SSC CGL 2022 | ಎಸ್‌ಎಸ್‌ಸಿಯ ಸಿಜಿಎಲ್ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು? - Vistara News

ಉದ್ಯೋಗ

SSC CGL 2022 | ಎಸ್‌ಎಸ್‌ಸಿಯ ಸಿಜಿಎಲ್ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ‘ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಗ್ಸಾಮ್’ಗೆ (SSC CGL 2022) ಅಧಿಸೂಚನೆ ಹೊರಡಿಸಿದೆ. ಈ ಪರೀಕ್ಷೆ ಕುರಿತು ಮಾಹಿತಿ ನೀಡುವ ಪ್ರಶ್ನೋತ್ತರ ಇಲ್ಲಿದೆ.

VISTARANEWS.COM


on

SSC CGL 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಏನಿದು ಸಿಜಿಎಲ್‌ ಪರೀಕ್ಷೆ?
ಭಾರತ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆಗಳಿಗೆ ಅಗತ್ಯವಾಗಿರುವ ಸಿಬ್ಬಂದಿಯನ್ನು ನೇಮಕ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಪ್ರತಿ ವರ್ಷ ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಒಟ್ಟಾಗಿ ನೇಮಕ ಮಾಡುವ ಉದ್ದೇಶದಿಂದ ನಡೆಸುವ ಪರೀಕ್ಷೆಯೇ ‘ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಗ್ಸಾಮ್’. ಇದು ‘ಸಿಜಿಎಲ್’ (SSC CGL 2022) ಪರೀಕ್ಷೆ ಎಂದೇ ಪ್ರಸಿದ್ಧಿ ಪಡೆದಿದೆ.

ಇಲಾಖೆ, ಸಂಸ್ಥೆಗಳ ಬೇಡಿಕೆಯನ್ನು ನೋಡಿಕೊಂಡು ಅಗತ್ಯವಿರುವಷ್ಟು ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡುವ ಕೆಲಸವನ್ನು ಎಸ್‌ಎಸ್‌ಸಿ ಮಾಡುತ್ತದೆ. ಪ್ರತಿ ವರ್ಷ ಕೇಂದ್ರ ಸರ್ಕಾರದ ಅತಿ ಹೆಚ್ಚು ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯುವುದರಿಂದ ಇದನ್ನು ‘ಅತಿದೊಡ್ಡ ಪರೀಕ್ಷೆ’, ‘ಪ್ರತಿಷ್ಠಿತ ಪರೀಕ್ಷೆ’ ಎಂದೆಲ್ಲಾ ಬಣ್ಣಿಸಲಾಗುತ್ತದೆ. ಈ ವರ್ಷ ಸುಮಾರು 20 ಸಾವಿರ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಈಗಾಗಲೇ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಈ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಉದ್ಯೋಗ ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ.

ನಾನು ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ, ಈ ಪರೀಕ್ಷೆ ಬರೆಯಬಹುದೇ?
ಈ ಹಿಂದೆ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವವರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಅಭ್ಯರ್ಥಿಯು 08-10-2022ರ ಒಳಗೆ ಪದವಿ ಪಡೆದಿರುವ ಕುರಿತು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗಿರುವುದು ಅಗತ್ಯ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ ಪಾವತಿಸುವುದು ಹೇಗೆ?
ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಅರ್ಜಿ ಸಲ್ಲಿಸುವಾಗ ಚಲನ್ ಪಡೆದು, ಅದನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ನಗದಿನೊಂದಿಗೆ ಕೊಟ್ಟು ಅರ್ಜಿ ಶುಲ್ಕ ಪಾವತಿಸಬಹುದು. ನೂರು ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿರುತ್ತದೆ. ನೆನಪಿಡಿ, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಪರೀಕ್ಷೆ ಎಲ್ಲಿ ನಡೆಯುತ್ತದೆ?
ರಾಜ್ಯದ ಎಂಟು ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗುತ್ತದೆ.

ಹೇಗಿರುತ್ತದೆ ಈ ಪರೀಕ್ಷೆ ?
ಒಟ್ಟು ನಾಲ್ಕು ಹಂತದಲ್ಲಿ ಸಿಜಿಎಲ್‌ ಪರೀಕ್ಷೆ (SSC CGL 2022) ನಡೆಸಲಾಗುತ್ತದೆ. ಮೊದಲ ಎರಡು ಹಂತದ ಪರೀಕ್ಷೆಗಳು ಕಂಪ್ಯೂಟರ್ ಆಧರಿತ (ಸಿಬಿಟಿ) ಪರೀಕ್ಷೆಯಾಗಿರುತ್ತದೆ. ಮೂರನೇ ಹಂತದ ಪರೀಕ್ಷೆ (ಟೈರ್-3) ವಿವರಣಾತ್ಮಕ ಪರೀಕ್ಷೆಯಾಗಿರುತ್ತದೆ. ಇದನ್ನು ಅಭ್ಯರ್ಥಿಗಳು ಬರೆಯಬೇಕಿರುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ (ಟೈರ್-1) ಎರಡನೇ ಹಂತದ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಪರೀಕ್ಷೆಯಲ್ಲಿ ಮೊದಲ ಹಂತದ (ಟೈರ್-1) ಪರೀಕ್ಷೆಯಲ್ಲಿ 200 ಪ್ರಶ್ನೆಗಳಿರಲಿವೆ. ಇದಕ್ಕೆ ಉತ್ತರ ಗುರುತಿಸಲು ಕೇವಲ 60 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸಿ ಮತ್ತು ರೀಸನಿಂಗ್‌ನ 25, ಜನರಲ್ ಅವೇರ್ನೆಸ್‌ನ 25, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ನ 25 ಮತ್ತು ಇಂಗ್ಲಿಷ್ ಕಾಂಪ್ರಿಹೆನ್ಷನ್‌ನ 25 ಪ್ರಶ್ನೆಗಳಿರಲಿವೆ. ಪ್ರತಿ ಪ್ರಶ್ನೆಗೂ 2 ಅಂಕ ನಿಗದಿಪಡಿಸಲಾಗಿರುತ್ತದೆ.

ಎರಡನೇ ಹಂತದ (ಟೈರ್-2) ಪರೀಕ್ಷೆಯು 800 ಅಂಕಗಳಿಗೆ ನಡೆಯಲಿದ್ದು, ನಾಲ್ಕ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರಲಿದೆ. ಪ್ರತಿ ಪ್ರಶ್ನೆಪತ್ರಿಕೆಗೆ ಉತ್ತರಿಸಲು ತಲಾ 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆ -1: ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ನ 100 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -2: ಇಂಗ್ಲಿಷ್ ಭಾಷೆ ಮತ್ತು ಕಾಂಪ್ರಿಹೆನ್ಷನ್‌ನ 200 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -3: ಸ್ಟ್ಯಾಟಿಟಿಕ್ಸ್‌ನ 100 ಪ್ರಶ್ನೆ (200 ಅಂಕ) ಪ್ರಶ್ನೆ ಪತ್ರಿಕೆ -4 ಜನರಲ್ ಸ್ಟಡೀಸ್‌ನ (ಫೈನಾನ್ಸ್ ಮತ್ತು ಎಕನಾಮಿಕ್ಸ್) 100 ಪ್ರಶ್ನೆ (200ಅಂಕ).

ಗಮನಿಸಿ: ಎಲ್ಲ ಹುದ್ದೆಗಳಿಗೂ ಪ್ರಶ್ನೆಪತ್ರಿಕೆ- 1 ಮತ್ತು 2 ಕಡ್ಡಾಯವಾಗಿರುತ್ತವೆ. ಉಳಿದ ಪ್ರಶ್ನೆ ಪತ್ರಿಕೆಗಳು ಯಾವ ಹುದ್ದೆ ಎಂಬುದರ ಮೇಲೆ ನಿಗದಿಯಾಗಿರುತ್ತವೆ. ಈ ಎರಡೂ ಹಂತದ ಪರೀಕ್ಷೆಯಲ್ಲಿಯೂ ನೆಗೆಟಿವ್ ಮಾರ್ಕ್ಸ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ಟೈರ್-1ರ ಪರೀಕ್ಷೆಯಲ್ಲಿ 0.50 ಹಾಗೂ ಟೈರ್-2ನ ಪ್ರಶ್ನೆಪತ್ರಿಕೆ-2ರಲ್ಲಿ ಮಾತ್ರ 0.25 ಮಾರ್ಕ್ಸ್ ಹಾಗೂ ಉಳಿದೆಲ್ಲಾ ಪ್ರಶ್ನೆ ಪತ್ರಿಕೆಗಳಲ್ಲಿ 0.05 ಮಾರ್ಕ್ಸ್‌ಕಳೆಯಲಾಗುತ್ತದೆ.

ಮೂರನೇ ಹಂತದ ಪರೀಕ್ಷೆಯು ಲಿಖಿತ ಪರೀಕ್ಷೆಯಾಗಿರಲಿದೆ. ಇದರಲ್ಲಿ ಪ್ರಬಂಧ ಬರೆಯುವುದು, ಪತ್ರ-ಅರ್ಜಿ ಬರೆಯುವುದು, ಅನುವಾದ ಮಾಡುವುದು ಮತ್ತಿತರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು ನೂರು ಅಂಕಗಳನ್ನು ನಿಗದಿಪಡಿಸಲಾಗಿದ್ದು, ಒಟ್ಟಾರೆಯಾಗಿ ವಿವರಣಾತ್ಮಕ ಉತ್ತರ ಬರೆಯುವಂತೆ ಸೂಚಿಸಲಾಗುತ್ತದೆ. ಅಭ್ಯರ್ಥಿಗಳ ಗ್ರಹಿಕೆ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಮೂರನೇ ಹಂತದ ಪರೀಕ್ಷೆಯನ್ನು 2016ರಲ್ಲಿ ಪರಿಚಯಿಸಲಾಗಿದೆ. ಈ ಪರೀಕ್ಷೆ ಬರೆಯಲು 60 ನಿಮಿಷ ಅಂದರೆ ಒಂದು ಗಂಟೆ ಮಾತ್ರ ಕಾಲಾವಕಾಶ ನೀಡಲಾಗಿರುತ್ತದೆ.

ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ ನೋಡಿ | https://ssc.nic.in/Downloads/portal/english/Scheme%20of%20Examination%20CGLE.pdf

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ಕೌಶಲದ ಪರೀಕ್ಷೆಯೂ ನಡೆಯಲಿದೆ. ಮುಖ್ಯವಾಗಿ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದರ ಪರೀಕ್ಷೆ ಇರುತ್ತದೆ. ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ನಂತಹ ಹುದ್ದೆಗಳಿಗೆ ದೈಹಿಕ ಮತ್ತು ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಗಳು ಹೇಗಿರುತ್ತದೆ ಎಂಬ ಸಂಪೂರ್ಣ ವಿವರವನ್ನು ಆಯೋಗದ ವೆಬ್ ನಲ್ಲಿ ಪ್ರಕಟಿಸಲಾಗಿದೆ. ವಿಡಿಯೋ ಮೂಲಕವೂ ಮಾಹಿತಿ ನೀಡಲಾಗಿದೆ. ಕೊನೆಯ ಹಂತದಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ.

ಪರೀಕ್ಷೆಗೆ ಯಾವೆಲ್ಲಾ ವಿಷಯಗಳನ್ನು ಓದಿ ಕೊಳ್ಳಬೇಕು?
ಸಿಜಿಎಲ್‌ ಪರೀಕ್ಷೆಗೆ (SSC CGL 2022) ಯಾವೆಲ್ಲಾ ವಿಷಯಗಳನ್ನು ಓದಿ ಕೊಳ್ಳಬೇಕೆಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ. ಇದನ್ನು ನೋಡಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ಮೊದಲ ಹಂತದ ಪರೀಕ್ಷೆಯು ಇದೇ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಮುಂದಿನ ಹಂತದ ಪರೀಕ್ಷೆಯ ವೇಳಾಪಟ್ಟಿಯನ್ನು ಎಸ್ ಎಸ್‌ಸಿಯ ವೆಬ್‌ನಲ್ಲಿಯೂ ಪ್ರಕಟಿಸಲಾಗುತ್ತದೆ. ಅಲ್ಲದೆ, ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ನಲ್ಲಿಯೂ ಒದಗಿಸಲಾಗುತ್ತದೆ.

ಸಂದರ್ಶನ ನಡೆಯುತ್ತದೆಯೇ?
ಇಲ್ಲ, ನಾಲ್ಕು ಹಂತದ ಪರೀಕ್ಷೆ ನಡೆದರೂ ಸಂದರ್ಶನ ನಡೆಸಲಾಗುವುದಿಲ್ಲ. ನಾಲ್ಕೂ ಹಂತದ ಪರೀಕ್ಷೆಯಲ್ಲಿಯೂ ಆರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ನೇಮಕ ಪ್ರಕ್ರಿಯೆಯ ಮಾಹಿತಿ ಪಡೆಯುವುದು ಹೇಗೆ?
ಸಿಬ್ಬಂದಿ ನೇಮಕಾತಿ ಆಯೋಗದ (ಎಸ್ ಎಸ್‌ಸಿ) ಪ್ರಾದೇಶಿಕ ಕಚೇರಿಗಳಲ್ಲಿ ನೇಮಕದ ಮಾಹಿತಿ ಒದಗಿಸಲಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿ ಎಸ್‌ಎಸ್‌ಸಿಯ ಪ್ರಾದೇಶಿಕ ಕಚೇರಿ ಇದ್ದು, ಇದು ರಾಜ್ಯದಲ್ಲಿ ಈ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುತ್ತದೆ. ಅಗತ್ಯ ಮಾಹಿತಿಯನ್ನು ಇಲ್ಲಿಂದಲೂ ಪಡೆದುಕೊಳ್ಳಬಹುದು.
ಸಹಾಯ ವಾಣಿ ಸಂಖ್ಯೆ: 080-25502520, 9483862020

ವೆಬ್‌ಸೈಟ್‌ ವಿಳಾಸ: https://www.ssckkr.kar.nic.in

ಇದನ್ನೂ ಓದಿ | SSC CGL Notification 2022 | ಸಿಜಿಎಲ್‌ ಪರೀಕ್ಷೆಗೆ ಅಧಿಸೂಚನೆ ಪ್ರಕಟ; 20 ಸಾವಿರ ಹುದ್ದೆಗಳಿಗೆ ನೇಮಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Amazon India: ನೀರು ಕುಡಿಯುವಂತಿಲ್ಲ, ವಾಶ್ ರೂಮ್ ಗೆ ಹೋಗುವಂತಿಲ್ಲ; ಸಿಬ್ಬಂದಿಗೆ ಅಮೆಜಾನ್ ಕಂಪನಿ ತಾಕೀತು!

ಹರಿಯಾಣದ ಅಮೆಜಾನ್ ನ (Amazon India) ಗೋದಾಮುಗಳಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್ ಸಮಯದಲ್ಲಿ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ. ವಿಶ್ರಾಂತಿ ಕೊಠಡಿ ಇದ್ದರೂ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಈ ಸಂಗತಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

By

Amazon India
Koo

ಅಮೆಜಾನ್ ನ (Amazon India) ಗೋದಾಮುಗಳಲ್ಲಿ (warehouse) ಕೆಲಸ ಮಾಡುವವರು ನೀರು ಕುಡಿಯಬಾರದು, ವಾಶ್ ರೂಮ್ ಗೆ ಹೋಗಬಾರದು (no toilet, water breaks) ಎಂದು ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣದ (Haryana) ಮಾನೇಸರ್‌ನಲ್ಲಿರುವ (Manesar) ಅಮೆಜಾನ್‌ನ ಐದು ಗೋದಾಮುಗಳ ಕೆಲಸ ಮಾಡುವವರಿಗೆ ಈ ಕಠಿಣ ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ.

ಆರು ಟ್ರಕ್‌ಗಳಿಂದ ಪ್ಯಾಕೇಜ್‌ಗಳನ್ನು ಇಳಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಒತ್ತಾಯಿಸಲಾಯಿತು.

ಶಿಫ್ಟ್ ಸಮಯದಲ್ಲಿ ಕಾರ್ಮಿಕರು ಸಮಯ ವ್ಯರ್ಥ ಮಾಡುತ್ತಿಲ್ಲವೇ ಎಂದು ಪರಿಶೀಲಿಸಲು ಹಿರಿಯರು ವಾಶ್‌ರೂಮ್‌ಗಳನ್ನು ಪರಿಶೀಲಿಸುತ್ತಾರೆ. ಹರಿಯಾಣದ ಮನೇಸರ್‌ನಲ್ಲಿರುವ ಅಮೆಜಾನ್ ಇಂಡಿಯಾದ ಐದು ಗೋದಾಮುಗಳಲ್ಲಿ ತಿಂಗಳಿಗೆ 10,088 ರೂ ಆದಾಯ ಪಡೆಯುವ 24 ವರ್ಷ ವಯಸ್ಸಿನವರು ವಾರದಲ್ಲಿ ಐದು ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡುತ್ತಾರೆ.

ತಲಾ 30 ನಿಮಿಷಗಳ ಊಟ ಮತ್ತು ಚಹಾ ವಿರಾಮಗಳು ಸೇರಿ ಉಳಿದ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದರೂ ದಿನಕ್ಕೆ ನಾಲ್ಕು ಟ್ರಕ್‌ಗಳಿಗಿಂತ ಹೆಚ್ಚು ಇಳಿಸಲು ಸಾಧ್ಯವಿಲ್ಲ. ಎರಡು ದಿನಗಳ ಹಿಂದೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಗುರಿಯನ್ನು ಸಾಧಿಸಲು ನಾವು ನೀರು ಮತ್ತು ವಾಶ್‌ರೂಮ್ ವಿರಾಮಗಳನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿಸಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.


ಹರಿಯಾಣದ ಕೈಗಾರಿಕಾ ಕೇಂದ್ರವಾದ ಮನೇಸರ್‌ನಲ್ಲಿರುವ ಗೋದಾಮುಗಳಲ್ಲಿ ಕಾರ್ಮಿಕರಿಂದ ಆರೋಪ ಕೇಳಿ ಬಂದ ಬಳಿಕ ಅಮೆಜಾನ್ ಇಂಡಿಯಾದ ವಕ್ತಾರರು ಪರಿಶೀಲನೆ ನಡೆಸಿದರು.

ಕಾರ್ಮಿಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮೆಜಾನ್ ಇಂಡಿಯಾದ ವಕ್ತಾರರು, ನಾವು ಈ ಬಗ್ಗೆ ತನಿಖೆ ನಡೆಸಿದ್ದೇವೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ನಮ್ಮ ಉದ್ಯೋಗಿಗಳ ಮೇಲೆ ಈ ರೀತಿಯ ವಿನಂತಿಗಳನ್ನು ಎಂದಿಗೂ ಮಾಡುವುದಿಲ್ಲ. ಇಂತಹ ಘಟನೆ ಕಂಡುಬಂದರೆ ತಕ್ಷಣವೇ ಅದನ್ನು ನಿಲ್ಲಿಸುತ್ತೇವೆ. ತಂಡದ ಬೆಂಬಲ, ಆರೋಗ್ಯ ಮತ್ತು ಸುರಕ್ಷತೆಯ ಕುರಿತು ನಮ್ಮ ನಿರೀಕ್ಷೆಗಳು ಒಳಗೊಂಡಿರುತ್ತವೆ ಎಂದು ಹೇಳಿದ್ದಾರೆ.

ಕಂಪೆನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಎಲ್ಲಾ ಕಟ್ಟಡಗಳು ಶಾಖ ಸೂಚ್ಯಂಕ ಮಾನಿಟರಿಂಗ್ ಸಾಧನಗಳನ್ನು ಹೊಂದಿವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ರೆಸ್ಟ್ ರೂಂ ಅನ್ನು ಬಳಸಲು, ನೀರು ಪಡೆಯಲು ಅಥವಾ ಮ್ಯಾನೇಜರ್ ಅಥವಾ ಹೆಚ್ ಆರ್ ನೊಂದಿಗೆ ಮಾತನಾಡಲು ಉದ್ಯೋಗಿಗಳು ತಮ್ಮ ಪಾಳಿಗಳ ಉದ್ದಕ್ಕೂ ಅನೌಪಚಾರಿಕ ವಿರಾಮಗಳನ್ನು ತೆಗೆದುಕೊಳ್ಳಲು ಮುಕ್ತರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಮೆಜಾನ್ ವಿದೇಶದಲ್ಲಿ ಇಂತಹ ಆರೋಪಗಳನ್ನು ಎದುರಿಸಿದೆ. ಯುಎಸ್ ನಲ್ಲಿನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತವು 2022 ಮತ್ತು 2023 ರಲ್ಲಿ ಕಂಪೆನಿಯ ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಆರು ಗೋದಾಮುಗಳಲ್ಲಿ ಕಾರ್ಮಿಕರಿಗೆ ಆದ ಗಾಯಗಳ ಕುರಿತು ಸರಿಯಾದ ವರದಿ ಮಾಡಲು ವಿಫಲವಾಗಿದೆ ಎನ್ನುವ ದೂರು ಕೇಳಿ ಬಂದಿತ್ತು.

ಇದನ್ನೂ ಓದಿ: Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ

ಟ್ರಕ್‌ಗಳು ಹೊರಗೆ ನಿಲ್ಲಿಸುವುದರಿಂದ ಹೆಚ್ಚು ಬಿಸಿಯಾಗಿರುತ್ತವೆ. ಕಾರ್ಮಿಕರು ಅದರಿಂದ ವಸ್ತುಗಳನ್ನು ಇಳಿಸುವಾಗ ಬಹು ಬೇಗನೆ ದಣಿಯುತ್ತಾರೆ. ಇದು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹರಿಯಾಣದ ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.

ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಆದರೆ ಈ ಆವರಣದಲ್ಲಿ ವಿಶ್ರಾಂತಿ ಕೊಠಡಿ ಇಲ್ಲ. ನಾವು ಅಸ್ವಸ್ಥರಾಗಿದ್ದರೆ ವಾಶ್‌ರೂಮ್ ಅಥವಾ ಲಾಕರ್ ಕೋಣೆಗೆ ಹೋಗುವುದು ಒಂದೇ ಆಯ್ಕೆಯಾಗಿದೆ. ಹಾಸಿಗೆ ಇರುವ ಒಂದು ಕೋಣೆ ಇದೆ. ಆದರೆ ಇಲ್ಲಿ ಕಾರ್ಮಿಕರನ್ನು 10 ನಿಮಿಷಗಳ ಅನಂತರ ಹೊರಡಲು ಕೇಳಲಾಗುತ್ತದೆ. ನಾನು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ನಿಲ್ಲುತ್ತೇನೆ ಮತ್ತು ಪ್ರತಿ ಗಂಟೆಗೆ 60 ಸಣ್ಣ ಉತ್ಪನ್ನ ಅಥವಾ 40 ಮಧ್ಯಮ ಗಾತ್ರದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು ಎಂದು ದೂರಿದ್ದಾರೆ.

Continue Reading

ಉದ್ಯೋಗ

Job Alert: ಗುಡ್‌ನ್ಯೂಸ್‌: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Job Alert: ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಭರ್ಜರಿ ಅವಕಾಶ. ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದ, ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2. 627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

VISTARANEWS.COM


on

Job Alert
Koo

ಬೆಂಗಳೂರು: ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಭರ್ಜರಿ ಅವಕಾಶ. ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದ, ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು (Bank of Baroda Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2 (Job Alert).

ಹುದ್ದೆಗಳ ವಿವರ

627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಡೆಪ್ಯುಟಿ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್: 4 ಹುದ್ದೆ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್: 9 ಹುದ್ದೆ
ಆರ್ಕಿಟೆಕ್ಟ್: 8 ಹುದ್ದೆ
ಜೋನಲ್ ಸೇಲ್ಸ್ ಮ್ಯಾನೇಜರ್: 3 ಹುದ್ದೆ
ಅಸಿಸ್ಟೆಂಟ್ ವೈಸ್ಪ್ರೆಸಿಡೆಂಟ್: 20 ಹುದ್ದೆ
ಸೀನಿಯರ್ ಮ್ಯಾನೇಜರ್: 22 ಹುದ್ದೆ
ಮ್ಯಾನೇಜರ್: 11 ಹುದ್ದೆ
ರೇಡಿಯನ್ಸ್ ಪ್ರೈವೇಟ್ ಸೇಲ್ಸ್ ಹೆಡ್: 1 ಹುದ್ದೆ
ಗ್ರೂಪ್ ಹೆಡ್: 4 ಹುದ್ದೆ
ಟೆರಿಟರಿ ಹೆಡ್: 8 ಹುದ್ದೆ
ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್: 234 ಹುದ್ದೆ
ಇ-ವೆಲ್ತ್ ರಿಲೇಶನ್‌ಶಿಪ್‌ ಮ್ಯಾನೇಜರ್: 26 ಹುದ್ದೆ
ಪ್ರೈವೇಟ್ ಬ್ಯಾಂಕರ್-ರೇಡಿಯನ್ಸ್ ಪ್ರೈವೇಟ್: 12 ಹುದ್ದೆ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ ಆರ್‌ಎಂ ಸೇಲ್ಸ್ ಹೆಡ್): 1 ಹುದ್ದೆ
ವೆಲ್ತ್ ಸ್ಟ್ರಾಟಜಿಸ್ಟ್ (ಇನ್ವೆಸ್‌ಮೆಂಟ್‌ & ಇನ್ಶೂರೆನ್ಸ್)/ ಪ್ರಾಡಕ್ಟ್ ಹೆಡ್: 10 ಹುದ್ದೆ
ಪೋರ್ಟ್ಫೋಲಿಯೊ ರಿಸರ್ಚ್ ಅನಾಲಿಸ್ಟ್: 1 ಹುದ್ದೆ
ಎವಿಪಿ- ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್: 19 ಹುದ್ದೆ
ಫಾರೆಕ್ಸ್ ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್: 15 ಹುದ್ದೆ
ಕ್ರೆಡಿಟ್ ಅನಾಲಿಸ್ಟ್: 80 ಹುದ್ದೆ
ರಿಲೇಶನ್‌ಶಿಪ್‌ ಮ್ಯಾನೇಜರ್: 66 ಹುದ್ದೆ
ಸೀನಿಯರ್ ಮ್ಯಾನೇಜರ್- ಬಿಸಿನೆಸ್ ಫೈನಾನ್ಸ್: 4 ಹುದ್ದೆ
ಚೀಫ್ ಮ್ಯಾನೇಜರ್- ಇಂಟರ್ನಲ್ ಕಂಟ್ರೋಲ್ಸ್‌ – 3 ಹುದ್ದೆಗಳಿವೆ.

ವಿದ್ಯಾರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕೃಷಿ, ಪಶುವೈದ್ಯಕೀಯ ವಿಜ್ಞಾನ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ. ಅಭ್ಯರ್ಥಿಗಳು ಸ್ಥಳೀಯ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಔದ್ಯೋಗಿಕ ಅನುಭವ ಕಡ್ಡಾಯ.

ಅರ್ಜಿ ಶುಲ್ಕ ಮತ್ತು ವಯೋಮಿತಿ

ಅರ್ಜಿ ಶುಲ್ಕವಾಗಿ ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಒಬಿಎಸ್ ವರ್ಗಗಳಿಗೆ ಸೇರಿದ ಅರ್ಜಿದಾರರು 600 ರೂ., ಎಸ್‌ಸಿ, ಎಸ್‌ಟಿ, ಅಂಗವಿಕಲ ಮತ್ತು ಮಹಿಳಾ ವರ್ಗಗಳಿಗೆ ಸೇರಿದ ಅರ್ಜಿದಾರರು 199 ರೂ. ಪಾವತಿಸಬೇಕಾಗುತ್ತದೆ. ಇದಕ್ಕೆ ತೆರಿಗೆ ಪ್ರತ್ಯೇಕ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 24 ವರ್ಷಗಳಿಂದ 60 ವರ್ಷದೊಳಗಿನವರು ಅರ್ಜಿ ಸಲ್ಲಿಬಹುದು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ.

ನಿಯಮಿತ ಆಧಾರದಲ್ಲಿನ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಗುತ್ತಿಗೆ ಆಧಾರದಲ್ಲಿನ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲುವ ವಿಧಾನ

ಇದನ್ನೂ ಓದಿ: Job Alert: ಬರೋಬ್ಬರಿ 9,923 ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಇಂದೇ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಕಾಟನ್‌ ಕಾರ್ಪೋರೇಷನ್‌ನಲ್ಲಿದೆ 214 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job Alert: ಭಾರತ ಸರ್ಕಾರದ ಜವಳಿ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಕಾಟನ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ 214 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 2.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಜವಳಿ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಕಾಟನ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (Cotton Corporation of India Limited) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜ್‌ಮೆಂಟ್‌ ಟ್ರೈನಿ, ಅಸಿಸ್ಟೆಂಟ್‌ ಮ್ಯಾನೇಜರ್‌ ಸೇರಿ ಸುಮಾರು 214 ಹುದ್ದೆಗಳಿವೆ (Cotton Corporation of India Recruitment 2024). ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 2 (Job Alert).

ಹುದ್ದೆಗಳ ವಿವರ

ಅಸಿಸ್ಟೆಂಟ್ ಮ್ಯಾನೇಜರ್ (ಲೀಗಲ್) 1 ಹುದ್ದೆ, ವಿದ್ಯಾರ್ಹತೆ: ಕಾನೂನಿನಲ್ಲಿ ಪದವಿ, ಎಲ್‌ಎಲ್‌ಬಿ
ಅಸಿಸ್ಟೆಂಟ್ ಮ್ಯಾನೇಜರ್ (ಅಧಿಕೃತ ಭಾಷೆ) 1 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಮ್ಯಾನೇಜ್‌ಮೆಂಟ್‌ ಟ್ರೈನಿ (ಮಾರ್ಕೆಟಿಂಗ್) 11 ಹುದ್ದೆ, ವಿದ್ಯಾರ್ಹತೆ: ಕೃಷಿ ಕ್ಷೇತ್ರದಲ್ಲಿ ಎಂಬಿಎ
ಮ್ಯಾನೇಜ್‌ಮೆಂಟ್‌ ಟ್ರೈನಿ (ಅಕೌಂಟ್ಸ್) 20 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಂಎ, ಎಂಬಿಎ, ಎಂ.ಕಾಂ., ಎಂಎಂಎಸ್, ಸ್ನಾತಕೋತ್ತರ ಪದವಿ
ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ 120 ಹುದ್ದೆ, ವಿದ್ಯಾರ್ಹತೆ: ಬಿಎಸ್‌ಸಿ ಅಗ್ರಿಕಲ್ಚರ್
ಜೂನಿಯರ್ ಅಸಿಸ್ಟೆಂಟ್ (ಸಾಮಾನ್ಯ) 20 ಹುದ್ದೆ, ವಿದ್ಯಾರ್ಹತೆ: ಬಿಎಸ್‌ಸಿ ಅಗ್ರಿಕಲ್ಚರ್
ಜೂನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) 40 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ.
ಜೂನಿಯರ್ ಅಸಿಸ್ಟೆಂಟ್ (ಹಿಂದಿ ಭಾಷಾಂತರಕಾರ) 1 ಹುದ್ದೆ, ವಿದ್ಯಾರ್ಹತೆ: ಹಿಂದಿಯಲ್ಲಿ ಪದವಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 27 ವರ್ಷದಿಂದ 32 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗಕ್ಕೆ 3 ವರ್ಷ, ಎಸ್‌ಸಿ / ಎಸ್‌ಟಿ ವಿಭಾಗಕ್ಕೆ 5 ವರ್ಷ, ಪಿಡಬ್ಲ್ಯುಬಿಡಿ ವಿಭಾಗಕ್ಕೆ 10 ವರ್ಷಗಳ ರಿಯಾಯಿತಿ ಇದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ವಿಭಾಗದ ಅಭ್ಯರ್ಥಿಗಳು 1,000 ರೂ., ಎಸ್‌ಸಿ / ಎಸ್‌ಟಿ / ಇಎಸ್‌ಎಂ / ಪಿಡಬ್ಲ್ಯುಡಿ ಅಭ್ಯರ್ಥಿಗಳು 250 ರೂ. ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Cotton Corporation of India Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (cdn.digialm.com).
  • ಅಗತ್ಯ ಮಾಹಿತಿಗಳನ್ನು ನೀಡಿ ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ ಅಗತ್ಯ ಮಾಹಿತಿಗಳ ಮೂಲಕ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.
  • ಅಪ್ಲಿಕೇಷನ್‌ ಫಾರಂ ಅನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಪಶುವೈದ್ಯ ಸೇವಾ ಇಲಾಖೆಯಲ್ಲಿದೆ 400 ವೈದ್ಯಾಧಿಕಾರಿ ಹುದ್ದೆ

Job Alert: ಕರ್ನಾಟಕದಲ್ಲೇ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಖಾಲಿ ಇರುವ ಬರೋಬ್ಬರಿ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್‌ 14ರಿಂದ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನಾಂಕ ಜೂನ್‌ 24.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಕರ್ನಾಟಕದಲ್ಲೇ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ (Animal Husbandry & Veterinary Services Karnataka) ಖಾಲಿ ಇರುವ ಬರೋಬ್ಬರಿ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (AHVS Karnataka Recruitment 2024). ಪಶು ವೈದ್ಯಾಧಿಕಾರಿ ಹುದ್ದೆ ಇದಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್‌ 14ರಿಂದ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನಾಂಕ ಜೂನ್‌ 24 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಒಟ್ಟು 400 ಹುದ್ದೆಗಳಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕಕ್ಕೆ 14 ಪೋಸ್ಟ್‌ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾನಿಲಯ ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್‌.ಸಿ. / ಬಿ.ವಿ.ಎಸ್‌.ಸಿ ಆ್ಯಂಡ್‌ ಎಎಚ್‌ ಪದವಿ ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಪ್ರವರ್ಗ 2 ಎ, 2 ಬಿ, ಪ್ರವರ್ಗ 3 ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 52,640 ರೂ. ಮಾಸಿಕ ವೇತನ ದೊರೆಯಲಿದೆ.

AHVS Karnataka Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (ahvs.karnataka.gov.in).
  • ಹೆಸರು, ಫೋನ್‌ ನಂಬರ್‌ ನೀಡಿ ನಿಮ್ಮ ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊಗಳನ್ನು ಸೂಕ್ತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಇದನ್ನು ಗಮನಿಸಿ

  • ಈ ನೇಮಕಾತಿ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದ್ದು, ತಾತ್ಕಾಲಿಕವಾಗಿರುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ವಾಸವಾಗಿರಬೇಕು.
  • ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಮಾಸಿಕ ವೇತನಕ್ಕಿಂತ ಹೊರತುಪಡಿಸಿ ಬೇರೆ ಭತ್ಯೆ ನೀಡಲಾಗುವುದಿಲ್ಲ.
  • ನಿಯುಕ್ತಿಗೊಳಿಸುವ ಸ್ಥಳದಲ್ಲಿಯೇ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಬೇಕು.
  • ಉದ್ಯೋಗ ತ್ಯಜಿಸುವುದಿದ್ದರೆ 1 ತಿಂಗಳು ಮುಂಚಿತವಾಗಿಯೇ ತಿಳಿಸಬೇಕು.
  • ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು.

ಹೆಚ್ಚಿನ ಮಾಹಿತಿಗೆ, ಯಾವುದೇ ಸಂಶಯ ನಿವಾರಣೆಗೆ ದೂರವಾಣಿ ಸಂಖ್ಯೆ 080-23414446ಕ್ಕೆ ಕರೆ ಮಾಡಿ.

ಇದನ್ನೂ ಓದಿ: Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Continue Reading
Advertisement
Health Tips
Latest2 mins ago

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Temple Bell
ಧಾರ್ಮಿಕ7 mins ago

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

Morning Nutrition
ಆರೋಗ್ಯ9 mins ago

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

Karnataka Weather Forecast
ಮಳೆ39 mins ago

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Siddaramaiah
ಸಂಪಾದಕೀಯ1 hour ago

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

International Yoga Day 2024
ಆರೋಗ್ಯ1 hour ago

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

Dina Bhavishya
ಭವಿಷ್ಯ2 hours ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಕುಟುಂಬ ಸದಸ್ಯರಿಂದ ಸಿಗಲಿದೆ ಬೆಂಬಲ

Teachers Transfer
ಪ್ರಮುಖ ಸುದ್ದಿ8 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್9 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Hiriya vidwamsa Sagri Raghavendra Upadhyaya passed away
ಶ್ರದ್ಧಾಂಜಲಿ10 hours ago

Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ17 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌