Akka Cafe : ಇದು ಸರ್ಕಾರಿ ಕೆಫೆ; ಸ್ವಾದಿಷ್ಟ, ಒಲವಿನ ಊಟ ಕೊಡಲು ಬಂದಿದ್ದಾಳೆ ʻಅಕ್ಕʼ - Vistara News

ಬೆಂಗಳೂರು

Akka Cafe : ಇದು ಸರ್ಕಾರಿ ಕೆಫೆ; ಸ್ವಾದಿಷ್ಟ, ಒಲವಿನ ಊಟ ಕೊಡಲು ಬಂದಿದ್ದಾಳೆ ʻಅಕ್ಕʼ

ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ಮೊದಲ ಅಕ್ಕ ಕೆಫೆಯನ್ನು (Akka Cafe) ತೆರೆಯಲಾಗಿದೆ.

VISTARANEWS.COM


on

Akka Cafe launched to encourage women entrepreneurs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ ಮೊದಲ ಅಕ್ಕ ಕೆಫೆಯನ್ನು (akka Cafe) ಆರಂಭಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಅಕ್ಕ ಕೆಫೆಯು ಕಾರ್ಯಗತಕ್ಕೆ ಬಂದಿದೆ.

ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8 ರಂದು ಕೆಂಪೇಗೌಡ ರಸ್ತೆಯ ಗಾಂಧಿ ನಗರದಲ್ಲಿ (ಮೆಜೆಸ್ಟಿಕ್‌ ಸಮೀಪ) ಒಲವಿನ ಊಟ ಎಂಬ ಟ್ಯಾಗ್‌ನಡಿ ಅಕ್ಕ ಕೆಫೆಯನ್ನು ತೆರಯಲಾಗಿದೆ. ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಅಕ್ಕ ಕೆಫೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ.

Akka Cafe launched to encourage women entrepreneurs

ಅಕ್ಕ ಕೆಫೆ ತೆರೆಯಲು ಹೇಗೆ ಬಂತು ಐಡಿಯಾ

ಮಹಿಳಾ ಸ್ವಸಹಾಯ ಸಂಘವು ಕಳೆದ ಆರು ವರ್ಷಗಳಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳೆಯರಿಗೆ ಬೆಂಬಲ ನೀಡುತ್ತಾ ಬಂದಿದೆ. ಈ ಮೂಲಕ ಯಾವುದೇ ಸರ್ಕಾರಿ ಕಾರ್ಯಕ್ರಮವಾಗಲಿ ಮಹಿಳಾ ಸ್ವಸಹಾಯ ಸಂಘದಿಂದಲೇ ತಿಂಡಿ ಮತ್ತು ಪಾನೀಯಗಳನ್ನು ಒದಗಿಸುತ್ತಿದೆ. ಇದನ್ನೂ ಗಮನದಲ್ಲಿಟ್ಟುಕೊಂಡು ಸಂಸ್ಥೆಯು ಮಹಿಳೆಯರಿಂದಲೇ ನಡೆಸಲ್ಪಡುವ ಕೆಫೆಯನ್ನು ತೆರೆಯಲು ಯೋಜಿಸಿತು ಎಂದು ಅಕ್ಕ ಕೆಫೆಯ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Nita Ambani: ವಾಹ್‌ ತಾಜ್!‌ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನೀತಾ ಅಂಬಾನಿ ಧರಿಸಿದ ಆಭರಣ ಯಾರದು, ಬೆಲೆ ಎಷ್ಟು ಗೊತ್ತೆ?

ಯಾವ ಸಮಯಕ್ಕೆ ಅಕ್ಕ ಕೆಫೆ ಓಪನ್‌?

ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡದಿಂದ ಈ ಕೆಫೆಯನ್ನು ನಡೆಸಲಾಗುತ್ತದೆ. ಅಕ್ಕ ಕೆಫೆಯು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ವಾರವಿಡೀ ಕಾರ್ಯನಿರ್ವಹಿಸಲಿದೆ. ಅಕ್ಕ ಕೆಫೆ ಕಾರ್ಯಕ್ರಮದಡಿ ಆರೋಗ್ಯಕರ, ಸ್ವಾದಿಷ್ಟವಾದ ಆಹಾರ ಲಭ್ಯವಿರಲಿದೆ. ಶುಚಿ-ರುಚಿಯ ಜತೆಗೆ ಕೈಗೆಟುಕುವ ದರದಲ್ಲಿ ಸ್ಥಳೀಯ ಆಹಾರವನ್ನು ಪೂರೈಸಲಾಗುತ್ತದೆ.

ಪ್ರವಾಸಿ ತಾಣ, ಆಸ್ಪತ್ರೆಯಲ್ಲೂ ಅಕ್ಕ ಸೇವೆ

ರಾಜ್ಯಾದ್ಯಂತ ಅಕ್ಕ ಕೆಫೆಯನ್ನು ವಿಸ್ತರಿಸಲು ತೀರ್ಮಾನ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಕ್ಕ ಕೆಫೆಗಳು ಪ್ರವಾಸಿ ತಾಣ, ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆ ಆವರಣ ಸೇರಿ ಜನನಿಬಿಡ ಪ್ರದೇಶದಲ್ಲೂ ತೆರಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

Bengaluru News: ಬೆಂಗಳೂರಿನ ಹೊರವಲಯದ ಯಲಹಂಕದ ಅಟ್ಟೂರು ಬಸ್ ನಿಲ್ದಾಣದ ಬಳಿ ಹಸುಗೂಸನ್ನು ರಸ್ತೆ ಬದಿ ಅನಾಮಿಕರು ಎಸೆದು ಹೋಗಿದ್ದಾರೆ.

VISTARANEWS.COM


on

Bengaluru News
Koo

ಬೆಂಗಳೂರು: ಹಸುಗೂಸನ್ನು ರಸ್ತೆ ಬದಿಗೆ ಎಸೆದು ಹೋಗಿರುವ ಅಮಾನವೀಯ ಘಟನೆ ನಗರದ ಹೊರವಲಯದ (Bengaluru News) ಯಲಹಂಕದ ಅಟ್ಟೂರು ಬಸ್ ನಿಲ್ದಾಣದ ಬಳಿ ನಡೆದಿದ್ದು, ಮಗವನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಟ್ಟಿ ಕೆಲವೇ ಗಂಟೆಯಾಗಿರುವ ಶಿಶುವನ್ನು ಅನಾಮಿಕರು ಬಸ್ ನಿಲ್ದಾಣದ ಬಳಿ ಇರುವ ಗೂಡ್ಸ್ ಸ್ಟ್ಯಾಂಡ್ ಬಳಿ ಬಿಸಾಡಿ ಹೋಗಿದ್ದಾರೆ.

ಮಗು ಅಳು ಕೇಳಿದ ಸ್ಥಳೀಯರು ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಗುವಿಗೆ ಯಲಹಂಕದ ಈಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

Davanagere News

ದಾವಣಗೆರೆ: ಕೆರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮವಾಗಿರುವ ಘಟನೆ ದಾವಣಗೆರೆ (Davanagere News) ಸಮೀಪದ ಎಲೆಬೇತೂರಿನ ಕೆರೆಯಲ್ಲಿ ನಡೆದಿದೆ. ಅಧಿಕ ಬಿಸಿಲಿನ ತಾಪಕ್ಕೆ ಮೀನುಗಳು ಮೃತಪಟ್ಟಿರಬಹುದಾ ಅಥವಾ ಹಳೇ ವೈಷಮ್ಯದಿಂದ ಯಾರಾದರೂ ಕೆರೆಗೆ ವಿಷ ಬೆರೆಸಿದ್ದರಿಂದ ಮೀನುಗಳು ಸಾವಿಗೀಡಾಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ 1.50 ಲಕ್ಷ ಮೀನುಗಳನ್ನು ಸಾಕಲಾಗಿತ್ತು. ಅದರಲ್ಲಿ 40 ಸಾವಿರ ಮೀನು ಹಿಡಿದು ಮಾರಲಾಗಿತ್ತು. ಇನ್ನುಳಿದ ಸುಮಾರು ಲಕ್ಷಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬರೋಬ್ಬರಿ 5ರಿಂದ 10 ಕೆಜಿ ಇರುವ ಮೀನುಗಳು ಮೃತಪಟ್ಟು, ಕೆರೆಯಲ್ಲಿ ತೇಲುತ್ತಿವೆ. ಸತ್ತ ಮೀನುಗಳನ್ನು ನೋಡಿ ಮೀನು ಸಾಕಾಣಿಕೆದಾರರು ಕಂಗಾಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

Continue Reading

ಕರ್ನಾಟಕ

Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Terrorist Arrested: ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರನ ಸೆರೆಯಾಗಿದೆ. ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

VISTARANEWS.COM


on

Terrorist Arrested
Koo

ಬೆಂಗಳೂರು: ನಗರದ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನು ಎನ್‌ಐಎ ಬಂಧಿಸಿದೆ. 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರನ (Terrorist Arrested) ಸೆರೆಯಾಗಿದೆ.

ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಶಂಕಿತ ಉಗ್ರ. ಮೈಸೂರಿನ ರಾಜೀವ ನಗರದಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ.

ಇನ್ನು ಕೊಲಂಬೋದಲ್ಲಿರುವ ಪಾಕಿಸ್ತಾನಿ ಹೈ ಕಮೀಷನ್‌ ಕಚೇರಿನಲ್ಲಿ ಉದ್ಯೋಗಿಯಾಗಿರುವವನ ಜತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ, ಪಾಕಿಸ್ತಾನಿ ಪ್ರಜೆ ಅಮೀರ್ ಜುಬೇರ್ ಸಿದ್ಧಿಕಿಯ ಆಣತಿ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ. ಜತೆಗೆ ಪಾಕಿಸ್ತಾನಿ ಬೇಹುಗಾರರಿಗೆ ನೂರುದ್ದೀನ್ ಹಣ ಸಹಾಯ ಮಾಡುತ್ತಿದ್ದ. ಸದ್ಯ ಮೈಸೂರಿನಲ್ಲಿ ವಶಕ್ಕೆ ಪಡೆದ ಶಂಕಿತನಿಂದ ಒಂದು ಡ್ರೋನ್, ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ.

ಈ ಹಿಂದೆ ಹೈದರಾಬಾದ್ ಬೇಹುಗಾರಿಕಾ ಪ್ರಕರಣದಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ನೂರುದ್ದೀನ್ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 5 ಲಕ್ಷ ಬಹುಮಾನ ಘೋಷಿಸಿತ್ತು. 2023ರ ಆಗಸ್ಟ್‌ನಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಚೆನ್ನೈನ NIA ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದಾಗ ನೂರುದ್ದೀನ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.

ಇದನ್ನೂ ಓದಿ | Prajwal Revanna Case: ಸೆಕ್ಸ್‌ ಕೇಸಲ್ಲಿ ಎಕ್ಸ್‌ ಮಾನ್ಯತೆ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ!

ಶ್ರೀಲಂಕಾದ ಪ್ರಜೆ ಮುಹಮ್ಮದ್‌ ಸಕೀರ್‌ ಹುಸೇನ್ ಮತ್ತು ಕೊಲಂಬೋದಲ್ಲಿನ ಪಾಕಿಸ್ತಾನ ಹೈಕಮೀಷನ್‌ ಕಚೇರಿ ಉದ್ಯೋಗಿ, ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ಧಿಕಿ ಸೇರಿ ಚೆನ್ನೈನ ಯುಎಸ್ ಕಾನ್ಸುಲೇಟ್‌ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆ ಸಂದರ್ಭದಲ್ಲಿ ಆರೋಪಿ ನೂರುದ್ದೀನ್‌, ಪಾಕಿಸ್ತಾನಿ ಪ್ರಜೆಯ ಆದೇಶದ ಮೇರೆಗೆ ನಕಲಿ ನೋಟುಗಳನ್ನು ಪೂರೈಸುವ ಮೂಲಕ ದೇಶ ವಿರೋಧಿ ಬೇಹುಗಾರಿಕೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ನೂರುದ್ದೀನ್ ತಲೆಮರೆಸಿಕೊಂಡ ನಂತರ ಸ್ಥಗಿತಗೊಂಡಿದ್ದ ಆತನ ವಿರುದ್ಧದ ವಿಚಾರಣೆ ಈಗ ಪುನರಾರಂಭವಾಗಲಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.

Continue Reading

ಕ್ರೀಡೆ

IPL 2024: ಆರ್​ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್​ಸಿಎ ವಿರುದ್ಧ ಎಫ್ಐಆರ್

IPL 2024: ಆರೋಗ್ಯ ಹದಗೆಡಲು ಸ್ಟೇಡಿಯಂನ ಕ್ಯಾಂಟಿನ್​ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಚೈತನ್ಯ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್​ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ

VISTARANEWS.COM


on

IPL 2024
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಡೆಲ್ಲಿ ಮತ್ತು ಆರ್​ಸಿಬಿ(DC vs RCB) ನಡುವೆ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ನಡೆದಿದ್ದ ಪಂದ್ಯದ ವೇಳೆ ಪ್ರೇಕ್ಷಕರಿಗೆ ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(Karnataka State Cricket Association) ಆಡಳಿತ ಮಂಡಳಿ (KSCA) ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇ 12ರಂದು ಐಪಿಎಲ್ ವೀಕ್ಷಣೆ ಬಂದಿದ್ದ 23 ವರ್ಷದ ಚೈತನ್ಯ ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡಿನ ಕ್ಯಾಂಟಿನ್ ನಿಂದ ಊಟ ಸೇವಿಸಿದ್ದ ನಂತರ ಕೆಲವೇ ನಿಮಿಷಗಳಲ್ಲಿ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾನು ಕುಳಿತುಕೊಂಡಿದ್ದ ಜಾಗದಲ್ಲಿಯೇ ಚೈತನ್ಯ ಕುಸಿದುಬಿದ್ದಿದ್ದಾನೆ. ತಕ್ಷಣ ಸ್ಟೇಡಿಯಂ ಸಿಬ್ಬಂದಿ ನೆರವಿನಿಂದ ಆತನಿಗೆ ಆ್ಯಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು‌. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯರನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

ಈ ಸಂಬಂಧ ತಮ್ಮ ಆರೋಗ್ಯ ಹದಗೆಡಲು ಕ್ಯಾಂಟಿನ್​ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಚೈತನ್ಯ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್​ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಇಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಇಲ್ಲಿನ ಆಹಾರ ವಿತರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿದ್ದರು. ಇನ್ನಾದರೂ ಕೆಎಸ್​ಸಿಎ ಈ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಆಹಾರ ನೀಡುವ ಕೆಲಸವನ್ನು ಮಾಡಬೇಕಿದೆ. ಡೆಲ್ಲಿ ವಿರುದ್ಧದ ಈ ಪಂದ್ಯವನ್ನು ಆರ್​ಸಿಬಿ 47 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!


ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ.

Continue Reading

ರಾಜಕೀಯ

Prajwal Revanna Case: ಸೆಕ್ಸ್‌ ಕೇಸಲ್ಲಿ ಎಕ್ಸ್‌ ಮಾನ್ಯತೆ ಕಳೆದುಕೊಂಡ ಪ್ರಜ್ವಲ್‌ ರೇವಣ್ಣ!

Prajwal Revanna Case: ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ (ಟ್ವಿಟರ್‌) ಖಾತೆಗೆ ಬ್ಲ್ಯೂ ಟಿಕ್‌ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಈಗಾಗಲೇ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಲ್ಯೂಟಿಕ್‌ ಅನ್ನು ವಾಪಸ್‌ ಪಡೆಯುವ ಅಧಿಕಾರವನ್ನು ಎಕ್ಸ್‌ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಏನಾಗಿದೆ? ಯಾವ ಕಾರಣಕ್ಕೆ ಅವರ ಖಾತೆಯಿಂದ ಬ್ಲ್ಯೂ ಟಿಕ್‌ಗೆ ಗೇಟ್‌ಪಾಸ್‌ ಸಿಕ್ಕಿದೆ ಎಂಬುದು ಸದ್ಯದ ಕುತೂಹಲವಾಗಿದೆ.

VISTARANEWS.COM


on

Prajwal Revanna Case Prajwal Revanna loses X recognition in Obscene Video case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ವೇರಿಫೈಡ್‌ ಅಕೌಂಟ್‌ ಸ್ಟೇಟಸ್‌ನಿಂದ ಪ್ರಜ್ವಲ್‌ ಹೊರಬಿದ್ದಿದ್ದಾರೆ. ಅವರಿಗಿದ್ದ ಬ್ಲ್ಯೂ ಟಿಕ್‌ ಮಾನ್ಯತೆ ಈಗ ಅಮಾನ್ಯಗೊಂಡಿದೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ ಈ ಮೊದಲು ಟ್ವಿಟರ್‌ ಆಗಿತ್ತು. ಆಗಿನಿಂದಲೂ ಅಫೀಶಿಯಲ್‌ ಖಾತೆದಾರರಿಗೆ ಬ್ಲ್ಯೂ ಟಿಕ್‌ ಅನ್ನು ನೀಡಲಾಗುತ್ತಿತ್ತು. ಅದಕ್ಕೆ ಕೆಲವೊಂದಿಷ್ಟು ಪ್ರಕ್ರಿಯೆಗಳು ಇದ್ದವು. ಈ ಕಾರಣಕ್ಕೆ ಗಣ್ಯರು, ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವರು ಈ ಬ್ಲ್ಯೂಟಿಕ್‌ ಅನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಎಲಾನ್‌ ಮಸ್ಕ್‌ ಟ್ವಿಟರ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಹಲವು ಬದಲಾವಣೆಯನ್ನು ತಂದರು. ಬ್ಲ್ಯೂ ಟಿಕ್‌ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಹ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಲ್ಯೂಟಿಕ್‌ ಅನ್ನು ವಾಪಸ್‌ ಪಡೆಯುವ ಅಧಿಕಾರವನ್ನು ಎಕ್ಸ್‌ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಏನಾಗಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಬ್ಲ್ಯೂ ಟಿಕ್‌ ಬೇಕೆಂದರೆ ದುಡ್ಡೆಷ್ಟು?

ಗ್ರಾಹಕರು ದುಡ್ಡು ಕೊಟ್ಟು ಈ ಬ್ಲ್ಯೂ ಟಿಕ್ ಮಾರ್ಕ್ ಖರೀದಿಸಬಹುದು. ಮೆಟಾ ವೆರಿಫೈಡ್ ಸಬ್ಸ್‌ಕ್ರಿಪ್ಷನ್ ಆಧಾರಿತ ಸೇವೆಯ ಅನ್ವಯ ಬಳಕೆದಾರರು ತಿಂಗಳಿಗೆ 699 ರೂ. ಪಾವತಿಸಿದರೆ ಬ್ಲೂ ಟಿಕ್ ದೊರೆಯಲಿದೆ. ಇದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಎರಡಕ್ಕೂ ಅನ್ವಯವಾಗಲಿದೆ. ಆದರೆ, ಈಗ ಪ್ರಜ್ವಲ್‌ ಕೇಸ್‌ನಲ್ಲಿ ಯಾವ ಕಾರಣಕ್ಕೆ ಬ್ಲ್ಯೂಟಿಕ್‌ ಅನ್ನು ತೆಗೆಯಲಾಗಿದೆ ಎಂದು ಈವರೆಗೂ ಎಕ್ಸ್‌ ಸ್ಪಷ್ಟನೆ ನೀಡಿಲ್ಲ.

ವಿದೇಶಕ್ಕೆ ಹೋದ ಬಳಿಕ ಕೊನೆಯದಾಗಿ ಟ್ವೀಟ್‌ ಮಾಡಿದ್ದ ಪ್ರಜ್ವಲ್‌

ವಿದೇಶದಿಂದ ಬಾರದ ಪ್ರಜ್ವಲ್‌; ಜರ್ಮನಿಗೆ ಹೋಗುತ್ತಾ ಎಸ್‌ಐಟಿ ಟೀಂ? ಮುಂದಿನ ಆಯ್ಕೆ ಏನು?

ಪ್ರಜ್ವಲ್‌ ರೇವಣ್ಣ ದೇಶಬಿಟ್ಟು 19 ದಿನ ಕಳೆದಿದರೂ ಸುಳಿವಿಲ್ಲ. ಈಗಿನ ಪ್ರಕಾರ, ಸದ್ಯಕ್ಕೆ ಪ್ರಜ್ವಲ್ ವಾಪಸಾಗುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಎಸ್‌ಐಟಿ ಅಧಿಕಾರಿಗಳ ಮುಂದಿನ ನಡೆ ಏನು? ಬೇರೆ ದೇಶಕ್ಕೆ ಹೋಗಿ ಅವರನ್ನು ಬಂಧಿಸಿ ಕರೆತರಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲವಾದರೆ ಬೇರೆ ಯಾವ ಮಾರ್ಗವಿದೆ? ಅಥವಾ ಪ್ರಜ್ವಲ್‌ ಬರುವವರೆಗೂ ಕಾಯುತ್ತಾ ಕೂರಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ.

ಈಗಿನ ಮಾಹಿತಿ ಪ್ರಕಾರ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಸದ್ಯ ಎಸ್‌ಐಟಿ ತಂಡದವರು ಬೇರೆ ದೇಶಕ್ಕೆ ತೆರಳಿ ಪ್ರಜ್ವಲ್‌ ಅವರನ್ನು ಕರೆತರಲು ಸಾಧ್ಯವಿಲ್ಲ. ಇನ್ನು ಪ್ರಜ್ವಲ್‌ ಇಲ್ಲಿಂದ ಜರ್ಮನಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿ ಹೋಗಿದ್ದಾರಾದರೂ ಅವರು ಜರ್ಮನಿಯಲ್ಲಿಯೇ ಇದ್ದಾರಾ? ಅಥವಾ ಅಲ್ಲಿಂದ ಬೇರೆ ದೇಶಕ್ಕೇನಾದರೂ ಹೋಗಿದ್ದಾರಾ ಎಂಬುದೂ ಖಾತ್ರಿಯಾಗಿಲ್ಲ. ಆದರೆ, ಅವರು ಜರ್ಮನಿಯಿಂದ ಬೆಂಗಳೂರಿಗೆ ಬರುವಂತೆ ಫ್ಲೈಟ್‌ ಟಿಕೆಟ್‌ ಅನ್ನು ಮಾತ್ರ ಬುಕ್‌ ಮಾಡುತ್ತಾ ಕುಳಿತಿದ್ದಾರೆ. ಕೊನೇ ಕ್ಷಣದಲ್ಲಿ ಫ್ಲೈಟ್‌ ಹತ್ತದೆ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಅದು ಬಿಟ್ಟರೆ ಇತ್ತ ಸುಳಿಯುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.

ಹೀಗಾಗಿ ಮೊದಲು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲದೆ ಹೋದರೆ ಈಗಾಗಲೇ ಜಾರಿ ಮಾಡಲಾಗಿರುವ ಬ್ಲೂ ಕಾರ್ನರ್ ನೋಟಿಸ್‌ನಿಂದಾಗಿ ಯಾವ ದೇಶದಿಂದಾದರೂ ಮಾಹಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಹೀಗಾಗಿ ಇಂಟರ್ ಪೋಲ್ ಅಧಿಕಾರಿಗಳಿಂದ ಮಾಹಿತಿ ಬರುವವರೆಗೂ ಕಾಯಲೇಬೇಕು.

ಇದನ್ನೂ ಓದಿ: Prajwal Revanna Case: ಜರ್ಮನಿಯಿಂದ ವಿಮಾನ ಹತ್ತಲೇ ಇಲ್ಲ ಪ್ರಜ್ವಲ್‌; ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದ ಸಂಸದ!

ಪ್ರಜ್ವಲ್‌ ಇರುವ ದೇಶ ಗೊತ್ತಾದರೆ ಎಸ್‌ಐಟಿ ಅರೆಸ್ಟ್‌ ಮಾಡಬಹುದಾ?

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿಯೇ ಅಥವಾ ಇನ್ಯಾವುದೋ ದೇಶದಲ್ಲಿ ಅಡಗಿದ್ದಾರೆ ಎಂಬುದು ಗೊತ್ತಾದರೆ ಎಸ್‌ಐಟಿ ಹೋಗಿ ಅರೆಸ್ಟ್‌ ಮಾಡಬಹುದಾ ಎಂದು ಕೇಳಿದರೆ, ಅದು ಸಾಧ್ಯವಿಲ್ಲ ಎಂಬ ಉತ್ತರ ಸಿಗಲಿದೆ. ಹಾಗಾಗಿ ಅವರು ಯಾವ ದೇಶದಲ್ಲಿ ಅಡಗಿದ್ದಾರೆಂಬ ಮಾಹಿತಿ ಸಿಕ್ಕರೆ ಇಂಟರ್ ಪೋಲ್ ಮುಖಾಂತರ ಹಸ್ತಾಂತರ ಮಾಡಿಕೊಳ್ಳಬಹುದು. ಅದು ಕೂಡ ಆ ದೇಶ ಹಾಗೂ ನಮ್ಮ ದೇಶದ ನಡುವೆ ಹಸ್ತಾಂತರ ಒಪ್ಪಂದ (Extradition Treaty) ಇರಬೇಕು. ಆಗ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿ ಹಸ್ತಾಂತರ ಮಾಡಿಕೊಳ್ಳಬಹುದು. ಅದೂ ಆಗದೇ ಹೋದರೆ, ಅವರು ಎಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನೆ ಕೂರಬಹುದೇ ಹೊರತು ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ಆಗ ಪ್ರಜ್ವಲ್ ತಾನಾಗಿಯೇ ಬರುವವರೆಗೂ ಕಾಯಲೇಬೇಕು.

Continue Reading
Advertisement
Mamata Banerjee
ಪ್ರಮುಖ ಸುದ್ದಿ5 hours ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ5 hours ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

CAA
ಸಂಪಾದಕೀಯ5 hours ago

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Amit Shah
ದೇಶ5 hours ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ5 hours ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ6 hours ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Isha Ambani
ದೇಶ6 hours ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ6 hours ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು6 hours ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ6 hours ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ21 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ24 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌