Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ - Vistara News

ಕರ್ನಾಟಕ

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Prajwal Revanna Case: ಪ್ರಜ್ವಲ್‌ ರೇವಣ್ಣಗೆ ವಿಸ್ತಾರ ನ್ಯೂಸ್‌ ಕೂಡ ಬಹಿರಂಗ ಪತ್ರದ ಮೂಲಕ ಕರುನಾಡಿಗೆ ಬರುವಂತೆ ಆಗ್ರಹಿಸಿದೆ. “ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು” ಎಂದು ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ. ನಮ್ಮ ಪತ್ರದ ಪೂರ್ಣಪಾಠ ಇಲ್ಲಿದೆ.

VISTARANEWS.COM


on

Prajwal Revanna Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಕೂಡಲೇ ಕರ್ನಾಟಕಕ್ಕೆ ಬಂದು, ನೆಲದ ಕಾನೂನು ಗೌರವಿಸಬೇಕು ಎಂದು ಸಂಸದನ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (H D Deve Gowda) ಅವರು ಬಹಿರಂಗ ಪತ್ರ ಬರೆದಿದ್ದಾರೆ. ರಾಜ್ಯದ ಜನರು ಕೂಡ ಪ್ರಜ್ವಲ್‌ ರೇವಣ್ಣ ವಾಪಸ್‌ ಬರಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ‘ವಿಸ್ತಾರ ನ್ಯೂಸ್’‌ ಕೂಡ ಪ್ರಜ್ವಲ್‌ ರೇವಣ್ಣಗೆ ಬಹಿರಂಗ ಪತ್ರದ ಮೂಲಕ ಕರ್ನಾಟಕಕ್ಕೆ ಬರುವಂತೆ ರಾಜ್ಯದ ಜನರ ಪರವಾಗಿ ಆಗ್ರಹಿಸಿದೆ.

ಹೀಗಿದೆ ವಿಸ್ತಾರ ನ್ಯೂಸ್ ಪತ್ರದ ಸಾರಾಂಶ…

“ಮಿಸ್ಟರ್‌ ಪ್ರಜ್ವಲ್‌, ನಿಮ್ಮನ್ನ ಇವತ್ತು ಓರ್ವ ಸಂಸದ ಅಂತಾ ಕರೆಯೋದಕ್ಕೆ ನಿಜಕ್ಕೂ ಅಸಹ್ಯವೆನ್ನಿಸ್ತಿದೆ. ಅಮೂಲ್ಯ ಮತ ಹಾಕಿ ನಿಮ್ಮನ್ನ ಗೆಲ್ಲಿಸಿದ ಸಮಸ್ತ ಹಾಸನದ ಜನತೆ ಇಂದು ಪಾಪಪ್ರಜ್ಞೆಯಲ್ಲಿ ಮುಳುಗಿಹೋಗಿದ್ದಾರೆ. ಯಾಕೆಂದ್ರೆ, ಪ್ರಜಾಸತ್ತಾತ್ಮಕವಾದ ನಿಮ್ಮ ಹುದ್ದೆಗೆ ನಯಾಪೈಸೆ ಕಿಮ್ಮತ್ತಿಲ್ಲದ ಹಾಗೆ ನಡೆದುಕೊಂಡವರು ನೀವು. ಚಿಕ್ಕ ವಯಸ್ಸಿಗೆ ಸಂಸತ್‌ ಪ್ರವೇಶಿಸಿದ್ದ ನೀವು ಯುವ ಪೀಳಿಗೆಗೆ ಆದರ್ಶವಾಗಿ ನಿಲ್ಲಬೇಕಿತ್ತು. ಆದ್ರೆ ಇಂದು ನಿಮ್ಮ ಹೆಸರನ್ನೂ ಅವರ ಮಕ್ಕಳಿಗೆ ಇಡೋಕೆ ನಾಡಿನ ಪೋಷಕರು ಹಿಂದೇಟು ಹಾಕೋ ಸನ್ನಿವೇಶ ಸೃಷ್ಟಿಸಿಕೊಂಡುಬಿಟ್ಟಿದ್ದೀರಿ” ಎಂಬುದಾಗಿ ವಿಸ್ತಾರ ನ್ಯೂಸ್‌ ತರಾಟೆಗೆ ತೆಗೆದುಕೊಂಡಿದೆ.

ಸಮಸ್ತ ಕರುನಾಡೇ ಹೆಮ್ಮೆಪಡುವಂಥಾ ಕುಟುಂಬದ ಕುಡಿಯಾದ ನೀವು ಇವತ್ತು ಖಳನಾಯಕನ ಜಾಗದಲ್ಲಿ ನಿಂತಿದ್ದೀರಿ. ಒಂದಂತೂ ಸತ್ಯ, ಸಮಸ್ತ ಕರುನಾಡೇ ಗರ್ವದಿಂದ ಬೀಗುವಂತೆ ಪ್ರಧಾನಿ ಹುದ್ದೆಗೇರಿದವರು ನಿಮ್ಮ ತಾತ. ಮರೆಯದಿರಿ, ಅವಿರಿಗೀಗ ಬರೋಬ್ಬರಿ 92 ವರ್ಷ ವಯಸ್ಸು. ಅವರ ಸಂಧ್ಯಾಕಾಲದಲ್ಲಿ ನಿಜಕ್ಕೂ ನಗುನಗುತ್ತಲಿರಬೇಕಿದ್ದ ಜೀವ ಇಂದು ನೋವನ್ನು ಹೇಳಿಕೊಳ್ಳಲಾಗದೆ, ಹೊರಗೂ ಹಾಕಲಾರದೆ ಮೂಕರೋದನದಲ್ಲಿದೆ. ಒಂದೇ ಒಂದು ಕ್ಷಣಕ್ಕೂ ನಿಮ್ಮ ಮನಸ್ಸಿಗೆ ಅಂದು ಅವರ ನೆನಪಾಗಲಿಲ್ಲವೇ…

ನಿಮ್ಮ ವಿರುದ್ಧದ ಆರೋಪಗಳು ಎಂಥಾ ಪ್ರಜ್ಞಾವಂತ ಸಮಾಜವೇ ಆಗಿದ್ರೂ ಕ್ಯಾಕರಿಸಿ ಮುಖಕ್ಕೆ ಉಗಿಯೋಥರದ್ದು ರೀ. ಹೋಗ್ಲಿ ನೀವು ತಪ್ಪೇ ಮಾಡಿಲ್ಲ ಅನ್ನೋದಾದ್ರೆ 28 ದಿನಗಳಿಂದ ನೀವು ತಲೆಮರೆಸಿಕೊಂಡಿದ್ಯಾಕೆ. ಅಂದು ಹೇಡಿಯಂತೆ ಕಾರ್ಗತ್ತಲಲ್ಲಿ ಓಡಿಹೋಗಿದ್ದು ಯಾಕೆ? ಓಡಿ ಹೋಗಿಬಿಟ್ರೆ ಮಾಡಿದ ತಪ್ಪು ಮುಚ್ಚಿಹೋಗಿಬಿಡುತ್ತಾ..? ಹಾಗಂತ ನೀವೇನೂ ಒಲಿಂಪಿಕ್ಸ್‌ನಂಥಾ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಪರಮವೀರರಾ..?

ನಿಮಗಾಗಿ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ಮನೆ-ಮಠ ಬಿಟ್ಟು ಏರ್‌ಪೋರ್ಟ್‌ನಲ್ಲಿ ನಿಮಗೋಸ್ಕರ ಕಾಯಬೇಕಾ..? ನಿಮ್ಮಿಂದಾಗಿದೆ ಎನ್ನಲಾಗ್ತಿರೋ ಪರಮ ಪಾಪದ ಕೂಪದಲ್ಲಿ ನೊಂದು ಬೆಂದು ಹೋಗಿರೋ ಆ ಹೆಣ್ಣುಮಕ್ಕಳ ಬಿಸಿಯುಸಿರು ನಿಮ್ಮನ್ನ ಸುಮ್ಮನೆ ಬಿಡದು. ಆ ಅಸಹಾಯಕ ಜೀವಗಳಿಗೆ ನಿಜಕ್ಕೂ ನ್ಯಾಯ ಸಿಗಲೇಬೇಕು. ಇದು ಸಮಸ್ತ ಕರುನಾಡಿ ಒಕ್ಕೊರಲ ಆಗ್ರಹ.

ನೆನಪಿರಲಿ… ನೀವು ಇಂದು ಸಂಸದನಾಗಿ ನಿಲ್ಲುವಲ್ಲಿ ನಿಮ್ಮ ಕುಟುಂಬಕ್ಕಿರೋ ಆ ವರ್ಚಸ್ಸಿನ ಪಾಲೇ ಹೆಚ್ಚು. ಈ ರಾಜ್ಯದ ಮುಖ್ಯಮಂತ್ರಿಯಾಗಿ ದುಡಿದ ನಿಮ್ಮ ಚಿಕ್ಕಪ್ಪ ಇಂದು ಬಹಿರಂಗವಾಗಿ ಎಲ್ಲಿದ್ರೂ ಬಾರಪ್ಪಾ ಅನ್ನುವಂಥಾ ಅಸಹಾಯಕ ಸ್ಥಿತಿಯನ್ನು ನಿರ್ಮಿಸಿದವರು ನೀವೇ. ನಿಮ್ಮನ್ನ ಎತ್ತಿ, ಮುದ್ದಾಡಿ, ಭವ್ಯ ಭವಿಷ್ಯದ ಕನಸನ್ನು ಕನವರಿಸಿದ್ದ ನಿಮ್ಮ ತಂದೆಯು ನಿಮ್ಮಿಂದಾಗಿ ಜೈಲಿನ ಕತ್ತಲಕೋಣೆಯಲ್ಲಿ ಒಬ್ಬರೇ ಕೂತು ರೋದಿಸಿದ್ದು ನಿಮಗೆ ಗೊತ್ತಿಲ್ವಾ? ನಿಜಕ್ಕೂ ನಿಮ್ಮೊಳಗೊಬ್ಬ ಮಾನವೀಯ ಜೀವಿ ಇಲ್ಲವೇ ಇಲ್ವಾ? ಹೃದಯವೆನ್ನೋದೇ ಕಲ್ಲುಬಂಡೆಯಾಗಿದೆಯಾ? ಪಾಪಪ್ರಜ್ಞೆ ನಿಮ್ಮನ್ನ ಇನ್ನಿಲ್ಲದಂತೆ ಕಾಡ್ತಿಲ್ವಾ?

ನಿಮ್ಮ ತಾಯಿಯ ಮುಖದಲ್ಲಿದ್ದ ನಗು ನಿಮ್ಮಿಂದ ಬಾಡಿ ಹೋಗಿರೋ ಸತ್ಯದ ಅರಿವು ನಿಮಗಿಲ್ವಾ? ನಿಮ್ಮ ಸಹೋದರ ನಾಲ್ಕು ಜನರ ಮುಂದೆ ಮುಖ ಎತ್ತಿ ಮಾತನಾಡದಂಥಾ ಪರಿಸ್ಥಿತಿಯನ್ನು ನಿರ್ಮಿಸಿದ್ದು ನೀವೇ ಅಲ್ವಾ? ಅದೇನೇ ಇರ್ಲಿ. ಇವತ್ತು ನೀವು ಜರ್ಮನಿಯಲ್ಲಿದ್ದೀರೋ, ಇಲ್ಲ ಮತ್ತಿನ್ನೆಲ್ಲೋ ಪುಕ್ಕಲನಂತೆ ಅಡಗಿ ಕುಳಿತಿದ್ದೀರೋ ಅದು ನಿಮಗೆ ಗೊತ್ತು. ಒಂದೇ ಒಂದು ಪ್ರಶ್ನೆ, ನೀವು ದೇಶ ಬಿಟ್ಟು ಓಡಿಹೋಗಿದ್ದಾದ್ರೂ ಯಾಕೆ? ತಪ್ಪು ಮಾಡಿದ್ದೀರೋ, ಇಲ್ವೋ ಅನ್ನೋದನ್ನ ನಿಮ್ಮ ಮನಸಾಕ್ಷಿಯನ್ನೇ ಪ್ರಶ್ನಿಸಿಕೊಂಡು ಬಿಡಿ.

ನಿಮ್ಮ ವಿರುದ್ಧದ ಆರೋಪಗಳೆಲ್ಲ ಕಪೋಲಕಲ್ಪಿತ, ಎದುರಾಳಿಗಳ ಕುತಂತ್ರ, ಷಡ್ಯಂತ್ರವೇ ಅಂತಾ ಭಾವಿಸಿದ್ರೆ, ನೀವ್ಯಾಕೆ 28 ದಿನದಿಂದ ಕದ್ದು ಓಡ್ತಿದ್ದೀರಿ? ಭಾರತಕ್ಕೆ ಬಂದ್ರೆ ಕೇಸ್‌ ಹಾಕ್ತಾರೆ ಅಂತಾ ಭಯನಾ? ಪೊಲೀಸರು ವಿಚಾರಣೆ ಹೆಸರಲ್ಲಿ ಟಾರ್ಚರ್‌ ಕೊಡ್ತಾರೆ ಅಂತ ದಿಗಿಲಾ? ಜೈಲಿಗೆ ಹಾಕಿಬಿಡ್ತಾರೆ ಅಂತಾ ಕೈಕಾಲು ತಣಗಾಗ್ತಿವೆಯಾ? ಹಾಗಾದ್ರೆ, ಒಂದು ಕೆಲಸ ಮಾಡಿ. ಕೋರ್ಟ್‌ ಮುಂದೆ ಬಂದು ಶರಣಾಗಿ.

ಒಂದಲ್ಲ, ಎರಡಲ್ಲ, ಅದೆಷ್ಟು ಜನರು ನಿಮ್ಮಿಂದ ಇಂದು ಕಣ್ಣೀರು ಸುರಿಸ್ತಿದ್ದಾರೋ ಗೊತ್ತಿಲ್ಲ. ಅದೆಷ್ಟು ತಾಯಂದಿರು ನಿಮಗೆ ಹಿಡಿಶಾಪ ಹಾಕ್ತಿದ್ದಾರೋ ತಿಳಿದಿಲ್ಲ. ಸಮಸ್ತ ಹಾಸನವೇ ಇವತ್ತು ತಲೆತಗ್ಗಿಸಿ ನಿಂತಿದೆ ಅಂದ್ರೆ ಅದು ನಿಮ್ಮಿಂದಲೇ ಅನ್ನೋದನ್ನ ಮಾತ್ರ ಮರೆಯದಿರಿ. ಈ ಮಣ್ಣಿನ ಕಾನೂನು ನೊಂದವರಿಗೆ ನ್ಯಾಯದಾನ ಮಾಡಿಯೇ ತೀರುತ್ತದೆ. ಅದೆಷ್ಟು ದಿನ, ಅದೆಲ್ಲೇ ನೀವು ತಲೆಮರೆಸಿಕೊಂಡು ಸುತ್ತಿದ್ರೂ ಪ್ರತಿ ಆರಂಭಕ್ಕೂ ಅಂತ್ಯವಿರುತ್ತೆ. ಪಾಪದ ಕೊಡ ತುಂಬಿ ಬಂದಾಗ ಅದೆಂಥವನೇ ಆದ್ರೂ ತಲೆಬಾಗಲೇಬೇಕು.

ಸಮಸ್ತ ಕರುನಾಡಿನ ಪರವಾಗಿ

ವಿಸ್ತಾರ ನ್ಯೂಸ್‌ ತಂಡ

ಇದನ್ನೂ ಓದಿ: Prajwal Revanna Case: ಪಾಸ್‌ಪೋರ್ಟ್‌ ವಿಚಾರವಾಗಿ ಪ್ರಜ್ವಲ್‌ಗೆ ವಿದೇಶಾಂಗ ಸಚಿವಾಲಯ ನೋಟಿಸ್;‌ ಶೀಘ್ರ ಬಂಧನ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ದುಬಾರೆಯಲ್ಲಿ ಆನೆಗಳ ಕಾದಾಟದ ವೇಳೆ ಮಹಿಳೆ ಸಾವು

VISTARANEWS.COM


on

ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಚೆನ್ನೈ ಮೂಲದ ಜಿನ್ಶು (33) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ದುಬಾರೆ ಶಿಬಿರದಲ್ಲಿ ಆನೆಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಲು ಕರೆದೊಯ್ಯಲಾಗಿತು. ಈ ವೇಳೆ ಮಾರ್ತಾಂಡ ಆನೆಗೆ ಕಂಜನ್ ಆನೆ ತಿವಿದ ಪರಿಣಾಮ, ನಿಯಂತ್ರಣ ತಪ್ಪಿದ ಆನೆ ಪ್ರವಾಸಿ ಮಹಿಳೆಯ ಮೇಲೆ ಬಿದ್ದಿದೆ ಎನ್ನಲಾಗಿದೆ.

ಆನೆ ಕೆಳಗೆ ಸಿಲುಕಿದ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಶಿಬಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

VISTARANEWS.COM


on


ಕೇಂದ್ರ ಚುನಾವಣಾ ಆಯೋಗ 3 ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್‌ಐಆರ್‌) ಘೋಷಣೆ ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದ್ದು, ಮೇ 30ರಿಂದ ಎಸ್‌ಐಆರ್‌ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಹರಿಯಾಣ, ಪಂಜಾಬ್‌, ಚಂಡೀಗಢ, ಒಡಿಶಾ, ಮಿಜೋರಾಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಅರುಣಾಚಲ ಪ್ರದೇಶ, ಮೇಘಾಲಯ, ಜಾರ್ಜಂಡ್‌, ನಾಗಾಲ್ಯಾಂಡ್‌, ತ್ರಿಪುರ, ದಾದರ್‌ ಮತ್ತು ನಗರ ಹವೇಲಿ, ದಮನ್‌ ಮತ್ತು ದಿಯುಗಳಲ್ಲಿ 3 ನೇ ಹಂತದಲ್ಲಿ ಎಸ್‌ಐಆರ್‌ ನಡೆಯಲಿದೆ.
3ನೇ ಹಂತದ ಎಸ್‌ಐಆರ್‌ನಲ್ಲಿ 3.94 ಲಕ್ಷಕ್ಕೂ ಅಧಿಕ ಬೂತ್‌ ಮಟ್ಟದ ಅಧಿಕಾರಿಗಳು 36.73ಕೋಟಿ ಮತದಾರರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಈಗಾಗಲೇ ದೇಶದ 10 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ನಡೆಸಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಛತ್ತೀಸಗಢ, ಕೇರಳಂ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಗುಜರಾತ್‌, ಮಧ್ಯಪ್ರದೇಶ, ಗೋವಾ ಮತ್ತು ಬಿಹಾರದಲ್ಲಿ ಈಗಾಗಲೇ ಎಸ್‌ಐಆರ್‌ ಕಾರ್ಯ ಮುಗಿದಿದೆ.
ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಎಸ್‌ಐಆರ್‌ ಬಾಕಿ ಇದ್ದು, ಸ್ಥಳೀಯ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

Continue Reading

ಚಿತ್ರದುರ್ಗ

ಡಿ. ಸುಧಾಕರ್‌ ನಿಧನ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ: ಸಿಎಂ ಸಿದ್ದರಾಮಯ್ಯ

VISTARANEWS.COM


on

ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್‌ ಅವರ ಅಗಲಿಕೆಯಿಂದ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ. ಸುಧಾಕರ್‌ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಸುಧಾಕರ್‌ ಅವರು ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ” ಎಂದು ಹೇಳಿದರು.

ಸುಧಾಕರ್‌ ಅವರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. “ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಸಿಎಂ ಪ್ರಾರ್ಥಿಸಿದರು.

ಡಿ. ಸುಧಾಕರ್‌ ಅವರು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರ ನಿಧನ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ಸೋಮವಾರ ಸರ್ಕಾರಿ ರಜೆ ಘೋಷಿಸಲಾಗಿದೆ.

ನಾಳೆ ಸಂಜೆ 4 ಗಂಟೆಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Continue Reading

ಕರ್ನಾಟಕ

ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್‌, ಮತದಾನ ಯಾವತ್ತು ಗೊತ್ತಾ?

VISTARANEWS.COM


on

ಬೆಂಗಳೂರು: ಜಿಬಿಎ ಚುನಾವಣೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿದೆ. ಸಭೆ ಬಳಿಕ ಮಾತಾಡಿದ ರಾಜ್ಯ ಚುನಾವಣಾ ಆಯೋಗದ ಆಯಕ್ತ ಸಂಗ್ರೇಶಿ, ʼʼಚುನಾವಣೆಯ ಎಲ್ಲಾ ಪ್ರಕ್ರಿಯೆ ಮುಗಿಸಲಾಗಿದೆ. ಕೇವಲ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ. ಶಾಲೆ, ಕಾಲೇಜು, ವಿಧಾನಸಭಾ ಅಧಿವೇಶನ ಇತ್ಯಾದಿ ಗಮನದಲ್ಲಿಟ್ಟುಕೊಂಡು ಡೇಟ್‌ ಫಿಕ್ಸ್‌ ಮಾಡಬೇಕು. ಜೂನ್‌ ೩೦ರ ಒಳಗಾಗಿ ಚುನಾವಣೆ ಮುಗಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ. ಜೂನ್‌ ೧೪ರಿಂದ ಜೂನ್‌ ೨೪ರ ಒಳಗೆ ಒಂದು ಡೇಟ್‌ ಹೇಳಿದ್ದೇವೆ. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಚುನಾವಣೆ ಮುಂದೂಡುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇಲ್ಲ, ಅದು ಸುಪ್ರೀಂ ಕೋರ್ಟ್‌ ಪರಮಾಧಿಕಾರ ಎಂದು ಸಂಗ್ರೇಶಿ ಹೇಳಿದ್ದಾರೆ.

Continue Reading
Advertisement
Latest12 hours ago

ಪತ್ನಿ, ಮಗನ ಪ್ರತ್ಯೇಕ ಭೇಟಿಗೆ ಅವಕಾಶ ಕೋರಿದ ದರ್ಶನ್‌

Latest14 hours ago

ದುಬಾರೆಯಲ್ಲಿ ಆನೆಗಳ ಕಾದಾಟದ ವೇಳೆ ಮಹಿಳೆ ಸಾವು

Latest16 hours ago

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್‌

Latest18 hours ago

ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಪ್ರದಗ್ರಹಣ

ಪ್ರಮುಖ ಸುದ್ದಿ2 days ago

ವಿಜಯ್‌ ಸಿಎಂ ಆಗಿದ್ದಕ್ಕೆ ನನಗೆ ಅಸೂಯೆ ಇಲ್ಲ – ರಜನೀಕಾಂತ್‌

Latest2 days ago

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

Latest3 days ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest4 days ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest4 days ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest4 days ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌