Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ! - Vistara News

ಕರ್ನಾಟಕ

Video Viral: ಉಚಿತ ಗ್ಯಾರಂಟಿ ಯೋಜನೆ ಚುನಾವಣೆಯ ಚೀಪ್‌ ಗಿಮಿಕ್‌ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ!

N Chaluvarayaswamy: ಎನ್‌. ಚಲುವರಾಯಸ್ವಾಮಿ ಅವರು ಶಾಸಕ,ಸಚಿವರಾಗುವ ಮೊದಲು ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ನೀಡಿದ್ದ ಹೇಳಿಕೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲ್ಲವೂ ಫ್ರೀ ಫ್ರೀ ಅಂತ ಹೋದ್ರೆ ಎಲ್ಲಿ ಹೋಗಿ ನಿಲ್ಲುತ್ತದೆ ಎಂದು ಅವರು ಕಳವಳವನ್ನು ವ್ಯಕ್ತಪಡಿಸಿದ್ದರು. ಚುನಾವಣೆ ಗೆಲ್ಲಬೇಕು ಅಂದರೆ ಇಂತಹ ಚೀಪ್‌ ಗಿಮಿಕ್ ಅನಿವಾರ್ಯ ಆಗಿದೆ ಎಂದಿದ್ದ ಅವರು ನೀಡಿರುವ ಹೇಳಿಕೆ ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

VISTARANEWS.COM


on

N Chaluvarayaswamy about Congress guarantee
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್‌ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್‌ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ ಇಂಥ ಚೀಪ್‌ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಇವರ ಈ ಹೇಳಿಕೆಯು ಸರ್ಕಾರಕ್ಕೆ ಮುಜುಗರವನ್ನು ತಂದಿದೆ.

ವಿಡಿಯೊದಲ್ಲಿ ಏನಿದೆ?

ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್‌ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್‌ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್‌ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?

ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್‌ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.

ಚೀಪ್‌ ಗಿಮಿಕ್‌ ಬಗ್ಗೆ ಚಲುವರಾಯಸ್ವಾಮಿ ನೀಡಿರುವ ಹೇಳಿಕೆಯ ವಿಡಿಯೊ ಇಲ್ಲಿದೆ

ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್‌?

ಚುನಾವಣಾ ಪೂರ್ವ ಹೇಳಿಕೆ?

ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

ಹನುಮಾನ್‌ ಚಾಲೀಸಾ ಕೇಸ್: ಇವರು ಹಲ್ಲೆ ನಡೆಸಿ, ಪ್ರಕರಣ ಬಿಗಡಾಯಿಸುತ್ತಲೂ ಕೆಜಿ ಹಳ್ಳಿ ಭಾಗದಲ್ಲಿ ತಲೆ ಮರೆಸಿಕೊಂಡಿದ್ದರು ಎಂದು ಗೊತ್ತಾಗಿದೆ.

VISTARANEWS.COM


on

hanuman chalisa case
Koo

ಬೆಂಗಳೂರು: ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಮೊಬೈಲ್‌ ಅಂಗಡಿಯಾತನ ಮೇಲೆ ಹಲ್ಲೆ (assault case) ನಡೆಸಿದ ಪ್ರಕರಣದಲ್ಲಿ ಇದುವರೆಗೂ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಹಲ್ಲೆ ಪ್ರಕರಣದಲ್ಲಿ (crime news) ಒಟ್ಟು ಐವರನ್ನು ಬಂಧಿಸಿದಂತಾಗಿದೆ.

ಮೊಬೈಲ್‌ ಅಂಗಡಿ ಮಾಲೀಕ ಮುಖೇಶ್ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸುಲೈಮಾನ್, ರೋಹಿತ್ ಮತ್ತು ಶಹನವಾಜ್ ಎಂಬ ಮೂರು ಆರೋಪಿಗಳನ್ನು ಬಂಧಿಸಿದ್ದರು. ತರುಣ್ ಮತ್ತು ಇನ್ನೊಬ್ಬ ಯುವಕನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಐದು ಜನ ಆರೋಪಿಗಳು ಪೊಲೀಸರ ವಶಕ್ಕೆ ಸಿಕ್ಕಿದಂತಾಗಿದೆ.

ಇವರು ಹಲ್ಲೆ ನಡೆಸಿ, ಪ್ರಕರಣ ಬಿಗಡಾಯಿಸುತ್ತಲೂ ಕೆಜಿ ಹಳ್ಳಿ ಭಾಗದಲ್ಲಿ ತಲೆ ಮರೆಸಿಕೊಂಡಿದ್ದರು ಎಂದು ಗೊತ್ತಾಗಿದೆ. ವಶಕ್ಕೆ ಪಡೆದಿರುವ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ಒಬ್ಬನನ್ನು ಬಂಧಿಸಬೇಕಾಗಿದೆ.

“ಭಾನುವಾರ ಸಾಯಂಕಾಲ 6:15ರ ಸುಮಾರಿಗೆ ಐದು ಮಂದಿ ಮೊಬೈಲ್‌ ಅಂಗಡಿಯ ಮುಖೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅಂಗಡಿಯಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈ ದಿನ ಮೂವರನ್ನು ಆರೆಸ್ಟ್ ಮಾಡಿದ್ದೇವೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳಲ್ಲಿ ಎರಡೂ ಕೋಮಿನವರು ಇದ್ದಾರೆ. ಓರ್ವ ಆರೋಪಿ ಮೇಲೆ ಎರಡು ಪ್ರಕರಣಗಳಿವೆ, ಹಲ್ಲೆ ಹಾಗೂ ಸುಲಿಗೆ ಕೇಸ್ ಇದೆ” ಎಂದು ನಿನ್ನೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೆಚ್.ಟಿ ಹೇಳಿಕೆ ನೀಡಿದ್ದರು.

ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

ಮುಖೇಶ್ ಮೇಲಿನ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ನಗರ್ತಪೇಟೆಯಲ್ಲಿ ಇಂದು ಹನುಮಾನ್ ಚಾಲೀಸಾದೊಂದಿಗೆ ಕೇಸರಿ ಸಂಚಾರ ನಡೆಯಲಿದೆ. ಹಿಂದೂ ಕಾರ್ಯಕರ್ತರಿಗೆ ಕೇಸರಿ ಶಾಲು, ಕೇಸರಿ ಧ್ವಜ ಧರಿಸಿ ಬರಲು ಸಂಸದ ತೇಜಸ್ವಿ ಸೂರ್ಯ (Tejaswi Surya) ಸೂಚನೆ ನೀಡಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ಹನುಮಾನ್‌ ಚಾಲೀಸ್‌ ಮೊಳಗಿಸುವಂತೆ ಕರೆ ನೀಡಿದ್ದಾರೆ.

ಮಧ್ಯಾಹ್ನ 12:30ಕ್ಕೆ ಮುಖೇಶ್ ಅಂಗಡಿ ಬಳಿ ಹಾಜರಾಗಲಿರುವ ಹಿಂದೂ- ಬಿಜೆಪಿ ಕಾರ್ಯಕರ್ತರು, ಸಿದ್ದಣ್ಣನ ಗಲ್ಲಿಯ ಮುಖೇಶ್ ಅಂಗಡಿಯಿಂದ ಸಂಚಾರ ಪ್ರಾರಂಭಿಸಲಿದ್ದಾರೆ. ಈ ವಿಚಾರವಾಗಿ ಕರೆಕೊಟ್ಟಿರುವ ತೇಜಸ್ವಿ ಸೂರ್ಯ ಜೊತೆಗೆ ಸಂಸದ ಪಿ.ಸಿ ಮೋಹನ್, ಸಪ್ತಗಿರಿಗೌಡ ಇನ್ನಿತರರು ಭಾಗಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ

Continue Reading

ಕ್ರೈಂ

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

Firing in Jewellery : ಇದೊಂಥರಾ ಕಾವ್ಯಾತ್ಮಕ ನ್ಯಾಯ. ಜುವೆಲ್ಲರಿ ದರೋಡೆಗೆ ಬಂದು ಗುಂಡು ಹಾರಿಸಿದ್ದ ದುಷ್ಕರ್ಮಿಗಳ ಪೈಕಿ ಒಬ್ಬ ಅವರದೇ ಗುಂಡಿಗೆ ಬಲಿಯಾಗಿದ್ದಾನೆ. ಇದು ಕೊಡಿಗೇಹಳ್ಳಿಯ ಜುವೆಲ್ಲರಿ ದರೋಡೆ ಪ್ರಕರಣದ ಟ್ವಿಸ್ಟ್‌

VISTARANEWS.COM


on

Firing in JewelleryFiring in Jewellery
Koo

ಬೆಂಗಳೂರು: ಬೆಂಗಳೂರು : ಮಾರ್ಚ್‌ 14ರಂದು ಬೆಂಗಳೂರಿನ (Bangalore News) ಕೊಡಿಗೇ ಹಳ್ಳಿಯ ದೇವಿ ನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್‌ ಎಂಡ್‌ ಜುವೆಲ್ಲರ್ಸ್‌ಗೆ (Lakshmi Bankers and Jewellers) ನುಗ್ಗಿ ದರೋಡೆಗೆ ಯತ್ನಿಸಿದ ಪ್ರಕರಣ ಆರೋಪಿಗಳಿಗೇ ತಿರುಮಂತ್ರವಾಗಿದೆ. ಆವತ್ತು ಜುವೆಲ್ಲರಿ ಮಾಲೀಕನನ್ನು ಗುಂಡು ಹಾರಿಸಿ ಕೊಲ್ಲಲು (Firing in Jewellery) ಪ್ರಯತ್ನಿಸಿದ ದುಷ್ಕರ್ಮಿಗಳಲ್ಲಿ ಒಬ್ಬಾತ ಗುಂಡೇಟಿಗೆ ಬಲಿಯಾಗಿದ್ದಾನೆ (One miscreant died of firing). ಅಂದರೆ ಆವತ್ತು ಜುವೆಲ್ಲರಿಯಲ್ಲಿ ಮಾಲೀಕನಿಗೆ ಹಾರಿಸಿದ (Attack on Jewellery) ಗುಂಡೇ ಅವನಿಗೆ ತಾಗಿತ್ತು. ಇದೀಗ ಅವನು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ!

ದೇವಿ ನಗರದಲ್ಲಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಮಾರ್ಚ್‌ 18ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದರು. ಸಣ್ಣ ಸಣ್ಣ ಜ್ಯುವೆಲರಿಗಳನ್ನು ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಮತ್ತು ಸೂರಜ್‌ ಸೂರಜ್‌ ಆರೋಪಿಗಳಾಗಿದ್ದು, ಮೂವರನ್ನು ವಶಕ್ಕೆ ಪಡೆದಿದ್ದರು. ಅವರಲ್ಲಿ ಸೂರಜ್‌ ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Firing in Bangalore1

ಮಾರ್ಚ್‌ 14ರಂದು ಅಂದಾ ರಾಮ್‌ ಹಾಗು ಆಪುರಾಮ್ ಎಂಬವರಿಗೆ ಸೇರಿದ ಲಕ್ಷ್ಮೀ ಜುವೆಲ್ಲರಿಗೆ ನಾಲ್ವರು ದರೋಡೆಕೋರರು ಬಂದಿದ್ದರು. ಬೈಕ್‌ನಲ್ಲಿ ಬಂದಿದ್ದ ಅವರು ಬೈಕ್‌ ನಿಲ್ಲಿಸಿ ನೇರವಾಗಿ ಅಂಗಡಿಗೆ ನುಗ್ಗಿದ್ದಾರೆ. ಚಿನ್ನದ ಅಂಗಡಿ ಮಾಲೀಕರ ಬಳಿ ತಮಗೆ ಹಣ ನೀಡುವಂತೆ ಕೇಳಿದಾಗ ಕೊಟ್ಟಿರಲಿಲ್ಲ. ಆಗ ಮೊದಲು ಮಚ್ಚಿನಿಂದ ಕೊಚ್ಚಲು ಮುಂದಾಗಿದ್ದಾರೆ. ಆದರೆ ಮಾಲೀಕ ಹೆದರದೆ ಇದ್ದಾಗ ಪಿಸ್ತೂಲು ತೋರಿಸಿದ್ದಾರೆ. ಆಗಲೂ ಜಗ್ಗದಿದ್ದಾಗ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಯೇ ಹಣ ಕೇಳಿದ್ದಾರೆ. ಆದರೆ, ಮಾಲೀಕರು ಹಣ ಕೊಡಲು ಒಪ್ಪದೆ ಇದ್ದಾಗ ಹಲ್ಲೆ ನಡೆಸಿದ್ದಲ್ಲದೆ ಗುಂಡು ಹಾರಿಸಿದ್ದಾರೆ.

ಆಗ ಅಂದಾರಾಮ್‌ ಮತ್ತು ಆಪುರಾಮ್‌ ಎಂಬವರಿಗೆ ಗಾಯಗಳಾಗಿವೆ. ಈ ನಡುವೆ, ದುಷ್ಕರ್ಮಿಗಳು ಪಿಸ್ತೂಲನ್ನು ಅಲ್ಲೇ ಬಿಟ್ಟು ತಾವು ಬಂದಿದ್ದ ಎರಡು ಬೈಕ್‌ಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಈಗ ಚೇತರಿಸಿಕೊಳ್ಳುತಿದ್ದಾರೆ.

ಗ್ವಾಲಿಯರ್‌ನಲ್ಲಿ ಸಿಕ್ಕಿಬಿದ್ದ ದುಷ್ಕರ್ಮಿಗಳು

ಬೆಂಗಳೂರಿನಲ್ಲಿ ನಡೆದ ಈ ಭಯಾನಕ ದರೋಡೆ ಯತ್ನ ಪ್ರಕರಣದ ಬೆನ್ನು ಹತ್ತಿದ ಕೊಡಿಗೇಹಳ್ಳಿ ಪೊಲೀಸರು ತಮ್ಮ ಎಲ್ಲ ಚಾಣಾಕ್ಷತೆಯನ್ನು ಧಾರೆ ಎರೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ!

ಆರೋಪಿಗಳ ಓಡಾಟ, ಪ್ರಯಾಣದ ಎಲ್ಲ ವಿವರಗಳನ್ನು ಚಾಣಾಕ್ಷತೆಯಿಂದ ಕಲೆ ಹಾಕಿದ ಪೊಲೀಸರು ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಸೂರಜ್ ಎಂಬವರನ್ನು ಬಂಧಿಸಿದರು. ಅವರು ಸಣ್ಣ ಸಣ್ಣ ಜ್ಯುವೆಲರಿಗಳನ್ನೇ ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ವಿಷಯ ಬಯಲಿಗೆ ಬಂತು.

ಇದನ್ನೂ ಓದಿ: Firing in Bangalore : ಹಾಡಹಗಲೇ ಜುವೆಲ್ಲರಿಗೆ ನುಗ್ಗಿ ಫೈರಿಂಗ್‌ ಮಾಡಿದ ದುಷ್ಕರ್ಮಿಗಳು; ಇಬ್ಬರು ಗಂಭೀರ

ಶೂಟೌಟ್‌ನಲ್ಲಿ ಗಾಯಗೊಂಡಿದ್ದ ಸೂರಜ್‌

ಈ ನಡುವೆ, ಇನ್ನೊಂದು ಅಚ್ಚರಿಯ ಸಂಗತಿ ಆಗ ಬೆಳಕಿಗೆ ಬಂದಿತ್ತು. ಅದೇನೆಂದರೆ ಅಂದು ನಡೆದ ಶೂಟೌಟ್‌ನಲ್ಲಿ ನಿಜಕ್ಕೂ ಸರಿಯಾಗಿ ಗಾಯವಾಗಿದ್ದು ಅಲ್ಲಿನ ಮಾಲೀಕರಿಗಲ್ಲ. ಬದಲಾಗಿ ದುಷ್ಕರ್ಮಿಗಳ ತಂಡಕ್ಕೆ ಸೇರಿದ ಸೂರಜ್‌ ಎಂಬಾತನಿಗೆ. ಹಾಗಾಗಿಯೇ ಅವರು ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಪರಾರಿಯಾಗಿದ್ದರು.

ಆವತ್ತು ಹಾರಿದ ಗುಂಡು ಸೂರಜ್‌ನ ಕುತ್ತಿಗೆಗೆ ಗುಂಡು ತಗುಲಿತ್ತು. ಆಶು ಪಂಡಿತ್‌ ಹಾರಿಸಿದ ಗುಂಡಿನಿಂದ ಸೂರಜ್‌ನಿಗೆ ಗುಂಡು ತಗುಲುತ್ತಿದ್ದಂತೆಯೇ ಅವರೆಲ್ಲ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಆದರೆ, ಗುಂಡನ್ನು ತೆಗೆಯುವ ಪ್ರಯತ್ನ ಫಲಿಸಿರಲಿಲ್ಲ. ಅವರು ಬೆಂಗಳೂರಿನಿಂದ ಅನಂತಪುರಕ್ಕೆ ತೆರಳಿ ಅಲ್ಲಿಂದ ಗ್ವಾಲಿಯರ್‌ಗೆ ಹೋಗಿದ್ದರು.

ಈ ನಡುವೆ ಪೊಲೀಸರು ಬೆನ್ನಟ್ಟಿ ಅವರನ್ನು ಹಿಡಿದು ಹಾಕಿದ್ದರು. ಆಗ ಸೂರಜ್‌ನ ಕುತ್ತಿಗೆಗೆ ಗುಂಡೇಟು ಬಿದ್ದು ನರಳುತ್ತಿದ್ದುದು ಕಂಡುಬಂತು. ಕೂಡಲೇ ಪೊಲೀಸರು ಆತನನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಆತ ಅಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಈ ತಂಡ ಕಳೆದ ವಾರವಷ್ಟೇ ಮುಂಬಯಿಯಲ್ಲಿ ದರೋಡೆ ಮಾಡಿ ಬೆಂಗಳೂರಿಗೆ ಬಂದಿತ್ತು. ಆದರೆ, ಬೆಂಗಳೂರಿನ ದರೋಡೆ ಅವರ ಪಾಲಿಗೇ ಕಂಟಕವಾಯಿತು.

Continue Reading

ಬೆಂಗಳೂರು

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

ನಗರದ ಕೋರಮಂಗಲದಲ್ಲಿ ಇರುವ ಕಚೇರಿ, ಇಂದಿರಾನಗರ, ಜಯನಗರ ಮತ್ತಿತರ ಕಡೆಗಳಲ್ಲಿ ಇರುವ ರೆಸ್ಟೋರೆಂಟ್‌ಗಳು ಸೇರಿ ಹಲವೆಡೆ ದಾಳಿ (IT raid in bengaluru) ನಡೆಸಲಾಗಿದೆ.

VISTARANEWS.COM


on

meghana foods it raid
Koo

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಮುಂಜಾನೆ ಐಟಿ ಅಧಿಕಾರಿಗಳು ರೆಸ್ಟೋರೆಂಟ್‌ ಚೈನ್‌ ಒಂದರ ಮೇಲೆ ದಾಳಿ (IT Raid) ನಡೆಸಿದ್ದಾರೆ.

ಮೇಘನಾ ಫುಡ್ಸ್ ಗ್ರೂಪ್ (Meghana foods group) ನಡೆಸುತ್ತಿರುವ ರೆಸ್ಟೋರೆಂಟ್‌ಗಳು (Restaurant) ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನಗರದ ಕೋರಮಂಗಲದಲ್ಲಿ ಇರುವ ಕಚೇರಿ, ಇಂದಿರಾನಗರ, ಜಯನಗರ ಮತ್ತಿತರ ಕಡೆಗಳಲ್ಲಿ ಇರುವ ರೆಸ್ಟೋರೆಂಟ್‌ಗಳು ಸೇರಿ ಹಲವೆಡೆ ದಾಳಿ ನಡೆಸಲಾಗಿದೆ.

ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕಂಪನಿ, ಬೆಂಗಳೂರಿನಲ್ಲಿ ಒಂಬತ್ತು ಔಟ್‌ಲೆಟ್‌ಗಳನ್ನು ಹೊಂದಿದೆ. ಹೈದರಾಬಾದ್‌ ಮೂಲದ ಕಂಪನಿ ಸ್ಥಾಪಕರು 2006ರಿಂದ ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆದಿದ್ದಾರೆ.

ಕಂಪನಿಯ ಆದಾಯ ತೆರಿಗೆ ಪಾವತಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ ಐದು ಘಂಟೆಯಿಂದ ಕರ್ನಾಟಕ ಮತ್ತು ಗೋವಾ ವಿಭಾಗದ ಐಟಿ ಅಧಿಕಾರಿಗಳ ಹಲವು ತಂಡಗಳು ನಗರದಲ್ಲಿ ಸುಮಾರು ಹತ್ತಕ್ಕೂ ಹಚ್ಚು ಕಡೆಗಳಲ್ಲಿ ದಾಳಿ ನಡೆಸಿವೆ.

ವಿದೇಶದಿಂದ ತರುತ್ತಿದ್ದ 1.5 ಕೆಜಿ ಅಕ್ರಮ ಚಿನ್ನ ವಶಕ್ಕೆ

ಬೆಂಗಳೂರು : ಅಕ್ರಮವಾಗಿ ವಿದೇಶದಿಂದ ತರಲಾಗುತ್ತಿದ್ದ ಚಿನ್ನ‌ವನ್ನು (illegal gold smuggling) ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ (Bengaluru international Airport) ಕಸ್ಟಮ್ಸ್ (Customs) ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಪ್ರತ್ಯೇಕ ಮೂರು ಪ್ರಕರಣಗಳಲ್ಲಿ 1.5 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕೌಲಾಲಂಪುರ್, ಕುವೈತ್, ಮೆದಿನಾ ಮತ್ತು ಬೆಹ್ರೇನ್‌ನಿಂದ ಬಂದಿದ್ದವರು ಚಿನ್ನವನ್ನು ಬಚ್ಚಿಟ್ಟುಕೊಂಡು ತಂದಿದ್ದರು. ಬಳೆ, ಚೈನ್, ಡಾಲರ್, ಕಟ್ ಪೀಸ್ ಮಾದರಿಯಲ್ಲಿ ಚಿನ್ನ ತರಲಾಗಿತ್ತು. ಲಗೇಜ್ ಬ್ಯಾಗ್‌ನಲ್ಲಿ ಬಟ್ಟೆಯಲ್ಲಿ ಸುತ್ತಿ ಮರೆ ಮಾಚಿ ಚಿನ್ನ ತರಲಾಗಿತ್ತು.

99 ಲಕ್ಷ ಮೌಲ್ಯದ 1.5 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಕೌಲಾಲಂಪುರದಿಂದ ಚಿನ್ನವನ್ನು ನೆಟ್ ಮಾದರಿಯಲ್ಲಿ ಮಾಡಿ ಸಿಲ್ವರ್ ಕೋಟ್ ಮಾಡಿದ್ದ ಸ್ಮಗ್ಲರ್ಸ್, ವಂಚಿಸಲು ಯತ್ನಿಸಿದರೂ ಬಿಡದೆ ಪ್ರಯಾಣಿಕರ ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದರು. ಚಿನ್ನ ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದವರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: IT Raid : ಬಿಜೆಪಿಯಿಂದ ದೂರ ಸರಿದ ರೌಡಿ ಶೀಟರ್‌ ಫೈಟರ್‌ ರವಿ ಮೇಲೆ ಐಟಿ ದಾಳಿ

Continue Reading

ಕ್ರೈಂ

Self Harm: ಪ್ರೀತಿಸಿದ ಯುವತಿ ಸಿಗಲಿಲ್ಲ, ಕೈ ಕೊಯ್ದು ನೇಣು ಬಿಗಿದುಕೊಂಡ ಯುವಕ

ಯುವತಿಯ ಪ್ರೇಮ ನಿರಾಕರಣೆ ಹಾಗೂ ಆಕೆಯ ಕುಟುಂಬದವರಿಂದ ಧಮಕಿಯಿಂದ ನೊಂದ ಯುವಕ ಆತ್ಮಹತ್ಯೆ (Self Harm) ಮಾಡಿಕೊಂಡಿದ್ದಾನೆ.

VISTARANEWS.COM


on

anekal self harm
Koo

ಆನೇಕಲ್: ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ (love disappointment) ಯುವಕ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ (Self harm) ಮಾಡಿಕೊಂಡಿದ್ದಾನೆ.

ಈ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ. ಹರ್ಷಿತ್ ಮನನೊಂದು ನೇಣಿಗೆ ಶರಣಾದ ನತದೃಷ್ಟ ಪ್ರೇಮಿ. ಯುವತಿಯ ಅತ್ತೆ-ಮಾವ ಹಾಗೂ ಸಂಬಂಧಿಗಳಿಂದ ಯುವಕನಿಗೆ ಕಿರುಕುಳವಿತ್ತು.

ಇಂದ್ರಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್, ತುಮಕೂರು ಮೂಲದ ಮೃದುಲ ಯಾನೆ ಮೇಘ ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದ. ಆನೇಕಲ್ ಎಎಸ್ ಬಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಇವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ತಂದೆ-ತಾಯಿ ಇಲ್ಲದ ಮೃದುಲ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ದಳು. ಯುವತಿಯ ಮನೆಗೆ ಇವರ ಪ್ರೀತಿಯ ವಿಚಾರ ತಿಳಿದಿದ್ದು, ಯುವಕ ಹರ್ಷಿತ್‌ಗೆ ನಿಂದಿಸಿದ್ದಾರೆ. ಯುವತಿಯ ಬಳಿ ಮಾತನಾಡದಂತೆ ಧಮಕಿ ಹಾಕಿದ್ದರು. ಯುವತಿಗೂ ಆಕೆಯ ಅತ್ತೆ ಮಾವ ನಿರ್ಬಂಧ ಹಾಕಿದ್ದರು. ಯುವತಿಯೂ ಇದರಿಂದ ಬೆದರಿ ಹರ್ಷಿತ್‌ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು.

ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹರ್ಷಿತ್‌ಗೆ ಫೋನ್ ಮಾಡಿ, ಮೃದುಲಳನ್ನು ತಾನೇ ಮದುವೆಯಾಗುತ್ತೇನೆ, ಆಕೆಯ ತಂಟೆಗೆ ನೀನು ಬರಬಾರದು ಎಂದು ಧಮಕಿ ಹಾಕಿದ್ದ. ಇದರಿಂದ ಸಾಕಷ್ಟು ಮನನೊಂದಿದ್ದ ಹರ್ಷಿತ್, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಲ್ಲದೆ ಅದರ ಫೋಟೋ ತೆಗೆದು ತಾಯಿಯ ಮೊಬೈಲ್ ಹಾಗೂ ಹುಡುಗಿಯ ನಂಬರ್‌ಗೆ ವಾಟ್ಸಾಪ್ ಮಾಡಿದ್ದ.

ತಾಯಿ ಹಾಗೂ ತಂದೆ ಇದನ್ನು ನೋಡಿ ಮನೆಗೆ ಬಂದು ನೋಡುವಷ್ಟರಲ್ಲಿ ಕೈ ಕೊಯ್ದುಕೊಂಡು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಮೃದುಲ @ ಮೇಘ, ಆಕೆಯ ಅತ್ತೆ ಕವಿತಾ, ಮಾವ, ಜೊತೆಗೆ ಅಪರಿಚಿತ ನಂಬರ್‌ನಿಂದ ಫೋನ್ ಮಾಡಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Child Marriage :ಬಾಲ್ಯ ವಿವಾಹದ ಬಲೆಗೆ ಸಿಲುಕಿದ ಬಾಲಕಿ ಆತ್ಮಹತ್ಯೆ; ಗಂಡನ ಬಂಧನ

Continue Reading
Advertisement
hanuman chalisa case
ಪ್ರಮುಖ ಸುದ್ದಿ3 mins ago

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

Delhi
ದೇಶ25 mins ago

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

Kannada New Movie Pavan Kumar Wadeyar New Movie
ಸ್ಯಾಂಡಲ್ ವುಡ್30 mins ago

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Prabhas Vs Allu Arjun
ಟಾಲಿವುಡ್47 mins ago

Prabhas Vs Allu Arjun: ‘ಪುಷ್ಪ 2’ ಜತೆ ಪೈಪೋಟಿಗಿಳಿದ ಶಿವಣ್ಣ, ಪ್ರಭಾಸ್!

Firing in JewelleryFiring in Jewellery
ಕ್ರೈಂ48 mins ago

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

meghana foods it raid
ಬೆಂಗಳೂರು1 hour ago

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

Israeli Forces
ದೇಶ1 hour ago

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

RCB Unbox
ಕ್ರೀಡೆ1 hour ago

RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

Thalapathy Vijay
ಮಾಲಿವುಡ್1 hour ago

Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌!

anekal self harm
ಕ್ರೈಂ2 hours ago

Self Harm: ಪ್ರೀತಿಸಿದ ಯುವತಿ ಸಿಗಲಿಲ್ಲ, ಕೈ ಕೊಯ್ದು ನೇಣು ಬಿಗಿದುಕೊಂಡ ಯುವಕ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು16 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌