Na.Ra Bharat Reddy : ಬಳ್ಳಾರಿ ಶಾಸಕ ನಾರಾ ಭರತ್‌ ರೆಡ್ಡಿ ಮೇಲೆ ಇ.ಡಿ ದಾಳಿ, ಬಂಧುಗಳ ಮನೆಗೂ ರೇಡ್‌ - Vistara News

ಬಳ್ಳಾರಿ

Na.Ra Bharat Reddy : ಬಳ್ಳಾರಿ ಶಾಸಕ ನಾರಾ ಭರತ್‌ ರೆಡ್ಡಿ ಮೇಲೆ ಇ.ಡಿ ದಾಳಿ, ಬಂಧುಗಳ ಮನೆಗೂ ರೇಡ್‌

Na.Ra Bharat Reddy : ಬಳ್ಳಾರಿಯ ಕಾಂಗ್ರೆಸ್‌ ಶಾಸಕ ನಾ.ರಾ. ಭರತ್‌ ರೆಡ್ಡಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆದಿದೆ. ಬಳ್ಳಾರಿ ಹಾಗೂ ಬೆಂಗಳೂರಿನ ಅವರ ಮನೆಗಳು, ಕುಟುಂಬ ಮತ್ತು ಆಪ್ತರ ಮನೆಗಳಿಗೂ ದಾಳಿ ನಡೆದಿದೆ.

VISTARANEWS.COM


on

Nara bharath reddy ED Raid1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ : ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ (Ballary City Congress MLA) ನಾರಾ ಭರತ್‌ ರೆಡ್ಡಿ (Na.Ra Bharat Reddy) ಮತ್ತು ಅವರ ಬಂಧುಗಳ ಮನೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (Enforcement directorate) ಶನಿವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಬಂದಿರುವ ಇ.ಡಿ ಅಧಿಕಾರಿಗಳ ತಂಡ (E.D team raid) ಏಕಕಾಲದಲ್ಲಿ ಆರು ಕಡೆ ದಾಳಿ ಮಾಡಿ ಪರಿಶೀಲನೆ ಆರಂಭಿಸಿದೆ. ಬೆಂಗಳೂರಿನ ಮನೆಗೂ ದಾಳಿ ನಡೆದಿದೆ.

ಶಾಸಕ ನಾರಾ ಭರತ್‌ ರೆಡ್ಡಿ ಮನೆ ಮತ್ತು ಕಚೇರಿ, ಭರತ್‌ ರೆಡ್ಡಿ ಅವರ ತಂದೆ ಸೂರ್ಯ ನಾರಾಯಣ ರೆಡ್ಡಿ ಮನೆ ಹಾಗೂ ಶಾಸಕರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಭರತ್‌ ರೆಡ್ಡಿ ಅವರ ಸಹೋದರ ಸಂಬಂಧಿ ಅನಿಲ್‌ ರೆಡ್ಡಿ, ಆಪ್ತರಾದ ರತ್ನಬಾಬು ಅವರ ಮನೆ ಮೇಲೂ ದಾಳಿ ನಡೆದಿದೆ. ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಏಕಕಾಲದಲ್ಲಿ ಅಧಿಕಾರಿಗಳ ತಂಡ ಮನೆ ಮತ್ತು ಕಚೇರಿಗಳಿಗೆ ಲಗ್ಗೆ ಇಟ್ಟು ಪರಿಶೀಲನೆ ಮಾಡಿದೆ.

Nara bharath reddy ED Raid೨

ನಗರದ ನೆಹರು ಕಾಲೋನಿಯಲ್ಲಿರುವ ಶಾಸಕ ಭರತ್ ರೆಡ್ಡಿ ಮತ್ತು ಅವರ ಚಿಕ್ಕಪ್ಪ ಪ್ರತಾಪರೆಡ್ಡಿ ಅವರ ಮನೆ ಮೇಲೆ, ಗಾಂಧಿ ನಗರದಲ್ಲಿರುವ ಶಾಸಕರ ತಂದೆ‌ ಸೂರ್ಯನಾರಾಯಣ ರೆಡ್ಡಿ ಕಚೇರಿ, ಶಾಸಕರ ಆಪ್ತ ರತ್ನಬಾಬು, ಸೋದರ ಸಂಬಂಧಿ ಅನಿಲ್ ಮನೆ ಮೇಲೆ ಈ ದಾಳಿ ನಡೆದಿದೆ.

ಬೆಂಗಳೂರಿನಿಂದ 7 ವಾಹನಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗಳೊಂದಿಗೆ ಆಗಮಿಸಿ ದಾಳಿ ಮಾಡಿದ್ದಾರೆ. ಶಾಸಕ ಕಚೇರಿಯಲ್ಲಿ ನಿಲ್ಲಿಸಿರುವ ಸ್ಕಾರ್ಫಿಯೋ ವಾಹನದಲ್ಲಿನ ವಸ್ತುಗಳನ್ನು ಪರಿಶೀಲಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ‌ ಶಾಸಕರು ಬಳ್ಳಾರಿ ನಗರದಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ.

Nara bharath reddy ED Raid೩

ಶಾಸಕ ನಾರಾ ಭರತ್‌ ರೆಡ್ಡಿ ಅವರದು ಶ್ರೀಮಂತ ಕುಟುಂಬವಾಗಿದ್ದು, ಸಾಕಷ್ಟು ಆಸ್ತಿಪಾಸ್ತಿಯನ್ನು ಹೊಂದಿದೆ. ನಾರಾ ಭರತ್‌ ರೆಡ್ಡಿ ಅವರು ಕಳೆದ ಚುನಾವಣೆಯ ಸಂದರ್ಭದಲ್ಲಿ 90 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದರು. ನಾರಾ ಭರತ ರೆಡ್ಡಿ ಅವರ ಅಪ್ಪ, ಚಿಕ್ಕಪ್ಪ ಅವರು ಕೂಡಾ ದೊಡ್ಡ ಮಟ್ಟದ ಶಕ್ತಿವಂತರಾಗಿದ್ದಾರೆ. ಹೀಗಾಗಿ ಅವರ ಮೇಲೂ ಇ.ಡಿ ಕಣ್ಣು ಹಾಕಿದೆ ಎನ್ನಲಾಗಿದೆ. ಶಾಸಕ ನಾ.ರಾ ಭರತ ರೆಡ್ಡಿ ಅವರ ಆಪ್ತ ರತ್ನಬಾಬು ಮತ್ತು ಶಾಸಕರ‌ ಸೋದರ ಸಂಬಂಧಿ‌ ಅನಿಲ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು ಕೂಡಾ ಇದೇ ಕಾರಣಕ್ಕೆ.

Nara bharath reddy ED Raid
ನಾ.ರಾ. ಭರತ್‌ ರೆಡ್ಡಿ ಅವರ ಸ್ಕಾರ್ಪಿಯೊ ಪರಿಶೀಲನೆ

ಶಾಸಕರ ಕುಟುಂಬದ ವ್ಯವಹಾರ ಮತ್ತು ರಾಜಕೀಯ

ಶಾಸಕರ ಕುಟುಂಬಕ್ಕೆ ಸಂಬಂಧಿಸಿದಂತೆ ಗ್ರಾನೈಟ್ ವ್ಯವಹಾರ ಇದೆ, ಒಂದು ವರ್ಷದ ಹಿಂದೆ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿಯ ಮೇಲೆ ಆದಾಯ ತೆರಿಗೆ‌ ಅಧಿಕಾರಿಗಳು‌ ದಾಳಿ ಮಾಡಿದ್ದರು. ಶಾಸಕ ಭರತ ರೆಡ್ಡಿ ಅವರು ಕೆಲ ತಿಂಗಳುಗಳ ಹಿಂದೆ ಚುನಾವಣೆಯ ಪೂರ್ವದಲ್ಲಿ ಹುಟ್ಟು ಹಬ್ಬಕ್ಕೆ‌ ಬಳ್ಳಾರಿ ನಗರದ ಜನರಿಗೆ ಕುಕ್ಕರ್ ಹಂಚಿಕೆ ಮಾಡಿದ್ದರು.

ಶಾಸಕ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಅವರು ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಲು ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ನೀಡದಿದ್ದರಿಂದ ಪಕ್ಷೇತರರಾಗಿ‌ ಸ್ಪರ್ಧಿಸುತ್ತಿದ್ದಾರೆ‌. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು.

ಇದನ್ನೂ ಓದಿ: ED raid : ಮಾಲೂರು ಶಾಸಕ ನಂಜೇಗೌಡ, ಸಚಿವರ ಆಪ್ತರಿಗೆ ಇ.ಡಿ ಶಾಕ್‌; ಮುಳ್ಳಾಯ್ತೇ ಕೋಚಿಮುಲ್‌ ಹಗರಣ

ಬೆಂಗಳೂರಿನಲ್ಲೂ ಭರತ್‌ ರೆಡ್ಡಿ ನಿವಾಸಗಳ ಮೇಲೆ ಇ.ಡಿ ದಾಳಿ

ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಬೆಂಗಳೂರಿನಲ್ಲೂ ಇ.ಡಿ ದಾಳಿ ನಡೆದಿದೆ. ಬೆಂಗಳೂರಿನ ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್ ಬಳಿಯಿರುವ ಮನೆಗೆ ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

14 ಅಧಿಕಾರಿಗಳು ಮನೆಗೆ ಲಗ್ಗೆ ಇಟ್ಟಿದ್ದು, ಭದ್ರತೆಗಾಗಿ ಸಿಆರ್ ಪಿ ಎಫ್ ಸಿಬ್ಬಂದಿಯನ್ನು ಕರೆ ತಂದಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಮನೆ ಬಳಿ ಬಂದಿರುವ ಅಧಿಕಾರಿಗಳು ಆರು ಗಂಟೆಗೆ ಮನೆ ಒಳಗೆ ಹೋಗಿ ಪರಿಶೀಲನೆ ಶುರು ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ವಾಯುಭಾರ ಕುಸಿತ ಎಫೆಕ್ಟ್‌; ವಾರಾಂತ್ಯದಲ್ಲಿ ಭಾರಿ ಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ಘೋಷಣೆ

Karnataka Weather Forecast : ವಾಯುಭಾರ ಕುಸಿತದಿಂದಾಗಿ ವಾರಾಂತ್ಯದಲ್ಲಿ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಶನಿವಾರ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಟ್ರಫ್ ಹಾಗೂ ವಾಯುಭಾರ ಉಂಟಾಗಿರುವ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast ) ಮುನ್ಸೂಚನೆಯನ್ನು ನೀಡಿದೆ. ಮಳೆಯೊಂದಿಗೆ ಗಾಳಿ ವೇಗವು 50 ಕಿ.ಮೀ ತಲುಪುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಶನಿವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ.

ಇನ್ನೂ ಹಾಸನ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆಯಿದೆ ಹಾಗೊ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇನ್ನೂ ಭಾನುವಾರದಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿರಂತರ ಗಾಳಿಯ ವೇಗವು (30-40 ಕಿಮೀ) ವಿಪರೀತ ಮಳೆಯಾಗಲಿದೆ. ಒಳನಾಡಿನ ಬೆಳಗಾವಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು 35-45 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 20 ಡಿ.ಸೆ ಇರಲಿದೆ.

ಇದನ್ನೂ ಓದಿ: Karnataka Rain : ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿ ಹೋದ ಕಾರ್ಮಿಕ; ಮನೆಯ ಗೋಡೆ ಕುಸಿದು ಗೃಹಿಣಿ ಸಾವು

ಶನಿವಾರ ಹಾಸನದ ಕೆಲವುಶಾಲೆಗಳಿಗೆ ರಜೆ ಘೋಷಣೆ

ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಆರು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕಿನ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ. ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಎಚ್ ಕೆ ಪಾಂಡು ಆದೇಶ ಹೊರಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ಕಂಗಲಾಗಿದ್ದಾರೆ. ಚಿಕ್ಕಮಗಳೂರಲ್ಲಿ ಮನೆ ಮುಂಭಾಗ ಕಂದಕ ನಿರ್ಮಾಣವಾಗಿದೆ. ಬೃಹತ್‌ ಮರಗಳು ಧರೆಗುರುಳಿದ್ದು, ಮನೆಯ ಚಾವಣಿಗಳು ಕುಸಿದು ಬಿದ್ದಿವೆ.

VISTARANEWS.COM


on

By

Karnataka Rain
Koo

ಚಿಕ್ಕಮಗಳೂರು: ಮಲೆನಾಡಿನ ಚಿಕ್ಕಮಗಳೂರು ಸೇರಿ ರಾಜ್ಯಾದ್ಯಂತ ಭಾರಿ (Karnataka Rain) ಮಳೆಯಾಗುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕವೊಂದು ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ ಮನೆಯ ಮುಂಭಾಗವೇ 30 ಅಡಿ ಆಳದ ಕಂದಕ ಸೃಷ್ಟಿಯಾಗಿದೆ. ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ಕಂದಕ ಸೃಷ್ಟಿಯಾಗಿದ್ದು, ವಿಚಿತ್ರ ಕಂದಕ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಂದಕದ ಒಳಗಿಂದ ಭೂಮಿ ಒಳಗೆ ನೀರಿನ ಬುಗ್ಗೆ ಹರಿಯುತ್ತಿದೆ. ಬಾವಿ ಆಕಾರದಲ್ಲಿ ಕಂದಕ ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ಮನೆಯ ಹಿಂಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಕಳಸ ತಾಲೂಕಿನ ಮಾವಿನಕೆರೆ ಕಲ್ಲಾನೆಯಲ್ಲಿ ಘಟನೆ ನಡೆದಿದೆ. ಕಲ್ಲಾನೆಯ ಬಾಸ್ಕರ್ ಪೂಜಾರಿ ಎಂಬುವವರು ಕಂಗಲಾಗಿದ್ದಾರೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದೆ.

ಪ್ರಪಾತಕ್ಕೆ ಬಿದ್ದ ಲಾರಿ, ಚಾಲಕ ಗ್ರೇಟ್‌ ಎಸ್ಕೇಪ್‌

ಚಿಕ್ಕಮಗಳೂರಿನಲ್ಲಿ ಲಾರಿ ಚಾಲಕರೊಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವಶಾತ್ ಚಾಲಕ ಬದುಕುಳಿದಿದ್ದಾರೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು, ಲಾರಿಯೊಂದು ಸುಮಾರು 50 ಅಡಿ ಆಳದಲ್ಲಿ ಬಿದ್ದಿದೆ. ಲಾರಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಶೃಂಗೇರಿ ನೆಮ್ಮಾರು ಬಳಿ ರಸ್ತೆ ಕುಸಿದ ಪರಿಣಾಮ ಲಾರಿಯು ಪ್ರಪಾತಕ್ಕೆ ಬಿದ್ದಿದೆ. ನೆಮ್ಮಾರು ವ್ಯಾಪ್ತಿಯ ಹೊಸದೇವರಹಡ್ಳು ಸಮೀಪದಲ್ಲಿ ಘಟನೆ ನಡೆದಿದೆ.

ನಿದ್ರೆಗೆ ಜಾರಿದಾಗ ಮನೆ ಮೇಲೆ ಬಿದ್ದ ಬೃಹತ್‌ ಮರ

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರಿಕಟ್ಟೆ ಸುತ್ತಮುತ್ತ ಅಪಾಯದ ಮಟ್ಟ ಮೀರಿ ಹಳ್ಳ ಕೊಳ್ಳಗಳು ಹರಿಯುತ್ತಿದ್ದು, ಬಸರಿ ಕಟ್ಟೆ -ಬಿಲಾಳು ಕೊಪ್ಪ ರಸ್ತೆಯು ಜಲಾವೃತಗೊಂಡಿದೆ. ಇತ್ತ ಅಜ್ಜಂಪುರ ತಾಲೂಕಿನ ಗುಡ್ಡದಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕುಟುಂಬಸ್ಥರು ಮನೆಯಿಂದ ಎದ್ದು ಓಡಿದ್ದಾರೆ. ಕುಟುಂಬಸ್ಥರು ನಿದ್ದೆಯಲ್ಲಿದ್ದಾಗ ಏಕಾಏಕಿ ಮರ ಬಿದ್ದು, ಚಾವಣಿ ಸಂಪೂರ್ಣ ಹಾನಿಯಾಗಿದೆ. ಗ್ರಾಮದ ರವಿ ಎಂಬುವರಿಗೆ ಸೇರಿದ ಮನೆಯವರು ಪಾರಾಗಿದ್ದಾರೆ.

ಕೊಚ್ಚಿ ಹೋದ ಅಡಿಕೆ ತೋಟ

ಭದ್ರಾ ನದಿ ಪ್ರವಾಹದಿಂದ ತೋಟ-ಗೆದ್ದೆಗಳು ಜಲಾವೃತಗೊಂಡಿದೆ. ಮಹಾಮಳೆಗೆ ಅರ್ಧ ಎಕರೆ ಅಡಿಕೆ‌ ತೋಟ ಕೊಚ್ಚಿ ಹೋಗಿದೆ. ಕಳಸ ತಾಲೂಕಿನ ಮಕ್ಕಿಮನೆಯ ನಾಗೇಂದ್ರ ಎಂಬುವರಿಗೆ ಸೇರಿದ ತೋಟದಲ್ಲಿ ಮಣ್ಣು ಕುಸಿತವಾಗಿ ಅರ್ಧ ಎಕರೆ ಅಡಿಕೆ ಗಿಡಗಳು ಮಣ್ಣುಪಾಲಾಗಿದೆ. ನಡ್ಲುಮನೆಯ ವರ್ಧಮಾನಯ್ಯ ಎಂಬುವವರ 3 ಎಕರೆ ನಾಟಿ ಮಾಡಿದ ಭತ್ತದ ಗದ್ದೆ ಜಲಾವೃತವಾಗಿದೆ.

ಇದನ್ನೂ ಓದಿ: Kannada Actress: `ಬ್ಯಾಕ್‍ ಬೆಂಚರ್ಸ್’ ಬಿಡುಗಡೆಗೂ ಮುನ್ನವೇ ಹಲವು ಅವಕಾಶಗಳು ಈ ನಟಿಗೆ!

ಕೊಡಗಿನಲ್ಲಿ ಗುಡ್ಡ ಕುಸಿತ ಭೀತಿ; ರಾತ್ರಿ ಸಂಚಾರ ಬಂದ್‌

ಕೊಡಗಿನಲ್ಲಿ ಮಳೆ ತಗ್ಗಿದರೂ ಪ್ರವಾಹದ ಪರಿಸ್ಥಿತಿ ತಗ್ಗಿಲ್ಲ. ಕುಶಾಲನಗರದ ಸಾಯಿ ಬಡಾವಣೆಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಸುಮಾರು 25ಕ್ಕೂ ಅಧಿಕ ಮನೆಗಳಿರುವ ಸಾಯಿ ಬಡಾವಣೆಯೊಳಗೆ ಕಾವೇರಿ ನದಿ ನೀರು ನುಗ್ಗಿ‌ ಜಲಾವೃತಗೊಂಡಿದೆ. ಹೀಗಾಗಿ ನಿವಾಸಿಗಳು ಮನೆಗಳನ್ನು ತೊರೆಯುತ್ತಿದ್ದಾರೆ. ಮಳೆ ಹೆಚ್ಚಾದರೇ ಬಡಾವಣೆಯೇ ಮುಳುಗುವ ಆತಂಕವಿದೆ. ಸಾಯಿ ಬಡಾವಣೆ ಜತೆಗೆ ಕುವೆಂಪು ಬಡಾವಣೆಗೂ ಜಲ ಕಂಟಕವಿದೆ.

ಕೊಡಗು ಜಿಲ್ಲೆಯ ಮಡಿಕೇರಿ ಮಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಬಳಿ ಗುಡ್ಡ ಕುಸಿಯುವ ಭೀತಿ ಇದೆ. ಹೀಗಾಗಿ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಿ ಕೊಡಗು ಡಿಸಿ ಆದೇಶ ಹೊರಡಿಸಿದ್ದಾರೆ. ಗುಡ್ಡದ ಕೆಳಭಾಗದಲ್ಲಿ ಸ್ವಲ್ಪ ಮಣ್ಣು ಜರಿದಿದ್ದು, ಬಿರುಕು ಮೂಡುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಜೋರು ಮಳೆಗೆ ಕುಸಿದು ಬಿದ್ದ ಮನೆ

ಕರಾವಳಿ, ಮಲೆನಾಡು ಮಾತ್ರವಲ್ಲದೇ ಒಳನಾಡು ಭಾಗದಲ್ಲೂ ಮಳೆಯು ಅಬ್ಬರಿಸುತ್ತಿದೆ. ಮೈಸೂರಿನಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಮೈಸೂರಿನ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸರೋಜಮ್ಮ ದೇವೇಗೌಡ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಪಾತ್ರೆಗಳು, ದಿನಸಿ ಸಾಮಗ್ರಿಗಳು, ಬಟ್ಟೆ ಬರೆ ಎಲ್ಲವೂ ಹಾನಿಯಾಗಿದೆ. ಮನೆಯವರು ಕೆಲಸ ನಿಮಿತ್ತ ಹೊರಗಡೆ ಹೋದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮಳೆಯಿಂದ ವಾಸದ ಮನೆ ಕಳೆದುಕೊಂಡ ಸರೋಜಮ್ಮ, ದೇವೇಗೌಡ ಕಂಗಲಾಗಿದ್ದಾರೆ. ಸಾಲಿಗ್ರಾಮ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಜೋರಾಗಿ ಬೀಸಿದ ಗಾಳಿಗೆ ನೆಲಕ್ಕುರುಳಿದ ಟವರ್‌

ಭಾರಿ ಗಾಳಿ- ಮಳೆಗೆ ಬೃಹತ್ ಗಾತ್ರದ ಟವರ್ ನೆಲಕ್ಕೆ ಉರುಳಿ ಬಿದ್ದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ ಘಟನೆ ನಡೆದಿದೆ. ಏಕಾಏಕಿ ಬೀಸಿದ ಭಾರೀ ಗಾಳಿಗೆ ಬೃಹತ್ ಟವರ್ ನೆಲಕ್ಕುರುಳಿದ ಪರಿಣಾಮ ಅಂಗಡಿ ಮುಂಗಟ್ಟು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಹಾಸನದಲ್ಲಿ ಸೇತುವೆ ಮುಳುಗಡೆ, ಹೊಳೆಮಲ್ಲೇಶ್ವರ ದೇಗುಲ ಜಲಾವೃತ

ಹಾಸನ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಬಾಣಗೇರಿ ಹೊಳೆ ನೀರು ಉಕ್ಕಿ ಹರಿಯುತ್ತಿದೆ. ಮಾಗೇರಿ ಗ್ರಾಮದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಸಕಲೇಶಪುರ ತಾಲೂಕಿನ ಮಾಗೇರಿ ಗ್ರಾಮದ ಸೇತುವೆ ಮುಳುಗಡೆಗೊಂಡಿದೆ. ಇದರಿಂದಾಗಿ ಸಕಲೇಶಪುರ-ಮಾಗೇರಿ-ಸೋಮವಾರಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಇನ್ನೂ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಮಳೆ ಮುಂದುವರಿದಿದ್ದು, ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಅಕ್ಕ-ಪಕ್ಕ ಹಾಗೂ ತಗ್ಗು ಪ್ರದೇಶಕ್ಕೂ ನೀರು ನುಗ್ಗಿದೆ. ಹೇಮಾವತಿ ನದಿ ದಂಡೆಯಲ್ಲಿರುವ ಸಕಲೇಶಪುರದ ಹೊಳೆಮಲ್ಲೇಶ್ವರ ದೇಗುಲದ ಮೆಟ್ಟಿಲು ಜಲಾವೃತಗೊಂಡಿದೆ. ಮಳೆ ಹೀಗೆ ಮುಂದುವರೆದರೆ ದೇಗುಲವೂ ಜಲಾವೃತವಾಗುವ ಸಾಧ್ಯತೆ ಇದೆ.

ಉಡುಪಿಯ ಆತ್ರಾಡಿಯಲ್ಲಿ ಕೃತಕ ನೆರೆ

ಉಡುಪಿಯ ಮಲ್ಪೆ- ಮೊಳಕಾಲ್ಮೂರು ಹೆದ್ದಾರಿ ಅವ್ಯವಸ್ಥೆಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಹೆದ್ದಾರಿಯಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಆತ್ರಾಡಿಯ ಮನೆಗಳಿಗೆ ನೀರು ನುಗ್ಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸಿದ ಹಿನ್ನೆಲೆಯಲ್ಲಿ ಚರಂಡಿ ನೀರು ನುಗ್ಗಿ ಈ ಸಮಸ್ಯೆ ಸೃಷ್ಟಿಯಾಗಿದೆ.

ಶಿರೂರು ಗುಡ್ಡ ಕುಸಿತ; ನಿಂತಲ್ಲೇ ನಿಂತ ಟ್ರಕ್‌ಗಳು

ಅಂಕೋಲಾ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಹಿನ್ನೆಲೆ, ಟ್ರಕ್ ಚಾಲಕರು ಕಂಗಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್‌ನಲ್ಲಿ ಕಳೆದ ಮೂರು ದಿನಗಳಿಂದ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆರವಾಗದ ಕಾರಣ ಸಂಪರ್ಕ ಬಂದ್ ಆಗಿದೆ. ಮಂಗಳೂರಿನಿಂದ ಎಲ್‌ಪಿಜಿ ಸಾಗಿಸುತ್ತಿದ್ದ ಟ್ಯಾಂಕರ್‌ಗಳು ಶಿರೂರು ಟೋಲ್ ನಲ್ಲಿಯೇ ಸ್ಟ್ರಕ್ ಆಗಿವೆ. ಸುಮಾರು 120 ಅಧಿಕ ಸರಕು ಮತ್ತು ಗ್ಯಾಸ್ ಟ್ಯಾಂಕರ್‌ಗಳು ಟೋಲ್ ಬಳಿ ಮೊಕ್ಕಾಂ ಹೂಡಿವೆ. ಮೂರು ದಿನಗಳಿಂದ ಟ್ರಕ್‌ಗಳಲ್ಲೆ ಅಡುಗೆ ಮನೆ ಮಾಡಿಕೊಂಡು, ಅಲ್ಲೆ ಊಟ ಅಲ್ಲೆ ನಿದ್ರೆ ಮಾಡುತ್ತಿದ್ದಾರೆ. ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆರವಾಗದೆ ಇಲ್ಲಿಂದ ತೆರಳಾಗದ ಸ್ಥಿತಿಯಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕರಾವಳಿ, ಮಲೆನಾಡು ಸೇರಿ ಒಳನಾಡಲ್ಲಿ ಭಾರಿ ಮಳೆ; ಗಾಳಿಯ ಶರವೇಗ 50 ಕಿ.ಮೀ!

Karnataka Weather Forecast : ರಾಜ್ಯದಲ್ಲಿ ಈ ವಾರ ಪೂರ್ತಿ ಮಳೆಯು (Karnataka Rain) ಅಬ್ಬರಿಸಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದ್ದು, ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

VISTARANEWS.COM


on

By

karnataka Weather Forecast
ಭಾರಿ ಮಳೆಗೆ ಶಿರಸಿಯ ಚೌಡೇಶ್ವರಿ ಕಾಲೋನಿಯಲ್ಲಿ ನೀರು ನಿಂತ ಪರಿಣಾಮ ಮನೆಯಲ್ಲೇ ಲಾಕ್‌ ಆದ ಮಂದಿ
Koo

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನ-ಜೀವನ (Karnataka Weather Forecast) ಅಸ್ತವ್ಯಸ್ತಗೊಂಡಿದೆ. ಶುಕ್ರವಾರವೂ ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ (Karnataka Rain) ಸಾಧ್ಯತೆಯಿದೆ. ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಮಲೆನಾಡು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭರ್ಜರಿ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಕಡೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ

ಇದನ್ನೂ ಓದಿ: Kiccha Sudeep: ಸೆಲ್ಫಿಗಾಗಿ 2 ಗಂಟೆ ಕಾದ ಅಭಿಮಾನಿಗೆ ಕಿಚ್ಚ ಸುದೀಪ್ ಅವಮಾನ! ವಿಡಿಯೊ ನೋಡಿ

karnataka weather Forecast
ಭಾರಿ ಮಳೆಗೆ ಶಿರಸಿಯ ಬಡಾವಣೆಯೊಂದರಲ್ಲಿ ನೀರು ನಿಂತ ದೃಶ್ಯ

ಬೆಳಗಾವಿಯಲ್ಲಿ ಭಾರಿ ಮಳೆ ಎಚ್ಚರಿಕೆ

ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಬೆಳಗಾವಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್‌, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸುತ್ತಮುತ್ತ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಈ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿಗೆ 40-50 ಕಿ.ಮೀ ತಲುಪಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ, ಹಾಸನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Karnataka Rain : ಭಾರಿ ಮಳೆಗೆ (Heavy Rain Alert) ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಹೋದ ರಾಸುವೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಮತ್ತೊಂದು ಕಡೆ ಮನೆಯೊಂದು ನೆಲಸಮವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರೆ, ಮರಗಳು ಧರೆಗುರುಳಿವೆ.

VISTARANEWS.COM


on

By

Karnataka Rain
Koo

ಚಿಕ್ಕಮಗಳೂರು: ಭಾರಿ ಮಳೆಯು (Karnataka Rain) ಸಾವು-ನೋವಿಗೆ ಕಾರಣವಾಗುತ್ತಿದೆ. ಅಬ್ಬರಿಸುತ್ತಿರುವ ಮಳೆಗೆ ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗುವಾಗ ರಾಸುವೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೆಬ್ಬಾಳೆ ಸೇತುವೆ ಮೇಲೆ 2-3 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ದಡ ತುಸು ದೂರದಲ್ಲೇ ಇದ್ದಾಗ ನದಿಗೆ ದನವೊಂದು ಬಿದ್ದಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಯಲ್ಲಿ, ಜನರ ಕಣ್ಣೇದುರೇ ಭದ್ರೆಯ ಒಡಲಲ್ಲಿ ರಾಸು ಕೊಚ್ಚಿ ಹೋಗಿದೆ.

ರಸ್ತೆಗೆ ಬಿದ್ದ ಬೃಹತ್‌ ಮರ

ಪ್ರವಾಸಿಗರ ನಿಷೇಧದಿಂದ ಭಾರೀ ಅನಾಹುತವೊಂದು ತಪ್ಪಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮುಳ್ಳಯ್ಯನಗಿರಿ ರಸ್ತೆಯ ಮೂರನೇ ತಿರುವಿನಲ್ಲಿ ಘಟನೆ ನಡೆದಿದೆ. ವಾಹನಗಳು ಇಲ್ಲದಿದ್ದರಿಂದ ಅನಾಹುತ ತಪ್ಪಿದೆ. ಗುಡ್ಡದ ಮಣ್ಣಿನ ಸಮೇತ ಮರ ಬಿದ್ದು, ಸ್ಥಳೀಯ ಗ್ರಾಮಸ್ಥರು ಓಡಾಡಲು ಪರದಾಟ ಅನುಭವಿಸಿದರು. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಮರ ತೆರವು ಮಾಡಲಾಯಿತು.

ಇನ್ನೂ ಕೊಡಗು ಜಿಲ್ಲೆಯಾದ್ಯಂತ ಮಳೆಯು ಆರ್ಭಟಿಸುತ್ತಿದ್ದು ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿಯ ಉಪ ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿ‌ಯಾಗಿದೆ. ಭಗಂಡೇಶ್ವರ ಸನ್ನಿದಿಯ ಮೆಟ್ಟಿಲವರೆಗೂ ನೀರು ನಿಂತಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆಯಾಗುತ್ತಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆಯು 3ನೇ ಬಾರಿಗೆ ಬಂದ್ ಆಗುತ್ತಿದೆ.

ಮಂಗಳೂರಲ್ಲಿ 12 ಮನೆಗಳಿಗೆ ನುಗ್ಗಿದ ನೇತ್ರಾವತಿ

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಂಟ್ವಾಳದ ಪಾಣೆಮಂಗಳೂರು ಆಲಡ್ಕದಲ್ಲಿ ಸುಮಾರು 12 ಮನೆಗಳಿಗೆ ನೀರು ನುಗ್ಗಿದೆ. ಅಪಾಯದಲ್ಲಿದ್ದ 12 ಮನೆಗಳ ಜನರನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಿದೆ. ಮಂಗಳೂರಲ್ಲಿ ನೇತ್ರಾವತಿ ಅಬ್ಬರ

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳದಿಂದಾಗಿ ಬೋಳಿಯಾರ್ ಗ್ರಾಮದ ಅಮ್ಮೆಂಬಳದಲ್ಲಿ ಸಂಪರ್ಕ ಕಡಿತಗೊಂಡಿದೆ. ಅಮ್ಮೆಂಬಳ-ಜಾರದಗುಡ್ಡೆ ಸಂಪರ್ಕ ಕಡಿತವಾಗಿದೆ. ನೇತ್ರಾವತಿ ನದಿ ನೀರು ಗದ್ದೆ ಪೂರ್ತಿ ಆವರಿಸಿದೆ. ಸುಮಾರು ನೂರ ಎಪ್ಪತ್ತೈದುಕ್ಕೂ ಹೆಚ್ಚು ಮನೆಗಳಿರುವ ಪ್ರದೇಶದಲ್ಲಿ ನೆರೆ ನೀರು ಆವರಿಸಿದೆ. ಈ ಹಿನ್ನೆಲೆಯಲ್ಲಿ 7 ಕಿ.ಮೀ ಸುತ್ತುಬಳಸಿ ಹೋಗಬೇಕಿದೆ. ರಸ್ತೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಉಡುಪಿಯಲ್ಲಿ ಮನೆ ನೆಲಸಮ, ಸೋಮೇಶ್ವರದಲ್ಲಿ ಗುಡ್ಡ ಕುಸಿತ

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕಟ್ಟೆಗುಡ್ಡೆ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಕಡೆಕಾರು ಪಂಚಾಯತ್‌ನ ಶಾರದ ಪೂಜಾರ್ತಿ ಎಂಬುವವರ ಮನೆ ನೆಲಸಮವಾಗಿದೆ. ಸುಮಾರು 30 ವರ್ಷ ಹಳೆಯದಾದ ಮನೆಯಲ್ಲಿ ಒಟ್ಟು 10 ಮಂದಿ ವಾಸಿಸುತ್ತಿದ್ದರು. ಮಣ್ಣಿನ ಗಾರೆ ಮಾಡಿ ಮನೆ ನಿರ್ಮಾಣ ಮಾಡಿದ್ದು, ಮನೆ ಕುಸಿಯುವ ಮೊದಲೇ ಓಡಿ ಹೋಗಿದ್ದರಿಂದ ಅಪಾಯ ತಪ್ಪಿದೆ. ಮನೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಡುಪಿಯ ಬೈಂದೂರು ತಾಲೂಕಿನ ಪ್ರಸಿದ್ಧ ಪ್ರವಾಸಿತಾಣಕ್ಕೆ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಭಾರಿ ಮಳೆಯಿಂದಾಗಿ ಬೈಂದೂರು ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ಸೋಮೇಶ್ವರ ಗುಡ್ಡ ಕುಸಿಯುತ್ತಿದೆ. ಗುಡ್ಡದ ಮೇಲೆ ಖಾಸಗಿಯವರ ಅನಧೀಕೃತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡಕ್ಕೆ ಸಂಪರ್ಕ ಕಲ್ಪಿಸಲು ಗುಡ್ಡ ಕೊರೆದು ರಸ್ತೆ ನಿರ್ಮಿಸಿದ್ದಾರೆ. ಯಾವುದೇ ಸ್ಥಳೀಯ ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿರುವ ಆರೋಪವಿದೆ. ನಿರಂತರ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಳಿ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ ಸೋಮೇಶ್ವರ ಬೀಚ್ ರಸ್ತೆ ಬಂದ್ ಮಾಡಿದ್ದಾರೆ. ಸುಮಾರು 30 ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಗುಡ್ಡ ಸಂಪೂರ್ಣ ಕುಸಿದರೆ ಬೈಂದೂರು ಪ್ರಸಿದ್ಧ ಪ್ರವಾಸಿ ತಾಣ ಕಣ್ಮರೆಯಾಗಲಿದೆ.

ಪಶ್ಚಿಮ ಘಟ್ಟದಲ್ಲೂ ಮಳೆ ಅಬ್ಬರ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ಖಾನಾಪುರ ತಾಲೂಕಿನ ಹೆಮ್ಮಡಗಾ ಬಳಿ ಅಪಾಯದ ಮಟ್ಟ ಮೀರಿ ಹಾಲತ್ರಿ ಹಳ್ಳ ಹರಿಯುತ್ತಿದೆ. ಸೇತುವೆ ಬಂದ್‌ ಆಗಿದ್ದರಿಂದ ಇಪ್ಪತ್ತೈದು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಸೇತುವೆಗೆ ತಡೆಗೋಡೆ ಇಲ್ಲದೇ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ರಾತ್ರಿ ವೇಳೆ ಸ್ವಲ್ಪ ನೀರು ಸೇತುವೆ ಮೇಲಿದ್ದರೂ ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ.

ಸುತ್ತೂರು ಸೇತುವೆ ಮುಳುಗಡೆ

ಮೈಸೂರು – ಸುತ್ತೂರು ಗ್ರಾಮಕ್ಕೆ ಸಂಪರ್ಕ ಕೇಂದ್ರವಾಗಿದ್ದ ಸೇತುವೆ ಮುಳುಗಡೆ ಆಗಿದೆ. ಬೀಚನಹಳ್ಳಿಯ ಕಬಿನಿ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ 70 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸೇತುವೆ ಮುಳುಗಡೆಯಾಗಿ, ಸುತ್ತೂರು ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಸೇತುವೆ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ.

ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗದ ಹೊಸನಗರ ತಾಲೂಕಿನ ಅರಸಾಳು ಬಟಾಣಿಜೆಡ್ಡು ಬಳಿ ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಭಾರಿ ಮಳೆಗೆ ಬೃಹತ್ ಮರವೊಂದು ರೈಲ್ವೆ ಹಳಿಗಳ ಮೇಲೆ ಬಿದ್ದಿದೆ. ಜತೆಗೆ ವಿದ್ಯುತ್ ತಂತಿಗಳಿಗೂ ಸಹ ಹಾನಿಯಾಗಿದೆ. ಇದರಿಂದಾಗಿ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಮರಬಿದ್ದ ಕಾರಣ ಅರಸಾಳು ಬಳಿಯ ಬಟಾಣಿಜೆಡ್ಡು ಬಳಿ ನಿಲ್ಲುವಂತಾಯಿತು. 7.15ಕ್ಕೆ ಶಿವಮೊಗ್ಗ ತಲುಪಬೇಕಿದ್ದ ರೈಲು 9 ಗಂಟೆಗೆ ಆಗಮಿಸಿತು. ಸುಮಾರು ಎರಡು ತಾಸು ಕಾದ ಪ್ರಯಾಣಿಕರು ಹೈರಾಣಾದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
NHAI FastTag
ದೇಶ3 mins ago

NHAI FastTag: ಇನ್ನೂ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲವೇ? ಹಾಗಿದ್ದರೆ ದುಪ್ಪಟ್ಟು ಶುಲ್ಕ ಕಟ್ಟಲು ಸಿದ್ದರಾಗಿ!

Suryakumar Yadav:
ಕ್ರೀಡೆ11 mins ago

Suryakumar Yadav : ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವೂ ನಷ್ಟ

Bangladesh Violence
ವಿದೇಶ21 mins ago

Bangladesh Violence: ಭಾರೀ ಪ್ರೊಟೆಸ್ಟ್‌; ಜೈಲಿಗೆ ಬೆಂಕಿ; ನೂರಾರು ಕೈದಿಗಳು ಪರಾರಿ

Opposition party leader R Ashok statement about Valmiki Development Corporation scam
ಕರ್ನಾಟಕ41 mins ago

R Ashok: ಹಗರಣದ ವಿರುದ್ಧ ಮಾತನಾಡಿದ ಸದಸ್ಯರ ಬಾಯಿ ಮುಚ್ಚಿಸಿದ ಸ್ಪೀಕರ್‌; ಆರ್‌. ಅಶೋಕ್‌ ಆಕ್ರೋಶ

Sbi Recruitment
ಉದ್ಯೋಗ45 mins ago

Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

Sringeri Sharada Peetham
ಕರ್ನಾಟಕ49 mins ago

Sringeri Sharada Peetham: ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿ; ಸಾಂಪ್ರದಾಯಿಕ ಉಡುಗೆ ಕಡ್ಡಾಯ

Monsoon Ethnicwear
ಫ್ಯಾಷನ್1 hour ago

Monsoon Ethnicwear: ಮಾನ್ಸೂನ್‌ಗೆ ಕಾಲಿಟ್ಟ ಮೆನ್ಸ್ ಜಾಕೆಟ್‌ ಸ್ಟೈಲ್‌ ಎಥ್ನಿಕ್‌ ವೇರ್ಸ್

What is Food Poisoning?
ಆರೋಗ್ಯ1 hour ago

Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು?

Viral Video
ವೈರಲ್ ನ್ಯೂಸ್1 hour ago

Viral Video: ಜಿಮ್‌ ಸಾಧನದಲ್ಲೇ ಯುವಕನ ತಲೆಗೆ ಹೊಡೆದ ಟ್ರೈನರ್‌; ಭೀಕರ ದೃಶ್ಯ ಫುಲ್‌ ವೈರಲ್‌

Sexual Abuse
Latest1 hour ago

Sexual Abuse: ಬಾಲಕಿ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ; ವಿಡಿಯೊ ಮನೆಗೇ ಕಳಿಸಿದ ದುಷ್ಟರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ8 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ8 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌