attempt to murder Girl arrested for attempting to murder youthAttempt To Murder: ರೀಲ್ಸ್‌ ಮಾಡುವ ನೆಪದಲ್ಲಿ ಭಾವಿ ಪತಿಗೆ ಚಾಕು ಹಾಕಿದ ಬಾಲಕಿ! - Vistara News

ಕರ್ನಾಟಕ

Attempt To Murder: ರೀಲ್ಸ್‌ ಮಾಡುವ ನೆಪದಲ್ಲಿ ಭಾವಿ ಪತಿಗೆ ಚಾಕು ಹಾಕಿದ ಬಾಲಕಿ!

Attempt To Murder: ನಿನಗೊಂದು ಸರ್ಪ್ರೈಸ್‌ ಕೊಡುವೆ ಬಾ ಎಂದು ಪಾರ್ಕ್‌ಗೆ (Park) ಕರೆದುಕೊಂಡು ಹೋದ ಬಾಲಕಿಯೊಬ್ಬಳು, ರೀಲ್ಸ್‌ (Reels) ಮಾಡುವ ನೆಪದಲ್ಲಿ ಭಾವಿ ಪತಿಯ ಕೈ ಕಟ್ಟಿ, ಕಣ್ಣು ಮುಚ್ಚಿಸಿದ್ದಾಳೆ. ಬಳಿಕ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದಾಳೆ.

VISTARANEWS.COM


on

Sexual Assault Case: mother of Dalit Victim stripped and brother killed
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಹಾವೇರಿ: ಭಾವಿ ಪತಿಯೊಂದಿಗೆ ರೀಲ್ಸ್‌ ಮಾಡುವ ನೆಪದಲ್ಲಿ 17 ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿರುವ (Attempt to murder) ಘಟನೆ ರಾಣೆಬೆನ್ನೂರು ನಗರದ ಹೊರವಲಯದ ಸ್ವರ್ಣ ಪಾರ್ಕ್‌ನಲ್ಲಿ (swarna Park) ಶುಕ್ರವಾರ (ಏ.8) ನಡೆದಿದೆ. ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ನಿವಾಸಿ ದೇವೇಂದ್ರಗೌಡ ಕಾಡನಗೌಡ ಮಂಡಗಟ್ಟಿ (30) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.

ದೇವೇಂದ್ರಗೌಡ ಕುಟುಂಬದವರೆಲ್ಲ ಸೇರಿ ಇತ್ತೀಚೆಗಷ್ಟೇ ಬಾಲಕಿ ಜತೆಗೆ ನಿಶ್ಚಿತಾರ್ಥ ಮಾಡಿಸಿದ್ದರು. ಏ.6 ರಂದು ಆಕೆಯ ಹುಟ್ಟುಹಬ್ಬ ಇದ್ದ ಕಾರಣಕ್ಕೆ ರಾಣೆಬೆನ್ನೂರಿಗೆ ದೇವೇಂದ್ರ ಬಂದಿದ್ದ. ಆಕೆಗೆ ಹುಟ್ಟುಹಬ್ಬದ ಉಡುಗೊರೆ ಕೊಡಿಸಲೆಂದು ಹೊರಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆ ಬಾಲಕಿ ಒಂದು ವಿಶೇಷ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಬಾ ಎಂದು ಆಟೋದಲ್ಲಿ ನಗರದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದಾಳೆ.

ಈ ವೇಳೆ ಹುಡುಗಿ ನಿನಗೊಂದು ಸರ್ಪ್ರೈಸ್‌ ಕೊಡುವೆ ನನ್ನೊಟ್ಟಿಗೆ ರೀಲ್ಸ್‌ ಮಾಡಬೇಕು ಎಂದಿದ್ದಾಳೆ. ಭಾವಿ ಪತ್ನಿಯ ಮಾತಿಗೆ ದೇವೇಂದ್ರ ತಲೆಯಾಡಿಸಿದ್ದಾರೆ. ಇತ್ತ ಹೊಸ ಎರಡು ವೇಲ್, ಒಂದು ಕರ್ಚಿಫ್ ಖರೀದಿಸಿದ್ದ ಆಕೆ ಅದರಿಂದಲೇ ಯುವಕನ ಕೈ ಹಾಗೂ ಕಣ್ಣು ಕಟ್ಟಿದ್ದಾಳೆ. ಆಗ ದೇವೆಂದ್ರ ನಿನ್ನ ಬರ್ತ್‌ಡೇಗೆ ನನಗೇನಪ್ಪ ಸರ್ಪೈಸ್‌ ಎಂದು ಹೇಳುತ್ತಿದ್ದಂತೆ, ಬ್ಯಾಗ್‌ನಿಂದ ಚೂಪಾದ ಚಾಕು ತೆಗೆದುಕೊಂಡು ಕುತ್ತಿಗೆ ಕೊಯ್ದಿದ್ದಾಳೆ.

ಕೂಡಲೇ ಕತ್ತಲು ಆವರಿಸಿದ್ದಂತಾಗಿ ದೇವೇಂದ್ರ ಆಕೆಯನ್ನು ತಳ್ಳಿದ್ದಾನೆ. ಕೆಳಗೆ ಬಿದ್ದವಳು ಮತ್ತೆ ಎದ್ದು ಬಂದವಳೇ ನನ್ನೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀಯಾ ನೀನು? ನನಗೆ ಲವರ್ ಇದ್ದಾನೆ. ನೀನ್ಯಾರು ನನ್ನ ಮದುವೆ ಮಾಡಿಕೊಳ್ಳೋಕೆ ಎಂದು ಹೇಳುತ್ತಾ ಮತ್ತೆ ಎರಡೂ ಬಾರಿ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾಳೆ. ಅಷ್ಟರಲ್ಲಿ ದೇವೇಂದ್ರ ಕೈ ಕಟ್ಟಿದ್ದನ್ನು ಬಿಡಿಸಿಕೊಂಡು ಆಕೆಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಆಗ ಆತನನ್ನು ತಳ್ಳಿ ಬಾಲಕಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎನ್ನಲಾಗಿದೆ.

ಪರಾರಿ ಆಗುತ್ತಿದ್ದವಳ ಬೆನ್ನಿಗೆ ಬಿದ್ದ ಸ್ಥಳೀಯರು

ಯುವಕನ ಕುತ್ತಿಗೆ ಸೀಳಿ ಅಲ್ಲಿಂದ ಪರಾರಿ ಆಗುತ್ತಿದ್ದವಳನ್ನು ಸ್ಥಳೀಯರು ನೋಡಿದ್ದು, ಬೆನ್ನಿಗೆ ಬಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾರ್ಕಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವೇಂದ್ರನನ್ನು ತಕ್ಷಣವೇ ಹಲಗೇರಿ ಠಾಣೆ ಪೊಲೀಸರು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ (Davangere) ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ದೇವೇಂದ್ರ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: NCF 2023 Draft: ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?

ಪ್ರೀಪ್ಲಾನ್ ಮಾಡಿ ಹತ್ಯೆಗೆ ಸ್ಕೆಚ್‌

ಕುಟುಂಬದವರ ಸಮ್ಮುಖದಲ್ಲಿ ದೇವೇಂದ್ರಗೌಡನೊಂದಿಗೆ ಕಳೆದ ಮಾ. 31ರಂದು ಬಾಲಕಿಯ ನಿಶ್ಚಿತಾರ್ಥವಾಗಿತ್ತು. ಆದರೆ, ಈಕೆ ಬೇರೆಯವನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ದೇವೇಂದ್ರಗೌಡನ ಹತ್ಯೆಗೆ ಮುಂದಾಗಿದ್ದಳು ಎನ್ನಲಾಗಿದೆ. ಬಾಲಕಿ ಹತ್ಯೆಗೆ ಯತ್ನಿಸಿದ ಸಮಯದಲ್ಲಿ ಘಟನಾ ಸ್ಥಳದಲ್ಲಿ ಆಕೆಯನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೆ, ಕೃತ್ಯ ನಡೆಯುವ ಹಿಂದಿನ ದಿನ ಆಕೆ ತನ್ನ ಪ್ರಿಯಕರನ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ ಎಂದು ತಿಳಿದು ಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

VISTARANEWS.COM


on

ಬೆಂಗಳೂರು: ಶಾಸನಸಭೆಗಳಲ್ಲಿ ಮಹಿಳೆಯರ ಸ್ಥಾನಗಳನ್ನು ಹೆಚ್ಚಿಸುವ ಉದ್ದೇಶದಿಂದ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಮಸೂದೆ ಜಾರಿಯಾಗದಂತೆ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಪಕ್ಷಗಳ ಒಕ್ಕೂಟ ತಡೆಯೊಡ್ಡಿದೆ. ಈ ಮೂಲಕ ಆ ಪಕ್ಷಗಳು ಮಹಿಳಾ ವಿರೋಧಿ ನೀತಿಯನ್ನು ಅನುಸರಿಸಿವೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ.
ಅವರು ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ “ನಾರಿ ಶಕ್ತಿ ಫೋರಂ” ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಳ ಆಗಬೇಕು. ಮಹಿಳೆಯರು ಕಾನೂನು ರೂಪಿಸುವ ಜವಾಬ್ದಾರಿಯುತ ಅವಕಾಶ ಪಡೆಯಬೇಕು ಎಂದು ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ದೇಶದ ನೀತಿ ನಿಯಮಗಳನ್ನು ಸಿದ್ದಪಡಿಸುವ ನಿರ್ಣಾಯಕ ಪಾತ್ರದಲ್ಲಿ ಮಹಿಳೆಯರ ಪಾಲು ಇರಬೇಕು ಎಂಬ ಉದ್ದೇಶದಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿತ್ತು. ಆದರೆ ಈ ಮಸೂದೆಗೆ ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ಬೆಂಬಲ ನೀಡದೆ ಸೋಲಾಗುವಂತೆ ಮಾಡಿದವು ಎಂದು ಆರೋಪಿಸಿದರು.
ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳಾ ಧ್ವನಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದರು. ಅವರು ಮಹಿಳಾ ಸಂಸದರಿಗೆ ದೊಡ್ಡ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆ ಆಗಿದ್ದಾರೆ. ಇಂದು ಮಹಿಳೆ ಯುದ್ಧ ವಿಮಾನಗಳನ್ನು ಚಾಲನೆ ಮಾಡುತ್ತಾರೆ. ಸಿಂಧೂರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಮಹಿಳೆ. ಹೀಗೆ ಮಹಿಳೆಯ ಧ್ವನಿ ದೊಡ್ಡದಿದೆ. ಈ ಧ್ವನಿಗೆ ಶಿಕ್ಷಣ, ಹಣ ಇದ್ದಾಗ ಗೌರವ ಬರುತ್ತದೆ. ಇದೆಲ್ಲಕ್ಕಿಂತ ನೀತಿ ರೂಪಿಸುವಲ್ಲಿ ಮಹಿಳೆ ಇದ್ದರೆ ಇನ್ನೂ ಒಳ್ಳೆಯದು ಎಂದರು.
ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಮಹಿಳೆ ಇಂದು ಡ್ರೋಣ್ ತಯಾರಿ ಮಾಡುತ್ತಿದ್ದಾರೆ. ಹೊಸದಾಗಿ ಮಹಿಳಾ ಮೀಸಲು ಕಾಯಿದೆಯನ್ನು ಏಕೆ ತಂದಿದ್ದೀರಿ ಎಂದು ಕಾಂಗ್ರೆಸ್ ಪ್ರಶ್ನಿಸಬಹುದು. ಈ ಹಿಂದೆ 543 ಸ್ಥಾನಗಳಿಗೆ ಮಹಿಳಾ ಮೀಸಲಾತಿ ಮಸೂದೆ ತರಲಾಗಿತ್ತು. ಪುರುಷರ ಸ್ಥಾನಗಳನ್ನು ಕಿತ್ತು ಕೊಳ್ಳುವುದು ಬೇಡ ಎಂದು ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡಿ ಮಸೂದೆ ಮಂಡಿಸಿದರು. ಜನಗಣತಿ ಆದ ನಂತರ ಕ್ಷೇತ್ರ ಮರುವಿಂಗಡಣೆ ಮಾಡಿ ಎಂದು ಕಾಂಗ್ರೆಸ್ ನವರು ಒತ್ತಾಯ ಮಾಡುತ್ತಿದ್ದಾರೆ. ಸಮೀಕ್ಷೆ ಆದ ನಂತರ ಕ್ಷೇತ್ರ ಹಂಚಿಕೆ ಮಾಡಿದರೆ ದಕ್ಷಿಣ ಭಾರತಕ್ಕೆ ಸೀಟು ಕಡಿಮೆ ಆಗಲಿದೆ. ಹಾಗಾಗಿ ಎರಡೂ ಮಸೂದೆಯನ್ನು ಒಟ್ಟಿಗೆ ಮಂಡಿಸಲಾಗಿತ್ತು. ಪ್ರತಿ ರಾಜ್ಯಕ್ಕೆ ಶೇ. 50 ರಷ್ಟು ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡಲು ಮಸೂದೆ ಉದ್ದೇಶಿಸಿತ್ತು ಎಂದು ಸ್ಪಷ್ಟನೆ ನೀಡಿದರು.
ಬೃಹತ್‌ ಹೋರಾಟಕ್ಕೆ ಸಜ್ಜಾಗೋಣ:ಮಂಜುಳಾ
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು ಮತ್ತು ವಕೀಲರಾದ ಕು. ಸಿ ಮಂಜುಳ ಅವರು ಮಾತನಾಡಿ, ಮಹಿಳಾ ಮೀಸಲು ಮಸೂದೆ ಸೋಲಿಸಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ಮಾಡಲಾಗುತ್ತಿದೆ. ಇಂದು ಇಡೀ ನಾರಿಶಕ್ತಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಲಜ್ಜೆಗೆಟ್ಟ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‍ಗೆ ಬುದ್ಧಿ ಕಲಿಸಬೇಕಾಗಿದೆ. ಕಾಂಗ್ರೆಸ್ ಧೋರಣೆ ಖಂಡಿಸಿ ಇನ್ನು ಮುಂದೆ ಹೋರಾಟಕ್ಕೆ ಸದಾ ಸಿದ್ಧರಾಗೋಣ ಎಂದು ಕರೆ ನೀಡಿದರು.
ಸುಮಂಗಲಿ ಸೇವಾ ಆಶ್ರಮದ ಸ್ಥಾಪಕರು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ. ಎಸ್.ಜಿ. ಸುಶೀಲಮ್ಮ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Continue Reading

Latest

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

VISTARANEWS.COM


on

ನ್ಯೂಯಾರ್ಕ್:‌ ಜಗತ್ತು ಚೆರ್ನೋಬಿಲ್ ದುರಂತದ 40 ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಈ ವೇಳೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪರಮಾಣು ಶಸ್ತ್ರಾಸ್ತ್ರಗಳ ಶಾಂತಿಯುತ ಬಳಕೆಗೆ ಕರೆ ನೀಡಿದೆ.


ಚೆರ್ನೋಬಿಲ್‌ ದುರಂತದ ಸ್ಮರಣಾರ್ಥ ಶುಕ್ರವಾರ ಇಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷೆ ಅನ್ನಾಲೆನಾ ಬೇರ್ಬಾಕ್ ಅವರು, ಚೆರ್ನೋಬಿಲ್‌ನ ಪ್ರಮಾಣವು, ಪರಮಾಣು ತಂತ್ರಜ್ಞಾನವನ್ನು ಶಾಂತಿಯುತವಾಗಿ ಬಳಸಿದಾಗಲೂ ಇತರ ತಂತ್ರಜ್ಞಾನಗಳಿಗಿಂತ ಮೂಲಭೂತವಾಗಿ ಭಿನ್ನವಾಗಿದೆ ಎಂದು ಒತ್ತಿ ಹೇಳಿದರು.


ಏಪ್ರಿಲ್ 26, 1986 ರಂದು ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ಪರಮಾಣು ಅಪಘಾತಗಳಲ್ಲಿ ಒಂದನ್ನು ಕಂಡಿತು. ಆ ದಿನ, ಸರಣಿ ಸ್ಫೋಟಕಗಳು ನಂ. 4 ರಿಯಾಕ್ಟರ್ ಅನ್ನು ಹಾಳು ಮಾಡಿ, ಉಕ್ರೇನ್, ಬೆಲಾರಸ್ ಮತ್ತು ಯುರೋಪಿನ ಇತರ ಭಾಗಗಳಲ್ಲಿ ವಿಕಿರಣಶೀಲ ಮಾಲಿನ್ಯವನ್ನು ಹರಡಿತು.


8 ಮಿಲಿಯನ್‌ಗಿಂತಲೂ ಹೆಚ್ಚು ಜನರು ವಿಕಿರಣಕ್ಕೆ ಒಡ್ಡಿಕೊಂಡರು, ಸಾವಿರಾರು ಜನರು ಸತ್ತರು ಮತ್ತು ಮಕ್ಕಳು ಲ್ಯುಕೇಮಿಯಾ ಮತ್ತು ಇತರ ಕಾಯಿಲೆಗಳನ್ನು ಬೆಳೆಸಿಕೊಂಡರು ಎಂದು ಬೇರ್‌ಬಾಕ್ ಹೇಳಿದರು, ಅನೇಕರಿಗೆ ಅವರ ಉಳಿದ ಜೀವನವನ್ನು ರೂಪಿಸುವ ದೀರ್ಘಾವಧಿಯ ಆರೈಕೆಯ ಅಗತ್ಯವಿತ್ತು.


ಯುಎನ್ ಕಾರ್ಯದರ್ಶಿ, ಜನರಲ್ ಆಂಟೋನಿಯೊ ಗುಟೆರೆಸ್ ಇದನ್ನು ಇತಿಹಾಸದಲ್ಲಿ ಅತ್ಯಂತ ಮಹತ್ವದ ಪರಮಾಣು ಅಪಘಾತ ಎಂದು ಬಣ್ಣಿಸಿದರು. ಚೆರ್ನೋಬಿಲ್ ರಾಷ್ಟ್ರೀಯ ದುರಂತ ಮಾತ್ರವಲ್ಲ, ಪರಮಾಣು ಅಪಘಾತಗಳ ಪರಿಣಾಮಗಳನ್ನು ಅಂತರರಾಷ್ಟ್ರೀಯ ಸಮುದಾಯವ ಹಂಚಿಕೊಳ್ಳುತ್ತದೆ ಎಂಬ ಪಾಠವಾಗಿದೆ ಎಂದು ಅವರು ಹೇಳಿದರು.


ವಿಶ್ವಸಂಸ್ಥೆಯ ರಷ್ಯಾದ ಉಪ ಖಾಯಂ ಪ್ರತಿನಿಧಿ ಡಿಮಿಟ್ರಿ ಚುಮಾಕೋವ್, ಸರಿಯಾದ ವಿವೇಕವಿಲ್ಲದೆ ಯಾವುದೇ ತಂತ್ರಜ್ಞಾನಗಳು, ಉತ್ತಮ ಉದ್ದೇಶವನ್ನು ಹೊಂದಿರುವವುಗಳು ಸಹ ಬೆದರಿಕೆಯ ಮೂಲವಾಗಬಹುದು ಎಂದು ಹೇಳಿದರು.

Continue Reading

Latest

ಒಳಮೀಸಲಾತಿ ಜಾರಿ: ಕೊಟ್ಟ ಮಾತು ಈಡೇರಿಸಿದ ದಲಿತರಾಮಯ್ಯ; ಸಚಿವ ಆರ್.ಬಿ. ತಿಮ್ಮಾಪುರ

VISTARANEWS.COM


on

ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ, ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ನೇತೃತ್ವದ ನಿಯೋಗ ಕೃತಜ್ಞತೆ ಅರ್ಪಿಸಿತು.

ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಚಿವ ತಿಮ್ಮಾಪೂರರವರು ಹಾಗೂ ನೂರಾರು ದಲಿತ ಎಡ ಸಮುದಾಯದ ನಾಯಕರು, ಮೂವತ್ತು ವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕೆ ಸಿಹಿ ತಿನ್ನಿಸಿ ಧನ್ಯವಾದ ತಿಳಿಸಿದರು.

ನಮ್ಮ ಒಳ ಮೀಸಲಾತಿ ಹೋರಾಟ 30-40 ವರ್ಷಗಳದ್ದು. ಹಲವು ಸರ್ಕಾರಗಳು, ಮುಖ್ಯಮಂತ್ರಿಗಳಿಂದ ಸಾಧ್ಯವಾಗದ ಕೆಲಸವನ್ನ ಸನ್ಮಾನ್ಯ ಸಿದ್ದರಾಮಯ್ಯರವರು ಮಾಡಿ ತೋರಿಸಿದ್ದಾರೆ‌. ಸಿದ್ದರಾಮಯ್ಯ ಸಾಹೇಬರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವ ಜನಾಂಗ ಒಪ್ಪುವಂತೆ ಮಾಡಿ, ಎಲ್ಲಾ ಕ್ಯಾಬಿನೆಟ್ ಸಚಿವರ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ನಮ್ಮ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಇಡೀ ಸಮುದಾಯ ಸಿದ್ದರಾಮಯ್ಯರನ್ನ ನೆನಪಿಟ್ಟುಕೊಳ್ಳಲಿದೆ. ಇಡೀ ಸಮುದಾಯ ಅವರಿಗೆ ಕೃತಜ್ಞರಾಗಿಲಿದೆ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.

Continue Reading

Latest

ಕೇಜ್ರಿವಾಲ್‌ ನೀಲಿಕಣ್ಣಿನ ಹುಡಗನಿಗೆ ಕೇಂದ್ರ ಮಂತ್ರಿ ಸ್ಥಾನ ಸುಲಭ ಸಾಧ್ಯವೇ?

VISTARANEWS.COM


on

ಬೆಂಗಳೂರು: ರಾಘವ್‌ ಚಡ್ಡಾ. ರಾಜ್ಯಸಭೆಯಲ್ಲಿ ಆಫ್ ಪಕ್ಷದ ಉಪನಾಯಕರಾಗಿರುವ ಇವರು, ಶುಕ್ರವಾರವಷ್ಟೇ ಬಿಜೆಪಿಗೆ ಸೇರ್ಪಡೆಯಾದರು. ಆಪ್‌ ಪಕ್ಷ ಕಟ್ಟುವ ನಿಟ್ಟಿನಲ್ಲಿ ಇವರದು ಪ್ರಮುಖ ಪಾತ್ರವಿದೆ. ರಾಜ್ಯಸಭೆಯಲ್ಲಿ ಆಪ್‌ ಪಕ್ಷದ ಉಪನಾಯಕರಾಗಿದ್ದ ರಾಘವ್‌, ಈಚೆಗೆ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ನಿರೀಕ್ಷೆಯಂತೆ ಶುಕ್ರವಾರ ಬಿಜೆಪಿ ಪಕ್ಷವನ್ನು ಆಪ್‌ ಪಕ್ಷದ ಇತರೆ 7 ಮಂದಿ ರಾಜ್ಯ ಸಭೆ ಸದಸ್ಯರೊಂದಿಗೆ ಬಿಜೆಪಿಗೆ ಪಾದಾರ್ಪಣೆ ಮಾಡಿದ್ದಾರೆ.


ಹಾಗೆ‌ ನೋಡಿದರೆ, ಆಮ್ ಆದ್ಮಿ ಪಕ್ಷದಲ್ಲಿ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಲು ಮುಖ್ಯ ಪಾತ್ರ ವಹಿಸಿದ್ದ ರಾಘವ್ ಚಡ್ಡಾ, ಲಂಡನ್​​ನಲ್ಲಿ ಸಿಎ ಪದವಿ ಪಡೆದವರು. 23ನೇ ವಯಸ್ಸಿನಲ್ಲಿಯೇ ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಸೇರಿಕೊಂಡು ರಾಜಕೀಯಕ್ಕೆ ಎಂಟ್ರಿಯಾದರು. ಅಂದಿನಿಂದ 15 ವರ್ಷ ಆಪ್​​ನಲ್ಲಿಯೇ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ರಾಘವ್ ಚಡ್ಡಾ ದೆಹಲಿ ಬಳಿಕ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ನೆಲೆಯೂರಲು ಮುಖ್ಯಪಾತ್ರ ವಹಿಸಿದ್ದರು.


ಕೇಜ್ರಿವಾಲ್‌ರ ನೀಲಿಕಣ್ಣಿನ ಹುಡುಗ


ಅರವಿಂದ್ ಕೇಜ್ರಿವಾಲ್ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹಲವರಿಗಿತ್ತು. ಆದರೆ, ರಾಘವ್ ಚಡ್ಡಾ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಯಿತು. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಪಕ್ಷದೊಳಗೆ ನಾನಾ ಬದಲಾವಣೆಗಳಾದವು. ಇದರಿಂದ ಬೇಸರಗೊಂಡಿದ್ದ ರಾಘವ್ ಚಡ್ಡಾ ಪಕ್ಷದೊಳಗೇ ಇದ್ದರೂ ಪಕ್ಷದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.


ಕೇಜ್ರಿವಾಲ್ ಅವರೊಂದಿಗಿನ ಆಪ್ತ ಸಂಬಂಧದ ಕಾರಣಕ್ಕೆ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್​ರ “ನೀಲಿ ಕಣ್ಣಿನ ಹುಡುಗ” ಎಂದು ಕರೆಯಲಾಗುತ್ತಿತ್ತು. 2022ರಲ್ಲಿ ರಾಘವ್ ಪಂಜಾಬ್‌ನಿಂದ ರಾಜ್ಯಸಭೆ ಸಂಸದರಾದರು. 33ನೇ ವಯಸ್ಸಿನಲ್ಲಿ ಅವರು ರಾಜ್ಯಸಭೆಯ ಕಿರಿಯ ಸದಸ್ಯರಾಗಿ ಸಂಸತ್ ಪ್ರವೇಶಿಸಿದರು. 2023ರಲ್ಲಿ ಅವರನ್ನು ಸಂಜಯ್ ಸಿಂಗ್ ಬದಲಿಗೆ ರಾಜ್ಯಸಭೆಯಲ್ಲಿ ಎಎಪಿಯ ನಾಯಕರನ್ನಾಗಿ ನೇಮಿಸಲಾಯಿತು.


ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರವೂ ಆಮ್ ಆದ್ಮಿ ಪಕ್ಷದಲ್ಲಿ ರಾಘವ್ ಚಡ್ಡಾ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ವಜಾಗೊಳಿಸಿದ ನಂತರ ಪಕ್ಷದೊಳಗಿನ ಆಂತರಿಕ ಸಮರ ಎಲ್ಲರ ಎದುರು ಬಯಲಾಗಿತ್ತು. ಅದಕ್ಕೂ ಮೊದಲಿನಿಂದಲೂ ರಾಘವ್ ಚಡ್ಡಾ ಪಕ್ಷದ ಪ್ರಮುಖ ಕಾರ್ಯಕ್ರಮಗಳು ಮತ್ತು ಪ್ರಚಾರದಿಂದ ಗೈರುಹಾಜರಾಗಿದ್ದರು. ಪಂಜಾಬ್‌ನ ಉಸ್ತುವಾರಿ ಸ್ಥಾನದಿಂದಲೂ ಅವರನ್ನು ತೆಗೆದುಹಾಕಲಾಯಿತು. ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನದಂತಹ ನಿರ್ಣಾಯಕ ಸಮಯದಲ್ಲಿ ರಾಘವ್ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಎಎಪಿ ನಾಯಕರು ಆರೋಪಿಸಿದರು. ಪಂಜಾಬ್ ಸರ್ಕಾರದ ವ್ಯವಹಾರಗಳಲ್ಲಿ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಇತ್ತು.


ಇದೆಲ್ಲದರ ಪರಿಣಾಮ ಎಂಬಂತೆ ಇದೀಗ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರುವ ಮುನ್ನ ಅವರು ಆಫ್‌ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಆದರೆ ಇದೀಗ ಅಲ್ಲಿ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳುವ ಗುಣ ಬೆಳೆದಿದೆ ಎಂದಿದ್ದಾರೆ. ಹಾಗಿದ್ದರೆ ಈಗ ತಾವು ಕಾಲಿಟ್ಟಿರುವ ಬಿಜೆಪಿಯಲ್ಲಿ ಸಿದ್ದಾಂತಗಳ ರಾಜಿ ಆಗುವುದಿಲ್ಲವೇ ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಹಾಗೆ ನೋಡಿದರೆ ಆಪ್‌ ಪಕ್ಷದಿಂದ ಪ್ರಶಾಂತ್‌ ಭೂಷನ್‌, ಯೋಗೇಂದ್ರಯಾದವ್‌ , ಆಶಿತೋಷ್‌ ಮೊದಲಾದವರು ಹೊರ ಬಂದರು. ಆದರೆ ಅವರು ಯಾವುದೇ ಪಕ್ಷ ಸೇರಲಿಲ್ಲ, ತಮ್ಮ ಪಾಡಿಗೆ ತಾವು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಆದರೆ ಆಫ್‌ ಪಕ್ಷದಿಂದ ಹೊರ ಬಂದ ರಾಘವ್‌ ಚಡ್ಡಾ ಸೇರಿದಂತೆ ಒಂದು ವರ್ಗದ ನಾಯಕರು ಮಾತ್ರ ಬಿಜೆಪಿಗೆ ಸೇರ್ಪಡೆಯಾಗಿರುವುದು ಗಮನಾರ್ಹವಾಗಿದೆ.


ರಾಘವ್‌ ಚಡ್ಡಾ ಸೇರ್ಪಡೆ: ಬಿಜೆಪಿಗೆ ಲಾಭವೇ ?


ಆಪ್‌ ಪಕ್ಷ ಅಧಿಕಾರದಲ್ಲಿರುವ ಪಂಜಾಬ್‌ ನಲ್ಲಿ ಇದರ ಪ್ರಭಾವ ಬೀರದೇ ಇರದು. ಇದೀಗ ರಾಘವ್‌ ಚಡ್ಡಾ ಅವರೊಂದಿಗೆ ಬಿಜೆಪಿ ಸೇರಿರುವ ರಾಜ್ಯ ಸಭೆಯ ಸಂಸದರ ಪೈಕಿ ಸಂದೀಪ್‌ ಪಾಠಕ್‌ ಅವರು ಪ್ರಮುಖರು. ಚುನಾವಣಾ ತಂತ್ರ-ರಣತಂತ್ರ ರೂಪಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು. ಪಂಜಾಬ್‌ ಸಿಎಂ ಕಚೇರಿ ನಿರ್ವಹಣೆಯಲ್ಲಿಯೂ ಇವರ ಪಾತ್ರ ಹಿರಿದು. ಅದನ್ನು ಹೊರತುಪಡಿಸಿದರೆ ಪರಿಣಿತಿ ಚಡ್ಡಾ ಅವರ ಪತಿ ರಾಘವ್‌ ಚಡ್ಡಾ ಕೂಡ ಬಿಜೆಪಿಗೆ ವರವಾಗಬಲ್ಲರು. ಆದರೆ ಇವರೊಂದಿಗೆ ಬಿಜೆಪಿ ಸೇರ್ಪಡೆಯಾಗಿರುವ ಇತರರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಲಾಗುತ್ತಿದೆ.


ರಾಘವ್‌ ಚಡ್ಡಾ ಏಳು ಮಂದಿ ಸಂಸದರನ್ನು ತಮ್ಮೊಂದಿಗೆ ಕೇಸರಿ ಪಕ್ಷಕ್ಕೆ ಕರೆತಂದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನವಕಾಶ ದೊರೆಯಬಹುದು. ಏಕೆಂದರೆ ಪ್ರಸ್ತುತ ರಾಘವ್‌ ಅವರ ರಾಜ್ಯಸಭೆ ಕಾಲಾವಧಿ ಇನ್ನೇರಡು ವರ್ಷವರೆಗೆ ಬಾಕಿ ಇದೆ. ಮತ್ತೆ ಅವರನ್ನು ರಾಜ್ಯಸಭೆಯಲ್ಲಿ ಸ್ಥಾನವಕಾಶ ಕಲ್ಪಿಸಬಹುದು ಆದರೆ ಸದ್ಯಕ್ಕೆ ಆ ಸಾಧ್ಯತೆ ಕಡಿಮೆ ಎಂದೇ ಬಿಜೆಪಿ ಮೂಲಗಳ ಅಭಿಪ್ರಾಯ.


ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಇದೀಗ 142ಕ್ಕೇರಿದಂತಾಗಿದೆ. ಮೂರನೇ ಎರಡರಷ್ಟು ಬಹುಮತಕ್ಕಾಗಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಇನ್ನೂ 20 ಸದಸ್ಯರ ಬಲ ಅವಶ್ಯ. ಇದರಲ್ಲಿ ಬಿಜೆಪಿ ಸಫಲವಾದರೆ ಲೋಕಸಭೆ ಮತ್ತು ರಾಜ್ಯಸಭೆ ಈ ಎರಡೂ ಸದನಗಳಲ್ಲಿ ಅಂದರೆ ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ವಿಧೇಯಕ ಪಾಸು ಮಾಡಿಕೊಳ್ಳುವುದು ಬಿಜೆಪಿ ಸುಲಭಸಾಧ್ಯವಾಗಲಿದೆ. ಸಂತ್ತಿನ ಮೇಲ್ಮನೆಯಲ್ಲಿ ಪ್ರಸ್ತುತ ವಿಪಕ್ಷಗಳ ಸ್ಥಾನ 113ರಷ್ಟಿದೆ. ಆದರೆ ರಾಜ್ಯಸಭೆಯಲ್ಲಿ ಕೊರತೆ ಇರುವ ಇನ್ನೂ 20 ಸದಸ್ಯರನ್ನು ಸೆಳೆಯುವುದು ಕೇಸರಿ ಪಕ್ಷಕ್ಕೆ ಅಷ್ಟು ಸುಲಭಸಾಧ್ಯವಲ್ಲ ಎಂದೂ ಹೇಳಲಾಗುತ್ತಿದೆ.


ಒಟ್ಟಾರೆ, ರಾಘವ್‌ ಚಡ್ಡಾ ಅವರ ಬಿಜೆಪಿ ಸೇರ್ಪಡೆ ಆಪ್‌ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮತ್ತು ಪಠಾಲಂಗೆ ದೊಡ್ಡ ಆಘಾತವೇ ಸರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Continue Reading
Advertisement
Latest3 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

Latest3 hours ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest4 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest5 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

Latest5 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಅನರ್ಹತೆ ಭೀತಿ; ಶಿಕ್ಷೆ ರದ್ದುಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ್‌ ಕುಲಕರ್ಣಿ

Latest6 hours ago

ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸಬೇಡಿ, ಅವರೂ ಬುದ್ದಿವಂತರು; ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

Latest6 hours ago

ಕಾಂತಾರ ಚಾಪ್ಟರ್‌-1 ಮಿಮಿಕ್ರಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೇಲಿನ ಪ್ರಕರಣ ಇತ್ಯರ್ಥ; ಕೋರ್ಟ್‌ ಆದೇಶವೇನು?

Latest6 hours ago

ಒಳಮೀಸಲಾತಿ ಜಾರಿ: ಕೊಟ್ಟ ಮಾತು ಈಡೇರಿಸಿದ ದಲಿತರಾಮಯ್ಯ; ಸಚಿವ ಆರ್.ಬಿ. ತಿಮ್ಮಾಪುರ

Latest7 hours ago

ಒಳ ಮೀಸಲಾತಿಯಿಂದ ಅನ್ಯಾಯ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ; ಬಿಜೆಪಿ ಘೋಷಣೆ

Latest8 hours ago

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಶಿವಕುಮಾರ್;‌ ಪ್ರತಿತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ ಟೀಂ; ಮುಂದುವರೆದ ಹಾವು ಏಣಿಯಾಟ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌