Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮ; ಮಹಾವೈಭವಕ್ಕೆ ಇನ್ನು ಎರಡೇ ದಿನ Vistara News

ಕರ್ನಾಟಕ

Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮ; ಮಹಾವೈಭವಕ್ಕೆ ಇನ್ನು ಎರಡೇ ದಿನ

Vistara Kannada Sambhrama : ವಿಸ್ತಾರ ನ್ಯೂಸ್‌ ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಲೆ, ಸಂಸ್ಕೃತಿ, ಸಾಹಿತ್ಯಗಳ ಮಹಾಮೇಳ ನವೆಂಬರ್‌ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.

VISTARANEWS.COM


on

Vistara Kannada Sambhrama22
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮಕ್ಕೆ (Vistara Kannada Sambhrama) ಇನ್ನು ಎರಡೇ ದಿನ ಬಾಕಿ ಉಳಿದಿದೆ. ನವೆಂಬರ್‌ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ನಡೆಯುವ ಅದ್ಧೂರಿ ಕಾರ್ಯಕ್ರಮದ ಕಾತರದ ಕ್ಷಣಗಳು ಹತ್ತಿರವಾಗುತ್ತಿವೆ.

ಕನ್ನಡ ಟಿವಿ ವಾಹಿನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಮತ್ತು ಸಾಹಿತ್ಯದ ಹಬ್ಬ ಆಯೋಜಿಸಿದ ಕೀರ್ತಿ ವಿಸ್ತಾರ ನ್ಯೂಸ್‌ಗೆ ಸಲ್ಲುತ್ತದೆ. 2022ರಲ್ಲಿ ನಡೆದ ಕಾರ್ಯಕ್ರಮದ ಅದ್ಧೂರಿ ಯಶಸ್ಸಿನ ಬಳಿಕ ಇದೀಗ ಎರಡನೇ ವರ್ಷ ʻವಿಸ್ತಾರ ಕನ್ನಡ ಸಂಭ್ರಮʼ ಆಯೋಜಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಂಜಿಸಲಿದೆ. ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಇದನ್ನು ʻವರ್ಷ ವೈಭವʼವಾಗಿಯೂ (Vistara Varsha Vaibhava) ಆಚರಿಸಲಾಗುತ್ತಿದೆ.

ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ವಿಸ್ತಾರ ಕನ್ನಡ ಸಂಭ್ರಮದಲ್ಲಿ ರಾತ್ರಿ 12 ಗಂಟೆಯವರೆಗೂ ನಾನ್‌ಸ್ಟಾಪ್‌ ಮನರಂಜನೆಯ ಮಹಾಪೂರವಿದೆ. ಹಾಡು, ಸಂಗೀತ, ಕನ್ನಡ ಸಾಹಿತ್ಯದ ಗೋಷ್ಠಿಗಳು, ನಟ-ನಟಿಯರು, ಕಿರುತೆರೆ ಕಲಾವಿದರ ಜತೆ ನೇರ ಮುಕ್ತ ಮಾತುಕತೆ, ಯಕ್ಷಗಾನ ವೈಭವಗಳೊಂದಿಗೆ ಮೇಳೈಸಲಿದೆ.

ರವೀಂದ್ರ ಕಲಾಕ್ಷೇತ್ರದ ಪ್ರಧಾನ ವೇದಿಕೆ, ಕಲಾಕ್ಷೇತ್ರದ ಆವರಣ, ನಯನಾ ಸಭಾಂಗಣ, ಸಂಸ ಬಯಲು ರಂಗ ಮಂದಿರ ಹೀಗೆ ಎಲ್ಲ ಕಡೆಯೂ ವೈವಿಧ್ಯಮಯ ಕಾರ್ಯಕ್ರಮ, ಸಾಂಸ್ಕೃತಿಕ ಲೋಕದ ಅನಾವರಣ ನಡೆಯಲಿದೆ.

ಏನುಂಟು ಏನಿಲ್ಲ? ಈ ಸಂಭ್ರಮದ ಲೋಕದಲ್ಲಿ?

ವಿಸ್ತಾರ ಕನ್ನಡ ಸಂಭ್ರಮದಲ್ಲಿ ಸಂಗೀತೋತ್ಸವವಿದೆ, ನಾಟಕೋತ್ಸವವಿದೆ. ಆಹಾರೋತ್ಸವದ ಸವಿಯಿದೆ, ಪುಸ್ತಕೋತ್ಸವದ ಸೊಬಗಿದೆ. ಯಕ್ಷ ಗಾನ ಗಂಧರ್ವರೆಲ್ಲ ಧರೆಗಿಳಿವ ಸಡಗರವಿದೆ.

ನಾಡಿನ ಯೋಗಕ್ಷೇಮದ ರೂವಾರಿಗಳಾದ ಜನಪ್ರತಿನಿಧಿಗಳು, ನಿಮ್ಮ ನೆಚ್ಚಿನ ಚಂದನವನದ ಚಂದದ ತಾರೆಯರು, ಕಿರುತೆರೆಯ ನಿಮ್ಮ ಇಷ್ಟದ ನಟ-ನಟಿಯರು ಇಲ್ಲಿ ಸೇರಲಿದ್ದಾರೆ. ಕನ್ನಡಕ್ಕೆ ದನಿಯಾದ ಗಾಯಕರು, ಸಂಗೀತಗಾರರು, ಸ್ಟಾಂಡಪ್‌ ಕಾಮಿಡಿಯನ್‌ಗಳು, ಯಕ್ಷಿಣಿ ಜಾದೂಗಾರರು, ಎಲ್ಲರೂ ನಿಮ್ಮನ್ನು ಒಂದೇ ಕಡೆ ಎದುರ್ಗೊಳ್ಳಲಿದ್ದಾರೆ. ಇದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಖುಷಿಪಡಬಹುದಾದ ಒಂದು ಪರಿಶುದ್ಧ ಫ್ಯಾಮಿಲಿ ಪ್ಯಾಕೇಜ್‌ ಕಾರ್ಯಕ್ರಮವಾಗಿ ಕಳೆಗಟ್ಟಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಮುಖ್ಯಮಂತ್ರಿಗಳಿಂದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಚಾಲನೆ

ನವೆಂಬರ್‌ 4ರಂದು ಬೆಳಗ್ಗೆ 10 ಗಂಟೆಗೆ ವಿಸ್ತಾರ ಕನ್ನಡ ಸಂಭ್ರಮ- ವಿಸ್ತಾರ ನ್ಯೂಸ್‌ ವರ್ಷ ವೈಭವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಸಚಿವ ಶಿವರಾಜ್‌ ತಂಗಡಗಿ

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಹಕಾರ ಸಚಿವ ಕೆ.ಎನ್‌ ರಾಜಣ್ಣ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್‌ ಸಂಸದರಾದ ಪಿ.ಸಿ. ಮೋಹನ್‌, ಶಾಸಕರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ, ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಜನಪ್ರಿಯ ನಟ ರಮೇಶ್‌ ಅರವಿಂದ್‌, ಜನಪ್ರಿಯ ನಟಿ ಬೃಂದಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಡಿಸಿಎಂ ಮತ್ತು ಇತರ ಗಣ್ಯರು ಭಾಗಿ

ಸಂಜೆ 6 ಗಂಟೆಯಿಂದ 7.30ರವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್‌ ಗುಂಡೂರಾವ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಜಿ.ಟಿ. ದೇವೇಗೌಡ, ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಅದಮ್ಯ ಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತ್‌ಕುಮಾರ್‌, ಖ್ಯಾತ ಸಿನಿಮಾ ನಿರ್ದೇಶಕರಾದ ಯೋಗರಾಜ್‌ ಭಟ್‌, ಜನಪ್ರಿಯ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಮಾನ್ವಿತಾ ಕಾಮತ್‌ ಭಾಗವಹಿಸುತ್ತಿದ್ದಾರೆ.

Vistara Kannada Sambhrama validictory

ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸುತ್ತಿದೆ ವಿಸ್ತಾರ ತಂಡ

ವಿಸ್ತಾರ ನ್ಯೂಸ್‌ ಪ್ರೈವೆಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಅವರು ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುತ್ತಿದ್ದಾರೆ.

15 ಗಂಟೆಗಳ ಕಾಲ ಬ್ಯಾಕ್‌ ಟು ಬ್ಯಾಕ್‌ ಕಾರ್ಯಕ್ರಮ

ಬೆಳಗ್ಗೆ 9.00 – 10.00: ಗೀತ ಬೆಳಗು
ಭಕ್ತಿ ಗೀತೆ, ಭಾವ ಗೀತೆ, ಜನಪದ, ಸೂಫಿ ಹಾಡುಗಳ ಮಾಧುರ್ಯ
ರಾಮಚಂದ್ರ ಹಡಪದ, ಆರ್‌. ಕೆ. ಸ್ಪರ್ಶ ಅವರಿಂದ ಗಾನಸುಧೆ

ಬೆಳಗ್ಗೆ 10.00ರಿಂದ 11.30: ವಿಸ್ತಾರ ಕನ್ನಡ ಸಂಭ್ರಮ ಉದ್ಘಾಟನೆ ಹಾಗೂ
ವಿಸ್ತಾರ ಪ್ರಕಾಶನದ ಪುಸ್ತಕಗಳ ಬಿಡುಗಡೆ

ಮಧ್ಯಾಹ್ನ 12.00 – 1.00: ಬಾರಿಸು ಕನ್ನಡ ಡಿಂಡಿಮವ

ಕನ್ನಡ ವಿಸ್ತರಿಸುತ್ತಿರುವ ಹೊಸ ದಿಕ್ಕುಗಳು: ವಿಚಾರಗೋಷ್ಠಿ

Vistara Kannada Sambhrama kannada Goshti

ವಿಷಯ ಮತ್ತು ಭಾಗವಹಿಸುವ ವಿಷಯ ತಜ್ಞರು

  1. ಕನ್ನಡ ಓದಿನ ಹೊಸ ಮೀಡಿಯಂ: ವಸಂತ್ ಶೆಟ್ಟಿ ಮೈಲಾಂಗ್ ಸಂಸ್ಥಾಪಕರು
  2. ಮುಕ್ತ ಡಬ್ಬಿಂಗ್‌: ಕನ್ನಡಕ್ಕೆ ಲಾಭ ಆಯ್ತಾ? ನಷ್ಟ ಆಯ್ತಾ?: ಹೃದಯಶಿವ ಚಿತ್ರ ಸಾಹಿತಿ
  3. ಮಾತೃ ಭಾಷೆಯಲ್ಲೇ ಏಕೆ ಕಲಿಯಬೇಕು?: ವೀಣಾ ರಾವ್​
    ಸಂಸ್ಥಾಪಕರು, ಭಾಷಾ ವಿದ್ಯಾ ಕನ್ನಡ ಕಲಿಕಾ ಕೇಂದ್ರ
  4. ನಿತ್ಯದ ಬರವಣಿಗೆಯಾಗಿ ಕನ್ನಡ: ಶ್ರೀಧರ್‌​ ನಾಗರಾಜ್​ ‘ಜಸ್ಟ್​ ಕನ್ನಡ’ ರೂವಾರಿ
  5. ಅಪಾರ್ಟ್‌ಮೆಂಟ್ ಗಳಲ್ಲಿ ಕನ್ನಡಾಭಿಮಾನ: ವಿಕ್ರಂ ರೈ ಕಾರ್ಯದರ್ಶಿ,
    ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್
  6. ನಿರ್ವಹಣೆ: ಶ್ರೀ ಎನ್‌. ರವಿಶಂಕರ್‌ ಸಿಇಒ, ಏಮ್ಸ್​ ಹೈ ಕನ್ಸಲ್ಟಿಂಗ್

ಮಧ್ಯಾಹ್ನ 1.30 – 2.30: ವಾಯ್ಸ್‌ ಆಫ್‌ ಯಂಗ್‌ ಕನ್ನಡಿಗ

ದನಿ ಬೇರೆ, ಭಾಷೆ ಒಂದೇ!: ವಿಶಿಷ್ಟ ಸಂವಾದ

Vistara Kannada Sambhrama kannada Goshti2

ಸಂವಾದದಲ್ಲಿ ಪಾಲ್ಗೊಳ್ಳುವವರು
ಚಂದನ್​ ಶೆಟ್ಟಿ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಕನ್ನಡ ರ‍್ಯಾಪರ್​
ನಿರಂಜನ್​ ದೇಶಪಾಂಡೆ ಹೆಸರಾಂತ ನಿರೂಪಕರು
ನೇತ್ರಾ ಖ್ಯಾತ ಆರ್​ ಜೆ
ಸಿರಿ ಜನಪ್ರಿಯ ನಟಿ-ನಿರೂಪಕಿ

ಮಧ್ಯಾಹ್ನ 3.00 – 4.00: ಭಾಗ್ಯಲಕ್ಷ್ಮೀ & ಟೀಮ್‌ ಬರ್ತಾರಮ್ಮ!

Bhagya lakshmi team

ಕಲರ್ಸ್​ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಟೀಮ್ ಜತೆ ಆತ್ಮೀಯ ಸಂವಾದ

ಸಂಜೆ 4.30 – 5.30: ಮಕ್ಕಳ ನಾಟಕ

ಮೈಸೂರಿನ ಖ್ಯಾತ ‘ಅರಿವು’ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಟಕ: ವಿಗಡ ವಿಕ್ರಮರಾಯ
ರಚನೆ: ಸಂಸ, ನಿರ್ದೇಶನ: ಯತೀಶ್ ಎನ್. ಕೊಳ್ಳೇಗಾಲ

Vistara Kannada Sambhrama Drama

ಸಂಜೆ 6.00- 7.30: ಸಮಾರೋಪ ಸಮಾರಂಭ

ರಾತ್ರಿ 8.00- 9.30: ಲೈವ್‌ ಮ್ಯೂಸಿಕ್‌ ಧಮಾಕಾ

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್‌ ಮತ್ತು ತಂಡದಿಂದ ಸೂಪರ್‌ ಹಿಟ್‌ ಹಾಡುಗಳು (GURUKIRAN Live in Concert)

Gurukiran Vistara Kannada sambhrama

ರಾತ್ರಿ 10ರಿಂದ 12: ಯಕ್ಷಗಾನ ಪ್ರದರ್ಶನ

ಪ್ರಸಂಗ: ಕವಿರತ್ನ ಕಾಳಿದಾಸ
ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ, ಬೆಂಗಳೂರು ತಂಡದಿಂದ
ಭಾಗವತರು: ಹೇರಂಜಾಲು ಗೋಪಾಲ ಗಾಣಿಗ, ಪಲ್ಲವ ಗಾಣಿಗ, ಜತೆಗೆ, ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದರು.

Yakshagana Vistara Kannada Sambhrama

ಸಂಸ ಬಯಲು ರಂಗಮಂದಿರದಲ್ಲಿ ಹಲವು ಕಾರ್ಯಕ್ರಮ

ಪ್ರಧಾನ ವೇದಿಕೆಯ ಜತೆ ಜತೆಯಲ್ಲೇ ಸಂಸ ಬಯಲು ರಂಗ ಮಂದಿರದಲ್ಲೂ ಕಾರ್ಯಕ್ರಮಗಳು ನಡೆಯಲಿವೆ.

1. ಸಂಜೆ 4.00ರಿಂದ ಚಿಣ್ಣರಿಗಾಗಿ ಜಾದೂ: ಆಕಾಶ್‌ ಗುಪ್ತಾ ಅವರಿಂದ

2. ಸಂಜೆ 5ರಿಂದ 6: ಸ್ಟ್ಯಾಂಡಪ್ ಕಾಮಿಡಿ: ಖ್ಯಾತ ಹಾಸ್ಯ ಕಲಾವಿದ ಕಾರ್ತಿಕ್‌ ಪತ್ತಾರ್ ಹಾಸ್ಯ ಕಾರಂಜಿ

3. ಸಂಜೆ 6ರಿಂದ 6.30: ಸೀರೆ ಸೊಬಗು: ಸೀರೆಯಲ್ಲಿ ನೋಡಿ, ಲಲನೆಯರ ಮೋಡಿ!
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್‌ ಪ್ರತಿಭಾ ಸಂಶಿಮಠ ತಂಡದಿಂದ ನಾಡಿನ ಪಾರಂಪರಿಕ ಉಡುಗೆ ಬಿಂಬಿಸುವ ರಾಂಪ್ ವಾಕ್

ಹೊರಾಂಗಣದಲ್ಲಿ ಪುಸ್ತಕ ಮೇಳ: 20%ವರೆಗೆ ರಿಯಾಯಿತಿ

ರವೀಂದ್ರ ಕಲಾಕ್ಷೇತ್ರದ ಹೊರಾವರಣದಲ್ಲಿ ಅಪೂರ್ವ ಪುಸ್ತಕ ಮೇಳ ನಡೆಯಲಿದ್ದು, 20ಕ್ಕೂ ಹೆಚ್ಚು ಜನಪ್ರಿಯ ಬುಕ್‌ ಸ್ಟಾಲ್‌ಗಳು ಭಾಗಿಯಾಗಲಿವೆ. ಸಾವಿರಾರು ಪುಸ್ತಕಗಳು ಒಂದೇ ಕಡೆ ಲಭ್ಯವಾಗಲಿದೆ. ಪುಸ್ತಕಗಳಿಗೆ ಶೇ.20ರವರೆಗೆ ವಿಶೇಷ ರಿಯಾಯಿತಿ ಇರಲಿದೆ.

ಭಾಗವಹಿಸಲಿರುವ ಪ್ರಕಾಶನ ಸಂಸ್ಥೆಗಳು

ಸಪ್ನ ಬುಕ್‌ ಹೌಸ್‌, ನವ ಕರ್ನಾಟಕ, ಅಂಕಿತ, ವಿಸ್ತಾರ ಪ್ರಕಾಶನ, ಸ್ನೇಹ ಬುಕ್‌ ಹೌಸ್‌, ಛಂದ ಪುಸ್ತಕ, ಸಾವಣ್ಣ ಪ್ರಕಾಶನ, ವೀರಲೋಕ, ಸಮನ್ವಿತ, ಸಾಹಿತ್ಯ ಪ್ರಕಾಶನ, ಸಾಹಿತ್ಯ ಲೋಕ, ವಿಕ್ರಂ ಪ್ರಕಾಶನ, ಹರಿವು ಬುಕ್ಸ್‌, ಅಯೋಧ್ಯ ಪ್ರಕಾಶನ, ಅಭಿನವ, ಅಮೂಲ್ಯ ಪುಸ್ತಕ, ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನ, ಕದಂಬ ಪ್ರಕಾಶನ

ಬಿಡುಗಡೆಯಾಗಲಿರುವ ವಿಸ್ತಾರ ಪ್ರಕಾಶನದ ನೂತನ ಪುಸ್ತಕಗಳು

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಸ್ತಾರ ಪ್ರಕಾಶನದ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿವೆ.
1. ಕುಣಿಯೇ ಜೀವ : ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಸಹಯೋಗದಲ್ಲಿ ನಡೆಸಿದ್ದ ವಿಸ್ತಾರ ನ್ಯೂಸ್
ಯುಗಾದಿ ಕಥಾಸ್ಪರ್ಧೆ 2023ರ ಬಹುಮಾನಿತ ಕಥೆಗಳ ಸಂಕಲನ
2. ನಮ್ಮದೇ ಕಥೆಗಳು: ಲೇಖಕರು: ಕೃಷ್ಣ ಭಟ್ ಅಳದಂಗಡಿ
3.ರಾಜಮಾರ್ಗ: ಪ್ರೇರಣಾದಾಯಕ ಕಥೆಗಳು ಲೇಖಕರು: ರಾಜೇಂದ್ರ ಭಟ್ ಕೆ
4. ಅಮ್ಮ ಹೇಳುವ ಚಂದದ ಕಥೆಗಳು: ಲೇಖಕರು: ಅಲಕಾ ಕಟ್ಟೆಮನೆ

ಮಕ್ಕಳಿಗೆ ನಾನಾ ಮನರಂಜನೆಗಳ ಮಹಾಲೋಕ

ಯುವಕ ಸಂಘ, ಸಾಂಸ್ಕೃತಿಕ ಸಂಘಟನೆಗಳಿಂದ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ. ವಿಶೇಷ ಸ್ಪರ್ಧೆ ಮತ್ತು ಬಹುಮಾನಗಳಿವೆ. ಪುಟ್ಟ ಮಕ್ಕಳಿಗೆ ಆಟವಾಡಲು ಆಕರ್ಷಕ ಸಾಧನಗಳು ಇರಲಿವೆ.

ಹೊಟ್ಟೆ ತಣ್ಣಗಾಗಿಸುವ ಸವಿ ಸಂಭ್ರಮ

Vistara Kannada Sambharama foods

ವಿಸ್ತಾರ ಸಂಭ್ರಮದಲ್ಲಿ ಮೆದುಳಿಗೆ ಮಾತ್ರವಲ್ಲ, ಹೊಟ್ಟೆಯನ್ನೂ ತಣ್ಣಗೆ ಮಾಡುವ ವಿಶೇಷ ಆಹಾರ ಖಾದ್ಯಗಳ ಲೋಕವಿದೆ.
 ಬಾಯಿಯಲ್ಲಿ ನೀರೂರಿಸುವ ರಾಜ್ಯದ ನಾನಾ ಭಾಗಗಳ ಆಹಾರ ಮಳಿಗೆಗಳು
 ಮೈಸೂರು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ವಿಶೇಷ ತಿಂಡಿಗಳು
 ಸಾವಯವ ಆಹಾರ ಪದಾರ್ಥಗಳು, ದೇಸಿ ಉತ್ಪನ್ನಗಳ ವಿಶೇಷ ಮಳಿಗೆಗಳು ಇರಲಿವೆ.

ಜಾನಪದ ಕಲಾ ತಂಡದ ಪ್ರದರ್ಶನ: ಡಿಜಿಟಲ್ 3ಡಿ ಶೋ ಇರಲಿದೆ

ಸ್ಥಳದಲ್ಲೇ ನಿಮ್ಮ ಚಿತ್ರ ಬಿಡಿಸುತ್ತಾರೆ ಐವರು ಕಲಾವಿದರು

ಖ್ಯಾತ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ, ಜಿ.ಎಸ್‌. ರಂಗನಾಥ್‌, ರಘುಪತಿ ಶೃಂಗೇರಿ, ವಿ.ಆರ್‌.ಸಿ. ಶೇಖರ್‌, ರವಿ ಪೂಜಾರಿ ಅವರು ಕೆಲವೇ ನಿಮಿಷದಲ್ಲಿ ನಿಮ್ಮ ಪೆನ್ಸಿಲ್‌ ಸ್ಕೆಚ್‌ ರೆಡಿ ಮಾಡಲಿದ್ದಾರೆ.

ಇವರು ನಮ್ಮ ಪಾರ್ಟ್ನರ್‌ಗಳು

91.1 ಎಫ್‌ಎಂ ರೇಡಿಯೊ ಸಿಟಿ ನಮಗೆ ರೇಡಿಯೊ ಪಾರ್ಟ್ನರ್‌ ಆಗಿದ್ದರೆ, ಡೈಲಿಹಂಟ್‌ ಡಿಟಿಟಲ್‌ ಪಾರ್ಟ್ನರ್‌ ಆಗಿರಲಿದೆ.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸಹಕರಿಸುವ ಸಂಘ ಸಂಸ್ಥೆಗಳು ಇವು

■ ಬೆಂಗಳೂರು ಅಪಾರ್ಟ್​ಮೆಂಟ್‌ ಒಕ್ಕೂಟ
■ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)
■ ರೋಟರಿ ಸಂಸ್ಥೆ, ಬೆಂಗಳೂರು
■ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ
■ ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ
■ ಶಿ ಫಾರ್‌ ಸೊಸೈಟಿ
■ ರಾಜ್ಯ ಆಗಮಿಕರ ಹಾಗೂ ಅರ್ಚಕರ ಸಂಘ
■ ರಾಜ್ಯ ಕಬ್ಬು ಬೆಳೆಗಾರರ ಸಂಘ
■ ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ
■ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
■ ಕರ್ನಾಟಕ ಹೋಟೆಲ್ ಮಾಲೀಕರ ಸಂಘ
■ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ
■ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಘಟಕ
■ ಕರ್ನಾಟಕ ಕಾರ್ಮಿಕ ಲೋಕ
■ ಕನ್ನಡ ಗೆಳೆಯರ ಬಳಗ
■ ಕೇಂದ್ರೀಯ ಸದನ ಕನ್ನಡ ಸಂಘ
■ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)
■ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)
■ ಕರ್ನಾಟಕ ಓಲಾ ಉಬರ್ ಚಾಲಕರ ಸಂಘ
■ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ
■ ಕೇಬಲ್ ಆಪರೇಟರ್ ಸಂಘ
■ ಬಿಬಿಎಂಪಿ ನೌಕರರ ಸಂಘ
■ ವಿಷ್ಣು ಸೇನಾ ಸಮಿತಿ
■ ವೀರಲೋಕ ಸಂಸ್ಥೆ
■ ಆಸರೆ ಫೌಂಡೇಷನ್
ಇದನ್ನೂ ಓದಿ: Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಶ್ರೀಕೃಷ್ಣನ ದರ್ಶನ; ಇಲ್ಲಿದೆ Photo Gallery!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

Dasara Elephant Arjuna: ಕಾರ್ಯಾಚರಣೆ ವೇಳೆ ಕಾಡಾನೆ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ದಸರಾ ಆನೆ ಅರ್ಜುನ ಸಾವಿಗೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

VISTARANEWS.COM


on

Dasara Elephant Arjuna
Koo

ಬೆಂಗಳೂರು: ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗದ ವಿರುದ್ಧ ಹೋರಾಡಿ ಮೃತಪಟ್ಟ ದಸರಾ ಆನೆ ಅರ್ಜುನನ (Dasara Elephant Arjuna) ನಿಧನಕ್ಕೆ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸೇರಿ ಗಣ್ಯರು ಕಂಬನಿ ಮಿಡಿದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ನಟ ದರ್ಶನ್‌ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಮೃತಪಟ್ಟಿದೆ. ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ. ಹೀಗಾಗಿ ಜನರ ಪ್ರೀತಿಪಾತ್ರವಾಗಿದ್ದ ದಸರಾ ಆನೆಯ ಸೇವೆಯನ್ನು ಗಣ್ಯರು ಸ್ಮರಿಸಿದ್ದಾರೆ.

‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು ಎಂದ ಸಿಎಂ

ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ.‌

ಇದನ್ನೂ ಓದಿ | Dasara Elephant Arjuna: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಂತಾಪ

ದಸರಾ ಆನೆ ಅರ್ಜುನ ಸಾವಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ. ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದ್ದಾರೆ.

ಅರ್ಜುನ ಮರಣದ ಸುದ್ದಿ ತೀವ್ರ ನೋವುಂಟು ಮಾಡಿದೆ: ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ, ಆನೆಗಳ ಕಾರ್ಯಾಚರಣೆ ವೇಳೆ ವೀರ ಮರಣರಾಗಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ

ಮರೆಯಲಾರದ ನೆನಪುಗಳನ್ನು ಬಿಟ್ಟುಹೋದ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ‌ ಹೊತ್ತಿದ್ದ ಅರ್ಜುನ ಆನೆ, ಸಕಲೇಶಪುರ ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್‌ನಲ್ಲಿ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಸಂಗತಿ ತಿಳಿದು ದುಃಖವಾಗಿದೆ. ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟುಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ ಎಂದ ದರ್ಶನ್

‌ನಟ ದರ್ಶನ್‌ ಪ್ರತಿಕ್ರಿಯಿಸಿ, 8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ! ಓಂ ಶಾಂತಿ!

ಇದನ್ನೂ ಓದಿ | ಕಾರ್ಯಾಚರಣೆಗೆ ಅರ್ಜುನ ಬಳಕೆ ಕಾನೂನುಬಾಹಿರ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗೂಳಿಗೌಡ ಆಗ್ರಹ

ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ: ಬಿ.ವೈ. ವಿಜಯೇಂದ್ರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಂದಿಸಿ, ವಿಶ್ವ ವಿಖ್ಯಾತ ನಾಡಹಬ್ಬ ದಸರೆಯ ಮುಖ್ಯ ಆಕರ್ಷಣೆ ಜಂಬೂಸವಾರಿಯಲ್ಲಿ ಸತತ ಎಂಟು ಬಾರಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುತ್ತಿದ್ದ ಗಜರಾಜ ಅರ್ಜುನ ಸಾವನ್ನಪ್ಪಿರುವ ಸಂಗತಿ ಬೇಸರ ತರಿಸಿದೆ.
ಅರ್ಜುನ ನಾಡಿನ ಜನರ ನೆನಪಲ್ಲಿ ಬಹುಕಾಲ ಉಳಿಯಲಿದ್ದಾನೆ ಎಂದು ತಿಳಿಸಿದ್ದಾರೆ.

ಅತ್ಯಂತ ದುರಾದೃಷ್ಟಕರ ಘಟನೆ: ಈಶ್ವರ್‌ ಖಂಡ್ರೆ

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪ್ರತಿಕ್ರಿಯಿಸಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿನ ಸುದ್ದಿ ತಿಳಿದು ಬಹಳ ದುಃಖವಾಗಿದೆ. ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ. ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ. ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಕೂಡಾ ಪಡೆದಿತ್ತು. ತಾಯಿ ಶ್ರೀ ಚಾಮುಂಡೇಶ್ವರಿಯು ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿವಮೊಗ್ಗ

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Shivamogga News: ಸೊರಬ ತಾಲೂಕಿನ ಮಾವಲಿ ಗ್ರಾಮದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

VISTARANEWS.COM


on

Hori festival in maavali at soraba taluk
ಸೊರಬ ತಾಲೂಕಿನ ಮಾವಲಿ ಗ್ರಾಮದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯಿಂದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ ಆಚರಿಸಲಾಯಿತು.
Koo

ಸೊರಬ: ತಾಲೂಕಿನ ಮಾವಲಿ ಗ್ರಾಮದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು (Bull Bullying Festival) ವಿಜೃಂಭಣೆಯಿಂದ ಆಚರಿಸಲಾಯಿತು.

ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ‌ ಜಿಲ್ಲೆಗಳಿಂದ ಹೋರಿ‌ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ಮೈನವಿರೇಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.

ಇದನ್ನೂ ಓದಿ: Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

ಅಖಾಡದಲ್ಲಿ ಚಂದ್ರಗುತ್ತಿಯ ಚಂದ್ರಗುತ್ಯಮ್ಮ, ಅರಿಶಿನಗೇರಿ ವೈಭವ, ಮಾವಲಿಯ ಸೋಮ, ಆಯನೂರು ಕಾ ರಾಜ, ಉರುಗನಹಳ್ಳಿ ಗೂಳಿ, ಹಕ್ಕಲಗೇರಿ ಗರುಡ, ಬಾರಂಗಿ ಕೌರವ, ಹಿರೇಜಂಬೂರು ಸಿದ್ಧ, ಚಿಕ್ಕಜಂಬೂರು ಶಬರಿಹುಲಿ, ತಾಳಗುಂದ ವೀರಭದ್ರ, ಮಾವಲಿ ಜೈ ಶ್ರೀರಾಮ, ಅಂಡಿಗೆ ಆರ್.ಎಂ.ಡಿ, ಶಿವಮೊಗ್ಗದ ಶಿವನಂದಿ, ಶಿವಮೊಗ್ಗದ ಹಿಂದೂ ಸಾಮ್ರಾಟ್, ಹೊನ್ನಾಳಿ ವಿರಾಟ್, ಗಾಮದ ಭೀಮಸರ್ಕಾರ್, ಹುಲುಗಿನಕೊಪ್ಪದ ಏಳುಕೋಟಿ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.

ಇದನ್ನೂ ಓದಿ: Football Tournament : ರಿಲಯನ್ಸ್ ಫೌಂಡೇಶನ್ ಟ್ರೋಫಿ ಗೆದ್ದ ಸೇಂಟ್​ ಜೋಸೆಫ್ಸ್​​ ಕಾಲೇಜು

ಹೋರಿ ಹಬ್ಬ ಆಯೋಜಿಸಿದ್ದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

Continue Reading

ಉತ್ತರ ಕನ್ನಡ

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Sirsi News: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅನುಷ್ಠಾನವಾದ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಪ್ರತಿದಿನ ನಾನಾ ಭಾಗಗಳಿಂದ 2 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಜಿಲ್ಲೆಯಲ್ಲಿ ಖಾಸಗಿ ಬಸ್ ವ್ಯವಸ್ಥೆ ಇಲ್ಲದೇ ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ ಸ್ಥಳೀಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ದೊರಕದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.

VISTARANEWS.COM


on

Shakti Scheme Effect, In Uttara Kannada district locals and students are facing problems without buses
ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಡುತ್ತಿರುವುದು.
Koo

ಭಾಸ್ಕರ್ ಆರ್ ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದಾಗಿ (Shakti Scheme) ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳೇ ಹೆಚ್ಚಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada District) ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಸ್ಥಳೀಯ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ದೊರಕದೇ ಹಿಡಿ ಶಾಪ ಹಾಕುವಂತಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸುಗಳೇ ಪ್ರಯಾಣಿಕರಿಗೆ ಆಧಾರ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಉಚಿತ ಬಸ್ ವ್ಯವಸ್ಥೆಯಿಂದಾಗಿ ಜಿಲ್ಲೆಗೆ ಬರುವ ಮಹಿಳಾ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಾನಾ ಭಾಗಗಳಿಂದ ಪ್ರತಿ ದಿನ 2 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಸ್ಥಳೀಯವಾಗಿ ತೆರಳುವ ಬಸ್‌ಗಳ ಮಾರ್ಗ ಬದಲು ಮಾಡಿದ್ದು, ಇದರಿಂದ ಹಳ್ಳಿಗಾಡಿಗೆ ತೆರಳುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷದ ಐವತ್ತು ಸಾವಿರ ಪ್ರಯಾಣಿಕರು ಪ್ರಯಾಣಿಸುತಿದ್ದರು. ಆದರೆ ಶಕ್ತಿ ಯೋಜನೆ ಅನುಷ್ಠಾನ ಆದ ನಂತರ ಇದರ ಸಂಖ್ಯೆ ಎರಡು ಲಕ್ಷದ ಮೂವತ್ತೈದು ಸಾವಿರಕ್ಕೂ ಹೆಚ್ಚಾಗಿದೆ. ಅದರಲ್ಲಿ ಪ್ರತಿ ದಿನ 50 ಸಾವಿರದವರೆಗೆ ಮಹಿಳಾ ಪ್ರಯಾಣಿಕರೇ ಪ್ರಯಾಣಿಸುತಿದ್ದು, ಜಿಲ್ಲೆಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆ ಆದಾಯವು 45 ಲಕ್ಷದಿಂದ 70 ಲಕ್ಷ ಏರಿಕೆ ಕಂಡಿದೆ.

ಆದರೆ ಬಸ್‌ಗಳ ಹಾಗೂ ಚಾಲಕರ ಕೊರತೆ ಇರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ 120 ಚಾಲಕ-ನಿರ್ವಾಹಕರ ಅವಶ್ಯಕತೆ ಇದ್ದು, 50 ಬಸ್‌ಗಳು ಹೆಚ್ಚುವರಿ ಬೇಕಾಗಿದೆ. ಹೀಗಿದ್ದರೂ ಹತ್ತು ವರ್ಷಕ್ಕೂ ಹೆಚ್ಚು ಮೀರಿದ 70 ಕ್ಕೂ ಹೆಚ್ಚು ಬಸ್‌ಗಳಿದ್ದು ಇವುಗಳ ಜತೆ ಹೊರ ರಾಜ್ಯಕ್ಕೆ ತೆರಳುವ ಬಸ್‌ಗಳನ್ನು ಸಹ ಸ್ಥಳೀಯ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ . ಇನ್ನು ಗುತ್ತಿಗೆ ಆಧಾರದ ಮೇಲೆ 50 ಜನ ಖಾಸಗಿ ಚಾಲಕರನ್ನು ಸಹ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಬಸ್‌ಗಳ ಕೊರತೆಯಿಂದ 50 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಯುವ್ಯ ಸಾರಿಗೆ ಪರದಾಡುತ್ತಿದೆ.

ಶಿರಸಿ ಬಸ್‌ ಡಿಪೋ

ಒಟ್ಟಾರೆ ಶಕ್ತಿ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಲಾಭವೇನೋ ಆಗುತ್ತಿದೆ. ಆದರೆ ಬಸ್‌ಗಳ ಕೊರತೆಯಿಂದಾಗಿ ಸ್ಥಳೀಯ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಡಕಾಗುತಿದ್ದು, ಪ್ರಯಾಣಿಕರು ಹಿಡಿ ಶಾಪ ಹಾಕುವಂತಾಗಿದೆ. ಇನ್ನಾದರೂ ಸಾರಿಗೆ ಇಲಾಖೆ ಇರುವ ಬಸ್‌ಗಳನ್ನು ಮಾರ್ಗ ಬದಲು ಮಾಡುವ ಬದಲು ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕಿದೆ ಎಂದು ಸ್ಥಳೀಯ ನಿವಾಸಿಯಾದ ಶ್ರೀಪತಿ ಹೆಗಡೆ ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ 50 ಜನ ಖಾಸಗಿ ಚಾಲಕರನ್ನು ಸಹ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಬಸ್‌ಗಳ ಕೊರತೆಯಿಂದ 50 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಮಹಿಳಾ ಪ್ರಯಾಣಿಕರ ಹಣವನ್ನು ಸರ್ಕಾರ ಭರಿಸುತ್ತಿದ್ದು, ಇಲಾಖೆ ಲಾಭದಾಯಕವಾಗಿದೆ. ಇನ್ನು ನಮ್ಮಲ್ಲಿಯ ಸಿಬ್ಬಂದಿಗಳ ನೇಮಕ ಆದರೆ ಇನ್ನೂ ಹೆಚ್ಚಿನ ಲಾಭದತ್ತ ಇಲಾಖೆ ಮುಂದುವರಿಯಲಿದೆ.

ಶ್ರೀನಿವಾಸ್ ಕೆ.ಎಚ್. ಡಿಸಿ, ವಾಯವ್ಯ ರಸ್ತೆ ಸಾರಿಗೆ ಇಲಾಖೆ. ಶಿರಸಿ ವಿಭಾಗ

Continue Reading

ಕರ್ನಾಟಕ

ಸುವರ್ಣಸೌಧಕ್ಕೆ ಶಾಶ್ವತ ವಿದ್ಯುತ್‌ ದೀಪಾಲಂಕಾರ; ಕಲರ್‌ಫುಲ್‌ ಫೋಟೊಗಳು ಇಲ್ಲಿವೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ಶಾಶ್ವತ ವಿದ್ಯುತ್ ಅಲಂಕಾರಕ್ಕೆ ಸೋಮವಾರ ಚಾಲನೆ ನೀಡಿದರು.

VISTARANEWS.COM


on

Suvarna Vidhana Soudha
Koo

ಬೆಳಗಾವಿ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ನಗರದ ಸುವರ್ಣಸೌಧ (Suvarna Vidhana Soudha) ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಇನ್ನು ಮುಂದೆ ವರ್ಷ ಪೂರ್ತಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಇರಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣಸೌಧದ ಶಾಶ್ವತ ವಿದ್ಯುತ್ ಅಲಂಕಾರವನ್ನು ಸೋಮವಾರ ಉದ್ಘಾಟಿಸಿದರು.

ಈ ವೇಳೆ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸೇರಿ ಹಲವು ಸಚಿವರು ಮತ್ತು ಎಲ್ಲಾ ಶಾಸಕರು ಉಪಸ್ಥಿತರಿದ್ದರು.

ಈವರೆಗೂ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಮಾತ್ರ ಸುವರ್ಣ ವಿಧಾನಸೌಧವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ವರ್ಷ ಪೂರ್ತಿ ವಿದ್ಯುತ್ ದೀಪಗಳಿಂದ ಸುವರ್ಣಸೌಧ ಕಂಗೊಳಿಸಲಿದೆ. ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲು ವರ್ಷವಿಡಿ ಲೈಟಿಂಗ್ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Continue Reading
Advertisement
Dasara Elephant Arjuna
ಕರ್ನಾಟಕ12 mins ago

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

]cashless medical treatment for accident victims by central Government
ದೇಶ18 mins ago

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

Cricket news
ಕ್ರಿಕೆಟ್34 mins ago

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Hori festival in maavali at soraba taluk
ಶಿವಮೊಗ್ಗ48 mins ago

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Shakti Scheme Effect, In Uttara Kannada district locals and students are facing problems without buses
ಉತ್ತರ ಕನ್ನಡ49 mins ago

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Rohit Sharma
ಕ್ರಿಕೆಟ್1 hour ago

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Suvarna Vidhana Soudha
ಕರ್ನಾಟಕ1 hour ago

ಸುವರ್ಣಸೌಧಕ್ಕೆ ಶಾಶ್ವತ ವಿದ್ಯುತ್‌ ದೀಪಾಲಂಕಾರ; ಕಲರ್‌ಫುಲ್‌ ಫೋಟೊಗಳು ಇಲ್ಲಿವೆ

BY Vijayendra Channaraj Hattiholi
ಕರ್ನಾಟಕ1 hour ago

BY Vijayendra : ಪೃಥ್ವಿ ಸಿಂಗ್‌ಗೆ ಇರಿತ ಪ್ರಕರಣ; ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಆಗ್ರಹ

Virat kohli
ಕ್ರಿಕೆಟ್2 hours ago

Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

Prtithvi singh attacked
ಕರ್ನಾಟಕ2 hours ago

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ17 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌