Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ - Vistara News

ಕರ್ನಾಟಕ

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Amit Shah: ಬೆಂಗಳೂರಿನಲ್ಲಿ ಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ಸರ್ಕಲ್‌ನಿಂದ ಸೇಂಟ್ ಫ್ರಾನ್ಸಿಸ್ ಸ್ಕೂಲ್‌ವರೆಗೆ ಅಮಿತ್‌ ಶಾ ಅವರ ರೋಡ್ ಶೋ ನಡೆಯಿತು. ಸುಮಾರು ‌3 ಕಿಲೋಮೀಟರ್‌ ದೂರ ರೋಡ್‌ ಶೋ ನಡೆಯಿತು.

VISTARANEWS.COM


on

Amit Shah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮಂಗಳವಾರ ರಾತ್ರಿ ಭರ್ಜರಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದರು.

ಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್‌ ಶೋಗೆ ಚಾಲನೆ ನೀಡಲಾಯಿತು. ವಿವೇಕಾನಂದ ಸರ್ಕಲ್‌ ಬಳಿಯಿಂದ ಸೇಂಟ್ ಫ್ರಾನ್ಸಿಸ್ ಸ್ಕೂಲ್‌ವರೆಗೆ ರೋಡ್ ಶೋ ನಡೆಯಿತು. ಸುಮಾರು ‌3 ಕಿಲೋಮೀಟರ್‌ ದೂರ ನಡೆದ ರೋಡ್‌ ಶೋ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದರು. ರೋಡ್‌ ಶೋ ಹಿನ್ನೆಲೆ ಪ್ರಚಾರ ವಾಹನ ತೆರಳುವ ಮಾರ್ಗದಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.

ಅಮಿತ್‌ ಶಾ ಅವರಿಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಅಶೋಕ್, ಶಾಸಕರಾದ ಸತೀಶ್ ರೆಡ್ಡಿ, ಸಿ.ಕೆ ರಾಮಮೂರ್ತಿ ಸಾಥ್‌ ನೀಡಿದರು.

ಇದನ್ನೂ ಓದಿ | HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು

ರೋಡ್‌ ಶೋ ಉದ್ದಕ್ಕೂ ಪ್ರಧಾನಿ ಮೋದಿ, ಅಮಿತ್‌ ಶಾ ಪರ ಕಾರ್ಯಕರ್ತರಿಂದ ಘೋಷಣೆಗಳು ಮೊಳಗಿದವು. ಎಲ್ಲೆಲ್ಲೂ ಕೇಸರಿಯ ಕಂಪು, ರಸ್ತೆಯುದ್ದಕ್ಕೂ ಬಿಜೆಪಿ ಪಕ್ಷದ ಬಾವುಟಗಳು ಕಂಡುಬಂದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Electric Shock: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಅವಘಡ ನಡೆದಿದೆ. ಅರೆ ಬರೆ ವಿದ್ಯುತ್ ಕಾಮಗಾರಿ ನಡೆಸಿದ್ದರಿಂದ ವಿದ್ಯುತ್‌ ಸ್ಪರ್ಶಿಸಿ ಬಾಲಕ ಕೊನೆಯುಸಿರೆಳೆದಿದ್ದಾನೆ.

VISTARANEWS.COM


on

Electric Shock
Koo

ರಾಯಚೂರು: ಬೋರ್‌ ವೆಲ್ ಬಳಿ ಕುಡಿಯುವ ನೀರು ತರಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವ ಘಟನೆ (Electric Shock) ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ. ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ನಡೆಸಿದ್ದರಿಂದ ವಿದ್ಯುತ್‌ ಸ್ಪರ್ಶಿಸಿ ಬಾಲಕ ಕೊನೆಯುಸಿರೆಳೆದಿದ್ದಾನೆ.

ಬಸವರಾಜ್ (2) ಮೃತ ಬಾಲಕ. ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ಮಾಡಿದ್ದರಿಂದ ವಿದ್ಯುತ್‌ ತಂತಿಗಳು ಕೆಳಗೆ ನೇತಾಡುತ್ತಿದ್ದವು. ಈ ವೇಳೆ ಬಾಲಕ ಬೋರ್‌ ವೆಲ್‌ ಬಳಿ ಹೋದಾಗ ವಿದ್ಯುತ್‌ ತಗುಲಿತ್ತು. ನಂತರ ಆತನನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ ಎಡವಟ್ಟಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

ರಾಯಚೂರು: ಕೃಷ್ಣಾ ನದಿಯಲ್ಲಿ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಬಲಿ (Crocodile Attack) ಪಡೆದಿದೆ. ಗಂಜಳ್ಳಿ ಗ್ರಾಮದ ವಿಶ್ವ (12) ಮೃತ ಬಾಲಕ. ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಪೋಲಿಸರು ದೌಡಾಯಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ | Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

ಮಹಿಳೆ ಕಾಲಿನ ಮೇಲೆ ಹರಿದ ಬಸ್ ಚಕ್ರ

ವಿಜಯಪುರ: ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆ ಕಾಲಿನ ಮೇಲೆ ಬಸ್ ಚಕ್ರ ಹರಿದ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಕಾಲಿಗೆ ತೀವ್ರ ಗಾಯಗಳಾಗಿವೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲುಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ ಗಾಯಗೊಂಡವರು. ವಿಜಯಪುರದಿಂದ ಇಂಡಿಗೆ ತೆರಳುವ KA 28 F 2492 ಸಂಖ್ಯೆಯ ಬಸ್ ಹರಿದಿದ್ದರಿಂದ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Continue Reading

ಕರ್ನಾಟಕ

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Prajwal Revanna Case: ಪ್ರಜ್ವಲ್‌ ರೇವಣ್ಣಗೆ ವಿಸ್ತಾರ ನ್ಯೂಸ್‌ ಕೂಡ ಬಹಿರಂಗ ಪತ್ರದ ಮೂಲಕ ಕರುನಾಡಿಗೆ ಬರುವಂತೆ ಆಗ್ರಹಿಸಿದೆ. “ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು” ಎಂದು ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ. ನಮ್ಮ ಪತ್ರದ ಪೂರ್ಣಪಾಠ ಇಲ್ಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಕೂಡಲೇ ಕರ್ನಾಟಕಕ್ಕೆ ಬಂದು, ನೆಲದ ಕಾನೂನು ಗೌರವಿಸಬೇಕು ಎಂದು ಸಂಸದನ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H D Deve Gowda) ಅವರು ಬಹಿರಂಗ ಪತ್ರ ಬರೆದಿದ್ದಾರೆ. ರಾಜ್ಯದ ಜನರು ಕೂಡ ಪ್ರಜ್ವಲ್‌ ರೇವಣ್ಣ ವಾಪಸ್‌ ಬರಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ‘ವಿಸ್ತಾರ ನ್ಯೂಸ್’‌ ಕೂಡ ಪ್ರಜ್ವಲ್‌ ರೇವಣ್ಣಗೆ ಬಹಿರಂಗ ಪತ್ರದ ಮೂಲಕ ಕರ್ನಾಟಕಕ್ಕೆ ಬರುವಂತೆ ರಾಜ್ಯದ ಜನರ ಪರವಾಗಿ ಆಗ್ರಹಿಸಿದೆ.

ಹೀಗಿದೆ ವಿಸ್ತಾರ ನ್ಯೂಸ್ ಪತ್ರದ ಸಾರಾಂಶ…

“ಮಿಸ್ಟರ್‌ ಪ್ರಜ್ವಲ್‌, ನಿಮ್ಮನ್ನ ಇವತ್ತು ಓರ್ವ ಸಂಸದ ಅಂತಾ ಕರೆಯೋದಕ್ಕೆ ನಿಜಕ್ಕೂ ಅಸಹ್ಯವೆನ್ನಿಸ್ತಿದೆ. ಅಮೂಲ್ಯ ಮತ ಹಾಕಿ ನಿಮ್ಮನ್ನ ಗೆಲ್ಲಿಸಿದ ಸಮಸ್ತ ಹಾಸನದ ಜನತೆ ಇಂದು ಪಾಪಪ್ರಜ್ಞೆಯಲ್ಲಿ ಮುಳುಗಿಹೋಗಿದ್ದಾರೆ. ಯಾಕೆಂದ್ರೆ, ಪ್ರಜಾಸತ್ತಾತ್ಮಕವಾದ ನಿಮ್ಮ ಹುದ್ದೆಗೆ ನಯಾಪೈಸೆ ಕಿಮ್ಮತ್ತಿಲ್ಲದ ಹಾಗೆ ನಡೆದುಕೊಂಡವರು ನೀವು. ಚಿಕ್ಕ ವಯಸ್ಸಿಗೆ ಸಂಸತ್‌ ಪ್ರವೇಶಿಸಿದ್ದ ನೀವು ಯುವ ಪೀಳಿಗೆಗೆ ಆದರ್ಶವಾಗಿ ನಿಲ್ಲಬೇಕಿತ್ತು. ಆದ್ರೆ ಇಂದು ನಿಮ್ಮ ಹೆಸರನ್ನೂ ಅವರ ಮಕ್ಕಳಿಗೆ ಇಡೋಕೆ ನಾಡಿನ ಪೋಷಕರು ಹಿಂದೇಟು ಹಾಕೋ ಸನ್ನಿವೇಶ ಸೃಷ್ಟಿಸಿಕೊಂಡುಬಿಟ್ಟಿದ್ದೀರಿ” ಎಂಬುದಾಗಿ ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ.

ಸಮಸ್ತ ಕರುನಾಡೇ ಹೆಮ್ಮೆಪಡುವಂಥಾ ಕುಟುಂಬದ ಕುಡಿಯಾದ ನೀವು ಇವತ್ತು ಖಳನಾಯಕನ ಜಾಗದಲ್ಲಿ ನಿಂತಿದ್ದೀರಿ. ಒಂದಂತೂ ಸತ್ಯ, ಸಮಸ್ತ ಕರುನಾಡೇ ಗರ್ವದಿಂದ ಬೀಗುವಂತೆ ಪ್ರಧಾನಿ ಹುದ್ದೆಗೇರಿದವರು ನಿಮ್ಮ ತಾತ. ಮರೆಯದಿರಿ, ಅವಿರಿಗೀಗ ಬರೋಬ್ಬರಿ 92 ವರ್ಷ ವಯಸ್ಸು. ಅವರ ಸಂಧ್ಯಾಕಾಲದಲ್ಲಿ ನಿಜಕ್ಕೂ ನಗುನಗುತ್ತಲಿರಬೇಕಿದ್ದ ಜೀವ ಇಂದು ನೋವನ್ನು ಹೇಳಿಕೊಳ್ಳಲಾಗದೆ, ಹೊರಗೂ ಹಾಕಲಾರದೆ ಮೂಕರೋದನದಲ್ಲಿದೆ. ಒಂದೇ ಒಂದು ಕ್ಷಣಕ್ಕೂ ನಿಮ್ಮ ಮನಸ್ಸಿಗೆ ಅಂದು ಅವರ ನೆನಪಾಗಲಿಲ್ಲವೇ…

ನಿಮ್ಮ ವಿರುದ್ಧದ ಆರೋಪಗಳು ಎಂಥಾ ಪ್ರಜ್ಞಾವಂತ ಸಮಾಜವೇ ಆಗಿದ್ರೂ ಕ್ಯಾಕರಿಸಿ ಮುಖಕ್ಕೆ ಉಗಿಯೋಥರದ್ದು ರೀ. ಹೋಗ್ಲಿ ನೀವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ 28 ದಿನಗಳಿಂದ ನೀವು ತಲೆಮರೆಸಿಕೊಂಡಿದ್ಯಾಕೆ. ಅಂದು ಹೇಡಿಯಂತೆ ಕಾರ್ಗತ್ತಲಲ್ಲಿ ಓಡಿಹೋಗಿದ್ದು ಯಾಕೆ? ಓಡಿ ಹೋಗಿಬಿಟ್ರೆ ಮಾಡಿದ ತಪ್ಪು ಮುಚ್ಚಿಹೋಗಿಬಿಡುತ್ತಾ..? ಹಾಗಂತ ನೀವೇನೂ ಒಲಿಂಪಿಕ್ಸ್‌ನಂಥಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಪರಮವೀರರಾ..?

ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು. ಆ ಅಸಹಾಯಕ ಜೀವಗಳಿಗೆ ನಿಜಕ್ಕೂ ನ್ಯಾಯ ಸಿಗಲೇಬೇಕು. ಇದು ಸಮಸ್ತ ಕರುನಾಡಿ ಒಕ್ಕೊರಲ ಆಗ್ರಹ.

ನೆನಪಿರಲಿ… ನೀವು ಇಂದು ಸಂಸದನಾಗಿ ನಿಲ್ಲುವಲ್ಲಿ ನಿಮ್ಮ ಕುಟುಂಬಕ್ಕಿರೋ ಆ ವರ್ಚಸ್ಸಿನ ಪಾಲೇ ಹೆಚ್ಚು. ಈ ರಾಜ್ಯದ ಮುಖ್ಯಮಂತ್ರಿಯಾಗಿ ದುಡಿದ ನಿಮ್ಮ ಚಿಕ್ಕಪ್ಪ ಇಂದು ಬಹಿರಂಗವಾಗಿ ಎಲ್ಲಿದ್ರೂ ಬಾರಪ್ಪಾ ಅನ್ನುವಂಥಾ ಅಸಹಾಯಕ ಸ್ಥಿತಿಯನ್ನು ನಿರ್ಮಿಸಿದವರು ನೀವೇ. ನಿಮ್ಮನ್ನ ಎತ್ತಿ, ಮುದ್ದಾಡಿ, ಭವ್ಯ ಭವಿಷ್ಯದ ಕನಸನ್ನು ಕನವರಿಸಿದ್ದ ನಿಮ್ಮ ತಂದೆಯು ನಿಮ್ಮಿಂದಾಗಿ ಜೈಲಿನ ಕತ್ತಲಕೋಣೆಯಲ್ಲಿ ಒಬ್ಬರೇ ಕೂತು ರೋದಿಸಿದ್ದು ನಿಮಗೆ ಗೊತ್ತಿಲ್ವಾ? ನಿಜಕ್ಕೂ ನಿಮ್ಮೊಳಗೊಬ್ಬ ಮಾನವೀಯ ಜೀವಿ ಇಲ್ಲವೇ ಇಲ್ವಾ? ಹೃದಯವೆನ್ನೋದೇ ಕಲ್ಲುಬಂಡೆಯಾಗಿದೆಯಾ? ಪಾಪಪ್ರಜ್ಞೆ ನಿಮ್ಮನ್ನ ಇನ್ನಿಲ್ಲದಂತೆ ಕಾಡ್ತಿಲ್ವಾ?

ನಿಮ್ಮ ತಾಯಿಯ ಮುಖದಲ್ಲಿದ್ದ ನಗು ನಿಮ್ಮಿಂದ ಬಾಡಿ ಹೋಗಿರೋ ಸತ್ಯದ ಅರಿವು ನಿಮಗಿಲ್ವಾ? ನಿಮ್ಮ ಸಹೋದರ ನಾಲ್ಕು ಜನರ ಮುಂದೆ ಮುಖ ಎತ್ತಿ ಮಾತನಾಡದಂಥಾ ಪರಿಸ್ಥಿತಿಯನ್ನು ನಿರ್ಮಿಸಿದ್ದು ನೀವೇ ಅಲ್ವಾ? ಅದೇನೇ ಇರ್ಲಿ. ಇವತ್ತು ನೀವು ಜರ್ಮನಿಯಲ್ಲಿದ್ದೀರೋ, ಇಲ್ಲ ಮತ್ತಿನ್ನೆಲ್ಲೋ ಪುಕ್ಕಲನಂತೆ ಅಡಗಿ ಕುಳಿತಿದ್ದೀರೋ ಅದು ನಿಮಗೆ ಗೊತ್ತು. ಒಂದೇ ಒಂದು ಪ್ರಶ್ನೆ, ನೀವು ದೇಶ ಬಿಟ್ಟು ಓಡಿಹೋಗಿದ್ದಾದ್ರೂ ಯಾಕೆ? ತಪ್ಪು ಮಾಡಿದ್ದೀರೋ, ಇಲ್ವೋ ಅನ್ನೋದನ್ನ ನಿಮ್ಮ ಮನಸಾಕ್ಷಿಯನ್ನೇ ಪ್ರಶ್ನಿಸಿಕೊಂಡು ಬಿಡಿ.

ನಿಮ್ಮ ವಿರುದ್ಧದ ಆರೋಪಗಳೆಲ್ಲ ಕಪೋಲಕಲ್ಪಿತ, ಎದುರಾಳಿಗಳ ಕುತಂತ್ರ, ಷಡ್ಯಂತ್ರವೇ ಅಂತಾ ಭಾವಿಸಿದ್ರೆ, ನೀವ್ಯಾಕೆ 28 ದಿನದಿಂದ ಕದ್ದು ಓಡ್ತಿದ್ದೀರಿ? ಭಾರತಕ್ಕೆ ಬಂದ್ರೆ ಕೇಸ್‌ ಹಾಕ್ತಾರೆ ಅಂತಾ ಭಯನಾ? ಪೊಲೀಸರು ವಿಚಾರಣೆ ಹೆಸರಲ್ಲಿ ಟಾರ್ಚರ್‌ ಕೊಡ್ತಾರೆ ಅಂತ ದಿಗಿಲಾ? ಜೈಲಿಗೆ ಹಾಕಿಬಿಡ್ತಾರೆ ಅಂತಾ ಕೈಕಾಲು ತಣಗಾಗ್ತಿವೆಯಾ? ಹಾಗಾದ್ರೆ, ಒಂದು ಕೆಲಸ ಮಾಡಿ. ಕೋರ್ಟ್‌ ಮುಂದೆ ಬಂದು ಶರಣಾಗಿ.

ಒಂದಲ್ಲ, ಎರಡಲ್ಲ, ಅದೆಷ್ಟು ಜನರು ನಿಮ್ಮಿಂದ ಇಂದು ಕಣ್ಣೀರು ಸುರಿಸ್ತಿದ್ದಾರೋ ಗೊತ್ತಿಲ್ಲ. ಅದೆಷ್ಟು ತಾಯಂದಿರು ನಿಮಗೆ ಹಿಡಿಶಾಪ ಹಾಕ್ತಿದ್ದಾರೋ ತಿಳಿದಿಲ್ಲ. ಸಮಸ್ತ ಹಾಸನವೇ ಇವತ್ತು ತಲೆತಗ್ಗಿಸಿ ನಿಂತಿದೆ ಅಂದ್ರೆ ಅದು ನಿಮ್ಮಿಂದಲೇ ಅನ್ನೋದನ್ನ ಮಾತ್ರ ಮರೆಯದಿರಿ. ಈ ಮಣ್ಣಿನ ಕಾನೂನು ನೊಂದವರಿಗೆ ನ್ಯಾಯದಾನ ಮಾಡಿಯೇ ತೀರುತ್ತದೆ. ಅದೆಷ್ಟು ದಿನ, ಅದೆಲ್ಲೇ ನೀವು ತಲೆಮರೆಸಿಕೊಂಡು ಸುತ್ತಿದ್ರೂ ಪ್ರತಿ ಆರಂಭಕ್ಕೂ ಅಂತ್ಯವಿರುತ್ತೆ. ಪಾಪದ ಕೊಡ ತುಂಬಿ ಬಂದಾಗ ಅದೆಂಥವನೇ ಆದ್ರೂ ತಲೆಬಾಗಲೇಬೇಕು.

ಸಮಸ್ತ ಕರುನಾಡಿನ ಪರವಾಗಿ

ವಿಸ್ತಾರ ನ್ಯೂಸ್‌ ತಂಡ

ಇದನ್ನೂ ಓದಿ: Prajwal Revanna Case: ಪಾಸ್‌ಪೋರ್ಟ್‌ ವಿಚಾರವಾಗಿ ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯ ನೋಟಿಸ್;‌ ಶೀಘ್ರ ಬಂಧನ?

Continue Reading

ಕರ್ನಾಟಕ

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Prajwal Revanna Case: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ವಕೀಲ ದೇವರಾಜೇಗೌಡಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

Prajwal Revanna Case
Koo

ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ (Prajwal Revanna Case) ಬಂಧನವಾಗಿರುವ ವಕೀಲ ದೇವರಾಜೇಗೌಡಗೆ ವಿಧಿಸಿದ್ದ ನ್ಯಾಯಾಂಗ ಬಂಧನವನ್ನು ಮತ್ತೆ ವಿಸ್ತರಿಸಿದ್ದು, ಇನ್ನೂ 14 ದಿನ ಜೈಲೇ ಗತಿಯಾಗಿದೆ. ಜೂನ್ 7 ರವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿ ಹೊಳೆನರಸೀಪುರ ನ್ಯಾಯಾಲಯ ಆದೇಶ ಹೊರಡಿಸಿದೆ.

ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಕೇಸ್ ಹಿನ್ನೆಲೆ ಮೇ‌ 11 ರಂದು ಐಪಿಸಿ ಸೆಕ್ಷೆನ್ 376 ಅಡಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಅದೇ ರೀತಿ ಏಪ್ರಿಲ್ 1 ರಂದು ಐಪಿಸಿ ಸೆಕ್ಷೆನ್ 354 A, 354 C, 448, 504,506 ಅಡಿ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು. ಹೀಗಾಗಿ ಏಪ್ರಿಲ್ 10ರಂದು ಹಿರಿಯೂರಿನಲ್ಲಿ ದೇವರಾಜೇಗೌಡರನ್ನು ಬಂಧಿಸಲಾಗಿತ್ತು. ನಂತರ ಏಪ್ರಿಲ್ 11 ರಂದು ಹೊಳೆನರಸೀಪುರದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಅವರಿಗೆ ಏಪ್ರಿಲ್ 24ರ ವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ವೇಳೆ ಹೊಳೆನರಸೀಪುರ ಪೊಲೀಸರ ಕಸ್ಟಡಿಗೆ ನಾಲ್ಕು ದಿನ, ಎಸ್‌ಐಟಿ ಕಸ್ಟಡಿಗೆ ಮೂರು ದಿನ ನೀಡಲಾಗಿತ್ತು

14 ದಿನದ ನ್ಯಾಯಾಂಗ ಬಂಧನ ಮುಗಿದಿದ್ದರಿಂದ ಶುಕ್ರವಾರ ಹೊಳೆನರಸೀಪುರ ನ್ಯಾಯಾಲಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಇದೇ ತಿಂಗಳು 28ಕ್ಕೆ ನಡೆಯಲಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ | Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

Continue Reading

ಕರ್ನಾಟಕ

Martin Movie: ಬಹುನೀರಿಕ್ಷಿತ ʼಮಾರ್ಟಿನ್ʼ ರಿಲೀಸ್ ಡೇಟ್ ಫಿಕ್ಸ್‌; 3 ವರ್ಷಗಳ ನಂತರ ತೆರೆಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ

Martin Movie: ʼಮಾರ್ಟಿನ್ʼ ಸಿನಿಮಾ, ಆ್ಯಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 5ನೇ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

VISTARANEWS.COM


on

Martin Movie
Koo

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನೀರಿಕ್ಷಿತ ʼಮಾರ್ಟಿನ್ʼ ಚಿತ್ರದ ರಿಲೀಸ್ ಡೇಟ್ ಫಿಕ್ಸ್‌ ಆಗಿದೆ. ಎ.ಪಿ. ಅರ್ಜುನ್ ನಿರ್ದೇಶನದ ʼಮಾರ್ಟಿನ್ʼ (Martin Movie) ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಅಕ್ಟೋಬರ್‌ 11ಕ್ಕೆ ತೆರೆಗೆ ಅಪ್ಪಲಿಸಲಿದೆ.

ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಬಂದ್‌ ಆಗಲಿವೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆ ‘ಮಾರ್ಟಿನ್’ ಚಿತ್ರತಂಡ ಬಿಗ್ ಅನೌನ್ಸ್‌ಮೆಂಟ್ ಮಾಡಿದೆ. ಈ ಚಿತ್ರವು ಆ್ಯಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 5ನೇ ಚಿತ್ರವಾಗಿದ್ದು, ಉದಯ್ ಕೆ.ಮೆಹ್ತಾ ಈ ಅದ್ಧೂರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸುಮಾರು ದಿನಗಳಿಂದ ಸಿ.ಜಿ ಕೆಲಸಗಳಲ್ಲಿ ನಿರತವಾಗಿದ್ದ ಮಾರ್ಟಿನ್ ಚಿತ್ರತಂಡ, ಇದೀಗ ರಿಲೀಸ್‌ ದಿನಾಂಕ ಘೋಷಣೆ ಮಾಡಿದೆ. ಪೊಗರು ಚಿತ್ರದ ಬಳಿಕ 3 ವರ್ಷಗಳ ನಂತರ ಧ್ರುವ ಸರ್ಜಾ ತೆರೆಗೆ ಎಂಟ್ರಿ ನೀಡುತ್ತಿದ್ದು, ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ನಿರ್ದೇಶಕ ಎ.ಪಿ.ಅರ್ಜುನ್ ಮಾತನಾಡಿ, ರಿಲೀಸ್ ಯಾವಾಗ? ಯಾವಾಗ? ಅಂತ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಫೈನಲ್‌ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇವೆ. ಅಕ್ಟೋಬರ್ 11ಕ್ಕೆ‌ ನಿಮ್ಮ ಮುಂದೆ ಬರುತ್ತೇವೆ. ನಾನು ಮಾತನಾಡಲ್ಲ, ನಮ್ಮ ಸಿನಿಮಾ ಮಾತನಾಡುತ್ತೆ. ಏನೇ ಸಮಸ್ಯೆ ಬಂದರೂ‌ ಒದ್ದಾಡಿ, ಗುದ್ಡಾಡಿ ಕೊನಗೂ ಸಿನಿಮಾ ಮುಗಿಸಿದ್ದೇವೆ. ತಮಿಳುನಾಡು, ಹೈದರಾಬಾದ್, ಕೇರಳ, ಮುಂಬೈಗೆ ಹೋಗಿ ಪ್ರಮೋಷನ್ ಮಾಡಲಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ. ನನ್ನ ಎಲ್ಲಾ ಸಿನಿಮಾಗಳನ್ನು ಮಗು ಥರ ಟ್ರೀಟ್ ಮಾಡ್ತೀನಿ, ಮಾರ್ಟಿನ್ ಆರನೇ ಸಿನಿಮಾ. ನನ್ನ ಪಾಲಿಗೆ ಇದು ಆರನೇ ಮಗು ಎಂದು ಹೇಳಿದರು.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Crew on OTT: ಈ 5 ಕಾರಣಕ್ಕಾಗಿ ಟಬು, ಕರೀನಾ ನಟಿಸಿರುವ ʼಕ್ರ್ಯೂʼ ಸಿನಿಮಾ ನೋಡಬಹುದು

ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡಿರುವ ಸಿನಿಮಾ ‘ಮಾರ್ಟಿನ್ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಧ್ರುವ ಬ್ಯುಸಿ

ನಿರ್ದೇಶಕ ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು.ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಧ್ರುವ ಸರ್ಜಾ ರೈನಾ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಮಾಸ್ ಲುಕ್‌ನಲ್ಲಿ ಧ್ರುವ ಸರ್ಜಾ ಕಂಡಿದ್ದಾರೆ. ಶಿವಾರ್ಜುನ್ ನಿರ್ದೇಶನ ಹಾಗೂ ಉದಯ ಮೆಹ್ತಾ ನಿರ್ಮಾಣ ಈ ಚಿತ್ರಕ್ಕಿದೆ.

Continue Reading
Advertisement
Electric Shock
ಕ್ರೈಂ4 mins ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ7 mins ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ1 hour ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ1 hour ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ1 hour ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್1 hour ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Lok Sabha Election
ದೇಶ2 hours ago

Lok Sabha Election: ನಾಳೆ 6ನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ; ಖಟ್ಟರ್‌, ಕನ್ಹಯ್ಯ ಸೇರಿ ಹಲವರ ಭವಿಷ್ಯ ನಿರ್ಧಾರ

Martin Movie
ಕರ್ನಾಟಕ2 hours ago

Martin Movie: ಬಹುನೀರಿಕ್ಷಿತ ʼಮಾರ್ಟಿನ್ʼ ರಿಲೀಸ್ ಡೇಟ್ ಫಿಕ್ಸ್‌; 3 ವರ್ಷಗಳ ನಂತರ ತೆರೆಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ

Congress is rejected expired goods in the country says union minister Pralhad Joshi
ಕೊಪ್ಪಳ2 hours ago

MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

Yallapur Tehsildar Tanuja T savadatti instructed to create awareness about infectious diseases
ಉತ್ತರ ಕನ್ನಡ2 hours ago

Uttara Kannada News: ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸಲು ಯಲ್ಲಾಪುರ ತಹಸೀಲ್ದಾರ್ ಸೂಚನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌