ಕ್ರೈಂ
Chaitra Kundapura : ಮೂರುವರೆ ದಿನಗಳ ಚೈತ್ರಾ ನಾಟಕ ಬಂದ್, ಆಸ್ಪತ್ರೆಯಿಂದ ಡಿಸ್ಚಾರ್ಜ್; ಇನ್ನು ಸಿಸಿಬಿ ಗ್ರಿಲ್ ಶುರು!
Chaitra Kundapura: ಮೂರು ದಿನಗಳ ಹಿಂದೆ ಬಾಯಿಯಲ್ಲಿ ನೊರೆಯೊಂದಿಗೆ ಅಸ್ವಸ್ಥರಾಗಿದ್ದ ಚೈತ್ರಾ ಕುಂದಾಪುರ ಈಗ ಡಿಸ್ಚಾರ್ಜ್ ಆಗಿದ್ದಾರೆ. ಮುಂದೆ ನಡೆಯಲಿದೆ ಮಹತ್ವದ ಸಿಸಿಬಿ ವಿಚಾರಣೆ.
ಬೆಂಗಳೂರು: ಕಳೆದ ಮೂರುವರೆ ದಿನಗಳಿಂದ ಅನಾರೋಗ್ಯದ ಹೆಸರಿನಲ್ಲಿ ಚೈತ್ರಾ ಕುಂದಾಪುರ (Chaitra Kundapura) ನಡೆಸಿದ ನಾಟಕ ಬಂದ್ ಆಗಿದೆ. ಆಕೆಯ ದೇಹ ಸ್ಥಿತಿ ನಾರ್ಮಲ್ (Physical Condition Normal) ಆಗಿದೆ. ಆಕೆಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ವೈದ್ಯರು ದೃಢೀಕರಿಸಿ ಸೋಮವಾರ ಮಧ್ಯಾಹ್ನ ಆಕೆಯನ್ನು ಡಿಸ್ಚಾರ್ಜ್ (Chaitra Kundapura Discharged) ಮಾಡಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಸಿಸಿಬಿ ಕಚೇರಿಗೆ (Hospital to CCB Office) ಕರೆತರಲಾಗಿದೆ. ಮಂಗಳವಾರದಿಂದ ಆಕೆಯ ವಿಚಾರಣೆ ಮತ್ತೆ ಶುರುವಾಗಲಿದೆ.
ಕಳೆದ ಸೆಪ್ಟೆಂಬರ್ 12ರಂದು ರಾತ್ರಿ ಉಡುಪಿಯ ಕೃಷ್ಣ ಮಠದ ಸಮೀಪ ಬಂಧಿತಳಾಗಿದ್ದ ಚೈತ್ರಾ ಕುಂದಾಪುರಳನ್ನು ಮರುದಿನ ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ 10 ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು. ಸೆ. 14ರಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಬಂದಿದ್ದ ಆಕೆ ʻಸ್ವಾಮೀಜಿ ಸಿಕ್ಕಾಕಿಕೊಳ್ಳಿ.. ಎಲ್ಲ ದೊಡ್ಡವರ ಹೆಸರು ಹೊರಗೆ ಬರುತ್ತದೆʼʼ ಎಂದು ಹುಳಬಿಟ್ಟಿದ್ದಳು. ಸೆ. 15ರಂದು ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ನಿಮಿಷದಲ್ಲಿ ಆಕೆ ವಾಷ್ ರೂಮ್‌ನಲ್ಲಿ ಬಾಯಿಯಲ್ಲಿ ನೊರೆಯೊಂದಿಗೆ ಬಿದ್ದುಕೊಂಡಿದ್ದಳು. ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಮೊದಲು ಇದು ಆತ್ಮಹತ್ಯೆ ಯತ್ನ ಎಂದೂ, ಬಳಿಕ ಅಪಸ್ಮಾರ ಸಮಸ್ಯೆ ಎಂದು ಪ್ರಚಾರ ಪಡೆಯಿತು. ಅರೆಪ್ರಜ್ಞೆಯಲ್ಲಿದ್ದಂತೆ ಇದ್ದ ಚೈತ್ರಾಳನ್ನು ಪರೀಕ್ಷೆ ಮಾಡಿದಾಗ ಯಾವುದೇ ಅನಾರೋಗ್ಯವಾಗಲಿ, ವಿಷ ಸೇವನೆಯಾಗಲೀ, ಅಪಸ್ಮಾರದ ಲಕ್ಷಣಗಳಾಗಲೀ ಕಾಣಲಿಲ್ಲ. ಎಲ್ಲ ವೈದ್ಯಕೀಯ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಆಕೆ ಸಿಸಿಬಿ ಕಚೇರಿಯಲ್ಲಿ ಸಾಬೂನಿನ ನೊರೆಯನ್ನು ಮುಖಕ್ಕೆ ಹಚ್ಚಿ ನಾಟಕ ಮಾಡಿದ್ದಳು ಎಂಬ ಅಂಶ ಬಯಲಾಯಿತು.
ಆದರೆ, ಆಕೆ ಯಾವುದೇ ಪ್ರಶ್ನೆ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯಿಸದೆ ಇರುವುದರಿಂದ ಆರೋಗ್ಯ ತಪಾಸಣೆ ಮುಂದುವರಿಸಲಾಗಿತ್ತು. ಮಲ ಮೂತ್ರ ವಾಂತಿ ಸೇರಿದಂತೆ ಎಲ್ಲ ರೀತಿಯ ತಪಾಸಣೆ ನಡೆಸಿದರೂ ಯಾವುದರಲ್ಲೂ ಅನಾರೋಗ್ಯಕ್ಕೆ ಪೂರಕವಾದ ಅಂಶ ಪತ್ತೆಯಾಗಲಿಲ್ಲ. ಆಕೆಯ ಮೆದುಳಿನ ಸ್ಕ್ಯಾನ್ ನಡೆಸಲಾಯಿತು. ಆಕೆಗೆ ಎದೆನೋವು ಎಂದು ಹೇಳಿಕೊಂಡಾಗ ಅದನ್ನೂ ತಪಾಸಣೆ ಮಾಡಲಾಯಿತು. ಇದೀಗ ಎಲ್ಲ ರೀತಿಯಿಂದಲೂ ಫಿಟ್ ಆಗಿರುವ ಚೈತ್ರಾಳನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆ ವೇಳೆ ವೈದ್ಯರು ಹೇಳಿದ್ದೇನು?
ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ವಿವರ ನೀಡಿದ ಡಾ. ದಿವ್ಯ ಪ್ರಕಾಶ್ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ ಅಂತಾ ಹೇಳಿದ್ದಾರೆ. ಈಗ ಡಿಸ್ಚಾರ್ಜ್ ಮಾಡ್ತಾ ಇದ್ದೇವೆʼʼ ಎಂದು ಹೇಳಿದರು.ʼ
ಆಸ್ಪತ್ರೆಗೆ ಬಂದ ವೇಳೆ ಬಾಯಿಯಲ್ಲಿ ಕಂಡ ನೊರೆಯ ಬಗ್ಗೆ ಕೇಳಿದಾಗ, ಅವರೇ ಅದನ್ನು ಮಾಡಿಕೊಂಡಿರುವುದು, ಫಿಟ್ಸ್ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ಬಂದಾಗ ಇಸಿಜಿಯಲ್ಲಿ ಸ್ವಲ್ಪ ವೇರಿಯೇಷನ್ಸ್ ಇತ್ತು. ಬಳಿಕ ಅದು ಸರಿಯಾಗಿದೆ. ಮನೋವೈದ್ಯರು ಕೂಡಾ ಕೆಲವು ಮಾತ್ರೆ ಕೊಟ್ಟಿದ್ದಾರೆ. ಎಂದು ವೈದ್ಯರು ವಿವರಿಸಿದರು.
ʻʻಸಿಸಿಬಿ ಅಧಿಕಾರಿಗಳು ಇದ್ದಾರೆ. ತಿಂಡಿ ಆಯ್ತಾ ಅಂತಾ ಮಾತಾಡಿಸಿದ್ದೇವೆ, ಮಾತಾಡಿದ್ರುʼʼ ಎಂದು ಹೇಳಿದರು.
ಮಹಿಳಾ ಸಿಬ್ಬಂದಿಗಳೇ ಊರುಗೋಲು
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಚೈತ್ರಾ ಮೊದಲಿನ ರೀತಿಯಲ್ಲಿ ಇಲ್ಲ. ಆಕೆ ಸುಸ್ತಾದಂತೆ ಕಾಣಿಸುತ್ತಿದ್ದಾರೆ. ಕಾರಿನಲ್ಲಿ ಬಿದ್ದುಕೊಂಡಂತಿದ್ದ ಅವರು ಇಳಿಯಲು ಕಷ್ಟಪಡುವಂತೆ ಕಂಡುಬಂದರು. ಇಳಿದ ಬಳಿಕವೂ ಅವರು ಬಲವಿಲ್ಲದಂತೆ ಮಹಿಳಾ ಸಿಬ್ಬಂದಿಗಳನ್ನು ಊರುಗೋಲಿನಂತೆ ಆಶ್ರಯಿಸಿದರು. ಸಿಸಿಬಿ ಸಿಬ್ಬಂದಿಯೇ ಚೈತ್ರಾಳನ್ನು ಕೈ ಹಿಡಿದು ಕೆಳಗಿಳಿಸಿ ಸಿಸಿಬಿ ಕಚೇರಿಗೆ ಕರೆದೊಯ್ದರು.
ಇದನ್ನೂ ಓದಿ: Chaitra Kundapura : ಅಬ್ಬಬ್ಬಾ… ಗೋವಿಂದ ಪೂಜಾರಿಯೇ ವಂಚಕ ಎಂದು ಬಿಂಬಿಸಲು ಕ್ರಿಮಿನಲ್ ಐಡಿಯಾ; ITಗೆ ದೂರು
ಇನ್ನು ಮತ್ತೆ ವಿಚಾರಣೆ ಶುರು
ಸಿಸಿಬಿ ಅಧಿಕಾರಿಗಳು ಆಕೆಯನ್ನು ಈಗ ವಿಚಾರಣೆಗೆ ಒಳಪಡಿಸಬೇಕಾಗಿದೆ. ಉಳಿದ ಐದಾರು ದಿನಗಳ ಕಸ್ಟಡಿಯಲ್ಲಿ ಪೊಲೀಸ್ರು ಚೈತ್ರಳ ವಿಚಾರಣೆ ಮುಗಿಯಬೇಕು. ಸ್ಥಳ ಮಹಜರು, ಉಳಿದ ಆರೋಪಿಗಳನ್ನು ಚೈತ್ರಾ ಎದುರು ಕೂರಿಸಿ ವಿಚಾರಣೆ ನಡೆಸುವ ಪ್ರಕ್ರಿಯೆಗಳು ನಡೆಯಬೇಕು.
ಕರ್ನಾಟಕ
Bangalore Bandh : ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ: ಕುರುಬೂರು ಶಾಂತ ಕುಮಾರ್ ಪೊಲೀಸ್ ವಶಕ್ಕೆ
Bangalore Bandh : ಬೆಂಗಳೂರಿನಲ್ಲಿ ಬಂದ್ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ. ಈ ನಡುವೆ, ಬಂದ್‌ಗೆ ಕರೆ ನೀಡಿದ್ದ ಕುರುಬೂರು ಶಾಂತ ಕುಮಾರ್ ಅವರನ್ನು ಬೆಳಗ್ಗೆಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಬೇಕು (Cauvery water Dispute) ಎಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವ ಜಲ ಸಂರಕ್ಷಣಾ ಸಮಿತಿಯ ಮುಖ್ಯಸ್ಥರಲ್ಲಿ ಒಬ್ಬರಾದ ರೈತ ಮುಖಂಡ ಕುರುಬೂರು ಶಾಂತ ಕುಮಾರ್ (Kuruburu Shantha kumar) ಅವರನ್ನು ಪೊಲೀಸರು ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಶಕ್ಕೆ ಪಡೆದಿದ್ದಾರೆ (Kuruburu Shantha kumar Detained)
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ (Mysore Bank Circle) ಜಮಾವಣೆಗೊಂದು ಪ್ರತಿಭಟನೆ ನಡೆಸಿ ಅಲ್ಲಿಂದ ಟೌನ್ ಹಾಲ್ ಕಡೆಗೆ ಹೋಗುವ ಪ್ಲ್ಯಾನ್ ಹೊಂದಿದ್ದ ಕುರುಬೂರು ಶಾಂತ ಕುಮಾರ್ ಅವರನ್ನು ಸರ್ಕಲ್‌ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 144 ಅಡಿ ಜಾರಿ ಮಾಡಿರುವ ನಿಷೇಧಾಜ್ಞೆ ನಿಯಮದಡಿ ಅವರನ್ನು ಬಂಧಿಸಿದ್ದಾರೆ. ಆದರೆ, ಇದೊಂದು ಗೂಂಡಾಗಿರಿ ಎಂದು ಶಾಂತ ಕುಮಾರ್ ಮತ್ತು ಅವರ ಬೆಂಬಲಿಗರು ಆಕ್ಷೇಪಿಸಿದ್ದಾರೆ. ಶಾಂತಕುಮಾರ್ ಅವರ ಜತೆ ಇನ್ನೂ 20 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಸೆಕ್ಷನ್ ಹಾಕಿದ್ದಕ್ಕೆ ಕುರುಬೂರು ಆಕ್ಷೇಪ
ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತ ಕುಮಾರ್, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಮೊದಲಾದ ರಾಜ್ಯದ ಅಸ್ಮಿತೆಯ ವಿಚಾರ ಬಂದಾಗ ಪೊಲೀಸರು ಪ್ರತಿಭಟನಾಕಾರರಿಗೆ ಬೆಂಬಲ ಕೊಡುತ್ತಾರೆ. ಆದರೆ, ಇಲ್ಲಿ ದಮನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಪೊಲೀಸರು ಪ್ರತಿಭಟನಾಕಾರರಿಗೆ ತೊಂದರೆ ಕೊಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹೇಳಿದ ಅವರು, ಕುಡಿಯುವ ನೀರಿಲ್ಲ ಅಂದ್ರೆ ಮನೆಗೆ ಹೋದಾಗ ಏನು ಹೇಳ್ತೀರಾ ಎಂದು ಪೊಲೀಸರನ್ನೇ ಪ್ರಶ್ನಿಸಿದರು.
ʻʻಸದ್ಯದವರೆಗೂ ಬಂದ್ ಯಶಸ್ವಿಯಾಗಿದೆ. ಎಲ್ಲರೂ ಬೆಂಬಲ ನೀಡಿದ್ದಾರೆ. ನಮ್ಮ ಹೋರಾಟ, ಚಳುವಳಿ ಮುಂದುವರಿಯಲಿದೆʼʼ ಎಂದು ಕುರುಬೂರು ಇದೇ ಸಂದರ್ಭದಲ್ಲಿ ಹೇಳಿದರು.
ʻʻರಾಜ್ಯದ ರೈತರು ಗಮನಿಸುತ್ತಿದ್ದಾರೆ. ಇಲ್ಲಿ ಏನೇ ನಡೆದರೂ ಇಡೀ ರಾಜ್ಯಕ್ಕೆ ಸಂದೇಶ ಹೋಗುತ್ತದೆ. ಹೀಗಾಗಿ ಪೋಲಿಸರು ಎಚ್ಚರಿಕೆಯಿಂದ ಇರಬೇಕುʼʼ ಎಂದು ಕುರುಬೂರು ಎಚ್ಚರಿಸಿದರು.
ಪೊಲೀಸರು-ಪ್ರತಿಭಟನಾಕಾರರ ನಡುವೆ ವಾಗ್ವಾದ
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಸೇರಿದ್ದ ರೈತರನ್ನೂ ಪೊಲೀಸರು ಚದುರಿಸಿದರು. ಈ ವೇಳೆ ಪ್ರತಿಭನಾಕಾರರು ಪೋಲೀಸರ ಗೂಂಡಾಗಿರಿಗೆ ಧಿಕ್ಕಾರ ಎಂದು ಕೂಗಿದರು.
ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಪ್ರತಿಭಟನಾಕಾರರನ್ನು ಟೌನ್ ಗೆ ಹೋಗದಂತೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಭಾರಿ ವಾಗ್ವಾದ ನಡೆಯಿತು. ಸರ್ಕಾರ 144ನೇ ಸೆಕ್ಷನ್ ಹಾಕಿ ದಬ್ಬಾಳಿಕೆ ಮಾಡ್ತಿದೆ. ಕಾನೂನಿಗೆ ನಾವು ಗೌರವ ಕೊಡ್ತಿವಿ ಎಂದು ಹೇಳಿದರು.
ʻʻನೀವೂ ಹೋರಾಟ ಮಾಡಬೇಕಿತ್ತು. ಕಾವೇರಿ ನದಿ ನೀರು ನಿಮಗೆ ಬೇಡ್ವಾ..? ಪೊಲೀಸನವರು ರಜಾ ಹಾಕಿ ಭಾಗವಹಿಸಬೇಕು. ನಾವು ಯಾವುದೇ ತೊಂದರೆ ಮಾಡಲ್ಲʼʼ ಎಂದು ಪೊಲೀಸರಿಗೇ ಪ್ರತಿಭಟನಾಕಾರರು ಬುದ್ಧಿ ಹೇಳಿದರು.
ಹೇಗಿದೆ ಬೆಂಗಳೂರು ಬಂದ್?
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬೆಂಗಳೂರಿನ ಪ್ರಮುಖ ಭಾಗಗಳಾದ ಮೆಜೆಸ್ಟಿಕ್‌ನಲ್ಲಿ ಜನ ಸಂಚಾರ ಕಡಿಮೆ ಇತ್ತು. ಬಿಎಂಟಿಸಿ ಬಸ್‌ಗಳು ಹೊರಟಿವೆಯಾದರೂ ಜನ ಸಂಚಾರ ಕಡಿಮೆ ಇತ್ತು. ಮೆಟ್ರೋ ಸಂಚಾರ ಎಂದಿನಂತೆ ಇದ್ದು, ಜನರೂ ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಿಕೋ ಎನ್ನುತ್ತಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಬಂದ್ ಹೆಚ್ಚು ಪರಿಣಾಮ ಬೀರಿಲ್ಲ. ಜನ ಜೀವನ ಎಂದಿನಂತೆಯೇ ಇದೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಮಕ್ಕಳಿಗೆ ಏನೂ ಸಮಸ್ಯೆ ಆಗಿಲ್ಲ.
ಕರ್ನಾಟಕ
Bangalore rain : ಮನೆ ಮುಂದೆ ವಾಕ್ ಮಾಡುತ್ತಿದ್ದಾಗ ಉರುಳಿದ ಮರ; ತಾಯಿ ಮೃತ್ಯು, 5 ವರ್ಷದ ಮಗು ಗಂಭೀರ
Bangalore rain: ಬೆಂಗಳೂರಿನಲ್ಲಿ ಸಂಭವಿಸಿದ ಮಳೆ ದುರಂತದಲ್ಲಿ ತಾಯಿ ಮೃತಪಟ್ಟು, ಪುಟ್ಟ ಕಂದಮ್ಮ ಗಾಯಗೊಂಡಿದ್ದಾಳೆ. ಮರ ಬಿದ್ದು ಈ ದುರಂತ ಸಂಭವಿಸಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ (Bangalore rain) ಮರವೊಂದು ಧರೆಗುರುಳಿ (Tree Falls on mother and daughter) ವಾಕ್ ಮಾಡುತ್ತಿದ್ದ ತಾಯಿ ಮತ್ತು ಮಗುವನ್ನು ಗಾಯಗೊಳಿಸಿದೆ. ತಾಯಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟರೆ (Mothrer dead at Hospital), ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಲ್ಸನ್ ಗಾರ್ಡನ್ 7 ಕ್ರಾಸ್ ನಲ್ಲಿ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ವಿಲ್ಸನ್ ಗಾರ್ಡನ್ (Wilson garden) ನಿವಾಸಿ ಹೇಮಾವತಿ (35) ಎಂದು ಗುರುತಿಸಲಾಗಿದೆ. ಅವರ ಪುಟ್ಟ ಕಂದಮ್ಮ ಐದು ವರ್ಷದ ರಚಿತಾ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹೇಮಾವತಿ ಮತ್ತು ಮಗಳು ರಚಿತಾ ಸಂಜೆಯ ಹೊತ್ತು ಮನೆಯ ಮುಂದೆ ಪುಟ್ ಪಾತ್ ಮೇಲೆ ತಾಯಿ ಮಗಳು ವಾಕ್ ಮಾಡುತ್ತಿದ್ದಾಗ ಬೃಹತ್ ಮರ ಉರುಳಿದೆ. ಒಂದು ಕಡೆ ಮರದ ಕೊಂಬೆ ಇನ್ನೊಂದು ಕಡೆ ವಿದ್ಯುತ್ ಕಂಬವೂ ಅವರ ಮೇಲೆ ಬಿದ್ದಿದೆ.
ಕೂಡಲೇ ಹೇಮಾವತಿ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಒಯ್ಯಲಾಯಿತು. ರಚಿತಾಗೆ ತಲೆಗೆ ಗಾಯವಾಗಿದ್ದು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು.
ಈ ನಡುವೆ, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಹೇಮಾವತಿ ನಿಧನರಾಗಿದ್ದಾರೆ. ಅವರು ಸಂಜಯಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರ ಸಾವು
ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರಾಗಿದ್ದು, ಮೃತರಾದವರ ಗುರುತು ಪತ್ತೆಯಾಗಿಲ್ಲ.
ಮೈಸೂರು ಕಡೆಗೆ ಹೋಗುತ್ತಿದ್ದ ಫಾರ್ಚುನರ್ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಬೆಂಗಳೂರು ಕಡೆಗೆ ಬರುವ ರಸ್ತೆಗೆ ನುಗ್ಗಿ ಸ್ಯಾಂಟ್ರೋ ಕಾರು ಮತ್ತು ಇತರ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಸ್ಯಾಂಟ್ರೋ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆಗೂ ಗಂಭೀರ ಗಾಯಗಳಾಗಿದ್ದು ಅವರು ಆಸ್ಪತ್ರೆಗೆ ಸಾಗಿಸುವ ಪ್ರಾಣ ಕಳೆದುಕೊಂಡರು.
ಸಂಜೆ ಸುಮಾರು 5.30ರ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಮೃತರು ಹಾಸನ ಮೂಲದವರೆಂದು ಹೇಳಲಾಗುತ್ತಿದೆ. ಎರಡೂ ಕಾರುಗಳ ಮುಂಭಾಗ ನಜ್ಜುಗುಜ್ಜಾಗಿದೆ. ಇತರ ವಾಹನಗಳಿಗೂ ಹಾನಿಯಾಗಿದೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ತುಂಬಾ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ಕರ್ನಾಟಕ
Bangalore Bandh : ಬೆಂಗಳೂರು ಬಂದ್ ಫಿಕ್ಸ್; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಬಸ್ ಸಂಚಾರ ಡೌಟ್; ಏನಿರುತ್ತೆ? ಏನಿರಲ್ಲ?
Bangalore Bandh : ಮಂಗಳವಾರದ ಬೆಂಗಳೂರು ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಹಾಗಿದ್ದರೆ ಬಂದ್ ವೇಳೆ ಏನಿರುತ್ತದೆ? ಏನಿರಲ್ಲ ಎಂಬುದರ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ (Jala Samrakshana Samiti) ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಆದರೆ, ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಸೆ. 29ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಈ ಹಿಂದೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
ರೈತ ಸಂಘದ ಕುರುಬೂರು ಶಾಂತ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರು ಬಂದ್ ನಡೆಯಲಿದೆ. ಬಂದ್‌ನಿಂದಾಗಿ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿಗಳು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ (Holiday announced for School and Colleges) ಘೋಷಿಸಿದ್ದಾರೆ. ಕಾಲೇಜುಗಳು ಮತ್ತು ವಿವಿಗಳು ನಿಗದಿ ಮಾಡಿದ್ದ ಪರೀಕ್ಷೆಗಳನ್ನು ಮುಂದೂಡಿವೆ (Exams Postponed).
ಈ ನಡುವೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಬಿಎಂಟಿಸಿ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ. ಯಾಕೆಂದರೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಬಂದ್‌ಗೆ ಬೆಂಬಲ ಘೋಷಿಸಿವೆ. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ
ಕನ್ನಡ ಮತ್ತು ನೀರಿಗೆ ಸಂಬಂಧಿಸಿದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕನ್ನಡ ರಕ್ಷಣಾ ವೇದಿಕೆ ಈ ಬಾರಿ ತಟಸ್ಥವಾಗಿ ಉಳಿದಿದೆ. ಸೆ. 26 ಅಥವಾ ಸೆ. 29 ಯಾವ ಬಂದ್‌ಗೂ ಬೆಂಬಲ ಕೊಡುವುದಿಲ್ಲ ಎಂದು ಅದು ಪ್ರಕಟಿಸಿದೆ. ಇದು ಬಂದ್ ಆಯೋಜಕರಿಗೆ ದೊಡ್ಡ ಹಿನ್ನಡೆಯಾಗಲಿದೆ.
ಹಲವು ಸಂಘಟನೆಗಳ ಬೆಂಬಲ ವಾಪಸ್
ಬೆಂಗಳೂರು ಬಂದ್, ಕರ್ನಾಟಕ ಬಂದ್ ಎರಡು ಬಂದ್ ಘೋಷಣೆಯಾಗಿದ್ದರಿಂದ ಕೆಲವು ಸಂಘಟನೆಗಳು ಸೆ. 26ರ ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
1. ಬೆಂಗಳೂರಿನ ಓಲಾ, ಊಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ತಾವು ಸೆ. 26ರ ಬದಲು ಸೆ. 29ರ ಬಂದ್ ಬೆಂಬಲಿಸುವುದಾಗಿ ಹೇಳಿದೆ.
2. ಬೆಂಗಳೂರಿನ ಆದರ್ಶ ಆಟೋ ಚಾಲಕರ ಯೂನಿಯನ್ ಕೂಡಾ ಸೆ. 26ರ ಬದಲು ಸೆ. 29ಕ್ಕೆ ಶಿಫ್ಟ್ ಆಗಿದೆ.
3. ಈ ಹಿಂದೆ ಸೆ. 26ರ ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ಈಗ ಸೆ. 29ರ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಇರುವುದಿಲ್ಲ ಅಂದಿದೆ ಸಂಘಟನೆ
ಸೆ. 26ರಂದು ನಡೆಯುವ ಬೆಂಗಳೂರು ಬಂದ್ ಗೆ ಬಿಎಂಟಿಸಿ ಹಾಗೂ KSRTC ನೌಕರರು ಬೆಂಬಲ ಕೊಡುತ್ತಾರೆ ಎಂದು ಕರ್ನಾಟಕ ಸಾರಿಗೆ ನಿಗಮಗಳ ನೌಕರರ ಕೂಟದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ನಾವು ಹಾಗೂ ಸಮಾನ ಮನಸ್ಕರ ವೇದಿಕೆ ಹಾಗೂ ಬಿಎಂಟಿಸಿ ನೌಕರರ ಸಂಘಗಳು ತೀರ್ಮಾನ ಮಾಡಿದ್ದೇವೆ. ಯಾವ ವಾಹನಗಳನ್ನು ರಸ್ತೆಗೆ ಇಳಿಸಬೇಡಿ ಅಂತ ನಾವು ಸೂಚನೆ ಕೊಟ್ಟಿದ್ದೇವೆ. ಈ ಹಿಂದೆಯೂ ನಾವು ಬೆಂಬಲ ಕೊಟ್ಟಿದ್ದೆವು, ನಾಳೆಯೂ ಬೆಂಬಲ ಕೊಡುತ್ತೇವೆ ಎಂದಿದ್ದಾರೆ ನಾಗರಾಜ್.
ಸೆ. 26ರ ಬಂದ್‌ನಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗಿ ಆಗುವಂತೆ ಕರೆ ಕೊಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ. ಶಾಂತಿಯುತ ಹೋರಾಟಕ್ಕೆ ನಾವು ಒಟ್ಟು ಕೊಡುತ್ತೇವೆ, ಅಹಿತಕರ ಘಟನೆ ಆಸ್ಪದ ಕೊಡಲ್ಲ. ಇದರಲ್ಲಿ ನಮ್ಮ ನೌಕರರನ್ನು ವಿಭಜನೆ ಮಾಡಿ ನೋಡುವ ಅಗತ್ಯ ಇಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: Cauvery water dispute : ನಾಳೆ ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಹಾಗಿದ್ದರೆ ಸೆ. 26ರ ಬೆಂಗಳೂರು ಬಂದ್‌ನಲ್ಲಿ ಏನಿರುತ್ತದೆ? ಏನಿರುವುದಿಲ್ಲ?
ಏನೇನು ಇರುವುದಿಲ್ಲ?
-ಶಾಲೆ, ಕಾಲೇಜುಗಳು ಬಂದ್: ಪರೀಕ್ಷೆಗಳು ಕೂಡಾ ಮುಂದಕ್ಕೆ
-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಬಹುತೇಕ ಇರುವುದಿಲ್ಲ
– ಓಲಾ, ಊಬರ್ ಹೊರತಾದ ಆಟೋ ರಿಕ್ಷಾಗಳು ಡೌಟ್
– ಸಿನಿಮಾ ಥಿಯೇಟರ್‌ಗಳು ಬಂದ್
– ಖಾಸಗಿ ಬಸ್‌ಗಳು, ಗೂಡ್ಸ್ ವಾಹನಗಳು
-ಸೂಪರ್ ಮಾರ್ಕೆಟ್, ಮಾಲ್‌ಗಳು
– ಬಹುತೇಕ ಅಂಗಡಿಗಳು ಬಂದ್
– ಕೈಗಾರಿಕೆಗಳು
– ಜುವೆಲ್ಲರಿ ಶಾಪ್‌ಗಳು
– ಬಿಬಿಎಂಪಿ ಕಾರ್ಮಿಕರು, ನೌಕರರು ಕೆಲಸ ಮಾಡಲ್ಲ
ಏನೇನು ಸೇವೆಗಳು ಲಭ್ಯ ಇರುತ್ತವೆ?
– ತುರ್ತು ಅಗತ್ಯದ ಎಲ್ಲ ಸೇವೆಗಳು ಇರುತ್ತವೆ.
– ಹಾಲಿನ ಬೂತ್ ಓಪನ್, ಪತ್ರಿಕೆಗಳು ಸಿಗುತ್ತವೆ
– ನಗರದಲ್ಲಿ ಹೋಟೆಲ್‌ಗಳು ತೆರೆದಿರುತ್ತವೆ.
– ಓಲಾ ಮತ್ತು ಊಬರ್ ಟ್ಯಾಕ್ಸಿಗಳು ಓಡಾಡುತ್ತವೆ
– ಹೆಚ್ಚಿನ ಆಟೋಗಳು ಓಡಾಡುತ್ತವೆ.
– ಆಸ್ಪತ್ರೆ, ಮೆಡಿಕಲ್‌ಗಳ ಸೇವೆ ಯಥಾಸ್ಥಿತಿ
– ಸರ್ಕಾರಿ ಕಚೇರಿಗಳು ಇರುತ್ತವೆ, ಜನ ಕಡಿಮೆ ಇರಬಹುದು
– ಆಂಬ್ಯುಲೆನ್ಸ್ ಸೇವೆಗಳು ಸಿಗುತ್ತವೆ.
– ಮೆಟ್ರೋ ಸೇವೆ ಎಂದಿನಂತೆ ಇರುತ್ತದೆ.
ಬಲವಂತವಾಗಿ ಬಂದ್ ಮಾಡುವಂತಿಲ್ಲ
ಸುಪ್ರೀಂಕೋರ್ಟ್ ತೀರ್ಪಿನಂತೆ ಬಂದ್ ಎಂಬ ಪದವೇ ಇಲ್ಲ. ಪ್ರತಿಭಟನೆಗೆ ಮಾತ್ರ ಅವಕಾಶ. ಬೆಂಗಳೂರು ಬಂದ್ ವೇಳೆ ಯಾರೂ ಯಾವುದೇ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ, ವಾಹನಗಳನ್ನು ತಡೆಯುವಂತಿಲ್ಲ. ಹಾಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಬಂದ್‌ನಿಂದಾಗಿ ಆಸ್ತಿಪಾಸ್ತಿಗೆ ಹಾನಿ ಉಂಟಾದರೆ ಸಂಘಟಕರಿಂದಲೇ ವಸೂಲಿ ಮಾಡಲಾಗುವುದು.
ಕರ್ನಾಟಕ
Bangalore Bandh : ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ
Bangalore Bandh : ಬಂದ್ ಯಾವತ್ತೂ ಕೊನೆಯ ಅಸ್ತ್ರವಾಗಬೇಕು ಎಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಸೆ. 26 ಅಥವಾ 29ರ ಯಾವ ಬಂದ್‌ಗೂ ಬೆಂಬಲ ಕೊಡುವುದಿಲ್ಲ ಎಂದು ಪ್ರಕಟಿಸಿದೆ.
ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಸೆ. 26ರಂದು ನಡೆಯಲಿರುವ ಬೆಂಗಳೂರು ಬಂದ್ (Bangalore Bandh) ಮತ್ತು ಸೆ. 29ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗಳಲ್ಲಿ (Karnataka Bandh) ಯಾವುದಕ್ಕೂ ತಾನು ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಘೋಷಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ (TA Narayana Gowda) ಅವರು ಈ ಬಗ್ಗೆ ಆಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಆದರೆ ಯಾವುದೇ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಕುರುಬೂರು ಶಾಂತಕುಮಾರ್ ನೇತೃತ್ವದ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‌ಗೆ ಕರೆ ನೀಡಿದರೆ ಮತ್ತು ಸೆಪ್ಟೆಂಬರ್ 29ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಪ್ರತ್ಯೇಕವಾಗಿ ನಡೆಯಲಿರುವ ಈ ಯಾವ ಬಂದ್‌ಗೂ ನಮ್ಮ ಬೆಂಬಲವಿಲ್ಲ ಎಂದು ರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ. ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ರಾಜ್ಯಾದ್ಯಂತ ಮುಂದುವರೆಯುತ್ತದೆ ಎಂದು ಹೇಳಿದೆ.
ಸೋಮವಾರ ಬೆಳಗ್ಗೆ ಸಭೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಉನ್ನತಾಧಿಕಾರ ಸಮಿತಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಅದರ ಪ್ರಮುಖಾಂಶಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.
ಬಂದ್‌ಗೆ ರಕ್ಷಣಾ ವೇದಿಕೆ ಬೆಂಬಲ ಯಾಕಿಲ್ಲ?
- ಸೆಪ್ಟೆಂಬರ್ 26 ಮತ್ತು 29ರಂದು ಕರೆ ನೀಡಲಾಗಿರುವ ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ.
- ಆದರೆ ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದೆ.
- ಸೆಪ್ಟೆಂಬರ್ 26ರಂದು ಮಂಗಳವಾರ ವೇದಿಕೆಯ ಗಾಂಧಿನಗರ ಕಚೇರಿ ಆವರಣದಿಂದ ವೇದಿಕೆ ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.
- ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಯಾವುದೇ ಚಳವಳಿ ಕೈಗೆತ್ತಿಕೊಂಡರೂ ಜನಜಾಗೃತಿ ಮೂಡಿಸುವುದನ್ನು ಮೊದಲನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ.
- ದಿಢೀರನೆ ಬಂದ್ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ರಕ್ಷಣಾ ವೇದಿಕೆ ಒಪ್ಪುವುದಿಲ್ಲ. ಬಂದ್ ಹೋರಾಟದ ಕೊನೆಯ ಅಸ್ತ್ರವಾಗಿರಬೇಕು.
ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
ನಾವು ಯಾವುದೇ ಅಂಗಡಿ ಮುಂಗಟ್ಟು ಬಂದ್ ಮಾಡಿಸುವುದಿಲ್ಲ
ಎರಡೂ ದಿನಗಳ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿ, ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವುದಿಲ್ಲ. ಬಂದ್‌ಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕಾವೇರಿಗಾಗಿ ನಮ್ಮ ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳು ಮುಂದುವರೆಯುತ್ತವೆ ಎಂದು ಕರವೇ ಹೇಳಿದೆ.
ಇದೇ ವೇಳೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ12 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ13 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ