Bangalore–Mysore Expressway: ಫೆ.27ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಕೇಂದ್ರಗಳ ಕಾರ್ಯಾರಂಭ; ಶುಲ್ಕ ಹೀಗಿದೆ - Vistara News

ಕರ್ನಾಟಕ

Bangalore–Mysore Expressway: ಫೆ.27ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಕೇಂದ್ರಗಳ ಕಾರ್ಯಾರಂಭ; ಶುಲ್ಕ ಹೀಗಿದೆ

Bangalore–Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಮಾರ್ಗದಲ್ಲಿ ಫೆ.27ರಂದು ಬೆಳಗ್ಗೆ 8ರಿಂದ ಟೋಲ್‌ ವಸೂಲಾತಿ ಆರಂಭವಾಗಲಿದೆ. ಯಾವ ಯಾವ ವಾಹನಗಳಿಗೆ ಎಷ್ಟು ಎಷ್ಟು ಶುಲ್ಕವನ್ನು ವಿಧಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Bengaluru-Mysuru highway toll plaza to be opened from Feb 27
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಸುಮಾರು 8000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore–Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಫೆ.27ರಿಂದ ಮೊದಲ ಹಂತದ ಟೋಲ್‌ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳಿಗೆ ನಿಗದಿತ ಸುಂಕ ನೀಡಬೇಕಾಗಿದೆ.

ಫೆ.೨7ರಂದು ಬೆಳಗ್ಗೆ ೮ರಿಂದ ಟೋಲ್‌ ವಸೂಲಾತಿ ಆರಂಭವಾಗಲಿದೆ. ಈ ಸಂಬಂಧ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾನುವಾರ ಆದೇಶ ಹೊರಡಿಸಿದೆ. ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಬೆಂಗಳೂರು-ನಿಡಘಟ್ಟ ನಡುವಿನ ಮೊದಲ ಹಂತದ 55.63 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ. ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ಮಾಸಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಆರು ಪಥಗಳ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಮಾತ್ರ ಟೋಲ್ ಅನ್ವಯ ಆಗಲಿದ್ದು, ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಟೋಲ್ ಇರುವುದಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರಿಂದ ಟೋಲ್‌ ಸಂಗ್ರಹಕ್ಕೆ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ಕೇಂದ್ರ ನಿರ್ಮಾಣವಾಗಿದೆ. ಇನ್ನು ಮೈಸೂರು ಕಡೆಯಿಂದ ಪ್ರಯಾಣಿಸುವವರಿಗಾಗಿ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿ ಟೋಲ್‌ ಪ್ಲಾಜಾ ನಿರ್ಮಾಣವಾಗಿದೆ. ಈ ಕೇಂದ್ರಗಳು ತಲಾ 11 ಗೇಟ್‌ಗಳನ್ನು ಒಳಗೊಂಡಿವೆ.

ಇದನ್ನೂ ಓದಿ: PM Modi: ನಾಳೆ ಕುಂದಾನಗರಿಯಲ್ಲಿ ಮೋದಿ ಮೇನಿಯಾ; ಪೌರ ಕಾರ್ಮಿಕ ಮಹಿಳೆ ಸೇರಿ ಐವರು ಸಾಮಾನ್ಯ ಕಾರ್ಮಿಕರಿಂದ ಪ್ರಧಾನಿಗೆ ಸ್ವಾಗತ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ ವಿವರ

ಟೋಲ್‌ ವಿವರ

ಟೋಲ್‌ ದರ ಪಟ್ಟಿ

ಕಾರು, ಜೀಪ್‌, ವ್ಯಾನ್‌ಗಳಿಗೆ

  • ಏಕಮುಖ ಸಂಚಾರ: 135 ರೂ.
  • ಅದೇ ದಿನ ಮರು ಸಂಚಾರ: 205 ರೂ.
  • ಸ್ಥಳೀಯ ವಾಹನಗಳು: 70 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 4525 ರೂ.
  • ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮಿನಿ ಬಸ್‌ಗಳು
  • ಏಕಮುಖ ಸಂಚಾರ: 220 ರೂ.
  • ಅದೇ ದಿನ ಮರು ಸಂಚಾರ: 320 ರೂ.
  • ಸ್ಥಳೀಯ ವಾಹನಗಳು: 110 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 7315 ರೂ.

ಬಸ್ ಅಥವಾ ಟ್ರಕ್ (ಎರಡು ಆ್ಯಕ್ಸೆಲ್)

  • ಏಕಮುಖ ಸಂಚಾರ: 460 ರೂ.
  • ಅದೇ ದಿನ ಮರು ಸಂಚಾರ: 690 ರೂ.
  • ಸ್ಥಳೀಯ ವಾಹನಗಳಿಗೆ 230 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 15,325 ರೂ.

ವಾಣಿಜ್ಯ ವಾಹನಗಳು (ಮೂರು ಆ್ಯಕ್ಸೆಲ್)

  • ಏಕಮುಖ ಸಂಚಾರ: 500ರೂ.
  • ಅದೇ ದಿನ ಮರು ಸಂಚಾರ: 750 ರೂ.
  • ಸ್ಥಳೀಯ ವಾಹನಗಳಿಗೆ 250 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ : 16,715 ರೂ.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆ್ಯಕ್ಸೆಲ್ ವಾಹನ (6ರಿಂದ 8 ಆ್ಯಕ್ಸೆಲ್)

  • ಏಕಮುಖ ಸಂಚಾರಕ್ಕೆ 720 ರೂ.
  • ಅದೇ ದಿನ ಮರು ಸಂಚಾರ: 1080 ರೂ.
  • ಸ್ಥಳೀಯ ವಾಹನಗಳಿಗೆ 360 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 24,030 ರೂ.

ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)

  • ಏಕಮುಖ ಸಂಚಾರ: 880 ರೂ.
  • ಅದೇ ದಿನ ಮರು ಸಂಚಾರ: 1315 ರೂ.
  • ಸ್ಥಳೀಯ ವಾಹನಗಳಿಗೆ 440 ರೂ.
  • ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 29,255 ರೂ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actress Ramya : ಮೋಹಕ ತಾರೆ ನಟಿ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ನವೆಂಬರ್‌ನಲ್ಲಿ ಮದುವೆ ಫಿಕ್ಸಾ!

Actress Ramya : ಸ್ಯಾಂಡಲ್‌ ಕ್ವೀನ್‌ ರಮ್ಯಾ ಅವರು ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಅಂತೆ. ವರ ಚೌದ್ರಿ ಫ್ಯಾಮಿಲಿ ಎಂಬುದು ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ನಟಿ ರಮ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

VISTARANEWS.COM


on

By

Actress Ramya
Koo

ನಟಿ ರಮ್ಯಾಗೆ (Actress Ramya) ಹೋದಲ್ಲೆಲ್ಲ ಎದುರಾಗುವ ಮೊದಲ ಪ್ರಶ್ನೆ ಮದುವೆ ಯಾವಾಗ ಎನ್ನುವುದು.

Ramya actress
Actress Ramya

ಹಿಂದೊಮ್ಮೆ ಮಂಡ್ಯದಲ್ಲೂ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ ಕೂಡಲೇ, ʻʻದಯವಿಟ್ಟು ನಂಗೊಬ್ಬ ಹುಡುಗನ್ನ ಹುಡುಕಿಕೊಡಿ ಪ್ಲೀಸ್‌ʼʼ ಎಂದಿದ್ದರು. ʻನಾನು ಗೌಡ್ರು ತಾನೇ.. ನಂಗೊಬ್ಬ ಒಳ್ಳೆಯ ಗೌಡ್ರ ಹುಡುಗನ್ನ ಹುಡುಕಿ ಪ್ಲೀಸ್‌. ನನಗೂ ನೋಡಿ ನೋಡಿ ಸಾಕಾಗಿದೆ ಹುಡುಕಿ ನೀವೆʼʼ ಎಂದಿದ್ದರು.

Actress Ramya
Actress Ramya

ಇದೀಗ 42 ವಯಸ್ಸಿಗೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಂತಿದೆ. ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಮೋಹಕತಾರೆ ರಮ್ಯಾ ಉದ್ಯಮಿಯೊಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Actress Ramya
Actress Ramya

ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ವರ ಚೌದ್ರಿ ಫ್ಯಾಮಿಲಿ ಎಂಬುದು ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ನಟಿ ರಮ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಗುಲಾಬಿಗಳ ಜತೆ ಮೋಹಕ ತಾರೆ

Actress Ramya
ಮೋಹಕತಾರೆ ರಮ್ಯಾ (Actress Ramya) ಅವರು ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಗುಲಾಬಿ ಬಣ್ಣದ ಗುಲಾಬಿಗಳ ಸೌಂದರ್ಯವನ್ನು ಸವಿಯುವುದು ಕಾಣಬಹುದು.
ʻʻ2 ದಶಕ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಈಗಲೂ ತನ್ನ ಜೀವನದ ಸಾಮ್ರಾಜ್ಯಕ್ಕೆ ತಾನೆ ರಾಣಿ , ಲವ್ ಯೂ ರಾಣಿʼʼ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
Actress Ramya
ಈ ಫೋಟೊ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
Actress Ramya
ಫೋಟೊಗಳ ಜತೆ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ.
Actress Ramya
ಗಾರ್ಡನ್ ಏರಿಯಾದಲ್ಲಿ ವೈಟ್ ಶರ್ಟ್ ಧರಿಸಿ ನಿಂತಿದ್ದ ನಟಿ ಗುಲಾಬಿಗಳಿಗೆ ದೂರದಿಂದಲೇ ಕಿಸ್ ಮಾಡಿದ್ದಾರೆ.

Continue Reading

ಬೆಂಗಳೂರು

Ganesh Fest 2024 : ಯಡವಟ್ಟು ಆಯ್ತು ತಲೆ ಕೆಟ್ಟು ಹೋಯ್ತು; 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು!

Ganesh Fest 2024: ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದರು. ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿ, ಯಡವಟ್ಟು ಮಾಡಿಕೊಂಡಿದ್ದರು.

VISTARANEWS.COM


on

By

Youth immerse Ganesh with 65 grams of gold chain
Koo

ಬೆಂಗಳೂರು: ಆ ಯುವಕರಿಗೆ ಒಂದು ಕ್ಷಣ ಹೋದ ಜೀವ ವಾಪಸ್‌ ಬಂದಿತ್ತು. ಒಂದು ಸಣ್ಣ ಯಡವಟ್ಟಿನಿಂದ ಇಡೀ ರಾತ್ರಿ ಯುವಕರ ತಲೆ ಕೆಟ್ಟು ಹೋಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಯ ಜೋಶ್‌ನಲ್ಲಿ ಯುವಕರು ಯಡವಟ್ಟು ಮಾಡಿಕೊಂಡಿದ್ದರು. ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದರು. ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಬೆಂಗಳೂರಿನ ಮಾಗಡಿರೋಡ್‌ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ಘಟನೆ ನಡೆದಿದೆ.

ಏರಿಯಾದಲ್ಲಿ ಮನೆಯಲ್ಲಿಟ್ಟ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿದೆ. ಎದ್ದನೋ ಬಿದ್ದನೋ ಓಡಿದ ಯುವಕರು ತಕ್ಷಣ ಟ್ರಕ್‌ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.

Youth immerse Ganesh with 65 grams of gold chain
Youth immerse Ganesh with 65 grams of gold chain

ಈ ವೇಳೆ ಟ್ರಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ‌ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ಸಿಕ್ಕಿದೆ. ಚಿನ್ನದ ಸರ ಕಂಡು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌

Renuka swamy Murder case : ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ16 ಆರೋಪಿ ಕೇಶವಮೂರ್ತಿ ಸಿಲುಕಿದ್ದೇ ರೋಚಕವಾಗಿದೆ. ಟೀ ಕುಡಿಯೋಕೆ ಹೋದವನು ಕೊನೆಗೆ ಕೊಲೆ ಪ್ರಕರಣದಲ್ಲಿ ಜೈಲು ಸೇರುವಂತಾಗಿದೆ. ಇಷ್ಟಕ್ಕೂ ಆ ದಿನ ಏನೆಲ್ಲ ಆಯಿತು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Renukaswamy murder
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder) ಪ್ರಕರಣವನ್ನು ವಿಶೇಷ ಆಸಕ್ತಿ ವಹಿಸಿ ಕಾನೂನು ವ್ಯಾಪ್ತಿಯಲ್ಲಿ ಯಾವ್ಯಾವ ಕೆಲಸಗಳನ್ನು ಮಾಡಬಹುದು ಆ ರೀತಿ ಪೊಲೀಸರು ಕೆಲಸ ಮಾಡಿದ್ದಾರೆ‌. ಇನ್ವೆಷ್ಟಿಗೇಷನ್ ಅಂದರೆ ಇದು ಎಂಬ ರೀತಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗೆ ಹಣದಾಸೆಗೆ ಬಿದ್ದವನು ದೊಡ್ಡ ಕೇಸ್‌ನಲ್ಲಿ ಹೇಗೆ ಫಿಟ್ ಆದ ಎಂಬ ಮಾಹಿತಿ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ16 ಆರೋಪಿ ಕೇಶವ ಮೂರ್ತಿ ಕ್ರೈಂ ಸೀನ್‌ನಲ್ಲೇ ಇರಲಿಲ್ಲ. ಆದರೆ ಆತನ ಹಣದಾಸೆ, ಬಡತನವು ಬಹು ದೊಡ್ಡ ಪ್ರಕರಣದ ಆರೋಪಿಯನ್ನಾಗಿಸಿದೆ. ಉತ್ತರಹಳ್ಳಿಯಲ್ಲಿ ಟೀ ಕುಡಿಯುತ್ತಿದ್ದವನು ಕೊಲೆ ಕೇಸಲ್ಲಿ ಭಾಗಿಯಾಗಿದ್ದೇ ರೋಚಕ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಈತ ರಾಘವೇಂದ್ರನ ಕಣ್ಣಿಗೆ ಬಿದ್ದಿದ್ದ. ಆಗಲೇ ಕೇಶವಮೂರ್ತಿಯ ಬ್ಯಾಡ್ ಟೈಂ ಶುರುವಾಗಿತ್ತು. ಕ್ರೈಂನಲ್ಲಿ ಭಾಗಿಯಾಗಿಲ್ಲದಿದ್ರೂ ಸಾಕ್ಷಿ ನಾಶದ ಕೇಸ್‌ ಈತನ ಹೆಗಲೇರಿದೆ.

ಚಿತ್ರದುರ್ಗದ ಲಿಂಕ್ ಇರಲಿ ಎಂದು ರಾಘವೇಂದ್ರನನ್ನು ಸರಂಡರ್ ಆಗಲು ಡಿ ಗ್ಯಾಂಗ್ ನಿರ್ಧರಿಸಿತ್ತು. ಮೊದಲು ಆತ ಒಪ್ಪಿರಲಿಲ್ಲ. ಹೀಗಾಗಿ ಕಾರ್ತಿಕ್ ಹಾಗೂ ನಿಖಿಲ್ ನಾವು ಸರಂಡರ್ ಆಗುತ್ತೇವೆ ಎಂದು ಒಪ್ಪಿದ್ದರು. ಈ ವೇಳೆ ಮತ್ತೊಬ್ಬ ಯಾರಾದರೂ ಬೇಕಲ್ಲ ಎಂದು ಹುಡುಕುವಾಗಲೇ ಕಾರ್ತಿಕ್‌ಗೆ ಆತನ ಸ್ನೇಹಿತ ಕೇಶವಮೂರ್ತಿ ಸಿಕ್ಕಿದ್ದ. ಸ್ನೇಹಿತ ಎಂಬ ಕಾರಣಕ್ಕೆ ಕಾರ್ತಿಕ್‌ನನ್ನು ಮಾತನಾಡಿಸಿದ್ದ.

ಈ ವೇಳೆ ಕೇಶವ ಮೂರ್ತಿ ಬಳಿ ಒಂದು ಕೊಲೆಯಾಗಿದೆ. ಸರಂಡರ್ ಆದರೆ ಕೈ ತುಂಬಾ ಹಣ ಕೊಡುತ್ತಾರೆ ಎಂದಿದ್ದ. ಹಣದಾಸೆಗೆ ಬಿದ್ದವನು ಸರಂಡರ್ ಆಗಲು ಒಪ್ಪಿ ಶೆಡ್‌ಗೆ ಹೋಗಿದ್ದ. ನಂತರ ಐದು ಲಕ್ಷ ಅಡ್ವಾನ್ಸ್ ಕೂಡ ಪಡೆದಿದ್ದ. ಆಗಲೇ ಕೇಶವಮೂರ್ತಿಗೆ ದರ್ಶನ್ ಈ ಕೊಲೆಯಲ್ಲಿ ಭಾಗಿಯಾಗಿದ್ದಾನೆಂದು ಗೊತ್ತಾಗಿದ್ದು.

ಮಣ್ಣು ಪರೀಕ್ಷೆ ಮಾಡಿಸಿದ ಪೊಲೀಸರು

ಸದ್ಯ ಆ ಹಣದ ರಿಕವರಿ ಕೂಡ ಆಗಿದೆ. ಇನ್ನು ಇದೇ ತನಿಖೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಹಿಂದೆ ಕೃತ್ಯ ನಡೆದ ವೇಳೆ ಬಳಕೆಯಾದ ವಸ್ತುಗಳನ್ನು ಪೊಲೀಸರು ರಿಕವರಿ ಮಾಡಿದ್ದರು. ಇದೇ ಮೊದಲ ಬಾರಿಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ಯಶಸ್ವಿಯಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ದರ್ಶನ್ ಧರಿಸಿದ್ದ ಶೂನಲ್ಲಿದ್ದ ಮಣ್ಣಿನ ವಿವರ ಪಡೆದಿದ್ದರು. ಅದಕ್ಕೆ ಪೂರಕವಾಗಿ ಶೆಡ್‌ನಲ್ಲಿದ್ದ ಮಣ್ಣನ್ನೂ ಎಫ್‌ಎಸ್ಎಲ್ ಗೆ ಕಳಿಸಿದ್ದರು . ಸದ್ಯ ಎರಡು ಕೂಡ ಮ್ಯಾಚ್ ಆಗಿದ್ದು ಅದರ ಬಗ್ಗೆ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Fraud Case : ಹುಡುಗಿಯರೇ ಹುಷಾರ್‌! ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣ ಕೀಳುತ್ತಾರೆ ಈ ಖದೀಮರು

Fraud Case :ಬೆಳಗಾವಿಯಲ್ಲಿ ಆ್ಯಕ್ವಿವ್‌ ಆಗಿರುವ ಆ ಗ್ಯಾಂಗ್‌ಗೆ ಪೊಲೀಸರಿಗೆ ತಲೆ ಕೆಟ್ಟು ಹೋಗಿದೆ. ಅದೆಲ್ಲೋ ದೂರದಲ್ಲಿ ಕುರಿತು ಹುಡುಗಿಯರನ್ನು ಬೆತ್ತಲೆಗೊಳಿಸಿ ಬಳಿಕ ಹಣಕ್ಕೆ ಡಿಮ್ಯಾಂಡ್‌ ಮಾಡುವ ಖತರ್ನಾಕ್‌ ಗ್ಯಾಂಗ್‌ವೊಂದು ಪೊಲೀಸರ ನಿದ್ದೆ ಗೆಡಿಸಿದೆ.

VISTARANEWS.COM


on

By

fraud case
ಸಾಂದರ್ಭಿಕ ಚಿತ್ರ
Koo

ಬೆಳಗಾವಿ: ಹುಡುಗಿಯರೇ ಹುಷಾರ್ ನೀವೂ ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣಕ್ಕೆ ಬೇಡಿಕೆ ಇಡುವ ಖತರ್ನಾಕ್‌ ಗ್ಯಾಂಗ್‌ವೊಂದು (Fraud Case) ಆ್ಯಕ್ವಿವ್‌ ಆಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್, ಐಬಿ ಎಂದು ಹೆಸರು ಹೇಳಿಕೊಂಡು ಕರೆ ಮಾಡುವ ಖದೀಮರು, ನೀವು ಕ್ರೈಂವೊಂದರಲ್ಲಿ ಭಾಗಿಯಾಗಿದೀರಿ ಎಂದು ಹೆದರಿಸುತ್ತಾರೆ.

ವಿಡಿಯೊ ಕಾಲ್ ಮೂಲಕ ಮಾಹಿತಿ ಕೇಳಿ, ನಿಮ್ಮ ಇಡೀ ಬಾಡಿ ತಪಾಸಣೆ ಮಾಡಬೇಕು ಎಂದು ಬೆತ್ತಲೆಗೊಳಿಸುತ್ತಾರೆ. ಇದನ್ನೇ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾರೆ. ದುಷ್ಟರ ಈ ಖತರ್ನಾಕ್‌ ಐಡಿಯಾಗೆ ಬೆಳಗಾವಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಹೊಸ ಮಾದರಿಯಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ಇ-ಮೇಲ್, ಮೆಸೇಜ್, ಕಾಲ್ಸ್ ಅಥವಾ ವಾಟ್ಸಪ್ ಮೂಲಕ ಒಂದು ಮೆಸೇಜ್ ಬರುತ್ತದೆ. ಕ್ರೈಂ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರು ಕ್ರಿಮಿನಲ್ ಕೇಸ್‌ನಲ್ಲಿ ಬಂದಿದೆ. ನೀವು ನಮ್ಮ ಹತ್ತಿರ ಬರಬೇಕು ರಿಪೋರ್ಟ್ ಕೊಡಬೇಕು, ಯಾಕೆ ನೀವು ಈ ರೀತಿ ಮಾಡಿದೀರಿ ಎಂದು ಮಾತಾಡಿ ವಿಕ್ಟಿಮ್ಸ್‌ಗಳಿಗೆ ಬೆದರಿಸುತ್ತಾರೆ.

ನಾವೀಗ ನಿಮ್ಮನ್ನ ವಿಚಾರಣೆ ಮಾಡಬೇಕು ಕ್ಯಾಮೆರಾ ಮುಂದೆ ನೀವು ಬರಬೇಕು. ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಂ ಬಗ್ಗೆ ಫ್ಯಾಮಿಲಿ ಅವರಿಗೆ ಹೇಳುತ್ತೇವೆ. ಹೇಗೆ ಕ್ರೈಂ ಮಾಡಿದೀರಿ ಅಂತಾ ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು ಬಟ್ಟೆ ಬಿಚ್ಚಬೇಕು ಅಂತಾ ಹೇಳುತ್ತಾರೆ. ಬಳಿಕ ಆ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ನಂಬಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿವೆ. ಈ ರೀತಿ ಕರೆಗಳು ಬಂದು ಬ್ಲ್ಯಾಕ್ ಮೇಲ್ ಮಾಡಿದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actress Ramya
ಸ್ಯಾಂಡಲ್ ವುಡ್34 mins ago

Actress Ramya : ಮೋಹಕ ತಾರೆ ನಟಿ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ನವೆಂಬರ್‌ನಲ್ಲಿ ಮದುವೆ ಫಿಕ್ಸಾ!

Youth immerse Ganesh with 65 grams of gold chain
ಬೆಂಗಳೂರು3 hours ago

Ganesh Fest 2024 : ಯಡವಟ್ಟು ಆಯ್ತು ತಲೆ ಕೆಟ್ಟು ಹೋಯ್ತು; 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು!

Renukaswamy murder
ಸ್ಯಾಂಡಲ್ ವುಡ್3 hours ago

Renuka swamy murder : ಟೀ ಕುಡಿಯಲು ಹೋದವನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್‌

fraud case
ಬೆಳಗಾವಿ6 hours ago

Fraud Case : ಹುಡುಗಿಯರೇ ಹುಷಾರ್‌! ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣ ಕೀಳುತ್ತಾರೆ ಈ ಖದೀಮರು

road accident
ಚಿಕ್ಕೋಡಿ6 hours ago

Road Accident : ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಬಸ್‌; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ

murder case
ಕಲಬುರಗಿ7 hours ago

Murder case : ನಡುರಸ್ತೆಯಲ್ಲಿ ಅಡ್ಡಗಟ್ಟಿ ವ್ಯಕ್ತಿಯ ಹೊಟ್ಟೆ ಬಗೆದು ಕೊಂದ ದುಷ್ಕರ್ಮಿಗಳು

Road Accident
ರಾಯಚೂರು9 hours ago

Road Accident : ಬಸ್‌ಗಳ ನಡುವೆ ಭೀಕರ ಅಪಘಾತ; ಚಾಲಕ ಸ್ಥಳದಲ್ಲೇ ದುರ್ಮರಣ

Murder Case A scuffle between brothers during Ganesh festival ends in murder
ಉತ್ತರ ಕನ್ನಡ10 hours ago

Murder Case : ಗಣೇಶ ಹಬ್ಬದಲ್ಲಿ ಸಹೋದರರ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ

actor darshan
ಸಿನಿಮಾ10 hours ago

Actor Darshan : ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು; ಸೆರೆವಾಸದಲ್ಲಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಸಿಗುತ್ತಾ ಬೇಲ್‌!

physical abuse
ಬೆಂಗಳೂರು ಗ್ರಾಮಾಂತರ11 hours ago

Physical Abuse : ಹಾಲು ತರಲು ಹೋದ ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ ದುಷ್ಟ; ಬೆತ್ತಲೆಗೊಳಿಸಿ ಥಳಿಸಿದ ಯುವಕರು

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 week ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌