Bengaluru Theft Case: ಉದ್ಯಮಿ ಮನೆಗೆ ಕನ್ನ ಹಾಕಿ ಒರಿಸ್ಸಾದಲ್ಲಿ ಭವ್ಯ ಬಂಗಲೆ ನಿರ್ಮಾಣ; ಖತರ್ನಾಕ್‌ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ? - Vistara News

ಕರ್ನಾಟಕ

Bengaluru Theft Case: ಉದ್ಯಮಿ ಮನೆಗೆ ಕನ್ನ ಹಾಕಿ ಒರಿಸ್ಸಾದಲ್ಲಿ ಭವ್ಯ ಬಂಗಲೆ ನಿರ್ಮಾಣ; ಖತರ್ನಾಕ್‌ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

Bengaluru Theft Case: ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದ ಒರಿಸ್ಸಾ ಗ್ಯಾಂಗ್‌ ಅನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ ಹಿಂದೆ ಬಿದ್ದಿದ್ದ ಪೊಲೀಸರು ಬರೋಬ್ಬರಿ 300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಫೂಟೇಜ್‌ ಅನ್ನು ಪರಿಶೀಲಿಸಿದ್ದರು. ಬಳಿಕ ಒರಿಸ್ಸಾದಲ್ಲಿ ಅಡಗಿದ್ದವರನ್ನು ಬಂಧಿಸಿದ್ದಾರೆ.

VISTARANEWS.COM


on

Orissa gang arrested in Koramangala police
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜೆ.ಪಿ.ನಗರದಲ್ಲಿ ನೇಪಾಳಿ ಗ್ಯಾಂಗ್‌ ಕೃತ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಉದ್ಯಮಿ ಮನೆಯಲ್ಲಿ ದರೋಡೆ ಮಾಡಿದ್ದ ಖತರ್ನಾಕ್ (Bengaluru Theft Case) ಒರಿಸ್ಸಾ ಗ್ಯಾಂಗ್‌ವೊಂದನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕ್, ಭಕ್ತ ಹರಿ‌ ಮಲ್ಲಿಕ್ ಹಾಗೂ ನಬೀನ್ ಸುನಾರಿ ಬಂಧಿತ ಆರೋಪಿಗಳಾಗಿದ್ದಾರೆ.

Orissa gang arrested in Koramangala police
ಬಂಧಿತ ಒರಿಸ್ಸಾ ಆರೋಪಿಗಳು

ಕೋರಮಂಗಲದ 3ನೇ ಬ್ಲಾಕ್‌ನ ಉದ್ಯಮಿಯ ಇಡೀ ಕುಟುಂಬದವರು ಹೊರರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದರು. ಮನೆಗೆ ಯಾವುದೇ ಸೆಕ್ಯುರಿಟಿ ಗಾರ್ಡ್ ಹಾಗೂ ಸಿಸಿ ಕ್ಯಾಮರಾ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಒರಿಸ್ಸಾ ಗ್ಯಾಂಗ್‌ನವರು ಇಡಿ ಮನೆಯನ್ನು ದೋಚಿ ಪರಾರಿ ಆಗಿದ್ದರು. ಉದ್ಯಮಿಯ ಕುಟುಂಬಸ್ಥರು 10 ದಿನಗಳ ಟ್ರಿಪ್ ಮುಗಿಸಿ ಬಂದಾಗ ಕಳ್ಳತನ ಆಗಿರುವುದು ಬಯಲಿಗೆ ಬಂದಿತ್ತು.

ಉದ್ಯಮಿ ಮನೆಯಲ್ಲಿದ್ದ ಡೈಮಂಡ್, 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ನಾಣ್ಯಗಳು, 3 ಲಕ್ಷ ರೂಪಾಯಿ ಮೌಲ್ಯದ ಒಮೇಗಾ ವಾಚ್ ಅನ್ನು ಕಳವು ಮಾಡಿದ್ದರು. ಜತೆಗೆ ಲ್ಯಾಪ್‌ಟಾಪ್‌, ಕ್ಯಾಮೆರಾ ಹಾಗೂ ಟ್ಯಾಬ್‌ ಅನ್ನು ಕೂಡ ದೋಚಿ ಪರಾರಿ ಆಗಿದ್ದರು.

Orissa gang arrested in Koramangala police

300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಪರಿಶೀಲನೆ

ಉದ್ಯಮಿ ಮನೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದೆ ಇದ್ದರಿಂದ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಹೀಗಾಗಿ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಒರಿಸ್ಸಾದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸುಮಾರು 300ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಫೆ.17 ರಂದು ಕೃತ್ಯ ನಡೆಸುವಾಗ ಯಾವುದೇ ಮೊಬೈಲ್ ಅನ್ನು ಸಹ ಬಳಕೆ ಮಾಡಿರಲಿಲ್ಲ.

ಇದನ್ನೂ ಓದಿ: Bengaluru Suicide Case: ಬೆಂಗಳೂರಿನಲ್ಲಿ 4 ಅಂತಸ್ತಿನ ಅಪಾರ್ಟ್‌ಮೆಂಟ್‌ ಮೇಲಿಂದ ಜಿಗಿದು ಗಗನಸಖಿ ಆತ್ಮಹತ್ಯೆ; ಪ್ರೀತಿ ಕಾರಣವೇ?

ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಜಾಡು ಹಿಡಿದ ಪೊಲೀಸರು ಬಂದು ನಿಂತಿದ್ದು ರೈಲ್ವೆ ನಿಲ್ದಾಣದ ಬಳಿ. ರೈಲ್ವೆ ನಿಲ್ದಾಣದಲ್ಲಿ ಖರೀದಿ ಮಾಡಿದ್ದ ಟಿಕೆಟ್‌ ಬಗ್ಗೆ ತನಿಖೆ ನಡೆಸಿದ ಮೇಲೆ ಒರಿಸ್ಸಾ ಗ್ಯಾಂಗ್ ಎಂಬುದು ತಿಳಿದು ಬಂದಿದೆ. ಇನ್ನು ಈ ಒರಿಸ್ಸಾ ಗ್ಯಾಂಗ್‌ನವರು ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ತಮ್ಮ ಊರಿನಲ್ಲಿ ಭವ್ಯ ಬಂಗಲೆಯನ್ನು ಕಟ್ಟಿಸುತ್ತಾ ಇದ್ದರು ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Special Casual leave: ರಾಜ್ಯ ಸರ್ಕಾರಿ ನೌಕರರಿಗೆ ಎರಡು ದಿನ ವಿಶೇಷ ಸಾಂದರ್ಭಿಕ ರಜೆ

Special Casual leave: ರಾಜ್ಯ ಮಟ್ಟದ 5ನೇ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮಾವೇಶ ಹಿನ್ನೆಲೆಯಲ್ಲಿ ಮಾರ್ಚ್‌ 5, 6ರಂದು ರಜೆ ಘೋಷಿಸಲಾಗಿದೆ.

VISTARANEWS.COM


on

Two days special casual leave for state government employees
Koo

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಾರ್ಚ್ 5 ಮತ್ತು 6ರಂದು ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು (Special Casual leave) ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಜಿ. ಸುಧಾ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯಕ್ಷಮತೆ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಸಹ ರಜೆ ನೀಡಲಾಗಿತ್ತು. ಇದೀಗ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಅಂಬೇಡ್ಕರ್ ಭವನದಲ್ಲಿ ಮಾರ್ಚ್‌ 5ರಂದು ರಾಜ್ಯ ಮಟ್ಟದ 5ನೇ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮಾವೇಶವನ್ನು ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಭಾಗವಹಿಸುವ ಬೆಂಗಳೂರು ನಗರ ಜಿಲ್ಲೆಯ ಸಂಘದ ಸದಸ್ಯರು ಅಧಿಕಾರಿ, ನೌಕರರಿಗೆ ಮಾರ್ಚ್‌ 5ರಂದು ಒಂದು ದಿನ ಮಾತ್ರ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಸಂಘದ ಸದಸ್ಯ ಅಧಿಕಾರಿ, ನೌಕರರಿಗೆ ಪ್ರಯಾಣ ದಿನಗಳೂ ಸೇರಿದಂತೆ ಮಾ.5 ಮತ್ತು 6ರಂದು ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.

ಇದನ್ನೂ ಓದಿ | Guarantee Survey : ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ; ಎಸಿ ಗಿರಾಕಿಗಳೆಲ್ಲಿ ಎಂದ HDK

ಈ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಸಮ್ಮೇಳನದ ಸಂಘಟಕರಿಂದ ಹಾಜರಾತಿ ಪ್ರಮಾಣ ಪತ್ರವನ್ನು ಪಡೆಯುವ ಷರತ್ತಿಗೊಳಪಟ್ಟು ರಜೆಯನ್ನು ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರ ಈ ರಜೆಯನ್ನು ಮಂಜೂರು ಮಾಡತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.

Continue Reading

ಚಾಮರಾಜನಗರ

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

veerappan Case : ಕುಖ್ಯಾತ ಕಾಡುಗಳ್ಳ ವೀರಪ್ಪನ್‌ ರಾಮಾಪುರಂ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ ಪೊಲೀಸರನ್ನು ಕೊಂದು ಹಾಕಿದ ವೇಳೆ ತಂಡದಲ್ಲಿದ್ದಳು ಎನ್ನಲಾದ ಅಂದಿನ ಬಾಲಕಿಯನ್ನು ಈಗ ದೋಷಮುಕ್ತಗೊಳಿಸಲಾಗಿದೆ. ಯಾರು ಈ ಸ್ಟೆಲ್ಲಾ ಮೇರಿ?

VISTARANEWS.COM


on

Veerappan Case Stella Mary
Koo

ಚಾಮರಾಜನಗರ: ಕುಖ್ಯಾತ ಕಾಡುಗಳ್ಳ ನರಹಂತಕ ವೀರಪ್ಪನ್‌ ಗ್ಯಾಂಗ್‌ (Veerappan Case) 1992ರ ಮೇ ತಿಂಗಳಲ್ಲಿ ತಮಿಳುನಾಡಿನ ರಾಮಾಪುರಂ ಪೊಲೀಸ್‌ ಠಾಣೆಯ ಮೇಲೆ ದಾಳಿ (Ramapuram Police station attack) ಮಾಡಿ ಐವರು ಸಿಬ್ಬಂದಿಯನ್ನು ಕೊಲೆ ಮಾಡಿ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಅಂದು ಅಪ್ರಾಪ್ತ ಬಾಲಕಿಯಾಗಿದ್ದ ಮಹಿಳೆಯೊಬ್ಬರಿಗೆ ಕ್ಲೀನ್‌ ಚಿಟ್‌ (Clean chit to Stella Mary) ಸಿಕ್ಕಿದೆ. ಹೀಗೆ ಪೊಲೀಸ್‌ ಠಾಣೆ ದಾಳಿ ಪ್ರಕರಣದಲ್ಲಿ ದೋಷಮುಕ್ತರಾದವರು ಕೊಳ್ಳೇಗಾಲ ತಾಲೂಕಿನ ಜಾಗೇರಿ ನಿವಾಸಿಯಾಗಿರುವ ಸ್ಟೆಲ್ಲಾ ಮೇರಿ (Stella Mary)!

ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ಟೆಲ್ಲಾ ಮೇರಿ ಅವರನ್ನು ಚಾಮರಾಜನಗರದ ಬಾಲ ನ್ಯಾಯ ಮಂಡಳಿ ಖುಲಾಸೆಗೊಳಿಸಿದೆ. ಪಾಲಾರ್ ಬಾಂಬ್ ಸ್ಫೋಟದ ಆರೋಪಿಯೂ ಆಗಿದ್ದ ಸ್ಟೆಲ್ಲಾ ಮೇರಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

Veerappan Case Ramapuram Police station

ಏನಿದು ಪ್ರಕರಣ, ಯಾರು ಈ ಸ್ಟೆಲ್ಲಾ ಮೇರಿ?

ವೀರಪ್ಪನ್‌ ತನ್ನ ಕ್ರೌರ್ಯದ ಉತ್ತುಂಗದಲ್ಲಿ ಹಲವಾರು ಪೊಲೀಸ್‌ ಠಾಣೆಗಳ ಮೇಲೆ ದಾಳಿ ಮಾಡಿದ್ದ. 1992ರ ಆಸುಪಾಸಿನಲ್ಲಿ ನಡೆದ ಕೃತ್ಯಗಳಲ್ಲಿ ಸ್ಟೆಲ್ಲಾ ಮೇರಿ ಕೂಡಾ ಭಾಗಿಯಾದ ಆರೋಪ ಎದುರಾಗಿತ್ತು. ಆದರೆ, ಸ್ಟೆಲ್ಲಾ ಮೇರಿಯ ಬಂಧನವಾಗಿದ್ದು 2020ರ ಫೆಬ್ರವರಿಯಲ್ಲಿ. ಅಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದರೂ ಅಂದು ಆಕೆಯ ಬಂಧನ ನಡೆದಿರಲಿಲ್ಲ. ಆಕೆಯನ್ನು ಪೊಲೀಸ್‌ ಇಲಾಖೆ ಮರೆತೇ ಬಿಟ್ಟಂತಿತ್ತು. ಹಳೆ ಕೇಸುಗಳ ಪರಿಶೀಲನೆ ಸಂದರ್ಭದಲ್ಲಿ ಅದು ಮರಳಿ ಮೇಲೆ ಬಂದಿತ್ತು.

2020ರಲ್ಲಿ ಬಂಧನಕ್ಕೆ ಒಳಗಾದ ಬಳಿಕ ಆಕೆಯ ಮೇಲೆ ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಸ್ಟೆಲ್ಲಾ ಮೇರಿ ಬಂಧನ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೇರಿ ಪರವಾಗಿ ಮಾನವ ಹಕ್ಕುಗಳ ಸಂಘಟನೆಗಳು ನಿಂತಿದ್ದವು.

1992ರಲ್ಲಿ ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದಾಗ ಸ್ಟೆಲ್ಲಾ ಮೇರಿ ಇನ್ನೂ 13 ವರ್ಷದ ಹುಡುಗಿಯಾಗಿದ್ದಳು. ಅಪ್ರಾಪ್ತ ಬಾಲಕಿಯಾಗಿದ್ದಳು. ಹೀಗಾಗಿ ಆಕೆಯ ವಿಚಾರಣೆಯನ್ನು ಬಾಲ ನ್ಯಾಯಮಂಡಳಿಯಲ್ಲಿ ನಡೆಸಬೇಕು ಎಂದು ಕೇಳಿಕೊಳ್ಳಲಾಗಿತ್ತು. ಇದರಂತೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವಹಿಸಿತ್ತು.

ಆರೋಪ ಮುಕ್ತಗೊಳಿಸಲು ಕಾರಣವಾದ ಅಂಶ ಯಾವುದು?

ಸ್ಟೆಲ್ಲಾ ಮೇರಿ ವೀರಪ್ಪನ್‌ ಗ್ಯಾಂಗ್‌ನಲ್ಲಿ ಇದ್ದಿದ್ದು ನಿಜ. ಆಕೆ ರಾಮಾಪುರ ಪೊಲೀಸ್‌ ಠಾಣೆ ದಾಳಿಯಲ್ಲಿ ಭಾಗಿಯಾಗಿರಲಿಲ್ಲ. ಸ್ಟೆಲ್ಲಾ ಮೇರಿಯನ್ನು ಆಗ ಅಪಹರಣ ಮಾಡಿ ಗ್ಯಾಂಗ್‌ ಗೆ ಸೇರಿಸಲಾಗಿತ್ತು. ಆಗ ಅವಳು ಸಣ್ಣ ಬಾಲಕಿ. ಸ್ಟೆಲ್ಲಾ ಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಅಪಹರಿಸಿ ಮದುವೆಯಾಗಿದ್ದ. (ಆತ ಬಳಿಕ ಪೊಲೀಸ್ ಎನ್​ಕೌಂಟರ್‌ನಲ್ಲಿ ಬಲಿಯಾಗಿದ್ದ). ಹೀಗಾಗಿ ಈ ಪ್ರಕರಣದಲ್ಲಿ ಸ್ಟೆಲ್ಲಾ ಮೇರಿಯ ಪಾತ್ರವಿಲ್ಲ, ಆಕೆ ಅಪರಾಧಿಯಲ್ಲ ಎಂದು ಸ್ಟೆಲ್ಲಾ ಪರವಾಗಿ ವಾದ ಮಾಡಲಾಗಿದೆ. ಇದನ್ನು ಒಪ್ಪಿದ ಕೋರ್ಟ್‌ ಆಕೆಯನ್ನು ದೋಷಮುಕ್ತಗೊಳಿಸಿದೆ.

ಈ ಕುರಿತು ಕಕ್ಷಿದಾರರ ಪರವಾಗಿ ವಾದಿಸಿದ ವಕೀಲ ಪಿ.ಪಿ.ಬಾಬುರಾಜ್‌ ಪ್ರತಿಕ್ರಿಯಿಸಿ, ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲನ್ಯಾಯಮಂಡಲಿಯು ಎಲ್ಲಾ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ ಎಂದು ತಿಳಿಸಿದರು.

ಸ್ಟೆಲ್ಲಾ ಮೇರಿ ಪರವಾಗಿ ವಾದಿಸಿದ ವಕೀಲ ಪಿ ಪಿ ಬಾಬುರಾಜ್‌ ಅವರು, “ವೀರಪ್ಪನ್ ಗ್ಯಾಂಗ್ ನಿಂದ ಅಪಹರಣಕ್ಕೊಳಗಾಗಿ ಬಳಿಕ ಪೊಲೀಸರ ಕಣ್ತಪ್ಪಿನಿಂದ ಪ್ರಕರಣಗಳಲ್ಲಿ ಈಕೆಯ ಹೆಸರು ಸೇರಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ಘಟನೆಗಳು ನಡೆದ ವೇಳೆ ಅಪ್ರಾಪ್ತೆಯಾಗಿದ್ದರಿಂದ ಬಾಲ ನ್ಯಾಯ ಮಂಡಳಿಯು ಎಲ್ಲ ಪ್ರಕರಣಗಳಿಂದ ಸ್ಟೆಲ್ಲಾ ಮೇರಿಯನ್ನು ಖುಲಾಸೆಗೊಳಿಸಿದೆ” ಎಂದು ಹೇಳಿದ್ದಾರೆ.

ಐವರು ಪೊಲೀಸರ ಹತ್ಯೆ ನಡೆದ ರಾಮಾಪುರಂ ಪೊಲೀಸ್‌ ಠಾಣೆ ಈಗ ಹೇಗಿದೆ?

Continue Reading

ಕರ್ನಾಟಕ

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

ಇತ್ತೀಚೆಗೆ ಕಾಂಗ್ರೆಸ್‌ ನಾಯಕರ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಅವರು, ಇದೀಗ ಫ್ಲೆಕ್ಸ್‌ ಹಾಕಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಸ್ವಾಗತ ಕೋರಿದ್ದಾರೆ.

VISTARANEWS.COM


on

BJP MLA Shivaram Hebbar welcomes CM, Deputy CM by putting up flexes
Koo

ಕಾರವಾರ: ರಾಜ್ಯಸಭಾ ಚುನಾವಣೆ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಅವರು, ಇದೀಗ ಕದಂಬೋತ್ಸವ ಹಿನ್ನೆಲೆಯಲ್ಲಿ (Banavasi Kadambotsava) ಫ್ಲೆಕ್ಸ್‌ ಹಾಕಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ರಿಗೆ ಭರ್ಜರಿ ಸ್ವಾಗತ ಕೋರಿರುವುದು ಕಂಡುಬಂದಿದೆ. ಬನವಾಸಿಯಾದ್ಯಂತ ಹೆಬ್ಬಾರ್‌ (Shivaram Hebbar) ಅವರ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅಡ್ಡಮತದಾನ ಮಾಡಿದ್ದರು. ಜತೆಗೆ ಶಾಸಕ ಶಿವರಾಂ ಹೆಬ್ಬಾರ್ ಅವರು ಅನಾರೋಗ್ಯವೆಂದು ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಆಘಾತ ನೀಡಿದ್ದರು. ಹೀಗಾಗಿ ಈ ಇಬ್ಬರು ಶಾಸಕರ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಸಿಎಂ ಮತ್ತು ಡಿಸಿಎಂ ಅವರಿಗೆ ಫ್ಲೆಕ್ಸ್‌ಗಳ ಮೂಲಕ ಶಾಸಕ ಶಿವರಾಮ್‌ ಹೆಬ್ಬಾರ್ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ | HD Devegowda: ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿಎಂ ಸಿದ್ದರಾಮಯ್ಯಗೆ ಎಚ್‌.ಡಿ. ದೇವೇಗೌಡ ಪ್ರಶ್ನೆ

ಇತ್ತೀಚೆಗೆ ಕಾಂಗ್ರೆಸ್‌ ನಾಯಕರ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೂಡ, ಶಾಸಕರು ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾರೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

ಶಿರಸಿ: ಶಾಸಕರಾದ ಎಸ್.ಟಿ. ಸೋಮಶೇಖರ್ (ST Somashekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು (Congress party ideology) ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್‌ ಹಾಗೂ ಗೈರಾದ ಶಿವರಾಂ ಹೆಬ್ಬಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು.

Continue Reading

ಉತ್ತರ ಕನ್ನಡ

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

CM Siddaramaiah: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

Shivaram Hebbar and ST Somashekar welcome if they agree with party ideology CM Siddaramaiah
Koo

ಶಿರಸಿ: ಶಾಸಕರಾದ ಎಸ್.ಟಿ. ಸೋಮಶೇಖರ್ (ST Somashekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು (Congress party ideology) ಒಪ್ಪಿ ಬಂದರೆ ಅವರನ್ನು ಸ್ವಾಗತಿಸಲಾಗುವುದು. ಹಿಂದೆ ಕಾಂಗ್ರೆಸ್ ನಲ್ಲಿದ್ದವರಿಗೆ ಬಿಜೆಪಿಯಿಂದ ಬೇಸರವಾಗಿದೆಯೆಂದು ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್‌ ಹಾಗೂ ಗೈರಾದ ಶಿವರಾಂ ಹೆಬ್ಬಾರ್‌ ಅವರ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ

ತಮಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದರ ಬಗ್ಗೆ ಪೊಲೀಸರು, ಸಿಸಿಬಿ ಹಾಗೂ ಎನ್‌ಐಎ ಅಧಿಕಾರಿಗಳು ಸೂಕ್ತ ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಫೋಟದ ಬಗ್ಗೆ ಕೆಲವು ಸುಳಿವುಗಳು ಸಿಕ್ಕಿದ್ದು, ಎನ್‌ಐಎ ಅಧಿಕಾರಿಗಳು ಐವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ ಎಂದು ತಿಳಿಸಿದರು.

ದೇಶದ್ರೋಹಿಗಳು ಯಾರು?

ಪಾಕ್ ಪರ ಘೋಷಣೆ ಪ್ರಕರಣದ ಎಫ್‌ಎಸ್ಎಲ್ ವರದಿಯನ್ನು ಕಾಂಗ್ರೆಸ್ ಸರ್ಕಾರ ತಿಳಿಸುತ್ತಿಲ್ಲ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆಗಳನ್ನು ಕೂಗಿದ್ದರು. ಆಗ ಆ ಸರ್ಕಾರ ಪ್ರಕರಣವನ್ನೇ ವಜಾಗೊಳಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಇದರಿಂದ ಯಾರು ದೇಶದ್ರೋಹಿಗಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಶೀಘ್ರ

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಘೋಷಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

ಜಿಲ್ಲೆಗೆ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆಯಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Continue Reading
Advertisement
Two days special casual leave for state government employees
ಕರ್ನಾಟಕ45 seconds ago

Special Casual leave: ರಾಜ್ಯ ಸರ್ಕಾರಿ ನೌಕರರಿಗೆ ಎರಡು ದಿನ ವಿಶೇಷ ಸಾಂದರ್ಭಿಕ ರಜೆ

Veerappan Case Stella Mary
ಚಾಮರಾಜನಗರ2 mins ago

Veerappan Case : ಪೊಲೀಸರ ಹತ್ಯೆ; ವೀರಪ್ಪನ್‌ ಗ್ಯಾಂಗ್‌ನಲ್ಲಿದ್ದ ಸ್ಟೆಲ್ಲಾ ಮೇರಿಗೆ ಖುಲಾಸೆ

BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ25 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ34 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್40 mins ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ43 mins ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು44 mins ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ1 hour ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ1 hour ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ1 hour ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌