Actor Darshan: ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿದ ಹೈಕೋರ್ಟ್ - Vistara News

ಕರ್ನಾಟಕ

Actor Darshan: ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿದ ಹೈಕೋರ್ಟ್

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಟ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಹೈಕೋರ್ಟ್‌ ಅರ್ಜಿ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿದೆ.

VISTARANEWS.COM


on

Actor Darshan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ದರ್ಶನ್ (Actor Darshan) ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.5ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮುಂದೂಡಿದೆ. ಇದರಿಂದ ನಟ ದರ್ಶನ್‌ಗೆ ಸದ್ಯಕ್ಕೆ ಜೈಲೂಟವೇ ಗತಿಯಾಗಿದೆ. ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಜೈಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಜೈಲಾಧಿಕಾರಿಗಳು ದರ್ಶನ್‌ ಮನವಿ ಪುರಸ್ಕರಿಸಿರಲಿಲ್ಲ. ಇನ್ನು ವೈದ್ಯಾಧಿಕಾರಿಗಳ ವರದಿ ನೋಡಿ ವಾದ ಮಂಡನೆಗೆ ದರ್ಶನ್‌ ಪರ ವಕೀಲರು ಸಮಯ ಕೋರಿದ್ದರಿಂದ ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ರಾಜ್ಯದ ಎಲ್ಲಾ ಕಾರಾಗೃಹಗಳಲ್ಲೂ ಕೈದಿಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಹೀಗಾಗಿ ದರ್ಶನ್‌ ಮನೆಯೂಟ ಕೋರಿದ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಜೈಲಾಧಿಕಾರಿಗಳು ವರದಿ ನೀಡಿರುವುದಾಗಿ ಜಸ್ಟೀಸ್ ಎಂ ನಾಗಪ್ರಸನ್ನ ಅವರಿಗೆ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಮಾಹಿತಿ ನೀಡಿದರು. ಈ ವೇಳೆ ವೈದ್ಯಾಧಿಕಾರಿಗಳ ವರದಿ ನೋಡಿ ವಾದ ಮಂಡನೆಗೆ ದರ್ಶನ್‌ ಪರ ವಕೀಲೆ ಸಂಜೀವಿನಿ ನಾವದಗಿ ಸಮಯ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜು.25ರಂದು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಟ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ | Kolkata Doctor murder case: ಅಂತ್ಯಕ್ರಿಯೆ ನಡೆದ 3 ಗಂಟೆ ನಂತ್ರ FIR ದಾಖಲು..ಆಸ್ಪತ್ರೆ ವೈದ್ಯರು, ಪೊಲೀಸರು ಏನ್‌ ಮಾಡ್ತಿದ್ರು?- ಸುಪ್ರೀಂ ತರಾಟೆ

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು 2ನೇ ಬಾರಿ ರಾಜ್ಯಪಾಲರ ಅನುಮತಿ ಕೋರಿದ ಎಸ್‌ಐಟಿ

ಬೆಂಗಳೂರು : ಕೇಂದ್ರ ಸಚಿವ ಎಚ್‌‌ ಕುಮಾರಸ್ವಾಮಿ (HD Kumaraswamy) ವಿರುದ್ಧದ ಅಕ್ರಮ ಗಣಿಗಾರಿಕೆಗೆ ಅನುಮತಿ ಪ್ರಕರಣವೊಂದರ ತನಿಖೆಯ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿ ಕೋರಿ ಮತ್ತೆ ಎಸ್ಐಟಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಶ್ರೀಸಾಯಿ ವೆಂಕಟೇಶ್ವರ ಕಂಪನಿಗೆ ಗಣಿಗಾರಿಕೆ ಗುತ್ತಿಗೆ ಮಂಜೂರಿನಲ್ಲಿ ಅಕ್ರಮ ಆರೋಪವನ್ನು ಕುಮಾರಸ್ವಾಮಿ ಎದುರಿಸುತ್ತಿದ್ದಾರೆ.

ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಈ ಹಿಂದೆ ರಾಜ್ಯಪಾಲರಿಗೆ ಎಸ್‌ಐಟಿ ಮನವಿ ಮಾಡಿತ್ತು. ಆದರೆ, ರಾಜ್ಯಪಾಲರ ಕಚೇರಿಯಿಂದ ಹೆಚ್ಚಿನ ಮಾಹಿತಿ ಬೇಕು ಎಂದು ಕೋರಲಾಗಿತ್ತು. ಹೀಗಾಗಿ ಮನವಿಯನ್ನು ಮತ್ತಷ್ಟು ಪರಿಷ್ಕರಿಸಿ ಎರಡನೇ ಬಾರಿಗೆ ಕಳುಹಿಸಲಾಗಿದೆ. ಆಗಸ್ಟ್‌ 19ರಂದು ಅಧಿಕಾರಿಗಳು ಎರಡನೇ ಬಾರಿಗೆ ಮನವಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸಿದೆ.

2023ರ ನವೆಂಬರ್ 21ರಂದು ಚಾರ್ಜ್‌‌ಶೀಟ್‌ ಸಲ್ಲಿಸಲು ಎಸ್ಐಟಿ ಅನುಮತಿ ಕೋರಿತ್ತು. ಅಂತೆಯೇ ಜುಲೈ 29 ರಂದು ರಾಜ್ಯಪಾಲರು ಮರು ಪತ್ರ ಬರೆದಿದ್ದರು. ಅದರು ಆಗಸ್ಟ್ 8ರಂದು ಎಸ್ಐಟಿ ಕೈಸೇರಿತ್ತು. ಅದರಲ್ಲಿ ಹೆಚ್ಚುವರಿ ಮಾಹಿತಿ ನೀಡುವಂತೆ ಕೋರಲಾಗಿತ್ತು.ಈ ಸಂಬಂಧ ಸ್ಪಷ್ಟನೆ ಸಮೇತ ಎರಡನೇ ಬಾರಿ ಪತ್ರ ಬರೆಯಲಾಗಿದೆ. ಎಸ್ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಅವರು ಮನವಿ ಸಲ್ಲಿದ್ದು, ಪ್ರಕರಣದ ತನಿಖೆ ಮುಕ್ತಾಯವಾಗಿದೆ ಎಂದು ಕೋರಿದ್ದಾರೆ.

ಏನಿದು ಪ್ರಕರಣ

2007ರಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಯಮಗಳನ್ನು ಉಲ್ಲಂಘಿಸಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ಗುತ್ತಿ ನೀಡಿರುವ ಆರೋಪ ಬಂದಿತ್ತು. ಈ ಬಗ್ಗೆ 2015ರಲ್ಲಿ ಎಸ್‌ಐಟಿ ವಿಚಾರಣೆ ನಡೆಸಿತ್ತು. ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

ತನಿಖಾ ತಂಡದ ಅವಧಿಯನ್ನು ವಿಸ್ತರಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಅಕ್ರಮ ಗಣಿಗಾರಿಕೆ ತನಿಖೆಗಾಗಿ ಲೋಕಾಯುಕ್ತದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದು ನಿಷ್ಕ್ರಿಯಗೊಂಡಿದೆ ಎಂಬದು ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಮುಂದುವರಿದ ಮಳೆ ಅವಾಂತರ; ನಾಳೆ ಒಳನಾಡು, ಕರಾವಳಿಯಲ್ಲಿ ಅಬ್ಬರ

Karnataka Weather Forecast : ರಾಜ್ಯಾದ್ಯಂತ ಮಳೆ (Rain News) ಅಬ್ಬರ ಮುಂದುವರಿದಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಕೊಪ್ಪಳ, ತುಮಕೂರು, ವಿಜಯಪುರ ಸುತ್ತಮುತ್ತ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಮೀನುಗಳು ಜಲಾವೃತಗೊಂಡಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ನಾಳೆ ಬುಧವಾರ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಧರೆಗುರುಳಿದ ಮರ

ಇನ್ನೂ ಮಂಗಳವಾರವೂ ಮಳೆ ಅವಾಂತರ ಮುಂದುವರಿದಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಹಲವೆಡೆ ಮಳೆಯು ಅಬ್ಬರಿಸಿತ್ತು. ವಿಧಾನಸೌಧ, ಶಿವಾಜಿನಗರ, ಕಬ್ಬನ್‌ಪಾರ್ಕ್‌,ಕಸ್ತೂರಬಾ ರಸ್ತೆ ಸೇರಿದಂತೆ ಮೆಜೆಸ್ಟಿಕ್‌ ಸುತ್ತಮುತ್ತ ಮಳೆಯಾಗಿದೆ. ಸದಾಶಿವನಗರ ಪೊಲೀಸ್ ಠಾಣೆ ಮುಂಭಾಗ ಮರವೊಂದು ಧರೆಗುರುಳಿದೆ. ಮರ ಬಿದ್ದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಒಂದು ಕಾರು ಜಖಂಗೊಂಡಿದೆ. ಬಿಬಿಎಂಪಿ ಸಿಬ್ಬಂದಿ ಬರಲು ತಡವಾದ ಹಿನ್ನೆಲೆಯಲ್ಲಿ ಪೊಲೀಸರಿಂದಲೇ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ಮಾರಾಟವಾಗಬೇಕಿದ್ದ ತರಕಾರಿಗಳು ಕೊಚ್ಚಿಹೋಗಿದ್ದು ಕಂಡು ವ್ಯಾಪಾರಸ್ಥರು ಕಣ್ಣೀರು ಹಾಕಿದರು. ಕೊಪ್ಪಳದ ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ಕೊಳ್ಳದ ಅಮರೇಶ್ವರ ದೇವಸ್ಥಾನ ಜಲಾವೃತಗೊಂಡಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದಲ್ಲದೇ ಜುಮಲಾಪುರದ ಸರಕಾರಿ ಪ್ರಾಥಮಿಕ ಶಾಲಾ ಆವರಣ ನದಿಯಂತಾಗಿತ್ತು.

ವಿಜಯನಗರದ ಹಂಪಿಯಲ್ಲೂ ಉತ್ತಮ ಮಳೆಯಾಗಿದೆ. ಹೊಸಪೇಟೆ ತಾಲೂಕಿನ ಹಂಪಿ ಸುತ್ತಮುತ್ತಲಿನ ಪ್ರದೇಶದ ಬಾಳೆ ತೋಟಕ್ಕೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಹೊಸಪೇಟೆ ತಾಲೂಕಿನ ಗುಂಡ್ಲಕೇರಿಯ ಬಳಿ ಇರುವ ಕಾಲುವೆಯ ಸೇತುವೆ ಮೇಲೆ ನೀರು ಹರಿದಿದೆ. ಸೀತಾರಾಮ್ ತಾಂಡ- ಕಮಲಾಪುರ ರಸ್ತೆಯ ಮಧ್ಯದ ಸೇತುವೆ, ಹಗರಿಬೊಮ್ಮನ ಹಳ್ಳಿ ತಾಲೂಕಿನ ಮುತ್ಕೂರು- ವಲ್ಲಭಾಪುರ ಸೇತುವೆ ಮುಳುಗಡೆಯಾಗಿದೆ.

ಹೊಸಪೇಟೆ ತಾಲೂಕಿನ ಭಾಗದ ಗ್ರಾಮಗಳಲ್ಲಿ ಭಾರೀ ಮಳೆಗೆ ಹತ್ತಿ, ಮೆಣಸಿನ ಕಾಯಿ ಬೆಳೆಗಳು ನೀರಿಗೆ ಆಹುತಿಯಾಗಿವೆ. ಧರ್ಮಸಾಗರ ಗ್ರಾಮದ ನಾಯಕರ ಹುಲಗಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆಯು ಮಳೆಗೆ ಕೊಚ್ಚಿ ಹೋಗಿದೆ. ರೈತ ನಾಯಕರ ಹುಲಗಪ್ಪ ಸಾಲಸೊಲ ಮಾಡಿ ಬೆಳೆಯನ್ನು ಬೆಳೆದಿದ್ದರು. ಇದೀಗ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: Celina Jaitley: ಮರ್ಮಾಂಗ ತೋರಿಸಿದ ದುಷ್ಟ; ಟೀಕೆಗೆ ಒಳಗಾದದ್ದು ನಾನು: ಕರಾಳ ನೆನಪು ಬಿಚ್ಚಿಟ್ಟ ನಟಿ

ತುಮಕೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಒಂದೇ ದಿನಕ್ಕೆ ಜಯಮಂಗಲಿ ನದಿ ತುಂಬಿ ಹರಿದಿದೆ. ಪರಿಣಾಮ ಮಧುಗಿರಿ ತಾಲ್ಲೂಕಿನ ವೀರೇನಹಳ್ಳಿ -ಕಾಳೇನಹಳ್ಳಿ ರಸ್ತೆ ಜಲಾವೃತಗೊಂಡಿತ್ತು. ತುಮಕೂರಿನ ದೇವರಾಯನದುರ್ಗ ತಪ್ಪಲಲ್ಲಿ ಹುಟ್ಟುವ ಜಯಮಂಗಲಿ ನದಿ, ಕೊರಟಗೆರೆ, ಮಧುಗಿರಿ ಮಾರ್ಗವಾಗಿ ಆಂಧ್ರದ ಪರ್ಗಿ ಕೆರೆಗೆ ಸೇರಲಿದೆ. ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ತುಂಬಿ ಹರಿದಿದ್ದ ಜಯಮಂಗಲಿ ನದಿ ಆ ನಂತರ ನೀರು ಖಾಲಿಯಾಗಿತ್ತು. ಇದೀಗ ರಾತ್ರಿ ಸುರಿದ ಧಾರಕಾರ ಮಳೆಗೆ ತುಂಬಿ ಹರಿಯುತ್ತಿದೆ. ಕೊರಟಗೆರೆ ಪಟ್ಟಣದ ಕನಕ ವೃತ್ತ ಬಳಿ 15ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿತ್ತು. ಶಿವಗಂಗಾ ಥಿಯೇಟರ್ ಬಳಿರುವ ಸಿಮೆಂಟ್ ಅಂಗಡಿಗೆ ಮುಳುಗಿ 200 ಹೆಚ್ಚು ಸಿಮೆಂಟ್ ಮೂಟೆಗಳು ನೀರುಪಾಲಾಗಿದ್ದವು.

ವರುಣನ ಆರ್ಭಟಕ್ಕೆ ಬಳ್ಳಾರಿಯ ಕಂಪ್ಲಿಯ ಅನ್ನ ದಾತರು ನಲುಗಿ ಹೋಗಿದ್ದಾರೆ. ಮಳೆ ನೀರು ನುಗ್ಗಿ ಜಮೀನುಗಳು ಹಳ್ಳಗಳಂತೆ ಗೋಚರಿಸುತ್ತಿದೆ. ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಬೆಳಗಿನ ಜಾವ ಮಳೆಯಾಗಿದೆ. ಕಂಪ್ಲಿ ಪಟ್ಟಣ, ರಾಮಸಾಗರ, ದೇವಲಾಪುರ, ಮೆಟ್ರಿ, ದೇವಸಮುದ್ರ, ನಂ.10 ಮುದ್ದಾಪುರ, ಸಣಾಪುರ, ಬೆಳಗೋಡ್ ಹಾಳ್ ಸೇರಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಪರಿಣಾಮ ಭತ್ತ, ಹೂ, ಬಾಳೆ, ಕಬ್ಬು, ಸೊಪ್ಪು ಸೇರಿದಂತೆ ನೂರಾರು ಹೆಕ್ಟರ್ ಬೆಳೆ ಜಲಾವೃತ‌ಗೊಂಡು ಹಾಳಾಗಿದೆ. ಲಕ್ಷಾಂತರ ರೂ ವ್ಯಯಿಸಿ ಬಿತ್ತನೆ ಮಾಡಿರುವ ರೈತರಲ್ಲಿ ಬೆಳೆ ನಷ್ಟದ ಆತಂಕ ಹೆಚ್ಚಾಗಿದೆ.

ರಾಜ್ಯ ಹೆದ್ದಾರಿ-29ರ ಮಾರೆಮ್ಮ ದೇವಸ್ಥಾನ ಬಳಿ ನೀರಿನ ರಭಸಕ್ಕೆ ರಸ್ತೆಯ ಕೆಳಭಾಗ ಕೊಚ್ಚಿ ಹೋಗಿದೆ. ಜವುಕು-ಜೀರಿಗನೂರು ಮತ್ತು ಚಿನ್ನಾಪುರ-ಮೆಟ್ರಿ ಸೇತುವೆ ಮೇಲೆ ನೀರು ಹರಿದು ‌ಸಂಪರ್ಕ ಕಡಿತಗೊಂಡಿದೆ. ದೇವಲಾಪುರ ಗ್ರಾಮದ ರಾಜನ ಮಟ್ಟಿಯ ಚರಂಡಿ ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Kannada New Movie: ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ನಟ ಶರಣ್

ನಿರ್ದೇಶಕಿ ಸಂಜೋತ ಭಂಡಾರಿ ಅವರು ಕಥೆ ಬರೆದು ನಿರ್ದೇಶಿಸಿರುವ “ಲಂಗೋಟಿ ಮ್ಯಾನ್” ಚಿತ್ರದ (Kannada New Movie) ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶರಣ್, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶರಣ್, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ (Kannada New Movie) ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದನ್ನೂ ಓದಿ: Banking Recruitment 2024: ರಾಷ್ಟ್ರೀಯ ಬ್ಯಾಂಕ್‌‌ಗಳಲ್ಲಿ 4455 ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ

ನಾನು ಹತ್ತು ವರ್ಷಗಳ ಹಿಂದೆ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು‌. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ “ಲಂಗೋಟಿ ಮ್ಯಾನ್” ಸಿನಿಮಾ ಸ್ವರೂಪ ಪಡೆದುಕೊಂಡಿತು.

ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ “ಲಂಗೋಟಿ” ನೇ. ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲುವ ವಿಶ್ವಾಸ ನನಗಂತೂ ಇದೆ‌. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ಎಂದರು‌.

ಈ ಸಮಾರಂಭಕ್ಕೆ ಬಂದು ನಿರ್ದೇಶಕರ ಮಾತು ಕೇಳಿದ ಮೇಲೆ ಅವರಿಗೆ ಚಿತ್ರದ ಮೇಲಿರುವ ಭರವಸೆ ಹಾಗೂ ತಾವೊಬ್ಬರೆ ಕ್ರೆಡಿಟ್ ತೆಗೆದುಕೊಳ್ಳದೆ, ಚಿತ್ರತಂಡದ ಪ್ರತಿಯೊಬ್ಬರನ್ನು ಪರಿಚಯಿಸಿದ ರೀತಿ ಕಂಡು ಸಂತೋಷವಾಯಿತು. ಈಗಂತೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ “ಲಂಗೋಟಿ ಮ್ಯಾನ್” ಸಹ ಸೇರಲಿ ಎಂದು ನಟ ಶರಣ್ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೌತ್ ಡಿಸಿಸಿ ಪ್ರೆಸಿಡೆಂಟ್ ಓ. ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ನಟಿಸಿರುವ ಆಕಾಶ್ ರಾಂಬೊ, ಧೀರೇಂದ್ರ, ಸಂಹಿತ ವಿನ್ಯ ಮುಂತಾದ ಕಾಲವಿದರು ಚಿತ್ರದ ಕುರಿತು ಮಾತನಾಡಿದರು.

ಇದನ್ನೂ ಓದಿ: Gold Rate Today: ಸ್ವರ್ಣ ಪ್ರಿಯರಿಗೆ ಕೊಂಚ ನಿರಾಳ; ಚಿನ್ನದ ದರ ಇಳಿಕೆ

“ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ‌ಹಾಗೂ ಪೋಸ್ಟರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟೀಸರ್ ನೋಡಿದಾಗ ಮನೋರಂಜನಾ ಪ್ರಧಾನ ಚಿತ್ರ ಎನಿಸಿದರೂ, ಚಿತ್ರದ ಮೂಲಕ‌‌ ಬೇರೊಂದು ವಿಷಯವನ್ನು ಹೇಳ ಹೊರಟಿರುವುದು ತಿಳಿಯುತ್ತದೆ.‌

Continue Reading

ಕರ್ನಾಟಕ

DK Shivakumar: ನಾನು ರಾಜ್ಯಪಾಲ, ಲೋಕಾಯುಕ್ತದ ವಕ್ತಾರನಲ್ಲ, ಕಾಂಗ್ರೆಸ್ ಪ್ರತಿನಿಧಿ ಎಂದ ಡಿಕೆಶಿ

DK Shivakumar: ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ಆನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎಂಬ ಪ್ರಶ್ನೆಗೆ ಶೇಷಾದ್ರಿಪುರ ಜಂಕ್ಷನ್ ಬಳಿ ರಾಜೀವ್ ಗಾಂಧಿ ಅವರ ಪ್ರತಿಮೆಗೆ ಮಂಗಳವಾರ ಪುಷ್ಪನಮನ ಸಲ್ಲಿಸಿದ ನಂತರ ಅವರು ಉತ್ತರಿಸಿದ್ದಾರೆ.

ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ ಎಂದು ಹೇಳಿದರು.

ಬಿಬಿಎಂಪಿಯಿಂದ ಪ್ರತಿ ವರ್ಷ ರಾಜೀವ್ ಗಾಂಧಿ ಜನ್ಮ ದಿನಾಚರಣೆ

ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು ಎಂದರು.

ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್‌ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ. ದಿನೇಶ್ ಗುಂಡೂರಾವ್ ಅವರ ಇಚ್ಛೆಯಂತೆ, ಅವರ ಕ್ಷೇತ್ರ ವ್ಯಾಪ್ತಿಯ ಶೇಷಾದ್ರಿಪುರಂ ಸಿಗ್ನಲ್ ಮುಕ್ತ ಜಂಕ್ಷನ್‌ಗೆ ರಾಜೀವ್ ಗಾಂಧಿ ಹೆಸರಿಟ್ಟು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು ಎಂದರು.

18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ತಿದ್ದುಪಡಿ, ಐಟಿ ಬಿಟಿ ಬೆಳವಣಿಗೆಗೂ ಇವರೇ ಕಾರಣ. ಇಂದು ಎಲ್ಲರ ಬಳಿ ಎರಡೆರಡು ಮೊಬೈಲ್‌ಗಳಿವೆ. ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಟಿಯ ಟೆಲಿಫೋನ್ ಕ್ರಾಂತಿ ಕಾರಣ ಎಂದು ಹೇಳಿದರು.

ಇದನ್ನೂ ಓದಿ | CM Siddaramaiah: ಹೊಟ್ಟೆಕಿಚ್ಚಿನಿಂದಾಗಿ ಬಿಜೆಪಿಯವರಿಂದ ನನ್ನ ವಿರುದ್ಧ ಸುಳ್ಳು ಆರೋಪ; ಸಿದ್ದರಾಮಯ್ಯ

ದೇಶದ ಸಮಗ್ರತೆ ಐಕ್ಯತೆ ಶಾಂತಿಗಾಗಿ ನೆಹರು ಕುಟುಂಬ ದುಡಿದಿದೆ. ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ವಿಚಾರಗಳನ್ನು ನಾವು ಮರೆಯಬಾರದು ಎಂದು ತಿಳಿಸಿದರು.

Continue Reading

ಬೆಂಗಳೂರು

Assault Case : ಬೆಂಗಳೂರಿನಲ್ಲಿ ಯುವಕನಿಗೆ ಪ್ರಜ್ಞೆ ತಪ್ಪಿಸಿ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಮಂಗಳಮುಖಿಯರು!

Assault Case : ನಾಲ್ಕೈದು ಮಂದಿ ಮಂಗಳಮುಖಿಯರು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪುಸಲಾಯಿಸಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಯುವಕನಿಗೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದು, ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿ ಭಿಕ್ಷಾಟನೆಗೆ ದೂಡಿರುವ ಆರೋಪ ಕೇಳಿ ಬಂದಿದೆ.

VISTARANEWS.COM


on

By

assault case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನನ್ನು ಹೆದರಿಸಿ, ಬೆದರಿಸಿ ಮನೆಯಲ್ಲಿ (Assault Case) ಇರಿಸಿಕೊಂಡಿದ್ದ ಮಂಗಳಮುಖಿಯರು ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗ ಕತ್ತರಿಸಿ, ಲಿಂಗ ಪರಿವರ್ತಿಸಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಇಂತಹ ಕೃತ್ಯ‌ ನಡೆಸಿದ್ದಾರೆ.

ಮೂರು ವರ್ಷಗಳ ಹಿಂದೆ ಅಂಬೇಡ್ಕರ್‌ ಕಾಲೇಜ ಸಮೀಪದಲ್ಲಿದ್ದ ಟೀ ಅಂಗಡಿಯಲ್ಲಿ ಸಂತ್ರಸ್ತ ಕೆಲಸ ಮಾಡಿಕೊಂಡಿದ್ದ. ಚಿತ್ರ, ಅಶ್ವಿನಿ, ಕಾಜಲ್‌, ಪ್ರೀತಿ, ಮುಗಿಲ ಎಂಬುವವರು ಟೀ ಕುಡಿಯುವ ನೆಪದಲ್ಲಿ ಬಂದು ಯುವಕನನ್ನು ಪರಿಚಯ ಮಾಡಿಕೊಂಡಿದ್ದರು.

ನಮ್ಮ ಜತೆಗೆ ಬಂದರೆ ನಿನ್ನನ್ನು ಒಳ್ಳೆಯ ಮನೆಯಲ್ಲಿರಿಸಿ, ಸಂಪಾದನೆಯ ದಾರಿಯನ್ನು ಮಾಡಿಕೊಡುವುದಾಗಿ ಯುವಕನನ್ನು ಪುಸಲಾಯಿಸಿದ್ದಾರೆ. ಆದರೆ ಯುವಕ ಇದಕ್ಕೆ ಒಪ್ಪದೆ ಇದ್ದಾಗ, ಬಲವಂತವಾಗಿ ಬೆದರಿಸಿ ಮನೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

ಟ್ಯಾನರಿ ರಸ್ತೆಯಲ್ಲಿದ್ದ ಮನೆಯಲ್ಲಿ ಯುವಕನನ್ನು ಇರಿಸಿಕೊಂಡಿದ್ದಾರೆ. ಬಳಿಕ ಭಿಕ್ಷೆ ಬೇಡು ಇಲ್ಲದಿದ್ದರೆ ರೌಡಿಗಳಿಗೆ ಹೇಳಿ ನಿನ್ನ ತಂದೆ-ತಾಯಿಯನ್ನು ಕೊಲೆ ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ. ಇವರ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಯುವಕ ಸುಮಾರು ಮೂರು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಸಿ ಹಣ ಸಂಪಾದಿಸಿದ್ದಾರೆ.

ಇತ್ತೀಚೆಗೆ ಈ ಮಂಗಳಮುಖಿಯರು ಯುವಕನಾಗಿಯೇ ಇಷ್ಟು ದುಡಿಯುತ್ತಿದ್ದಯಾ, ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಎಂದಿದ್ದಾರೆ. ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗು ಎಂದು ಬಲವಂತ ಮಾಡಿದ್ದಾರೆ. ಒಪ್ಪದೆ ಇದ್ದಾಗ ಗಾಂಜಾ ಸೇವಿಸಿ, ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ.

ಬಳಿಕ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಯುವಕ ಎಚ್ಚರಗೊಂಡ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಫೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.

ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆ. ಕಳೆದ ಆಗಸ್ಟ್ 3 ರವರೆಗೆ ಮನೆಯಲ್ಲಿಯೇ ಕೂಡಿ ಹಾಕಿ, ಮನೆ ಮೇಲೆ ಕರೆದುಕೊಂಡು ಹೋಗಿ ಯಾವುದೋ ಪೂಜೆ ಮಾಡಿಸಿದ್ದಾರೆ. ನಂತರ ಹೇಗೋ ಇವರಿಂದ ತಪ್ಪಿಸಿಕೊಂಡ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka weather Forecast
ಮಳೆ3 mins ago

Karnataka Weather : ಮುಂದುವರಿದ ಮಳೆ ಅವಾಂತರ; ನಾಳೆ ಒಳನಾಡು, ಕರಾವಳಿಯಲ್ಲಿ ಅಬ್ಬರ

Paralympic 2024
ಕ್ರೀಡೆ4 mins ago

Paralympic 2024: ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

Celina Jaitley
ಸಿನಿಮಾ26 mins ago

Celina Jaitley: ಮರ್ಮಾಂಗ ತೋರಿಸಿದ ದುಷ್ಟ; ಟೀಕೆಗೆ ಒಳಗಾದದ್ದು ನಾನು: ಕರಾಳ ನೆನಪು ಬಿಚ್ಚಿಟ್ಟ ನಟಿ

Viral Video
Latest31 mins ago

Viral Video: ನೆರೆಹೊರೆಯವರೊಂದಿಗೆ ಜಗಳವಾಡುತ್ತಲೇ ಹೃದಯಾಘಾತದಿಂದ ಸತ್ತ ಮಹಿಳೆ!

Kannada New Movie
ಬೆಂಗಳೂರು36 mins ago

Kannada New Movie: ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ನಟ ಶರಣ್

Viral Video
Latest38 mins ago

Viral Video: ಈಜಲು ಹೋಗಿದ್ದವನ ಶರ್ಟ್‍ನೊಳಗೆ ನುಸುಳಿದ ಬೃಹತ್‌ ಹಾವು! ಮುಂದೇನಾಯ್ತು ನೋಡಿ

Vinesh Phogat
ದೇಶ51 mins ago

Vinesh Phogat: ಸಹೋದರಿಯ ವಿರುದ್ಧವೇ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ವಿನೇಶ್​ ಫೋಗಟ್​?

DK Shivakumar
ಕರ್ನಾಟಕ1 hour ago

DK Shivakumar: ನಾನು ರಾಜ್ಯಪಾಲ, ಲೋಕಾಯುಕ್ತದ ವಕ್ತಾರನಲ್ಲ, ಕಾಂಗ್ರೆಸ್ ಪ್ರತಿನಿಧಿ ಎಂದ ಡಿಕೆಶಿ

Viral News
ದೇಶ1 hour ago

Viral News: ದರೋಡೆ, ಪಿಕ್‌ಪಾಕೆಟಿಂಗ್‌, ಕಳ್ಳತನವೇ ಸಬ್ಜೆಕ್ಟ್‌.. ಕ್ರಿಮಿನಲ್‌ಗಳಿಗಾಗಿಯೇ ಇಲ್ಲಿವೆ ಶಾಲೆಗಳು; ಫೀಸ್‌ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

Supreme Court
ಪ್ರಮುಖ ಸುದ್ದಿ2 hours ago

Supreme Court: ʼಯುವತಿಯರು ಕಾಮಾಸಕ್ತಿ ನಿಯಂತ್ರಿಸಿಕೊಳ್ಳಿʼ ಎಂದ ನ್ಯಾಯಾಧೀಶರ ಸಲಹೆಗೆ ಕನಲಿದ ಸುಪ್ರೀಂ ಕೋರ್ಟ್!‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌