Google Layoff: 8 ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ ಗೂಗಲ್‌, ಹೃದಯ ಚೂರಾದ ಅನುಭವ ಎಂದ ಉದ್ಯೋಗಿ - Vistara News

ಉದ್ಯೋಗ

Google Layoff: 8 ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ ಗೂಗಲ್‌, ಹೃದಯ ಚೂರಾದ ಅನುಭವ ಎಂದ ಉದ್ಯೋಗಿ

Google Layoff: ಜಾಗತಿಕ ಟೆಕ್‌ ದೈತ್ಯ ಗೂಗಲ್‌ ಕಂಪನಿಯು 12 ಸಾವಿರ ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದೆ. ಇದರಲ್ಲಿ 8 ತಿಂಗಳ ಗರ್ಭಿಣಿಯೂ ಇದ್ದು, ವಜಾಗೊಂಡಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ದುಃಖ ತೋಡಿಕೊಂಡಿದ್ದಾರೆ.

VISTARANEWS.COM


on

Google
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಒಬ್ಬ ಉದ್ಯೋಗಿಯ ಜೀವನದ ಕೆಟ್ಟ ಅನುಭವ ಎಂದರೆ ಆತ ಅಥವಾ ಆಕೆ ಕೆಲಸದಿಂದ ವಜಾಗೊಳ್ಳುವುದು. ಕೊರೊನಾ ಬಿಕ್ಕಟ್ಟಿನ ನಂತರ ಅಮೆಜಾನ್‌, ಮೈಕ್ರೋಸಾಫ್ಟ್‌, ಗೂಗಲ್‌, ಟ್ವಿಟರ್‌ನಂತಹ ಜಾಗತಿಕ ದೈತ್ಯ ಕಂಪನಿಗಳೇ ಸಾವಿರಾರು ನೌಕರರನ್ನು ವಜಾಗೊಳಿಸಿದ್ದು, ನೂರಾರು ನೌಕರರು ಇಂತಹ ಕೆಟ್ಟ ಅನುಭವವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಗೂಗಲ್‌ ಕಂಪನಿಯು (Google Layoff) ಎಂಟು ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ್ದು, ಮಹಿಳೆಯು ಲಿಂಕ್ಡ್‌ಇನ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

ಹೌದು, ಗೂಗಲ್‌ ಕೆಲ ದಿನಗಳ ಹಿಂದಷ್ಟೇ ರಾತ್ರೋರಾತ್ರಿ ವಜಾಗೊಳಿಸಿದ 12 ಸಾವಿರ ಉದ್ಯೋಗಿಗಳಲ್ಲಿ ಗರ್ಭಿಣಿಯೂ ಒಬ್ಬರಾಗಿದ್ದಾರೆ. ಅವರು ಲಿಂಕ್ಡ್‌ಇನ್‌ನಲ್ಲಿ ವಜಾಗೊಂಡ ಕುರಿತು ಅಳಲು ತೋಡಿಕೊಂಡಿದ್ದಾರೆ. “ಬೆಳಗಿನ ಜಾವ 3 ಗಂಟೆಗೆ ನಾನು ವಜಾಗೊಂಡಿರುವುದು ಗೊತ್ತಾಯಿತು. ಇದರಿಂದ ನನ್ನ ಹೃದಯವೇ ಒಡೆದಂತಾಯಿತು. ನನ್ನ ಕೈಗಳು ನಡುಗಲು ಆರಂಭಿಸಿದವು. ಇಂತಹ ಸಂದರ್ಭದಲ್ಲಿ ವಜಾ ಏಕೆ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡೆ” ಎಂದು ಕ್ಯಾಲಿಫೋರ್ನಿಯಾ ಮೂಲದ ಪ್ರೋಗ್ರಾಂ ಮ್ಯಾನೇಜರ್‌ ಆಗಿರುವ ಕ್ಯಾಥೆರಿನ್‌ ವೋಂಗ್‌ ಅವರು ನೋವು ಹಂಚಿಕೊಂಡಿದ್ದಾರೆ.

“ನಾನು ಎಂಟು ತಿಂಗಳ ಗರ್ಭಿಣಿಯಾದ ಕಾರಣ ಕೆಲವೇ ದಿನದಲ್ಲಿ ನನಗೆ ಹೆರಿಗೆ ರಜೆ ಸಿಗುವುದಿತ್ತು. ನಕಾರಾತ್ಮಕ ಚಿಂತನೆಗಳನ್ನು ನನ್ನ ತಲೆಯಲ್ಲಿ ಬಿಟ್ಟುಕೊಳ್ಳಬಾರದು ಎಂದಿದ್ದೆ. ಆದರೆ, ಕೆಲಸದಿಂದ ವಜಾಗೊಂಡಿರುವುದು ನೋಡಿ ತಡೆದುಕೊಳ್ಳಲು ಆಗಲಿಲ್ಲ. ನಾನು ನನ್ನ ಕಂಪನಿಯನ್ನು ತುಂಬ ಪ್ರೀತಿಸುತ್ತಿದ್ದೆ, ತಂಡವನ್ನು ಇಷ್ಟಪಡುತ್ತಿದ್ದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Google lay off : ಗೂಗಲ್‌ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Job News: ಕೇಂದ್ರ ಸರ್ಕಾರದಿಂದ ‘ಎಲೆಕ್ಟ್ರಾನಿಕ್’ ಯೋಜನೆ;‌ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ!

Job News: ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು (Electronic Manufacturing) ದ್ವಿಗುಣಗೊಳಿಸುವ ಸಾಧ್ಯತೆ ಇದೆ. ಆ ಮೂಲಕ ಯುವ ಜನತೆಗೆ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ.

VISTARANEWS.COM


on

Job News
Koo

ನವದೆಹಲಿ: ದೇಶದಲ್ಲಿ ಯುವ ಜನರ (Job News) ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಆ ಮೂಲಕ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ.

ದೇಶದ ಪ್ರಸ್ತುತ ಎಲೆಕ್ಟ್ರಾನಿಕ್ ರಫ್ತು 125-130 ಬಿಲಿಯನ್ ಡಾಲರ್‌ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನೆಯು 250 ಶತಕೋಟಿ ಡಾಲರ್‌ ತಲುಪುವ ಸಾಧ್ಯತೆ ಎಂದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ, ಪ್ರಸ್ತುತ ಎಲೆಕ್ಟ್ರಾನಿಕ್ ಉದ್ಯಮದಲ್ಲಿ 25 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ ಎನ್ನಲಾಗಿದೆ.

“ಡಿಜಿಟಲ್ ತಂತ್ರಜ್ಞಾನಕ್ಕೆ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಗಮನವು ಒಂದೇ ಆಗಿರುತ್ತದೆ. ನಮ್ಮ ಗಮನ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಇದೆ. ಆ ಗಮನ ನಿಖರವಾಗಿರುತ್ತದೆ. ಮತ್ತು ಆ ಗುರಿಯನ್ನು ವೇಗವಾಗಿ ತಲುಪುತ್ತೇವೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭಾರತವು ಈಗಾಗಲೇ ಆಮದು ಪರ್ಯಾಯವನ್ನು ಬಿಟ್ಟು ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುತ್ತಿದೆ, ಮೊಬೈಲ್ ಪೋನ್ ಗಳಂತಹ ಕೆಲವು ವಿಭಾಗಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ. ಆದರೆ ಲ್ಯಾಪ್ ಟಾಪ್‌ಗಳಿಗೆ ಸಂಬಂಧಿಸಿದಂತೆ ಭಾರತವು ಅದನ್ನು ನಮ್ಮಲ್ಲೇ ಉತ್ಪಾದಿಸುವ ಹಂತದಲ್ಲಿದೆ. ಕೇಂದ್ರ ಸರ್ಕಾರವು ವಿವಿಧ ಪ್ರೋತ್ಸಾಹ ಯೋಜನೆಗಳ ಮೂಲಕ ದೇಶಿಯ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ 760 ಶತಕೋಟಿ ರೂಪಾಯಿಗಳ ಹಣಕಾಸಿನ ವೆಚ್ಚವನ್ನು ಎಲೆಕ್ಟ್ರಾನಿಕ್ ಉದ್ಯೋಗಿಗಳ ಬದ್ಧತೆಗೆ ವಿನಿಯೋಗಿಸುತ್ತಿದೆ. ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಚೀನಾ ಮತ್ತು ಹಾಂಗ್‌ಕಾಂಗ್ ದೇಶಗಳು ಭಾರತದಿಂದ ಕ್ರಮವಾಗಿ 44 ಪ್ರತಿಶತ ಮತ್ತು 16 ಪ್ರತಿಶತದಷ್ಟು ಒಟ್ಟು ಎಲೆಕ್ಟ್ರಾನಿಕ್ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಮತ್ತೊಂದೆಡೆ ಭಾರತದಿಂದ ತಯಾರಿಸಿದ ಮೊಬೈಲ್ ಪೋನ್‌ಗಳು ಮತ್ತು ಎಲೆಕ್ಟ್ರಾನಿಕ್ ನಿಯಂತ್ರಣ ಘಟಕಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಇ ಹೆಚ್ಚು ರಪ್ತಾಗುತ್ತಿದೆ.

ಇದನ್ನೂ ಓದಿ: NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!

ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಪರಿವರ್ತನೆಯಿಂದ ಭಾರತವು ಜಾಗತಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವಾಗಿ ಸ್ಥಾನ ಪಡೆಯಲಿದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ತಾಂತ್ರಿಕ ಆವಿಷ್ಕಾರ ಬಲಗೊಳ್ಳಲಿದೆ, ಅದಕ್ಕಾಗಿ ಭಾರತ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದಲ್ಲದೇ ದೇಶದಲ್ಲಿ ಸುಸ್ಥಿರ ಅರೆವಾಹಕ ಮತ್ತು ಪ್ರದರ್ಶನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯೊಂದಿಗೆ 10 ಶತಕೋಟಿ ಡಾಲರ್‌ ಪ್ರೋತ್ಸಾಹಕ ವೆಚ್ಚದೊಂದಿಗೆ ಸರ್ಕಾರವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮನ್ನು ಪರಿಚಯಿಸಿದೆ.

Continue Reading

ವಾಣಿಜ್ಯ

Income Tax Returns Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!

ಆದಾಯ ತೆರಿಗೆ ರಿಟರ್ನ್ಸ್ (Income Tax Returns Filing) ಸಲ್ಲಿಸುವ ಮೊದಲು ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ದಂಡವನ್ನು ತಪ್ಪಿಸಲು ನಿಖರವಾಗಿ ಮತ್ತು ಸಮಯೋಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅತ್ಯಗತ್ಯ. ಸಾಮಾನ್ಯ ತಪ್ಪುಗಳಿಗೆ ಇದರಲ್ಲಿ ಅವಕಾಶ ನೀಡಬೇಡಿ. ಈ ಬಗ್ಗೆ ಯಾವುದೇ ಸಂದೇಹವಿದ್ದರೆ ತೆರಿಗೆ ವೃತ್ತಿಪರರಿಂದ ಸಹಾಯವನ್ನು ಪಡೆಯಿರಿ.

VISTARANEWS.COM


on

By

Income Tax Returns Filing
Koo

ಉದ್ಯೋಗಿಗಳಿಗೆ (employees) ಫಾರ್ಮ್ 16 (form 16) ಈಗಾಗಲೇ ಸಿಕ್ಕಿದ್ದು, 2024-25 ಅಥವಾ ಹಣಕಾಸು ವರ್ಷ (financial year) 2023-24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (Income Tax Returns Filing) ಸಲ್ಲಿಸಬಹುದು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಕೆಲವು ಸಾಮಾನ್ಯ ತಪ್ಪುಗಳನ್ನು (mistake) ಮಾಡುವುದು ಸಹಜ. ಆದರೆ ಈ ರೀತಿ ತಪ್ಪು ಆಗದಂತೆ ಎಚ್ಚರ ವಹಿಸುವುದು ಕೂಡ ಮುಖ್ಯ.

ತಪ್ಪುಗಳನ್ನು ಮಾಡದಂತೆ ಖಚಿತಪಡಿಸಿಕೊಳ್ಳಲು ಮತ್ತು ತೆರಿಗೆ ಅಧಿಕಾರಿಗಳೊಂದಿಗೆ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಆದಾಯ ತೆರಿಗೆ ರಿಟರ್ನ್ಸ್ ಅನ್ನು ನಿಖರವಾಗಿ ಮತ್ತು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಬಹಳ ಮುಖ್ಯ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮಾಡಲೇಬಾರದ ಹತ್ತು ತಪ್ಪುಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವೈಯಕ್ತಿಕ ಮಾಹಿತಿ

ಹೆಸರು, ವಿಳಾಸ, ಪಾನ್ ಮತ್ತು ಬ್ಯಾಂಕ್ ವಿವರಗಳಂತಹ ತಪ್ಪಾದ ವೈಯಕ್ತಿಕ ಮಾಹಿತಿಯನ್ನು ನಮೂದಿಸುವುದು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಇದು ಪ್ರಕ್ರಿಯೆ ಅಥವಾ ಮರುಪಾವತಿಯನ್ನು ವಿಳಂಬಗೊಳಿಸುವ ಸಾಧ್ಯತೆ ಇದೆ. ಇಂತಹ ಯಾವುದೇ ವ್ಯತ್ಯಾಸಗಳನ್ನು ತಪ್ಪಿಸಲು ಅಧಿಕೃತ ದಾಖಲೆಗಳು ಮತ್ತು ಬ್ಯಾಂಕ್ ದಾಖಲೆಗಳಲ್ಲಿನ ವಿವರಗಳು ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಮೊದಲು ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಎರಡು ಬಾರಿ ಪರಿಶೀಲಿಸಿ. ಯಾವುದೇ ತಪ್ಪುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತಪ್ಪಾದ ಆದಾಯ ತೆರಿಗೆ ರಿಟರ್ನ್ಸ್

ವಿವಿಧ ರೀತಿಯ ತೆರಿಗೆದಾರರು ಮತ್ತು ಆದಾಯದ ಮೂಲಗಳಿಗಾಗಿ ವಿವಿಧ ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್‌ಗಳಿವೆ. ತಪ್ಪು ಫಾರ್ಮ್ ಅನ್ನು ಬಳಸುವುದರಿಂದ ನಿರಾಕರಣೆ ಅಥವಾ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು.

50 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ITR-1 (ಸಹಜ್), ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರದವರಿಗೆ ಮತ್ತು ಎಚ್‌ಯುಎಫ್‌ಗಳಿಗೆ ITR-2, ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವವರಿಗೆ ಮತ್ತು ಎಚ್‌ಯುಎಫ್‌ಗಳಿಗೆ ITR-3, I ವ್ಯಾಪಾರ ಮತ್ತು ವೃತ್ತಿಯಿಂದ ಊಹೆಯ ಆದಾಯ ಪಡೆಯುವವರಿಗೆ TR-4 (ಸುಗಮ) ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆದಾಯದ ಮೂಲ ವರದಿ

ಉಳಿತಾಯ ಖಾತೆಗಳು, ಸ್ಥಿರ ಠೇವಣಿಗಳು, ಬಾಡಿಗೆ ಆದಾಯ ಅಥವಾ ಬಂಡವಾಳ ಲಾಭಗಳಂತಹ ಹೆಚ್ಚುವರಿ ಆದಾಯದ ಮೂಲಗಳನ್ನು ವರದಿ ಮಾಡಲು ಅನೇಕ ತೆರಿಗೆದಾರರು ಮರೆಯುತ್ತಾರೆ. ಇವುಗಳನ್ನು ಬಿಟ್ಟುಬಿಡುವುದರಿಂದ ಪೆನಾಲ್ಟಿಗಳು ಮತ್ತು ಪಾವತಿಸದ ತೆರಿಗೆಗಳ ಮೇಲಿನ ಬಡ್ಡಿಗೆ ಕಾರಣವಾಗಬಹುದು.ಎಲ್ಲಾ ಮೂಲಗಳು ವರದಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಡ್ಡಿ, ಲಾಭಾಂಶಗಳು ಮತ್ತು ಬಾಡಿಗೆ ಆದಾಯ ಸೇರಿದಂತೆ ಎಲ್ಲಾ ಹಣಕಾಸಿನ ದಾಖಲೆಗಳು ಮತ್ತು ಆದಾಯ ಹೇಳಿಕೆಗಳನ್ನು ಒಟ್ಟುಗೂಡಿಸಿ.

ಅರ್ಹವಾದ ಕಡಿತ

ತೆರಿಗೆದಾರರು ಸಾಮಾನ್ಯವಾಗಿ 80C, 80D, 80E, ಇತ್ಯಾದಿಗಳಂತಹ ವಿವಿಧ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಕ್ಲೈಮ್ ಮಾಡುವುದನ್ನು ತಪ್ಪಿಸಿಕೊಳ್ಳುತ್ತಾರೆ. ಇದು ಅವರ ತೆರಿಗೆಯ ಆದಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ಲಭ್ಯವಿರುವ ಎಲ್ಲಾ ಕಡಿತಗಳ ಬಗ್ಗೆ ತಿಳಿದಿರಲಿ ಮತ್ತು ಅವುಗಳನ್ನು ಸೂಕ್ತವಾಗಿ ಕ್ಲೈಮ್ ಮಾಡಿ. ಸಾಮಾನ್ಯ ಕಡಿತಗಳಲ್ಲಿ ಪಿಪಿಎಫ್ , ಎನ್ ಎಸ್ ಸಿ, ವಿಮಾ ಪ್ರೀಮಿಯಂಗಳು, ಗೃಹ ಸಾಲದ ಬಡ್ಡಿ ಮತ್ತು ಬೋಧನಾ ಶುಲ್ಕಗಳಲ್ಲಿ ಹೂಡಿಕೆಗಳು ಸೇರಿವೆ.

ಟಿಡಿಎಸ್ ವಿವರ

ಫಾರ್ಮ್ 26ಎಎಸ್ ನಲ್ಲಿನ ಟಿಡಿಎಸ್ ವಿವರಗಳ ನಡುವೆ ಹೊಂದಿಕೆಯಾಗುವುದಿಲ್ಲ ಮತ್ತು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಕ್ಲೈಮ್ ಮಾಡಲಾದ ಟಿಡಿಎಸ್ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳು ಮತ್ತು ವಿಳಂಬಗಳಿಗೆ ಕಾರಣವಾಗಬಹುದು. ಅಲ್ಲದೆ, ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಟಿಡಿಎಸ್ ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ. ಫಾರ್ಮ್ 26ಎಎಸ್ ನಲ್ಲಿ ನಿಮ್ಮ ಟಿಡಿಎಸ್ ವಿವರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ನೀವು ನಮೂದಿಸಿದ ವಿವರಗಳಿಗೆ ಅವು ಹೊಂದಾಣಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಿ.

ಆದಾಯ ತೆರಿಗೆ ರಿಟರ್ನ್ಸ್ ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಿದ ಅನಂತರ ಅದನ್ನು ವಿದ್ಯುನ್ಮಾನವಾಗಿ ಅಥವಾ 120 ದಿನಗಳಲ್ಲಿ ಕೇಂದ್ರೀಕೃತ ಸಂಸ್ಕರಣಾ ಕೇಂದ್ರಕ್ಕೆ (ಸಿಪಿಸಿ) ಸಹಿ ಮಾಡಿದ ಭೌತಿಕ ನಕಲನ್ನು ಕಳುಹಿಸುವ ಮೂಲಕ ಪರಿಶೀಲಿಸುವುದು ಬಹಳ ಮುಖ್ಯ. ಪರಿಶೀಲಿಸದ ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ತ್ವರಿತ ಪ್ರಕ್ರಿಯೆಗಾಗಿ ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಲಭ್ಯವಿರುವ ಇತರ ವಿಧಾನಗಳನ್ನು ಬಳಸಿಕೊಂಡು ಇ-ಪರಿಶೀಲನೆಗೆ ಆದ್ಯತೆ ನೀಡಿ.


ಹಿಂದಿನ ಆದಾಯ ನಮೂದಿಸಿ

ಆರ್ಥಿಕ ವರ್ಷದಲ್ಲಿ ಉದ್ಯೋಗಗಳನ್ನು ಬದಲಾಯಿಸಿದ್ದರೆ ಹಿಂದಿನ ಉದ್ಯೋಗದಾತರಿಂದ ಆದಾಯವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ನಿರ್ಲಕ್ಷಿಸುವುದರಿಂದ ಆದಾಯವನ್ನು ಕಡಿಮೆ ವರದಿ ಮಾಡಿದ್ದಕ್ಕಾಗಿ ತೆರಿಗೆ ಇಲಾಖೆಯಿಂದ ನೋಟಿಸ್‌ಗೆ ಕಾರಣವಾಗಬಹುದು. ಎಲ್ಲಾ ಉದ್ಯೋಗದಾತರಿಂದ ಫಾರ್ಮ್ 16 ಅನ್ನು ಸಂಗ್ರಹಿಸಿ ಮತ್ತು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಒಟ್ಟು ಆದಾಯವನ್ನು ವರದಿ ಮಾಡಿ.

ತಪ್ಪಾದ ಬ್ಯಾಂಕ್ ಖಾತೆ ವಿವರಗಳು

ತಪ್ಪಾದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದರಿಂದ ಮರುಪಾವತಿಯನ್ನು ವಿಳಂಬಗೊಳಿಸಬಹುದು. ಖಾತೆ ಸಂಖ್ಯೆ ಮತ್ತು ಐಎಫ್ ಎಸ್ ಸಿ ಕೋಡ್ ನಿಖರವಾಗಿದೆ ಮತ್ತು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಐಟಿಆರ್ ಫಾರ್ಮ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಿ ಮತ್ತು ಸಲ್ಲಿಸುವ ಮೊದಲು ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಇದನ್ನೂ ಓದಿ: Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

ವಿದೇಶಿ ಆದಾಯ

ವಿದೇಶಿ ಮೂಲಗಳಿಂದ ಆದಾಯವನ್ನು ಹೊಂದಿದ್ದರೆ ಅದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ವರದಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಪೆನಾಲ್ಟಿಗಳು ಮತ್ತು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಎನ್‌ಆರ್‌ಐಗಳಿಗೆ ಅಥವಾ ಸಾಗರೋತ್ತರ ಹೂಡಿಕೆ ಹೊಂದಿರುವವರಿಗೆ. ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಎಲ್ಲಾ ವಿದೇಶಿ ಆದಾಯ ಮತ್ತು ಆಸ್ತಿಗಳನ್ನು ಸೇರಿಸಿ ಮತ್ತು ಅಗತ್ಯವಿದ್ದರೆ ವೃತ್ತಿಪರ ಸಲಹೆಯನ್ನು ಪಡೆಯಿರಿ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬ

ಗಡುವಿನ ಅನಂತರ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸುವುದು ತಡವಾಗಿ ಫೈಲಿಂಗ್ ಶುಲ್ಕಗಳು, ಬಾಕಿ ಇರುವ ತೆರಿಗೆಯ ಮೇಲಿನ ಬಡ್ಡಿ ಮತ್ತು ಅಗತ್ಯವಿದ್ದರೆ ರಿಟರ್ನ್ ಅನ್ನು ಪರಿಷ್ಕರಿಸಲು ಕಡಿಮೆ ಸಮಯವನ್ನು ಆಕರ್ಷಿಸಬಹುದು. ಕೊನೆಯ ನಿಮಿಷದ ವಿಪರೀತ ಮತ್ತು ಸಂಭಾವ್ಯ ದೋಷಗಳನ್ನು ತಪ್ಪಿಸಲು ಗಡುವಿನ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಫೈಲ್ ಮಾಡಿ.

Continue Reading

ಉದ್ಯೋಗ

Job Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ರಾಜ್ಯದಾದ್ಯಂತ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್​, ಆಫೀಸರ್ ಒಟ್ಟು 586 ಹುದ್ದೆಗಳಿಗೆ (Job Recruitment) ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 27ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ನಿಯಮ, ಅರ್ಹತೆ ವಿವರ ಇಂತಿದೆ.

VISTARANEWS.COM


on

By

Job Recruitment
Koo

ಬೆಂಗಳೂರು: ಕರ್ನಾಟಕ (karnataka) ಗ್ರಾಮೀಣ ಬ್ಯಾಂಕ್‌ನಲ್ಲಿ (Karnataka Gramina Bank) ಖಾಲಿ ಇರುವ ಒಟ್ಟು 586 ಆಫೀಸ್ ಅಸಿಸ್ಟೆಂಟ್ (office assistant)​, ಆಫೀಸರ್ (officer) ಹುದ್ದೆಗಳಿಗೆ ನೇಮಕಾತಿಯನ್ನು (Job Recruitment) ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು 2024ರ ಜೂನ್ 27ರೊಳಗಾಗಿ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಯ ವಿವರ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 386, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ 200 ಸೇರಿ ಒಟ್ಟು 586 ಹುದ್ದೆಗಳಲ್ಲಿ ಆಫೀಸ್ ಅಸಿಸ್ಟೆಂಟ್ 200, ಆಫೀಸರ್ ಸ್ಕೇಲ್-1(ಅಸಿಸ್ಟೆಂಟ್ ಮ್ಯಾನೇಜರ್) 386 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಾದ್ಯಂತ ಹುದ್ದೆಗಳು ಖಾಲಿ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ. ಅನುಭವ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ಕೊಡಲಾಗುತ್ತದೆ.

ಅರ್ಹತೆ ಏನು?

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ಆಫೀಸ್ ಅಸಿಸ್ಟೆಂಟ್ ಹುದ್ದಗೆ 18ರಿಂದ 28 ವರ್ಷ ಮತ್ತು ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗೆ 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿ ಗಳಿಗೆ 5 ವರ್ಷ, ಒಬಿಸಿ (ಎನ್ ಸಿಎಲ್ ) ಅಭ್ಯರ್ಥಿ ಗಳಿಗೆ 3 ವರ್ಷ, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಆಫೀಸರ್ (ಸ್ಕೇಲ್ I) ಹುದ್ದೆಗಳಿಗೆ ಎಸ್‌ಸಿ ಮತ್ತು ಎಸ್ ಟಿ, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 175 ರೂ., ಇತರ ಅಭ್ಯರ್ಥಿಗಳಿಗೆ 850 ರೂ. ಶುಲ್ಕ ವಿಧಿಸಲಾಗಿದೆ. ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್​) ಹುದ್ದೆಗಳಿಗೆ ಎಸ್ ಸಿ/ಎಸ್ ಟಿ/ಪಿಡಬ್ಲ್ಯೂ ಬಿಡಿ/ಇಎಸ್ ಎಂ/ಡಿಇಎಸ್ ಎಂ ಅಭ್ಯರ್ಥಿಗಳಿಗೆ 175 ರೂ., ಇತರ ಅಭ್ಯರ್ಥಿಗಳಿಗೆ 850 ರೂ. ಶುಲ್ಕ ವಿಧಿಸಲಾಗಿದ್ದು, ಆನ್‌ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

ಅರ್ಜಿ ಪ್ರಕ್ರಿಯೆ

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೇರವಾಗಿ ನೋಂದಣಿ ಮಾಡಿಕೊಳ್ಳಲು ವೆಬ್ ಸೈಟ್ https://ibpsonline.ibps.in/rrb13oamay24/ ಅನ್ನು ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಅರ್ಹ ಅಭ್ಯರ್ಥಿಗಳಿಗೆ ಪೂರ್ವ ಭಾವಿ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮುಖ್ಯ ಪರೀಕ್ಷೆ ನಡೆಸಿ ಆಯ್ಕೆಯಾದವರಿಗೆ ಸಂದರ್ಶನ ನಡೆಸಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Continue Reading

Latest

Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!

Job Recruitment ಉದ್ಯೋಗ ಎಲ್ಲರಿಗೂ ಅಗತ್ಯವಾಗಿರುತ್ತದೆ.ಇಂದಿನ ಕಾಲದಲ್ಲಿ ಕೆಲಸ ಸಿಗುವುದೇ ಒಂದು ದೊಡ್ಡ ಸವಾಲಾಗಿದೆ. ಅದರಲ್ಲೂ ಬ್ಯಾಂಕ್ ಕೆಲಸಗಳಿಗಾಗಿ ಹೆಚ್ಚಿನವರು ಕಾಯುತ್ತಿರುತ್ತಾರೆ. ಕೆಲವರ ಕನಸಿನ ಉದ್ಯೋಗವಾಗಿರುತ್ತದೆ ಇದು. ಬ್ಯಾಂಕ್ ಆಫ್ ಬರೋಡಾ ಒಂದಷ್ಟು ಹುದ್ದೆಗಳಿಗಾಗಿ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತರು ಇದಕ್ಕೆ ಪ್ರಯತ್ನಿಸಬಹುದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ bankofbaroda.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 2, 2024 ಕೊನೆಯ ದಿನವಾಗಿದೆ.

VISTARANEWS.COM


on

Job Recruitment
Koo

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾ 2024ಕ್ಕೆ 627 ನಿರ್ವಹಣೆ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಯನ್ನು (Job Recruitment )ಘೋಷಿಸಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ bankofbaroda.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 2, 2024 ಕೊನೆಯ ದಿನವಾಗಿದೆ.

ಹುದ್ದೆಯ ವಿವರಗಳು:

  • ಡೆಪ್ಯುಟಿ ಉಪಾಧ್ಯಕ್ಷ – ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಎಂಜಿನಿಯರ್ : 4 ಹುದ್ದೆಗಳು
  • ಸಹಾಯಕ ಉಪಾಧ್ಯಕ್ಷ- ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಎಂಜಿನಿಯರ್ : 9 ಹುದ್ದೆಗಳು
  • ಆರ್ಕಿಟೆಕ್ಟ್ : 8 ಹುದ್ದೆಗಳು
  • ಝೋನಲ್ ಸೇಲ್ಸ್ ಮ್ಯಾನೇಜರ್ : 3 ಹುದ್ದೆಗಳು
  • ಸಹಾಯಕ ಉಪಾಧ್ಯಕ್ಷ : 20 ಹುದ್ದೆಗಳು
  • ಸೀನಿಯರ್ ಮ್ಯಾನೇಜರ್ : 22 ಹುದ್ದೆಗಳು
  • ಮ್ಯಾನೇಜರ್ : 11 ಹುದ್ದೆಗಳು
  • ರೇಡಿಯನ್ಸ್ ಪ್ರೈವೇಟ್ ಸೇಲ್ಸ್ ಹೆಡ್ : 1 ಹುದ್ದೆ
  • ಗ್ರೂಪ್ ಹೆಡ್ : 4 ಹುದ್ದೆಗಳು
  • ಟೆರಿಟರಿ ಮುಖ್ಯಸ್ಥ : 8 ಹುದ್ದೆಗಳು
  • ಸೀನಿಯರ್ ರಿಲೇಶನ್ ಶಿಪ್ ಮ್ಯಾನೇಜರ್ : 234 ಹುದ್ದೆಗಳು
  • ಇ-ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್ : 26 ಹುದ್ದೆಗಳು
  • ಪ್ರೈವೇಟ್ ಬ್ಯಾಂಕರ್- ರೇಡಿಯನ್ಸ್ ಪ್ರೈವೇಟ್: 12 ಹುದ್ದೆಗಳು
  • ಗ್ರೂಪ್ ಸೇಲ್ಸ್ ಹೆಡ್(ವರ್ಚುವಲ್ ಆರ್ ಎಂ ಸೇಲ್ಸ್ ಹೆಡ್):1 ಹುದ್ದೆ
  • ವೆಲ್ತ್ ಸ್ಟ್ರಾಟಜಿಸ್ಟ್(ಹೂಡಿಕೆ ಮತ್ತು ವಿಮೆ)/ಪ್ರೊಡಕ್ಟ್ ಹೆಡ್ : 10 ಹುದ್ದೆಗಳು
  • ಪೋರ್ಟ್‌ಪೊಲಿಯೊ ರಿಸರ್ಚ್ ಆ್ಯನಲಿಸ್ಟ್ :1 ಹುದ್ದೆ
  • ಎವಿಪಿ- ಸ್ವಾಧೀನ ಮತ್ತು ಸಂಬಂಧ ನಿರ್ವಾಹಕ: 19 ಹುದ್ದೆಗಳು
  • ವಿದೇಶಿ ವಿನಿಮಯ ಮತ್ತು ಸಂಬಂಧ ವ್ಯವಸ್ಥಾಪಕ : 15 ಹುದ್ದೆಗಳು
  • ಕ್ರೆಡಿಟ್ ಆ್ಯನಲಿಸ್ಟ್ : 80 ಹುದ್ದೆಗಳು
  • ರಿಲೇಶನ್ ಶಿಪ್ ಮ್ಯಾನೇಜರ್ : 66 ಹುದ್ದೆಗಳು
  • ಸೀನಿಯರ್ ಮ್ಯಾನೇಜರ್ –ಬಿಸಿನೆಸ್ ಫೈನಾನ್ಸ್ : 4 ಹುದ್ದೆಗಳು
  • ಮುಖ್ಯ ವ್ಯವಸ್ಥಾಪಕ- ಇಂಟರ್ ನಲ್ ಕಂಟ್ರೋಲ್ಸ್ : 3 ಹುದ್ದೆಗಳು

ಅರ್ಹತೆ ಏನು?

ಬ್ಯಾಂಕ್ ಆಫ್ ಬರೋಡಾ ಆಸಕ್ತ ಅರ್ಜಿದಾರರಿಗೆ ಲಿಖಿತ ಪರೀಕ್ಷೆಗಳು ಮತ್ತು ಸಂದರ್ಸನಗಳನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆ ಇರುತ್ತದೆ. ಅಧಿಸೂಚನೆಯಲ್ಲಿ ವಿವರಿಸಿರುವ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಅನುಸರಿಸುವ ಮೂಲಕ ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬಹುದು. ಹೆಚ್ಚವರಿಯಾಗಿ ಬ್ಯಾಂಕ್ ಆಫ್ ಬರೋಡಾ ಪ್ರತಿ ಉದ್ಯೋಗಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ಮತ್ತು ನಿರೀಕ್ಷೆಗಳ ಬಗ್ಗೆ ಮೌಲ್ಯಯುತವಾದ ವಿವರಗಳನ್ನು ನೀಡುತ್ತದೆ ಮತ್ತು ಅಭ್ಯರ್ಥಿಗಳು ಸಂಸ್ಥೆಯೊಳಗೆ ತಮ್ಮ ವೃತ್ತಿ ಜೀವನದ ಭವಿಷ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ನೇಮಕಾತಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳ ಪ್ರತಿಭೆಯನ್ನು ಗಮನಿಸಿ ಬ್ಯಾಂಕ್ ಆಫ್ ಬರೋಡಾ ಉನ್ನತ ಅರ್ಹ ವ್ಯಕ್ತಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಅಭ್ಯರ್ಥಿಗಳು ಅಪ್ಲಿಕೇಶನ್ ಪ್ರಕ್ರಿಯೆ ಸಮಯದಲ್ಲಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಸಮರ್ಥಿಸಬಹುದು.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಬಂದ ಅರ್ಹ ಅಭ್ಯರ್ಥಿಗಳ ರೆಸ್ಯೂಮ್ ಗಳು ಮತ್ತು ಅಪ್ಲಿಕೇಶನ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುವುದು. ಇಂಟರ್ ವೀವ್ ನಲ್ಲಿ ಅಭ್ಯರ್ಥಿಯ ಕೌಶಲ, ಅನುಭವ ಮತ್ತು ಸ್ಥಾನಕ್ಕೆ ಸರಿಹೊಂದುವಂತಹ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಕೌಶಲ್ಯ ಪರೀಕ್ಷೆ, ಗ್ರೂಪ್ ಇಂಟರ್ ವೀವ್ ನಂತಹ ಇತರ ವಿಧಾನಗಳಿಂದ ಅಭ್ಯರ್ಥಿಗಳ ಸಾಮರ್ಥ್ಯವನ್ನು ಗಮನಿಸಲಾಗುತ್ತದೆ. ಅದರಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ EWS ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಜೊತೆಗೆ GST ಮತ್ತು ವಹಿವಾಟು ಶುಲ್ಕಗಳನ್ನು ನೀಡಬೇಕಾಗುತ್ತದೆ. SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳು 100 ರೂ. ಜೊತೆಗೆ GST ಮತ್ತು ವಹಿವಾಟು ಶುಲ್ಕಗಳನ್ನು ನೀಡಬೇಕಾಗುತ್ತದೆ. ಹಾಗೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿ ಶುಲ್ಕ ಪಾವತಿಸಬಹುದು.

ಇದನ್ನೂ ಓದಿ: Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

Continue Reading
Advertisement
Drowned in Water boy who went swimming drowned and died
ಬೀದರ್‌10 mins ago

Drowned in Water: ಡ್ಯಾಮ್ ನೀರಿನಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು!

Jagan Mohan Reddy
ದೇಶ12 mins ago

Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

PM Surya Ghar Yojana Comprehensive Review Meeting by Union Minister Pralhad Joshi
ಕರ್ನಾಟಕ12 mins ago

Pralhad Joshi: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರದ ಪ್ರತೀಕ ಸೂರ್ಯ ಘರ್: ಜೋಶಿ

Sonakshi Sinha
ಬಾಲಿವುಡ್57 mins ago

Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

Construction of International Cricket Stadium at Shira MLA T B Jayachandra KSCA team inspection
ಕರ್ನಾಟಕ2 hours ago

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Malayali actress Honey Rose starring Rachel movie Teaser release
ಕರ್ನಾಟಕ2 hours ago

Rachel Movie: ಮಲಯಾಳಿ ನಟಿ ಹನಿ ರೋಸ್ ನಾಯಕಿಯಾಗಿ ನಟಿಸಿರುವ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್‌

IPS Officer
ದೇಶ2 hours ago

IPS Officer: ಕ್ಯಾನ್ಸರ್‌ನಿಂದ ಪತ್ನಿ ಸಾವಿನ ಸುದ್ದಿ ತಿಳಿದ ಕೆಲವೇ ನಿಮಿಷದಲ್ಲಿ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ!

Sambhavami Yuge Yuge movie release on June 21
ಕರ್ನಾಟಕ2 hours ago

Kannada New Movie: ಜೂ.21ಕ್ಕೆ ‘ಸಂಭವಾಮಿ ಯುಗೇ ಯುಗೇ’ ಚಿತ್ರ ರಿಲೀಸ್‌

Kodi Mutt Swamiji
ಪ್ರಮುಖ ಸುದ್ದಿ2 hours ago

Kodi Mutt Swamiji: ದೇಶದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು, ರಾಜ್ಯದಲ್ಲಿ ಅತಿವೃಷ್ಟಿ: ಕೋಡಿಮಠ ಶ್ರೀ ಭವಿಷ್ಯ!

Vijayapura News
ಕರ್ನಾಟಕ3 hours ago

Vijayapura News: ಗುಂಡಿಗೆ ಬಿದ್ದು ಮೂವರ ಸಾವು; ಬಾಲಕಿಯನ್ನು ರಕ್ಷಿಸಲು ಹೋದವರೂ ನೀರುಪಾಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌