂಕಣ2 hours ago

Raja Marga Column : ನಿಮ್ಮ ಮಕ್ಕಳನ್ನು ಸೂಪರ್‌ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!

bangalore bandh
Live News2 hours ago

Bangalore Bandh Live: ಬೆಂಗಳೂರು ಬಂದ್‌ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?

Vistara Editorial, Janata Darshan by CM must appreciated
ಕರ್ನಾಟಕ3 hours ago

ವಿಸ್ತಾರ ಸಂಪಾದಕೀಯ: ಜನತಾ ದರ್ಶನ ಪ್ರಶಂಸಾರ್ಹ, ಪರಿಹಾರವೂ ದೊರೆಯಲಿ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ15 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ17 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ20 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ20 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌