Fire breaks out in a moving school bus, 30 children escape unhurtAccident News: ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; 30 ಮಕ್ಕಳು ಅಪಾಯದಿಂದ ಪಾರು - Vistara News

ಉಡುಪಿ

Accident News: ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; 30 ಮಕ್ಕಳು ಅಪಾಯದಿಂದ ಪಾರು

Accident News: ಬಳ್ಳಾರಿಯಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ 30 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

Fire breaks out in a moving school bus, 30 children escape unhurt
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ/ ಉಡುಪಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ತೆಕ್ಕಲಕೋಟೆ ನಡುವೆ ಶಾಲಾ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ವಾಹನ ಹೊತ್ತಿ (Accident News) ಉರಿದಿದೆ. ಸಿರುಗುಪ್ಪ ಪಟ್ಟಣದ ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದರು.

ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ ನಿಲ್ಲಿಸಿ, ಕೂಡಲೇ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಪರೀಕ್ಷೆ ಬರೆದು ಮನೆಗೆ ವಾಪಸ್‌ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಬಳಿಕ ಮಕ್ಕಳನ್ನು ಬೇರೆ ವಾಹನದಲ್ಲಿ ರವಾನೆ ಮಾಡಲಾಗಿದೆ. ಅದೃಷ್ಟವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಸರಣಿ ಅಪಘಾತ

ಸರಣಿ ಅಪಘಾತದಲ್ಲಿ ಬೈಕ್‌ ಸವಾರ ಮೃತ್ಯು

ಉಡುಪಿಯ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕುಂಭಾಶಿ ಪಾಕಶಾಲಾ ಹೋಟೆಲ್‌ ಸಮೀಪ ಹೋಂಡಾ ಡಿಯೋ ದ್ವಿಚಕ್ರ ವಾಹನ, ಹ್ಯುಂಡೈ ಗ್ಯಾಂಡ್ ಐ10 ಕಾರು ಹಾಗೂ ಬಸ್‌ನ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ಸಾವಿಗೀಡಾಗಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ಕೊರವಡಿ ಮಾಣಿಮನೆ ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ (28) ಹಾಗೂ ವಿಶ್ಲೇಶ್ ಪೂಜಾರಿ (27) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹೊತ್ತಿ ಉರಿದ ಗ್ಯಾರೇಜ್‌

ಸ್ಕೂಟರ್‌ ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಜಿಗಣಿ ಎಪಿಸಿ ವೃತ್ತದಲ್ಲಿ ಸ್ಟಿಕ್ಕರ್ ಡಿಸೈನ್ ಅಂಗಡಿ ಹಾಗೂ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿ ಆಗಿದೆ.

ಇದನ್ನೂ ಓದಿ: Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಪಕ್ಕದ ಅಂಗಡಿಗೂ ಬೆಂಕಿ ಆವರಿಸಿಕೊಂಡು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಗೋಪಿ ಎಂಬುವವರಿಗೆ ಸೇರಿದ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿಯಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

ಸಿಲಿಂಡರ್‌ ಸ್ಫೋಟ

ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟ

ಕೊಪ್ಪಳದ ಕಾರಟಗಿ ತಾಲೂಕಿ‌‌ನ ಬೆನ್ನೂರು ಗ್ರಾಮದಲ್ಲಿ ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಯಮನೂರಪ್ಪ ಎಂಬವರಿಗೆ ಸೇರಿದ ಟೀ ಸ್ಟಾಲ್‌ನಲ್ಲಿ ಗ್ಯಾಸ್ ಪೈಪ್ ಲೀಕೇಜ್‌ ಆಗಿದ್ದು, ಅದು ಸ್ಫೋಟಗೊಂಡಿದೆ. ಸಿಲೆಂಡರ್ ಸ್ಫೋಟಗೊಳ್ಳುತ್ತಲೇ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸಿಲೆಂಡರ್ ಸ್ಫೋಟಗೊಂಡಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Rain News: ರಾಜ್ಯದ ಹಲವೆಡೆ ಮಳೆಯು ಅಬ್ಬರಿಸುತ್ತಿದೆ. ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆಯಾಗುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಶುಕ್ರವಾರವೂ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಜತೆಗೆ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.

ಉತ್ತರ ಒಳನಾಡಿನ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಲಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಚದುರಿದಂತೆ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: IPL‌ Betting: ಸಾಲಗಾರರ ಕಾಟ; ಹೆಂಡತಿ-ಮಕ್ಕಳಿಗೆ ವಿಷವಿಕ್ಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ

ತಾಪಮಾನದ ಮುನ್ಸೂಚನೆ

ಏಪ್ರಿಲ್ 19 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 2 ದಿನಗಳಲ್ಲಿ ಗರಿಷ್ಟ ಉಷ್ಣಾಂಶದಲ್ಲಿ ಹೆಚ್ಚಿನ ಬಡಲಾವಣೆ ಇರುವುದಿಲ್ಲ. ನಂತರದ 3 ದಿನಗಳವರೆಗೆ ಕ್ರಮೇಣ 2-3 ಡಿ.ಸೆ ಏರಿಕೆಯಾಗುತ್ತದೆ.

ಗುಡುಗು ಮುನ್ನೆಚ್ಚರಿಕೆ

ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ಜತೆಗೆ ಮೇಲ್ಮೈ ಮಾರುತಗಳು ಬಲವಾದ ಮತ್ತು ರಭಸದಿಂದ ಕೂಡಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಯಲ್ಲಿ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಸಂಜೆ/ರಾತ್ರಿ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಗರಿಷ್ಠ ಉಷ್ಣಾಂಶ 37 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕೊಪ್ಪಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; ಹೊತ್ತಿ ಉರಿದ ತೆಂಗಿನ ಮರ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

Karnataka Weather : ಹಲವೆಡೆ ಗುಡುಗು ಸಿಡಿಲು ಸಹಿತ (Rain News) ಭಾರಿ ಮಳೆಯಾಗಿದ್ದು, ಸಾವು-ನೋವಿಗೆ ಕಾರಣವಾಗಿದೆ. ಸಿಡಿಲು ಬಡಿದು ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟರೆ, ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

VISTARANEWS.COM


on

By

Karnataka Weather
Koo

ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು (Rain News) ಬಲಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಬಳಿ ಘಟನೆ (Karnataka Weather Forecast) ನಡೆದಿದೆ. ಕೊರಡಕೇರಿಯ ಅಮೋಘಸಿದ್ದಯ್ಯ ಗುರುವಿನ (32) ಮೃತ ದುರ್ದೈವಿ.

ಅಮೋಘಸಿದ್ದಯ್ಯ ಕೊರಡಕೇರಿಯಿಂದ ಜೂಲಕಟ್ಟಿಯಲ್ಲಿ ಕಟ್ಟಿಗೆ ಕಡಿಯಲು ಕೂಲಿ ಕೆಲಸಕ್ಕೆ ಹೋಗಿದ್ದರು. ಗುರುವಾರ ಮಧ್ಯಾಹ್ನ ದಿಢೀರ್‌ ಶುರುವಾದ ಮಳೆ- ಗಾಳಿ ಜತೆಗೆ ಸಿಡಿಲಿ ಬಡಿದು ಮೃತಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗದಗನಲ್ಲೂ ಬಿರುಗಾಳಿ ಸಹಿತ ಮಳೆ

ಮುಂಗಾರಿಗೂ ಮುನ್ನ ಗದಗ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ. ಬಿರುಗಾಳಿ ಮಳೆಗೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿ‌‌ನ ಪರಸಾಪೂರ ಬಳಿ ಘಟನೆ ನಡೆದಿದೆ. ರಸ್ತೆ ಮೇಲೆ ಮರ ಹಾಗೂ ವಿದ್ಯುತ್‌ ಕಂಬ ಧರೆಗುರುಳಿದ ಕಾರಣದಿಂದ ಕೆಲಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಸ್ಥಳೀಯರ ಸಹಾಯದಿಂದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ‌ ಅನುಕೂಲ ಮಾಡಿಕೊಡಲಾಯಿತು.

ಇದನ್ನೂ ಓದಿ: Fraud Case : ಚಿಟ್‌ ಫಂಡ್‌ ಹೆಸರಿನಲ್ಲಿ ದಂಪತಿ ಕೋಟ್ಯಂತರ ರೂ. ವಂಚನೆ; ಬೀದಿಗೆ ಬಿದ್ದರು ಚೀಟಿದಾರರು

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಧಾರವಾಡದ ಕಲಘಟಗಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕಲಘಟಗಿಯ ದೇವರಕೊಂಡ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರಗೌಡ ಶಿವನಗೌಡರ ಎಂಬುವರ ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಸಮಯದಲ್ಲಿ ಮನೆ ಮುಂದೆ ಅಕ್ಕ-ಪಕ್ಕ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಮತ್ತೊಂದೆಡೆ ಧಾರವಾಡದ ಅಣ್ಣಿಗೇರಿಯ ರಾಜರಾಜೇಶ್ವರಿ ನಗರದಲ್ಲೂ ಮನೆಯ ಪಕ್ಕದಲ್ಲಿಯೇ ಇದ್ದ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿತ್ತು. ಮರಕ್ಕೆ ಬೆಂಕಿ ಆವರಿಸುತ್ತಿದಂತೆಯೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕೆಲಸ ಮಾಡಿದರು.

ಧಾರವಾಡದಲ್ಲಿ ಆಲಿಕಲ್ಲು ಮಳೆ

ಧಾರವಾಡ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆಯಾಗಿದೆ. ನಗರದಲ್ಲಿ ಮಧ್ಯಾಹ್ನದವರೆಗೆ ಉರಿ ಬಿಸಿಲು ಇತ್ತು, ನಂತರ ಸಂಪೂರ್ಣ ಮೋಡ ಕವಿದ ವಾತಾವರಣದೊಂದಿಗೆ ಮಳೆಯು ಅಬ್ಬರಿಸಿತ್ತು. ವಿಜಯನಗರದ ನಾನಾ ಕಡೆ ಮಳೆರಾಯ ಕೃಪೆ ತೋರಿದ್ದಾನೆ. ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹೊಸಪೇಟೆಯ ಮರಿಯಮ್ಮನಹಳ್ಳಿ, ದೇವಲಾಪುರ ಸೇರಿದಂತೆ ನಾನಾ ಕಡೆ ಉತ್ತಮ ಮಳೆಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಸಿಡಿಲು ಗುಡುಗು ಗಾಳಿ ಸಹಿತ ಭಾರೀ ಮಳೆಗೆ ಮರಗಳು ಉರುಳಿದವು. ಬಿರುಗಾಳಿಗೆ ಹಾಲಸ್ವಾಮಿ ಮಠದ ಬಳಿ, ಯಲ್ಲಾಪುರ ರಸ್ತೆ ಮೇಲೆ ಮರ ನೆಲಕ್ಕೆ ಉರುಳಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲೂಕು ಪಂ. ಆವರಣದಲ್ಲಿ ಎರಡು ಮರಗಳು ಕಳಚಿ ಬಿದ್ದಿತ್ತು. ಮಂಡ್ಯದ ಮಳವಳ್ಳಿಯ ಕೆಆರ್ ಪೇಟೆಯಲ್ಲಿ ಮೊದಲ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಬೃಹತ್ ಕಲ್ಲೊಂದು ಕಾರಿನ ಮೇಲೆ ಬಿದ್ದು, ಜಖಂಗೊಂಡಿರುವ ಘಟನೆ ವಿಜಯಪುರ ನಗರದ ಜೆಎಂ ರಸ್ತೆಯಲ್ಲಿ ನಡೆದಿದೆ.‌ ಮಹತ್ತರ ಮಹಲ್‌ನ ಗೋಡೆಯ ಬೃಹತ್ ಕಲ್ಲು ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಭಾರಿ ಮಳೆ, ಗಾಳಿಯ ವೇಳೆ ಸಿಡಿಲು ಬಡಿದು ಈ ಅವಘಡ ಆಗಿದೆ. ಗೋಳಗುಮ್ಮಟ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಭಾರಿ ಮಳೆ ಮುನ್ಸೂಚನೆ

ಮುಂದಿನ 3 ಗಂಟೆಗಳಲ್ಲಿ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Lok Sabha Election 2024: ಮನೆಯಲ್ಲೇ ಮತ ಹಾಕಿದ ಬಳಿಕ ಬಂತು ಮೃತ್ಯು! ಎದೆನೋವು ಇದ್ದರೂ ವೋಟಿಂಗ್‌ಗೆ ಕಾದ ಮಹಿಳೆ!

Lok Sabha Election 2024: ಮತದಾನದ ದಿನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು.

VISTARANEWS.COM


on

lok sabha election 2024 senior citizen death after voting
Koo

ಉಡುಪಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮನೆಯಲ್ಲಿ ಮತದಾನ (Voting) ಮಾಡಿದ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಸಾವಿನ ಮುನ್ನದ ಕ್ಷಣಗಳಲ್ಲೂ ಹಕ್ಕು ಚಲಾಯಿಸಿದ ನಿರ್ವಹಿಸಿದ ಹಿರಿಯ ನಾಗರಿಕರ (Senior Citizen) ಈ ಕರ್ತವ್ಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

ಪಿ.ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟ ಹಿರಿಯ ಜೀವ. ಇವರು ಬ್ರಹ್ಮಾವರ ತಾಲೂಕು ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿದ್ದಾರೆ. ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿರುವ ʼಮನೆಯಿಂದ ಮತʼ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು.

ಮತದಾನದ ದಿನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋದಮ್ಮ ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇನ್ನೊಂದೇ ದಿನ ಅವಕಾಶ

ಲೋಕಸಭೆ ಚುನಾವಣೆಯ (Lok Sabha Election 2024) ʼಅಂಚೆ ಮತದಾನʼ (Postal ballet) ಕಾರ್ಯಕ್ರಮ ಏಪ್ರಿಲ್‌ 13ರಿಂದ ಆರಂಭವಾಗಿದ್ದು, ಏಪ್ರಿಲ್ 18ರವರೆಗೆ ನಡೆಯುತ್ತಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು (Senior citizen) ಹಾಗೂ ಹಾಗೂ ವಿಶೇಷ ಚೇತನರಿಗೆ (Specially abled) ಮನೆಯಿಂದಲೇ ಅಂಚೆ ಮತದಾನ ಮಾಡುವ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.

ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡುತ್ತದೆ. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ತಂಡ ಭೇಟಿ ನೀಡಲಿದ್ದು, ಜೊತೆಗೆ ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಅಬ್ಸರ್ವರ್ ಕಡ್ಡಾಯವಿದೆ. ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲನೆ ಮಾಡಲಿದ್ದು, ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಈ ಎಲ್ಲಾ ಪ್ರಕ್ರಿಯೆ ವೀಡಿಯೋಗ್ರಫಿ ಮೂಲಕ ಕಡ್ಡಾಯ ಸೆರೆ ಹಿಡಿಯಲಾಗುತ್ತದೆ. ಪ್ರತಿ ಮತದಾರರ ಮನೆಗೆ ಎರಡು ಬಾರಿ ಟೀಮ್‌ ಭೇಟಿ ನೀಡಲಿದ್ದು, ಎರಡು ಬಾರಿಯೂ ಮತದಾನ ಪ್ರಕ್ರಿಯೆ ನಡೆಯದೇ ಇದ್ದರೆ ಮತ್ತೆ ಮತದಾನ ನಡೆಸಲು ಅವಕಾಶವಿರುವುದಿಲ್ಲ. ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ.

ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ. ಆದರೆ, ವೋಟರ್ ಐಟಿ ಕಾರ್ಡ್‌ ಅಥವಾ ಮತದಾರರ ಫೋಟೋ ಸಹಿತ ಗುರುತಿನ ಚೀಟಿ ಕಾಣೆಯಾಗಿದ್ದರೆ ಮತದಾನ ಮಾಡಲು ಅವಕಾಶ ಇದೆ. ಆದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇ ಬೇಕು. ಮತದಾರರು ಚುನಾವಣಾ ಆಯೋಗ ಪಟ್ಟಿ ಮಾಡಿರುವ 14 ವಿಧದ ಫೋಟೋ ಸಹಿತ ಗುರುತಿನ ಚೀಟಿಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಫೋಟೋ ತೋರಿಸುವ ಅಗತ್ಯ ಇಲ್ಲ. ಆದರೆ, ಇವೆಲ್ಲವೂ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದಾಗ ಮಾತ್ರ ಸಾಧ್ಯ.

ಇದನ್ನೂ ಓದಿ: Lok Sabha Election 2024: ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಅಂಚೆ ಮತದಾನ ಸೌಲಭ್ಯ; ಯಾರಿಗೆಲ್ಲ ಇದೆ ಅವಕಾಶ?

Continue Reading

ಮಳೆ

Karnataka Weather : ರಭಸವಾದ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ; ಇನ್ನೊಂದು ವಾರ ಈ ಜಿಲ್ಲೆಗಳಿಗೆ ಅಲರ್ಟ್‌

Rain News : ಈ ವಾರ ಪೂರ್ತಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಆದರೆ ಕರಾವಳಿಯಲ್ಲಿ ಬಿಸಿ ಹಾಗೂ ಆರ್ದ್ರತೆ ವಾತಾವರಣ ಮೇಲುಗೈ ಸಾಧಿಸಲಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಈ ಪ್ರದೇಶದ ಉಳಿದ ಭಾಗಗಳಲ್ಲಿ ಒಣ ಹವೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಶುಷ್ಕ ವಾತಾವರಣ ಇರಲಿದೆ. ಇತ್ತ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಅಲ್ಲಲ್ಲಿ ಸಣ್ಣ ಮಳೆಯಾಗಬಹುದು.

ಬೆಂಗಳೂರು ಸೇರಿ ಹಲವೆಡೆ ಒಣ ಹವೆ

ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲೂ ಆಕಾಶವು ನಿರ್ಮಲವಾಗಿರಲಿದೆ. ಯಾವುದೇ ಮಳೆಯಾಗುವ ಮುನ್ಸೂಚನೆ ಇಲ್ಲ.

ಹೀಟ್‌ ವೇವ್‌ ಅಲರ್ಟ್‌

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಹವಾಮಾನದ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಖ್ಯವಾಗಿ ಏಪ್ರಿಲ್ 18 ರಿಂದ 20 ರವರೆಗೆ ಇದೇ ಹವಾಮಾನ ಇರಲಿದೆ.

ಬಿರುಗಾಳಿ ಎಚ್ಚರಿಕೆ

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇನ್ನು ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Oil Pulling: ಆಯಿಲ್‌ ಪುಲ್ಲಿಂಗ್‌; ನಿಮ್ಮ ಬಾಯಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಇಲ್ಲಿದೆ!

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌


ಈ ಸೀಸನ್‌ನ ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಕ್ರಿಸ್ಟಲ್‌ ಅಥವಾ ಅಮೆರಿಕನ್‌ ಡೈಮಂಡ್‌ ಹೊಂದಿರುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ.

Summer Fashion

ಏನಿದು ವಾಟರ್ಫಾಲ್‌ ಇಯರಿಂಗ್ಸ್‌ ?

ನೋಡಲು ಥೇಟ್‌ ಜಲಪಾತದಂತೆ ಕಾಣಿಸುವ ಈ ಹ್ಯಾಂಗಿಂಗ್ಸ್‌ನಂತಹ ಕಿವಿಯೊಲೆಗಳು ನೋಡಲು ವಾಟರ್‌ಫಾಲ್‌ನಂತೆ ಕಾಣುತ್ತವೆ. ಹಾಗಾಗಿ ಇವನ್ನು ವಾಟರ್‌ಫಾಲ್‌ ಇಯರಿಂಗ್ಸ್‌ ಎನ್ನಲಾಗುತ್ತದೆ. ಕಿವಿಗೆ ಧರಿಸಿದಾಗ ಇಳೆ ಬೀಳುವ ಲೇಯರ್‌ನಂತಹ ಕ್ರಿಸ್ಟಲ್‌ ಸರಪಳಿಗಳು ವಾಟರ್‌ಫಾಲ್‌ನಂತೆ ಕಾಣಿಸುತ್ತವೆ. ಈ ವಿನ್ಯಾಸದಲ್ಲೆ ಇದೀಗ ಸಾಕಷ್ಟು ಡಿಸೈನ್‌ನವು ಆಕ್ಸೆಸರೀಸ್‌ ಲೋಕಕ್ಕೆ ಬಂದಿವೆ. ಮೈಕ್ರೋ ಕ್ರಿಸ್ಟಲ್ಸ್‌ ಅಂದರೇ, ಅಮೆರಿಕನ್‌ ಡೈಮಂಡ್‌ ಅಥವಾ ಆರ್ಟಿಫಿಷಿಯಲ್‌ ಅಮೆರಿಕನ್‌ ಡೈಮಂಡ್‌ ಹೊಂದಿರುವ ನಾಲ್ಕೈದು ಲೇಯರ್‌ ಹೊಂದಿರುವಂತಹ ಇಳೆ ಬೀಳುವಂತಹ ಇಯರಿಂಗ್‌ಗಳು ವೈಟ್‌ ಶೇಡ್‌ನಲ್ಲಿ ಲಭ್ಯ. ಇದೀಗ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರಕುತ್ತಿವೆ. ಲೈಟ್‌ ಪಿಂಕ್‌, ಪೀಚ್‌, ಬೀಚ್‌ ಬ್ಲ್ಯೂ, ಸ್ಕೈ ಬ್ಲ್ಯೂ, ಪಿಸ್ತಾ ಗ್ರೀನ್‌ ಶೇಡ್‌ನವು ಹೆಚ್ಚು ಪಾಪುಲರ್‌ ಆಗಿವೆ. ಹುಡುಗಿಯರನ್ನು ಸೆಳೆದಿವೆ.

Summer Fashion

ಪಾರ್ಟಿವೇರ್‌ ಆಕ್ಸೆಸರೀಸ್‌

ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಗೆ ಸೇರುವ ಈ ವಾಟರ್‌ ಫಾಲ್‌ ಇಯರಿಂಗ್‌ಗಳು ಕೆಲವು ಮೇಲ್ಭಾಗದಲ್ಲಿ ಬಿಗ್‌ ಸ್ಟೋನ್‌ ಅಥವಾ ಕಲರ್‌ಫುಲ್‌ ಇಮಿಟೇಡ್‌ ಸ್ಟೋನ್ಸ್‌ ಹೊಂದಿರುತ್ತವೆ. ಇಲ್ಲವೇ ಬೀಡ್ಸ್‌ ಅಥವಾ ಪರ್ಲ್‌ ಹೊಂದಿರುತ್ತವೆ. ಅದರ ಕೆಳಗೆ ಸುಮಾರು ನಾಲ್ಕೈದು ಇಂಚಿನಷ್ಟು ಉದ್ದದ ಹ್ಯಾಂಗಿಂಗ್‌ ಡಿಸೈನ್‌ ಹೊಂದಿರುತ್ತವೆ. ಕೆಲವು ಒಂದೇ ಸಮನಾಗಿ ಇದ್ದರೇ, ಇನ್ನು ಕೆಲವು ಆಸೆಮ್ಮಿಟ್ರಿಕಲ್‌ ಲೆಂಥ್‌ ಹೊಂದಿರುತ್ತವೆ. ಇವು ಇದೀಗ ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಇವುಗಳ ವಿಶೇಷತೆಯೇಂದರೇ, ಯಾವುದೇ ಬಗೆಯ ಶಿಮ್ಮರ್‌ ಅಥವಾ ಶೈನಿಂಗ್‌ ಫ್ಯಾಬ್ರಿಕ್‌ನ ಪಾರ್ಟಿವೇರ್‌ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು. ಎಲ್ಲವಕ್ಕೂ ಇವು ಮ್ಯಾಚ್‌ ಆಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಮುಖವನ್ನು ಹೈ ಲೈಟ್‌ ಮಾಡುತ್ತವೆ. ಮಿರುಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Summer Fashion

ವಾಟರ್‌ ಫಾಲ್‌ ಕ್ಲಾಸಿ ಲುಕ್‌

“ಶಿಮ್ಮರ್‌ ಔಟ್‌ಫಿಟ್‌ಗಳಿಗೆ ಈ ವಾಟರ್‌ಫಾಲ್‌ ಇಯರಿಂಗ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಕಿವಿ ಮಾತ್ರವಲ್ಲ, ಇಡೀ ಲುಕ್‌ಗೆ ಇವು ಸಾಥ್‌ ನೀಡುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ಕ್ಲಾಸಿ ಲುಕ್‌ ನೀಡುವುದರೊಂದಿಗೆ ಸೆಲೆಬ್ರೆಟಿ ಇಮೇಜ್‌ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುವುದು ಹೆಚ್ಚಾಗಿದೆ.

Summer Fashion

ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಹೀಗಿರಲಿ

  • ಶಿಮ್ಮರ್‌ ಡಿಸೈನರ್‌ವೇರ್‌ ಶೇಡ್ಸ್‌ಗೆ ತಕ್ಕಂತೆ ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಮಾಡಿ.
  • ಪಾಸ್ಟೆಲ್‌ ಶೇಡ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.
  • ಆದಷ್ಟೂ ಮಿನುಗುವಂತವನ್ನು ಸೆಲೆಕ್ಟ್‌ ಮಾಡಿ.
  • ಶೋಲ್ಡರ್‌ ತನಕ ನೇತಾಡುವಂತವು ಇದೀಗ ಜೆನ್‌ ಜಿ ಹುಡುಗಿಯರನ್ನು ಸೆಳೆದಿವೆ.
  • ನಾಲ್ಕೈದು ಎಳೆ ಎಳೆಯಾಗಿರುವಂತವನ್ನು ಧರಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Lok sabha election-2024
Latest2 mins ago

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Nenapirali Prem New Movie announced
ಸ್ಯಾಂಡಲ್ ವುಡ್11 mins ago

Nenapirali Prem: ಪೊಲೀಸ್ ಖದರ್‌ನಲ್ಲಿ `ನೆನಪಿರಲಿ ಪ್ರೇಮ್’: ಹೊಸ ಸಿನಿಮಾ ಅನೌನ್ಸ್‌!

Neha murder case Karnataka is becoming another Bihar says Basavaraj Bommai
ಕರ್ನಾಟಕ14 mins ago

Neha Murder Case: ನೇಹಾ ಕೊಲೆ ಕೇಸ್; ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿದೆ: ಬಸವರಾಜ ಬೊಮ್ಮಾಯಿ

Assault Case
ಬೆಂಗಳೂರು15 mins ago

Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

India’s Russian oil imports hit record high in February
ಪ್ರಮುಖ ಸುದ್ದಿ21 mins ago

Israel- Iran war: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭ; ಕಚ್ಚಾ ತೈಲ ಬೆಲೆ 4% ಏರಿಕೆ

Teja Sajja Hanuman Movie Feme Mirai announce
ಟಾಲಿವುಡ್32 mins ago

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Murder case Man stabbed to death 9 times for refusing to love
ಪ್ರಮುಖ ಸುದ್ದಿ40 mins ago

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Viral Video
ವೈರಲ್ ನ್ಯೂಸ್41 mins ago

Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

IPL 2024
ಕ್ರೀಡೆ41 mins ago

IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ

Murder Case
ಬೆಂಗಳೂರು1 hour ago

Murder case : ಬೆಂಗಳೂರಲ್ಲಿ ರಕ್ತದೋಕುಳಿ; ಪ್ರತ್ಯೇಕ ಕಡೆಗಳಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌