Crime news | ಕಾಮಿಡಿ ನಟಿ ನಯನಾ ವಿರುದ್ಧ ನಿಂದನೆ ಆರೋಪ, ಕೇಸ್‌ ದಾಖಲು - Vistara News

ಕ್ರೈಂ

Crime news | ಕಾಮಿಡಿ ನಟಿ ನಯನಾ ವಿರುದ್ಧ ನಿಂದನೆ ಆರೋಪ, ಕೇಸ್‌ ದಾಖಲು

ಕಿರುತೆರೆಯ ಹಾಸ್ಯ ಕಾರ್ಯಕ್ರಮದಲ್ಲಿ ಗೆದ್ದ ಬಹುಮಾನದ ಹಣದ ಹಂಚಿಕೆ ವಿಚಾರದಲ್ಲಿ ಕಾಮಿಡಿ ನಟಿ ನಯನಾ, ಮತ್ತೊಬ್ಬ ನಟ ಸೋಮಶೇಖರ್‌ಗೆ ಬೆದರಿಕೆ ಹಾಕಿದ್ದಾರೆ (Crime news) ಎಂದು ಆರೋಪಿಸಲಾಗಿದೆ.

VISTARANEWS.COM


on

nayana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಾಮಿಡಿ ನಟಿ ನಯನಾ ವಿರುದ್ಧ ಕೇಸ್ ದಾಖಲಾಗಿದೆ. ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕೇಸ್ ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ನಯನಾ ಅವರು ಮತ್ತೊಬ್ಬ ಕಾಮಿಡಿ ನಟ ಸೋಮಶೇಖರ್‌ಗೆ ಬೆದರಿಕೆ ಹಾಕಿದ್ದಾರೆ (Crime news) ಎಂದು ಆರೋಪಿಸಲಾಗಿದೆ.

ಸೋಮಶೇಖರ್ ರಿಂದ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ಸೋಮಶೇಖರ್ ತಂಡ ಭಾಗವಹಿಸಿತ್ತು. ಖಾಸಗಿ ಚಾನಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಬಹುಮಾನದ ಹಣವಾಗಿ 3 ಲಕ್ಷ ಹಣ ಬಂದಿತ್ತು.

ಅದರಲ್ಲಿ ಒಬ್ಬೊಬ್ಬರಿಗೂ 70 ಸಾವಿರ ರೂ. ಒಬ್ಬೊಬ್ಬರಿಗೆ ಬಂದಿತ್ತು. ಅನೀಶ್ ಮತ್ತು ಚಿದಾನಂದ್ ತಂಡದ ಸೀನಿಯರ್ ಗಳಾಗಿದ್ದರು. ಇಬ್ಬರು ಸೀನಿಯರ್ ಗಳಿಗೆ ಹಣ ನೀಡಲು ನಯನಾ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಆರ್.‌ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ಬುಧವಾರ ಭೀಕರ ರಸ್ತೆ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

VISTARANEWS.COM


on

bike accident
Koo

ರಾಯಚೂರು: ತಾಲೂಕಿನ ಮಿಟ್ಟಿಮಲಕಾಪುರ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದಾರೆ.

ರಾಯಚೂರು ನಗರದ ಇಂದಿರಾನಗರ ನಿವಾಸಿಗಳಾದ ಪರಶುರಾಮ್ (30), ರಾಘವೇಂದ್ರ (35), ಗೋವಿಂದ (32), ಪ್ರಾಣೇಶ್ (22) ಮೃತರು. ಹೊಲದ ಕೆಲಸ ಮಾಡುತ್ತಿದ್ದ ಇವರು, ಬೈಕ್‌ನಲ್ಲಿ ಹೋಗುತ್ತಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?

ಮಹಿಳೆಯೊಂದಿಗೆ ಅನುಚಿತ ವರ್ತಿಸಿದ ವ್ಯಕ್ತಿಯ ಕೊಲೆ

ಚಿಕ್ಕಬಳ್ಳಾಪುರ: ಮಹಿಳೆಯೊಂದಿಗೆ ಅನುಚಿತ ವರ್ತನೆ ಹಿನ್ನೆಲೆ ವ್ಯಕ್ತಿಯೊಬ್ಬನ ಕೊಲೆ ಮಾಡಿರುವ ಘಟನೆ ನಗರದ 31ನೇ ವಾರ್ಡ್‌ನ ಇಂದಿರಾನಗರದ ಬಾಡಿಗೆ ಮನೆಯಲ್ಲಿ ನಡೆದಿದೆ.

ಸಾದಲಿ ಗ್ರಾಮದ ಆಂಜಿನಪ್ಪ (40) ಕೊಲೆಯಾದವರು. ರಾಘವೇಂದ್ರ ಕೊಲೆ ಆರೋಪಿ. ಇಂದಿರಾನಗರದ ಕಳ್ಳೇಕಾಯಿ ಸೀನಪ್ಪ ಎಂಬುವವರ ಮನೆಯಲ್ಲಿ ಬಾಡಿಗೆಗೆ ಆಂಜಿನಪ್ಪ ವಾಸವಾಗಿದ್ದರು. ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಸಾವು

ಕೋಲಾರ: ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೇರಿ ಗ್ರಾಮದ ಬಳಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಮರವಳ್ಳಿ ಗ್ರಾಮದ ಮಂಜುನಾಥ್ (45) ಮೃತ ವ್ಯಕ್ತಿ. ವಿದ್ಯುತ್ ಕಂಬ ದುರಸ್ತಿ ಮಾಡಲು ಕಂಬಕ್ಕೆ ಹತ್ತಿದ್ದ ವೇಳೆ ಅವಘಡ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ.ದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Continue Reading

ದೇಶ

ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?

online share trade fraud: ಒಂಭತ್ತು ಜನರ ತಂಡವೊಂದು ಅತಿ ಹೆಚ್ಚು ರಿಟರ್ನ್ ಆಸೆ ತೋರಿಸಿ ಮುಂಬೈನ ಮಹಿಳೆಗೆ 3 ತಿಂಗಳಲ್ಲಿ ಹೆಚ್ಚು ಕಡಿಮೆ 2 ಕೋಟಿ ರೂಪಾಯಿ ವಂಚನೆ ಮಾಡಿದೆ.

VISTARANEWS.COM


on

Mumbai woman loses RS 2 crore in online share trade fraud
Koo

ಮುಂಬೈ: ಆನ್‌ಲೈನ್ ಷೇರ್ ಟ್ರೇಡಿಂಗ್‌ ವಂಚನೆಯಲ್ಲಿ (Online Share Trading Fraud) ಮುಂಬೈನ 40 ವರ್ಷದ ಮಹಿಳೆಯೊಬ್ಬರು (Mumbai Woman) 1.92 ಕೋಟಿ ರೂಪಾಯಿ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ನವಿ ಮುಂಬೈ ಪೊಲೀಸರು 9 ಜನರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದು(Mumbai Police), ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ(Cyber Fraud).

ಮಹಿಳೆಗೆ, ಆನ್‌ಲೈನ್ ಷೇರ್ ಟ್ರೇಡಿಂಗ್‌ನಲ್ಲಿ ಕಡಿಮೆ ಹೂಡಿಕೆಯ ಮೇಲೆ ದುಪ್ಪಟ್ಟ ರಿಟರ್ನ್ ಆಸೆ ತೋರಿಸಿದ ಆರೋಪಿಗಳು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡಿರುವ ಮಹಿಳೆಯು ನವಿ ಮುಂಬೈನ ನ್ಯೂ ಪನ್ವೇಲ್‌ ಪ್ರದೇಶ ರಹವಾಸಿಯಾಗಿದ್ದಾರೆ.

ಆರೋಪಿಗಳ ಸೂಚನೆಯಂತೆ 2023ರ ಡಿಸೆಂಬರ್‌ನಿಂದ ಮಹಿಳೆಯು 1,92,82,837 ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾಳೆ. ಆದರೆ ನಂತರ ಯಾವುದೇ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ಸೈಬರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಗಜಾನನ್ ಕದಮ್ ತಿಳಿಸಿದ್ದಾರೆ. ಅಂತಿಮವಾಗಿ ಹಣ ಪಡೆದುಕೊಂಡವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ತಾನು ಮೋಸ ಹೋಗಿರುವುದು ತಿಳಿದು, ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ಮಂಗಳವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆನ್‌ಲೈನ್ ಷೇರ್ ಟ್ರೇಡಿಂಗ್‌ನಿಂದ ಮೋಸ ಹೋಗದಂತೆ ತಡೆಯುವುದು ಹೇಗೆ?

ಹೂಡಿಕೆ ಮಾಡುವ ಮುನ್ನ ಸಂಶೋಧನೆ ಮಾಡುವುದು ಉತ್ತಮ. ಇದಕ್ಕಾಗಿ ಪ್ರತಿಷ್ಠಿತ ಮತ್ತು ನಿಯಂತ್ರಿತ ಆನ್‌ಲೈನ್ ವ್ಯಾಪಾರ ವೇದಿಕೆಗಳನ್ನು ಆಯ್ಕೆಮಾಡಿ. ಸೆಬಿ ಅಥವಾ ಆರ್‌ಬಿಐನಂಥ ನಂತಹ ಸಂಬಂಧಿತ ಹಣಕಾಸು ಸಂಸ್ಥೆಗಳಲ್ಲಿ ಅವುಗಳ ನೋಂದಣಿಯನ್ನು ಪರಿಶೀಲಿಸಿ.

ನಿಮ್ಮನ್ನು ಆಕರ್ಷಿತ ಮಾಡಲು ವಂಚನೆಗಾರರು ಯಾವಾಗಲೂ ಅತಿ ಹೆಚ್ಚಿನ ರಿಟರ್ನ್‌ ನೀಡುವ ಆಸೆಯನ್ನು ತೋರಿಸುತ್ತಾರೆ. ಅಲ್ಲದೇ, ಗ್ಯಾರಂಟಿಯ ರಿಟರ್ನ್‌ ಒತ್ತಡ ಕೂಡ ಹಾಕುತ್ತಾರೆ. ಈ ರೀತಿಯ ಆಸೆ ತೋರಿಸುವ ಯಾವುದೇ ದೂರವಾಣಿ ಕರೆ, ಇಮೇಲ್ ಅಥವಾ ಸೋಷಿಯಲ್ ಮೀಡಿಯಾ‌ ಮೂಲಕ ಬರುವ ಆಫರ್‌ಗಳಿಗೆ ಮೋಸ ಹೋಗಬೇಡಿ. ಷೇರು ಮಾರುಕಟ್ಟೆಯು ಮೂಲಭೂತವಾಗಿ ಅಪಯಕಾರಿಯಾಗಿರುವ ವೇದಿಕೆಯಾಗಿದೆ. ಯಾವುದೇ ಹೂಡಿಕೆಗೂ ಲಾಭದ ರಿಟರ್ನ್ ಗ್ಯಾರಂಟಿ ಇರುವುದಿಲ್ಲ. ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದು ಎಂಬ ಆಕರ್ಷಕಣೆಗಳಿಗೆ ಒಳಗಾಗಬೇಡಿ.

ನಿಮ್ಮ ಹಣವನ್ನು ಅಪಾಯಕ್ಕೆ ಸಿಲುಕಿಸುವ ಮೊದಲು ವಿವಿಧ ಹೂಡಿಕೆ ಆಯ್ಕೆಗಳು, ವ್ಯಾಪಾರ ತಂತ್ರಗಳು ಮತ್ತು ಹಣಕಾಸಿನ ಸಾಕ್ಷರತೆಯ ಬಗ್ಗೆ ತಿಳಿಯಿರಿ. ಸರ್ಕಾರಿ ವೆಬ್‌ಸೈಟ್‌ಗಳು ಅಥವಾ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಂತಹ ವಿಶ್ವಾಸಾರ್ಹ ಮೂಲಗಳನ್ನು ಬಳಸಿ. ಎಂದಿಗೂ ನಿಮ್ಮ ಲಾಗಿನ್ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಕು. ಅಂದರೆ, ಯೂಸರ್ ನೇಮ್, ಪಾಸ್ವರ್ಡ್ಸ್, ಟು ಫ್ಯಾಕ್ಟರ್ ಅಂಥೇಟಿಕೇಷನ್ ಕೋಡ್ಸ್ ಅನ್ನು ಹಂಚಿಕೊಳ್ಳಬೇಡಿ. ಕೆಲವೊಮ್ಮೆ ಉಚಿತ ಸಲಹೆ ನೀಡುವ ಮೂಲಕ ವಂಚನೆಗಾರರು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಹುಷಾರಿಗಿರಿ.

ಈ ಸುದ್ದಿಯನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು

Continue Reading

ಬೆಂಗಳೂರು

Bangalore Airport : ಟಿಕೆಟ್‌ ಇಲ್ಲದೆ ವಿಮಾನ ಹತ್ತಲು ಬಂದಿದ್ದ ಟೆರರಿಸ್ಟ್‌ ಅರೆಸ್ಟ್‌!

Bangalore Airport : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತಾನು ಟೆರರಿಸ್ಟ್‌ ಎಂದು ಹೇಳಿ ಸಿಕ್ಕಿಬಿದ್ದಿದ್ದಾನೆ. ಆತ ಯಾರು? ಎಲ್ಲಿಗೆ ಹೋಗುತ್ತಿದ್ದ? ಮಾಹಿತಿ ಇಲ್ಲಿದೆ.

VISTARANEWS.COM


on

Bangalore airport terrorist arrested
Koo

ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ (Bangalore Airport) ತಪಾಸಣಾ ಅಧಿಕಾರಿಗಳು ನಾನಾ ಬಗೆಯ, ಚಿತ್ರ ವಿಚಿತ್ರ ಜನರನ್ನು ಸಂಭಾಳಿಸಬೇಕಾಗಿದೆ. ಚಿನ್ನವನ್ನು ನಾನಾ ರೂಪದಲ್ಲಿ ತರುವವರು, ಸುಮ್ಮ ಸುಮ್ಮನೆ ಕರೆ ಮಾಡಿ ಬಾಂಬ್‌ ಇದೆ ಎಂದು ಬೆದರಿಸುವವರು, ತಪಾಸಣೆ ವೇಳೆ ಬಾಂಬ್‌ ಇದೆ (Bomb threat) ಎಂದು ಹೇಳಿ ಬೆಚ್ಚಿ ಬೀಳಿಸುವವರು ಹೀಗೆ.. ಹಲವು ಬಗೆಯ‌ ಕ್ರಿಮಿನಲ್‌ಗಳನ್ನು ಕಣ್ಣಲ್ಲಿ‌ ಕಣ್ಣಿಟ್ಟು ನೋಡಬೇಕಾಗಿದೆ. ಈ ಬಾರಿ ಇನ್ನೂ ಒಬ್ಬ ವಿಚಿತ್ರ ವ್ಯಕ್ತಿ ಬಂದಿದ್ದಾನೆ. ಆತ ತಾನೊಬ್ಬ ಟೆರರಿಸ್ಟ್‌ (I am a terrorist) ಎಂದು ಹೇಳಿಕೊಂಡಿದ್ದಾನೆ!

ಹೀಗೆ ತಾನೊಬ್ಬ ಟೆರರಿಸ್ಟ್‌ ಎಂದು ಘೋಷಣೆ ಮಾಡಿಕೊಂಡೇ ಬಂದವನ ಹೆಸರು ಆದರ್ಶ್‌ ಕುಮಾರ್‌ ಸಿಂಗ್‌. ಆತ ಫೆಬ್ರವರಿ 17ರಂದು ಬೆಂಗಳೂರಿನಿಂದ ಲಕ್ನೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹತ್ತಲು ಬಂದಿದ್ದ. ಸಿಐಎಸ್‌ಎಫ್‌ ಸಿಬ್ಬಂದಿ ಆತನ ತಪಾಸಣೆ ಮಾಡಿ ಟಿಕೆಟ್‌ ಎಲ್ಲಿ ಎಂದು ಕೇಳಿದಾಗ ಅವನ ಬಳಿ ಟಿಕೆಟ್‌ ಇರಲಿಲ್ಲ. ಆಗ ಆತ ನಾನೊಬ್ಬ ಟೆರರಿಸ್ಟ್ ಎಂದು ಹೇಳಿದ.

ಆತ ಹೇಳಿದ್ದು ಸುಳ್ಳು ಎನ್ನುವುದು ಸಿಐಎಸ್‌ಎಫ್‌ ಸಿಬ್ಬಂದಿಗೆ ಗೊತ್ತಾಯಿತು. ಯಾಕೆಂದರೆ, ಟೆರರಿಸ್ಟ್‌ಗಳು ಯಾರೂ ತಾವು ಟೆರರಿಸ್ಟ್‌ಗಳು ಎಂದು ಹೇಳುವುದಿಲ್ಲ! ಆದರೆ, ಹೀಗೆ ಹೇಳಿದವನನ್ನು ಸುಮ್ಮನೆ ಬಿಡುವುದುಂಟೇ?

ಏರ್ ಇಂಡಿಯಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್‌ ಸಿಬ್ಬಂದಿ ಆದರ್ಶ್‌ ಕುಮಾರ್‌ ಸಿಂಗ್‌ನನ್ನು ಹಿಡಿದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ದೂರು ನೀಡಿದರು. ಸದ್ಯ ಏರ್ಪೊರ್ಟ್ ಠಾಣೆ ಪೊಲೀಸರು ಆದರ್ಶ್ ಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿ ಸಿಕ್ಕಿಬಿದ್ದಿದ್ದ ಸಜ್ಜು ಕುಮಾರ್‌

ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಜ್ಜುಕುಮಾರ್‌ ಎಂಬಾತ ತಪಾಸಣೆಯ ವೇಳೆ ತನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿ ಜೋಕ್‌ ಮಾಡಲು ಹೊರಟಿದ್ದ. ಆದರೆ ಅವನ ಜೋಕ್‌ಗೆ ಯಾರೂ ನಗಲಿಲ್ಲ. ಬದಲಿಗೆ ಬಂಧಿಸಿದರು.

ಆಗಿದ್ದೇನು ಅಂದರೆ ಅವನು ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ತೆರಳುತ್ತಿದ್ದ. ವಿಮಾನ ನಿಲ್ದಾಣದ ತಪಾಸಣೆ ಅಧಿಕಾರಿಗಳು ಆತನನ್ನು ಒಳಗೆ ಬಿಡುವ ಮುಂಚೆ ಚೆಕ್ಕಿಂಗ್ ನಡೆಸಲು ಮುಂದಾದರು. ಆಗ ಆತ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ತಮಾಷೆ ಮಾಡಿದ್ದ. ಮುಂದೆ ಅವನಿಗೆ ಎದುರಾದದ್ದು ಬಿಗಿಯಾದ ತಪಾಸಣೆ. ಆತ ತಾನು ತಮಾಷೆಗೆ ಹೇಳಿದ್ದು ಎಂದು ಹೇಳಿದರೂ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ.!

ಈ ರೀತಿ ಸಿಕ್ಕಾಕಿಕೊಂಡ ಪ್ರಯಾಣಿಕನ ಹೆಸರು ಸಜ್ಜು ಕುಮಾರ್‌. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತ ತನ್ನ ಊರಾದ ಕೇರಳಕ್ಕೆ ಹೋಗುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸುವಾಗ ಮಾಡುವ ತಪಾಸಣೆಯಿಂದ ಆತ ಕಿರಿಕಿರಿ ಅನುಭವಿಸಿದ್ದ. ಏನಿದೆ ಬ್ಯಾಗ್‌ನಲ್ಲಿ ಎಂದು ತಪಾಸಣೆ ಮಾಡುವ ಅಧಿಕಾರಿಗಳು ಕೇಳಿದ್ದರು. ಆಗ ಇವನು ತಮಾಷೆಗೆ ʻಬಾಂಬ್‌ ಇದೆʼ ಎಂದಿದ್ದ.

ಬಾಂಬ್‌ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅಲರ್ಟ್‌ ಆದ ಅಧಿಕಾರಿಗಳು ಕೂಡಲೇ ಆತನ ಬ್ಯಾಗ್‌ ಮತ್ತು ಆತನನ್ನು ಒಳಗೆ ಕರೆದುಕೊಂಡು ಹೋದರು. ತೀವ್ರ ತಪಾಸಣೆ ಮಾಡಿದ ವೇಳೆ ಬ್ಯಾಗ್‌ನಲ್ಲಿ ಬೇರೆ ಏನೂ ಪತ್ತೆಯಾಗಿರಲಿಲ್ಲ. ಅಧಿಕಾರಿಗಳ ಜತೆ ಉದ್ಧಟತನದಿಂದ ವರ್ತಿಸಿ, ತಪ್ಪು ಹಾದಿಗೆ ಎಳೆದ ಸಜ್ಜು ಕುಮಾರ್‌ನನ್ನು ಬಂಧಿಸಲಾಯಿತು.

ಇದನ್ನೂ ಓದಿ : Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

Bangalore Airport: ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ; ಬಂಧನ

ದೇವನಹಳ್ಳಿ: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂದು ಪ್ರಯಾಣಿಕನೊಬ್ಬ ಏರ್‌ಪೋರ್ಟ್‌ ಕಾಲ್‌ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ‌ ಕರೆ ಮಾಡಿ, ಜೈಲುಪಾಲಾಗಿರುವುದು ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶ್ರೇಯಸ್ ಚಾರ್ಮಿಯಾ ಬಂಧಿತ ಆರೋಪಿ. ಈತನ ಪರ್ಸ್ ಹುಡುಕಲು ಸಿಬ್ಬಂದಿ ಸಹಕರಿಸಲಿಲ್ಲ ಎಂದು ಕೋಪಗೊಂಡು ವಿಮಾನಯಾನ ಕಂಪನಿಯ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ನಂತರ SG 8536 ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಬೆಂಗಳೂರು

Road Accident : ವೇಗವಾಗಿ ಧಾವಿಸಿ ಪಲ್ಟಿಯಾದ ವಾಟರ್‌ ಟ್ಯಾಂಕರ್‌; ಪಾದಚಾರಿ ಬಲಿ

Road Accident : ಬೆಂಗಳೂರಿನಲ್ಲಿ ವಾಟರ್‌ ಟ್ಯಾಂಕರ್‌ಗಳ ಧಾವಂತ ಜೋರಾಗಿದೆ. ಹೀಗೆ ವೇಗವಾಗಿ ಸಾಗುತ್ತಾ ನಿಯಂತ್ರಣ ತಪ್ಪಿ ಉರುಳಿದ ಟ್ಯಾಂಕರ್‌ಗೆ ಸಿಲುಕಿ ಪಾದಚಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

VISTARANEWS.COM


on

Road accident Bangalore water tanker
ಪ್ರಾತಿನಿಧಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನಲ್ಲಿ ಜಲಕ್ಷಾಮ ತೀವ್ರವಾಗುತ್ತಿರುವಂತೆಯೇ (Water Scarcity) ವಾಟರ್‌ ಟ್ಯಾಂಕರ್‌ಗಳಿಗೆ (Water Tanker) ಭಾರಿ ಬೇಡಿಕೆ. ಈ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಟ್ಯಾಂಕರ್‌ ಚಾಲಕರು ಧಾವಂತದಿಂದ ಓಡಿಸುತ್ತಾರೆ. ಹೀಗೆ ಧಾವಂತದಿಂದ ಓಡಿಸುವಾಗ ಪಾದಚಾರಿಯೊಬ್ಬರು (Man died after water tanker overturns) ಅದರಡಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ (Road Accident) ನಡೆದಿದೆ.

ನಗರದ ಹೊರವಲಯದ ಪೀಣ್ಯ ಸೆಕೆಂಡ್ ಸ್ಟೇಜ್ ತಿಗಳರಪೇಟೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇಮಾನುದ್ದೀನ್ (20) ಸಾವನ್ನಪ್ಪಿದ ಪಾದಚಾರಿ. ಅವರು ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಕಂಟ್ರೋಲ್‌ ತಪ್ಪಿ ಪಲ್ಟಿ.ಐಾಗಿದೆ. ಅದು ಉರುಳುತ್ತಾ ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಇಮಾನುದ್ದೀನ್ ಮೇಲೆ ಪಲ್ಟಿಯಾಗಿದೆ. ಇಮಾನುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ : Road Accident : ತಿರುವಿನಲ್ಲಿ ಕಾದಿದ್ದ ಜವರಾಯ; ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ದಂಪತಿ ಸಾವು

ದೇವನಹಳ್ಳಿ: ಟ್ರ್ಯಾಕ್ಟರ್‌-ಕ್ಯಾಂಟರ್‌ ಅಪಘಾತಕ್ಕೆ ಒಬ್ಬ ಬಲಿ

ದೇವನಹಳ್ಳಿ: ಟ್ರಾಕ್ಟರ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ (Tractor-canter Accident) ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ (Road accident). ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಎರಡು ವಾಹನಗಳಲ್ಲಿದ್ದ 8 ಜನಕ್ಕೆ ಗಂಭೀರ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ಮೂಲದ‌ ರವಿಕುಮಾರ್ ಮೃತ ದುರ್ದೈವಿ.

ಅಪಘಾತ ಹಿನ್ನೆಲೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳೀಯರು ಸೇರಿ ಗಾಯಾಳುಗಳ ರಕ್ಷಣೆ ಮಾಡಿ ದೇವನಹಳ್ಳಿಯ ಆಸ್ಪತ್ರೆಗಳಿಗೆ ರವಾನೆ ಮಾಡಿದ್ದರು. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಕ್ಕಳೊಂದಿಗೆ ರಸ್ತೆ ದಾಟುತ್ತಿದ್ದ ತಾಯಿಗೆ ಬಸ್‌ ಡಿಕ್ಕಿ, ಮಗು ಮೃತ್ಯು

ಹೊಸಕೋಟೆ: ಇಬ್ಬರು ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಬಸ್‌ ಡಿಕ್ಕಿಯಾಗಿ ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ (Child dies in Accident) ಹೊಸಕೋಟೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ (Road accident).

ರಸ್ತೆ ದಾಟುತ್ತಿದ್ದ ತಾಯಿ ಮಕ್ಕಳಿಗೆ ಮೊದಲು ಒಂದು ಬೈಕ್‌ ಡಿಕ್ಕಿ ಹೊಡೆದಿತ್ತು. ಬೈಕ್‌ ಬಡಿದ ಕಾರಣ ಅವರು ರಸ್ತೆಗೆ ಬಿದ್ದರು. ಆಗ ಬಸ್‌ ಅವರ ಮೇಲೆ ಹರಿದಿದೆ.

ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹೊಡೆದು ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ತಾಯಿ ಮಗುವಿಗೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement
Indus App Store launched by Walmart-owned PhonePe
ದೇಶ13 mins ago

PhonePay: ಫೋನ್‌ಪೇ ಸ್ವದೇಶಿ ಆ್ಯಪ್‌ಸ್ಟೋರ್ ‘ಇಂಡಸ್’ ಲಾಂಚ್; ಗೂಗಲ್‌ ಪ್ಲೇ ಸ್ಟೋರ್‌ಗೆ ಪಂಚ್!

shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ24 mins ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ30 mins ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ44 mins ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ2 hours ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್2 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Vamshi Krishna hits six sixes
ಕ್ರೀಡೆ2 hours ago

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

IT department has withdrawn 65 crore rupees from the Congress party accounts
ದೇಶ2 hours ago

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Minister Madhu Bangarappa inauguration by Beneficiaries convention of guarantee schemes in Soraba
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

No water supply
ಬೆಂಗಳೂರು2 hours ago

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ18 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ4 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌