Kannada Rajyotsava : ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು ಇಲ್ಲಿವೆ; ಸಾಹಿತ್ಯ ಸಂಗೀತ ಸಹಿತ! Vistara News

ಕನ್ನಡ ರಾಜ್ಯೋತ್ಸವ

Kannada Rajyotsava : ರಾಜ್ಯೋತ್ಸವ ದಿನ ಹಾಡಬೇಕಾದ 5 ಹಾಡುಗಳು ಇಲ್ಲಿವೆ; ಸಾಹಿತ್ಯ ಸಂಗೀತ ಸಹಿತ!

Kannada Rajyotsava : ಕನ್ನಡ ರಾಜ್ಯೋತ್ಸವ ದಿನದಂದು ಹಾಡಬೇಕಾದ ಐದು ಹಾಡುಗಳು ಇಲ್ಲಿವೆ. ಅದರ ಸಾಹಿತ್ಯ ಮತ್ತು ಸಂಗೀತವೂ ಇದೆ. ಹಾಡಿ, ಕುಣಿದಾಡಿ.

VISTARANEWS.COM


on

Kannada Rajyotsava Songs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಳೆ ನವೆಂಬರ್‌ 1. ಕನ್ನಡ ರಾಜ್ಯೋತ್ಸವ (Kannada Rajyotsava). ನಾಡಿನೆಲ್ಲೆಡೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕರೆ ನೀಡಿರುವ ರಾಜ್ಯ ಸರ್ಕಾರ (State Government) ಅಧಿಕೃತ ಕಾರ್ಯಕ್ರಮಗಳಲ್ಲಿ ಐದು ಕನ್ನಡ ಗೀತೆಗಳ ಗಾಯನವನ್ನು (Five Kannada Songs) ಕಡ್ಡಾಯಗೊಳಿಸಿದೆ. ಹಾಗಿದ್ದರೆ ಆ ಹಾಡುಗಳು ಯಾವುವು ಎಂದು ಇಲ್ಲಿ ನೋಡೋಣ.

ಈ ಬಾರಿ ಕರ್ನಾಟಕ ಸಂಭ್ರಮ 50ನೇ ವರ್ಷಾಚರಣೆ (Kannada Sambhrama 50) ನಡೆಯುತ್ತಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ಈ ವರ್ಷದ ನವೆಂಬರ್‌ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ಐದು ಕನ್ನಡಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಬೇಕು ಎನ್ನುವುದು ರಾಜ್ಯ ಸರ್ಕಾರದ ಮನವಿ.

‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ನ.1ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ (ಗೀತೆ ಗಾಯನ) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಹಾಡಬೇಕಾಗಿರುವ ಹಾಡುಗಳು ಇವು

1. ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
2. ಕುವೆಂಪು ವಿರಚಿತ ಎಲ್ಲಾದರೂ ಇರು ಎಂತಾದರು ಇರು
3. ದ. ರಾ. ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ
4. ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡ ದೀಪ
5. ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ

ಹಾಡುಗಳ ಪೂರ್ಣ ಸಾಹಿತ್ಯ ಇಲ್ಲಿದೆ

1.ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಸಾಹಿತ್ಯ: ಹುಯಿಲಗೋಳ ನಾರಾಯಣರಾಯರು

Huyilagola Narayana rayaru
ಹುಯಿಲಗೋಳ ನಾರಾಯಣ ರಾಯರು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು || 1 ||

ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು || 2 ||

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಅವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು|| 3 ||

2. ಎಲ್ಲಾದರೂ ಇರು ಎಂತಾದರು ಇರು

ರಚನೆ: ಕುವೆಂಪು

Kuvempu kannada sahitya

ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.

ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ.
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ.
ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕರಗುವ ಮನ;
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ,
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ;
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!

ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ,
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವನೆಲದೆ ಮಿಥ್ಯಾ!

3. ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಕವಿ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ಅಂಬಿಕಾತನಯ ದತ್ತ)

Dattatreya Ramachandra Bendre Kannada kavi

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೆ
ಕನ್ನಡವೆಂದು ಒಪ್ಪದು ಕರ್ನಾಟಕ ನಿಂದೆ

ಕನ್ನಡ ಮಾತೇ ಮಾತೆಯು ಕರ್ನಾಟಕ ಒಂದೇ
ಅದು ದೈವತ ಅದು ಜೀವಿತ ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೊಪ್ಪದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಕರ್ನಾಟಕ ಹಿತ ಹಿಡಿತವು ಕನ್ನಡ ಕುಲದಿಂದೆ

ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನು ಒಪ್ಪುವ ಕುಲದಿಂದೇ
ಇಂತರಿಯದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಉಚ್ಛರಿಸಿರಿ ಮಾತೆಗೆ ಜಯ ಜಯ ಜಯವೆಂದೇ

4. ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಸಾಹಿತ್ಯ: ಡಾ.ಸಿದ್ದಯ್ಯ ಪುರಾಣಿಕ

Siddaiah puranik

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ..
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.. ಕನ್ನಡದ ಮಾನ ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ..
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ

5. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

ಕವಿ : ಚನ್ನವೀರ ಕಣವಿ

Channaveera Kanavi

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ;
ಕುರಿತೋದದ ಪರಿಣತಮತಿ –
ಅರಿತವರಿಗೆ ಹೂಗೊಂಡ

ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ

ಗುಡಿ – ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ;
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ

ತ್ರಿಪದಿಯಿಂದ ಸಾಸಿರಪದಿ
ಸ್ವಚ್ಛಂದದ ಉಲ್ಲಾಸ
ಭಾವಗೀತೆ, ಮಹಾಕಾವ್ಯ –
ವೀರ – ವಿನಯ ಸಮರಸ

ಹಳ್ಳಿ – ಊರು, ನಗರ – ಜಿಲ್ಲೆ
ಮೊಗದ ಹೊಗರು ಕನ್ನಡಿ;
ಎಲ್ಲ ದಿಸೆಗು ಚೆಲ್ಲುವರಿದ
ಚೈತನ್ಯದ ದಾಂಗುಡಿ

ಇದನ್ನೂ ಓದಿ: Karnataka Rajyotsava: ಭೇಟಿ ನೀಡಲೇಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕನ್ನಡ ರಾಜ್ಯೋತ್ಸವ

Kannada Koota Luxembourg: ಲಕ್ಸಂಬರ್ಗ್ ಕನ್ನಡ ಕೂಟದಿಂದ ಅದ್ಧೂರಿ ಕನ್ನಡೋತ್ಸವ-2023

Kannada Koota Luxembourg: ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಲಕ್ಸಂಬರ್ಗ್ ಕನ್ನಡ ಕೂಟ, ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

VISTARANEWS.COM


on

Kannada Koota Luxembourg
Koo

ಲಕ್ಸಂಬರ್ಗ್: ಕನ್ನಡದ ಕಂಪನ್ನು ಪಸರಿಸುವ ಮತ್ತು ಕನ್ನಡದ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕನ್ನಡ ಕೂಟ ಲಕ್ಸಂಬರ್ಗ್ (ಕೆಕೆಎಲ್) (Kannada Koota Luxembourg) ಅದ್ಧೂರಿಯಾಗಿ `ಕನ್ನಡೋತ್ಸವ -2023’ ನಡೆಸುವ ಮೂಲಕ ಯುರೋಪ್ ಖಂಡದ ಚಿಕ್ಕ ದೇಶದಲ್ಲಿ ಕರುನಾಡು ಸಂಸ್ಕೃತಿಯ ಅನಾವರಣ ಮಾಡಿದೆ.

ಲಕ್ಸಂಬರ್ಗ್‌ನ ಬೆಗ್ಗೆನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಪಾಲ್ಗೊಂಡು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು. ಈ ಮೂಲಕ ಕನ್ನಡಿಗರೆಲ್ಲರೂ ಒಂದೆಡೆ ಸೇರಿ ಕನ್ನಡ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಬೆಂಗಳೂರು ನಗರ ಜಿಲ್ಲೆಯಷ್ಟು ದೊಡ್ಡದಿರುವ ಲಕ್ಸಂಬರ್ಗ್‌ನಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಇದೆ. ಚಿಕ್ಕದಾದರೂ ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಶ್ರೀಮಂತವಾಗಿದೆ. ಈ ಬಹುಸಾಂಸ್ಕೃತಿಕ ಪ್ರದೇಶದಲ್ಲಿ ಭಾರತೀಯರು ಅದರಲ್ಲೂ ವಿಶೇಷವಾಗಿ ಕನ್ನಡಿಗರು ಗಮನಾರ್ಹವಾದ ರೀತಿಯಲ್ಲಿ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಲ್ಲಿ 100ಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ವಾಸ ಮಾಡುತ್ತಿದ್ದು, 2022ರ ಅಂತ್ಯದಲ್ಲಿ ಆರಂಭವಾದ ಕನ್ನಡ ಕೂಟ ಲಕ್ಸಂಬರ್ಗ್ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು ಹಾಗೂ ಹಬ್ಬಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ | ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ಕೆಕೆಎಲ್ ಕನ್ನಡೋತ್ಸವ 2023 ಎರಡನೇ ಕರ್ನಾಟಕ ರಾಜ್ಯೋತ್ಸವವನ್ನು ಆಯೋಜಿಸಿದ್ದು, ಇದರಲ್ಲಿ 120ಕ್ಕೂ ಹೆಚ್ಚು ಕನ್ನಡದ ಮನಸುಗಳು ಪಾಲ್ಗೊಂಡಿದ್ದವು. ಇದರ ವಿಶೇಷವೆಂದರೆ ದೊಡ್ಡ ಮಟ್ಟದಲ್ಲಿ ಭಾರತೀಯರು ಮತ್ತು ಕೆಲವು ಯೂರೋಪಿಯನ್ನರೂ ಪಾಲ್ಗೊಂಡಿದ್ದರು. ಕನ್ನಡದ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ಸಂಪ್ರದಾಯವನ್ನು ಬಿಂಬಿಸುವ ರೀತಿಯಲ್ಲಿ ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ನಾಡಗೀತೆಯನ್ನು ಹಾಡಲಾಯಿತು.

ಕನ್ನಡಿಗ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ವನಜಾಕ್ಷಿ ಜಗದೀಶ್ ಮತ್ತು ಡಾ.ಪುನೀತ್ ಜುಬ್ಬ ಹೊನ್ನಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶರಣ್ಯ ಮತ್ತು ಪ್ರಮೋದ್ ಈಶ್ವರ್ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಶಾಸ್ತ್ರೀಯ ಸಂಗೀತ, ಸಿನಿಮಾ ಹಾಡುಗಳ ಗಾಯನ, ನೃತ್ಯ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ವಿಶೇಷವೆಂದರೆ ಈ ಕಾರ್ಯಕ್ರಮಗಳ ಅರ್ಧದಷ್ಟು ಕಾರ್ಯಕ್ರಮಗಳನ್ನು ಮಕ್ಕಳೇ ನಡೆಸಿಕೊಟ್ಟರು. ಈ ಮೂಲಕ ಮಕ್ಕಳು ಕನ್ನಡದ ಸಂಸ್ಕೃತಿಯನ್ನು ಬಿಂಬಿಸಿದರು. ಇದೇ ವೇಳೆ, ಆದರ್ಶ ದಂಪತಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು. ಈ ಪೈಕಿ 5 ಅತ್ಯುತ್ತಮ ಜೋಡಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಕನ್ನಡಿಗರಾದ ಅಚಲ್ ಮೂರ್ತಿ ಮತ್ತು ಲಕ್ಸಂಬರ್ಗ್ ಮೂಲದ ಬ್ಯಾಂಡ್ `ಅಹ್ಮದ್ ರಾದ್ವಾನ್ & ಲೆಸ್ ಹಿರೋಂಡೆಲ್ಸ್’ ನ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಅಲ್ಲದೇ, ಇಲ್ಲಿ ಆಯೋಜಿಸಲಾಗಿದ್ದ ವಿವಿಧ ಖಾದ್ಯಗಳ ಪ್ರದರ್ಶನ ತಿಂಡಿ ಪ್ರಿಯರಿಗೆ ಆಹ್ಲಾದವನ್ನು ಉಂಟು ಮಾಡಿತು.

ಕೆಕೆಎಲ್ ಅಧ್ಯಕ್ಷರಾದ ಭವಾನಿ ಶಂಕರ್ ಅವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಲಕ್ಸಂಬರ್ಗ್ ಮತ್ತು ಕರ್ನಾಟಕದ ಕನ್ನಡಿಗರ ನಡುವಿನ ಬಾಂಧವ್ಯ ಬಲವರ್ಧನೆಗೆ ಈ ಕಾರ್ಯಕ್ರಮ ನಾಂದಿ ಹಾಡಿದೆ. ಈ ಕನ್ನಡೋತ್ಸವ 2023 ಕೇವಲ ನಮ್ಮ ನಡುವಿನ ಪ್ರತಿಭೆಗಳನ್ನು ಹೊರ ಜಗತ್ತಿಗೆ ಅನಾವರಣ ಮಾಡಲಷ್ಟೇ ಕಾರಣವಾಗಿಲ್ಲ. ಇದರೊಂದಿಗೆ ಒಗ್ಗಟ್ಟು ಮತ್ತು ಪ್ರೀತಿ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೊರ ಜಗತ್ತಿಗೆ ತೋರಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ’’ ಎಂದರು.

ಸಂಧ್ಯಾ ಸುರೇಶ್, ಪುನೀತಾ ರೆಡ್ಡಿ, ಕಾರ್ತೀಕ್ ರಾಮಮೂರ್ತಿ, ನರಸಿಂಹ ಹೆಬ್ಬಾರ್, ಮಂಜುನಾಥ್ ಪ್ರಸಾದ್, ನಿರಂಜನ್ ವಿಶ್ವಮೂರ್ತಿ, ಹಿತೇಶ್ ಚಿಡ್ಗಲ್, ಪ್ರಶಾಂತ್ ಅಳವಂಡಿ, ರಮೇಶ್ ಪಾಂಡುರಂಗ ಸೇರಿದಂತೆ ಇನ್ನಿತರ ಆಡಳಿತ ಮಂಡಳಿ ಸದಸ್ಯರು ನೇತೃತ್ವದಲ್ಲಿ ಹಾಗೂ ಸ್ವಯಂಸೇವಕರ ಶ್ರಮದ ಫಲವಾಗಿ ಈ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ನಡೆಯಲು ಕಾರಣವಾಗಿದೆ.

ಇದನ್ನೂ ಓದಿ | Cultural Events : ಡಿ.13-14ರಂದು ನೃತ್ಯ ವೈಭವದ ತ್ಯಾಗರಾಜ ಹೃತ್ಸದನ

ಈ ಕನ್ನಡೋತ್ಸವ 2023 ಕನ್ನಡದ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವುದರೊಂದಿಗೆ ಕನ್ನಡೇತರರು ಮತ್ತು ಸ್ಥಳೀಯ ನಾಗರಿಕರೊಂದಿಗೆ ಸಂಬಂಧ ಬೆಳೆಸುವುದು ಮತ್ತು ಸಂಸ್ಕೃತಿ ವಿನಿಮಯಕ್ಕೆ ಒಂದು ಉತ್ತಮವಾದ ವೇದಿಕೆಯನ್ನು ಒದಗಿಸಿಕೊಟ್ಟಿತು.

Continue Reading

ಕನ್ನಡ ರಾಜ್ಯೋತ್ಸವ

RK Balachandra: ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿಗೆ ಕುಶಾಲನಗರದ ಆರ್.ಕೆ. ಬಾಲಚಂದ್ರ ಆಯ್ಕೆ

R. K. Balachandra: ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

VISTARANEWS.COM


on

RK Balachandra
Koo

ಮಡಿಕೇರಿ: 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಳ್ಳಾರಿಯ ಸ್ಮಿಯಾಕ ಚಾರಿಟಬಲ್ ಟ್ರಸ್ಟ್‌ನಿಂದ ನೀಡುವ ʼಕರ್ನಾಟಕ ಸಾಧಕ ರತ್ನʼ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲನಗರದ ಆರ್.ಕೆ. ಬಾಲಚಂದ್ರ (RK Balachandra) ಅವರು ಆಯ್ಕೆಯಾಗಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುಮುಖ್ಯವಾಗಿ ಅನ್ಯ ರಾಜ್ಯದ ಕನ್ನಡೇತರರಿಗೆ ಕನ್ನಡ ಕಲಿಸುವಿಕೆ ಹಾಗೂ ರಾಜ್ಯಾದಂತ ಉಚಿತವಾಗಿ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಗಳ ಪರೀಕ್ಷೆ ತರಬೇತಿಯ ಸೇವೆಯನ್ನು ಗುರುತಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಇವರಿಗೆ ʼಕರ್ನಾಟಕ ಸಾಧಕ ರತ್ನʼ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮಾಯಣ, ಮಹಾಭಾರತ ಕಲಿಕೆ ಶಿಫಾರಸು ಸ್ವಾಗತಾರ್ಹ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ 26ರಂದು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್.ಕೆ. ಬಾಲಚಂದ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕನ್ನಡ ರಾಜ್ಯೋತ್ಸವ

Karnataka Sambhrama 50: ಹೋರಾಟ, ತ್ಯಾಗ-ಬಲಿದಾನದಿಂದ ಕನ್ನಡ ನಾಡು ಉದಯ: ಸಿದ್ದರಾಮಯ್ಯ

Karnataka Sambhrama 50: ಗದಗದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ರಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

VISTARANEWS.COM


on

CM Siddaramaiah
Koo

ಗದಗ: ಹೋರಾಟ, ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು (Karnataka Sambhrama 50) ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ʼಕರ್ನಾಟಕ ಸಂಭ್ರಮ-50ʼ ಅದ್ಧೂರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್. ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗತಿಗಳನ್ನು ಇಂದು ನಾನು ಸ್ಮರಿಸುತ್ತೇನೆ. ಅವತ್ತು ಕೆ.ಎಚ್.ಪಾಟೀಲ್, ಇಂದು ಎಚ್.ಕೆ.ಪಾಟೀಲ್, ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯ ಅಲ್ಲ ಎಂದರು.

ಇಂಗ್ಲಿಷ್‌ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಾಹರಿಸಿದರು.

ಇದನ್ನೂ ಓದಿ | Karnataka Drought : 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.

CM Siddaramaiah talks in Karnataka sambhrama at Gadag

ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.

ಈ ಹಿಂದೆ ಕೆ.ಎಚ್.ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಎಚ್.ಕೆ.ಪಾಟೀಲರೂ ಇಡೀ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದರೆ ಸಾಕು, ನೀವೆಲ್ಲಾ ಎಚ್.ಕೆ.ಪಾಟೀಲರನ್ನು ಗೆಲ್ಲಿಸಬೇಕು. ಇಡೀ ರಾಜ್ಯಕ್ಕೆ ಅಷ್ಟೊಂದು ಕೆಲಸ ಮಾಡಿರುವ ಎಚ್.ಕೆ.ಪಾಟೀಲರು ಮತ ಕೇಳಬಾರದು. ನೀವೆಲ್ಲಾ ಅವರನ್ನೂ ಹಾಗೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅವಳಿ ನಗರಕ್ಕೆ 61 ಕೋಟಿ ಕೊಟ್ಟಿದ್ದೇವೆ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಈಗಾಗಲೇ 61 ಕೋಟಿ ರೂ. ನೀಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ಹಣ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಚಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಚ್.ಕೆ.ಪಾಟೀಲ್ ಅವರು ವಹಿಸಿದ್ದರು.

ಇದನ್ನೂ ಓದಿ | Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಂಕಾಳ ವೈದ್ಯ, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿ ಹಲವಾರು ಶಾಸಕರು, ಇಲಾಖಾ ಕಾರ್ಯದರ್ಶಿಗಳು-ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಕನ್ನಡ ರಾಜ್ಯೋತ್ಸವ

Kannada Rajyotsava: ಇಸ್ರೋ ಅಧ್ಯಕ್ಷ ಸೋಮನಾಥ್‌ ಸೇರಿ ಸಾಧಕ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Kannada Rajyotsava: ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌, ನ್ಯಾಯಮೂರ್ತಿ ಗೋಪಾಲಗೌಡ ಸೇರಿ ವಿವಿಧ ಕ್ಷೇತ್ರಗಳ 68 ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

VISTARANEWS.COM


on

Rajyotsava award to isro chairman S Somanath
ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.
Koo

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ (Kannada Rajyotsava) ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌, ನ್ಯಾ. ಗೋಪಾಲಗೌಡ ಸೇರಿ ವಿವಿಧ ಕ್ಷೇತ್ರಗಳ 68 ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳ ಸಾಧಕ ಹಾಗೂ ಸಂಸ್ಥೆಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಶಿವರಾಜ್ ತಂಗಡಗಿ, ಡಾ.ಜಿ. ಪರಮೇಶ್ವರ, ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು

ನ್ಯಾಯಮೂರ್ತಿ ಗೋಪಾಲಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು

ಇದನ್ನೂ ಓದಿ | Gadag News: ಮದುವಣಗಿತ್ತಿಯಂತೆ ಬಸ್ ಸಿಂಗರಿಸಿ, ಕನ್ನಡಾಭಿಮಾನ ಮೆರೆದ ಚಾಲಕ

ಇದನ್ನೂ ಓದಿ | Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ

ಪ್ರಶಸ್ತಿ ಪ್ರದಾನ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜತೆ ಚಹಾ ಕೂಟದಲ್ಲಿ ಪಾಲ್ಗೊಂಡರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಚಹಾಕೂಟದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಡಾ ಜಿ. ಪರಮೇಶ್ವರ, ಶಿವರಾಜ್ ತಂಗಡಗಿ, ಕೆ ಎಚ್ ಮುನಿಯಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಮತ್ತಿತರರು ಜತೆಯಾಗಿದ್ದರು.

ವಿಜ್ಞಾನಿಯಿಂದ ಪತ್ರಿಕಾ ವಿತರಕರವರೆಗೆ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಇಲ್ಲಿದೆ

ಸಂಗೀತ- ನೃತ್ಯ

1. ಡಾ ನಯನ್ ಎಸ್​ ಮೋರೆ (ಬೆಂಗಳೂರು)
2. ನೀಲಾ ಎಮ್​ ಕೊಡ್ಲಿ (ಧಾರವಾಡ)
3. ಶಬ್ಬೀರ್ ಅಹಮದ್​ (ಬೆಂಗಳೂರು)
4. ಡಾ ಎಸ್​ ಭಾಳೇಶ ಭಜಂತ್ರಿ (ಬೆಳಗಾವಿ)

ಚಲನಚಿತ್ರ

1. ಡಿಂಗ್ರಿ ನಾಗರಾಜ್​ (​ಬೆಂಗಳೂರು)
2. ಬಿ. ಜನಾರ್ಧನ (ಬ್ಯಾಂಕ್ ಜನಾರ್ದನ)

ರಂಗಭೂಮಿ

1. ಎ.ಜಿ ಚಿದಂಬರ ರಾವ್ ಜಂಬೆ (ಶಿವಮೊಗ್ಗ)
2. ಪಿ ಗಂಗಾಧರ ಸ್ವಾಮಿ (ಮೈಸೂರು)
3. ಎಚ್ ಬಿ ಸರೊಜಮ್ಮ (ಧಾರವಾಡ)
4. ತಯ್ಯಬ್​ಖಾನ್​ ಎಂ ಇನಾಮದಾರ( ಬಾಗಲಕೋಟೆ)
5. ಡಾ ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)
6. ಪಿ ತಿಪ್ಪೇಸ್ವಾಮಿ (ಚಿತ್ರದುರ್ಗ)

ಶಿಲ್ಪ ಕಲೆ/ ಚಿತ್ರ ಕಲೆ/ ಕರಕುಶಲ

1.ಟಿ ಶಿವಶಂಕರ್​ (ದಾವಣಗೆರೆ)
2.ಕಾಳಪ್ಪ ವಿಶ್ವಕರ್ಮ (ರಾಯಚೂರು)
3.ಮಾರ್ಥಾ ಜಾಕಿಮೊವಿಚ್​ (ಬೆಂಗಳೂರು)
4.ಪಿ ಗೌರಯ್ಯ (ಮೈಸೂರು)

ಜಾನಪದ

1. ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ- ಉತ್ತರ ಕನ್ನಡ
2. ಶಿವಂಗಿ ಶಣ್ಮರಿ- ದಾವಣಗೆರೆ
3. ಮಹದೇವು- ಮೈಸೂರು
4. ನರಸಪ್ಪಾ- ಬೀದರ್‌
5. ಶಕುಂತಲಾ ದೇವಲಾನಾಯಕ- ಕಲಬುರಗಿ
6. ಎಚ್‌.ಕೆ. ಕಾರಮಂಚಪ್ಪ- ಬಳ್ಳಾರಿ
7. ಶಂಭು ಬಳಿಗಾರ- ಗದಗ
8. ವಿಭೂತಿ ಗುಂಡಪ್ಪ-ಕೊಪ್ಪಳ
9. ಚೌಡಮ್ಮ-ಚಿಕ್ಕಮಗಳೂರು

ಸಮಾಜಸೇವೆ

1. ಹುಚ್ಚಮ್ಮ ಬಸಪ್ಪ ಚೌದ್ರಿ- ಕೊಪ್ಪಳ
2. ಚಾರ್ಮಾಡಿ ಹಸನಬ್ಬ- ದಕ್ಷಿಣ ಕನ್ನಡ
3. ಕೆ ರೂಪ್ಲಾ ನಾಯಕ್‌- ದಾವಣಗೆರೆ
4. ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ- ಬೆಳಗಾವಿ
5. ನಾಗರಾಜು.ಜಿ- ಬೆಂಗಳೂರು

ಆಡಳಿತ

1. ಜಿ.ವಿ ಬಲರಾಮ್‌- ತುಮಕೂರು

ವೈದ್ಯಕೀಯ

1. ಡಾ. ಸಿ ರಾಮಚಂದ್ರ- ಬೆಂಗಳೂರು
2. ಡಾ. ಪ್ರಶಾಂತ್‌ ಶೆಟ್ಟಿ- ದಕ್ಷಿಣ ಕನ್ನಡ

ಸಾಹಿತ್ಯ

1. ಪ್ರೊ. .ಸಿ. ನಾಗಣ್ಣ- ಚಾಮರಾಜನಗರ
2. ಸುಬ್ಬು ಹೊಲೆಯಾರ್‌ – ಹಾಸನ
3. ಸತೀಶ ಕುಲಕರ್ಣಿ- ಹಾವೇರಿ
4.ಲಕ್ಷ್ಮೀಪತಿ ಕೋಲಾರ- ಕೋಲಾರ
5. ಪರಪ್ಪ ಗುರುಪಾದಪ್ಪ ಸಿದ್ಧಾಪುರ- ವಿಜಯಪುರ
6.ಡಾ.ಕೆ. ಷರೀಫಾ – ಬೆಂಗಳೂರು

ಶಿಕ್ಷಣ

1.ರಾಮಪ್ಪ (ರಾಮಣ್ಣ) ಹವಳೆ – ರಾಯಚೂರು
2. ಕೆ. ಚಂದ್ರಶೇಖರ್‌ – ಕೋಲಾರ
3. ಕೆ.ಟಿ. ಚಂದು- ಮಂಡ್ಯ

ಕ್ರೀಡೆ

1. ಕುಮಾರಿ ದಿವ್ಯಾ ಟಿ.ಎಸ್.-‌ ಕೋಲಾರ
2. ಅದಿತಿ ಅಶೋಕ್‌ – ಬೆಂಗಳೂರು
3. ಅಶೊಕ್‌ ಗದಿಗೆಪ್ಪ ಎಣಗಿ – ಧಾರವಾಡ

ನ್ಯಾಯಾಂಗ

1.ಜ.ವಿ. ಗೋಪಾಲಗೌಡ- ಚಿಕ್ಕಬಳ್ಳಾಪುರ

ಪರಿಸರ

1. ಸೋಮನಾಥರೆಡ್ಡಿ ಪೂರ್ಮಾ – ಕಲಬುರಗಿ
2. ದ್ಯಾವನಗೌಡ ಟಿ. ಪಾಟೀಲ- ಧಾರವಾಡ
3. ಶಿವರೆಡ್ಡಿ ಹನುಮರೆಡ್ಡಿ ವಾಸನ- ಬಾಗಲಕೋಟೆ

ಸಂಕೀರ್ಣ

1. ಎಂ.ಎಂ.ಮದರಿ- ವಿಜಯಪುರ
2. ಹಾಜಿ ಹಬ್ದುಲ್ಲಾ ಪರ್ಕಳ- ಉಡುಪಿ
3. ಮಿಮಿಕ್ರಿ ದಯಾನಂದ್-‌ ಮೈಸೂರು
4. ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್-‌ ಮೈಸೂರು
5. ಲೆ.ಜ. ಕೊಡನ ಪೂವಯ್ಯ ಕಾರ್ಯಪ್ಪ- ಕೊಡಗು

ಮಾಧ್ಯಮ ಕ್ಷೇತ್ರ

1.ದಿನೇಶ್‌ ಅಮೀನ್‌ ಮಟ್ಟು -ದಕ್ಷಿಣ ಕನ್ನಡ
2. ಜವರಪ್ಪ: ಮೈಸೂರು
3. ಮಾಯಾ ಶರ್ಮ: ಬೆಂಗಳೂರು
4. ರಫೀ ಭಂಡಾರಿ: ವಿಜಯಪುರ

ಕ್ಷೇತ್ರ: ವಿಜ್ಞಾನ/ತಂತ್ರಜ್ಞಾನ

1.ಎಸ್‌ ಸೋಮನಾಥ್‌ (ಇಸ್ರೋ ಅಧ್ಯಕ್ಷರು): ಬೆಂಗಳೂರು
2.ಪ್ರೊ. ಗೋಪಾಲನ್‌ ಜಗದೀಶ್‌: ಚಾಮರಾಜ ನಗರ

ಹೊರನಾಡು/ಹೊರದೇಶ

1.ಸೀತಾರಾಮ ಅಯ್ಯಂಗಾರ್‌
2. ದೀಪಕ್‌ ಶೆಟ್ಟಿ
3. ಶಶಿಕಿರಣ್‌ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು

1. ಪುಟ್ಟಸ್ವಾಮಿಗೌಡ: ರಾಮನಗರ

ಸಂಘ- ಸಂಸ್ಥೆಗಳು

  1. ಕರ್ನಾಟಕ ಸಂಘ – ಶಿವಮೊಗ್ಗ
  2. ಬಿ.ಎನ್‌. ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು
  3. ಮಿಥಿಕ್‌ ಸೊಸೈಟಿ – ಬೆಂಗಳೂರು
  4. ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ
  5. ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ
  6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ – ದಕ್ಷಿಣ ಕನ್ನಡ
  7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ
  8. ಚಿಣ್ಣರ ಬಿಂಬ – ಮುಂಬೈ
  9. ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ
  10. ವಿದ್ಯಾದಾನ ಸಮಿತಿ – ಗದಗ

ಈ ಸಂಗತಿಯ ಕುರಿತು ಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Drought
ಕರ್ನಾಟಕ5 mins ago

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ. ವರೆಗೆ ಜಮೆ

IT raids on liquor traders across Odisha and Jharkhand
ದೇಶ8 mins ago

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

Attendance Araga Jnanendra UT Khader Araga jnanendra
ಕರ್ನಾಟಕ29 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ45 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ50 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ52 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ52 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ1 hour ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ1 hour ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ1 hour ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ45 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌