SSC CGL 2023 applictaion process begins for 7500 posts check details in kannadaSSC CGL 2023 : ಸಿಜಿಎಲ್‌ ಪರೀಕ್ಷೆಗೆ ಅಧಿಸೂಚನೆ; ಕೇಂದ್ರ ಸರ್ಕಾರದ 7,500 ಹುದ್ದೆಗಳಿಗೆ ಅರ್ಜಿ ಆಹ್ವಾನ - Vistara News

ಉದ್ಯೋಗ

SSC CGL 2023 : ಸಿಜಿಎಲ್‌ ಪರೀಕ್ಷೆಗೆ ಅಧಿಸೂಚನೆ; ಕೇಂದ್ರ ಸರ್ಕಾರದ 7,500 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಸಿಜಿಎಲ್‌ ಪರೀಕ್ಷೆಯ (SSC CGL 2023) ಅಧಿಸೂಚನೆ ಪ್ರಕಟವಾಗಿದೆ. ಅರ್ಜಿ ಸಲ್ಲಿಸಲು ಮೇ.4 ಕೊನೆಯ ದಿನವಾಗಿರುತ್ತದೆ. ಈ ನೇಮಕಾತಿಯ ಮಾಹಿತಿ ಇಲ್ಲಿದೆ.

VISTARANEWS.COM


on

SSC CGL 2023 applictaion process begins for 7500 posts check details in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕೇಂದ್ರ ಸರಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಬಹುನಿರೀಕ್ಷಿತ “ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಗ್ಸಾಮ್‌ʼʼಗೆ (ಸಿಜಿಎಲ್) (SSC CGL 2023) ಅಧಿಸೂಚನೆ ಪ್ರಕಟವಾಗಿದೆ.

ಸುಮಾರು 20 ಸಾವಿರ ಹುದ್ದೆಗಳಿಗೆ ನೇಮಕ ನಡೆಯಬಹುದೆಂದು ಅಂದಾಜಿಸಲಾಗುತ್ತಿತ್ತು. ಆದರೆ ಸದ್ಯ 7,500 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಎಸ್‌ಎಸ್‌ಸಿ (CCL Recruitment) ಹೇಳಿದೆ. ನಿಖರವಾಗಿ ಎಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದು ಎಸ್‌ಎಸ್‌ಸಿಯು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಗ್ರೂಪ್‌ “ಬಿʼʼ ಮತ್ತು “ಸಿʼʼ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯಲಿದೆ. ಒಟ್ಟು ನಾಲ್ಕು ಹಂತದ ಪರೀಕ್ಷೆಯ ಮೂಲಕ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಸಂದರ್ಶನ ಇರುವುದಿಲ್ಲ. ಮೊದಲ ಹಂತದ ಪರೀಕ್ಷೆಯನ್ನು ಇದೇ ಜುಲೈನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಸಿಜಿಎಲ್‌ ಪರೀಕ್ಷೆಯ ವೇಳಾಪಟ್ಟಿ;

SSC CGL Notification applictaion process begins for 7500 posts check details in kannada

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು 03-05-2023 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಬಹುದಾಗಿದ್ದು, ಆನ್‌ಲೈನ್‌ನಲ್ಲಿ ಪಾವತಿಸಲು 04-05-2023 ( ಸಮಯ 23:00) ಕೊನೆಯ ದಿನವಾಗಿರುತ್ತದೆ. ಆಫ್‌ಲೈನ್‌ನಲ್ಲಿ ಪಾವತಿಸಲು 04-05-2023 ಕೊನೆಯ ದಿನವಾಗಿರುತ್ತದೆ.

ಯಾವೆಲ್ಲಾ ಹುದ್ದೆಗೆ ಈ ಪರೀಕ್ಷೆ?

ಒಟ್ಟು 36 ವಿವಿಧ ಇಲಾಖೆಗಳಲ್ಲಿನ ಗ್ರೂಪ್‌ “ಬಿ” ಮತ್ತು ಗ್ರೂಪ್‌ “ಸಿʼʼ ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ ಮುಖ್ಯವಾಗಿ ಅಸಿಸ್ಟೆಂಟ್‌ ಆಡಿಟ್‌ ಆಫೀಸರ್‌, ಅಸಿಸ್ಟೆಂಟ್‌ ಸೆಕ್ಷನ್‌ ಆಫೀಸರ್‌, ತೆರಿಗೆ ಮತ್ತು ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್‌, ಸಿಬಿಐ ಮತ್ತು ಎನ್‌ಐಎನ ಸಬ್‌ಇನ್ಸ್‌ಪೆಕ್ಟರ್‌, ವಿವಿಧ ಇಲಾಖೆಯ ಆಡಿಟರ್‌, ಟ್ಯಾಕ್ಸ್‌ ಅಸಿಸ್ಟೆಂಟ್‌ ಮತ್ತಿತರ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಹತೆ ಏನು?

ಬಹುತೇಕ ಹುದ್ದೆಗಳಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಸಿಸ್ಟೆಂಟ್‌ ಆಡಿಟ್‌ ಆಫೀಸರ್‌/ಅಸಿಸ್ಟೆಂಟ್‌ ಅಕೌಂಟ್ಸ್‌ ಆಫೀಸರ್‌ ಹುದ್ದೆಗೆ ಪದವಿ ಜತೆಗೆ ಸಿಎ/ ಕಾಸ್ಟ್‌ & ಮ್ಯಾನೇಜ್‌ಮೆಂಟ್‌ ಅಕೌಂಟೆಂಟ್‌ ಅಥವಾ ಕಂಪನಿ ಸೆಕ್ರೆಟರಿ ಸೆಕ್ರೆಟರಿ ಅಥವಾ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಸ್ನೆಸ್‌ ಸ್ಟಡೀಸ್‌/ ಬಿಸ್ನೆಸ್ಟ್‌ ಅಡ್ಮಿನಿಸ್ಟ್ರೇಷನ್‌/ ಬಿಸ್ನೆಸ್‌ ಎಕನಾಮಿಕ್ಸ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಜೂನಿಯರ್‌ ಸ್ಟ್ಯಟಿಸ್ಟಿಕಲ್‌ ಆಫೀಸರ್‌ ಹುದ್ದೆಗೆ ಪಿಯುಸಿಯಲ್ಲಿ ಗಣಿತದಲ್ಲಿ ಶೇ.60 ರಷ್ಟು ಅಂಕಪಡೆದು, ಪದವಿ ಪಡೆದಿರುವ ಅಭ್ಯರ್ಥಿಗಳು ಅಥವಾ ಪದವಿಯಲ್ಲಿ ಸ್ಟ್ಯಟಿಸ್ಟಿಕ್‌ ಅನ್ನು ಒಂದು ವಿಷಯವಾಗಿ ಓದಿದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ವಯೋಮಿತಿ ಎಷ್ಟು?

ಬಹುತೇಕ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 30 ವರ್ಷ. ಕೆಲವು ಹುದ್ದೆಗಳಿಗೆ 27 ಮತ್ತು 32 ವರ್ಷ ವಯೋಮಿತಿಯನ್ನೂ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ವಯೋಮಿತಿಯನ್ನು ದಿನಾಂಕ 01-08-2023 ಕಕ್ಕೆ ಲೆಕ್ಕಹಾಕಲಾಗುತ್ತದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?

ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನುಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕನಲ್ಲಿ ಚಲನ್‌ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.

ಪರೀಕ್ಷೆ ಹೇಗಿರುತ್ತದೆ? ಏನೆಲ್ಲಾ ಓದಬೇಕು? ಯಾವೆಲ್ಲಾ ಇಲಾಖೆಯ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬೆಲ್ಲಾ ಮಾಹಿತಿಯನ್ನು “ವಿಸ್ತಾರ ನ್ಯೂಸ್‌ʼʼ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಪ್ರತಿದಿನ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

ನೇಮಕಾತಿಯ ಅಧಿಸೂಚನೆ ನೋಡಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಇದನ್ನೂ ಓದಿ : KEA Recruitment 2023 : ಕೆಇಎಯಿಂದ 757 ಹುದ್ದೆಗಳಿಗೆ ನೇಮಕ ಖಚಿತ; ಏಪ್ರಿಲ್‌ 17 ರಿಂದ ಅರ್ಜಿ ಸಲ್ಲಿಕೆ ಶುರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉದ್ಯೋಗ

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Job Alert: ಭಾರತದ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ ಅಸಿಸ್ಟಂಟ್‌ ಫಾರ್‌ಮನ್‌, ಐಟಿಐ ಫಿಟ್ಟರ್‌, ಲ್ಯಾಬ್‌ ಅಸಿಸ್ಟಂಟ್‌ ಸೇರಿದಂತೆ ಸುಮಾರು 168 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ನಾಳೆ (ಮೇ 3) ಕೊನೆಯ ದಿನ. ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ಬೆಂಗಳೂರು: ಭಾರತದ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ (Hutti Gold Mines Company Limited)ಯು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (HGML Recruitment 2024). ಅಸಿಸ್ಟಂಟ್‌ ಫಾರ್‌ಮನ್‌, ಐಟಿಐ ಫಿಟ್ಟರ್‌, ಲ್ಯಾಬ್‌ ಅಸಿಸ್ಟಂಟ್‌ ಸೇರಿದಂತೆ ಸುಮಾರು 168 ಹುದ್ದೆಗಳಿವೆ. ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ನಾಳೆ (ಮೇ 3). ಹೀಗಾಗಿ ಬೇಗ ಅಪ್ಲೈ ಮಾಡಿ (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟೆಂಟ್ ಫಾರ್‌ಮನ್‌ (ಗಣಿ)- 16 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಮೆಟಲರ್ಜಿ)- 7 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಲ್ಯಾಬ್ ಅಸಿಸ್ಟೆಂಟ್- 1 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್‌ (ಜಿಯಾಲಜಿ)- 3 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್‌ (ಡೈಮಂಡ್ ಡ್ರಿಲ್ಲಿಂಗ್ / ಅಂಡರ್ ಗ್ರೌಂಡ್)- 2 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಮೆಕ್ಯಾನಿಕಲ್)- 19 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಐಟಿಐ ಫಿಟ್ಟರ್ (ಗಣಿಗಾರಿಕೆ)- 56 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಐಟಿಐ ಫಿಟ್ಟರ್ (ಮೆಟಲ್)- 26 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಐಟಿಐ ಎಲೆಕ್ಟ್ರಿಕಲ್- 4 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಎಲೆಕ್ಟ್ರಿಕಲ್
ಅಸಿಸ್ಟೆಂಟ್ ಫಾರ್‌ಮನ್‌ (ಸಿವಿಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಎಲೆಕ್ಟ್ರಿಕಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಸೆಕ್ಯುರಿಟಿ ಇನ್ಸ್‌ಪೆಕ್ಟರ್‌- 6 ಹುದ್ದೆ, ವಿದ್ಯಾರ್ಹತೆ: ಪದವಿ
ಐಟಿಐ ಫಿಟ್ಟರ್ (ಸರ್ವೆ)- 2 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಸೆಕ್ಯುರಿಟಿ ಗಾರ್ಡ್- 24 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ- 1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ. ಮತ್ತು ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಪಿಡಬ್ಲ್ಯುಡಿ ಅಭ್ಯರ್ಥಿಗಳು 100 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 20,920 ರೂ. – 48,020 ರೂ. ಮಾಸಿಕ ವೇತನ ಸಿಗಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (ಉಳಿಕೆ ಮೂಲ / ಸ್ಥಳೀಯೇತರ ವೃಂದ).

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ).

ಅರ್ಜಿ ಸಲ್ಲಿಸಲು ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಫೋನ್‌ ನಂಬರ್‌, ಇಮೇಲ್‌ ವಿಳಾಸ ನೀಡಿ ಹೆಸರು ನೋಂದಾಯಿಸಿ.
  • HGML Assistant Foreman, ITI Fitter Apply Online ಲಿಂಕ್‌ ಕ್ಲಿಕ್‌ ಮಾಡಿ
  • ಅಗತ್ಯ ಮಾಹಿತಿಗಳನ್ನು ಎಚ್ಚರಿಕೆಯಿಂದ ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಖಚಿತ ಪಡಿಸಿ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆ ಖಾಲಿ ಇದೆ; ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

Job Alert: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ 36 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20. ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್‌ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌-ಆಪರೇಷನ್‌: 24 ಮತ್ತು ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್‌-ಆಪರೇಷನ್‌ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು ನೊಂದಾಯಿಸಿ.
  • NLC Executive Apply Online ಆಯ್ಕೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು

  • ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್‌ 1ರ ಬಳಿಕ ತೆಗೆದಿರಬೇಕು.
  • ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
  • ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
  • ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
  • ಆಧಾರ್‌ ಕಾರ್ಡ್‌ನ ಪ್ರತಿ.
  • ಜಾತಿ ಸರ್ಟಿಫಿಕೆಟ್‌.
  • ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
  • ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್‌ನಲ್ಲಿರಬೇಕು.
  • ದಾಖಲೆಗಳು, ಡಾಕ್ಯುಮೆಂಟ್‌ JPEG ಅಥವಾ PDF ಫಾರ್ಮಾಟ್‌ನಲ್ಲಿರುವುದು ಕಡ್ಡಾಯ.

ಅಪೂರ್ಣ ಅಪ್ಲಿಕೇಷನ್‌ ತಿರಸ್ಕೃರಿಸಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಭರ್ತಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Labour Day : ಮೇ 1ರಂದೇ ಕಾರ್ಮಿಕ ದಿನ ಆಚರಿಸುವುದು ಯಾಕೆ? ರಜೆ ಕೊಡಲು ಶುರು ಮಾಡಿದ್ದು ಯಾವಾಗ?

Labour Day: ಸಮಾಜಕ್ಕೆ ಕಾರ್ಮಿಕರ ಅಗತ್ಯತೆ ದೊಡ್ಡದು. ಹೀಗಾಗಿ ಅವರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕು. ಹೀಗಾಗಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತದ ಕಾರ್ಮಿಕರು ತಮ್ಮ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.

VISTARANEWS.COM


on

labour Day
Koo

ಬೆಂಗಳೂರು: ಕಾರ್ಮಿಕರು ಯಾವುದೇ ಸಮಾಜ ಅಥವಾ ದೇಶದ ಶಕ್ತಿ. ಅವರಿಂದಲೇ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಕಾರ್ಮಿಕರು ರಾಷ್ಟ್ರೀಯ ಸಂಪತ್ತು. ಹೀಗೆ ಹಲವು ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ನೆರವಾ ಗುವ ಕಾರ್ಮಿಕರಿಗಾಗಿಯೇ ಒಂದು ದಿನವಿದೆ. ಅದುವೇ ಕಾರ್ಮಿಕರ ದಿನ. ಅಂದರೆ ಮೇ1. ಜಗತ್ತಿನ ಹಲವಾರು ದೇಶಗಳಲ್ಲಿ ಕಾರ್ಮಿಕ ದಿನವನ್ನು (Labour Day ) ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ‘ಮೇ ದಿನ’ ಅಥವಾ ಕಾರ್ಮಿಕರ ದಿನ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಕೆಲಸ ಮಾಡುವವರಿಗೆ ವಿಶ್ರಾಂತಿ ದಿನವಾಗಿ ಆಚರಿಸಲಾಗುತ್ತದೆ

ಸಮಾಜಕ್ಕೆ ಕಾರ್ಮಿಕರ ಅಗತ್ಯತೆ ದೊಡ್ಡದು. ಹೀಗಾಗಿ ಅವರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕು. ಹೀಗಾಗಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತದ ಕಾರ್ಮಿಕರು ತಮ್ಮ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಕಾರ್ಮಿಕ ದಿನವನ್ನು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದ ಇತಿಹಾಸ, ಮಹತ್ವ ಅರಿಯೋಣ.

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಇತಿಹಾಸ

ಅಂತಾರರಾಷ್ಟ್ರೀಯ ಕಾರ್ಮಿಕ ದಿನದ ಇತಿಹಾಸವು 1889 ರಲ್ಲಿ ಯುರೋಪ್, ಪ್ಯಾರಿಸ್​​ನಲ್ಲಿ ನಡೆದ ಸೋಶಿಯಲಿಸ್ಟ್​ ಪಾರ್ಟಿಗಳ ಮೊದಲ ಸಭೆ (ಇಂಟರ್​ನ್ಯಾಷನಲ್​ ಕಾಂಗ್ರೆಸ್​​) ಮೇ 1 ರಂದು ನಡೆಯಿತು. ಅದನ್ನು ಕಾರ್ಮಿಕರಿಗೆ ಸಮರ್ಪಿಸಲು ಮತ್ತು ಅದನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ಎಂದು ಘೋಷಣೆ ಮಾಡಲಾಯಿತು. 1886 ರಲ್ಲಿ, ಅಮೆರಿಕದ ಕೆಲವು ಭಾಗಗಳಲ್ಲಿ ಕಾರ್ಮಿಕರು ಗರಿಷ್ಠ ಎಂಟು ಗಂಟೆಗಳ ಕೆಲಸದ ದಿನಕ್ಕೆ ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಮುಷ್ಕರದ ಮೂರನೇ ದಿನ ಚಿಕಾಗೋದಲ್ಲಿ ಹಿಂಸಾಚಾರ ಉಂಟಾಯಿತು. ಈ ಘಟನೆಯನ್ನು ‘ದಿ ಹೇಮಾರ್ಕೆಟ್ ಅಫೇರ್’ ಎಂದು ಕರೆಯಲಾಯಿತು. ಇದು ಅಂತರರಾಷ್ಟ್ರೀಯ ಕಾರ್ಮಿಕ ದಿನದ ಸ್ಥಾಪನೆಗೆ ಕಾರಣವಾಯಿತು.

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಮಹತ್ವ

ಕಾರ್ಮಿಕರ ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸುವುದು, ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಅವರನ್ನು ಶೋಷಣೆಗೆ ಒಳಗಾಗದಂತೆ ತಡೆಯುವುದು ಕಾರ್ಮಿಕ ದಿನಾಚರಣೆಯ ಉದ್ದೇಶ. ಈ ಸಂದರ್ಭದಲ್ಲಿ, ಕಾರ್ಮಿಕರು ನ್ಯಾಯಯುತ ವೇತನ ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳಿಗೆ ಒತ್ತಾಯಿಸಿ ಬೀದಿಗಳಲ್ಲಿ ಜಾಥಾ ನಡೆಸುತ್ತಾರೆ. ಮೇ ದಿನದಿಂದ ಕಾರ್ಮಿಕರು ಮತ್ತು ಕಾರ್ಮಿಕ ಚಳುವಳಿಯು ಮಾಡಿದ ಐತಿಹಾಸಿಕ ಹೋರಾಟಗಳು ಮತ್ತು ಲಾಭಗಳನ್ನು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಧ್ಯೇಯ

ಪ್ರತಿ ವರ್ಷ, ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಆಚರಣೆಗಾಗಿ ಹೊಸ ಥೀಮ್ ಅನ್ನು ಘೋಷಿಸಲಾಗುತ್ತದೆ. ಬದಲಾಗುತ್ತಿರುವ ಹವಾಮಾನದಲ್ಲಿ ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಈ ವರ್ಷದ ಧ್ಯೇಯ.

ಕಾರ್ಮಿಕರ ದಿನದ ಬಗ್ಗೆ ವಾಸ್ತವಾಂಶಗಳು

ಮೊದಲ ಬಾರಿಗೆ ಯುಎಸ್ ಕಾರ್ಮಿಕ ದಿನವನ್ನು ಸೆಪ್ಟೆಂಬರ್ 5, 1882ರ ಮಂಗಳವಾರ ನ್ಯೂಯಾರ್ಕ್ ನಗರದಲ್ಲಿ ಕೇಂದ್ರ ಕಾರ್ಮಿಕ ಒಕ್ಕೂಟವು ಯೋಜಿಸಿತು. ಕಾರ್ಮಿಕ ಚಳುವಳಿಯನ್ನು ಗೌರವಿಸುವ ದಿನವನ್ನು ಆಯೋಜಿಸುವ ಕಲ್ಪನೆ ಕೆನಡಾದಲ್ಲಿ ಹುಟ್ಟಿತು. 1872 ರಲ್ಲಿ ಮುಷ್ಕರ ನಿರತ ಕಾರ್ಮಿಕರಿಗೆ ಬೆಂಬಲವನ್ನು ತೋರಿಸಲು ಅವರು ‘ಒಂಬತ್ತು ಗಂಟೆಗಳ ಚಳುವಳಿ’ ನಡೆಸಿದರು.

ಒರೆಗಾನ್ 1887 ರಲ್ಲಿ ಕಾರ್ಮಿಕ ದಿನವನ್ನು ಕಾನೂನುಬದ್ಧ ರಜಾದಿನವಾಗಿ ಆಚರಿಸಿದ ಮೊದಲ ದೇಶ . 19ನೇ ಶತಮಾನದಲ್ಲಿ ಅಮೆರಿಕನ್ನರು ವಾರದಲ್ಲಿ ಏಳು ದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿ ಮೆರವಣಿಗೆ ನಡೆಸಿದ ಜಾಗದಲ್ಲಿ ಇನ್ನೂ ಕಾರ್ಮಿಕ ದಿನದ ಮೆರವಣಿಗೆ ಮಾಡಲಾಗುತ್ತದೆ. 1882 ರ ಕಾರ್ಮಿಕ ಮೆರವಣಿಗೆಯ ಉತ್ತರದ 20 ಬ್ಲಾಕ್​​ಗಳಲ್ಲಿನಡೆಯುತ್ತದೆ.

Continue Reading

ದೇಶ

Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

Labour Day 2024: ದೇಶದಲ್ಲಿ ಬಡ ವರ್ಗದ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಅರ್ಹರು ಇದರ ಪ್ರಯೋಜನವನ್ನು ಪಡೆಯಬಹುದು. ಸರ್ಕಾರ ಕಾರ್ಮಿಕರಿಗಾಗಿ ಒದಗಿಸಿರುವ ವಿವಿಧ ಯೋಜನೆಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Labour Day 2024
Koo

ವಿಶ್ವದಾದ್ಯಂತ ಮೇ 1ರಂದು ಕಾರ್ಮಿಕರ ದಿನವನ್ನು (Labour Day 2024) ಆಚರಿಸಲಾಗುತ್ತಿದೆ. ದುಡಿಯುವ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ಪಣ ತೊಡುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲೂ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (Labour and Employment) ನೀಡಿರುವ ಮಾಹಿತಿ ಪ್ರಕಾರ ದೇಶದ ಕಾರ್ಮಿಕರಿಗೆ ಇರುವ ಯೋಜನೆಗಳು ಹೀಗಿವೆ.

ಇದನ್ನೂ ಓದಿ: Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

ಪಿಎಂಜೆಜೆಬಿವೈ ಯೋಜನೆ (PMJJBY)

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಜೀವನ ಮತ್ತು ಅಂಗವೈಕಲ್ಯದಿಂದ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸಲು ರೂಪಿಸಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ 18 ರಿಂದ 50 ವರ್ಷಗಳ ಒಳಗಿನ ಜನರು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್/ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರಬೇಕು. ಖಾತೆಯಿಂದ ಹಣ ಸ್ವಯಂ ಡೆಬಿಟ್ ಆಗಲು ಅಥವಾ ಸಕ್ರಿಯಗೊಳಿಸಲು ಖಾತೆ ಹೊಂದಿರುವವರು ತಮ್ಮ ಒಪ್ಪಿಗೆಯನ್ನು ನೀಡಬೇಕು. ವಿಮಾದಾರನ ಮರಣವಾದರೆ ಆತನ ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ 2 ಲಕ್ಷ ರೂ. ವರೆಗೆ ವಿಮೆ ಪಾವತಿಸಲಾಗುವುದು. ಇದರ ವಾರ್ಷಿಕ ಪ್ರೀಮಿಯಂ 436 ರೂ. ಇದು ವಿಮಾದಾರರ ಖಾತೆಯಿಂದ ನೇರವಾಗಿ ಕಡಿತಗೊಳ್ಳುವುದು.


ಪಿ ಎಂ ಎಸ್ ಬಿ ವೈ ಯೋಜನೆ (PMSBY)

ಜೀವನ ಮತ್ತು ಅಂಗವೈಕಲ್ಯದಿಂದ ರಕ್ಷಣೆಯನ್ನು ಒದಗಿಸಲು ರೂಪಿಸಿರುವ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಸಹ 18 ರಿಂದ 70 ವರ್ಷಗಳ ವಯೋಮಾನದ ಜನರಿಗೆ ನೀಡಲಾಗುತ್ತದೆ. ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರುವವರು ಸ್ವಯಂ ಡೆಬಿಟ್‌ಗೆ ಸೇರಲು ಅಥವಾ ಸಕ್ರಿಯಗೊಳಿಸಲು ಒಪ್ಪಿಗೆಯನ್ನು ನೀಡಬೇಕು. ಈ ಯೋಜನೆಯಡಿಯಲ್ಲಿ ಅಪಾಯದ ಕವರೇಜ್ ವಿಮಾದಾರನ ಮರಣ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ 2 ಲಕ್ಷ ರೂ. ಮತ್ತು ಭಾಗಶಃ ಶಾಶ್ವತ ಅಂಗವೈಕಲ್ಯಕ್ಕೆ 1 ಲಕ್ಷ ರೂ. ನೀಡಲಾಗುತ್ತದೆ. ಅಪಘಾತದ ಕಾರಣ ಪ್ರೀಮಿಯಂ ಮೊತ್ತ ವರ್ಷಕ್ಕೆ 20 ರೂ. ಇದಕ್ಕಾಗಿ ಖಾತೆದಾರರ ಬ್ಯಾಂಕ್, ಪೋಸ್ಟ್ ಆಫೀಸ್ ಖಾತೆಯಿಂದ ‘ಆಟೋ-ಡೆಬಿಟ್’ ಮೂಲಕ ಕಡಿತಗೊಳಿಸಬೇಕು.

ಎಬಿಪಿಎಂಜೆಎವೈ (ABPMJAY)

ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ (ABPMJAY) ವಾರ್ಷಿಕ ಆರೋಗ್ಯ ರಕ್ಷಣೆಗಾಗಿ 27 ರೂ. ಪಾವತಿಸಬೇಕು. ಇದರ ವಿಶೇಷತೆ ಎಂದರೆ 1949 ರ ಚಿಕಿತ್ಸಾ ವಿಧಾನಗಳಿಗೆ ಅನುಗುಣವಾಗಿ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಅರ್ಹ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ವಿಮೆ ನೀಡಲಾಗುತ್ತದೆ.

ಶ್ರಮ ಯೋಗಿ ಮಾನ್-ಧನ್ (PM-SYM)

ವೃದ್ಧಾಪ್ಯ ರಕ್ಷಣೆಯನ್ನು ಒದಗಿಸುವ ಸಲುವಾಗಿ ಭಾರತ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇದು 60 ವರ್ಷ ವಯಸ್ಸನ್ನು ತಲುಪಿದ ಅನಂತರ 3000 ರೂ. ಮಾಸಿಕ ಪಿಂಚಣಿ ನೀಡುತ್ತದೆ. 18-40 ವರ್ಷ ವಯಸ್ಸಿನ ಕಾರ್ಮಿಕರ ಮಾಸಿಕ ಆದಾಯ ರೂ. 15,000 ಅಥವಾ ಅದಕ್ಕಿಂತ ಕಡಿಮೆ ಮತ್ತು ಇಪಿಎಫ್‌ಒ/ಇಎಸ್‌ಐಸಿ/ಎನ್‌ಪಿಎಸ್ (ಸರ್ಕಾರಿ ನಿಧಿ) ಸದಸ್ಯರಲ್ಲದವರು PM-SYM ಯೋಜನೆಗೆ ಸೇರಬಹುದು. ಈ ಯೋಜನೆಯಡಿಯಲ್ಲಿ ಫಲಾನುಭವಿಯು ಶೇ. 50 ಮಾಸಿಕ ಕೊಡುಗೆಯನ್ನು ಪಾವತಿಸಬೇಕು ಮತ್ತು ಸಮಾನ ಹೊಂದಾಣಿಕೆಯ ಕೊಡುಗೆಯನ್ನು ಕೇಂದ್ರ ಸರ್ಕಾರವು ಪಾವತಿಸುತ್ತದೆ. ಯೋಜನೆಯ ಅಡಿಯಲ್ಲಿ ಸರ್ಕಾರದ ಕೊಡುಗೆಗಾಗಿ ಹಣವನ್ನು ಎಲ್ಐಸಿ ನಿಧಿ ವ್ಯವಸ್ಥಾಪಕರಿಗೆ ಒದಗಿಸಲಾಗುತ್ತದೆ.


ಇವುಗಳು ಮಾತ್ರವಲ್ಲದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನ, ಮಹಾತ್ಮ ಗಾಂಧಿ ಬಂಕರ್ ಬಿಮಾ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ಪಿಎಂಎಸ್‌ವನಿಧಿ, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಇತ್ಯಾದಿಗಳು ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅವರ ಅರ್ಹತೆಯ ಮಾನದಂಡಗಳಿಗೆ ಅನುಗುಣವಾಗಿ ಲಭ್ಯವಿದೆ.

ಸಾಮಾಜಿಕ ಭದ್ರತಾ ಯೋಜನೆಗಳು, ಕಲ್ಯಾಣ ಯೋಜನೆಗಳ ಬಗ್ಗೆ 16- 59 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (NDUW) ಅನ್ನು ರಚಿಸುವ ಉದ್ದೇಶದಿಂದ ಇ-ಶ್ರಾಮ್ ಪೋರ್ಟಲ್ ಅನ್ನು 2021ರ ಆಗಸ್ಟ್, ನಲ್ಲಿ ಪ್ರಾರಂಭಿಸಲಾಗಿದೆ.

Continue Reading
Advertisement
Jammu Tour
ಪ್ರವಾಸ5 mins ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್13 mins ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

CoWin Certificates
ದೇಶ28 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ31 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್40 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ47 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ52 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Best Courses After SSLC
ಶಿಕ್ಷಣ56 mins ago

Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಎಸ್ ಎಸ್ ಎಲ್ ಸಿ ನಂತರ ಯಾವುದು ಉತ್ತಮ ಆಯ್ಕೆ?

Thomas Cup 2024
ಬ್ಯಾಡ್ಮಿಂಟನ್56 mins ago

Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

Aadhaar Crads For Dog
ಪ್ರಮುಖ ಸುದ್ದಿ1 hour ago

Aadhaar Crads For Dog: ದೆಹಲಿಯಲ್ಲಿ ನಾಯಿಗಳಿಗೂ ಬಂತು ಆಧಾರ್ ಕಾರ್ಡ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌