English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ಪ್ರಯತ್ನ - Vistara News

ಬೆಂಗಳೂರು

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ಪ್ರಯತ್ನ

English Alphabet: ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ನಲ್ಲಿ ಗುರುವಾರ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರ ಏರ್ಪಡಿಸಲಾಗಿತ್ತು. ಈ ವೇಳೆ ಬೆಂಗಳೂರು ಹಾಗೂ ಪ್ರಾನ್ಸ್‌ ವಿದ್ಯಾರ್ಥಿಗಳು, ಇಂಗ್ಲಿಷ್‌ ವರ್ಣಮಾಲೆಯ 27ನೇ ಅಕ್ಷರ ವಿನ್ಯಾಸಗೊಳಿಸುವ ಪ್ರಯತ್ನ ಮಾಡಿದ್ದಾರೆ.

VISTARANEWS.COM


on

English Alphabet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಂಗ್ಲಿಷ್‌ ವರ್ಣಮಾಲೆಯಲ್ಲಿ (English Alphabet) 26 ಅಕ್ಷರಗಳಿರುವುದು ಗೊತ್ತಿರುವ ಸಂಗತಿ. ಆದರೆ, ನಗರದ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ (LISAA School of Design) ವಿದ್ಯಾರ್ಥಿಗಳು, 27ನೇ ಅಕ್ಷರ ವಿನ್ಯಾಸಗೊಳಿಸುವ ಸವಾಲು ಕೈಗೆತ್ತಿಕೊಂಡಿದ್ದು, ಆ ಮೂಲಕ ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ನಗರದ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ನಲ್ಲಿ ಗುರುವಾರ ಮುದ್ರಣಕಲೆ ಮತ್ತು ಉತ್ಪನ್ನ ವಿನ್ಯಾಸದ ಕುರಿತು ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಮತ್ತು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದ ಮುಖ್ಯ ಉದ್ದೇಶ ಹೊಸ ಅಕ್ಷರವನ್ನು ವಿನ್ಯಾಸಗೊಳಿಸುವುದಾಗಿತ್ತು.

ಈ ಕುರಿತು ಬೆಂಗಳೂರಿನ ಲಿಸಾ ಸ್ಕೂಲ್‌ ಆಫ್‌ ಡಿಸೈನ್‌ ಸಂಸ್ಥಾಪಕರು ಮತ್ತು ನಿರ್ದೇಶಕಿ ಅವಿ ಕೆಸ್ವಾನಿ ಅವರು ಮಾತನಾಡಿ, “ಭಾಷೆಯೊಂದು ಸಂವಹನ ಕ್ರಿಯೆಗೆ ನೆರವಾಗುವ ಮಾಧ್ಯಮ. ಅದರಂತೆ ಎಲ್ಲಾ ಅಕ್ಷರಗಳಿಗೂ ಅದರದ್ದೇ ಆದ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ನಾವು ವಿನ್ಯಾಸಕಾರರು ಈ ಮೂಲಕ ಹೊಸ ಯೋಚನೆಗಳನ್ನು ಹೊರತರಲು ವೇದಿಕೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇವೆ. ನಮ್ಮ ಉದ್ದೇಶ ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಸವಾಲೊಂದನ್ನು ನೀಡುವುದಾಗಿದೆ. ಮೂಲತಃ ಫ್ರೆಂಚ್‌ ಸ್ಕೂಲ್‌ ಆಫ್‌ ಡಿಸೈನ್‌ ಆಗಿರುವುದರಿಂದ ಇಂಗ್ಲಿಷ್‌ ಮಾತನಾಡುವವರು ಕೆಲ ಫ್ರೆಂಚ್‌ ಉಚ್ಚಾರಣೆ ಮಾಡಲು ಕಷ್ಟಪಡುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ 27ನೇ ಅಕ್ಷರವನ್ನು ವಿನ್ಯಾಸಗೊಳಿಸುವ ಮೂಲಕ ಫ್ರೆಂಚ್‌ ಮತ್ತು ಇಂಗ್ಲಿಷ್‌ ಭಾಷೆಗೆ ಸೇತುವೆ ಕಲ್ಪಿಸುವುದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ಫ್ರಾನ್ಸ್‌ನ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಜೊತೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದು, ಈ ಮೂಲಕ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಕರಕುಶಲ ಕೇಂದ್ರ ಮತ್ತು ಮೈಸೂರಿನ ಅರಮನೆಯ ಪರಿಚಯ ಮಾಡಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Bengaluru Rape Attempt Case : ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ ಹೊಸ ತಿರುವು, ಸಂತ್ರಸ್ತೆಯ ವಿರುದ್ಧವೇ ಕೇಸ್‌ ದಾಖಲು!

Bengaluru Rape Attempt case : ದಾರಿ ಮಧ್ಯೆ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಇದೀಗ ಯುವತಿ ಹಾಗೂ ಆಕೆಯ ಸ್ನೇಹಿತ ಇಬ್ಬರ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿಯಾದ ವೇ ಗ ಮತ್ತು ಮದ್ಯಪಾನ ಮಾಡಿ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಆಟೋ ಚಾಲಕ ಅಜಾಜ್ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

VISTARANEWS.COM


on

Koo

ಬೆಂಗಳೂರು: ಮಹಾನಗರದಲ್ಲಿ ಎರಡು ದಿನಗಳ ಹಿಂದೆ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ (Bengaluru Rape Attempt case) ಹೊಸ ತಿರುವು ಸಿಕ್ಕಿದ್ದು, ಸಂತ್ರಸ್ತೆಯ ವಿರುದ್ದವೇ ದೂರೊಂದು ದಾಖಲಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಆಕೆಯಿಂದ ಪೊಲೀಸರು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೇಳಿಕೆ ಪಡೆದುಕೊಳ್ಳಲಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಇದಾಗಿದೆ. ಪಾನಮತ್ತಳಾಗಿದ್ದ ಯುವತಿ ತನ್ನ ಆಟೋಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾಳೆ ಎಂಬುದಾಗಿ ಆಟೋ ಡ್ರೈವರ್ ದೂರು ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಪಬ್‌ನಲ್ಲಿ ಪಾರ್ಟಿ ಮಾಡಿದ್ದ ಯುವತಿ ಅಪರಿಚಿತ ವ್ಯಕ್ತಿಯ ಬೈಕ್‌ನಲ್ಲಿ ತೆರಳುವ ಮುನ್ನ ಈ ಘಟನೆ ನಡೆದಿದೆ. ಅಂದು ರಾತ್ರಿ ಕೊರಮಂಗಲಕ್ಕೆ ಗೆಳೆಯನ ಜೊತೆ ಬಂದಿದ್ದ ಸಂತ್ರಸ್ತೆ ಊಟ ಮುಗಿಸಿಕೊಂಡು ಗೆಳೆಯನ ಜೊತೆ ಕಾರ್ ವಾಪಸಾಗುತ್ತಿದ್ದಳು. ಈ ವೇಳೆ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗ್ತಿದ್ದಳು. ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಆಕೆ ಚಾಲನೆ ಮಾಡುತ್ತಿದ್ದ ಕಾರು ಸರಣಿ ಅಫಘಾತಕ್ಕೆ ಒಳಗಾಗಿದೆ. ಮೂರು ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಎರಡು ಆಟೋ ಹಾಗೂ ಒಂದು ಬೈಕ್ ಗೆ ಡಿಕ್ಕಿ ಹೊಡೆದು ಫೋರಂ ಮಾಲ್ ಕಡೆ ಆಕೆ ಸಾಗಿದ್ದಳು. ಆ ಬಗ್ಗೆ ಇದೀಗ ಪ್ರಕರಣ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆ ಮಾಡಿದ್ದ ಆರೋಪದಲ್ಲಿ ಕೇಸ್ ದಾಖಲಾಗಿದೆ.

ಕಾರನ್ನು ಹಾನಿಗೊಳಲಾದ ಆಟೊ ಚಾಲಕರು ಬೆನ್ನಟ್ಟಿ ಪ್ರಶ್ನಿಸಿದ್ದರು. ಅವರು ಅಡ್ಡಗಟ್ಟುತ್ತಿದ್ದಂತೆ ಕಾರನ್ನು ಬಿಟ್ಟು ಆಕೆ ಅಲ್ಲಿಂದ ತೆರಳಿದ್ದಲು. ಆಕೆಯ ಸ್ನೇಹಿತ ಚಾಲಕರ ಜೊತೆ ವಾದ ಮಾಡುವಾಗ ಅಲ್ಲಿಂದ ಯುವತಿ ಪರಾರಿಯಾಗಿದ್ದಳು. ಪಬ್‌ನಲ್ಲಿ ಮರೆತು ಬಂದಿದ್ದು ಅದನ್ನು ತರಲು ಹೋಗಿದ್ದಳು ಎನ್ನಲಾಗಿದೆ. ಅಷ್ಟರಲ್ಲಿ ಆಕೆಯ ಸ್ನೇಹಿತ ಕಾರು ಬಿಟ್ಟು ಹುಡುಕಲು ಹೊರಟಿದ್ದ. ಈ ವೇಳೆ ಇಬ್ಬರೂ ಒಬ್ಬರಿಗೊಬ್ಬರು ತಪ್ಪಿಸಿಕೊಂಡಿದ್ದಾರೆ. ಬಳಿಕ ಯುವತಿ ಅಪರಿಚಿತ ವ್ಯಕ್ತಿ ಬಳಿ ಡ್ರಾಪ್ ಕೇಳಿದ್ದಳು.

ದಾರಿ ಮಧ್ಯೆ ವೇಳೆ ಯುವತಿಯ ಮೇಲೆ ಅತ್ಯಾಚಾರದ ಯತ್ನ ನಡೆದಿದೆ. ಇದೀಗ ಯುವತಿ ಹಾಗೂ ಆಕೆಯ ಸ್ನೇಹಿತ ಇಬ್ಬರ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಗರೂಕತೆ ಮತ್ತು ಅತಿಯಾದ ವೇ ಗ ಮತ್ತು ಮದ್ಯಪಾನ ಮಾಡಿ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಆಟೋ ಚಾಲಕ ಅಜಾಜ್ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Student Death : ಮೈಸೂರಿನ ಕಾಲೇಜಿನ ಹಾಸ್ಟೆಲ್‌‌ನಲ್ಲಿ 17 ವರ್ಷದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು

ಅತ್ಯಾಚಾರ ಯತ್ನ ನಡೆದಿದೆ ಎಂದು ಹೇಳಿರುವ ಯುವತಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾಳೆ. ಸಂತ್ರಸ್ತೆ ಚೇತರಿಕೆಯಾದ ಬಳಿಕ ಕೇಸ್ ಸಂಬಂಧ ವಿಚಾರಣೆ ನಡೆಯಲಿದೆ.

ಯುವತಿ ಪ್ರಾಣ ಉಳಿಸಿದ SOS ಬಟನ್

ಎಚ್ಎಸ್‌ಆರ್ ಲೇಔಟ್ ಯುವತಿ ಅತ್ಯಾಚಾರ ಪ್ರಕರಣದಲ್ಲಿ SOS ಬಟನ್ ಯುವತಿ ಪ್ರಾಣ ಉಳಿಸಿದೆ ಎಂಬ ವಿಷಯ ತಿಳಿದುಬಂದಿದೆ. ಮೊಬೈಲ್‌ನಲ್ಲಿ ಸ್ವಿಚ್ ಆಫ್ ಬಟನ್ ಪ್ರೆಸ್ ಮಾಡಿದಾಗ SOS ಆಪ್ಷನ್ ಕಾಣಲಿದೆ. ಅದಕ್ಕೆ ಎಮೆರ್ಜೆನ್ಸಿ ನಂಬರ್ ಆ್ಯಡ್ ಮಾಡಬಹುದು. ಅದನ್ನು ಪ್ರೆಸ್ ಮಾಡಿದಾಗ ಆ್ಯಡ್ ಮಾಡಿದ ನಂಬರ್‌ಗೆ ನಿರಂತರ ಕರೆ ಹಾಗೂ ಲೊಕೆಶನ್ ಶೇರ್ ಆಗುತ್ತೆ.

ಹೀಗಾಗಿ SOS ನಲ್ಲಿ ತಂದೆ ಹಾಗೂ ಸ್ನೇಹಿತೆ ನಂಬರ್ ಅನ್ನು ಆ್ಯಡ್ ಸಂತ್ರಸ್ತ ಯುವತಿ ಮಾಡಿದ್ದಳು. ಹೀಗಾಗಿ ತಕ್ಷಣ ಸ್ನೇಹಿತರಿಗೆ ಕರೆ ಹೋಗಿದೆ. ಲೊಕೇಶನ್ ಆಧರಿಸಿ ಬಂದು ಸ್ನೇಹಿತರು ಯುವತಿಯ ರಕ್ಷಣೆ ಮಾಡಿದ್ದಾರೆ. ಅರೆನಗ್ನ ಸ್ಥಿತಿಯಲ್ಲೇ ಯುವತಿಯನ್ನು ಆರೋಪಿ ಬಿಟ್ಟು ತೆರಳಿದ್ದ. ದೌರ್ಜನ್ಯ ಎಸಗಿದಾಗ ಯುವತಿ ಕೂಡ ಪ್ರತಿರೋಧ ಒಡ್ಡಿದ್ದಳು. ಇದರಿಂದ‌ ಆರೋಪಿ ಹೆದರಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ. ಸದ್ಯ ಹೆಬ್ಬಗೋಡಿ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಡ್ರಾಪ್‌ ಕೊಡುವ ನೆಪದಲ್ಲಿ ಅತ್ಯಾಚಾರ

ಘಟನೆ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯರಾತ್ರಿ 1:30ರ ಸಂಧರ್ಭದಲ್ಲಿ ಈ ಘಟನೆ ನಡೆದಿದೆ. ಅಪರಿಚಿತನ ಜತೆಗೆ ಯುವತಿ ಡ್ರಾಪ್ ತೆಗೆದುಕೊಂಡಿದ್ದಾಳೆ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಅತ್ಯಾಚಾರವೆಸಗಿದ್ದಾನೆ. ಇದು ಗೆಟ್ ಟು ಗೆದರ್‌ ಪಾರ್ಟಿ ಮುಗಿಸಿ ಅಲ್ಲಿಂದ ವಾಪಾಸ್ ಬರುವಾಗ ಘಟನೆ ನಡೆದಿದೆ. ಇದು ಗ್ಯಾಂಗ್ ರೇಪ್ ಅಲ್ಲ, ಡ್ರಾಪ್‌ ತೆಗೆದುಕೊಂಡವನಿಂದ ಈ ಕೃ

Continue Reading

ಮಳೆ

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಇಂದು ಭಾರಿ ಮಳೆ ಎಚ್ಚರಿಕೆ

Karnataka Weather Forecast : ಮುಕ್ಕಾಲು ಕರ್ನಾಟಕಕ್ಕೆ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಪೂರ್ವ ಅರಬ್ಬೀ ಸಮುದ್ರದ ಕರಾವಳಿ ಪ್ರದೇಶದಿಂದ ಮಾಲ್ಡಿವ್ಸ್ ದ್ವೀಪದವರೆಗೆ 1.5 ಮತ್ತು 1.8ಕಿ.ಮೀ ಟ್ರಪ್ ಎದ್ದಿದೆ. ಇದರ ಪ್ರಭಾವದಿಂದಾಗಿ ಇಂದು ರಾಜ್ಯಾದ್ಯಂತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ (Rain news) ಸಾಧ್ಯತೆ ಇದೆ. ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Karnataka Weather Forecast) ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಮೈಸೂರು ಮತ್ತು ಮಂಡ್ಯ ,ಚಾಮರಾಜನಗರದಲ್ಲೂ ಮಳೆಯು ಅಬ್ಬರಿಸಲಿದೆ.

ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯನಗರ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗಲಿದೆ.

karnataka weather Forecast
karnataka weather Forecast

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

karnataka weather Forecast
karnataka weather Forecast

ಆರೆಂಜ್ ಅಲರ್ಟ್‌

ಇಂದು ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

ಜಸ್ಟೀಸ್‌ ಕೆ.ಎಸ್.ಹೆಗ್ಡೆ (Justice KS Hegde) ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು “ಪ್ರಾತಸ್ಮರಣೀಯ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ” ಶೀರ್ಷಿಕೆಯಡಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜುಲೈ 28 ರಿಂದ ಸೆಪ್ಟೆಂಬರ್‌ 29 ರವರೆಗೆ ಪ್ರತಿ ಭಾನುವಾರ ಸಂಜೆ 5.30ರಿಂದ 6 ಗಂಟೆಯವರೆಗೆ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Justice KS Hegde
Koo

ಬೆಂಗಳೂರು: ಜಸ್ಟೀಸ್‌ ಕೆ.ಎಸ್. ಹೆಗ್ಡೆ (Justice KS Hegde) ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು “ಪ್ರಾತಸ್ಮರಣೀಯ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ” ಶೀರ್ಷಿಕೆಯಡಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜುಲೈ 28ರಿಂದ ಸೆಪ್ಟೆಂಬರ್‌ 29ರವರೆಗೆ ಪ್ರತಿ ಭಾನುವಾರ ಸಂಜೆ 5.30ರಿಂದ 6 ಗಂಟೆಯವರೆಗೆ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ತಂದೆಯವರಾದ ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆ ಅವರ ಜೀವನ ನಡೆದು ಬಂದ ದಾರಿ ಹಾಗೂ ರಾಷ್ಟ್ರಕ್ಕೆ ನೀಡಿದ ಅಪಾರ ಕೊಡುಗೆ, ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದ ಕುರಿತು ಹಾಗೂ ನ್ಯಾಯಮೂರ್ತಿಯಾಗಿ, ಲೋಕಸಭಾ ಸ್ಪೀಕರ್‌ ಆಗಿ, ಶಿಕ್ಷಣ ಸಂಸ್ಥೆ ಆರಂಭಿಸಿ, ಗ್ರಾಮೀಣರಿಗೂ ಉನ್ನತ ಶಿಕ್ಷಣ ದೊರಕುವಂತೆ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿಯೇ ಮುಡುಪಾಗಿಟ್ಟು ಎಲೆಮರೆಯ ಕಾಯಿಯಂತೆ ಆದರ್ಶ ಜೀವನ ನಡೆಸಿದ ಜಸ್ಟೀಸ್‌ ಕೆ.ಎಸ್.ಹೆಗ್ಡೆ ಅವರ 115ನೇ ಜನ್ಮದಿನಾಚರಣೆ ಅಂಗವಾಗಿ ಅವರ ಜೀವನ ಹಾಗೂ ಕೊಡುಗೆಗಳ ಕುರಿತು ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Uttara Kannada News: ಪಿಎಂ ಸ್ವ-ನಿಧಿ ಯೋಜನೆ; ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

ಕಾರ್ಯಕ್ರಮದಲ್ಲಿ ಮಾಜಿ ಉಪಪ್ರಧಾನಿ ಎಲ್‌.ಕೆ.ಅಡ್ವಾಣಿ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಚಾನ್ಸಲರ್‌ ಎನ್‌.ವಿನಯ್‌ ಹೆಗ್ಡೆ, ಕ್ಯಾಪ್ಟನ್‌ ಪ್ರಸನ್ನ, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಆಳ್ವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್‌ ಆಳ್ವಾ, ಮಾಜಿ ಸಚಿವ ರಾಮಚಂದ್ರೇಗೌಡ ಹಾಗೂ ಹಿರಿಯ ವಕೀಲರು, ಗಣ್ಯರು ಜಸ್ಟೀಸ್‌ ಕೆ.ಎಸ್.ಹೆಗ್ಡೆ ಅವರ ಕುರಿತು ಸಂದೇಶ, ಸದಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ ಎಂದು ಕಾರ್ಯಕ್ರಮದ ನಿರ್ದೇಶಕ ಹಾಗೂ ನಿರ್ಮಾಪಕ ದೀಪಕ್‌ ಆರ್‌. ಸಾಗರ್‌, ಹುಲಿದೇವರಬನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಬೆಂಗಳೂರು

Pralhad Joshi: ಕಾಂಗ್ರೆಸ್‌ನಿಂದ ದೇಶದಲ್ಲಿ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಹುನ್ನಾರ; ಪ್ರಲ್ಹಾದ್‌ ಜೋಶಿ ಆರೋಪ

ಕಾಂಗ್ರೆಸ್ ಪಕ್ಷಕ್ಕೆ (Pralhad Joshi) ರಾಜ್ಯಪಾಲರ ಹುದ್ದೆ ಘನತೆಯ ಅರಿವೆ ಇಲ್ಲ. ಸಂವಿಧಾನದ ಹತ್ಯೆ ಮಾಡಿ, ದೇಶದಲ್ಲಿ ಎಮರ್ಜೆನ್ಸಿ ಹೇರಿ ಜನಜೀವನ ಅಸ್ತವ್ಯಸ್ಥಗೊಳಿಸಿದ್ದ ಕಾಂಗ್ರೆಸ್ ಪಕ್ಷ ಇನ್ನೂ ಅದೇ ವರ್ತನೆ, ಮನಸ್ಥಿತಿಯಲ್ಲಿದೆ. ಅದನ್ನಿನ್ನೂ ತಿದ್ದಿಕೊಂಡಿಲ್ಲ ಎಂದು ಆರೋಪಿಸಿರುವ ಸಚಿವ ಪ್ರಲ್ಹಾದ್‌ ಜೋಶಿ, ಇದಕ್ಕೆ ಜನರೇ ತಕ್ಕ ಪಾಠವ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

VISTARANEWS.COM


on

Pralhad Joshi
Koo

ನವದೆಹಲಿ: ಭಾರತದಲ್ಲೂ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಮನಸ್ಥಿತಿ, ದುಷ್ಟ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ ಐವಾನ್ ಡಿಸೋಜ ಅವರ ಹೇಳಿಕೆ ಅರಾಜಕತೆ ಸೃಷ್ಟಿಯನ್ನು ಪುಷ್ಟೀಕರಿಸುತ್ತಿದೆ ಎಂದು ವ್ಯಾಖ್ಯಾನಿಸಿ ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ ಈ ರೀತಿ ಅರಾಜಕತೆಯ ಮಾತುಗಳನ್ನಾಡುವುದು ಅಕ್ಷಮ್ಯ ಮತ್ತು ಅತ್ಯಂತ ಖಂಡನೀಯ ಎಂದು ತಿಳಿಸಿರುವ ಸಚಿವರು, ಕಾಂಗ್ರೆಸ್‌ನ ನಡೆ ನೋಡಿದರೆ ಬಾಂಗ್ಲಾ ದೇಶದಂತಹ ಅರಾಜಕತೆ ಸೃಷ್ಟಿಸುವ ರೀತಿ ವರ್ತಿಸುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ದತ್ತವಾಗಿರುವ ರಾಜ್ಯಪಾಲರ ಸ್ಥಾನಕ್ಕೆ ಘನತೆ-ಗೌರವ ತೋರುವ ಬದಲು ಅದಕ್ಕೆ ಧಕ್ಕೆ ತರುವ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ರಾಜಭವನ ಮತ್ತು ರಾಜ್ಯಪಾಲರ ಗೃಹಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿರುವುದು ನಿಜಕ್ಕೂ ಆಡಳಿತಾರೂಢ ಸರ್ಕಾರದ ಸರ್ವಾಧಿಕಾರಿ ಧೋರಣೆ ಎನ್ನುವಂತಿದೆ ಎಂದು ಜೋಶಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಪಾಲರ ಹುದ್ದೆ ಘನತೆಯ ಅರಿವೆ ಇಲ್ಲ. ಸಂವಿಧಾನದ ಹತ್ಯೆ ಮಾಡಿ ದೇಶದಲ್ಲಿ ಎಮರ್ಜೆನ್ಸಿ ಹೇರಿ ಜನಜೀವನ ಅಸ್ತವ್ಯಸ್ಥಗೊಳಿಸಿದ್ದ ಕಾಂಗ್ರೆಸ್ ಪಕ್ಷ ಇನ್ನೂ ಅದೇ ವರ್ತನೆ, ಮನಸ್ಥಿತಿಯಲ್ಲಿದೆ. ಅದನ್ನಿನ್ನೂ ತಿದ್ದಿಕೊಂಡಿಲ್ಲ ಎಂದು ಆರೋಪಿಸಿರುವ ಸಚಿವ ಪ್ರಲ್ಹಾದ್‌ ಜೋಶಿ, ಇದಕ್ಕೆ ಜನರೇ ತಕ್ಕ ಪಾಠವ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

Continue Reading
Advertisement
Sexual Assault
ದೇಶ8 mins ago

Sexual Assault: ಫೇಕ್‌ NCC ಕ್ಯಾಂಪ್‌ ಆಯೋಜಿಸಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ; ರಾಜಕಾರಣಿ ಸೇರಿ 8 ಮಂದಿ ಅರೆಸ್ಟ್‌

Rayara Aradhane 2024
ಧಾರ್ಮಿಕ21 mins ago

Rayara Aradhane 2024 : ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

ಪ್ರಮುಖ ಸುದ್ದಿ48 mins ago

Bengaluru Rape Attempt Case : ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ ಹೊಸ ತಿರುವು, ಸಂತ್ರಸ್ತೆಯ ವಿರುದ್ಧವೇ ಕೇಸ್‌ ದಾಖಲು!

Student Death
ಪ್ರಮುಖ ಸುದ್ದಿ1 hour ago

Student Death : ಮೈಸೂರಿನ ಕಾಲೇಜಿನ ಹಾಸ್ಟೆಲ್‌‌ನಲ್ಲಿ 17 ವರ್ಷದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು

Electricity theft
ಪ್ರಮುಖ ಸುದ್ದಿ2 hours ago

Electricity Theft : ಸರ್ಕಾರ ಫ್ರೀ ಕೊಡುತ್ತಿದ್ದರೂ ಮತ್ತಷ್ಟು ಕರೆಂಟ್‌ ಕದ್ದು ಸಿಕ್ಕಿಬಿದ್ದ ಕಾಂಗ್ರೆಸ್‌ ನಾಯಕಿ!

Earthquake
ದೇಶ2 hours ago

Earthquake: ಜಮ್ಮು-ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಬ್ಯಾಕ್‌ ಟು ಬ್ಯಾಕ್‌ ಭೂಕಂಪ

Hyderabad Tour
ಪ್ರವಾಸ2 hours ago

Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

Murder case
ಕ್ರೈಂ2 hours ago

Murder Case : ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ

Kolkata Doctor murder case
ದೇಶ2 hours ago

Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Tungabhadra dam
ಪ್ರಮುಖ ಸುದ್ದಿ2 hours ago

Tungabhadra Dam : ತುಂಗಭದ್ರಾ ಜಲಾಶಯದ ಬಳಿ ವಿಧಿಸಿದ್ದ ಸೆಕ್ಷನ್‌ 144 ವಾಪಸ್‌‌

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌