Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌! - Vistara News

ಕರ್ನಾಟಕ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌!

Bengaluru Power Cut: ಬೆಂಗಳೂರು ನಗರದ ʼ66/11 ಕೆ.ವಿ. ಪಾಟರಿ ರೋಡ್ʼ ಸ್ಟೇಷನ್‌ನಲ್ಲಿ, ʼಹೂಡಿ 220/66/11 ಕೆ.ವಿ.ʼ ಸ್ಟೇಷನ್‌ನಲ್ಲಿ, ʼ66/11ಕೆ.ವಿ. ವಿಕ್ಟೋರಿಯಾʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.17 ರಂದು ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Bengaluru Power Cut
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ 66/11 ಕೆ.ವಿ ‘ಪಾಟರಿ ರೋಡ್ʼ ಸ್ಟೇಷನ್‌ನಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಆ.17ರಂದು ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್‌ ಪಾರ್ಕ್‌ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆ.ಎಚ್.ಬಿ ಕಾಲೋನಿ, ಜೈಭಾರತ್ ನಗರ, ಸಿ.ಕೆ. ಗಾರ್ಡನ್, ಡಿ’ಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಮರಿಯಮ್ಮ ಟೆಂಪಲ್ ಸ್ಟ್ರೀಟ್, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮೆನ್ ಕ್ವಾರ್ಟರ‍್ಸ್, ಹಚಿನ್ಸ್ ರಸ್ತೆ ಪಾರ್ಕ್‌ ರಸ್ತೆ, ದೇಶೀಯನಗರ ಸ್ಲಂ, 5ನೇ ಮತ್ತು 6ನೇ ಅಡ್ಡ ಹಚಿನ್ಸ್ ರಸ್ತೆ, ದೈಹಿಕ ಅಂಗವಿಕಲ ಸಂಸ್ಥೆ(APD), ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮಚಂದ್ ಲೇಔಟ್, ಸಿಎಂಆರ್‌ ಲೇಔಟ್, ಶ್ರೀನಿವಾಸ ಲೇಔಟ್, ಸ್ಪೆಕ್ಟ್ರಾ ಅಪಾರ್ಟ್‌ಮೆಂಟ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್, ಐಟಿಸಿ ಮುಖ್ಯ ರಸ್ತೆ, ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ್‌ ರಸ್ತೆ, ಬಿಬಿಎಂಪಿ ಸರ್ಕಾರಿ ಆಸ್ಪತ್ರೆ, ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್, ಎಚ್‌ಟಿ-87 ಓರಿಯನ್ ಮಾಲ್, ಬಾಣಸವಾಡಿ ಮುಖ್ಯ ರಸ್ತೆ, ತ್ಯಾಗರಾಜ್ ಲೇಔಟ್ (ಪ್ರೇಮಾ ಕಾರ‍್ಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, ಎಂಎಸ್ಒ ಕಾಲೋನಿ, ಎಂಇಜಿ ಆಫೀಸರ‍್ಸ್ ಕಾಲೋನಿ, ಪ್ರಣವ್ ಡಯಾಗ್ನೋಸ್ಟಿಕ್ಸ್.

ಸೇಂಟ್ ಜಾನ್ಸ್ ರಸ್ತೆ, ರುಕ್ಮಿಣಿ ಕಾಲೋನಿ, ಮಾಮುಂಡಿ ಪಿಳ್ಳೈ ಸ್ಟ್ರೀಟ್, ಡೇವಿಸ್ ರಸ್ತೆ, ಹಾಲ್ ರಸ್ತೆ, ರೋಜರ್ ರಸ್ತೆ, ಪಿಲ್ಲಣ್ಣ ಗಾರ್ಡನ್ 1ನೇ ಹಂತ, ನ್ಯೂ ಬಾಗ್ಲೂರ್ ಲೇಔಟ್, ಚಿನಪ್ಪ ಗಾರ್ಡನ್, ಎಸ್.ಕೆ ಗಾರ್ಡನ್, ಹ್ಯಾರಿಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಮುದಮ್ಮ ಗಾರ್ಡನ್, ವೀರ‍್ಸ್ ರಸ್ತೆ, ದೊಡ್ಡಿಗುಂಟಾ, ಸುಂದರಮೂರ್ತಿ ರಸ್ತೆ, ತಂಬುಚಟ್ಟಿ ರಸ್ತೆ, ಸಿಂಧಿ ಕಾಲೋನಿ, ಅಸ್ಸೆ ರಸ್ತೆ, ಸಿಸಿ ರಸ್ತೆ, ಆರ್‌ಕೆ ರಸ್ತೆ, ಅಸ್ಸೆ ರಸ್ತೆ, ಟ್ಯಾಂಕ್ ರಸ್ತೆ, ನ್ಯೂ ಅವೆನ್ಯೂ ರಸ್ತೆ, ಪಿಎಸ್‌ಕೆ ನಾಯ್ಡು ರಸ್ತೆ, ಎಂಎಂ ರಸ್ತೆ, ಕೆಂಚಪ್ಪ ರಸ್ತೆ, ಲಾಜರ್ ರಸ್ತೆ, ಸ್ಟೀಫನ್ಸ್ ರಸ್ತೆ, ಮಸೀದಿ ರಸ್ತೆ, ರತ್ನಸಿಂಗ್ ರಸ್ತೆ, ಮೂರ್ ರಸ್ತೆ, ದೊಡ್ಡಿ, ಎನ್‌ಸಿ ಕಾಲೋನಿ, ಗಿಡ್ಡಪ್ಪ ಬ್ಲಾಕ್, ಎಕೆ ಕಾಲೋನಿ, ಹೊಸ ಬಾಗ್ಲೂರು ಲೇಔಟ್, ಹಳೆ ಬಾಗ್ಲೂರು ಲೇಔಟ್, ಭಾರತಮಾತಾ ಲೇಔಟ್, ಪಿಲ್ಲಣ್ಣ ಗಾರ್ಡನ್‌ 3 ಸ್ಟೇಜ್, ರೈಲ್ವೇ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ?

ಬೆಂಗಳೂರು ನಗರದ ʼಹೂಡಿ 220/66/11 ಕೆ.ವಿ.ʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.17ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಗರುಡಾಚಾರ್ ಪಾಳ್ಯ, ಆರ್.ಎಚ್.ಬಿ ಕಾಲೋನಿ, ಲಕ್ಷ್ಮಿ ಸಾಗರ, ಮಹೇಶ್ವರಮ್ಮ ದೇವಸ್ಥಾನ, ಫೀನಿಕ್ಸ್ ಮಾಲ್, ಸಿಂಗಾಯನ ಪಾಳ್ಯ, ದೂರವಾಣಿ ಕೇಬಲ್ ರಸ್ತೆ, ವಿ ಆರ್ ಮಾಲ್ ಡೌನ್, ರೈಲ್ವೇ ಟ್ರ‍್ಯಾಕ್ ರಸ್ತೆ, ಮಣಿಪಾಲ್ ಆಸ್ಪತ್ರೆ, ಜೆನಿಸಿಸ್ ಕಂಪನಿ, ಎಲ್ & ಟಿ ಲಿಮಿಟೆಡ್, ಐಟಿಪಿಎಲ್ ಮುಖ್ಯ ರಸ್ತೆ, ರಾಜಪಾಳ್ಯ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್, ಆಂಧ್ರ ನೆಟ್‌ವರ್ಕ್‌, ಕನ್ಯಾಕುಮಾರಿ ಸಾಫ್ಟ್‌ವೇರ್, ಹೋಟೆಲ್ ಜೂರಿ ವೈಟ್‌ಫೀಲ್ಡ್ ಮುಖ್ಯ ರಸ್ತೆ, ಹೇಮಕುಂದ್‌ ರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ಕಾವೇರಿ ನಗರ, ದೇವಸಂದ್ರ ಕೈಗಾರಿಕಾ ಪ್ರದೇಶದ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Visa Free Countries: ಪ್ರವಾಸಿ ತಾಣಗಳಿಗೆ ಹೆಸರಾದ ಈ 10 ದೇಶಗಳಿಗೆ ಹೋಗಲು ವೀಸಾ ಬೇಕಿಲ್ಲ!

ಬೆಂಗಳೂರು ನಗರದ “66/11ಕೆ.ವಿ. ವಿಕ್ಟೋರಿಯಾ” ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಆ.17ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್‌ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ನೆಫ್ರೋರಾಲಜಿ, ಮಿಂಟೊ, ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರತ್ ಪೇಟೆ, ತಿಗಳರಪೇಟೆ, ಎನ್.ಆರ್. ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆ, ಎಸ್‌ಜೆಪಿ ಪಾರ್ಕ್‌, ಬಸಪ್ಪ ವೃತ್ತ, ಕೆಆರ್ ರಸ್ತೆ, ಕೋಟೆ ಬೀದಿ, ಕಲಾಸಿಪಾಳ್ಯ ಮುಖ್ಯ ರಸ್ತೆ, ಪಟ್ನೂಲ್‌ಪೇಟೆ, ಹಳೆ ಕಸಾಯಿಖಾನೆ ರಸ್ತೆ, ನಗರತ್ ಪೇಟೆ ಮುಖ್ಯರಸ್ತೆ, ಕುಂಬಾರಪೇಟೆ ಮುಖ್ಯರಸ್ತೆ, ಅಪ್ಪುರಾಯಪ್ಪ ಲೇನ್, ಎಂಬಿಟಿ ರಸ್ತೆ, ಪಿಳ್ಳಪ್ಪ ಲೇನ್, ಸಿಆರ್ ಸ್ವಾಮಿ ಬೀದಿ, ಮೇಧರಪೇಟೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ, ಆರ್.ಟಿ.ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಒಟಿ ಪೆಟ್, ಒಟಿಸಿ ರಸ್ತೆ, ಗುಂಡೋಪಂಥ್ ಬೀದಿ, ಮಾಮೂಲ್‌ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Pav Bhaji: ಪಾವ್ ಭಾಜಿ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ‌ ಅಸಲಿ ಕತೆ!

False Case: ಪೊಲೀಸ್ ಅಧಿಕಾರಿ ಮನೆಯಲ್ಲೇ ಕಳ್ಳತನ ಆಗಿದೆ ಎಂದು ದೂರು ದಾಖಲಾಗಿದ್ದರಿಂದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಸಲಿಗೆ ಕಳ್ಳತನ ಆಗಿದ್ಯಾ ಅಥವಾ ಪೊಲೀಸರೇ ಸೃಷ್ಟಿಸಿರೊ ಕಥೆನಾ ಅನ್ನೋ ಶಂಕೆ ಕೂಡಾ ಇತ್ತು. ಆದರೆ, ತನಿಖೆ ಆದ ನಂತರ ಸತ್ಯಾಂಶ ಹೊರಬಿದ್ದಿದೆ. ಸುಳ್ಳು ದೂರು ನೀಡಿದ್ದರಿಂದ ಪಿಎಸ್ಐ ಮೇಲೆ ಶಿಸ್ತು ಕ್ರಮ ಜರುಗಿಸಲು ನಗರ ಪೋಲಿಸ್ ಆಯುಕ್ತರು ಮುಂದಾಗಿದ್ದಾರೆ.

VISTARANEWS.COM


on

False Case
Koo

ಬೆಂಗಳೂರು: ಅಶೋಕನಗರ ಠಾಣೆ ಪಿಎಸ್‌ಐ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಸುಮಾರು 12 ಲಕ್ಷ ರೂ. ಕಳ್ಳತನವಾಗಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ತನಿಖೆ ವೇಳೆ ಮನೆಯಲ್ಲಿ ಯಾರೂ ಕೂಡ ಕಳ್ಳತನ ಮಾಡಿಲ್ಲ. ಇದೊಂದು ಸುಳ್ಳು ಪ್ರಕರಣ (False Case) ಎಂಬುವುದು ಗೊತ್ತಾಗಿದೆ.

ಪೊಲೀಸ್ ಅಧಿಕಾರಿ ಮನೆಯಲ್ಲೇ ಕಳ್ಳತನ ಆಗಿದೆ ಎಂದು ದೂರು ದಾಖಲಾಗಿದ್ದರಿಂದ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಸಲಿಗೆ ಕಳ್ಳತನ ಆಗಿದ್ಯಾ ಅಥವಾ ಪೊಲೀಸರೇ ಸೃಷ್ಟಿಸಿರೊ ಕಥೆನಾ ಅನ್ನೋ ಶಂಕೆ ಕೂಡಾ ಇತ್ತು. ಆದರೆ, ತನಿಖೆ ಆದ ನಂತರ ಸತ್ಯಾಂಶ ಹೊರಬಿದ್ದಿದೆ. ಇದರಿಂದ ಪೊಲೀಸರು ಹೀಗೂ ಮಾಡ್ತಾರಾ ಎಂದು ಅಚ್ಚರಿ ಮೂಡಿದೆ.

ಕಳೆದ 25 ದಿನಗಳ ಹಿಂದೆ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್ಐ ಪುಟ್ಟಸ್ವಾಮಿಯ ಕೋರಮಂಗಲದ ಮನೆಯಲ್ಲಿ ಕಳ್ಳತನ ಆಗಿದೆ ಅನ್ನೋ ದೂರು ದಾಖಲಾಗಿತ್ತು. ಮನೆಗೆ ನುಗ್ಗಿದ್ದ ಕಳ್ಳರು ಪಿಎಸ್ಐ ಪತ್ನಿ ಕೈ ಕಾಲು ಕಟ್ಟಿ ಹಾಕಿ 12 ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಪಿಎಸ್ಐ ಮನೆಯಲ್ಲಿ ಕಳ್ಳತನ ಆಗಿದೆ ಅಂದ್ರೆ ನಂಬೋದಕ್ಕೆ ಸ್ವಲ್ಪ ಅನುಮಾನವೇ ಆಗಿತ್ತು. ಸ್ವತಃ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಪೊಲೀಸ್ ಮನೆಯಲ್ಲೇ ಕಳ್ಳತನವಾಯ್ತಾ ಎಂದು ಹುಟ್ಟಿಕೊಂಡಿದ್ದ ಪ್ರಶ್ನೆ ಜೊತೆಗೆ ಹಲವು ಅನುಮಾನಗಳು ಸುರುಳಿ ಸುತ್ತಿದ್ದವು. ಇದೀಗ ಕೇಸ್ ಜಾಲಾಡಿರುವ ಪೊಲೀಸರಿಂದ ಸತ್ಯ ಬಯಲಾಗಿದೆ.

ಈ ಕೇಸ್ ಬೆಳಕಿಗೆ ಬಂದಾಗ ಪ್ರಕರಣದ ಎಫ್ಐಆರ್ ಮಾಹಿತಿಯನ್ನು ಪೊಲೀಸ್ ಇಲಾಖೆ ವೆಬ್ ಸೈಟ್‌ನಿಂದಲೂ ಹೈಡ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಾದ ನಂತರ ತನಿಖೆ ವೇಳೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ಗೊತ್ತಾಗಿದ್ದು ದೂರಿನಲ್ಲಿ ಹೇಳಲಾಗಿದ್ದ ಸಮಯದಲ್ಲಿ‌ ಮನೆಯ ಅಕ್ಕ ಪಕ್ಕ ಯಾವುದೇ ಕಳ್ಳರ ಓಡಾಟದ ಚಹರೆ ಕಂಡುಬಂದಿರಲಿಲ್ಲ. ಹಾಗಾಗಿ ಇಲ್ಲಿ ಕಳ್ಳತನ ಆಗಿದ್ಯಾ ಅಥವಾ ಸುಳ್ಳು ದೂರು ದಾಖಲಾಗಿದ್ಯಾ ಅನ್ನೋ ಪ್ರಶ್ನೆ ಕಾಡಲು ಶುರುವಾಗಿತ್ತು. ಹಾಗಾಗಿ ಪೊಲೀಸರು ಪಿಎಸ್‌ಐ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ವಿಚಾರಣೆ ನಡೆಸಿದ್ದು, ಇದೀಗ ಆ ಪ್ರಶ್ನೆಗೆ ಉತ್ತರ ದೊರೆತಿದ್ದು ಅಸಲಿಗೆ‌ ಅಲ್ಲಿ ಕಳ್ಳತನವೇ ನಡೆದಿರಲಿಲ್ಲ ಎಂಬ ಸತ್ಯ ಹೊರಬಿದ್ದಿದೆ.

ಪಿಎಸ್‌ಐ ಪತ್ನಿ ತನ್ನ ತವರು ಮನೆಯವರಿಗೆ ಆರ್ಥಿಕ ಸಹಾಯ ಮಾಡಲು ಮನೆಯಲ್ಲಿದ್ದ 10 ಲಕ್ಷ ಹಣ ಚಿನ್ನ ಕೊಟ್ಟಿದ್ದರಂತೆ. ಆದರೆ ಅದ್ಯಾವ ಕಾರಣಕ್ಕೋ ಏನೋ‌ ತನ್ನ ಮನೆಯಲ್ಲಿ ದರೋಡೆ ಆಗಿದೆ ಎಂದು ಪಿಎಸ್ಐ ಸುಳ್ಳು ದೂರು ದಾಖಲಿಸಿದ್ದರು.

ಇದನ್ನೂ ಓದಿ | Digital Arrest: ಡಿಜಿಟಲ್‌ ಅರೆಸ್ಟ್‌ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್‌ ಕಳ್ಳರ ಬಂಧನ

ನಿಜವಾದ ಸಂಗತಿ ಏನೆಂದರೆ ಮನೆಯಲ್ಲಿದ್ದ ಹಣವನ್ನು ಸಂಬಂಧಿಕರಿಗೆ ನೀಡಿ, ಕುಟುಂಬಸ್ಥರೇ ಕಳ್ಳತನದ ನಾಟಕವಾಡಿದ್ದಾರೆ. ಸುಳ್ಳು ದೂರು ನೀಡಿದ್ದರಿಂದ ಪಿಎಸ್ಐ ಮೇಲೆ ಶಿಸ್ತು ಕ್ರಮ ಜರುಗಿಸಲು ನಗರ ಪೋಲಿಸ್ ಆಯುಕ್ತರು ಮುಂದಾಗಿದ್ದಾರೆ. ಏನೇ ಆಗಲಿ ಪೋಲಿಸ್ ಮನೆಯಲ್ಲೇ ಕಳ್ಳತನ ಆಗಿದೆ ಅನ್ನೊ ವಿಷಯ ಕೇಳಿ ದಂಗಾಗಿದ್ದ ಜನಕ್ಕೆ ಅದಕ್ಕಿಂತ ಆತಂಕಕಾರಿ ವಿಷಯವೊಂದು ಬಯಲಾಗಿದೆ .

Continue Reading

ಕರ್ನಾಟಕ

Digital Arrest: ಡಿಜಿಟಲ್‌ ಅರೆಸ್ಟ್‌ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್‌ ಕಳ್ಳರ ಬಂಧನ

Digital Arrest: ದುಬೈ ಮೂಲದ ವ್ಯಕ್ತಿ ಸೇರಿ ಐವರು ಸೈಬರ್ ವಂಚಕರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು, ಕೊಡಗು ಮೂಲದ ವ್ಯಕ್ತಿಗೆ ಬೆದರಿಕೆ ಹಾಕಿ 2.21 ಕೋಟಿ ರೂ.ಗಳನ್ನು ಪಡೆದಿದ್ದರು. ಪ್ರಕರಣವನ್ನು ಸಿಐಡಿ ಭೇದಿಸಿದೆ.

VISTARANEWS.COM


on

Digital Arrest
Koo

ಬೆಂಗಳೂರು: ಸಾರ್ವಜನಿಕರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡುತ್ತಿದ್ದ ದುಬೈ ಮೂಲದ ವ್ಯಕ್ತಿ ಸೇರಿ ಐವರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1.70 ಕೋಟಿ ರೂಪಾಯಿ, 7700 ಯುಎಸ್ ಡಾಲರ್ (6,46,441 ರೂ.) ಸೇರಿ 1.76 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ದುಬೈನ ಯುಸುಫ್ ಸೇಠ್, ಬೆಂಗಳೂರಿನ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತರು. ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ನಾವು ಪೊಲೀಸರು. ಇದನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದರು.

ಈ ರೀತಿ ಬೆದರಿಕೆ ಹಾಕಿ ಕೊಡುಗು ಮೂಲದ ವ್ಯಕ್ತಿಯಿಂದ 2.21 ಕೋಟಿ ರೂ.ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ಆರೋಪಿಗಳು ದುಬೈನಲ್ಲಿ ವಂಚನೆ ಮಾಡಲು ಭಾರತೀಯ ಬ್ಯಾಂಕ್ ಅಕೌಂಟ್‌ ಅನ್ನು ಬಳಸಿದ್ದರು. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಸದ್ಯ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಂಚನೆ ಹಣದಿಂದ ಬೆನ್ಜ್ ಕಾರು ಖರೀದಿಸಿದ್ದರು. ಅವರಿಂದ ಒಟ್ಟು 1.76 ಕೋಟಿ ರೂ.ಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು, ಸಿಐಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ | Crime News: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿದ ಪತಿ

ಆನ್‌ಲೈನ್‌ ಹೂಡಿಕೆ ಹೆಸರಲ್ಲಿ ವಂಚನೆ; 1.53 ಕೋಟಿ ರೂ. ಕಳೆದುಕೊಂಡ ಟೆಕ್ಕಿ ದಂಪತಿ

ಬೆಂಗಳೂರು: ಸೈಬರ್‌ ಕ್ರೈಂ (Cyber Crime) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ವಂಚಕನೊಬ್ಬ ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿ ಬಳಿಯಿಂದ ಬರೋಬ್ಬರಿ 1.53 ಕೋಟಿ ರೂಪಾಯಿ ಪೀಕಿಸಿದ್ದು, ಸದ್ಯ ಪೊಲೀಸರು 1.4 ಕೋಟಿ ರೂ. ಅನ್ನು 50ಕ್ಕೂ ಹೆಚ್ಚು ಖಾತೆಗಳಿಂದ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆಗೆ ಒಳಗಾದ ದಂಪತಿ ನೀಡಿ ದೂರು ಆಧರಿಸಿ ಪೂರ್ವ ವಲಯದ ಸೈಬರ್ ಕ್ರೈಂ ‌ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ಬ್ಯಾಂಕ್‌ ಅಧಿಕಾರಿಗಳ ಜತೆ ಸೇರಿ ವಂಚಕ ಬಲೆ ಬೀಸಿದ್ದ. ಹೆಚ್ಚಿನ ಲಾಭದ ಆಸೆ ತೋರಿಸಿ ಈ ಕೃತ್ಯ ಎಸಗಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ಬ್ರಿಟನ್‌ನಲ್ಲಿ ಕುಳಿತು ವಂಚಕ ಈ ವಂಚನೆ ಜಾಲವನ್ನು ನಡೆಸುತ್ತಿದ್ದ. ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದ. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್‌ ಒಂದನ್ನು ತೆರೆದು ದಂಪತಿಗೆ ಇದರ ಆಕ್ಸೆಸ್‌ ಕೂಡ ನೀಡಿದ್ದ.

ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದ್ದಾರೆ. ಆದರೆ ಹಣ ತೆಗೆಯಲು ಆಗುತ್ತಿರಲಿಲ್ಲ. ಇದರಿಂದ ಅವರಿಗೆ ಅನುಮಾನ ಮೂಡತೊಡಗಿತ್ತು. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್‌ ಕೂಡ ಹೋಗಿತ್ತು. ಕೊನೆಗೆ ದಂಪತಿಯನ್ನು ಈ ವೆಬ್‌ಸೈಟ್‌ ಬ್ಲಾಕ್ ಮಾಡಿತ್ತು.

ಇದರೊಂದಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ದೃಢವಾಗಿತ್ತು. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್‌ ಅಧಿಕಾರಿಗಳ ಜತೆ ಸೇರಿ ನಡೆಸಿದ್ದ ಈ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್‌ ಮಾಡಿದ್ದಾರೆ.

ಇದನ್ನೂ ಓದಿ | Kolkata doctor rape case : ದುಡ್ಡು ಪಡೆದರೆ ಮೃತಪಟ್ಟ ಮಗಳಿಗೆ ಅವಮಾನ ಮಾಡಿದಂತೆ; ಪರಿಹಾರದ ಮೊತ್ತ ನಿರಾಕರಿಸಿದ ಕೋಲ್ಕೊತಾ ಅತ್ಯಾಚಾರ ಸಂತ್ರಸ್ತೆಯ ಅಪ್ಪ

ಲಂಡನ್​​ನಿಂದ ಕೃತ್ಯ

ʼʼಆರೋಪಿ ಲಂಡನ್​​ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಇದಕ್ಕಾಗಿ ಉತ್ತರ ಭಾರತದ ಹಲವಾರು ಅಕೌಂಟ್​ಗಳನ್ನು ಬಳಕೆ ಮಾಡಿದ್ದಾನೆ. ಷೇರು ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್​ಸೈಟ್ ರಚನೆ ಮಾಡಿದ್ದಾನೆ. ಸದ್ಯ ಆರೋಪಿ ಯಾರು ಎಂಬುದರ ಸ್ಪಷ್ಟತೆ ಇಲ್ಲʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಳ್ಳಲಾದ ಹಣವನ್ನು ಪೊಲೀಸರು ವಂಚನೆಗೆ ಒಳಗಾದ ದಂಪತಿಗೆ ಮರಳಿಸುತ್ತಿದ್ದಾರೆ.

Continue Reading

ಕೊಪ್ಪಳ

Koppala News: ಅವ್ಯವಹಾರ ನಡೆಸಿ ಕಿಮ್ಸ್ ಹೆಸರಿಗೆ ಮಸಿ ಬಳಿದರೆ ಮುಲಾಜಿಲ್ಲದೆ ಕ್ರಮ; ಶರಣಪ್ರಕಾಶ ಪಾಟೀಲ

Koppala News: ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಬಗ್ಗೆ ಸಾಕಷ್ಟು ಭರವಸೆ ಇದೆ. ಇದನ್ನು ಅರ್ಥೈಸಿಕೊಳ್ಳಬೇಕು. ಅವ್ಯವಹಾರ ನಡೆಸಿ ಯಾರಾದರು ಸಂಸ್ಥೆಯ ಹೆಸರಿಗೆ ಮಸಿ ಬಳಿದರೆ ಯಾರೇ ಇರಲಿ ಅಂತವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ‌ ಸಚಿವ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Koppala News
Koo

ಕೊಪ್ಪಳ: ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ನೇಮಕಾತಿ ಹಾಗೂ ಸಾಮಗ್ರಿ ಖರೀದಿ ಸೇರಿದಂತೆ ಯಾವುದೇ ವಿಷಯದಲ್ಲಿ ಅವ್ಯವಹಾರಕ್ಕೆ ಅವಕಾಶವಿಲ್ಲದ ಹಾಗೆ ಆಡಳಿತ ನಡೆಸುವ ಮೂಲಕ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಮಾದರಿಯಾಗಬೇಕು ಎಂದು ವೈದ್ಯಕೀಯ ಶಿಕ್ಷಣ‌ ಸಚಿವ ಡಾ. ಶರಣಪ್ರಕಾಶ ಪಾಟೀಲ (Koppala News) ಹೇಳಿದರು.

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಸಂಸ್ಥೆಯ‌ ನಿರ್ದೇಶಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಚಾಲ್ತಿಯಲ್ಲಿರುವ ಕಾಮಗಾರಿಗಳು ಗುಣಮಟ್ಟದ ರೀತಿಯಲ್ಲಿ ನಡೆಯಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಳಪೆ ಕಾಮಗಾರಿಯಾಗಿದ್ದರೆ ಗುತ್ತಿಗೆದಾರರಿಗೆ ನೊಟೀಸ್ ಜಾರಿ ಮಾಡಿ. ಸಂಸ್ಥೆಯ ಸುಪರ್ದಿಗೆ ಪಡೆಯುವ ಮೊದಲು ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Teachers Transfer: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

ಕೊಪ್ಪಳ ಜಿಲ್ಲೆಯು ಬಯಲು ಸೀಮೆಯ ನೆಲವಾಗಿದೆ. ಇಲ್ಲಿನ ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಇನ್ನು ಸುಧಾರಿಸಬೇಕಿದೆ. ಮುಖ್ಯವಾಗಿ ಇಲ್ಲಿನ ಜನತೆಗೆ ಉತ್ತಮವಾದ ಆರೋಗ್ಯ ಸೌಕರ್ಯ ದೊರೆಯಬೇಕಿದೆ. ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಬಗ್ಗೆ ಸಾಕಷ್ಟು ಭರವಸೆ ಇದೆ. ಇದನ್ನು ಅರ್ಥೈಸಿಕೊಳ್ಳಬೇಕು. ಅವ್ಯವಹಾರ ನಡೆಸಿ ಯಾರಾದರು ಸಂಸ್ಥೆಯ ಹೆಸರಿಗೆ ಮಸಿ ಬಳಿದರೆ ಯಾರೇ ಇರಲಿ ಅಂತವರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಸಂಸ್ಥೆಯಲ್ಲಿ ಈಗಾಗಲೇ ರಚನೆಯಾಗಿರುವ ಎಲ್ಲ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಕಾಲೇಜುಗಳಲ್ಲಿ ಪಿಡುಗಾಗಿ ಪರಿಣಮಿಸಿದ ರ‍್ಯಾಗಿಂಗ್‌ಗೆ ಅವಕಾಶ ನೀಡದೆ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಒತ್ತಡಮುಕ್ತ ವಾತಾವರಣ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಬದಲಾದ ಕಾಲಘಟ್ಟದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಾಕಷ್ಟು ಮಹತ್ವ ಬರುತ್ತಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಮನೋಭಾವನೆ ಅರಿತು ಅವರಿಗೆ ಗುಣಮಟ್ಟದ ರೀತಿಯ ಬೋಧನಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರಿಗೆ ಸಲಹೆ ಮಾಡಿದರು.

ಸಂಸ್ಥೆಯ ಕಟ್ಟಡ ನಿರ್ಮಾಣ, ಸದ್ಯದ ಪರಿಸ್ಥಿತಿ, ಈ ಹಿಂದೆ ಕರೆದ ಟೆಂಡರ್‌ಗಳ ಸ್ಥಿತಿಗತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಚಿವರು ಚರ್ಚಿಸಿದರು.

ಕೊಪ್ಪಳ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಒಟ್ಟು 81 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಈಗಾಗಲೇ 49 ಹುದ್ದೆಗಳು ಭರ್ತಿಯಾಗಿವೆ. 32 ಹುದ್ದೆಗಳು ಖಾಲಿ ಇವೆ ಎಂದು ಸಂಸ್ಥೆಯ ನಿರ್ದೇಶಕ ವಿಜಯನಾಥ ಇಟಗಿ ಮಾಹಿತಿ ನೀಡಿದರು.

ಇದನ್ನೂ ಓದಿ: Visa Free Countries: ಪ್ರವಾಸಿ ತಾಣಗಳಿಗೆ ಹೆಸರಾದ ಈ 10 ದೇಶಗಳಿಗೆ ಹೋಗಲು ವೀಸಾ ಬೇಕಿಲ್ಲ!

ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತಾ ರಾಠೋಡ, ಜಿಲ್ಲಾಧಿಕಾರಿ ನಲಿನ್ ಅತುಲ್ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Employee ID card: ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ

Employee ID card: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.

VISTARANEWS.COM


on

Employee ID card
Koo

ಬೆಂಗಳೂರು: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು (Employee ID card) ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್‌ ಬಿ.ಕೆ. ಸುತ್ತೋಲೆ ಹೊರಡಿಸಿದ್ದಾರೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆ, ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ | Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ 391 ಹುದ್ದೆ; ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ನೂತನ ಕೊರಳದಾರ ವಿನ್ಯಾಸವನ್ನು https://photos.app.goo.gl/YcJeNHnDNPecW8Q48 ಆನ್‌ಲೈನ್ ವಿಳಾಸದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

Teachers Transfer
Teachers Transfer

ಬೆಂಗಳೂರು: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಅಂತರ ವಿಭಾಗ ಮಟ್ಟದ ಕೋರಿಕೆ, ಪರಸ್ಪರ ವರ್ಗಾವಣೆಗೆ (Teachers Transfer) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿದ್ದು, ಆಗಸ್ಟ್ 17ರಿಂದ ಪ್ರಕ್ರಿಯೆ ಆರಂಭವಾಗಲಿದೆ. ಆ. 17, 19, 20 ಮತ್ತು 27 ರಂದು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವರ್ಗಾವಣೆಗೆ ಈಗಾಗಲೇ ಪ್ರಕಟಿಸಿರುವ ಆದ್ಯತಾ ಪಟ್ಟಿಗೆ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ತಾವು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ | Jobs Alert: ಪ್ರೌಢಶಾಲೆ, ಪಿಯು ಕಾಲೇಜುಗಳ ಬೋಧಕ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಆ.17ರಂದು ಎಲ್ಲಾ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಹಾಗೂ 1ರಿಂದ 300 ರವರೆಗೆ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಆಗಸ್ಟ್ 19 ರಂದು 301 ರಿಂದ 800 ರವರೆಗಿನ ಅದ್ಯತಾ ಕ್ರಮಾಂಕದ ಸಹ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸಲಾಗುವುದು, ಆ.20ರಂದು 801 ರಿಂದ ಕ್ರಮಾಂಕ ಮುಕ್ತಾಯವಾಗುವವರೆಗೆ ಕೌನ್ಸೆಲಿಂಗ್ ನಡೆಯಲಿದೆ. ಅದೇ ರೀತಿ ಆ.17ರಿಂದ ಪರಸ್ಪರ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.


Continue Reading
Advertisement
bangladesh unrest
ದೇಶ7 mins ago

Bangladesh Unrest: ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ ಕರೆ; ಹಿಂದೂಗಳ ರಕ್ಷಣೆ ಬಗ್ಗೆ ಭರವಸೆ

WFI chief Sanjay Singh
ಕ್ರೀಡೆ12 mins ago

WFI Chief Sanjay Singh: ಪ್ರತಿಭಟನೆಯಿಂದಲೇ ಕುಸ್ತಿಯಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ; ಸಂಜಯ್​ ಸಿಂಗ್​ ಆರೋಪ

KGF Chapter 2
ಸಿನಿಮಾ13 mins ago

KGF Chapter 2: ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆಜಿಎಫ್‌ 2 ಚಿತ್ರದ 6 ವಿಶೇಷ ಸಂಗತಿಗಳಿವು!

False Case
ಕರ್ನಾಟಕ20 mins ago

False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ‌ ಅಸಲಿ ಕತೆ!

Shimla For Honeymoon
Latest33 mins ago

Shimla For Honeymoon: ಹನಿಮೂನ್‍ ಜೋಡಿಗಳ ರೊಮ್ಯಾನ್ಸ್‌ ಹೆಚ್ಚಿಸುತ್ತವೆ ಶಿಮ್ಲಾದ ಈ ತಾಣಗಳು!

Kannada New Movie powder habba pre realease programme
ಸ್ಯಾಂಡಲ್ ವುಡ್55 mins ago

Kannada New Movie: ಅದ್ಧೂರಿಯಾಗಿ ನಡೆದ ʻಪೌಡರ್ ಹಬ್ಬʼ; ಪ್ರೀ ರಿಲೀಸ್ ಕಾರ್ಯಕ್ರಮ ಝಲಕ್‌ ಹೀಗಿದೆ!

Digital Arrest
ಕರ್ನಾಟಕ1 hour ago

Digital Arrest: ಡಿಜಿಟಲ್‌ ಅರೆಸ್ಟ್‌ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್‌ ಕಳ್ಳರ ಬಂಧನ

KGF 2
ಸಿನಿಮಾ1 hour ago

KGF 2: ರಾಷ್ಟ್ರ ಪ್ರಶಸ್ತಿ ವಿಜೇತ ಕೆಜಿಎಫ್‌ 2 ಹೀರೊ ಯಶ್ ಕುರಿತ 10 ಕುತೂಹಲಕರ ಸಂಗತಿಗಳಿವು

Mady Villiers
ಕ್ರಿಕೆಟ್1 hour ago

Mady Villiers: ಎಬಿಡಿ ವಿಲಿಯರ್ಸ್ ಶೈಲಿಯಲ್ಲೇ ಕ್ಯಾಚ್​ ಹಿಡಿದ ಇಂಗ್ಲೆಂಡ್​ ಆಟಗಾರ್ತಿ ಮ್ಯಾಡಿ ವಿಲಿಯರ್ಸ್; ವಿಡಿಯೊ ವೈರಲ್​

Koppala News
ಕೊಪ್ಪಳ1 hour ago

Koppala News: ಅವ್ಯವಹಾರ ನಡೆಸಿ ಕಿಮ್ಸ್ ಹೆಸರಿಗೆ ಮಸಿ ಬಳಿದರೆ ಮುಲಾಜಿಲ್ಲದೆ ಕ್ರಮ; ಶರಣಪ್ರಕಾಶ ಪಾಟೀಲ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌