Murder Case : ಮಲಗಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಕಟುಕ - Vistara News

ಬೆಳಗಾವಿ

Murder Case : ಮಲಗಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಕಟುಕ

Murder Case : ಹೊಲದ ಸೀಮೆಯ ವಿಚಾರಕ್ಕೆ ದೇವಸ್ಥಾನದ ಗುಡಿಯ ಕಟ್ಟೆ ಮೇಲೆ ಮಲಗಿದ್ದವನನ್ನೆ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿನಡೆದಿದೆ.

VISTARANEWS.COM


on

Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ, ಹೊಲದ ಸೀಮೆಯ ವಿಚಾರಕ್ಕೆ ಕೊಲೆಮಾಡಿರುವ (Murder Case) ಘಟನೆ ನಡೆದಿದೆ. ಬೀರಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಮಡ್ಡೆಪ್ಪ ಎನ್ನುವ 47 ವರ್ಷದ ವ್ಯಕ್ತಿ ಮಲಗಿದ್ದ.

ಮಡ್ಡೆಪ್ಪ ಮಲಗಿರುವಾಗ ಬೀರಪ್ಪ ಸಿದ್ದಪ್ಪ ಸುಣಧೋಳಿ ಎಂಬುವವನು ಬಂದು ಮಾರಕಾಸ್ತ್ರದಿಂದ ಮೇಲೆ ಹಲ್ಲೆ ನಡೆಸಿದ್ದಾನೆ. ದೇವಸ್ಥಾನದ ಕಟ್ಟೆಯು ಸಂಪೂರ್ಣವಾಗಿ ರಕ್ತಚಿತ್ತವಾಗಿದೆ. ತೀವ್ರ ಹಲ್ಲೆಗೊಳಗಾದ ಮಡ್ಡೆಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮಡ್ಡೆಪ್ಪ ಸಾವನ್ನಪ್ಪಿದ್ದಾನೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಳಗಾವಿ

Murder Case: ಸಾಲಗಾರ ಪತಿಯನ್ನು ಚಟ್ಟಕ್ಕೇರಿಸಿದ ಪತ್ನಿ-ಅತ್ತೆ

Murder Case: ಸಾಲಗಾರ ಪತಿಯನ್ನು ತಾಯಿ ಮಗಳು ಸೇರಿ ಚಟ್ಟಕ್ಕೇರಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

VISTARANEWS.COM


on

murder case
Koo

ಬೆಳಗಾವಿ: ಬೆಳಗಾವಿಯ 48 ವರ್ಷದ ಪೀರನವಾಡಿ ನಿವಾಸಿ ವಿನಾಯಕ್ ಜಾಧವ (Murder Case) ಜುಲೈ 29ರಂದು ಭೀಕರ ಹತ್ಯೆಯಾಗಿದ್ದಾನೆ. ಈತನು ತನ್ನ ಸ್ವಂತ ಉಧ್ಯಮವೊಂದನ್ನು ನಡೆಸುತ್ತಿದ್ದು ಉದ್ಯಮದಲ್ಲಿ ನಷ್ಟ ಹಿನ್ನೆಲೆಯಲ್ಲಿ ವಿಪರೀತ ಸಾಲವನ್ನು ಮಾಡಿದ್ದ. ಸಾಲ ಹೆಚ್ಚಾಗಿ ಮನೆಯನ್ನು ಅಡಮಾನವಾಗಿ ಇಟ್ಟಿದ್ದ ಜಾಧವ್ ಸಾಲಗಾರರ ಕಾಟಕ್ಕೆ ಬೇಸತ್ತು ಮೂರು ವರ್ಷಗಳಿಂದ ಬೆಳಗಾವಿ ಬಿಟ್ಟು ಹೋಗಿದ್ದ.

ಜುಲೈ 29ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ವಿನಾಯಕ, ಪತ್ನಿ ರೇಣುಕಾ ಜೊತೆಗೆ ವಿಪರೀತ ಜಗಳವಾಡಿದ್ದಾನೆ. ಬಳಿಕ ಜಗಳ ಮಿತಿಮೀರಿ ರೇಣುಕಾ ತನ್ನ ಪತಿಯ ಕುತ್ತಿಗೆಗೆ ಹಗ್ಗದಿಂದ ಕಟ್ಟಿದ್ದಾಳೆ ದಿಂಬಿನಿಂದ ಉಸಿರುಗಟ್ಟಿಸಿದ್ದಾಳೆ. ಈ ವೇಳೆ ರೇಣುಕಾ ತಾಯಿ ಶೋಭಾ ಮಗಳಿಗೆ ಸಾಥ್ ನೀಡಿದ್ದಾರೆ.

ತಾಯಿ, ಮಗಳು ಸೇರಿ ಶವವನ್ನು ಮನೆಯ ಮುಂಭಾಗದಲ್ಲಿ ಬಿಸಾಡಿದ್ದಾರೆ. ಪತಿ ಮದ್ಯಪಾನ ಮಾಡಿ ಮನೆ ಮುಂದೆ ಬಿದ್ದಿದ್ದಾನೆ ಎಂದು ತಾಯಿ ಮಗಳು ಬೆಳಗ್ಗೆ ಅಕ್ಕಪಕ್ಕದ ಮನೆಯವರನ್ನು ಕರೆದು ಗೋಗರೆದಿದ್ದಾರೆ. ಇದು ಕೊಲೆಯಲ್ಲ ಇದೊಂದು ಸಹಜ ಸಾವು ಅನ್ನುವ ಹಾಗೆ ಬಿಂಬಿಸಿದ್ದಾರೆ.

ಈ ಸಮಯದಲ್ಲಿ ವಿನಾಯಕ್ ಜಾಧವ್ ಸಹೋದರ ಅರುಣ ಸಾವಿನಲ್ಲಿ ಶಂಕೆ ಇದೆ ಎಂದು ದೂರು ನಿಡಿದ್ದನು. ಬೆಳಗಾವಿ ಗ್ರಾಮೀಣ ಪೊಲೀಸರುಮೇತನ ದೇಹವನ್ನು ಪೋಸ್ಟ್ ಮಾರ್ಟಮ್‌ಗೆ ಕಳುಹಿಸಿದ್ದರು. ಅದರಲ್ಲಿ ಇದು ಸಹಜ ಸಾವಲ್ಲ ಕೊಲೆ ಎಂದು ತಿಳಿದು ಬಂದಿದ್ದು ಕೊಲೆಯ ರಹಸ್ಯ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಸಿದ ರೇಣುಕಾ ಮತ್ತು ಶೋಭಾಳನ್ನು ಪೋಲಿಸರು ಬಂಧಿಸಿದ್ದಾರೆ.

Continue Reading

ಮಳೆ

Karnataka Weather : ಗುಡುಗು ಸಹಿತ ಭಾರಿ ಮಳೆ; ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka Weather Forecast : ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದ್ದು, ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕೆಲವೊಮ್ಮೆ ಗಾಳಿ ವೇಗ 45 ಕಿ.ಮೀ ವೇಗದಲ್ಲಿ ಬೀಸಲಿದ್ದು, ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರ (Karnataka Weather Forecast) ಮುಂದುವರಿದಿದೆ. ಬುಧವಾರದಂದು ಕರ್ನಾಟಕದ ಕರಾವಳಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿರಲಿದೆ.

ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಉತ್ತರ ಒಳನಾಡಿನಲ್ಲಿ ಬಳ್ಳಾರಿ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್‌, ಧಾರವಾಡ, ಗದಗ,‌ ಕೊಪ್ಪಳ, ವಿಜಯಪುರದಲ್ಲಿ ಮಧ್ಯಮ ಮಳೆಯಾಗಲಿದೆ.

ಇದನ್ನೂ ಓದಿ: Karnataka Weather : ಭಾರಿ ಮಳೆಗೆ ರಾಯಚೂರಲ್ಲಿ 100ಕ್ಕೂ ಹೆಚ್ಚು ಮನೆಗಳು ಕುಸಿತ; ಕೊಡಗಿನಲ್ಲಿ ಕೂದಲೆಳೆ ಅಂತರದಲ್ಲಿ ಕುಟುಂಬ ಪಾರು

ಚದುರಿದಂತೆ ಸಾಧಾರಣ ಮಳೆ

ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಭಾಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುಡುಗು ಸಹಿತ ವ್ಯಾಪಕ ಮಳೆ ಸಾಧ್ಯತೆ

ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್, ಕಲಬುರಗಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಮುದ್ರಕ್ಕೆ ಇಳಿಯದಂತೆ ಸೂಚನೆ

ಸೆಪ್ಟೆಂಬರ್ 6 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಭಾರಿ ಮಳೆಗೆ ರಾಯಚೂರಲ್ಲಿ 100ಕ್ಕೂ ಹೆಚ್ಚು ಮನೆಗಳು ಕುಸಿತ; ಕೊಡಗಿನಲ್ಲಿ ಕೂದಲೆಳೆ ಅಂತರದಲ್ಲಿ ಕುಟುಂಬ ಪಾರು

Karnataka weather Forecast : ರಾಯಚೂರಿನಲ್ಲಿ ಭಾರಿ ಮಳೆಗೆ (Rain News) 108 ಮನೆಗಳು ನೆಲಸಮವಾಗಿದ್ದು, ಯಾದಗಿರಿಯಲ್ಲಿ ವ್ಯಾಪಕ ಮಳೆಗೆ ಹಲವು ಗ್ರಾಮಗಳು ಜಲಾವೃತಗೊಂಡಿದ್ದವು, ಕೊಡಗಿನಲ್ಲಿ ಮನೆಯೊಂದು ಧರಾಶಾಹಿಯಾಗಿದೆ.

VISTARANEWS.COM


on

By

Karnataka Weather Forecast
Koo

ರಾಯಚೂರು/ಯಾದಗಿರಿ: ರಾಯಚೂರಿನಲ್ಲಿ (Karnataka Weather Forecast) ಭಾರಿ ಮಳೆಗೆ (Rain News) ಜಿಲ್ಲೆಯಾದ್ಯಂತ 108 ಮನೆಗಳು (Home collopase) ಕುಸಿದಿವೆ. ದೇವದುರ್ಗ ತಾಲೂಕಿನಲ್ಲಿ 9 ಮನೆಗಳು ಕುಸಿದು ಬಿದ್ದರೆ, ಲಿಂಗಸೂಗೂರಿನಲ್ಲಿ 32 ಮನೆಗಳು ಹಾಳಾಗಿವೆ. ರಾಯಚೂರು ತಾಲೂಕಿನ ವಿವಿಧೆಡೆ 19 ಮನೆಗಳು ಕುಸಿದಿದೆ. ಆಂಧ್ರ- ತೆಲಂಗಾಣ ಗಡಿ ಹೊಂದಿರುವ ಸಿಂಧನೂರು ತಾಲೂಕಿನ 33 ಮನೆಗಳು, ಮಸ್ಕಿ ತಾಲೂಕಿನಲ್ಲಿ 9, ಸಿರವಾರ ತಾಲೂಕಿನಲ್ಲಿ 4 ಮನೆಗಳು ಕುಸಿದು ಬಿದ್ದಿದೆ. ರಾಯಚೂರು ತಾಲೂಕಿನ ಬಿ.ಯದ್ಲಾಪುರ ಗ್ರಾಮದ ದಿವಾಕರ್ ಎಂಬುವರ ಮನೆ ಕುಸಿದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಆರು ಜನರು ವಾಸವಾಗಿರುವ ಮನೆ ಸಂಪೂರ್ಣ ಕುಸಿತವಾಗಿ ಹಾಳಾಗಿದೆ. ಸುಮಾರು 40 ವರ್ಷದ ಮಣ್ಣಿನ ಮನೆಯು ಕುಸಿದು ಬಿದ್ದಿದೆ.

ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಕಲಬುರಗಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಚಿಮ್ಮನಚೊಡ ಗ್ರಾಮದ ಹಳ್ಳದ ದಂಡೆಯಲ್ಲಿ ಶವ ಪತ್ತೆಯಾಗಿದೆ. ಬಾಬು ತಂದೆ ಗುಂಡಪ್ಪ ನೂಲ್ಕರ್(50) ಎಂಬುವವರ ಮೃತದೇಹ ಸಿಕ್ಕಿದೆ. ಸೇತುವೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

karnataka weather Forecast
karnataka weather Forecast

ಕೊಡಗಿನಲ್ಲಿ ಧರಾಶಾಹಿಯಾದ ಮನೆ

ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸುರಿದ ಭಾರಿ ಮಳೆಗೆ ಮನೆಯೊಂದು ಧರಾಶಾಹಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಸುರೇಶ್ ಎಂಬುವರ ಮನೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಮನೆ ಕಳೆದುಕೊಂಡು ಸುರೇಶ್ ಕುಟುಂಬ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ! ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯ

ಯಾದಗಿರಿಯಲ್ಲಿ ಗವಿಸಿದ್ದೇಶ್ವರ ಗರ್ಭಗುಡಿ ಸಂಪೂರ್ಣ ಮುಳುಗಡೆ

ಯಾದಗಿರಿ ಜಿಲ್ಲೆಯಲ್ಲಿ ವರುಣನ‌ ಅಬ್ಬರ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಿಂತನಹಳ್ಳಿ ,ಕೋಟಗೇರಾದ ಸುರಗ ಫಾಲ್ಸ್ ಭೋರ್ಗರೆಯುತ್ತಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಚಿಂತನಹಳ್ಳಿಯ ಕೋಟಗೇರಾದ ಜಲಪಾತ ಗವಿಸಿದ್ದೇಶ್ವರ ಗರ್ಭಗುಡಿ ಮೇಲ್ಭಾಗದಲ್ಲಿ ಹರಿಯುತ್ತಿದೆ. ಗವಿಸಿದ್ದೇಶ್ವರ ಗರ್ಭಗುಡಿ ಸಂಪೂರ್ಣ ಮುಳುಗಡೆಯಾಗಿದೆ. ಭಕ್ತರ ದರ್ಶನ ಪಡೆಯುವ ಮೆಟ್ಟಿಲುಗಳು ಸಹ ಜಲಾವೃತಗೊಂಡಿದೆ. ಗವಿಸಿದ್ದೇಶ್ವರ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದ್ದರಿಂದ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದಂತಾಗಿದೆ.

ಮಳೆಯ ಹೊಡೆತಕ್ಕೆ ಮತ್ತಷ್ಟು ಸೇತುವೆಗಳು ಮುಳುಗಡೆಯಾಗಿದೆ. ಸೇತುವೆಗಳು ಮುಳುಗಡೆಯಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ನಂದೇಪಲ್ಲಿ, ಬದ್ದೆಪಲ್ಲಿ ಸೇತುವೆಗಳು ಜಲಾವೃತಗೊಂಡಿದೆ. ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೈದಾಪುರದಿಂದ ತೆಲಂಗಾಣದ ನಾರಾಯಣಪೇಟ್‌ಗೆ ಸಂಪರ್ಕ ಕಲ್ಪಿಸುವ ಸೇತುವೆ, ಇನ್ನೊಂದು ಕಡೆ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಸೇತುವೆ ಸಹ ಜಲಾವೃತಗೊಂಡಿದೆ. ಬದ್ದೇಪಲ್ಲಿಯಿಂದ ತೆಲಂಗಾಣದ‌ ಕೆಲ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಇದಾಗಿದೆ. ಎರಡು ಸೇತುವೆ ಮುಳುಗಡೆಯಿಂದ ಜನರ ಪರದಾಟ ಅನುಭವಿಸಿದ್ದಾರೆ.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ವರುಣನ ಅವಾಂತರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರ ಮಳೆಯಿಂದ ತಗ್ಗು ಪ್ರದೇಶದೊಳಗೆ ನೀರು ನುಗ್ಗಿದೆ. ಲಕ್ಷ್ಮೀನಗರದಲ್ಲಿ ಅಂಗಡಿಯೊಳಗೆ ಹಾಗೂ ಮನೆ ಆವರಣದೊಳಗೆ ನೀರು ನುಗ್ಗಿದ್ದರಿಂದ ಮನೆಯಿಂದ ಹೊರಹೋಗಲು ಆಗದೆ ಜನರ ಸಂಕಷ್ಟ ಎದುರಾಗಿದೆ. ಅದೇ ರೀತಿ ಹಾವು, ಚೇಳುಗಳ ಕಾಟದಿಂದ ಜನರು ಕಂಗಾಲಾಗಿದ್ದಾರೆ. ರಸ್ತೆಗಳು ಜಲಾವೃತಗೊಂಡ ಪರಿಣಾಮ ನಡೆದುಕೊಂಡು ಹೋಗಲು ಆಗದೆ ಪರಿತಪ್ಪಿಸಿದರು. ಲಕ್ಷ್ಮಿನಗರದಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿದೆ.

ಮಳೆಯ ಅವಾಂತರಕ್ಕೆ ನಲುಗಿದ ಅನ್ನದಾತರು

ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಅನ್ನದಾತರು ನಲುಗಿ ಹೋಗಿದ್ದಾರೆ. ಭಾರಿ ಮಳೆಗೆ ಪಂಪ್ ಸೆಟ್, ಐಪಿ ಸೆಟ್ ಹಾಗೂ ಟಿಸಿಗಳು ಕೊಚ್ಚಿ ಹೋಗಿವೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಕೋನಾಳ ಗ್ರಾಮದ ಬಂದಗಿಸಾಬ್ ಎಂಬ ರೈತನಿಗೆ ಸೇರಿದ ಪಂಪ್ ಸೆಟ್ ಹಾಗೂ ಟಿಸಿ ಸೇರಿದಂತೆ ಹಲವರ ಹತ್ತಾರು ಪಂಪ್ ಸೆಟ್ ಹಾಗೂ ವಿದ್ಯುತ್ ಟಿಸಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಹಳ್ಳದ ಬಳಿ ರೈತರು ಪಂಪ್ ಸೆಟ್ ಹಾಗೂ ಟಿಸಿಗಳನ್ನು ಅಳವಡಿಸಿದ್ದರು. ನಿರಂತರ ಮಳೆಗೆ ಐಪಿ ಸೆಟ್, ಪಂಪ್ ಸೆಟ್ ಹಾಗೂ ಟಿಸಿಗಳು ನೀರುಪಾಲಾಗಿವೆ. ಹಗಲು ರಾತ್ರಿ ಎನ್ನದೇ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಗ್ರಾಮಗಳ ಸಂಪರ್ಕವು ಸಹ ಕಡಿತವಾಗಿದೆ. ಜನರು ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾದಗಿರಿಯ ಲುಂಬಿನಿ ಗಾರ್ಡನ್‌ ಜಲಾವೃತ

ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಲುಂಬಿನಿ ಗಾರ್ಡನ್ ಜಲಾವೃತಗೊಂಡಿದೆ. ಪ್ರವಾಸಿಗರನ್ನು ಸೆಳೆಯಬೇಕಾದ ಗಾರ್ಡನ್ ಈಗ ಗಬ್ಬು ತಾಣವಾಗಿ ಮಾರ್ಪಾಡಾಗಿದೆ. ಗಾರ್ಡನ್ ಒಳಗೆ ನೀರು ನುಗ್ಗಿದ್ದ ಪರಿಣಾಮ ಪ್ರವಾಸಿಗರು ಬರಲು ಹಿಂದೇಟು ಹಾಕಿದ್ದಾರೆ. ಗಾರ್ಡನ್ ಪಕ್ಕದಲ್ಲಿರುವ ಕೆರೆಯು ನೀರು ಗಾರ್ಡನ್‌ನೊಳಗೆ ನುಗ್ಗಿದೆ. ಪ್ರಾಣಿಗಳ ಮೂರ್ತಿ ಹಾಗೂ ಮಕ್ಕಳ ಆಟಿಕೆ ವಸ್ತುಗಳು ಜಲಾವೃತಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather: 6 ಜಿಲ್ಲೆಗಳಲ್ಲಿ ಭಯಂಕರ ಮಳೆ; ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್‌

Karnataka Weather Forecast : ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರಿ ಮಳೆ ಅಬ್ಬರ ಮುಂದುವರಿಯಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಸೆ.3ಕ್ಕೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ (Karnataka Weather Forecast) ಸಾಧಾರಣದೊಂದಿಗೆ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡಿನಲ್ಲಿ ಹಗುರದಿಂದ ಹಾಗೂ ಒಳನಾಡಿನ ಸುತ್ತಮುತ್ತ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ದಾವಣಗೆರೆ, ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿಯಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಕ್ರಮವಾಗಿ 29 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಯೆಲ್ಲೋ ಅಲರ್ಟ್‌ ಘೋಷಣೆ

ಉತ್ತರ ಕನ್ನಡ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಸೆಪ್ಟೆಂಬರ್ 6 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor Darshan to be questioned in Parappana Agrahara jail
ಪ್ರಮುಖ ಸುದ್ದಿ3 mins ago

Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

Murder Case
ಬೆಳಗಾವಿ39 mins ago

Murder Case : ಮಲಗಿದ್ದವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಕಟುಕ

Murder Case
ಕೊಪ್ಪಳ2 hours ago

Murder Case : ದಲಿತ ಯುವತಿಯನ್ನು ವಿಷವಿಟ್ಟು ಕೊಲೆಗೈದ ಪಾಪಿಗಳು

Murder case
ಕೊಡಗು2 hours ago

Murder Case : ಕುಡಿದ ಮತ್ತಿನಲ್ಲಿ ಕತ್ತಿಯಿಂದ ಕಡಿದು ಕೊಂದು ಹಾಕಿದ ಪಾಪಿ

murder case
ಬೆಳಗಾವಿ4 hours ago

Murder Case: ಸಾಲಗಾರ ಪತಿಯನ್ನು ಚಟ್ಟಕ್ಕೇರಿಸಿದ ಪತ್ನಿ-ಅತ್ತೆ

heart attack
ಚಿಕ್ಕೋಡಿ5 hours ago

Heart Attack: ದೂರವಾಣಿಯಲ್ಲಿ ಮಾತನಾಡುತ್ತ ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ

State Best Teacher Award
ಬೆಂಗಳೂರು9 hours ago

State Best Teacher Award: 31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ; ಶಿಕ್ಷಣ ಇಲಾಖೆಯಿಂದ ಪಟ್ಟಿ ಬಿಡುಗಡೆ

cet exam karnataka exam authority
ಬೆಂಗಳೂರು10 hours ago

CET-NEET: ಸಿಇಟಿ-ನೀಟ್; ಛಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ

karnataka weather Forecast
ಮಳೆ14 hours ago

Karnataka Weather : ಗುಡುಗು ಸಹಿತ ಭಾರಿ ಮಳೆ; ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಒತ್ತಡ ಇದ್ದರೂ ಸ್ನೇಹಿತರ ಜತೆ ಕಾಲ ಕಳೆಯುವಿರಿ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್6 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌