ಕ್ರೈಂ
ಈಜಲು ಹೋದ ಬಾಲಕ ಸಾವು: ಬದುಕಿ ಬರುತ್ತಾನೆ ಎಂಬ ನಂಬಿಕೆಯಲ್ಲಿ 4 ತಾಸು ಉಪ್ಪಿನಲ್ಲಿ ಮಲಗಿಸಿದ ಪೋಷಕರು
ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಗ ಬದುಕಿ ಬರುತ್ತಾನೆ ಎಂಬ ಆಸೆಯಲ್ಲಿ ಹೆತ್ತವರು ಆತನ ಮೃತದೇಹವನ್ನು ನಾಲ್ಕು ಗಂಟೆ ಕಾಲ ಉಪ್ಪಿನಲ್ಲಿ ಇಟ್ಟಿದ್ದಾರೆ.
ಬಳ್ಳಾರಿ: ಈಜಲು ಹೋದ ಮಗು ನೀರಿನ ಹೊಂಡದಲ್ಲಿ ಬಿದ್ದು ಮೃತ ಪಟ್ಟಿದ್ದಾನೆ. ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂಬ ನಂಬಿಕೆಯಿಂದ ಪೋಷಕರು ನಾಲ್ಕು ತಾಸು ಮಗುವಿನ ಮೃತ ದೇಹವನ್ನು ಉಪ್ಪಿನಲ್ಲಿ ಮಲಗಿಸಿದ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕ ಸಿರವಾರ ಗ್ರಾಮದ ಸುರೇಶ್(10). ಈತನು ತಮ್ಮ ಸ್ನೇಹಿತರೊಂದಿಗೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಈಜು ಬಾರದ ಹಿನ್ನಲೆಯಲ್ಲಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.
ಕೂಡಲೇ ಸ್ಥಳಕ್ಕೆ ದಾವಿಸಿದ ಪೋಷಕರು ಈ ರೀತಿ ಮೃತರಾದವರನ್ನು ಉಪ್ಪಿನಲ್ಲಿ ಮಲಗಿಸಿದರೆ ಬದುಕುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಓದಿದ್ದಾರಂತೆ, ಕೂಡಲೇ ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತ ದೇಹವನ್ನು ಶಿರವನ್ನು ಬಿಟ್ಟಂತೆ ಉಪ್ಪಿನಲ್ಲಿ ಮಲಗಿಸಿದ್ದಾರೆ.
ನಾಲ್ಕು ತಾಸು ಉಪ್ಪಿನಲ್ಲಿ ಹೆಣವನ್ನು ಮಲಗಿಸಿದರೂ ಬದುಕದ ಹಿನ್ನಲೆಯಲ್ಲಿ ತಮ್ಮ ಮೌಢ್ಯತೆ ಅರಿತ ಪೋಷಕರು ದೇಹವನ್ನು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ವಿಷಯ ತಿಳಿಯದ ಕೆಲವರು, ವಾಸ್ತವತೆ ತಿಳಿಯದೆ, ಸಿರವಾರದಲ್ಲಿ ಮಗುವಿನ ಮೇಲೆ ಮೋಡಿ ನಡೆದಿದೆ ಎಂಬ ಅಪಪ್ರಚಾರಕ್ಕೂ ಕಾರಣವಾಗಿದೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ, ಆದರೆ ಉಪ್ಪಿನಲ್ಲಿ ಮೃತ ದೇಹವನ್ನು ಮಲಗಿಸಿದ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.
ಕರ್ನಾಟಕ
Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ
Murder Case: ತಮಿಳುನಾಡಿನ ಕಾವೇರಿಪಟ್ಟಣಂ ಬಳಿ ನಡು ರಸ್ತೆಯಲ್ಲಿ ದುಷ್ಕರ್ಮಿಗಳ ತಂಡ ಯುವಕನನ್ನು ಅಟ್ಟಾಡಿಸಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದೆ.
ಬೆಂಗಳೂರು ಗ್ರಾಮಾಂತರ: ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾವೇರಿಪಟ್ಟಣಂ ಬಳಿಯ ಕೃಷ್ಣಗಿರಿ ಡ್ಯಾಂ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ (Murder Case) ಮಾಡಿದೆ.
ಪ್ರೇಮ ಪ್ರಕರಣದಲ್ಲಿ ಯುವಕನ್ನು ಮೂವರು ಯುವಕರ ತಂಡ ಕೊಲೆ ಮಾಡಿದೆ. ಇತ್ತೀಚೆಗೆ ಯುವತಿಯನ್ನು ಪ್ರೀತಿಸಿ ಮೃತ ಯುವಕ ಮದುವೆಯಾಗಿದ್ದ. ಹೀಗಾಗಿ ಯುವತಿ ಕಡೆಯವರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣಗಿರಿ ಡ್ಯಾಂ ಸರ್ವಿಸ್ ರಸ್ತೆಯಲ್ಲಿ ಯುವಕ ಹೋಗುತ್ತಿದ್ದಾಗ ಅಡ್ಡಗಟ್ಟಿರುವ ಆರೋಪಿಗಳು, ತಲ್ವಾರ್‌ನಿಂದ ಹಲ್ಲೆ ನಡೆಸಿದ್ದರಿಂದ ತಲೆ ಹಾಗೂ ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿ ಯುವಕ ಮೃತಪಟ್ಟಿದ್ದಾನೆ. ಕೊಲೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರ ಸಿದ್ಧತೆ
ಬೆಂಗಳೂರು: ಕಳೆದ ಜನವರಿ 10 ರಂದು ನಾಗವಾರ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಲೋಹಿತ್ ಎಂಬುವವರು ತಮ್ಮ ಬೈಕ್‌ನಲ್ಲಿ ಪತ್ನಿ ತೇಜಸ್ವಿನಿ ಹಾಗೂ ಮಗ ವಿಹಾನ್ ಜತೆ ಬೈಕ್‌ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನಾಗವಾರ ಬಳಿ ಮೆಟ್ರೊ ಪಿಲ್ಲರ್ ಬೈಕ್ ಮೇಲೆ ಬಿದ್ದು ತಾಯಿ ತೇಜಸ್ವಿನಿ ಹಾಗೂ ಮಗ ವಿಹಾನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಮೃತ ತೇಜಸ್ವಿನಿ ಪತಿ ಲೋಹಿತ್ ಗೋವಿಂದಪುರ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ | Road accident : ಬೈಕ್- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು
ಲೋಹಿತ್ ನೀಡಿದ ದೂರಿನನ್ವಯ ಸೈಟ್ ಎಂಜಿನಿಯರ್, ಮೆಟ್ರೊ ಕಂಟ್ರಾಕ್ಟರ್, ಸೈಟ್ ಇಂಚಾರ್ಜ್, ಬಿಎಂಆರ್‌ಸಿಎಲ್ ಅಧಿಕಾರಿಗಳು ಸೇರಿ 8 ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಗೋವಿಂದಪುರ ಪೊಲೀಸರು ಪೂರ್ಣಗೊಳಿಸಿದ್ದಾರೆ. ಕೇಸ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗೋವಿಂದಪುರ ಪೊಲೀಸರ ವರದಿಯನ್ನು ಖುದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಮುಖ ಅಂಶಗಳನ್ನು ಪರಿಶೀಲನೆ ಮಾಡಲಿದ್ದಾರೆ. ಪೊಲೀಸರು ಪ್ರಮುಖವಾಗಿ ಎರಡು ಅಂಶಗಳ ಮೇಲೆ ಒತ್ತು ಕೊಟ್ಟು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು
ಮೆಟ್ರೋ ಪಿಲ್ಲರ್ ದುರಂತದಲ್ಲಿ ಮೊದಲಿಗೆ ಮೆಟ್ರೋ ಪಿಲ್ಲರ್‌ನ ಪ್ಲಾನ್ ಹಾಗೂ ಎಕ್ಸಿಕ್ಯೂಟಿಂಗ್. ಪಿಲ್ಲರ್ ಬಳಿ ಕೈಗೊಂಡಿದ್ದ ಸುರಕ್ಷತಾ ಕ್ರಮಗಳು. ಸುರಕ್ಷತೆ ಕೈಗೊಳ್ಳಲು ನಿರ್ಲಕ್ಷ್ಯ ಕೈಗೊಂಡಿರುವುದು ಬೆಳಕಿಗೆ ಬಂದಿದೆ. ಸುರಕ್ಷತಾ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಜೆಕ್ಟ್ ಮ್ಯಾನೇಜರ್‌ಗೆ ಇದ್ದು ಪ್ರಾಜೆಕ್ಟ್ ಹೆಡ್‌ಗೆ ಎಲ್ಲರನ್ನೂ ನಿರ್ಧರಿಸುವ ಅಧಿಕಾರವಿದೆ. ಆದರೆ, ಸುರಕ್ಷತಾ ಮುತುವರ್ಜಿ ವಹಿಸದೇ ದುರ್ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಹೀಗೆ ಸುಮಾರು 9 ಮಂದಿ ಅಧಿಕಾರಿಗಳನ್ನು ಹೊಣೆಯಾಗಿಸಿ ತನಿಖೆ ನಡೆಸಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ
Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು
ಬೆಳಗಾವಿಯ ಸವದತ್ತಿ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿಯೊಂದು ಬೈಕ್, ಕಾರು ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.
ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಆವರಣದ ಎದುರು ಲಾರಿ, ಬೈಕ್, ಕಾರು, ಆಟೋ ಮಧ್ಯೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.
ಬೈಕ್ ಸವಾರ, ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದ ಸೋಮಲಿಂಗ ಹೂಗಾರ (33) ಮತ್ತು ಸವದತ್ತಿ ತಾಲೂಕಿನ ಮದಿಗೇರಿ ಗ್ರಾಮದ ಕಾರ್ತಿಕ್ ಕುರಬಗಟ್ಟಿ (9) ಮೃತಪಟ್ಟ ದುರ್ದೈವಿಗಳು. ಬೈಕ್ ಮೇಲಿದ್ದ ಇನ್ನಿಬ್ಬರಾದ ಮಂಜುಳಾ ಕುರಬಗಟ್ಟಿ (36), ಮಲ್ಲವ್ವ ಕುರಬಗಟ್ಟಿ (11) ಅವರಿಗೆ ಗಂಭೀರ ಗಾಯಗಳಾಗಿವೆ.
ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಬ್ರೇಕ್ ಫೇಲ್ ಆದ ಲಾರಿ ಮೊದಲು ಸವದತ್ತಿ ಪಟ್ಟಣದ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕ ನಿಂತಿದ್ದ ಕಾರು ಮತ್ತು ಆಟೋ ರಿಕ್ಷಾಗೂ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬೈಕ್ ಸವಾರನ ಮೃತದೇಹ ಲಾರಿ ಚಕ್ರದ ಕೆಳಗೆ ಸಿಲುಕಿತ್ತು. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿದರು. ಸ್ಥಳಕ್ಕೆ ಸವದತ್ತಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ
Road accident : ಬೈಕ್- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು
ರೊಟ್ಟಿ ಕೊಟ್ಟು ಬರಲು ಹೋಗುತ್ತಿದ್ದ ಪುಟ್ಟ ಉದ್ಯಮಿಯ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಉದ್ಯಮಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಗದಗ: ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ (Road accident) ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕನಕಾಪೂರ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ನಡೆದಿದೆ. ಶಿಗ್ಲಿ ಗ್ರಾಮದ ರಾಜು ಬಸರಿ(41) ಮೃತ ದುರ್ದೈವಿ.
ಡಾಬಾ ಹಾಗೂ ಹೋಟೆಲ್ ಗಳಿಗೆ ರೊಟ್ಟಿ ಪೂರೈಕೆ ಮಾಡುತ್ತಿದ್ದ ರಾಜು ಅವರು ತಮ್ಮ ಬೈಕ್‌ನಲ್ಲಿ ಶಿಗ್ಲಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣದತ್ತ ತೆರಳುತ್ತಿದ್ದರು. ಈ ವೇಳೆ ಲಕ್ಷ್ಮೇಶ್ವರ ಪಟ್ಟಣದಿಂದ ಶಿಗ್ಲಿ ಗ್ರಾಮದತ್ತ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಅಪಘಾತದ ಹೊಡೆತಕ್ಕೆ ಲಾರಿ ಕೂಡಾ ನಿಯಂತ್ರಣ ಕಳೆದುಕೊಂಡ ರಸ್ತೆ ಪಕ್ಕದ ಗುಂಡಿಗೆ ಇಳಿದು ನಿಂತಿದೆ. ಲಾರಿ ಚಾಲಕನಿಗೂ ಗಾಯಗಳಾಗಿವೆ.
ಫೋನ್ ಕಾಲ್ ರಿಸೀವ್ ಮಾಡಿಲ್ಲವೆಂದು ಚಾಲಕನಿಗೆ ಥಳಿಸಿದ ಕಾರು ಮಾಲೀಕ
ಬೆಂಗಳೂರು ಗ್ರಾಮಾಂತರ: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೊನಪ್ಪನ ಅಗ್ರಹಾರ ಹೋಟೆಲ್ ಬಳಿ ಕ್ಯಾಬ್ ಚಾಲಕನೊಬ್ಬ ಫೋನ್ ಕಾಲ್ ರಿಸೀವ್ ಮಾಡಿಲ್ಲವೆಂದು ಕಾರು ಮಾಲೀಕರು ಹಿಡಿದು (Assault Case) ಥಳಿಸಿದ್ದಾರೆ. ಬೀದರ್ ಮೂಲದ ಕ್ಯಾಬ್ ಚಾಲಕ ಕ್ರಿಸ್ ವಿಲಿಯಂ ಹಲ್ಲೆಗೊಳಾದವರು. ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಹಲ್ಲೆ ನಡೆಸಿದ್ದಾರೆ.
ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಸಮೀಪ ಇರುವ Vio fleet ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯವರು ಸುಮಾರು 20ಕ್ಕೂ ಅಧಿಕ ಕಾರುಗಳನ್ನು ಹೊಂದಿದ್ದಾರೆ. ಈ ಸಂಸ್ಥೆಯು ಉಬರ್ ಮೂಲಕ ಕಾರುಗಳನ್ನು ಬಾಡಿಗೆ ಕೊಡುತ್ತದೆ.
ಇತ್ತೀಚೆಗೆ ಚಾಲಕ ವಿಲಿಯಂ Workindia.in ಮೂಲಕ ಕೆಲಸಕ್ಕೆ ಹುಡುಕಾಟ ನಡೆಸಿದಾಗ Vio fleet ಸಂಸ್ಥೆಯ ಮಾಲೀಕ ರಾಜೀವ್ ರಂಜನ್ ಕೆಲಸಕ್ಕೆ ಆಫರ್ ನೀಡಿದ್ದರು. ಕೆಲಸಕ್ಕೆ ಸೇರಿದ್ದ ವಿಲಿಯಂ ಮೂರು ದಿನಗಳ ಕಾಲ ನೈಟ್ ಶಿಫ್ಟ್ ಮಾಡಿದ್ದ. ಆದರೆ, ಮೂರೇ ದಿನಕ್ಕೆ ಮಾಲೀಕನ ಕಿರುಕುಳಕ್ಕೆ ಬೇಸತ್ತು ಕೆಲಸ ಬಿಡಲು ನಿರ್ಧಾರ ಮಾಡಿದ್ದ ಎಂದು ತಿಳಿದು ಬಂದಿದೆ.
ಕೊನಪ್ಪನ ಅಗ್ರಹಾರ ಫಾರ್ಚುನ್ ಸೂಟ್ಸ್ ಹೋಟೆಲ್‌ನಲ್ಲಿ ಚಾಲಕ ವಿಲಿಯಮ್ ರೂಮ್ ಮಾಡಿಕೊಂಡಿದ್ದರು. ಹೀಗಿದ್ದಾಗ ಕಳೆದ 17ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಟೆಲ್ ಬಳಿ ಕಾರು ನಿಲ್ಲಿಸಿಕೊಂಡಿದ್ದಾಗ, ಅಲ್ಲಿಗೆ ಬಂದಿದ್ದ ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಏಕಾಏಕಿ ವಿಲಿಯಮ್ ಮೇಲೆ ಹಲ್ಲೆ ಮಾಡಿದ್ದಾರೆ. ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಕ್ಕೆ ಥಳಿಸಿದ್ದಾರೆ.
ಇದನ್ನೂ ಓದಿ : Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು
ಕರ್ನಾಟಕ
Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು
Haveri News: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆ ಪಿಎಸ್ಐ ಮತ್ತು ವಾಹನ ಚಾಲಕನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಮನೆ ಬಾಡಿಗೆ ವಸೂಲಿ ಮಾಡಿಕೊಡುವ ಸಂಬಂಧ ಲಂಚ ಸ್ವೀಕಾರ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ಹಾವೇರಿ: 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಮಯದಲ್ಲಿ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆ ಪಿಎಸ್ಐ ಮತ್ತು ವಾಹನ ಚಾಲಕ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದಿದ್ದಾರೆ. ಪಿಎಸ್ಐ ಸುನೀಲ್ ತೇಲಿ ಮತ್ತು ವಾಹನ ಚಾಲಕ ಸಚಿನ್ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಫಿರೋಜ್ ಎಂಬುವವರ ಮನೆ ಬಾಡಿಗೆ ವಸೂಲಿ ಮಾಡಿಸಿಕೊಡುವ ವಿಚಾರಕ್ಕೆ ಪಿಎಸ್‌ಐ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದರಲ್ಲಿ 40 ಸಾವಿರ ರೂಪಾಯಿ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಪಿಎಸ್‌ಐಗೆ ಸಹಕರಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು
ಬಳ್ಳಾರಿ ಕೇಂದ್ರ ಕಾರಾಗೃಹದ ಮೇಲೆ ಎಸ್‌ಪಿ ತಂಡ ದಾಳಿ: ಒಂದು ಮೊಬೈಲ್, ಮೂರು ಸಿಮ್ ವಶ
ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ (Bellary Central Jail) ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರ ನೇತೃತ್ವದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಅಧಿಕಾರಿಗಳ ತಂಡ ದಾಳಿ ಮಾಡಿ ಒಂದು ಮೊಬೈಲ್ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆಸಿದೆ. ಈ ಹಿಂದೆ ಎಸ್‌ಪಿ ನೇತೃತ್ವದಲ್ಲಿ ಹಲವು ಬಾರಿ ದಾಳಿ ನಡೆಸಿದ ಉದಾಹರಣೆಗಳು ಇವೆ.
ಮಂಗಳವಾರ ಬೆಳಗ್ಗೆ 6.30ಕ್ಕೆ ದಾಳಿ ಮಾಡಿದ ಅಧಿಕಾರಿಗಳು ಕಾರಾಗೃಹದ ಎಲ್ಲ ಕೋಣೆಗಳನ್ನು ಶೋಧನೆ ಮಾಡಿದ್ದು, ಶೋಧನೆ ವೇಳೆಯಲ್ಲಿ ಒಂದು ಸಿಮ್ ಇರುವ ಮೊಬೈಲ್ ಹಾಗೂ 3 ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಸುಮಾರು 2 ತಾಸುಗಳ ಕಾಲ ಶೋಧನಾ ಕಾರ್ಯ ಮಾಡಿದರು.
ಇದನ್ನೂ ಓದಿ: Karnataka Election: ಯುಗಾದಿಗೆ ಕಾಂಗ್ರೆಸ್ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್
ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಡಿವೈಎಸ್‌ಪಿ ಬಸವರಾಜ್ ಕೆ., ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸ ಮೇಟಿ, ಸಿದ್ದರಾಮೇಶ್ವರ, ಎಂ. ಎನ್. ಸಿಂಧೂರು, ವಾಸು ಕುಮಾರ್, ಬಸವರಾಜ ಪಾಟೀಲ್, ಗುಂಡೂರಾವ್, ಅಂಬರೇಶ್ ಹುಬ್ಬಳ್ಳಿ, ಅಮೋಫ್, ಗೋವಿಂದ ಸುಮಾರು 100 ಸಿಬ್ಬಂದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಲತಾ, ಉಪಾಧೀಕ್ಷಕ ಅಂಬರೀಶ್ ಸೇರಿದಂತೆ ಇತರರು ಇದ್ದರು.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು