ಬೆಳಗಾವಿಯನ್ನು ಮೂರು ಜಿಲ್ಲೆ ಮಾಡಬೇಕು ಎಂದ ಸಚಿವ ಸತೀಶ್‌ ಜಾರಕಿಹೊಳಿ; ಸದ್ಯಕ್ಕಿದು ಸಾಧ್ಯವೇ? - Vistara News

ಕರ್ನಾಟಕ

ಬೆಳಗಾವಿಯನ್ನು ಮೂರು ಜಿಲ್ಲೆ ಮಾಡಬೇಕು ಎಂದ ಸಚಿವ ಸತೀಶ್‌ ಜಾರಕಿಹೊಳಿ; ಸದ್ಯಕ್ಕಿದು ಸಾಧ್ಯವೇ?

Divide of Belagavi District: ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲಾ ಕೇಂದ್ರಗಳಾಗಿ ವಿಭಜನೆ ಮಾಡಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಒತ್ತಡ ತರುವುದಾಗಿ ಹೇಳಿಕೆ ನೀಡಿದ್ದಾರೆ.

VISTARANEWS.COM

on

Satish Jarkholi and Belagavi district map
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಭೌಗೋಳಿಕವಾಗಿ ಬಹಳ ವಿಸ್ತೀರ್ಣತೆಯನ್ನು ಹೊಂದಿರುವ, ರಾಜ್ಯದ 2ನೇ ರಾಜಧಾನಿ ಎಂಬ ಖ್ಯಾತಿಯ ಬೆಳಗಾವಿ ಜಿಲ್ಲೆಯನ್ನು ವಿಭಜನೆ (Divide of Belagavi District) ಮಾಡಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಲೇ ಇದೆ. ಸತೀಶ್‌ ಜಾರಕಿಹೊಳಿ (Satish Jarkiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ಮಂಗಳವಾರ (ಮೇ 30) ಬೆಳಗಾವಿ ಭೇಟಿ ನೀಡಿದ್ದಾಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿತ್ತು. ಈಗ ಸತೀಶ್‌ ಜಾರಕಿಹೊಳಿ ಈ ಬಗ್ಗೆ ಪುನರುಚ್ಚಾರ ಮಾಡಿದ್ದು, ಬೆಳಗಾವಿಯನ್ನು ಎರಡಲ್ಲ, ಮೂರು ಜಿಲ್ಲೆಯನ್ನಾಗಿ ವಿಭಜಿಸಬೇಕು ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯಿಂದ ಸಚಿವರಾಗಿದ್ದ, ಬೆಳಗಾವಿ ಭಾಗದ ಪ್ರಬಲ ನಾಯಕರು ಅನೇಕ ಬಾರಿ ಪ್ರಸ್ತಾಪವನ್ನು ಮಾಡಿದ್ದರು. ಜತೆಗೆ ಅವರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನೂ ಇಟ್ಟಿದ್ದರು. ಅಲ್ಲದೆ, ಹಲವು ನಾಯಕರು ಪ್ರತ್ಯೇಕ ಜಿಲ್ಲೆಯ ಬಗ್ಗೆ ಧ್ವನಿ ಎತ್ತಿದ್ದರು. 2022ರಲ್ಲಿಯೂ ಒಮ್ಮೆ ಬೆಳಗಾವಿ ವಿಭಜನೆ ವಿಚಾರ ಮುನ್ನೆಲೆಗೆ ಬಂದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತೇವೆ’ ಎಂದಿದ್ದರು.

ಇದನ್ನೂ ಓದಿ: Odisha Train Accident: ಕನ್ನಡಿಗರ ರಕ್ಷಣೆಗೆ 2013ರಲ್ಲಿದ್ದ ಸಚಿವರನ್ನೇ ನಿಯೋಜಿಸಿದ ಸಿದ್ದರಾಮಯ್ಯ: ಅಪಘಾತ ಸ್ಥಳಕ್ಕೆ ಹೊರಟ ಕರ್ನಾಟಕದ ತಂಡ

ಈಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಅಲ್ಲದೆ, ಈ ಮೊದಲಿನಿಂದಲೂ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿಯನ್ನು ವಿಭಜನೆ ಮಾಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು. ಈಗ ಅವರು ಸಚಿವರೂ ಆಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿಯಾದರೂ ಈ ಐದು ವರ್ಷದ ಅವಧಿಯೊಳಗೆ ಪ್ರತ್ಯೇಕ ಜಿಲ್ಲೆಯನ್ನು ರಚನೆ ಮಾಡಬೇಕೆಂದು ನಿರ್ಧರಸಿದ್ದಾರೆಂದು ಮೂಲಗಳು ಹೇಳಿವೆ. ಅಲ್ಲದೆ, ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗಲೂ ಈ ಬಾರಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲೇ ಬೇಕು ಎಂದು ಹೇಳಿದ್ದರು. ಇದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರೂ ತಲೆಯಾಡಿಸಿದ್ದರು.

ಆಡಳಿತ ಸುಗಮಕ್ಕೆ ಬೇಕು ಪ್ರತ್ಯೇಕ ಜಿಲ್ಲೆ

ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ- ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದ ಸತೀಶ್ ಜಾರಕಿಹೊಳಿ ಶನಿವಾರ (ಜೂ 3) ಅಭಿಪ್ರಾಯಪಟ್ಟಿದ್ದಾರೆ.

25 ವರ್ಷದ ಹಿಂದೆಯೂ ನಡೆದಿತ್ತು ಪ್ರಯತ್ನ

25 ವರ್ಷಗಳ ಹಿಂದೆಯೇ ಬೆಳಗಾವಿ ಜಿಲ್ಲಾ ವಿಭಜನೆಗೆ ಯತ್ನ ನಡೆದಿತ್ತು. ಆದರೆ, ಅದು ವಿಫಲವಾಗಿತ್ತು. 1997ರಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಬೇಕು ಎಂಬ ಪ್ರಸ್ತಾಪ ಎದ್ದಿತ್ತು. ಕೊನೆಗೆ ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ಅಂದರೆ, ಬೆಳಗಾವಿ ಜತೆಗೆ ಚಿಕ್ಕೋಡಿ, ಗೋಕಾಕವನ್ನು ಜಿಲ್ಲಾ ಕೇಂದ್ರವಾಗಿಸಿ ವಿಭಜನೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ 1997 ಆಗಸ್ಟ್ 22ರಂದು ಸಚಿವ ‌ಸಂಪುಟದಲ್ಲಿ ಆಗಿನ ಸಿಎಂ ಜೆ.ಎಚ್‌. ಪಟೇಲ್ ನಿರ್ಧಾರ ತೆಗೆದುಕೊಂಡಿದ್ದರು.

ನಡೆದಿತ್ತು ಉಗ್ರ ಪ್ರತಿಭಟನೆ

ಆಗಿನ ರಾಜ್ಯ ಸರ್ಕಾರವು ಜಿಲ್ಲಾ ವಿಭಜನೆ ಮಾಡಲು ಮುಂದಾಗಿ ಸಚಿವ ಸಂಪುಟದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಉಗ್ರ ಹೋರಾಟವೂ ನಡೆದಿತ್ತು. ಅದೂ ಒಂದೆರಡು ದಿನಗಳಲ್ಲ. ಬರೋಬ್ಬರಿ 25 ದಿನಗಳ ಕಾಲ ಜನರು ಬೀದಿಗಿಳಿದಿದ್ದರು. ಇದರಿಂದ ಪರಿಸ್ಥಿತಿ ಕೈಮೀರಲಿದೆ ಎಂದು ಅರಿತ ಜೆ.ಎಚ್.‌ ಪಟೇಲ್‌ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ವಿಧಾನಸಭೆ ಅಧಿವೇಶನ ವೇಳೆಯೇ ಜಿಲ್ಲಾ ವಿಭಜನೆ ನಿರ್ಧಾರವನ್ನು ಹಿಂಪಡೆಯುವುದಾಗಿ ಜೆ.ಎಚ್. ಪಟೇಲ್ ಘೋಷಿಸಿದ್ದರು.

ಇದನ್ನೂ ಓದಿ: Weather Report: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಭಾರಿ ವರುಣ; ಬೆಂಗಳೂರಲ್ಲಿ ಮಳೆ ಹೇಗೆ?

ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣಕ್ಕೆ ಜಿಲ್ಲಾ ವಿಭಜನೆಗೆ ಸ್ಥಳೀಯರು ವಿರೋಧ ಮಾಡಿದ್ದರು. ಈಗಲೂ ಸಹ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಹಾಗಾಗಿ ತಕ್ಷಣಕ್ಕೆ ಬೆಳಗಾವಿ ವಿಭಜನೆ ಅಷ್ಟು ಸುಲಭವಲ್ಲ ಎಂದೂ ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Karnataka Weather: ನಾಳೆ ಬೆಳಗಾವಿ, ಕೊಪ್ಪಳ ಸೇರಿ ವಿವಿಧೆಡೆ ಮಳೆ; ಮುಂದಿನ 4 ದಿನ ಶಾಖದ ಅಲೆ ತೀವ್ರತೆ ಹೆಚ್ಚಳ!

ರಾಜ್ಯದಲ್ಲಿ ಏಪ್ರಿಲ್ 28 ರವರೆಗೆ ಶಾಖದ ಅಲೆ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.‌ ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು.

VISTARANEWS.COM

on

Karnataka Weather
Koo

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 25ರಂದು ಬೆಳಗಾವಿ, ಕೊಪ್ಪಳ, ವಿಜಯಪುರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ಏಪ್ರಿಲ್ 28 ರವರೆಗೆ ಶಾಖದ ಅಲೆ (Heat wave) ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.‌

ಇಂದು (ಏ.24) ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗು ಸಂಭವಿಸುವ ಸಾಧ್ಯತೆಯಿದೆ. ಏ.26ರಿಂದ ಮೇ 1ರವರೆಗೆ ರಾಜ್ಯದಾದ್ಯಂತ ರಣ ಬಿಸಿಲಿನ ಹಿನ್ನೆಲೆ ಒಣಹವೆ ಇರುವ ಸಾಧ್ಯತೆ ಇದ್ದು, ಮುಂದಿನ 4 ದಿನ ಶಾಖದ ಅಲೆಯ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ | Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

ಶಾಖದ ಅಲೆಯ ಎಚ್ಚರಿಕೆ

ಏ.24ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಶಾಖದ ಅಲೆ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.

ಏ.25ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಏ.26ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಏ.27ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಏ.28ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಪಮಾನದ ಮುನ್ಸೂಚನೆ

ಏಪ್ರಿಲ್ 24 ರಿಂದ 28 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | Karnataka Weather : ಸುಳಿಗಾಳಿ ಪ್ರಭಾವ; ರಭಸ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ

ಇನ್ನು ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಅಕಾಶವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37° C ಮತ್ತು 23 °C ಇರುವ ಸಾಧ್ಯತೆ ಇದೆ.

ಕೊಡಗಿನಲ್ಲಿ ಮನೆ ಮೇಲೆ ಮರ ಬಿದ್ದು ಮಹಿಳೆಗೆ ಗಾಯ

ಕೊಡಗು: ರಾಜ್ಯದಲ್ಲಿ ಬುಧವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಹಾಗೂ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ಮಳೆ ಸುರಿದಿದೆ. ಇನ್ನು ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಯು ಕೊಡಗಿನಲ್ಲಿ ಅವಾಂತರ ಸೃಷ್ಟಿಸಿದ್ದು, ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕಾರೆಕಂಡಿ ಹಾಡಿಯಲ್ಲಿ ಘಟನೆ ನಡೆದಿದೆ. ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಮರ ಬಿದ್ದಿದ್ದರಿಂದ ಸೋಮ ಎಂಬುವವರ ಪತ್ನಿ ಭೋಜಮ್ಮ ಗಾಯಗೊಂಡಿದ್ದು, ಮನೆ ಬಳಿ ನಿಲ್ಲಿಸಿದ್ದ ಕಾರು, ಸ್ಕೂಟಿ, ಆಟೋರಿಕ್ಷಾ ಜಖಂಗೊಂಡಿವೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಗಾಯಗೊಂಡ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

Continue Reading

Lok Sabha Election 2024

Lok Sabha Election 2024: ಏ. 26ಕ್ಕೆ ವೋಟ್‌ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್‌ ಡಿಸ್ಕೌಂಟ್‌!

Lok Sabha Election 2024: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಮತ ಹಾಕುವವರಿಗೆ ಆಫರ್ ಮೇಲೆ ಆಫರ್‌ಗಳು ಬರುತ್ತಿವೆ. ಈ ಬಗ್ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಮತದಾನ ಮಾಡಿದವರಿಗೆ ಆಫರ್ ನೀಡಲಾಗಿದೆ. ಬಹುತೇಕ ಹೋಟೆಲ್‌ಗಳಲ್ಲಿ 10% ಆಫರ್ ನೀಡಲಾಗಿದೆ. ಮತ ಚಲಾವಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ನಮ್ಮದೊಂದು ಸಣ್ಣ ಪ್ರಯತ್ನ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ.

VISTARANEWS.COM

on

Lok Sabha Election 2024 Vote on April 26 and get 10 percent discount on these hotels
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮತದಾನ ಹೆಚ್ಚಳ ಮಾಡಲು ನಾನಾ ಕಸರತ್ತುಗಳು ನಡೆಯುತ್ತಿವೆ. ಸರ್ಕಾರಿ ಕಚೇರಿ, ಐಟಿ ಕಂಪನಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೆಲವು ಹೋಟೆಲ್‌ ಮಾಲೀಕರು ತಮ್ಮದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಏಪ್ರಿಲ್‌ 26ರ ಮೊದಲ ಹಂತದ ಚುನಾವಣೆ ದಿನ ಬೆಂಗಳೂರಿನಲ್ಲಿ ಮತ ಹಾಕಿ, ತಮ್ಮ ಹೋಟೆಲ್‌ಗಳಿಗೆ ಬಂದರೆ ಶೇಕಡಾ 10ರಷ್ಟು ರಿಯಾಯಿತಿ (Discounts in Hotels) ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮತ ಹಾಕಿ, ಬೆರಳು ತೋರಿಸಿ. ಪ್ರತಿ ಐಟಂ ಮೇಲೆ ಶೇಕಡಾ 10 ಡಿಸ್ಕೌಂಟ್‌ ಪಡೆಯಿರಿ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಮತ ಹಾಕುವವರಿಗೆ ಆಫರ್ ಮೇಲೆ ಆಫರ್‌ಗಳು ಬರುತ್ತಿವೆ. ಈ ಬಗ್ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ಮತದಾನ ಮಾಡಿದವರಿಗೆ ಆಫರ್ ನೀಡಲಾಗಿದೆ. ಬಹುತೇಕ ಹೋಟೆಲ್‌ಗಳಲ್ಲಿ 10% ಆಫರ್ ನೀಡಲಾಗಿದೆ. ಮತ ಚಲಾವಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಅವರಲ್ಲಿ ಜಾಗೃತಿ ಮೂಡಿಸಲು (Voter awareness) ನಮ್ಮದೊಂದು ಸಣ್ಣ ಪ್ರಯತ್ನ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ.

ನಿಸರ್ಗ ಗ್ರ್ಯಾಂಡ್‌, ಕೆಫೆ ಉಡುಪಿ ರುಚಿ, ಅಯ್ಯಂಗಾರ್‌ ವೆನ್‌ ಫ್ರೆಶ್‌, ಕಾಮತ್‌ ಸೇರಿದಂತೆ ಹಲವು ಹೋಟೆಲ್‌ಗಳು ಆಫರ್‌ಗಳನ್ನು ನೀಡಿವೆ.

Lok Sabha Election 2024 Vote on April 26 and get 10 percent discount on these hotels

ಏ.26ರಂದು ಬೆಂಗಳೂರು ಸೇರಿ 3 ನಗರಗಳಲ್ಲಿ ಮತದಾರರಿಗೆ ರ‍್ಯಾಪಿಡೋದಿಂದ ಉಚಿತ ರೈಡ್‌ ಆಫರ್‌

ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮತದಾನ ಪ್ರೋತ್ಸಾಹಿಸಲು ಉಚಿತ ಹಾಗೂ ರಿಯಾಯಿತಿ ದರದಲ್ಲಿ ಊಟ, ತಿಂಡಿ ವಿತರಣೆಗೆ ಹಲವು ಹೋಟೆಲ್‌ಗಳಲ್ಲಿ ಮುಂದಾಗಿದೆ. ಅದೇ ರೀತಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲು ಅನುಕೂಲವಾಗಲು ಭಾರತದ ಅಗ್ರಗಣ್ಯ ಪ್ರಯಾಣ ಅಪ್ಲಿಕೇಶನ್ ರ‍್ಯಾಪಿಡೋ ಸಂಸ್ಥೆ “ಸವಾರಿ ಜಿಮ್ಮೆದಾರಿ ಕಿ” ಉಪಕ್ರಮದ ಭಾಗವಾಗಿ ಏ.26ರಂದು ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರದಲ್ಲಿ ಮತದಾರರಿಗೆ ರ‍್ಯಾಪಿಡೋ ಉಚಿತ ಬೈಕ್‌ ಸವಾರಿ (Rapido Bike Taxi) ಒದಗಿಸುವಾಗಿ ಘೋಷಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ರೈಡ್‌ ಸೌಲಭ್ಯ ಸಿಗಲಿದೆ.

ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ರ‍್ಯಾಪಿಡೋ, ಭಾರತದ ಸಾರ್ವತ್ರಿಕ ಚುನಾವಣೆ-2024 ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ರೈಡ್‌ ಒದಗಿಸಲು ನಿರ್ಧರಿಸಿದೆ. ಹೀಗಾಗಿ ಏ.26ರಂದು ಬೆಂಗಳೂರಿನ ಮತದಾರರು ರ‍್ಯಾಪಿಡೋ ಉಚಿತ ಸವಾರಿ ಅನುಕೂಲ ಪಡೆಯಬಹುದಾಗಿದೆ.

ಮತದಾನದ (ಏ.26) ದಿನದಂದು, ಮತದಾರರು ‘VOTENOW’ ಕೋಡ್ ಅನ್ನು ಬಳಸಿಕೊಂಡು ರ‍್ಯಾಪಿಡೋ ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಗಳನ್ನು ಪಡೆಯಬಹುದು ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬಹುದು. ಈ ಉಪಕ್ರಮವು ನಿವಾಸಿಗಳ ಮತದಾನದ ಹಕ್ಕು ಚಲಾವಣೆ ಸುಲಭಗೊಳಿಸುವ ಗುರಿ ಹೊಂದಿದೆ. ಚುನಾವಣಾ ದಿನದಂದು ಉಚಿತ ಸವಾರಿಗಳನ್ನು ಒದಗಿಸಲು 100ಕ್ಕೂ ಹೆಚ್ಚು ನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕ್ಯಾಪ್ಟನ್‌ಗಳನ್ನು ರ‍್ಯಾಪಿಡೋ ನಿಯೋಜಿಸುತ್ತದೆ. ಭಾರತದ ಚುನಾವಣಾ ಆಯೋಗ ಬೆಂಬಲದೊಂದಿಗೆ, ರ‍್ಯಾಪಿಡೋ ಕರ್ನಾಟಕದ ಮತದಾರರಿಗೆ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಾದ್ಯಂತ ಚುನಾವಣಾ ದಿನದಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡಲಿದೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದೊಂದಿಗಿನ ರ‍್ಯಾಪಿಡೋ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಧನಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಬದ್ಧತೆ ಹೊಂದಿದೆ. ಈ ಕುರಿತು ರ‍್ಯಾಪಿಡೋ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, “ಭಾರತೀಯ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಮತದಾನ ಮಾಡುವ ಮೂಲಕ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಪ್ರತಿಯೊಬ್ಬ ಮತದಾರರು ತಮ್ಮ ನಾಗರಿಕ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲು ನಾವು ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಬೆಂಗಳೂರಿನ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಿಯೋಜಿಸಿದ್ದೇವೆ. ವಿಶೇಷವಾಗಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಸಮಾನ ಅವಕಾಶ ಹೊಂದಿದ್ದಾರೆ ಎಂದು ನಾವು ನಿರ್ದಿಷ್ಟವಾಗಿ ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಅವರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿಗಳನ್ನು ವಿಸ್ತರಿಸುವ ಮೂಲಕ, ನಾವು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಗೆ ನಮ್ಮ ಬದ್ಧತೆಯನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಈ ಉಚಿತ ಸವಾರಿಗಳನ್ನು ನೀಡುವ ಮೂಲಕ, ನಾವು ಕರ್ನಾಟಕದಲ್ಲಿ ನಮ್ಮ ರ‍್ಯಾಪಿಡೋ ನಾಯಕರು ಕೇವಲ ಚಾಲಕರಿಗಿಂತ ಹೆಚ್ಚಿನ ಮತದಾರರು, ಹೆಚ್ಚಿನ ಮತದಾನವನ್ನು ಸಕ್ರಿಯಗೊಳಿಸುತ್ತಾರೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ ಎಂದರು.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದೊಂದಿಗೆ ರ‍್ಯಾಪಿಡೋ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಬದಲಾವಣೆಯನ್ನು ಪ್ರೇರೇಪಿಸುವ ಬ್ರಾಂಡ್ ಆಗಿರುವ ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ರೀತಿಯ ಉಪಕ್ರಮಗಳ ಮೂಲಕ, ರ‍್ಯಾಪಿಡೋ ದೇಶಾದ್ಯಂತ ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಮಾಡುವ ತನ್ನ ಸಮರ್ಪಣೆಯನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ. ಈ ಉಪಕ್ರಮವು ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಕರ್ನಾಟಕದ ಮತದಾರರ ಜನಸಂಖ್ಯೆಯನ್ನು ಸಶಕ್ತಗೊಳಿಸಲು ಮತ್ತು ಉತ್ತೇಜಿಸಲು ರ‍್ಯಾಪಿಡೋ ಅವರ ಸಮರ್ಪಣೆಯನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ | Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

ನಾಗರಿಕ ಒಗ್ಗೂಡುವಿಕೆ ಪೂರ್ವಭಾವಿ ಹೆಜ್ಜೆಯಲ್ಲಿ, ರ‍್ಯಾಪಿಡೋ ತನ್ನ ಎಲ್ಲಾ ಸಂಪನ್ಮೂಲಗಳನ್ನು ಭಾರತೀಯ ಚುನಾವಣಾ ಆಯೋಗದೊಂದಿಗೆ (ಇಸಿಐ) ಕೈಜೋಡಿಸುವ ಮೂಲಕ ಬೆಂಗಳೂರಿನ ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ರೈಡ್‌ಗಳನ್ನು ನೀಡುತ್ತಿದೆ

Continue Reading

ಕೊಪ್ಪಳ

Neha Murder Case: ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಗಂಗಾವತಿ ಬಂದ್; ಉತ್ತಮ ಪ್ರತಿಕ್ರಿಯೆ

Neha Murder Case: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತೈ ಖಂಡಿಸಿ, ಗಂಗಾವತಿಯ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಬುಧವಾರ ಕರೆ ನೀಡಿದ್ದ ಗಂಗಾವತಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

VISTARANEWS.COM

on

Condemns Neha murder case Gangavathi bandh
Koo

ಗಂಗಾವತಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ (Neha Murder Case) ಖಂಡಿಸಿ, ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಬುಧವಾರ ಕರೆ ನೀಡಿದ್ದ ಗಂಗಾವತಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ ವ್ಯಾಪಾರಿಗಳು ಬಂದ್‌ಗೆ ಸಹಕಾರ ನೀಡಿದರು. ಅತ್ಯವಶ್ಯಕ ಸೇವೆಗಳಾದ ಹಾಲಿನ ಕೇಂದ್ರ, ಆರೋಗ್ಯ ಸೇವೆ, ಮೆಡಿಕಲ್ ಶಾಪ್, ತರಕಾರಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬಂದ್ ಕರೆ ನೀಡಿದ್ದ ಸಂಘಟನೆಯವರು, ಸಾರ್ವಜನಿಕ ಹಿತದೃಷ್ಟಿಯಿಂದ ಸಂಚಾರಕ್ಕೆ ಅಡ್ಡಿಪಡಿಸದ ಹಿನ್ನೆಲೆ ಜನರ ಓಡಾಟ ಸಹಜವಾಗಿತ್ತು.

ಇದನ್ನೂ ಓದಿ: Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬಹುತೇಕ ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು. ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಳ್ಳಾರಿ ವಲಯದ ಐಜಿಪಿ ಆರ್.ಎಸ್. ಲೋಕೇಶ್‌ ಕುಮಾರ್, ಎಸ್ಪಿ ಯಶೋಧಾ ವಂಟೆಗೋಡೆ ಸ್ಥಳದಲ್ಲಿ ಬಿಡಾರ ಹೂಡಿದ್ದರು.

ಬೃಹತ್ ಮೆರವಣಿಗೆ

ಇದಕ್ಕೂ ಮೊದಲು ವಿದ್ಯಾರ್ಥಿನಿ ನೇಹಾ ಹಿರೇಮಠ್‌ ಹತ್ಯೆ ಖಂಡಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಎಪಿಎಂಸಿಯ ಮೊದಲ ಗೇಟ್‌ನಿಂದ ಮಹಾತ್ಮಗಾಂಧಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕನ್ನಡಪರ ಸಂಘಟನೆ, ವಿವಿಧ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: Namma Metro: ಏಪ್ರಿಲ್‌ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ತಡರಾತ್ರಿವರೆಗೂ ಸೇವೆ ವಿಸ್ತರಣೆ

ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಕಾಡಾದ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಾಘವೇಂದ್ರ ಶೆಟ್ಟಿ, ಶಂಕರೇಗೌಡ ಹೊಸಳ್ಳಿ, ಅಶ್ವಿನಿ ದೇಸಾಯಿ, ಮನೋಹರಸ್ವಾಮಿ, ಕವಿತಾ ಗುರುಮೂರ್ತಿ ಸೇರಿದಂತೆ ನಾನಾ ಸಮಾಜದ ಮುಖಂಡರು ಭಾಗಿಯಾಗಿದ್ದರು.

Continue Reading

ಕರ್ನಾಟಕ

Rapido Bike Taxi: ಏ.26ರಂದು ಬೆಂಗಳೂರು ಸೇರಿ 3 ನಗರಗಳಲ್ಲಿ ಮತದಾರರಿಗೆ ರ‍್ಯಾಪಿಡೋದಿಂದ ಉಚಿತ ರೈಡ್‌ ಆಫರ್‌

Rapido Free Ride: ವಿಶೇಷವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಪ್ರತ್ಯೇಕವಾಗಿ ರ‍್ಯಾಪಿಡೋದ ಉಚಿತ ಆಟೋ ಮತ್ತು ಕ್ಯಾಬ್ ಸೇವೆಗಳನ್ನು ವಿಸ್ತರಿಸಲಾಗಿದೆ.

VISTARANEWS.COM

on

Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮತದಾನ ಪ್ರೋತ್ಸಾಹಿಸಲು ಉಚಿತ ಹಾಗೂ ರಿಯಾಯಿತಿ ದರದಲ್ಲಿ ಊಟ, ತಿಂಡಿ ವಿತರಣೆಗೆ ಹಲವು ಹೋಟೆಲ್‌ಗಳಲ್ಲಿ ಮುಂದಾಗಿದೆ. ಅದೇ ರೀತಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲು ಅನುಕೂಲವಾಗಲು ಭಾರತದ ಅಗ್ರಗಣ್ಯ ಪ್ರಯಾಣ ಅಪ್ಲಿಕೇಶನ್ ರ‍್ಯಾಪಿಡೋ ಸಂಸ್ಥೆ “ಸವಾರಿ ಜಿಮ್ಮೆದಾರಿ ಕಿ” ಉಪಕ್ರಮದ ಭಾಗವಾಗಿ ಏ.26ರಂದು ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರದಲ್ಲಿ ಮತದಾರರಿಗೆ ರ‍್ಯಾಪಿಡೋ ಉಚಿತ ಬೈಕ್‌ ಸವಾರಿ (Rapido Bike Taxi) ಒದಗಿಸುವಾಗಿ ಘೋಷಿಸಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ರೈಡ್‌ ಸೌಲಭ್ಯ ಸಿಗಲಿದೆ.

ಭಾರತದ ಚುನಾವಣಾ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ರ‍್ಯಾಪಿಡೋ, ಭಾರತದ ಸಾರ್ವತ್ರಿಕ ಚುನಾವಣೆ-2024 ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ರೈಡ್‌ ಒದಗಿಸಲು ನಿರ್ಧರಿಸಿದೆ. ಹೀಗಾಗಿ ಏ.26ರಂದು ಬೆಂಗಳೂರಿನ ಮತದಾರರು ರ‍್ಯಾಪಿಡೋ ಉಚಿತ ಸವಾರಿ ಅನುಕೂಲ ಪಡೆಯಬಹುದಾಗಿದೆ.

ಮತದಾನದ (ಏ.26) ದಿನದಂದು, ಮತದಾರರು ‘VOTENOW’ ಕೋಡ್ ಅನ್ನು ಬಳಸಿಕೊಂಡು ರ‍್ಯಾಪಿಡೋ ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಗಳನ್ನು ಪಡೆಯಬಹುದು ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬಹುದು. ಈ ಉಪಕ್ರಮವು ನಿವಾಸಿಗಳ ಮತದಾನದ ಹಕ್ಕು ಚಲಾವಣೆ ಸುಲಭಗೊಳಿಸುವ ಗುರಿ ಹೊಂದಿದೆ. ಚುನಾವಣಾ ದಿನದಂದು ಉಚಿತ ಸವಾರಿಗಳನ್ನು ಒದಗಿಸಲು 100ಕ್ಕೂ ಹೆಚ್ಚು ನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕ್ಯಾಪ್ಟನ್‌ಗಳನ್ನು ರ‍್ಯಾಪಿಡೋ ನಿಯೋಜಿಸುತ್ತದೆ. ಭಾರತದ ಚುನಾವಣಾ ಆಯೋಗ ಬೆಂಬಲದೊಂದಿಗೆ, ರ‍್ಯಾಪಿಡೋ ಕರ್ನಾಟಕದ ಮತದಾರರಿಗೆ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಾದ್ಯಂತ ಚುನಾವಣಾ ದಿನದಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡಲಿದೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದೊಂದಿಗಿನ ರ‍್ಯಾಪಿಡೋ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಧನಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಬದ್ಧತೆ ಹೊಂದಿದೆ. ಈ ಕುರಿತು ರ‍್ಯಾಪಿಡೋ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಮಾತನಾಡಿ, “ಭಾರತೀಯ ಸಾರ್ವತ್ರಿಕ ಚುನಾವಣೆ 2024 ರಲ್ಲಿ ಮತದಾನ ಮಾಡುವ ಮೂಲಕ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಪ್ರತಿಯೊಬ್ಬ ಮತದಾರರು ತಮ್ಮ ನಾಗರಿಕ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲು ನಾವು ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಬೆಂಗಳೂರಿನ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಿಯೋಜಿಸಿದ್ದೇವೆ. ವಿಶೇಷವಾಗಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಸಮಾನ ಅವಕಾಶ ಹೊಂದಿದ್ದಾರೆ ಎಂದು ನಾವು ನಿರ್ದಿಷ್ಟವಾಗಿ ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಅವರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿಗಳನ್ನು ವಿಸ್ತರಿಸುವ ಮೂಲಕ, ನಾವು ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಗೆ ನಮ್ಮ ಬದ್ಧತೆಯನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮುಂದುವರೆದು, ಈ ಉಚಿತ ಸವಾರಿಗಳನ್ನು ನೀಡುವ ಮೂಲಕ, ನಾವು ಕರ್ನಾಟಕದಲ್ಲಿ ನಮ್ಮ ರ‍್ಯಾಪಿಡೋ ನಾಯಕರು ಕೇವಲ ಚಾಲಕರಿಗಿಂತ ಹೆಚ್ಚಿನ ಮತದಾರರು, ಹೆಚ್ಚಿನ ಮತದಾನವನ್ನು ಸಕ್ರಿಯಗೊಳಿಸುತ್ತಾರೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾತಿನಿಧಿಕ ಚುನಾವಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ ಎಂದರು.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದೊಂದಿಗೆ ರ‍್ಯಾಪಿಡೋ ಪಾಲುದಾರಿಕೆಯು ಉತ್ತಮ ಸಮಾಜಕ್ಕಾಗಿ ಬದಲಾವಣೆಯನ್ನು ಪ್ರೇರೇಪಿಸುವ ಬ್ರಾಂಡ್ ಆಗಿರುವ ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ರೀತಿಯ ಉಪಕ್ರಮಗಳ ಮೂಲಕ, ರ‍್ಯಾಪಿಡೋ ದೇಶಾದ್ಯಂತ ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಮಾಡುವ ತನ್ನ ಸಮರ್ಪಣೆಯನ್ನು ಪ್ರದರ್ಶಿಸುವುದನ್ನು ಮುಂದುವರೆಸಿದೆ. ಈ ಉಪಕ್ರಮವು ತಮ್ಮ ಮತ ಚಲಾಯಿಸುವ ಮೂಲಕ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಕರ್ನಾಟಕದ ಮತದಾರರ ಜನಸಂಖ್ಯೆಯನ್ನು ಸಶಕ್ತಗೊಳಿಸಲು ಮತ್ತು ಉತ್ತೇಜಿಸಲು ರ‍್ಯಾಪಿಡೋ ಅವರ ಸಮರ್ಪಣೆಯನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ | Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

ನಾಗರಿಕ ಒಗ್ಗೂಡುವಿಕೆ ಪೂರ್ವಭಾವಿ ಹೆಜ್ಜೆಯಲ್ಲಿ, ರ‍್ಯಾಪಿಡೋ ತನ್ನ ಎಲ್ಲಾ ಸಂಪನ್ಮೂಲಗಳನ್ನು ಭಾರತೀಯ ಚುನಾವಣಾ ಆಯೋಗದೊಂದಿಗೆ (ಇಸಿಐ) ಕೈಜೋಡಿಸುವ ಮೂಲಕ ಬೆಂಗಳೂರಿನ ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ರೈಡ್‌ಗಳನ್ನು ನೀಡುತ್ತಿದೆ

Continue Reading
Advertisement
Money Guide
ಮನಿ-ಗೈಡ್4 mins ago

Money Guide: ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ? ವಂಚಕರ ಬಲೆಗೆ ಬೀಳದಿರಲು ಈ ಟಿಪ್ಸ್‌ ಫಾಲೋ ಮಾಡಿ

Karnataka Weather
ಕರ್ನಾಟಕ12 mins ago

Karnataka Weather: ನಾಳೆ ಬೆಳಗಾವಿ, ಕೊಪ್ಪಳ ಸೇರಿ ವಿವಿಧೆಡೆ ಮಳೆ; ಮುಂದಿನ 4 ದಿನ ಶಾಖದ ಅಲೆ ತೀವ್ರತೆ ಹೆಚ್ಚಳ!

Lok Sabha Election 2024 Vote on April 26 and get 10 percent discount on these hotels
Lok Sabha Election 202426 mins ago

Lok Sabha Election 2024: ಏ. 26ಕ್ಕೆ ವೋಟ್‌ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್‌ ಡಿಸ್ಕೌಂಟ್‌!

Actress Saree Fashion
ಫ್ಯಾಷನ್35 mins ago

Actress Saree Fashion: ಟ್ರೆಂಡಿ ಸನ್‌ ಶೇಡ್‌ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ ಸಮ್ಮರ್‌ ಲುಕ್‌

Sachin Tendulkar Birthday
ಕ್ರೀಡೆ36 mins ago

Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

Condemns Neha murder case Gangavathi bandh
ಕೊಪ್ಪಳ39 mins ago

Neha Murder Case: ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಗಂಗಾವತಿ ಬಂದ್; ಉತ್ತಮ ಪ್ರತಿಕ್ರಿಯೆ

Voter Slip
Lok Sabha Election 202441 mins ago

Voter Slip: ಮತದಾನಕ್ಕೆ ಇನ್ನೊಂದೇ ದಿನ ಬಾಕಿ; ವೋಟರ್ ಸ್ಲಿಪ್ ಸಿಕ್ಕಿಲ್ಲವೇ? ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ

Lok Sabha Election 2024
Lok Sabha Election 202442 mins ago

Lok Sabha Election 2024: ಚುನಾವಣಾ ಕಣಕ್ಕೆ ಧುಮುಕಿದ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್‌; ಯಾವ ಕ್ಷೇತ್ರ?

ಕರ್ನಾಟಕ1 hour ago

Rapido Bike Taxi: ಏ.26ರಂದು ಬೆಂಗಳೂರು ಸೇರಿ 3 ನಗರಗಳಲ್ಲಿ ಮತದಾರರಿಗೆ ರ‍್ಯಾಪಿಡೋದಿಂದ ಉಚಿತ ರೈಡ್‌ ಆಫರ್‌

Kotak Mahindra Bank
ದೇಶ1 hour ago

Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌