ಸಾವಿರ ವರ್ಷಗಳ ಹಳೇ ದೇಗುಲ ಕಾಣೆ; ಕುಣಿಗಲ್‌ನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಹುಡುಕಾಟ! - Vistara News

ಕರ್ನಾಟಕ

ಸಾವಿರ ವರ್ಷಗಳ ಹಳೇ ದೇಗುಲ ಕಾಣೆ; ಕುಣಿಗಲ್‌ನಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ಹುಡುಕಾಟ!

ನಿವೃತ್ತ ಐಪಿಎಸ್‌ ಅಧಿಕಾರಿ ಒಬ್ಬರು ಕಾಣೆಯಾಗಿರುವ ದೇಗುಲವನ್ನು ಪತ್ತೆ ಹಚ್ಚಿ ಎಂದು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಾತತ್ವ ಅಧಿಕಾರಿಗಳಿಂದ ಶೋಧ ಕಾರ್ಯ ನಡೆದಿದೆ.

VISTARANEWS.COM


on

ದೇಗುಲ ನಾಪತ್ತೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಚೋಳರ ಕಾಲದ ದೇಗುಲ ಕಾಣೆ ಆಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಕುಣಿಗಲ್‌ನ ವಿವಿಧ ಭಾಗಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎ.ಟಿ.ಪೊನ್ ಮಾಣಿಕ್ಯವೇಲ್ ಎಂಬುವವರು ಕುಣಿಗಲ್‌ನ ಕೊತ್ತಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1ನೇ ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಸ್ಥಾನದ ಕುರುಹುಗಳು ಹಾಗೂ ದೇಗುಲದಲ್ಲಿದ್ದ ವಿಗ್ರಹವೂ ನಾಪತ್ತೆಯಾಗಿದೆ ಎಂದು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರಿಂದ, ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್‌.ಗೋಪಾಲ್‌, ಡಾ.ಎಚ್‌.ಎಸ್‌.ಗೋಪಾಲರಾವ್ ಅವರು, ಕೊತ್ತಗೆರೆ ಗ್ರಾಮದ ಹಳ್ಳಿಮರ, ಗಂಗೇನಹಳ್ಳಿ, ದೊಡ್ಡಕೆರೆ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೋಳರಿಂದ ಸ್ಥಾಪಿತವಾಗಿತ್ತು ಪಟ್ಟಣ : ನಿವೃತ್ತ ಐಜಿಪಿ ಎ.ಜಿ.ಪೊನ್ ಮಾಣಿಕ್ಯವೇಲ್, ತಮಿಳುನಾಡು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ರಾಜರಾಜ ಚೋಳ-1, ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರ ಉದಯ‌ ರಾಜಾಧಿ ರಾಜ ದೇವರು, ಕುಣಿಗಲ್‌ನಲ್ಲಿ ರಾಜೇಂದ್ರ ಚೋಳಪುರಂ ಎಂಬ ಪಟ್ಟಣವನ್ನು ಸ್ಥಾಪಿಸಿದ್ದರು. 949 ವರ್ಷಗಳ ಹಿಂದೆ ಕುಣಿಗಲ್‌ನಿಂದ 5 ಕಿ.ಮೀ ದೂರದಲ್ಲಿರುವ ಕೊತ್ತಗಿರಿ ಗ್ರಾಮದಲ್ಲಿ ತಮ್ಮ ನೆನಪಿಗಾಗಿ ರಾಜೇಂದ್ರ ಚೋಳೀಶ್ವರಂ ಎಂಬ ದೇವಾಲಯ ನಿರ್ಮಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್‌ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು

ಹಿಂದು ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ದೂರು: ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು (ಈ ವಿಗ್ರಹವನ್ನು ರಾಜಾಧಿರಾಜ ವಿಂಧಗ‌ರ್ ಎಂದು ಕರೆಯುತ್ತಾರೆ) ದಾನ ಮಾಡಲಾಗಿದೆ ಎನ್ನಲಾಗಿದ್ದು, ಇದು ಅಪರೂಪದ ಕಲ್ಲಿನ ವಿಗ್ರಹವಾಗಿದೆ‌. ಅಲ್ಲದೆ, ಈ ಬಗ್ಗೆ ತಮಿಳುನಾಡಿನ ಹಿಂದು ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ಮಾಣಿಕ್ಕವೆಲ್ ದೂರು ನೀಡಿ ಗಮನ ಸೆಳೆದಿದ್ದಾರೆ..

ದೇವಾಲಯ ಕಂಡುಬಂದಿಲ್ಲ
ಕೊತ್ತಗೆರೆ ಗ್ರಾಮದಲ್ಲಿ ತಮಿಳು ಶಾಸನ ಇದೆ. ಆದರೆ, ಚೋಳರ ಕಾಲದ ದೇವಾಲಯಗಳು ಕಂಡುಬಂದಿಲ್ಲ. ಗಂಗೇನಹಳ್ಳಿಯಲ್ಲಿ ಮಾಣಿಕ್ಯವೇಲ್‌ ಉಲ್ಲೇಖದಂತೆ ಶಿವಲಿಂಗ, ವೀರಗಲ್ಲು, ಜೈನ ತೀರ್ಥಂಕರನ ಮೂರ್ತಿ, ಕಲ್ಲಿನ ಬಸವಣ್ಣ, ಸೂರ್ಯನ ವಿಗ್ರಹಗಳು ಕಂಡುಬಂದಿವೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಕೇರಳದ ಈ ದೇವಾಲಯದಲ್ಲಿ ಸಂವಿಧಾನವೇ ದೇವರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Lok Sabha Election 2024: ಬಿಜೆಪಿ ಉತ್ತರ ರಾಜ್ಯಗಳಲ್ಲಷ್ಟೇ ಪ್ರಭಾವ ಇರೋ ಪಕ್ಷ, ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ, ತಮ್ಮ ಪಕ್ಷವೂ ಸರ್ವ ವ್ಯಾಪಿಯಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

Koo

ಹುಬ್ಬಳ್ಳಿ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನಿ ಮೋದಿ ಸರ್ಕಾರ ಕಠಿಬದ್ಧವಾಗಿದೆ. ಭ್ರಷ್ಟಾಚಾರ ಎಂದರೆ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ. ಅದನ್ನು ಎಂದಿಗೂ ಮೋದಿ ಸರ್ಕಾರ (Lok Sabha Election 2024) ಸಹಿಸುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ವಿವಿಧ ಸಮುದಾಯಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಗಡಿ ಕಾಯುವ ನಮ್ಮ ಯೋಧರ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಭಾರತದ ಮೇಲೆ ದಾಳಿಯಾದರೆ ಉತ್ತರ ಕೊಡುವುದಕ್ಕೂ ಅವರಿಗೆ ಅಧಿಕಾರವಿರಲಿಲ್ಲ. ಆದರೀಗ ಪುಲ್ವಾಮಾದಂಥ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡುವಂಥ ಬಲಾಢ್ಯ ದೇಶವಾಗಿದೆ. ಭಾರತದ ಮುನ್ನಡೆಗಾಗಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಸರ್ವವ್ಯಾಪಿ ಆಗಿದೆ. ಬಿಜೆಪಿ ಉತ್ತರ ರಾಜ್ಯಗಳಲ್ಲಷ್ಟೇ ಪ್ರಭಾವ ಇರೋ ಪಕ್ಷ, ಮೇಲ್ವರ್ಗದವರ ಪಕ್ಷ ಎನ್ನುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ, ತಮ್ಮ ಪಕ್ಷವೂ ಸರ್ವ ವ್ಯಾಪಿಯಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ | Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

ಬಿಜೆಪಿ ಇಂದು ದಲಿತ, ರೈತ, ಕೂಲಿ ಕಾರ್ಮಿಕ, ಮಹಿಳೆ, ವಿದ್ಯಾರ್ಥಿ-ಯುವ, ನೌಕರ, ಕುಲ ಕಸುಬುದಾರ ಹೀಗೆ ಸರ್ವ ವರ್ಗದವರನ್ನೂ ತಲುಪಿದೆ. ಎಲ್ಲಾ ಸಾಮಾಜಿಕ ಹಿನ್ನೆಲೆಯುಳ್ಳವರೂ ಬಿಜೆಪಿಯಲ್ಲಿ ಇದ್ದಾರೆ. ಉತ್ತರ ರಾಜ್ಯಗಳು ಮಾತ್ರವಲ್ಲ ಇಡೀ ದೇಶಾದ್ಯಂತ ಪಕ್ಷ ಆವರಿಸಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ನಡ್ಡಾ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಜೋಶಿ ಬಣ್ಣಿಸಿದರು.

ಬಿಜೆಪಿ ಎಲ್ಲಾ ವರ್ಗದವರನ್ನೂ ಒಳಗೊಂಡ ಪರಿಣಾಮ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂದು ಬಿಜೆಪಿ ಸರ್ಕಾರವಿದೆ. ಅತ್ಯಂತ ಸಮಚಿತ್ತರಾಗಿ ಕೆಲಸ ಮಾಡುವಂಥ ನಾಯಕ ನಡ್ಡಾ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ಇರುವುದರಿಂದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.

ಧಾರವಾಡದಲ್ಲಿ 25,000 ಕೋಟಿ ರೂ. ಅಭಿವೃದ್ಧಿ ಕಾರ್ಯ

ಮೋದಿ ಅವರ ನಾಯಕತ್ವದಲ್ಲಿ ದೇಶ ಪರಿವರ್ತನೆ ಕಂಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 25,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಹುಬ್ಬಳ್ಳಿ-ಗದಗ ಚತುಷ್ಪಥ, ಹುಬ್ಬಳ್ಳಿ-ಚಿತ್ರದುರ್ಗ 6 ಪಥ ರಸ್ತೆ, ಕಿಮ್ಸ್ ಕಟ್ಟಡ, ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಹೀಗೆ ಅನೇಕನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಲಾಗಿದೆ ಎಂದು ಜೋಶಿ ತಿಳಿಸಿದರು.

ತಲೆ ತಗ್ಗಿಸೋ ಕೆಲಸ ಮಾಡಿಲ್ಲ-ಮಾಡೋದೂ ಇಲ್ಲ:

ಎಂಪಿಯಾಗಿ ಕಳಿಸಿ ಎಂದೂ ಕ್ಷೇತ್ರದ ಜನ ತಲೆ ತಗ್ಗಿಸೋ ಕೆಲಸ ಮಾಡಲ್ಲ ಎಂದು 2004ರಲ್ಲೇ ಲೋಕಸಭೆ ಚುನಾವಣೆಯಲ್ಲಿ ಹೇಳಿದ್ದೆ. ಇಂದಿಗೂ ಅದಕ್ಕೆ ಬದ್ಧವಾಗಿ ನಡೆದುಕೊಂಡಿದ್ದೇನೆ. ಯಾವತ್ತೂ ನಾನು ತಲೆ ತಗ್ಗಿಸೋ ಕೆಲಸ ಮಾಡುವುದಿಲ್ಲ. ಹುಬ್ಬಳ್ಳಿ-ಧಾರವಾಡವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವೆ ಎಂದು ಸಚಿವ ಜೋಶಿ ಭರವಸೆ ನೀಡಿದರು.

ಇದನ್ನೂ ಓದಿ | Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಧಾರವಾಡ ಜಿಲ್ಲಾ ಚುನಾವಣಾ ಸಂಚಾಲಕರಾದ ಮ. ನಾಗರಾಜ್, ಮಾಜಿ ಶಾಸಕರಾದ ಅಶೋಕ್ ಕಾಟವೆ, ಸೀಮಾ ಮಸೂತಿ, ಪಕ್ಷದ ಪ್ರಮುಖರಾದ ಲಿಂಗರಾಜ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Continue Reading

Lok Sabha Election 2024

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

Lok Sabha Election 2024: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾವಿಯೊಬ್ಬರು ಸ್ಪರ್ಧೆ ಮಾಡಿದ್ದಾರೆ. ಇದರಿಂದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಹೆಚ್ಚುವರಿ ಪೊಲೀಸ್‌ ಪಡೆಯನ್ನು ಹಾಗೂ ಅರೆಸೇನಾ ಪಡೆಯನ್ನು ನಿಯೋಜನೆ ಮಾಡಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ನೆರವಾಗಬೇಕು ಎಂದು ಚುನಾವಣಾ ಆಯೋಗಕ್ಕೆ ಡಾ. ಸಿ.ಎನ್. ಮಂಜುನಾಥ್ ಅವರು ಪತ್ರ ಬರೆದಿದ್ದರು.

VISTARANEWS.COM


on

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು (Bangalore Rural Lok Sabha constituency) ಅತಿ ಸೂಕ್ಷ್ಮ ಕ್ಷೇತ್ರವನ್ನಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ (Dr CN Manjunath) ಅವರು ಚುನಾವಣಾ ಆಯೋಗಕ್ಕೆ (Election Commission) ಪತ್ರ ಬರೆದಿದ್ದರು. ಇದರ ಅನುಸಾರ ಈಗ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾವಿಯೊಬ್ಬರು ಸ್ಪರ್ಧೆ ಮಾಡಿದ್ದಾರೆ. ಇದರಿಂದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಹೆಚ್ಚುವರಿ ಪೊಲೀಸ್‌ ಪಡೆಯನ್ನು ಹಾಗೂ ಅರೆಸೇನಾ ಪಡೆಯನ್ನು ನಿಯೋಜನೆ ಮಾಡಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ನೆರವಾಗಬೇಕು ಎಂದು ಚುನಾವಣಾ ಆಯೋಗಕ್ಕೆ ಡಾ. ಸಿ.ಎನ್. ಮಂಜುನಾಥ್ ಅವರು ಪತ್ರ ಬರೆದಿದ್ದರು.

ಅರೆ ಸೇನಾಪಡೆ ನಿಯೋಜನೆಗೆ ಸೂಚನೆ

ಈ ಮನವಿ ಪತ್ರವನ್ನು ಪಡೆದ ರಾಜ್ಯ ಮುಖ್ಯ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಈಗ ತೀರ್ಮಾನ ಹೊರಬಿದ್ದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರ ಅಂತ ಪರಿಗಣಿಸಲಾಗಿದೆ. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಮುಖ್ಯ ಚುನಾವಣಾ ಆಯೋಗವು ಅರೆ ಸೇನಾಪಡೆಯನ್ನು ನೇಮಿಸಲು ಸೂಚಿಸಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಡಿಕೆಶಿ ಜತೆ ಕಾಣಿಸಿಕೊಂಡಿದ್ದ ಸಹ ಶಿಕ್ಷಕ ಅಮಾನತು

ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆ ಸಹ ಶಿಕ್ಷಕ ಕೆ.ರಾಮು ಅಮಾನತುಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಜತೆ ಕಾಣಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕೆ.ರಾಮು ಅವರನ್ನು ಅಮಾನತು ಮಾಡಲಾಗಿದೆ.

ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಕೆ.ಪಿ.ನಂಜುಂಡಿ ಅವರ ಮನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪ್ರತ್ಯಕ್ಷವಾಗಿದ್ದ ಸಹ ಶಿಕ್ಷಕ ಕೆ.ರಾಮು ಅವರು, ಡಿ.ಕೆ.ಶಿವಕುಮಾರ್‌, ಕೆ.ಪಿ. ನಂಜುಂಡಿ ಸೇರಿ ವಿವಿಧ ರಾಜಕೀಯ ನಾಯಕರಿಗೆ ಉಪಾಹಾರ ಬಡಿಸಿದ್ದರು. ಶಿಕ್ಷಕ ಉಪಾಹಾರ ಬಡಿಸುವ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಇಒ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ಅವರು, ತನಿಖೆ ನಂತರ ಸಹ ಶಿಕ್ಷಕ ಕೆ. ರಾಮು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ | Neha Murder Case: ನೇಹಾ ಹತ್ಯೆ ಖಂಡಿಸಿದ ನಟರಾದ ದರ್ಶನ್‌, ರಿಷಬ್‌, ಶಿವಣ್ಣ

ವರದಿ ಪ್ರಸಾರ ಮಾಡಿದ್ದ ವಿಸ್ತಾರ

ಸಹ ಶಿಕ್ಷಕ ರಾಮು ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಹ ಶಿಕ್ಷಕ ರಾಮು ಅವರ ವಿರುದ್ಧ ಬಿಜೆಪಿಯ ವಸಂತಕುಮಾರ್ ಹಾಗೂ ಇತರರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದಾಗ ಅವರಿಗೆ ಶಿಕ್ಷಕ ರಾಮು ಅವರು ಊಟ ಬಡಿಸುತ್ತಿರುವ ಬಗ್ಗೆ ವಿಸ್ತಾರ ವಾಹಿನಿಯಲ್ಲಿ ವರದಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ, ದೂರು ಸಲ್ಲಿಸಿದ್ದರು. ಹೀಗಾಗಿ ಅನುಮತಿ ಪಡೆಯದೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಸಚಿವರ ಹಾಗೂ ರಾಜಕೀಯ ವ್ಯಕ್ತಿಗಳ ಜೊತೆಯಲ್ಲಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆ.ರಾಮು ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

Continue Reading

ಕರ್ನಾಟಕ

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

Neha Murder Case: ಹುಬ್ಬಳ್ಳಿಯಲ್ಲಿ ನೇಹಾ ತಂದೆ ನಿರಂಜನ ಹಿರೇಮಠ, ತಾಯಿ ಗೀತಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರರ್ವಾಲ್ ಅವರು ಸಾಂತ್ವನ ಹೇಳಿದ್ದಾರೆ.

VISTARANEWS.COM


on

JP Nadda
Koo

ಹುಬ್ಬಳ್ಳಿ: ನಗರದ ನೇಹಾ ಹಿರೇಮಠ್ ನಿವಾಸಕ್ಕೆ (Neha Murder Case) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರರ್ವಾಲ್ ಅವರು ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನೇಹಾ ತಂದೆ ನಿರಂಜನ ಹಿರೇಮಠ, ತಾಯಿ ಗೀತಾಗೆ ನಡ್ಡಾ ಹಾಗೂ ರಾಧಾಮೋಹನ್‌ದಾಸ್ ಅವರು ಧೈರ್ಯ ಹೇಳಿದರು.

ರಾಜ್ಯ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಲಿ: ಜೆಪಿ ನಡ್ಡಾ ಆಗ್ರಹ

ನೇಹಾ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜೆ.ಪಿ.ನಡ್ಡಾ ಅವರು, ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಿಸಿದರು.

ನೇಹಾಳಿಗಾದ ದುಸ್ಥಿತಿ, ಅನ್ಯಾಯ ಇನ್ಯಾವ ವಿದ್ಯಾರ್ಥಿನಿ, ಯುವತಿಯರಿಗೂ ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಇಂದು ಇಂಥ ಮತಾಂಧ ಯುವಕರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವಂಥ ಪರಿಸ್ಥಿತಿ ತಲೆದೋರಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ | Love Jihad: ಲವ್ ಜಿಹಾದ್ ಪರ ನಿಂತ ರಾಜ್ಯ ಸರ್ಕಾರ; ನೇಹಾಳ ಮತಾಂತರ ಯತ್ನ ನಡೆಸಿದ್ದ ಫಯಾಜ್‌: ಪ್ರಲ್ಹಾದ್ ಜೋಶಿ

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೇ, ಸಿಮಾ ಮಸೂತಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಲಿಂಗರಾಜ ಪಾಟೀಲ್ ಮತ್ತಿತರರು ಇದ್ದರು.

ನೇಹಾ ಹತ್ಯೆ ಖಂಡಿಸಿ ಮುಸ್ಲಿಂರಿಂದ ಸೋಮವಾರ ಧಾರವಾಡ ಬಂದ್

Neha Murder case Muslims observe Dharwad bandh on Monday

ಧಾರವಾಡ/ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣವನ್ನು (Neha Murder Case) ಧಾರವಾಡ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ. ಈ ಸಂಬಂಧ ಸೋಮವಾರ (ಏಪ್ರಿಲ್‌ 22) ಧಾರವಾಡ ಬಂದ್‌ಗೆ (Dharawada Bandh) ಕರೆ ನೀಡಿದೆ. ಅಲ್ಲದೆ, ನೇಹಾ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ನೇಹಾ ತಂದೆ, ಕಾರ್ಪೋರೇಟರ್‌ ನಿರಂಜನ ಹಿರೇಮಠ ಅವರು, ಇಂಥ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯ ನೇಹಾ ನಿವಾಸದ ಎದುರು ಅಂಜುಮನ್ ಸಂಸ್ಥೆಯ ಮುಖಂಡರು ಸಭೆ ನಡೆಸಿದ್ದಾರೆ. ನೇಹಾ ಕುಟುಂಬಕ್ಕೆ ಭಾರಿ ಆಘಾತವಾಗಿದೆ. ಅವರ ದುಃಖದಲ್ಲಿ ನಾವು ಸಹ ಭಾಗಿಯಾಗಿದ್ದೇವೆ ಎಂದು ಹೇಳಿದರು. ಆಗ ಪ್ರತಿಕ್ರಿಯೆ ನೀಡಿದ ನಿರಂಜನ ಹಿರೇಮಠ, ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ನನ್ನ‌ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಸೋಮವಾರ ಅರ್ಧ ದಿನ ಬಂದ್

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ನೇಹಾ ಹತ್ಯೆ ಪ್ರಕರಣವನ್ನು ಸಮಸ್ತ ಮುಸ್ಲಿಂ ಸಮುದಾಯದವರು ಖಂಡನೆ ಮಾಡುತ್ತೇವೆ. ಪೊಲೀಸರಿಗೂ ಆತನ ಮೇಲೆ ಶಿಕ್ಷೆಗೆ ಮನವಿ ಕೊಟ್ಟಿದ್ದೇವೆ. ಅಪರಾಧ ದಿನ ನಿತ್ಯ ಆಗುತ್ತದೆ. ಆದರೆ, ಈ ಪ್ರಕರಣದಲ್ಲಿ ವಿದ್ಯಾರ್ಥಿನಿ ಮೇಲೆ ಚಾಕು ಹಾಕಿ ಕೊಂದಿರುವುದು ನಮಗೆ ಬಹಳ ನೋವು ತಂದಿದೆ. ನಮ್ಮಲ್ಲಿ ಸಹ ವಿದ್ಯೆ ಕೊಡಲು ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ಯಾವ ಸಂಸ್ಥೆಯಲ್ಲಿಯೂ ಈ ಘಟನೆ ನಡೆಯಬಾರದು. ಯಾವುದೇ ಸಮಾಜದವರು ಇಂಥ ಕೃತ್ಯ ನಡೆಸಿದರೂ ಅಂಥವರಿಗೆ ತಕ್ಕ ಶಿಕ್ಷೆ ಆಗಬೇಕು. ಕಾನೂನು ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ಸಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Lok Sabha Election 2024: ಮೋದಿಯ ಖಾಲಿ ಚೆಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ? ಸಿಎಂ ಸಿದ್ದರಾಮಯ್ಯ

ಪ್ರತಿ ಅಂಗಡಿಯಲ್ಲಿ ಜಸ್ಟಿಸ್‌ ಫಾರ್ ನೇಹಾ ಸ್ಟಿಕ್ಕರ್‌

ಸೋಮವಾರ ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಲಾಗುವುದು. ಈ ವೇಳೆ ಮೌನ ಮೆರವಣಿಗೆ ಇರಲಿದೆ. ಬಳಿಕ ಜಿಲ್ಲಾಧಿಕಾರಿಗೆ ಮನವಿ ಕೊಡುತ್ತೇವೆ. ಆರೋಪಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸುತ್ತೇವೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಸ್ಲಿಂ ಬಾಂಧವರು ಸೇರಿ ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡುತ್ತಿದ್ದೇವೆ. “ಜಸ್ಟಿಸ್‌ ಫಾರ್ ನೇಹಾ” ಎನ್ನುವ ಸ್ಟಿಕ್ಕರ್”ಗಳನ್ನು ಅಂಗಡಿಗೆ ಅಂಟಿಸಲಾಗುವುದು. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಸ್ವಯಂ ಪ್ರೇರಿತ ಬಂದ್ ಮಾಡುತ್ತೇವೆ. ಈ ಬಗ್ಗೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದೇವೆ ಎಂದು ಇಸ್ಮಾಯಿಲ್ ತಮಟಗಾರ ಹೇಳಿದರು.
ಮುಸ್ಲಿಂ ವಕೀಲರು ಕೇಸ್‌ ತೆಗೆದುಕೊಳ್ಳಲ್ಲ

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ನೇಹಾ ಕೊಲೆ ಬಹಳ‌ ದುರ್ದೈವದ ಸಂಗತಿ. ನಾವು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಶೀಘ್ರ ತನಿಖೆ ಆಗಬೇಕು, ಹೀನ ಕೆಲಸ ಮಾಡಿದ ಹುಡುಗನಿಗೆ ಶಿಕ್ಷೆ ಆಗಬೇಕು. ನೇಹಾ ನಮ್ಮ ಮಗಳು ಎಂದು ಭಾವಿಸಿದ್ದೇವೆ. ನಿರಂಜನ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇದರ‌ ಹಿಂದೆ ಯಾರಾದರೂ ಇದ್ದರೆ ಪತ್ತೆ ಹಚ್ಚಬೇಕು. ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡಿ ಕೇಸ್ ಕೊಡಬೇಕು. 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು. ಮುಸ್ಲಿಂ ವಕೀಲರು ಈ ಕೇಸ್‌ನಲ್ಲಿ ಭಾಗಿಯಾಗಬಾರದು. ಈ ಕುರಿತು ಅಂಜುಮನ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾವು ನಿರಂಜನ್ ಕುಟುಂಬದ ಜತೆಗೆ ಇದ್ದೇವೆ. ಇಂತಹ ಹೀನ ಕೆಲಸ ಮಾಡಬೇಕು ಎಂದು ಯಾವುದೇ ಧರ್ಮ ಹೇಳಲ್ಲ. ಅವನಿಗೆ ಶಿಕ್ಷೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳಿದರು.

Continue Reading

Lok Sabha Election 2024

Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

Lok Sabha Election 2024: ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

VISTARANEWS.COM


on

Lok Sabha Election 2024 Dinesh GunduRao attack on Central Government
Koo

ಬೆಂಗಳೂರು: 10 ವರ್ಷಗಳಲ್ಲಿ ಅಚ್ಚೇ ದಿನಗಳನ್ನು ತರದೇ ಈಗ 2047ರ ವರೆಗೆ ಸಮಯ ಕೇಳುತ್ತಿರುವ ಮೋದಿಯವರಿಗೆ ಯಾವ ನೈತಿಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಆರೋಪ – ಪ್ರತ್ಯಾರೋಪಗಳು ನಡೆಯುತ್ತಿದ್ದು, ಬಿಜೆಪಿ ಆರೋಪಗಳಿಗೆ ಸಚಿವ ದಿನೇಶ್‌ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್, ಮೋದಿಯವರು ಮೊದಲು 5 ವರ್ಷ ಕೇಳಿದ್ದರು. ಆದರೆ ಅವರು ಅಧಿಕಾರಕ್ಕೇರಿ 10 ವರ್ಷಗಳೇ ಕಳೆದಿವೆ. ಈಗ ಮತ್ತೆ 23 ವರ್ಷ ಸಮಯ ಕೇಳ್ತಿದ್ದಾರೆ. ಅಂದರೆ 10 ವರ್ಷಗಳಲ್ಲಿ ಜನರ ಬದುಕಿನಲ್ಲಿ ಅಚ್ಚೇ ದಿನಗಳು ಬರಲಿಲ್ಲ ಎಂಬುದನ್ನ ಮೋದಿಯವರೇ ಒಪ್ಪಿಕೊಂಡಂತಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

ಶೇ. 70ರಷ್ಟು ಹಣವನ್ನು ನಾವೇ ಕೊಡುತ್ತಿದ್ದೇವೆ

ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ನೈಜವಾಗಿ ಇದು ಆರೋಗ್ಯ ಕರ್ನಾಟಕ ಯೋಜನೆ. ಅದನ್ನೇ ಅವರು ಆಯುಷ್ಮಾನ್ ಭಾರತ್ ಎಂದು ನಾಮಕರಣ ಮಾಡಿಕೊಂಡರು.‌ ವಾಸ್ತವವಾಗಿ ನೋಡಿದರೆ ಆಯುಷ್ಮಾನ್ ಭಾರತ್ ಯೋಜನೆಗೆ ಶೇ. 70ರಷ್ಟು ಹಣ ಕೊಡುತ್ತಿರುವುದು ಕರ್ನಾಟಕ ಸರ್ಕಾರ. ಕೇಂದ್ರದಿಂದ ಬರುತ್ತಿರುವುದು ಕೇವಲ 30 ರಷ್ಟು ಮಾತ್ರ. ಇಲ್ಲಿಯವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 1920 ಕೋಟಿ ರೂಪಾಯಿ ಮಾತ್ರ ಕೇಂದ್ರದಿಂದ ಬಂದಿದೆ. ಆದರೆ, 4790 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರವೇ ಭರಿಸಿದೆ. ಶೇ. 70ರಷ್ಟು ಹಣವನ್ನು ನಾವೇ ಕೊಡುತ್ತಿರುವಾಗ ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಮೋದಿ ಕಡಿಮೆ ಮಾಡಿದ್ದು 3 ರೂಪಾಯಿ

ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳನ್ನು ಮೋದಿಯವರು ಒಂದು ರೂಪಾಯಿ ಕೂಡ ಹೆಚ್ಚು ಮಾಡಿಲ್ಲ. ವೃದ್ಧಾಪ್ಯ ವೇತನದಲ್ಲಿ ರಾಜ್ಯ ಸರ್ಕಾರದ್ದು 400 ರೂಪಾಯಿ ಆಗಿದ್ದರೆ, ಕೇಂದ್ರದ್ದು 200 ರೂಪಾಯಿ ಮಾತ್ರ. ವಿಧವಾ ವೇತನ ಕೇಂದ್ರದ್ದು 500 ರಾಜ್ಯದ್ದು 700 ರೂಪಾಯಿ ಆಗಿದೆ. ವಿಕಲಚೇತನ ಕೇಂದ್ರದ್ದು 300 ರೂಪಾಯಿಯಾದರೆ, ರಾಜ್ಯದ್ದು 3900 ರೂಪಾಯಿ ಆಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಕೇಂದ್ರದ್ದು ಶೂನ್ಯ. ನಮ್ಮದು 1200 ರೂಪಾಯಿ ಆಗಿದೆ. ಮನಸ್ವಿನಿ ಕೇಂದ್ರದ್ದು ಶೂನ್ಯ. ನಮ್ಮದು 800 ರೂಪಾಯಿ ಆಗಿದೆ.‌ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ರಾಜ್ಯ ಸರ್ಕಾರ 2000 ರೂ. ನೀಡುತ್ತಿದೆ ಕೇಂದ್ರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬಡವರಿಗೆ ಅಕ್ಕಿ ಯನ್ನ 30 ರೂಪಾಯಿಯಿಂದ 3 ರೂ. ಕೊಡುವ ತೀರ್ಮಾನವನ್ನು ಫುಡ್ ಸೆಕ್ಯುರಿಟಿ ಕಾಯ್ದೆ ತರುವ ಮೂಲಕ ಮಾಡಿದ್ದು ಕಾಂಗ್ರೆಸ್ ಯು.ಪಿ.ಎ ಸರ್ಕಾರ. 3 ರೂಪಾಯಿಯನ್ನು ಕಡಿಮೆ ಮಾಡಿ ಅದೇ ದೊಡ್ಡ ಯೋಜನೆ ಎಂದು ಮೋದಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಮೋದಿಯವರು ಹೇಳಿಕೊಳ್ಳುತ್ತಿದ್ದಾರೆ. ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದ್ಧು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ. ಅದಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್. ವಿಶೇಷವಾಗಿ ಕರ್ನಾಟಕಕ್ಕೆ ಶೇ 22 ರಷ್ಟು ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಕ್ಯಾಶ್‌ಲೆಸ್ ಮಾಡಲು ರೂಪಾಯಿ ಅಪಮೌಲ್ಯ ಮಾಡಿದ್ದೇನೆ ಎಂದು ಮೋದಿಯವರು ಹೇಳಿಕೊಂಡರು. ರೂಪಾಯಿ ಅಪಮೌಲ್ಯದಿಂದ ಕ್ಯಾಶ್ ವಹಿವಾಟನ್ನು ಕಡಿಮೆ ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಬಹಿರಂಗವಾಗಿ ಮೋದಿಯವರು ಮಾತನಾಡಿದ್ದರು. ಆದರೆ, ವಿಪರ್ಯಾಸ ಮೊದಲು 15 ಲಕ್ಷ ಕೋಟಿಯಷ್ಟಿದ್ದ ಕ್ಯಾಶ್ ವ್ಯವಹಾರ ಇಂದು 35 ಲಕ್ಷ ಕೋಟಿಯಷ್ಟು ಕ್ಯಾಶ್ ದೇಶದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯರಿಂದ ಬದುಕಿನ ಗ್ಯಾರಂಟಿಯೇ ಇಲ್ಲವಾಗಿದೆ: ಬಿ.ಎಸ್.‌ ಯಡಿಯೂರಪ್ಪ ವಾಗ್ದಾಳಿ

ಒಬ್ಬ ಪ್ರಧಾನಿಯವರು ಹೀಗೆ ಮಾತನಾಡುವುದು ಸರಿಯಲ್ಲ

ಕರ್ನಾಟಕದಿಂದ ಹೆಚ್ಚು ಲಾಭ ಪಡೆಯುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದೇನು. ಮನೆಕಟ್ಟಲು ಕೊಡುವ ಹಣದಲ್ಲೂ ಶೇ. 18ರಷ್ಟು ಜಿಎಸ್‌ಟಿ ಪಡೆಯುತ್ತಾರೆ. ಬೆಂಗಳೂರಿನ ನೀರಿನ ಬವಣೆ ಬಗ್ಗೆ ಮಾತಾನಾಡುತ್ತಾರೆ. ಐಟಿ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಮೋದಿಯವರು ಹೇಳಿ ಹೋಗಿದ್ದಾರೆ. ಹಾಗೆ ಹೇಳಲು ಇವರಿಗೆ ಯಾವ ಅರ್ಹತೆ ಇದೆ. ಬೆಂಗಳೂರನ್ನು ಐಟಿ ಸಿಟಿಯನ್ನಾಗಿ ಮೋದಿಯವರು ಮಾಡಿದ್ರಾ? ಕರ್ನಾಟಕದಲ್ಲಿ ಬರ ಇರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಬೆಂಗಳೂರಿನಿಂದ ಹೆಚ್ಚು ತೆರಿಗೆ ಪಡೆದು ಈಗ ಬೆಂಗಳೂರನ್ನು ಟೀಕಿಸುತ್ತಿದ್ದಾರೆ. ಒಬ್ಬ ಪ್ರಧಾನಿಯವರು ಹೀಗೆ ಮಾತನಾಡುವುದು ಸರಿಯಲ್ಲ. ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದಲ್ಲಿ ಬಿಜೆಪಿ 200 ಸ್ಥಾನ ಗಳಿಸುವುದು ಕಷ್ಟ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌

ಚೊಂಬನ್ನು ಅಕ್ಷಯ ಪಾತ್ರೆ ಎನ್ನುವ ದೇವೇಗೌಡರು ರಾಜ್ಯದ ಹಿತ ಮರೆತರೇ?

ಕರ್ನಾಟಕವನ್ನು ಮೋದಿಯವರು ಕಡೆಗಣಿಸಿರುವುದು ಸ್ಪಷ್ಟ. ತೆರಿಗೆಯಲ್ಲಾದ ಅನ್ಯಾಯ ಸೇರಿದಂತೆ ಯೋಜನೆಗಳಲ್ಲಿ ಕೇಂದ್ರ ನಮ್ಮ ರಾಜ್ಯಕ್ಕೆ ಅತಿ ಕಡಿಮೆ ಅನುದಾನ ಕೊಡುತ್ತಿರುವುದನ್ನು ಅಂಕಿ ಅಂಶಗಳ ಸಮೇತ ಕಾಂಗ್ರೆಸ್ ಜನರ ಮುಂದಿಟ್ಟಿದೆ. ಹೀಗಾಗಿಯೇ ಮೋದಿಯವರಿಗೆ ಕರ್ನಾಟಕದಲ್ಲಿ ಚೊಂಬು ತೋರಿಸಿದ್ದೇವೆ. ಆದರೆ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಕರೆದಿದ್ದಾರೆ. ಅಕ್ಷಯ ಪಾತ್ರೆ ಗುಜರಾತ್ ಉತ್ತರ ಪ್ರದೇಶಕ್ಕಿರಬಹುದು. ಆದರೆ ಕರ್ನಾಟಕಕ್ಕೆ ಮೋದಿಯವರು ಕೊಟ್ಟಿದ್ದು ಚೊಂಬು. ದೇವೇಗೌಡರು ಕರ್ನಾಟಕದ ಹಿತವನ್ನ ಮರೆತು ಹೀಗೆ ಮಾತಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಹೇಳಿದರು.

Continue Reading
Advertisement
Narendra modi
ದೇಶ17 mins ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Bulldozer Justice
ದೇಶ44 mins ago

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

ಕರ್ನಾಟಕ44 mins ago

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Car Crash
ಕ್ರೀಡೆ1 hour ago

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Yuva Rajkumar
ಸಿನಿಮಾ2 hours ago

Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 20242 hours ago

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

JP Nadda
ಕರ್ನಾಟಕ2 hours ago

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

IPL 2024
ಪ್ರಮುಖ ಸುದ್ದಿ2 hours ago

IPL 2024 : ಕೆಕೆಆರ್​ ವಿರುದ್ಧ ಆರ್​​ಸಿಬಿ ವೀರೋಚಿತ 1 ರನ್​ ಸೋಲು; ಫಾಫ್​ ಬಳಗಕ್ಕೆ ಏಳನೇ ಮುಖಭಂಗ

Amit shah
Latest2 hours ago

Amith shah: ಅಮಿತ್ ಶಾ ಒಟ್ಟು ಆಸ್ತಿ ಎಷ್ಟು? ಅವರ ಆದಾಯದ ಮೂಲ ಯಾವುದು?

Lok Sabha Election 2024 Dinesh GunduRao attack on Central Government
Lok Sabha Election 20243 hours ago

Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ1 day ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌