Covid Scam : ಬಿಬಿಎಂಪಿ ಅಧಿಕಾರಿಗಳ ನಿದ್ದೆಗೆಡಿಸಿದ ಕೋವಿಡ್‌ ಹಗರಣದ ತನಿಖೆ - Vistara News

ಕರ್ನಾಟಕ

Covid Scam : ಬಿಬಿಎಂಪಿ ಅಧಿಕಾರಿಗಳ ನಿದ್ದೆಗೆಡಿಸಿದ ಕೋವಿಡ್‌ ಹಗರಣದ ತನಿಖೆ

Covid Scam : ಕೋವಿಡ್‌ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ ಮಾಡಲಾದ 1500 ಕೋಟಿ ರೂ.ಗಳ ಖರ್ಚಿನ ಲೆಕ್ಕ ಕೇಳುತ್ತಿರುವುದು ಬಿಬಿಎಂಪಿ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

VISTARANEWS.COM


on

Covid 19 enquiry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2020 ಮತ್ತು 2021ರಲ್ಲಿ ಇಡೀ ಜಗತ್ತನ್ನು ಕಾಡಿದ ಕೋವಿಡ್‌ 19ನ (Covid 19 Enquiry) ಪಶ್ಚಾತ್‌ ಕಂಪನಗಳು ಈಗ ಬೆಂಗಳೂರಿನ ಬಿಬಿಎಂಪಿ ಅಧಿಕಾರಿಗಳನ್ನು (BBMP officers) ಕಾಡಲು ಶುರುವಾಗಿದೆ. ಆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ನೇಮಕಗೊಂಡಿರುವ ತನಿಖಾ ತಂಡ (Covid scam) ಈಗ ಎಲ್ಲ ದಾಖಲೆಗಳನ್ನು ಕೇಳುತ್ತಿದೆ.

ಕೊರೊನಾ ಉತ್ತುಂಗ ಸ್ಥಿತಿಯಲ್ಲಿದ್ದಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೋವಿಡ್ ಸೋಂಕಿತರನ್ನು ಕ್ವಾರಂಟೈನ್ ಮಾಡುವುದು, ಸೋಂಕಿತರು ವಾಸಿಸುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್‌ ಎಂದು ಸೀಲ್‌ ಮಾಡುವುದು, ಸೋಕಿಂತರಿಗಾಗಿ ಹೆಲ್ತ್ ಕೇರ್ ಸೆಂಟರ್ ವ್ಯವಸ್ಥೆ ಮಾಡುವುದು.. ಹೀಗೆ ಆರೋಗ್ಯ ರಕ್ಷಣೆಗಾಗಿ ಸುಮಾರು 1500 ಕೋಟಿ ರೂ. ಖರ್ಚು ಮಾಡಿದೆ. ಇದೀಗ ಸಾವಿರಾರು ಕೋಟಿ ರೂ. ವ್ಯವಹಾರದ ತನಿಖೆಯನ್ನು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಕೈಗೆತ್ತಿಕೊಂಡಿದ್ದಾರೆ.

ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಡಾ ಕೆ ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದಾಗ ಕೋವಿಡ್ ಹಗರಣ ಬಹಳ ದೊಡ್ಡ ಸುದ್ದಿ ಮಾಡಿತ್ತು. ಹಿಂದಿನ ಸರ್ಕಾರದಲ್ಲಿ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸಾರ್ವಜನಿಕ ಹಣ ದುರುಪಯೋಗದ ಆರೋಪ ಕೇಳಿಬಂದಿತ್ತು.

Covid 19 enquiry
Covid 19 enquiry

ಅದೀಗ ಮತ್ತೆ ಸುದ್ದಿಯಲ್ಲಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಟೈಮ್ ನಲ್ಲಿ ಮಾಡಲಾದ ಖರ್ಚು ವೆಚ್ಚದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಎಲ್ಲದಕ್ಕೂ ಲೆಕ್ಕ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೊದಲ ಅಲೆಯಲ್ಲಿ ಒಂದು ಏರಿಯಾ ಕಂಟೈನ್ಮೆಂಟ್ ಮಾಡಲು ದಿನಕ್ಕೆ 40 ಲಕ್ಷದವರೆಗೂ ಖರ್ಚು ಮಾಡಿದ್ದು, ಒಟ್ಟಾರೆಯಾಗಿ ಕಂಟೈನ್ಮೆಂಟ್ ಜೋನ್‌ಗೆ ಸುಮಾರು 300 ಕೋಟಿ ಕೋಟಿಯಷ್ಟು ಖರ್ಚು ಮಾಡಲಾಗಿದೆ.

ಇತ್ತ ಹೆಲ್ತ್ ಕೇರ್ ಸೆಂಟರ್ ನಿರ್ಮಾಣಕ್ಕೆ, ಬೆಡ್ ಹಾಗೂ ಆಕ್ಸಿಜನ್ ಗೆ ಸುಮಾರು 500 ಕೋಟಿ ಖರ್ಚು ಮಾಡಲಾಗಿತ್ತು. ಸ್ಯಾನಿಟೈಸೇಷನ್‌, ಮಾಸ್ಕ್, ಊಟ, ಹೋಟೆಲ್ ಕ್ವಾರಂಟೈನ್ ಗೆಲ್ಲ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಎಲ್ಲಾ ಸೇರಿ ಸುಮಾರು ಒಂದೂವರೆ ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಕೋವಿಡ್‌ ಟೈಮ್‌ ಎಂಬ ನೆಪದಲ್ಲಿ ಒಂದಕ್ಕೆ ಮೂರು ಪಟ್ಟು ಖರ್ಚು ಮಾಡಲಾಗಿದೆ. ಇದೀಗ ಅದೇ ಅಧಿಕಾರಿಗಳಿಗೆ ಕಂಟಕವಾಗುವ ಸಾಧ್ಯತೆಯಿದೆ.

ವಾಸ್ತವಿಕ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ದರ ನೀಡಿರುವ ಕಾರಣ ಅಧಿಕಾರಿಗಳು ದಾಖಲೆಗಳನ್ನು ನೀಡಲು ಕಷ್ಟಪಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್ ನೀಡಿರುವ ತನಿಖಾ ಸಮಿತಿ ಎಲ್ಲಾ ಮೂಲ ದಾಖಲೆ ನೀಡುವಂತೆ ಸೂಚನೆ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ದರದಲ್ಲಿ ನೀಡಲಾದ ಗುತ್ತಿಗೆ ಬಗ್ಗೆ ಹೇಗೆ ಮಾಹಿತಿ ನೀಡೋದು ಅಂತಾ ತಲೆ ಕೇಡಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Actor Darshan : ರೇಣುಕಾಸ್ವಾಮಿ ಫೋಟೊಗಳು ನೈಜವಲ್ಲ!ಮತ್ತೆ ಎಫ್‌ಎಸ್‌ಎಲ್ ಮೊರೆ ಹೋದ ಖಾಕಿ ಪಡೆ

Actor Darshan : ರೇಣುಕಾಸ್ವಾಮಿ ಫೋಟೊಗಳು ನೈಜವಲ್ಲ ಇಂತಹದೊಂದು ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಪೊಲೀಸರು ಮತ್ತೆ ಎಫ್‌ಎಸ್‌ಎಲ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೆ ಕೋರ್ಟ್ ಪ್ರಕ್ರಿಯೆಗಳು ಶುರುವಾಗಿದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ವಾದ-ಪ್ರತಿವಾದಗಳು ಜೋರಾಗಿದೆ. ಆದರೆ ಈಗ ಪ್ರಮುಖವಾದ ಎವಿಡೆನ್ಸ್ ಒಂದು ನೈಜನಾ ಅಥವಾ ಸುಳ್ಳಾ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಎಲ್ಲಾ ಕೋರ್ಟ್ ಕಲಾಪಗಳಲ್ಲಿ ನಡೆಯುವಂತೆ ಈ ಪ್ರಕರಣದಲ್ಲೂ ಕೂಡ ಮುಂದುವರೆದಿದೆ. ಮೊನ್ನೆಯಷ್ಟೆ ಪೊಲೀಸರು ಕಲೆ ಹಾಕಿದ್ದ ವಸ್ತ್ರಗಳು, ಅದರ ಮೇಲಿನ ರಕ್ತದ ಕಲೆಗಳೆಲ್ಲೂ ಸುಳ್ಳು ಸಾಕ್ಷಿಯಾಗಿದೆ ಎಂದು ನಟ ದರ್ಶನ್‌ (Actor Darshan) ಪರ ವಕೀಲರು ವಾದ ಮಂಡಿಸಿದ್ದರು. ಈಗ ಅದೊಂದು ಫೋಟೊ ಮೇಲೂ ಆರೋಪ ಶುರುವಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ ಮತ್ತಷ್ಟು ಸಾಕ್ಷಿಗಳ ಬಗ್ಗೆ ಧೃಡತೆ ಪತ್ರಗಳು ಇನ್ನೂ ಪೊಲೀಸರ ಕೈ ಸೇರಿಲ್ಲ. ಹೀಗಾಗಿ ಈಗ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಿರುವ ಹಾಗೂ ಲಗತ್ತಿಸಿರುವ ರೇಣುಕಾಸ್ವಾಮಿಯ ಫೋಟೊಗಳ ಬಗ್ಗೆ ದರ್ಶನ್‌ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ಗಳನ್ನು ರಿಟ್ರೀವ್ ಮಾಡಿದಾಗ ಕೃತ್ಯದ ಸಂಧರ್ಭದಲ್ಲಿ ತೆಗೆದಿದ್ದ ರೇಣುಕಾಸ್ವಾಮಿ ಕೈ ಮುಗಿದು ಕೂತಿರುವ ಫೋಟೊ ಹಾಗು ಸಾವನ್ನಪ್ಪಿದ ಬಳಿಕ ಶವವನ್ನು ಮಲಗಿಸಿದ್ದ ಫೋಟೋ ಸಿಕ್ಕಿತ್ತು.

ಇದನ್ನೂ ಓದಿ: Actor Darshan : ದರ್ಶನ್‌ ಬೇಲ್‌ ಭವಿಷ್ಯ! ಹೈದರಾಬಾದ್ CFSLನಲ್ಲೇ ಇರುವ ನಟನ ಐಫೋನ್‌ನಲ್ಲಿ ಅಡಗಿದ್ಯಾ ಸತ್ಯ?

ಈ ಫೋಟೋ ಕೃತ್ಯದ ಸಂದರ್ಭದಲ್ಲಿ ತೆಗೆಯಲಾಗಿದೆ ಎಂದು ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಫೋಟೊಗಳು ಆರ್ಟಿಫಿಷಲ್ ಇಂಟಲಿಜೆನ್ಸ್‌ನಿಂದ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ಅಸಲಿಯತ್ತು ತಿಳಿಯಲು ಪೊಲೀಸರು ಈಗ ರಿಪೋರ್ಟ್ ಬೇಗನೇ ಕೊಡುವಂತೆ ಎಫ್‌ಎಸ್‌ಎಲ್ ಮೊರೆ ಹೋಗಿದ್ದಾರೆ.

ಈಗಾಗಲೆ ಕಲೆ ಹಾಕಿರುವ ಸಾಕ್ಷಿಗಳಲ್ಲಿ ಈ ಫೋಟೊ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇದರ ದೃಢೀಕೃತ ವರದಿ ಅವಶ್ಯಕತೆ ಇದೆ. ಸದ್ಯ ಇಲ್ಲಿಯವರೆಗೂ ಫೋಟೊ ಹಾಗೂ ರಿಟ್ರೀವ್ ಮಾಡಿದ್ದ ವರದಿಯನ್ನು ಮಾತ್ರ ಚಾರ್ಜ್ ಶೀಟ್‌ನಲ್ಲಿ ಸಲ್ಲಿಕೆ ಮಾಡಲಾಗಿತ್ತು. ಎಫ್ ಎಸ್ ಎಲ್ ವರದಿ ಬಂದ ಬಳಿಕ ಅಡಿಷನಲ್ ಚಾರ್ಜ್ ಶೀಟ್‌ಅನ್ನು ಪೊಲೀಸರು ಸಲ್ಲಿಕೆ ಮಾಡಲಿದ್ದಾರೆ. ಸದ್ಯ ಕೋರ್ಟ್ ಟ್ರಯಲ್ ನಡೆಯುತ್ತಿದ್ದು, ಯಾವ್ಯಾವ ಸಾಕ್ಷಿಗಳು ಈ ಕೇಸ್‌ಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Bomb Threat : ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬಾಂಬ್ ಬೆದರಿಕೆ‌ E-Mails

Bomb Threat : ಹುಸಿ ಬಾಂಬ್ ಬೆದರಿಕೆ‌ E-Mailsಗಳು ಬೆಂಗಳೂರು ಪೊಲೀಸರಿಗೆ ತಲೆನೋವು ಆಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60ಕ್ಕೂ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಸದ್ಯ ಯಾವ ಪ್ರಕರಣದಲ್ಲೂ ಆರೋಪಿಗಳು ಸಿಕ್ಕಿಬಿದ್ದಿಲ್ಲ, ಎಲ್ಲವೂ ತನಿಖಾ ಹಂತದಲ್ಲೇ ಇರುವಾಗಲೇ ಮತ್ತೆ ಬೆದರಿಕೆ ಇ-ಮೇಲ್‌ ಬರುತ್ತಿವೆ.

VISTARANEWS.COM


on

By

Bomb threat e-mails a headache for Bengaluru police
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜಧಾನಿ ಬೆಂಗಳೂರು ಪೊಲೀಸರಿಗೆ ಬಾಂಬ್ ಬೆದರಿಕೆ‌ (Bomb Threat) ಇ-ಮೇಲ್‌ ಸಂದೇಶಗಳು ತಲೆನೋವು ತಂದಿದೆ. ಪದೆ ಪದೇ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನೆ ಬರುತ್ತಿದ್ದು,ಟೆನ್ಷನ್‌ ಹೆಚ್ಚು ಮಾಡಿದೆ. ಶಾಲೆಗಳು, ಹೋಟೆಲ್‌ಗಳು ನಂತರ ಕಾಲೇಜುಗಳಿಗೂ ಹುಸಿ ಬಾಂಬ್‌ ಬೆದರಿಕೆಗಳು ಬರುತ್ತಿವೆ. ಸದ್ಯ ಇ-ಮೇಲ್ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಇಲ್ಲೂ ಕೂಡ ವಿಪಿಎನ್ ಬಳಸಿ ಬೆದರಿಕೆ ಇ-ಮೇಲ್ ರವಾನೆ ಆಗುತ್ತಿದೆ.

ಅ.4ರಂದು ಮೂರು ಕಾಲೇಜಿಗೆ ಬಾಂಬ್ ಬೆದರಿಕೆ‌‌ ಇ-ಮೇಲ್ ಬಂದಿತ್ತು. ಹೀಗೆ ಇ-ಮೇಲ್‌ಗಳ ತನಿಖೆಗೆ ಸಾಲು ಸಾಲು ಸವಾಲು ಎದುರಾಗಿದೆ. ಮೈಕ್ರೋಸಾಪ್ಟ್ ಮೂಲಕ ನಕಲಿ ವಿಪಿಎನ್ ಬಳಸಿ ಇಮೇಲ್ ಕಳುಹಿಸಿರುವ ಶಂಕೆ ಇದೆ. ಐಪಿ ಅಡ್ರೆಸ್ ವಿವರ ನೀಡುವಂತೆ ಮೈಕ್ರೋಸಾಪ್ಟ್ ಕಂಪನಿಗೆ ಪೊಲೀಸರು ಪತ್ರ ಬರೆದಿದ್ದಾರೆ.

ಕಿಡಿಗೇಡಿಗಳು ವಿಪಿಎನ್ ಬಳಸಿ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸರ್ವರ್ ಪ್ರೊವೈಡರ್ ಕಂಪನಿಗಳು ಹಳೇ ಪ್ರಕರಣಗಳ ಮಾಹಿತಿಯೇ ನೀಡಿಲ್ಲ. ಅವುಗಳ ತನಿಖೆ ಇನ್ನು ಬಾಕಿ ಇರುವಾಗಲೇ ಮತ್ತೆ ಬೆದರಿಕೆ ಇ-ಮೇಲ್ ಶುರುವಾಗಿದೆ. ಹುಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು ನಿರ್ಲಕ್ಷ್ಯಿಸುವಂತಿಲ್ಲ ಎಂಬಾತಾಗಿದೆ.

ಈವರೆಗೆ ಬಂದ ಬೆದರಿಕೆ ಇ-ಮೇಲ್‌ ವಿವರ ಹೀಗಿದೆ

ಅಕ್ಟೋಬರ್ 4
ಬೆಂಗಳೂರಿನ‌ ಮೂರು ಕಾಲೇಜಿಗೆ ಏಕಾಕಾಲಕ್ಕೆ ಹುಸಿ ಬಾಂಬ್ ಬೆದರಿಕೆ‌‌ ಮೇಲ್‌ ಬಂದಿತ್ತು. ಬಿ.ಎಂ.ಎಸ್‌ ಕಾಲೇಜು, ಎಂ.ಎಸ್‌.ರಾಮಯ್ಯ ಕಾಲೇಜು, ಬಿಐಟಿ​ ಕಾಲೇಜಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ‌

ಸೆಪ್ಟಂಬರ್ 28
ತಾಜ್ ವೆಸ್ಟ್ ಎಂಡ್ ಹೊಟೇಲ್‌ಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

ಸೆಪ್ಟಂಬರ್ 18
ಅಶೋಕ ನಗರದ ಸೈನಿಕ ಶಾಲೆಗೆ ಹುಸಿ ಬಾಂಬ್ ಬೆದರಿಕೆ‌ ಮೇಲ್

ಆಗಸ್ಟ್ 29
ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗೆ ಹುಸಿ‌ ಬಾಂಬ್ ಬೆದರಿಕೆ

ಆಗಸ್ಟ್ 13
ಜೆಪಿ‌ ನಗರದ ಕಂಪನಿಯೊಂದಕ್ಕೆ ಹುಸಿ ಬಾಂಬ್ ಬೆದರಿಕೆ‌ ಮೇಲ್

ಮೇ 23
ಎಲೆಕ್ಟ್ರಾನಿಕ್ ಸಿಟಿ ಹೋಟೆಲ್ ಸೇರಿ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ

ಮೇ 14
ಅಮೃತಹಳ್ಳಿಯ ಕೆಂಪಾಪುರದ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

ಮೇ 12
ಆರು ಆಸ್ಪತ್ರೆಗಳಿಗೆ ಬಾಂಬ್ ಇಟ್ಟಿದ್ದಾಗಿ ಬೆಂಗಳೂರು ಪೊಲೀಸರಿಗೆ ಹುಸಿ ಇ-ಮೇಲ್

ಏಪ್ರಿಲ್ 29
ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಬಾಂಬ್ ಇ-ಮೇಲ್

ಮಾರ್ಚ್ 29
ಆನೇಕಲ್ ಸ್ಕೂಲ್​ಗೆ ಬಾಂಬ್ ಬೆದರಿಕೆ ಇ-ಮೇಲ್

ಮಾರ್ಚ್ 6
ಸಿಎಂ, ಡಿಸಿಎಂ, ಗೃಹಸಚಿವರಿಗೆ ಹಣಕ್ಕೆ ಬೇಡಿಕೆ ಇಟ್ಟು ಹುಸಿ ಬಾಂಬ್ ಬೆದರಿಕೆ ಇ-ಮೇಲ್.

2023 ಡಿಸೆಂಬರ್ 11
ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟ ಬೆದರಿಕೆ

2023 ಡಿಸೆಂಬರ್ 1
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60ಕ್ಕೂ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಸದ್ಯ ಯಾವ ಪ್ರಕರಣದಲ್ಲೂ ಆರೋಪಿಗಳು ಸಿಕ್ಕಿಬಿದ್ದಿಲ್ಲ, ಎಲ್ಲವೂ ತನಿಖಾ ಹಂತದಲ್ಲೇ ಇದೆ.

Continue Reading

ಬಾಗಲಕೋಟೆ

Road Accident : ಬೈಕ್‌ ಸವಾರನ ಮುಖಕ್ಕೆ ಟ್ರ್ಯಾಕ್ಟರ್‌ ಬಡಿದು ಸಾವು;‌ ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್

Road Accident : ಬಾಗಲಕೋಟೆಯಲ್ಲಿ ಪ್ರತ್ಯೇಕ ಕಡೆಗಳಲ್ಲಿ ಅಪಘಾತ ಸಂಭವಿಸಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಧಾರವಾಡದಲ್ಲೂ ಚಿಗರಿ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟರೆ, ಲಾರಿಗೆ ಟ್ಯಾಂಕರ್‌ ಗುದ್ದಿದೆ.

VISTARANEWS.COM


on

By

Road Accident
Koo

ಬಾಗಲಕೋಟೆ: ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಕ್ಕೂರಿನಲ್ಲಿ ಬೈಕ್ ಸವಾರನ ಮುಖಕ್ಕೆ ಟ್ರ್ಯಾಕ್ಟರ್‌ ನೇಗಿಲು ಬಡಿದಿದೆ. ಪರಿಣಾಮ ಚಿಕ್ಕೂರ ಗ್ರಾಮದ ಶಿವಾನಂದ ಪೂಜಾರ (27) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಶಿವಾನಂದ ಹೋಂ ಗಾರ್ಡ್ ಆಗಿದ್ದ. ಲೋಕಾಪುರದಿಂದ ಚಿಕ್ಕೂರಗೆ ಹೋಗುವ ಮಾರ್ಗ ಮಧ್ಯ ದುರ್ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಮುಖದ ಭಾಗ ನಜ್ಜುಗುಜ್ಜಾಗಿ ಸವಾರ ಮೃತಪಟ್ಟಿದ್ದಾನೆ. ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕ್ರೂಸರ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸಾವು

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬೆಳಗಲಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬೆಳಗಲಿ ‌ಗ್ರಾಮದ ಬಳಿ ತಡರಾತ್ರಿ ಕ್ರೂಸರ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಂಕರ್ ಕಡಬಲ್ಲವರ್, ಮಹಾನಿಂಗ ನಂದೆಪ್ಪನವರ ಮೃತರು. ಮುಧೋಳದಿಂದ ಮಹಾಲಿಂಗಪುರ ಕಡೆಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ.

ಹಳಿ ತಪ್ಪಿದ ಡೀಸೆಲ್‌ ಗೂಡ್ಸ್‌ ರೈಲು

ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಮಹಾರಾಷ್ಟ್ರದ ಪೆನವಲ್‌ನಿಂದ ಆಂಧ್ರದ ಗುಂತ್ಕಲ್‌ಗೆ ಡೀಸೆಲ್ ಟ್ಯಾಂಕರ್ ಗೂಡ್ಸ್ ರೈಲು ಹೊರಟಿತ್ತು.
ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಿಲ್ಲಿಸುವಾಗ ಮೂರು ಬೋಗಿಗಳು ಹಳಿ ತಪ್ಪಿದೆ. ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿ ಡೀಸೆಲ್ ಇರಲಿಲ್ಲ. ತಕ್ಷಣವೇ ಅಲರ್ಟ್ ಆದ ವಾಡಿ ರೈಲ್ವೆ ಸಿಬ್ಬಂದಿ, ಹಳಿ ತಪ್ಪಿದ ಮೂರು ಬೋಗಿಗಳನ್ನು ಹಳಿಗೆ ತಂದರು.
ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ, ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಯ ಹಿಂಬದಿಗೆ ಟ್ಯಾಂಕರ್‌ ಡಿಕ್ಕಿ; ಸವಾರನ ನರಳಾಟ

ರಾಯಚೂರಿನಲ್ಲಿ ಲಾರಿಯ ಹಿಂಬದಿಗೆ ಟ್ಯಾಂಕರ್ ಡಿಕ್ಕಿಯಾಗಿದೆ. ಈ ವೇಳೆ ಟ್ಯಾಂಕರ್‌ನಲ್ಲಿ ಸಿಲುಕಿ ಚಾಲಕ ನರಳಾಟ ಅನುಭವಿಸಿದರು. ರಾಯಚೂರು ತಾಲೂಕಿನ ಕುಕ್ಕನೂರು ಕ್ರಾಸ್ ಬಳಿ ಘಟನೆ ನಡೆದಿದೆ. ಟ್ಯಾಂಕರ್ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ. ಲಾರಿಯು ರಾಯಚೂರಿನಿಂದ ಶಕ್ತಿನಗರ ಕಡೆ ಹೊರಟಿತ್ತು. ಇದೇ ಮಾರ್ಗವಾಗಿ ಟ್ಯಾಂಕರ್ ಹೊರಟಿತ್ತು. ವೇಗದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಮುಂದೆ ಹೊರಟಿದ್ದ ಲಾರಿಗೆ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ಯಾಂಕರ್‌ನಲ್ಲಿ ಸಿಲುಕಿ ಕೊಂಡಿದ್ದ ಚಾಲಕ ರಾಜುವನ್ನು ರಾಯಚೂರು ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಚಾಲಕ ರಾಜುಗೆ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್‌ ಠಾಣಾ ಘಟನೆ ನಡೆದಿದೆ.

ಧಾರವಾಡದಲ್ಲಿ ಪಾದಚಾರಿಗೆ ಚಿಗರಿ ಬಸ್‌ ಡಿಕ್ಕಿ

ಪಾದಚಾರಿಗೆ ಚಿಗರಿ ಬಸ್ ಡಿಕ್ಕಿಯಾಗಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ. ಧಾರವಾಡದ ಗಾಂಧಿ ನಗರದಲ್ಲಿ ಘಟನೆ ನಡೆದಿದೆ. ವಿಜಯ್ ದಾನ್ ಮೃತ ದುರ್ದೈವಿ. ಮೂಲತಃ ರಾಜಸ್ತಾನದ ವಿಜಯ್ ದಾನ್, ಜೆಎಸ್ಎಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಧಾರವಾಡದ ಗೋವನಕೋಪ್ಪದಲ್ಲಿ ನಿವಾಸಿಯಾಗಿದ್ದ ವಿಜಯ್, ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವಿಜಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗಲೇ ಮೃತಪಟ್ಟಿದ್ದಾರೆ. ಸದ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯತಪ್ಪಿ ರೈಲಿನಿಂದ ಬೀಳುತ್ತಿದ್ದ ಯುವಕನ ರಕ್ಷಣೆ

ಆಯತಪ್ಪಿ ರೈಲಿಗೆ ಬೀಳುತ್ತಿದ್ದ ಯುವಕನನ್ನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ದುಗ್ಗಾವತಿ ಗ್ರಾಮದ ಪ್ರಜ್ವಲ್ ಆಯತಪ್ಪಿ ರೈಲಿನಿಂದ ಬಿದ್ದವನು. ಕಳೆದ ರಾತ್ರಿ ಬ್ಯಾಡಗಿ ಹೋಗಲು ಗೋಲ್ ಗುಂಬಜ್ ರೈಲನ್ನು ಹತ್ತಿದ್ದ ಪ್ರಜ್ವಲ್, ಬ್ಯಾಡಗಿಯಲ್ಲಿ ನಿಲ್ಲಿಸೋದಿಲ್ಲ ಎಂದು ಹೇಳದ್ದೆ ತಡ ಕೆಳಗಿಳಿಯಲು ಮುಂದಾಗಿದ್ದ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಇಳಿಯಲು ಹೋದಾಗ ಆಯತಪ್ಪಿ ಬಿದ್ದಿದ್ದ. ಕೂಡಲೇ ಅಲ್ಲಿದ್ದ ಆರ್ ಪಿ ಎಫ್ ಮುಖ್ಯ ಪೇದೆ ಓಡೋಗಿ ರಕ್ಷಿಸಿದ್ದಾರೆ. ಯುವಕನ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಆರ್ ಪಿ ಎಫ್ ಮುಖ್ಯ ಪೇದೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಕ್ಷಿಣ ಕನ್ನಡ

Self Harming: ಮಾಜಿ ಶಾಸಕ‌ ಮೊಯ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ; ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್‌

Self Harming: ಮಾಜಿ ಶಾಸಕ‌ ಮೊಯ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆಯಾಗಿದೆ. ಇತ್ತ ಮುಮ್ತಾಜ್‌ ಅಲಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Self harming
Koo

ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ (52) ಎಂಬುವವರು ಸಾಯುವುದಾಗಿ ಕುಟುಂಬಸ್ಥರಿಗೆ ಮಸೇಜ್‌ ಕಳಿಸಿ ಮಂಗಳೂರು ಹೊರವಲಯದ ಕೂಳೂರು ಬ್ರಿಡ್ಜ್‌ನಲ್ಲಿ ಕಾರು ನಿಲ್ಲಿಸಿ ನಾಪತ್ತೆ (Missing Case) ಆಗಿದ್ದರು. ಇದೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅವರ ಮೃತದೇಹ (Self Harming) ಸಿಕ್ಕಿದೆ. ತಣ್ಣೀರುಬಾವಿ ಮುಳುಗುಗಾರರು ಮೃತದೇಹ ಪತ್ತೆ ಮಾಡಿ ಹೊರತೆಗೆದಿದ್ದಾರೆ. ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವ ಗೋಳಾಡಿದರು.

ನಿನ್ನೆ ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಮುಮ್ತಾಜ್ ಆಲಿ, ಬೆಳಗ್ಗೆ 5 ಗಂಟೆಗೆ ಕೂಳೂರು ಸೇತುವೆ ಮೇಲೆ ಡ್ಯಾಮೇಜ್‌ ಆದ ಸ್ಥಿತಿಯಲ್ಲಿ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿತ್ತು. ಬಳಿಕ ನಿನ್ನೆ ದಿನವಿಡೀ ಹುಡುಕಿದರೂ ಮುಮ್ತಾಜ್ ಆಲಿ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸೋಮವಾರ ಮತ್ತೆ ನದಿಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿತ್ತು.

ಸಹೋದರನ ನೆನೆದು ಕಣ್ಣೀರು

ಸಹೋದರನನ್ನು ನೆನೆದು ಮಾಜಿ ಶಾಸಕ ಮೋಹಿಯುದ್ದೀನ್ ಬಾವ ಕಣ್ಣೀರು ಹಾಕಿದರು. ಬ್ಲ್ಯಾಕ್‌ ಮೇಲ್‌ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರ ಶೈಕ್ಷಣಿಕವಾಗಿ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಆತನ ಪ್ರಚಾರವನ್ನು ಸಹಿಸದ ಕೆಲವು ಶಕ್ತಿಗಳು ಕುತಂತ್ರ ಮಾಡಿದ್ದಾರೆ. ಈ ಕಾರಣದಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಆತನ ಫೋನ್ ಹಾಗೂ ವಾಟ್ಸ್ ಅಪ್ ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಸಹೋದರನ ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ. ರಾಜಕೀಯ ರಹಿತವಾಗಿ ಕೆಲಸ ಮಾಡಿದ್ದ ಆತನನ್ನು ಪ್ರಚೋದನೆ ನೀಡಿ ಮುಗಿಸಿದ್ದಾರೆ ಎಂದು ಕಣ್ಣೀರು ಹಾಕಿದರು.

Self harming
Self harming

ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಗ್ಯಾಂಗ್‌ ಅರೆಸ್ಟ್‌

ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಮ್ತಾಜ್ ಆಲಿ ಸಹೋದರ ಹೈದರ್ ದೂರಿನ ಮೇರೆಗೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಪ್ರಚೋದನೆ ದೂರು ನೀಡಿರುವ ಸಂಬಂಧ ಮಹಿಳೆ ರೆಹಮತ್ ಹಾಗೂ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ದೂರು ದಾಖಲಾಗಿದೆ. ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿರುವ ಆರೋಪವಿದೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ.

2024ರ ಜುಲೈನಿಂದ ಈವರೆಗೆ 50 ಲಕ್ಷ ವಸೂಲಿ ಮಾಡಿದ್ದಾರೆ. 25 ಲಕ್ಷ ಹಣವನ್ನು ಚೆಕ್ ಮೂಲಕವೂ ಮಹಿಳೆ ಪಡೆದಿದ್ದಾಳೆ. ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ಇವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Actor darshan
ಬೆಂಗಳೂರು47 ನಿಮಿಷಗಳು ago

Actor Darshan : ರೇಣುಕಾಸ್ವಾಮಿ ಫೋಟೊಗಳು ನೈಜವಲ್ಲ!ಮತ್ತೆ ಎಫ್‌ಎಸ್‌ಎಲ್ ಮೊರೆ ಹೋದ ಖಾಕಿ ಪಡೆ

Bomb threat e-mails a headache for Bengaluru police
ಬೆಂಗಳೂರು2 ಗಂಟೆಗಳು ago

Bomb Threat : ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬಾಂಬ್ ಬೆದರಿಕೆ‌ E-Mails

Road Accident
ಬಾಗಲಕೋಟೆ3 ಗಂಟೆಗಳು ago

Road Accident : ಬೈಕ್‌ ಸವಾರನ ಮುಖಕ್ಕೆ ಟ್ರ್ಯಾಕ್ಟರ್‌ ಬಡಿದು ಸಾವು;‌ ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್

Self harming
ದಕ್ಷಿಣ ಕನ್ನಡ3 ಗಂಟೆಗಳು ago

Self Harming: ಮಾಜಿ ಶಾಸಕ‌ ಮೊಯ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ; ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್‌

Assault Case
ಬೆಂಗಳೂರು4 ಗಂಟೆಗಳು ago

Assault Case : ಜಸ್ಟ್‌ 20 ರೂಪಾಯಿಗೆ ನಡೆಯಿತು ಕೊಲೆ ಯತ್ನ; ಬಾರ್‌ ಕ್ಯಾಶಿಯರ್‌ಗೆ ಥಳಿಸಿದವರು ಅರೆಸ್ಟ್‌

Actor Darshan
ಬೆಂಗಳೂರು5 ಗಂಟೆಗಳು ago

Actor Darshan : ದರ್ಶನ್‌ ಬೇಲ್‌ ಭವಿಷ್ಯ! ಹೈದರಾಬಾದ್ CFSLನಲ್ಲೇ ಇರುವ ನಟನ ಐಫೋನ್‌ನಲ್ಲಿ ಅಡಗಿದ್ಯಾ ಸತ್ಯ?

karnataka weather Forecast
ಮಳೆ9 ಗಂಟೆಗಳು ago

Karnataka Weather : ಕರಾವಳಿ, ಮಲೆನಾಡು ಸುತ್ತಮುತ್ತ ಇಂದು ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ10 ಗಂಟೆಗಳು ago

Dina Bhavishya : ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ

Missing case
ದಕ್ಷಿಣ ಕನ್ನಡ20 ಗಂಟೆಗಳು ago

Missing case : ಮಾಜಿ ಶಾಸಕ‌ ಮೊಯ್ದೀನ್ ಬಾವಾರ ಸಹೋದರ ಮಿಸ್ಸಿಂಗ್‌; ಸೇತುವೆ ಬಳಿ ಡ್ಯಾಮೇಜ್‌ ಸ್ಥಿತಿಯಲ್ಲಿ ಕಾರು ಪತ್ತೆ

Drugs mafia
ಬೆಂಗಳೂರು22 ಗಂಟೆಗಳು ago

Drugs Mafia : ಫಾರಿನ್ ಪೋಸ್ಟ್ ಆಫೀಸ್‌ನಲ್ಲಿ 626 ಮಾದಕ ವಸ್ತುಗಳ ಪಾರ್ಸಲ್‌ಗಳು ಪತ್ತೆ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌