Basavaraja Bommai : ಹಣಕಾಸಿನ ಸ್ಥಿತಿ ಉತ್ತಮ; ಜನಪ್ರಿಯ ಯೋಜನೆಗಳ ಬಜೆಟ್‌ ಸುಳಿವು ನೀಡಿದ ಸಿಎಂ ಬೊಮ್ಮಾಯಿ - Vistara News

ಕರ್ನಾಟಕ

Basavaraja Bommai : ಹಣಕಾಸಿನ ಸ್ಥಿತಿ ಉತ್ತಮ; ಜನಪ್ರಿಯ ಯೋಜನೆಗಳ ಬಜೆಟ್‌ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಫೆಬ್ರವರಿ 17ರಂದು ರಾಜ್ಯದಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಬಡವರ, ರೈತರ ಪರ ಜನಪ್ರಿಯ ಯೋಜನೆಗಳಿರುತ್ತವೆ ಎಂಬ ಮುನ್ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದೂ ಅವರು ಹೇಳಿದ್ದಾರೆ.

VISTARANEWS.COM


on

Basavaraja bommai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ʻʻಈ ವರ್ಷದ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ, ಜನಪರವಾಗಿರುತ್ತದೆ. ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ತಮ್ಮ ತವರು ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು. ಈ ಮೂಲಕ ಜನಪ್ರಿಯ ಯೋಜನೆಗಳ ಚುನಾವಣಾ ಬಜೆಟ್‌ ಮಂಡನೆಯ ಸುಳಿವು ನೀಡಿದರು.

ʻʻಈ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ನಾನು ಅಧಿಕಾರ ತೆಗೆದುಕೊಂಡಾಗ 5 ಸಾವಿರ ಕೋಟಿ ರೂ. ಸಂಗ್ರಹದ ಗುರಿ ಇತ್ತು. ಈಗ ಅದನ್ನು ತುಂಬುವುದಲ್ಲದೇ, 13 ಸಾವಿರ ಕೋಟಿ ರೂ. ಹೆಚ್ಚುವರಿ ಸಂಗ್ರಹ ಮಾಡಿದ್ದೇವೆ.‌ 72 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳುವ ಅವಕಾಶ ಇದ್ದರೂ ನಾವು ಕೇವಲ 61 ಸಾವಿರ ಕೋಟಿಗೆ ಮಿತಿಗೊಳಿಸಿದ್ದೇವೆ.‌ ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆʼʼ ಎಂದರು ಮುಖ್ಯಮಂತ್ರಿ.

ʻʻಹತ್ತಾರು ವರ್ಷಗಳಿಂದ ಸರ್ಕಾರಗಳು ಮಾಡಿರುವ ಸಾಲವನ್ನು ತೀರಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಶೇ. 9ರ ವೇಗದಲ್ಲಿ ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಅದರ ಗತಿಯನ್ನಿಟ್ಟುಕೊಂಡು ಸಾಮಾಜಿಕವಾಗಿ ಅಭಿವೃದ್ಧಿ ಮಾಡಿ ಸಮತೋಲನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ಎರಡು, ಮೂರು ವರ್ಷ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆʼʼ ಎಂದು ಬೊಮ್ಮಾಯಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯವನ್ನು ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ವರ್ಷ 8101 ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಅವೆಲ್ಲವೂ ಮೇ, ಜೂನ್ ವೇಳೆಗೆ ನಿರ್ಮಾಣ ಆಗುತ್ತವೆ. ಅದೇ ವೇಗವನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಪ್ರಗತಿಯಲ್ಲಿ ಹೋಗುತ್ತಿದ್ದೇವೆ. ನಮ್ಮ ಪ್ರಾತಿನಿಧ್ಯ ಆರೋಗ್ಯ, ಶಿಕ್ಷಣದ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲದಕ್ಕೂ ಇರುತ್ತದೆ ಎಂದರು.

ಚುನಾವಣೆಯ ಪ್ರಭಾವ ಬಜೆಟ್ ಮೇಲೆ ಇರುತ್ತದೆ. ನಾವು ಕೋವಿಡ್ ನಂತರದಲ್ಲಿ ಏನು ಆರ್ಥಿಕವಾಗಿ ಮುಂದೆ ಹೋಗುತ್ತಿದ್ದೇವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಮುಖ್ಯ. ಆರ್ಥಿಕ ಶಿಸ್ತು ತಂದು ರಾಜ್ಯದ ಹಿತದೃಷ್ಟಿಯನ್ನು ನಮ್ಮ ಗಮನದಲ್ಲಿಟ್ಟುಕೊಂಡಿದ್ದೇವೆ ಎಂದರು.

ಶಿಗ್ಗಾಂವ ಮತ್ತು ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಪಣ

ಶಿಗ್ಗಾಂವ ,ಸವಣೂರು ಕ್ಷೇತ್ರದ ಜನತೆ ಬಹಳ ದೊಡ್ಡ ಪ್ರಮಾಣದಲ್ಲಿ ಸೇರಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಹಾರೈಸಿದ್ದಾರೆ. ಅವರ ಆಶೀರ್ವಾದದಿಂದ ನಾನು ಇವತ್ತು ರಾಜ್ಯದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ನನ್ನ ಕ್ಷೇತ್ರದ ಜನತೆಗೆ ವಿಶೇಷವಾದ ಕೋಟಿ ಕೋಟಿ ನಮನಗಳನ್ನು, ಕೃತಜ್ಞತೆಯನ್ನು ಹೇಳುತ್ತೇನೆ ಎಂದು ಬೊಮ್ಮಾಯಿ ತಲೆಬಾಗಿದರು.

ಶಿಗ್ಗಾಂವ ಮತ್ತು ಸವಣೂರುಗಳನ್ನು ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ. ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.

ಅಮಿತ್ ಶಾ ಭೇಟಿ ಉ.ಕ ಭಾಗದಲ್ಲಿ ಬಿಜೆಪಿ ಅಲೆ ಹೆಚ್ಚಿಸಿದೆ

ಕಿತ್ತೂರು ಕರ್ನಾಟಕ ಭಾಗಕ್ಕೆ‌ ಅಮಿತ್‌ ಶಾ ಅವರು ನೀಡಿದ ಭೇಟಿಯಿಂದ ಅಲೆ ಹೆಚ್ಚಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಅಲೆ ಸುನಾಮಿಯಾಗಿ, ನಾವು ಕಳೆದ ಭಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ | Amit Shah Meeting: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳನ್ನೂ ಗೆಲ್ಲಬೇಕು: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

DK Shivakumar: ಮತದಾರರಿಗೆ ಬೆದರಿಕೆ ಪ್ರಕರಣ; ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ

DK Shivakumar: ಬೆಂ.ಗ್ರಾಮಾಂತರ ಕ್ಷೇತ್ರದ ರಾಜರಾಜೇಶ್ವರಿನಗರದಲ್ಲಿ ಪ್ರಚಾರದ ವೇಳೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಡಿಕೆಶಿ ಅವರು ಮತದಾರರಿಗೆ ಬೆದರಿಸಿ, ಆಮಿಷ ಒಡ್ಡಿದ್ದಾರೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

VISTARANEWS.COM


on

DK ShivaKumar
Koo

ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆದರಿಕೆ ಆರೋಪದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಎಫ್‌ಐಆರ್‌ ರದ್ದು ಕೋರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬೆಂ.ಗ್ರಾಮಾಂತರ ಕ್ಷೇತ್ರದ ರಾಜರಾಜೇಶ್ವರಿನಗರದಲ್ಲಿ ಪ್ರಚಾರದ ವೇಳೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಡಿಕೆಶಿ ಅವರು ಮತದಾರರಿಗೆ ಬೆದರಿಸಿ, ಆಮಿಷ ಒಡ್ಡಿದ್ದಾರೆ ಆರೋಪ ಕೇಳಿಬಂದಿತ್ತು. ನಾನು ಇಲ್ಲಿ ಬ್ಯುಸಿನೆಸ್ ಡೀಲ್‌ಗೆ ಬಂದಿದ್ದೇನೆ, ನಿಮಗೆ ಹೆಚ್ಚು ಕಾವೇರಿ ನೀರು ಬೇಕೆಂದು ಕೇಳಿದ್ದೀರಿ. ನಿಮಗೆ ಅಪಾರ್ಟ್ ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ, ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುತ್ತೇನೆ ಎಂದು ಮತದಾರರಿಗೆ ಡಿಕೆಶಿ ಆಮಿಷ ಒಡ್ಡಿ, ನಿಮ್ಮ ಕೆಲಸಗಳು ಆಗಬೇಕೆಂದರೆ ತಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು.

ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಎಫ್ಐಆರ್ ಪ್ರಶ್ನಿಸಿ ಡಿಕೆ‌ ಶಿವಕುಮಾರ್‌ ಅವರು ಹೈಕೋರ್‌ಗೆ ಅರ್ಜಿ ಸಲ್ಲಿಸಿದ್ದು, ಎಫ್ಐಆರ್ ರದ್ದುಪಡಿಸಲು ಕೋರಿದ್ದಾರೆ.

ಇದನ್ನೂ ಓದಿ | DK Shivakumar: ಮತಯಾಚನೆ ವೇಳೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಎಫ್‌ಐಆರ್‌

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ

CM Siddaramaiah Congress protests against Centre Go back to Modi and Amit Shah announced

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕರ್ನಾಟಕವನ್ನು ಹಾಗೂ ರೈತರನ್ನು ದ್ವೇಷಿಸುತ್ತಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದರೂ, ಇಂದಿನವರೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಹಾಗೂ ದೇಶದ ಜನರ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಅವರು ಮಂಗಳವಾರ ವಿಧಾನಸೌಧ ಮುಂಭಾಗ ಇರುವ ಗಾಂಧಿ ಪ್ರತಿಮೆಯ ಎದುರು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಧರಣಿಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸೆಪ್ಟೆಂಬರ್ 22ರಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಕೇಂದ್ರ ತಂಡ 4 ದಿನಗಳ ಕಾಲ ಪರಿಶೀಲನೆ ಮಾಡಿ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಈ ಮಧ್ಯೆ ಸಚಿವ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್‌ ಖರ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ಎದುರಿಸುತ್ತಿರುವ ಬರಗಾಲದ ಬಗ್ಗೆ ವಿವರಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, 240 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. 100 ವರ್ಷಗಳ ನಂತರ ಇಂಥ ಬರಗಾಲ ಎದುರಾಗಿದೆ. ಮನವಿ ಕೊಟ್ಟಿದ್ದರೂ ಅಮಿತ್ ಶಾ ಚನ್ನಪಟ್ಟಣಕ್ಕೆ ಬಂದಿದ್ದ ಸಂದರ್ಭದಲ್ಲಿ ಮನವಿಯನ್ನು ವಿಳಂಬವಾಗಿ ಸಲ್ಲಿಸಿದ್ದಾರೆ ಎಂದು ಹೇಳಿದ್ದರು ಎಂದರು.

ನಿರ್ಮಲಾ ಸೀತಾರಾಮನ್ ಅವರು ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ, ಬರಗಾಲಕ್ಕೆ ಅಲ್ಲ ಎಂದು ಸುಳ್ಳು ಹೇಳಿದ್ದಾರೆ. ನಾವು ಗ್ಯಾರಂಟಿಗಳಿಗೆ ಒಂದು ಪೈಸೆಯನ್ನೂ ಕೇಂದ್ರದಿಂದ ಕೇಳಿಲ್ಲ. ನಮಗೆ ಅದು ಬೇಕಾಗಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬರಗಾಲವನ್ನು ಈವರೆಗೆ ಸಮರ್ಥವಾಗಿ ಎದುರಿಸಿದ್ದೇವೆ

ಗ್ಯಾರಂಟಿಗಳಿಗೆ ನಮ್ಮ ಸಂಪನ್ಮೂಲದಿಂದಲೇ ಭರಿಸಿದ್ದೇವೆ. 36000 ಕೋಟಿ ರೂಪಾಯಿಗಳನ್ನು ಕಳೆದ ವರ್ಷ ಹಾಗೂ 52009 ಕೋಟಿ ರೂಪಾಯಿಗಳನ್ನು ಮುಂದಿನ ಸಾಲಿಗೆ ಮೀಸಲಿರಿಸಿದ್ದೇವೆ. ಬರಗಾಲಕ್ಕೆ 48000 ಹೆಕ್ಟೇರ್ ಪ್ರದೇಶ ಮಳೆ ಇಲ್ಲದೇ ಬೆಳೆ ನಷ್ಟವಾಗಿದೆ. ರೈತರು ಕಷ್ಟದಲ್ಲಿದ್ದಾರೆ. ನಮ್ಮ ಸರ್ಕಾರ 2000 ರೂ.ಗಳ ವರೆಗೆ 34 ಲಕ್ಷ ರೈತರಿಗೆ ನೀಡಲಾಗಿದೆ. 650 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗಿದೆ. ಬರಗಾಲವನ್ನು ಈವರೆಗೆ ಸಮರ್ಥವಾಗಿ ಎದುರಿಸಿದ್ದೇವೆ. ಕುಡಿಯುವ ನೀರು, ಮೇವು, ಜನರಿಗೆ ಕೆಲಸ, ಗುಳೇ ಹೋಗುವುದನ್ನು ತಪ್ಪಿಸುವುದು, ರೈತರಿಗೆ ಮೊದಲ ಕಂತಿನ ಪರಿಹಾರ ನೀಡುವುದನ್ನು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಬರುತ್ತಾರೆ?

18172 ಕೋಟಿ ರೂಪಾಯಿಗಳನ್ನು ಕೇಂದ್ರಕ್ಕೆ ಎನ್.ಡಿ.ಆರ್.ಎಫ್‌ನಿಂದ ಬಿಡುಗಡೆ ಮಾಡುವಂತೆ ಕೋರಿ ಒತ್ತಾಯ ಮಾಡಿದ್ದೇವೆ. ಇದನ್ನು ಮಂಡಿಸಿ 7 ತಿಂಗಳಾಗಿವೆ. ನಾನೇ ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಸಂಬಂಧಪಟ್ಟವರಿಗೆ ತಿಳಿಸಿ ಕೂಡಲೇ ಬಿಡುಗಡೆ ಮಾಡುವಂತೆ ಹೇಳುವುದಾಗಿ ಹೇಳಿದ್ದರು. ನಂತರ ನಾನು ಕೃಷ್ಣಬೈರೇಗೌಡ ಡಿಸೆಂಬರ್ 20 ತಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್ 23ಕ್ಕೆ ಸಭೆ ಕರೆದು ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿ ಈವರೆಗೆ ಏನೂ ಮಾಡಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ. ರಾಜ್ಯಕ್ಕೆ ಮೇಲಿನಿಂದ ಮೇಲೆ ಬರಲು ಯಾವುದೇ ನೈತಿಕತೆ ಇಲ್ಲ ಎಂದು ಹೇಳಿ ಪ್ರತಿಭಟಿಸಿ ಅವರ ಗಮನಕ್ಕೆ ತರುವ ಕೆಲಸ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗೊ ಬ್ಯಾಕ್ ನರೇಂದ್ರ ಮೋದಿ, ಅಮಿತ್ ಶಾ

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿಯೇ ಹೇಳಿದರು. ಬಜೆಟ್ ಸಂಸತ್ತಿನಲ್ಲಿ ಅನುಮೋದನೆಯಾಗಿದೆ. ಅಂದಿನ ಸಿಎಂ ಬಸವರಾಜ ಬೊಮ್ಮಾಯಿಯವರೂ ಕೂಡ ತಮ್ಮ ಬಜೆಟ್ ನಲ್ಲಿ ಧನ್ಯವಾದ ಹೇಳಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿ ಇಂದಿನವರೆಗೆ ಯಾವುದೂ ಆಗಿಲ್ಲ. ಅದರ ಜೊತೆಗೆ 15 ನೆ ಹಣಕಾಸು ಆಯೋಗ 5495 ಕೋಟಿ ವಿಶೇಷ ಅನುದಾನವನ್ನು ಕೊಡಲಿಲ್ಲ. ಕೊಡದೇ ಇರಲು ಕಾರಣ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ಮೋದಿ ಅವರು. ಪೆರಿಫೆರಲ್ ರಿಂಗ್ ರೋಡ್‌ಗೆ 3000 ಕೋಟಿ ರೂ. ಹಾಗೂ ಬೆಂಗಳೂರಿನ ಅಭಿವೃದ್ಧಿಗೆ 3000 ಕೋಟಿ ರೂ. ಕೊಡಿ ಎಂದು ಶಿಫಾರಸು ಮಾಡಿದ್ದರೂ ಕೊಡಲಿಲ್ಲ. ಬರ ಪರಿಹಾರಕ್ಕೂ ಒಂದು ರೂಪಾಯಿಯನ್ನು ನೀಡಿಲ್ಲ. ನರೇಂದ್ರ ಮೋದಿ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಪ್ರವಾಹ, ಭೀಕರ ಬರಗಾಲದಲ್ಲಿ ಬರಲಿಲ್ಲ. ಕರ್ನಾಟಕದ ಮತದಾರರನ್ನು ಮತ ಕೇಳಲು ಬರುತ್ತಿದ್ದಾರೆ ಅದಕ್ಕಾಗಿ ಗೋ ಬ್ಯಾಕ್ ನರೇಂದ್ರ ಮೋದಿ, ಗೂ ಬ್ಯಾಕ್ ಅಮಿತ್ ಶಾ ಎಂದು ಹೇಳುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

ಅಮಿತ್ ಶಾ ಬರಪರಿಹಾರ ಕೊಟ್ಟು ರಾಜ್ಯಕ್ಕೆ ಬರಲಿ

ಇಂದು ಬರುತ್ತಿರುವ ಅಮಿತ್ ಶಾ ಅವರು ಸಭೆ ನಡೆಸಿ 18171 ಕೋಟಿ ರೂಪಾಯಿ ಕೊಟ್ಟು ಆಮೇಲೆ ರಾಜ್ಯಕ್ಕೆ ಬರಲಿ. ನಿಮಗೆ ಯಾವುದೇ ಮತ ಕೇಳುವ ಹಕ್ಕು ಇಲ್ಲ ಎಂದು ಅವರಿಗೆ ಹೇಳುತ್ತೇವೆ. ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Continue Reading

ವಿಜ್ಞಾನ

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Zero Shadow Day: ಎಲ್ಲರೂ ನಮ್ಮನ್ನು ತೊರೆದರೂ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ನಾಳೆ ಕೆಲವು ನಿಮಿಷಗಳ ಮಟ್ಟಿಗೆ ಬೆಂಗಳೂರಿಗರ ಪಾಲಿಗೆ ಸುಳ್ಳಾಗಲಿದೆ. ಅಂದರೆ ಮಧ್ಯಾಹ್ನ ನೆರಳೇ ಮೂಡುವುದಿಲ್ಲ. ಇದನ್ನು ʼಶೂನ್ಯ ನೆರಳಿನ ದಿನʼ ಎನ್ನುತ್ತಾರೆ. ಇದು ಯಾಕೆ ಸಂಭವಿಸುತ್ತದೆ? ಏನಿದರ ವೈಶಿಷ್ಟ್ಯ? ಮುಂತಾದ ವಿವರ ಇಲ್ಲಿದೆ.

VISTARANEWS.COM


on

Zero Shadow Day
Koo

ಬೆಂಗಳೂರು: ನಾಳೆ (ಏಪ್ರಿಲ್‌ 24) ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ. ಇದು ಹೇಗೆ ರೂಪುಗೊಳ್ಳುತ್ತದೆ? ಏನಿದರ ವೈಶಿಷ್ಟ್ಯ ? ಮುಂತಾದ ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಏನಿದು ʼಶೂನ್ಯ ನೆರಳಿನ ದಿನʼ ?

ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ನಾಳೆ ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.

ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.

ಮಹತ್ವ

ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.

ಎಲ್ಲೆಲ್ಲಿ , ಯಾವಾಗ?

ಶೂನ್ಯ ನೆರಳಿನ ದಿನ ದೇಶದ ವಿವಿಧ ನಗರಗಳಲ್ಲಿ ವರ್ಷದಲ್ಲಿ ಎರಡು ಬಾರು ಅನುಭವಕ್ಕೆ ಬರುತ್ತದೆ. ಅದು ಯಾವಾಗ ಎನ್ನುವ ವಿವರ ಇಲ್ಲಿದೆ.

  • ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಮಧ್ಯಾಹ್ನ: 12.21, 12.22)
  • ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12.17, 12.25)
  • ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 (ಮಧ್ಯಾಹ್ನ: 12.12, 12.19)
  • ಮುಂಬೈ: ಮೇ 15 ಮತ್ತು ಜೂನ್ 27 (ಮಧ್ಯಾಹ್ನ: 12.34, 12.45)
  • ಭೋಪಾಲ್: ಜೂನ್ 13 ಮತ್ತು ಜೂನ್ 28 (ಮಧ್ಯಾಹ್ನ: 12.20, 12.23)

ಇದನ್ನೂ ಓದಿ: Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್‌ ಫೌಂಡೇಶನ್

Continue Reading

ಬೆಂಗಳೂರು

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ತಮ್ಮ ಸೇವೆ ಒದಗಿಸಲು ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

VISTARANEWS.COM


on

bike taxi services
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆಟೋ ಯೂನಿಯನ್‌ಗಳು ಮತ್ತು ಅವುಗಳ ಸದಸ್ಯರಿಂದ ಬೈಕ್ ಟ್ಯಾಕ್ಸಿ ಸವಾರರು ಎದುರಿಸುತ್ತಿರುವ ಕಿರುಕುಳ, ದೈಹಿಕ ಹಿಂಸೆ, ವಾಹನ ಹಾನಿ ಮತ್ತು ಅಡಚಣೆಯ ವಿರುದ್ಧದ ಕಾನೂನು ಹೋರಾಟದಲ್ಲಿ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ (Bike Taxi Welfare Association) ಗಮನಾರ್ಹ ಜಯ ಸಾಧಿಸಿದೆ. ಬೈಕ್ ಟ್ಯಾಕ್ಸಿ ಸವಾರರಿಗೆ ತಮ್ಮ ಸೇವೆ (Bike Taxi Services) ಒದಗಿಸಲು ಕಾನೂನುಬಾಹಿರವಾಗಿ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ಘಟಕದ ವಿರುದ್ಧ ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹಿರಿಯ ನ್ಯಾಯವಾದಿ ಕೆ.ಎನ್. ಫಣೀಂದ್ರ ಅವರ ಮೂಲಕ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್, ಭಾರತದ ಸಂವಿಧಾನದ 226 ಮತ್ತು 227 ರ ಪರಿಚ್ಛೇದದ ಅಡಿ ತಮ್ಮ ಕಾರ್ಯಾಚರಣೆಗಳಲ್ಲಿ ಕಾನೂನುಬಾಹಿರ ಹಸ್ತಕ್ಷೇಪದಿಂದ ಪರಿಹಾರ ಕೋರಿ ರಿಟ್ ಅರ್ಜಿ (WP -9255/2024) ಸಲ್ಲಿಸಿತ್ತು. ಅರ್ಜಿ ಸ್ವೀಕರಿಸಿದ ಹೈಕೋರ್ಟ್, ಬೈಕ್ ಟ್ಯಾಕ್ಸಿ ನಿರ್ವಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಅಡೆತಡೆಯಿಲ್ಲದ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕ ಆದೇಶ ಹೊರಡಿಸಿದೆ.

ನ್ಯಾಯಾಲಯದ ನಿರ್ದೇಶನವು, ಬೈಕ್ ಟ್ಯಾಕ್ಸಿ ಸವಾರರು ತಮ್ಮ ಸೇವೆಗಳನ್ನು ಒದಗಿಸಲು ಕಾನೂನುಬಾಹಿರವಾಗಿ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ಘಟಕದ ವಿರುದ್ಧ ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದೆ. ಈ ಆದೇಶವು ಕಾನೂನು ಬಾಧ್ಯತೆಯ ರಕ್ಷೆಯನ್ನು ಹೊಂದಿರುವುದು ಮಾತ್ರವಲ್ಲದೆ ನಮ್ಮ ಸಾರಿಗೆ ವ್ಯವಸ್ಥೆಯೊಳಗೆ ಎಲ್ಲಾ ಸವಾರರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

ನ್ಯಾಯಾಲಯದ ಆದೇಶದ ಪ್ರಮುಖ ಅಂಶಗಳು

1.ಅಡಚಣೆಯ ವಿರುದ್ಧ ಕ್ರಮ: ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ತಕ್ಷಣವೇ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

2.ರಾಜ್ಯದ ಜವಾಬ್ದಾರಿ: ಬೈಕ್ ಟ್ಯಾಕ್ಸಿ ನಿರ್ವಾಹಕರ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವ ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ಒತ್ತಿಹೇಳಿದೆ.

3.ಸಾಂಸ್ಥಿಕ ಕರ್ತವ್ಯ: ಬೈಕ್ ಟ್ಯಾಕ್ಸಿ ನಿರ್ವಾಹಕರು ಸಲ್ಲಿಸಿದ ದೂರುಗಳ ಮೇಲೆ ಕಾರ್ಯನಿರ್ವಹಿಸಲು ಸರ್ಕಾರಿ ಇಲಾಖೆಗಳ ಕರ್ತವ್ಯವನ್ನು ಗುರುತಿಸುವುದು, ಹೊಣೆಗಾರಿಕೆ ಮತ್ತು ನ್ಯಾಯವನ್ನು ಖಾತ್ರಿಪಡಿಸುವುದು.

ಈ ಆದೇಶವು ಬೈಕ್ ಟ್ಯಾಕ್ಸಿ ನಿರ್ವಾಹಕರ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಅವರ ಸೇವೆಗಳಿಗೆ ಪೂರಕ ವಾತಾವರಣವನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ. ಬೈಕ್ ಟ್ಯಾಕ್ಸಿ ಅಸೋಸಿಯೇಷನ್, ಬೈಕ್ ಸವಾರರ ಹಿತರಕ್ಷಿಸುವ ಆದೇಶಕ್ಕಾಗಿ ಹೈಕೋರ್ಟ್‌ಗೆ ಕೃತಜ್ಞತೆ ಸಲ್ಲಿಸಿದೆ.

ಇದನ್ನೂ ಓದಿ | Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

ಬೈಕ್ ಟ್ಯಾಕ್ಸಿ ನಿರ್ವಾಹಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ತನ್ನ ಧ್ಯೇಯೋದ್ದೇಶದಲ್ಲಿ ಸಂಘವು ದೃಢವಾಗಿ ಪ್ರಯತ್ನಿಸುತ್ತದೆ, ಎಲ್ಲಾ ಮಧ್ಯಸ್ಥಗಾರರನ್ನು ಅಭಿವೃದ್ಧಿ ಹೊಂದುತ್ತಿರುವ ಸಾರಿಗೆ ಪರಿಸರ ವ್ಯವಸ್ಥೆಗಾಗಿ ಕಾನೂನಿನ ನಿಯಮಕ್ಕೆ ಬದ್ಧವಾಗಿರಲು ಮತ್ತು ಮಾರ್ಚ್‌ 28ರಂದು ರಿಟ್ ಅರ್ಜಿ ಸಂಖ್ಯೆ 9255/2024 ಯಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಗೌರವಿಸಿ ಪಾಲಿಸಲು ಒತ್ತಾಯಿಸಿದೆ.

Continue Reading

Lok Sabha Election 2024

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024: ಜಾತಿ ಗಣತಿಯನ್ನು ಇಡೀ ದೇಶದಲ್ಲಿ ನಡೆಸುತ್ತೇವೆ. ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತೇವೆ. ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ. ಕೃಷಿಗಾಗಿ ಹೊಸ ನೀತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

VISTARANEWS.COM


on

Lok Sabha Election 2024 Priyanka Gandhi announces constitutional amendment
Koo

ಚಿತ್ರದುರ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗ ಪ್ರಿಯಾಂಕಾ ಗಾಂಧಿ (Priyanka Gandhi) ಕರ್ನಾಟಕಕ್ಕೆ ಬಂದಿದ್ದು, ಚಿತ್ರದುರ್ಗ ಸಮಾವೇಶದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಸಂವಿಧಾನ ತಿದ್ದುಪಡಿ (Constitutional Amendment) ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಜಾತಿ ಗಣತಿಯನ್ನು ಇಡೀ ದೇಶದಲ್ಲಿ ನಡೆಸುತ್ತೇವೆ. ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತೇವೆ. ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ. ಕೃಷಿಗಾಗಿ ಹೊಸ ನೀತಿ ಮಾಡುತ್ತೇವೆ ಎಂದು ಹೇಳಿದರು.

ಬಂಡವಾಳಶಾಹಿಗಳಿಗೆ ದೇಶದ ಆಸ್ತಿ ಮಾರಾಟ

ದೇಶದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾನು ಮಾತನಾಡುತ್ತೇನೆ. ದೇಶದಲ್ಲಿ ಎರಡು ಸತ್ಯಗಳಿವೆ. ಒಂದು, ನೀವು ಬೆಲೆ ಏರಿಕೆಯಿಂದ ಕಷ್ಟ ಪಡುತ್ತಿದ್ದೀರಿ. ಮತ್ತೊಂದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡುವುದಾಗಿದೆ ಎಂದು ಮಾಧ್ಯಮಗಳು ಹೇಳುತ್ತಿರುವುದು. ಆದರೆ, ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಗಳಿವೆ. ದೊಡ್ಡ ದೊಡ್ಡ ಮಾತುಗಳನ್ನು ಮೋದಿ ಆಡಿದ್ದರು. ಹೆಣ್ಣುಮಕ್ಕಳು ಹಬ್ಬ ಹರಿ ದಿನ ಮಾಡಲು ಕಷ್ಟ ಪಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಕಷ್ಟಪಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆ ಆಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ, ಜಿಎಸ್‌ಟಿಯಿಂದ ಜನ ಕಷ್ಟದಲ್ಲಿ ಇದ್ದಾರೆ. ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮೋದಿ ಮಾರಾಟ ಮಾಡುತ್ತಿದ್ದಾರೆ. ಅವರಿಗೆ 16 ಲಕ್ಷ ಕೋಟಿ ಸಬ್ಸಿಡಿ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಬಿಜೆಪಿಗೆ ಚಂದಾ ಕೊಟ್ಟಿರುವ ಐಟಿ ದಾಳಿಗೊಳಪಟ್ಟ ಕಂಪನಿಗಳು

ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ. ಒಬ್ಬರು ಸಿಎಂ, ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಮೂಲಕ ಹಗರಣ ಮಾಡಿದ್ದಾರೆ. ದಾನ ಮಾಡಿದವರ ಹೆಸರು ಯಾರಿಗೂ ಗೊತ್ತಾಗುವುದಿಲ್ಲ. ಹೆಸರು ಮುಚ್ಚಿಡುವುದು ಸರಿಯಲ್ಲ, ಬಹಿರಂಗಗೊಳಿಸಿ ಎಂದು ಕೋರ್ಟ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಯಾರ ಬಳಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಲಿಸ್ಟ್ ಹೊರಗೆ ಬಂದ ಮೇಲೆ ಗೊತ್ತಾಯಿತು. ಯಾವ ಕಂಪನಿಗಳ ಮೇಲೆ ದಾಳಿಯಾಗಿತ್ತೋ ಆ ಕಂಪನಿಗಳು ದಾನ ಕೊಟ್ಟಿವೆ. ಕಪ್ಪು ಹಣ ತರಲು ನೋಟು ರದ್ದು ಮಾಡಿದ್ದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ನೀವು ಕಷ್ಟ ಪಟ್ಟಿದ್ದೀರಿ. ಆದರೆ, ಅದೇ ಸಮಯದಲ್ಲಿ ಕಪ್ಪು ಹಣವನ್ನು ವೈಟ್ ಮಾಡಿಕೊಂಡರು. ಅವರ ತಪ್ಪು ಮುಚ್ಚಿಕೊಳ್ಳಲು ವಿಪಕ್ಷದವರು ಭ್ರಷ್ಟರು ಎಂದು ಕರೆಯುತ್ತಿದ್ದಾರೆ. ದೇಶವನ್ನು ಆರ್ಥಿಕವಾಗಿ ಹಾಳು ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಜಾತಿ, ಧರ್ಮದ ಬಗ್ಗೆ ಮಾತನಾಡಿ ಗಮನವನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಸಂವಿಧಾನ ಬದಲಾವಣೆ ಮಾತನಾಡುವ ಬಿಜೆಪಿ ನಾಯಕರು

ನಿಮ್ಮ ಕಷ್ಟದ ಬಗ್ಗೆ ಮಾತನಾಡದ ನರೇಂದ್ರ ಮೋದಿ ಅವರು, 400 ಹೆಚ್ಚು ಸ್ಥಾನ ಕೊಡಿ, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಇದರ ಅರ್ಥವೇನು? ಜನರೇ ಸಾರ್ವಭೌಮರು ಎಂದು ಸಂವಿಧಾನ ಹೇಳಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಿಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.

ಸುಳ್ಳು ಬಿಟ್ಟರೆ ಬೇರೇನನ್ನೂ ಹೇಳಿಲ್ಲ

ದೇಶದಲ್ಲಿ ಜನರ ಕಷ್ಟಗಳು ದೊಡ್ಡದಾಗಿವೆ. ನೀವು ಎಷ್ಟು ಸಂಘರ್ಷ ಮಾಡುತ್ತಿದ್ದೀರ ಎಂಬುದು ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ನಿಮ್ಮ ಹಳ್ಳಿ, ನಿಮ್ಮ ಮನೆಗಳಿಗೆ ಬರುತ್ತಿದ್ದರು. ಒಂದು ಕಾಲದಲ್ಲಿ ದೇಶದ ನಾಯಕರು ಸೇವಾ ಮನೋಭಾವದಿಂದ ಇರುತ್ತಿದ್ದರು. ಆದರೆ, ಇಂದಿನ ನಾಯಕನ ಬಳಿ ಅಹಾಂಕರ ಕಾಣುತ್ತಿದೆ. ಮೋದಿ ಸರ್ಕಾರ ಸುಳ್ಳು ಬಿಟ್ಟರೆ ಬೇರೆ ಏನನ್ನೂ ಹೇಳಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಬರ ಪರಿಹಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣ ಕೊಟ್ಟಿಲ್ಲ. ಕರ್ನಾಟಕಕ್ಕೆ ಯಾಕೆ ಮೋದಿ ಹೀಗೆ ಮಾಡುತ್ತಿದ್ದಾರೆ? ಯಾವ ರಾಜ್ಯದಲ್ಲಿ ಅವರಿಗೆ ಅಧಿಕಾರ ಇರುವುದದಿಲ್ಲವೋ ಅಲ್ಲಿ ಹಣ ಕೊಡೋದಿಲ್ಲ. ಕೇವಲ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೆ ಮಾತ್ರ ಹಣ ಕೊಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಲ್ಲಿರೋದು ಗ್ಯಾರಂಟಿ ಅಲೆ ಮಾತ್ರ; ಹಸಿ ಸುಳ್ಳು ಹೇಳುತ್ತಿರುವ ಮೋದಿ, ದೇವೇಗೌಡ: ಸಿಎಂ ಸಿದ್ದರಾಮಯ್ಯ

ಅಗ್ನಿಪಥ್‌ಗೆ ಬ್ರೇಕ್‌

ಗ್ಯಾರಂಟಿ ಯೋಜನೆಯಿಂದ ನಿಮ್ಮ ಬದುಕು ಬದಲಾಗಿಲ್ಲವಾ? ಸುಧಾರಣೆಯಾಗಿಲ್ಲವಾ ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ನ್ಯಾಯ ಪತ್ರವನ್ನು ಬಿಡುಗಡೆ ಮಾಡಿದೆ. ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಶೇಕಡಾ 50ರಷ್ಟನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ. ಆರೋಗ್ಯ ವಿಮೆ, ಅಂಗನವಾಡಿ ಕಾರ್ಯಕರ್ತರ ಸಂಬಳವನ್ನು ಹೆಚ್ಚಳ ಮಾಡುತ್ತೇವೆ. ಶಿಕ್ಷಣಕ್ಕೆ ಸಾಲ ಕೊಡುತ್ತೇವೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಲ ಕೊಡುತ್ತೇವೆ. ನರೇಂದ್ರ ಮೋದಿ ಸರ್ಕಾರದಲ್ಲಿ ಎಷ್ಟು ಉದ್ಯೋಗ ಖಾಲಿ ಇದೆಯೋ ಅಷ್ಟನ್ನೂ ಭರ್ತಿ ಮಾಡುತ್ತೇವೆ. ಅಗ್ನಿಪಥ್ ನಿಲ್ಲಿಸಿ ಹಿಂದಿನ ರೀತಿಯಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

Continue Reading
Advertisement
DK ShivaKumar
ಕರ್ನಾಟಕ2 mins ago

DK Shivakumar: ಮತದಾರರಿಗೆ ಬೆದರಿಕೆ ಪ್ರಕರಣ; ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ

Zero Shadow Day
ವಿಜ್ಞಾನ13 mins ago

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Mohammad Rizwan
ಕ್ರೀಡೆ15 mins ago

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

bike taxi services
ಬೆಂಗಳೂರು40 mins ago

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Lok Sabha Election 2024 Priyanka Gandhi announces constitutional amendment
Lok Sabha Election 202452 mins ago

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024
Lok Sabha Election 202453 mins ago

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Latest1 hour ago

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Road Accident
ಕರ್ನಾಟಕ1 hour ago

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Himanta Biswa Sarma
ರಾಜಕೀಯ1 hour ago

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Dungarees Fashion In Summer
ಫ್ಯಾಷನ್1 hour ago

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌