Bengaluru Bandh : ಅರ್ಧ ದಿನಕ್ಕೇ ಬೆಂಗಳೂರು ಬಂದ್‌ ವಾಪಸ್‌; ಆ ಒಂದು ಬೇಡಿಕೆ ಬಿಟ್ಟು 16ಕ್ಕೆ ಸಚಿವರ ಒಪ್ಪಿಗೆ - Vistara News

ಕರ್ನಾಟಕ

Bengaluru Bandh : ಅರ್ಧ ದಿನಕ್ಕೇ ಬೆಂಗಳೂರು ಬಂದ್‌ ವಾಪಸ್‌; ಆ ಒಂದು ಬೇಡಿಕೆ ಬಿಟ್ಟು 16ಕ್ಕೆ ಸಚಿವರ ಒಪ್ಪಿಗೆ

Bengaluru Bandh : ಬೆಂಗಳೂರಿನಲ್ಲಿ ಸೋಮವಾರ ನಡೆದ ಖಾಸಗಿ ಸಾರಿಗೆ ಬಂದ್‌ ಅರ್ಧ ದಿನಕ್ಕೇ ಅಂತ್ಯಗೊಂಡಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು 16 ಬೇಡಿಕೆಗಳ ಈಡೇರಿಕೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಆದರೆ, ಪ್ರಮುಖ ಬೇಡಿಕೆಗಳ ಬಗ್ಗೆ ಅವರು ಭರವಸೆ ನೀಡಿಲ್ಲ!

VISTARANEWS.COM


on

Bengaluru bandh called off
ಬೆಂಗಳೂರಿನಲ್ಲಿ ನಡೆದ ಸಾರಿಗೆ ಬಂದ್‌ ಪ್ರತಿಭಟನೆ ದೃಶ್ಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಬಸ್‌, ಆಟೊ, ಟ್ಯಾಕ್ಸಿ, ಶಾಲಾ ವಾಹನಗಳನ್ನು ಒಳಗೊಂಡ 32 ಸಂಘಟನೆಗಳು ಕರೆ ನೀಡಿದ 24 ಗಂಟೆಗಳ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್‌ (Bengaluru bandh) 14 ಗಂಟೆಗಳಲ್ಲೇ ಮುಕ್ತಾಯಗೊಂಡಿದೆ. ಭಾನುವಾರ ರಾತ್ರಿ ಆರಂಭಗೊಂಡ ಈ ಸಾರಿಗೆ ಬಂದ್‌ ಸೋಮವಾರ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ನೀಡಿದ ಭರವಸೆಗಳಿಗೆ ಮನ್ನಣೆ ನೀಡಿ ಅಂತ್ಯಗೊಂಡಿದೆ. ರಾಮಲಿಂಗಾ ರೆಡ್ಡಿ ಅವರು 16 ಬೇಡಿಕೆಗಳನ್ನು ಶೀಘ್ರ ಈಡೇರಿಸುವುದಾಗಿ ತಿಳಿಸಿದರು. ಆದರೆ, ಶಕ್ತಿ ಯೋಜನೆ (Shakti Scheme) ರದ್ದು ಮಾಡಬೇಕು ಎಂಬ ಬೇಡಿಕೆ ಸಲ್ಲದೆಂದರು.

ರಾತ್ರಿಯಿಂದಲೇ ಖಾಸಗಿ ಪ್ರಯಾಣಿಕ ವಾಹನಗಳ ಓಡಾಟವನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಬೆಳಗ್ಗೆ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ಪರದಾಟ ನಡೆಸಬೇಕಾಯಿತು. ಖಾಸಗಿ ವಾಹನಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಮಧ್ಯಾಹ್ನದ ಹೊತ್ತಿಗೆ ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆದು ಸಮಾವೇಶ ನಡೆಸಲಾಯಿತು. ಅಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಪೀಸ್ ಅಟೋ ಚಾಲಕರ ಸಂಘದ ಅಧ್ಯಕ್ಷ ರಘು, ಟ್ಯಾಕ್ಸಿ ಚಾಲಕರ ಸಂಘದ ನಾರಾಯಣಸ್ವಾಮಿ, ARDO ಬೆಂಬಲಿತ ಆಟೋ ಸಂಘಟನೆ ಅಧ್ಯಕ್ಷ ಶ್ರೀನಿವಾಸ್ ಮತ್ತು ಇತರರು ಭಾಗಿಯಾಗಿದ್ದರು.

Bangalore bundh called off

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಮಲಿಂಗಾ ರೆಡ್ಡಿ ಅವರ ಮುಂದೆ ಪ್ರತಿಭಟನಾಕಾರರ ನಾಯಕರು ತಮ್ಮ ಸಮಸ್ಯೆ ಹೇಳಿಕೊಂಡರು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆ ಮತ್ತು ತೆರಿಗೆ ಹೆಚ್ಚಳ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವುದು. ಉಳಿದೆಲ್ಲವೂ ಹಿಂದಿನಿಂದಲೇ ಇರುವ ಸಮಸ್ಯೆ. ಇದೆಲ್ಲವನ್ನೂ ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದರು. ಆದರೆ, ಶಕ್ತಿ ಯೋಜನೆ ರದ್ದುಪಡಿಸುವ ಖಾಸಗಿ ಬಸ್‌ ಮಾಲೀಕರ ಸಂಘದ ಬೇಡಿಕೆಯನ್ನು ಅವರು ಒಪ್ಪಲಿಲ್ಲ. ಎಲ್ಲದಕ್ಕೂ ಪರ್ಯಾಯವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಹಾಗಿದ್ದರೆ ಒಕ್ಕೂಟದ ಬೇಡಿಕೆಗಳು ಏನೇನಿದ್ದವು? ಈಡೇರಿದ್ದು ಯಾವುದು?

ಎಸ್. ಆಟೋ, ಕ್ಯಾಬ್, ಮ್ಯಾಕ್ಸಿಕ್ಯಾಬ್, ಸ್ಕೂಲ್ ವ್ಯಾನ್, ಗೂಡ್ಸ್ ವಾಹನ ಹಾಗು ಖಾಸಗಿ ಬಸ್‌ಗಳ ಸಂಘಟನೆಗಳನ್ನು ಒಳಗೊಂಡಿದ್ದ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು. ಎಲ್ಲ ರೀತಿಯ ಖಾಸಗಿ ಸಾರಿಗೆ ಸಂಘಟನೆಗಳಿಗೆ ಅವರದ್ದೇ ಆದ ಭಿನ್ನವಿಭಿನ್ನ ಬೇಡಿಕೆಗಳಿದ್ದವು.

ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಶಕ್ತಿ ಯೋಜನೆಯಿಂದ ಉಂಟಾಗಿರುವ ನಷ್ಟ ಪರಿಹಾರವಾಗಿ ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು.
  2. ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು‌
  3. ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು.
  4. ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು

ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
  2. ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
  3. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು.
  4. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು

ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
  2. ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು‌.
  3. ಖಾಸಗಿ ಬಸ್‌ಗಳನ್ನ ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

ಗೂಡ್ಸ್ ವಾಹನಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಪೋರ್ಟರ್ ಸಂಸ್ಥೆಯಿಂದ ಆಗ್ತಿರೋ ಅನ್ಯಾಯ ಸರಿಪಡಿಸಬೇಕು
  2. ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಬದಲು ಪೋರ್ಟರ್ ಮೇಲೆ ದಾಖಲಿಸಬೇಕು
  3. ಅಕ್ರಮವಾಗಿ ಚಾಲಕರ ಡಿಎಲ್ ರದ್ದು ಮಾಡಲಾಗ್ತಿರೋದಕ್ಕೆ ಪೂರ್ಣವಿರಾಮ ಹಾಕಬೇಕು

ಸ್ಕೂಲ್‌ ವ್ಯಾನ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಶಾಲಾ ವ್ಯಾನ್‌ಗಳನ್ನು ಚಲಾಯಿಸಲು ಪರ್ಮಿಟ್ ನೀಡಬೇಕು
  2. ಸೀಝ್ ಆದ ವ್ಯಾನ್‌ಗಳ ಮೇಲೆ ವಿಧಿಸುತ್ತಿರೋ ಫೈನ್ ಮೊತ್ತವನ್ನು ಇಳಿಸಬೇಕು
  3. ತೆರಿಗೆ ಕಟ್ಟಿದ್ರೂ ವಯೋಲೇಶನ್ ಅಂತ ನಕಲಿ ಕೇಸ್‌ಗಳನ್ನು ಹಾಕುವುದು ನಿಲ್ಲಿಸಬೇ

    ಇದನ್ನೂ ಓದಿ: Bengaluru Bandh : ಬೆಂಗಳೂರು ಬಂದ್‌ ವಾಪಸ್‌; ಖಾಸಗಿ ಸಾರಿಗೆ ಒಕ್ಕೂಟ ಘೋಷಣೆ, ಫಲಿಸಿದ ರಾಮಲಿಂಗಾ ರೆಡ್ಡಿ ಸಂಧಾನ

ಸಾರಿಗೆ ಸಚಿವರು ಈಡೇರಿಸಲು ಒಪ್ಪಿದ ಬೇಡಿಕೆಗಳು

ಸುಮಾರು ಒಂದು ಗಂಟೆಗೂ ಅಧಿಕ ಕಾಲ ನೆರೆದಿದ್ದ ಪ್ರತಿಭಟನಾನಿರತ ಮುಖಂಡರ ಬೇಡಿಕೆಗಳನ್ನು ಆಲಿಸಿ ಅವರಿಂದ ಸರ್ಕಾರಕ್ಕೆ ನೀಡಬೇಕಿದ್ದ ಮನವಿ ಪತ್ರವನ್ನೂ ಪಡೆದರು ಸಚಿವ ರಾಮಲಿಂಗಾ ರೆಡ್ಡಿ. ಈ ವೇಳೆ ವೇದಿಕೆಯಲ್ಲಿ ಸಾರಿಗೆ ಇಲಾಖೆಯ ಆಯುಕ್ತರು ಸೇರಿದಂತೆ ಹೆಚ್ಚುವರಿ ಆಯುಕ್ತರಗಳೂ ಉಪಸ್ಥಿತರಿದ್ದರು. ನಂತರ ಮಾತನಾಡಿದ ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ, ಇನ್ನು ಮುಂದೆ ಒಕ್ಕೂಟದ ಕೇವಲ ನೀವು ಮಾತ್ರವಲ್ಲ. ನಾನೂ ಕೂಡ ಅದರಲ್ಲಿ ಪಾಲುದಾರನಾಗಿದ್ದೇನೆ. ನಿಮ್ಮ ಪರವಾಗಿ ನಾನು ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ ಎಂದರು. ಇನ್ನು, ಅವರೇ ಹೇಳಿದಂತೆ ಈ ಇಷ್ಟೂ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು.

  1. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತದೆ.
  2. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತದೆ.
  3. ಚಾಲಕರ ಅನುಕೂಲಕ್ಕೆ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಲಾಗುತ್ತದೆ.
  4. ಆ್ಯಪ್ ಮೂಲಕ ಖಾಸಗಿ ಸಂಸ್ಥೆ ಹಣ ಮಾಡೋದಕ್ಕೆ ಕಡಿವಾಣ ಹಾಕಲಾಗುತ್ತದೆ.
  5. ಹಿಂದುಳಿದ ವರ್ಗಗಳ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕೋರಿಕೆ ಇದ್ದು, ಅದು ಕೂಡ ಮಾಡಿಸಿಕೊಡಲಾಗುತ್ತದೆ.
  6. ಲೈಫ್ ಟ್ಯಾಕ್ಸ್ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ.
  7. ಓಲಾ, ಊಬರ್, ಬೈಕ್ ಟ್ಯಾಕ್ಸಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ನಡಿತಿದೆ, ಇದಕ್ಕೆ ಸೀನಿಯರ್ ವಕೀಲರನ್ನು ಇಟ್ಟು ವೆಕೇಟ್ ಮಾಡಿಸುತ್ತೇವೆ.
  8. ಒಂದು ನಗರ, ಒಂದು ದರ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ.
  9. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಜತೆ ಮಾತನಾಡಲಾಗಿದ್ದು, ವಸತಿ ಯೋಜನೆ ಕಲ್ಪಿಸುತ್ತೇವೆ.
  10. ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ 17 ಕೋಟಿ ಅನುದಾನ ಇಡಲಾಗುತ್ತದೆ.
  11. ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಆಗಬೇಕಿದೆ.
  12. ಖಾಸಗಿ ವಾಹನ ಕಿಲೋಮೀಟರ್ ಮೇಲೆ ತೆಗೆದುಕೊಳ್ಳುವ ಬಗ್ಗೆ ಎಂಡಿ ಜತೆ ಚರ್ಚೆ ಮಾಡಬೇಕಾಗುತ್ತದೆ.
  13. ಟ್ಯಾಕ್ಸ್ ಕಡಿಮೆ ಮಾಡುವ ಬಗ್ಗೆ ಸಿಎಂ ಜತೆ ಮಾತುಕತೆ ಆಗಲಿದೆ.
  14. ಟ್ರಾಫಿಕ್ ಪೊಲೀಸರು ಫೈನ್ ಕಟ್ಟಲು 50% ಡಿಸ್ಕೌಂಟ್ ಕೊಟ್ಟ ಹಾಗೆ ಟ್ಯಾಕ್ಸ್ ಒನ್ ಟೈಂ ಸೆಟಲ್‌ಮೆಂಟ್ ಬಗ್ಗೆ ಚರ್ಚೆ ನಡೆಸಲಾಗುತ್ತೆ.
  15. ಶಾಲೆ ವಾಹನ ಸಣ್ಣ amendment ಮಾಡಿಸಬೇಕಾಗುತ್ತೆ.
  16. ಪೋರ್ಟರ್ ವಾಹನ ಲೈಸೆನ್ಸ್ ತೆಗೆದುಕೊಂಡಿಲ್ಲವಾಗಿಲ್ಲದಿರುವುದರಿಂದ ಕಾನೂನುಬಾಹಿರ. ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Veeraloka Books: ಬೆಂಗಳೂರಿನಲ್ಲಿ‌ ಜೂನ್ 8ರಂದು ವೀರಲೋಕ ಬುಕ್ಸ್‌ನ ಎರಡನೇ ವಾರ್ಷಿಕೋತ್ಸವ

Veeraloka Books: ಬೆಂಗಳೂರಿನ ರಿಚ್‌ಮಂಡ್‌ ಸರ್ಕಲ್‌ನ ರಮಣಶ್ರೀ ಹೋಟೆಲ್‌ನ 5ನೇ ಮಹಡಿಯಲ್ಲಿ ಜೂನ್‌ 8ರಂದು ಸಂಜೆ ʼವೀರಲೋಕ ಬುಕ್ಸ್‌ʼ ವಾರ್ಷಿಕೋತ್ಸವ ಹಾಗೂ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Veeraloka Books
Koo

ಬೆಂಗಳೂರು: ʼವೀರಲೋಕ ಬುಕ್ಸ್‌ʼ (Veeraloka Books) ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದು, ಸಂಸ್ಥೆಯು ಈವರೆಗೆ ವೈವಿಧ್ಯಮಯ ಹಾಗೂ ಮೌಲ್ಯಯುತವಾದ 100 ಪುಸ್ತಕಗಳ ಪ್ರಕಟಣೆ ಮಾಡಿದೆ. ಈ ಖುಷಿಯನ್ನು ಸಂಭ್ರಮಿಸಲು ಜೂನ್‌ 8ರಂದು ಸಂಜೆ 6ರಿಂದ 9ರವರೆಗೆ ನಗರದ ರಿಚ್‌ಮಂಡ್‌ ಸರ್ಕಲ್‌ನ ರಮಣಶ್ರೀ ಹೋಟೆಲ್‌ನ 5ನೇ ಮಹಡಿಯಲ್ಲಿ ʼವೀರಲೋಕ ಬುಕ್ಸ್‌ನ 2ನೇ ವಾರ್ಷಿಕೋತ್ಸವʼ ಹಾಗೂ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮಿಕೊಳ್ಳಲಾಗಿದೆ ಎಂದು ವೀರಲೋಕ ಬುಕ್ಸ್‌ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ವೀರಲೋಕಕ್ಕೆ ಈಗ ಭರ್ತಿ ಎರಡು ವರ್ಷ! ಈ ಎರಡು ವರ್ಷಗಳಲ್ಲಿ ವೈವಿಧ್ಯಮಯ ಹಾಗೂ ಮೌಲ್ಯಯುತವಾದ 100 ಪುಸ್ತಕಗಳ ಪ್ರಕಟಣೆ ಮಾಡಿದ್ದೇವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಪುಸ್ತಕಗಳು ಯುವ ಲೇಖಕರದ್ದೇ ಆಗಿರುವುದು ಅವರನ್ನು ಮುನ್ನಲೆಗೆ ತರಬೇಕೆಂಬ ಅದಮ್ಮ ಸಂಕಲ್ಪದಿಂದಲೇ, ಜೊತೆಗೆ ಕೇವಲ ಒಂದೇ ಪ್ರಕಾರದ ಪುಸ್ತಕ ಪ್ರಕಟಣೆಗಳಿಗೆ ಒತ್ತು ನೀಡದೆ ಕತೆ, ಕಾದಂಬರಿ, ಲಲಿತ ಪ್ರಬಂಧ, ವೈಚಾರಿಕ, ಐತಿಹಾಸಿಕ, ಗಣಿತ, ಅನುಭವ ಕಥನ, ವ್ಯಕ್ತಿಚಿತ್ರ, ಅಧ್ಯಯನ, ಪ್ರಾಯೋಗಿಕ, ಅನುವಾದ, ವಾಚಿಕೆ. ಮಕ್ಕಳ ಸಾಹಿತ್ಯ, ಕವನಸಂಕಲನ, ನಾಟಕ ಕೃತಿಗಳನ್ನೂ ಪ್ರಕಟಿಸಿದ್ದೇವೆ. ವೀರಲೋಕದ ಪುಸ್ತಕಗಳು ಇದುವರೆಗೆ ನಲ್ವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿವೆ ಎಂದು ತಿಳಿಸಿದ್ದಾರೆ.

ವೀರಲೋಕ ಬುಕ್ಸ್‌ನಿಂದ 2 ವರ್ಷಗಳಲ್ಲಿ ನಡೆದಿರುವ ಕೆಲಸಗಳು

  • ಮನುಷ್ಯನ ದೈನಂದಿನ ಬದುಕಿಗೆ ಬೇಕಾದ ಎಲ್ಲಾ ವಸ್ತುಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸಿಗುವಂತೆಯೇ ಎಲ್ಲಾ ಥರದ ಪುಸ್ತಕಗಳು ಒಂದೇ ಸೂರಿನಡಿ ಸಿಗುವಂತೆ www.veeralokabooks.com ವೆಬ್‌ಸೈಟ್ ಆರಂಭ. 10,000ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿ ಲಿಸ್ಟಿಂಗ್ ಆಗಿವೆ.
  • ಕೆಲವೇ ನಿಮಿಷಗಳಲ್ಲಿ ಫುಡ್ ಡೆಲಿವರಿ ಮಾಡುವ ಸ್ವಿಗ್ಗಿ, ಜೊಮ್ಯಾಟೋದಂತೆ ಬೆಂಗಳೂರಿನ ಓದುಗರಿಗೆ ಪುಸ್ತಕಗಳನ್ನು ಕ್ಷಣಾರ್ಧದಲ್ಲಿ ತಲುಪಿಸಲು ಬುಕ್ ಬಾಯ್ ನೇಮಕ.
  • ಪಾರ್ಕ್, ಹೋಟೆಲ್ ಗಳ ಬಳಿಯೂ ಪುಸ್ತಕಗಳು ಸಿಗುವಂತೆ ಸ್ವಯಂ ಕೃಷಿ ಯೋಜನೆ ಆರಂಭ. 75 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
  • ಗ್ರಾಮೀಣ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ‘ದೇಸಿ ಜಗಲಿ ಕಥಾಕಮ್ಮಟ’ ಕಾರ್ಯಾಗಾರ ಆರಂಭ.
  • ಉತ್ತರ ಕರ್ನಾಟಕದ ಲೇಖಕರಿಗಾಗಿ ಉತ್ತರ ಪರ್ವ ಯೋಜನೆಯನ್ನು ಆರಂಭಿಸಿದ್ದು,
  • ಅತೀ ಹೆಚ್ಚು ಬಹುಮಾನದ ಸ್ಪರ್ಧೆಗಳನ್ನು ಏರ್ಪಡಿಸಿದ್ದು.
  • ಪರಭಾಷಾ ಪ್ರಾಬಲ್ಯವನ್ನು ವಿರೋಧಿಸುತ್ತಾ, ಪ್ರಕಾಶಕರು, ಲೇಖಕರು ಮತ್ತು ಓದುಗರನ್ನು ಒಂದೆಡೆ ಸಂಧಿಸುವಂತೆ ಮಾಡಿ, ಪುಸ್ತಕ ಮಾರಾಟಕ್ಕೆ ಭರವಸೆಯಾದ ಪುಸ್ತಕ ಸಂತೆ ಕಾರ್ಯಕ್ರಮ.
  • ಯುವ ತಲೆಮಾರನ್ನು ಕನ್ನಡ ಪುಸ್ತಕಗಳೆಡೆಗೆ ಆಕರ್ಷಿಸಲು ಡಿಸೆಂಬರ್ 31ರ ಮಧ್ಯರಾತ್ರಿ ಪುಸ್ತಕ ಬಿಡುಗಡೆಗೊಳಿಸುವ ವಿನೂತನ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು.
  • ಪುಸ್ತಕ ಬಿಡುಗಡೆ ಸಮಾರಂಭಗಳನ್ನು ಸಿನಿಮಾ ಸಮಾರಂಭಗಳಿಗಿಂತ ಅದ್ದೂರಿಯಾಗಿ ಏರ್ಪಡಿಸುವ ಮೂಲಕ ಬರಹಗಾರರಿಗೆ ಭರವಸೆ ತುಂಬಿದ್ದು ಮತ್ತು ಓದುಗರನ್ನು ಸೆಳೆದಿದ್ದು.
  • “ಯಾವುದೇ ಪುಸ್ತಕ ಕೇಳಿ, ತಲುಪಿಸದಿದ್ದರೇ ಹೇಳಿ” ಎಂಬ ಘೋಷವಾಕ್ಯದೊಂದಿಗೆ ಆರಂಭಿಸಿದ ವೀರಲೋಕ ಇದುವರೆಗೆ ಸುಮಾರು 1,00,000 ಪುಸ್ತಕಗಳನ್ನು ಓದುಗರಿಗೆ ತಲುಪಿಸಿದೆ. ಕೆಲವೊಮ್ಮೆ ಎಲ್ಲೂ ಸಿಗದ ಪುಸ್ತಕಗಳನ್ನೂ ಎಲ್ಲೆಲ್ಲೋ ಹುಡುಕಿ ತಂದು ಓದುಗರ ಓದಿನ ದಾಹವನ್ನು ತಣಿಸಿದ್ದೇವೆ.
  • ಲೇಖಕರನ್ನು ಸ್ಟಾರುಗಳಂತೆ ಬಿಂಬಿಸುವುದರ ಜೊತೆಗೆ ಅವರ ರಾಯಧನದ ವಿಷಯದಲ್ಲಿ ಅತ್ಯಂತ ಪಾರದರ್ಶಕತೆಯನ್ನು ಪಾಲಿಸಿದ್ದು ಕೂಡ ವೀರಲೋಕದ ಹೆಗ್ಗಳಿಕೆ.

ಇವುಗಳ ಆದಿಯಾಗಿ ಇನ್ನೂ ಸಾಕಷ್ಟು ಕೆಲಸಗಳನ್ನು ವೀರಲೋಕ ಈ ಎರಡು ವರ್ಷದ ಅವಧಿಯಲ್ಲಿ ಮಾಡಿ ಮುಗಿಸಿದೆ. ಇನ್ನಷ್ಟು ಕೆಲಸಗಳ ಪಟ್ಟಿಯನ್ನು ಹಿಡಿದು ಕೂತಿದೆ. ಆ ಎಲ್ಲದಕ್ಕೂ ಬೆಂಬಲವಾಗಿ ನೀವು ನಿಂತಿದ್ದೀರಿ. ಸಾಹಿತ್ಯ ಕ್ಷೇತ್ರ ನಮ್ಮನ್ನು ಇಷ್ಟು ಗೌರವದಿಂದ ನಡೆಸಿಕೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ನಿರೀಕ್ಷೆ ಮೀರಿದ ಪ್ರೀತಿ, ಪ್ರೋತ್ಸಾಹವನ್ನು ಪ್ರತಿಯೊಬ್ಬರೂ ನೀಡಿದ್ದಾರೆ. ಈ ಅವಧಿಯಲ್ಲಿ ಕೇವಲ ಹೊಗಳಿಕೆಗಳು ಮಾತ್ರವಲ್ಲ ಟೀಕೆಗಳನ್ನೂ ಕಂಡಿದ್ದೇವೆ. ಟೀಕೆಗಳು ಬಂದಾಗ ಎದೆಗುಂದದೆ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದಿದ್ದೇವೆ ಎಂಬುದು ನಮ್ಮ ಈ ಕ್ಷಣದ ಖುಷಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಈ ಖುಷಿಯನ್ನು ನಿಮ್ಮೊಂದಿಗೆ ಸಂಭ್ರಮಿಸುವುದಕ್ಕಾಗಿ ವಾರ್ಷಿಕೋತ್ಸವಾಚರಣೆಯನ್ನು ಹಮ್ಮಿಕೊಂಡಿದ್ದೇವೆ. ಐದು ಪುಸ್ತಕಗಳ ಬಿಡುಗಡೆ ಜೊತೆಗೆ ಹಾಡು-ಹಾಸ್ಯ-ಭೋಜನದ ಈ ವಾರ್ಷಿಕೋತ್ಸವದಲ್ಲಿ ನೀವು ನಮ್ಮ ಜೊತೆಗಿರಬೇಕು ಎಂದು ಪುಸ್ತಕ ಪ್ರಿಯರು, ಸಾಹಿತ್ಯಾಸಕ್ತರನ್ನು ಕೋರಿದ್ದಾರೆ.

Continue Reading

ಶಿಕ್ಷಣ

RTE Admission 2024: ನಾಳೆಯಿಂದ ಆರ್‌ಟಿಇ ಅಡಿ ದಾಖಲಾತಿ ಪ್ರಕ್ರಿಯೆ ಪ್ರಾರಂಭ

RTE Admission 2024 : ಜೂನ್‌ 8ರಿಂದ 2024-25ನೇ ಸಾಲಿಗೆ ಆರ್‌ಟಿಇ ಅಡಿ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಲಿದೆ. ಈ ಸಂಬಂಧ ಶಿಕ್ಷಣ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

VISTARANEWS.COM


on

By

RTE Admissions 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದ್ದು, ದಾಖಲಾತಿ ಪ್ರಕ್ರಿಯೆಯು ಆರಂಭಗೊಂಡಿದೆ. ಈಗ ಆರ್‌ಟಿಇ ಅಡಿ ಶಾಲಾ ದಾಖಲಾತಿ (RTE Admission 2024) ಜೂನ್‌ 8ರಿಂದ ಪ್ರಾರಂಭವಾಗಲಿದ್ದು, ಜೂ.19ರಂದು ಕೊನೆ ದಿನವಾಗಿದೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಆರ್‌ಟಿಇ ಪ್ರವೇಶಕ್ಕೆ ಅರ್ಜಿಗಳ ಸಲ್ಲಿಕೆಯಾಗಿದ್ದು, ಡೇಟಾ ಪರಿಶೀಲನೆ ಮಾಡಲಾಗಿದೆ. ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿ ಬಿಡುಗಡೆಯಾಗಿದ್ದು, ಜೂ.7ರಂದು ಆನ್‌ಲೈನ್‌ ಮೂಲಕ ಆರ್‌ಟಿಇ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್‌ 8ರಿಂದ 19ರವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಜೂನ್‌ 20ವರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಿದೆ.

ಮೊದಲ ಸುತ್ತಿನ ಸೀಟು ಹಂಚಿಕೆ ನಂತರ ಜೂನ್‌ 25ರಂದು ಎರನಡೇ ಸುತ್ತಿನ ಸೀಟು ಹಂಚಿಕೆಯನ್ನು ನಡೆಸಲಾಗುತ್ತದೆ. ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ಜೂನ್‌ 26 ರಿಂದ ಜುಲೈ 2ರ ವರೆಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ಆಯಾ ಶಾಲಾ ಮುಖ್ಯಸ್ಥರು ಜುಲೈ 3ರಂದು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕಿದೆ.

ಆರ್‌ಟಿಇ ಅಡಿ ಮೊದಲ ಸುತ್ತಿನ ಆನ್‌ಲೈನ್‌ ಲಾಟರಿ ಪ್ರಕ್ರಿಯೆಯನ್ನು ಈ ಮೊದಲು ಜೂ 5ಕ್ಕೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಲಾಟರಿ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಅದರಂತೆ ಜೂ. 7ರಂದು ಶುಕ್ರವಾರ ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯು ನಡೆಯಲಿದೆ.

RTE Admissions 2024

ಇದನ್ನೂ ಓದಿ: Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ವಸತಿ ಶಾಲೆಗಳಿಗೂ ಆರ್‌ಟಿಇ ಅನ್ವಯ

ಕರ್ನಾಟಕ ಹೈಕೋರ್ಟ್ ಕಳೆದ ವಾರ ವಸತಿ ಶಾಲೆಗಳಿಗೂ ಆರ್‌ಟಿಐ ಕಾಯಿದೆಯ ಅಂಶಗಳು ಅನ್ವಯವಾಗುತ್ತವೆ ಎಂದು ಆದೇಶ ನೀಡಿತ್ತು. ಇದರಿಂದಾಗಿ ಇನ್ನು ಮುಂದೆ ವಸತಿ ಶಾಲೆಗಳು ಆರ್‌ಟಿಇ ಅನ್ವಯವಾಗುವುದಿಲ್ಲವೆಂದು ಹೇಳುವಂತಿಲ್ಲ. ಅಲ್ಲದೇ ಕೋರ್ಟ್ ತನ್ನ ಆದೇಶದಲ್ಲಿ ಆರ್‌ಟಿಇ ಕಾಯಿದೆ ನಿಯಮ 18ರ ಪ್ರಕಾರ ಮತ್ತು ಕರ್ನಾಟಕ ಆರ್‌ಟಿಇ ಕಾಯಿದೆ ನಿಯಮ 11ರಂತೆ, ನಮೂನೆ-1ರಂತೆ ಸರಕಾರ ಹೊರತುಪಡಿಸಿ ಇತರೆ ಎಲ್ಲಾ ಶಾಲೆಗಳು ಸಕ್ಷಮ ಪ್ರಾಧಿಕಾರದಲ್ಲಿಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Rahul Gandhi: ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ; 18 ಸಚಿವರ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ

Election Results 2024: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 18 ಕ್ಷೇತ್ರಗಳಲ್ಲಿ ಲೀಡ್‌ ಕೊಡಿಸಲು ವಿಫಲರಾದ ಸಚಿವರ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಗೆದ್ದವರಿಗೆ ಅಭಿನಂದನೆ, ಸೋತ ಅಭ್ಯರ್ಥಿಗಳಿಗೆ ಧೈರ್ಯ ಹೇಳಿದ್ದಾರೆ.

VISTARANEWS.COM


on

Election results 2024
Koo

ಬೆಂಗಳೂರು: ರಾಜ್ಯದ ಲೋಕಸಭೆ ಚುನಾವಣೆಯಲ್ಲಿ (Karnataka election results 2024) ಗೆದ್ದ ಕಾಂಗ್ರೆಸ್‌ನ 9 ನೂತನ ಸಂಸದರಿಗೆ ಅಭಿನಂದನೆ ಹಾಗೂ ಸೋತ 19 ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನೆರವೇರಿತು. ಬಿಜೆಪಿಯ ಮಾನನಷ್ಟ ಪ್ರಕರಣದ ವಿಚಾರಣೆಗಾಗಿ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು, ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಸೋತವರಿಗೆ ಧೈರ್ಯ ಹೇಳಿದ್ದಾರೆ. ಇದೇ ವೇಳೆ ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದ ಸಚಿವರ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ.

ಎಲ್ಲಾ 28 ಕಾಂಗ್ರೆಸ್‌ ಅಭ್ಯರ್ಥಿಗಳ ಜತೆ ರಾಹುಲ್ ಗಾಂಧಿ ಸಭೆ ನಡೆಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಉಪಸ್ಥಿತರಿದ್ದರು. ಈ ವೇಳೆ ಗೆದ್ದವರಿಗೆ ಅಭಿನಂದನೆ, ಸೋತವರಿಗೆ ಧೈರ್ಯ ಹೇಳಿದ ರಾಹುಲ್ ಗಾಂಧಿ ಅವರು, ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯಿರಿ. ಬೆಂಗಳೂರು, ದೆಹಲಿಯಲ್ಲೇ ಇರಬೇಡಿ. ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ. ನಾವು ನಿಮ್ಮ ಜತೆಗೆ ಇದ್ದೇವೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ. ಕಾರ್ಯಕರ್ತರ ವಿಶ್ವಾಸಗಳಿಸಿ, ಅದರಿಂದ ಮುಂದೆ ನಿಮಗೂ, ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಸಚಿವರ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ

ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದ ಸಚಿವರ ಬಗ್ಗೆ ಸಭೆಯಲ್ಲಿ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಲೀಡ್ ಕಡಿಮೆ ಕೊಟ್ಟ ಸಚಿವರ ಬಗ್ಗೆ ರಣದೀಪ್‌ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ. ಈ ವೇಳೆ 18 ಸಚಿವರು ಲೀಡ್ ಕೊಡಿಸುವಲ್ಲಿ ವಿಫಲ‌ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಮ್ಮ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸುವುದರಲ್ಲೂ ವಿಫಲರಾಗಿದ್ದಕ್ಕೆ ಸಚಿವರ ವಿರುದ್ಧ ರಾಹುಲ್‌ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Lok Sabha Election 2024: ನೂತನ ಸಂಸದರಲ್ಲಿ ಶೇ. 93ರಷ್ಟು ಮಂದಿ ಕೋಟ್ಯಧೀಶರು, ಶೇ.46ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಕೇಸ್!

ಸ್ವ ಕ್ಷೇತ್ರದಲ್ಲೂ ಲೀಡ್ ಕೊಡಿಸುವಲ್ಲಿ ವಿಫಲವಾದ 18 ಸಚಿವರ ಬಗ್ಗೆ ರಾಹುಲ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದ್ದು, ಲೀಡ್ ಕೊಡಿಸುವಲ್ಲಿ ವಿಫಲವಾದ ಸಚಿವರ ಸ್ಥಾನಮಾನಕ್ಕೆ ಮುಂದೆ ಸಂಕಷ್ಟ ಸಾಧ್ಯತೆ ಇದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

Continue Reading

ಕರ್ನಾಟಕ

Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

Prajwal Revanna Case: 2 ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು.

VISTARANEWS.COM


on

Prajwal Revanna Case
Koo

ಬೆಂಗಳೂರು: ಎಚ್‌.ಡಿ. ರೇವಣ್ಣ ವಿರುದ್ಧ ದಾಖಲಾಗಿದ್ದ 2 ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್ 14ಕ್ಕೆ ಹೈಕೋರ್ಟ್ ಮೂಂದೂಡಿದೆ. ಹೈಕೋರ್ಟ್‌ನ ನ್ಯಾ. ಕೃಷ್ಣ ಧೀಕ್ಷಿತ್ ಅವರಿದ್ದ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಇದೇ ವೇಳೆ ರೇವಣ್ಣ ಜಾಮೀನು ರದ್ದು ಮಾಡಲು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ಮುಂದೂಡಿಕೆ.

ಈವರೆಗೆ 2 ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಹೊಳೆನರಸೀಪುರದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Prajwal Revanna Case), ಕೆ.ಆರ್.ನಗರದ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣಗಳಲ್ಲಿ ಹುರುಳಿಲ್ಲ, ಇದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ರೇವಣ್ಣ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತೀಚೆಗೆ ಕೆ.ಆರ್‌.ನಗರದ ಸಂತ್ರಸ್ತೆಯ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಮೇ 13ರಂದು ಜಾಮೀನು ದೊರೆತಿತ್ತು. ನಂತರ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಮೇ 20ರಂದು ಜಾಮೀನು (Bail) ಮಂಜೂರಾಗಿತ್ತು. ಇದೀಗ ಎರಡು ಎಫ್‌ಐಆರ್‌ ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ | Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

ಜಾಮೀನು ಬೆನ್ನಲ್ಲೇ ಭವಾನಿ ರೇವಣ್ಣ‌ ಪ್ರತ್ಯಕ್ಷ; ಎಸ್ಐಟಿ ವಿಚಾರಣೆಗೆ ಹಾಜರು!

ಬೆಂಗಳೂರು: ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ (Bhavani Revanna) ಅವರು ಕೆ.ಆರ್‌.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಪ್ರಕರಣದಲ್ಲಿ ವಿಚಾರಣೆಗಾಗಿ ಎಚ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ (Prajwal Revanna Case) ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್‌ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿರುವುದು ಕಂಡುಬಂದಿದೆ.

ಸಿಐಡಿಯಲ್ಲಿರುವ ಎಸ್ಐಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ‌ ಆಗಮಿಸಿದ್ದಾರೆ. ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್‌ಐಟಿ (SIT) ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಭವಾನಿ ರೇವಣ್ಣ ಪ್ರತ್ಯಕ್ಷವಾಗಿದ್ದಾರೆ.

ಒಂದು ವಾರ ಮಧ್ಯಂತರ ಜಾಮೀನು

ಕೆ.ಆರ್. ನಗರ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್‌ ಆದೇಶ ನೀಡಿತ್ತು. ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್‌ ಸೂಚನೆ ನೀಡಿತ್ತು.

ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು 11 ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್‌ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್‌ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

ಭವಾನಿ ಅವರಿಗೆ ಕೋರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಅದರಂತೆ ಅವರು ನಡೆದುಕೊಳ್ಳಬೇಕಿದೆ. ಅವುಗಳು ಹೀಗಿವೆ:
1) ಭವಾನಿ ಅವರು ಮಧ್ಯಾಹ್ನ 1 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಬೇಕು.
2) ವಿಚಾರಣೆಯ ನಂತರ ಐದು ಗಂಟೆಯ ಬಳಿಕ ಅವರನ್ನು ಇಟ್ಟುಕೊಳ್ಳಬಾರದು.
3) ಕೆ.ಆರ್‌ ನಗರ ತಾಲ್ಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಬಾರದು.
4) ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು.

ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಆರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗಿತ್ತು. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆದಿತ್ತು. ಅವರ ಮೊಬೈಲ್ ಲೊಕೇಶನ್‌ ಟವರ್ ಡಂಪ್, ಸಿಡಿಆರ್ ಪರಿಶೀಲನೆ ನಡೆಸಲಾಗಿತ್ತು. ಇದೀಗ ಮಧ್ಯಂತ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಅವರೇ ವಿಚಾರಣೆಗೆ ಆಗಮಿಸಿದ್ದಾರೆ.

Continue Reading
Advertisement
Babar Azam
ಪ್ರಮುಖ ಸುದ್ದಿ13 mins ago

Babar Azam : ಭಾರತ ಪಾಕ್​ ಪಂದ್ಯಕ್ಕೆ ಮೊದಲೇ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬಾಬರ್​ ಅಜಂ

Veeraloka Books
ಬೆಂಗಳೂರು16 mins ago

Veeraloka Books: ಬೆಂಗಳೂರಿನಲ್ಲಿ‌ ಜೂನ್ 8ರಂದು ವೀರಲೋಕ ಬುಕ್ಸ್‌ನ ಎರಡನೇ ವಾರ್ಷಿಕೋತ್ಸವ

Niveditha Gowda chandan divorce whats the reason
ಕಿರುತೆರೆ26 mins ago

Niveditha Gowda: ದಸರಾ ವೇದಿಕೆ ಮೇಲೆ ಪ್ರಪೋಸ್‌ ಮಾಡಿದ್ದೇ ವಿಚ್ಛೇದನಕ್ಕೆ ಕಾರಣವೇ? ʻಕ್ಯೂಟ್‌ ಕಪಲ್‌ʼ ಬಾಳಲ್ಲಿ ಬಿರುಗಾಳಿ!

Narendra Modi
ಪ್ರಮುಖ ಸುದ್ದಿ35 mins ago

Narendra Modi: ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

RTE Admissions 2024
ಶಿಕ್ಷಣ37 mins ago

RTE Admission 2024: ನಾಳೆಯಿಂದ ಆರ್‌ಟಿಇ ಅಡಿ ದಾಖಲಾತಿ ಪ್ರಕ್ರಿಯೆ ಪ್ರಾರಂಭ

NDA Meeting
ದೇಶ39 mins ago

NDA Meeting: ಯೋಗಿಯ ಬೆನ್ನು ತಟ್ಟಿದ ಮೋದಿ; ವಿರೋಧಿಗಳಿಗೆ ದೊಡ್ಡ ಸಂದೇಶ ರವಾನಿಸಿದ ನಾಯಕರು

Job Alert
ಉದ್ಯೋಗ42 mins ago

Job Alert: ಬರೋಬ್ಬರಿ 9,923 ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಇಂದೇ ಅರ್ಜಿ ಸಲ್ಲಿಸಿ

Haris Rauf
ಪ್ರಮುಖ ಸುದ್ದಿ42 mins ago

T20 World Cup : ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಬಾಲ್​ ವಿರೂಪಗೊಳಿಸಿದ ಪಾಕ್​ ಬೌಲರ್​; ಆರೋಪ

Niveditha Gowda chandan shetty divorce
ಸ್ಯಾಂಡಲ್ ವುಡ್56 mins ago

Niveditha Gowda: ನಿವೇದಿತಾ- ಚಂದನ್‌ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ ಕೊಟ್ರಾ ಬಾರ್ಬಿ ಡಾಲ್‌?

Election results 2024
ಪ್ರಮುಖ ಸುದ್ದಿ1 hour ago

Rahul Gandhi: ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ; 18 ಸಚಿವರ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌