Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ! - Vistara News

ಬೆಂಗಳೂರು

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Rameshwaram Cafe Blast : ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಆಯುಕ್ತ ದಯಾನಂದ (Blast in Bengaluru) ದೌಡಾಯಿಸಿದ್ದಾರೆ.

VISTARANEWS.COM


on

rameshwaram cafe bengaluru incident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನ ಬೆಂಗಳೂರಿನ ವೈಟ್‌ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಿಗೂಢ ಸ್ಫೋಟವು ತಲ್ಲಣಗೊಳಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿಯೊಂದು ಪತ್ತೆಯಾಗಿದ್ದು, ಇದು ಪೂರ್ವನಿಯೋಜಿತಾ ಸ್ಫೋಟನಾ ಎಂಬ ಶಂಕೆ ಇದೆ.

ಸ್ಥಳಕ್ಕೆ ಬೆಂಗಳೂರು ನಗರ ಆಯುಕ್ತ ದಯಾನಂದ ದೌಡಾಯಿಸಿದ್ದು, ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎನ್‌ಐಎ, ಎನ್‌ಎಸ್‌ಜಿ ಅಧಿಕಾರಿಗಳು ಸ್ಥಳಕ್ಕಾಗಮಿಸುವ ಸಾಧ್ಯತೆ ಇದೆ. ಸ್ಫೋಟ ಸಂಬಂಧ ಅಗ್ನಿಶಾಮಕ ದಳ ಸಿಬ್ಬಂದಿಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಸಿಲಿಂಡರ್ ಬ್ಲಾಸ್ಟ್ ಆಗಿರುವ ಸಾಧ್ಯವಿಲ್ಲ ಎಂದು ಖಚಿತ ಪಡಿಸಿದ್ದಾರೆ. ಜಿಲೇಟಿನ್ ಕಡ್ಡಿಗಳಿಂದ ಸ್ಪೋಟವಾಗಿದ್ಯಾ? ಮೈಕ್ರೊ ಓವನ್‌ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದ್ಯಾ ಎಂಬುದನ್ನೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳಿಂದಲೇ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬಯಲಾಗಬೇಕಿದೆ. ಇತ್ತ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು. ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

Self Harming : ಬೆಂಗಳೂರಲ್ಲಿ ವಿವಾಹಿತ ಟೆಕ್ಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಕುಟುಂಬಸ್ಥರ ವರದಕ್ಷಿಣಿ ಕಿರುಕುಳವೇ (Dowry case) ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

VISTARANEWS.COM


on

By

Self Harming in bengaluru
Koo

ಬೆಂಗಳೂರು: ವರದಕ್ಷಿಣಿ ಕಿರುಕುಳಕ್ಕೆ ಬೇಸತ್ತು (Dowry case) ಟೆಕ್ಕಿಯೊಬ್ಬರು ಬೆಂಗಳೂರಲ್ಲಿ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾರೆ. ಪೂಜಾ (22) ಮೃತ ದುರ್ದೈವಿ.

ಮನೆಯಲ್ಲಿ ಯಾರು ಇಲ್ಲದ ವೇಳೆ ಪೂಜಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಗಂಗಮ್ಮನ ಗುಡಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

ಪೂಜಾ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತೆಗ್ಗಿ ಬಸಾಪುರ ಮೂಲದವರು. 2022ರಲ್ಲಿ ಸುನೀಲ್‌ ಎಂಬುವವರ ಜತೆಗೆ ಪೂಜಾಳ ವಿವಾಹವಾಗಿತ್ತು. ಆದರೆ ಪತಿ ಸುನೀಲ್ ಹಾಗೂ ಮೈದುನಾ ಅನಿಲ್ ವರದಕ್ಷಿಣಿ ಕಿರುಕುಳ ಆರೋಪ ಕೇಳಿ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೀಡಾದ ಟೆಕ್ಕಿ ಪೂಜಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Self Harming

ಇದನ್ನೂ ಓದಿ: Actor Darshan: ದರ್ಶನ್‌ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!  

ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಬೋಟ್! ಕೆಲಸದ ಹೊರೆ ಕಾರಣ?

ದಕ್ಷಿಣ ಕೊರಿಯಾದ ನಾಗರಿಕ ಸೇವಕ ರೋಬೋಟ್ ಆತ್ಮಹತ್ಯೆ (Robot Suicide) ಮಾಡಿಕೊಂಡಿದೆ. ಮೆಟ್ಟಿಲಿನಿಂದ ಹಾರಿ ಅದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಬಳಿಕ ಅದು ನಿಷ್ಕ್ರಿಯವಾಗಿದೆ. ವಿಶ್ವದ ಮೊದಲ ರೋಬೋಟ್ ಆತ್ಮಹತ್ಯೆ (Suicide) ಬಳಿಕ ದಕ್ಷಿಣ ಕೊರಿಯಾ (South Korea) ನಗರದ ಜನತೆ ಶೋಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮಿ ಸಿಟಿ ಕೌನ್ಸಿಲ್ ನ ( Gumi City Council ) ಸೈಬೋರ್ಗ್ ಎಂಬ ರೋಬೋಟ್ ಜೂನ್ 26ರಂದು ಆರೂವರೆ ಅಡಿ ಮೆಟ್ಟಿಲಿನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಬಳಿಕ ಅದನ್ನು ಪರೀಕ್ಷಿಸಿದ ಪ್ರಧಾನ ಆಡಳಿತ ಅಧಿಕಾರಿ ರೋಬೋಟ್ ಸತ್ತಿದೆ ಎಂದು ಘೋಷಿಸಿದರು.

ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ರೋಬೋಟ್ ನ ತುಂಡುಗಳನ್ನು ಸಂಗ್ರಹಿಸಲಾಗಿದೆ. ಕಂಪನಿಯು ಈ ಬಗ್ಗೆ ವಿಶ್ಲೇಷಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ರೋಬೋಟ್ ದೈನಂದಿನ ದಾಖಲೆಗಳ ವಿತರಣೆ, ನಗರ ಪ್ರಚಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಮಾಹಿತಿಯನ್ನು ತಲುಪಿಸಲು ಸಹಾಯ ಮಾಡುತಿತ್ತು. ಇದು ಅಧಿಕೃತವಾಗಿ ಸಿಟಿ ಹಾಲ್‌ನ ಒಂದು ಭಾಗವಾಗಿತ್ತು. ನಮ್ಮಲ್ಲಿ ಒಬ್ಬರಾಗಿತ್ತು ಎಂದು ಗುಮಿ ಸಿಟಿ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಬೋಟ್ ಶ್ರದ್ಧೆಯಿಂದ ಸೇವೆ ಸಲ್ಲಿಸಿತ್ತು. ಈ ರೀತಿಯಲ್ಲಿ ಬಳಸಲಾದ ಮೊದಲ ರೋಬೋಟ್ ಇದಾಗಿದೆ ಮತ್ತು ಇದನ್ನು ಅಕ್ಟೋಬರ್ 2023 ರಲ್ಲಿ ನೇಮಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ನೆಟ್ಟಿಗರು ಈಗ ರೋಬೋಟ್‌ಗೆ ನಿಭಾಯಿಸಲು ಕೆಲಸದ ಹೊರೆ ಹೆಚ್ಚು ಎಂದು ಹೇಳಿದ್ದಾರೆ.


ಕೆಲಸದ ಹೊರೆ ಜಾಸ್ತಿಯಾಗಿ ತುಂಬಾ ಹೊತ್ತು ತಿರುಗಿ ಮೆಟ್ಟಿಲಿನಿಂದ ಹಾರಿತು ಎಂದು ಒಬ್ಬರು ಹೇಳಿದ್ದರೆ ಇನ್ನೊಬ್ಬರು ಸ್ಕ್ರಾಪ್ ಮೆಟಲ್ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿರಾಮಗಳಿಲ್ಲ, ರಜೆಗಳಿಲ್ಲ, ಪ್ರಯೋಜನಗಳಿಲ್ಲ. ರೋಬೋಟ್‌ಗಳಿಗೆ ಒಕ್ಕೂಟದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರೋಬೋಟಿಕ್ ಸಹಾಯಕವನ್ನು ಕ್ಯಾಲಿಫೋರ್ನಿಯಾ ಮೂಲದ ಬೇರ್ ರೋಬೋಟಿಕ್ಸ್ ಎಂಬ ಸ್ಟಾರ್ಟಪ್ ತಯಾರಿಸಿದೆ. ಅದು ಉದ್ಯೋಗಿ ಕಾರ್ಡ್ ಅನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕೆಲಸ ಮಾಡುತ್ತಿತ್ತು. ಇತರ ರೋಬೋಟ್‌ಗಳಿಗಿಂತ ಭಿನ್ನವಾಗಿ ಸಾಮಾನ್ಯವಾಗಿ ಒಂದು ಮಹಡಿಯನ್ನು ಮಾತ್ರ ಬಳಸುತ್ತಿತ್ತು. ಸದ್ಯಕ್ಕೆ ಹೊಸ ರೋಬೋಟ್ ಅನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ. ದಕ್ಷಿಣ ಕೊರಿಯಾವು ವಿವಿಧ ವೃತ್ತಿಗಳಲ್ಲಿ ರೋಬೋಟ್‌ಗಳನ್ನು ಬಳಸುವುದಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದೆ.

ಇದನ್ನೂ ಓದಿ: PM Modi Russia Visit: ಜುಲೈ 8ರಿಂದ ಮೋದಿ ರಷ್ಯಾ ಪ್ರವಾಸ; ಉಕ್ರೇನ್‌ ಆಕ್ರಮಣದ ಬಳಿಕ ಮೊದಲ ಭೇಟಿ

ಈ ಹಿಂದೆ ವಾಷಿಂಗ್ಟನ್ ಡಿಸಿಯ ನೀರಿನ ಕಾರಂಜಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಭದ್ರತಾ ರೋಬೋಟ್ ಸ್ಟೀವ್ ಎಂದು ಕರೆಯಲಾಗುತ್ತಿತ್ತು. ಆದರೆ ಅದು ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

Salary Hike: ಸದ್ಯ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ.

VISTARANEWS.COM


on

salary hike cm siddaramaiah
Koo

ಬೆಂಗಳೂರು: ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ (Cabinet meeting) ಸರಕಾರಿ ನೌಕರರ (Govt Employees) ವೇತನ ಹೆಚ್ಚಳದ (Salary Hike) ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಸಲವಾದರೂ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ (guarantee Schemes) ಹೆಚ್ಚಿನ ಹಣ ಹರಿದುಹೋಗುತ್ತಿರುವುದರಿಂದ ಹಾಗೂ ವಿವಿಧ ಮೂಲಗಳಿಂದ ನಿರೀಕ್ಷಣ ಪ್ರಮಾಣದ ಹಣಕಾಸು (Finance) ಬರುತ್ತಿಲ್ಲವಾದ್ದರಿಂದ ಸದ್ಯ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಜಿಎಸ್‌ಟಿ ಸೇರಿ, ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಹರಿದುಹೋಗುತ್ತಿದೆ. ಹೀಗಾಗಿ ವೇತನ ಪರಿಷ್ಕರಣೆ ಸದ್ಯದ ಮಟ್ಟಿಗೆ ಸಾಧ್ಯವಾಗದು ಎಂದು ಅಧಿಕಾರಿಗಳು ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ವೇತನ ಪರಿಷ್ಕರಣೆ, ಹೊಸ ಪಿಂಚಣಿ ಯೋಜನೆಯಲ್ಲಿ ಇರುವವರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆ ಸಹ ಈಡೇರಿಸಲು ಸಾಧ್ಯವಾಗದು. ಈ ಬೇಡಿಕೆ ಈಡೇರಿಸಿದರೆ ಪ್ರತಿ ತಿಂಗಳು ವಿವಿಧ ಬಾಬುಗಳಿಗೆ ಹಣವನ್ನು ಹೊಂದಿಸಲು ಕಷ್ಟ ಆಗಬಹುದು ಎಂದು ಅಧಿಕಾರಿಗಳ ತಂಡ ಸಂಪುಟ ಸದಸ್ಯರಿಗೆ ವಿವರಿಸಿದೆ.

ಹಣದ ಕೊರತೆ ಇದೆ ಎಂದ ಮಾತ್ರಕ್ಕೆ ವೇತನ ಪರಿಷ್ಕರಣೆ ಮಾಡದೇ ಇರಲು ಸಾಧ್ಯವಿಲ್ಲ. ತಕ್ಷಣಕ್ಕೆ ಆಗದೇ ಇದ್ದರೂ ಮುಂದೆ ಮಾಡಲೇಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶೇ 27.50ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಮಾರ್ಚ್ 16ರಂದು ಮುಖ್ಯಮಂತ್ರಿಗೆ ಸಲ್ಲಿಸಿತ್ತು. ಏಳನೇ ವೇತನ ಆಯೋಗವು ಶೇ. 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ದಿನದಿಂದಲೇ ಚುನಾವಣೆಯ ನೀತಿ ಸಂಹಿತೆ ಆರಂಭವಾದ ಕಾರಣ ಶಿಫಾರಸು ಜಾರಿ ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ನೌಕರರ ಆರೋಪ.

29ರಿಂದ ಬೀದಿಗಿಳಿಯಲಿರುವ ಸರ್ಕಾರಿ ನೌಕರರು

7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ. ಆಯೋಗ ವರದಿ ನೀಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಾ ಬಂದಿದೆ. ರಾಜ್ಯದ ಎಲ್ಲ ಇಲಾಖೆಗಳ ನೌಕರರು ಹೋರಾಟ ಆರಂಭಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡು, ಮುಷ್ಕರದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ವೇತನ ಆಯೋಗದ ಶಿಫಾರಸುಗಳ ಜಾರಿ ಜೊತೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು. ಹಳೇ ಪಿಂಚಣಿ ಯೋಜನೆ
ಮರು ಜಾರಿಗೊಳಿಸಬೇಕು. ನೌಕರರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಮುಷ್ಕರ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

Continue Reading

ಪ್ರಮುಖ ಸುದ್ದಿ

IAS Transfer: ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಯಾರ್ಯಾರು ಎಲ್ಲಿಗೆ?

IAS Transfer: ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

VISTARANEWS.COM


on

IAS Transfer
Koo

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ (Mysore Deputy Commissioner) ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಜಿಲ್ಲಾಧಿಕಾರಿಗಳು, ಐಎಎಸ್‌ (IAS officers) ಅಧಿಕಾರಿಗಳನ್ನು ವರ್ಗಾವಣೆ (IAS Transfer) ಮಾಡಲಾಗಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್‌ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್‌ ಕುಮಾರ್‌ ಎಸ್.‌ ನಿರ್ದೇಶಿಸಿದ್ದಾರೆ.

ವರ್ಗಾವಣೆ ಹೊಂದಿದ ಅಧಿಕಾರಿಗಳ ವಿವರ:

ಅಧಿಕಾರಿಯ ಹೆಸರುಎಲ್ಲಿಂದ ಎಲ್ಲಿಗೆ
ಡಾ. ರಾಜೇಂದ್ರ ಕೆ.ವಿ ಮೈಸೂರು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಡಾ. ರಾಮ್‌ ಪ್ರಸಾದ್‌ ಮನೋಹರ್‌ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ
ನಿತೇಶ್‌ ಪಾಟೀಲ್‌
ಬೆಳಗಾವಿ ಜಿಲ್ಲಾಧಿಕಾರಿ ಎಂಎಸ್‌ಎಂಇ ನಿರ್ದೇಶಕ
ಡಾ. ಅರುಂಧತಿ ಚಂದ್ರಶೇಖರ್‌ ಖಜಾನೆ ಕಮಿಷನರ್‌ ಪಂಚಾಯತ್‌ರಾಜ್‌ ಕಮಿಷನರ್‌
ಚಂದ್ರಶೇಖರ ನಾಯಕ ಎಲ್.‌ ರಾಯಚೂರು ಜಿಲ್ಲಾಧಿಕಾರಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ
ವಿಜಯಮಹಾಂತೇಶ್‌ ಬಿ.ದಾನಮ್ಮನವರ್‌ ಎಂಎಸ್‌ಎಂಇ ನಿರ್ದೇಶಕ ಹಾವೇರಿ ಜಿಲ್ಲಾಧಿಕಾರಿ
ಗೋವಿಂದ ರೆಡ್ಡಿ
ಬೀದರ್‌ ಜಿಲ್ಲಾಧಿಕಾರಿ ಗದಗ ಜಿಲ್ಲಾಧಿಕಾರಿ
ರಘುನಂದನ್‌ ಮೂರ್ತಿ
ಹಾವೇರಿ ಜಿಲ್ಲಾಧಿಕಾರಿ ಖಜಾನೆ ಆಯುಕ್ತ ಬೆಂಗಳೂರು
ಡಾ. ಗಂಗಾಧರಸ್ವಾಮಿ
ಕೃಷಿ ಮಾರ್ಕೆಟಿಂಗ್‌ ನಿರ್ದೇಶಕ ದಾವಣಗೆರೆ ಜಿಲ್ಲಾಧಿಕಾರಿ
ಲಕ್ಷ್ಮೀಕಾಂತ ರೆಡ್ಡಿ
ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕ ಮೈಸೂರು ಜಿಲ್ಲಾಧಿಕಾರಿ
ನಿತೀಶ್‌ ಕೆ.
ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ರಾಯಚೂರು ಜಿಲ್ಲಾಧಿಕಾರಿ
ಮೊಹಮ್ಮದ್‌ ರೋಶನ್‌
ಹೆಸ್ಕಾಂ ನಿರ್ವಹಣಾ ನಿರ್ದೇಶಕ ಬೆಳಗಾವಿ ಜಿಲ್ಲಾಧಿಕಾರಿ
ಶಿಲ್ಪಾ ಶರ್ಮಾ
ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ ಬೀದರ್‌ ಜಿಲ್ಲಾಧಿಕಾರಿ
ದಿಲೇಶ್‌ ಸಸಿ
ಎಡಿಸಿಎಸ್‌ ನಿರ್ದೇಶಕ ಇ- ಆಡಳಿತ ಕೇಂದ್ರ ಸಿಇಒ ಬೆಂಗಳೂರು
ಲೋಖಂಡೆ ಸ್ನೇಹಲ್‌ ಸುಧಾಕರ್‌ ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಎಂಡಿ
ಶ್ರೀರೂಪಾ
ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿ ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತೆ
ಜಿಟ್ಟೆ ಮಾಧವ ವಿಠಲ ರಾವ್
ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿ ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌
ಹೇಮಂತ್‌ ಎನ್.‌
ಬಳ್ಳಾರಿ ಹಿರಿಯ ಸಹಾಯಕ ಆಯುಕ್ತ ಶಿವಮೊಗ್ಗ ಜಿ.ಪಂ ಸಿಇಒ
ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ
ಹಿರಿಯ ಸಹಾಯಕ ಆಯುಕ್ತ ಹೊಸಪೇಟೆ ವಿಜಯನಗರ ಜಿ.ಪಂ ಸಿಇಒ
ಜ್ಯೋತಿ ಕೆ.
ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕ
ಶ್ರೀಧರ ಸಿ.ಎನ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕ

ಇದನ್ನೂ ಓದಿ: IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Continue Reading

ಮಳೆ

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

Karnataka Weather Forecast : ರಾಜ್ಯಾದ್ಯಂತ ಕಳೆದೊಂದು ವಾರದಿಂದ ಮಳೆಯು (Rain news) ಅಬ್ಬರಿಸುತ್ತಿದ್ದು, ಏಳು ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೆಂಗಳೂರಿನಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

VISTARANEWS.COM


on

By

karnataka Weather Forecast Rain
Koo

ಬೆಂಗಳೂರು: ಜು.5ರಂದು ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದ್ದು, ಮಲೆನಾಡು ಸುತ್ತಮುತ್ತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ನಿರೀಕ್ಷೆಯಿದೆ. ಇನ್ನೂ ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯೊಂದಿಗೆ ಮಧ್ಯಮ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಇತ್ತ ಉತ್ತರ ಒಳನಾಡಿನದಲ್ಲಿ ಸಾಕಷ್ಟು ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಆದರೆ ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಗುಡುಗು ಸಹಿತ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರಿಕೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಬೆಳಗಾವಿ, ಧಾರವಾಡ, ಕೊಡಗು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Brain-Eating Mmoeba
ಆರೋಗ್ಯ4 mins ago

Brain-Eating Amoeba: ಮೆದುಳು ತಿನ್ನುವ ಅಮೀಬಾಕ್ಕೆ ಮತ್ತೊಂದು ಬಲಿ; 2 ತಿಂಗಳ ಅಂತರದಲ್ಲಿ 3ನೇ ಪ್ರಕರಣ

Self Harming in bengaluru
ಬೆಂಗಳೂರು16 mins ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

salary hike cm siddaramaiah
ಪ್ರಮುಖ ಸುದ್ದಿ18 mins ago

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

Chaithra J Achar Kittale Roopanthara Raj B Shetty out
ಸ್ಯಾಂಡಲ್ ವುಡ್37 mins ago

Chaithra J Achar: ʻರೂಪಾಂತರʼ ಸಿನಿಮಾದ ಹಾಡು ರಿಲೀಸ್‌; ಇಳಕಲ್‌ ಸೀರೆಯಲ್ಲಿ ಮಿಂಚಿದ ಚೈತ್ರಾ ಆಚಾರ್!

UK Election
ವಿದೇಶ40 mins ago

UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

Team India
ಕ್ರೀಡೆ55 mins ago

Team India: ಟೀಮ್​ ಇಂಡಿಯಾ ಬಳಿ ಇರುವುದು ನಕಲಿ ವಿಶ್ವಕಪ್​ ಟ್ರೋಫಿ; ಅಸಲಿ ಟ್ರೋಫಿ ಎಲ್ಲಿದೆ?

Actor Darshan very simple person Yamuna Srinidhi
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!  

Job Alert
ಉದ್ಯೋಗ1 hour ago

Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

UK Election
ವಿದೇಶ1 hour ago

UK Election: ಬ್ರಿಟನ್‌ನಲ್ಲಿ ಲೇಬರ್‌ ಪಾರ್ಟಿಗೆ ಗದ್ದುಗೆ ಖಚಿತ- ಪ್ರಧಾನಿ ಪಟ್ಟಕೇರಲಿರುವ ಕೀರ್‌ ಸ್ಟಾರ್ಮರ್‌ ಹಿನ್ನೆಲೆ ಏನು?

IAS Transfer
ಪ್ರಮುಖ ಸುದ್ದಿ1 hour ago

IAS Transfer: ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಯಾರ್ಯಾರು ಎಲ್ಲಿಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast Rain
ಮಳೆ5 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ18 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ19 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ21 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ22 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ23 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ24 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ3 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ4 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಟ್ರೆಂಡಿಂಗ್‌